Tag: List

  • ಆಸ್ಕರ್ ಪ್ರಶಸ್ತಿ2024: ನಾಮಿನೇಷನ್ಸ್ ಪಟ್ಟಿ ಪ್ರಕಟ

    ಆಸ್ಕರ್ ಪ್ರಶಸ್ತಿ2024: ನಾಮಿನೇಷನ್ಸ್ ಪಟ್ಟಿ ಪ್ರಕಟ

    ಪ್ರತಿಷ್ಠಿತ ಆಸ್ಕರ್ (Oscar) ಪ್ರಶಸ್ತಿಗಾಗಿ ನಾಮ ನಿರ್ದೇಶನ ಪಟ್ಟಿ ಪ್ರಕಟವಾಗಿದೆ. ಕಳೆದ ಬಾರಿ ಭಾರತಕ್ಕೆ ಎರಡು ಆಸ್ಕರ್ ಪ್ರಶಸ್ತಿಗಳು ಸಂದಿವೆ. ಆದರೆ, ಈ ಬಾರಿ ಆಸ್ಕರ್ ನಾಮಿನೇಟ್ ಪಟ್ಟಿಯಲ್ಲಿ ಭಾರತದ ಯಾವುದೇ ಸಿನಿಮಾಗಳು ಇರದೇ ಇರುವುದು ಸಹಜವಾಗಿಯೇ ನಿರಾಸೆ ತಂದಿದೆ. ಹಾಗಂತ ತೀರಾ ನಿರಾಸೆ ಪಟ್ಟುವಂಥದ್ದು ಇಲ್ಲ. ಭಾರತೀಯ ಮಹಿಳೆ ನಿರ್ದೇಶನ ಮಾಡಿರುವ, ಭಾರತದಲ್ಲೇ ನಿರ್ಮಾಣವಾದ, ವಿದೇಶಿ ಸಂಸ್ಥೆ ತಯಾರಿಸಿದ ಡಾಕ್ಯುಮೆಂಟರಿ ನಾಮ ನಿರ್ದೇಶನ ಪಟ್ಟಿಯಲ್ಲಿದೆ.

    ಅತ್ಯುತ್ತಮ ಸಿನಿಮಾ ಪಟ್ಟಿಯಲ್ಲಿ ದಿ ಜೋನ್ ಆಫ್ ಇಂಟರೆಸ್ಟ್, ಬಾರ್ಬಿ, ಮಾಸ್ಟ್ರೊ, ಓಪನ್ ಹೈಮರ್, ಅನಾಟಮಿ ಆಫ್ ಎ ಫಾಲ್ ಸೇರಿದಂತೆ ಹಲವು ಚಿತ್ರಗಳು ಕಾಣಿಸಿಕೊಂಡಿದ್ದರೆ, ಅತ್ಯುತ್ತಮ ನಟ ವಿಭಾಗದಲ್ಲಿ ಜೆಫ್ರಿ ರೈಟ್, ಬ್ರ್ಯಾಡ್ಲಿ ಕೂಪರ್, ಪಾಲ್ ಗಿಯಾಮಟ್ಟಿ, ಕೋಲ್ಮನ್ ಡೆಮಿನಿಗೋ ಸೇರಿದಂತೆ ಹಲವು ಕಲಾವಿದರು ಇದ್ದಾರೆ.

    ನಿರ್ದೇಶನದ ವಿಭಾಗದಲ್ಲಿ ಕ್ರಿಸ್ಟೊಫರ್ ನೋಲನ್, ಜಸ್ಟಿನ್ ಟ್ರೈಟ್, ಜೊನಥನ್ ಗ್ಲೆಜರ್, ಯೊಗೊರ್ಸ್ ಲ್ಯಾಂತಿಮೋಸ್ ಕಾಣಿಸಿಕೊಂಡಿದ್ದಾರೆ. ಅತ್ಯುತ್ತಮ ನಟಿ ವಿಭಾಗದಲ್ಲಿ ಕ್ಯಾರಿ  ಮುಲ್ಲಿಗನ್, ಆನೆಟ್ ಬೆನಿಂಗ್, ಎಮ್ಮ ಸ್ಟೊನ್, ಸಾಂಡ್ರಾ ಹುಲ್ಲರ್ ಮೊದಲಾದವರು ಇದ್ದಾರೆ.

  • ಯುನೆಸ್ಕೋ ವಿಶ್ವ ಪರಂಪರೆ ಸೇರ್ಪಡೆಯ ತಾತ್ಕಾಲಿಕ ಪಟ್ಟಿಯಲ್ಲಿ ಹಿರೇಬೆಣಕಲ್

    ಯುನೆಸ್ಕೋ ವಿಶ್ವ ಪರಂಪರೆ ಸೇರ್ಪಡೆಯ ತಾತ್ಕಾಲಿಕ ಪಟ್ಟಿಯಲ್ಲಿ ಹಿರೇಬೆಣಕಲ್

    ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ಹಿರೇಬೆಣಕಲ್ ಗ್ರಾಮದ ಶಿಲಾಯುಗದ ಸ್ಥಳ ವಿಶ್ವಪಾರಂಪರಿಕ ತಾತ್ಕಾಲಿಕ ಪಟ್ಟಿಗೆ ಆಯ್ಕೆಯಾಗಿದೆ.

    ಕೇಂದ್ರ ಪುರಾತತ್ವ ಇಲಾಖೆಯು ವಿಶ್ವಪಾರಂಪರಿಕ ಪಟ್ಟಿಗೆ ದೇಶದ 9 ಸ್ಥಳಗಳ ಪ್ರಸ್ತಾವನೆ ಸಲ್ಲಿಸಿತ್ತು. ಯುನೆಸ್ಕೋ 9 ಸ್ಥಳಗಳ ಪೈಕಿ 6 ಸ್ಥಳಗಳನ್ನು ತಾತ್ಕಾಲಿಕ ಪಟ್ಟಿಗೆ ಆಯ್ಕೆ ಮಾಡಿದ್ದು, ಅದರಲ್ಲಿ ಕೊಪ್ಪಳದ ಹಿರೇಬೆಣಕಲ್ ಗ್ರಾಮದ ಶಿಲಾಯುಗದ ಸ್ಥಳ ಸೇರಿದೆ. ಈ ಕುರಿತು ಕೇಂದ್ರ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಅವರು ಟ್ವೀಟ್ ಮಾಡಿದ್ದಾರೆ.

    ಗಂಗಾವತಿ ತಾಲೂಕಿನ ಹಿರೇಬೆಣಕಲ್ ಗ್ರಾಮ ಗಂಗಾವತಿಯಿಂದ ಸುಮಾರು 10 ಕಿ.ಮೀ. ದೂರದಲ್ಲಿದೆ. ಕೊಪ್ಪಳ-ಗಂಗಾವತಿಯ ರಾಜ್ಯ ಹೆದ್ದಾರಿ ಮಾರ್ಗ ಮಧ್ಯೆ ಇದೆ. ಹಿರೇಬೆಣಕಲ್ ಗ್ರಾಮ ದಕ್ಷಿಣ ಭಾರತದ ಬೃಹತ್ ಶಿಲಾಯುಗ ಕಾಲದ ಮಹತ್ವದ ನೆಲೆಯಾಗಿದೆ. ಕಬ್ಬಿಣ ಯುಗದ ಜನರ ಸುಮಾರು 500ಕ್ಕೂ ಅಧಿಕ ಶಿಲಾ ಸಮಾಧಿಗಳಿವೆ. ದೇಶದಲ್ಲಿ ಒಂದೇ ಕಡೆ ಇಷ್ಟೊಂದು ಶಿಲಾ ಸಮಾಧಿಗಳು ಮತ್ತೊಂದು ನೆಲೆಯಲ್ಲಿ ಕಂಡು ಬಂದಿಲ್ಲ.

    ಹಿರೇಬೆಣಕಲ್ಲಿನಲ್ಲಿ ಮೃತರಾದವರ ಅಂತ್ಯಕ್ರಿಯೆಗೆ ಬೆಟ್ಟಗಳಲ್ಲಿ ದೊರೆಯುವ ಕಲ್ಲು ಬಂಡೆಗಳನ್ನು ಉಪಯೋಗಿಸಿ ಸಮಾಧಿ ನಿರ್ಮಾಣ ಮಾಡುತ್ತಿದ್ದರು. ಸಮಾಧಿಯಲ್ಲಿ ಮೃತರು ಬಳಸುತ್ತಿದ್ದ ವಸ್ತುಗಳನ್ನು ಇಡಲಾಗುತ್ತಿತ್ತು. ಸುಮಾರು 400 ಶಿಲಾ ಸಮಾಧಿಗಳು ಇನ್ನೂ ಇವೆ. 8 ರೀತಿಯ ಶಿಲಾ ಸಮಾಧಿ ಕಂಡುಬರುತ್ತಿವೆ. ಶಿಲಾ ಸಮಾಧಿಗಳ ಸುತ್ತಲೂ 30 ಗವಿಕಲ್ಲಾಶ್ರಯಗಳಲ್ಲಿ ಆ ಕಾಲದ ವರ್ಣಚಿತ್ರಗಳಿವೆ. ಆದ್ದರಿಂದ ಈ ನೆಲೆ ಭಾರತದ ಆದಿಮಾನವನ ಜೀವನ ಸಂಸ್ಕೃತಿ ತಿಳಿಯಲು ಅತ್ಯಂತ ಮಹತ್ವದ ನೆಲೆಯಾಗಿದೆ. ಸಂರಕ್ಷಣೆಯ ಅಗತ್ಯವಿದ್ದು, ವಿಶ್ವಪರಂಪರೆಯ ತಾಣವಾದರೆ ಮಾತ್ರ ಸಂರಕ್ಷಣೆ ಸಾಧ್ಯವಾಗಲಿದೆ. ಶಿಲಾಯುಗ ಸಂಸ್ಕೃತಿಯ ಅಧ್ಯಯನಕ್ಕೆ ಪ್ರಯೋಗ ಶಾಲೆಯಾಗಿದೆ.

    ಮಧ್ಯ ಪ್ರದೇಶದ ಭೀಮ್‍ಬೇಟ್‍ಕಾ ಬೆಟ್ಟ ಪ್ರದೇಶದಲ್ಲಿ 250 ಗವಿಚಿತ್ರಗಳಿದ್ದು, ವಿಶ್ವಪರಂಪರೆಯ ಪಟ್ಟಿಗೆ ಸೇರಿಸಿದೆ. ಆದರೆ ಕೊಪ್ಪಳದ ಗಂಗಾವತಿಯ 7 ಬೆಟ್ಟಗಳ ಸಾಲಿನಲ್ಲಿ 300ಕ್ಕೂ ಅಧಿಕ ಗವಿಚಿತ್ರಗಳು ಸೇರಿವೆ. ಆದ್ದರಿಂದ ವಿಶ್ವಪಾರಂಪರಿಕ ತಾಣ ಪಟ್ಟಿಗೆ ಸೇರಿಸುವುದು ಅತ್ಯಂತ ಅವಶ್ಯವಾಗಿದೆ ಎಂದು ಸಂಶೋಧಕ ಡಾ.ಶರಣಬಸಪ್ಪ ಕೋಲ್ಕಾರ್ ಹೇಳಿದ್ದಾರೆ.

    ಹಿರೇಬೆಣಕಲ್ ಗ್ರಾಮದ ಬಳಿ ವ್ಯಾಪಿಸಿರುವ ಬೆಟ್ಟಗಳಲ್ಲಿ ಕಬ್ಬಿಣಯುಗದ ಬೃಹತ್ ಶಿಲಾ ಸಂಸ್ಕೃತಿ ಕಾಲದ ನೂರಾರು ಶಿಲಾಕೋಣೆಗಳು, ಸಮಾಧಿಗಳು, ಬೃಹತ್ ಆಕಾರದ ಶಿಲಾಗೊಂಬೆ, ಗವಿಗಳಲ್ಲಿ ವರ್ಣಚಿತ್ರಗಳು, ಬಂಡೆಯಲ್ಲಿ ಕೊರೆದ ಚಿತ್ರಗಳಿವೆ. ಹಿರೇಬೆಣಕಲ್ಲಿನ ಗವಿವರ್ಣ ಚಿತ್ರಗಳನ್ನು ಮೊದಲಿಗೆ ಆಂಗ್ಲ ಭೂ ಗರ್ಭ ಶಾಸ್ತ್ರಜ್ಞ ಲಿಯೋನಾರ್ಡ್‍ಮನ್ ಅವರು 1925 ರಲ್ಲಿ ಬೆಳಕಿಗೆ ತಂದರು. 1985ರಲ್ಲಿ ಪುರಾತತ್ವಜ್ಞ ಡಾ.ಅ.ಸುಂದರ್ ಅವರು ಶಿಲಾಸಮಾಧಿಗಳ ಅಧ್ಯಯನದ ಜೊತೆಗೆ 9 ಗವಿಗಳನ್ನು ಶೋಧಿಸಿದರು. ಇಲ್ಲಿನ ಚಿತ್ರಗಳು ಕ್ರಿ.ಪೂ.1000-500ರಲ್ಲಿ ಕೆತ್ತಿರಬಹುದೆಂಬ ಅಂದಾಜಿದೆ.

    ಹಿರೇಬೆಣಕಲ್ಲಿನ ಗವಿಚಿತ್ರಗಳಲ್ಲಿ ಪ್ರಾಣಿಗಳಾದ ಜಿಂಕೆ, ಹಸು, ಗೂಳಿ, ನಾಯಿ, ಹುಲಿ, ಕುದುರೆ, ಮೀನು, ನವಿಲು ಸೇರಿದಂತೆ ಇತರೆ ಚಿತ್ರಗಳಿವೆ. ಅಲ್ಲದೆ ಮನುಷ್ಯರ ನರ್ತನದ ಚಿತ್ರಗಳಿದ್ದು, ಪಶುಪಾಲನೆ, ಬೇಟೆಗಾರಿಕೆಯ ಗವಿಚಿತ್ರಗಳಿವೆ. ಅದ್ಭುತವಾದ ಚಿತ್ರ ಕಲೆ ಹೊಂದಿರುವ ಹಿರೇಬೆಣಕಲ್ಲಿನ ಶಿಲಾಯುಗದ ಸ್ಥಳ ವಿಶ್ವ ಪಾರಂಪರಿಕ ತಾಣವಾಗಿಸಲು ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ಸೇರ್ಪಡೆಯಾಗಿರುವುದು ಈ ಭಾಗದ ಜನರಲ್ಲಿ ಸಂತಸ ಮೂಡಿಸಿದೆ.

  • ಕರ್ನಾಟಕದ ಕೊರೊನಾ ಹಾಟ್‍ಸ್ಪಾಟ್‍ಗಳ ಪಟ್ಟಿ ಬಿಡುಗಡೆಗೊಳಿಸಿದ ಕೇಂದ್ರ ಸರ್ಕಾರ

    ಕರ್ನಾಟಕದ ಕೊರೊನಾ ಹಾಟ್‍ಸ್ಪಾಟ್‍ಗಳ ಪಟ್ಟಿ ಬಿಡುಗಡೆಗೊಳಿಸಿದ ಕೇಂದ್ರ ಸರ್ಕಾರ

    – ಡೇಂಜರ್ ಜೋನ್‍ನಲ್ಲಿ ಬೆಂಗ್ಳೂರು ಸೇರಿದಂತೆ 8 ಜಿಲ್ಲೆಗಳು
    – ಹಸಿರು ವಲಯದಲ್ಲಿ ರಾಜ್ಯದ 11 ಜಿಲ್ಲೆಗಳು

    ನವದೆಹಲಿ: ಕೇಂದ್ರ ಸರ್ಕಾರವು ಜಿಲ್ಲೆಗಳಲ್ಲಿರುವ ಕೊರೊನಾ ಸೋಂಕಿತರು ಹಾಗೂ ಸಾವಿನ ಸಂಖ್ಯೆ ಆಧಾರದ ಮೇಲೆ ವಲಯವಾರು ವಿಂಗಡೆ ಮಾಡಿದೆ. ರಾಜ್ಯದ 8 ಜಿಲ್ಲೆಗಳನ್ನು ರೆಡ್ ಜೋನ್‍ನಲ್ಲಿದ್ದರೆ, 11 ಜಿಲ್ಲೆಗಳು ಗ್ರೀನ್ ಜೋನ್‍ನಲ್ಲಿವೆ.

    ಹಾಟ್‍ಸ್ಪಾಟ್: ಈ ಪಟ್ಟಿಯಲ್ಲಿ ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ 3 ಜಿಲ್ಲೆಗಳಿವೆ. ಬಿಡುಗಡೆಯಲ್ಲಿ ಬೆಂಗಳೂರು ನಗರ, ಮೈಸೂರು, ಬೆಳಗಾವಿ ಇದ್ದು, ಈ ಮೂರು ಜಿಲ್ಲೆಗಳಲ್ಲಿ ಕೊರೊನಾ ಭಾರೀ ಪ್ರಮಾಣದಲ್ಲಿದೆ. ಈ ಪ್ರದೇಶಗಳಲ್ಲಿ ಜನರು ಮನೆಯಿಂದ ಹೊರ ಬರುವಂತಿಲ್ಲ.

    ಹಾಟ್‍ಸ್ಪಾಟ್ ವಿಥ್ ಕ್ಲಸ್ಟರ್ (ವಲಯ ಡೆಂಜರ್‌ ಸ್ಪಾಟ್‌): ಈ ಪಟ್ಟಿಯಲ್ಲಿ ಐದು ಜಿಲ್ಲೆಗಳಿವೆ. ಅವುಗಳೆಂದರೆ ದಕ್ಷಿಣ ಕನ್ನಡ, ಬೀದರ್, ಕಲಬುರಗಿ, ಬಾಗಲಕೋಟೆ, ಧಾರವಾಡ. ಈಗಾಗಲೇ ಈ ಭಾಗಗಳಲ್ಲಿ ಕೊರೊನಾ ಪ್ರಕರಣಗಳು ಬೆಳಕಿಗೆ ಬಂದಿದ್ದು, ಯಾವುದೇ ಕ್ಷಣದಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುವ ಸಾಧ್ಯತೆಗಳು ಹೆಚ್ಚಿರುತ್ತದೆ.

    ಆರೆಂಜ್ ಜೂನ್ (ನಾನ್ ಹಾಟ್‍ಸ್ಪಾಟ್): ಈ ಪಟ್ಟಿಯಲ್ಲಿ ರಾಜ್ಯದ 11 ಜಿಲ್ಲೆಗಳಿವೆ. ಅವುಗಳೆಂದರೆ ಬಳ್ಳಾರಿ, ಮಂಡ್ಯ, ಬೆಂಗಳೂರು ಗ್ರಾಮಾಂತರ, ದಾವಣಗೆರೆ, ಉಡುಪಿ, ಗದಗ, ತುಮಕೂರು, ಕೊಡಗು, ವಿಜಯಪುರ, ಚಿಕ್ಕಬಳ್ಳಾಪುರ, ಉತ್ತರಕನ್ನಡ ಆಗಿವೆ.

    ಹಸಿರು ವಲಯ: ಈ ಪಟ್ಟಿಯಲ್ಲಿ ರಾಜ್ಯದ 11 ಜಿಲ್ಲೆಗಳಿವೆ. ಅವುಗಳೆಂದರೆ ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಹಾವೇರಿ, ಕೋಲಾರ, ಕೊಪ್ಪಳ, ರಾಯಚೂರು, ರಾಮನಗರ, ಶಿವಮೊಗ್ಗ, ಯಾದಗಿರಿ. ಈ ಭಾಗದಲ್ಲಿ ಯಾವುದೇ ಕೊರೊನಾ ಪ್ರಕರಣಗಳ ಕಂಡು ಬಂದಿಲ್ಲ. ಆದ್ರೂ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು.

    ಸದ್ಯದ ಮಾಹಿತಿಯನ್ನು ಪಡೆದು ಕೇಂದ್ರ ಸರ್ಕಾರ ವಲಯವಾರು ಪಟ್ಟಿ ಬಿಡುಗಡೆ ಮಾಡಿದೆ. ಜೊತೆಗೆ ಪ್ರತಿ ನಾಲ್ಕು ದಿನಗಳಿಗೊಮ್ಮೆ ಈ ಪಟ್ಟಿ ಪರಿಷ್ಕೃತವಾಗುತ್ತದೆ. ಏಪ್ರಿಲ್ 20ರ ಬಳಿಕ ಕೇಂದ್ರ ಸರ್ಕಾರ ಹೊಸ ಪಟ್ಟಿ ಬಿಡುಗಡೆ ಮಾಡಲಿದೆ. ಈ ನಾಲ್ಕು ದಿನಗಳಲ್ಲಿ ಒಂದು ವೇಳೆ ಕೊರೊನಾ ಸೋಂಕಿತರ ಸಂಖ್ಯೆ ಯಾವುದೇ ಜಿಲ್ಲೆ ಭಾರೀ ಏರಿಕೆ ಕಂಡ್ರೆ ಅದನ್ನು ಹಾಟ್‍ಸ್ಪಾಟ್ ಪಟ್ಟಿಗೆ ಸೇರಿಸಲಾಗುತ್ತದೆ ಎಂಬ ಮಾಹಿತಿ ಲಭಿಸಿದೆ.

  • ಬಿಎಸ್‍ವೈ ಸಚಿವ ಸಂಪುಟದ ಫೈನಲ್ ಲಿಸ್ಟ್ ಔಟ್ – ಯಾರಿಗೆ ಮಂತ್ರಿಗಿರಿ?

    ಬಿಎಸ್‍ವೈ ಸಚಿವ ಸಂಪುಟದ ಫೈನಲ್ ಲಿಸ್ಟ್ ಔಟ್ – ಯಾರಿಗೆ ಮಂತ್ರಿಗಿರಿ?

    ಬೆಂಗಳೂರು: ಕೊನೆಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಚಿವ ಸಂಪುಟದ ಪಟ್ಟಿ ಬಿಡುಗಡೆಯಾಗಿದ್ದು, ಸಚಿವರಾಗುವ 17 ಮಂದಿ ಶಾಸಕರ ಹೆಸರು ಫೈನಲ್ ಆಗಿದೆ.

    ಅಮಿತ್ ಶಾ ಅವರು ಸೋಮವಾರ ಸಂಜೆ ಫೈನಲ್ ಮಾಡಿ ಸಚಿವರ ಪಟ್ಟಿಯನ್ನು ತಯಾರು ಮಾಡಿಕೊಟ್ಟಿದ್ದರು. ಆದರೆ ಸಚಿವ ಸಂಪುಟ ಪಟ್ಟಿಯಲ್ಲಿ ಮೆಗಾ ಟ್ವಿಸ್ಟ್ ಆಗಿದ್ದು, ಕೊನೆ ಕ್ಷಣದಲ್ಲಿ ಪಟ್ಟು ಹಿಡಿದು ಸಿಎಂ ಯಡಿಯೂರಪ್ಪ ಅವರು ಬದಲಾವಣೆ ಮಾಡಿದ್ದಾರೆ. ಬೆಳಗಿನ ಜಾವದ ಹೊತ್ತಿಗೆ ಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದ್ದು, ರಾತ್ರಿಯಿಡಿ ಸಿಎಂ ಬಿಎಸ್‍ವೈ ಕಸರತ್ತು ವರ್ಕೌಟ್ ಆಗಿದೆ ಎಂದು ಹೇಳಲಾಗುತ್ತಿದೆ.

    ಅಂತಿಮ ಪಟ್ಟಿ
    1. ಗೋವಿಂದ ಕಾರಜೋಳ – ಮಾಜಿ ಸಚಿವ, ಮುಧೋಳ(ಬಾಗಲಕೋಟೆ) ಎಸ್‍ಸಿ (ಎಡಗೈ)
    2. ಡಾ.ಅಶ್ವಥ್‍ನಾರಾಯಣ್ – ಮಲ್ಲೇಶ್ವರಂ(ಬೆಂಗಳೂರು), ಒಕ್ಕಲಿಗ
    3. ಲಕ್ಷ್ಮಣ ಸವದಿ – ಮಾಜಿ ಶಾಸಕ, ಬಣಜಿಗ ಲಿಂಗಾಯತ, ಎಂಎಲ್‍ಸಿ ಮಾಡಲು ತೀರ್ಮಾನ
    4. ಈಶ್ವರಪ್ಪ, ಮಾಜಿ ಡಿಸಿಎಂ – ಶಿವಮೊಗ್ಗ, ಕುರುಬ
    5. ಆರ್.ಅಶೋಕ್ – ಮಾಜಿ ಡಿಸಿಎಂ ಪದ್ಮನಾಭನಗರ(ಬೆಂಗಳೂರು) ಒಕ್ಕಲಿಗ
    6. ಜಗದೀಶ್ ಶೆಟ್ಟರ್ – ಮಾಜಿ ಸಿಎಂ, ಹುಬ್ಬಳ್ಳಿ ಧಾರವಾಡ, ಲಿಂಗಾಯತ
    7. ಶ್ರೀರಾಮುಲು – ಮಾಜಿ ಸಚಿವ, ಮೊಳಕಾಲ್ಮೂರು(ಚಿತ್ರದುರ್ಗ) ಎಸ್‍ಟಿ, ವಾಲ್ಮೀಕಿ
    8. ಸುರೇಶ್ ಕುಮಾರ್ – ಮಾಜಿ ಸಚಿವ, ರಾಜಾಜಿನಗರ(ಬೆಂಗಳೂರು) ಬ್ರಾಹ್ಮಣ, ಪಕ್ಷ ನಿಷ್ಠೆ
    9. ವಿ.ಸೋಮಣ್ಣ – ಮಾಜಿ ಸಚಿವ, ಗೋವಿಂದರಾಜನಗರ(ಬೆಂಗಳೂರು) ಲಿಂಗಾಯತ
    10. ಸಿಟಿ ರವಿ – ಚಿಕ್ಕಮಗಳೂರು, ಒಕ್ಕಲಿಗ


    11. ಬಸವರಾಜ ಬೊಮ್ಮಾಯಿ – ಶಿಗ್ಗಾಂವಿ (ಹಾವೇರಿ) ಲಿಂಗಾಯತ, ಬಿಎಸ್‍ವೈ ಆಪ್ತ
    12. ಕೋಟಾ ಶ್ರೀನಿವಾಸ್ ಪೂಜಾರಿ – ಎಂಎಲ್‍ಸಿ, ಬಿಲ್ಲವ, ಹಿರಿತನ, ಕರಾವಳಿ ಕೋಟಾ
    13. ಜೆಸಿ ಮಾಧುಸ್ವಾಮಿ – ಚಿಕ್ಕನಾಯಕನಹಳ್ಳಿ(ತುಮಕೂರು) ಲಿಂಗಾಯತ, ಬಿಎಸ್‍ವೈ ಆಪ್ತ
    14. ಸಿಸಿ ಪಾಟೀಲ್ – ಮಾಜಿ ಸಚಿವ, ನರಗುಂದ(ಗದಗ) ಲಿಂಗಾಯತ
    15. ನಾಗೇಶ್, ಮಾಜಿ ಸಚಿವ, ಮುಳಬಾಗಲು(ಕೋಲಾರ) ಪಕ್ಷೇತರ ಶಾಸಕ, ಎಸ್‍ಸಿ (ಬಲಗೈ)
    16. ಪ್ರಭು ಚೌಹಾಣ್ – ಔರಾದ್(ಬೀದರ್) ಎಸ್‍ಸಿ (ಲಂಬಾಣಿ)
    17. ಶಶಿಕಲಾ ಜೊಲ್ಲೆ – ನಿಪ್ಪಾಣಿ(ಬೆಳಗಾವಿ) ಲಿಂಗಾಯತ

    ನಿರಾಣಿ ಮತ್ತು ಬಸವರಾಜ ಬೊಮ್ಮಾಯಿ ಅವರಿಗೆ ಮಂತ್ರಿ ಸ್ಥಾನ ಸಿಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಇವರಿಗೆ ಮಂತ್ರಿ ಸ್ಥಾನ ಕೈ ತಪ್ಪಿದೆ.

  • ಅಧಿಕಾರಿಗಳ ನಿರ್ಲಕ್ಷ್ಯ – ಮತದಾನದ ಹಕ್ಕು ಕಳೆದುಕೊಂಡ ರಾಯಚೂರು ಜನತೆ

    ಅಧಿಕಾರಿಗಳ ನಿರ್ಲಕ್ಷ್ಯ – ಮತದಾನದ ಹಕ್ಕು ಕಳೆದುಕೊಂಡ ರಾಯಚೂರು ಜನತೆ

    ರಾಯಚೂರು: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜಿಲ್ಲೆಯಲ್ಲಿ ನೂರಾರು ಜನ ಮತದಾರರು ಮತದಾನದ ಹಕ್ಕು ಕಳೆದುಕೊಂಡಿದ್ದಾರೆ.

    ಮತದಾರರ ಪಟ್ಟಿಯಲ್ಲಿ ಮಹಾಗೊಂದಲವನ್ನ ಸೃಷ್ಟಿಸಿರುವ ಅಧಿಕಾರಿಗಳು ಬದುಕಿರುವ ಮತದಾರರ ಹೆಸರನ್ನೆ ಮತದಾರರ ಪಟ್ಟಿಯಿಂದ ತೆಗೆದುಹಾಕಿದ್ದಾರೆ. ರಾಯಚೂರು ತಾಲೂಕಿನ ಜಾಗೀರ್ ವೆಂಕಟಾಪುರ ಗ್ರಾಮವೊಂದರಲ್ಲೆ 20ಕ್ಕೂ ಹೆಚ್ಚು ಮತದಾರರಿಗೆ ವಂಚನೆಯಾಗಿದೆ.

    ಬೇರೆ ಬೇರೆ ಗ್ರಾಮಗಳು ಸೇರಿದಂತೆ ನೂರಾರು ಮತದಾರರ ಹೆಸರು ಮತದಾರರ ಪಟ್ಟಿಯಿಂದ ಡಿಲೀಟ್ ಆಗಿದೆ. ಹೀಗಾಗಿ ಗ್ರಾಮಸ್ಥರು ನಾವು ಬದುಕಿದ್ದೇವೆ ನಮಗೆ ಮತದಾನಕ್ಕೆ ಅವಕಾಶ ಕೊಡಿ ಎಂದು ಆಗ್ರಹಿಸಿದ್ದಾರೆ.

    ಮತದಾರರ ಪಟ್ಟಿಯಲ್ಲಿ ಹೆಸರು, ವಿಳಾಸ, ಫೋಟೋದಲ್ಲೂ ತಪ್ಪು ಮಾಹಿತಿಯನ್ನ ಮುದ್ರಿಸಿದ್ದರಿಂದ ಗೊಂದಲ ಸೃಷ್ಟಿಯಾಗಿದೆ. ಅರ್ಜಿ ಸಲ್ಲಿಸದೇ ಇದ್ದರೂ ಮತದಾರರ ಬೂತ್‍ಗಳ ಬದಲಾವಣೆ ಮಾಡಿ ಮತದಾರರಿಗೆ ಅನಾನುಕೂಲ ಮಾಡಲಾಗಿದೆ.

    ರಾಯಚೂರಿನಲ್ಲಿ ಮುಸ್ಲಿಮರು ವಾಸಮಾಡುವ ಎಲ್‍ಬಿಎಸ್ ನಗರ ಸೇರಿ ಇತರ ವಾರ್ಡ್ ಗಳ ಮತದಾರರನ್ನು ಬೇರೆ ವಾರ್ಡ್ ಗಳಿಗೆ ವರ್ಗಾವಣೆ ಮಾಡಲಾಗಿದೆ. ಈ ಗೊಂದಲಕ್ಕೆ ರಾಯಚೂರು ತಹಶಿಲ್ದಾರ್ ಡಾ.ಹಂಪಣ್ಣ ಸಜ್ಜನ್ ಹಾಗೂ ಶಿರಸ್ತೆದಾರ್ ಕಾರಣ ಅಂತ ಮುಸ್ಲಿಂ ಮತದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಡಿಲೀಟ್ ಪ್ರಕ್ರಿಯೆ ಹೇಗೆ ನಡೆಯುತ್ತೆ?
    ಮತದಾರ ಒಂದು ಗ್ರಾಮದಲ್ಲಿ ವಾಸಿಸುತ್ತಿದ್ದರೆ ಆತ ಬದುಕಿರುವವರೆಗೂ ಮತದಾನದ ಪಟ್ಟಿಯಲ್ಲಿ ಹೆಸರು ಇರುತ್ತದೆ. ಒಂದು ವೇಳೆ ಮತದಾರ ಮೃತಪಟ್ಟರೆ ಮಾತ್ರ ಮತದಾನದ ಪಟ್ಟಿಯಿಂದ ಹೆಸರನ್ನು ಡಿಲೀಟ್ ಮಾಡಲಾಗುತ್ತದೆ. ಇಲ್ಲವಾದಲ್ಲಿ ಮತದಾರ ಬೇರೆ ಗ್ರಾಮ-ನಗರಕ್ಕೆ ಹೋಗಿ ನೆಲೆಸಿದರೆ, ಮತದಾರ ತಮ್ಮ ಮತದಾನದ ಬೂತ್‍ಗಳ ಬದಲಾವಣೆ ಮಾಡಿ ಎಂದು ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಬೇಕು. ಆಗ ಅಧಿಕಾರಿಗಳು ಪರಿಶೀಲನೆ ನಡೆಸಿ ಮತದಾರನ ವಿಳಾಸಕ್ಕೆ ಬೂತ್‍ಗಳ ಬದಲಾವಣೆ ಮಾಡಿ ನಂತರ ಪಟ್ಟಿಯಿಂದ ಡಿಲೀಟ್ ಮಾಡಬೇಕಾಗುತ್ತದೆ.

  • ಬಿಗ್ ಬಾಸ್ ಸೀಸನ್ 6ರ ಸಂಭಾವ್ಯ ಪಟ್ಟಿ ಇಲ್ಲಿದೆ

    ಬಿಗ್ ಬಾಸ್ ಸೀಸನ್ 6ರ ಸಂಭಾವ್ಯ ಪಟ್ಟಿ ಇಲ್ಲಿದೆ

    ಬೆಂಗಳೂರು: ಕನ್ನಡದ ಹೆಸರಾಂತ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 6ರ ಸ್ಪರ್ಧಾಳುಗಳ ಸಂಭಾವ್ಯ ಪಟ್ಟಿ ಲಭ್ಯವಾಗಿದೆ. ಇದೇ ಭಾನುವಾರ ಬಿಗ್ ಬಾಸ್ ಕಾರ್ಯಕ್ರಮ ಶುಭ ಆರಂಭಗೊಳ್ಳಲಿದೆ.

    ಈ ಬಾರಿ 18 ಸ್ಪರ್ಧಿಗಳು ಬಿಗ್ ಬಾಸ್ ಮನೆಯೊಳಗೆ ಕಾಲಿಡಲಿದ್ದಾರೆ. ಕಳೆದ ಸೀಸನ್ ರೀತಿಯಲ್ಲಿಯೇ ಈ ಬಾರಿಯೂ ಗಣ್ಯರು ಮತ್ತು ಶ್ರೀಸಾಮನ್ಯರ ಕೊಲಾಬರೇಷನ್ ಇರಲಿದೆ. ಸಿನಿಮಾ ಕ್ಷೇತ್ರದಿಂದ ಇಬ್ಬರು ಗ್ಲ್ಯಾಮರಸ್ ನಟಿಯರ ಹೆಸರು ಕೇಳಿಬರುತ್ತಿದ್ದು, ನಟಿ ಸುಮನ್ ರಂಗನಾಥನ್, ಶುಭಾ ಪುಂಜಾ, ನಟ ಅನಿರುದ್ಧ್ ಮತ್ತು ಕಿರಿಕ್ ಪಾರ್ಟಿಯ ಚಂದನ್ ಬಿಗ್ ಬಾಸ್ ಮನೆಗೆ ಹೋಗಲಿದ್ದಾರೆ.

    ಮನರಂಜನೆ ಆಧಾರದ ಮೇಲೆ ಬೇರೆ ಬೇರೆ ವಲಯಗಳಿಂದ ಸ್ಪರ್ಧಿಗಳನ್ನ ಆಯ್ಕೆ ಮಾಡಲಾಗಿದೆ. ಸಿನಿಮಾ, ಕಿರುತೆರೆ, ಸಂಗೀತ, ಮಾಧ್ಯಮ, ಶ್ರೀಸಾಮಾನ್ಯ ಮತ್ತು ವಿವಾದದಿಂದ ಹೆಸರು ಮಾಡಿದ್ದ ಸ್ಪರ್ಧಿಗಳನ್ನ ಆಯ್ಕೆ ಮಾಡಲಾಗಿದೆ. ಸಂಗೀತಗಾರ ನವೀನ್ ಸಜ್ಜು, ಚನ್ನಪ್ಪ ಮತ್ತು ತುಳಿಸಿ ಪ್ರಸಾದ್ ಹೋಗುವ ಸಾಧ್ಯತೆ ಇದೆ.

    ಈ ಬಾರಿ ಸಂಭಾವ್ಯ ಪಟ್ಟಿಯಲ್ಲಿ ಹೆಚ್ಚಾಗಿ ಕಿರುತೆರೆ ಕಲಾವಿದರೇ ಕಾಣಿಸಿಕೊಳ್ಳುತ್ತಿದ್ದಾರೆ. ಕುರಿ ಪ್ರತಾಪ್ , ಶಿವರಾಜ್ ಕೆ.ಆರ್ ಪೇಟೆ, ಒಗ್ಗರಣೆ ಡಬ್ಬಿ ಖ್ಯಾತಿಯ ಮುರಳಿ, ಲಕ್ಷ್ಮೀ ಬಾರಮ್ಮ ಧಾರಾವಾಹಿ ಖ್ಯಾತಿಯ ಕವಿತಾ, ಪುಟ್ಟಗೌರಿ ಸೀರಿಯಲ್ ಖ್ಯಾತಿಯ ರಂಜನಿ ಜೊತೆಗೆ ರಂಗಭೂಮಿ ನಟಿ ಅಕ್ಷತಾ ಪಾಂಡವಪುರ ಹೆಸರು ಕೇಳಿಬರುತ್ತಿದೆ.

    ಎಂದಿನಂತೆ ಕಿಚ್ಚ ಸುದೀಪ್ ನಿರುಪಣೆಯಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಮೂಡಿ ಬರಲಿದೆ. ಹೊಸದಾಗಿ ನಿರ್ಮಾಣವಾದ ಬಿಗ್ ಬಾಸ್ ಮನೆಯೊಳಗೆ ಹೋಗುವುದಕ್ಕೆ ಒಟ್ಟು 18 ಸ್ಪರ್ಧಿಗಳು ತುದಿಕಾಲಲ್ಲಿ ಕುಳಿತಿದ್ದಾರೆ. ಗೆದ್ದ ಸ್ಪರ್ಧಿಗೆ 50 ಲಕ್ಷ ಬಹುಮಾನ ಸಿಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕರ್ನಾಟಕದಲ್ಲಿ 23, ದೇಶದಲ್ಲಿದೆ 277 ನಕಲಿ ಎಂಜಿನಿಯರಿಂಗ್ ಕಾಲೇಜುಗಳು!

    ಕರ್ನಾಟಕದಲ್ಲಿ 23, ದೇಶದಲ್ಲಿದೆ 277 ನಕಲಿ ಎಂಜಿನಿಯರಿಂಗ್ ಕಾಲೇಜುಗಳು!

    ನವದೆಹಲಿ: ದೇಶದಲ್ಲಿ ಒಟ್ಟಾರೆ 277 ನಕಲಿ ಎಂಜಿನಿಯರಿಂಗ್ ಕಾಲೇಜುಗಳು ಇರುವುದಾಗಿ ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಾಹಿತಿ ನೀಡಿದೆ.

    ದೇಶಾದ್ಯಂತ ಇರುವ ನಕಲಿ ಕಾಲೇಜುಗಳ ಪೈಕಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅತಿಹೆಚ್ಚು 66 ನಕಲಿ ಕಾಲೇಜುಗಳಿವೆ. ಉಳಿದಂತೆ ತೆಲಂಗಾಣದಲ್ಲಿ 35, ಪಶ್ಚಿಮ ಬಂಗಾಳದಲ್ಲಿ 23 ಕಾಲೇಜುಗಳಿದ್ದು ಪಟ್ಟಿಯಲ್ಲಿ ಕ್ರಮವಾಗಿ 2 ಮತ್ತು 3ನೇ ಸ್ಥಾನ ಪಡೆದಿದೆ.

    ಕರ್ನಾಟಕ ನಕಲಿ ಕಾಲೇಜುಗಳ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದಿದ್ದು, 23 ನಕಲಿ ಕಾಲೇಜುಗಳಿದೆ. ನಂತರದಲ್ಲಿ ಉತ್ತರ ಪ್ರದೇಶದ 5ನೇ ಸ್ಥಾನದಲ್ಲಿದ್ದು 22 ನಕಲಿ ಕಾಲೇಜುಗಳು ಪತ್ತೆಯಾಗಿದೆ.

    ದೇಶದಲ್ಲಿ ನಕಲಿ ಎಂಜಿನಿಯರಿಂಗ್ ಕಾಲೇಜುಗಳು ಎಷ್ಟಿವೆ ಎಂದು ಎಐಎಂಡಿಕೆ ಸಂಸದ ಪಿ ನಾಗರಾಜನ್, ಬಿಜೆಪಿಯ ಲಕ್ಷ್ಮಣ್ ಗಲುವಾ ಹಾಗೂ ರಮಾದೇವಿ ಅವರು ಪ್ರಶ್ನಿಸಿದ್ದರು. ಮೂವರ ಪ್ರಶ್ನೆಗಳಿಗೆ ಉತ್ತರಿಸಿದ ಕೇಂದ್ರ ಮಾನವ ಸಂಪನ್ಮೂಲ ಖಾತೆಯ ರಾಜ್ಯ ಸಚಿವ ಸತ್ಯಪಾಲ್ ಸಿಂಗ್ ನಕಲಿ ಕಾಲೇಜುಗಳ ವಿವರ ನೀಡಿದರು. ಅಲ್ಲದೇ ಇಂತಹ ಕಾಲೇಜುಗಳ ಮೇಲೆ ಕ್ರಮಕೈಗೊಳ್ಳುವ ಭರವಸೆಯನ್ನು ನೀಡಿದ್ದು, ರಾಜ್ಯ ಸರ್ಕಾರಗಳು ಇಂತಹ ಕಾಲೇಜುಗಳನ್ನು ಮುಚ್ಚಲು ಕ್ರಮಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

    ನಕಲಿ ಕಾಲೇಜುಗಳ ಮಾಹಿತಿಯನ್ನು ಸಾರ್ವಜನಿಕವಾಗಿ ನೋಟಿಸ್ ನೀಡುವ ಮೂಲಕ ಮಾಹಿತಿ ನೀಡಲಾಗುವುದು. ಅಲ್ಲದೇ ರಾಜ್ಯ ಸರ್ಕಾರಗಳು ಹೊಸ ಕಾಲೇಜು ಆರಂಭಿಸಲು ಹಾಗೂ ಅವುಗಳನ್ನು ಮುಚ್ಚಲು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಅನುಮತಿ ಕಡ್ಡಾಯ ಎಂದು ತಿಳಿಸಿದರು.

    ನಕಲಿ ಎಂಜಿನಿಯರಿಂಗ್ ಕಾಲೇಜುಗಳ ಪಟ್ಟಿಯನ್ನು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ತನ್ನ ವೆಬ್‍ಸೈಟ್ ನಲ್ಲಿ ಪ್ರಕಟಿಸಿದೆ. ಅಲ್ಲದೇ ಈ ಪಟ್ಟಿಯನ್ನು ನಿರಂತರವಾಗಿ ಪರಿಶೀಲನೆ ನಡೆಸಿ ಹೊಸ ನಕಲಿ ಕಾಲೇಜು ಪತ್ತೆಯಾದರೆ ಅವುಗಳನ್ನು ಸಾರ್ವಜನಿಕವಾಗಿ ಪ್ರಕಟಗೊಳಿಸಲಿದೆ.

  • ಮತ್ತೆ ರಾಜ್ಯದಲ್ಲಿ ಆಪರೇಷನ್ ಕಮಲ? ಶಾ ಜೊತೆ ಬಿಎಸ್‍ವೈ ಚರ್ಚಿಸಿದ್ದೇನು?

    ಮತ್ತೆ ರಾಜ್ಯದಲ್ಲಿ ಆಪರೇಷನ್ ಕಮಲ? ಶಾ ಜೊತೆ ಬಿಎಸ್‍ವೈ ಚರ್ಚಿಸಿದ್ದೇನು?

    ಬೆಂಗಳೂರು: ಮೈತ್ರಿ ಸರ್ಕಾರದಲ್ಲಿ ಬಜೆಟ್ ವಿಷಯವಾಗಿ ಜಟಾಪಟಿ ನಡೆಯುತ್ತಿದೆ. ಇದರ ಬೆನ್ನಲ್ಲೆ ವಿರೋಧಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಆಪರೇಷನ್ ಕಮಲಕ್ಕೆ ರಣತಂತ್ರ ನಡೆಸಿದ್ದಾರಾ ಎನ್ನುವ ಪ್ರಶ್ನೆ ಎದ್ದಿದೆ.

    ಬಿ.ಎಸ್.ಯಡಿಯೂರಪ್ಪ ಅವರು ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರನ್ನು ಗುಜರಾತ್‍ನ ಅಹ್ಮದಾಬಾದ್‍ನಲ್ಲಿ ಭೇಟಿಯಾಗಿದ್ದು, ರಾಜ್ಯದ ವಿದ್ಯಮಾನ, ಸಮ್ಮಿಶ್ರ ಸರ್ಕಾರ ಬೆಳವಣಿಗೆಗಳ ಕುರಿತು ಚರ್ಚೆ ನಡೆಸಿದ್ದಾರೆ. ಅಲ್ಲದೇ ಅಮಿತ್ ಷಾ ಅವರಿಗೆ ಅತೃಪ್ತ ಕಾಂಗ್ರೆಸ್ ಶಾಸಕರ ಪಟ್ಟಿಯನ್ನು ಕೊಟ್ಟಿದ್ದಾರೆ ಎಂದು ಪಕ್ಷದ ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.

    ಭಾನುವಾರ ಶಾಸಕರಾದ ಉಮೇಶ್ ಕತ್ತಿ, ಬಸವರಾಜ್ ಬೊಮ್ಮಾಯಿ ಅವರು ಡಾಲರ್ಸ್ ಕಾಲೊನಿಯ ನಿವಾಸದಲ್ಲಿ ಚರ್ಚಿಸಿ, ಅತೃಪ್ತ ಕಾಂಗ್ರೆಸ್ ಶಾಸಕರ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಇಂದು ಬೆಳಗ್ಗೆಯಿಂದ ಯಾರ ಸಂಪರ್ಕಕ್ಕೂ ಸಿಗದೆ, ಬೆಳಗ್ಗೆ 7.30 ಗಂಟೆಗೆ ಮನೆ ಬಿಟ್ಟ ಬಿಎಸ್‍ವೈ ಅವರು ಭದ್ರತಾ ಸಿಬ್ಬಂದಿ, ಸರ್ಕಾರಿ ಕಾರು ಎಲ್ಲವನ್ನೂ ಬಿಟ್ಟು ಎಲ್ಲೋ ಹೋಗಿದ್ದರು ಅಂತಾ ಸುದ್ದಿಯಾಗಿತ್ತು. ಮಧ್ಯಾಹ್ನ ಬಂದ ವರದಿಯ ಪ್ರಕಾರ ಬಿ.ಎಸ್.ಯಡಿಯೂರಪ್ಪ ಅವರು ಅಮಿತ್ ಷಾ ಅವರ ನಿವಾಸಕ್ಕೆ ತೆರಳಿದ್ದಾರೆ ಎನ್ನುವುದು ಖಚಿತವಾದ್ದು, ಈ ಭೇಟಿ ರಾಜ್ಯ ರಾಜಕೀಯ ವಿಧ್ಯಮಾನದಲ್ಲಿ ಭಾರೀ ಕುತೂಹಲ ಕೆರಳಿಸಿದೆ.

    ರಾಜ್ಯಕ್ಕೆ ಶೋಭಾ?
    ಉಡುಪಿ-ಚಿಕ್ಕಮಗಳೂರಿನ ಸಂಸದೆ ಶೋಭಾ ಕರಂದ್ಲಾಜೆ ಮತ್ತೆ ರಾಜ್ಯ ರಾಜಕಾರಣಕ್ಕೆ ಮರಳುತ್ತಾರೆ ಎನ್ನುವ ಚರ್ಚೆ ಬಿಜೆಪಿಯಲ್ಲಿ ಕೇಳಿ ಬರುತ್ತಿದೆ. ವಿಧಾನ ಪರಿಷತ್‍ನಲ್ಲಿ ಸೋಮಣ್ಣ ಅವರ ಬದಲಿಗೆ ಪಕ್ಷದ ನಾಯಕಿಯನ್ನಾಗಿ ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ನೇಮಕ ಮಾಡುವ ಕುರಿತು ಅಮಿತ್ ಷಾ ಜೊತೆ ಬಿ.ಎಸ್.ಯಡಿಯೂರಪ್ಪ ಅವರು ಚರ್ಚಿಸಿದ್ದು, ಇದಕ್ಕೆ ಅಮಿತ್ ಷಾ ಅವರು ಸಮ್ಮತಿ ನೀಡದೆ, ಮುಂದಿನ ದಿನಗಳಲ್ಲಿ ನೋಡೋಣ ಎಂದು ಹೇಳಿದ್ದಾರಂತೆ. ಈ ಹಿಂದೆ ಹಿರಿತನದ ಆಧಾರದ ಮೇಲೆ ಕೋಟಾ ಶ್ರೀನಿವಾಸ್ ಪೂಜಾರಿ ಮತ್ತು ಆಯನೂರು ಮಂಜುನಾಥ್ ಹೆಸರು ಕೇಳಿ ಬಂದಿತ್ತು. ಆದರೆ ಕಾಂಗ್ರೆಸ್ ಸಚಿವೆ ಜಯಮಾಲಾ ಅವರು ಸಭಾನಾಯಕಿಯಾದರೆ ಶೋಭಾ ಕರಂದ್ಲಾಜೆ ಅವರನ್ನು ಸದನಕ್ಕೆ ತರುವುದು ಬಿ.ಎಸ್.ಯಡಿಯೂರಪ್ಪ ಅವರ ಯೋಜನೆ ಆಗಿತ್ತು ಎನ್ನಲಾಗಿದೆ.

    https://youtu.be/0KekoQNV5nA

  • ಫೋರ್ಬ್ಸ್ ಟಾಪ್ 10 ಪಟ್ಟಿಯಲ್ಲಿ ಇತರೆ ನಟಿಯರ ಹೆಸರು ಯಾಕಿಲ್ಲ? ಪ್ರಿಯಾಂಕಾ ಚೋಪ್ರಾ ಹೀಗಂದ್ರು

    ಫೋರ್ಬ್ಸ್ ಟಾಪ್ 10 ಪಟ್ಟಿಯಲ್ಲಿ ಇತರೆ ನಟಿಯರ ಹೆಸರು ಯಾಕಿಲ್ಲ? ಪ್ರಿಯಾಂಕಾ ಚೋಪ್ರಾ ಹೀಗಂದ್ರು

    ಮುಂಬೈ: ಫೋರ್ಬ್ಸ್ ಪಟ್ಟಿ ಬಿಡುಗಡೆಯಾಗಿದ್ದು, ಟಾಪ್ 10 ಪಟ್ಟಿಯಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ಹೆಸರು ಕೂಡ ಇದೆ. ಈ ಪಟ್ಟಿಯಲ್ಲಿ ಪ್ರಿಯಾಂಕಾ ಚೋಪ್ರಾ ಬಿಟ್ಟರೆ ಬೇರೆ ಯಾವ ನಟಿಯರ ಹೆಸರು ಕೇಳಿ ಬಂದಿಲ್ಲ. ಈ ಪಟ್ಟಿಯಲ್ಲಿ ಬೇರೆ ನಟಿಯರ ಹೆಸರು ಯಾಕಿಲ್ಲ ಎಂದು ಕೇಳಿದ್ದಿಕ್ಕೆ ವೇತನ ಲಿಂಗಭೇದ ಎಂದು ಪ್ರಿಯಾಂಕಾ ಉತ್ತರಿಸಿದ್ದಾರೆ.

    ವೇತನ ಲಿಂಗಭೇದ ಇದು ವಿಶ್ವದ ಸಮಸ್ಯೆ ಹಾಗೂ ಎಲ್ಲ ವೃತ್ತಿಯಲ್ಲಿ ಈ ಸಮಸ್ಯೆ ಇರುತ್ತದೆ. ಅದು ಬಾಲಿವುಡ್ ಆಗಿರಲಿ, ಹಾಲಿವುಡ್ ಆಗಿರಲಿ ಅಥವಾ ಬೇರೆ ವೃತ್ತಿ ಆಗಿರಲ್ಲಿ ಮಹಿಳೆಯರಿಗಿಂತ ಪುರುಷರಿಗೆ ವೇತನ ಹೆಚ್ಚು ಇರುತ್ತದೆ. ನನ್ನ ಪ್ರಕಾರ ಇದು ಒಂದು ದೊಡ್ಡ ಸಮಸ್ಯೆ ಹಾಗೂ ಇದು ಚಿತ್ರರಂಗದಲ್ಲಿ ಮಾತ್ರವಲ್ಲ. ಎಲ್ಲ ವೃತ್ತಿಯಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂದು ಹೇಳಿದರು.

    ಇದನ್ನೂ ಓದಿ: ಫೋರ್ಬ್ಸ್ ಇಂಡಿಯಾ ಟಾಪ್ 100 ಸೆಲೆಬ್ರಿಟಿ ಪಟ್ಟಿ ರಿಲೀಸ್: ಯಾರ ಆದಾಯ ಎಷ್ಟು ಕೋಟಿ ಇದೆ ಗೊತ್ತಾ?

    ಫೋರ್ಬ್ಸ್ 2017ರ ಟಾಪ್ 10 ಪಟ್ಟಿಯಲ್ಲಿ ನಟಿಯರಲ್ಲಿ ನೀವು ಒಬ್ಬರೆ ಇದ್ದೀರ? ನಿಮ್ಮ ಅಭಿಪ್ರಾಯ ಏನು ಎಂದು ಕೇಳಿದ್ದಕ್ಕೆ ಪ್ರಿಯಾಂಕಾ,”ನನಗೆ ತುಂಬಾನೇ ಖುಷಿಯಾಗುತ್ತಿದೆ. ಪುರುಷರಿಗೆ ಸಮಾನವಾದ ಸ್ಥಾನಕ್ಕೆ ನಾನು ತಲುಪಿದ್ದೇನೆ. ಚಿತ್ರರಂಗದಲ್ಲಿ ಈ ರೀತಿ ನಡೆಯುವುದು ಅಪರೂಪವಾಗಿದೆ. ಈ ಸಮಯದಲ್ಲಿ ಬೇರೆ ನಟಿಯರು ಟಾಪ್ 10 ಪಟ್ಟಿಯಲ್ಲಿ ಯಾಕೆ ಇಲ್ಲ ಎಂಬ ಪ್ರಶ್ನೆ ಹುಟ್ಟುತ್ತದೆ” ಎಂದು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

    ಇದನ್ನೂ ಓದಿ: ಫೋರ್ಬ್ಸ್  ಪಟ್ಟಿಯಲ್ಲೂ ಬಾಹುಬಲಿ ಶೈನಿಂಗ್: ಯಾರ ಆದಾಯ ಎಷ್ಟು ಕೋಟಿ ರೂ.?

    ನಟರಿಗೆ ಹೆಚ್ಚು ಸಂಭಾವನೆ ಕೊಟ್ಟು ಪಕ್ಷಪಾತ ಮಾಡಿದ್ದಕ್ಕೆ ಈ ಹಿಂದೆ ನಟಿ ದೀಪಿಕಾ ಪಡುಕೋಣೆ, ಕಂಗನಾ ರಣೌತ್ ಹಾಗೂ ಅನುಷ್ಕಾ ಶರ್ಮಾ ಹಿಂದಿ ಚಲನಚಿತ್ರ ವಿರುದ್ಧ ವಾಗ್ದಾಳಿ ನಡೆಸಿದ್ದರು.

    ಫೋರ್ಬ್ಸ್ 2017ರ ಟಾಪ್ ಸೆಲೆಬ್ರಿಟಿ ಪಟ್ಟಿಯಲ್ಲಿ 35 ವರ್ಷ ನಟಿ ಪ್ರಿಯಾಂಕ ಚೋಪ್ರಾ 8ನೇ ಸ್ಥಾನವನ್ನು ಪಡೆದಿದ್ದು, ಆದಾಯ 68 ಕೋಟಿ ರೂ. ಇದೆ.