ತುಮಕೂರು: ವಿದ್ಯುತ್ ತಂತಿ ಸರಿಪಡಿಸಲು ಹೋಗಿ ಲೈನ್ ಮ್ಯಾನ್ (LineMan) ಒಬ್ಬರು ಮೃತಪಟ್ಟ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.
ಮೃತ ದುರ್ದೈವಿಯನ್ನು ಮಹೇಶ್ ಗೌಡ (40) ಎಂದು ಗುರುತಿಸಲಾಗಿದೆ. ಗುಬ್ಬಿ ತಾಲೂಕಿನ ತಿಪಟೂರಿನಲ್ಲಿ ಅವಘಡ ಸಂಭವಿಸಿದೆ. ಮಹೇಶ್ ಅವರು ಕೆರೆ ಮಧ್ಯೆ ನೀರಿನಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ (Power) ತಂತಿ ಸರಿಪಡಿಸಲು ಹೋಗಿದ್ದಾರೆ. ಈ ವೇಳೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ನೀರಿನಲ್ಲಿ ಈಜುತ್ತಾ ಸುಸ್ತಾಗಿ ಮುಳುಗಿ ಸಾವನ್ನಪ್ಪಿರೋ ಶಂಕೆ ವ್ಯಕ್ತವಾಗಿದ್ದು, ಅಗ್ನಿಶಾಮಕ ದಳ (Fire Fighter) ಸ್ಥಳಕ್ಕೆ ದೌಡಾಯಿಸಿ ಕಾರ್ಯಾಚರಂಣೆಯ ಬಳಿಕ ಮೃತದೇಹವನ್ನು ನೀರಿನಿಂದ ಹೊರತೆಗೆಯಲಾಗಿದೆ. ಇದನ್ನೂ ಓದಿ: ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಮಹಿಳೆ ನೇಣಿಗೆ ಶರಣು
ಗುಬ್ಬಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
Live Tv
[brid partner=56869869 player=32851 video=960834 autoplay=true]
ದಕ್ಷಿಣದ ಸಾಕಷ್ಟು ಸಿನಿಮಾಗಳ ಮೂಲಕ ಸಂಚಲನ ಮೂಡಿಸಿರುವ ತ್ರೀಗುಣ್ ಈಗ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡ್ತಿದ್ದಾರೆ. ಈ ಚಿತ್ರಕ್ಕಾಗಿ ಕನ್ನಡ ಕೂಡ ತ್ರಿಗುಣ್ ಕಲಿಯುತ್ತಿದ್ದಾರೆ. ನಟನ ಕಲಿಕೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸೌಂಡ್ ಮಾಡುತ್ತಿದೆ.
ತಮಿಳು ಮತ್ತು ತೆಲುಗಿನ 25ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ತ್ರಿಗುಣ್ ಈಗ `ಲೈನ್ ಮ್ಯಾನ್’ ಚಿತ್ರದ ಮೂಲಕ ಚಂದನವನಕ್ಕೆ ಎಂಟ್ರಿ ಕೊಡ್ತಿದ್ದಾರೆ. ಈ ಚಿತ್ರಕ್ಕೆ ಯುವ ನಿರ್ದೇಶಕ ರಾಘು ಶಾಸ್ತ್ರಿ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಕನ್ನಡ ಮತ್ತು ತೆಲುಗು ದ್ವಿಭಾಷೆಯಲ್ಲಿ ಈ ಚಿತ್ರ ಮೂಡಿ ಬರಲಿದೆ. ಇನ್ನು `ರನ್ ಆ್ಯಂಟನಿ’, `ಟಕ್ಕರ್’ ಚಿತ್ರದ ನಿರ್ದೇಶನದ ಮೂಲಕ ಈಗಾಗಲೇ ರಾಘು ಶಾಸ್ತ್ರಿ ಸೈ ಎನಿಸಿಕೊಂಡಿದ್ದಾರೆ. ಇದೀಗ ಭಿನ್ನ ಕಥೆಯನ್ನ ಹೊತ್ತು ಲೈನ್ ಮ್ಯಾನ್ ಚಿತ್ರದ ಮೂಲಕ ಬರುತ್ತಿದ್ದಾರೆ.
`ಲೈನ್ ಮ್ಯಾನ್’ ಸಿನಿಮಾ ಆಗಸ್ಟ್ 5ರಿಂದ ಶುರುವಾಗಲಿದೆ. ಚಾಮರಾಜನಗರ ಮತ್ತು ಚಂದಕವಾಡಿನಲ್ಲಿ ಚಿತ್ರೀಕರಣ ಶುರುವಾಗಲಿದೆ. ಶೂಟಿಂಗ್‌ಗಾಗಿ ಈಗಾಗಲೇ ತ್ರಿಗುಣ್ ಬೆಂಗಳೂರಿಗೆ ಬಂದಿದ್ದಾರೆ. ಚಿತ್ರಕ್ಕಾಗಿ ಕನ್ನಡ ಕಲಿಯುತ್ತಾ, ಕನ್ನಡ ಡೈಲಾಗ್ಸ್ ಕಡೆ ಗಮನ ಕೊಡ್ತಿದ್ದಾರೆ. ಪಕ್ಕದ ರಾಜ್ಯದ ನಟನ ಕನ್ನಡ ಕಲಿಕೆಯ ಶ್ರದ್ಧೆ ನೋಡಿ ಫ್ಯಾನ್ಸ್ ಕೂಡ ಭೇಷ್ ಎಂದಿದ್ದಾರೆ. ಈ ಹಿಂದೆ ʻಗಾರ್ಗಿʼ ಸಿನಿಮಾಗಾಗಿ ಸಾಯಿ ಪಲ್ಲವಿ ಕೂಡ ಕನ್ನಡ ಕಲಿತು, ತಮ್ಮ ಪಾತ್ರಕ್ಕೆ ತಾವೇ ಡಬ್ ಮಾಡಿದ್ದರು. ಈಗ ತ್ರಿಗುಣ್ ಕೂಡ ಕನ್ನಡ ಕಲಿಕೆಯತ್ತ ಆಸಕ್ತಿ ತೋರಿಸಿದ್ದಾರೆ. ಇದನ್ನೂ ಓದಿ:ಸೋದರ ಸೊಸೆ ತಾನ್ಯ ಸಾವಿನ ಕುರಿತು ದಿಯಾ ಮಿರ್ಜಾ ಭಾವುಕ
ಶೂಟಿಂಗ್ ಶುರುವಾಗುವ ಮುಂಚೆ ತೆರೆಮರೆಯಲ್ಲಿ ಸಿನಿಮಾಗಾಗಿ ಚಿತ್ರತಂಡ ಭರ್ಜರಿ ತಯಾರಿ ಮಾಡ್ತಿದ್ದಾರೆ. ಮುಂದಿನ ದಿನಗಳಲ್ಲಿ ರಾಘು ಶಾಸ್ತ್ರಿ ಮತ್ತು ತ್ರಿಗುಣ್ ಕಾಂಬಿನೇಷನ್ ಸಿನಿಮಾ ಹೇಗೆಲ್ಲಾ ಮೋಡಿ ಮಾಡಬಹುದು ಅಂತಾ ಕಾದುನೋಡಬೇಕಿದೆ.
Live Tv
[brid partner=56869869 player=32851 video=960834 autoplay=true]
ದಾವಣಗೆರೆ: ಪತ್ನಿ ತುಂಬು ಗರ್ಭಿಣಿ, ಹೆರಿಗೆಗಾಗಿ ಪತ್ನಿಗೆ ವೈದ್ಯರು ಮುಂದಿನ ತಿಂಗಳು 3ಕ್ಕೆ ದಿನಾಂಕ ನೀಡಿದ್ದರು, ಮಗುವಿನ ಆಗಮನಕ್ಕೆ ಇಡೀ ಕುಟುಂಬ ಕಾತರದಿಂದ ಕಾಯುತ್ತಿತ್ತು. ಆದರೆ ಮುದ್ದು ಕಂದಮ್ಮನ ಮುಖ ನೋಡುವ ಮುನ್ನವೇ ಮಹಾಮಾರಿ ಕೊರೊನಾ ಲೈನ್‍ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ತಂದೆಯನ್ನು ಬಲಿ ಪಡೆದಿದೆ.
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಐನಹಳ್ಳಿ ಗ್ರಾಮದ ನಿವಾಸಿ ಸುರೇಶ್ ನಾಯ್ಕ್, ಜಿಲ್ಲೆಯ ಸಂತೇಬೆನ್ನೂರು ಗ್ರಾಮದಲ್ಲಿ ಹಲವು ವರ್ಷಗಳಿಂದ ಬೆಸ್ಕಾಂ ನಲ್ಲಿ ಲೈನ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು. 15 ದಿನಗಳ ಹಿಂದೆ ಕೊರೊನಾ ಸೋಂಕು ತಗುಲಿತ್ತು. ದಾವಣಗೆರೆಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೇ ಇಂದು ಕೊರೊನೆಯುಸಿರೆಳೆದಿದ್ದಾರೆ. ಮೃತ ಸುರೇಶ್ ನಾಯ್ಕ್ ಪತ್ನಿ ರೋಜಾ ತುಂಬು ಗರ್ಭಿಣಿ. ಜೂನ್ 3 ರಂದು ವೈದ್ಯರು ಹೆರಿಗೆ ದಿನಾಂಕ ನೀಡಿದ್ದರು, ಪತಿಯ ಸಾವಿನಿಂದ ತುಂಬು ಗರ್ಭಿಣಿಯ ರೋಧನೆ ನೋಡಿ ಮುಗಿಲು ಮುಟ್ಟಿದ್ದು, ಕುಟುಂಭಸ್ಥರಲ್ಲಿ ಸಹ ದುಃಖ ಮನೆ ಮಾಡಿದೆ. ಇದನ್ನೂ ಓದಿ: ಕೊರೊನಾದಿಂದ ಅನಾಥವಾದ ಮಕ್ಕಳಿಗೆ ಮಾಸಿಕ 3,500 ರೂ. ಪರಿಹಾರ – ಸಿಎಂ ಮಹತ್ವದ ಘೋಷಣೆ
ಸಂತೇಬೆನ್ನೂರು ಗ್ರಾಮದಲ್ಲಿ ಬೆಸ್ಕಾಂ ಲೈನ್ ಮ್ಯಾನ್ ಆಗಿ ಕೆಲಸ ಮಾಡುತ್ತ ಅದೇ ಗ್ರಾಮದ ರೋಜಾಳನ್ನು ಸುರೇಶ್ ನಾಯ್ಕ್ ಮದುವೆಯಾಗಿದ್ದರು. ಪತ್ನಿ ರೋಜಾ ತುಂಬು ಗರ್ಭಿಣಿಯಾಗಿದ್ದು, ಹೆರಿಗೆಯಾಗಲು ವೈದ್ಯರು ದಿನಾಂಕ ಸಹ ಹೇಳಿದ್ದರು. ಆದರೆ ಹೆರಿಗೆ ಆಗಲು ಮೂರ್ನಾಲ್ಕು ದಿನ ಬಾಕಿ ಇರುವಾಗ ಮಗುವಿನ ಮುಖ ನೋಡುವ ಮುನ್ನವೇ ತಂದೆ ಸುರೇಶ್ ನಾಯ್ಕ ಕೊರೊನಾ ಮಹಾಮರಿಗೆ ಬಲಿಯಾಗಿದ್ದಾರೆ. ಈ ಸುದ್ದಿ ಕೇಳಿದ ಕುಟುಂಬಸ್ಥರಿಗೆ ಬರಸಿಡಿಲು ಬಡಿದಂತಾಗಿದೆ.
ಮಡಿಕೇರಿ: ಬಿಲ್ ಬಾಕಿ ಇರಿಸಿದ್ದ ಹಿನ್ನೆಲೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಲೈನ್ ಮ್ಯಾನ್ ಮೇಲೆ ಅಪ್ಪ, ಮಗ ಹಲ್ಲೆ ನಡೆಸಿ, ಸಿಬ್ಬಂದಿ ಕೈ ಮುರಿದ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಅಮ್ಮತ್ತಿ ಗ್ರಾಮದಲ್ಲಿ ನಡೆದಿದೆ.
ಅಮ್ಮತ್ತಿ ಗ್ರಾಮದಲ್ಲಿ ಲೈನ್ ಮ್ಯಾನ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ನಿವಾಸಿ ಈರಪ್ಪ ಅವರ ಮೇಲೆ ಹಲ್ಲೆ ಮಾಡಲಾಗಿದೆ. ಸೋಮವಾರ ಈರಪ್ಪ ಅಮ್ಮತ್ತಿ ಗ್ರಾಮದ ನಿವಾಸಿ ಬಿ.ಎಸ್ ಅಮಾನುಲ್ಲಾ ಖಾನ್ ಮನೆಗೆ ಹೋಗಿ ಬಿಲ್ ಬಾಕಿ ಇರಿಸಿಕೊಂಡಿದಕ್ಕೆ ವಿದ್ಯುತ್ ಕಡಿತಗೊಳಿಸಿದ್ದರು. ಅಮಾನುಲ್ಲಾ ಖಾನ್ ಅವರು ವಿದ್ಯುತ್ ಬಿಲ್‍ನಲ್ಲಿ 22,612 ರೂ. ಬಾಕಿ ಉಳಿಸಿಕೊಂಡಿದ್ದರು. ಆದ್ದರಿಂದ ಇಲಾಖೆಯ ಆದೇಶದಂತೆ ಸೋಮವಾರ ಮಧ್ಯಾಹ್ನ 3 ಗಂಟೆಗೆ ಖಾನ್ ಅವರ ಮನೆಗೆ ಬರುವ ವಿದ್ಯುತ್ ಸಂಪರ್ಕವನ್ನು ಲೈನ್ ಮ್ಯಾನ್ ಕಡಿತಗೊಳಿಸಿದ್ದರು.
ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿರುವ ವಿಚಾರ ತಿಳಿದ ಅಮಾನುಲ್ಲಾ ಖಾನ್ ಹಾಗೂ ಪುತ್ರ ಜೀಯಾ ಉಲ್ಲಾ ಖಾನ್ ಕರ್ತವ್ಯ ನಿರತರಾಗಿದ್ದ ಈರಪ್ಪ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಪರಿಣಾಮ ಈರಪ್ಪ ಅವರ ಎಡಗೈ ಮೂಳೆ ಮುರಿದಿದೆ. ಹಲ್ಲೆಯಿಂದ ತೀವ್ರ ಗಾಯಗೊಂಡ ಈರಪ್ಪ ಅವರನ್ನು ಅಮ್ಮತ್ತಿ ಗ್ರಾಮದ ಆರ್‌ಐಹೆಚ್‌ಪಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಸಂಭಂದಿಸಿದಂತೆ ಅಮ್ಮತ್ತಿ ಪೋಲಿಸರಿಗೆ ದೂರು ನೀಡಲಾಗಿದ್ದು, ಕರ್ತವ್ಯ ನಿರತ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಯ ಮೇಲೆ ಕ್ರಮ ಜರುಗಿಸುವಂತೆ ಇಲಾಖೆಯ ಸಿಬ್ಬಂದಿ ಒತ್ತಾಯಿಸಿದ್ದಾರೆ.