Tag: Lights

  • ಇಡೀ ರಾಜ್ಯಕ್ಕೆ ಬೆಳಕು ನೀಡುವ ರಾಯಚೂರಿನಲ್ಲೇ ಬೆಳಕಿಲ್ಲ – ಸಾರ್ವಜನಿಕರಿಂದ ತೀವ್ರ ಆಕ್ರೋಶ

    ಇಡೀ ರಾಜ್ಯಕ್ಕೆ ಬೆಳಕು ನೀಡುವ ರಾಯಚೂರಿನಲ್ಲೇ ಬೆಳಕಿಲ್ಲ – ಸಾರ್ವಜನಿಕರಿಂದ ತೀವ್ರ ಆಕ್ರೋಶ

    -ಬಡಾವಣೆ, ಮುಖ್ಯರಸ್ತೆಗೆ ಹೋದರೂ ಬೀದಿ ದೀಪಗಳಿಲ್ಲ

    ರಾಯಚೂರು: ಇತ್ತೀಚಿಗೆ ಕಲಬುರಗಿಯಲ್ಲಿ (Kalaburagi) ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಯಚೂರು (Raichuru) ನಗರಸಭೆಯನ್ನು ಪಾಲಿಕೆಯಾಗಿ ಸರ್ಕಾರ ಮೇಲ್ದರ್ಜೆಗೆ ಏರಿಸಿದೆ. ನಗರದ ಜನರು ಇದಕ್ಕೆ ಒಂದೆಡೆ ಖುಷಿ ವ್ಯಕ್ತಪಡಿಸಿದರೆ, ಇನ್ನೊಂದೆಡೆ ನಗರಸಭೆಯ ನಿರ್ಲಕ್ಷ್ಯಕ್ಕೆ ನಿತ್ಯ ಹಿಡಿಶಾಪ ಹಾಕುವಂತಾಗಿದೆ. ರಾತ್ರಿಯಾದರೆ ಸಾಕು ಬಡಾವಣೆಗಳಲ್ಲಿ ಜನ ಓಡಾಡಲು ಹೆದರುವ ಪರಸ್ಥಿತಿಯಿದೆ. ಹೆಚ್ಚುತ್ತಿರುವ ಕಳ್ಳತನ ಪ್ರಕರಣಗಳಿಗೆ ನಗರಸಭೆ ನಿರ್ಲಕ್ಷ್ಯ ಕಾರಣವಾಗುತ್ತಿದೆ.

    ಬಿಸಿಲನಾಡು ರಾಯಚೂರಿನ ಜಿಲ್ಲಾ ಕೇಂದ್ರ ಈಗ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ನಗರದ ಯಾವುದೇ ಬಡಾವಣೆ, ಮುಖ್ಯರಸ್ತೆಗೆ ಹೋದರೂ ಬೀದಿ ದೀಪಗಳಿಲ್ಲ. ಕೇವಲ ಕಂಬಗಳು ಮಾತ್ರ ನಿಂತಿವೆ. ಬೀದಿದೀಪಗಳು ಹಾಳಾಗಿ ಸುಮಾರು ತಿಂಗಳುಗಳೇ ಕಳೆದರೂ ಜಿಲ್ಲಾಡಳಿತ ಹಾಗೂ ನಗರಸಭೆ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಸಂಜೆಯಾದರೆ ಸಾಕು ಜನ ಮನೆಯಿಂದ ಹೊರಬರಲು ಹೆದರುವ ಸ್ಥಿತಿ ನಿರ್ಮಾಣವಾಗಿದೆ.ಇದನ್ನೂ ಓದಿ: ರಾಜ್ಯೋತ್ಸವ ಪ್ರಶಸ್ತಿಗೆ ಫುಲ್‌ ಡಿಮ್ಯಾಂಡ್‌ – 69 ಪ್ರಶಸ್ತಿಗೆ 2,000ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆ

    ಮಹಿಳೆಯರಿಗಂತೂ ಸುರಕ್ಷತೆಯೇ ಇಲ್ಲವಾಗಿದೆ. ಕಳೆದ ಕೆಲ ತಿಂಗಳುಗಳಿಂದ ನಗರದಲ್ಲಿ ಕಳ್ಳತನ, ಅಪಹರಣ ಯತ್ನ, ದರೋಡೆಯಂತ ಪ್ರಕರಣಗಳು ನಡೆಯುತ್ತಿದ್ದರೂ ನಗರಸಭೆ ಕಣ್ಮುಚ್ಚಿ ಕುಳಿತಿದೆ. ಇನ್ನೂ ಸಿಸಿ ಕ್ಯಾಮರಾಗಳನ್ನು ಅಲ್ಲಲ್ಲಿ ಅಳವಡಿಸಿದ್ದರೂ ಯಾವುದೇ ಕೆಲಸ ಮಾಡುತ್ತಿಲ್ಲ. ನಗರಸಭೆಯನ್ನು ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೆ ಏರಿಸಿದ್ದರೂ ಜನರಲ್ಲಿ ಖುಷಿ ಕಾಣುತ್ತಿಲ್ಲ. ಜನರನ್ನು ಕಳ್ಳಕಾಕರಿಂದ ರಕ್ಷಿಸಲು, ರಾತ್ರಿ ವೇಳೆ ಸುರಕ್ಷಿತವಾಗಿ ಓಡಾಡಲು ಕೂಡಲೇ ಬೀದಿದೀಪಗಳನ್ನು ಅಳವಡಿಸಿ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಬೀದಿದೀಪಗಳ ನಿರ್ವಹಣೆಗಾಗಿ ಫೆಬ್ರವರಿಯಲ್ಲಿ ಒಂದುವರೆ ಕೋಟಿ ರೂಪಾಯಿ ವೆಚ್ಚದಲ್ಲಿ ಟೆಂಡರ್ ಕರೆಯಲಾಗಿತ್ತು. ಗುತ್ತಿಗೆದಾರರು ಸರಿಯಾಗಿ ನಿರ್ವಹಣೆ ಮಾಡದ ಹಿನ್ನೆಲೆ ಗುತ್ತಿಗೆ ರದ್ದು ಮಾಡಲಾಗಿತ್ತು.

    ಇದಕ್ಕೆ ಸಂಬಂಧಿಸಿದಂತೆ ನಗರಸಭೆ ಪೌರಾಯುಕ್ತ ಗುರುಸಿದ್ದಯ್ಯ ಮಾತನಾಡಿ, ಹೊಸ ಟೆಂಡರ್ ಕರೆಯುತ್ತೇವೆ. ಇನ್ನೂ ಎರಡು ಮೂರು ದಿನಗಳಲ್ಲಿ ಹೊಸ ಟೆಂಡರ್ ಕರೆಯುತ್ತಿದ್ದೇವೆ. ಆದಷ್ಟು ಬೇಗ ಬೀದಿದೀಪ ಅಳವಡಿಸುತ್ತೇವೆ ಎಂದು ಹೇಳಿದ್ದಾರೆ

    ಒಟ್ಟಿನಲ್ಲಿ ನಗರಸಭೆಯ ನಿಧಾನಗತಿಯ ಧೋರಣೆ ಜನರಲ್ಲಿ ಅಸುರಕ್ಷಿತೆಯ ಭಾವನೆ ಮೂಡಿಸಿದೆ. ರಾತ್ರಿಯಾದರೆ ಸಾಕು ಜನ ರಸ್ತೆಯಲ್ಲಿ ಓಡಾಡಲು ಹೆದರುವ ಪರಸ್ಥಿತಿ ಉಂಟಾಗಿದೆ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಎಚ್ಚೆತ್ತು ಬೀದಿದೀಪಗಳ ಅಳವಡಿಕೆಗೆ ಮುಂದಾಗಬೇಕಿದೆ.ಇದನ್ನೂ ಓದಿ: ಇಡೀ ವಿಶ್ವದಲ್ಲಿ ಜನರ ಖಾತೆಗೆ ಹಣ ಹಾಕುತ್ತಿರುವ ಏಕೈಕ ಸರ್ಕಾರ ನಮ್ಮದು – ಯತೀಂದ್ರ

  • ಉಡುಪಿಯಲ್ಲಿ ಸರ್ವ ಧರ್ಮೀಯರಿಂದ ಜ್ಯೋತಿ ಪ್ರಜ್ವಲನೆ- ಕೊರೊನಾ ವಿರುದ್ಧ ಏಕತೆ ಪ್ರದರ್ಶನ

    ಉಡುಪಿಯಲ್ಲಿ ಸರ್ವ ಧರ್ಮೀಯರಿಂದ ಜ್ಯೋತಿ ಪ್ರಜ್ವಲನೆ- ಕೊರೊನಾ ವಿರುದ್ಧ ಏಕತೆ ಪ್ರದರ್ಶನ

    ಉಡುಪಿ: ಮಹಾಮಾರಿ ಕೊರೊನಾ ವಿರುದ್ಧ ಪ್ರಧಾನಿ ಮೋದಿ ಜ್ಯೋತಿ ಬೆಳಗಲು ಕರೆ ನೀಡಿದ್ದು ಉಡುಪಿ ಜಿಲ್ಲೆಯಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಯಿತು. ಸರ್ವಧರ್ಮೀಯರು ದೀಪ ಬೆಳಗಿ ಒಗ್ಗಟ್ಟು ಪ್ರದರ್ಶನ ಮಾಡಿದರು.

    ಒಂಬತ್ತು ಗಂಟೆಯಾಗುತ್ತಿದ್ದಂತೆ ತಮ್ಮ ತಮ್ಮ ಮನೆಗಳಲ್ಲಿ ಕುಟುಂಬ ಸಮೇತರಾಗಿ ಜನ ದೀಪ ಬೆಳಗಿದರು. ವಿದ್ಯುತ್ ದೀಪವನ್ನು ಸಂಪೂರ್ಣವಾಗಿ ಆಫ್ ಮಾಡಿ ದೀಪ ಬೆಳಗಲಾಯಿತು. 10 ನಿಮಿಷಗಳ ಕಾಲ ದೀಪದ ಬೆಳಕಲ್ಲಿ ಜನ ಕಾಲ ಕಳೆದರು. ಕೆಲಕಾಲ ಪ್ರಾರ್ಥನೆ, ದೇಶದ ಒಳಿತಿಗಾಗಿ ಪ್ರಾರ್ಥಿಸಲಾಯ್ತು.

    ಕೊರೊನಾಮಹಾಮಾರಿಯ ವಿರುದ್ಧ ಜಾತಿ ಧರ್ಮವನ್ನು ಮೀರಿ ಜನ ದೀಪ ಹಚ್ಚಿದರು. ಉಡುಪಿ ನಗರದ ಬ್ರಹ್ಮಗಿರಿಯ ಸೈಂಟ್ ಸಿಸಿಲಿಸ್ ಸಮೀಪ ಕ್ರೈಸ್ತ ಧರ್ಮೀಯ ಕುಟುಂಬ ಒಂಬತ್ತು ಗಂಟೆಗೆ ಸರಿಯಾಗಿ ದೀಪ ಬೆಳಗಿತು. ಉಡುಪಿ ಬಿಷಪ್ ಜೆರಾಲ್ಡ್ ಐಸಾಕ್ ಲೋಬೋ ಆದೇಶದಂತೆ ಕ್ರೈಸ್ತ ಧರ್ಮೀಯರು ದೀಪ ಹಚ್ಚಿ ದೇವರ ಮುಂದೆ ಪ್ರಾರ್ಥನೆ ಸಲ್ಲಿಸಿದರು.

    ಪುಟ್ಟ ಪುಟ್ಟ ಮಕ್ಕಳು ವಸತಿ ಸಮುಚ್ಛಯದ ಬಾಲ್ಕನಿಯಿಂದ ದ್ವೀಪ ಬೆಳಗ್ಗೆ ಕೊರೊನಾದ ವಿರುದ್ಧ ಹೋರಾಡುತ್ತಿರುವ ರೋಗಿಗಳು ಶುಶ್ರೂಷೆ ನೀಡುತ್ತಿರುವ ವೈದ್ಯಕೀಯ ಸಿಬ್ಬಂದಿ ಸರಕಾರಕ್ಕಾಗಿ ಪ್ರಾರ್ಥನೆ ಮಾಡಿದರು.

    ಮುಸಲ್ಮಾನ ಕುಟುಂಬಗಳು ಮೊಬೈಲ್ ಟಾರ್ಚ್, ಕ್ಯಾಂಡಲ್ ಬೆಳಗಿದವು. ರೋಗದ ವಿರುದ್ಧ ಎಲ್ಲರೂ ಸಮಾನ ಮನಸ್ಕರಾಗಬೇಕು. ಸರ್ಕಾರದ ನಿರ್ಧಾರಕ್ಕೆ ತಲೆಬಾಗಬೇಕು ಎಂಬ ಸಂದೇಶ ದೇವಾಲಯಗಳ ನಗರಿಯಿಂದ ವ್ಯಕ್ತವಾಯ್ತು.

  • ಧರ್ಮಸ್ಥಳ ಲಕ್ಷ ದೀಪೋತ್ಸವ – ಕ್ಷೇತ್ರಾದ್ಯಂತ ಝಗಮಗಿಸ್ತಿದೆ ವಿದ್ಯುತ್ ದೀಪಗಳು

    ಧರ್ಮಸ್ಥಳ ಲಕ್ಷ ದೀಪೋತ್ಸವ – ಕ್ಷೇತ್ರಾದ್ಯಂತ ಝಗಮಗಿಸ್ತಿದೆ ವಿದ್ಯುತ್ ದೀಪಗಳು

    ಮಂಗಳೂರು: ಪುಣ್ಯಕ್ಷೇತ್ರ ಧರ್ಮಸ್ಥಳದಲ್ಲಿ ಈಗ ಲಕ್ಷ ದೀಪೋತ್ಸವದ ಸಂಭ್ರಮ. ಶುಕ್ರವಾರದಿಂದ ಧರ್ಮಸ್ಥಳ ಕ್ಷೇತ್ರಾದ್ಯಂತ ವಿದ್ಯುತ್ ದೀಪಗಳು ಝಗಮಗಿಸುತ್ತಿದ್ದು, ವರ್ಷಂಪ್ರತಿಯಂತೆ ಕ್ಷೇತ್ರದ ಪರಿಸರ ದೀಪಗಳಿಂದ ಕಂಗೊಳಿಸಲಿದೆ.

    ಈ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ಆಗಮಿಸಲಿದ್ದು, ಮಂಜುನಾಥನ ದರ್ಶನ ಪಡೆಯಲಿದ್ದಾರೆ. ಇದೇ ವೇಳೆ, ಸರ್ವ ಧರ್ಮ ಸಮ್ಮೇಳನ ಮತ್ತು ಸಾಹಿತ್ಯ ಸಮ್ಮೇಳನವೂ ಜರಗಲಿದೆ. ನ.25ರಂದು 84ನೇ ವರ್ಷದ ಸರ್ವ ಧರ್ಮ ಸಮ್ಮೇಳನ ಹಾಗೂ 26ರಂದು ಸಾಹಿತ್ಯ ಸಮ್ಮೇಳನ ಜರುಗಲಿದ್ದು ಸರ್ವ ಧರ್ಮಗಳ ಸಾಹಿತ್ಯಾಸಕ್ತರನ್ನು ಆಕರ್ಷಿಸಲಿದೆ.

    ಈ ಬಾರಿಯ ಸರ್ವ ಧರ್ಮ ಸಮ್ಮೇಳನವನ್ನು ಮಾಜಿ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಉದ್ಘಾಟಿಸಲಿದ್ದಾರೆ. ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ನಡೆಯುವ ಈ ಲಕ್ಷ ದೀಪೋತ್ಸವದ ವಿಶೇಷ ಎಂದರೆ, ಉತ್ಸವದ ಕೊನೆಯ ದಿನ ದೇವರ ಮೂರ್ತಿಯನ್ನು ಹೊತ್ತು ಭಕ್ತರ ದರ್ಶನಕ್ಕಾಗಿ ಮೆರವಣಿಗೆ ನಡೆಯಲಿದೆ.

    ಮಂಜುನಾಥನ ಮೂರ್ತಿಯೊಂದಿಗೆ ಕ್ಷೇತ್ರದ ಆವರಣದಲ್ಲಿ ಮೆರವಣಿಗೆ ನಡೆದು, ಐದು ಕಟ್ಟೆಗಳಲ್ಲಿ ಪೂಜೆ ನಡೆಯಲಿದೆ. ಹಿಂದಿನ ಕಾಲದಲ್ಲಿ ಲಕ್ಷ ದೀಪಗಳಿಂದಲೇ ಕ್ಷೇತ್ರವನ್ನು ಝಗಮಗಿಸುತ್ತಿದ್ದರೆ, ಈಗಿನ ಕಾಲದಲ್ಲಿ ವಿದ್ಯುತ್ ದೀಪಗಳಿಂದ ಧರ್ಮಸ್ಥಳ ಕ್ಷೇತ್ರ ಕಂಗೊಳಿಸುವಂತೆ ಮಾಡಲಾಗುತ್ತಿದೆ.

  • ಮಾನ್ವಿಯಲ್ಲಿ ಲಕ್ಷದೀಪೋತ್ಸವ ಸಂಭ್ರಮ

    ಮಾನ್ವಿಯಲ್ಲಿ ಲಕ್ಷದೀಪೋತ್ಸವ ಸಂಭ್ರಮ

    ರಾಯಚೂರು: ಕಾರ್ತಿಕ ಮಾಸದ ಪ್ರಯುಕ್ತ ಮಾನ್ವಿಯಲ್ಲಿ ಬೆಳಕಿನ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ.

    ಮಾನ್ವಿ ಪಟ್ಟಣದ ಶ್ರೀ ಕಲ್ಯಾಣ ವೆಂಕಟೇಶ್ವರ ದೇವಾಲಯಲ್ಲಿ ವಿಭಿನ್ನ ರೀತಿಯಲ್ಲಿ ಲಕ್ಷ ದೀಪೋತ್ಸವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ದೀಪಗಳಿಂದಲೇ ಹಲವಾರು ಚಿತ್ತಾರಗಳನ್ನು ಬಿಡಿಸಲಾಯಿತು.

    ಶಿವಲಿಂಗದ ರೂಪ, ಓಂ, ಸ್ವಸ್ತಿಕ ಸೇರಿ ವಿವಿಧ ಚಿತ್ತಾರಗಳು ಮಣ್ಣಿನ ದೀಪದಲ್ಲೇ ಅರಳಿತ್ತು. ಅತೀ ವಿಜೃಂಭಣೆಯಿಂದ ಆಚರಿಸುತ್ತಿರುವ ಲಕ್ಷ ದೀಪೋತ್ಸವದಲ್ಲಿ ಭಾಗವಹಿಸುವ ಭಕ್ತರಿಗೆ ಸಕಲ ವ್ಯವಸ್ಥೆಗಳನ್ನ ಕಲ್ಪಿಸಲಾಗಿತ್ತು. ಶ್ರೀ ಶಿರಡಿ ಸಾಯಿಬಾಬಾ ಭಕ್ತರ ಸಂಘ ಲಕ್ಷದೀಪೋತ್ಸವದ ಜವಾಬ್ದಾರಿಯನ್ನು ಹೊತ್ತುಕೊಂಡಿತ್ತು.

    ವಯಸ್ಸಿನ ಬೇಧವಿಲ್ಲದೆ ಯುವತಿಯರು, ಮಹಿಳೆಯರು ದೀಪಗಳನ್ನು ಬೆಳಗಿಸಿ ಪ್ರಾರ್ಥನೆ ಸಲ್ಲಿಸಿದರು. ಲಕ್ಷ ದೀಪೋತ್ಸವದಲ್ಲಿ ಭಾಗವಹಿಸಿದ ಭಕ್ತರಿಗೆ ಪ್ರಸಾದ, ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • Photos: ವಿದ್ಯುತ್ ದೀಪಗಳಿಂದಲೇ ಮಿಂದೆದ್ದ ಮೈಸೂರು- ಬೆಳಕಿನ ವೈಭವ ನೋಡುಗರ ಕಣ್ಣಿಗೆ ಹಬ್ಬ

    Photos: ವಿದ್ಯುತ್ ದೀಪಗಳಿಂದಲೇ ಮಿಂದೆದ್ದ ಮೈಸೂರು- ಬೆಳಕಿನ ವೈಭವ ನೋಡುಗರ ಕಣ್ಣಿಗೆ ಹಬ್ಬ

    ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾದ ವಿದ್ಯುತ್ ದೀಪಾಲಂಕಾರ ಅದುವೇ ಬೆಳಕಿನ ಚಿತ್ತಾರ. ನಾನಾ ಬಗೆಯಲ್ಲಿ ಬೆಳಕು ಸೂಸುವ ಬಗೆಬಗೆಯ ವಿನ್ಯಾಸದ ಮನಮೋಹಕ ಬೆಳಕಿನ ವೈಭವ ನೋಡುಗರ ಕಣ್ಣುಗಳಲ್ಲಿ ಹಬ್ಬದ ಸಡಗರ ಸಂಭ್ರಮ ಮನೆ ಮಾಡುತ್ತದೆ. ಈ ಬಾರಿ ವಿಭ್ನಿನವಾಗಿ ಹಾಗೂ ವಿಶೇಷವಾಗಿ ಅಲಂಕಾರ ಮಾಡಲಾಗಿದೆ.

    ದಸರಾ ವೇಳೆ ಮೈಸೂರು ಅರಮನೆ ಮಾತ್ರವಲ್ಲದೆ, ಇಡೀ ನಗರ ಕತ್ತಲಾಗುತ್ತಿದ್ದಂತೆಯೇ ವಿದ್ಯುತ್ ದೀಪಗಳ ಅಲಂಕಾರ, ಬೆಳಕಿನ ವೈಯ್ಯಾರ ಕಣ್ಣಿಗೆ ಕಟ್ಟುತ್ತಿದೆ. ನಗರದ ಎಲ್ಲಾ ರಸ್ತೆಗಳು ಹಾಗೂ ವೃತ್ತಗಳು ಬಣ್ಣ ಬಣ್ಣದ ದೀಪಗಳಿಂದ ಕಂಗೊಳಿಸುತ್ತಿವೆ.

    ಈ ಬಾರಿ ವಿಶೇಷವಾಗಿ ನಗರದ ರಸ್ತೆಗಳಲ್ಲಿ ಹಾಗೂ ವೃತ್ತಗಳಲ್ಲಿ ಅನೇಕ ಗಣ್ಯರ ಹಾಗೂ ಪಾರಂಪರಿಕ ಕಟ್ಟಡಗಳನ್ನು ಬಿದಿರಿನಿಂದ ತಯಾರು ಮಾಡಿ ದೀಪಗಳಿಂದ ಅಲಂಕಾರ ಮಾಡಲಾಗಿದೆ. ಚಾಮುಂಡೇಶ್ವರಿ, ಬುದ್ಧ, ಬಸವ, ಅಂಬೇಡ್ಕರ್, ಗಾಂಧಿಜೀ, ನಾಲ್ವಡಿ, ವಿಶ್ವೇಶ್ವರಯ್ಯ, ಕೃಷ್ಣರಾಜ ಒಡೆಯರ್, ಜಂಜೂ ಸವಾರಿ ಸೇರಿದಂತೆ ಅನೇಕ ಮಹನೀಯರ ಪ್ರತಿಕೃತಿಗಳನ್ನು ನಗರದಲ್ಲಿ ನಿರ್ಮಿಸಲಾಗಿದೆ.

    ಮೈಸೂರು ಅರಮನೆ, ಸಂಸತ್ ಭವನ, ವಿಧಾನಸೌಧ, ಕೆಆರ್‍ಎಸ್ ಇಂಡಿಯಾ ಗೇಟ್, ಹಂಪಿಯ ರಥ ಸೇರಿದಂತೆ ಹಲವು ಪ್ರತಿಕೃತಿಗಳು ಲೈಟ್ ಗಳಲ್ಲಿ ಜಗಮಗಿಸುತ್ತೀವೆ. ಪ್ರವಾಸಿಗರಿಗೆ ಇಂತಹ ಕಟ್ಟಡಗಳ ಮಹತ್ವವನ್ನು ಸಾರುವ ದೃಷ್ಟಿಯಿಂದ ಮಾಡಲಾಗಿದೆ.

    https://www.youtube.com/watch?v=KhpVKpi1lno

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv