Tag: Line

  • ಮದ್ಯ ಆಯ್ತು, ಈಗ ಗುಟ್ಕಾಪ್ರಿಯರಿಂದ ಕ್ಯೂ

    ಮದ್ಯ ಆಯ್ತು, ಈಗ ಗುಟ್ಕಾಪ್ರಿಯರಿಂದ ಕ್ಯೂ

    ರಾಯಚೂರು: ಸರ್ಕಾರ ಮದ್ಯ ಮಾರಾಟಕ್ಕೆ ಅವಕಾಶ ನೀಡಿದ ಬಳಿಕ ಮದ್ಯದ ಅಂಗಡಿ ಮುಂದೆ ಮದ್ಯಪ್ರಿಯರು ಕ್ಯೂ ನಿಂತಿದ್ದರು. ಈಗ ಗುಟ್ಕಾ, ಸಿಗರೇಟ್ ಅಂಗಡಿ ಮುಂದೆ ದೊಡ್ಡ ಕ್ಯೂ ಕಾಣಿಸುತ್ತಿದೆ.

    ಪಾನ್ ಬೀಡ ವ್ಯಾಪಾರಕ್ಕೆ ಅವಕಾಶ ಸಿಕ್ಕ ಹಿನ್ನೆಲೆ ಸಗಟು ಅಂಗಡಿಗಳ ಮುಂದೆ ವ್ಯಾಪಾರ ಜೋರಾಗಿದೆ. ರಾಯಚೂರಿನ ಮಾನ್ವಿಯಲ್ಲಿ ನೂರಾರು ಜನರಿಂದ ಭರ್ಜರಿ ವ್ಯಾಪಾರ ನಡೆದಿದೆ. ಮಾನ್ವಿಯ ಸಗಟು ವ್ಯಾಪಾರ ಅಂಗಡಿಗಳ ಮುಂದೆ ಜನಜಂಗುಳಿ ಸೇರಿದ್ದು ಸಾಮಾಜಿಕ ಅಂತರ, ಮಾಸ್ಕ್‍ಗಳನ್ನು ಮರೆತು ಗುಟ್ಕಾ ಪ್ಯಾಕೆಟ್ ಗಳನ್ನು ಜನ ಕೊಳ್ಳುತ್ತಿದ್ದಾರೆ.

    ಕ್ಯೂನಲ್ಲಿ ನಿಂತ ಪಾನ್ ಬೀಡ ಅಂಗಡಿ, ಕಿರಾಣಿ ಅಂಗಡಿ ವ್ಯಾಪಾರಿಗಳು ಹಾಗೂ ಸಾರ್ವಜನಿಕರು ಕೊರೊನಾ ಭೀತಿಯನ್ನೇ ಮರೆತಿದ್ದಾರೆ. ಗ್ರಾಮೀಣ ಭಾಗದಿಂದಲೂ ಬಂದ ನೂರಾರು ಜನ ಗುಟ್ಕಾ ಪ್ಯಾಕೆಟ್‍ಗಳನ್ನು ತೆಗೆದುಕೊಂಡು ಹೋದರು. ಮೊದಮೊದಲಿಗೆ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

    ಮೇ 4 ರಂದು ರಾಜ್ಯಾದ್ಯಂತ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದ್ದು, ಈ ಬೆನ್ನಲ್ಲೇ ಮದ್ಯದಂಗಡಿಗಳು ಓಪನ್ ಆಗಿದ್ದವು. ಇದೇ ಸಂದರ್ಭದಲ್ಲಿ 42 ದಿನಗಳ ಕಾಲ ಮದ್ಯವಿಲ್ಲದೆ ಕಂಗಾಲಾಗಿದ್ದ ಎಣ್ಣೆಪ್ರಿಯರು ಬಿಸಿಲು ಎನ್ನದೇ ಸರತಿ ಸಾಲಿನಲ್ಲಿ ನಿಂತು ಮದ್ಯ ಖರೀದಿ ಮಾಡಿದ್ದರು. ಆದರೆ ಈ ವೇಳೆ ಸಾಮಾಜಿಕ ಅಂತರ ಕಾಯ್ದುಕೊಂಡಿದ್ದರು.

  • ಅಂಗಡಿ ಮುಂಗಟ್ಟುಗಳಲ್ಲಿ ಸಾಲು ನಿಲ್ಲಲು ಲೈನ್ ಹಾಕಿದ ಪೊಲೀಸರು

    ಅಂಗಡಿ ಮುಂಗಟ್ಟುಗಳಲ್ಲಿ ಸಾಲು ನಿಲ್ಲಲು ಲೈನ್ ಹಾಕಿದ ಪೊಲೀಸರು

    – ಸಾಮಾಜಿಕ ಅಂತರ ಕಾಯಲು ಪ್ಲಾನ್
    – ಪೊಲೀಸರ ಕಾರ್ಯಕ್ಕೆ ಜನರ ಮೆಚ್ಚುಗೆ

    ಹಾಸನ: ಕೊರೊನಾ ಭೀತಿ ಹೆಚ್ಚಾದ ಬೆನ್ನಲ್ಲೇ ದೇಶಾದ್ಯಂತ ಲಾಕ್‍ಡೌನ್ ಘೋಷಿಸಲಾಗಿದೆ. ಆದರೆ ಜನ ಮಾತ್ರ ಅಗತ್ಯ ವಸ್ತುಗಳನ್ನು ಕೊಳ್ಳಲು ಹೋದಾಗ ಯಾವುದೇ ಅಂತರ ಕಾಯ್ದುಕೊಳ್ಳದೆ ಅಂಗಡಿಗಳಿಗೆ ಮುಗಿ ಬೀಳುತ್ತಿದ್ದಾರೆ. ಇದಕ್ಕೆ ಹಾಸನ ಪೊಲೀಸರು ಉಪಾಯ ಹುಡುಕಿದ್ದಾರೆ.

    ಜನ ಅಂಗಡಿಗೆ ಹೋದಾಗಲೂ ಅಂತರ ಕಾಯ್ದುಕೊಳ್ಳುವಂತೆ ಮಾಡಲು ಹಾಸನ ಪೊಲೀಸರು ವಿನೂತನ ಕ್ರಮ ಕೈಗೊಂಡಿದ್ದಾರೆ. ಹಾಲಿನ ಅಂಗಡಿ, ಮೆಡಿಕಲ್ ಶಾಪ್‍ಗಳ ಮುಂದೆ ಪೇಟಿಂಗ್‍ನಲ್ಲಿ ಸರತಿ ಸಾಲಿನಲ್ಲಿ ಬರುವಂತೆ ಲೈನ್ ಹಾಕಿಸಲಾಗಿದೆ. ಹೀಗೆ ಸರತಿ ಸಾಲಿನಲ್ಲಿ ಬರುವವರು ಎಷ್ಟು ಅಂತರದಲ್ಲಿ ನಿಲ್ಲಬೇಕು ಎಂದು ಅಡ್ಡಗೆರೆ ಕೂಡ ಬರೆಸಿದ್ದಾರೆ.

    ಮಂಡ್ಯ ಎಸ್‍ಪಿ ಶ್ರೀನಿವಾಸ್ ಗೌಡ ಸೂಚನೆ ಮೇರೆಗೆ ಹಾಸನ ಪೊಲೀಸರು ಸ್ವತಃ ತಾವೇ ಮುಂದೆ ನಿಂತು ಜನರ ಸುರಕ್ಷತೆಗಾಗಿ ಸರಕ್ಷಾ ಗೆರೆ ಎಳೆಸುತ್ತಿದ್ದಾರೆ. ಪೊಲೀಸರ ಕಾರ್ಯವನ್ನು ಹಾಸನ ಜಿಲ್ಲೆಯ ಜನರು ಶ್ಲಾಘಿಸಿದ್ದಾರೆ.