Tag: Link

  • PAN-Aadhaar Card ಇಂದೇ ಲಿಂಕ್ ಮಾಡಿಸಿಕೊಳ್ಳಿ- ಶುಕ್ರವಾರ ಕೊನೆಯ ದಿನ

    PAN-Aadhaar Card ಇಂದೇ ಲಿಂಕ್ ಮಾಡಿಸಿಕೊಳ್ಳಿ- ಶುಕ್ರವಾರ ಕೊನೆಯ ದಿನ

    ಬೆಂಗಳೂರು: ಪ್ಯಾನ್ ಕಾರ್ಡ್ (PAN Card) ಅನ್ನು ಆಧಾರ್ ಕಾರ್ಡ್ (Aadhaar Card) ನೊಂದಿಗೆ ಲಿಂಕ್ ಮಾಡೋಕೆ ಜೂನ್ 30 ಅಂದರೆ ಶುಕ್ರವಾರ ಕೊನೆಯ ದಿನವಾಗಿದೆ.

    ಕಳೆದ ಮೂರು ತಿಂಗಳಲ್ಲಿ ಆದಾಯ ತೆರಿಗೆ ಇಲಾಖೆಯು ಹಲವು ಬಾರಿ ದಿನಾಂಕವನ್ನು ವಿಸ್ತರಣೆ ಮಾಡಿತ್ತು. ಬಳಿಕ 2023ರ ಜೂನ್ 30ರ ವರೆಗೆ ಅವಧಿ ವಿಸ್ತರಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿತ್ತು. ಇದೀಗ ಪ್ಯಾನ್- ಆಧಾರ್ ಕಾರ್ಡ್ ಲಿಂಕ್ (PAN Card-Aadhaar Card Link) ಮಾಡಿಸಿಕೊಳ್ಳಲು ನಾಳೆ ಕೊನೆಯ ದಿನವಾಗಿದೆ. ಹೀಗಾಗಿ ಲಿಂಕ್ ಮಾಡಿಸದಿದ್ದವರು ಇಂದೇ ಈ ಕೆಲಸ ಮಾಡಿಕೊಳ್ಳಿ.

    ಒಂದು ವೇಳೆ ನಾಳೆ (ಶುಕ್ರವಾರ) ಯ ಒಳಗೆ ನಿಮ್ಮ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡಿಸದಿದ್ದರೆ ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗಲಿದೆ. ಜೊತೆಗೆ ಟ್ಯಾಕ್ಸ್ ಪೇ ಮಾಡುವವರಿಗೂ ಕೂಡ ಸಂಕಷ್ಟವಾಗಲಿದೆ. ಇದನ್ನೂ ಓದಿ: ಲೋಕಸಭೆ ಚುನಾವಣೆಗೆ ಮೋದಿ ತಯಾರಿ – ಹಿರಿಯ ನಾಯಕರಿಗೆ 3 ಟಾರ್ಗೆಟ್

    ಲಿಂಕ್ ಮಾಡುವುದು ಏಕೆ.?: ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ ಹೊಂದಿರುವುದನ್ನು ತಪ್ಪಿಸುವ ಉದ್ದೇಶದಿಂದ ಆಧಾರ್ ಜೊತೆಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡಿಸಬೇಕು ಎಂದು ಆದೇಶ ಹೊರಡಿಸಲಾಗಿತ್ತು. ಪ್ಯಾನ್ ಜೊತೆಗೆ ಆಧಾರ್ ಜೋಡಿಸುವ ವ್ಯವಸ್ಥೆಯನ್ನು 2017ರ ಏಪ್ರಿಲ್‍ನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿತ್ತು. ಆಗ ಪ್ಯಾನ್-ಆಧಾರ್ ಜೋಡಣೆಗೆ ಸರ್ಕಾರ ಯಾವುದೇ ಶುಲ್ಕ ವಿಧಿಸಿರಲಿಲ್ಲ. ಆದರೆ ನಿರೀಕ್ಷಿತ ಮಟ್ಟದಲ್ಲಿ ಆಧಾರ್- ಪ್ಯಾನ್ ಲಿಂಕ್ ಕಾರ್ಯಗತವಾಗಲಿಲ್ಲ. ಹೀಗಾಗಿ ಲಿಂಕ್‍ಗೆ ಹಲವು ಬಾರಿ ದಿನಾಂಕ ವಿಸ್ತರಣೆ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು.

    ಒಟ್ಟಿನಲ್ಲಿ ಕೇಂದ್ರ ಸರ್ಕಾರ ಮತ್ತೆ ಆಧಾರ್ ಪ್ಯಾನ್ ಕಾರ್ಡ್ ಲಿಂಕ್‍ಗೆ ಮತ್ತೆ ಅವಧಿ ವಿಸ್ತರಣೆ ಮಾಡುತ್ತಾ? ಅಥವಾ ನಾಳೆಯೇ ಆಧಾರ್ ಪ್ಯಾನ್ ಕಾರ್ಡ್ ಲಿಂಕ್‍ಗೆ ಅವಧಿ ಮುಗಿಯುತ್ತಾ ಎಂಬುದನ್ನು ಕಾದು ನೋಡಬೇಕಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆಧಾರ್‌ಗೆ ಲಿಂಕ್ ಮಾಡದೇ ಹೋದರೆ ನಿಮ್ಮ ಪ್ಯಾನ್ ನಿಷ್ಕ್ರಿಯ

    ಆಧಾರ್‌ಗೆ ಲಿಂಕ್ ಮಾಡದೇ ಹೋದರೆ ನಿಮ್ಮ ಪ್ಯಾನ್ ನಿಷ್ಕ್ರಿಯ

    ನವದೆಹಲಿ: ನಿಮ್ಮ ವೈಯಕ್ತಿಕ ಖಾತೆ ಸಂಖ್ಯೆಯನ್ನು (PAN) ಆಧಾರ್‌ನೊಂದಿಗೆ (Aadhaar) ಇಲ್ಲಿಯವರೆಗೆ ಲಿಂಕ್ (Link) ಮಾಡಿಸದೇ ಹೋಗಿದ್ದಲ್ಲಿ, ಈ ಕೂಡಲೇ ಮಾಡಿಸಿಕೊಳ್ಳಿ. ಏಕೆಂದರೆ, ನೀವು ಲಿಂಕ್ ಮಾಡಿಸದೇ ಹೋದಲ್ಲಿ ಕೆಲವೇ ದಿನಗಳಲ್ಲಿ ನಿಮ್ಮ ಪ್ಯಾನ್ ನಿಷ್ಕ್ರಿಯವಾಗಲಿದೆ ಎಂದು ಆದಾಯ ತೆರಿಗೆ ಇಲಾಖೆ ಎಚ್ಚರಿಕೆ ನೀಡಿದೆ.

    ಆದಾಯ ತೆರಿಗೆ ಇಲಾಖೆ ಇತ್ತೀಚೆಗೆ ನೀಡಿದ ಸಲಹೆಯಲ್ಲಿ, 2023ರ ಮಾರ್ಚ್ 31 ರ ಒಳಗಾಗಿ ಪ್ಯಾನ್ ಅನ್ನು ಆಧಾರ್ ಜೊತೆ ಲಿಂಕ್ ಮಾಡಿಲ್ಲವೆಂದರೆ ಅದು ಏಪ್ರಿಲ್ 1 ರಿಂದ ನಿಷ್ಕ್ರಿಯವಾಗಲಿದೆ ಎಂದು ತಿಳಿಸಿದೆ. ಈ ಕ್ರಮದಿಂದ ನಿಮ್ಮ ಆರ್ಥಿಕತೆಯ ಮೇಲೆ ಕೆಟ್ಟ ಪರಿಣಾಮವೂ ಬೀರುವ ಸಾಧ್ಯತೆಯಿದೆ ಎಂದು ಎಚ್ಚರಿಸಿದೆ.

    ಆದಾಯ ತೆರಿಗೆ ಕಾಯಿದೆ, 1961ರ ಪ್ರಕಾರ ವಿನಾಯಿತಿ ವರ್ಗದ ಅಡಿಯಲ್ಲಿ ಬರದ ಎಲ್ಲಾ ಪ್ಯಾನ್ ಹೊಂದಿದವರು 2023ರ ಮಾರ್ಚ್ 31ರ ಒಳಗಡೆ ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಲಿಂಕ್ ಮಾಡದೇ ಹೋದ ಪಾನ್‌ಗಳು ಮುಂದಿನ ಏಪ್ರಿಲ್ 1 ರಿಂದ ನಿಷ್ಕ್ರಿಯವಾಗಲಿದೆ. ಇದು ಕಡ್ಡಾಯ ಹಾಗೂ ಅವಶ್ಯಕವಾಗಿದ್ದು, ಲಿಂಕ್ ಮಾಡಲು ತಡ ಮಾಡಬೇಡಿ ಎಂದು ಟ್ವಿಟ್ಟರ್ ಖಾತೆಯಲ್ಲಿ ತಿಳಿಸಿದೆ.

    ಲಿಂಕ್ ಯಾಕೆ?
    ಆದಾಯ ತೆರಿಗೆ ಇಲಾಖೆ ಪ್ಯಾನ್ ಹೊಂದಿರುವವರ ಎಲ್ಲಾ ವಹಿವಾಟುಗಳನ್ನು ಇಲಾಖೆಯೊಂದಿಗೆ ಗುರುತಿಸಲು ಈ ಕ್ರಮವನ್ನು ಕೈಗೊಂಡಿದೆ. ಇದರಲ್ಲಿ ತೆರಿಗೆ ಪಾವತಿ, ಟಿಡಿಎಸ್/ಟಿಸಿಎಸ್ ಕ್ರೆಡಿಟ್‌ಗಳು, ಆದಾಯ, ನಿರ್ದಿಷ್ಟ ವಹಿವಾಟುಗಳು ಪತ್ರ ವ್ಯವಹಾರಗಳು ಸೇರಿವೆ. ಪ್ಯಾನ್ ಹೊಂದಿರುವವರ ಮಾಹಿತಿಗಳನ್ನು ಸುಲಭವಾಗಿ ಪಡೆಯಲು ಹಾಗೂ ಅವರ ವಿವಿಧ ರೀತಿಯ ಹೂಡಿಕೆಗಳು, ಸಾಲ, ಇತರ ವ್ಯಾಪಾರ ಚಟುವಟಿಕೆಗಳ ಹೊಂದಾಣಿಕೆಯನ್ನು ಅರಿತುಕೊಳ್ಳಲು ಸಾಧ್ಯವಾಗಲಿದೆ.

    ಲಿಂಕ್‌ಗೆ ಶುಲ್ಕ ಎಷ್ಟು?
    ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ (CBDT) ಪ್ಯಾನ್‌ನೊಂದಿಗೆ ಆಧಾರ್ ಲಿಂಕ್ ಮಾಡುವ ಗಡುವನ್ನು 2022ರ ಮಾರ್ಚ್ 31 ರಿಂದ 2023 ಮಾರ್ಚ್ 31ರ ವರೆಗೆ ವಿಸ್ತರಿಸಿದೆ. ನೀವು 31 ಮಾರ್ಚ್ 2023ರ ವರೆಗೆ ಆಧಾರ್ ಅನ್ನು ಪ್ಯಾನ್‌ನೊಂದಿಗೆ ಲಿಂಕ್ ಮಾಡಬಹುದು. ಲಿಂಕ್ ಮಾಡುವ ವೇಳೆ ನೀವು ಶುಲ್ಕವನ್ನು ಪಾವತಿಸಬೇಕಾಗುತ್ತದೆ. 2022 ಜೂನ್ 30ರ ವರೆಗೆ ಶುಲ್ಕ 500ರೂ. ಇದ್ದು, 2022 ಜುಲೈ 1ರಿಂದ ಶುಲ್ಕ 1,000 ರೂ. ಆಗಿದೆ. ಇದನ್ನೂ ಓದಿ: 2022ರಲ್ಲಿ ದಾಖಲೆಯ ಡ್ರಿಂಕ್ ಅಂಡ್ ಡ್ರೈವ್ ಕೇಸ್ ದಾಖಲು

    ಲಿಂಕ್ ಹೇಗೆ?
    ಈ ಕೆಳಗಿನ ಪ್ರಕ್ರಿಯೆಯ ಮೂಲಕ ನೀವು ನಿಮ್ಮ ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಬಹುದು:
    * ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್ ತೆರೆಯಿರಿ – https://incometaxindiaefiling.gov.in/

    * ಅದರ ಮೇಲೆ ನೋಂದಾಯಿಸಿ (ಈಗಾಗಲೇ ಮಾಡದಿದ್ದರೆ). ನಿಮ್ಮ ಪ್ಯಾನ್ ನಿಮ್ಮ ಬಳಕೆದಾರ ಐಡಿ (ಯೂಸರ್ ಐಡಿ) ಆಗಿರುತ್ತದೆ.
    * ಬಳಕೆದಾರ ಐಡಿ, ಪಾಸ್‌ವರ್ಡ್ ಮತ್ತು ಜನ್ಮ ದಿನಾಂಕವನ್ನು ನಮೂದಿಸುವ ಮೂಲಕ ಲಾಗ್ ಇನ್ ಮಾಡಿ.
    * ಪಾಪ್-ಅಪ್ ವಿಂಡೋ ಕಾಣಿಸಿಕೊಳ್ಳುತ್ತದೆ, ನಿಮ್ಮ ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲು ಕೇಳುತ್ತದೆ. ಇಲ್ಲದಿದ್ದರೆ, ಮೆನು ಬಾರ್‌ನಲ್ಲಿ ‘ಪ್ರೊಫೈಲ್ ಸೆಟ್ಟಿಂಗ್ಸ್’ಗೆ ಹೋಗಿ ಮತ್ತು ‘ಲಿಂಕ್ ಆಧಾರ್’ ಕ್ಲಿಕ್ ಮಾಡಿ.
    * ಪ್ಯಾನ್ ವಿವರಗಳ ಪ್ರಕಾರ ಹೆಸರು ಹುಟ್ಟಿದ ದಿನಾಂಕ ಮತ್ತು ಲಿಂಗದಂತಹ ವಿವರಗಳನ್ನು ಈಗಾಗಲೇ ನಮೂದಿಸಲಾಗಿದೆ.
    * ನಿಮ್ಮ ಆಧಾರ್‌ನಲ್ಲಿ ನಮೂದಿಸಲಾದ ಪ್ಯಾನ್ ವಿವರಗಳನ್ನು ಪರದೆಯ ಮೇಲೆ ಪರಿಶೀಲಿಸಿ. ಏನಾದದೂ ತಪ್ಪುಗಳು ಕಂಡುಬಂದಲ್ಲಿ ನೀವು ಅದರಲ್ಲಿರುವ ದಾಖಲೆಗಳನ್ನು ನಮೂದಿಸಿ ಸರಿಪಡಿಸಬೇಕಾಗುತ್ತದೆ.
    * ವಿವರಗಳು ಹೊಂದಾಣಿಕೆಯಾದರೆ, ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ ಮತ್ತು ‘ಲಿಂಕ್ ನವ್’ ಬಟನ್ ಅನ್ನು ಕ್ಲಿಕ್ ಮಾಡಿ.
    * ನಿಮ್ಮ ಆಧಾರ್ ನಿಮ್ಮ ಪ್ಯಾನ್‌ಗೆ ಯಶಸ್ವಿಯಾಗಿ ಲಿಂಕ್ ಆಗಿದ್ದರೆ, ನಿಮಗೆ ಸಂದೇಶದ ಮೂಲಕ ಮಾಹಿತಿಯನ್ನು ತಿಳಿಸಲಿದೆ.
    * ನಿಮ್ಮ ಪ್ಯಾನ್ ಮತ್ತು ಆಧಾರ್ ಅನ್ನು ಲಿಂಕ್ ಮಾಡಲು ನೀವು  https://www.utiitsl.com/ OR https://www.egov-nsdl.co.in/ ಗೆ ಭೇಟಿ ನೀಡಬಹುದು.

    ಆಫ್‌ಲೈನ್ ಲಿಂಕ್ ಹೇಗೆ?
    * ನೀವು ಆನ್‌ಲೈನ್ ಬದಲು ಆಫ್‌ಲೈನ್ ಲಿಂಕ್ ಮಾಡಲು ಬಯಸಿದರೆ, ಎನ್‌ಎಸ್‌ಡಿಎಲ್ ಕಚೇರಿಗೆ ಭೇಟಿ ನೀಡಿ.
    * ಅಧಿಕಾರಿಗಳ ಬಳಿ ಸಂಬಂಧಿತ ಅರ್ಜಿಯನ್ನು ಕೇಳಿ.
    * ಅರ್ಜಿಯಲ್ಲಿ ತಿಳಿಸಲಾದ ಅಗತ್ಯ ಮಾಹಿತಿಗಳನ್ನು ನಮೂದಿಸಿ ಹಾಗೂ ಕೇಳಲಾದ ದಾಖಲೆಗಳನ್ನು ಲಗತ್ತಿಸಿ.
    * ನೀವು ಅರ್ಜಿಯನ್ನು ಅಧಿಕಾರಿಗಳಿಗೆ ಸಲ್ಲಿಸಿದ ಬಳಿಕ ಅವರು ಪರಿಶೀಲನೆ ನಡೆಸಿ, ಆಧಾರ್ ಹಾಗೂ ಪ್ಯಾನ್ ಕಾರ್ಡ್‌ಗಳನ್ನು ಲಿಂಕ್ ಮಾಡುತ್ತಾರೆ. ಇದನ್ನೂ ಓದಿ: ಗಡಿ ವಿಚಾರದಲ್ಲಿ ಮತ್ತೆ ಕ್ಯಾತೆ ಮುಂದುವರಿಸಿದ MESನಿಂದ ನಾಡದ್ರೋಹಿ ಘೋಷಣೆ

    Live Tv
    [brid partner=56869869 player=32851 video=960834 autoplay=true]

  • ವಾಟ್ಸಪ್​ನಲ್ಲಿ ಸೀಕ್ರೆಟ್ ಗ್ರೂಪ್ – ಗೌಪ್ಯವಾಗಿ ಇರಿಸಬಹುದು ಫೋಟೋ, ವಿಡಿಯೋ, ಲಿಂಕ್

    ವಾಟ್ಸಪ್​ನಲ್ಲಿ ಸೀಕ್ರೆಟ್ ಗ್ರೂಪ್ – ಗೌಪ್ಯವಾಗಿ ಇರಿಸಬಹುದು ಫೋಟೋ, ವಿಡಿಯೋ, ಲಿಂಕ್

    ನವದೆಹಲಿ: ವಾಟ್ಸಪ್ ವಿಶ್ವದೆಲ್ಲಡೆ ಅತಿ ಹೆಚ್ಚು ಬಳಕೆಯಾಗುವ ಆ್ಯಪ್‍ಗಳಲ್ಲಿ ಒಂದಾಗಿದೆ. ವಾಟ್ಸಪ್ ಮೂಲಕ ವೈಯಕ್ತಿಕ ಅಥವಾ ಗ್ರೂಪ್ ಮುಖಾಂತರ ಸಂದೇಶ, ಫೋಟೋ, ವಿಡಿಯೋಗಳನ್ನು ಹಂಚಿಕೊಳ್ಳಬಹುದು. ಇತ್ತೀಚೆಗೆ ವಾಟ್ಸಪ್ ಮೂಲಕವೇ ಹಲವು ದಾಖಲೆಗಳನ್ನು ರವಾನಿಸಲಾಗುತ್ತಿದೆ. ಕೆಲವೊಮ್ಮೆ ವಾಟ್ಸಪ್ ನಲ್ಲಿ ಬರುವ ಲಿಂಕ್ ಅಥವಾ ಫೋಟೋಗಳನ್ನು ಸೇವ್ ಮಾಡಿಕೊಳ್ಳಲು ಇಚ್ಛಿಸುತ್ತೇವೆ. ಆದ್ರೆ ವಾಟ್ಸಪ್ ನಲ್ಲಿ ಈ ಸೌಲಭ್ಯವಿಲ್ಲ. ಸಣ್ಣದೊಂದು ಟ್ರಿಕ್ ಮೂಲಕ ನೀವು ನಿಮಗೆ ಇಷ್ಟವಾದ ಫೋಟೋ, ವಿಡಿಯೋ ಲಿಂಕ್ ಗಳನ್ನು ವಾಟ್ಸಪ್ ನಲ್ಲಿ ಸೇವ್ ಮಾಡಿಕೊಳ್ಳಬಹುದು.

    ನಿಮ್ಮ ಫೋಟೋ, ವಿಡಿಯೋ ಅಥವಾ ರಹಸ್ಯ ಮಾಹಿತಿಗಳನ್ನು ವಾಟ್ಸಪ್ ನಲ್ಲಿ ಸೇವ್ ಮಾಡಿಕೊಳ್ಳಲು ನಿಮಗೆ ಒಂದು ನಿಮಿಷಕ್ಕಾಗಿ ಓರ್ವ ಗೆಳೆಯನ ಅವಶ್ಯಕತೆ ಇದೆ. ವಾಟ್ಸಪ್ ನಲ್ಲಿ ನಿಮ್ಮ ಸೀಕ್ರೆಟ್ ಗ್ರೂಪ್ ಕ್ರಿಯೇಟ್ ಮಾಡಿಕೊಳ್ಳಲು ಈ ಕೆಳಗಿನ ವಿಧಾನಗಳನ್ನು ಅನುಸರಿಸಿ

    1. ಮೊದಲಿಗೆ ಹೊಸ ಗ್ರೂಪ್ ಕ್ರಿಯೇಟ್ ಮಾಡಲು ವಾಟ್ಸಪ್ ಬಲ ಬದಿಯಲ್ಲಿರುವ ಮೂರು ಡಾಟ್ ಗಳ ಮೇಲೆ ಕ್ಲಿಕ್ ಮಾಡಿ, ನ್ಯೂ ಗ್ರೂಪ್ ಮೇಲೆ ಪ್ರೆಸ್ ಮಾಡಿ.
    2. ನ್ಯೂ ಗ್ರೂಪ್ ಎಂದು ಕ್ಲಿಕ್ ಮಾಡಿದಾಗ, ನಿಮ್ಮ ಕಾಂಟೆಕ್ಸ್ ಲಿಸ್ಟ್ ಓಪನ್ ಆಗುತ್ತೆ. ನಿಮಗೆ ಬೇಕಾದ ಓರ್ವ ಗೆಳೆಯನನ್ನು ಸೆಲೆಕ್ಟ್ ಮಾಡಿ ಒಂದು ಹೆಸರನ್ನು ಇರಿಸಿ ಗ್ರೂಪ್ ಕ್ರಿಯೇಟ್ ಮಾಡಿಕೊಳ್ಳಿ.

    3. ಈಗ ನೀವು ಕ್ರಿಯೆಟ್ ಮಾಡಿರುವ ಗ್ರೂಪ್‍ಗೆ ಹೋಗಿ. ಅಲ್ಲಿ ನಿಮಗೆ ಗ್ರೂಪ್ ಮಾಹಿತಿ ಲಭ್ಯವಾಗುತ್ತದೆ. ಅಲ್ಲಿ ನಿಮ್ಮ ಗೆಳೆಯನನ್ನು ರಿಮೂ ಮಾಡಿ.
    4. ಈಗ ನೀವು ಕ್ರಿಯೆಟ್ ಮಾಡಿದ ಗ್ರೂಪಿನಲ್ಲಿ ಅಡ್ಮಿನ್ ಆಗಿ ಒಬ್ಬರೇ ಉಳಿಯುತ್ತಿರಿ.
    5. ನಿಮಗೆ ಬಂದಿರುವ ಮೆಸೇಜ್ ಗಳನ್ನು ಹೊಸ ಗ್ರೂಪಿಗೆ ಫಾರ್ವಡ್ ಮಾಡಿಕೊಳ್ಳುವ ಮೂಲಕ ಸೇವ್ ಮಾಡಿಕೊಳ್ಳಬಹುದು.

  • ವೋಟರ್ ಐಡಿಗೆ ಆಧಾರ್ ಲಿಂಕ್ ಕಡ್ಡಾಯ?

    ವೋಟರ್ ಐಡಿಗೆ ಆಧಾರ್ ಲಿಂಕ್ ಕಡ್ಡಾಯ?

    ನವದೆಹಲಿ: ಮತದಾರರ ಗುರುತಿನ ಚೀಟಿಯನ್ನು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡುವ ಕುರಿತು ಚುನಾವಣಾ ಆಯೋಗ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಬಗ್ಗೆ ಚಿಂತನೆ ನಡೆಸಿದೆ.

    ಆಧಾರ್ ಸಂಖ್ಯೆಯನ್ನು ಪಾನ್ ಕಾರ್ಡ್ ಹಾಗೂ ಸರ್ಕಾರದ ಸವಲತ್ತು ಪಡೆಯುವ ಯೋಜನೆಗಳಲ್ಲಿ ಮಾತ್ರವೇ ಬಳಸುವಂತೆ ಸುಪ್ರೀಂ ಕೋರ್ಟ್ ಆದೇಶದ ಬೆನ್ನಲ್ಲೇ ಭಾರತೀಯ ಚುನಾವಣಾ ಆಯೋಗ ಮತದಾರರ ಗುರುತಿನ ಚೀಟಿಯನ್ನು ಆಧಾರ್ ನೊಂದಿಗೆ ಜೋಡಿಸಲು ಮುಂದಾಗುತ್ತಿದೆ.

    ಮತದಾರರ ಗುರುತಿನ ಚೀಟಿಗಳನ್ನು ಆಧಾರ್ ಸಂಖ್ಯೆಗೆ ಲಿಂಕ್ ಮಾಡಬೇಕೆಂದರೆ ಮೊದಲು ಜನಪ್ರತಿನಿಧಿ ಕಾಯ್ದೆ-1951 ರ ತಿದ್ದುಪಡಿಯಾಗಬೇಕಿದೆ. ಹೀಗಾಗಿ ಚುನಾವಣಾ ಆಯೋಗ ಕೇಂದ್ರ ಸರ್ಕಾರಕ್ಕೆ ಈ ಬಗ್ಗೆ ಶೀಘ್ರವೇ ಪ್ರಸ್ತಾವನೆಯನ್ನು ಸಲ್ಲಿಸಲು ಮುಂದಾಗುತ್ತಿದೆ ಎನ್ನುವ ಮಾಹಿತಿಗಳು ಲಭ್ಯವಾಗಿದೆ.

    ಇದಲ್ಲದೇ ಕಳೆದ ಅಕ್ಟೋಬರ್ ತಿಂಗಳಲ್ಲಿ ಎಂ.ಎಲ್.ರವಿ ಎಂಬವರು ಸಾರ್ವಜನಿಕ ಹಿತಾಸಕ್ತಿಯಡಿಯಲ್ಲಿ ಮತದಾರರ ಗುರುತಿನ ಚೀಟಿಯನ್ನು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡುವ ಬಗ್ಗೆ ಮದ್ರಾಸ್ ಹೈಕೋರ್ಟ್ ನಲ್ಲಿ ಅರ್ಜಿಯನ್ನು ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್ ಈ ಬಗ್ಗೆ ಯಾವುದೇ ವಿರೋಧ ವ್ಯಕ್ತಪಡಿಸಿಲ್ಲವೆಂದು ಚುನಾವಣಾ ಆಯೋಗ ಹೇಳಿತ್ತು.

    ಜೋಡಣೆಯಿಂದ ಉಪಯೋಗವೇನು?
    ದೇಶದಲ್ಲಿರುವ ಎಲ್ಲಾ ಮತದಾರರ ಗುರುತಿನ ಚೀಟಿಗಳನ್ನು ಆಧಾರ್ ಸಂಖ್ಯೆಯೊಂದಿಗೆ ಜೋಡಣೆ ಮಾಡಿದರೆ, ದೇಶದಲ್ಲಿ ನಡೆಯುವ ಚುನಾವಣೆಗಳಲ್ಲಿ ಅಕ್ರಮ ಮತದಾನದ ಹಾವಳಿ ನಿಯಂತ್ರಣವಾಗುತ್ತದೆ. ಅಲ್ಲದೇ ಎರಡೆರಡು ಗುರುತಿನ ಚೀಟಿಗಳನ್ನು ಪಡೆದವರ ಕಾರ್ಡು ಗಳು ರದ್ದಾಗುತ್ತವೆ. ಇದರಿಂದಾಗಿ ದೇಶದಲ್ಲಿರುವ ಮತದಾರರ ನಿಖರ ಸಂಖ್ಯೆಯನ್ನು ಪತ್ತೆಹಚ್ಚಲು ಸಾಧ್ಯವಾಗುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಜನವರಿ 1 ರಿಂದ OTP ಮೂಲಕವೇ ಮೊಬೈಲ್ ನಂಬರ್ ಗೆ ಆಧಾರ್ ಲಿಂಕ್ ಮಾಡಿ

    ಜನವರಿ 1 ರಿಂದ OTP ಮೂಲಕವೇ ಮೊಬೈಲ್ ನಂಬರ್ ಗೆ ಆಧಾರ್ ಲಿಂಕ್ ಮಾಡಿ

    ನವದೆಹಲಿ: ಮೊಬೈಲ್ ನಂಬರ್ ಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡದೆ ಇರುವವರು ಜನವರಿ 1 ನಂತರ ತಮ್ಮ ಮೊಬೈಲ್ ನಲ್ಲಿ ಒನ್ ಟೈಮ್ ಪಾಸವಾರ್ಡ್ (OTP) ವಿಧಾನ ಮೂಲಕ ಆಧಾರ್ ಲಿಂಕ್ ಮಾಡುವ ಹೊಸ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ.

    ವಾಯ್ಸ್-ಗೈಡೆನ್ಸ್ ಮೂಲಕ ಆಧಾರ್ ಲಿಂಕ್ ಮಾಡುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದಾಗಿದ್ದು, ಈ ವ್ಯವಸ್ಥೆಯನ್ನು ಒಂದು ತಿಂಗಳ ಹಿಂದೆಯೇ ಗ್ರಾಹಕರ ಬಳಕೆಗೆ ನೀಡಬೇಕಾಗಿತ್ತು. ಆದರೆ ಟೆಲಿಕಾಂ ಕಂಪನಿಗಳು ಹಾಗೂ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದ (UIDAI) ನಡುವಿನ ಗೊಂದಲಗಳ ಹಿನ್ನೆಲೆಯಲ್ಲಿ ತಡವಾಗಿ ಜಾರಿಗೆ ಬರುತ್ತಿದೆ. ಇನ್ನು ದೇಶದಲ್ಲಿ ಸುಮಾರು 50 ಕೋಟಿ ಗ್ರಾಹಕರು ತಮ್ಮ ಮೊಬೈಲ್ ಸಂಖ್ಯೆಗೆ ಆಧಾರ್ ನಂಬರ್ ಲಿಂಕ್ ಮಾಡಬೇಕಿದೆ.

    ಸರ್ಕಾರವು ಸಾರ್ವಜನಿಕರ ಮೊಬೈಲ್ ನಂಬರ್ ಗೆ ಆಧಾರ್ ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಿತ್ತು, ಆದರೆ ಎಲ್ಲರಿಗೂ ಟೆಲಿಕಾಂ ಸಂಸ್ಥೆಗಳ ಕಚೇರಿಗೆ ಆಧಾರ್ ಲಿಂಕ್ ಮಾಡುವುದು ಕಷ್ಟ ಸಾಧ್ಯ ಎಂದು ಹಲವರು ಸುಪ್ರೀಂ ಕೋರ್ಟ್ ನಲ್ಲಿ ದೂರು ದಾಖಲಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದ ಕೋರ್ಟ್ ಇದು ಬೃಹತ್ ಪ್ರಕ್ರಿಯೆಯಾಗಿದ್ದು, ಟೆಲಿಕಾಂ ಸಂಸ್ಥೆಗಳ ಕಚೇರಿಗೆ ತೆರಳಿ ಆಧಾರ್ ಲಿಂಕ್ ಮಾಡುವುದು ಕಷ್ಟ ಸಾಧ್ಯ ಎಂಬ ಅಭಿಪ್ರಾಯ ವ್ಯಕ್ತಪಡಿಸಿತ್ತು.

    ಮೊಬೈಲ್ ಗ್ರಾಹಕರಿಗೆ ಫೆಬ್ರವರಿ ಮೊದಲ ವಾರದ ವರೆಗೂ ಆಧಾರ್ ಲಿಂಕ್ ಮಾಡುವ ಅವಕಾಶ ನೀಡಲಾಗಿದೆ. ನಂತರದಲ್ಲಿ ಆಧಾರ್ ಲಿಂಕ್ ಹೊಂದಿರದ ಮೊಬೈಲ್ ಸಂಖ್ಯೆಗಳನ್ನು ರದ್ದು ಮಾಡಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.

    OTP ವಿಧಾನ ಬಳಕೆ ಹೇಗೆ?
    ಮೊಬೈಲ್ ಬಳಕೆದಾರರು ತಮ್ಮ ಮೊಬೈಲ್ ನಿಂದ ಇಂಟರಾಕ್ಟಿವ್ ವಾಯ್ಸ್ ರೆಸ್ಪಾನ್ಸ್ ವ್ಯವಸ್ಥೆಗೆ ಕರೆ ಮಾಡಿ, ಅಲ್ಲಿನ ಸೂಚನೆಗಳನ್ನು ಪೂರ್ಣಗೊಳಿಸಿ ಆಧಾರ್ ಲಿಂಕ್ ಮಾಡಬಹುದು. ವಾಯ್ಸ್ ಕರೆಯ ನಂತರ ಮೊಬೈಲ್ ಸಂಖ್ಯೆಗೆ OTP ಸಂಖ್ಯೆ ಕಳುಹಿಸಿ ಕೊಡಲಾಗುತ್ತದೆ. ಈ ಸಂಖ್ಯೆಯನ್ನು ದಾಖಲಿಸಿದರೆ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಈ ಸೇವೆಯು ಇಂಗ್ಲಿಷ್, ಹಿಂದಿ ಹಾಗೂ ಕೆಲವು ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಿರಲಿದೆ.

     

  • ಗಮನಿಸಿ, ಆಧಾರ್ ಲಿಂಕ್ ಮಾಡದಿದ್ರೆ ರದ್ದಾಗುತ್ತೆ ಸಿಮ್ ಕಾರ್ಡ್

    ಗಮನಿಸಿ, ಆಧಾರ್ ಲಿಂಕ್ ಮಾಡದಿದ್ರೆ ರದ್ದಾಗುತ್ತೆ ಸಿಮ್ ಕಾರ್ಡ್

    ನವದೆಹಲಿ: ಆಧಾರ್ ಜೊತೆ ನಿಮ್ಮ ಸಿಮ್ ಕಾರ್ಡ್ ಲಿಂಕ್ ಆಗದೇ ಇದ್ದಲ್ಲಿ ನಿಮ್ಮ ಫೋನ್ ನಂಬರ್ ಮುಂದೆ ರದ್ದಾಗಲಿದೆ.

    ಹೌದು. ಆಧಾರ್ ಜತೆ ಸಿಮ್ ಕಾರ್ಡ್‍ಗಳನ್ನು ಲಿಂಕ್ ಮಾಡುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ. ಒಂದು ವೇಳೆ ಲಿಂಕ್ ಆಗದೇ ಇದ್ದಲ್ಲಿ ಆ ಸಿಮ್ ಕಾರ್ಡ್ ಗಳನ್ನು 2018ರ ಫೆಬ್ರವರಿಯ ನಂತರ ರದ್ದುಗೊಳಿಸಲಾಗುವುದು ಎಂದು ಸರ್ಕಾರ ಆದೇಶ ಹೊರಡಿಸಿದೆ.

    ಇದನ್ನೂ ಓದಿ: ಜಸ್ಟ್ 1 ನಿಮಿಷದಲ್ಲಿ ಪಾನ್ ಕಾರ್ಡ್ ಗೆ ಆಧಾರ್ ನಂಬರ್ ಸೇರಿಸುವುದು ಹೇಗೆ?

    ಲೋಕನೀತಿ ಫೌಂಡೇಶನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಸುಪ್ರೀಂ ಕೋರ್ಟ್ ನಲ್ಲಿ ಶನಿವಾರ ನಡೆದ ಬಳಿಕ ಕೇಂದ್ರ ಸರ್ಕಾರ ಈ ಆದೇಶವನ್ನು ಹೊರಡಿಸಿದೆ. ಅಪರಾಧಿಗಳು, ಭಯೋತ್ಪಾದಕರು ಸಿಮ್ ಕಾರ್ಡ್‍ಗಳನ್ನು ಬಳಸುವುದನ್ನು ತಡೆಗಟ್ಟಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ. ಎಲ್ಲ ಟೆಲಿಕಾಂ ಆಪರೇಟರ್ ಗಳು ಗ್ರಾಹಕರಿಗೆ ಮೊಬೈಲ್, ಇಮೇಲ್ ಅಥವಾ ಜಾಹೀರಾತುಗಳ ಮೂಲಕ ಈ ವಿಚಾರವನ್ನು ತಿಳಿಸಬೇಕು ಎಂದು ಸೂಚಿಸಿದೆ.

    ಗ್ರಾಹಕರ ವೈಯಕ್ತಿಕ ಮಾಹಿತಿಗಳನ್ನು ಯಾವುದೇ ಕಾರಣಕ್ಕೂ ಮೊಬೈಲ್ ಆಪರೇಟರ್‍ಗಳು ಸಂಗ್ರಹಿಸುವಂತಿಲ್ಲ. ವೈಯಕ್ತಿಕ ಮಾಹಿತಿಗಳನ್ನು ಸಂಗ್ರಹಿಸಿಡುವುದು 2016ರ ಆಧಾರ್ ಕಾಯ್ದೆಯ ಅನ್ವಯ ಶಿಕ್ಷಾರ್ಹವಾಗಿದ್ದು, ಆರೋಪ ಸಾಬೀತಾದರೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.

    ಇದನ್ನೂ ಓದಿ: ಕರ್ನಾಟಕದಲ್ಲಿ ದೇವರ ದರ್ಶನಕ್ಕೆ ಆಧಾರ್ ಕಡ್ಡಾಯ!