Tag: Lila Palace

  • ಬೆಂಗಳೂರಿನಲ್ಲಿ ದೀಪ್‍ವೀರ್ ಆರತಕ್ಷತೆ- ಮಹಾರಾಣಿಯಂತೆ ಕಂಗೊಳಿಸಿದ ದೀಪಿಕಾ

    ಬೆಂಗಳೂರಿನಲ್ಲಿ ದೀಪ್‍ವೀರ್ ಆರತಕ್ಷತೆ- ಮಹಾರಾಣಿಯಂತೆ ಕಂಗೊಳಿಸಿದ ದೀಪಿಕಾ

    ಬೆಂಗಳೂರು: ಬಾಲಿವುಡ್ ಸ್ಟಾರ್ ಜೋಡಿಯಾದ ಕನ್ನಡತಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರ ವಿವಾಹ ಆರತಕ್ಷತೆ ಇಂದು ನಗರದ ಲೀಲಾ ಪ್ಯಾಲೇಸ್‍ನಲ್ಲಿ ಆಯೋಜಿಸಲಾಗಿತ್ತು. ಹಣೆತುಂಬಾ ಸಿಂಧೂರವಿಟ್ಟು ಮಹಾರಾಣಿಯಂತೆ ಕಂಗೊಳಿಸುತ್ತಿದ್ದ ದೀಪಿಕಾ ಪತಿಯ ಕೈ ಹಿಡಿದು ನಡೆದು ಬಂದು ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದರು.

    ದಕ್ಷಿಣ ಭಾರತದ ಸಂಪ್ರದಾಯಕ್ಕೆ ತಕ್ಕಂತೆ ದೀಪಿಕಾ ಬಂಗಾರದ ಬಣ್ಣದ ಜರತಾರಿ ಸೀರೆಯುಟ್ಟು ಆ್ಯಂಟಿಕ್ ಜ್ಯುವೆಲರಿ ಧರಿಸಿ ಮಿಂಚಿದರೆ, ವರ ರಣವೀರ್ ಸಿಂಗ್ ಬಂಗಾರದ ಕಸೂತಿ ಇರುವ ಕಡು ನೀಲಿ ವರ್ಣದ ಲಾಂಗ್ ಸೂಟ್ ಧರಿಸಿದ್ದರು.

    ಇಟಲಿಯಲ್ಲಿ ಮದುವೆಯಾಗಿ ಮುಂಬೈಗೆ ಆಗಮಿಸಿದ್ದ ನವದಂಪತಿ ಆತ್ಮೀಯರಿಗೆ ತಮ್ಮ ಆರತಕ್ಷತೆಯ ಆಹ್ವಾನವನ್ನು ನೀಡಿದ್ದರು. ಈ ನಡುವೆ ಅವರ ಮದುವೆ ಸಮಾರಂಭದ ಫೋಟೋಗಳು ಎಲ್ಲಾ ಅಭಿಮಾನಿಗಳ ಮನಗೆದ್ದಿದ್ದವು. ಅಲ್ಲದೇ ಮದುವೆ ಕ್ಷಣ ಫೋಟೋ ಲೀಕ್ ಆಗದಂತೆ ಎಚ್ಚರಿಕೆ ವಹಿಸಿದ್ದ ಈ ಜೋಡಿ ಬಳಿಕ ಅಭಿಮಾನಿಗಳೊಂದಿಗೆ ಸ್ವತಃ ಫೋಟೋಗಳನ್ನು ಒಂದೊಂದಾಗಿ ಹಂಚಿಕೊಂಡಿದ್ದರು.

    ಲೀಲಾ ಪ್ಯಾಲೇಸ್ ವಿದ್ಯುತ್ ದೀಪಗಳಿಂದ ಅಲಂಕರಗೊಂಡು ಝಗಮಗಿಸುತ್ತಿತ್ತು. ಕೆಂಪು ಗುಲಾಬಿ ಹೂಗಳು, ಕೆಂಪು ಕಾರ್ನೇಷಿಯಾ ಮತ್ತು ಸೇವಂತಿ ಹೂಗಳಿಂದ ವೇದಿಕೆಯ ಮುಂದೆ ರಾಮ್‍ಲೀಲಾ ಜೋಡಿಯ ಕಂಡವರು ಹಬ್ಬದ ವಾತಾವರಣದಂತೆ ಭಾಸವಾಗಿತ್ತು. ಆರತಕ್ಷತೆ ಸಮಾರಂಭಕ್ಕೆ ಕ್ರೀಡಾ, ರಾಜಕೀಯ, ಸಿನಿಮಾ ರಂಗದ ಗಣ್ಯರು ಸೇರಿದಂತೆ ಹಲವು ಕ್ಷೇತ್ರಗಳ ದಿಗ್ಗಜರು ಆಗಮಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv