ವಿಜಯ್ ದೇವರಕೊಂಡ ಮತ್ತು ಅನನ್ಯ ಪಾಂಡೆ ಕಾಂಬಿನೇಷನ್ ನ ಲೈಗರ್ ಸಿನಿಮಾದ ರೊಮ್ಯಾಂಟಿಕ್ ಹಾಡು ಮೊನ್ನೆಯಷ್ಟೇ ರಿಲೀಸ್ ಆಗಿದೆ. ಈ ಹಾಡಿನಲ್ಲಿ ವಿಜಯ್ ಮತ್ತು ಅನನ್ಯ ಕೆಮೆಸ್ಟ್ರಿ ಅದ್ಭುತವಾಗಿ ಮೂಡಿ ಬಂದಿದೆ. ಥೇಟ್ ಲವರ್ ರೀತಿಯಲ್ಲೇ ಇಬ್ಬರೂ ಡ್ಯುಯೆಟ್ ಹಾಡಿದ್ದಾರೆ. ಇವರಿಬ್ಬರ ಭಾವಾಭಿನಯ ಕಂಡು ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಅನನ್ಯ ಜಾಗದಲ್ಲಿ ರಶ್ಮಿಕಾ ಇದ್ದರೆ, ಕೆಮೆಸ್ಟ್ರಿ ಡಬಲ್ ಆಗಿರೋದು ಎಂದು ಟ್ರೋಲ್ ಮಾಡುತ್ತಿದ್ದಾರೆ.

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಡೇಟಿಂಗ್ ಮಾಡುತ್ತಿದ್ದರು ಎನ್ನುವುದು ಈಗೇನೂ ಗುಟ್ಟಾಗಿ ಉಳಿದಿಲ್ಲ. ಆದರೆ, ಎರಡು ವರ್ಷಗಳಿಂದ ಇವರ ಲವ್ ಬ್ರೇಕಪ್ ಆಗಿರುವ ವಿಚಾರವೂ ಗೊತ್ತಿದೆ. ಈ ಬ್ರೇಕ್ ಅಪ್ ಗೆ ಕಾರಣ ಅನನ್ಯ ಪಾಂಡೆ ಎಂದೂ ಹೇಳಲಾಗುತ್ತಿದೆ. ಇದು ನಿಜವೋ ಸುಳ್ಳೋ ಗಾಸಿಪ್ ಅಂತೂ ಜೋರಾಗಿದೆ. ಈ ಮಧ್ಯೆ ರೊಮ್ಯಾಂಟಿಕ್ ಹಾಡಿನಲ್ಲಿ ಕಂಡಿರುವ ರೀತಿಗೆ ಇಬ್ಬರ ಮಧ್ಯೆ ಏನೋ ಇದೆ ಎನ್ನುವ ಮಾತೂ ಕೇಳಿ ಬಂದಿದೆ. ಇದನ್ನೂ ಓದಿ:ಗಾಳಿಪಟ 2 ಸಿನಿಮಾದ ‘ಪ್ರಾಯಶಃ’ ಸಾಂಗ್ ರಿಲೀಸ್ ಮಾಡಿದ ಕಿಚ್ಚ ಸುದೀಪ್

ಅನನ್ಯ ಪಾಂಡೆ ಮತ್ತು ವಿಜಯ್ ದೇವರಕೊಂಡ ಲೈಗರ್ ಸಿನಿಮಾದಲ್ಲಿ ನಟಿಸಿದ್ದರೂ, ಅನೇಕ ಖಾಸಗಿ ಸಮಾರಂಭಗಳಲ್ಲಿ ಇಬ್ಬರೂ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಮೊನ್ನೆಯಷ್ಟೇ ಕಾಫಿ ವಿತ್ ಕರಣ್ ಶೋಗೆ ಒಟ್ಟಿಗೆ ಬಂದಿದ್ದರು. ಸಾಕಷ್ಟು ಖಾಸಗಿ ಸಂಗತಿಗಳನ್ನು ಹಂಚಿಕೊಂಡರು. ಅಲ್ಲದೇ, ವಿಜಯ್ ದೇವರಕೊಂಡ ಅವರನ್ನು ತಾವು ಸಂಪೂರ್ಣ ಬೆತ್ತಲೆಯಾಗಿ ನೋಡಬೇಕು ಎಂದು ಬಹಿರಂಗವಾಗಿಯೇ ಹೇಳಿಕೆ ಕೊಟ್ಟು ಅಚ್ಚರಿಗೆ ಕಾರಣವಾದರು. ಈ ಜೋಡಿಯ ವಿಷಯ ಏನೇ ಬಂದರೂ, ಪಾಪ, ಟ್ರೋಲ್ ಆಗೋದು ಮಾತ್ರ ರಶ್ಮಿಕಾ ಮಂದಣ್ಣ ಎನ್ನವುದು ವಿಪರ್ಯಾಸ.




ವಿಜಯ್ ದೇವರಕೊಂಡ, ಪುರಿ ಜಗನ್ನಾಥ್ ಕಾಂಬಿನೇಷನ್‌ನ ಹೈವೋಲ್ಟೇಜ್ ಕಾಂಬಿನೇಶನ್ `ಲೈಗರ್’ ಸೆಟ್ಟೇರಿದ ದಿನದಿಂದಲೂ ಸಾಕಷ್ಟು ಸುದ್ದಿ ಮಾಡಿತ್ತು. ಪೋಸ್ಟರ್‌ಗಳಿಂದಲೇ ನಿರೀಕ್ಷೆ ಹೆಚ್ಚಿಸಿದ್ದ `ಲೈಗರ್’ ಟ್ರೈಲರ್ ರಿಲೀಸ್ ಆಗಿ, ಈಗ ಸಿನಿಮಾ ಮೇಲಿನ ಕ್ಯೂರಿಯಾಸಿಟಿಯನ್ನು ದುಪ್ಪಟ್ಟು ಮಾಡಿದೆ. ಮಾಸ್ ಲುಕ್‌ನಲ್ಲಿ ವಿಜಯ್ ದೇವರಕೊಂಡ ಕಾಣಿಸಿಕೊಂಡಿದ್ದು, ವಿಜಯ್‌ಗೆ ನಾಯಕಿಯಾಗಿ ಬ್ಯೂಟಿ ಕ್ವೀನ್ ಅನನ್ಯಾ ಪಾಂಡೆ ನಟಿಸಿದ್ದಾರೆ. ʻಲೈಗರ್ʼನಲ್ಲಿ ವಿಜಯ್ ರಗಡ್ ಆಗಿ ನಟಿಸಿದ್ದು, ಟ್ರೈಲರ್ ಪ್ರಶಂಸೆಯ ಮಹಾಪೂರವೇ ಹರಿದು ಬರುತ್ತಿದೆ.ಈ ಸಿನಿಮಾ ಮೂಲಕ ವಿಜಯ್ ದೇವರಕೊಂಡ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬರುತ್ತಿದ್ದಾರೆ. ಇದನ್ನೂ ಓದಿ:




ವಿಜಯ್ ಅವರ ʻಲೈಗರ್ʼ ಚಿತ್ರದ ಅರೆ ನಗ್ನ ಫೋಟೋಗೆ ರಶ್ಮಿಕಾ ಪ್ರತಿಕ್ರಿಯಿಸಿದ್ದಾರೆ. ವಿಜಯ್, ಇನ್ಮುಂದೆ ನಿಮ್ಮ ಹೆಸರು ಲೈಗರ್ ನಿಮಗೆ ನಮ್ಮ ಪ್ರೀತಿ ಮತ್ತು ಬೆಂಬಲವಿದೆ. ನೀವು ಏನು ಮಾಡಬಹುದು ಎಂಬುದನ್ನು ಜಗತ್ತಿಗೆ ತೋರಿಸಿ. ಆಲ್ ದಿ ಬೆಸ್ಟ್ ಎಂದು ಬರೆದುಕೊಂಡಿದ್ದಾರೆ. ಇನ್ನು ರಶ್ಮಿಕಾ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ವಿಜಯ್, ಋಷಿ `ಗೀತ ಗೋವಿಂದಂ’ ಚಿತ್ರದ ಕಾಲದಿಂದಲೂ ನೀವು ನನಗೆ ಸ್ಫೂರ್ತಿಯಾಗಿದ್ದೀರಿ. ಜಗತ್ತು ʻಲೈಗರ್ʼ ಮಿಂಚನ್ನು ನೋಡುತ್ತದೆ ಎಂದು ಪೋಸ್ಟ್ ಮಾಡಿದ್ದಾರೆ. ಇದೀಗ ಅವರಿಬ್ಬರ ಪೋಸ್ಟ್ ವೈರಲ್ ಆಗಿದೆ. ಈ ಬಗ್ಗೆ ಅಭಿಮಾನಿಗಳು ನಾನಾ ರೀತಿಯಲ್ಲಿ ಚರ್ಚೆ ನಡೆಸುತ್ತಿದ್ದಾರೆ.
ನಮ್ಮಿಬ್ಬರ ನಡುವೆ ಏನು ಇಲ್ಲ ಎಂದು ಹೇಳಿಕೊಳ್ಳುವ ಈ ಜೋಡಿ. ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಾಗುತ್ತಾ ನಮ್ಮ ನಡುವೆ ಪ್ರೀತಿ ಎಂಬ ರೀತಿಯಲ್ಲಿ ಕಾಣಿಸಿಕೊಳ್ತಿರುತ್ತಾರೆ. ಒಟ್ನಲ್ಲಿ ರಶ್ಮಿಕಾ, ವಿಜಯ್ ವಿಶ್ ಮಾಡಿರುವ ರೀತಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.






ಡಿಫರೆಂಟ್ ಕಥೆ ಜತೆ ವಿಭಿನ್ನ ಪಾತ್ರದ ಮೂಲಕ ಸಿನಿರಸಿಕರ ಗಮನ ಸೆಳೆಯಲು ವಿಜಯ್ ಮತ್ತು ಸಮಂತಾ ಬರುತ್ತಿದ್ದಾರೆ. 1992ರಲ್ಲಿ ತೆರೆಕಂಡ ಮಣಿರತ್ನಂ ನಿರ್ದೇಶನದ `ರೋಜಾ’ ಚಿತ್ರದ ಕಥೆಯನ್ನ ಈಗಿನ ಜನರೇಷನ್‌ಗೆ ತಕ್ಕಂತೆ ಪ್ರೇಮಕಥೆ ತೋರಿಸಲು ನಿರ್ದೇಶಕ ಶಿವಾ ನಿರ್ವಾಣ ಹೊರಟಿದ್ದಾರೆ. ಮುಂದಿನ ದಿನಗಳಲ್ಲಿ ಬೆಳ್ಳಿಪರದೆಯಲ್ಲಿ ಈ ಜೋಡಿ ಹೇಗೆ ಕಮಾಲ್ ಮಾಡಬಹುದು ಅಂತಾ ಕಾದು ನೋಡಬೇಕಿದೆ.



