Tag: Lingsugur

  • ಮೊಹರಂ ಆಚರಣೆ ವೇಳೆ ದುರಂತ – ಬೆಂಕಿಗೆ ಬಿದ್ದು ವ್ಯಕ್ತಿಗೆ ಗಂಭೀರ ಗಾಯ

    ಮೊಹರಂ ಆಚರಣೆ ವೇಳೆ ದುರಂತ – ಬೆಂಕಿಗೆ ಬಿದ್ದು ವ್ಯಕ್ತಿಗೆ ಗಂಭೀರ ಗಾಯ

    ರಾಯಚೂರು: ಮೊಹರಂ (Muharram) ಆಚರಣೆ ವೇಳೆ ಬೆಂಕಿಗೆ (Fire) ಬಿದ್ದು ವ್ಯಕ್ತಿಯೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಲಿಂಗಸುಗೂರು (Lingsugur) ತಾಲೂಕಿನ ಯರಗುಂಟಿಯಲ್ಲಿ ನಡೆದಿದೆ.

    ಗಾಯಗೊಂಡ ವ್ಯಕ್ತಿಯನ್ನು ಹನುಮಂತ (45) ಎಂದು ಗುರುತಿಸಲಾಗಿದೆ. ಹಬ್ಬದ ಸಡಗರದಲ್ಲಿದ್ದಾಗ ಅವರು ಹಲಾಯಿ ಕುಣಿಗೆ ಆಯತಪ್ಪಿ ಬಿದ್ದಿದ್ದಾರೆ. ಗಂಭೀರ ಗಾಯಗಳಾಗಿದ್ದು, ಅವರು ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ಪುತ್ತೂರು | ವಿಹರಿಸುತ್ತಿದ್ದ ಜೋಡಿಗೆ ಕಿರುಕುಳ – ನಿಂದಿಸಿ ವಿಡಿಯೋ ಹರಿಬಿಟ್ಟ ಪುಂಡರು

    ಗಾಯಾಳುವನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಲಿಂಗಸುಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಜಾತ್ರೆಯಲ್ಲಿ ಗುಂಡು ಹಾರಿಸಿದ ಪ್ರಕರಣ – ರಮೇಶ್‌ ಜಾರಕಿಹೊಳಿ ಪುತ್ರನ ವಿರುದ್ಧ ಎಫ್‌ಐಆರ್‌

  • ಬಸ್ ಸಿಗದಿದ್ದಕ್ಕೆ ವಾಹನಗಳ ಮೇಲೆ ಕಲ್ಲು ತೂರಾಟ – ಆರೋಪಿ ಅರೆಸ್ಟ್

    ಬಸ್ ಸಿಗದಿದ್ದಕ್ಕೆ ವಾಹನಗಳ ಮೇಲೆ ಕಲ್ಲು ತೂರಾಟ – ಆರೋಪಿ ಅರೆಸ್ಟ್

    ರಾಯಚೂರು: ಊರಿಗೆ ಹೋಗಲು ಬಸ್ (Bus) ಸಿಗಲಿಲ್ಲ ಎಂದು ಸಿಕ್ಕ ಸಿಕ್ಕ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ ಆರೋಪಿಯನ್ನು ಹಟ್ಟಿ ಪೊಲೀಸರು (Police) ಬಂಧಿಸಿದ್ದಾರೆ.

    ಬಂಧಿತ ಆರೋಪಿಯನ್ನು ಲಿಂಗಸುಗೂರಿನ (Lingsugur) ಗೋಲಪಲ್ಲಿಯ ತಿಮ್ಮಣ್ಣ ಎಂದು ಗುರುತಿಸಲಾಗಿದೆ. ಗ್ರಾಮದ ಬಳಿ ನ.19ರ ಬೆಳಗಿನ ಜಾವ 2ರ ವೇಳೆ ಆರೋಪಿ ತನ್ನ ಸ್ನೇಹಿತರೊಂದಿಗೆ ಸೇರಿಕೊಂಡು ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದ. ಕಲ್ಲು ತೂರಾಟದಲ್ಲಿ ಮೂರು ಸಾರಿಗೆ ಬಸ್, ಕಾರು ಹಾಗೂ ಲಾರಿಗಳ ಗಾಜುಗಳು ಒಡೆದು ಹೋಗಿದ್ದವು. ಅಲ್ಲದೇ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು.

    ಈ ಘಟನೆ ಪೊಲೀಸರಿಗೆ ತಲೆನೋವಾಗಿತ್ತು. ಕಳ್ಳತನ ಮಾಡಲು ವಾಹನಗಳ ಮೇಲೆ ಕಲ್ಲು ತೂರಾಟ ಮಾಡಲಾಗಿದೆ ಎಂದು ಶಂಕಿಸಲಾಗಿತ್ತು. ಆರೋಪಿಗಳು ಕುಡಿದ ಮತ್ತಿನಲ್ಲಿ ಕಲ್ಲು ತೂರಾಟ ನಡೆಸಿದ್ದಾರೆ ಎಂಬುದು ತನಿಖೆ ವೇಳೆ ತಿಳಿದು ಬಂದಿದೆ.

    ಬಂಧಿತ ಆರೋಪಿ ತನ್ನ ಅಕ್ಕ, ಬಾವನನ್ನ ಬೆಂಗಳೂರಿಗೆ ಕಳುಹಿಸಲು ಬಸ್ ಸಿಗದೆ ಬೇಸರಗೊಂಡಿದ್ದ. ಬಳಿಕ ತನ್ನ ಮೂರು ಜನ ಸ್ನೇಹಿತರೊಂದಿಗೆ ಮದ್ಯಪಾನ ಮಾಡಿ ಬೆಳಗಿನ ಜಾವ ಸಿಕ್ಕ ಸಿಕ್ಕ ವಾಹನಗಳಿಗೆ ಕಲ್ಲು ತೂರಿ ಜಖಂಗೊಳಿಸಿದ್ದರು. ಈ ಸಂಬಂಧ ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

    ಉಳಿದ ಮೂವರು ಆರೋಪಿಗಳಾದ ಅಂಬರೀಶ್, ತಿಮ್ಮಣ್ಣ, ಆಂಜನೇಯ ತಲೆಮರೆಸಿಕೊಂಡಿದ್ದಾರೆ.

  • ಬೆಂಕಿ ಹಚ್ಚಿ ಲ್ಯಾಬ್ ಟೆಕ್ನಿಷಿಯನ್ ಹತ್ಯೆ ಪ್ರಕರಣ – ಇಬ್ಬರ ಬಂಧನ

    ಬೆಂಕಿ ಹಚ್ಚಿ ಲ್ಯಾಬ್ ಟೆಕ್ನಿಷಿಯನ್ ಹತ್ಯೆ ಪ್ರಕರಣ – ಇಬ್ಬರ ಬಂಧನ

    ರಾಯಚೂರು: ಸರ್ಕಾರಿ ಆಸ್ಪತ್ರೆಯ ಮಹಿಳಾ ಲ್ಯಾಬ್ ಟೆಕ್ನಿಷಿಯನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು (Police) ಬಂಧಿಸಿದ್ದಾರೆ.

    ಬಂಧಿತ ಆರೋಪಿಗಳನ್ನು ಸಮೀರ್ ಸೋಹೆಲ್ ಹಾಗೂ ಮೊಹಮ್ಮದ್ ಕೈಫ್ ಎಂದು ಗುರುತಿಸಲಾಗಿದೆ. ಆರೋಪಿಗಳು ಅ.26 ರಂದು ಜಿಲ್ಲೆಯ ಲಿಂಗಸುಗೂರಿನ (Lingsugur) ಹಟ್ಟಿಯಲ್ಲಿ ಮಂಜುಳಾ (45) ಎಂಬವರನ್ನು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೈದಿದ್ದರು. ಆರೋಪಿಗಳು ಕೊಲೆಗೂ ಮುನ್ನ ಮಹಿಳೆಯ ಬ್ಲಾಕ್ ಮೇಲ್ ಮಾಡಿ ಹಣ ಹಾಗೂ ಚಿನ್ನಾಭರಣ ದೋಚಿದ್ದರು. ಇದನ್ನೂ ಓದಿ: ವಯನಾಡಿನಲ್ಲಿ ನಕ್ಸಲರು ಪೊಲೀಸರ ನಡುವೆ ಗುಂಡಿನ ಚಕಮಕಿ – ಕೊಡಗಿನಲ್ಲಿ ಹೈ ಅಲರ್ಟ್

    ಮೃತಳ ಸಹೋದರ ಅಸಹಜ ಸಾವು ಎಂದು ಮೊದಲು ಪ್ರಕರಣ ದಾಖಲಿಸಿದ್ದ. ಬಳಿಕ ಮೃತಳ ಪುತ್ರ ಹಟ್ಟಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿದ್ದ. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

     ಬಂಧಿತ ಆರೋಪಿಗಳಿಂದ 22,51,965 ರೂ. ಮೌಲ್ಯದ ವಸ್ತುಗಳನ್ನ ಪೊಲೀಸರು ಜಪ್ತಿ ಮಾಡಿದ್ದಾರೆ. 7.49 ಲಕ್ಷ ರೂ. ನಗದು, 9.77 ಲಕ್ಷ ರೂ. ಮೌಲ್ಯದ 163 ಗ್ರಾಂ ಚಿನ್ನಾಭರಣ, ಒಂದು ಕಾರು ಹಾಗೂ ಒಂದು ಬೈಕ್ ಜಪ್ತಿ ಮಾಡಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇದನ್ನೂ ಓದಿ: KEA ಪರೀಕ್ಷೆ – ಮಂಗಳಸೂತ್ರ, ಕಾಲುಂಗರಕ್ಕೆ ಮಾತ್ರ ವಿನಾಯಿತಿ : ಟಫ್‌ ರೂಲ್ಸ್‌ ಏನು?

  • ರಾಯಚೂರಿನಲ್ಲಿ ಮತ್ತೊಂದು ಕಲುಷಿತ ನೀರು ಪ್ರಕರಣ: 20ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು

    ರಾಯಚೂರಿನಲ್ಲಿ ಮತ್ತೊಂದು ಕಲುಷಿತ ನೀರು ಪ್ರಕರಣ: 20ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು

    ರಾಯಚೂರು: ಕಲುಷಿತ ನೀರು (Contaminated Water) ಸೇವಿಸಿ 20ಕ್ಕೂ ಹೆಚ್ಚು ಜನ ಆಸ್ಪತ್ರೆ ಸೇರಿದ ಪ್ರಕರಣ ಲಿಂಗಸೂರಿನ (Lingsugur) ಯರಗುಂಟಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಜನರು ತಡರಾತ್ರಿಯಿಂದ ತೀವ್ರ ವಾಂತಿ, ಭೇದಿಯಿಂದ ಬಳಲಿದ್ದಾರೆ. ಇದರಿಂದ ಹಲವರು ಅಸ್ವಸ್ಥರಾಗಿದ್ದು ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಸ್ವಸ್ಥಗೊಂಡ ಗ್ರಾಮಸ್ಥರನ್ನು ಲಿಂಗಸುಗೂರು, ಸಿಂಧನೂರು ಹಾಗೂ ರಾಯಚೂರಿನ (Raichur) ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಕಲುಷಿತ ನೀರು ಕುಡಿದು ಬಾಲಕ ಸಾವು ಪ್ರಕರಣ: ರಾಯಚೂರು ಜಿಪಂ ಸಿಇಓಗೆ ನೋಟಿಸ್

    ಗ್ರಾಮಕ್ಕೆ ಜಿಪಂ ಸಿಇಓ (Raichur ZP CEO) ಶಶಿಧರ್ ಕುರೇರಾ, ಡಿಎಚ್‍ಓ ಡಾ.ಸುರೇಂದ್ರ ಬಾಬು ಸೇರಿದಂತೆ ಹಲವು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಯರಗುಂಟಿ ಗ್ರಾಮದಲ್ಲಿ ತಾತ್ಕಾಲಿಕ ಆರೋಗ್ಯ ಕೇಂದ್ರ ಸ್ಥಾಪನೆ ಮಾಡಲಾಗಿದೆ. ಕಲುಷಿತ ನೀರಿನ ಬಗ್ಗೆ ಶಂಕೆ ವ್ಯಕ್ತಪಡಿಸಿರುವ ಅಧಿಕಾರಿಗಳು ನೀರಿನ ಮಾದರಿ ಪಡೆದು ಪರೀಕ್ಷೆಗೆ ರವಾನಿಸಿದ್ದಾರೆ.

    ಗ್ರಾಮಸ್ಥರು ಕುಡಿಯಲು ಬೋರ್‌ವೆಲ್ ನೀರನ್ನು ಬಳಸುತ್ತಿದ್ದರು. ಅಲ್ಲಲ್ಲಿ ಪೈಪ್ ಒಡೆದು ಚರಂಡಿ ನೀರು ಮಿಶ್ರಣಗೊಂಡಿರುವ ಸಾಧ್ಯತೆಗಳಿವೆ. ಇದರಿಂದ ಆರೋಗ್ಯ ಸಮಸ್ಯೆ ಎದುರಾಗಿರುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಜಿಲ್ಲೆಯ ರೇಕಲಮರಡಿ, ಗೊರೆಬಾಳದಲ್ಲಿ ಇದೆ ರೀತಿಯ ಸಮಸ್ಯೆ ಎದುರಾಗಿ ಬಾಲಕ ಮೃತಪಟ್ಟಿದ್ದ. ಈ ಸಂಬಂಧ ಸಿಇಓ ಶಶಿಧರ್ ಕುರೇರಾ ಅವರಿಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್ ಜಾರಿ ಮಾಡಿತ್ತು. ಇದನ್ನೂ ಓದಿ: ಕಲುಷಿತ ನೀರು ಸೇವಿಸಿ ಬಾಲಕ ಸಾವು – 30ಕ್ಕೂ ಹೆಚ್ಚು ಜನ ಅಸ್ವಸ್ಥ

  • ಕ್ವಾರಂಟೈನ್ ಕೇಂದ್ರದಿಂದ ತಪ್ಪಿಸಿಕೊಂಡಿದ್ದ ಗರ್ಭಿಣಿಗೆ ಸುರಕ್ಷಿತ ಹೆರಿಗೆ

    ಕ್ವಾರಂಟೈನ್ ಕೇಂದ್ರದಿಂದ ತಪ್ಪಿಸಿಕೊಂಡಿದ್ದ ಗರ್ಭಿಣಿಗೆ ಸುರಕ್ಷಿತ ಹೆರಿಗೆ

    ರಾಯಚೂರು: ಲಿಂಗಸುಗೂರಿನ ಅಡವಿಬಾವಿ ಕ್ವಾರಂಟೈನ್ ಕೇಂದ್ರದಲ್ಲಿದ್ದ ಮಹಿಳೆಗೆ ಹೆರಿಗೆಯಾಗಿದ್ದು ತಾಯಿ, ಮಗು ಆರೋಗ್ಯದಿಂದಿದ್ದಾರೆ.

    ಮಹಾರಾಷ್ಟ್ರದ ಪುಣೆಯಿಂದ ಬಂದಿದ್ದ ಕುಟುಂಬವನ್ನು ಕ್ವಾರಂಟೈನ್ ಮಾಡಲಾಗಿತ್ತು. ಹೆರಿಗೆಗೆ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಕಳುಹಿಸಲು ತಯಾರಿ ನಡೆದಿತ್ತು. ಅಷ್ಟರಲ್ಲೇ ಹೆರಿಗೆ ನೋವು ಹಿನ್ನೆಲೆ ಸಿಬ್ಬಂದಿ ಕಣ್ತಪ್ಪಿಸಿ ಖಾಸಗಿ ಆಸ್ಪತ್ರೆಗೆ ತೆರಳಲು ಪತಿ, ಪತ್ನಿ ಇಬ್ಬರು ಮಕ್ಕಳು ಪರಾರಿಯಾಗಿದ್ದರು. ಅವರ ಸ್ವಗ್ರಾಮ ಲಿಂಗಸುಗೂರಿನ ಹಾಲುಬಾವಿ ತಾಂಡ ಬಳಿ ಸಂಬಂಧಿಕರ ಮನೆಯಲ್ಲಿ ಹೆರಿಗೆಯಾಗಿದೆ. ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮಗು ಆರೋಗ್ಯವಾಗಿದ್ದಾರೆ.

    ಹೆರಿಗೆ ಬಳಿಕ ಕುಟುಂಬವನ್ನು ಲಿಂಗಸುಗೂರಿನ ರೊಡಲಬಂಡಾ ಆಸ್ಪತ್ರೆಗೆ ಕರೆತರಲಾಗಿದೆ. ಆಸ್ಪತ್ರೆ ಕ್ವಾಟ್ರಸ್‍ನಲ್ಲೇ ಐಸೋಲೇಷನ್ ವಾರ್ಡ್ ನಿರ್ಮಾಣ ಮಾಡಲಾಗಿದ್ದು, ನಾಲ್ಕು ಜನರ ಗಂಟಲು ಮಾದರಿ ಪರೀಕ್ಷೆಗೆ ಕಳುಹಿಸಲಾಗಿದೆ. ಬಾಣಂತಿ, ಪತಿ, ಇಬ್ಬರು ಮಕ್ಕಳನ್ನ ಐಸೋಲೇಷನ್ ವಾರ್ಡಿನಲ್ಲಿಡಲಾಗಿದೆ. ಹೆರಿಗೆ ಹಿನ್ನೆಲೆ ಸ್ಥಳೀಯರ ಮಾಹಿತಿ ಮೇರೆಗೆ ಕುಟುಂಬವನ್ನ ಪತ್ತೆ ಹಚ್ಚಿ ಆರೋಗ್ಯ ಇಲಾಖೆ ಸಿಬ್ಬಂದಿ ವಾಪಸ್ ಕರೆತಂದಿದ್ದಾರೆ.

  • ಫೇಸ್‍ಬುಕ್‍ನಲ್ಲಿ ಸ್ಟೇಟಸ್ ಹಾಕಿ ವಿಷ ಸೇವಿಸಿ ಯುವಕ ಆತ್ಮಹತ್ಯೆ

    ಫೇಸ್‍ಬುಕ್‍ನಲ್ಲಿ ಸ್ಟೇಟಸ್ ಹಾಕಿ ವಿಷ ಸೇವಿಸಿ ಯುವಕ ಆತ್ಮಹತ್ಯೆ

    ರಾಯಚೂರು: ಲಿಂಗಸುಗೂರು ತಾಲೂಕಿನ ಕಳ್ಳಿ ಲಿಂಗಸುಗೂರಿನಲ್ಲಿ ಯುವಕನೊಬ್ಬ ಫೇಸ್‍ಬುಕ್‍ನಲ್ಲಿ ಸ್ಟೇಟಸ್ ಹಾಕಿ ಬಳಿಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಲಿಂಗಸುಗೂರು ತಾಲೂಕಿನ ಕರಡಕಲ್ ಗ್ರಾಮದ ನಿವಾಸಿ ಅಮರೇಶ್ ನೆಲಹಾಳ ಆತ್ಮಹತ್ಯೆ ಶರಣಾದ ಯುವಕ. ನನ್ನ ಸಾವಿಗೆ ಈಶ್ವರ ಆಗ್ರೋ ಟ್ರೇಡರ್ಸ್ ಮಾಲೀಕ ಅಮರೇಗೌಡ ಕಾರಣ ಅಂತ ಅಮರೇಶ್ ಫೇಸ್‍ಬುಕ್ ಸ್ಟೇಟಸ್‍ನಲ್ಲಿ ಹಾಕಿಕೊಂಡಿದ್ದಾನೆ.

    ಅಮರೇಶ್ ಈಶ್ವರ ಟ್ರೇಡರ್ಸ್ ನಲ್ಲಿ ಕೆಲಸ ಮಾಡುತ್ತಿದ್ದ. ಆದರೆ ಕೆಲ ದಿನಗಳ ಹಿಂದೆ ಹುಡುಗಿಯ ವಿಚಾರವಾಗಿ ಅಮರೇಶ್ ಹಾಗೂ ಅಮರೇಗೌಡ ಮಧ್ಯೆ ಜಗಳವಾಗಿತ್ತು ಎನ್ನಲಾಗಿದೆ. ಅಮರೇಗೌಡ ಅವರ ಪಪ್ಪಾಯ ತೋಟದಲ್ಲಿ ಇಂದು ಯಾರು ಇಲ್ಲದೆ ಇದ್ದಾಗ ಅಮರೇಶ್ ಕ್ರೀಮಿನಾಶಕ ಕುಡಿದು ಆತ್ಮಹತ್ಯೆ ಶರಣಾಗಿದ್ದಾನೆ. ಲಿಂಗಸುಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಅಸಹಜ ಸಾವು ಪ್ರಕರಣ ದಾಖಲಾಗಿದೆ.

  • 20 ಜನ ಕೂಲಿಕಾರ್ಮಿಕರಿದ್ದ ವಾಹನಕ್ಕೆ ಲಾರಿ ಡಿಕ್ಕಿ- ಇಬ್ಬರು ಸಾವು, 12 ಜನರ ಸ್ಥಿತಿ ಗಂಭೀರ

    20 ಜನ ಕೂಲಿಕಾರ್ಮಿಕರಿದ್ದ ವಾಹನಕ್ಕೆ ಲಾರಿ ಡಿಕ್ಕಿ- ಇಬ್ಬರು ಸಾವು, 12 ಜನರ ಸ್ಥಿತಿ ಗಂಭೀರ

    ರಾಯಚೂರು: 20 ಜನ ಕೂಲಿಕಾರ್ಮಿಕರಿದ್ದ ವಾಹನಕ್ಕೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿದ ಘಟನೆ ಲಿಂಗಸುಗೂರಿನ ಗುರಗುಂಟಾ ಬಳಿಯ ಗೋನಾಳ ಕ್ರಾಸ್‍ನಲ್ಲಿ ನಡೆದಿದೆ.

    ರಾಯದುರ್ಗ ಗ್ರಾಮದ ಕೂಲಿಕಾರ್ಮಿಕರಾದ ಚನ್ನಮ್ಮ (16) ಹನುಮಮ್ಮ (50) ಮೃತ ದುರ್ದೈವಿಗಳು. ಈ ಘಟನೆ 12 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಲಾರಿ ಹಾಗೂ ಕೂಲಿಕಾರ್ಮಿಕರದ್ದ ಬುಲೆರೋ ಚಾಲಕರು ವೇಗವಾಗಿ ಚಾಲನೆ ಮಾಡಿದ್ದೆ ದುರಂತಕ್ಕೆ ಕಾರಣ ಎನ್ನಲಾಗಿದೆ.

    ಯಾದಗಿರಿಯ ಸುರಪುರದಿಂದ ನಿತ್ಯವೂ ಕೃಷಿ ಕೂಲಿಕಾರ್ಮಿಕರು ಕೆಲಸಕ್ಕಾಗಿ ಲಿಂಗಸುಗೂರಿಗೆ ಹೋಗುತ್ತಾರೆ. ಎಂದಿನಂತೆ ಬುಧವಾರವು ಕೂಡ 20 ಜನ ಕೂಲಿಕಾರ್ಮಿಕರು ಕೆಎ 36 ಬಿ 6600 ನಂಬರ್‍ನ ಬುಲೆರೋದಲ್ಲಿ ಕೆಲಸಕ್ಕಾಗಿ ಹೋಗಿದ್ದರು. ಸಂಜೆ ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದಾಗ ಚಾಲಕ ವೇಗವಾಗಿ ಚಾಲನೆ ಮಾಡುತ್ತಿದ್ದ. ಈ ವೇಳೆ ಸುರಪುದಿಂದ ವೇಗವಾಗಿ ಬಂದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಬುಲೆರೋಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬಲೆರೋದ ಹಿಂಭಾಗದಲ್ಲಿ ಕುಳಿತಿದ್ದವರ ಪೈಕಿ ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ.

    ಈ ದುರಂತದಲ್ಲಿ ಗಂಭೀರವಾಗಿ ಗಾಯಗೊಂಡ 12 ಜನರನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಚಿಕ್ಕಪುಟ್ಟ ಗಾಯವಾಗಿರುವ 6 ಜನರಿಗೆ ಲಿಂಗಸುಗೂರು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಲಾರಿ ಹಾಗೂ ಬುಲೆರೋ ಚಾಲಕರಿಬ್ಬರೂ ಘಟನಾ ಸ್ಥಳದಿಂದ ಪರಾರಿಯಾಗಿದ್ದರು. ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಪರಿಶೀಲನೆ ನಡೆಸಿ ಚಾಲಕರನ್ನು ಬಂಧಿಸಿದ್ದಾರೆ.

    ಗೋನಾಳ ಕ್ರಾಸ್‍ನಲ್ಲಿ ಹಲವು ತಿರುವುಗಳಿದ್ದು, ಯಾವುದೇ ಎಚ್ಚರಿಕೆಯ ಫಲಕಗಳು ಇಲ್ಲದಿರುವುದು ಅಪಘಾತಕ್ಕೆ ಕಾರಣವಾಗಿದೆ. ಈ ಹಿಂದೆಯೂ ಇದೇ ಸ್ಥಳದಲ್ಲಿ ಸಾಕಷ್ಟು ಅಪಘಾತಗಳು ಸಂಭವಿಸಿವೆ. ಘಟನೆಯ ಸಂಬಂಧ ಎರಡೂ ವಾಹನಗಳ ಚಾಲಕರ ವಿರುದ್ಧ ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದುರಂತದಲ್ಲಿ ಮೃತಪಟ್ಟ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.