Tag: Light Combat Helicopter

  • 156 ʻಪ್ರಚಂಡʼ ಚಾಪರ್‌ ಖರೀದಿಗೆ ಪ್ರಸ್ತಾವನೆ – HALಗೆ 45,000 ಕೋಟಿ ರೂ. ಟೆಂಡರ್‌!

    156 ʻಪ್ರಚಂಡʼ ಚಾಪರ್‌ ಖರೀದಿಗೆ ಪ್ರಸ್ತಾವನೆ – HALಗೆ 45,000 ಕೋಟಿ ರೂ. ಟೆಂಡರ್‌!

    ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಡೆಟ್‌ (HAL) 45,000 ಕೋಟಿ ರೂ. ಟೆಂಡರ್‌ ಪಡೆದುಕೊಂಡಿದೆ. ರಕ್ಷಣಾ ಸಚಿವಾಲಯವು ಭಾರತೀಯ ವಾಯು ಸೇನೆಗೆ 156 ಪ್ರಚಂಡ ಮಾದರಿಯ ಲಘು ಯುದ್ಧ ಹೆಲಿಕಾಪ್ಟರ್‌ಗಳ (Light Combat Helicopter) ಖರೀದಿಗೆ ಪ್ರಸ್ತಾವನೆ ಸಲ್ಲಿದೆ. ಈ ಮೂಲಕ ರಕ್ಷಣಾ ವಲಯದಲ್ಲಿ ಸ್ವದೇಶಿ ಉತ್ಪನ್ನಗಳಿಗೆ ಉತ್ತೇಜನ ನೀಡಿದೆ.

    2015ರ ನಿಯಮಾವಳಿ 30ರ ಪ್ರಕಾರ, 156 ಲಘು ಯುದ್ಧ ಹೆಲಿಕಾಪ್ಟರ್‌ಗಳ ಖರೀದಿಗಾಗಿ ರಕ್ಷಣಾ ಸಚಿವಾಲಯವು ಪ್ರಸ್ತಾವನೆಗಾಗಿ ವಿನಂತಿ (RFP) ನೀಡಿದೆ. ಈ ಪೈಕಿ ಭಾರತೀಯ ಸೇನೆಗೆ 90 ಮತ್ತು ಭಾರತೀಯ ವಾಯು ಸೇನೆ 66 ಲಘು‌ ಯುದ್ಧ ವಿಮಾನಗಳನ್ನು ಸ್ವಾಧೀನಪಡಿಸಿಕೊಳ್ಳಲಿದೆ. ಇದರ ವೆಚ್ಚ 45,000 ಕೋಟಿ ರೂ.ಗಳಷ್ಟಾಗಲಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಸ್ವದೇಶಿ ಆಯುಧ ನಿರ್ಮಾಣ ತಂತ್ರಜ್ಞಾನದಲ್ಲಿ ಭಾರತದ ಸಾಧನೆ; ಶತ್ರುಗಳ ನಿದ್ದೆಗೆಡಿಸಲಿದೆ ಧ್ರುವಾಸ್ತ್ರ

    ಪ್ರಸ್ತುತ ಈ ಎರಡೂ ಸೇನೆಗಳು 15 ಹೆಲಿಕಾಪ್ಟರ್‌ಗಳನ್ನು ಹೊಂದಿವೆ. ಈ 156 ಲಘು ಯುದ್ಧ ವಿಮಾನಗಳನ್ನು ಚೀನಾ ಮತ್ತು ಪಾಕಿಸ್ತಾನದ ಗಡಿಯಲ್ಲಿ ನಿಯೋಜಿಸಲಾಗುತ್ತದೆ. ಇದು ಭಯೋತ್ಪಾದಕರು ಮತ್ತು ನುಸುಳುಕೋರರನ್ನು ನಿಯಂತ್ರಿಸಲು ಸಹ ಸಹಾಯ ಮಾಡುತ್ತದೆ. ಪ್ರಚಂಡ ಹೆಲಿಕಾಪ್ಟರ್‌ಗಳು ರಕ್ಷಣಾ ಕಾರ್ಯಾಚರಣೆಯನ್ನು ಸುಗಮಗೊಳಿಸುತ್ತವೆ. ಶತ್ರುಗಳನ್ನು ಹುಡುಕಿ ಕೊಲ್ಲುವ ಜೊತೆಗೆ ಬಂಕರ್‌ಗಳ ಬಸ್ಟಿಂಗ್‌ ಕಾರ್ಯಾಚರಣೆಗೂ ಸಹಾಯಕವಾಗಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಚಿತ್ರದುರ್ಗದಿಂದ ಹಾರಿದ ಸ್ವದೇಶಿ ತಪಸ್ ಯುಎವಿ ಕಾರವಾರದ ಅರಬ್ಬಿ ಸಮುದ್ರದಲ್ಲಿ ಯಶಸ್ವಿ ಲ್ಯಾಂಡಿಂಗ್

    ʻಪ್ರಚಂಡ್‌ʼ ಹೇಲಿಕಾಪ್ಟರ್‌ 5,000 ಮೀಟರ್ (16,400 ಅಡಿ) ಎತ್ತರದಲ್ಲಿ ಲ್ಯಾಂಡಿಂಗ್‌ ಮತ್ತು ಟೇಕಾಫ್‌ ಮಾಡುವ ಸಾಮರ್ಥ್ಯ ಹೊಂದಿದೆ. ಅಲ್ಲದೇ ಸಿಯಾಚಿನ್ ಹಿಮನದಿ ಮತ್ತು ಪೂರ್ವ ಲಡಾಖ್‌ ನಂತಹ ಎತ್ತರದ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸಲು ಸೂಕ್ತವಾಗಿದೆ. ಪ್ರತಿಕೂಲ ವಾತಾವರಣದಲ್ಲಿಯೂ ಕ್ಷಿಪಣಿಗಳನ್ನು ಹಾರಿಸುವ ಮೂಲಕ ಶತ್ರುಗಳ ವಾಯು ರಕ್ಷಣಾ ಕಾರ್ಯಾಚರಣೆಯನ್ನು ನಾಶಪಡಿಸುತ್ತದೆ ಎಂದು ತಜ್ಞರು ಹೇಳಿದ್ದಾರೆ.

    ಪ್ರಸಕ್ತ ವರ್ಷದ ಏಪ್ರಿಲ್‌ನಲ್ಲಿ ರಕ್ಷಣಾ ಸಚಿವಾಲಯವು ಹೆಚ್‌ಎಎಲ್‌ಗೆ 65,000 ಕೋಟಿ ರೂ. ಮೌಲ್ಯದ 97 LCA ಮಾರ್ಕ್ 1A ಫೈಟರ್ ಜೆಟ್‌ಗಳನ್ನು ಖರೀದಿಸಲು ಟೆಂಡರ್ ನೀಡಿದೆ.

  • ಸೇನೆ ಸೇರಿದ ಭಾರತದ ಮೊದಲ ಲಘು ಯುದ್ಧ ಹೆಲಿಕಾಪ್ಟರ್ – ಏನಿದರ ವಿಶೇಷತೆ?

    ಸೇನೆ ಸೇರಿದ ಭಾರತದ ಮೊದಲ ಲಘು ಯುದ್ಧ ಹೆಲಿಕಾಪ್ಟರ್ – ಏನಿದರ ವಿಶೇಷತೆ?

    ಜೈಪುರ: ಭಾರತದ ರಕ್ಷಣಾ ವಲಯದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಸ್ವದೇಶಿ ನಿರ್ಮಿತ ಮೊದಲ ಲಘು ಯುದ್ಧ ಹೆಲಿಕಾಪ್ಟರ್ (Light Combat Helicopter) ಅನ್ನು ಇಂದು ವಾಯುಸೇನೆಗೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಮತ್ತು ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ (IAF chief Air Chief Marshal VR Chaudhari) ಅವರ ಉಪಸ್ಥಿತಿಯಲ್ಲಿ ಜೋಧಪುರದಲ್ಲಿ (Jodhpur) ನಡೆದ ಕಾರ್ಯಕ್ರಮದಲ್ಲಿ ಪ್ರಚಂಡ್‌(Prachand) ಸೇನೆಗೆ ಸೇರ್ಪಡೆ ಮಾಡಿಕೊಳ್ಳಲಾಯಿತು.

    ಬೆಂಗಳೂರಿನಲ್ಲಿರುವ ಹೆಚ್‍ಎಎಲ್ ಈ ಲಘು ಯುದ್ಧ ಹೆಲಿಕಾಪ್ಟರ್ ನಿರ್ಮಿಸಿದ್ದು ಇದು ಭಾರತೀಯ ವಾಯು ಮತ್ತು ಭೂ ಸೇನೆಗೆ ಹೆಚ್ಚು ಬಲ ತಂದು ಕೊಡಲಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ಇದನ್ನೂ ಓದಿ: 30 ವರ್ಷದ ಹಳೆ ದ್ವೇಷ – ವೃದ್ಧದಂಪತಿ ಮೇಲೆ ಸುತ್ತಿಗೆಯಿಂದ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಮಾಜಿ ಸೈನಿಕ

    5.8 ಟನ್ ತೂಕದ ಅವಳಿ-ಎಂಜಿನ್ LCH ಶಕ್ತಿ ಅನ್ನು ಈ ಹೆಲಿಕಾಪ್ಟರ್ ಹೊಂದಿದ್ದು, ಇದನ್ನು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಫ್ರೆಂಚ್ ಎಂಜಿನ್ ತಯಾರಕ ಸಫ್ರಾನ್ ಸಹಯೋಗದೊಂದಿಗೆ ಅಭಿವೃದ್ಧಿಪಡಲಾಗಿದೆ. ಹೊಸ ತಂತ್ರಜ್ಞಾನದ ಅಗತ್ಯವಿರುವ ಚುರುಕುತನ ಇದರಲ್ಲಿದ್ದು, ಕುಶಲತೆ, ವಿಸ್ತೃತ ಶ್ರೇಣಿ, ಹೆಚ್ಚಿನ ಎತ್ತರದ ಕಾರ್ಯಕ್ಷಮತೆ ಮತ್ತು ಎಲ್ಲಾ ಹವಾಮಾನದಲ್ಲೂ ಯುದ್ಧ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇದನ್ನೂ ಓದಿ: ವಿಮಾನಕ್ಕೆ ಬಾಂಬ್ ಬೆದರಿಕೆ- ಯುದ್ಧ ವಿಮಾನಗಳಿಂದ ಭದ್ರತೆ

    ಇದು ಅತ್ಯಂತ ಬಿಸಿ ವಾತಾವರಣದ ಮರುಭೂಮಿಯಲ್ಲಿ ಮತ್ತು ಸಿಯಾಚಿನ್‍ನಂತಹ ಅತಿ ತಣ್ಣನೆಯ ಪ್ರದೇಶದಲ್ಲಿ ಲ್ಯಾಂಡ್ ಮಾಡಬಹುದಾಗಿದ್ದು, ಸಮುದ್ರ ಮಟ್ಟದಿಂದ 5,000 ಮೀಟರ್ ಎತ್ತರ ಪ್ರದೇಶದಲ್ಲೂ ಸಮರ್ಥವಾಗಿ ಕಾರ್ಯ ನಿರ್ವಹಿಸಬಲ್ಲದು. ಶಸ್ತ್ರ ಸಜ್ಜಿತ ರಕ್ಷಣಾ ವ್ಯವಸ್ಥೆಗಳನ್ನು ಹೊಂದಿದ್ದು ಇದು ಸೇನೆಗೆ ಶಸ್ತ್ರಾಸ್ತ್ರಗಳನ್ನು ಪೂರೈಸಬಲ್ಲದು ಮತ್ತು ನಿಧಾನವಾಗಿ ಸಾಗುವ ಶತ್ರು ವಿಮಾನಗಳ ಮೇಲೆ ಪ್ರತಿದಾಳಿ ಮಾಡುವ ವಿಶಿಷ್ಟತೆಯನ್ನು ಹೊಂದಿದೆ.

    ಇದು ರಾತ್ರಿ ಹೊತ್ತಿನಲ್ಲೂ ಕಾರ್ಯಾಚರಣೆ ಮಾಡುವ ಶಕ್ತಿ ಹೊಂದಿದ್ದು, ಕಾಡು, ಮಳೆ, ಹಿಮಪಾತದಂತಹ ಪ್ರಕೃತಿ ವೈಪರೀತ್ಯಗಳ ನಡುವೆ ಕ್ಷಮತೆಯಿಂದ ಕೆಲಸ ಮಾಡಬಲ್ಲದು. ಇದು ಶತ್ರು ದೇಶಗಳ ರೇಡಾರ್ ಕಣ್ಣು ತಪ್ಪಿಸಿ ಕೆಲಸ ಮಾಡುವ ಸಾಮರ್ಥ್ಯ ಹೊಂದಿದೆ. ಈ ವಿಶಿಷ್ಟ ಹೆಲಿಕಾಪ್ಟರ್‌ಗೆ ಬೇಡಿಕೆ ಹೆಚ್ಚಿದ್ದು ಭಾರತೀಯ ವಾಯುಸೇನೆ 65 ಮತ್ತು ಭೂಸೇನೆ 95 ಹೆಲಿಕಾಪ್ಟರ್‌ಗಳಿಗೆ ಬೇಡಿಕೆ ಇಟ್ಟಿದೆ. ವರ್ಷಕ್ಕೆ 30 ಹೆಲಿಕಾಪ್ಟರ್ ನಿರ್ಮಿಸುವ ಸಾಮರ್ಥ್ಯವಿದ್ದು ಆರಂಭಿಕವಾಗಿ 15 ಹೆಲಿಕಾಪ್ಟರ್‌ಗಳನ್ನು ಸೇನೆಗೆ ಇಂದು ಹಸ್ತಾಂತರಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]