Tag: liquor sales

  • ರಾಮಮಂದಿರ ಸುತ್ತಮುತ್ತಲಿನ ಮದ್ಯ ಮಾರಾಟಗಾರರ ಪರವಾನಗಿ ರದ್ದು: ಯುಪಿ ಸರ್ಕಾರ

    ರಾಮಮಂದಿರ ಸುತ್ತಮುತ್ತಲಿನ ಮದ್ಯ ಮಾರಾಟಗಾರರ ಪರವಾನಗಿ ರದ್ದು: ಯುಪಿ ಸರ್ಕಾರ

    ಲಕ್ನೋ: ಅಯೋಧ್ಯೆಯ ‘ಶ್ರೀರಾಮ ಮಂದಿರ’ ಪ್ರದೇಶದಲ್ಲಿನ ಎಲ್ಲ ಮದ್ಯದಂಗಡಿಗಳ ಪರವಾನಗಿಯನ್ನು ರದ್ದುಗೊಳಿಸಲಾಗಿದೆ ಎಂದು ಉತ್ತರ ಪ್ರದೇಶದ ಅಬಕಾರಿ ಖಾತೆ ಸಚಿವ ನಿತಿನ್ ಅಗರವಾಲ್ ತಿಳಿಸಿದರು.

    1968ರ ಅಬಕಾರಿ ಅಂಗಡಿಗಳ ನಿಯಮಗಳಲ್ಲಿ ಮಾಡಲಾದ ತಿದ್ದುಪಡಿಗಳ ಸ್ಥಿತಿಗತಿ ಕುರಿತು ಮಾಹಿತಿ ಕೋರಿದ ಬಹುಜನ ಸಮಾಜ ಪಕ್ಷದ ಸದಸ್ಯ ಭೀಮರಾವ್ ಅಂಬೇಡ್ಕರ್ ಅವರ ಪ್ರಶ್ನೆಗೆ ಅಗರವಾಲ್ ಪ್ರತಿಕ್ರಿಯಿಸಿದರು. ಈ ವೇಳೆ ಅವರು ಅಯೋಧ್ಯೆಯ ‘ಶ್ರೀರಾಮ ಮಂದಿರ’ ಪ್ರದೇಶದಲ್ಲಿ ಇರುವ ಎಲ್ಲ ಮದ್ಯದಂಗಡಿಗಳ ಪರವಾನಗಿಯನ್ನು ರದ್ದು ಮಾಡಲಾಗಿದೆ ಎಂದು ಘೋಷಿಸಿದರು. ಇದನ್ನೂ ಓದಿ: ಯೋಧ್ಯೆ ರಾಮಮಂದಿರ ಗರ್ಭಗುಡಿಗೆ ಇಂದು ಯೋಗಿ ಶಂಕುಸ್ಥಾಪನೆ

    ಮಂದಿರ ಹೇಗಿರುತ್ತೆ?
    ಅಯೋಧ್ಯೆ ಕುರಿತು ವಿಶ್ವ ಹಿಂದೂ ಪರಿಷತ್ ನಾಯಕ ಶರದ್ ಶರ್ಮಾ ಅವರು ವಿವರಿಸಿದ್ದು, ರಾಮ ಮಂದಿರದ ಗರ್ಭಗೃಹವನ್ನು ಕೆಂಪು ಕಲ್ಲುಗಳಿಂದ ಸಿದ್ಧಪಡಿಸಲಾಗುವುದು. ಅದು ತುಂಬಾ ಮಂಗಳಕರವಾಗಿರುತ್ತದೆ. ದೇವಾಲಯದ ಗರ್ಭಗುಡಿಯು 2024ರ ಜನವರಿಯ ಮಕರ ಸಂಕ್ರಾಂತಿಯ ಒಳಗಡೆ ಸಿದ್ಧವಾಗಲಿದೆ. ಅಲ್ಲಿ ಭಗವಾನ್ ರಾಮನ ವಿಗ್ರಹವನ್ನು ಇರಿಸಲಾಗುತ್ತದೆ ಮತ್ತು ಜನರು ಪ್ರಾರ್ಥನೆ ವಿಶೇಷ ಸ್ಥಳವನ್ನು ನಿಗದಿಪಡಿಸಲಾಗುತ್ತೆ ಎಂದು ಹೇಳಿದ್ದಾರೆ.

    ಸೂರ್ಯನ ಕಿರಣಗಳು ರಾಮನ ವಿಗ್ರಹದ ಮೇಲೆ ಬೀಳುವ ರೀತಿಯಲ್ಲಿ ದೇವಾಲಯವನ್ನು ನಿರ್ಮಿಸಲಾಗುತ್ತಿದೆ. ಗರ್ಭಗುಡಿಯನ್ನು ಕೆಂಪು ಕಲ್ಲಿನಿಂದ ನಿರ್ಮಿಸಲಾಗುತ್ತಿದೆ. ಇದು ಜನರಿಗೆ ಶಾಂತಿಯನ್ನು ನೀಡುತ್ತದೆ ಎಂದು ರಾಮಮಂದಿರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ತಿಳಿಸಿದ್ದಾರೆ.

    2020ರ ಆಗಸ್ಟ್ 5 ರಂದು, ಪ್ರಧಾನಿ ನರೇಂದ್ರ ಮೋದಿ ಅವರು ರಾಮಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದರು. ಅಂದಿನಿಂದ ದೇವಾಲಯದ ನಿರ್ಮಾಣ ಕಾರ್ಯ ನಡೆಯುತ್ತಿದೆ. ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ರಾಮಮಂದಿರದ ಗರ್ಭಗುಡಿಗೆ ಇಂದು ಶಂಕುಸ್ಥಾಪನೆ ಮಾಡಿದ್ದಾರೆ. ಇದನ್ನೂ ಓದಿ: ಲವ್ ಜಿಹಾದ್ ವಿರುದ್ಧ ಕಠಿಣ ಕ್ರಮ: ಬೊಮ್ಮಾಯಿ 

    ಕೋರ್ಟ್ ತೀರ್ಪು
    ರಂಜನ್ ಗೊಗೊಯ್ ನೇತೃತ್ವದ ಸುಪ್ರೀಂ ಕೋರ್ಟ್‍ನ ಐದು ನ್ಯಾಯಾಧೀಶರ ಸಂವಿಧಾನ ಪೀಠವು 2019ರ ನವೆಂಬರ್ 9 ರಂದು ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಇದ್ದ ಭೂಮಿ ರಾಮನಿಗೆ ಸೇರಿದ್ದು ಎಂದು ಸರ್ವಾನುಮತದಿಂದ ತೀರ್ಪು ನೀಡಿತ್ತು.

  • ಹೋಳಿ ಹಬ್ಬ – ಧಾರವಾಡದಲ್ಲಿ ಮದ್ಯ ಮಾರಾಟಕ್ಕೆ ನಿಷೇಧ

    ಹೋಳಿ ಹಬ್ಬ – ಧಾರವಾಡದಲ್ಲಿ ಮದ್ಯ ಮಾರಾಟಕ್ಕೆ ನಿಷೇಧ

    ಧಾರವಾಡ: ಜಿಲ್ಲೆಯಲ್ಲಿ ಹೋಳಿ ಹಬ್ಬದ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಂಡು ಬರುವ ಹಿತದೃಷ್ಟಿಯಿಂದ ಮಾರ್ಚ್ 17 ರಿಂದ 21 ರವರೆಗೆ ವಿವಿಧ ತಾಲೂಕುಗಳ ವ್ಯಾಪ್ತಿಯಲ್ಲಿ ಮದ್ಯಪಾನ ಮತ್ತು ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ.

    ನಗರದ ಜಿಲ್ಲಾಧಿಕಾರಿ ನಿತೀಶ್ ಪಾಟೀಲ್ ಅವರು ಆದೇಶ ಹೊರಡಿಸಿದ್ದಾರೆ. ಮಾರ್ಚ್ 17 ರಿಂದ 20 ರವರೆಗೆ ಧಾರವಾಡ ಗ್ರಾಮೀಣ ತಾಲ್ಲೂಕು, ಹುಬ್ಬಳ್ಳಿ ಗ್ರಾಮೀಣ ತಾಲೂಕು, ನವಲಗುಂದ ತಾಲ್ಲೂಕು, ಅಣ್ಣಿಗೇರಿ ತಾಲ್ಲೂಕು, ಅಳ್ನಾವರ, ಧಾರವಾಡ ತಾಲೂಕಿನ ಮುಳಮುತ್ತಲ ಗ್ರಾಮಗಳಲ್ಲಿ ನಿಷೇಧಿಲಾಗಿದೆ. ಇದನ್ನೂ ಓದಿ: ನಾಯಕರಷ್ಟೇ ನಮಗೂ ಸಮಾನ ಅವಕಾಶ ಬೇಕು: ಕೃತಿ ಸನೋನ್

    ಮಾರ್ಚ್ 16 ರಿಂದ 19 ರವರೆಗೆ ಕುಂದಗೋಳ ತಾಲೂಕು, ಅಳ್ನಾವರ ತಾಲೂಕು, ಹುಬ್ಬಳ್ಳಿ ಗ್ರಾಮೀಣ ತಾಲೂಕಿನ ಗ್ರಾಮಗಳಾದ ಸುಳ್ಳ ಮತ್ತು ಕಿರೇಸೂರು ಗ್ರಾಮಗಳಲ್ಲಿ, ಮಾರ್ಚ್ 19 ರಿಂದ 22 ರವರೆಗೆ ಕಲಘಟಗಿ ತಾಲೂಕಿನ ಮಿಶ್ರಿಕೋಟಿ ಗ್ರಾಮದಲ್ಲಿ ಮದ್ಯಪಾನ ಮತ್ತು ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಇದನ್ನೂ ಓದಿ: ಮಿಸ್ ವರ್ಲ್ಡ್ 2021: ಭಾರತೀಯ ಮೂಲದ ಶ್ರೀಸೈನಿ ರನ್ನರ್ ಅಪ್, ಕರೋಲಿನಾ ಬಿಲಾವ್ಸ್ಕಾಗೆ ‘ವಿಶ್ವ ಸುಂದರಿ’ ಕಿರೀಟ

  • ಬಾರ್ ಮಾಲೀಕರಿಂದ ದುಪ್ಪಟ್ಟು ಹಣ ವಸೂಲಿ – ವೀಡಿಯೋ ವೈರಲ್

    ಬಾರ್ ಮಾಲೀಕರಿಂದ ದುಪ್ಪಟ್ಟು ಹಣ ವಸೂಲಿ – ವೀಡಿಯೋ ವೈರಲ್

    ನೆಲಮಂಗಲ: ಮದ್ಯಪ್ರಿರಿಯರಿಗೆ ಬಾರ್ ಮಾಲೀಕರು ಮಹಾ ಮೋಸ ಮಾಡಿ ವಸೂಲಿಗಿಳಿದಿದ್ದಾರೆ ಎಂಬ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಟಾಬಯಲಾಗಿದೆ.

    ಬೆಂಗಳೂರು ಹೊರವಲಯ ನೆಲಮಂಗಲ ನಗರದಲ್ಲಿರುವ ಕೆಲವು ಬಾರ್, ವೈನ್ ಹಾಗೂ ಬಾರ್ ಅಂಡ್ ರೆಸ್ಟೋರೆಂಟ್ ಗಳಲ್ಲಿ ಮದ್ಯದ ದರಕ್ಕಿಂತ ಸುಮಾರು 30% ರಿಂದ 40% ಹೆಚ್ಚಿನ ದರಕ್ಕೆ ಮದ್ಯ ಮಾರಾಟ ಮಾಡಿ ಮದ್ಯಪ್ರಿಯರಿಗೆ ಮಹಾ ಮೋಸ ಮಾಡುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಇಂದಿರಾ ಗಾಂಧಿಯನ್ನು ಏಕವಚನದಲ್ಲಿ ಬೈಯ್ದಿದ್ದಾರೆ – ಸಿದ್ದುಗೆ ಕಟೀಲ್ ಸವಾಲು

    ಹೆಚ್ಚಿನ ದರಕ್ಕೆ ಮದ್ಯಮಾರಾಟದ ಹಿಂದೆ ನೆಲಮಂಗಲ ಅಬಕಾರಿ ಇಲಾಖೆ ಅಧಿಕಾರಿಗಳು ಶಾಮೀಲಾಗಿರುವ ಆರೋಪ ಕೂಡ ಇದ್ದು, ಬಾರ್ ಅಂಡ್ ರೆಸ್ಟೊರೆಂಟ್ ಅಲ್ಲಿ ಬಿಲ್ ಕೇಳಿದ್ರೆ ಮದ್ಯನೆ ಕೊಡಲ್ಲ ಎಂಬ ಆರೋಪ ಕೂಡ ಇದೆ. ಅದು ಅಲ್ಲದೇ ಈ ಎಲ್ಲ ಅಕ್ರಮಗಳಿಗೆ ಕಡಿವಾಣ ಹಾಕುವಂತೆ ಸಾಮಾಜಿಕ ಜಾಲತಾಣದಲ್ಲಿ ಆಗ್ರಹ ಮಾಡಿದ್ದು, ಅಧಿಕಾರಿಗಳ ಜಾಣ ಕುರುಡುತನಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಕೂಡಲೇ ಇಂತಹ ಅಕ್ರಮಕ್ಕೆ ಅಧಿಕಾರಿಗಳು ಸೂಕ್ತ ಕ್ರಮವಹಿಸಬೇಕೆಂದು ಜನರು ಆಗ್ರಹಿಸಿದ್ದಾರೆ.

  • ಪೊಲೀಸರ ಬಂಧನದಿಂದ ತಪ್ಪಿಸಿಕೊಳ್ಳಲು ಬೆಂಕಿ ಹಚ್ಚಿಕೊಂಡ ಮಹಿಳೆ!

    ಪೊಲೀಸರ ಬಂಧನದಿಂದ ತಪ್ಪಿಸಿಕೊಳ್ಳಲು ಬೆಂಕಿ ಹಚ್ಚಿಕೊಂಡ ಮಹಿಳೆ!

    ಚೆನ್ನೈ: ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಆರೋಪದಡಿ ಪೊಲೀಸರು ಬಂಧಿಸಲು ಬಂದ ವಿಚಾರ ತಿಳಿದ ಮಹಿಳೆ ತನಗೆ ತಾನೇ ಬೆಂಕಿ ಹಚ್ಚಿಕೊಂಡಿರುವ ಘಟನೆ ತಮಿಳು ನಗರದ ಬೆಸೆಂಟ್ ನಗರದಲ್ಲಿ ನಡೆದಿದೆ. ಮಹಿಳೆಯನ್ನು ಇದೀಗ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಮಹಿಳೆಯನ್ನು ಉಷಾ ಮತ್ತು ಆಕೆಯ ಪತಿಯನ್ನು ರತ್ನಂ ಎಂದು ಗುರುತಿಸಲಾಗಿದೆ. ಅಕ್ರಮ ಮದ್ಯ ಮಾರಾಟ ಆರೋಪಕ್ಕೆ ಸಂಬಂಧಿಸಿದಂತೆ ಇಬ್ಬರ ಮೇಲೂ 12ಕ್ಕೂ ಅಧಿಕ ಪ್ರಕರಣಗಳು ಈಗಾಗಲೇ ದಾಖಲಾಗಿದೆ. ಹಾಗಾಗಿ ಪೊಲೀಸರ ತಂಡ ಉಷಾಳನ್ನು ಬಂಧಿಸಲು ಒಡೈಕುಪ್ಪಂಗೆ ಹೋಗಿದೆ. ಈ ವಿಚಾರ ತಿಳಿದ ಮಹಿಳೆ ಪೊಲೀಸರ ಬಂಧನದಿಂದ ತಪ್ಪಿಸಿಕೊಳ್ಳಲು ತಾನು ಧರಿಸಿದ್ದ ಉಡುಪನ್ನು ಹರಿದು ಮೈ ಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ. ಇದರಿಂದ ಎಚ್ಚೆತ್ತುಕೊಂಡ ಪೊಲೀಸರು ತಕ್ಷಣ ಆಕೆಯ ಮೇಲೆ ಗೋಣಿ ಚೀಲವನ್ನು ಹೊದಿಸಿ ನೀರು ಸುರಿದಿದ್ದಾರೆ. ಈ ಮೂಲಕ ಬೆಂಕಿ ನಂದಿಸಿದ್ದಾರೆ.

    ಇದೀಗ ಆಕೆಗೆ ಕಿಲ್ಪಾಕ್ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮಹಿಳೆಯ ದೇಹ ಶೇ.50 ರಷ್ಟು ಭಾಗ ಸುಟ್ಟು ಹೋಗಿದ್ದು, ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಜೊತೆಗೆ ಘಟನೆಯಲ್ಲಿ ಪೊಲೀಸ್ ಅಧಿಕಾರಿಯೂ ಗಾಯಗೊಂಡಿದ್ದಾರೆ. ಮಹಿಳೆ ಮನೆಯಲ್ಲಿದ್ದ 37ಕ್ಕೂ ಅಧಿಕ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಆಗಸ್ಟ್ 22ರಿಂದ ಮದ್ಯ ಮಾರಾಟ ನಿಷೇಧ: ಡಿಸಿ

    ಆಗಸ್ಟ್ 22ರಿಂದ ಮದ್ಯ ಮಾರಾಟ ನಿಷೇಧ: ಡಿಸಿ

    ಧಾರವಾಡ: ಅಗಸ್ಟ್ 22ರಿಂದ ಸೆಪ್ಟಂಬರ್ 4ರವರೆಗೆ ಗಣೇಶ ಹಬ್ಬದ ಆಚರಣೆ ಪ್ರಯುಕ್ತ ಧಾರವಾಡ ಜಿಲ್ಲೆಯ ನಗರ ಮತ್ತು ಗ್ರಾಮಗಳಲ್ಲಿ ಗಣೇಶ ವಿಗ್ರಹಗಳ ವಿಸರ್ಜನಾ ನಡೆಯುವ ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ ಮದ್ಯ ಮಾರಾಟ ನಿಷೇಧಿಸಿ ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಆದೇಶ ಹೊರಡಿಸಿದ್ದಾರೆ.

    ಗಣೇಶ ಹಬ್ಬಕ್ಕೆ ಸಂಬಂಧಿಸಿದಂತೆ ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 21(1) ಕಾಯ್ದೆಯಡಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಂಡು ಮುಂಜಾಗ್ರತಾ ಕ್ರಮವಾಗಿ ಈ ಆದೇಶ ಹೊರಡಿಸಲಾಗಿದೆ. ಸಮಾರಂಭ, ಸಂಗೀತ, ನೃತ್ಯ, ಮುಂತಾದ ಮನರಂಜನಾ ಕಾರ್ಯಕ್ರಮಗಳನ್ನು ನಿರ್ಬಂಧಿಸಲಾಗಿದೆ.

    ಗಣೇಶ ಮೂರ್ತಿಯನ್ನು ತಮ್ಮ ಮನೆಯ ಆವರಣದಲ್ಲಿ, ನೀರಿನ ಬ್ಯಾರಲ್, ಬಕೆಟ್‍ಗಳಲ್ಲಿ ವಿಸರ್ಜನೆ ಮಾಡಬೇಕು. ಯಾವುದೇ ರೀತಿಯಾಗಿ ಜನ ಸಂದಣಿ ಉಂಟು ಮಾಡಬಾರದು. ಭಕ್ತಾದಿಗಳಿಗೆ ಸ್ಯಾನಿಟೈಸರ್, ಮಾಸ್ಕ್ ಧರಿಸಲು ಸೂಚಿಸಬೇಕು, ಸಾಮಾಜಿಕ ಅಂತರ ಕಾಯ್ದು ಕೊಳ್ಳಬೇಕು, ಪರಿಸರ ಸ್ನೇಹಿ ಗಣೇಶ ಮೂರ್ತಿಯನ್ನು ಪ್ರತಿಷ್ಟಾಪಿಸಲು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.

  • 3ನೇ ದಿನ ಬರೋಬ್ಬರಿ 230 ಕೋಟಿ ರೂ. ಮದ್ಯ ಮಾರಾಟ

    3ನೇ ದಿನ ಬರೋಬ್ಬರಿ 230 ಕೋಟಿ ರೂ. ಮದ್ಯ ಮಾರಾಟ

    ಬೆಂಗಳೂರು: ಲಾಕ್‍ಡೌನ್ ಹಿನ್ನೆಲೆಯಲ್ಲಿ ಬಂದ್ ಮಾಡಲಾಗಿದ್ದ ಮದ್ಯ ಮಾರಾಟವನ್ನು ಆರಂಭಿಸಿ 3 ದಿನ ಕಳೆದಿದ್ದು, ಇಂದು ಕೆಎಸ್‍ಬಿಸಿಎಲ್ (ಕರ್ನಾಟಕ ಪಾನೀಯ ನಿಯಮ) ಬರೋಬ್ಬರಿ 230 ಕೋಟಿ ರೂ. ವ್ಯಾಪಾರ ನಡೆಸಿದೆ.

    ಇಂದು 15.6 ಕೋಟಿ ರೂ. ಮೌಲ್ಯದ 7 ಲಕ್ಷ ಲೀಟರ್ ಬಿಯರ್, 216 ಕೋಟಿ ರೂ. ಮೌಲ್ಯದ 39 ಲಕ್ಷ ಲೀಟರ್ ಐಎಂಎಲ್ (ಇಂಡಿಯನ್ ಮೇಡ್ ಲಿಕ್ಕರ್) ಮಾರಾಟವಾಗಿದೆ.

    ಮದ್ಯ ಮಾರಾಟಕ್ಕೆ ಅವಕಾಶ ನೀಡಿದ ಮೊದಲ ದಿನ 45 ಕೋಟಿ ರೂ. ಹಾಗೂ 2ನೇ ದಿನ 197 ಕೋಟಿ ರೂ. ಮದ್ಯ ಮಾರಾಟವಾಗಿತ್ತು. ಎರಡು ದಿನದ ಮದ್ಯ ಮಾರಾಟಕ್ಕಿಂತ ಇಂದು ಹೆಚ್ಚು ಮದ್ಯ ಮಾರಾಟ ಮಾಡಲಾಗಿದೆ. ಅಲ್ಲದೇ ನಿನ್ನೆಯ ದಾಖಲೆಯನ್ನು ಮುರಿದು ಮದ್ಯದಂಗಡಿಗಳು 230 ಕೋಟಿ ರೂ. ಮೌಲ್ಯದ ಮದ್ಯ ಖರೀದಿ ಮಾಡಿವೆ. ನಿನ್ನೆ ಕೆಎಸ್‍ಬಿಸಿಎಲ್‍ನಿಂದ 2.50 ಕೋಟಿ ರೂ. ಮೌಲ್ಯದ 3.95 ಲಕ್ಷ ಕೇಸ್ ಐಎಂಎಲ್ (ಇಂಡಿಯನ್ ಮೇಡ್ ಲಿಕ್ಕರ್) ಹಾಗೂ 79 ಸಾವಿರ ಕೇಸ್ ಬಿಯರ್ ಪೂರೈಕೆ ಮಾಡಲಾಗಿತ್ತು.

    ಇತ್ತ ಲಾಕ್‍ಡೌನ್ ನಿಂದಾಗಿ ಎಣ್ಣೆ ಇಲ್ಲದೆ 42 ದಿನಗಳನ್ನು ಮುಗಿಸಿದ ಮದ್ಯಪ್ರಿಯರಿಗೆ ಸರ್ಕಾರ ಇಂದು ಬಿಗ್ ಶಾಕ್ ನೀಡಿತ್ತು. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಒಂದು ಕಡೆ ಕೋವಿಡ್ ನಿಯಂತ್ರಣ ಮತ್ತೊಂದು ಕಡೆ ಆರ್ಥಿಕ ಚಟುವಟಿಕೆ ಎರಡನ್ನೂ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ. ಹೀಗಾಗಿ ಶೇ.11ರಷ್ಟು ಅಬಕಾರಿ ಸುಂಕ ಹೆಚ್ಚಳ ಮಾಡುವುದಾಗಿ ಘೋಷಿಸಿದ್ದರು. ಅಲ್ಲದೇ ರಾಜ್ಯದಲ್ಲಿ ಶೇ.17ರಷ್ಟು ಅಬಕಾರಿ ಸುಂಕ ಹೆಚ್ಚಳ ಮಾಡುವುದಾಗಿ ತಿಳಿಸಿದ್ದರು.

  • ಇಂದು ಮದ್ಯ ಮಾರಾಟದಲ್ಲಿ ಬಂಪರ್- 197 ಕೋಟಿ ರೂ. ಮದ್ಯ ಮಾರಾಟ

    ಇಂದು ಮದ್ಯ ಮಾರಾಟದಲ್ಲಿ ಬಂಪರ್- 197 ಕೋಟಿ ರೂ. ಮದ್ಯ ಮಾರಾಟ

    ಬೆಂಗಳೂರು: ರಾಜ್ಯದಲ್ಲಿ ಲಾಕ್‍ಡೌನ್ ನಿಯಮಗಳ ಸಡಿಲಿಕೆಯ 2ನೇ ದಿನವೂ ಮದ್ಯ ಮಾರಾಟ ಜೋರಾಗಿದ್ದು, ಇಂದು 197 ಕೋಟಿ ರೂ. ಮೌಲ್ಯದ ಮದ್ಯ ಮಾರಾಟ ಮಾಡಲಾಗಿದೆ ಎಂದು ಕೆಎಸ್‍ಬಿಸಿಎಲ್ ಅಧಿಕಾರಿ ತಿಳಿಸಿದ್ದಾರೆ.

    ಇಂದು ಬೆಳಿಗ್ಗೆಯಿಂದ ಸಂಜೆಯವರೆಗೂ ಮಾರಾಟವಾಗಿರುವ ಮದ್ಯದ ಮಾಹಿತಿ ನೀಡಲಾಗಿದ್ದು, 36.37 ಲಕ್ಷ ಲೀಟರ್ ಭಾರತೀಯ ಮದ್ಯ ಹಾಗೂ 7.02 ಲಕ್ಷ ಲೀಟರ್ ಬಿಯರ್ ಮಾರಾಟ ಮಾಡಲಾಗಿದೆ.

    ಉಳಿದಂತೆ ಬೆಳಗ್ಗೆಯಿಂದ ನಾಲ್ಕು ಗಂಟೆಯವರೆಗೆ ಕರ್ನಾಟಕ ಪಾನೀಯ ನಿಗಮ (ಕೆಎಸ್‍ಬಿಸಿಎಲ್‍) ನಿಂದ ಪೂರೈಕೆ ಮಾಡಲಾದ ಮದ್ಯದ ಮಾಹಿತಿಯನ್ನು ನೀಡಲಾಗಿದ್ದು, 3.95 ಲಕ್ಷ ಕೇಸ್ ಐಎಂಎಲ್ (ಇಂಡಿಯನ್ ಮೇಡ್ ಲಿಕ್ಕರ್) ಹಾಗೂ 79 ಸಾವಿರ ಕೇಸ್ ಬಿಯರ್ ಪೂರೈಕೆ ಮಾಡಲಾಗಿದೆ. ಇದರ ಅಂದಾಜು ಬೆಲೆ 183  ಕೋಟಿ  ರೂ. ಆಗಿದೆ.

    ಬೆಂಗಳೂರಲ್ಲಿ ಒಟ್ಟು 22 ಕೆಎಸ್‍ಬಿಸಿಎಲ್ ಗೋಡೌನ್ ಗಳಿದ್ದು, ನಾಳೆಯಿಂದ ಎಲ್ಲಾ ಮದ್ಯದಂಗಡಿಗಳಲ್ಲಿ ಫುಲ್ ಸ್ಟಾಕ್ ಇರುವಂತೆ ಪೂರೈಸಲಾಗಿದೆ. ಯಶವಂತಪುರದ ಕೆಎಸ್‍ಬಿಸಿಎಲ್ ಗೋಡೌನ್ ನಿಂದ ಐಎಂಎಲ್ 4 ಸಾವಿರ ಕೇಸ್ ಹಾಗೂ 1,550 ಬಿಯರ್ ಕೇಸ್‍ಗಳನ್ನು ಯಶವಂತಪುರ ವ್ಯಾಪ್ತಿಯಲ್ಲಿರುವ 28 ಸಿ.ಎಲ್ 2 ಶಾಪ್‍ಗಳಿಗೆ ಸರಬರಾಜು ಮಾಡಲಾಗಿದೆ. ಇದರ ಅಂದಾಜು ಬೆಲೆ 2.50 ಕೋಟಿ ಆಗಿದೆ.

    ನಿನ್ನೆ ಮೊದಲ ದಿನವೇ 45 ಕೋಟಿ ರೂ. ಮೌಲ್ಯದ ಮದ್ಯ ಮಾರಾಟ ಆಗಿತ್ತು. ಅಲ್ಲದೇ ಎಲ್ಲಾ ಪ್ರದೇಶಗಳಲ್ಲಿ ಮದ್ಯ ಪೂರೈಕೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದರು.

  • ರಾಜ್ಯದಲ್ಲಿ ಇಂದು 45 ಕೋಟಿ ರೂ. ಮೌಲ್ಯದ ಮದ್ಯ ಮಾರಾಟ

    ರಾಜ್ಯದಲ್ಲಿ ಇಂದು 45 ಕೋಟಿ ರೂ. ಮೌಲ್ಯದ ಮದ್ಯ ಮಾರಾಟ

    – 3.9 ಲಕ್ಷ ಲೀಟರ್ ಬಿಯರ್, 8.5 ಲಕ್ಷ ಲೀಟರ್ ಭಾರತೀಯ ಮದ್ಯ ಮಾರಾಟ

    ಬೆಂಗಳೂರು: ಬರೋಬ್ಬರಿ 41 ದಿನಗಳಿಂದ ಮದ್ಯ ಸಿಗದೆ ಕಂಗಾಲಾಗಿದ್ದ ಮದ್ಯ ಪ್ರಿಯರಿಗೆ ಲಾಕ್‍ಡಾನ್ ಸಡಿಲಿಕೆಯಿಂದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮದ್ಯ ಲಭ್ಯವಾಗಿದೆ. ರಾಜ್ಯಾದ್ಯಂತ ಒಂದೇ ದಿನ ಇಂದು 45 ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗಿದೆ.

    ನಿರ್ಬಂಧಿತ ವಲಯ ಹೊರತು ಪಡಿಸಿ ರಾಜ್ಯದ ಎಲ್ಲ ಕಡೆ ಮದ್ಯದಂಗಡಿಗಳು ತೆರೆದಿದ್ದವು. ಪರಿಣಾಮ ಬಹುತೇಕ ಮದ್ಯದಂಗಡಿಗಳಲ್ಲಿದ್ದ ಸ್ಟಾಕ್ ಖಾಲಿಯಾಗಿದೆ. ಸಾಮಾನ್ಯ ದಿನಗಳಲ್ಲಿ ನಿತ್ಯ 60 ಕೋಟಿ ರೂ. ಮೌಲ್ಯದ ಮದ್ಯ ಮಾರಾಟ ಆಗುತ್ತಿತ್ತು. ಬಹು ದಿನಗಳ ಬಳಿಕ ಮತ್ತೆ ವಹಿವಾಟು ಆರಂಭವಾದ ಕಾರಣ ನಿರೀಕ್ಷೆಯಂತೆಯೇ ಇಂದು ಮದ್ಯ ಮಾರಾಟ ಜೋರಾಗಿದೆ. ಇದನ್ನು ಓದಿ: ರಾಯಚೂರಿನಲ್ಲಿ ಹೈ ಬ್ರಾಂಡ್ ಮದ್ಯ ಖಾಲಿ- ಕ್ಯೂ ನಿಂತವರಿಗೆ ನಿರಾಸೆ

    ಇಂದು ಒಟ್ಟಾರೆ 3.9 ಲಕ್ಷ ಲೀಟರ್ ಬಿಯರ್ ಹಾಗೂ 8.5 ಲಕ್ಷ ಲೀಟರ್ ಭಾರತೀಯ ಮದ್ಯ ಮಾರಾಟವಾಗಿದೆ. ಸರ್ಕಾರ ಹಲವು ಷರತ್ತುಗಳ ಅನ್ವಯ ಇಂದು ಮದ್ಯದಂಗಡಿ ತೆರಯಲು ಅನುಮತಿ ನೀಡಿತ್ತು. ಮೊದಲ ದಿನವಾದ ಕಾರಣ ಬಹುತೇಕ ಭಾಗಗಳಲ್ಲಿ ಮದ್ಯದಂಗಡಿಗಳ ಎದುರು ದೂರದವರೆಗೆ ಸಾಲು ಕಂಡು ಬಂದಿತ್ತು.

    ಉಳಿದಂತೆ ಮದ್ಯದ ದಾಸ್ತಾನಿನ ಬಗ್ಗೆ ಸ್ಪಷ್ಟನೆ ನೀಡಿರುವ ಅಬಕಾರಿ ಇಲಾಖೆ, ಈಗಾಗಲೇ ಕೆ.ಎಸ್.ಬಿ.ಸಿ.ಎಲ್ ಡಿಪೋಗಳಲ್ಲಿ ಸಾಕಷ್ಟು ಮದ್ಯ ದಾಸ್ತಾನು ಮಾಡಲಾಗಿದೆ. ಡಿಸ್ಟಿಲರಿ ಮತ್ತು ಬ್ರೀವರಿಗಳನ್ನು ನಡೆಸಲು ಅನುಮತಿಯನ್ನು ನೀಡಲಾಗಿರುತ್ತದೆ. ಅಬಕಾರಿ ಆಯುಕ್ತರ ಸೂಚನೆಯ ಮೇರೆಗೆ ಜಿಲ್ಲಾ ಮಟ್ಟದಲ್ಲಿ ಅಬಕಾರಿ ಅಧಿಕಾರಿಗಳು ಸಿಎಲ್-2 ಮತ್ತು ಸಿಎಲ್-11(ಸಿ) ಸನ್ನದುದಾರರ ಸಭೆಯನ್ನು ಕರೆದು ಈಗಾಗಲೇ ತಿಳುವಳಿಕೆಯನ್ನು ನೀಡಿದ್ದಾರೆ ಎಂದು ತಿಳಿಸಿದೆ. ಇದನ್ನು ಓದಿ: ಮದ್ಯದಂಗಡಿ ಎದುರು ಕಾದು ಕುಳಿತವರಿಗೆ ನಿರಾಸೆ!

    ಹಲವು ಸ್ಥಳಗಳಲ್ಲಿ ಸಾಮಾಜಿಕ ಅಂತರ ಮರೆತು ಮದ್ಯದಂಗಡಿಗಳ ಎದುರು ಜನರು ಸೇರಿದ್ದರು. ಈ ಕುರಿತು ಕ್ರಮಕೈಗೊಳ್ಳುವ ಕುರಿತು ಇಲಾಖೆ ತಿಳಿಸಿದೆ. ಅಲ್ಲದೇ ಎಂ.ಆರ್.ಪಿ ಬೆಲೆಯನ್ನು ಉಲ್ಲಂಘಿಸಿ ಮಾರಾಟ ಮಾಡುತ್ತಿರುವ ಬಗ್ಗೆ ಕೆಲವು ದೂರುಗಳು ಬಂದರೆ ಪರಿಶೀಲನೆ ನಡೆಸಿ ಕಾನೂನಿ ಅನ್ವಯ ಅಮಾನತು ಮಾಡುವ ಕುರಿತು ಕ್ರಮಕೈಗೊಳ್ಳಲಾಗಿದೆ. ಅಬಕಾರಿ ಆಯುಕ್ತರು ಆಗಿಂದಾಗೆ ಬೇಕಾದ ಕ್ರಮಗಳ ಬಗ್ಗೆ ವಿಮರ್ಶೆ ಮಾಡುತ್ತಾರೆ ಎಂದು ಇಲಾಖೆ ಸ್ಪಷ್ಟಪಡಿಸಿದೆ. ಇದನ್ನು ಓದಿ: ಅಂಗಡಿ ಓಪನ್ ಮಾಡಿ ಮದ್ಯಪ್ರಿಯರಿಗೆ ಶಾಕ್ ಕೊಟ್ಟ ಸರ್ಕಾರ

  • ರಾಯಚೂರಿನಲ್ಲಿ ಹೈ ಬ್ರಾಂಡ್ ಮದ್ಯ ಖಾಲಿ- ಕ್ಯೂ ನಿಂತವರಿಗೆ ನಿರಾಸೆ

    ರಾಯಚೂರಿನಲ್ಲಿ ಹೈ ಬ್ರಾಂಡ್ ಮದ್ಯ ಖಾಲಿ- ಕ್ಯೂ ನಿಂತವರಿಗೆ ನಿರಾಸೆ

    ರಾಯಚೂರು: ಜಿಲ್ಲೆಯಲ್ಲಿ ಮದ್ಯದಂಗಡಿ ಆರಂಭದ ದಿನವೇ ಅಂಗಡಿಗಳು ಖಾಲಿಯಾಗಿವೆ. ಮೊದಲನೇ ದಿನವೇ ಮದ್ಯದ ಕೊರತೆ ಎದುರಾಗಿದ್ದು, ದುಬಾರಿ ಬೆಲೆಯ ಮದ್ಯದ ಬಾಟಲಿಗಳು ಬಹುತೇಕ ಖಾಲಿಯಾಗಿವೆ. ಹೈ ಬ್ರಾಂಡ್, ವಿದೇಶಿ ಎಣ್ಣೆ ಕೇಳಲೇಬೇಡಿ ಮಧ್ಯಾಹ್ನವೇ ಖಾಲಿಯಾಗಿದೆ ಎಂದು ಮದ್ಯದ ಅಂಗಡಿಗಳ ಮಾಲೀಕರು ಹೇಳುತ್ತಿದ್ದಾರೆ.

    ಅಗ್ಗದ ಮದ್ಯ ನಾಳೆಯವರೆಗೂ ಮಾರಾಟಕ್ಕೆ ಲಭ್ಯವಾಗಲಿದೆ. ಸಂಜೆ 7 ಗಂಟೆಯವರೆಗೂ ಮದ್ಯ ಮಾರಾಟಕ್ಕೆ ಅವಕಾಶ ನೀಡಿದ್ದರೂ ಜಿಲ್ಲೆಯ ಬಹುತೇಕ ಮದ್ಯದ ಅಂಗಡಿಗಳಲ್ಲಿ ಮಧ್ಯಾಹ್ನದ ಹೊತ್ತಿಗೆ ದುಬಾರಿ ಬೆಲೆಯ ಮದ್ಯದ ಬಾಟಲ್ ಗಳು ಖಾಲಿಯಾಗಿವೆ. ಒಂದೊಂದು ಅಂಗಡಿಗೆ ಹಿಂದೆಂದೂ ಬರದಷ್ಟು ಜನ ಬಂದು ವ್ಯಾಪಾರ ಮಾಡುತ್ತಿರುವುದರಿಂದ ಇದ್ದುದೆಲ್ಲ ಖಾಲಿಯಾಗುತ್ತಿದೆ.

    ಒಬ್ಬರಿಗೆ 2.4 ಲೀಟರ್ ಮಾತ್ರ ಕೊಳ್ಳಲು ಅವಕಾಶ ನೀಡಲಾಗಿದೆ. ಆದರೂ ಒಂದೇ ದಿನಕ್ಕೆ ಮದ್ಯ ಖಾಲಿಯಾಗಿದ್ದಕ್ಕೆ ಮದ್ಯ ಪ್ರೀಯರಿಗೆ ನಿರಾಸೆಯಾಗಿದೆ. ಇನ್ನು ಲಾಕ್‍ಡೌನ್ ಸಮಯದಲ್ಲಿ ಅಕ್ರಮ ಮದ್ಯ ಮಾರಾಟ ದೂರುಗಳು ಇರುವುದರಿಂದ ಅಬಕಾರಿ ಅಧಿಕಾರಿಗಳು ಮದ್ಯದಂಗಡಿಗಳ ದಾಸ್ತಾನಿನ ಲೆಕ್ಕ ಪರಿಶೀಲನೆ ಮುಂದುವರೆಸಿದ್ದಾರೆ.

  • ಮದ್ಯ ಮಾರಾಟಕ್ಕೆ ಬಿಜೆಪಿ ಶಾಸಕ ಅರವಿಂದ ಬೆಲ್ಲದ ವಿರೋಧ

    ಮದ್ಯ ಮಾರಾಟಕ್ಕೆ ಬಿಜೆಪಿ ಶಾಸಕ ಅರವಿಂದ ಬೆಲ್ಲದ ವಿರೋಧ

    ಧಾರವಾಡ: ರಾಜ್ಯದಲ್ಲಿ ಮದ್ಯ ಮಾರಾಟ ಪುನರ್ ಆರಂಭ ವಿಚಾರವಾಗಿ ಬಿಜೆಪಿ ಶಾಸಕನಿಂದಲೇ ಅಸಮಾಧಾನ ವ್ಯಕ್ತವಾಗಿದೆ. ಧಾರವಾಡ ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ ಬೆಲ್ಲದ ಮದ್ಯ ಮಾರಾಟಕ್ಕೆ ವಿರೋಧ ವ್ಯಕ್ತಪಡಿಸಿದ್ದು, ನನ್ನ ವೈಯಕ್ತಿವಾಗಿ ಕೇಳಿದರೆ ಬಾರ್ ಓಪನ್ ಬೇಡ ಎಂದಿದ್ದಾರೆ.

    ಧಾರವಾಡದಲ್ಲಿ ಮಾತನಾಡಿದ ಅವರು, ಬಾರ್ ಗಳನ್ನು ಬಂದ್ ಮಾಡುವುದು ಒಳ್ಳೆಯದು. 20 ಸಾವಿರ ಕೋಟಿ ಲಿಕ್ಕರ್ ರೆವಿನ್ಯೂ ರಾಜ್ಯದಲ್ಲಿದೆ. ಸುಮಾರು 70-80 ಸಾವಿರ ಕೋಟಿ ಪ್ರತಿ ವರ್ಷ ಲಿಕ್ಕರ್ ಸೇಲ್ ಆಗುತ್ತೆ. ಅದರಲ್ಲಿ 10 ಸಾವಿರ ಕೋಟಿ ಮಾತ್ರ ಶ್ರೀಮಂತರು ಕುಡಿಯುತ್ತಾರೆ. ಉಳಿದಿದ್ದ ಎಲ್ಲವೂ ಬಡವರಿಂದ ಬಂದ ದುಡ್ಡು ಎಂದು ತಿಳಿಸಿದರು.

    ಸಮಾಜ ಕಲ್ಯಾಣ ಇಲಾಖೆಯಿಂದ ಬಡವರ ಯೋಜನೆಗೆ ನಾವು ಹಣ ಕೊಡುತ್ತೇವೆ. ನಾವು ಖರ್ಚು ಮಾಡುವುದಕ್ಕಿಂತ ಬಡವರೇ ಮದ್ಯಕ್ಕೆ ಹೆಚ್ಚು ಖರ್ಚು ಮಾಡುತ್ತಿದ್ದಾರೆ. ಈಗ 45 ದಿನ ಲಾಕ್‍ಡೌನ್‍ನಿಂದ ಮದ್ಯ ಬಂದ್ ಆಗಿತ್ತು. ಇದರಿಂದ ಯಾರ ಮನೆಯಲ್ಲಿಯೂ ತೊಂದರೆ ಆಗಿಲ್ಲ. ಎಲ್ಲರೂ ರೇಷನ್ ತೆಗೆದುಕೊಂಡು ಊಟ ಮಾಡಿ ಆರಾಮಾಗಿ ಇದ್ದರು. ಈಗ ಮದ್ಯ ಆರಂಭ ಆದರೆ ಪುನಃ ಹೊಡೆದಾಟ-ಬಡಿದಾಟ ಶುರು ಆಗುತ್ತೆ. ಆದ್ದರಿಂದ ದೇಶಾದ್ಯಂತ ಮದ್ಯ ನಿಷೇಧ ಆಗಬೇಕು ಎಂದು ಬೆಲ್ಲದ ಹೇಳಿದರು.