Tag: Light

  • ಇನ್ಮುಂದೆ ಆಂಬುಲೆನ್ಸ್ ಗಳಲ್ಲಿ ರೋಗಿಗಳ ಕಂಡೀಷನ್‍ಗೆ ತಕ್ಕಂತೆ ಹಾರ್ನ್, ಲೈಟ್ ಕಲರ್!-  ಎಲೆಕ್ಷನ್ ಅಕ್ರಮ ತಡೆಗೆ ಪ್ಲ್ಯಾನ್?

    ಇನ್ಮುಂದೆ ಆಂಬುಲೆನ್ಸ್ ಗಳಲ್ಲಿ ರೋಗಿಗಳ ಕಂಡೀಷನ್‍ಗೆ ತಕ್ಕಂತೆ ಹಾರ್ನ್, ಲೈಟ್ ಕಲರ್!-  ಎಲೆಕ್ಷನ್ ಅಕ್ರಮ ತಡೆಗೆ ಪ್ಲ್ಯಾನ್?

    ಬೆಂಗಳೂರು: ಎಲೆಕ್ಷನ್‍ ನಲ್ಲಿ ವಾಮಮಾರ್ಗದಿಂದ ಅಕ್ರಮ ದುಡ್ಡು ಸಾಗಾಟ ಮಾಡೋ ಕುಳಗಳಿಗೆ ಐಪಿಎಸ್ ರೂಪಾ ಶಾಕ್ ನೀಡೋಕೆ ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ. ಆಂಬುಲೆನ್ಸ್ ಗಳಿಗೆ ಭರ್ಜರಿ ಮೇಜರ್ ಸರ್ಜರಿ ಮಾಡಲು ಸಜ್ಜಾಗಿದ್ದಾರೆ. ಆಂಬುಲೆನ್ಸ್ ಗೂ ಎಲೆಕ್ಷನ್‍ಗೂ ಏನ್ ಕನೆಕ್ಷನ್ ಅಂತಾ ತಲೆಕೆಡಿಸಿಕೊಂಡ್ರಾ? ಈ ಸುದ್ದಿ ಓದಿ.

    ಕರ್ನಾಟಕ ಎಲೆಕ್ಷನ್ ಮೂಡ್‍ನಲ್ಲಿದೆ. ಎಲೆಕ್ಷನ್ ಬೆನ್ನಲ್ಲೆ ಅಕ್ರಮ ಹಣದ ಸಾಗಾಟ ಭರ್ಜರಿಯಾಗಿ ನಡೆಯಲಿದೆ. ಇದಕ್ಕಾಗಿ ರಾಜಕೀಯ ಕುಳಗಳು ವಾಮ ಮಾರ್ಗದ ಮೂಲಕ ದುಡ್ಡು ಸಾಗಿಸೋದು ಎಲ್ಲರಿಗೂ ಗೊತ್ತಿರೋ ವಿಚಾರ. ಆಂಬುಲೆನ್ಸ್ ನಲ್ಲಿ ಕೂಡ ದುಡ್ಡು ಸಾಗಿಸೋ ಸಾಧ್ಯತೆ ಇರೋದ್ರಿಂದ ಈಗ ಇದಕ್ಕೆ ಬ್ರೇಕ್ ಹಾಕೋದಕ್ಕೆ ರಸ್ತೆ ಸಾರಿಗೆ ಮತ್ತು ಸುರಕ್ಷತಾ ಅಯುಕ್ತೆ ರೂಪಾ ಮುಂದಾಗಿದ್ದಾರೆ.

    ಎಮರ್ಜೆನ್ಸಿ ಕೇಸ್‍ಗಳಿಗೆ ರೆಡ್‍ ಲೈಟ್ ಮತ್ತು ಲಾಂಗ್ ಸೈರನ್ ಇದ್ರೆ, ನಾರ್ಮಲ್ ಕೇಸ್‍ಗಳಾದ್ರೆ ನೀಲಿ ಬಣ್ಣದ ಲೈಟ್ ಹಾಗೂ ಸಪರೇಟ್ ಸೈರನ್ ನೀಡಲು ಚಿಂತನೆ ಮಾಡಿದ್ದಾರೆ. ಆಂಬುಲೆನ್ಸ್ ಗಳನ್ನ ಕೆಲವು ಸಂದರ್ಭದಲ್ಲಿ ಚೆಕ್ ಮಾಡುವಂತೆ ಟ್ರಾಫಿಕ್ ಪೊಲೀಸರಿಗೂ ಸೂಚನೆ ನೀಡಿದ್ದಾರೆ. ಆದ್ರೆ ನೇರವಾಗಿ ಇದನ್ನು ಒಪ್ಪಿಕೊಳ್ಳದ ರೂಪಾ, ಟ್ರಾಫಿಕ್‍ನಲ್ಲಿ ತುರ್ತು ಸಮಯದಲ್ಲಿ ಪ್ರಾಣ ಹೋಗುವುದನ್ನು ತಡೆಯಲು ಹಾಗೂ ಆಂಬುಲೆನ್ಸ್ ಮಿಸ್ ಯೂಸ್ ಆಗದಂತೆ ತಡೆಯಲು ಈ ನಿರ್ಧಾರ ಮಾಡಿರೋದಾಗಿ ಹೇಳಿದ್ರು.

     

  • ಅಂಗವಿಕಲೆ ಶಿರೀನ್ ಬಾಳಲ್ಲಿ ಮೂಡಬೇಕಿದೆ ಬೆಳಕು

    ಅಂಗವಿಕಲೆ ಶಿರೀನ್ ಬಾಳಲ್ಲಿ ಮೂಡಬೇಕಿದೆ ಬೆಳಕು

    ಧಾರವಾಡ: ಶಿರೀನ್ ಎಂಬ ಯುವತಿಯು ಹುಟ್ಟಿನಿಂದ ಅಂಗವಿಕಲೆಯಾಗಿದ್ದು, ಸಮಾಜದಲ್ಲಿ ಸ್ವಾಭಿಮಾನದಿಂದ ಬದುಕುತ್ತೇನೆಂಬ ಆತ್ಮ ವಿಶ್ವಾಸವನ್ನು ಹೊಂದಿದ್ದಾಳೆ.

    ಶಿರೀನ್ ಕಿತ್ತೂರ್ ಮೂಲತಃ ಧಾರವಾಡದ ಮದಾರಮಡ್ಡಿ ಬಡಾವಣೆಯಲ್ಲಿ ವಾಸವಾಗಿದ್ದಾರೆ. ಶಿರೀನ್ ಅಂಗವಿಕಲೆಯಾಗಿದ್ದರೂ ಅಂಗವಿಕಲೆ ಅನ್ನುವುದನ್ನೇ ಮರೆತು ಎಸ್‍ಎಸ್‍ಎಲ್‍ಸಿ ಮುಗಿಸಿದ್ದಾರೆ. ಆದರೆ ಮುಂದಿನ ಶಿಕ್ಷಣಕ್ಕೆಂದು ಕಾಲೇಜಿಗೆ ಹೋದಾಗ ಸಹಪಾಠಿಗಳು ಈಕೆಯ ಅಂಗವಿಕಲತೆಯನ್ನ ನೋಡಿ ಹೀಯಾಳಿಸಿದ್ದರಿಂದ ಮನನೊಂದು ಕಾಲೇಜನ್ನು ಬಿಟ್ಟಿದ್ದಾರೆ.

    ಶಿರೀನ್ ತನ್ನ ಆತ್ಮವಿಶ್ವಾಸವನ್ನು ಕಳೆದುಕೊಳ್ಳದೇ ಜೀವನಕ್ಕೆ ಮುಂದೆ ಏನಾದರೂ ಮಾಡಲೇ ಬೇಕು ಎಂದು ಹಠ ತೊಟ್ಟು, ತನಗಿರುವ ಅಂಗವಿಕಲತೆಯನ್ನು ಮರೆಮಾಚಿ ಟೈಲರಿಂಗ್ ಕಲಿತಿದ್ದಾರೆ. ಆದರೆ ಈಗ ಇವರ ಅಂಗವಿಕಲತೆಯೇ ಮುಳುವಾಗಿದೆ. ಹೊಲಿಗೆ ಯಂತ್ರ ನಡೆಸಲು ಕಷ್ಟವಾಗುವುದರಿಂದ ಜೀವನ ನಡೆಸುವುದೇ ಕಷ್ಟವಾಗಿದೆ. ಯಾರಾದರು ದಾನಿಗಳು ಇಲೆಕ್ಟ್ರಿಕ್ ಮಷಿನ್ ಕೊಡಿಸಿದರೆ ಸ್ವಾಭಿಮಾನದಿಂದ ಬದುಕುತ್ತೇನೆ ಎಂದು ಹೇಳುತ್ತಿದ್ದಾರೆ.

      

    ಶಿರೀನ್ ತಂದೆಯು ಗೋವಾದಲ್ಲಿ ಕಟ್ಟಡವೊಂದರ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾರೆ. ಶಿರೀನ್ ಗೆ ಇಬ್ಬರು ಸಹೋದರರಿದ್ದು ಪೆಂಟಿಂಗ್ ಕೆಲಸ ಮಾಡುತ್ತಾರೆ. ಅವರೆಲ್ಲರೂ ಬಾಡಿಗೆ ಮನೆಯಲ್ಲಿ ವಾಸವಾಗಿರುವುದರಿಂದ ಇವರಿಗೆ ಜೀವನ ನಡೆಸುವುದು ಕಷ್ಟವಾಗಿದ್ದು, ಎಲೆಕ್ಟ್ರಿಕ್ ಹೊಲಿಗೆ ಯಂತ್ರ ಕೊಡಿಸುವಂತಹ ಶಕ್ತಿಯಿಲ್ಲದಾಗಿದೆ.

    ಶಿರೀನ್ ಸಂಬಂಧಿ ಮಹ್ಮದ್ ಯುಸುಫ್ ಮಾತನಾಡಿ, ಸದ್ಯ ಶಿರೀನ್ ಅಂಗವಿಕಲೆ ಆಗಿದ್ದರೂ ಹೇಗಾದರೂ ಮಾಡಿ ಬಟ್ಟೆ ಹೊಲಿದು ತನ್ನ ಜೀವನದಲ್ಲಿ ಬೆಳಕು ಕಾಣುವ ಯತ್ನದಲ್ಲಿದ್ದಾಳೆ. ಇವಳಿಗೆ ಯಾರಾದರೂ ಸಹಾಯ ಮಾಡಿದರೆ ಕಂಡಿತ ಈಕೆಯ ಬಾಳಿಗೆ ಬೆಳಕು ಸಿಗುತ್ತದೆ ಎಂದು ತಿಳಿಸಿದರು.

     

  • ನಸುಕಿನ ಜಾವ ಎದ್ದು ಪೇಪರ್ ಹಾಕೋ ಅಕ್ಕ-ತಮ್ಮನಿಗೆ ಬೇಕಿದೆ ಸಹಾಯ

    ನಸುಕಿನ ಜಾವ ಎದ್ದು ಪೇಪರ್ ಹಾಕೋ ಅಕ್ಕ-ತಮ್ಮನಿಗೆ ಬೇಕಿದೆ ಸಹಾಯ

    ತುಮಕೂರು: ನಸುಕಿನ ಜಾವ ಕಣ್ಣು ಉಜ್ಜಿಕೊಳ್ಳುತ್ತಾ ಪೇಪರ್ ಹಾಕೋ ಅಕ್ಕ ಮತ್ತು ತಮ್ಮನನ್ನು ನೋಡಿದ್ರೆ ಎಂಥವರ ಕರುಳು ಕೂಡಾ ಚುರ್ರ್ ಅನ್ನಿಸದೆ ಇರದು. ಇವರ ವಯಸ್ಸಿನ ಮಕ್ಕಳು ಇನ್ನೂ ಹಾಸಿಗೆಯಲ್ಲಿ ಮಲಗಿರಬೇಕಾದ್ರೆ ಈ ಮಕ್ಕಳು ಮಾತ್ರ ಕೋಳಿ ಕೂಗುವ ಮುಂಚೆಯೆ ಎದ್ದು ಮನೆ-ಮನೆಗೆ ದಿನಪತ್ರಿಕೆ ಹಂಚುವ ಕಾಯಕ ಮಾಡುತ್ತಿದ್ದಾರೆ.

    ಸಾಮಾನ್ಯವಾಗಿ ಚಿಕ್ಕವಯಸ್ಸಿನ ಗಂಡು ಮಕ್ಕಳು ಪೇಪರ್ ಹಂಚೋದು ನೋಡ್ತಿರಾ. ಆದ್ರೆ ಈ ಬಾಲಕಿ ಕೂಡಾ ನಸುಕಿನ ಜಾವವೇ ಎದ್ದು ಪೇಪರ್ ಹಾಕುತ್ತಾಳೆ. ತಮ್ಮ ವಿದ್ಯಾಭ್ಯಾಸದ ಖರ್ಚಿಗಾಗಿ ಹಾಗೂ ಜೀವನ ನಿರ್ವಹಣೆಗಾಗಿ ಪತ್ರಿಕೆ ಹಂಚುವ ಕೆಲಸ ಮಾಡ್ತಾರೆ. ಈ ಮಕ್ಕಳಿಗೆ ಇಷ್ಟೊಂದು ಕಷ್ಟ ಬರಲು ಕಾರಣ ತಂದೆಯ ಅಕಾಲಿಕ ಮರಣ. ಹಾಗಾಗಿ ಈ ಕುಟುಂಬ ಅಕ್ಷರಶಃ ಅನಾಥವಾಗಿದೆ.

    ಪತಿ ಚಂದ್ರಶೇಖರ್ ಸಾವನ್ನಪ್ಪಿದ್ದಾಗಿನಿಂದ ಕುಟುಂಬ ನಿರ್ವಹಣೆಯ ಜವಾಬ್ದಾರಿ ಪತ್ನಿ ವಸಂತಿ ಮೇಲೆ ಬಂದಿದೆ. ಅವರಿವರ ಮನೆಯಲ್ಲಿ ಮನೆಕೆಲಸ ಮಾಡಿ ಅಷ್ಟೊ ಇಷ್ಟೊ ಸಂಪಾದಿಸಿದ ಹಣ ಮನೆ ಬಾಡಿಗೆಗೆ ಖರ್ಚಾಗುತ್ತಿದೆ. ಉಳಿದಂತೆ ಅನ್ನಭಾಗ್ಯದಿಂದ ಹೊಟ್ಟೆಪಾಡು ನಡೆಯುತ್ತಿದೆ. ಇಬ್ಬರು ಮಕ್ಕಳು, ವೃದ್ಧ ಅತ್ತೆಯ ಪಾಲನೆ ಕೂಡಾ ವಸಂತಿ ಮೇಲಿದೆ. ಮಕ್ಕಳ ವಿದ್ಯಾಭ್ಯಾಸದ ಖರ್ಚು ಹೊಂದಿಸೋದು ಸಾಹಸವಾಗಿದೆ. ಹಾಗಾಗಿ ತಾಯಿಯ ಕಷ್ಟ ನೋಡಲು ಆಗದ ಮಗಳು ಅಶ್ವಿನಿ ಹಾಗೂ ಮಗ ದರ್ಶನ್ ಬೆಳಗಿನ ಜಾವ ಎದ್ದು ಪೇಪರ್ ಹಾಕಿ ಬಂದ ಹಣದಿಂದ ತಮ್ಮ ವಿದ್ಯಾಭ್ಯಾಸದ ಖರ್ಚು ಭರಿಸೋ ಪ್ರಯತ್ನ ಮಾಡುತ್ತಿದ್ದಾರೆ.

    ಕಷ್ಟಪಟ್ಟು ಛಲದಿಂದ ಓದುತ್ತಿರೋ ಈ ವಿದ್ಯಾರ್ಥಿಗಳಿಗೆ ಸಹಾಯ ಹಸ್ತ ಬೇಕಿದೆ. ಇವರ ವಿದ್ಯಾಭ್ಯಾಸದ ಜವಾಬ್ದಾರಿ ವಹಿಸಿಕೊಳ್ಳಲು ಹೃದಯವಂತರು ಮುಂದೆ ಬರಬೇಕಾಗಿದೆ.