Tag: liqour

  • ಗಾಜಿನಿಂದ ಕುತ್ತಿಗೆ ಕೊಯ್ದುಕೊಂಡ ಶಿವಮೊಗ್ಗದ ಖೈದಿ

    ಶಿವಮೊಗ್ಗ: ಖೈದಿಯೊಬ್ಬನು ಗ್ರಂಥಾಲಯದ ಕಬ್ಬಿಣದ ರ್ಯಾಕ್‍ಗೆ ಅಳವಡಿಸಿದ ಗಾಜಿನಿಂದ ಕುತ್ತಿಗೆ ಕೊಯ್ದುಕೊಂಡ ಘಟನೆ ನಗರದ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ.

    ತೀರ್ಥಹಳ್ಳಿ ಮೂಲದ ಮಹಮ್ಮದ್ ನೌಷದ್ (34) ಕುತ್ತಿಗೆ ಕೊಯ್ದುಕೊಂಡ ಖೈದಿ. ಗಾಂಜಾ ಪ್ರಕರಣದಲ್ಲಿ ಜ.7ರಂದು ಬಂಧನಕ್ಕೆ ಒಳಗಾಗಿದ್ದ. ಇದನ್ನೂ ಓದಿ: ಕಾಶ್ಮೀರದಲ್ಲಿ ನಿರ್ಮಾಣವಾಗ್ತಿದೆ ಐಫೆಲ್ ಟವರ್‍ಗಿಂತ ಎತ್ತರದ ಬ್ರಿಡ್ಜ್

    ಗಾಂಜಾ ಹಾಗೂ ಮದ್ಯ ವ್ಯಸನಿಯಾಗಿದ್ದ ನೌಷದ್‍ನನ್ನು ನೋಡಲು ಕಾರಾಗೃಹಕ್ಕೆ ಯಾರೂ ಬರುತ್ತಿರಲಿಲ್ಲ. ಜಾಮೀನು ಕೊಡಿಸುತ್ತಿಲ್ಲ ಅಂತ ಮನನೊಂದಿದ್ದ. ಗಾಯಗೊಂಡ ಖೈದಿಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

  • ಲಾಕ್‍ಡೌನ್ ಎಫೆಕ್ಟ್- ಕೋಲಾರದಲ್ಲಿ ಮದ್ಯ ಮಾರಾಟದಲ್ಲಿ ಇಳಿಕೆ

    ಲಾಕ್‍ಡೌನ್ ಎಫೆಕ್ಟ್- ಕೋಲಾರದಲ್ಲಿ ಮದ್ಯ ಮಾರಾಟದಲ್ಲಿ ಇಳಿಕೆ

    – 22 ಘೋರ ಪ್ರಕರಣ ದಾಖಲು, 3 ಸನ್ನದು ರದ್ದು

    ಕೋಲಾರ: ಕೊರೊನಾ ಲಾಕ್‍ಡೌನ್ ನಿಂದ ಅಬಕಾರಿ ಇಲಾಖೆ ನಷ್ಟಕ್ಕೊಳಗಾಗಿದೆ, ಈ ವೇಳೆ 22 ಘೋರ ಅಬಕಾರಿ ಕಾಯ್ದೆ ಉಲ್ಲಂಘಟನೆ ಪ್ರಕರಣಗಳು ದಾಖಲಾಗಿದ್ದು, ಸರ್ಕಾರದ ನಿಯಮ ಉಲ್ಲಂಘನೆ ಮಾಡಿದ 3 ಬಾರ್ ಸನ್ನದು ರದ್ದು ಮಾಡಲಾಗಿದೆ ಎಂದು ಅಬಕಾರಿ ಆಯುಕ್ತ ರವಿಶಂಕರ್ ಮಾಹಿತಿ ನೀಡಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ನಿಯಮಗಳನ್ನು ಉಲ್ಲಂಘನೆ ಮಾಡಿದ ಬೈಕ್, ಕಾರ್ ಸೇರಿ 15 ವಾಹನಗಳನ್ನ ವಶಕ್ಕೆ ಪಡೆದು, ಸನ್ನದುಗಳ ವಿರುದ್ಧ 54 ಪ್ರಕರಣ ದಾಖಲು ಮಾಡಲಾಗಿದೆ. ಜೊತೆಗೆ ಸಾವಿರಾರು ಲೀಟರ್ ನಷ್ಟು ಅಕ್ರಮ ಮದ್ಯ ಮಾರಾಟ ಹಾಗೂ ಸಾಗಾಟ ಮಾಡುತ್ತಿದ್ದನ್ನು ವಶಕ್ಕೆ ಪಡೆದು 145 ಜನರನ್ನು ದಸ್ತಗಿರಿ ಮಾಡಲಾಗಿದೆ.

    ಲಾಕ್‍ಡೌನ್ ಪರಿಣಾಮ ಜಿಲ್ಲೆಯಲ್ಲಿ ಶೇ.28ರಷ್ಟು ಅಬಕಾರಿ ಇಲಾಖೆಗೆ ನಷ್ಟವಾಗಿದ್ದು, ಲಾಕ್‍ಡೌನ್ ತೆರವಾದ ಬಳಿಕ ಲಾಭದತ್ತ ಸಾಗುತ್ತಿದೆ. ಕಳೆದ ವರ್ಷ ಮೇ ತಿಂಗಳಲ್ಲಿ ಸರಾಸರಿ 1.35 ಲಕ್ಷ ಬಾಕ್ಸ್ ಸೇಲ್ ಆಗುತ್ತಿತ್ತು. ಆದರೆ ಈ ಬಾರಿ ತುಂಬಾ ಕಡಿಮೆಯಾಗಿದ್ದು, ಸದ್ಯ ಸುಧಾರಣೆಯಾಗಿದೆ. ಈ ಬಾರಿ ಲಾಕ್‍ಡೌನ್ ವೇಳೆ ಕಳ್ಳಭಟ್ಟಿ ಸಾರಾಯಿ ಮಾರಾಟ ಪ್ರಕರಣ ಕೇವಲ 1 ಮಾತ್ರ ದಾಖಲಾಗಿದ್ದು, ಈ ವರ್ಷ ಅಂತಹ ಯಾವುದೇ ಹೆಚ್ಚಿನ ಪ್ರಕರಣಗಳು ವರದಿಯಾಗಿಲ್ಲ ಎಂದು ಹೇಳಿದರು.

  • ಮದ್ಯ ಸೇವಿಸ್ತೀವಿ, ನಿಯಮ ಉಲ್ಲಂಘಿಸಲ್ಲ- ಬೆಂಗ್ಳೂರಲ್ಲಿ ಮುಂಜಾನೆಯಿಂದ್ಲೇ ಕ್ಯೂ ನಿಂತ ಜನ

    ಮದ್ಯ ಸೇವಿಸ್ತೀವಿ, ನಿಯಮ ಉಲ್ಲಂಘಿಸಲ್ಲ- ಬೆಂಗ್ಳೂರಲ್ಲಿ ಮುಂಜಾನೆಯಿಂದ್ಲೇ ಕ್ಯೂ ನಿಂತ ಜನ

    – ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡ ಎಣ್ಣೆಪ್ರಿಯರು

    ಬೆಂಗಳೂರು: ಕೊರೊನಾ ವೈರಸ್ ಹರಡುವುದನ್ನು ತಪ್ಪಿಸಲಿ ದೇಶಾದ್ಯಂತ ಹೇರಲಾದ ಲಾಕ್ ಡೌನ್ ಸಡಿಲಿಕೆ ಮಾಡಿದ್ದು, ಕರ್ನಾಟಕದಲ್ಲಿ ಇಂದಿನಿಂದ ಜನರಿಗೆ ಲಾಕ್ ಡೌನ್ ನಿಂದ ರಿಲೀಫ್ ಸಿಗಲಿದೆ. ಈ ಹಿನ್ನೆಲೆಯಲ್ಲಿ ಮದ್ಯಪ್ರಿಯರು ಮುಂಜಾನೆಯಿಂದಲೇ ಅಂಗಡಿಗಳ ಮುಂದೆ ಕ್ಯೂ ನಿಂತಿದ್ದಾರೆ.

    ಸಿಲಿಕಾನ್ ಸಿಟಿಯಲ್ಲಿರುವ ನವರಂಗ್ ಸಿಗ್ನಲ್ ಬಳಿಯ ಬಾರ್ ವೊಂದರ ಮುಂದೆ ಸಾಮಾಜಿಕ ಅಂತರ ಕಾಯ್ದುಕೊಂಡು ಹಾಗೂ ಮಾಸ್ಕ್ ಧರಿಸಿ ಜನ ಕ್ಯೂನಲ್ಲಿ ನಿಂತಿದ್ದಾರೆ.

    ಬಾರ್ ಓಪನ್ ಆಗ್ತಿರೋದಕ್ಕೆ ಎಣ್ಣೆ ಪ್ರಿಯರು ಖುಷಿಯನ್ನ ವ್ಯಕ್ತಪಡಿಸುತ್ತಿದ್ದಾರೆ. ಬೆಳಗ್ಗೆ 5 ಗಂಟೆಯಿಂದಲೇ ಕ್ಯೂನಲ್ಲಿ ನಿಂತ ಜನ, ತುಂಬಾ ಖುಷಿಯಾಗ್ತಿದೆ ಸರ್. ನಮ್ಮ ಕೈಗೆ ಯಾವಾಗ ಬಾಟಲ್ ಸಿಗುತ್ತೋ ಅಂತ ಕಾಯುತ್ತಾ ಇದ್ದೀವಿ. ಮದ್ಯ ಸೇವಿಸ್ತೀವಿ. ಆದರೆ ನಿಯಮಗಳನ್ನ ಉಲ್ಲಂಘಿಸಲ್ಲ ಅಂತ ಹೇಳುತ್ತಿದ್ದಾರೆ. ಇದನ್ನೂ ಓದಿ: ನಾಳೆಯಿಂದ ಮದ್ಯದಂಗಡಿಗಳು ಓಪನ್ – ಒಬ್ಬರಿಗೆ ಎಷ್ಟು ಕ್ವಾಟರ್ ಎಣ್ಣೆ? ನಿಯಮ ಏನು?

    ಇತ್ತ ಮದ್ಯ ಮಾರಾಟಕ್ಕೆ ಅನುಮತಿ ಸಿಗುತ್ತಿದ್ದಂತೆಯೇ ಮಾರಾಟಗಾರರು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಅಂಗಡಿಯ ಮುಂದೆ ಮರದ ಕಂಬಗಳನ್ನ ಬಳಕೆ ಮಾಡಿ ಕ್ಯೂಗೆ ವ್ಯವಸ್ಥೆ ಮಾಡಿದ್ದಾರೆ. ಪ್ರತಿ ಆರು ಅಡಿಗಳಿಗೆ ಒಂದರಂತೆ ಬಾಕ್ಸ್ ಬರೆದಿರೋ ಸಿಬ್ಬಂದಿ, ಆ ಬಾಕ್ಸ್ ನಲ್ಲೇ ನಿಂತು ಬರುವಂತೆ ನಿರ್ದೇಶನ ನೀಡಿದ್ದಾರೆ. ಭಾನುವಾರವೇ ಎಂಆರ್‍ಪಿ ಸೆಂಟರ್ ಗಳು ಈ ಸಿದ್ಧತೆ ಮಾಡಿಕೊಂಡಿವೆ. ಇದನ್ನೂ ಓದಿ: ನಾಳೆ ಬಾರ್ ಓಪನ್ – ಇಂದೇ ಮದ್ಯದಂಗಡಿಗೆ ಆರತಿ ಎತ್ತಿ, ಕಾಯಿ ಒಡೆದ ಮದ್ಯಪ್ರಿಯ

    ನಿಯಮಗಳೇನು?
    ಒಬ್ಬರಿಗೆ ಎರಡೇ ಲೀಟರ್ ಮದ್ಯ ಸಿಗಲಿದ್ದು, ಬೆಳಗ್ಗೆ 9 ರಿಂದ ಸಂಜೆ 7 ರ ತನಕ ಮಾತ್ರ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ನಗರದ ಹಲವಡೆ ಬಾರ್ ಗಳ ಮುಂದೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಬ್ಯಾರಿಕೇಡ್ ನಿರ್ಮಿಸಿ, ಬಾಕ್ಸ್ ಗಳ ಅಳವಡಿಕೆ ಮಾಡಲಾಗಿದೆ. ಲಾಕ್ ಡೌನ್ ಹಿನ್ನಲೆ ಸ್ಥಗಿತಗೊಂಡಿದ್ದ ಮದ್ಯ ಮಾರಾಟ 42 ದಿನಗಳ ಬಳಿಕ ಆರಂಭವಾಗುತ್ತಿದ್ದು, ಕಂಟೈನ್ಮೆಂಟ್ ಝೋನ್ ಹೊರತುಪಡಿಸಿ ಉಳಿದ ಕಡೆ ಎಂಎಸ್‍ಐಎಲ್ (ಸಿಎಲ್ 11ಸಿ) , ಸಿಎಲ್ 2 ನಲ್ಲಿ ಪಾರ್ಸೆಲ್ ಮೂಲಕ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಯಶವಂತಪುರ, ಮತ್ತಿಕೆರೆ, ರಾಜಾಜಿನಗರ ಸೇರಿದಂತೆ ಹಲವಡೆ ಬಾರ್ ಗಳ ಮುಂದೆ ಬ್ಯಾರಿಕೇಡ್ ಅಳವಡಿಕೆ, ಮದ್ಯ ಮಾರಾಟಕ್ಕೆ ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದನ್ನೂ ಓದಿ: ಬಾರ್‌ಗಳ ಮುಂದೆ ಸ್ವತಃ ತಾವೇ ಬ್ಯಾರಿಕೇಡ್ ನಿರ್ಮಿಸಿದ ಮದ್ಯ ಪ್ರಿಯರು

  • ಅಬಕಾರಿ ಆದಾಯದಲ್ಲಿ ಬೆಂಗ್ಳೂರು ಫಸ್ಟ್- ಪ್ರತಿ ವರ್ಷ 10 ಸಾವಿರ ಕೋಟಿ ಹೆಚ್ಚಳ

    ಅಬಕಾರಿ ಆದಾಯದಲ್ಲಿ ಬೆಂಗ್ಳೂರು ಫಸ್ಟ್- ಪ್ರತಿ ವರ್ಷ 10 ಸಾವಿರ ಕೋಟಿ ಹೆಚ್ಚಳ

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಕೇವಲ ರಾಜ್ಯ ರಾಜಧಾನಿಯಲ್ಲ, ಮದ್ಯಪ್ರಿಯರ ರಾಜಧಾನಿಯೂ ಆಗಿದೆ. ಇಡೀ ರಾಜ್ಯದಲ್ಲಿ ಪ್ರತಿ ವರ್ಷ 17 ಸಾವಿರ ಕೋಟಿ ಅಬಕಾರಿ ಇಲಾಖೆಗೆ ಆದಾಯ ಬರುತ್ತೆ. ಇದರಲ್ಲಿ ಶೇ. 60ರಷ್ಟು ಅಂದ್ರೆ ಸುಮಾರು 10 ಕೋಟಿಗೂ ಜಾಸ್ತಿ ಹಣವನ್ನು ಬೆಂಗಳೂರು ನಗರ ಮತ್ತು ಗ್ರಾಮಾಂತರ, ಸರ್ಕಾರಕ್ಕೆ ತೆರಿಗೆ ಕಟ್ಟುತ್ತಿದೆ.

    ಬೆಂಗಳೂರಿನಲ್ಲಿ ಹೊಸ ವರ್ಷ ಎಂಟ್ರಿಯಾದರೆ ಸಾಕು, ಹೊಸದೊಂದು ಮಾಯಾ ಲೋಕವೇ ಸೃಷ್ಟಿಯಾಗುತ್ತೆ. ಮದ್ಯಪ್ರಿಯರಂತು ನ್ಯೂ ಇಯರ್ ಅನ್ನು ಗ್ರ್ಯಾಂಡ್ ಆಗಿ ಬರಮಾಡಿಕೊಳ್ಳುತ್ತಾರೆ. ಇಲ್ಲಿ ಮತ್ತೊಂದು ಶಾಕಿಂಗ್ ವಿಚಾರ ಏನೆಂದರೆ ಹೊಸ ಹೊರ್ಷದ ಮೊದಲ ಒಂದು ವಾರದಲ್ಲೇ ಸರಿಸುಮಾರು ಎರಡರಿಂದ ಮೂರು ಸಾವಿರ ಕೋಟಿ ರೂ. ಆದಾಯ ಹರಿದು ಬರುತ್ತೆ.

    ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳ ನಂತರ ಸ್ಥಾನ ಮೈಸೂರು, ಬೆಳಗಾವಿ. ಧಾರವಾಡ ಜಿಲ್ಲೆಗಳಿವೆ. ಬೆಂಗಳೂರಲ್ಲಿ 3,346 ಮದ್ಯದ ಅಂಗಡಿಗಳಿದ್ದರೆ, ಗ್ರಾಮಾಂತರದಲ್ಲಿ ಕೇವಲ 199 ಮದ್ಯದ ಅಂಗಡಿಗಳಿವೆ. ಹೀಗಿದ್ದರು ಕೂಡ ಆದಾಯ ಮತ್ತು ಮದ್ಯ ಪ್ರಿಯರ ಸಂಖ್ಯೆಯಲ್ಲಿ ನಗರಕ್ಕೆ ಗ್ರಾಮಾಂತರ ಪೈಪೋಟಿ ಕೊಡುತ್ತಿದೆ. ಬೆಳಗಾವಿ, ದಕ್ಷಿಣ ಕನ್ನಡ, ಮೈಸೂರಿನಲ್ಲಿ ತಲಾ 500ಕ್ಕೂ ಹೆಚ್ಚು ಮದ್ಯದಂಗಡಿಗಳಿದ್ದರೂ ಆದಾಯ ಇಲಾಖೆಗೆ ಆದಾಯ ತರುವಲ್ಲಿ ಹಿಂದುಳಿದಿವೆ ಎಂಬುದಾಗಿ ತಿಳಿದುಬಂದಿದೆ.

  • ಪುಟ್ಟ ಕಂದನಿಗೆ ಮದ್ಯ ಕುಡಿಸಿದ ತಂದೆ – ರೌಡಿಶೀಟರ್‌ನಿಂದ ಪೈಶಾಚಿಕ ಕೃತ್ಯ!

    ಪುಟ್ಟ ಕಂದನಿಗೆ ಮದ್ಯ ಕುಡಿಸಿದ ತಂದೆ – ರೌಡಿಶೀಟರ್‌ನಿಂದ ಪೈಶಾಚಿಕ ಕೃತ್ಯ!

    ಬೆಂಗಳೂರು: ದರೋಡೆ, ಸುಲಿಗೆ, ಕೊಲೆ ಯತ್ನಗಳನ್ನ ಮಾಡಿ ಬದುಕುತ್ತಿದ್ದ ರೌಡಿಯೊಬ್ಬ ತನ್ನ ಮಗುವಿಗೆ ಮದ್ಯ ಕುಡಿಸಿ ಹಿಂಸೆ ನೀಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ಬೆಳಕಿಗೆ ಬಂದಿದೆ.

    ರೌಡಿಶೀಟರ್ ಕುಮಾರೇಶ್ ತನ್ನ ಮಗುವಿಗೆ ಮದ್ಯ ಕುಡಿಸಿದ ಆರೋಪಿ. ರೌಡಿ ಎನ್ನುವ ಅರಿವಿಲ್ಲದ ಯುವತಿಯೊಬ್ಬಳು ಪ್ರೀತಿ, ಪ್ರೇಮದ ಬಲೆಗೆ ಬಿದ್ದು ಮಾಗಡಿ ರಸ್ತೆಯ ರೌಡಿಶೀಟರ್ ಕುಮಾರೇಶ್ ಜೊತೆ ಮದುವೆಯಾಗಿದ್ದಳು. ಮದುವೆ ಬಳಿಕ ಆರು ತಿಂಗಳಿಗೆ ತನ್ನ ಗಂಡ ರೌಡಿಶೀಟರ್ ಎಂದು ತಿಳಿದು ಮನೆ ತೊರೆದಿದ್ದಳು. ಮದುವೆ ಬಳಿಕ ಗಂಡು ಮಗುವಿಗೆ ಜನ್ಮ ನೀಡಿದ್ದಳು. ತಾಯಿ ಮನೆಯಲ್ಲಿ ನೆಮ್ಮದಿಯಿಂದ ಇರುವಾಗ ಎಂಟ್ರಿ ಕೊಟ್ಟ ಕಿರಾತಕ ಪತ್ನಿ ಮೇಲಿನ ಕೋಪಕ್ಕೆ ಪತ್ನಿ ಮನೆಗೆ ನುಗ್ಗಿ ಮಗು ಎತ್ಕೊಂಡು ಪರಾರಿಯಾಗಿದ್ದ. ಅರಿವು ಬಾರದ ಮಗುವಿಗೆ ಕಂಠ ಪೂರ್ತಿ ಕುಡಿಸಿ ಕ್ರೌರ್ಯ ಮೆರೆದಿದ್ದಾನೆ.

    ಮಗುವನ್ನ ತಂದ ಕುಮಾರೇಶ್ ಪತ್ನಿಯ ಮೇಲಿನ ಸೇಡಿಗೆ ಮಗುವಿಗೆ ಮದ್ಯಪಾನ ಮಾಡಿಸ ತನ್ನ ಸಂಬಂಧಿ ಬಳಿ ವಿಡಿಯೋ ಮಾಡಿಸಿ ಹೆಂಡತಿಗೆ ಕಳಿಸಿ ವಿಕೃತಿ ಮೆರೆದಿದ್ದಾನೆ. ಗಂಡನ ವಿಕೃತಿ ನೋಡಿ ಮಹಿಳೆ ವನಿತಾ ಸಹಾಯವಾಣಿ ಹಾಗೂ ಮಕ್ಕಳ ಸಹಾಯವಾಣಿಗೆ ದೂರು ನೀಡಿದ್ದು ಪೊಲೀಸರ ಸಹಾಯದಿಂದ ಮಗು ರಕ್ಷಣೆ ಮಾಡಲಾಗಿದೆ.

    ಈ ಬಗ್ಗೆ ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ. ದೂರು ದಾಖಲಾಗುತ್ತಿದ್ದಂತೆ ಆರೋಪಿ ಕುಮಾರೇಶ್ ಪರಾರಿಯಾಗಿದ್ದು, ಮಗುವನ್ನ ರಕ್ಷಣೆ ಮಾಡಿ ತಾಯಿ ಮಡಿಲಿಗೆ ಸೇರಿಸಲಾಗಿದೆ. ಇತ್ತ ಮಕ್ಕಳ ಸಹಾಯವಾಣಿ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.

  • ಇಕ್ಬಾಲ್ ಅನ್ಸಾರಿಗೆ ತಲೆನೋವು ತಂದಿಟ್ಟ ಗಂಗಾವತಿ ನೂತನ ಬಿಜೆಪಿ ಶಾಸಕ!

    ಇಕ್ಬಾಲ್ ಅನ್ಸಾರಿಗೆ ತಲೆನೋವು ತಂದಿಟ್ಟ ಗಂಗಾವತಿ ನೂತನ ಬಿಜೆಪಿ ಶಾಸಕ!

    ಕೊಪ್ಪಳ: ಜಿಲ್ಲೆಯ ಗಂಗಾವತಿಯಲ್ಲಿ ಶಾಸಕ ಮತ್ತು ಮಾಜಿ ಶಾಸಕರ ನಡುವೆ ಲಿಕ್ಕರ್ ಫೈಟ್ ಆರಂಭವಾಗಿದೆ. ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅಬಕಾರಿ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

    ಮದ್ಯ ಅಕ್ರಮ ಮಾರಾಟ ಹಾಗೂ ಹೆಚ್ಚುವರಿ ಹಣ ವಸೂಲಿ ತಡೆಗಟ್ಟುವಂತೆ ಪತ್ರದಲ್ಲಿ ಶಾಸಕರು ಆಗ್ರಹಿಸಿದ್ದಾರೆ. ಜಿಲ್ಲಾ ಅಬಕಾರಿ ಆಯುಕ್ತರಿಗೆ ಪತ್ರ ಬರೆದಿರುವ ಶಾಸಕ ಪರಣ್ಣ ಮುನವಳ್ಳಿ, ಹೆಚ್ಚುವರಿ ಹಣಕ್ಕೆ ಮದ್ಯ ಮಾರಾಟ ಮಾಡ್ತಿರೋದರಿಂದ ನಗರದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗ್ತಿದೆ. ಗಂಗಾವತಿಯಲ್ಲಿ ಪ್ರತಿ 180 ಎಂಎಲ್ ಗೆ 30 ರಿಂದ 40 ರೂ. ಹೆಚ್ಚುವರಿ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಶಾಸಕರು ಆರೋಪಿಸಿದ್ದಾರೆ.

    ಗಂಗಾವತಿ ತುಂಬ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಒಡೆತನದ ಮದ್ಯದಗಂಡಿಗಳಿವೆ. ಇಕ್ಬಾಲ್ ಅನ್ಸಾರಿಯವರ ಮದ್ಯದಂಗಡಿಯಲ್ಲಿ ಎಂ.ಆರ್.ಪಿ ಗಿಂತ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದೆ. ಇದರಿಂದ ಪರಣ್ಣ ಮುನವಳ್ಳಿ ಶಾಸಕರಾಗಿ ಆಯ್ಕೆಯಾಗುತ್ತಲೇ ಅಬಕಾರಿ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

    ಎಂ.ಆರ್.ಪಿ ದರಕ್ಕೆ ಮದ್ಯ ಮಾರಾಟ ಮಾಡುವಂತೆ ಜನ ದೂರು ನೀಡಿದ್ರೂ ಯಾವುದೇ ಪ್ರಯೋಜನವಾಗಲಿಲ್ಲ. ಇದೀಗ ಶಾಸಕರೇ ಪತ್ರ ಬರೆದಿದ್ದಾರೆ. ಗಂಗಾವತಿಯಲ್ಲಿನ 22 ಸಿಎಲ್ – 2 ಬಾರ್ ಗಳು ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಮತ್ತವರ ಪತ್ನಿ ಹೆಸರಲ್ಲಿವೆ. ಇದರಿಂದ ಅಬಕಾರಿ ಅಧಿಕಾರಿಗಳು ಶಾಸಕರ ಪತ್ರಕ್ಕೆ ಕ್ಯಾರೆ ಎಂದಿಲ್ಲ. ಅಬಕಾರಿ ಅಧಿಕಾರಿಗಳು ಶಾಸಕರ ಪತ್ರದ ಬಗ್ಗೆ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಗಮನಕ್ಕೆ ತಂದಿದ್ದಾರಂತೆ. ಯಾರು ಹೇಳಿದ್ರೂ ನಾನು ಹೆಚ್ಚುವರಿ ದರಕ್ಕೆ ಮಾರಾಟ ಮಾಡುತ್ತೇನೆ ಎನ್ನುತ್ತಿದ್ದಾರಂತೆ ಅನ್ಸಾರಿ ಸಾಹೇಬ್ರು. ಇದರಿಂದ ಅಧಿಕಾರಿಗಳು ಸಂದಿಗ್ಧ ಸ್ಥಿತಿಗೆ ತಲುಪಿದ್ದಾರೆ.