Tag: live in relationship

  • ಲಿವ್ ಇನ್ ಗೆಳತಿಯ ಕೊಂದು ನದಿಗೆಸೆದ ಪ್ರಿಯಕರ – ಶವದ ಜೊತೆ ಸೆಲ್ಫಿ ಕ್ಲಿಕ್ಕಿಸಿ ವಿಕೃತಿ ಮೆರೆದವ ಅಂದರ್‌

    ಲಿವ್ ಇನ್ ಗೆಳತಿಯ ಕೊಂದು ನದಿಗೆಸೆದ ಪ್ರಿಯಕರ – ಶವದ ಜೊತೆ ಸೆಲ್ಫಿ ಕ್ಲಿಕ್ಕಿಸಿ ವಿಕೃತಿ ಮೆರೆದವ ಅಂದರ್‌

    ಲಕ್ನೋ: ಇನ್‌ಸ್ಟಾಗ್ರಾಮ್‌ನಲ್ಲಿ ಅರಳಿದ ಪ್ರೀತಿ ಪ್ರಿಯತಮೆಯ ಭೀಕರ ಕೊಲೆಯಲ್ಲಿ ಕೊನೆಯಾದ ಪ್ರಕರಣ ಉತ್ತರ ಪ್ರದೇಶದ (Uttar Pradesh) ಕಾನ್ಪುರದಲ್ಲಿ ನಡೆದಿದೆ.

    ಕೊಲೆಯಾದ ಯುವತಿಯನ್ನು ಆಕಾಂಕ್ಷಾ (20) ಎಂದು ಗುರುತಿಸಲಾಗಿದೆ. ಕೊಲೆಗೈದ ಆರೋಪಿಯನ್ನು ಸೂರಜ್ ಕುಮಾರ್ ಉತ್ತಮ್ ಎಂದು ಗುರುತಿಸಲಾಗಿದೆ. ಇಬ್ಬರೂ ಲಿವ್‌ ಇನ್‌ (Live in Relationship) ಸಂಬಂಧದಲ್ಲಿದ್ದರು. ಯುವತಿಗೆ ಮತ್ತೊಬ್ಬನಿಗೆ ಸಂಬಂಧವಿದೆ ಎಂದು ಶಂಕಿಸಿ ಆಕೆಯನ್ನು ಆರೋಪಿ ಹತ್ಯೆಗೈದಿದ್ದಾನೆ. ಎರಡು ತಿಂಗಳ ಹಿಂದೆಯೇ ಈ ಕೊಲೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇದನ್ನೂ ಓದಿ: ದಾವಣಗೆರೆ | ಡಿವೋರ್ಸ್ ವಿವಾದ – ಕೋರ್ಟ್‍ನಲ್ಲೇ ಪತ್ನಿಗೆ ಚಾಕು ಇರಿದ ಪತಿ

    ಜುಲೈ 21 ರಂದು ಯುವತಿ ಬೇರೊಬ್ಬನ ಜೊತೆ ಮಾತಾಡುತ್ತಿದ್ದಾಳೆ ಎಂದು ಆರೋಪಿ ಗಲಾಟೆ ಮಾಡಿದ್ದ. ಈ ವೇಳೆ ಆಕೆಯ ತಲೆಯನ್ನು ಗೋಡೆಗೆ ಅಪ್ಪಳಿಸಿ, ಬಳಿಕ ಕತ್ತು ಹಿಸುಕಿ ಕೊಲೆಗೈದಿದ್ದ. ನಂತರ ತನ್ನ ಸ್ನೇಹಿತ ಆಶಿಶ್ ಕುಮಾರ್‌ಗೆ ಕರೆ ಮಾಡಿ ವಿಚಾರ ತಿಳಿಸಿದ್ದ. ಬಳಿಕ ಇಬ್ಬರು ಸೇರಿ ಆಕಾಂಕ್ಷಾಳ ಮೃತದೇಹವನ್ನು ಬ್ಯಾಗಿನಲ್ಲಿ ತುಂಬಿಸಿ 100 ಕಿ.ಮೀ ದೂರದಲ್ಲಿರುವ ಬಂಡಾಗೆ ಬೈಕ್‌ನಲ್ಲಿ ತೆರಳಿ ಯಮುನಾ ನದಿಗೆ ಎಸೆದಿದ್ದರು. ಇದಕ್ಕೂ ಮುನ್ನ ಸೂರಜ್ ಉತ್ತಮ್ ಶವ ತುಂಬಿದ ಬ್ಯಾಗ್‌ನೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದ ಎಂದು ತಿಳಿದುಬಂದಿದೆ.

    ಆ.8ರಂದು ಯುವತಿಯ ತಾಯಿ ಆಕಾಂಕ್ಷ ನಾಪತ್ತೆಯಾದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಳು. ದೂರಿನಲ್ಲಿ ಸೂರಜ್ ಉತ್ತಮ್ ತನ್ನ ಮಗಳನ್ನು ಅಪಹರಿಸಿದ್ದಾನೆ ಎಂದು ಉಲ್ಲೇಖಿಸಿದ್ದರು. ದೂರಿನ ಅನ್ವಯ ಇತ್ತೀಚೆಗೆ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ವಿಚಾರಣೆ ವೇಳೆ ಸೆಲ್ಫಿ ಬಗ್ಗೆಯೂ ಹೇಳಿದ್ದು, ಆತನ ಮೊಬೈಲ್‌ನಿಂದ ಫೋಟೋ ವಶಪಡಿಸಿಕೊಳ್ಳಲಾಗಿದೆ. ಪೊಲೀಸರು ಆರೋಪಿ ಹಾಗೂ ಆತನಿಗೆ ಸಹಕರಿಸಿದ ಸ್ನೇಹಿತನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

    ಸೂರಜ್ ಕುಮಾರ್ ಎಲೆಕ್ಟ್ರಿಷಿಯನ್ ಕೆಲಸ ಮಾಡುತ್ತಿದ್ದ. ಆಕಾಂಕ್ಷಾ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಇಬ್ಬರ ನಡುವೆ ಇನ್‌ಸ್ಟಾಗ್ರಾಮ್‌ನಲ್ಲಿ ಪರಸ್ಪರ ಪರಿಚಯವಾಗಿ ಪ್ರೀತಿ ಚಿಗುರೊಡೆದಿತ್ತು. ನಂತರ ಕಾನ್ಪುರದ ಬಾರಾದಲ್ಲಿ ತನ್ನ ಸಹೋದರಿಯೊಂದಿಗೆ ವಾಸಿಸುತ್ತಿದ್ದ ಆಕಾಂಕ್ಷಾ, ಅಲ್ಲಿಂದ ಬಂದು ಹನುಮಂತ್ ವಿಹಾರ್‌ನ ಬಾಡಿಗೆ ಮನೆಯಲ್ಲಿ ಉತ್ತಮ್ ಜೊತೆ ವಾಸವಾಗಿದ್ದಳು ಎಂದು ತಿಳಿದು ಬಂದಿದೆ. ಇದನ್ನೂ ಓದಿ: ದುಷ್ಕರ್ಮಿಗಳಿಂದ ಪ್ರಿಯಕರನ ಹತ್ಯೆ – ಮನನೊಂದು ಆತ್ಮಹತ್ಯೆಗೆ ಶರಣಾದ ಯುವತಿ

  • ಲಿವ್ ಇನ್‌ ಗೆಳೆಯನಿಗೆ ಮಗು ಇಷ್ಟವಿಲ್ಲದ್ದಕ್ಕೆ ಲಾಲಿ ಹಾಡಿ ಮಲಗಿಸಿ ಕೆರೆಗೆ ಎಸೆದ ತಾಯಿ!

    ಲಿವ್ ಇನ್‌ ಗೆಳೆಯನಿಗೆ ಮಗು ಇಷ್ಟವಿಲ್ಲದ್ದಕ್ಕೆ ಲಾಲಿ ಹಾಡಿ ಮಲಗಿಸಿ ಕೆರೆಗೆ ಎಸೆದ ತಾಯಿ!

    ಜೈಪುರ್‌: ತನ್ನ ಮೊದಲ ಪತಿಯಿಂದ ಜನಿಸಿದ ಮಗು ಲಿವ್ ಇನ್‌ ಗೆಳೆಯನಿಗೆ (Live In Relationship) ಇಷ್ಟವಿಲ್ಲ ಎಂದು ಮಹಿಳೆಯೊಬ್ಬಳು ಕೆರೆಗೆ ಎಸೆದು ಹತ್ಯೆ ಮಾಡಿದ ಪ್ರಕರಣ ರಾಜಸ್ಥಾನದ (Rajasthan) ಅಜ್ಮೀರ್‌ನಲ್ಲಿ ನಡೆದಿದೆ.

    ಮಗು ಹತ್ಯೆಗೈದ ಮಹಿಳೆಯನ್ನು ಅಂಜಲಿ (28) ಎಂದು ಗುರುತಿಸಲಾಗಿದ್ದು, ಆಕೆಯನ್ನು ಕ್ರಿಶ್ಚಿಯನ್ ಗಂಜ್ ಪೊಲೀಸರು ಬಂಧಿಸಿದ್ದಾರೆ. ಮಹಿಳೆ ತನ್ನ ಮೂರು ವರ್ಷದ ಮಗಳನ್ನು ಲಾಲಿ ಹಾಡಿ ಮಲಗಿಸಿ ಬಳಿಕ ಕೆರೆಗೆ ಎಸೆದಿದ್ದಾಳೆ. ನಂತರ ಮಗು ಕಾಣೆಯಾಗಿದೆ ಎಂದು ನಟಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಆರೋಪ – ಯೋಗ ಗುರು ನಿರಂಜನಾ ಮೂರ್ತಿ ಅರೆಸ್ಟ್

    ಮಂಗಳವಾರ ರಾತ್ರಿ ಹೆಡ್ ಕಾನ್‌ಸ್ಟೆಬಲ್ ಗಸ್ತು ತಿರುಗುವ ವೇಳೆ ಅಂಜಲಿ ಹಾಗೂ ಆಕೆಯ ಪ್ರಿಯಕರ ಎದುರಾಗಿದ್ದರು. ಈ ವೇಳೆ ರಾತ್ರಿ ಸಮಯದಲ್ಲಿ ಇಲ್ಲೇನು ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದರು. ಆಗ ತಾನು ತನ್ನ ಮಗಳೊಂದಿಗೆ ಮನೆಯಿಂದ ಹೊರಟಿದ್ದೆ. ಆದರೆ ಮಗು ದಾರಿಯಲ್ಲಿ ಕಾಣೆಯಾಗಿದೆ. ರಾತ್ರಿಯಿಡೀ ಅವಳನ್ನು ಹುಡುಕಿದರೂ, ಆಕೆ ಪತ್ತೆಯಾಗಿಲ್ಲ ಎಂದು ಹೇಳಿದ್ದಳು. ಮರುದಿನ ಮಗುವಿನ ಶವ ಕೆರೆಯಲ್ಲಿ ಪತ್ತೆಯಾಗಿತ್ತು.

    ಪೊಲೀಸರು ಸಿಸಿಟಿವಿ ಪರಿಶೀಲಿಸಿದಾಗ, ಅಂಜಲಿ ತನ್ನ ಮಗಳನ್ನು ಎತ್ತಿಕೊಂಡು ನಗರದ ಅನಾ ಸಾಗರ್ ಕೆರೆಯ ಬಳಿ ಓಡಾಡಿದ್ದು ಪತ್ತೆಯಾಗಿತ್ತು. ಕೆಲವು ಗಂಟೆಗಳ ನಂತರ, ಬೆಳಗಿನ ಜಾವ 1:30ರ ಸುಮಾರಿಗೆ, ಮಹಿಳೆ ಒಬ್ಬಂಟಿಯಾಗಿ, ಮೊಬೈಲ್‌ನಲ್ಲಿ ಮಾತಾಡುತ್ತಿರುವುದು ಸೆರೆಯಾಗಿತ್ತು. ಈ ದೃಶ್ಯಗಳು ಅವಳ ಹೇಳಿಕೆಗೆ ವಿರುದ್ಧವಾಗಿದ್ದು, ಅನುಮಾನ ಹುಟ್ಟಿಸಿತ್ತು. ಆಕೆಯನ್ನು ವಿಚಾರಣೆ ನಡೆಸಿದಾಗ ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ.

    ಅಂಜಲಿ ಒಬ್ಬಂಟಿಯಾಗಿ ಈ ಕೃತ್ಯ ಎಸಗಿದ್ದಾಳೆ ಎಂಬುದು ಗೊತ್ತಾಗಿದೆ. ಮಗಳಿಗೆ ಆಕೆಯ ಲಿವ್‌ ಇನ್‌ ಗೆಳೆಯ ಅಲ್ಕೇಶ್ ನಿರಂತರವಾಗಿ ನಿಂದಿಸುತ್ತಿದ್ದಿದ್ದರಿಂದ ಆಕೆ ಬೇಸತ್ತಿದ್ದಳು ಎಂದು ವರದಿಯಾಗಿದೆ. ಈ ಕೊಲೆಯಲ್ಲಿ ಆಕೆಯ ಪ್ರಿಯಕರನ ಪಾತ್ರವಿದೆಯೇ ಎಂದು ತನಿಖೆ ನಡೆಸಲಾಗುತ್ತಿದೆ.

    ಅಂಜಲಿ ಉತ್ತರ ಪ್ರದೇಶದ ವಾರಣಾಸಿಯವಳು. ಪತಿಯಿಂದ ದೂರಾದ ನಂತರ ಆಕೆ ಅಜ್ಮೀರ್‌ಗೆ ತೆರಳಿ ತನ್ನ ಪ್ರಿಯಕರನೊಂದಿಗೆ ವಾಸವಾಗಿದ್ದಳು. ಅಲ್ಲಿ ಹೋಟೆಲ್‌ ಒಂದರಲ್ಲಿ ಸ್ವಾಗತಕಾರಳಾಗಿ ಕೆಲಸ ಮಾಡುತ್ತಿದ್ದಳು. ಅದೇ ಹೋಟೆಲ್‌ನಲ್ಲಿ ಅಲ್ಕೇಶ್ ಕೂಡ ಕೆಲಸ ಮಾಡುತ್ತಿದ್ದ. ಇದನ್ನೂ ಓದಿ: 75ರ ವೃದ್ಧನ ಮದುವೆಯಾಗಲು ಭಾರತಕ್ಕೆ ಬಂದಿದ್ದ ಅಮೆರಿಕದ 71ರ ವೃದ್ಧೆ ಕೊಲೆ

    .

  • ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ – ಕೈ ಕೊಯ್ದುಕೊಂಡ ಲಿವ್‌-ಇನ್‌ ಪಾರ್ಟ್ನರ್‌

    ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ – ಕೈ ಕೊಯ್ದುಕೊಂಡ ಲಿವ್‌-ಇನ್‌ ಪಾರ್ಟ್ನರ್‌

    ಗುವಾಹಟಿ: ಕೌಟುಂಬಿಕ ಕಲಹದಿಂದ ಬೇಸತ್ತು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುವಾಹಟಿಯಲ್ಲಿ (Guwahati) ನಡೆದಿದೆ. ಆತನ ಲಿವ್‌ ಇನ್‌ ಗೆಳತಿ ಆತ್ಮಹತ್ಯೆಗೆ ಯತ್ನಿಸಿ ಗಂಭೀರ ಗಾಯಗೊಂಡಿದ್ದಾರೆ.

    ನವಜ್ಯೋತಿ ತಾಲ್ಲೂಕುದಾರ್ ಎಂದು ಗುರುತಿಸಲಾದ ವ್ಯಕ್ತಿ ಒಂದು ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಆತನ ಸಂಗಾತಿ ಸುಷ್ಮಿತಾ ದಾಸ್ ಅವರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಹಯಾತ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಮಹಾರಾಷ್ಟ್ರ | ರಕ್ತದ ಕಲೆ ಕಂಡುಬಂದಿದ್ದಕ್ಕೆ ಬಲವಂತವಾಗಿ ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿದ ಪ್ರಿನ್ಸಿಪಾಲ್‌

    ಕಳೆದ ಒಂದು ವರ್ಷದಿಂದ ಇಬ್ಬರೂ ವ್ಯಕ್ತಿಗಳು ಲಿವ್-ಇನ್ ಸಂಬಂಧದಲ್ಲಿದ್ದರು. ಆದರೆ, ಇತ್ತೀಚೆಗೆ ಅವರ ನಡುವಿನ ಜಗಳ ಹೆಚ್ಚಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರ ನಡುವೆ ಆಗಾಗ್ಗೆ ಜಗಳ, ತಪ್ಪುಗ್ರಹಿಕೆಗಳು ಹೆಚ್ಚಾಗಿತ್ತು.

    ಆ ವ್ಯಕ್ತಿ ಸುಶ್ಮಿತಾಳನ್ನು ಒಂದು ಕೋಣೆಯಲ್ಲಿ ಕೂಡಿಹಾಕಿ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸುಶ್ಮಿತಾ ತನ್ನ ಮಣಿಕಟ್ಟನ್ನು ಕತ್ತರಿಸಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ತಮಿಳುನಾಡು ಶಾಲಾ ವಾಹನ ದುರಂತ – ರೈಲ್ವೇ ಕ್ರಾಸಿಂಗ್ ಸುರಕ್ಷತೆ ಹೆಚ್ಚಿಸಲು ಮುಂದಾದ ಇಲಾಖೆ

    ಆ ವ್ಯಕ್ತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಮಹಿಳೆ ತುರ್ತು ಕರೆ ಮಾಡಿದರು. ನಾವು ತಕ್ಷಣ ಸ್ಥಳಕ್ಕೆ ಧಾವಿಸಿದೆವು. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸುಷ್ಮಿತಾ ದಾಸ್ ಸುದ್ದಿ ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ನಾವು ನಮ್ಮ ತನಿಖೆಯನ್ನು ಪ್ರಾರಂಭಿಸಿದ್ದೇವೆ ಎಂದು ಗುವಾಹಟಿ ಪೊಲೀಸರು ತಿಳಿಸಿದ್ದಾರೆ.

  • ರೇಣುಕಾಸ್ವಾಮಿ ಕೇಸ್‌ನಂತೆ ಕಲಬುರಗಿಯಲ್ಲೊಂದು ಕೊಲೆ – ಸೆಕ್ಸ್‌ಗಾಗಿ ಮೆಸೇಜ್ ಮಾಡಿದ್ದವನ ಹತ್ಯೆಗೈದಿದ್ದ ಲಿವ್ ಇನ್ ಪ್ರೇಮಿಗಳು ಅರೆಸ್ಟ್

    ರೇಣುಕಾಸ್ವಾಮಿ ಕೇಸ್‌ನಂತೆ ಕಲಬುರಗಿಯಲ್ಲೊಂದು ಕೊಲೆ – ಸೆಕ್ಸ್‌ಗಾಗಿ ಮೆಸೇಜ್ ಮಾಡಿದ್ದವನ ಹತ್ಯೆಗೈದಿದ್ದ ಲಿವ್ ಇನ್ ಪ್ರೇಮಿಗಳು ಅರೆಸ್ಟ್

    -ಕೊಲೆ ಬಳಿಕ ಶವವನ್ನು ಕೃಷ್ಣಾ ನದಿಗೆ ಬೀಸಾಕಿ ಪರಾರಿಯಾಗಿದ್ದ ಗ್ಯಾಂಗ್

    ಕಲಬುರಗಿ: ಚಿತ್ರದುರ್ಗದ (Chitradurga) ರೇಣುಕಾಸ್ವಾಮಿ ಕೊಲೆ (Renukaswamy Case) ಕೇಸ್‌ನಂತೆ ಜಿಲ್ಲೆಯಲ್ಲೊಂದು ಪ್ರಕರಣ ಬೆಳಕಿಗೆ ಬಂದಿದೆ. ಸೆಕ್ಸ್‌ಗಾಗಿ ನಿರಂತರ ಕಿರುಕುಳ ನೀಡುತ್ತಿದ್ದ ವ್ಯಕ್ತಿಯನ್ನು ಲಿವ್ ಇನ್‌ನಲ್ಲಿದ್ದ ಪ್ರೇಮಿಗಳು ಹಾಗೂ ಸ್ನೇಹಿತರು ಸೇರಿ ಕೊಲೆ ಮಾಡಿದ್ದು, ಸದ್ಯ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

    ಕಲಬುರಗಿ ನಗರದ ರಾಘವೇಂದ್ರ ನಾಯಕ (69) ಮೃತ ವ್ಯಕ್ತಿ. ಗುರುರಾಜ್ ಹಾಗೂ ಅಶ್ವಿನಿ ಇಬ್ಬರು ಲಿವ್ ಇನ್ ಟುಗೇದರ್‌ನಲ್ಲಿದ್ದರು. ಈ ವೇಳೆ ಮೃತ ರಾಘವೇಂದ್ರ ಅಶ್ವಿನಿ ಮೊಬೈಲ್‌ಗೆ ಮಂಚಕ್ಕೆ ಬರುವಂತೆ ಕರೆದು ನಿರಂತರ ಕಿರುಕುಳ ನೀಡುತ್ತಿದ್ದ. ಹೀಗಾಗಿ, ಈ ವಿಷಯವನ್ನು ಅಶ್ವಿನಿ ತನ್ನ ಪ್ರಿಯಕರ ಗುರುರಾಜ್‌ಗೆ ತಿಳಿಸಿದ್ದಳು. ಬಳಿಕ ಗುರುರಾಜ್ ತನ್ನ ಸ್ನೇಹಿತ ಲಕ್ಷ್ಮಿಕಾಂತ್‌ನಿಗೆ ತಿಳಿಸಿ, ಕೊಲೆಗೆ ಸಂಚು ಹಾಕಿದ್ದರು.ಇದನ್ನೂ ಓದಿ: ಡೆವಿಲ್‌ಗೆ ಯುದ್ಧಾತಂಕ – ವಿದೇಶಿ ಪ್ರವಾಸ ಮರುನಿಗದಿ ಕೋರಿ ದರ್ಶನ್ ಅರ್ಜಿ

    ಮಾ.12ರಂದು ಅಶ್ವಿನಿ ರಾಘವೇಂದ್ರನಿಗೆ ಕರೆ ಮಾಡಿ, ಭೇಟಿಯಾಗೋಕೆ ತಿಳಿಸಿದ್ದಳು. ಬಳಿಕ ಮೂವರು ಸೇರಿ ಆತನನ್ನು ಕಿಡ್ನ್ಯಾಪ್‌ ಮಾಡಿ, ಕೀರ್ತಿ ನಗರದ ಸ್ಮಶಾನ ಭೂಮಿಗೆ ಕರೆದೊಯ್ದು ಖಾಸಗಿ ಅಂಗಕ್ಕೆ ಹಲ್ಲೆ ಮಾಡಿ, ಬರ್ಬರವಾಗಿ ಕೊಲೆ ಮಾಡಿದ್ದರು. ಬಳಿಕ ಆತನ ಶವವನ್ನು ರಾಯಚೂರಿನ (Raichuru) ಶಕ್ತಿನಗರ ಕೃಷ್ಣಾ ನದಿಯಲ್ಲಿ (Krishna River) ಬಿಸಾಕಿ ಪರಾರಿಯಾಗಿದ್ದರು.

    ಪ್ರಕರಣ ದಾಖಲಿಸಿಕೊಂಡಿದ್ದ ಸ್ಟೇಷನ್ ಬಜಾರ್ (Station Bazaar) ಪೊಲೀಸರು ತನಿಖೆ ನಡೆಸಿದ್ದರು. ಸದ್ಯ ಪ್ರಕರಣವನ್ನು ಬೇಧಿಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.ಇದನ್ನೂ ಓದಿ: ಬಿಹಾರ ಮತದಾರರ ಪಟ್ಟಿ ನವೀಕರಣ: ಜುಲೈ 10 ರಂದು ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿ

  • ಲಿವ್‌ ಇನ್‌ನಲ್ಲಿದ್ದಾಗ ಕೊಟ್ಟಿದ್ದ ಹಣ, ಒಡವೆ ಕೊಡು ಎಂದವನಿಗೆ ಥಳಿಸಿ ವಿಷ ಕುಡಿಸಿದ ಮಾಜಿ ಪ್ರೇಯಸಿ!

    ಲಿವ್‌ ಇನ್‌ನಲ್ಲಿದ್ದಾಗ ಕೊಟ್ಟಿದ್ದ ಹಣ, ಒಡವೆ ಕೊಡು ಎಂದವನಿಗೆ ಥಳಿಸಿ ವಿಷ ಕುಡಿಸಿದ ಮಾಜಿ ಪ್ರೇಯಸಿ!

    ಲಕ್ನೋ: ಲಿವ್‍ಇನ್ ರಿಲೇಶನ್‍ಶಿಪ್‌ನಲ್ಲಿದ್ದಾಗ (Live In Relationship) ಕೊಟ್ಟಿದ್ದ ಹಣ ಹಾಗೂ ಆಭರಣಗಳನ್ನು ಹಿಂತಿರುಗಿಸುವಂತೆ ಒತ್ತಾಯಿಸಿದ ಯುವಕನಿಗೆ ಆತನ ಮಾಜಿ ಪ್ರೇಯಸಿ ಹಾಗೂ ಆಕೆಯ ಸಹಚರರು ಥಳಿಸಿ ವಿಷ ಕುಡಿಯುವಂತೆ ಒತ್ತಾಯಿಸಿದ ಅಮಾನವೀಯ ಘಟನೆ ಉತ್ತರ ಪ್ರದೇಶದ (Uttar Pradesh) ಹಮೀರ್‌ಪುರದಲ್ಲಿ ನಡೆದಿದೆ.

    ಹಮೀರ್‌ಪುರದ ನಿವಾಸಿ ಶೈಲೇಂದ್ರ ಗುಪ್ತಾ ಹಲ್ಲೆಗೊಳಗಾದ ದುರ್ದೈವಿ ಎಂದು ಗುರುತಿಸಲಾಗಿದೆ. ಆತ ಮಹೋಬಾದ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಆತ ನಾಲ್ಕು ವರ್ಷಗಳ ಹಿಂದೆ ಪರಿಚಯವಾಗಿದ್ದ ಕಾಲಿಪಹರಿ ಗ್ರಾಮದ ಮಹಿಳೆಯೊಂದಿಗೆ ಲಿವ್ ಇನ್ ಸಂಬಂಧದಲ್ಲಿದ್ದ. ಈ ಸಮಯದಲ್ಲಿ ಮಹಿಳೆಗೆ ಲಕ್ಷಾಂತರ ರೂ. ಮೌಲ್ಯದ ದುಬಾರಿ ಆಭರಣಗಳನ್ನು ಕೊಡಿಸಿದ್ದ. ಅಲ್ಲದೇ 4 ಲಕ್ಷ ರೂ. ನಗದು ಹಣ ನೀಡಿದ್ದ. ಇತ್ತೀಚೆಗೆ ಮಹಿಳೆ ಬೇರೊಬ್ಬನ ಸಂಪರ್ಕದಲ್ಲಿದ್ದಳು. ಬಳಿಕ ಶೈಲೇಂದ್ರ ಹಾಗೂ ಮಹಿಳೆ ದೂರವಾಗಿದ್ದರು.

    ಇದಾದ ಬಳಿಕ ಶೈಲೇಂದ್ರ ಹಿಂದೆ ನೀಡಿದ್ದ ಹಣ ಮತ್ತು ಆಭರಣಗಳನ್ನು ಹಿಂದಿರುಗಿಸುವಂತೆ ಮಹಿಳೆಗೆ ಒತ್ತಾಯಿಸುತ್ತಿದ್ದ. ಹಣ ಮತ್ತು ಆಭರಣ ಮರಳಿ ಪಡೆಯಲು ಅವರ ಮನೆಗೆ ತೆರಳಿದ್ದಾಗ, ಮಹಿಳೆ, ಆಕೆಯ ಸಹಚರರಾದ ಸದಾಬ್ ಬೇಗ್, ದೀಪಕ್ ಮತ್ತು ಹ್ಯಾಪಿ ಎಂಬವರ ಜೊತೆ ಸೇರಿ ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ವಿಷ ಸೇವಿಸುವಂತೆ ಒತ್ತಾಯಿಸಿದ್ದಾರೆ. ದಾಳಿಯ ನಂತರ, ಯುವಕನ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

    ತನಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ ಮತ್ತು ಹಣ ಒಡವೆ ಹಿಂದಿರುಗಿಸುವಂತೆ ಒತ್ತಾಯಿಸಿದರೆ ಸುಳ್ಳು ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಮಾಜಿ ಪ್ರೇಯಸಿಯ ವಿರುದ್ಧ ಶೈಲೇಂದ್ರ ಆರೋಪಿಸಿದ್ದಾನೆ. ಈ ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಲಿವ್ ಇನ್ ಗೆಳತಿಯ ಮೇಲೆ ರೇಪ್; 40-50 ತುಂಡುಗಳಾಗಿ ಕತ್ತರಿಸಿ ಬಿಸಾಡಿದ ಕಿರಾತಕ

    ಲಿವ್ ಇನ್ ಗೆಳತಿಯ ಮೇಲೆ ರೇಪ್; 40-50 ತುಂಡುಗಳಾಗಿ ಕತ್ತರಿಸಿ ಬಿಸಾಡಿದ ಕಿರಾತಕ

    – ಕೋಳಿ ಕತ್ತರಿಸೋದ್ರಲ್ಲಿ ನಿಪುಣನಾಗಿದ್ದ ಆರೋಪಿ
    – ಬೀದಿನಾಯಿ ಮೃತದೇಹದೊಂದಿಗೆ ಅಂಗಾಗ ಎಸೆದಿದ್ದ ಪಾಗಲ್

    ರಾಂಚಿ: ಲಿವ್ ಇನ್ ರಿಲೇಶನ್ ಶಿಪ್‌ನಲ್ಲಿದ್ದ ಗೆಳತಿಯ ಮೇಲೆ ಅತ್ಯಾಚಾರ ಮಾಡಿ, ಬಳಿಕ 40-50 ತುಂಡುಗಳಾಗಿ ಕತ್ತರಿಸಿ ಬಿಸಾಡಿರುವ ಘಟನೆ ಜಾರ್ಖಂಡ್‌ನ ಖುಂಟಿ ಜಿಲ್ಲೆಯ ಅರಣ್ಯ ಪ್ರದೇಶವೊಂದರಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಆರೋಪಿಯನ್ನು ನರೇಶ್ ಭೆಂಗ್ರಾ ಎಂದು ಗುರುತಿಸಲಾಗಿದೆ. ನ.24 ರಂದು ಜೋರ್ಡಾಗ್ ಗ್ರಾಮದ ಬಳಿ ಬೀದಿ ನಾಯಿಯ ದೇಹದೊಂದಿಗೆ ಮಾನವನ ದೇಹದ ಅಂಗಾಂಗಳು ಪತ್ತೆಯಾಗಿದ್ದು, ಪರಿಶೀಲನೆ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ.ಇದನ್ನೂ ಓದಿ: ಸಂಸತ್‌ನಲ್ಲಿ ಅಮ್ಮ-ಅಣ್ಣ-ತಂಗಿ; ಇಂದು ಪ್ರಿಯಾಂಕಾ ಗಾಂಧಿ ಪ್ರಮಾಣ ವಚನ ಸ್ವೀಕಾರ

    ತನಿಖೆ ಬಳಿಕ, ಆರೋಪಿಯು ತನ್ನ ಗೆಳತಿಯೊಂದಿಗೆ ತಮಿಳುನಾಡಿನಲ್ಲಿ 2 ವರ್ಷಗಳ ಕಾಲ ಲಿವ್ ಇನ್ ರಿಲೇಶನ್ ಶಿಪ್‌ನಲ್ಲಿದ್ದನು. ಅಲ್ಲಿಂದ ಜಾರ್ಖಂಡ್‌ನ ಖುಂಟಿಗೆ ಬಂದಿದ್ದ. ಆತ ತನ್ನ ಗೆಳತಿಗೆ ತಿಳಿಸದೇ ಬೇರೊಂದು ಮದುವೆಯಾಗಿದ್ದ. ಅದಾದ ಸ್ವಲ್ಪ ದಿನಗಳ ನಂತರ ಸಂತ್ರಸ್ತೆ ತನ್ನ ಗೆಳೆಯನ ಭೇಟಿಗಾಗಿ ಜಾರ್ಖಂಡ್‌ಗೆ ಹೋಗಿದ್ದಳು.

    ನ.8 ಜಾರ್ಖಂಡ್‌ಗೆ ಬಂದಿಳಿದಳು. ಮನೆಯಲ್ಲಿ ಹೆಂಡತಿಯಿದ್ದ ಕಾರಣ ಆಕೆಯನ್ನು ಮನೆಗೆ ಕರೆದುಕೊಂಡು ಹೋಗಲು ಆರೋಪಿ ತಯಾರಿರಲಿಲ್ಲ. ಹಾಗಾಗಿ ಆಟೋರಿಕ್ಷಾದಲ್ಲಿ ಆಕೆಯನ್ನು ಖುಂಟಿಗೆ ಕರೆದೊಯ್ದು ಮನೆಯ ಸಮೀಪ ನಿಲ್ಲಿಸಿ, ತಾನು ಮರಳಿ ಬರುವುದಾಗಿ ತಿಳಿಸಿ ಮನೆ ಕಡೆಗೆ ಹೋಗಿದ್ದಾನೆ. ಮನೆಯಿಂದ ಮರಳುವಾಗ ಆಯುಧಗಳೊಂದಿಗೆ ಹಿಂದಿರುಗಿದ್ದಾನೆ. ಆಕೆಯ ಮೇಲೆ ಆತ್ಯಾಚಾರ ಎಸಗಿ, ಬಳಿಕ ಕತ್ತು ಹಿಸುಕಿ ಸಾಯಿಸಿದ್ದಾನೆ. ನಂತರ ದೇಹವನ್ನು 40 ರಿಂದ 50 ತುಂಡುಗಳಾಗಿ ಕತ್ತರಿಸಿ ಬಿಸಾಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಖುಂಟಿ ಪೊಲೀಸ್ ವರಿಷ್ಠಾಧಿಕಾರಿ ಅಮನ್ ಕುಮಾರ್ ಮಾಹಿತಿ ಪ್ರಕಾರ, ಆರೋಪಿ ತಮಿಳುನಾಡಿನ ಮಾಂಸದಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ಕೋಳಿಯನ್ನು ಕತ್ತರಿಸುವುದರಲ್ಲಿ ನಿಪುಣರಾಗಿದ್ದ. ನ.24 ರಂದು ಜೋರ್ಡಾಗ್ ಗ್ರಾಮದ ಬಳಿ ಬೀದಿ ನಾಯಿಯ ಕಳೇಬರದೊಂದಿಗೆ ಕೈಯೊಂದು ಕಾಣಿಸಿಕೊಂಡಿದ್ದು, ನಂತರ ಪೊಲೀಸರ ಪರಿಶೀಲನೆಯ ಬಳಿಕ ಹಲವು ಭಾಗಗಳನ್ನು ಪತ್ತೆಹಚ್ಚಿದ್ದಾರೆ ಎಂದು ತಿಳಿಸಿದರು.

    ಇನ್ನೂ ಘಟನೆ ನಡೆದ ಜಾಗದಲ್ಲಿ ಮಹಿಳೆಯ ಆಧಾರ್ ಕಾರ್ಡ್ ಸೇರಿದಂತೆ ಸಾಮಾನುಗಳಿದ್ದ ಬ್ಯಾಗ್ ಕೂಡ ಪತ್ತೆಯಾಗಿದೆ. ಸಂತ್ರಸ್ತೆಯ ತಾಯಿಗೆ ಸಿಕ್ಕ ಬ್ಯಾಗನ್ನು ನೀಡಿದಾಗ, ಬ್ಯಾಗ್ ತನ್ನ ಮಗಳದ್ದೇ ಎಂದು ಪತ್ತೆ ಹಚ್ಚಿದ್ದಾರೆ. ಜಾರ್ಖಂಡ್‌ಗೆ ಹೊರಡುವ ಮುನ್ನ ತನ್ನ ಗೆಳಯನೊಂದಿಗೆ ವಾಸಿಸುವುದಾಗಿ ತಿಳಿಸಿದ್ದಳು ಎಂದು ಹೇಳಿದ್ದಾರೆ. ಜೊತೆಗೆ ಈ ಕೊಲೆಯ ಹಿಂದೆ ಆರೋಪಿ ಇರುವುದಾಗಿ ತಾಯಿ ಶಂಕಿಸಿದ್ದಾರೆ.ಇದನ್ನೂ ಓದಿ: Exclusive | ರಾಮೇಶ್ವರಂ ಕೆಫೆ ಬ್ಲಾಸ್ಟ್ ಕೇಸ್: ಬಾಂಬ್‌ ಇಟ್ಟ ಬಳಿಕ ಮಸೀದಿಯಲ್ಲಿ ಪ್ರಾರ್ಥನೆ ಮಾಡಿದ್ದ ಮಾಸ್ಟರ್‌ ಮೈಂಡ್‌

  • ಲಿವ್‌-ಇನ್‌ ರಿಲೇಷನ್‌ಶಿಪ್‌ನಲ್ಲಿದ್ದ ಮಹಿಳೆಯಿಂದ ಸಂಗಾತಿ ವಿರುದ್ಧ ಅತ್ಯಾಚಾರ ಆರೋಪ

    ಲಿವ್‌-ಇನ್‌ ರಿಲೇಷನ್‌ಶಿಪ್‌ನಲ್ಲಿದ್ದ ಮಹಿಳೆಯಿಂದ ಸಂಗಾತಿ ವಿರುದ್ಧ ಅತ್ಯಾಚಾರ ಆರೋಪ

    – ಇಬ್ಬರೂ ಒಟ್ಟಿಗೆ ಇರಲು ಮಾಡಿಕೊಂಡಿದ್ದ ಒಪ್ಪಂದದ ದಾಖಲೆ ಕೋರ್ಟ್‌ ಮುಂದಿಟ್ಟು ಶಾಕ್‌ ಕೊಟ್ಟ ಸಂಗಾತಿ

    ಮುಂಬೈ: ಸಂಗಾತಿ ತನ್ನ ವಿರುದ್ಧ ದಾಖಲಿಸಿದ್ದ ಅತ್ಯಾಚಾರ ಆರೋಪ ಪ್ರಕರಣದಲ್ಲಿ ಬಂಧನದಿಂದ ಪಾರಾಗಲು ವ್ಯಕ್ತಿಯೊಬ್ಬ ಲಿವ್‌-ಇನ್‌ ರಿಲೇಷನ್‌ಶಿಪ್‌ ಒಪ್ಪಂದ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿರುವ ಘಟನೆ ನಡೆದಿದೆ.

    ಮುಂಬೈನಲ್ಲಿ 46 ವಯಸ್ಸಿನ ವ್ಯಕ್ತಿ ವಿರುದ್ಧ 29ರ ಆತನ ಸಂಗಾತಿ ಅತ್ಯಾಚಾರ ಆರೋಪ ಮಾಡಿ ದೂರು ನೀಡಿದ್ದಳು. ಪ್ರಕರಣದಲ್ಲಿ ಬಂಧನದಿಂದ ಪಾರಾಗಲು ಆರೋಪಿ, ತಮ್ಮಿಬ್ಬರ ನಡುವಿನ ಲಿವ್‌-ಇನ್‌ ಸಂಬಂಧದ ಒಪ್ಪಂದ ಪತ್ರವನ್ನು ಕೋರ್ಟ್‌ಗೆ ಸಲ್ಲಿಸಿದ್ದ. ಇದನ್ನು ಪರಿಗಣಿಸಿದ ನ್ಯಾಯಾಲಯ, ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗೆ ಜಾಮೀನು ನೀಡಿದೆ. ಆದರೆ ಈ ದಾಖಲೆಯಲ್ಲಿರುವ ಸಹಿ ನನ್ನದಲ್ಲ ಎಂದು ಮಹಿಳೆ ಕೋರ್ಟ್‌ಗೆ ತಿಳಿಸಿದ್ದಾಳೆ.

    ಮಹಿಳೆ ವಯಸ್ಸಾದವರ ಆರೈಕೆ ಮಾಡುವವರಾಗಿ ಕೆಲಸ ಮಾಡುತ್ತಿದ್ದಳು. ಆರೋಪಿ ಸರ್ಕಾರಿ ನೌಕರ. ಇದೀಗ, ಇವರಿಬ್ಬರ ಲಿವ್‌-ಇನ್‌ ಸಂಬಂಧದ ಒಪ್ಪಂದ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ನನ್ನ ಸಂಗಾತಿ ನನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದ. ಒಟ್ಟಿಗೆ ವಾಸಿಸುತ್ತಿದ್ದ ಸಮಯದಲ್ಲಿ ಅನೇಕ ಬಾರಿ ಅತ್ಯಾಚಾರವೆಸಗಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ಆರೋಪಿ ಪರ ವಾದ ಮಂಡಿಸಿದ ವಕೀಲರು ಇದನ್ನು ವಂಚನೆ ಪ್ರಕರಣ ಎಂದು ಕರೆದಿದ್ದಾರೆ.

    ಇಬ್ಬರ ನಡುವಿನ ಏಳು ಅಂಶಗಳ ಒಪ್ಪಂದದ ಪ್ರಕಾರ, ಅವರು ಆಗಸ್ಟ್ 1 2024 ರಿಂದ ಜೂನ್ 30, 2025 ರವರೆಗೆ ಒಟ್ಟಿಗೆ ಇರಲು ನಿರ್ಧರಿಸಿದ್ದರು. ಈ ಅವಧಿಯಲ್ಲಿ ಪರಸ್ಪರ ಲೈಂಗಿಕ ಕಿರುಕುಳದ ಯಾವುದೇ ಪ್ರಕರಣವನ್ನು ದಾಖಲಿಸುವುದಿಲ್ಲ. ಶಾಂತಿಯುತವಾಗಿ ಇಬ್ಬರೂ ಒಟ್ಟಿಗೆ ಇರುವುದು ಎಂದು ಷರತ್ತು ಕೂಡ ಹಾಕಿಕೊಂಡಿರುವುದು ದಾಖಲೆಯಲ್ಲಿದೆ.

    ವ್ಯಕ್ತಿಯಲ್ಲಿ ದುರ್ವರ್ತನೆ ಕಂಡುಬಂದರೆ ಯಾವುದೇ ಸಮಯದಲ್ಲಿ ಇಬ್ಬರೂ ಬೇರ್ಪಡಬಹುದು. ಮಹಿಳೆ ಸಂಬಂಧಿಕರು ಇವರಿಬ್ಬರು ಇರುವ ಮನೆಗೆ ಬರುವಂತಿಲ್ಲ. ಈ ಅವಧಿಯಲ್ಲಿ ಮಹಿಳೆ ಗರ್ಭಿಣಿಯಾದರೆ ಅದಕ್ಕೆ ಸಂಗಾತಿ ಜವಾಬ್ದಾರನಲ್ಲ ಎಂದು ಹಲವು ಷರತ್ತುಗಳಿಗೆ ಒಪ್ಪಿ ಇಬ್ಬರೂ ಸಹಿ ಹಾಕಿರುವುದು ದಾಖಲೆಯಲ್ಲಿದೆ.

  • ಮುಸ್ಲಿಮರ ಬಹುಪತ್ನಿತ್ವ ಕಂಡು ಬೇರೆಯವರಿಗೆ ಹೊಟ್ಟೆಕಿಚ್ಚು: ಜಾವೇದ್‌ ಅಖ್ತರ್‌

    ಮುಸ್ಲಿಮರ ಬಹುಪತ್ನಿತ್ವ ಕಂಡು ಬೇರೆಯವರಿಗೆ ಹೊಟ್ಟೆಕಿಚ್ಚು: ಜಾವೇದ್‌ ಅಖ್ತರ್‌

    – ಹಿಂದೂಗಳು ಅನಧಿಕೃತವಾಗಿ ಇಬ್ಬರು ಪತ್ನಿಯರನ್ನ ಹೊಂದಿರ್ತಾರೆ ಎಂದ ಚಿತ್ರ ಸಾಹಿತಿ

    ನವದೆಹಲಿ: ಉತ್ತರಾಖಂಡ ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ (Uniform Civil Code Bil) ಬೆಂಬಲ ವ್ಯಕ್ತಪಡಿಸಿರುವ ಖ್ಯಾತ ಚಿತ್ರ ಸಾಹಿತಿ ಜಾವೇದ್‌ ಅಖ್ತರ್‌ (Javed Akhtar), ಇದೇ ವೇಳೆ ಮುಸ್ಲಿಮರ ಬಹುಪತ್ನಿತ್ವ ನೋಡಿ ಬೇರೆಯವರಿಗೆ ಹೊಟ್ಟೆಕಿಚ್ಚು ಎಂದು ಹಾಸ್ಯ ಮಾಡಿದ್ದಾರೆ.

    ಹಿಂದೂಗಳು (Hindu) ಅನಧಿಕೃತವಾಗಿ ಇಬ್ಬರು ಪತ್ನಿಯರನ್ನು ಹೊಂದಿರುತ್ತಾರೆ. ಮಾಹಿತಿ ಪ್ರಕಾರ ಇಂತಹವರ ಸಂಖ್ಯೆ ಹೆಚ್ಚಾಗಿಯೇ ಇದೆ. ಹೀಗಾಗಿ ಸಂಹಿತೆಯಲ್ಲಿ ಮುಸ್ಲಿಮರಿಗೆ ಮಾತ್ರ ಬಹುಪತ್ನಿತ್ವ ನಿಷೇಧ ಮಾಡುವುದು ಸರಿಯಲ್ಲ. ನಾನು ಸಮಾನ ಹಕ್ಕು ಮತ್ತು ಕಾನೂನಿನ (Law) ಪರವಾಗಿದ್ದೇನೆ. ನನ್ನ ಮಗ ಮತ್ತು ಮಗಳಿಗೂ ಆಸ್ತಿಯಲ್ಲಿ ಸಮಪಾಲು ನೀಡಿದ್ದೇನೆ. ಹಾಗೆಯೇ ಇದು ಎಲ್ಲರಿಗೂ ಅನ್ವಯವಾಗುವಂತೆ ಇರಬೇಕು. ಮುಸ್ಲಿಮರನ್ನು ಟೀಕಿಸುವುದಕ್ಕೆ ಮಾತ್ರವೇ ಜಾರಿಗೆ ತಂದಂತೆ ಆಗಬಾರದು ಎಂದು ಮನವಿ ಮಾಡಿದ್ದಾರೆ.

    ಕೆಲ ದಿನಗಳ ಹಿಂದೆಯಷ್ಟೇ ಉತ್ತರಾಖಂಡ ಸರ್ಕಾರ (Uttarakhand Government) ಏಕರೂಪ ನಾಗರಿಕ ಸಂಹಿತೆಯನ್ನು ಘೋಷಣೆ ಮಾಡಿತು. ಇದನ್ನೂ ಓದಿ: ಏಕರೂಪ ನಾಗರಿಕ ಸಂಹಿತೆ; 1835-2024ರ ವರೆಗೆ ಒಂದು ನೋಟ..

    ಏಕರೂಪ ನಾಗರಿಕ ಸಂಹಿತೆ:
    ರಾಜ್ಯದ ಮುಸ್ಲಿಮರು ಸೇರಿದಂತೆ ಎಲ್ಲಾ ಧರ್ಮದವರು 2ನೇ ವಿವಾಹವಾಗುವುದು ಅಪರಾಧ. ಒಬ್ಬ ವ್ಯಕ್ತಿಗೆ ಒಂದು ಮದುವೆಗೆ ಮಾತ್ರ ಕಾನೂನಿನ ಮಾನ್ಯತೆ ಇರಲಿದೆ. ಹಾಲಿ ಷರಿಯಾ ಕಾನೂನಿನಡಿ ಮುಸ್ಲಿಮರು ಕಾನೂನು ಬದ್ಧವಾಗಿಯೇ 3 ವಿವಾಹವಾಗುವ ಅವಕಾಶವಿದೆ. ವಿವಾಹ, ವಿಚ್ಛೇದನ, ಆಸ್ತಿ, ಉತ್ತರದಾಯಿತ್ವ ಎಲ್ಲಾ ವಿಚಾರದಲ್ಲಿ ಎಲ್ಲಾ ಧರ್ಮದ ಜನರಿಗೆ ಒಂದೇ ನಿಯಮ ಅನ್ವಯವಾಗುತ್ತದೆ. ಇದನ್ನೂ ಓದಿ: UCC ಬಿಲ್‌ ಪಾಸ್‌ – ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಿದ ದೇಶದ ಮೊದಲ ರಾಜ್ಯ ಉತ್ತರಾಖಂಡ

    ಲಿವ್ ಇನ್ ಸಂಬಂಧಕ್ಕೆ ನೋಂದಣಿ ಕಡ್ಡಾಯ ಮಾಡಲಾಗಿದೆ. ನೋಂದಣಿ 1 ತಿಂಗಳು ತಡವಾದರೆ 3 ತಿಂಗಳು ಜೈಲು, 25 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ನೋಂದಣಿ ಸಂಶಯಾಸ್ಪದವಾಗಿದ್ದರೆ ತನಿಖೆ ನಡೆಸಲಾಗುತ್ತದೆ. ಲಿವ್ ಇನ್ ಸಂಬಂಧದಿಂದ ಜನಿಸಿದ ಮಕ್ಕಳಿಗೆ ಕಾನೂನು ಮಾನ್ಯತೆ ಸೇರಿದಂತೆ ಆಸ್ತಿಯಲ್ಲೂ ಸಮಪಾಲು ಸಿಗಲಿದೆ. ಲಿವ್ ಇನ್ ಸಂಗಾತಿ ತೊರೆದಲ್ಲಿ ಜೀವನಾಂಶ ಪಡೆಯಬಹುದು. ಸಂಬಂಧ ಮುಂದುವರಿಸಲು ಇಷ್ಟವಿಲ್ಲದ ಜೋಡಿ, ದಾಖಲೆಗಳನ್ನು ಸಲ್ಲಿಸಿ ಲಿಖಿತ ಹೇಳಿಕೆ ನೀಡಿ ಲಿವ್‌ ಇನ್‌ ಸಂಬಂಧ ಕಡಿತಗೊಳಿಸಬಹುದು. ಈ ಮಸೂದೆಯಿಂದ ಬುಡಕಟ್ಟು ಸಮುದಾಯವನ್ನು ಹೊರಗಿಡಲಾಗಿದೆ.

    ಅತ್ಯಾಚಾರ ಅಥವಾ ಅನೈಸರ್ಗಿಕ ಲೈಂಗಿಕ ಕ್ರಿಯೆ ನಡೆಸಿದ ಪತಿಗೆ ವಿಚ್ಛೇದನ ನೀಡುವ ಹಕ್ಕನ್ನು ಮಸೂದೆ ಮಹಿಳೆಯರಿಗೆ ನೀಡುತ್ತದೆ. ಮದುವೆಯಾದ ಒಂದೇ ವರ್ಷದೊಳಗೆ ವಿವಾಹ ವಿಚ್ಛೇದನ ಪಡೆಯುವುದನ್ನು ಅಸಾಧಾರಣ ಸಂದರ್ಭ ಹೊರತುಪಡಿಸಿ ಉಳಿದ ಸನ್ನಿವೇಶಗಳಲ್ಲಿ ನಿರ್ಬಂಧಿಸುವ ಅಂಶವಿದೆ. ಅತ್ಯಾಚಾರ ಪ್ರಕರಣದಲ್ಲಿ ಪತಿ ಪತಿ ಸಿಲುಕಿದರೆ ಆತನಿಂದ ಪತ್ನಿ ವಿಚ್ಛೇದನ ಕೇಳಬಹುದು. ಇದನ್ನೂ ಓದಿ: Shivamogga Lok Sabha 2024: ಬಿಎಸ್‌ವೈ v/s ಬಂಗಾರಪ್ಪ ಫ್ಯಾಮಿಲಿ – ಯಾರಿಗೆ ಮಣೆ ಹಾಕ್ತಾರೆ ಮಲೆನಾಡ ಜನ?

    ವಿವಾಹವಾದ 60 ದಿನದ ಒಳಗಡೆ ನೋಂದಣಿ ಮಾಡಿಸಬೇಕು. 2010ರ ಮಾ.26ರ ನಂತರ ಮದುವೆಯಾದವರು 6 ತಿಂಗಳೊಳಗೆ ನೋಂದಣಿ ಮಾಡಿಸುವುದು ಕಡ್ಡಾಯ. ನಿರ್ಲಕ್ಷಿಸಿದರೆ 20 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಆದರೆ ನೋಂದಣಿಯಾಗದ ವಿವಾಹವನ್ನು ಅಸಿಂಧು ಎಂದು ಪರಿಗಣನೆ ಮಾಡುವುದಿಲ್ಲ.

  • UCC ಬಿಲ್‌ ಪಾಸ್‌ – ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಿದ ದೇಶದ ಮೊದಲ ರಾಜ್ಯ ಉತ್ತರಾಖಂಡ

    UCC ಬಿಲ್‌ ಪಾಸ್‌ – ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಿದ ದೇಶದ ಮೊದಲ ರಾಜ್ಯ ಉತ್ತರಾಖಂಡ

    – UCC ಮಸೂದೆಯಲ್ಲಿ ಏನಿದೆ?

    ಡೆಹ್ರಾಡೂನ್‌: ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ (Pushkar Singh Dhami) ನೇತೃತ್ವದ ಸರ್ಕಾರವು ಮಂಡಿಸಿದ ಏಕರೂಪ ನಾಗರಿಕ ಸಂಹಿತೆ ಮಸೂದೆಯನ್ನು ಉತ್ತರಾಖಂಡ ವಿಧಾನಸಭೆಯಲ್ಲಿ ಬುಧವಾರ (ಫೆ.7) ಅಂಗೀಕರಿಸಿದೆ. ಈ ಮೂಲಕ ಏಕರೂಪ ನಾಗರಿಕ ಸಂಹಿತೆಯನ್ನು (UCC) ಜಾರಿಗೊಳಿಸಿದ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

    ಇನ್ನೂ ಬಿಜೆಪಿ ಆಡಳಿತವಿರುವ ರಾಜಸ್ಥಾನ ಸರ್ಕಾರವೂ ಯುಸಿಸಿ ಅನುಷ್ಠಾನಕ್ಕೆ ಸಿದ್ಧತೆ ನಡೆಸಿದೆ. ಮುಂದಿನ ಅಧಿವೇಶನದಲ್ಲೇ ಕಾಯ್ದೆ ಅನುಷ್ಠಾನಗೊಳಿಸುವುದಾಗಿ ಸರ್ಕಾರದ ಮೂಲಗಳು ತಿಳಿಸಿವೆ. ಇದನ್ನೂ ಓದಿ: ರಾಜಕೀಯ ಸ್ವಾರ್ಥಕ್ಕಾಗಿ ದೇಶ ಒಡೆಯುವ ಮಾತು, ರಾಷ್ಟ್ರವೆಂದರೆ ಕೇವಲ ಒಂದು ತುಂಡು ಭೂಮಿ ಅಲ್ಲ: ಡಿಕೆ ಸುರೇಶ್‌ ಹೇಳಿಕೆ ವಿರುದ್ಧ ಮೋದಿ ಕಿಡಿ 

    ಯುಸಿಸಿ ಮಸೂದೆ ವಿಧಾನಸಭೆಯಲ್ಲಿ ಅಂಗೀಕಾರವಾದ ಬೆನ್ನಲ್ಲೇ ಸಿಎಂ ಪುಷ್ಕರ್‌ ಸಿಂಗ್‌ ಧಾಮಿ ಸಂತಸ ವ್ಯಕ್ತಪಡಿಸಿದ್ದಾರೆ. ಇಂದು ಉತ್ತರಾಖಂಡಕ್ಕೆ ಮಹತ್ವದ ದಿನವಾಗಿದೆ. ದೇಶಾದ್ಯಂತ ಜನರು ಬಹಳ ದಿನಗಳಿಂದ ಕಾಯುತ್ತಿದ್ದ ಮಸೂದೆಯನ್ನು ನಾವು ಅಂಗೀಕರಿಸಿದ್ದೇವೆ. ಯುಸಿಸಿ ಅನುಷ್ಠಾನಗೊಳಿಸಿದ ದೇಶದ ಮೊದಲ ರಾಜ್ಯವೂ ಉತ್ತರಾಖಂಡವೇ (Uttarakhand) ಆಗಿದೆ ಎಂದು ಶ್ಲಾಘಿಸಿದ್ದಾರೆ.

    ಮಸೂದೆಯಲ್ಲಿ ಏನಿದೆ?
    ರಾಜ್ಯದ ಮುಸ್ಲಿಮರು (Muslims) ಸೇರಿದಂತೆ ಎಲ್ಲಾ ಧರ್ಮದವರು 2ನೇ ವಿವಾಹವಾಗುವುದು ಅಪರಾಧ. ಒಬ್ಬ ವ್ಯಕ್ತಿಗೆ ಒಂದು ಮದುವೆಗೆ ಮಾತ್ರ ಕಾನೂನಿನ ಮಾನ್ಯತೆ ಇರಲಿದೆ. ಹಾಲಿ ಷರಿಯಾ ಕಾನೂನಿನಡಿ ಮುಸ್ಲಿಮರು ಕಾನೂನು ಬದ್ಧವಾಗಿಯೇ 3 ವಿವಾಹವಾಗುವ ಅವಕಾಶವಿದೆ. ವಿವಾಹ, ವಿಚ್ಛೇದನ, ಆಸ್ತಿ, ಉತ್ತರದಾಯಿತ್ವ ಎಲ್ಲಾ ವಿಚಾರದಲ್ಲಿ ಎಲ್ಲಾ ಧರ್ಮದ ಜನರಿಗೆ ಒಂದೇ ನಿಯಮ ಅನ್ವಯವಾಗುತ್ತದೆ. ಇದನ್ನೂ ಓದಿ: ಕಾಂಗ್ರೆಸ್‌ 40 ಸ್ಥಾನಗಳನ್ನಾದರೂ ಉಳಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ: ಮೋದಿ ವ್ಯಂಗ್ಯ

    ಲಿವ್ ಇನ್ ಸಂಬಂಧಕ್ಕೆ ನೋಂದಣಿ ಕಡ್ಡಾಯ ಮಾಡಲಾಗಿದೆ. ನೋಂದಣಿ 1 ತಿಂಗಳು ತಡವಾದರೆ 3 ತಿಂಗಳು ಜೈಲು, 25 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ನೋಂದಣಿ ಸಂಶಯಾಸ್ಪದವಾಗಿದ್ದರೆ ತನಿಖೆ ನಡೆಸಲಾಗುತ್ತದೆ. ಲಿವ್ ಇನ್ ಸಂಬಂಧದಿಂದ ಜನಿಸಿದ ಮಕ್ಕಳಿಗೆ ಕಾನೂನು ಮಾನ್ಯತೆ ಸೇರಿದಂತೆ ಆಸ್ತಿಯಲ್ಲೂ ಸಮಪಾಲು ಸಿಗಲಿದೆ. ಲಿವ್ ಇನ್ ಸಂಗಾತಿ ತೊರೆದಲ್ಲಿ ಜೀವನಾಂಶ ಪಡೆಯಬಹುದು. ಸಂಬಂಧ ಮುಂದುವರಿಸಲು ಇಷ್ಟವಿಲ್ಲದ ಜೋಡಿ, ದಾಖಲೆಗಳನ್ನು ಸಲ್ಲಿಸಿ ಲಿಖಿತ ಹೇಳಿಕೆ ನೀಡಿ ಲಿವ್‌ ಇನ್‌ ಸಂಬಂಧ ಕಡಿತಗೊಳಿಸಬಹುದು. ಈ ಮಸೂದೆಯಿಂದ ಬುಡಕಟ್ಟು ಸಮುದಾಯವನ್ನು ಹೊರಗಿಡಲಾಗಿದೆ.

    ಅತ್ಯಾಚಾರ ಅಥವಾ ಅನೈಸರ್ಗಿಕ ಲೈಂಗಿಕ ಕ್ರಿಯೆ ನಡೆಸಿದ ಪತಿಗೆ ವಿಚ್ಛೇದನ ನೀಡುವ ಹಕ್ಕನ್ನು ಮಸೂದೆ ಮಹಿಳೆಯರಿಗೆ ನೀಡುತ್ತದೆ. ಮದುವೆಯಾದ ಒಂದೇ ವರ್ಷದೊಳಗೆ ವಿವಾಹ ವಿಚ್ಛೇದನ ಪಡೆಯುವುದನ್ನು ಅಸಾಧಾರಣ ಸಂದರ್ಭ ಹೊರತುಪಡಿಸಿ ಉಳಿದ ಸನ್ನಿವೇಶಗಳಲ್ಲಿ ನಿರ್ಬಂಧಿಸುವ ಅಂಶವಿದೆ. ಅತ್ಯಾಚಾರ ಪ್ರಕರಣದಲ್ಲಿ ಪತಿ ಪತಿ ಸಿಲುಕಿದರೆ ಆತನಿಂದ ಪತ್ನಿ ವಿಚ್ಛೇದನ ಕೇಳಬಹುದು. ಇದನ್ನೂ ಓದಿ: ಯಾವುದೇ ಧರ್ಮದವರಿಗೂ 2ನೇ ಮದುವೆ ಅವಕಾಶವಿಲ್ಲ, ಲಿವ್ ಇನ್ ಸಂಬಂಧಕ್ಕೆ ನೋಂದಣಿ ಕಡ್ಡಾಯ – UCC ಮಸೂದೆಯಲ್ಲಿ ಏನಿದೆ?

    ವಿವಾಹವಾದ 60 ದಿನದ ಒಳಗಡೆ ನೋಂದಣಿ ಮಾಡಿಸಬೇಕು. 2010ರ ಮಾ.26ರ ನಂತರ ಮದುವೆಯಾದವರು 6 ತಿಂಗಳೊಳಗೆ ನೋಂದಣಿ ಮಾಡಿಸುವುದು ಕಡ್ಡಾಯ. ನಿರ್ಲಕ್ಷಿಸಿದರೆ 20 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಆದರೆ ನೋಂದಣಿಯಾಗದ ವಿವಾಹವನ್ನು ಅಸಿಂಧು ಎಂದು ಪರಿಗಣನೆ ಮಾಡುವುದಿಲ್ಲ.

  • ಯಾವುದೇ ಧರ್ಮದವರಿಗೂ 2ನೇ ಮದುವೆ ಅವಕಾಶವಿಲ್ಲ, ಲಿವ್ ಇನ್ ಸಂಬಂಧಕ್ಕೆ ನೋಂದಣಿ ಕಡ್ಡಾಯ – UCC ಮಸೂದೆಯಲ್ಲಿ ಏನಿದೆ?

    ಯಾವುದೇ ಧರ್ಮದವರಿಗೂ 2ನೇ ಮದುವೆ ಅವಕಾಶವಿಲ್ಲ, ಲಿವ್ ಇನ್ ಸಂಬಂಧಕ್ಕೆ ನೋಂದಣಿ ಕಡ್ಡಾಯ – UCC ಮಸೂದೆಯಲ್ಲಿ ಏನಿದೆ?

    – ಉತ್ತರಾಖಂಡದಲ್ಲಿ ಐತಿಹಾಸಿಕ ಏಕರೂಪದ ನಾಗರಿಕ ಸಂಹಿತೆ ಮಸೂದೆ ಮಂಡನೆ

    ಡೆಹ್ರಾಡೂನ್‌: ಉತ್ತರಾಖಂಡ (Uttarakhand) ವಿಧಾನಸಭೆಯಲ್ಲಿ ಏಕರೂಪ ನಾಗರಿಕ ಸಂಹಿತೆ (Uniform Civil Code) ಮಸೂದೆ ಮಂಡನೆ ಆಗಿದೆ. ಲಿವ್ ಇನ್ ಸಂಬಂಧಕ್ಕೆ (Live in Relationship) ನೋಂದಣಿ ಕಡ್ಡಾಯ. ಲಿವ್ ಇನ್ ಸಂಬಂಧದಿಂದ ಜನಿಸಿದ ಮಕ್ಕಳಿಗೆ ಕಾನೂನು ಮಾನ್ಯತೆ. ಇದು ಉತ್ತರಾಖಂಡ ಸರ್ಕಾರ ಮಂಡಿಸಿದ ಐತಿಹಾಸಿಕ ಐತಿಹಾಸಿಕ ಏಕರೂಪ ನಾಗರಿಕ ಸಂಹಿತೆ ಮಸೂದೆಯಲ್ಲಿರುವ ಪ್ರಮುಖ ಅಂಶಗಳು.

    ಮಸೂದೆಯಲ್ಲಿ ಏನಿದೆ?
    ರಾಜ್ಯದ ಮುಸ್ಲಿಮರು (Muslims) ಸೇರಿದಂತೆ ಎಲ್ಲಾ ಧರ್ಮದವರು ಎರಡನೇ ವಿವಾಹವಾಗುವುದು ಅಪರಾಧ. ಒಂದು ಮದುವೆಗೆ ಮಾತ್ರ ಕಾನೂನಿನ ಮಾನ್ಯತೆ ಇರಲಿದೆ.  ಹಾಲಿ ಷರಿಯಾ ಕಾನೂನಿನಡಿ ಮುಸ್ಲಿಮರು ಕಾನೂನು ಬದ್ಧವಾಗಿಯೇ 3 ವಿವಾಹವಾಗುವ ಅವಕಾಶವಿದೆ. ವಿವಾಹ, ವಿಚ್ಛೇದನ, ಆಸ್ತಿ, ಉತ್ತರದಾಯಿತ್ವ ಎಲ್ಲಾ ವಿಚಾರದಲ್ಲಿ ಎಲ್ಲಾ ಧರ್ಮದ ಜನರಿಗೆ ಒಂದೇ ನಿಯಮ ಅನ್ವಯವಾಗುತ್ತದೆ. ಇದನ್ನೂ ಓದಿ: ಆಸ್ಟ್ರೇಲಿಯಾ ಸೆನೆಟರ್‌ ಆಗಿ ಭಗವದ್ಗೀತೆ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಭಾರತ ಮೂಲದ ವರುಣ್‌

    ಲಿವ್ ಇನ್ ಸಂಬಂಕ್ಕೆ ನೋಂದಣಿ ಕಡ್ಡಾಯ ಮಾಡಲಾಗಿದೆ. ನೋಂದಣಿ 1 ತಿಂಗಳು ತಡವಾದರೆ 3 ತಿಂಗಳು ಜೈಲು, 25ಸಾವಿರ ದಂಡ ವಿಧಿಸಲಾಗುತ್ತದೆ. ನೋಂದಣಿ ಸಂಶಯಾಸ್ಪದ ಆಗಿದ್ದರೆ ತನಿಖೆ ನಡೆಸಲಾಗುತ್ತದೆ. ಲಿವ್ ಇನ್ ಸಂಬಂಧದಿಂದ ಜನಿಸಿದ ಮಕ್ಕಳಿಗೆ ಕಾನೂನು ಮಾನ್ಯತೆ ಸೇರಿದಂತೆ ಆಸ್ತಿಯಲ್ಲೂ ಸಮಪಾಲು ಸಿಗಲಿದೆ. ಲಿವ್ ಇನ್ ಸಂಗಾತಿ ತೊರೆದಲ್ಲಿ ಜೀವನಾಂಶ ಪಡೆಯಬಹುದು. ಸಂಬಂಧ ಮುಂದುವರಿಸಲು ಇಷ್ಟವಿಲ್ಲದ ಜೋಡಿ, ದಾಖಲೆಗಳನ್ನು ಸಲ್ಲಿಸಿ ಲಿಖಿತ ಹೇಳಿಕೆ ನೀಡಿ ಲಿವ್‌ ಇನ್‌ ಸಂಬಂಧ ಕಡಿತಗೊಳಿಸಬಹುದು.

    ಈ ಮಸೂದೆಯಿಂದ ಬುಡಕಟ್ಟು ಸಮುದಾಯವನ್ನು ಹೊರಗಿಡಲಾಗಿದೆ.  ಇದನ್ನೂ ಓದಿ: ರಾಜ್ಯಪಾಲ ಗೆಹ್ಲೋಟ್‌ ಮೊಮ್ಮಗನ ವಿವಾಹ ಆರತಕ್ಷತೆ – ಸಿಎಂ, ಡಿಸಿಎಂ ಭಾಗಿ

    ಅತ್ಯಾಚಾರ ಅಥವಾ ಅನೈಸರ್ಗಿಕ ಲೈಂಗಿಕ ಕ್ರಿಯೆ ನಡೆಸಿದ ಪತಿಗೆ ವಿಚ್ಛೇದನ ನೀಡುವ ಹಕ್ಕನ್ನು ಮಸೂದೆ ಮಹಿಳೆಯರಿಗೆ ನೀಡುತ್ತದೆ. ಮದುವೆಯಾದ ಒಂದೇ ವರ್ಷದೊಳಗೆ ವಿವಾಹ ವಿಚ್ಛೇದನ ಪಡೆಯುವುದನ್ನು ಅಸಾಧಾರಣ ಸಂದರ್ಭ ಹೊರತುಪಡಿಸಿ ಉಳಿದ ಸನ್ನಿವೇಶಗಳಲ್ಲಿ ನಿರ್ಬಂಧಿಸುವ ಅಂಶವಿದೆ. ಅತ್ಯಾಚಾರ ಪ್ರಕರಣದಲ್ಲಿ ಪತಿ ಪತಿ ಸಿಲುಕಿದರೆ ಆತನಿಂದ ಪತ್ನಿ ವಿಚ್ಛೇದನ ಕೇಳಬಹುದು.

    ವಿವಾಹವಾದ 60 ದಿನದ ಒಳಗಡೆ ನೋಂದಣಿ ಮಾಡಿಸಬೇಕು. 2010ರ ಮಾ.26ರ ನಂತರ ಮದುವೆಯಾದವರು 6 ತಿಂಗಳೊಳಗೆ ನೋಂದಣಿ ಮಾಡಿಸುವುದು ಕಡ್ಡಾಯ. ನಿರ್ಲಕ್ಷಿಸಿದರೆ 20 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಆದರೆ ನೋಂದಣಿಯಾಗದ ವಿವಾಹವನ್ನು ಅಸಿಂಧು ಎಂದು ಪರಿಗಣನೆ ಮಾಡುವುದಿಲ್ಲ.

     

    ವಿರೋದಿಸಲ್ಲ ಎಂದ ಕಾಂಗ್ರೆಸ್‌:
    ಸಂವಿಧಾನದ ಮೂಲ ಪ್ರತಿಯೊಂದಿಗೆ ವಿಧಾನಸಭೆ ಪ್ರವೇಶಿಸಿದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ (Pushkar Singh Dhami) ಅವರು ಏಕರೂಪ ನಾಗರಿಕ ಸಂಹಿತೆ ಮಸೂದೆಯನ್ನು ಮಂಡಿಸಿದ್ದಾರೆ. ಈ ವೇಳೆ ಬಿಜೆಪಿ ಶಾಸಕರು ವಂದೇಮಾತರಂ, ಜೈ ಶ್ರೀರಾಮ್ ಎಂಬ ಘೋಷಣೆ ಕೂಗಿದರು.

    ವಿಶೇಷ ಏನೆಂದರೆ ನಾವು ಏಕರೂಪ ನಾಗರಿಕಾ ಸಂಹಿತೆ ವಿಧೇಯಕವನ್ನು ನಾವು ವಿರೋಧಿಸುತ್ತಿಲ್ಲ ಎಂದು ಕಾಂಗ್ರೆಸ್ ನಾಯಕರು (Congress Leaders) ಹೇಳಿಕೊಂಡಿದ್ದಾರೆ. ವಿಸ್ತೃತ ಚರ್ಚೆ ನಂತರ ಈ ವಿಧೇಯಕವನ್ನು ಮತಕ್ಕೆ ಹಾಕಲಾಗುತ್ತದೆ. ಇದಕ್ಕೆ ಅನುಮೋದನೆ ಸಿಕ್ಕರೆ ಸ್ವಾತಂತ್ರ್ಯದ ನಂತರ ದೇಶದಲ್ಲೇ ಮೊದಲ ಬಾರಿಗೆ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತಂದ ಗರಿಮೆಗೆ ಉತ್ತರಾಖಂಡ್ ಪಾತ್ರವಾಗಲಿದೆ.

    ಪೋರ್ಚುಗೀಸರ ಕಾಲದಿಂದಲೂ ಗೋವಾದಲ್ಲಿ ಏಕರೂಪ ನಾಗರಿಕಾ ಸಂಹಿತೆ ಜಾರಿಯಲ್ಲಿದೆ. ಮತ್ತೊಂದೆಡೆ ರಾಜಸ್ಥಾನದಲ್ಲೂ ಯುಸಿಸಿ ಜಾರಿಗೆ ಬಿಜೆಪಿ ಸರ್ಕಾರ ಮುಂದಾಗಿದೆ. ಈಗಾಗಲೇ ಚರ್ಚೆಗಳು ನಡೆಯುತ್ತಿದ್ದು, ಮುಂದಿನ ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆಗಳಿವೆ.

    ಏಕರೂಪದ ನಾಗರಿಕ ಸಂಹಿತೆ ರಚನೆ ಸಂಬಂಧ ಉತ್ತರಾಖಂಡ ಸರ್ಕಾರ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಾಧೀಶ ರಂಜನಾ ಪ್ರಕಾಶ್‌ ನೇತೃತ್ವದ ಸಮಿತಿಯನ್ನು ರಚಿಸಿತ್ತು. ಈ ಸಮಿತಿ 4 ಸಂಪುಟ ಹೊಂದಿರುವ 749 ಪುಟಗಳಿರುವ ವರದಿ ಮತ್ತು ಹಲವು ಶಿಫಾರಸುಗಳನ್ನು ಸರ್ಕಾರಕ್ಕೆ ನೀಡಿತ್ತು.