Tag: liquor policy case

  • ಮದ್ಯ ನೀತಿ ಪ್ರಕರಣ – ಬೆಳ್ಳಂಬೆಳಗ್ಗೆ 35 ಕಡೆ ಇಡಿ ದಾಳಿ

    ಮದ್ಯ ನೀತಿ ಪ್ರಕರಣ – ಬೆಳ್ಳಂಬೆಳಗ್ಗೆ 35 ಕಡೆ ಇಡಿ ದಾಳಿ

    ನವದೆಹಲಿ: ಜಾರಿ ನಿರ್ದೇಶನಾಲಯವು (Enforcement Directorate) ಇಂದು ದೆಹಲಿ (New Delhi), ಪಂಜಾಬ್ (Punjab) ಮತ್ತು ಹೈದರಾಬಾದ್‌ನ (Hyderabad) 35 ಸ್ಥಳಗಳಲ್ಲಿ ದಾಳಿ ನಡೆಸಿದೆ. ದೆಹಲಿ ಸರ್ಕಾರ ಹಿಂಪಡೆದ ಹೊಸ ಅಬಕಾರಿ ನೀತಿಯಲ್ಲಿನ ಅಕ್ರಮಗಳ ಬಗ್ಗೆ ತನಿಖೆಯನ್ನು ತೀವ್ರಗೊಳಿಸಿದೆ.

    ಈ ರಾಜ್ಯಗಳಲ್ಲಿ ಮದ್ಯದ ಕಂಪನಿಗಳು, ವಿತರಕರು ಮತ್ತು ಪೂರೈಕೆ ಜಾಲಗಳಿಗೆ ಸಂಬಂಧಿಸಿದ ಆವರಣದಲ್ಲಿ ಶೋಧ ನಡೆಸಲಾಗುತ್ತಿದೆ. ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರು ಕೇಂದ್ರದ ದಾಳಿಯನ್ನು ಕೊಳಕು ರಾಜಕೀಯ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಸೀಟಿಗಾಗಿ ರೈಲಿನಲ್ಲಿ ಜುಟ್ಟು ಹಿಡಿದು ಮಹಿಳೆಯರ ಫೈಟ್ – ಜಗಳ ಬಿಡಿಸಲು ಬಂದ ಪೇದೆಗೆ ಕಪಾಳಮೋಕ್ಷ

    500 ಕ್ಕೂ ಹೆಚ್ಚು ದಾಳಿಗಳು ನಡೆದಿವೆ. 3 ತಿಂಗಳಿನಿಂದ 300 ಕ್ಕೂ ಹೆಚ್ಚು ಸಿಬಿಐ, ಇಡಿ ಅಧಿಕಾರಿಗಳು 24 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದಾರೆ. ಮನೀಶ್‌ ಸಿಸೋಡಿಯಾ ನಿವಾಸ, ಕಚೇರಿಗಳ ಮೇಲೂ ದಾಳಿ ನಡೆದವು. ಆದರೆ ಏನು ಸಿಗಲಿಲ್ಲ. ಅವರ ಹೊಲಸು ರಾಜಕಾರಣಕ್ಕಾಗಿ ಎಷ್ಟೋ ಅಧಿಕಾರಿಗಳ ಸಮಯ ವ್ಯರ್ಥವಾಗುತ್ತಿದೆ. ಅಂತಹ ದೇಶ ಹೇಗೆ ಪ್ರಗತಿ ಹೊಂದುತ್ತದೆ ಎಂದು ಕೇಜ್ರಿವಾಲ್ ಹಿಂದಿಯಲ್ಲಿ ಟ್ವೀಟ್ ಮಾಡಿ ಪ್ರಶ್ನಿಸಿದ್ದಾರೆ.

    ಖರೀದಿದಾರರನ್ನು ಆಕರ್ಷಿಸಲು ಚಿಲ್ಲರೆ ವ್ಯಾಪಾರಿಗಳಿಗೆ ದೊಡ್ಡ ರಿಯಾಯಿತಿಗಳನ್ನು ನೀಡಲು ಅವಕಾಶ ಮಾಡಿಕೊಟ್ಟ ಹೊಸ ಅಬಕಾರಿ ನೀತಿಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ಎಂದು ಬಿಜೆಪಿ ಆರೋಪಿಸಿದೆ. ಇದನ್ನೂ ಓದಿ: ಮಸೀದಿ ಗುಮ್ಮಟದ ಮೇಲಿದ್ದ 100 ವರ್ಷದಷ್ಟು ಹಳೆಯ ಚಿನ್ನದ ಭಾಗ ಕಳ್ಳತನ

    ಈ ಪ್ರಕರಣದಲ್ಲಿ ಹಲವೆಡೆ ದಾಳಿ ನಡೆಸಿದ ತನಿಖಾ ಸಂಸ್ಥೆ ಕಳೆದ ವಾರ ಮದ್ಯದ ಉದ್ಯಮಿ ಸಮೀರ್ ಮಹೇಂದ್ರು ಅವರನ್ನು ಬಂಧಿಸಿತ್ತು. ಎಎಪಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಆಪ್ತ ಸಹಾಯಕ ವಿಜಯ್ ನಾಯರ್ ಅವರನ್ನು ಸಿಬಿಐ ಬಂಧಿಸಿದೆ.

    Live Tv
    [brid partner=56869869 player=32851 video=960834 autoplay=true]

  • ನನ್ನನ್ನು ಬಂಧಿಸುವಂತೆ ಒತ್ತಡ ಹಾಕಿದ್ದಕ್ಕೆ ಸಿಬಿಐ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ: ಮನೀಶ್ ಸಿಸೋಡಿಯಾ

    ನನ್ನನ್ನು ಬಂಧಿಸುವಂತೆ ಒತ್ತಡ ಹಾಕಿದ್ದಕ್ಕೆ ಸಿಬಿಐ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ: ಮನೀಶ್ ಸಿಸೋಡಿಯಾ

    ನವದೆಹಲಿ: ನನ್ನನ್ನು ಬಂಧಿಸುವಂತೆ ಒತ್ತಡ ಹಾಕಿದ್ದಕ್ಕೆ ಸಿಬಿಐ ಅಧಿಕಾರಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಸ್ಫೋಟಕ ಹೇಳಿಕೆಯನ್ನು ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ನೀಡಿದ್ದಾರೆ. ಆದರೆ ಈ ಹೇಳಿಕೆಯನ್ನು ಕೇಂದ್ರೀಯ ತನಿಖಾ ದಳ(ಸಿಬಿಐ) ತಳ್ಳಿಹಾಕಿದೆ.

    ಸಿಬಿಐನ ಭ್ರಷ್ಟಾಚಾರ ನಿಗ್ರಹ ದಳದ ಉಪ ಕಾನೂನು ಸಲಹೆಗಾರರಾಗಿದ್ದ ಸಿಬಿಐ ಅಧಿಕಾರಿ ಜಿತೇಂದ್ರ ಕುಮಾರ್ ಅವರಿಗೆ ನನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ, ಬಂಧಿಸುವಂತೆ ಒತ್ತಡ ಹೇರಲಾಗಿತ್ತು. ಈ ಹಿನ್ನೆಲೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸೋಮವಾರ ಸಿಸೋಡಿಯಾ ಹೇಳಿದ್ದಾರೆ.

    MANISH SISODIA

    ಸಿಸೋಡಿಯಾ ಅವರ ಹೇಳಿಕೆಯನ್ನು ತಳ್ಳಿಹಾಕಿರುವ ಸಿಬಿಐ, ದೆಹಲಿ ಉಪ ಮುಖ್ಯಮಂತ್ರಿಯವರ ಹೇಳಿಕೆಯು ತಪ್ಪುದಾರಿಗೆಳೆಯುವಂತೆ ಮಾಡುತ್ತಿದೆ. ಈ ಹೇಳಿಕೆ ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ನಡೆಯುತ್ತಿರುವ ತನಿಖೆಯ ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನವಾಗಿದೆ ಎಂದು ಹೇಳಿದೆ. ಇದನ್ನೂ ಓದಿ: ಭಾರತದ ರಿಷಿಗೆ ಸೋಲು – ಬ್ರಿಟನ್ ಪ್ರಧಾನಿ ಗದ್ದುಗೆ ಏರಿದ ಲಿಜ್ ಟ್ರಸ್

    ಸಿಸೋಡಿಯಾ ಅವರ ಹೇಳಿಕೆಯನ್ನು ಸಿಬಿಐ ಬಲವಾಗಿ ನಿರಾಕರಿಸುತ್ತದೆ. ಜಿತೇಂದ್ರ ಕುಮಾರ್ ಅವರು ಈ ಪ್ರಕರಣದ ತನಿಖೆಯೊಂದಿಗೆ ಯಾವುದೇ ರೀತಿಯ ಸಂಬಂಧ ಹೊಂದಿರಲಿಲ್ಲ. ಅವರು ಪ್ರಾಸಿಕ್ಯೂಷನ್ ಉಸ್ತುವಾರಿ ಉಪ ಕಾನೂನು ಸಲಹೆಗಾರರಾಗಿದ್ದರು. ಅವರು ಈಗಾಗಲೇ ಚಾರ್ಜ್ ಶೀಟ್ ಮಾಡಿರುವ ಪ್ರಕರಣ ತನಿಖೆ ನಡೆಸುತ್ತಿರುವ ಪ್ರಾಸಿಕ್ಯೂಟರ್‌ಗಳನ್ನು ಮೇಲ್ವಿಚಾರಣೆ ಮಾಡುವ ಸಾಮರ್ಥ್ಯ ಹೊಂದಿದ್ದರು ಎಂದು ಸಿಬಿಐ ತಿಳಿಸಿದೆ.

    ಕಳೆದ ವಾರ ಜಿತೇಂದ್ರ ಕುಮಾರ್ ಅವರ ಮೃತದೇಹ ದಕ್ಷಿಣ ದೆಹಲಿಯ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ತಮ್ಮ ಸಾವಿಗೆ ಯಾರೂ ಕಾರಣರಲ್ಲ ಎಂದು ಬರೆದಿದ್ದ ಸೂಸೈಡ್ ನೋಟ್ ಅನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ನಮಗೆ ದ್ರೋಹ ಬಗೆದ ಉದ್ಧವ್ ಠಾಕ್ರೆಗೆ ಪಾಠ ಕಲಿಸಬೇಕು: ಅಮಿತ್ ಶಾ ಗುಡುಗು

    Live Tv
    [brid partner=56869869 player=32851 video=960834 autoplay=true]

  • ಪಿಎಂ ತನಿಖೆಯಲ್ಲಿ ಕ್ಲೀನ್‌ಚಿಟ್‌ ಸಿಕ್ಕಿದೆ; ಮನೆ, ಬ್ಯಾಂಕ್‌ ಲಾಕರ್‌ನಲ್ಲಿ CBIಗೆ ಏನೂ ಸಿಕ್ಕಿಲ್ಲ: ಸಿಸೋಡಿಯಾ

    ಪಿಎಂ ತನಿಖೆಯಲ್ಲಿ ಕ್ಲೀನ್‌ಚಿಟ್‌ ಸಿಕ್ಕಿದೆ; ಮನೆ, ಬ್ಯಾಂಕ್‌ ಲಾಕರ್‌ನಲ್ಲಿ CBIಗೆ ಏನೂ ಸಿಕ್ಕಿಲ್ಲ: ಸಿಸೋಡಿಯಾ

    ನವದೆಹಲಿ: ಪ್ರಧಾನಿ ಮೋದಿ ತನಿಖೆಯಲ್ಲಿ ನನಗೆ ಕ್ಲೀನ್‌ಚಿಟ್‌ ಸಿಕ್ಕಿದೆ. ನಮ್ಮ ಮನೆ ಹಾಗೂ ಬ್ಯಾಂಕ್‌ ಲಾಕರ್‌ನಲ್ಲಿ ಸಿಬಿಐಗೆ ಏನೂ ಸಿಕ್ಕಿಲ್ಲ ಎಂದು ಉಪ ಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಪ್ರತಿಕ್ರಿಯಿಸಿದ್ದಾರೆ.

    ಘಾಜಿಯಾಬಾದ್ ಬ್ಯಾಂಕ್‌ನಲ್ಲಿನ ಲಾಕರ್ ಅನ್ನು ಇಂದು ಸಿಬಿಐ ಅಧಿಕಾರಿಗಳು ಪರಿಶೀಲಿಸಿದರು. ದಾಳಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಸೋಡಿಯಾ, ಪ್ರಧಾನಿ ಮೋದಿ ಅವರನ್ನು ಗುರಿಯಾಗಿಸಿಕೊಂಡು ಟೀಕಾಪ್ರಹಾರ ನಡೆಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ – ರೇಸ್‌ನಲ್ಲಿದ್ದಾರೆ ಶಶಿ ತರೂರ್

    ಲಾಕರ್‌ನಲ್ಲಿ ನನ್ನ ಮಕ್ಕಳು ಮತ್ತು ಪತ್ನಿಗೆ ಸೇರಿದ ಸುಮಾರು 70,000 ರೂ. ಮೌಲ್ಯದ ಚಿನ್ನಾಭರಣವಿದೆ. ಪ್ರಧಾನಿ ಮೋದಿ ನಿರ್ದೇಶನದಲ್ಲಿ ಮನೆಗೆ ದಾಳಿ ನಡೆಸಿ, ಲಾಕರ್‌ನಲ್ಲಿ ಶೋಧ ನಡೆಸಿದರೂ ಏನೂ ಪತ್ತೆಯಾಗದಿರುವುದು ಸಂತಸ ತಂದಿದೆ. ಎಲ್ಲಾ ದಾಳಿಗಳಲ್ಲಿ ನನ್ನ ಕುಟುಂಬಕ್ಕೆ ಕ್ಲೀನ್‌ಚೀಟ್‌ ಸಿಕ್ಕಿದೆ ಎಂದು ಗುಡುಗಿದ್ದಾರೆ.

    ದಾಳಿಯ ಸಂದರ್ಭದಲ್ಲಿ ಸಿಬಿಐ ಅಧಿಕಾರಿಗಳು ಸಭ್ಯವಾಗಿ ವರ್ತಿಸಿದ್ದಾರೆ ಎಂದು ಸಿಸೋಡಿಯಾ ಪುನರುಚ್ಚರಿಸಿದರು. ಏನೂ ಸಿಗುವುದಿಲ್ಲ ಎಂದು ಗೊತ್ತಿದ್ದರೂ ನನ್ನನ್ನು ಕೆಲವು ತಿಂಗಳು ಜೈಲಿನಲ್ಲಿಡುವಂತೆ ಪ್ರಧಾನಿ ಒತ್ತಡಕ್ಕೆ ಮಣಿದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಇದನ್ನೂ ಓದಿ: ಆಜಾದ್ ಬೆಂಬಲಿಸಿ 51 ನಾಯಕರ ರಾಜೀನಾಮೆ – ಕಾಶ್ಮೀರದಲ್ಲಿ ಕಾಂಗ್ರೆಸ್‌ಗೆ ಆಘಾತ

    ಈ ಕುರಿತು ಟ್ವೀಟ್‌ ಮಾಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌, ʻಅವರು (ಕೇಂದ್ರ) ಈ ಕೊಳಕು ರಾಜಕೀಯವನ್ನು ಕೊನೆಗೊಳಿಸುತ್ತಾರೆ ಮತ್ತು ನಮಗೆ ಕೆಲಸ ಮಾಡಲು ಅವಕಾಶ ನೀಡುತ್ತಾರೆ ಎಂದು ನಾನು ಭಾವಿಸುತ್ತೇನೆʼ ಎಂದು ಕುಟುಕಿದ್ದಾರೆ.

    ಅಬಕಾರಿ ನೀತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಉಪ ಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಅವರ ಮನೆ ಹಾಗೂ ಕಚೇರಿಗಳ ಮೇಲೆ ಸಿಬಿಐ ದಾಳಿ ನಡೆಸಿತ್ತು.

    Live Tv
    [brid partner=56869869 player=32851 video=960834 autoplay=true]