Tag: Liquor Store

  • ಮಣಿಪುರದಲ್ಲಿ ಮದ್ಯದಂಗಡಿ ತೆರೆಯಲು ಅವಕಾಶ – ಸಿಎಂ ಬಿರೇನ್ ಸಿಂಗ್ ವಿರುದ್ಧ ಜೈರಾಮ್ ರಮೇಶ್ ಕಿಡಿ

    ಮಣಿಪುರದಲ್ಲಿ ಮದ್ಯದಂಗಡಿ ತೆರೆಯಲು ಅವಕಾಶ – ಸಿಎಂ ಬಿರೇನ್ ಸಿಂಗ್ ವಿರುದ್ಧ ಜೈರಾಮ್ ರಮೇಶ್ ಕಿಡಿ

    ಇಂಫಾಲ್: ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಭಾರತೀಯ ನಿರ್ಮಿತ ವಿದೇಶಿ ಮದ್ಯ (ಐಎಂಎಫ್‍ಎಲ್) ಅಂಗಡಿಗಳನ್ನು ತೆರೆಯಲಾಗುವುದು ಎಂದು ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಹೇಳಿದ್ದರು. ಸದ್ಯ ಈ ಹೇಳಿಕೆಗೆ ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ ಇದು ಮಣಿಪುರದ ಮಹಿಳೆಯರಿಗೆ ಅವಮಾನ ಎಂದು ಕಿಡಿಕಾರಿದ್ದಾರೆ.

    ಈ ಕುರಿತಂತೆ ಟ್ವೀಟ್ ಮಾಡಿರುವ ಜೈರಾಮ್ ರಮೇಶ್ ಅವರು, ಪ್ರಚಾರ ಮುಕ್ತಾಯವಾಗುವ 48 ಗಂಟೆಗಳ ಮುನ್ನ ಭಾರತೀಯ ನಿರ್ಮಿತ ವಿದೇಶಿ ಮದ್ಯದ ಅಂಗಡಿಗಳನ್ನು ತೆರೆಯಲಾಗುವುದು ಎಂದು ಬಿಜೆಪಿ ಸಿಎಂ ಘೋಷಿಸಿರುವುದು ಆಘಾತಕಾರಿಯಾಗಿದೆ. ತಕ್ಷಣವೇ ಈ ಹೇಳಿಕೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೇ ಬಿರೇನ್ ಸಿಂಗ್ ಅವರು ರಾಜ್ಯದ ಮಹಿಳೆಯರು, ಸಾಮಾಜಿಕ ಕಾರ್ಯಕರ್ತರ ಕ್ಷಮೆಯಾಚಿಸಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ನೀವು ಇರುವಲ್ಲಿಯೇ ಸುರಕ್ಷಿತವಾಗಿರಿ, ಬಾರ್ಡರ್ ದೇಶಗಳಿಗೆ ಹೋಗಬೇಡಿ: ಸುಧಾಕರ್

     Jairam Ramesh

    ನಿಷೇಧಿತ ಭೂಗತ ಗುಂಪು ಕ್ರಾಂತಿಕಾರಿ ಪೀಪಲ್ಸ್ ಫ್ರಂಟ್ 1991ರ ಜನವರಿ 1 ರಿಂದ ಎಲ್ಲಾ ವಿದೇಶಿ ಮದ್ಯದ ಅಂಗಡಿಗಳನ್ನು ಮುಚ್ಚುವಂತೆ ಒತ್ತಾಯಿಸಿತು. ಮಣಿಪುರ ಮದ್ಯ ನಿಷೇಧ ಕಾಯಿದೆ 1991ರ ನಂತರ ರಾಜ್ಯವನ್ನು ಮದ್ಯ ಮುಕ್ತ ರಾಜ್ಯ ಎಂದು ಘೋಷಿಸಲಾಗಿತ್ತು.  ಆದರೆ ಎಸ್‍ಸಿ ಮತ್ತು ಎಸ್‍ಟಿ ಸಮುದಾಯಗಳಿಗೆ ವಿನಾಯಿತಿ ನೀಡಲಾಗಿದ್ದು, ಇವರು ದೇಶದ ನಿರ್ಮಿತ ಮದ್ಯವನ್ನು ತಯಾರಿಸಲು ಹೆಚ್ಚಾಗಿ ರಾಜ್ಯದ ಗುಡ್ಡಗಾಡು ಪ್ರದೇಶಗಳಲ್ಲಿ ನೆಲೆಸಿದ್ದಾರೆ. ಇದನ್ನೂ ಓದಿ:  ಉಕ್ರೇನ್‌ ಯುದ್ಧ ಭೀಕರತೆ ನಡುವೆಯೂ ಹಸೆಮಣೆ ಏರಿ ಜೋಡಿ ಸಂಭ್ರಮ

    ಗುರುವಾರ ಪೂರ್ವ ಇಂಫಾಲ್ ಜಿಲ್ಲೆಯಲ್ಲಿ ನಡೆದ ಸಭೆ ವೇಳೆ ಈ ಹಿಂದೆ ಜನರು ವಿಷಪೂರಿತ ಹಳ್ಳಿಗಾಡಿನ ಮದ್ಯವನ್ನು ಸೇವಿಸಿ ಸಾವನ್ನಪ್ಪಿದ್ದಾರೆ. ಹಾಗಾಗಿ ಬಿಜೆಪಿ ಜನರನ್ನು “ಉಳಿಸಲು” ಅಂಗಡಿಗಳಿಂದ ಐಎಂಎಫ್‍ಎಲ್ ಮಾರಾಟ ಮಾಡಲು ಅವಕಾಶ ನೀಡುತ್ತದೆ ಎಂದು ಬಿರೇನ್ ಸಿಂಗ್ ಹೇಳಿದ್ದರು.

  • ಮದ್ಯದ ಅಂಗಡಿಯಲ್ಲಿ ತಳ್ಳಿದಕ್ಕೆ ಹತ್ಯೆಗೈದ – ಆರೋಪಿ ಅರೆಸ್ಟ್

    ಮದ್ಯದ ಅಂಗಡಿಯಲ್ಲಿ ತಳ್ಳಿದಕ್ಕೆ ಹತ್ಯೆಗೈದ – ಆರೋಪಿ ಅರೆಸ್ಟ್

    ಮುಂಬೈ: ಮದ್ಯದ ಅಂಗಡಿಯೊಂದರಲ್ಲಿ ತಳ್ಳಿದಕ್ಕೆ 23 ವರ್ಷದ ಗ್ರಾಹಕನ ಮೇಲೆ ಮತ್ತೋರ್ವ ವ್ಯಕ್ತಿ ಹಲ್ಲೆ ನಡೆಸಿ ಕೊಂದಿರುವ ಘಟನೆ ಎಸ್‍ಜಿ ಬಾರ್ವೇ ರಸ್ತೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮೃತ ದುರ್ದೈವಿಯನ್ನು ರಾಜೇಶ್ ಬಲೋಟಿಯಾ ಎಂದು ಗುರುತಿಸಲಾಗಿದ್ದು, ರಾಜೇಶ್ ಬಲೋಟಿಯಾ ಮದ್ಯದಂಗಡಿಯಿಂದ ಹೊರಬರುತ್ತಿದ್ದಾಗ ಆರೋಪಿ ರಾಜೇಶ್ ವಾಘಮಾರೆಯನ್ನು ತಳ್ಳಿದ್ದಾನೆ. ಇದರಿಂದ ಕೋಪಗೊಂಡ ರಾಜೇಶ್ ವಾಘಮಾರೆ ರಾಜೇಶ್ ಬಲೋಟಿಯಾ ತಲೆಗೆ ನಡು ರಸ್ತೆಯಲ್ಲಿ ಹೊಡೆದಿದ್ದಾನೆ. ಈ ಗಲಾಟೆ ನಡೆಯುವ ವೇಳೆ ಅಂಗಡಿ ಮಾಲೀಕರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಹಿಜಬ್ ವಿವಾದ: ಖಾಸಗಿ ಕಾಲೇಜಿನ ಅರೆಕಾಲಿಕ ಉಪನ್ಯಾಸಕಿ ರಾಜೀನಾಮೆ!

    POLICE JEEP

    ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಗಾಯಗೊಂಡ ರಾಜೇಶ್ ಬಲೋಟಿಯಾರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಾಕಾರಿಯಾಗಿದೆ ಅವರು ಕೊನೆಯುಸಿರೆಳೆದಿದ್ದಾರೆ. ಇದೀಗ ಪೊಲೀಸರು ಆರೋಪಿ ರಾಜೇಶ್ ವಾಘಮಾರೆಯನ್ನು ಬಂಧಿಸಿ ಭಾರತೀಯ ದಂಡ ಸಂಹಿತೆ ಸೆಕ್ಷನ್ 302(ಕೊಲೆ) ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಕೋರ್ಟ್‌ ಹೊರಗಡೆ ಹಿಜಬ್‌ ವಿವಾದ ಇತ್ಯರ್ಥಕ್ಕೆ ಅನುಮತಿ ಕೋರಿ ಅರ್ಜಿ

  • ದಕ್ಷಿಣ ಕನ್ನಡ, ಕಾಸರಗೋಡಿಗೆ ಹೊಂದಿಕೊಂಡಿರುವ ಮದ್ಯದಂಗಡಿಗಳು ಕ್ಲೋಸ್

    ದಕ್ಷಿಣ ಕನ್ನಡ, ಕಾಸರಗೋಡಿಗೆ ಹೊಂದಿಕೊಂಡಿರುವ ಮದ್ಯದಂಗಡಿಗಳು ಕ್ಲೋಸ್

    ಮಂಗಳೂರು: ಕೊರೊನಾ ಎಫೆಕ್ಟ್‌ನಿಂದಾಗಿ ದಕ್ಷಿಣ ಕನ್ನಡ ಮತ್ತು ಕಾಸರಗೋಡಿಗೆ ಹೊಂದಿಕೊಂಡಿರುವ ಮದ್ಯದಂಗಡಿಗಳನ್ನು ಕ್ಲೋಸ್ ಮಾಡಲಾಗಿದೆ.

    ಕೇರಳ ಗಡಿಗೆ ಹೊಂದಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಹೆಚ್ಚಾಗುತ್ತಿದೆ. ಹೀಗಾಗಿ ಜಿಲ್ಲೆಯಲ್ಲಿ ಟಫ್ ರೂಲ್ಸ್ ಗೆ ತಜ್ಞರು ಶಿಪಾರಸ್ಸು ನೀಡಿದ್ದಾರೆ. ಈ ಬೆನ್ನಲ್ಲೆ ಕಠಿಣ ಕಾಯ್ದೆಯನ್ನು ಜಿಲ್ಲಾಡಳಿತ ಹೇರಲು ಮುಂದಾಗಿದೆ. ಇದನ್ನೂ ಓದಿ:  ಅಪ್ಪ ಅರೆಸ್ಟ್, ಅಮ್ಮ ಕಣ್ಣೀರು – ಪೋಸ್ಟ್ ಮಾಡಿ ಸುದ್ದಿಯಾದ ಶಿಲ್ಪಾ ಶೆಟ್ಟಿ ಮಗ

    ಕೇರಳದಿಂದ ದಕ್ಷಿಣ ಕನ್ನಡದ ಬಾರ್ಡರ್‍ನ ಮದ್ಯದಂಗಡಿಗೆ ಜನ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದರಿಂದ ಈಗ ಮದ್ಯದಂಗಡಿಯನ್ನು ಬಂದ್ ಮಾಡಲು ಸೂಚನೆ ಕೊಟ್ಟಿದೆ. ಇಂದಿನಿಂದ ದಿನಾಂಕ 15ರ ತನಕ ಮದ್ಯದಂಗಡಿ ಮುಚ್ಚಿಸಲು ಆದೇಶ ಕೊಟ್ಟಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಬಂಟ್ವಾಳ, ಸುಳ್ಯ, ಪುತ್ತೂರು ತಾಲೂಕು ವ್ಯಾಪ್ತಿಯ ಕೆಲ ಮದ್ಯದಂಗಡಿ ಮುಚ್ಚಲು ಜಿಲ್ಲಾಡಳಿತ ಆದೇಶಿಸಿದೆ.

  • ಏಕಾಏಕಿ ಆರಂಭವಾದ ವೈನ್ ಶಾಪ್ – ಬಾಗಿಲಿಗೆ ಅಡ್ಡ ನಿಂತು ಸ್ಥಳೀಯರ ಪ್ರತಿಭಟನೆ

    ಏಕಾಏಕಿ ಆರಂಭವಾದ ವೈನ್ ಶಾಪ್ – ಬಾಗಿಲಿಗೆ ಅಡ್ಡ ನಿಂತು ಸ್ಥಳೀಯರ ಪ್ರತಿಭಟನೆ

    ಚಿಕ್ಕಮಗಳೂರು: ಏಕಾಏಕಿ ಆರಂಭವಾದ ವೈನ್ ಶಾಪನ್ನ ತೆರೆಯಲು ಗ್ರಾಮಸ್ಥರು ವಿರೋಧಿಸಿ ಬಾರ್ ಬಾಗಿಲ ಮುಂದೆಯೇ ಧರಣಿ ಕೂತು ಆಕ್ರೋಶ ವ್ಯಕ್ತಪಡಿಸಿರೋ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಅಂಚೇ ಚೋಮನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಮದ್ಯದ ಅಂಗಡಿಯನ್ನ ತೆರೆಯಲು ಅವಕಾಶ ನೀಡುವುದಿಲ್ಲ ಎಂದು ಅಂಚೇ ಚೋಮನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಬಾರ್ ಮುಂದೆಯೇ ಪ್ರತಿಭಟಿಸಿದ್ದಾರೆ. ಬಾರ್ ತೆರೆಯಲು ಸ್ಥಳೀಯ ಗ್ರಾಮ ಪಂಚಾಯಿತಿಯ ಅನುಮತಿಯನ್ನೇ ಪಡೆದಿಲ್ಲ. ಸಾಲದಕ್ಕೆ ಯಾವುದೇ ನಿಯಮ ಪಾಲನೆ ಕೂಡ ಮಾಡದೆ ಏಕಾಏಕಿ ಮದ್ಯದಂಗಡಿ ತೆರೆದಿದ್ದಾರೆ. ಅಂಚೇ ಚೋಮನಹಳ್ಳಿ ಹಾಗೂ ಸುತ್ತಮುತ್ತ ಬಡ ಕೂಲಿ ಕಾರ್ಮಿಕರೇ ಹೆಚ್ಚಿದ್ದಾರೆ. ಅಲೆಮಾರಿ ಬುಡಕಟ್ಟು ಜನಾಂಗದವರು ಇದ್ದಾರೆ. ಇಂತಹ ಜಾಗದಲ್ಲಿ ವೈನ್ ಶಾಪ್ ತೆರೆದರೆ ಕೂಲಿ ಕಾರ್ಮಿಕರು ಕುಡಿತದಿಂದ ಮನೆ ಮಠ ಮಾರಿಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಲಿದೆ.

    ಬಡಜನರ ಬದುಕಿನ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯೂ ಇದೆ. ಜನರ ಬದುಕಿನ ಮೇಲೆ ಪರಿಣಾಮ ಬೀರುವ ಇಂತಹಾ ವೈನ್‍ಶಾಪನ್ನ ತೆರೆಯಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ಬಡಜನರ ಮೇಲೆ ದುಷ್ಪರಿಣಾಮ ಬೀರುವ, ಸಾಮಾಜಿಕ ಸ್ವಾಸ್ಥ್ಯ ಕೆಡಿಸುವ ಮದ್ಯದಂಗಡಿ ನಮಗೆ ಬೇಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಮದ್ಯದಂಗಡಿ ತೆರೆಯಲು ಗ್ರಾಮ ಪಂಚಾಯಿತಿಯಿಂದಲೂ ಯಾವುದೇ ಅನುಮತಿ ಪಡೆದಿಲ್ಲ. ಗ್ರಾಮ ಪಂಚಾಯಿತಿಯ ಎಲ್ಲಾ ಸದಸ್ಯರಿಂದಲೂ ಮದ್ಯದಂಗಡಿ ತೆರೆಯುವ ಬಗ್ಗೆ ವಿರೋಧ ವ್ಯಕ್ತವಾಗಿದೆ, ಈ ಮದ್ಯದಂಗಡಿ ತೆರೆಯಲು ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಪಂಚಾಯಿತಿ ಕೂಡ ಸ್ಪಷ್ಟಪಡಿಸಿದೆ.

  • ಮದ್ಯಕ್ಕಾಗಿ ಕ್ಯೂ- ಮದ್ಯದಂಗಡಿ ಮುಂದೆ ನೂಕುನುಗ್ಗಲು

    ಮದ್ಯಕ್ಕಾಗಿ ಕ್ಯೂ- ಮದ್ಯದಂಗಡಿ ಮುಂದೆ ನೂಕುನುಗ್ಗಲು

    ರಾಯಚೂರು: ಸಂಪೂರ್ಣ ಲಾಕ್‍ಡೌನ್ ಮಧ್ಯೆ ಇಂದು ರಾಯಚೂರಿನಲ್ಲಿ ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಈ ವೇಳೆ ಮದ್ಯ ಖರೀದಿಗಾಗಿ ನೂಕುನುಗ್ಗಲು ಆಗಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ. ಇದನ್ನೂ ಓದಿ: ಸಿದ್ದರಾಮಯ್ಯ, ಡಿಕೆಶಿ ಕುತಂತ್ರ ರಾಜಕಾರಣ ಮಾಡ್ತಿದ್ದಾರೆ: ಕೆ.ಎಸ್.ಈಶ್ವರಪ್ಪ

    ಜಿಲ್ಲೆಯಲ್ಲಿ ಪರವಾನಿಗೆ ಹೊಂದಿರುವ 140 ಬಾರ್ ಮಾಲೀಕರಿಗೂ ಲಾಕ್‍ಡೌನ್ ಸಡಿಲಿಕೆ ಇದ್ದಾಗಲೇ ಮದ್ಯ ಹಂಚಿಕೆ ಮಾಡಲಾಗುತ್ತಿದೆ. ಹೀಗಾಗಿ ಬಾರ್ ಮಾಲೀಕರು ಮದ್ಯ ಖರೀದಿಗೆ ಗೋದಾಮಿನಲ್ಲಿ ನೂಕು ನುಗ್ಗಲು ಮಾಡಿದ್ದಾರೆ. ಅಧಿಕಾರಿಗಳ ತಾರತಮ್ಯದಿಂದ ನಿಗದಿತ ಪ್ರಮಾಣದಲ್ಲಿ ಮದ್ಯ ಸಿಗದಿರುವ ಹಿನ್ನೆಲೆ ಮದ್ಯದಂಗಡಿ ಮಾಲೀಕರು ಸಹ ಕ್ಯೂ ನಿಂತು ಮದ್ಯಖರೀದಿಸಬೇಕಾಗಿದೆ. ಇದನ್ನೂ ಓದಿ: ಕೊರೊನಾ ಲಸಿಕೆ ಇಂಜೆಕ್ಷನ್‍ಗೆ ಹೆದರಿಕೊಂಡ್ರಾ ನಿರ್ದೇಶಕ ಪ್ರಶಾಂತ್ ನೀಲ್?

    ಈಗಾಗಲೇ ಮದ್ಯದಂಗಡಿ ಮಾಲೀಕರು ಮೇಲಾಧಿಕಾರಿಗಳಿಗೆ ದೂರು ನೀಡಿದರು ಪ್ರಯೋಜನವಾಗಿಲ್ಲ. ಹೀಗಾಗಿ ನೂಕುನುಗ್ಗಲು ಮಾಡಿಕೊಂಡು ಮದ್ಯ ಖರೀದಿಸುತ್ತಾರೆ. ಮದ್ಯ ಖರೀದಿ ಮಾಡಲು ದೊಡ್ಡ ದೊಡ್ಡ ಚೀಲಗಳನ್ನ ಹಿಡಿದು ಬೆಳಿಗ್ಗೆಯಿಂದಲೇ ಸಾಲಿನಲ್ಲಿ ನಿಂತಿರುತ್ತಾರೆ. ಹೆಚ್ಚು ಪ್ರಮಾಣದ ಮದ್ಯ ಖರೀದಿಸಿ ದುಬಾರಿ ಬೆಲೆಗೆ ಮಾರಾಟ ಮಾಡುವ ಜನರಿದ್ದಾರೆ. ಅಧಿಕಾರಿಗಳು ಏನೇ ಕ್ರಮ ಕೈಗೊಂಡರೂ ಲಾಕ್‍ಡೌನ್ ಸಮಯದಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಬ್ರೇಕ್ ಹಾಕಲು ಸಾಧ್ಯವಾಗಿಲ್ಲ.

  • ಲಸಿಕೆ ತೆಗೆದುಕೊಳ್ಳದವರಿಗೆ ಮದ್ಯ ಸಿಗಲ್ಲ – ಎಣ್ಣೆ ಪ್ರಿಯರಿಗೆ ಶಾಕ್

    ಲಸಿಕೆ ತೆಗೆದುಕೊಳ್ಳದವರಿಗೆ ಮದ್ಯ ಸಿಗಲ್ಲ – ಎಣ್ಣೆ ಪ್ರಿಯರಿಗೆ ಶಾಕ್

    – ಉತ್ತರ ಪ್ರದೇಶದ ಜಿಲ್ಲಾಡಳಿತದಿಂದ ಆದೇಶ ಜಾರಿ
    – ಲಸಿಕೆ ಟಾರ್ಗೆಟ್ ರೀಚ್ ಆಗಲು ತಂತ್ರಗಾರಿಕೆ

    ಲಕ್ನೋ: ಕೊರೊನಾ ಲಸಿಕೆ ಪಡೆದವರಿಗೆ ಮಾತ್ರ ಮದ್ಯ ನೀಡಲು ಉತ್ತರ ಪ್ರದೇಶದ ಬಾರ್ ಮಾಲೀಕರು ಮುಂದಾಗಿದ್ದಾರೆ.

    ಲಸಿಕೆ ಪಡೆಯುವಂತೆ ಜನರನ್ನು ಪ್ರೇರೇಪಿಸಲು ಸರ್ಕಾರ ವಿವಿಧ ಮಾರ್ಗಗಳನ್ನು ಅನುಸರಿಸುತ್ತಿದೆ. ಈ ನಡುವೆ ಉತ್ತರ ಪ್ರದೇಶದ ಇಟಾವಾ ಜಿಲ್ಲಾಡಳಿತ ಒಂದು ಹೆಜ್ಜೆ ಮುಂದೆ ಹೋಗಿ ಲಸಿಕೆ ಪಡೆದವರಿಗೆ ಮಾತ್ರ ಮದ್ಯ ನೀಡಬೇಕೆಂದು ಎಲ್ಲ ಮದ್ಯದಂಗಡಿಗಳಿಗೆ ಆದೇಶ ಹೊರಡಿಸಿದೆ. ಇದನ್ನೂ ಓದಿ: ಲಸಿಕೆ ವಿತರಣೆ – ದಕ್ಷಿಣ ಭಾರತದಲ್ಲಿ ಕರ್ನಾಟಕಕ್ಕೆ ಮೊದಲ ಸ್ಥಾನ, ಟಾಪ್ 10 ರಾಜ್ಯಗಳು ಯಾವುದು?

    ಈ ಆದೇಶವನ್ನು ಬಾರ್ ಮಾಲೀಕರು ಒಪ್ಪಿಕೊಂಡಿದ್ದಾರೆ. ಈ ಸಂಬಂಧ ಬಾರ್ ಮುಂಭಾಗ ಗೋಡೆಗಳ ಮೇಲೆ “ಲಸಿಕೆ ಪಡೆದವರು ಮಾತ್ರ ಮದ್ಯ ಖರೀದಿಗೆ ಅರ್ಹರು” ಎಂದು ನೋಟಿಸ್ ಅಂಟಿಸಿದ್ದಾರೆ. ಈ ಆದೇಶದ ಅನ್ವಯ ಗ್ರಾಹಕರು ಆರಂಭದಲ್ಲಿ ಲಸಿಕೆ ಪಡೆದ ಪ್ರಮಾಣ ಪತ್ರವನ್ನು ತೋರಿಸಿದ ಬಳಿಕ ಅವರಿಗೆ ಮದ್ಯವನ್ನು ನೀಡಲಾಗುತ್ತದೆ. ಇದನ್ನೂ ಓದಿ: ಮದ್ಯದಂಗಡಿಗೆ ಮುಗಿಬಿದ್ದ ಜನ

    ಸರ್ಕಾರ ಈ ಆದೇಶ ಹೊರಡಿಸಿಲ್ಲ ಎಂದು ಅಬಕಾರಿ ಇಲಾಖೆ ಹೇಳಿದೆ. ಲಸಿಕೆ ಗುರಿಯನ್ನು ಮುಟ್ಟಲು ಈ ಆದೇಶವನ್ನು ಪ್ರಕಟಿಸಲಾಗಿದೆ ಎಂದು ಜಿಲ್ಲಾಡಳಿತ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ.

    ಲಸಿಕೆ ವಿತರಣೆ ಆರಂಭಿಸಿ ಸುಮಾರು ಆರು ತಿಂಗಳಾಗುತ್ತಾ ಬಂದಿದೆ. ಆದರೂ ನಿರೀಕ್ಷಿತ ಮಟ್ಟದಲ್ಲಿ ಲಸಿಕೆ ವಿತರಣೆ ಸಾಧ್ಯವಾಗಿಲ್ಲ. ಒಂದೆಡೆ ಲಸಿಕೆ ಕೊರತೆ ಕಾರಣವಾಗಿದ್ದರೆ ಇನ್ನೊಂದೆಡೆ ಜನರು ಸ್ವಯಂಪ್ರೇರಿತರಾಗಿ ಮುಂದೆ ಬರುತ್ತಿಲ್ಲ.

    ಕೇಂದ್ರ ಆರೋಗ್ಯ ಇಲಾಖೆ ಭಾನುವಾರ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ ಲಸಿಕೆ ವಿತರಣೆಯಲ್ಲಿ ಕೇರಳ, ಆಂಧ್ರ, ತಮಿಳುನಾಡಿಗಿಂತ ಕರ್ನಾಟಕ ಮುಂದಿದೆ. ರಾಷ್ಟ್ರಮಟ್ಟದಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನ, ಉತ್ತರ ಪ್ರದೇಶ ಎರಡನೇ ಸ್ಥಾನದಲ್ಲಿದ್ದರೆ ಕರ್ನಾಟಕ 6ನೇ ಸ್ಥಾನದಲ್ಲಿದೆ.

  • ಸೆಕ್ಯೂರಿಟಿ ಕೈ ಕಾಲು ಕಟ್ಟಿದ ಖದೀಮರು -ನಾಲ್ಕುವರೆ ಲಕ್ಷದ ಮದ್ಯ ಕದ್ದು ಪರಾರಿ

    ಸೆಕ್ಯೂರಿಟಿ ಕೈ ಕಾಲು ಕಟ್ಟಿದ ಖದೀಮರು -ನಾಲ್ಕುವರೆ ಲಕ್ಷದ ಮದ್ಯ ಕದ್ದು ಪರಾರಿ

    ಚಿಕ್ಕೋಡಿ: ಕೊರೊನಾ ಲಾಕ್‍ಡೌನ್ ನಡುವೆ ಸೆಕ್ಯುರಿಟಿ ಕೈ ಕಾಲು ಕಟ್ಟಿ ಸಾರಾಯಿ ಕದ್ದು ಖದೀಮರು ಪರಾರಿಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ನಡೆದಿದೆ.

    ರಾತ್ರಿ ಬಂದು ಸೆಕ್ಯೂರಿಟಿ ಬಳಿ ಸಾರಾಯಿ ಕೇಳಿದ್ದಾರೆ. ಮದ್ಯವನ್ನು ನೀಡದ ಕಾರಣ ಸಾರಾಯಿ ಅಂಗಡಿಯಲ್ಲಿಯೇ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಸೆಕ್ಯೂರಿಟಿ ಕೈ ಕಾಲು ಕಟ್ಟಿಹಾಕಿ 4.5 ಲಕ್ಷ ರೂ ಮೌಲ್ಯದ ಸಾರಾಯಿ ಕದ್ದ ಖದೀಮರು ಎಸ್ಕೇಪ ಆಗಿದ್ದಾರೆ.

    ತಡರಾತ್ರಿ 1 ಗಂಟೆಗೆ ಅಥಣಿಯ ವೆಂಕಟೇಶ್ವರ ವೈನ್ ಶಾಪ್‍ಗೆ ಬಂದ ಖದೀಮರ ಕೈಚಳಕ ತೋರಿದ್ದಾರೆ. ಕಾರಿನಲ್ಲಿ ಬಂದ 6 ಮಂದಿ ನಾಲ್ಕುವರೆ ಲಕ್ಷ ಮೌಲ್ಯದ ಮಧ್ಯ ಕಳ್ಳತನ ಮಾಡಿ ಸೆಕ್ಯೂರಿಟಿ ಗಾರ್ಡ್‍ಗೆ ಜೀವ ಬೆದರಿಕೆ ಹಾಕಿದ್ದಾರೆ. ಘಟನೆಯಿಂದ ಅಥಣಿ ವೈನ್ ಶಾಪ್ ಮಾಲೀಕರು ಬೆಚ್ಚಿ ಬಿದ್ದಿದ್ದು, ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬೆಳಗಿನ ಸಮಯ ಸೂಕ್ತವಲ್ಲ, ಸಂಪೂರ್ಣ ಬಂದ್ ಮಾಡಿ: ಮದ್ಯದಂಗಡಿಗಳ ಮಾಲೀಕರ ಒತ್ತಾಯ

    ಬೆಳಗಿನ ಸಮಯ ಸೂಕ್ತವಲ್ಲ, ಸಂಪೂರ್ಣ ಬಂದ್ ಮಾಡಿ: ಮದ್ಯದಂಗಡಿಗಳ ಮಾಲೀಕರ ಒತ್ತಾಯ

    ಕೊಪ್ಪಳ: ಹಾಲು ಖರೀದಿಸುವ ಸಮಯದಲ್ಲಿ ಮದ್ಯ ಕೊಳ್ಳಲು ಯಾರು ಬರಲ್ಲ. ರಾಜ್ಯ ಸರ್ಕಾರ ಬಾರ್ ಗಳಿಗೆ ನೀಡಿರುವ ಸಮಯ ವ್ಯಾಪಾರಕ್ಕೆ ಸೂಕ್ತವಲ್ಲ ಎಂದು ಮದ್ಯದಂಗಡಿಗಳ ಮಾಲೀಕರು ಬೇಸರ ವ್ಯಕ್ತಪಡಿಸಿದ್ದಾರೆ.

    ಸರ್ಕಾರ ನೀಡಿರುವ ಸಮಯದಲ್ಲಿ ನಮಗೆ ವ್ಯಾಪಾರ ಸಹ ಆಗುತ್ತಿಲ್ಲ. ಸರ್ಕಾರಕ್ಕೆ ಆದಾಯವು ಬರಲ್ಲ. ಹೀಗಾಗಿ ರಾಜ್ಯದಲ್ಲಿ ಸಂಪೂರ್ಣವಾಗಿ ಬಾರ್ ಗಳನ್ನು ಬಂದ್ ಮಾಡಿದ್ರೆ ಉತ್ತಮ ಎಂದು ಕೊಪ್ಪಳ ಬಾರ್ ಮಾಲೀಕರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿರುವ ಮದ್ಯ ಮಾರಾಟಗಾರರು, ಸರ್ಕಾರ ಸಂಪೂರ್ಣವಾಗಿ ಬಾರ್ ಗಳನ್ನು ಬಂದ್ ಮಾಡುವುದು ಉತ್ತಮ. ಇದರಿಂದಾಗಿ ಜನರ ಆರೋಗ್ಯದ ಜೊತೆಗೆ ನಮಗೆ ನಷ್ಟವಾಗುದು ತಪ್ಪುತ್ತದೆ ಎಂದು ಹೇಳಿದ್ದಾರೆ.

    ಬೆಳ್ಳಗೆ 6 ರಿಂದ 10ರವರೆಗೆ ಹಾಲು ಖರೀದಿ ಮಾಡುತ್ತಾರೆ. ವಿನಃ ಮದ್ಯ ಖರೀದಿ ಮಾಡುವುದಿಲ್ಲ. ಇದು ಯಾರಿಗೂ ಉಪಯೋಗವಿಲ್ಲ. ಲಾಭ ನಷ್ಟ ನಂತರ, ಮೊದಲು ಆರೋಗ್ಯ ಮುಖ್ಯ. ಮೊದಲು ಕೊರೊನಾದಿಂದ ಮುಕ್ತವಾಗಲಿ. ಕೂಡಲೇ ಸರ್ಕಾರ ಬಾರ್ ಗಳನ್ನು ಸಂಪೂರ್ಣವಾಗಿ ಮುಚ್ಚಿದರು ನಮ್ಮ ಸಮ್ಮತಿ ಇದೆ. ಆದರೆ ನಮಗೆ ಹಾಕುವ ತೆರಿಗೆ, ಬಾಡಿಗೆಯಲ್ಲಿ ವಿನಾಯಿತಿ ನೀಡಬೇಕೆಂದು ಕೊಪ್ಪಳ ಬಾರ್ ಮಾಲೀಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

  • ಲಾಕ್‍ಡೌನ್ ಎಫೆಕ್ಟ್ – 2 ದಿನದಲ್ಲಿ 410 ಕೋಟಿ ಮೌಲ್ಯದ ಎಣ್ಣೆ ಸೇಲ್

    ಲಾಕ್‍ಡೌನ್ ಎಫೆಕ್ಟ್ – 2 ದಿನದಲ್ಲಿ 410 ಕೋಟಿ ಮೌಲ್ಯದ ಎಣ್ಣೆ ಸೇಲ್

    ಬೆಂಗಳೂರು: ನಾಳೆಯಿಂದ ಬೆಂಗಳೂರು ಸೇರಿದಂತೆ ಏಳು ಜಿಲ್ಲೆಗಳು ಲಾಕ್‍ಡೌನ್ ಆಗಲಿವೆ. ಲಾಕ್‍ಡೌನ್ ಅವಧಿ ಡ್ರೈ ಡೇ ಅಗೋದ ಬೇಡ ಅಂತ ಮದ್ಯಪ್ರಿಯರು ಎಣ್ಣೆ ಖರೀದಿಗೆ ಮುಗಿಬಿದ್ದಿದ್ದರು. ಎರಡು ದಿನಗಳಲ್ಲಿ ಅಬಕಾರಿ ಇಲಾಖೆ 410 ಕೋಟಿ ರೂ. ಮೌಲ್ಯದ ಮದ್ಯವನ್ನು ಮಾರಾಟ ಮಾಡಿ ಬೊಕ್ಕಸ ತುಂಬಿಕೊಂಡಿದೆ.

    ಸೋಮವಾರ ಒಂದೇ ದಿನ ಬರೋಬ್ಬರಿ 230 ಕೋಟಿ ಮೌಲ್ಯದ ಮದ್ಯವನ್ನು ಕೆಎಸ್‍ಬಿಎಲ್ (ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತ) ಮಾರಿದೆ. ಸೋಮವಾರ 215 ಕೋಟಿ ಮೌಲ್ಯದ 4.89 ಲಕ್ಷ ಲೀಟರ್ ಐಎಂಎಲ್ ಮತ್ತು 15 ಕೋಟಿ ರೂ. ಮೌಲ್ಯದ 0.83 ಲಕ್ಷ ಲೀಟರ್ ಬೀರ್ ಮಾರಾಟವಾಗಿದೆ.

    ಇಂದು ಸಹ 179 ಕೋಟಿ ಮೌಲ್ಯದ ಮದ್ಯ ಮಾರಾಟಗೊಂಡಿದೆ. ಸೋಮವಾರ ಮತ್ತು ಮಂಗಳವಾರ ಎರಡು ದಿನ ಅಂದಾಜು 410 ಕೋಟಿ ರೂ. ಅಬಕಾರಿ ಇಲಾಖೆ ಬೊಕ್ಕಸ ತುಂಬಿಕೊಂಡಿದೆ. ಬೆಂಗಳೂರು ಸೇರಿದಂತೆ ಲಾಕ್‍ಡೌನ್ ಪ್ರದೇಶಗಳಲ್ಲಿ ಏಳು ದಿನಗಳ ಮದ್ಯದಂಗಡಿಗಳು ಬಾಗಿಲು ತೆಗೆಯಲಿವೆ.

  • ಮದ್ಯಪ್ರಿಯರಿಗೆ ಮತ್ತೊಂದು ಶಾಕ್- ಕಳೆದ 3 ದಿನಗಳಿಂದ ಸಿಗ್ತಿಲ್ಲ ನೆಚ್ಚಿನ ಬ್ರಾಂಡ್

    ಮದ್ಯಪ್ರಿಯರಿಗೆ ಮತ್ತೊಂದು ಶಾಕ್- ಕಳೆದ 3 ದಿನಗಳಿಂದ ಸಿಗ್ತಿಲ್ಲ ನೆಚ್ಚಿನ ಬ್ರಾಂಡ್

    ಬೆಂಗಳೂರು: ಲಾಕ್‍ಡೌನ್ ಸಡಲಿಕೆಯ ನಂತರ ಮದ್ಯ ಸಿಗುತ್ತಿದೆ ಎಂದು ಮದ್ಯಪ್ರಿಯರು ಸಖತ್ ಖುಷಿಪಟ್ಟಿದ್ದರು. ಆದರೆ ಈಗ ಮದ್ಯಪ್ರಿಯರಿಗೆ ತನ್ನ ನೆಚ್ಚಿನ ಬ್ರಾಂಡ್ ಸಿಗದೆ ಪರದಾಡುವಂತೆ ಆಗಿದೆ.

    ಕಳೆದ ಮೂರು ದಿನಗಳಿಂದ ತಮ್ಮ ನೆಚ್ಚಿನ ಬ್ರಾಂಡ್ ಸಿಗದೆ ಮದ್ಯಪ್ರಿಯರು ಒದ್ದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಶೇ.33 ಫಾರ್ಮುಲಾದಲ್ಲಿ ಮದ್ಯ ತಯಾರಿಕಾ ಕಂಪೆನಿಗಳು ಕಾರ್ಯ ನಿರ್ವಹಿಸುತ್ತಿರುವುದರಿಂದ ನಿರೀಕ್ಷೆಯಷ್ಟು ಮದ್ಯ ಸರಬರಾಜು ಆಗುತ್ತಿಲ್ಲ. ಈ ಕಾರಣದಿಂದ ಮದ್ಯ ಪ್ರಿಯರು ಶಾಕ್‍ಗೆ ಒಳಗಾಗಿದ್ದಾರೆ.

    ಹಳೆ ಸ್ಟಾಕ್ ಖಾಲಿ ಮಾಡಿ ಡಿಪ್ಪೋದಲ್ಲಿ ಇದ್ದ ಸ್ಟಾಕ್ ಅನ್ನು ಮದ್ಯದಂಗಡಿಗಳು ತರಿಸಿ ಮಾರಾಟ ಮಾಡಲಾಗುತ್ತಿವೆ. ಆದರೆ ಬಹುತೇಕ ಎಂ.ಆರ್.ಪಿ, ಎಂಎಸ್‍ಐಎಲ್‍ಗಳಲ್ಲಿ ಬ್ರಾಂಡೆಡ್ ಡ್ರಿಂಕ್ಸ್ ಬಾಟಲ್‍ಗಳ ಕೊರತೆ ಉಂಟಾಗಿದೆ. ಈ ಕಾರಣಕ್ಕೆ ಲಾಡ್ಜ್, ಕ್ಲಬ್, ಬಾರ್ ಗಳ ಸ್ಟಾಕ್ ಖಾಲಿ ಮಾಡಲು ಸರ್ಕಾರ ಸೂಚನೆ ನೀಡಿದ್ದ ಹಿನ್ನೆಲೆ ಅಲ್ಲಿ ತಮ್ಮ ನೆಚ್ಚಿನ ಬ್ರಾಂಡ್ ಕೊಂಡು ಮದ್ಯ ಪ್ರಿಯರು ಕುಡಿಯುತ್ತಿದ್ದಾರೆ.

    ಆದರೆ ಇತ್ತೀಚೆಗೆ ಅಲ್ಲೂ ಕೂಡ ಸ್ಟಾಕ್ ಖಾಲಿಯಾದ ಹಿನ್ನೆಲೆ ಎಂಎಸ್‍ಐಎಲ್, ಎಂ.ಆರ್.ಪಿಗಳಲ್ಲಿ ನಿಗದಿತ ಬ್ರಾಂಡ್‍ಗೆ ಡಿಮ್ಯಾಂಡ್ ಹೆಚ್ಚಾಗಿದೆ. ಕೆಲವರು ಅನಿವಾರ್ಯವಾಗಿ ಇರುವ ಬ್ರಾಂಡ್‍ಗೆ ಹೊಂದಾಣಿಕೆ ಮಾಡಿಕೊಂಡು ಕುಡಿಯುತ್ತಿದ್ದಾರೆ. ಆದರೆ ನೆಚ್ಚಿನ ಬ್ರಾಂಡ್‍ಗೆ ಸಿಮೀತವಾಗಿರುವ ಮದ್ಯವ್ಯಸನಿಗಳಿಗೆ ಬಹುತೇಕ ನಿರಾಸೆಯಾಗಿದೆ. ತಮ್ಮ ನೆಚ್ಚಿನ ಬ್ರಾಂಡ್ ಸಿಗದೆ ಪರದಾಡುತ್ತಿದ್ದಾರೆ.

    ದೇಶದಲ್ಲಿ ಸಂಪೂರ್ಣ ಲಾಕ್‍ಡೌನ್ ಸಡಲಿಕೆ ಆಗದ ಹಿನ್ನೆಲೆ ಬೇರೆ ರಾಜ್ಯಗಳಿಂದ ಬರಬೇಕಿದ್ದ ಎಣ್ಣೆ ಸ್ಟಾಕ್ ಸಹ ಸರಿಯಾಗಿ ಬರುತ್ತಿಲ್ಲ. ಇನ್ನೊಂದೆಡೆ ಬೇಡಿಕೆಗೆ ಪೂರಕವಾದ ಮದ್ಯ ಉತ್ಪಾದನೆಯು ಆಗುತ್ತಿಲ್ಲ. ಕಳೆದ ಮೂರು ದಿನದದಿಂದ ಮದ್ಯ ಪ್ರಿಯರಿಗೆ ತನ್ನ ನೆಚ್ಚಿನ ಬ್ರಾಂಡ್ ಸರಿಯಾಗಿ ಸಿಗುತ್ತಿಲ್ಲ.