Tag: Lionel Messi

  • ನವೆಂಬರ್‌ನಲ್ಲಿ ಕೇರಳಕ್ಕೆ ಭೇಟಿ ನೀಡಲಿದ್ದಾರೆ ಅರ್ಜೆಂಟಿನಾದ ಫುಟ್‌ಬಾಲ್ ಆಟಗಾರ ಮೆಸ್ಸಿ

    ನವೆಂಬರ್‌ನಲ್ಲಿ ಕೇರಳಕ್ಕೆ ಭೇಟಿ ನೀಡಲಿದ್ದಾರೆ ಅರ್ಜೆಂಟಿನಾದ ಫುಟ್‌ಬಾಲ್ ಆಟಗಾರ ಮೆಸ್ಸಿ

    ಚೆನ್ನೈ: ಫುಟ್‌ಬಾಲ್ (Football) ತಾರೆ, ಅರ್ಜೆಂಟಿನಾದ (Argentina) ಆಟಗಾರ ಲಿಯೋನೆಲ್ ಮೆಸ್ಸಿ (Lionel Messi) ಕೇರಳಕ್ಕೆ (Kerala) ಭೇಟಿ ಕನ್ಫರ್ಮ್ ಆಗಿದ್ದು, ಇದೇ ನವೆಂಬರ್‌ನಲ್ಲಿ ಭೇಟಿ ನೀಡಲಿದ್ದಾರೆ ಎಂದು ಕೇರಳದ ಕ್ರೀಡಾ ಸಚಿವ ವಿ. ಅಬ್ದುರ್ ಹಿಮಾನ್ ತಿಳಿಸಿದ್ದಾರೆ.

    ಈ ಕುರಿತು ಮಾತನಾಡಿದ ಅವರು, ಕೇರಳದಲ್ಲಿ ಆಯೋಜನೆಗೊಳ್ಳಲಿರುವ ಸೌಹಾರ್ದ ಪಂದ್ಯದಲ್ಲಿ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡ ಆಡಲು ಸಜ್ಜಾಗಿದೆ. ಈ ಪಂದ್ಯಾವಳಿಗಾಗಿ ಫಿಫಾದ ಅಗ್ರ 50 ತಂಡಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು. ಈ ಕುರಿತು ಈಗಾಗಲೇ ಆಸ್ಟ್ರೇಲಿಯಾ ತಂಡ ಉತ್ಸುಕತೆ ತೋರಿದೆ ಎಂದು ಮಾಹಿತಿ ನೀಡಿದ್ದಾರೆ.ಇದನ್ನೂ ಓದಿ: ವಾಟ್ಸಪ್‌ನಲ್ಲಿ ಬಂತು ಮದುವೆ ಕಾರ್ಡ್ – ಕ್ಲಿಕ್ ಮಾಡ್ತಿದ್ದಂಗೆ 2 ಲಕ್ಷ ರೂ. ಕಳೆದುಕೊಂಡ ಸರ್ಕಾರಿ ನೌಕರ

    ಅರ್ಜೆಂಟೀನಾ ಫುಟ್‌ಬಾಲ್ ಅಸೋಸಿಯೆಷನ್ (Argentine Football Association) ಕೂಡ ಈ ಕುರಿತು ಮಾಹಿತಿಯನ್ನು ದೃಢಪಡಿಸಿದೆ. ಅಕ್ಟೋಬರ್ 6ರಿಂದ 14ರವರೆಗೆ ಯುಎಸ್‌ನಲ್ಲಿ, ಬಳಿಕ ಅಂಗೋಲಾದ ಲುವಾಂಡಾದಲ್ಲಿ, ಆನಂತರ ನವೆಂಬರ್ 10ರಿಂದ 18ರವರೆಗೆ ಭಾರತದ ಕೇರಳದಲ್ಲಿ ಆಡಲಿದೆ ಎಂದು ತಿಳಿಸಿದೆ.

    ಸದ್ಯ ಭಾರತದಲ್ಲಿ ಆಡಲು ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡ ತಯಾರಾಗಿದ್ದು, ಕೇರಳ ಸರ್ಕಾರ ಮೆಸ್ಸಿ ಭೇಟಿಯನ್ನು ಖಚಿತಪಡಿಸಿದೆ. ಈ ಹಿಂದೆ 2011ರಲ್ಲಿ ಮೆಸ್ಸಿ ಒಳಗೊಂಡ ಅರ್ಜೆಂಟೀನಾ ತಂಡವು ವೆನೆಜುವೆಲಾ ವಿರುದ್ಧ ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಆಡಿತ್ತು.ಇದನ್ನೂ ಓದಿ: ಬಾಘಿ-4 ಟ್ರೈಲರ್‌ಗೆ ಮುಹೂರ್ತ ಫಿಕ್ಸ್

  • ಲೆಯೊನೆಲ್‌ ಮೆಸ್ಸಿ ಭದ್ರತೆಗೆ ಹೊಸ ಬಾಡಿಗಾರ್ಡ್‌ ನೇಮಕ – ಯಾಸಿನ್‌ ಚುಯೆಕೊ ಯಾರು ಗೊತ್ತಾ?

    ಲೆಯೊನೆಲ್‌ ಮೆಸ್ಸಿ ಭದ್ರತೆಗೆ ಹೊಸ ಬಾಡಿಗಾರ್ಡ್‌ ನೇಮಕ – ಯಾಸಿನ್‌ ಚುಯೆಕೊ ಯಾರು ಗೊತ್ತಾ?

    ವಾಷಿಂಗ್ಟನ್‌: ಇತ್ತೀಚೆಗಷ್ಟೇ ಇಂಟರ್‌ ಮಿಮಿಯಾ ಕ್ಲಬ್‌ ಸೇರಿದ ಫುಟ್ಬಾಲ್‌ ತಾರೆ ಲಿಯೋನೆಲ್‌ ಮೆಸ್ಸಿ (Lionel Messi) ಸುರಕ್ಷತೆಗೆ ಎಂಎಂಎ ಫೈಟರ್‌ (MMA Fighter) ಹಾಗೂ ಮಾಜಿ ಸೈನಿಕನನ್ನ ಬಾಡಿಗಾರ್ಡ್‌ ಆಗಿ ನೇಮಿಸಲಾಗಿದೆ.

    ಮೆಸ್ಸಿಗೆ ಕಳೆದ ಕೆಲವು ದಿನಗಳಿಂದ ಬೆದರಿಕೆಗಳು ಕೇಳಿಬರುತ್ತಿದ್ದು, ಈ ಹಿನ್ನೆಲೆಯಲ್ಲಿ ವೈಯಕ್ತಿಕ ಭದ್ರತೆಗಾಗಿ ಮಾಜಿ ಸೈನಿಕನೂ ಆಗಿರುವ ಎಂಎಂಎ ಫೈಟರ್‌ ಯಾಸಿನ್‌ ಚುಯೆಕೊ (Yassine Chueko) ಅವರನ್ನ ಬಾಡಿಗಾರ್ಡ್‌ ಆಗಿ ನೇಮಿಸಲಾಗಿದೆ. ಇದನ್ನೂ ಓದಿ: ಖ್ಯಾತ ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಚೀನಾದಲ್ಲಿ ಅರೆಸ್ಟ್ – ಮುಂದೇನಾಯ್ತು?

    ಮೆಸ್ಸಿ ಯುಎಸ್‌ನಲ್ಲಿ ಅತ್ಯಂತ ಜನಪ್ರಿಯ ಆಟಗಾರ, ಅವರನ್ನ ಗುರಿಯಾಗಿಸುವ ಅನೇಕ ಪ್ರಯತ್ನಗಳು ನಡೆಯುತ್ತಿವೆ. ಕೆಲ ದಿನಗಳ ಹಿಂದೆ ಮೆಸ್ಸಿ ಅವರ ಕುಟುಂಬಕ್ಕೆ ಸೇರಿದ ಸೂಪರ್‌ ಮಾರ್ಕೆಟ್‌ವೊಂದರ ಮೇಲೆ ಗುಂಡಿನ ದಾಳಿಯೂ ನಡೆದಿತ್ತು. ಹಾಗಾಗಿ ಯಾಸಿನ್‌ ಚುಯೆಕೊ ಅವರನ್ನ ಬಾಡಿ ಗಾರ್ಡ್‌ ಆಗಿ ನೇಮಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಫಿಫಾ ವಿಶ್ವಕಪ್‌ ಟೂರ್ನಿ ಬಳಿಕ ಇತ್ತೀಚೆಗಷ್ಟೇ ಇಂಟರ್ ಮಿಯಾಮಿ ಕ್ಲಬ್‌ ಸೇರಿದ ಲಿಯೊನೆಲ್‌ ಮೆಸ್ಸಿ ಯುಎಸ್‌ ಲೀಗ್‌ನಲ್ಲಿ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.

    ಯಾಸಿನ್‌ ಚುಯೆಕೊ ಯಾರು ಗೊತ್ತಾ?
    ಇಂಟರ್‌ ಮಿಯಾಮಿ ಕ್ಲಬ್‌ನ ಮೆಸ್ಸಿ ಬಾಡಿಗಾರ್ಡ್‌ ಆಗಿರುವ ಯಾಸಿನ್‌ ಚುಯೆಕೊ ಎಂಎಂಎ ಫೈಟರ್‌ ಕೂಡ ಆಗಿದ್ದರು. ಯುಎಸ್‌ ಸೈನಿಕನಾಗಿ ಇರಾಕ್‌ ಮತ್ತು ಅಫ್ಘಾನಿಸ್ತಾನಗಳಲ್ಲಿ ಸೇವೆ ಸಲ್ಲಿಸಿದ್ದರು. ಇದನ್ನೂ ಓದಿ: World Athletics Championships: 2024ರ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ನೀರಜ್‌ ಚೋಪ್ರಾ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜಸ್ಟ್ 1 ಪೋಸ್ಟ್‌ಗೆ 11.45 ಕೋಟಿ ರೂ. – ಕೊಹ್ಲಿ ಖಡಕ್‌ ರಿಯಾಕ್ಷನ್‌

    ಜಸ್ಟ್ 1 ಪೋಸ್ಟ್‌ಗೆ 11.45 ಕೋಟಿ ರೂ. – ಕೊಹ್ಲಿ ಖಡಕ್‌ ರಿಯಾಕ್ಷನ್‌

    ಮುಂಬೈ: ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ (Virat Kohli) ಸೋಶಿಯಲ್ ಮೀಡಿಯಾದಲ್ಲಿ ಅತಿಹೆಚ್ಚು ಅಭಿಮಾನಿಗಳನ್ನ ಹೊಂದಿದ ನಂ.1 ಕ್ರಿಕೆಟಿಗನಾಗಿದ್ದಾರೆ. ಈ ನಡುವೆ ಕೊಹ್ಲಿ ಸೋಶಿಯಲ್ ಮೀಡಿಯಾದಿಂದ ಗಳಿಸುವ ಆದಾಯದ ಬಗ್ಗೆ ಸೋಶಿಯಲ್ ಮೀಡಿಯಾ ಮಾರ್ಕೆಟಿಂಗ್ ಫ್ಲಾಟ್‌ಪಾರ್ಮ್ ಸಂಸ್ಥೆ ಹಾಪರ್ ಎಚ್‌ಕ್ಯೂ ಬಿಡುಗಡೆ ಮಾಡಿದ ವರದಿಯೊಂದು ಚರ್ಚೆಯನ್ನ ಹುಟ್ಟುಹಾಕಿದೆ.

    ಫುಟ್ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ (Cristiano Ronaldo) ಹಾಗೂ ಲಿಯೊನೆಲ್ ಮೆಸ್ಸಿ (Lionel Messi) ಬಳಿಕ ವಿಶ್ವದಲ್ಲಿಯೇ ಸೋಶಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ 3ನೇ ಕ್ರೀಡಾಪಟು ಹಾಗೂ ನಂ.1 ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿ ಎಂದು ಸಂಸ್ಥೆ ತಿಳಿಸಿತ್ತು. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ಹುಟ್ಟಿಕೊಂಡಿತ್ತು. ಇದಕ್ಕೆ ಸ್ವತಃ ವಿರಾಟ್ ಕೊಹ್ಲಿ ಅವರೇ ಸ್ಪಷ್ಟನೆ ಕೊಟ್ಟಿದ್ದು, ತಾನು ಒಂದು ಇನ್‌ಸ್ಟಾಗ್ರಾಮ್ ಪೋಸ್ಟ್‌ಗೆ (Instagram Post Earning) 11.45 ಕೋಟಿ ರೂ. ಪಡೆಯುತ್ತೇನೆಂಬುದು ಸುಳ್ಳು ಎಂದು ಹೇಳಿದ್ದಾರೆ.

    ನಾನು ನನ್ನ ಜೀವನದಲ್ಲಿ ಸ್ವೀಕರಿಸಿದ ಎಲ್ಲದಕ್ಕೂ ನಾನು ಕೃತಜ್ಞನಾಗಿದ್ದೇನೆ ಮತ್ತು ಋಣಿಯಾಗಿದ್ದೇನೆ, ನನ್ನ ಸೋಶಿಯಲ್ ಮೀಡಿಯಾ ಗಳಿಕೆಯ ಬಗ್ಗೆ ಹರಿದಾಡುತ್ತಿರುವ ಸುದ್ದಿ ನಿಜವಲ್ಲ ಎಂದು ವಿರಾಟ್ ಕೊಹ್ಲಿ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಟೀಂ ಇಂಡಿಯಾ ವಿನಾಶದತ್ತ ಸಾಗುತ್ತಿದೆ – ನಾಲಿಗೆ ಹರಿಬಿಟ್ಟ ಪಾಕ್‌ ಮಾಜಿ ಕ್ರಿಕೆಟಿಗ, ಅಭಿಮಾನಿಗಳು ಕೆಂಡ

    ಕೊಹ್ಲಿ ಬಗ್ಗೆ ಬಂದ ಸುದ್ದಿ ಏನಿತ್ತು?
    ಕೊಹ್ಲಿ ಒಂದು ಇನ್‌ಸ್ಟಾಗ್ರಾಮ್ ಪೋಸ್ಟ್‌ಗೆ 11.45 ಕೋಟಿ ರೂ. ಪಡೆಯುತ್ತಾರೆ ಎಂದು ಹಾಪರ್ ಎಚ್‌ಕ್ಯೂ ವರದಿ ಬಿಡುಗಡೆ ಮಾಡಿತ್ತು. ಈ ಪಟ್ಟಿಯಲ್ಲಿ ಫುಟ್ಬಾಲ್ ದಿಗ್ಗಜ ಕ್ರಿಸ್ಟಿಯಾನೋ ರೊನಾಲ್ಡೊ ಅಗ್ರಸ್ಥಾನದಲ್ಲಿದ್ದು, ಮತ್ತೊಬ್ಬ ದಿಗ್ಗಜ ಲಿಯೊನೆಲ್ ಮೆಸ್ಸಿ 2ನೇ ಸ್ಥಾನ ಪಡೆದುಕೊಂಡಿರುವುದಾಗಿ ಹೇಳಿತ್ತು.

    ರೊನಾಲ್ಡೊ ಪೋಸ್ಟ್ ಮಾಡುವ ಪ್ರಾಯೋಜಿತ ಪೋಸ್ಟ್‌ಗೆ ಸುಮಾರು 3.23 ಮಿಲಿಯನ್ ಅಮೆರಿಕನ್ ಡಾಲರ್ ಮೊತ್ತವನ್ನು ಪಡೆಯುತ್ತಾರೆ. ಅಂದರೆ ಪ್ರತಿ ಪೋಸ್ಟ್‌ಗೆ ಸುಮಾರು 26.75 ಕೋಟಿ ರೂಗಳನ್ನು ಪಡೆಯುತ್ತಾರೆ. ಅಂತೆಯೇ ಮೆಸ್ಸಿ ಪ್ರತಿ ಇನ್‌ಸ್ಟಾಗ್ರಾಮ್ ಪೋಸ್ಟ್‌ಗೆ ಸುಮಾರು 2.56 ಮಿಲಿಯನ್ (21.49 ಕೋಟಿ ರೂ.) ನಗದನ್ನು ಪಡೆಯುತ್ತಾರೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಹೊಸ ಇನ್ನಿಂಗ್ಸ್ ಆರಂಭ – ಧಾರವಾಡದಲ್ಲಿ 900 ಕೋಟಿ ಹೂಡಿಕೆ

    ವಿರಾಟ್ ಕೊಹ್ಲಿ ಜಾಗತಿಕವಾಗಿ ಟಾಪ್-20 ಪಟ್ಟಿಯಲ್ಲಿ ಸ್ಥಾನವನ್ನು ಪಡೆದ ಏಕೈಕ ಭಾರತೀಯನಾಗಿದ್ದು, ಇನ್‌ಸ್ಟಾಗ್ರಾಮ್‌ ಪ್ಲಾಟ್‌ಫಾರ್ಮ್‌ನಲ್ಲಿ 25.6 ಕೋಟಿ ಅನುಯಾಯಿಗಳನ್ನು ಹೊಂದಿದ್ದಾರೆ. ಇವರನ್ನು ಹೊರತುಪಡಿಸಿ ಬಾಲಿವುಡ್ ಮತ್ತು ಹಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಈ ಪಟ್ಟಿಯಲ್ಲಿ 29ನೇ ಸ್ಥಾನವನ್ನು ಪಡೆದುಕೊಂಡಿದ್ದು, ಪ್ರತಿ ಪೋಸ್ಟ್‌ಗೆ 532,000 ಅಮೆರಿಕನ್ ಡಾಲರ್ (4.40 ಕೋಟಿ ರೂ.) ಹಣವನ್ನು ಪಡೆಯುತ್ತಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಖ್ಯಾತ ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಚೀನಾದಲ್ಲಿ ಅರೆಸ್ಟ್ – ಮುಂದೇನಾಯ್ತು?

    ಖ್ಯಾತ ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಚೀನಾದಲ್ಲಿ ಅರೆಸ್ಟ್ – ಮುಂದೇನಾಯ್ತು?

    ಬೀಜಿಂಗ್: ಜೂನ್ 15ರಂದು ವರ್ಕಸ್ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ (Australia) ವಿರುದ್ಧ ನಡೆಯಲಿರುವ ಸೌಹಾರ್ದ ಪಂದ್ಯಕ್ಕೆ ತೆರಳುತ್ತಿದ್ದ ವೇಳೆ ಅರ್ಜೆಂಟೀನಾ ಫುಟ್ಬಾಲ್ ತಂಡದ (Argentina Football Team) ನಾಯಕ ಲಿಯೋನೆಲ್ ಮೆಸ್ಸಿ (Lionel Messi) ಅವರನ್ನು ಬೀಜಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ ಘಟನೆ ನಡೆದಿದೆ.

    ಅರ್ಜೆಂಟೀನಾ ಮತ್ತು ಆಸ್ಟ್ರೇಲಿಯಾ ನಡುವಿನ ಸೌಹಾರ್ದ ಪಂದ್ಯದಲ್ಲಿ ತನ್ನ ದೇಶವನ್ನು ಮುನ್ನಡೆಸಲು ಲಿಯೋನೆಲ್ ಮೆಸ್ಸಿ ಚೀನಾಕ್ಕೆ ಆಗಮಿಸಿದರು. ಆಗ ಅವರನ್ನು ಚೀನಾದ ಬಾರ್ಡರ್ ಪೊಲೀಸರು (Chinese Border Police) ವಿಮಾನ ನಿಲ್ದಾಣದಲ್ಲಿ ತಡೆದು ಬಂಧಿಸಿದರು.

    ಮೂಲಗಳ ಪ್ರಕಾರ, ಮೆಸ್ಸಿ ಅವರ ವೀಸಾ ವಿಳಂಬವಾಗಿತ್ತು. ಮೆಸ್ಸಿ ತಮ್ಮ ಅರ್ಜೆಂಟೀನಾದ ಪಾಸ್‌ಪೋರ್ಟ್ ಬದಲಾಗಿ ತಮ್ಮ ಸ್ಪ್ಯಾನಿಷ್ ಪಾಸ್‌ಪೋರ್ಟ್ನೊಂದಿಗೆ ಪ್ರಯಾಣಿಸಿದ್ದರು. ಆದರೆ ಅದು ಚೀನಾ ವೀಸಾವನ್ನು (Chinese Visa) ಹೊಂದಿರಲಿಲ್ಲ. ತಮ್ಮ ಅಜಾಗರೂಕತೆಯಿಂದಾಗಿ ಮೆಸ್ಸಿ ಚೀನಾ ಬಾರ್ಡರ್ ಪೊಲೀಸರಿಂದ ಬಂಧಿತರಾಗಿದ್ದರು. ಸುಮಾರು 30 ನಿಮಿಷಗಳ ನಂತರ ಪರಿಸ್ಥಿತಿಯನ್ನು ಬಗೆಹರಿಸಲಾಯಿತು. ಅನಂತರ ಲಿಯೋನೆಲ್ ಮೆಸ್ಸಿ ವಿಮಾನ ನಿಲ್ದಾಣದಿಂದ ನಿರ್ಗಮಿಸಿದರು.

    ತನ್ನ ಸ್ಪ್ಯಾನಿಷ್ ಪಾಸ್‌ಪೋರ್ಟ್ ಹಿಡಿದುಕೊಂಡು ತನ್ನ ಸಹ ಆಟಗಾರರೊಂದಿಗೆ ಮಾತನಾಡುತ್ತಿದ್ದ ಲಿಯೋನೆಲ್ ಮೆಸ್ಸಿಯನ್ನು ಹಲವು ಪೊಲೀಸ್ ಅಧಿಕಾರಿಗಳು ತಡೆದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ: ಮೋದಿ ಕ್ರೀಡಾಂಗಣದಲ್ಲಿ ಇಂಡೋ ಪಾಕ್ ಕದನ – ರಣರೋಚಕ ಪಂದ್ಯಕ್ಕಾಗಿ ಕಾಯ್ತಿದ್ದಾರೆ ಫ್ಯಾನ್ಸ್

    ಮೆಸ್ಸಿ ಫುಟ್ಬಾಲ್ ಲೋಕದಲ್ಲಿ ಶ್ರೀಮಂತ ಆಟಗಾರರಲ್ಲಿ ಒಬ್ಬರು. ಅವರು ಈವರೆಗೆ ಬಾರ್ಸಿಲೋನಾ ಕ್ಲಬ್ ಪರ 778 ಪಂದ್ಯಗಳ ಮೂಲಕ ಬರೋಬ್ಬರಿ 672 ಗೋಲ್‌ಗಳನ್ನು ಬಾರಿಸಿದ್ದಾರೆ. ಮೆಸ್ಸಿ 21 ವರ್ಷದವರಿದ್ದಾಗಲೇ 8 ಗೋಲುಗಳನ್ನು ಸಿಡಿಸುವ ಮೂಲಕ ಅಸಾಧಾರಣ ಪ್ರತಿಭೆ ಪ್ರದರ್ಶಿಸಿದ್ದರು. ಜೊತೆಗೆ ಅರ್ಜೆಂಟೀನಾ ತಂಡ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲಲು ನಿರ್ಣಾಯಕ ಪಾತ್ರ ವಹಿಸಿದ್ದರು. ಈ ಹಿಂದೆ ನಡೆದ ಫಿಫಾ ವಿಶ್ವಕಪ್‌ನಲ್ಲೂ ಮೆಸ್ಸಿ ಮ್ಯಾಜಿಕ್‌ನಿಂದಾಗಿಯೇ ಅರ್ಜೆಂಟೀನಾ ಕಪ್ ಗೆಲ್ಲಲು ಸಾಧ್ಯವಾಗಿತ್ತು. ಇದನ್ನೂ ಓದಿ: ICC ಟೂರ್ನಿಗಳಲ್ಲಿ ಟೀಂ ಇಂಡಿಯಾ ಫೇಲ್ ಆಗ್ತಿರೋದೇಕೆ? – ಕಾರಣ ತಿಳಿಸಿದ ChatGPT

  • ಮೆಸ್ಸಿ ಕುಟುಂಬದ ಸೂಪರ್ ಮಾರ್ಕೆಟ್ ಮೇಲೆ ಗುಂಡಿನ ದಾಳಿ, ಬೆದರಿಕೆ

    ಮೆಸ್ಸಿ ಕುಟುಂಬದ ಸೂಪರ್ ಮಾರ್ಕೆಟ್ ಮೇಲೆ ಗುಂಡಿನ ದಾಳಿ, ಬೆದರಿಕೆ

    ಬ್ಯೂನಸ್ ಐರಿಸ್: ಫಿಫಾ ವಿಶ್ವಕಪ್ (FIFA WorldCup) ವಿಜೇತ, ಅಜೆಂಟಿನಾ ಫುಟ್ಬಾಲ್ ತಂಡದ ನಾಯಕ ಲಿಯೋನಲ್ ಮೆಸ್ಸಿ (Lionel Messi) ಅವರ ಕುಟುಂಬಕ್ಕೆ ಸೇರಿದ ಸೂಪರ್ ಮಾರ್ಕೆಟ್ ಮೇಲೆ ಗುಂಡಿನ ದಾಳಿ ನಡೆಸಿದ್ದು, ಮೆಸ್ಸಿಗೂ ಬೆದರಿಕೆ ನೀಡಿದ್ದಾರೆ.

    ರಾತ್ರೋ ರಾತ್ರಿ ಬಂದ ಇಬ್ಬರು ಬಂದೂಕುದಾರಿಗಳು ಸೂಪರ್ ಮಾರ್ಕೆಟ್ (Messi Super Market) ಮುಂಭಾಗಕ್ಕೆ 14 ಗುಂಡುಗಳನ್ನು ಹಾರಿಸಿದ್ದಾರೆ. ಜೊತೆಗೆ `ಮೆಸ್ಸಿ, ನಾವು ನಿಮಗಾಗಿ ಕಾಯುತ್ತಿದ್ದೇವೆ. ಜಾವ್ಕಿನ್ ಒಬ್ಬ ನಾರ್ಕೋ, ಅವನು… ನಿನ್ನನ್ನ ನೋಡಿಕೊಳ್ಳುವುದಿಲ್ಲ’ ಎಂದು ಕೈಬರಹ ಸಂದೇಶವನ್ನು ಬರೆದುಹೋಗಿದ್ದಾರೆ. ಆ ಸಮಯದಲ್ಲಿ ಯಾರೂ ಇಲ್ಲದಿದ್ದರಿಂದ ಯಾವುದೇ ಪ್ರಾಣ ಹಾನಿಯಾಗಿಲ್ಲ.

    ಪಾಬ್ಲೊ ಜಾವ್ಕಿನ್ ಅವರು ಮೆಸ್ಸಿಯ ತವರು ರೊಸಾರಿಯೊದ ಮೇಯರ್ ಆಗಿದ್ದಾರೆ. ಅಲ್ಲಿ ಮೆಸ್ಸಿ ಕುಟುಂಬದ ಸೂಪರ್ ಮಾರ್ಕೆಟ್ ಇದೆ. ಇದು ರಾಜಧಾನಿ ಬ್ಯೂನಸ್ ಐರಿಸ್ ನಿಂದ ವಾಯುವ್ಯಕ್ಕೆ 320 ಕಿಮೀ ದೂರದಲ್ಲಿದೆ.

    ಇಬ್ಬರು ವ್ಯಕ್ತಿಗಳು 3 ಗಂಟೆ ಸುಮಾರಿಗೆ ಮೋಟಾರ್ ಬೈಕ್‌ನಲ್ಲಿ ಬಂದಿರುವುದನ್ನು ಪ್ರತ್ಯಕ್ಷದರ್ಶಿಗಳು ದೃಢಪಡಿಸಿದ್ದಾರೆ. ಅವರಲ್ಲಿ ಒಬ್ಬರು ಇಳಿದು ಗುಂಡು ಹಾರಿಸಿದ ಎಂದಿದ್ದಾರೆ. ಸದ್ಯ ಈ ಬಗ್ಗೆ ಪೊಲೀಸರು (Police) ತನಿಖೆ ಕೈಗೊಂಡಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಇದನ್ನೂ ಓದಿ: WPL ಉದ್ಘಾಟನಾ ಸಮಾರಂಭದಲ್ಲಿ ಸೊಂಟ ಬಳುಕಿಸಲಿದ್ದಾರೆ ಬಾಲಿವುಡ್ ತಾರೆಯರು

    Lionel Messi

    ರೊಸಾರಿಯೊ ಪರಾನಾ ನದಿಯ ಬಂದರು ನಗರವಾಗಿದೆ. ಇದೀಗ ಮಾದಕವಸ್ತು ಕಳ್ಳಸಾಗಣೆಯ ಕೇಂದ್ರವಾಗಿ ಮಾರ್ಪಟ್ಟಿದ್ದು, ಅರ್ಜೆಂಟಿನಾದ ಅತ್ಯಂತ ಹಿಂಸಾತ್ಮಕ ನಗರ ಎನಿಸಿಕೊಂಡಿದೆ. 2022ರಲ್ಲಿಯೂ ಈ ನಗರದಲ್ಲಿ 287 ಹತ್ಯೆಗಳು ನಡೆದಿವೆ. ಇದನ್ನೂ ಓದಿ: ಎರಡನೇ ದಿನ 16 ವಿಕೆಟ್ ಪತನ – ಆಸೀಸ್ ಗೆಲುವಿಗೆ ಬೇಕು 76 ರನ್

  • ಮ್ಯಾಜಿಕ್ ಮೆಸ್ಸಿಗೆ `ಅತ್ಯುತ್ತಮ ಪುರುಷರ ಆಟಗಾರ-2022′ ಪ್ರಶಸ್ತಿ

    ಮ್ಯಾಜಿಕ್ ಮೆಸ್ಸಿಗೆ `ಅತ್ಯುತ್ತಮ ಪುರುಷರ ಆಟಗಾರ-2022′ ಪ್ರಶಸ್ತಿ

    ಪ್ಯಾರಿಸ್‌: 2022ರ ಫಿಫಾ ವಿಶ್ವಕಪ್ (FIFA WorldCup 2022) ಚಾಂಪಿಯನ್ ಆಗಿ ಹೊರಹೊಮ್ಮಿದ ಅರ್ಜೆಂಟಿನಾ ತಂಡದ ಕ್ಯಾಪ್ಟನ್ ಲಿಯೋನೆಲ್ ಮೆಸ್ಸಿ (Lionel Messi) `2022ರ ಅತ್ಯುತ್ತಮ ಪುರುಷ ಆಟಗಾರ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.

    ಪ್ಯಾರಿಸ್‌ನ ಸಾಲೆಯಲ್ಲಿ ನಡೆದ ಸಮಾರಂಭದಲ್ಲಿ ಮೆಸ್ಸಿ ಪ್ರಶಸ್ತಿ ಸ್ವೀಕರಿಸಿದ್ದಾರೆ. ಫಿಫಾ ಫುಟ್ಬಾಲ್ ಫೈನಲ್‌ನಲ್ಲಿ ನಾಯಕ ಲಿಯೋನೆಲ್ ಮೆಸ್ಸಿ ಅವರ ಅದ್ಭುತ ಆಟದಿಂದಾಗಿ ಅರ್ಜೆಂಟೀನಾ ಪೆನಾಲ್ಟಿ ಶೂಟೌಟ್‌ನಲ್ಲಿ ಫ್ರಾನ್ಸ್ ತಂಡವನ್ನು ಸೋಲಿಸುವ ಮೂಲಕ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದನ್ನೂ ಓದಿ: RCB, MI, Delhi ಅಭಿಮಾನಿಗಳಿಗೆ ನಿರಾಸೆ – 2023ರ ಐಪಿಎಲ್‌ನಿಂದ ಈ ಸ್ಟಾರ್ ಆಟಗಾರರು ಔಟ್

    ಕಾಲ್ಚೆಂಡಿನ ಈ ಕ್ಲೈಮ್ಯಾಕ್ಸ್‌ ಪಂದ್ಯದಲ್ಲಿ ಮ್ಯಾಜಿಕ್ ಮೆಸ್ಸಿ 2 ಗೋಲುಗಳನ್ನು ಬಾರಿಸುವ ಮೂಲಕ ವಿಶ್ವಕಪ್ ಗೆಲುವಿನ ತಮ್ಮ ಕನಸನ್ನು ನನಸಾಗಿಸಿಕೊಂಡಿದ್ದರು. ಅಲ್ಲದೇ ಫಿಫಾದಲ್ಲಿ ಒಟ್ಟು 13 ಗೂಲುಗಳನ್ನು ಬಾರಿಸಿದ್ದರು. ಫಿಫಾದಲ್ಲಿ ಬೆಸ್ಟ್ ಪರ್ಫಾರ್ಮೆನ್ಸ್ ನೀಡಿದ ಮೆಸ್ಸಿ ಇದೀಗ ಅತ್ಯುತ್ತಮ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಇದನ್ನೂ ಓದಿ: ಬೆತ್‌ ಮೂನಿ ಭರ್ಜರಿ ಫಿಫ್ಟಿ – ಆಸ್ಟ್ರೇಲಿಯಾಗೆ 6ನೇ ಬಾರಿಗೆ ವಿಶ್ವಕಪ್‌ ಚಾಂಪಿಯನ್‌ ಕಿರೀಟ

    lionel messi 1

    ಇದರೊಂದಿಗೆ ಅರ್ಜೆಂಟೀನಾ (Argentina) ಕೋಚ್ ಲಿಯೋನೆಲ್ ಸ್ಕಾಲೋನಿ ಅತ್ಯುತ್ತಮ ಪುರುಷ ಕೋಚ್ ಪ್ರಶಸ್ತಿ ಪಡೆದಿದ್ದಾರೆ. ಎಮಿಲಿಯಾನೋ ಮಾರ್ಟಿನೆಜ್ (ಅರ್ಜೆಂಟೀನಾ) ಅತ್ಯುತ್ತಮ ಪುರುಷರ ಗೋಲ್‌ಕೀಪರ್ ಪ್ರಶಸ್ತಿ ಮುಡಿಗೇರಿಸಿಕೊಂಡರೇ, ಅರ್ಜೆಂಟೀನಾದ ಬೆಂಬಲಿಗರು `ಅತ್ಯುತ್ತಮ ಅಭಿಮಾನಿ’ ಪ್ರಶಸ್ತಿಯನ್ನ ಪಡೆದು ಸಂಭ್ರಮಿಸಿದ್ದಾರೆ.

    ಬಳಿಕ ಮೆಸ್ಸಿ ಮಾತನಾಡಿ, ಇದೊಂದು ಅದ್ಭುತ ವರ್ಷ, ನಾನಿಲ್ಲಿ ಬಂದು ಪ್ರಶಸ್ತಿ ಸ್ವೀಕರಿಸುತ್ತಿರುವುದು ನನಗೆ ಮಹತ್ತರ ಗೌರವವೆನಿಸಿದೆ. ಅಲ್ಲದೇ ನಾನು ನನ್ನ ಕನಸು ನನಸಾಗಿಸಿಕೊಂಡಿದ್ದೇನೆ ಎಂಬ ಸಂತೋಷವಿದೆ ಎಂದು ಭಾವುಕರಾದರು.

    kylian mbappe 1

    ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಫ್ರಾನ್ಸ್ ತಂಡದ ನಾಯಕ ಕಿಲಿಯನ್ ಎಂಬಾಪ್ಪೆ (Mbappe) ಸಹ ಮೆಸ್ಸಿಯೊಂದಿಗೆ ಪಾಲ್ಗೊಂಡಿದ್ದರು.

  • ಪ್ರಧಾನಿ ಮೋದಿಗೆ ಫುಟ್‌ಬಾಲ್‌ ತಾರೆ ಮೆಸ್ಸಿ ಜೆರ್ಸಿ ಗಿಫ್ಟ್‌

    ಪ್ರಧಾನಿ ಮೋದಿಗೆ ಫುಟ್‌ಬಾಲ್‌ ತಾರೆ ಮೆಸ್ಸಿ ಜೆರ್ಸಿ ಗಿಫ್ಟ್‌

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಅರ್ಜೆಂಟೀನಾ (Argentina) ಫುಟ್‌ಬಾಲ್‌ ತಂಡದ ನಾಯಕ ಲಿಯೊನೆಲ್‌ ಮೆಸ್ಸಿ (Lionel Messi) ಹೆಸರಿನ ಜೆರ್ಸಿಯನ್ನು ಉಡುಗೊರೆಯಾಗಿ ನೀಡಲಾಗಿದೆ.

    ಬೆಂಗಳೂರಿನಲ್ಲಿ (Bengaluru) ನಡೆದ ಇಂಡಿಯಾ ಎನರ್ಜಿ ವೀಕ್‌ನ ಅಂಗವಾಗಿ ಅರ್ಜೆಂಟೀನಾದ ವೈಪಿಎಫ್ ಅಧ್ಯಕ್ಷ ಪಾಬ್ಲೊ ಗೊನ್ಜಾಲೆಜ್ ಅವರು, ವಿಶ್ವಕಪ್ ವಿಜೇತ ಚಾಂಪಿಯನ್ ಲಿಯೊನೆಲ್‌ ಮೆಸ್ಸಿ ಅವರ ಹೆಸರನ್ನು ಒಳಗೊಂಡ ಅರ್ಜೆಂಟೀನಾ ಫುಟ್‌ಬಾಲ್ ತಂಡದ ಜೆರ್ಸಿಯನ್ನು (Messi Jersey) ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಇದನ್ನೂ ಓದಿ: ನೇಮಕ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾ – ವಿಕ್ಟೋರಿಯಾ ಗೌರಿ ಪ್ರಮಾಣ ವಚನ ಸ್ವೀಕಾರ

    ಕಳೆದ ವರ್ಷ ಡಿಸೆಂಬರ್‌ನಲ್ಲಿ ಅರ್ಜೆಂಟೀನಾ ಫಿಫಾ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಫ್ರಾನ್ಸ್‌ ತಂಡದ ವಿರುದ್ಧ ಜಯಗಳಿಸಿತು. ಅರ್ಜೆಂಟೀನಾ ಪೆನಾಲ್ಟಿಗಳಲ್ಲಿ 4-2 ಗೋಲುಗಳಿಂದ ಅಂತಿಮ ಪಂದ್ಯವನ್ನು ಗೆದ್ದುಕೊಂಡಿತು.

    ಫಿಫಾ 2022 ವಿಶ್ವಕಪ್ (FIFA World Cup 2022) ಗೆದ್ದ ಅರ್ಜೆಂಟೀನಾವನ್ನು ಅಭಿನಂದಿಸಿದ್ದ ಪ್ರಧಾನಿ ಮೋದಿ, ಅರ್ಜೆಂಟೀನಾ ಮತ್ತು ಲಿಯೊನೆಲ್‌ ಮೆಸ್ಸಿ ಅವರ ವಿಜಯವನ್ನು ಲಕ್ಷಾಂತರ ಭಾರತೀಯರು ಆಚರಿಸುತ್ತಿದ್ದಾರೆ ಎಂದು ಟ್ವೀಟ್‌ ಮಾಡಿದ್ದರು.

    “ಇದು ಅತ್ಯಂತ ರೋಮಾಂಚಕ ಫುಟ್‌ಬಾಲ್ ಪಂದ್ಯಗಳಲ್ಲಿ ಒಂದಾಗಿ ನೆನಪಿನಲ್ಲಿ ಉಳಿಯುತ್ತದೆ. FIFA World Cup ಚಾಂಪಿಯನ್ ಆದ ಅರ್ಜೆಂಟೀನಾಗೆ ಅಭಿನಂದನೆಗಳು. ಟೂರ್ನಿಯಲ್ಲಿ ಅವರು ಅದ್ಭುತವಾಗಿ ಆಡಿದ್ದಾರೆ. ಅರ್ಜೆಂಟೀನಾ ಮತ್ತು ಮೆಸ್ಸಿಯ ಲಕ್ಷಾಂತರ ಭಾರತೀಯ ಅಭಿಮಾನಿಗಳು ವಿಜಯದಲ್ಲಿ ಭಾಗಿಯಾಗಿದ್ದಾರೆ” ಎಂದು ಪ್ರಧಾನಿ ಮೋದಿ ಟ್ವೀಟ್‌ನಲ್ಲಿ ತಿಳಿಸಿದ್ದರು. ಇದನ್ನೂ ಓದಿ: T20I ನಾಯಕ ಆರನ್ ಫಿಂಚ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮೆಸ್ಸಿ ಹಸ್ತಾಕ್ಷರ ಹಾಕಿ ಕೊಟ್ಟ ಜೆರ್ಸಿ ಇದು ಎಂದ ಝೀವಾ

    ಮೆಸ್ಸಿ ಹಸ್ತಾಕ್ಷರ ಹಾಕಿ ಕೊಟ್ಟ ಜೆರ್ಸಿ ಇದು ಎಂದ ಝೀವಾ

    ಮುಂಬೈ: ಫಿಫಾ ವಿಶ್ವಕಪ್ (Fifa World Cup) ಗೆದ್ದ ಫುಟ್‍ಬಾಲ್ ಲೆಜೆಂಡ್ ಲಿಯೋನೆಲ್ ಮೆಸ್ಸಿ (Lionel Messi) ತಮ್ಮ ಜೆರ್ಸಿಯೊಂದಕ್ಕೆ (Signed Argentina Jersey) ಸೈನ್ ಮಾಡಿ ಟೀಂ ಇಂಡಿಯಾದ ಮಾಜಿ ನಾಯಕ ಧೋನಿ (M.S Dhoni) ಅವರ ಪುತ್ರಿ ಝೀವಾಗೆ ಗಿಫ್ಟ್ ನೀಡಿದ್ದಾರೆ.

    7ರ ಹರೆಯದ ಪುಟ್ಟ ಹುಡುಗಿ ಝೀವಾ ತಂದೆ ಧೋನಿಯಂತೆ ಕ್ರೀಡೆಯಲ್ಲಿ ಹೆಚ್ಚು ಆಸಕ್ತಿ ಹೊಂದಿದ ಹುಡುಗಿ. ಫಿಫಾ ವಿಶ್ವಕಪ್ ವೇಳೆ ಫುಟ್‍ಬಾಲ್ ನೋಡುತ್ತಿದ್ದ ಝೀವಾ ಮೆಸ್ಸಿಯ ಆಟ ನೋಡಿದ್ದರು. ಮೆಸ್ಸಿ ವಿಶ್ವಕಪ್ ಗೆದ್ದಾಗ ಸಂಭ್ರಮಿಸಿದ್ದರು. ಇದೀಗ ಮೆಸ್ಸಿ ತಮ್ಮ ಜೆರ್ಸಿಯೊಂದಕ್ಕೆ ಹಸ್ತಾಕ್ಷರ ಹಾಕಿ ಇದು ಝೀವಾಗೆ ಎಂದು ಭಾರತಕ್ಕೆ ಕಳುಹಿಸಿ ಕೊಟ್ಟಿದ್ದಾರೆ. ಇದನ್ನೂ ಓದಿ: ಟಿ20ಗೆ ಪಾಂಡ್ಯ ನಾಯಕ, ಸೂರ್ಯ ಉಪನಾಯಕ – ಟೀಂ ಇಂಡಿಯಾದಲ್ಲಿ ಪಂತ್‍ಗಿಲ್ಲ ಸ್ಥಾನ

    ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿರುವ ಝೀವಾ, ಮೆಸ್ಸಿ ಹಸ್ತಾಕ್ಷರವಿರುವ ಜೆರ್ಸಿ ತೊಟ್ಟು ಫೋಟೋಗೆ ಪೋಸ್ ನೀಡಿದ್ದಾರೆ. ಧೋನಿ ಕ್ರಿಕೆಟರ್ ಆಗುವ ಮುನ್ನ ಫುಟ್‍ಬಾಲ್‍ನಲ್ಲಿ ಗೋಲ್ ಕೀಪರ್ ಆಗಿದ್ದರು. ಅಂದಿನಿಂದ ಇಂದಿನವರೆಗೆ ಧೋನಿಗೆ ಕ್ರಿಕೆಟ್ ಜೊತೆ ಫುಟ್‍ಬಾಲ್‍ನಲ್ಲೂ ಹೆಚ್ಚು ಒಲವಿದೆ. ಧೋನಿ ಮೆಸ್ಸಿ ಹಾಗೂ ಮ್ಯಾಚೆಂಸ್ಟರ್‌ ಯುನೈಟೆಡ್ ಕ್ಲಬ್‍ನ ಅಭಿಮಾನಿ ಹಾಗಾಗಿ ಮೆಸ್ಸಿ ವಿಶ್ವಕಪ್ ಗೆದ್ದ ಬಳಿಕ ಜೆರ್ಸಿಗೆ ಸೈನ್ ಮಾಡಿ ಕಳುಹಿಸಿಕೊಟ್ಟಿದ್ದಾರೆ. ಇದನ್ನೂ ಓದಿ: ಟಿ20ಯಿಂದ ಟಿ10ನತ್ತ ಕ್ರಿಕೆಟ್

     

    View this post on Instagram

     

    A post shared by ZIVA SINGH DHONI (@ziva_singh_dhoni)

    ಲಿಯೋನೆಲ್ ಮೆಸ್ಸಿಯ ಫಿಫಾ ವಿಶ್ವಕಪ್ ಗೆಲ್ಲುವ ಹಲವು ವರ್ಷಗಳ ಕನಸು 2022ರಲ್ಲಿ ನನಸಾಗಿದೆ. ಕತಾರ್‌ನಲ್ಲಿ ನಡೆದ ಫೈನಲ್‍ನಲ್ಲಿ ಫ್ರಾನ್ಸ್ ವಿರುದ್ಧ ಗೆದ್ದು ಮೆಸ್ಸಿ ಫಿಫಾ ವಿಶ್ವಕಪ್‍ಗೆ ಮುತ್ತಿಕ್ಕಿದ್ದರು.

    Live Tv
    [brid partner=56869869 player=32851 video=960834 autoplay=true]

  • ಮೆಸ್ಸಿ ಕೈಯಲ್ಲಿ ಕಮಲ – ಬಿಜೆಪಿಗೆ ಹೋಲಿಸಿ ಟ್ವಿಟ್ಟರ್‌ನಲ್ಲಿ ಟ್ರೋಲ್

    ಮೆಸ್ಸಿ ಕೈಯಲ್ಲಿ ಕಮಲ – ಬಿಜೆಪಿಗೆ ಹೋಲಿಸಿ ಟ್ವಿಟ್ಟರ್‌ನಲ್ಲಿ ಟ್ರೋಲ್

    ಬ್ಯೂನಸ್ ಐರಿಸ್: 36 ವರ್ಷಗಳ ಬಳಿಕ ಫಿಫಾ ವಿಶ್ವಕಪ್ (FIFA World Cup 2022) ಗೆದ್ದ ಅರ್ಜೆಂಟೀನಾ (Argentina) ತಂಡಕ್ಕೆ ತವರಿನಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದೆ. ಬ್ಯೂನಸ್ ಐರಿಸ್‌ನಲ್ಲಿ 46 ಲಕ್ಷ ಮಂದಿ ಬೀದಿಗಳಲ್ಲಿ ಸಂಭ್ರಮಿಸುತ್ತಾ ವಿಶ್ವ ವಿಜೇತ ಮೆಸ್ಸಿ (Lionel Messi) ಪಡೆಯನ್ನು ಸ್ವಾಗತಿಸಿದ್ದಾರೆ. ಬಸ್ ಟಾಪಲ್ಲಿ ಕುಳಿತು, ನಿಂತು ಕರತಾಡನ ಮಾಡುವ ಮೂಲಕ ಲಕ್ಷಾಂತರ ಅಭಿಮಾನಿಗಳ ಪ್ರೀತಿಯನ್ನು ಕಣ್ತುಂಬಿಕೊಂಡಿದ್ದಾರೆ.

    ಇದೀಗ ಮ್ಯಾಜಿಕ್ ಮೆಸ್ಸಿ ಕೈಯಲ್ಲಿ ಅರಳಿದ ಟ್ಯಾಟು (lotus Tattoo) ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡ್ತಿದೆ. ಮೆಸ್ಸಿ ಬಲಗೈನಲ್ಲಿ ಕೇಸರಿ ಬಣ್ಣದಲ್ಲಿ ಬಿಡಿಸಿದ ಟ್ಯಾಟು ಒಂದು ಬಿಜೆಪಿ ಪಕ್ಷದ ಚಿನ್ಹೆಯನ್ನೇ ಹೋಲುವಂತಿದೆ ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಇದು ಈಗ ಭಾರತೀಯರ ಗಮನ ಸೆಳೆದಿದೆ. `ಮೆಸ್ಸಿ ಗೆಲುವು ಕೂಡಾ ಬಿಜೆಪಿ (BJP) ಕೈಯಲ್ಲಿದೆ’ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: 2ನೇ ಟೆಸ್ಟ್ ಆರಂಭಕ್ಕೂ ಮುನ್ನ ಗಾಯಗೊಂಡ ಕ್ಯಾಪ್ಟನ್ ರಾಹುಲ್ – ಟೀಂ ಇಂಡಿಯಾಗೆ ಪೂಜಾರ ಸಾರಥಿ?

    ವಿಜಯೋತ್ಸವದಲ್ಲಿ ತಪ್ಪಿದ ದುರಂತ:
    ಇನ್ನೂ ಅರ್ಜೆಂಟೀನಾ ಸಂಭ್ರಮಿಸುತ್ತಿದ್ದ ಈ ಹೊತ್ತಲ್ಲೇ ಮೆಸ್ಸಿ ಪಡೆ ಭಾರೀ ಅವಘಡದಿಂದ ಪಾರಾಗಿದೆ. ಬಸ್ ಮೇಲ್ಭಾಗದಲ್ಲಿ ಕುಳಿತು ಚಲಿಸುವಾಗ ವಿದ್ಯುತ್ ತಂತಿಯೊಂದ್ರಿಂದ ಸ್ವಲ್ಪದ್ರಲ್ಲಿ ಪಾರಾಗಿದ್ದಾರೆ. ಇದನ್ನೂ ಓದಿ: ಬಾಲಿವುಡ್ ನಟಿ ಅನನ್ಯ ಪಾಂಡೆ ಕಾಪಿ ಮಾಡಿದ ದಿಗ್ಗಜ ಆಟಗಾರ ಲಿಯೋನೆಲ್ ಮೆಸ್ಸಿ

    ಓರ್ವ ಆಟಗಾರನ ಕ್ಯಾಪ್ ವಿದ್ಯುತ್ ತಂತಿಗೆ ತಗುಲಿ ಕೆಳಗೆ ಬಿದ್ದಿದೆ. ಇನ್ನೂ ಮೆಸ್ಸಿ ಪಡೆ ತೆರಳ್ತಿದ್ದ ಓಪನ್ ಟಾಪ್ ಬಸ್ ಮೇಲೆ ಕೆಲ ಅಭಿಮಾನಿಗಳು ಸೇತುವೆ ಮೇಲಿಂದ ಜಿಗಿದಿದ್ದಾರೆ. ಕೆಲವರು ಚಲಿಸ್ತಿದ್ದ ಬಸ್ ಹತ್ತಲು ಪ್ರಯತ್ನಿಸಿದ್ದಾರೆ. ಲಕ್ಷಾಂತರ ಮಂದಿ ಅಭಿಮಾನಿಗಳಿಂದಾಗಿ ಒಂದು ಹಂತದಲ್ಲಿ ಬಸ್ ಮುಂದಕ್ಕೆ ಚಲಿಸೋದೇ ಕಷ್ಟವಾಗಿತ್ತು. ಇದ್ರಿಂದಾಗಿ ಮೆರವಣಿಗೆಯನ್ನು ಅರ್ಧಕ್ಕೆ ನಿಲ್ಲಿಸಲಾಯ್ತು.

    ಮೆಸ್ಸಿ ಪಡೆಯನ್ನು ಹೆಲಿಕಾಪ್ಟರ್ ಮೂಲಕ ಫುಟ್ಬಾಲ್ ಸಂಘದ ಪ್ರಧಾನ ಕಚೇರಿಗೆ ಕರೆದೊಯ್ಯಲಾಗಿದೆ. ವಿಜಯೋತ್ಸವದ ಮೆರವಣಿಗೆ ಅರ್ಧಕ್ಕೆ ಮೊಟಕಾಗಿದ್ದಕ್ಕೆ ಫುಟ್ಬಾಲ್ ಸಂಘ ಅಭಿಮಾನಿಗಳ ಕ್ಷಮೆ ಕೇಳಿದೆ.

    Live Tv
    [brid partner=56869869 player=32851 video=960834 autoplay=true]

  • ಬಾಲಿವುಡ್ ನಟಿ ಅನನ್ಯ ಪಾಂಡೆ ಕಾಪಿ ಮಾಡಿದ ದಿಗ್ಗಜ ಆಟಗಾರ ಲಿಯೋನೆಲ್ ಮೆಸ್ಸಿ

    ಬಾಲಿವುಡ್ ನಟಿ ಅನನ್ಯ ಪಾಂಡೆ ಕಾಪಿ ಮಾಡಿದ ದಿಗ್ಗಜ ಆಟಗಾರ ಲಿಯೋನೆಲ್ ಮೆಸ್ಸಿ

    ಗತ್ತಿನಾದ್ಯಂತ ಇದೀಗ  ಲಿಯೋನೆಲ್ ಮೆಸ್ಸಿ ಕುರಿತಾಗಿಯೇ ಮಾತು. ಅರ್ಜೆಂಟಿನಾ (Argentina) ಫಿಫಾ ವಿಶ್ವಕಪ್ ಗೆಲ್ಲುತ್ತಿದ್ದಂತೆಯೇ ಮೆಸ್ಸಿ ಗುಣಗಾನ ಯಾವ ದೇಶವನ್ನೂ ಬಿಟ್ಟಿಲ್ಲ. ಬಹುತೇಕ ದೇಶಗಳಲ್ಲಿ ಮೆಸ್ಸಿಯನ್ನು ಕೊಂಡಾಡಲಾಗುತ್ತಿದೆ. ಇಂತಹ ಮೆಸ್ಸಿ ಇದೀಗ ಬಾಲಿವುಡ್ ನಟಿ ಅನನ್ಯ ಪಾಂಡೆ (Ananya Pandey)ಯನ್ನು ಕಾಪಿ ಮಾಡಿದರಾ ಅನ್ನುವ ಅನುಮಾನವನ್ನು ಭಾರತದಲ್ಲಿರುವ ಮೆಸ್ಸಿ ಅಭಿಮಾನಿಗಳು ವ್ಯಕ್ತ ಪಡಿಸಿದ್ದಾರೆ. ಈ ಅನುಮಾನಕ್ಕೆ ಕಾರಣ, ಮೆಸ್ಸಿ ಟ್ರೋಫಿಯನ್ನು ತಬ್ಬಿಕೊಂಡು ಮಲಗಿರುವ ಫೋಟೋ.

    ಹೌದು, ಫಿಫಾ ವಿಶ್ವಕಪ್ ಗೆಲ್ಲುವುದು ಮೆಸ್ಸಿ ಪಾಲಿಗೆ ದೊಡ್ಡ ಗುರಿಯೇ ಆಗಿತ್ತು. ಇನ್ನೆಂದೂ ವಿಶ್ವಕಪ್ ನಲ್ಲಿ ಆಡಲಾರೆ ಎಂದು ಘೋಷಿಸಿಯೂ ಬಿಟ್ಟಿದ್ದರು. ವಿಶ್ವಕಪ್ ನಲ್ಲಿ ಇದು ಅವರ ಕೊನೆಯ ಆಟವಾಗಿದ್ದರಿಂದ ಆಸೆಗಣ್ಣಿನಿಂದಲೇ ಫುಟ್ ಬಾಲ್ (Football) ಮೇಲೆ ಕಾಲಿಟ್ಟಿದ್ದರು. ಕೊನೆಗೂ ಅದು ಈಡೇರಿದೆ. ರೋಚಕ ಪಂದ್ಯದಲ್ಲಿ ಗೆದ್ದು, ಮೆಸ್ಸಿ (Lionel Messi) ವಿಶ್ವ ಕಪ್ ಗೆ ಮುತ್ತಿಟ್ಟಿದ್ದರು. ಆ ಮುತ್ತಿನ ಗಮ್ಮತ್ತಿನಿಂದ ಹೊರಬರಲು ಇವತ್ತಿಗೂ ಅವರಿಗೆ ಸಾಧ್ಯವಾಗುತ್ತಿಲ್ಲ. ಅದರಲ್ಲೂ ವಿಶ್ವ ಕಪ್ ಗೆದ್ದ ದಿನ ಕಪ್ ಅನ್ನು ತಬ್ಬಿಕೊಂಡೇ ಮಲಗಿದ್ದರು ಮೆಸ್ಸಿ. ಆ ಫೋಟೋ ವೈರಲ್ ಆಗಿದೆ. ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ಅಚ್ಚರಿಯ ಎಂಟ್ರಿ : ಹಾವು ಏಣಿ ಆಟದಲ್ಲಿ ಮಂಜು ಪಾವಗಡ

    ಈ ಜಗತ್ತಿನಲ್ಲಿ ಇರುವುದು ನಾನು ಮತ್ತು ಕಪ್ ಎಂದು ನಿರಾಳವಾಗಿ ಮಲಗಿರುವ ಮೆಸ್ಸಿ, ಫೋಟೋ ರೀತಿಯಲ್ಲೇ ಈ ಹಿಂದೆ ಬಾಲಿವುಡ್ ನಟಿ ಅನನ್ಯ ಪಾಂಡೆ ಕೂಡ ಫಿಲ್ಮ್ ಫೇರ್ ಪ್ರಶಸ್ತಿಯ ಟ್ರೋಫಿಯನ್ನು ಹಿಡಿದು ಮಲಗಿದ್ದಾರೆ. ಆ ಮುಖಭಾವವೂ ಮೆಸ್ಸಿ ರೀತಿಯಲ್ಲೇ ಆನಂದದಿಂದಿದೆ. ಹಾಗಾಗಿ ಅನನ್ಯ ಪಾಂಡೆ ಅವರನ್ನು ಮೆಸ್ಸಿ ನಕಲು ಮಾಡಿದ್ದಾರೆ ಎಂದು ಕೆಲವರು ಟ್ರೋಲ್ ಮಾಡಿದ್ದಾರೆ. ಹಾಗಂತ ಇದು ಸೀರಿಯಸ್ ಆಗಿ ಆಗುತ್ತಿರುವ ಟ್ರೋಲ್ ಅಲ್ಲ, ತಮಾಷೆ ಅನ್ನುವಂತೆ ಮೆಸ್ಸಿಯನ್ನು ಕಾಲೆಳೆದಿದ್ದಾರೆ.

    ಮೆಸ್ಸಿಗೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳು ಒಲಿದು ಬಂದಿದ್ದರೂ ಫಿಫಾ ವಿಶ್ವಕಪ್ (World Cup) ಮಾತ್ರ ಮರಿಚಿಕೆಯಾಗಿತ್ತು. ಈ ಬಾರಿ ತನ್ನ ಕೊನೆಯ ವಿಶ್ವಕಪ್ ಆಡಲು ಕಣಕ್ಕಿಳಿದ ಮೆಸ್ಸಿ ವಿಶ್ವಕಪ್ ಮುಡಿಗೇರಿಸಿಕೊಳ್ಳುವ ಬಯಕೆಯೊಂದಿಗೆ ಕತಾರ್‌ಗೆ ಕಾಲಿಟ್ಟಿದ್ದರು. ಆದರೆ ಅರ್ಜೆಂಟಿನಾಗೆ ಆರಂಭದಲ್ಲೇ ಶಾಕ್ ಎದುರಾಗಿತ್ತು. ಅಚ್ಚರಿ ಎಂಬಂತೆ ಅರ್ಜೆಂಟಿನಾ ತನ್ನ ಮೊದಲ ಪಂದ್ಯದಲ್ಲೇ ಸೌದಿ ಅರೇಬಿಯಾ ವಿರುದ್ಧ ಸೋತು ಟೂರ್ನಿಯಿಂದ ಹೊರ ಬೀಳುವ ಇಕ್ಕಟ್ಟಿಗೆ ಸಿಲುಕಿತ್ತು. ಆದರೆ ಛಲಬಿಡದ ಮೆಸ್ಸಿ ತನ್ನ ಮ್ಯಾಜಿಕ್ ಮುಂದುವರಿಸಿದರು. ಆ ಬಳಿಕ ಲೀಗ್ ಮತ್ತು ನಾಕೌಟ್, ಸೆಮಿಫೈನಲ್ ಸಹಿತ ಫೈನಲ್‍ನಲ್ಲಿ ಗೋಲು ಸಿಡಿಸುತ್ತ ಫೈನಲ್‍ನಲ್ಲಿ ಫ್ರಾನ್ಸ್‌ನ್ನು ಬಗ್ಗುಬಡಿದು ಪ್ರಶಸ್ತಿ ಗೆದ್ದು ಎಲ್ಲರನ್ನೂ ನಿಬ್ಬೆರಗಾಗುವಂತೆ ಮಾಡಿದರು. ಜೊತೆಗೆ ವಿಶ್ವಕಪ್ ಗೆಲ್ಲುವ ತಮ್ಮ ಕನಸನ್ನು ಈಡೇರಿಸಿಕೊಂಡರು.

    Live Tv
    [brid partner=56869869 player=32851 video=960834 autoplay=true]