Tag: Live Telecast

  • ನೇರಪ್ರಸಾದಲ್ಲೇ ಕೈ ಕೈ ಮಿಲಾಯಿಸಿದ ಬಿಜೆಪಿ ಎಸ್‍ಪಿ ಮುಖಂಡರು

    ನೇರಪ್ರಸಾದಲ್ಲೇ ಕೈ ಕೈ ಮಿಲಾಯಿಸಿದ ಬಿಜೆಪಿ ಎಸ್‍ಪಿ ಮುಖಂಡರು

    ನವದೆಹಲಿ: ಖಾಸಗಿ ನ್ಯೂಸ್ ಚಾನೆಲ್‍ವೊಂದರ ನೇರಪ್ರಸಾರ ಕಾರ್ಯಕ್ರಮದಲ್ಲಿ ರಾಜಕೀಯ ಚರ್ಚೆ ವೇಳೆ ಬಿಜೆಪಿ ಹಾಗೂ ಸಮಾಜವಾದಿ ಪಾರ್ಟಿ(ಎಸ್‍ಪಿ) ನಾಯಕರು ಕಿತ್ತಾಡಿಕೊಂಡಿದ್ದಾರೆ.

    ಶನಿವಾರ ದೆಹಲಿಯ ಖಾಸಗಿ ನ್ಯೂಸ್ ಚಾನೆಲ್ ವೊಂದರ ಸ್ಟುಡಿಯೋದಲ್ಲಿ ಬಿಜೆಪಿ ಹಾಗೂ ಎಸ್‍ಪಿ ನಾಯಕರು ಸೇರಿದಂತೆ ಸಾರ್ವಜನಿಕರೊಂದಿಗೆ ಚರ್ಚಾ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಲಾಗುತ್ತಿತ್ತು. ಈ ವೇಳೆ ಬಿಜೆಪಿಯ ಗೌರವ್ ಭಾಟಿಯಾ ಹಾಗೂ ಎಸ್‍ಪಿಯ ಅನುರಾಗ್ ಭದೋರಿಯಾ ನಡುವೆ ತೀವ್ರ ವಾಕ್ ಸಮರ ಏರ್ಪಟ್ಟಿತ್ತು.

    https://twitter.com/NaaPaak/status/1071439783027589120

    ಈ ವೇಳೆ ಚರ್ಚೆ ವಿಕೋಪಕ್ಕೆ ತಿರುಗಿ ನೇರಪ್ರಸಾರದಲ್ಲಿಯೇ ಅನುರಾಗ್ ಗೌರವ್‍ರನ್ನು ತಳ್ಳಿದ್ದಾರೆ. ನಂತರ ಸಿಟ್ಟಿಗೆದ್ದ ಇಬ್ಬರೂ ಪರಸ್ಪರ ಕೈ ಮಿಲಾಯಿಸಿದ್ದಾರೆ. ಕೂಡಲೇ ಎಚ್ಚೆತ್ತ ಚಾನೆಲ್ ಸಿಬ್ಬಂದಿ ಇಬ್ಬರನ್ನು ಸಮಾಧಾನ ಪಡಿಸಿದ್ದರು.

    ಇಬ್ಬರು ನಾಯಕರು ನೇರಪ್ರಸಾರದಲ್ಲೇ ಕಿತ್ತಾಡಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೂಡಲೇ ಗೌರವ್ ಎಸ್‍ಪಿ ಮುಖಂಡ ಅನುರಾಗ್ ಮೇಲೆ ದೂರನ್ನು ನೀಡಿದ್ದಾರೆ. ಘಟನೆ ಸಂಬಂಧ ಪೊಲೀಸರು ಅನುರಾಗ್ ರನ್ನು ವಶಕ್ಕೆಪಡೆದುಕೊಂಡಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿ ಅಜಯ್ ಪಾಲ್ ಶರ್ಮಾ, ನೋಲ್ಡಾದ ಸೆಕ್ಟರ್ 16-ಎ ದಲ್ಲಿರುವ ಖಾಸಗಿ ಸುದ್ದಿ ವಾಹಿನಿಯ ಸ್ಟುಡಿಯೋದಲ್ಲಿ ರಾಜಕೀಯ ನಾಯಕರು ಜಗಳವಾಡಿಕೊಂಡಿದ್ದರು. ಈ ಸಂಬಂಧ ಬಿಜೆಪಿ ವಕ್ತಾರ ಸೆಕ್ಟರ್ 20 ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ಹಿನ್ನೆಲೆ ಅನುರಾಗ್‍ರನ್ನು ವಶಕ್ಕೆ ಪಡೆದುಕೊಂಡಿದ್ದೇವೆ. ಅಲ್ಲದೇ ಸ್ಟುಡಿಯೋದಲ್ಲಾದ ಜಗಳದ ವಿಡಿಯೋವನ್ನು ನೀಡುವಂತೆ ಸುದ್ದಿವಾಹಿನಿಗೆ ಆದೇಶಿದ್ದೇವೆಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಾಧ್ಯಮಗಳಲ್ಲಿ ಕೋರ್ಟ್ ಕಲಾಪದ ನೇರಪ್ರಸಾರಕ್ಕೆ ಸುಪ್ರಿಂ ಕೋರ್ಟ್ ಅಸ್ತು

    ಮಾಧ್ಯಮಗಳಲ್ಲಿ ಕೋರ್ಟ್ ಕಲಾಪದ ನೇರಪ್ರಸಾರಕ್ಕೆ ಸುಪ್ರಿಂ ಕೋರ್ಟ್ ಅಸ್ತು

    ನವದೆಹಲಿ: ಸಾಂವಿಧಾನಿಕ ಪ್ರಾಮುಖ್ಯತೆ ಹೊಂದಿರುವ ಪ್ರಕರಣಗಳ ವಿಚಾರಣೆ ವೇಳೆ ನ್ಯಾಯಾಲಯದ ಕಲಾಪಗಳನ್ನು ಮಾಧ್ಯಮಗಳಲ್ಲಿ ನೇರಪ್ರಸಾರ ಮಾಡಲು ಸುಪ್ರೀಂ ಕೋರ್ಟ್ ಹಸಿರು ನಿಶಾನೆ ತೋರಿಸಿದೆ.

    ಹಿರಿಯ ವಕೀಲೆ ಇಂದಿರಾ ಜೈಸಿಂಗ್, ಸ್ವಪ್ನೀಲ್ ತ್ರಿಪಾಟಿ ಸೇರಿದಂತೆ ಅನೇಕ ವಕೀಲರು ನ್ಯಾಯಾಲಯದ ಕಲಾಪಗಳ ನೇರ ಪ್ರಸಾರ ಮಾಡುವ ಸಂಬಂಧ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹಾಗೂ ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್ ಮತ್ತು ಡಿ.ವೈ.ಚಂದ್ರಚೂಡ್ ತ್ರಿಸದನ ನ್ಯಾಯಪೀಠವು ಈ ಮಹತ್ವದ ತೀರ್ಪನ್ನು ಪ್ರಕಟಿಸಿದೆ.

    ನ್ಯಾಯಾಲಯದಲ್ಲಿ ನಡೆಯುವ ವಿಚಾರಣೆಗಳನ್ನು ಮಾಧ್ಯಮಗಳಲ್ಲಿ ನೇರ ಪ್ರಸಾರ ಮಾಡಲು ತ್ರಿಸದನ ಪೀಠ ಸಮ್ಮತಿಸಿದೆ. ಅಲ್ಲದೇ ನೇರ ಪ್ರಸಾರ ಅನುಷ್ಠಾನಕ್ಕೆ ಅನುಸರಿಸಬೇಕಾದ ನಿಯಾಮಳಿವಳಿಗಳನ್ನು ಶೀಘ್ರವೇ ರೂಪಿಸುಂತೆ ಸರ್ಕಾರಕ್ಕೆ ಸೂಚಿನೆ ನೀಡಿದೆ.

    ಸೂರ್ಯನ ಕಿರಣವೇ ಉತ್ತಮ ಕೀಟನಾಶಕ ಎಂಬಂತೆ, ಜನ ನೇರವಾಗಿ ಕೋರ್ಟ್ ನಲ್ಲಿ ಏನಾಗುತ್ತಿದೆ ಎಂಬ ಮಾಹಿತಿ ಪಡೆಯಲು ಅನುಕೂಲವಾಗುತ್ತದೆ. ಈ ಮೂಲಕ ಇಲ್ಲಸಲ್ಲದ ಊಹಾ-ಪೋಹಗಳನ್ನು ತಡೆಯಬಹುದಾಗಿದೆ. ಕೋರ್ಟ್ ಕಲಾಪ ನೇರ ಪ್ರಸಾರ ಸಂಬಂಧ ಸಾರ್ವಜನಿಕ ಹಕ್ಕುಗಳ ಸಮತೋಲನಕ್ಕೆ ಅಗತ್ಯ ನಿಯಮಗಳು ಮತ್ತು ದೂರುದಾರರ ಘನತೆಯನ್ನು ರಕ್ಷಿಸುವ ಕುರಿತು ಶೀಘ್ರ ನಿಯಮ ರಚನೆಯಾಗುತ್ತದೆ ಎಂದು ಕೋರ್ಟ್ ತಿಳಿಸಿದೆ.

    ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಮತ್ತು ಪಾರದರ್ಶಕತೆಯ ಕಾರಣಕ್ಕೆ ಕೋರ್ಟ್ ಕಲಾಪಗಳ ನೇರ ಪ್ರಸಾರಕ್ಕೆ ಅನುಮತಿ ನೀಡುತ್ತಿದೆ. ಆದರೆ ಅತ್ಯಾಚಾರ, ವೈವಾಹಿಕ ಮತ್ತಿತರ ವಿಚಾರಗಳಲ್ಲಿನ ಗೌಪ್ಯ ವಿಚಾರಣೆ ಹೊರತುಪಡಿಸಿ ನ್ಯಾಯಾಲಯ ಕಲಾಪಗಳ ನೇರ ಪ್ರಸಾರಕ್ಕೆ ಸುಪ್ರೀಂ ಕೋರ್ಟ್ ಅಸ್ತು ಎಂದಿದೆ. ಸದ್ಯ ಪ್ರಾರಂಭಿಕವಾಗಿ ಮುಖ್ಯ ನ್ಯಾಯಮೂರ್ತಿಗಳ ಪೀಠದಲ್ಲಿ ಸಾಂವಿಧಾನಿಕ ಪ್ರಾಮುಖ್ಯತೆಯ ಪ್ರಕರಣಗಳ ಕಲಾಪದ ವೇಳೆ ಜಾರಿಯಾಗಲಿದೆ. ಈ ನ್ಯಾಯಪೀಠದಲ್ಲಿ ಯೋಜನೆ ಯಶಸ್ವಿನ ಆಧಾರದ ಮೇಲೆ ಇತರೆ ನ್ಯಾಯಲಯಗಳಿಗೂ ವಿಸ್ತರಿಸಲಾಗುತ್ತದೆ ಎಂದು ತಿಳಿಸಿದೆ.

    ಈ ಮೊದಲು ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್ ಹಾಗೂ ಡಿ.ವೈ.ಚಂದ್ರಚೂಡ್ ಅವರನ್ನು ಒಳಗೊಂಡ ನ್ಯಾಯಪೀಠವು ನೇರ ಪ್ರಸಾರ ಸಂಬಂಧ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರ ಸಹಕಾರವನ್ನು ಕೇಳಿತ್ತು. ಅರ್ಜಿದಾರರ ಮನವಿಗಳ ಸಂಬಂಧ ವೇಣುಗೋಪಲ್‍ರವರು ನೇರ ಪ್ರಸಾರದ ಪ್ರಸ್ತಾವನೆಯ ಅನುಷ್ಠಾನಕ್ಕಾಗಿ ಕೆಲವು ನಿಯಮಗಳನ್ನು ಸಿದ್ದಪಡಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ವೇಣುಗೋಪಾಲ್‍ರವರು ರೂಪಿಸಿದ್ದ ನಿಯಾಮಾಳಿಗಳನ್ನು ಆಗಸ್ಟ್ 24 ರಂದು ಆಲಿಸಿದ್ದ ನ್ಯಾಯಾಲಯವು ತನ್ನ ತೀರ್ಪನ್ನು ಕಾಯ್ದಿರಿಸಿತ್ತು.

    ಅಂತರಾಷ್ಟ್ರೀಯ ಕೋರ್ಟ್ ನಲ್ಲಿ ನಡೆಯುವ ಕಲಾಪಗಳು ನೇರ ಪ್ರಸಾರವಾಗುತ್ತದೆ. 2015 ರ ಡಿಸೆಂಬರ್ ನಲ್ಲಿ ದಕ್ಷಿಣ ಆಫ್ರಿಕಾದ ಕೋರ್ಟ್ ರೂಪದರ್ಶಿ ಸ್ನೇಹಿತೆ ರೀವಾ ಸ್ಟಿಂಕಾಂಪ್ ಕೊಲೆ ಪ್ರಕರಣದಲ್ಲಿ ಸ್ನೇಹಿತ ಪ್ಯಾರಾ ಒಲಂಪಿಯನ್ ಆಸ್ಕರ್ ಪಿಸ್ಟೊರಿಯಸ್ ದಂಡನೀಯ ನರಹತ್ಯೆಯ ಅಪರಾಧಿ ಎಂದು ತೀರ್ಪು ನೀಡಿತ್ತು. ಈ ಪ್ರಕರಣದ ವಿಚಾರಣೆ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಹೀಗಾಗಿ ನಮ್ಮಲ್ಲೂ ಯಾಕೆ ಕೋರ್ಟ್ ಕಲಾಪಗಳನ್ನು ಪ್ರಸಾರ ಮಾಡಬಾರದು ಎನ್ನುವ ಎನ್ನುವ ಚರ್ಚೆ ಮತ್ತೆ ಆರಂಭಗೊಂಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 225 ಕಿ.ಮೀ ವೇಗದಲ್ಲಿ ಹೋಗ್ತಿದ್ದಾಗ ಬೈಕಿನ ಬ್ರೇಕ್ ಹಾಕ್ದ ಪಕ್ಕದ ಸವಾರ: ವಿಡಿಯೋ ನೋಡಿ!

    225 ಕಿ.ಮೀ ವೇಗದಲ್ಲಿ ಹೋಗ್ತಿದ್ದಾಗ ಬೈಕಿನ ಬ್ರೇಕ್ ಹಾಕ್ದ ಪಕ್ಕದ ಸವಾರ: ವಿಡಿಯೋ ನೋಡಿ!

    ಸ್ಯಾನ್ ಮರಿನೋ: ಮೋಟರ್ ರೇಸಿಂಗ್ ವೇಳೆ 225 ಕಿ.ಮೀ ವೇಗದಲ್ಲಿ ಚಲಿಸುತ್ತಿದ್ದ ಬೈಕಿನ ಮುಂಬದಿ ಬ್ರೇಕನ್ನು ಮತ್ತೊಂದು ಬೈಕಿನ ಸವಾರ ಹಾಕುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ.

    ಸ್ಯಾನ್ ಮರಿನೋ ಗ್ರ್ಯಾಂಡ್ ಪ್ರಿಕ್ಸ್ ನಲ್ಲಿ ನಡೆದ ಎಫ್‍ಐಎಂ ಮೋಟೋ2 ಗ್ಯಾಂಡ್ ಪ್ರಿಕ್ಸ್ ಅಂತರಾಷ್ಟ್ರೀಯ ಚಾಂಪಿಯನ್‍ಷಿಪ್‍ ಬೈಕ್ ರೇಸಿಂಗ್ ವೇಳೆ ಇಟಲಿಯ ರೈಡರ್ ರೊಮಾನೋ ಫೆನಾಟಿಯವರು 225 ಕಿ.ಮೀಗೂ ಅಧಿಕ ವೇಗದಲ್ಲಿ ಸಾಗುತ್ತಿರುವಾಗಲೇ, ತಮ್ಮ ಪಕ್ಕದಲ್ಲೇ ಅಷ್ಟೇ ವೇಗದಲ್ಲಿ ಸಾಗುತ್ತಿದ್ದ ಸ್ಟೈಫಾನೋ ಮಾನ್ಜಿಯ ಬೈಕಿನ ಮುಂಬಾಗದ ಬ್ರೇಕ್‍ನ್ನು ಒತ್ತಿದ್ದಾರೆ. ಬ್ರೇಕ್ ಒತ್ತುತ್ತಿದಂತೆ ಬೈಕ್ ಅಲುಗಾಡಿದ್ದು, ಕೂಡಲೇ ಬೈಕನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಸವಾರ ಸ್ಟೈಫಾನೋ ಆಗಬಹುದಾಗಿದ್ದ ಭಾರೀ ಅನಾಹುತವನ್ನು ತಪ್ಪಿಸಿದ್ದಾರೆ.

    ಈ ರೇಸಿಂಗ್ ಕೂಟವು ಅಂತರಾಷ್ಟ್ರೀಯ ಮಟ್ಟದಲ್ಲಿ ನೇರಪ್ರಸಾರವಾಗುತ್ತಿದ್ದು, ಬೈಕ್ ಸವಾರ ಮತ್ತೊಂದು ಬೈಕಿನ ಬ್ರೇಕ್ ಹಾಕುತ್ತಿರುವ ದೃಶ್ಯ ನೋಡುಗರನ್ನು ತಲ್ಲಣಗೊಳಿಸಿದೆ. ಅಲ್ಲದೇ ರೈಡರ್ ವಿರುದ್ಧ ಸಾಕಷ್ಟು ಟೀಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬಂದಿದ್ದವು.

    ಕೂಡಲೇ ಎಚ್ಚೆತ್ತ ಮೋಟೋ ಜಿಪಿ ಆಯೋಜಕರು ಫೆನಾಟಿಗೆ 2 ವರ್ಷಗಳ ಕಾಲ ರೇಸ್ ಮೇಲೆ ನಿಷೇಧ ಹೇರಿದ್ದಾರೆ. ಬಳಿಕ ತಮ್ಮ ತಪ್ಪಿನ ಅರಿವಾದ ಕೂಡಲೇ ಫೆನಾಟಿ ತಮ್ಮ ರೇಸಿಂಗ್ ವೃತ್ತಿ ಬದುಕಿಗೆ ವಿದಾಯ ಘೋಷಿಸಿದ್ದಾರೆ.

    https://twitter.com/2018MotoGP/status/1039597214648098816

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=P_WO9RtoBIk

  • ಸುದ್ದಿವಾಹಿನಿಯ ನೇರ ಪ್ರಸಾರದ ಕಾರ್ಯಕ್ರಮದಲ್ಲೆ ಬಡಿದಾಡಿಕೊಂಡ ಅತಿಥಿಗಳು

    ಸುದ್ದಿವಾಹಿನಿಯ ನೇರ ಪ್ರಸಾರದ ಕಾರ್ಯಕ್ರಮದಲ್ಲೆ ಬಡಿದಾಡಿಕೊಂಡ ಅತಿಥಿಗಳು

    ನವದೆಹಲಿ: ನೊಯ್ಡಾದ ಖಾಸಗಿ ಸುದ್ದಿವಾಹಿನಿಯ ನೇರ ಪ್ರಸಾರದ ಚರ್ಚಾ ಕಾರ್ಯಕ್ರಮದಲ್ಲೇ ಮೌಲಾನಾ ಹಾಗೂ ಮಹಿಳಾ ವಕೀಲೆ ಬಡಿದಾಡಿಕೊಂಡಿದ್ದಾರೆ.

    ಮಂಗಳವಾರ ಸಂಜೆ ತ್ರಿವಳಿ ತಲಾಖ್‍ಗೆ ಸಂಬಂಧಿಸಿದಂತೆ ಸ್ಥಳೀಯ ಖಾಸಗಿ ಸುದ್ದಿವಾಹಿನಿಯಲ್ಲಿ ನೇರ ಪ್ರಸಾರ ಕಾರ್ಯಕ್ರಮ ಪ್ರಸಾರವಾಗುತ್ತಿತ್ತು. ಈ ವೇಳೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮೌಲಾನ ಇಜಾಜ್ ಅರ್ಷದ್ ಕಜ್ಮಿ ಹಾಗೂ ಸುಪ್ರಿಂಕೋರ್ಟ್ ನ ಮಹಿಳಾ ವಕೀಲೆಯಾದ ಫರ್ಹಾ ಫೈಯಾಜ್ ನಡುವೆ ಮಾತುಕತೆ ತಾರಕ್ಕೇರಿದೆ. ನೇರಪ್ರಸಾರದ ಕಾರ್ಯಕ್ರಮವನ್ನು ಲೆಕ್ಕಿಸದೆ ಇವರಿಬ್ಬರು ಪರಸ್ಪರ ಬಡಿದಾಡಿಕೊಂಡಿದ್ದಾರೆ. ಇದೇ ವೇಳೆ ಕೋಪಗೊಂಡ ಮೌಲನಾ ಮಹಿಳೆಯ ಮೇಲೆ ಕೈ ಮಾಡಿದ್ದಾರೆ.

    ಘಟನೆ ಸಂಬಂಧ ಎಚ್ಚೆತ್ತ ಸುದ್ದಿವಾಹಿನಿಯು ಮೌಲಾನನ್ನು ತಡೆದು, ಮಹಿಳಾ ವಕೀಲೆಯನ್ನು ರಕ್ಷಿಸಿದ್ದಾರೆ. ಘಟನೆ ಸಂಬಂಧ ಮೌಲಾನ ಇಜಾಜ್ ಅರ್ಷದ್ ಕಜ್ಮಿ ವಿರುದ್ಧ ಸುದ್ದಿವಾಹಿನಿಯು ದೂರು ನೀಡಿದ ಹಿನ್ನೆಲೆಯಲ್ಲಿ ಬುಧವಾರ ಮೌಲಾನನ್ನು ಪೊಲೀಸರು ಬಂಧಿಸಿದ್ದಾರೆ.

    ಏನಿದು ಗಲಾಟೆ?
    ತ್ರಿವಳಿ ತಲಾಖ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸುಪ್ರೀಂ ಕೋರ್ಟ್‍ನ ಮಹಿಳಾ ವಕೀಲೆ ಫರ್ಹಾ ಫಯಾಜ್‍ರವರು ತ್ರಿವಳಿ ತಲಾಕ್ ಕುರಿತು ಕುರಾನ್ ನಲ್ಲಿ ಉಲ್ಲೇಖವಿಲ್ಲ, ಮುಸ್ಲಿಂ ಸಮುದಾಯ ಮಹಿಳೆಯ ಮೂಲಭೂತ ಹಕ್ಕಿಗೆ ಧಕ್ಕೆಮಾಡುತ್ತಿದ್ದು, ಮದುವೆಯ ಸಮಯದಲ್ಲಿ ಲಿಂಗ ತಾರತಮ್ಯ ನಡೆಸುತ್ತದೆ. ಇದರಿಂದಾಗಿ ಮಹಿಳೆಯರು ಬಲಿಪಶುಗಳಾಗಿದ್ದಾರೆ. ತಲಾಖ್ ನಿಂದಾಗಿ ಮಹಿಳೆಗೆ ಸರಿಯಾದ ಪರಿಹಾರಗಳು ಸಹ ಸಿಗುವುದಿಲ್ಲ ಎಂದು ತಮ್ಮ ಅಭಿಪ್ರಾಯ ತಿಳಿಸಿದ್ದರು. ಇದರಿಂದ ರೊಚ್ಚಿಗೆದ್ದ ಮೌಲಾನಾ ಕಜ್ಮಿ ಮಹಿಳಾ ವಕೀಲೆ ಮೇಲೆ ಹಲ್ಲೆ ನಡೆಸಿದ್ದಾನೆ.