Tag: Lingayat CM

  • ನಮ್ಮ ಸರ್ಕಾರದಲ್ಲಿ ಜಾತಿ ನೋಡಿ ಪೋಸ್ಟಿಂಗ್ ಮಾಡಲ್ಲ: ಪ್ರಿಯಾಂಕ್ ಖರ್ಗೆ

    ನಮ್ಮ ಸರ್ಕಾರದಲ್ಲಿ ಜಾತಿ ನೋಡಿ ಪೋಸ್ಟಿಂಗ್ ಮಾಡಲ್ಲ: ಪ್ರಿಯಾಂಕ್ ಖರ್ಗೆ

    ಬೆಂಗಳೂರು: ಕಾಂಗ್ರೆಸ್ ಸರ್ಕಾರದಲ್ಲಿ ಜಾತಿ ಆಧಾರದಲ್ಲಿ ಪೋಸ್ಟಿಂಗ್ (Caste Based Posting) ಮಾಡೋದಿಲ್ಲ. ಸಾಮರ್ಥ್ಯದ ಆಧಾರದಲ್ಲಿ ಪೋಸ್ಟಿಂಗ್ ಆಗಲಿದೆ ಅಂತ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ತಿಳಿಸಿದ್ದಾರೆ.

    ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯ ಆಗ್ತಿದೆ, ಲಿಂಗಾಯತ ಸಿಎಂ ಆಗಬೇಕು ಎಂಬ ಕಾಂಗ್ರೆಸ್ (Congress) ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ (Shamanur Shivashankarappa) ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಶಾಮನೂರು ಶಿವಶಂಕರಪ್ಪ‌ ಹಿರಿಯರು, ಅವರು ಸರ್ಕಾರಕ್ಕೆ ಮಾರ್ಗದರ್ಶನ ನೀಡೋದು ತಪ್ಪಲ್ಲ. ಏನಾದ್ರು ಅನಿಸಿಕೆ ಇದ್ದರೇ ತಿದ್ದೋದು ಪಕ್ಷದಲ್ಲಿ, ಸರ್ಕಾರದಲ್ಲಿ ಇದ್ದರೆ ಮಾಡ್ತೀವಿ ನಮ್ಮ ಸಮಾಜದವರಿಗೆ ಸಿಗಬೇಕು ಅಂತ ಎಲ್ಲಾ ಸಮಾಜದವರು ಬಯಸುತ್ತಾರೆ. ಅದರಲ್ಲಿ ತಪ್ಪೇನು ಇಲ್ಲ. ಅವರ ಅನುಭವ, ಮಾರ್ಗದರ್ಶನ ಪಕ್ಷ ಮತ್ತು ಸರ್ಕಾರಕ್ಕೆ ಬೇಕಾಗಿದೆ. ಅವರು ಹೇಳೋದನ್ನ ಹಿರಿಯರ ಮುಂದಿಡುತ್ತಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಡಿಸಿಎಂ ತಗೊಂಡು ಏನ್ ಮಾಡ್ಬೇಕು, ಆದ್ರೆ ಲಿಂಗಾಯತರು ಸಿಎಂ ಆಗ್ಬೇಕು: ಶಾಮನೂರು ಕಿಡಿ

    ನಮ್ಮ ಸರ್ಕಾರದಲ್ಲಿ ಯಾವ ಸಮುದಾಯದವರಿಗೂ ಅನ್ಯಾಯ ಆಗ್ತಿಲ್ಲ. ನಾವು ಅಧಿಕಾರಕ್ಕೆ ಬಂದಿರೋದು ಸಂವಿಧಾನ ಪ್ರಕಾರ. ಸಂವಿಧಾನದಲ್ಲಿ ಎಲ್ಲರಿಗೂ ಅವಕಾಶ ಇದೆ. ಜಾತಿ ನೋಡಿ ಅಧಿಕಾರಿಗಳನ್ನ ನಾವು ಪೋಸ್ಟಿಂಗ್ ಮಾಡೋದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪತ್ರ ಬರೆದು ಬೆದರಿಕೆ ಹಾಕಿದ್ದರೆ ಪ್ರಗತಿಪರರು ಸುಮ್ಮನಾಗುತ್ತಿದ್ದರು: ಶಿವಾಜಿರಾವ್‌ ಜಾಧವ್‌ ಹೇಳಿದ್ದೇನು?

    ಅವರ ಸಾಮರ್ಥ್ಯ ನೋಡಿ ಪೋಸ್ಟಿಂಗ್ ಮಾಡ್ತೀವಿ. ನನ್ನ ಇಲಾಖೆ ವ್ಯಾಪ್ತಿಯಲ್ಲಿ ಎಲ್ಲಾ ಸಮುದಾಯದ ಅಧಿಕಾರಿಗಳೂ ಇದ್ದಾರೆ. ದಲಿತ, ಬ್ರಾಹ್ಮಣ, ಹಿಂದುಳಿದ ವರ್ಗ, ಲಿಂಗಾಯತ, ಅಲ್ಪಸಂಖ್ಯಾತ ಎಲ್ಲರೂ ಇದ್ದಾರೆ. ಜಾತಿ ನೋಡಿ ನಾವು ಕೆಲಸ ಕೊಡುವುದಿಲ್ಲ. ಸಾಮರ್ಥ್ಯ, ಜನರಿಗೆ ಸ್ಪಂದಿಸೋ ರೀತಿ, ಕಾನೂನು, ಯೋಜನೆಗಳ ಅರಿವಿದೆಯಾ ಅವರಿಗೆ ಅಂತ ನೋಡಿ ಪೋಸ್ಟಿಂಗ್ ಮಾಡ್ತೀವಿ. ಒಂದು ಸಮುದಾಯಕ್ಕೆ ಸರ್ಕಾರದಿಂದ ಅನ್ಯಾಯ ಆಗ್ತಿದೆ ಅಂತ ನಾವು ಭಾವಿಸೋದಿಲ್ಲ ಎಂದು ಸರ್ಕಾರದ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಇದನ್ನೂ ಓದಿ: ಹಿಂದೂ ವಿರೋಧಿ ನೀತಿಯಿಂದ್ಲೇ ಲಿಂಗಾಯತರ ಕಡೆಗಣನೆ – ಉನ್ನತ ಹುದ್ದೆಯಲ್ಲಿ ಅಲ್ಪಸಂಖ್ಯಾತರೇ ಇದ್ದಾರೆ: ಯತ್ನಾಳ್‌ ಕಿಡಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಡಿಸಿಎಂ ತಗೊಂಡು ಏನ್ ಮಾಡ್ಬೇಕು, ಆದ್ರೆ ಲಿಂಗಾಯತರು ಸಿಎಂ ಆಗ್ಬೇಕು: ಶಾಮನೂರು ಕಿಡಿ

    ಡಿಸಿಎಂ ತಗೊಂಡು ಏನ್ ಮಾಡ್ಬೇಕು, ಆದ್ರೆ ಲಿಂಗಾಯತರು ಸಿಎಂ ಆಗ್ಬೇಕು: ಶಾಮನೂರು ಕಿಡಿ

    ಬೆಂಗಳೂರು/ ದಾವಣಗೆರೆ: ಕಾಂಗ್ರೆಸ್‌ನಲ್ಲಿ ಡಿಸಿಎಂ (DCM) ಕೂಗು ಎದ್ದಿತ್ತು. ಆದರೆ ಈಗ ಲಿಂಗಾಯತ ಸಿಎಂ (Lingayat CM) ಕೂಗು ಎದ್ದಿದೆ. ಡಿಸಿಎಂ ತಗೊಂಡು ಏನ್ ಮಾಡಬೇಕು ಆದರೆ ಲಿಂಗಾಯತರು ಸಿಎಂ ಆಗಬೇಕು ಎಂದು ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ (Shamanur Shivashankarappa) ನೇರವಾಗಿಯೇ ಹೇಳಿದ್ದಾರೆ.

    ದಾವಣಗೆರೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ (Siddaramaiah) ಸರ್ಕಾರದಲ್ಲಿ ಲಿಂಗಾಯತರನ್ನು ಮೂಲೆಗುಂಪು ಮಾಡಲಾಗುತ್ತಿದ್ದು, ಸರಿಯಾದ ಸ್ಥಾನಮಾನ ಸಿಗುತ್ತಿಲ್ಲ. ಲಿಂಗಾಯತ ಅಧಿಕಾರಿಗಳಿಗೆ ಪ್ರಮುಖ ಹುದ್ದೆಗಳೇ ಸಿಗುತ್ತಿಲ್ಲ ಎಂದು ನೇರವಾಗಿ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಮೈತ್ರಿಯಿಂದ ಭಿನ್ನಮತ ಸ್ಫೋಟ – ಮುಖಂಡರ ಮನವೊಲಿಸಲು ನಿಖಿಲ್ ಕಸರತ್ತು

     

    ನಿಜಲಿಂಗಪ್ಪ, ಜೆ.ಎಚ್.ಪಾಟೇಲರು ಇದ್ದಾಗ ಎಲ್ಲರೂ ಚೆನ್ನಾಗಿದ್ದರು. ಈಗ ನಮ್ಮವರು ಕಂಗಾಲಾಗಿದ್ದಾರೆ. ಸರ್ಕಾರದ ಆಯಾಕಟ್ಟಿನ ಪ್ರಮುಖ ಹುದ್ದೆಗಳು ನಮ್ಮ ಸಮಾಜದವರಿಗೆ ಕೊಟ್ಟಿಲ್ಲ ಎಂದು ಹೇಳುವ ಮೂಲಕ ಸಿಎಂ ಸಿದ್ದರಾಮಯ್ಯ ತಮ್ಮ ಸಮುದಾಯವರಿಗೆ ಮಣೆ ಹಾಕುತ್ತಿದ್ದಾರೆ ಎಂದು ಪರೋಕ್ಷವಾಗಿ ಕಿಡಿಕಾರಿದ್ದಾರೆ.

    ಬೆಂಗಳೂರಿ‌ನಲ್ಲಿ ವೀರಶೈವ ಮಹಾಸಭಾದ ಕಾರ್ಯಕ್ರಮದಲ್ಲಿ ವೇದಿಕೆಯ ಮೇಲೆ ಭಾಷಣ ಮಾಡುವಾಗ ಸತ್ಯವನ್ನು ಹೇಳಿದ್ದೇ‌ನೆ. ಮುಖ್ಯವಾದ ಹುದ್ದೆಗಳನ್ನು ಬಹಳಷ್ಟು ಜನರಿಗೆ ಕೊಟ್ಟಿಲ್ಲ. ಇದರ ಬಗ್ಗೆ ನಾನು ಯಾವುದೇ ಮಂತ್ರಿಗಳ ಬಳಿ ಹೇಳಲು ಹೋಗಿಲ್ಲ. ಡಿಸಿಎಂ ತೆಗೆದುಕೊಂಡು ಏನು ಮಾಡಬೇಕು. ಆದರೆ ಸಿಎಂ ಆಗಬೇಕು. ಯಾವಾಗಲೂ ಸಿಎಂ ಹುದ್ದೆಗೆ ನಮ್ಮ ಪ್ರಸ್ತಾಪ ಇದ್ದೇ ಇರುತ್ತದೆ ಎಂದು ಹೇಳಿದರು.

    ಲಿಂಗಾಯತ ಸಮುದಾಯಕ್ಕೂ ಡಿಸಿಎಂ‌ ಹುದ್ದೆ ನೀಡಬೇಕು ಎಂಬ ಮಾತು ಕಾಂಗ್ರೆಸ್ (Congress) ನಾಯಕರಿಂದಲೇ ಈ ಹಿಂದೆ ‌ ಕೇಳಿ ಬಂದಿತ್ತು. ಈಗ ಡಿಸಿಎಂ ಆಗಿ ಏನು ಮಾಡಬೇಕು. ಆದರೆ ಸಿಎಂ ಆಗಬೇಕು ಎನ್ನುವ ಮೂಲಕ ಶಾಮನೂರು ಶಿವಶಂಕರಪ್ಪ ಲಿಂಗಾಯತ ಸಿಎಂ ಪರ ಧ್ವನಿ ಎತ್ತಿದ್ದಾರೆ. ಲಿಂಗಾಯತ ಸಿಎಂ‌ ಕೂಗು ಮತ್ತಷ್ಟು ಜೋರಾದರೆ ಕಾಂಗ್ರೆಸ್ ಮತ್ತಷ್ಟು ಒತ್ತಡಕ್ಕೆ ಸಿಲುಕುವ ಸಾಧ್ಯತೆ ಇದೆ.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚುನಾವಣೆ ಮುಗಿಯುವವರೆಗೂ ಲಿಂಗಾಯತ ದಾಳ ಬಳಸಿ: ಶಾ ತಾಕೀತು

    ಚುನಾವಣೆ ಮುಗಿಯುವವರೆಗೂ ಲಿಂಗಾಯತ ದಾಳ ಬಳಸಿ: ಶಾ ತಾಕೀತು

    ಬೆಂಗಳೂರು: ಚುನಾವಣೆ (Karnataka Election) ಹೊತ್ತಲ್ಲಿ ರಾಜಕಾರಣಿಗಳಿಗೆ ಹೊಸ ಅಸ್ತ್ರ ಸಿಕ್ಕಿದೆ. ಅದುವೇ ಲಿಂಗಾಯತ ಸಿಎಂ (Lingayat CM) ಅಸ್ತ್ರ. ಈ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ (DK Shivakumar) ಮತ್ತು ಬಿಜೆಪಿ ವಿರುದ್ಧ ನೇರಾನೇರ ಸಮರ ನಡೆಯುತ್ತಿದೆ.

    ಚುನಾವಣೆ ಸಮಯದದಲ್ಲಿ ಇದು ಬಿಜೆಪಿಗೆ (BJP) ಟೆನ್ಷನ್ ಹೆಚ್ಚಿಸಿದ್ದು ಲಿಂಗಾಯತರ ಕಡೆಗಣನೆ ಆರೋಪದಿಂದ ಚುನಾವಣೆ ಹೊಡೆತದ ಆತಂಕ ಎದುರಾಗಿದೆ. ಈ ಲಿಂಗಾಯತ ಸಿಎಂ ಟೆನ್ಷನ್ ವಿಚಾರಕ್ಕೆ ಅಮಿತ್ ಶಾ (Amit Shah) ತಮ್ಮದೇ ಆದ ಸೂತ್ರವೊಂದನ್ನು ನೀಡಿದ್ದಾರೆ.

    ಬೆಂಗಳೂರಿನಲ್ಲಿ ಶುಕ್ರವಾರ ರಾತ್ರಿ ರಾಜ್ಯ ನಾಯಕರ ಜೊತೆ ನಡೆಸಿದ ಸಭೆಯಲ್ಲಿ ಲಿಂಗಾಯತ ಕಡೆಗಣನೆ ಅಸ್ತ್ರ ಎದುರಿಸಲು ರಾಜ್ಯ ನಾಯಕರಿಗೆ ಅಮಿತ್ ಶಾ ತಂತ್ರವನ್ನು ರವಾನಿಸಿದ್ದಾರೆ. ಈ ಲಿಂಗಾಯತ ದಾಳವನ್ನು ಚುನಾವಣೆ ಮುಗಿಯುವವರೆಗೂ ಬಳಕೆ ಮಾಡುವಂತೆ ತಾಕೀತು ಮಾಡಿದ್ದಾರೆ. ಇದನ್ನೂ ಓದಿ: ರಾಜ್ಯ ನಾಯಕರಿಗೆ ಕ್ಲಾಸ್‌ – ಬಂಡಾಯ ಶಮನಕ್ಕೆ ಶಾ ಮದ್ದು

    ಶಾ ತಂತ್ರಗಾರಿಕೆ:
    ಲಿಂಗಾಯತ ಸಿಎಂ ದಾಳ ಕಡೆಯವರೆಗೂ ಇರಿಸಿಕೊಳ್ಳಿ. ಲಿಂಗಾಯತ ಸಮುದಾಯಕ್ಕೆ ಕಾಂಗ್ರೆಸ್‍ಗಿಂತಲೂ (Congress) ಬಿಜೆಪಿಯ ಕೊಡುಗೆಯೇ ಹೆಚ್ಚಿದ್ದು, ಕಾಂಗ್ರೆಸ್ ಕಣ್ಣು ಒರೆಸುವ ತಂತ್ರಗಳಿಂದ ಸಮಯ ಸಾಧಕ ಆಟವಾಡುತ್ತಿದೆ.

    ಈವರೆಗೆ ಇಬ್ಬರು ಲಿಂಗಾಯತ ಸಮುದಾಯದವರಿಗೆ ಸಿಎಂ ಸ್ಥಾನ ನೀಡಿದ್ದು ಮಾತ್ರವಲ್ಲದೇ ಅತೀ ಹೆಚ್ಚು ಟಿಕೆಟ್ ನೀಡಿ ಅತೀ ಹೆಚ್ಚು ಶಾಸಕರನ್ನು ಮಂತ್ರಿಗಳನ್ನಾಗಿ ಮಾಡಿದೆ.

    ಬಿಜೆಪಿ ಲಿಂಗಾಯತ ನಾಯಕರಿಗೆ ಸೂಕ್ತ ಸ್ಥಾನಮಾನ, ಗೌರವ, ಪದವಿ ಅವಕಾಶ ಕೊಟ್ಟಿದ್ದರೆ ಕಾಂಗ್ರೆಸ್ ಒಬ್ಬರಿಗೂ ಸಿಎಂ ಹುದ್ದೆ ಕೊಟ್ಟಿಲ್ಲ. ಸಿಎಂ ಆಗಿದ್ದ ವಿರೇಂದ್ರ ಪಾಟೀಲರನ್ನು ಕಾಂಗ್ರೆಸ್ ಹೀನಾಯವಾಗಿ ನಡೆಸಿಕೊಂಡು ಕೇವಲ ಒಂಭತ್ತೇ ತಿಂಗಳಿಗೆ ಸಿಎಂ ಹುದ್ದೆ ಕಿತ್ತುಕೊಂಡು ಅಪಮಾನ ಮಾಡಿತ್ತು.

    ಲಕ್ಷ್ಮಣ ಸವದಿ ಚುನಾವಣೆಯಲ್ಲಿ ಸೋತಿದ್ದರೂ ಪರಿಷತ್‌ಗೆ ಆಯ್ಕೆ ಮಾಡಿ ಡಿಸಿಎಂ ಮಾಡಲಾಗಿತ್ತು. ಜಗದೀಶ್ ಶೆಟ್ಟರ್‌ ಅವರಿಗೆ ಎಲ್ಲ ಪದವಿ ನೀಡಿ ಸಿಎಂ ಹುದ್ದೆಯನ್ನು ನೀಡಿ ಗೌರವ ನೀಡಲಾಗಿತ್ತು. ಪಕ್ಷದಲ್ಲಿ ಎಲ್ಲ ಸ್ಥಾನಮಾನ ಅನುಭವಿಸಿದವರು ಈಗ ಪಕ್ಷದ್ರೋಹ ಮಾಡಿ ಹೋಗಿದ್ದಾರೆ. ಈ ವಿಚಾರವನ್ನು ಮನವರಿಕೆ ಮಾಡಿ ಜಾಗೃತಿ ಮೂಡಿಸಿ ಮತದಾರರ ಗೊಂದಲವನ್ನು ತಪ್ಪಿಸಿ.