Tag: Lighting

  • ಎನ್‍ಟಿಡಿ ದಿನಾಚರಣೆ – ಐತಿಹಾಸಿಕ ಸ್ಮಾರಕಕ್ಕೆ ವಿಶೇಷ ದೀಪಾಲಂಕಾರ

    ಎನ್‍ಟಿಡಿ ದಿನಾಚರಣೆ – ಐತಿಹಾಸಿಕ ಸ್ಮಾರಕಕ್ಕೆ ವಿಶೇಷ ದೀಪಾಲಂಕಾರ

    ಬೀದರ್: ಉಷ್ಣವಲಯದ ನಿರ್ಲಕ್ಷಿತ ರೋಗಗಳ ದಿನ(ಎನ್‍ಟಿಡಿ) ಹಿನ್ನೆಲೆಯಲ್ಲಿ ಭಾನುವಾರ ಗಡಿ ಜಿಲ್ಲೆ ಬೀದರ್‍ನ ಐತಿಹಾಸಿಕ ಸ್ಮಾರಕಕ್ಕೆ ಗುಲಾಬಿ ಮತ್ತು ಕೇಸರಿ ಬಣ್ಣಗಳ ದೀಪ ಅಳವಡಿಸಿ ಆಚರಣೆ ಮಾಡಲಾಯಿತು.

    ಆನೇಕಾಲು ರೋಗ ಸೇರಿದಂತೆ ನಿರ್ಲಕ್ಷಿತ ರೋಗಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಬೀದರ್‍ನ ಓಲ್ಡ್ ಸಿಟಿಯಲ್ಲಿರುವ ಐತಿಹಾಸಿಕ ಚೌಬಾರ್ ಕಮಾನ್‍ಗೆ ಗುಲಾಬಿ ಮತ್ತು ಕೇಸರಿ ದೀಪ ಅಳವಡಿಸಿ ಎನ್‍ಟಿಡಿ ಅಚರಣೆ ಮಾಡಲಾಯಿತು. ಇದನ್ನೂ ಓದಿ: ಮಾತಿನ ಸಮರ ನಿಲ್ಲಿಸಿ: ಮೈಸೂರಿನ ಜನ ಪ್ರತಿನಿಧಿಗಳಿಗೆ ಕಟೀಲ್‌ ಎಚ್ಚರಿಕೆ

    ಬೀದರ್ ತಹಶಿಲ್ದಾರ್ ಕಚೇರಿಗೂ ಗುಲಾಬಿ ಮತ್ತು ಕಿತ್ತಳೆ ಬಣ್ಣದಿಂದ ದೀಪಾಲಂಕಾರ ಮಾಡಲಾಗಿದ್ದು, ವಿಶೇಷವಾಗಿ ಜನರ ಗಮನ ಸೆಳೆಯುವಂತೆ ಎನ್‍ಟಿಡಿ ಆಚರಣೆ ಮಾಡಲಾಗಿದೆ. ಇದನ್ನೂ ಓದಿ: Wait and see, ಸಮಯ ಬಂದಾಗ ಎಲ್ಲಾ ಹೇಳುತ್ತೇನೆ: ಎಸ್.ಆರ್.ಪಾಟೀಲ್

  • ಮೈಸೂರು ದಸರಾ ವಿದ್ಯುತ್ ದೀಪಾಲಂಕಾರ ಇನ್ನೂ 9 ದಿನ ವಿಸ್ತರಣೆ: ಬೊಮ್ಮಾಯಿ

    ಮೈಸೂರು ದಸರಾ ವಿದ್ಯುತ್ ದೀಪಾಲಂಕಾರ ಇನ್ನೂ 9 ದಿನ ವಿಸ್ತರಣೆ: ಬೊಮ್ಮಾಯಿ

    ಮೈಸೂರು: ಮೈಸೂರು ದಸರಾ ವಿದ್ಯುತ್ ದೀಪಾಲಂಕಾರವನ್ನು ಒಂಬತ್ತು ದಿನಗಳವರೆಗೆ ವಿಸ್ತರಣೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.

    ಇಂದು ಮೈಸೂರಿನ ಸುತ್ತೂರು ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು ಅವರು, ನಾಡಿನ ವಿವಿಧ ಕಡೆಗಳಿಂದ ಪ್ರವಾಸಿಗರು ದೊಡ್ಡ ಪ್ರಮಾಣದಲ್ಲಿ ಮೈಸೂರಿಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಜನಪ್ರತಿನಿಧಿಗಳು ಮತ್ತು ಜನತೆಯ ಬೇಡಿಕೆಯ ಮೇರೆಗೆ ವಿದ್ಯುತ್ ದೀಪಾಲಂಕಾರವನ್ನು ವಿಸ್ತರಿಸುತ್ತಿರುವುದಾಗಿ ತಿಳಿಸಿದರು. ಇದನ್ನೂ ಓದಿ: ಧಾರವಾಡದಲ್ಲಿ ಕೃತಕ ಆನೆ ಬಳಸಿ ದಸರಾ ಮೆರವಣಿಗೆ

    ದಸರಾ ಹಿನ್ನೆಲೆಯಲ್ಲಿ ಅರಮನೆಗೆ ವಿಶೇಷ ದೀಪಾಲಂಕಾರ ಮಾಡಲಾಗಿದೆ. ದಸರಾ ವೈಭವದಲ್ಲಿ ದೀಪಾಲಂಕಾರವೂ ವಿಶೇಷತೆಯನ್ನು ಹೊಂದಿದೆ. ಇದನ್ನ ನೋಡಲು ಸಾವಿರಾರು ಜನ ಬರುತ್ತಾರೆ. ಹೀಗಾಗಿ ದೀಪಾಲಂಕಾರವನ್ನ ವಿಸ್ತರಣೆ ಮಾಡೋದಾಗಿ ಸಿಎಂ ಬೊಮ್ಮಾಯಿ ತಿಳಿಸಿದರು. ಇದನ್ನೂ ಓದಿ:  ಅರಮನೆಯಲ್ಲಿ ವಿಜಯ ದಶಮಿ ಸಂಭ್ರಮ

  • ಮನೆಗಳನ್ನು ಸುಟ್ಟುಕೊಳ್ಳದಿದ್ದರೆ ಸಾಕು- ಮೋದಿ ಕರೆಗೆ ಸಂಜಯ್ ರಾವತ್ ವ್ಯಂಗ್ಯ

    ಮನೆಗಳನ್ನು ಸುಟ್ಟುಕೊಳ್ಳದಿದ್ದರೆ ಸಾಕು- ಮೋದಿ ಕರೆಗೆ ಸಂಜಯ್ ರಾವತ್ ವ್ಯಂಗ್ಯ

    ಮುಂಬೈ: ಏಪ್ರಿಲ್ 5ರಂದು ಮನೆಯಲ್ಲಿ ದೀಪ ಬೆಳಗಿಸಿ ಎಂದು ಮೋದಿ ಅವರು ಕೊಟ್ಟಿರುವ ಕರೆಗೆ ಶಿವಸೇನೆ ಸಂಸದ ಸಂಜಯ್ ರಾವತ್ ವ್ಯಂಗ್ಯವಾಡಿದ್ದಾರೆ.

    ಶುಕ್ರವಾರ ದೇಶದ ಜನರಿಗಾಗಿ ವಿಡಿಯೋ ಸಂದೇಶವನ್ನು ನೀಡಿದ್ದ ಮೋದಿ, ಏಪ್ರಿಲ್ 5ಕ್ಕೆ ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ಎಲ್ಲರೂ ಲೈಟ್ ಆಫ್ ಮಾಡಿ ದೀಪ ಬೆಳಗಿಸಿ ಎಂದು ಸಂದೇಶ ನೀಡಿದ್ದರು. ಈ ವಿಚಾರವಾಗಿ ಟ್ವೀಟ್ ಮಾಡಿರುವ ಸಂಜಯ್ ರಾವತ್, ದೀಪ ಬೆಳಗಿಸುವ ವೇಳೆ ಜನರು ಅವರ ಮನೆಗಳನ್ನು ಸುಟ್ಟುಕೊಳ್ಳುವುದಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

    ಈ ಹಿಂದೆ ಜನತಾ ಕರ್ಫ್ಯೂ ದಿನ ಮೋದಿ ಅವರು ಚಪ್ಪಾಳೆ ತಟ್ಟಲು ಜನರಿಗೆ ಹೇಳಿದ್ದರು. ಆದರೆ ಅವರು ರಸ್ತೆಗಳಲ್ಲಿ ಕಿಕ್ಕಿರಿದು ಡ್ರಮ್‍ಗಳನ್ನು ಭಾರಿಸಿದ್ದರು. ಈಗ ಅವರು ತಮ್ಮ ಸ್ವಂತ ಮನೆಗಳನ್ನು ಸುಟ್ಟುಕೊಳ್ಳುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಸರ್ ದೀಪಗಳನ್ನು ಬೆಳಗಿಸಿ ಆದರೆ ದಯವಿಟ್ಟು ಕೊರೊನಾ ಪರಿಸ್ಥಿತಿಯನ್ನು ಸುಧಾರಿಸಲು ಸರ್ಕಾರ ಏನು ಮಾಡುತ್ತಿದೆ ಎಂದು ನಮಗೆ ತಿಳಿಸಿ ಎಂದು ಸಂಸದ ಲೇವಡಿ ಮಾಡಿ ಟ್ವೀಟ್ ಮಾಡಿದ್ದಾರೆ.

    ಕಳೆದ ತಿಂಗಳು ಪ್ರಧಾನಿ ಮೋದಿಯವರು ದೇಶವನ್ನು ಉದ್ದೇಶಿಸಿ ಮಾತನಾಡಿದ್ದರು. ಈ ವೇಳೆ ಜನಸಾಮಾನ್ಯರನ್ನು ತಮ್ಮ ಮನೆಯ ಬಾಲ್ಕನಿಗಳಿಗೆ ಬಂದು ಚಪ್ಪಾಳೆ ತಟ್ಟುವ ಮೂಲಕ ಕೊರೊನಾ ಸೋಂಕಿನ ವಿರುದ್ಧ ಹೋರಾಡುತ್ತಿರುವ ಆರೋಗ್ಯ ಕಾರ್ಯಕರ್ತರಿಗೆ ಮತ್ತು ವೈದ್ಯರಿಗೆ ಗೌರವ ಸಲ್ಲಿಸಲು ಹೇಳಿದ್ದರು. ಆದರೆ ಕೆಲವು ಕಡೆ ಜನರು ರಸ್ತೆಗೆ ಇಳಿದು ದೊಡ್ಡ ಮಟ್ಟದಲ್ಲಿ ಗುಂಪು ಸೇರಿ ಚಪ್ಪಾಳೆ ಮತ್ತೆ ಪಾತ್ರೆಗಳಿಂದ ಶಬ್ದ ಮಾಡಿದ್ದರು.

    ಈಗ ಏಪ್ರಿಲ್ 3 ರಂದು ವಿಡಿಯೋ ಸಂದೇಶ ಕಳುಹಿಸಿರುವ ಮೋದಿ, ಏಪ್ರಿಲ್ 5ಕ್ಕೆ ಎಲ್ಲರೂ ಒಟ್ಟಾಗೋಣ. ಏಪ್ರಿಲ್ 5ಕ್ಕೆ ಮಹಾ ಶಕ್ತಿಯ ಜಾಗೃತಿ ಆಗಬೇಕಿದೆ. ಹೀಗಾಗಿ ರಾತ್ರಿ 9 ಗಂಟೆಗೆ ದೀಪ, ಮೇಣದ ಬತ್ತಿ, ಟಾರ್ಚ್, ಮೊಬೈಲ್ ಟಾರ್ಚ್ ಬೆಳಗಿಸಬೇಕು. ಆ ಬೆಳಕಿನಲ್ಲಿ ನಮ್ಮ ಮನಸ್ಸಿನಲ್ಲಿ ಸಂಕಲ್ಪ ಮಾಡಿಕೊಳ್ಳಬೇಕು. ನಾವು ಎಲ್ಲರೂ ಒಗ್ಗಟಾಗಿದ್ದೇವೆ ಎನ್ನುವ ಸಂಕಲ್ಪ ಮಾಡಬೇಕು. ಈ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಮೋದಿ ಕರೆಕೊಟ್ಟಿದ್ದಾರೆ.