Tag: Lionel Messi

  • ಮೆಸ್ಸಿ ಈಗ ಬೈಜೂಸ್‌ ಜಾಗತಿಕ ರಾಯಭಾರಿ

    ಮೆಸ್ಸಿ ಈಗ ಬೈಜೂಸ್‌ ಜಾಗತಿಕ ರಾಯಭಾರಿ

    ನವದೆಹಲಿ: ಎಜ್ಯುಟೆಕ್‌ ಪ್ರಮುಖ ಕಂಪನಿ ಬೈಜೂಸ್‌(BYJU’) ತನ್ನ ಜಾಗತಿಕ ರಾಯಭಾರಿಯಾಗಿ ಫುಟ್‌ಬಾಲ್‌(Football) ತಾರೆ ಲಿನೋನೆಲ್‌ ಮೆಸ್ಸಿ(Lionel Messi) ಅವರನ್ನು ನೇಮಕ ಮಾಡಿದೆ.

    ಅರ್ಜೆಂಟೀನಾ ಫುಟ್‌ಬಾಲ್ ತಂಡದ ನಾಯಕರಾಗಿರುವ ಮೆಸ್ಸಿ, ಸಮಾನ ಶಿಕ್ಷಣವನ್ನು ಉತ್ತೇಜಿಸಲು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ಬೈಜೂಸ್‌ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

    ನಮ್ಮ ಜಾಗತಿಕ ರಾಯಭಾರಿಯಾಗಿರುವ ಲಿಯೋನೆಲ್ ಮೆಸ್ಸಿ ಅವರೊಂದಿಗೆ ಕೆಲಸ ಮಾಡಲು ನಾವು ಉತ್ಸುಕರಾಗಿದ್ದೇವೆ. ಅವರು ತಳಮಟ್ಟದಿಂದ ಬೆಳೆದು ಅತ್ಯಂತ ಯಶಸ್ವಿ ಕ್ರೀಡಾ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಈ ರೀತಿಯ ಅವಕಾಶವನ್ನು BYJU’s ಎಜ್ಯುಕೇಶನ್‌ ಫಾರ್‌ ಆಲ್‌(EFA) ಸೃಷ್ಟಿಸಲು ಬಯಸುತ್ತದೆ ಎಂದು ಬೈಜೂಸ್‌ ಸಹ-ಸಂಸ್ಥಾಪಕಿ ದಿವ್ಯಾ ಗೋಕುಲನಾಥ್ ಹೇಳಿದ್ದಾರೆ. ಇದನ್ನೂ ಓದಿ: ಬಾಗ್ಲಾ ಸೋತ ಬಳಿಕ ಕೊಹ್ಲಿ ವಿರುದ್ಧ ಫೇಕ್ ಫೀಲ್ಡಿಂಗ್ ಆರೋಪ

    ಫುಟ್‌ಬಾಲ್ ಪ್ರಪಂಚದಾದ್ಯಂತ ಸುಮಾರು 3.5 ಶತಕೋಟಿ ಅಭಿಮಾನಿಗಳನ್ನು ಹೊಂದಿದ್ದು, ಸಾಮಾಜಿಕ ಜಾಲತಾಣದಲ್ಲಿ ಲಿಯೋನೆಲ್ ಮೆಸ್ಸಿ ಸುಮಾರು 45 ಕೋಟಿ ರೂ. ಅಭಿಮಾನಿಗಳನ್ನು ಹೊಂದಿದ್ದಾರೆ. ಬೈಜೂಸ್‌ ಈ ತಿಂಗಳಿನಿಂದ ಕತಾರ್‌ನಲ್ಲಿ ಆರಂಭವಾಗಲಿರುವ ಫಿಫಾ ವಿಶ್ವಕಪ್‌ನ ಅಧಿಕೃತ ಪ್ರಯೋಜಕತ್ವವನ್ನು ಪಡೆದಿದೆ.

    Live Tv
    [brid partner=56869869 player=32851 video=960834 autoplay=true]

  • T20 ವಿಶ್ವಕಪ್‍ನಲ್ಲಿ ಅಂಪೈರಿಂಗ್ ಮಾಡಿದ ಫುಟ್‍ಬಾಲ್ ದಿಗ್ಗಜ ಮೆಸ್ಸಿ! – ಫೋಟೋ ವೈರಲ್

    T20 ವಿಶ್ವಕಪ್‍ನಲ್ಲಿ ಅಂಪೈರಿಂಗ್ ಮಾಡಿದ ಫುಟ್‍ಬಾಲ್ ದಿಗ್ಗಜ ಮೆಸ್ಸಿ! – ಫೋಟೋ ವೈರಲ್

    ಮೆಲ್ಬರ್ನ್: ಆಸ್ಟ್ರೇಲಿಯಾದಲ್ಲಿ (Australia) ನಡೆಯುತ್ತಿರುವ ಟಿ20 ವಿಶ್ವಕಪ್‍ನಲ್ಲಿ (T20 World Cup) ಫುಟ್‍ಬಾಲ್ (Football) ದಿಗ್ಗಜ ಆಟಗಾರ ಲಿಯೋನೆಲ್ ಮೆಸ್ಸಿ (Lionel Messi) ಅಂಪೈರ್ (Umpire) ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಕೆಲ ಫೋಟೋಗಳು ಹರಿದಾಡುತ್ತಿದೆ.

    ಅಸಲಿಗೆ ಇದು ಸತ್ಯವಲ್ಲ. ಟಿ20 ವಿಶ್ವಕಪ್‍ನಲ್ಲಿ ಮೈಕೆಲ್ ಗಾಫ್ ಅಂಪೈರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಫೋಟೋ ಮೆಸ್ಸಿಯನ್ನು ಕಂಡಂತೆ ಭಾಸವಾಗುತ್ತಿದೆ. ಹಾಗಾಗಿ ಅಭಿಮಾನಿಗಳು ಮೆಸ್ಸಿ ಫುಟ್‍ಬಾಲ್ ಬಿಟ್ಟು ಟಿ20 ವಿಶ್ವಕಪ್‍ನಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಸುದ್ದಿ ಹಬ್ಬಿಸಿದ್ದಾರೆ. ಇದನ್ನೂ ಓದಿ: UK ಪ್ರಧಾನಿಯಾದ ರಿಷಿ ಸುನಾಕ್ – ಸಾಮಾಜಿಕ ಜಾಲತಾಣದಲ್ಲಿ ಆಶಿಶ್ ನೆಹ್ರಾ ಫೋಟೋ ಟ್ರೆಂಡ್

    ಮೈಕೆಲ್ ಗಾಫ್ ಹಲವು ವರ್ಷಗಳಿಂದ ಐಸಿಸಿಯ ಪ್ಯಾನಲ್ ಅಂಪೈರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೀಗ ನಡೆಯುತ್ತಿರುವ ಟಿ20 ವಿಶ್ವಕಪ್‍ನಲ್ಲೂ ಕೂಡ ಇದ್ದಾರೆ. ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಮೈಕೆಲ್ ಗಾಫ್ ಬೈಸ್ ರನ್ ಆಗಿ ಜಿಂಬಾಬ್ವೆ ತಂಡಕ್ಕೆ 5 ರನ್ ಬರುವಂತಹ ತೀರ್ಪೊಂದನ್ನು ನೀಡಿದ್ದರು. ಆ ಬಳಿಕ ಮೈಕಲ್ ಗಾಫ್ ಫೋಟೋವನ್ನು ಮೆಸ್ಸಿಗೆ ಹೋಲಿಕೆ ಮಾಡಲಾಗಿದೆ. ಇದನ್ನೂ ಓದಿ: ಭಾರತ ವಿರುದ್ಧ ಸೋಲು – ಡ್ರೆಸ್ಸಿಂಗ್ ರೂಮ್‍ನಲ್ಲಿ ತಲೆ ಮೇಲೆ ಕೈ ಹೊತ್ತು ಕುಳಿತ ಪಾಕ್ ಆಟಗಾರರು

    ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್‍ನ ಪ್ರತಿಯೊಂದು ಪಂದ್ಯಗಳು ರೋಚಕವಾಗಿ ಕಾಣಸಿಗುತ್ತಿದೆ. ಜೊತೆಗೆ ಪಂದ್ಯಕ್ಕೆ ವರುಣನ ಕಾಟ ಕೂಡ ಕಾಡುತ್ತಿದೆ. ಈ ನಡುವೆ ಸೂಪರ್ 12 ಹಂತದ ಪಂದ್ಯಗಳು ಸಾಗುತ್ತಿವೆ.

    Live Tv
    [brid partner=56869869 player=32851 video=960834 autoplay=true]

  • ಲಿಯೋನೆಲ್ ಮೆಸ್ಸಿಗೆ ಕೊರೊನಾ ಪಾಸಿಟಿವ್

    ಲಿಯೋನೆಲ್ ಮೆಸ್ಸಿಗೆ ಕೊರೊನಾ ಪಾಸಿಟಿವ್

    ಪ್ಯಾರಿಸ್: 7 ಬಾರಿ ಬ್ಯಾಲನ್ ಡಿಓರ್ ಪ್ರಶಸ್ತಿ ಜಯಿಸಿದ್ದ ಖ್ಯಾತ ಫುಟ್‍ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿಗೆ ಕೊರೊನಾ ಪಾಸಿಟಿವ್ ವರದಿಯಾಗಿದೆ.

    ಫ್ರೆಂಚ್ ಕಪ್ ಪಂದ್ಯಾಟಕ್ಕಾಗಿ ಪ್ಯಾರಿಸ್ ಸೇಂಟ್- ಜರ್ಮೈನ್ ತಂಡದ ಜೊತೆಗಿದ್ದ ವೇಳೆ ಮೆಸ್ಸಿ ಸೇರಿ ತಂಡದ ನಾಲ್ವರು ಆಟಗಾರರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಪ್ಯಾರಿಸ್ ಸೇಂಟ್- ಜರ್ಮೈನ್ ತಂಡಕ್ಕೆ ನಾಳೆ ಪಂದ್ಯ ನಿಗದಿಯಾಗಿತ್ತು. ಇಂದು ಟೆಸ್ಟ್ ಮಾಡಿಸಿದಾಗ ಕೊರೊನಾ ಪಾಸಿಟಿವ್ ವರದಿಯಾಗಿದೆ. ಇದನ್ನೂ ಓದಿ: 47ನೇ ರಾಷ್ಟ್ರೀಯ ಜೂನಿಯರ್ ವಾಲಿಬಾಲ್ ಚಾಂಪಿಯನ್‍ಶಿಪ್‍ನಲ್ಲಿ ಭಾಗವಹಿಸಿದ್ದ ಕರ್ನಾಟಕ ತಂಡಕ್ಕೆ ಸನ್ಮಾನ

    ಪ್ಯಾರಿಸ್ ಸೇಂಟ್- ಜರ್ಮೈನ್ ಪರ ಅಭ್ಯಾಸ ಆರಂಭಿಸುವ ಮುನ್ನ ಕೊರೊನಾ ಪರೀಕ್ಷೆ ಒಳಪಡಿಸಿದಾಗ ಮೆಸ್ಸಿ ಸೇರಿ ನಾಲ್ವರು ಆಟಗಾರರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಆಟಗಾರರೊಂದಿಗೆ ಒಬ್ಬ ತರಬೇತಿದಾರರಿಗೂ ಕೊರೊನಾ ಸೋಂಕು ಇರುವ ಬಗ್ಗೆ ಮೂಲಗಳಿಂದ ತಿಳಿದುಬಂದಿದೆ. ಮೆಸ್ಸಿ ಸೇರಿ ಉಳಿದ ನಾಲ್ವರು ಆಟಗಾರರನ್ನು ಹೋಟೆಲ್‍ನಲ್ಲಿ ಕ್ವಾರಂಟೈನ್‍ಗೆ ಒಳಪಡಿಸಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ಪ್ಯಾರಿಸ್ ಸೇಂಟ್- ಜರ್ಮೈನ್ ತಂಡದ ವೈದ್ಯಕೀಯ ವಿಭಾಗ ಸ್ಪಷ್ಟಪಡಿಸಿದೆ.  ಇದನ್ನೂ ಓದಿ: ಟೀಂ ಇಂಡಿಯಾ ಸಾರಥ್ಯ ಹಿಡಿದ ಕನ್ನಡಿಗರಿವರು

  • ಮೆಸ್ಸಿ ಬಳಸಿದ್ದ ಒಂದು ಟಿಶ್ಯೂ ಪೇಪರ್ ಬೆಲೆ ಎಷ್ಟು ಕೋಟಿ ಗೊತ್ತಾ?

    ಮೆಸ್ಸಿ ಬಳಸಿದ್ದ ಒಂದು ಟಿಶ್ಯೂ ಪೇಪರ್ ಬೆಲೆ ಎಷ್ಟು ಕೋಟಿ ಗೊತ್ತಾ?

    ಪ್ಯಾರಿಸ್: ಕೆಲದಿನಗಳ ಹಿಂದೆ ಬಾರ್ಸಿಲೋನಾ ತೊರೆದು ಪ್ಯಾರಿಸ್ ಸೇಂಟ್-ಜರ್ಮೈನ್ ತಂಡಕ್ಕೆ ಖ್ಯಾತ ಫುಟ್‍ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಸೇರಿದ್ದಾರೆ. ಈ ಮುನ್ನ ಬಾರ್ಸಿಲೋನಾ ತಂಡದೊಂದಿಗಿನ ತನ್ನ 21 ವರ್ಷಗಳ ಒಡನಾಟಕ್ಕೆ ಅಂತ್ಯ ಆಡಿದ ಸುದ್ದಿಗೋಷ್ಠಿಯಲ್ಲಿ ಮೆಸ್ಸಿ ಕಣ್ಣೀರು ಹಾಕಿದ್ದರು. ಈ ವೇಳೆ ಕಣ್ಣೀರು ಒರೆಸಿಕೊಳ್ಳಲು ಬಳಸಿದ ಟಿಶ್ಯೂ ಪೇಪರ್ 7.43 ಕೋಟಿ(1 ಮಿಲಿಯನ್)ಕೋಟಿ ರೂಪಾಯಿಗೆ ಹರಾಜು ಹಾಕಲಾಗಿದೆ.

    ಮೆಸ್ಸಿ ಬಾರ್ಸಿಲೋನಾ ತಂಡಕ್ಕೆ ವಿದಾಯ ಹೇಳುವ ಸಂದರ್ಭ ತನ್ನ 21 ವರ್ಷಗಳ ಒಡನಾಟವನ್ನು ನೆನಪಿಸಿಕೊಂಡು ಕಣ್ಣೀರಿಟ್ಟಿದ್ದರು. ಈ ವೇಳೆ ಅವರೊಂದಿಗಿದ್ದ ಅವರ ಪತ್ನಿ ಆಂಟೋನೆಲಾ ರೊಕುಜೊ ಅವರು ಟಿಶ್ಯೂ ಪೇಪರ್‍ ನ್ನು ನೀಡಿದ್ದರು. ಆ ಟಿಶ್ಯೂನಲ್ಲಿ ಮೆಸ್ಸಿ ಕಣ್ಣೀರು ಒರೆಸಿಕೊಂಡು ಅಲ್ಲೇ ಕೆಳಕ್ಕೆ ಹಾಕಿದ್ದರು. ಸುದ್ದಿಗೋಷ್ಠಿ ಬಳಿಕ ಆ ಟಿಶ್ಯೂ ಪೇಪರ್‍ ನ್ನು ವ್ಯಕ್ತಿಯೊಬ್ಬರು ಎತ್ತಿಕೊಂಡು ಇದೀಗ ಇ-ಕಾಮರ್ಸ್ ವೆಬ್‍ಸೈಟ್ ಒಂದರಲ್ಲಿ ಸುಮಾರು 7.43 ಕೋಟಿಗೆ ಹರಾಜಿಗಿಟ್ಟಿದ್ದಾರೆ. ಇದನ್ನೂ ಓದಿ: ಕ್ರೀಡಾ ಇತಿಹಾಸದಲ್ಲಿ ಅತಿ ದೊಡ್ಡ ಡೀಲ್‌ ಲೀಕ್‌ – 4,900 ಕೋಟಿಗೆ ಸಹಿ ಹಾಕಿದ್ದ ಮೆಸ್ಸಿ

    ಹರಾಜಿಗಿಟ್ಟ ವ್ಯಕ್ತಿ, ಈ ಟಿಶ್ಯೂನಲ್ಲಿ ಮೆಸ್ಸಿ ಅವರ ಜೆನೆಟಿಕ್ ಡಿಎನ್‍ಎ ಇದೆ. ಮೆಸ್ಸಿ ಅವರ ಕ್ಲೋನ್ ಸಿದ್ಧಪಡಿಸಲು ಇದು ಉಪಯೋಗವಾಗಬಹುದೆಂದು ಮಾಹಿತಿ ಹಂಚಿಕೊಂಡಿದ್ದಾರೆ. ಈ ಟಿಶ್ಯೂವನ್ನು ಯಾರು ಖರೀದಿಸುತ್ತಾರೆ ಎಂಬ ಕುತೂಹಲ ಮನೆಮಾಡಿದೆ. ಇದನ್ನೂ ಓದಿ: ಟಿ20 ವರ್ಲ್ಡ್ ಕಪ್ – ಅಕ್ಟೋಬರ್ 24ರಂದು ಭಾರತ Vs ಪಾಕಿಸ್ತಾನ

  • ಕ್ರೀಡಾ ಇತಿಹಾಸದಲ್ಲಿ ಅತಿ ದೊಡ್ಡ ಡೀಲ್‌ ಲೀಕ್‌ – 4,900 ಕೋಟಿಗೆ ಸಹಿ ಹಾಕಿದ್ದ ಮೆಸ್ಸಿ

    ಕ್ರೀಡಾ ಇತಿಹಾಸದಲ್ಲಿ ಅತಿ ದೊಡ್ಡ ಡೀಲ್‌ ಲೀಕ್‌ – 4,900 ಕೋಟಿಗೆ ಸಹಿ ಹಾಕಿದ್ದ ಮೆಸ್ಸಿ

    ಮ್ಯಾಡ್ರಿಡ್‌: ಅರ್ಜೆಂಟೀನಾದ ಖ್ಯಾತ ಫುಟ್‌ಬಾಲ್‌ ಆಟಗಾರ ಲಿಯೋನಲ್‌ ಮೆಸ್ಸಿ ಕ್ರೀಡಾ ಇತಿಹಾಸದಲ್ಲಿ ಅತಿ ದೊಡ್ಡ ಒಪ್ಪಂದ ಮಾಡಿಕೊಂಡ ವಿಚಾರ ಈಗ ಬಯಲಾಗಿದೆ.

    ಸ್ಪೇನ್‌ ದೇಶದ ಖ್ಯಾತ ಫುಟ್‌ಬಾಲ್‌ ತಂಡ ಬಾರ್ಸಿಲೋನಾ ಪರವಾಗಿ ಮೆಸ್ಸಿ ಆಡುತ್ತಿದ್ದಾರೆ. ಈ ತಂಡದ ಪರ ಆಡಲು 33 ವರ್ಷದ ಮೆಸ್ಸಿ 55,52,37,619 ಯುರೋ(ಅಂದಾಜು 4,900 ಕೋಟಿ ರೂ.) ಒಪ್ಪಂದ ಮಾಡಿಕೊಂಡ ವಿಚಾರ ಈಗ ಬೆಳಕಿಗೆ ಬಂದಿದೆ.

    ಸ್ಪೇನ್‌ನಲ್ಲಿರುವ ದಿನ ಪತ್ರಿಕೆ ʼಎಲ್‌ ಮುಂಡೋʼ ತನ್ನ ಮುಖಪುಟದಲ್ಲಿ ಈ ಸುದ್ದಿಯನ್ನು ಪ್ರಕಟಿಸಿದ್ದು ವಿಶ್ವಾದ್ಯಂತ ಟ್ರೆಂಡಿಂಗ್‌ ಟಾಪಿಕ್‌ ಆಗಿದೆ. ಮೆಸ್ಸಿ 2017-2021ರ ನಾಲ್ಕು ಆವೃತ್ತಿಯ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ವಿವಿಧ ಖಚಿತ ಮೂಲಗಳಿಂದ ಕಲೆ ಹಾಕಿ ಈ ವರದಿಯನ್ನು ಪ್ರಕಟಿಸಲಾಗಿದೆ ಎಂದು ಪತ್ರಿಕೆ ತಿಳಿಸಿದೆ.

    ಈ ಒಪ್ಪಂದ ಪತ್ರ 30 ಪುಟಗಳಿದ್ದು, 2017ರಲ್ಲಿ ಮೆಸ್ಸಿ ಈ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ತನ್ನ ಗಳಿಕೆಯಲ್ಲಿನ ಅರ್ಧದಷ್ಟು ಹಣವನ್ನು ಮೆಸ್ಸಿ ತೆರಿಗೆ ರೂಪದಲ್ಲಿ ಸ್ಪೇನ್‌ನಲ್ಲಿ ಪಾವತಿಸಬೇಕಾಗುತ್ತದೆ. ಈ ಪೈಕಿ138 ದಶಲಕ್ಷ ಯುರೋ ಪ್ರತಿ ಸೀಸನ್‌ಗೆ ಸಿಕ್ಕಿದರೆ, ಒಪ್ಪಂದ ಸ್ವೀಕರಿಸಿದ್ದಕ್ಕೆ 11,52,25,000 ಯುರೋ ನವೀಕರಣ ಶುಲ್ಕ, 9 7,79,29,955 ಲಾಯಲ್ಟಿ ಬೋನಸ್ ಸಿಕ್ಕಿದೆ.

    ಈ ಒಪ್ಪಂದ ಮುಗಿಯಲು ಇನ್ನು 5 ತಿಂಗಳು ಬಾಕಿ ಇದ್ದು ಮೆಸ್ಸಿ ಈಗಾಗಲೇ 51,15,40,545 ಯುರೋ(ಅಂದಾಜು 45,26,58,86,151 ಕೋಟಿ ರೂ.) ಗಳಿಕೆ ಮಾಡಿದ್ದಾರೆ ಎಂದು ವರದಿಯಾಗಿದೆ. ಕೋವಿಡ್‌ 19ನಿಂದ ಬಾರ್ಸಿಲೋನಾ ಕ್ಲಬ್‌ ಭಾರೀ ನಷ್ಟಕ್ಕೆ ತುತ್ತಾಗಿದೆ. ಕ್ಲಬ್‌ ದಶಲಕ್ಷ ಯುರೋ ನಷ್ಟದಲ್ಲಿದ್ದು, ಆಟಗಾರರ ಸಂಬಳ ಪಾವತಿಸಲು ಹೆಣಗಾಡುತ್ತಿದೆ.

  • ಫೋರ್ಬ್ಸ್  ಪಟ್ಟಿಯ ಟಾಪ್ 100ರಲ್ಲಿ ವಿರಾಟ್ ಏಕೈಕ ಕ್ರಿಕೆಟರ್

    ಫೋರ್ಬ್ಸ್  ಪಟ್ಟಿಯ ಟಾಪ್ 100ರಲ್ಲಿ ವಿರಾಟ್ ಏಕೈಕ ಕ್ರಿಕೆಟರ್

    ನವದೆಹಲಿ: ಫೋರ್ಬ್ಸ್ ನಿಯತಕಾಲಿಕೆ ವಿಶ್ವದ ಅತಿ ಹೆಚ್ಚು ಗಳಿಕೆಯ ಆಟಗಾರರ ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಿದೆ. ಇದರಲ್ಲಿ ಭಾರತೀಯ ಆಟಗಾರರ ಪೈಕಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಾತ್ರ ಟಾಪ್-100 ಸ್ಥಾನದಲ್ಲಿದ್ದಾರೆ. ಅಷ್ಟೇ ಅಲ್ಲದೆ ಟಾಪ್ 100ರಲ್ಲಿ ಗುರುತಿಸಿಕೊಂಡ ಏಕೈಕ ಕ್ರಿಕೆಟರ್ ಎಂಬ ಹೆಗ್ಗಳಿಕೆಗೆ ವಿರಾಟ್ ಪಾತ್ರರಾಗಿದ್ದಾರೆ.

    ವಿರಾಟ್ ಕೊಹ್ಲಿ ಫೋರ್ಬ್ಸ್ ನಿಯತಕಾಲಿಕೆ ಬಿಡುಗಡೆ ಮಾಡಿದ ವಿಶ್ವದ ಅತಿ ಹೆಚ್ಚು ಗಳಿಕೆಯ ಟಾಪ್-100 ಆಟಗಾರರಲ್ಲಿ 66ನೇ ಸ್ಥಾನದಲ್ಲಿದ್ದಾರೆ. ಅವರು 2019-2020ರಲ್ಲಿ ಮಧ್ಯದಲ್ಲಿ 26 ಮಿಲಿಯನ್ ಡಾಲರ್ (ಸುಮಾರು 196 ಕೋಟಿ ರೂ.) ಗಳಿಸಿದ್ದಾರೆ ಎಂದು ತಿಳಿಸಲಾಗಿದೆ.

    ಫೋರ್ಬ್ಸ್ ಪಟ್ಟಿಯಲ್ಲಿ ಸ್ವಿಸ್ ಟೆನಿಸ್ ತಾರೆ ರೋಜರ್ ಫೆಡರರ್ ಅವರು ಫುಟ್ಬಾಲ್ ತಾರೆ ಪೋರ್ಚುಗಲ್‍ನ ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ ಅವರನ್ನ ಹಿಂದಿಕ್ಕಿದ್ದಾರೆ. ಫೆಡರರ್ 106.3 ಮಿಲಿಯನ್ ಡಾಲರ್ (ಸುಮಾರು 802 ಕೋಟಿ ರೂ.) ಗಳಿಕೆಯೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ನಂತರದ ಸ್ಥಾನದಲ್ಲಿರುವ ಕ್ರಿಸ್ಟಿಯಾನೊ ರೊನಾಲ್ಡೊ 105 ಮಿಲಿಯನ್ ಡಾಲರ್ (ಸುಮಾರು 793 ಕೋಟಿ ರೂ.) ಹಾಗೂ ಲಿಯೋನೆಲ್ ಮೆಸ್ಸಿ 104 ಮಿಲಿಯನ್ ಡಾಲರ್ (ಸುಮಾರು 785 ಕೋಟಿ ರೂ.) ಗಳಿಸಿದ್ದಾರೆ.

    ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ರೊನಾಲ್ಡೊ ಕಳೆದ ವರ್ಷ 105 ಮಿಲಿಯನ್ ಡಾಲರ್ (ಸುಮಾರು 793 ಕೋಟಿ ರೂ.) ಗಳಿಸಿದ್ದರು. ಅದೇ ಸಮಯದಲ್ಲಿ, ಮೆಸ್ಸಿ ಪೋರ್ಚುಗೀಸ್ ಫುಟ್ಬಾಲ್ ಆಟಗಾರ ರೊನಾಲ್ಡೊಗಿಂತ ಕೇವಲ 8 ಕೋಟಿ ಕಡಿಮೆ ಗಳಿಸಿದ್ದರು. ಈ ಬಾರಿಯ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿರುವ ಬ್ರೆಜಿಲ್ ಫುಟ್ಬಾಲ್ ಆಟಗಾರ ನೇಮರ್ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದು 5 95.5 ಮಿಲಿಯನ್ (ಸುಮಾರು 721 ಕೋಟಿ ರೂ.) ಗಳಿಸಿದ್ದಾರೆ.

    ಫೆಡರರ್ ಸಾಧನೆ:
    ಹೆಚ್ಚು 20 ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆದ್ದ ಫೆಡರರ್, ಬ್ರಾಂಡ್ ಅನುಮೋದನೆಯಿಂದ ಸುಮಾರು 7 ಬಿಲಿಯನ್ ಡಾಲರ್ ಗಳಿಸಿದ್ದಾರೆ. ಅವರು ಕಳೆದ ವರ್ಷ ನಾಲ್ಕನೇ ಸ್ಥಾನದಲ್ಲಿದ್ದರು. ಫೆಡರರ್ ಮೊದಲ ಸ್ಥಾನಕ್ಕೆ ಜಿಗಿದು ಈ ಸಾಧನೆ ಮಾಡಿದ ಮೊದಲ ಟೆನಿಸ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ಯಾರು, ಗಳಿಕೆ ಎಷ್ಟು?:
    1. ರೋಜರ್ ಫೆಡರರ್- ಸ್ವಿಟ್ಜರ್ಲೆಂಡ್- ಟೆನಿಸ್- 802 ಕೋಟಿ ರೂ.
    2. ಕ್ರಿಸ್ಟಿಯಾನೊ ರೊನಾಲ್ಡೊ- ಪೋರ್ಚುಗಲ್- ಫುಟ್ಬಾಲ್- 793 ಕೋಟಿ ರೂ.
    3. ಲಿಯೋನೆಲ್ ಮೆಸ್ಸಿ- ಅರ್ಜೆಂಟೀನಾ- ಫುಟ್ಬಾಲ್- 785 ಕೋಟಿ ರೂ.
    4. ನೇಮರ್- ಬ್ರೆಜಿಲ್- ಫುಟ್ಬಾಲ್- 721 ಕೋಟಿ ರೂ.
    5. ಲೆಬೋರ್ನ್ ಜೇಮ್ಸ್- ಅಮೆರಿಕ- ಬ್ಯಾಸ್ಕೆಟ್‍ಬಾಲ್- 453 ಕೋಟಿ ರೂ.

    ಮಹಿಳೆಯರಲ್ಲಿ ನವೋಮಿ ಒಸಾಕಾಗೆ ಅಗ್ರಸ್ಥಾನ:
    ಮಹಿಳೆಯರಲ್ಲಿ ಜಪಾನ್‍ನ ಟೆನಿಸ್ ತಾರೆ ನವೋಮಿ ಒಸಾಕಾ ವಿಶ್ವದ ಅತಿ ಹೆಚ್ಚು ಹಣ ಗಳಿಸಿದ ಆಟಗಾರ್ತಿಯಾಗಿದ್ದಾರೆ. ಅವರು ಸುಮಾರು 284 ಕೋಟಿ ರೂ. ಗಳಿಸಿದ್ದಾರೆ. ಒಸಾಕಾ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

    ಒಟ್ಟಾರೆ ಅತಿ ಹೆಚ್ಚು ಗಳಿಸಿದ ಕ್ರೀಡಾಪಟುಗಳ ಪಟ್ಟಿಯಲ್ಲಿ ಒಸಾಕಾ 29ನೇ ಸ್ಥಾನದಲ್ಲಿದ್ದಾರೆ. ಸೆರೆನಾ ಈ ಪಟ್ಟಿಯಲ್ಲಿ 33ನೇ ಸ್ಥಾನದಲ್ಲಿದ್ದಾರೆ. ಒಸಾಕಾ ಸತತ ಎರಡು ಗ್ರ್ಯಾಂಡ್ ಸ್ಲ್ಯಾಮ್‍ಗಳನ್ನು ಗೆದ್ದಿದ್ದಾರೆ. ಅವರು 2018ರಲ್ಲಿ ಯುಎಸ್ ಓಪನ್ ಮತ್ತು 2019ರಲ್ಲಿ ಆಸ್ಟ್ರೇಲಿಯನ್ ಓಪನ್ ಗೆದಿದ್ದರು. ಅದೇ ಸಮಯದಲ್ಲಿ ಸೆರೆನಾ 23 ಗ್ರ್ಯಾಂಡ್ ಸ್ಲ್ಯಾಮ್‍ಗಳನ್ನು ಗೆದ್ದಿದ್ದಾರೆ.

  • ಅತೀ ಹೆಚ್ಚು ಸಂಭಾವನೆ ಪಡೆಯುವ ಆಟಗಾರರ ಪಟ್ಟಿಯಲ್ಲಿ ಕೊಹ್ಲಿಗೆ 100ನೇ ಸ್ಥಾನ

    ಅತೀ ಹೆಚ್ಚು ಸಂಭಾವನೆ ಪಡೆಯುವ ಆಟಗಾರರ ಪಟ್ಟಿಯಲ್ಲಿ ಕೊಹ್ಲಿಗೆ 100ನೇ ಸ್ಥಾನ

    ನವದೆಹಲಿ: 2019ರ ವಿಶ್ವದ ಅತೀ ಹೆಚ್ಚು ಸಂಭಾವನೆ ಪಡೆಯುವ ಕ್ರೀಡಾಪಟುಗಳ ಪಟ್ಟಿಯನ್ನು ಫೋರ್ಬ್ಸ್ ಬಿಡುಗಡೆ ಮಾಡಿದ್ದು ಇದರಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸ್ಥಾನ ಪಡೆದಿದ್ದಾರೆ. ಈ ಮೂಲಕ ಸತತ ಎರಡನೇ ಬಾರಿಗೆ ಫೋರ್ಬ್ಸ್ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

    ಕಳೆದ 2018 ರಲ್ಲಿ ಫೋರ್ಬ್ಸ್ ಬಿಡುಗಡೆ ಮಾಡಿದ್ದ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅವರು 83 ನೇ ಸ್ಥಾನ ಪಡೆದುಕೊಂಡಿದ್ದರು. ಆದರೆ ಈ ವರ್ಷ ಕೊಹ್ಲಿ ಅವರು 17 ಸ್ಥಾನ ಇಳಿದು 100ನೇ ಸ್ಥಾನ ಪಡೆದುಕೊಂಡಿದ್ದಾರೆ. ಈ ಮೂಲಕ ಫೋರ್ಬ್ಸ್ ಪಟ್ಟಿಯಲ್ಲಿ ಕಾಣಿಸಿಕೊಂಡ ಏಕೈಕ ಭಾರತೀಯ ಆಟಗಾರ ಆಗಿದ್ದಾರೆ.

    ಈ ವರ್ಷ ಕೊಹ್ಲಿ ಸಂಭಾವನೆ ರೂಪದಲ್ಲಿ 25 ಮಿಲಿಯನ್ ಡಾಲರ್ (174.27 ಕೋಟಿ) ಪಡೆದಿದ್ದಾರೆ. ಇದರಲ್ಲಿ 21 ಮಿಲಿಯನ್ ಡಾಲರ್ (146.39 ಕೋಟಿ) ಜಾಹೀರಾತಿನಿಂದ ಪಡೆದಿದ್ದಾರೆ. ಇನ್ನುಳಿದ 4 ಮಿಲಿಯನ್ ಡಾಲರ್ (27.88 ಕೋಟಿ) ಹಣವನ್ನು ಕ್ರಿಕೆಟ್ ಸಂಭಾವನೆಯಿಂದ ಪಡೆದುಕೊಂಡಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಕೊಹ್ಲಿ ಈ ವರ್ಷ ಆದಾಯ 6.97 ಕೋಟಿ ಜಾಸ್ತಿಯಾಗಿದೆ.

    ಇನ್ನೂ ಈ ಪಟ್ಟಿಯ ಮೊದಲ ಸ್ಥಾನದಲ್ಲಿ ಬಾರ್ಸಿಲೋನಾದ ಫುಟ್‍ಬಾಲ್ ಆಟಗಾರ ಲಿಯೋನಲ್ ಮೆಸ್ಸಿ ಇದ್ದಾರೆ. ಪೋರ್ಚುಗಲ್‍ನ ಫುಟ್‍ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ಅವರು ಎರಡನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

    ಫೋರ್ಬ್ಸ್ ನ ಟಾಪ್ 5  ಶ್ರೀಮಂತ ಆಟಗಾರರ ಪಟ್ಟಿ

    1. ಲಿಯೋನಲ್ ಮೆಸ್ಸಿ 127 ಮಿಲಿಯನ್ ಡಾಲರ್ (880.44 ಕೋಟಿ)
    2. ಕ್ರಿಸ್ಟಿಯಾನೋ ರೊನಾಲ್ಡೋ 109 ಮಿಲಿಯನ್ ಡಾಲರ್ ( 755.64 ಕೋಟಿ)
    3. ನೇಮ್ಮಾರ್ 105 ಮಿಲಿಯನ್ ಡಾಲರ್ (727.91 ಕೋಟಿ)
    4. ಅಲ್ವೆರೆಜ್ 94 ಮಿಲಿಯನ್ ಡಾಲರ್ (651.65 ಕೋಟಿ)
    5. ರೋಜರ್ ಫೆಡರರ್ 93.4 ಮಿಲಿಯನ್ ಡಾಲರ್ (647.77 ಕೋಟಿ)

  • ಅರ್ಜೆಂಟೀನಾ ಸೋತಿದ್ದಕ್ಕೆ ಕೇರಳದ ಮೆಸ್ಸಿ ಅಭಿಮಾನಿ ಆತ್ಮಹತ್ಯೆ!

    ಅರ್ಜೆಂಟೀನಾ ಸೋತಿದ್ದಕ್ಕೆ ಕೇರಳದ ಮೆಸ್ಸಿ ಅಭಿಮಾನಿ ಆತ್ಮಹತ್ಯೆ!

    ತಿರುವನಂತಪುರಂ: ತನ್ನ ಮೆಚ್ಚಿನ ಆಟಗಾರನ ತಂಡ ಸೋತಿದ್ದಕ್ಕೆ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೇರಳದ ಕೊಟ್ಟಾಯಂನಲ್ಲಿ ನಡೆದಿದೆ.

    ಕೇರಳದ ಕೊಟ್ಟಾಯಂನ ದಿನು ಜೋಸೆಫ್ (30) ಆತ್ಮಹತ್ಯೆ ಮಾಡಿಕೊಂಡ ಯುವಕ. ಅರ್ಜೆಂಟೀನಾ ತಂಡದ ನಾಯಕ ಲಿಯೊನೆಲ್ ಮೆಸ್ಸಿ ದಿನು ಜೋಸೆಫ್‍ನ ಮೆಚ್ಚಿನ ಆಟಗಾರ. ಅಲ್ಲದೇ ದಿನು ಅರ್ಜೆಂಟೀನಾ ತಂಡವನ್ನು ಅಷ್ಟೇ ಬೆಂಬಲಿಸುತ್ತಿದ್ದ.

    2018ರ ಫಿಫಾ ಕಪ್ ಪಂದ್ಯ ಪ್ರಾರಂಭವಾಗಿದ್ದು, ಫುಟ್ ಬಾಲ್ ಪ್ರಿಯರಿಗೆ ದಿನವೂ ಹಬ್ಬ. ಆದರೆ ಜೂನ್ 22ರಂದು ಅರ್ಜೆಂಟೀನಾ ಕ್ರೊವೇಷ್ಯಾ ಎದುರು 3-0 ಗೋಲುಗಳ ಅಂತರಲ್ಲಿ ಸೋತಿತ್ತು. ಇದರಿಂದಾಗಿ ಅರ್ಜೆಂಟೀನಾ ಫಿಫಾ ಕಪ್ 2018ರ ಪಂದ್ಯದಿಂದ ಹೊರ ಬಿಳ್ಳುವ ಸಾಧ್ಯತೆ ಇದೆ ಎನ್ನುವುದನ್ನು ಅರಿತ ದಿನು ಜೋಸೆಫ್ ಆಘಾತಕ್ಕೆ ಒಳಗಾಗಿದ್ದ. ಅಂದು ರಾತ್ರಿ ಮನೆ ಬಿಟ್ಟ ದಿನು ಮತ್ತೆ ಮನೆಯ ಕಡೆಗೆ ಬಂದಿರಲಿಲ್ಲ. ಇದರಿಂದಾಗಿ ದಿನು ಪತ್ತೆಗಾಗಿ ಪೊಲೀಸರು ಹಾಗೂ ಮನೆಯ ಸದಸ್ಯರು ಹುಡುಕಾಟ ಪ್ರಾರಂಭಿಸಿದ್ದರು. ಆದರೆ ಭಾನುವಾರ ದಿನು ಮೃತ ದೇಹ ಸೇತುವೆ ಬಳಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.

  • ಅಂತರಾಷ್ಟ್ರೀಯ ಫುಟ್ಬಾಲ್ ನಲ್ಲಿ ಮೆಸ್ಸಿ ಸಾಧನೆ ಸರಿಗಟ್ಟಿದ ಸುನಿಲ್ ಚೆಟ್ರಿ

    ಅಂತರಾಷ್ಟ್ರೀಯ ಫುಟ್ಬಾಲ್ ನಲ್ಲಿ ಮೆಸ್ಸಿ ಸಾಧನೆ ಸರಿಗಟ್ಟಿದ ಸುನಿಲ್ ಚೆಟ್ರಿ

    ಮುಂಬೈ: ಭಾರತ ಫುಟ್ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿ ಅಂತರಾಷ್ಟ್ರೀಯ ಫುಟ್ಬಾಲ್ ನಲ್ಲಿ ಅತಿಹೆಚ್ಚು ಗೋಲ್ ಬಾರಿಸಿ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ಭಾರತ ಹಾಗೂ ಕೀನ್ಯಾ ಗಳ ಮಧ್ಯೆ ನಡೆದ ಇಂಟರ್ ಕಾಂಟಿನೆಂಟಲ್ ಅಂತರಾಷ್ಟ್ರೀಯ ಫುಟ್ಬಾಲ್ ಫೈನಲ್ ಪಂದ್ಯದಲ್ಲಿ ಸುೀಲ್ ಚೆಟ್ರಿ ಎರಡು ಗೋಲುಗಳನ್ನು ಬಾರಿಸುವ ಮೂಲಕ ಭಾರತ ತಂಡದ ವಿಜಯಕ್ಕೆ ಕಾರಣಾದರು. ಅಲ್ಲದೇ ಈ ಪಂದ್ಯದಲ್ಲಿ ಚೆಟ್ರಿ ಬಾರಿಸಿದ ಎರಡು ಗೋಲುಗಳಿಂದ ಅರ್ಜಂಟಿನಾ ತಂಡದ ಲಿಯೋನಲ್ ಮೆಸ್ಸಿ ಅವರ ಗೋಲುಗಳಿಗೆ ಸಮನಾಗಿದ್ದು ಸಕ್ರಿಯ ಆಟಗಾರರ ಪೈಕಿ ಎರಡನೇ ಅತಿಹೆಚ್ಚು ಗೋಲು ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ಅಂತರಾಷ್ಟ್ರೀಯ ಫುಟ್ಬಾಲ್ ಪಂದ್ಯಗಳಲ್ಲಿ ಪೋರ್ಚುಗಲ್ ನ ಕ್ರಿಸ್ಟಿಯಾನೊ ರೊನಾಲ್ಡೊ ಸಕ್ರಿಯ ಆಟಗಾರರ ಪೈಕಿ ಅಗ್ರ ಸ್ಥಾನದಲ್ಲಿದ್ದು 150 ಪಂದ್ಯಗಳನ್ನಾಡಿ 81 ಗೋಲುಗಳನ್ನು ಬಾರಿಸಿದ್ದಾರೆ. ಸುನೀಲ್ ಚೆಟ್ರಿ 102 ಪಂದ್ಯಗಳನ್ನಾಡಿ ಈ ಸಾಧನೆ ಮಾಡಿದ್ದರೆ, ಲಿಯೋನಲ್ ಮೆಸ್ಸಿ 124 ಪಂದ್ಯಗಳನ್ನಾಡಿ ಈ ಗೋಲುಗಳಿಗೆ ಸಮನಾದ ಗೋಲು ಬಾರಿಸಿದ್ದಾರೆ. ಈ ಮೂಲಕ ಗೋಲ್ ಸ್ಕೋರ್ ಪಟ್ಟಿಯಲ್ಲಿ 21 ಸ್ಥಾನದಲ್ಲಿದ್ದಾರೆ.

    ಚೆಟ್ರಿ ಪಂದ್ಯಕ್ಕೂ ಮೊದಲು ಅಭಿಮಾನಿಗಳಿಗೆ ಪ್ರೋತ್ಸಾಹ ನೀಡುವಂತೆ ಟ್ವಿಟ್ಟರ್ ನಲ್ಲಿ ಮನವಿ ಮಾಡಿದ್ದರು. ಅಲ್ಲದೇ ಮೆಸ್ಸಿ ಗೋಲುಗಳಿಗೆ ಹೋಲಿಕೆ ಮಾಡಿ ಪ್ರೋತ್ಸಾಹಿಸಿದ್ದ ತಮ್ಮ ಅಭಿಮಾನಿಗಳಿಗೆ ಟ್ವಿಟ್ಟರ್ ಮೂಲಕ ಧನ್ಯವಾದ ಹೇಳಿದ್ದಾರೆ.

    ಇದಕ್ಕೆ ಪ್ರತಿಕ್ರಿಯೆಸಿದ ಚಟ್ರಿ ನಾನು ಮೆಸ್ಸಿಯವರಿಗೆ ಸಮನಲ್ಲ. ಅವರೊಂದಿಗೆ ಯಾವುದೇ ಹೋಲಿಕೆ ಇಲ್ಲ. ನಾನೊಬ್ಬ ಅವರ ಅಭಿಮಾನಿ. ದೇಶದ ಗೆಲುವಿಗಾಗಿ ಗೋಲು ಬಾರಿಸುತ್ತಿರುವುದು ಸಂತೋಷ ತಂದಿದೆ. ನಾವಿನ್ನೂ ಬೆಳೆಯಬೇಕಿದೆ. ಇದು ಕೇವಲ ಪ್ರಾರಂಭವಷ್ಟೆ. ನಾವಿನ್ನೂ ಸಾಕಷ್ಟು ಟ್ರೋಫಿಗಳನ್ನು ದೇಶಕ್ಕಾಗಿ ಗೆಲ್ಲಬೇಕಿದೆ. ಮುಂಬರುವ 2019ರ ಏಷ್ಯಾ ಕಪ್ ಗೆ ತಯಾರಾಗಬೇಕಿದೆ ಎಂದರು.

    ದೇಶದ ಫುಟ್ಬಾಲ್ ತಂಡ ಸ್ಟಿಫನ್ ಕಾನ್ಸಟಂಟೈನ್ ನೇತೃತ್ವದಲ್ಲಿ ಪಿಫಾ ಶ್ರೇಣಿಯಲ್ಲಿ 166ನೇ ಸ್ಥಾನದಿಂದ 97ನೇ ಸ್ಥಾನಕ್ಕೇರಿದೆ. ಆದರೆ ಭಾರತದಲ್ಲಿ ಕ್ರಿಕೆಟ್ ಪ್ರಬಲವಾಗಿದೆ ಹಾಗಾಗಿ ಅವರು ಮೊದಲ ಸ್ಥಾನದಲ್ಲಿದ್ದಾರೆ ಎಂದರು.

    ಚೆಟ್ರಿ ಭಾರತೀಯ ಫುಟ್ಬಾಲ್ ಗೆ ಪ್ರೋತ್ಸಾಹ ನೀಡಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಕೇಳಿಕೊಂಡಿದ್ದರು. ಭಾರತೀಯ ಕ್ರಿಕೆಟ್ ಸ್ಟಾರ್ ಗಳಾದ ಸಚಿನ್ ಹಾಗೂ ವಿರಾಟ್ ಕೊಹ್ಲಿ ಚೆಟ್ರಿಗೆ ಪ್ರೋತ್ಸಾಹಿಸಿದ್ದಾರೆ. ಅಲ್ಲದೇ 2569 ಜನ ಅಭಿಮಾನಿಗಳು ಜೂನ್ 1 ರಂದು ಪ್ರಾರಂಭಿಕ ಪಂದ್ಯಕ್ಕೆ ಪ್ರೋತ್ಸಾಹ ನೀಡಿದ್ದರು ಎನ್ನಲಾಗಿದೆ.

  • ಖ್ಯಾತ ಫುಟ್ಬಾಲ್ ಆಟಗಾರ ಲಿಯೊನೆಲ್ ಮೆಸ್ಸಿಗೆ 21 ತಿಂಗಳ ಜೈಲು ಶಿಕ್ಷೆ

    ಖ್ಯಾತ ಫುಟ್ಬಾಲ್ ಆಟಗಾರ ಲಿಯೊನೆಲ್ ಮೆಸ್ಸಿಗೆ 21 ತಿಂಗಳ ಜೈಲು ಶಿಕ್ಷೆ

    ಮ್ಯಾಡ್ರಿಡ್: ತೆರಿಗೆ ವಂಚನೆ ಪ್ರಕರಣದಲ್ಲಿ ಖ್ಯಾತ ಫುಟ್ಪಾಲ್ ಆಟಗಾರ ಲಿಯೊನೆಲ್ ಮೆಸ್ಸಿ ಅವರ ಮೇಲ್ಮನವಿ ಅರ್ಜಿಯನ್ನು ಸ್ಪೇನ್ ಸುಪ್ರೀಂ ಕೋರ್ಟ್ ವಜಾಗೊಳಿಸಿ, ಸ್ಥಳೀಯ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದಿದೆ.

    ತೆರಿಗೆ ವಂಚನೆ ಪ್ರಕರಣದ ಸಂಬಂಧ ಅರ್ಜೆಂಟೀನಾದ ಆಟಗಾರ ಮೆಸ್ಸಿ ಹಾಗೂ ತಂಜೆ ಜಾರ್ಜ್ ಅವರಿಗೆ ಸ್ಥಳೀಯ ನ್ಯಾಯಾಲಯ 2016ರ ಜುಲೈ ನಲ್ಲಿ  21 ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ಮೆಸ್ಸಿ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

    ಮೆಸ್ಸಿ ಮತ್ತು ಜಾರ್ಜ್ 4.1 ಮಿಲಿಯನ್ ಯುರೋ(ಅಂದಾಜು 29.70 ಕೋಟಿ ರೂ) ಅಧಿಕ ಮೊತ್ತದ ತೆರಿಗೆಯನ್ನು ಸ್ಪೇನಿನಲ್ಲಿ ಬಾಕಿ ಉಳಿಸಿಕೊಂಡಿದ್ದ ಪ್ರಕರಣದಲ್ಲಿ ಈಗ ಶಿಕ್ಷೆಯಾಗಿದೆ.

    ಜೈಲಿಗೆ ಹೋಗಬೇಕಿಲ್ಲ: ದಂಡ ಪಾವತಿಸುವ ಮೂಲಕ ಇವರಿಬ್ಬರಿಗೂ ಜೈಲು ಶಿಕ್ಷೆಯನ್ನು ತಪ್ಪಿಸಿಕೊಳ್ಳುವ ಅವಕಾಶವಿದೆ. 2 ವರ್ಷಕ್ಕಿಂತ ಕಡಿಮೆ ಅವಧಿಯ ಶಿಕ್ಷೆಯ ಆದೇಶಕ್ಕೆ ಸ್ಪೇನ್ ದೇಶದಲ್ಲಿ ಈ ವಿಶೇಷ ಸೌಲಭ್ಯವಿದೆ. ಕೋರ್ಟ್ ಆದೇಶದಂತೆ ಮೆಸ್ಸಿ ಅವರು 2 ಮಿಲಿಯನ್ ಯುರೋ(ಅಂದಾಜು 14.48 ಕೋಟಿ ರೂ.), ತಂದೆ 1.5 ಮಿಲಿಯನ್ ಯುರೋ(ಅಂದಾಜು 10.80 ಕೋಟಿ ರೂ.) ಪಾವತಿಸಿ ಜೈಲು ಶಿಕ್ಷೆಯನ್ನು ತಪ್ಪಿಸಿಕೊಳ್ಳಬಹುದಾಗಿದೆ.

    4.1 ಮಿಲಿಯನ್ ಯುರೋವನ್ನು 2007 ರಿಂದ 2009ರ ಅವಧಿಯಲ್ಲಿ ಮೆಸ್ಸಿ ಹಾಗೂ ಅವರ ತಂದೆಯವರು ಬೆಲಿಜ್ ಮತ್ತು ಉರುಗ್ವೆಯಲ್ಲಿ ಅಡಗಿಸಿಟ್ಟಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ಅಂದು ಈ ಆರೋಪಕ್ಕೆ ಸ್ಪಷ್ಟನೆ ನೀಡಿದ್ದ ಮೆಸ್ಸಿ, ನನಗೆ ಆರ್ಥಿಕ ವ್ಯವಹಾರಗಳು ತಿಳಿದಿಲ್ಲ, ಫುಟ್ಬಾಲ್ ಆಟ ಅಷ್ಟೆ ತಿಳಿದಿದೆ ಎಂದು ಪ್ರತಿಕ್ರಿಯಿಸಿದ್ದರು.