Tag: Lingayat Dharma

  • ಲಿಂಗಾಯತ ಧರ್ಮದ ಆಳ ಅರಿವು ಪೇಜಾವರ ಶ್ರೀಗಳಿಗೆ ತಿಳಿದಿಲ್ಲ- ಮಾದೇಶ್ವರ ಸ್ವಾಮೀಜಿ

    ಲಿಂಗಾಯತ ಧರ್ಮದ ಆಳ ಅರಿವು ಪೇಜಾವರ ಶ್ರೀಗಳಿಗೆ ತಿಳಿದಿಲ್ಲ- ಮಾದೇಶ್ವರ ಸ್ವಾಮೀಜಿ

    ಬಾಗಲಕೋಟೆ: ಪೇಜಾವರ ಶ್ರೀಗಳಿಗೆ ಲಿಂಗಾಯತ ಧರ್ಮದ ಆಳ ಅರಿವು ತಿಳಿದಿಲ್ಲ ಎಂದು ಕೂಡಲಸಂಗಮದ ಬಸವಧರ್ಮ ಪೀಠದ ಮಾದೇಶ್ವರ ಸ್ವಾಮೀಜಿ ಕಿಡಿ ಕಾರಿದ್ದಾರೆ.

    ಲಿಂಗಾಯತ ಪ್ರತ್ಯೇಕ ಧರ್ಮದ ಬಗ್ಗೆ ಚರ್ಚೆಗೆ ನಾನು ಸಿದ್ಧ ಎಂಬ ಪೇಜಾವರಶ್ರೀಗಳ ಹೇಳಿಕೆಗೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ಖಾರವಾಗಿ ಪ್ರತಿಕ್ರಿಯಿಸಿದ ಅವರು, 40 ವರ್ಷಗಳಿಂದಲೂ ಲಿಂಗಾಯತ ಪ್ರತ್ಯೇಕ ಧರ್ಮದ ಕುರಿತು ಹೋರಾಟ ನಡೆಯುತ್ತಿದೆ. ಪೇಜಾವರ ಶ್ರೀಗಳಿಗೆ ಇಂದಿಗೂ ಲಿಂಗಾಯತ ಧರ್ಮದ ಬಗ್ಗೆ ಅರಿವಾಗಿಲ್ಲ ಎಂದು ಹರಿಹಾಯ್ದರು.

    ಲಿಂಗಾಯತ ಧರ್ಮದ ಬಗ್ಗೆ ಲಿಂಗೈಕ್ಯ ಮಾತೆ ಮಹಾದೇವಿ ಅವರು ನಿರಂತರ ಹೋರಾಟ ಮಾಡಿಕೊಂಡು ಬಂದಿದ್ದರು. ಮಾತೆ ಮಹಾದೇವಿ ಅವರು ಚರ್ಚೆಗೆ ಆಹ್ವಾನಿಸಿದಾಗ ಪೇಜಾವರ ಶ್ರೀಗಳು ಎಂದೂ ಬರಲಿಲ್ಲ. ಈಗ ಮಾತೆ ಮಹಾದೇವಿಯವರು ಬಿತ್ತಿದ ಬೀಜವಾಗಿ ನಾವು ಲಕ್ಷಾಂತರ ಜನರಿದ್ದೇವೆ ಎಂದು ತಿಳಿಸಿದ್ದಾರೆ.

    ಚರ್ಚೆಗೆ ಸಿದ್ಧ: ಪೇಜಾವರ ಶ್ರೀಗಳು ಎಲ್ಲಿಯಾದರೂ ವೇದಿಕೆ ಸಿದ್ದಪಡಿಸಲಿ, ನಾವು ಲಿಂಗಾಯತ ಪ್ರತ್ಯೇಕ ಧರ್ಮ ಕುರಿತು ಚರ್ಚೆಗೆ ಸಿದ್ಧರಿದ್ದೇವೆ ಎಂದು ಸವಾಲು ಹಾಕಿದ ಅವರು, ಮಾತೆ ಮಹಾದೇವಿ ಸೇರಿದಂತೆ ಅನೇಕ ಮಠಾಧೀಶರು ಲಿಂಗಾಯತ ಧರ್ಮದ ಬಗ್ಗೆ ಪುಸ್ತಕ ಬರೆದಿದ್ದಾರೆ. ಅವುಗಳನ್ನು ಪೇಜಾವರ ಶ್ರೀಗಳಿಗೆ ಕೊಡುತ್ತೇವೆ ಅವರು ಅಧ್ಯಯನ ಮಾಡಲಿ ಎಂದು ಕುಟುಕಿದರು.

  • ಶಾಸಕರನ್ನು ಸೆಳೆಯಲು ಸ್ವಾಮೀಜಿಗಳ ಮೊರೆ ಹೋದ ಬಿಎಸ್‍ವೈ!

    ಶಾಸಕರನ್ನು ಸೆಳೆಯಲು ಸ್ವಾಮೀಜಿಗಳ ಮೊರೆ ಹೋದ ಬಿಎಸ್‍ವೈ!

    ಬೆಂಗಳೂರು: ಕಾಂಗ್ರೆಸ್ ಹಾಗೂ ಬಿಜೆಪಿ ಶಾಸಕರನ್ನು ಸೆಳೆಯಲು ಬಿ.ಎಸ್.ಯಡಿಯೂರಪ್ಪ ಅವರು ಸ್ವಾಮೀಜಿಗಳ ಮೊರೆ ಹೋಗಿದ್ದಾರೆ.

    ರಾಜ್ಯದ ಕೆಲವು ಲಿಂಗಾಯಿತ ಮಠದ ಸ್ವಾಮೀಜಿಗಳ ಜೊತೆ ಬಿಎಸ್‍ವೈ ಮಾತುಕತೆ ನಡೆಸಿದ್ದು, ಅವರ ಮೂಲಕ ಶಾಸಕರಿಗೆ ಗಾಳ ಹಾಕುತ್ತಿದ್ದಾರೆ. ಹಿಂದೂ ಧರ್ಮದ ಉಳಿವಿಗೆ ಬಿಎಸ್‍ವೈ ಗೆ ಬೆಂಬಲ ನೀಡಬೇಕು ಎಂದು ಸ್ವಾಮೀಜಿಗಳು ಶಾಸಕರಿಗೆ ಕರೆ ಮಾಡಿದ್ದಾರೆ ಎನ್ನಲಾಗಿದೆ.

    ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳು ಯಲ್ಲಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಿವರಾಮ್ ಹೆಬ್ಬಾರ್‍ಗೆ ಕರೆ ಮಾಡಿ ಬಿ.ಎಸ್.ಯಡಿಯೂರಪ್ಪಗೆ ಬೆಂಬಲ ಸೂಚಿಸಬೇಕೆಂದು ಕೇಳಿದ್ದಾರೆ ಎಂದು ಹೇಳಲಾಗುತ್ತಿದೆ.

    ಸ್ವಾಮೀಜಿಗಳು ತಮ್ಮ ಶಾಸಕರಿಗೆ ಕರೆ ಮಾಡಿ ಶನಿವಾರ ನಡೆಯಲಿರುವ ವಿಶ್ವಾಸ ಮತಯಾಚನೆಯ ವೇಳೆ ಬಿಎಸ್ ಯಡಿಯೂರಪ್ಪ ಅವರನ್ನು ಬೆಂಬಲಿಸಬೇಕು ಎಂದು ಕೇಳಿಕೊಂಡಿದ್ದಾರೆ ಎನ್ನಲಾಗಿದೆ.

  • ಹುಬ್ಬಳ್ಳಿಯಲ್ಲಿ ಬೃಹತ್ ಲಿಂಗಾಯತ ಸಮಾವೇಶ – 5 ಲಕ್ಷ ಮಂದಿ ಭಾಗಿ ನಿರೀಕ್ಷೆ, ಬಿಗಿ ಭದ್ರತೆ

    ಹುಬ್ಬಳ್ಳಿಯಲ್ಲಿ ಬೃಹತ್ ಲಿಂಗಾಯತ ಸಮಾವೇಶ – 5 ಲಕ್ಷ ಮಂದಿ ಭಾಗಿ ನಿರೀಕ್ಷೆ, ಬಿಗಿ ಭದ್ರತೆ

    ಹುಬ್ಬಳ್ಳಿ: ಲಿಂಗಾಯತ ಸ್ವತಂತ್ರ ಧರ್ಮದ ಸಂವಿಧಾನಿಕ ಮಾನ್ಯತೆಗಾಗಿ ಬಲ ಪ್ರದರ್ಶನಕ್ಕೆ ಜಿಲ್ಲೆಯಲ್ಲಿ ವೇದಿಕೆ ಸಿದ್ಧವಾಗಿದ್ದು, ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಮಾನ್ಯತೆ ನೀಡುವಂತೆ ಒತ್ತಾಯ ಮಾಡಲಿದ್ದಾರೆ. ವಾಣಿಜ್ಯ ನಗರಿಯಾದ ಹುಬ್ಬಳ್ಳಿ ನಾಳೆ ಲಿಂಗಾಯತರ ಶಕ್ತಿ ಪ್ರದರ್ಶನದ ಕೇಂದ್ರವಾಗಲಿದೆ.

    ಸಾಕಷ್ಟು ಪರ-ವಿರೋಧದ ಚರ್ಚೆಗಳ ನಡುವೆಯೂ ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಮತ್ತೆ ರಣಕಹಳೆ ಮೊಳಗಿದೆ. ನೆಹರು ಮೈದಾನದಲ್ಲಿ ಬೃಹತ್ ಸಮಾವೇಶಕ್ಕೆ ಸಕಲ ತಯಾರಿ ನಡೆದಿದ್ದು, ಸುಮಾರು 5 ಲಕ್ಷ ಮಂದಿ ಈ ಹೋರಾಟದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ಬೃಹತ್ ಸಮಾವೇಶದಲ್ಲಿ ತೋಂಟದಾರ್ಯ ಶ್ರೀಗಳು, ಮುರುಘಾ ಶ್ರೀಗಳು, ಮಾತೆ ಮಹಾದೇವಿ ಸೇರಿದಂತೆ ಸುಮಾರು ಇನ್ನೂರಕ್ಕೂ ಹೆಚ್ಚು ಸ್ವಾಮೀಜಿಗಳು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪಂಚಮಸಾಲಿ ಪೀಠ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರು ತಿಳಿದ್ದಾರೆ.

    ಇನ್ನು ಈ ಸಮಾವೇಶಕ್ಕೆ ಬಿಜೆಪಿಯ ಜಗದೀಶ್ ಶೆಟ್ಟರ್‍ಗೆ ಬಸವರಾಜ ಹೊರಟ್ಟಿ ಆಹ್ವಾನ ನೀಡಿದ್ದಾರೆ. ಆದರೆ ಬರುವುದು ಬಿಡುವುದು ಅವರಿಗೆ ಬಿಟ್ಟಿದ್ದು ಎಂದು ನಿರಾವರಿ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.

    ಸಮಾವೇಶದಲ್ಲಿ ಪಾಲ್ಗೊಳ್ಳಲು ರಾಜ್ಯದ ವಿವಿಧ ಮೂಲೆಗಳಿಂದ ಲಿಂಗಾಯತ ಸಮುದಾಯ ಹರಿದು ಬರುತ್ತಿದೆ. ಇವರಿಗೆಲ್ಲಾ ಉಪಹಾರ, ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಇಲ್ಲಿ ಗಮನಿಸಬೇಕಾದ ಅಂಶ ಅಂದರೆ ಇದನ್ನೆಲ್ಲ ಮಾಡುತ್ತಿರುವುದು ಹುಬ್ಬಳ್ಳಿಯ ಜೈನ ಮತ್ತು ಮುಸ್ಲಿಂ ಬಾಂಧವರು. ಎಂದಿನಂತೆ ಪೊಲೀಸ್ ಇಲಾಖೆಯು ಬಿಗಿ ಭದ್ರತೆಯನ್ನು ಕೈಗೊಂಡಿದೆ.

            

     

     

  • ಲಿಂಗಾಯತ-ಹಿಂದೂ ಧರ್ಮದ ಮಧ್ಯೆ ಸಾಕಷ್ಟು ಅಂತರವಿದೆ: ಎಸ್.ಆರ್.ಪಾಟೀಲ್

    ಲಿಂಗಾಯತ-ಹಿಂದೂ ಧರ್ಮದ ಮಧ್ಯೆ ಸಾಕಷ್ಟು ಅಂತರವಿದೆ: ಎಸ್.ಆರ್.ಪಾಟೀಲ್

    ಬಾಗಲಕೋಟೆ: ಲಿಂಗಾಯತ ಧರ್ಮ ಸ್ವತಂತ್ರ ಧರ್ಮವಾಗಬೇಕೆನ್ನುವವರಲ್ಲಿ ನಾನು ಮೊದಲಿಗ. ಲಿಂಗಾಯತ ಹಾಗೂ ಹಿಂದೂ ಧರ್ಮದ ಮಧ್ಯೆ ಸಾಕಷ್ಟು ಅಂತರವಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್. ಪಾಟೀಲ್ ಹೇಳಿದ್ದಾರೆ.

    ಲಿಂಗಾಯತ ಧರ್ಮವನ್ನ ವಿಶ್ವಗುರು ಬಸವಣ್ಣ ಸ್ಥಾಪನೆ ಮಾಡಿದ್ದಾರೆ. ಆದ್ರೆ ಹಿಂದೂ ಧರ್ಮವನ್ನ ಯಾರು ಸ್ಥಾಪನೆ ಮಾಡಿದ್ದಾರೆಂದು ನನಗೆ ಗೊತ್ತಿಲ್ಲ. ಲಿಂಗಾಯತ ಧರ್ಮದಲ್ಲಿ ಸಮಾನತೆ ಇದೆ. ಜಾತ್ಯಾತೀತ ನಿಲುವಿದೆ. ನಾವು ಸಮಾಜ ಕಟ್ಟುವವರು, ಒಡೆಯುವವರಲ್ಲ. ಒಡೆಯುವವರು ಬೇರೆಯೇ ಇದ್ದಾರೆಂದು ಪರೋಕ್ಷವಾಗಿ ಬಿಜೆಪಿ ನಾಯಕರ ಕಾಲೆಳೆದ್ರು.

    ಲಿಂಗಾಯತ ಧರ್ಮಕ್ಕೆ ಪೇಜಾವರ ಶ್ರೀಗಳ ವೀರೋಧಕ್ಕೆ ಪ್ರತಿಕ್ರಿಯಿಸಿ, ಪೇಜಾವರ ಶ್ರೀಗಳು ಇದ್ರಲ್ಲಿ ಮೂಗು ತೂರಿಸೋದು ಬೇಡ. ಈ ಹಿಂದೆ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರವಾಗಿ ಎರಡು ಬಾರಿ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿತ್ತು. ಕೇಂದ್ರದಲ್ಲಿ ಯುಪಿಎ ಸರ್ಕಾರ ಮುಂದುವರೆದಿದ್ರೆ ಈಗಾಗಲೇ ಲಿಂಗಾಯತ ಧರ್ಮ ಸ್ವತಂತ್ರ ಧರ್ಮದ ಮಾನ್ಯತೆ ಪಡೆಯುತ್ತಿತ್ತು ಅಂದ್ರು.

    ಸಿಎಂ ಸಿದ್ದರಾಮಯ್ಯ ಲಿಂಗಾಯತ ಪ್ರತ್ಯೇಕ ಧರ್ಮ ಮಾಡಲು ಕೇಂದ್ರಕ್ಕೆ ಶಿಫಾರಸ್ಸು ಮಾಡೋದು ಒಳ್ಳೆಯದು. ಈ ಬಗ್ಗೆ ಪ್ರಕ್ರಿಯೆಗಳು ನಡೆದಿವೆ. ಈ ಹಿಂದೆ ಲಿಂಗಾಯತ ಧರ್ಮ ಪ್ರತ್ಯೇಕಕ್ಕಾಗಿ ಬಿಎಸ್‍ವೈ ಅವ್ರೇ ಸಹಿ ಹಾಕಿದ್ರು. ಸದ್ಯ ವಿರೋಧಿಸೋದು ಬೇಡ ಎಂದು ಸಲಹೆ ನೀಡಿದರು.