Tag: Liger

  • ʻಲೈಗರ್ʼ ಸಿನಿಮಾ ಸೋತರೂ ವಿಜಯ್ ದೇವರಕೊಂಡಗೆ ಬಂಪರ್ ಆಫರ್

    ʻಲೈಗರ್ʼ ಸಿನಿಮಾ ಸೋತರೂ ವಿಜಯ್ ದೇವರಕೊಂಡಗೆ ಬಂಪರ್ ಆಫರ್

    ಟಾಲಿವುಡ್‌ನ ಸ್ಟಾರ್ ನಟ ವಿಜಯ್ ದೇವರಕೊಂಡ ಮತ್ತೆ ಸುದ್ದಿಯಲ್ಲಿದ್ದಾರೆ. `ಲೈಗರ್’ (Liger) ಸಿನಿಮಾಗೆ ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಹೀನಾಯವಾಗಿ ಸೋಲು ಕಂಡಿತ್ತು. ಈ ಚಿತ್ರದ ನಂತರ ವಿಜಯ್ ದೇವರಕೊಂಡ (Vijay Devarakonda) ಅವರಿಗೆ ಅವಕಾಶ ಕಮ್ಮಿ ಆಗಲಿದೆ ಎಂದು ಭಾವಿಸಲಾಗಿತ್ತು. ಆದರೆ ಭರ್ಜರಿ ಆಫರ್ಸ್ ವಿಜಯ್ ಅರಸಿ ಬರುತ್ತಿದೆ.

    vijaydevarakonda

    `ಲೈಗರ್’ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ವಿಜಯ್ ದೇವರಕೊಂಡ ಅದೃಷ್ಟ ಪರೀಕ್ಷೆಗಿಳಿದ್ದರು. ಆದರೆ ಅವರಿಗೆ ಅದೃಷ್ಟ ಕೈ ಕೊಟ್ಟಿತ್ತು. ಇನ್ನು ವಿಜಯ್, ಪುರಿ ಜಗನ್ನಾಥ್ ಕಾಂಬಿನೇಷನ್‌ನಲ್ಲಿ ಮೂಡ ಬರಲಿರುವ `ಜನ ಗಣ ಮನ’ ಚಿತ್ರ ಕೂಡ ನಿಂತಿದೆ. ಆದರೆ ವಿಜಯ್ ದೇವರಕೊಂಡ ಅವರಿಗೆ ಡಿಮ್ಯಾಂಡ್ ಏನು ಕಮ್ಮಿಯಾಗಿಲ್ಲ. ಅವರ ಜತೆ ಸಿನಿಮಾ ಖ್ಯಾತ ನಿರ್ಮಾಪಕರೊಬ್ಬರು  ಮುಂದಾಗಿದ್ದಾರೆ. ಇದನ್ನೂ ಓದಿ:ಪ್ರಭಾಸ್ ದೊಡ್ಡಪ್ಪ, ತೆಲುಗಿನ ಹಿರಿಯ ನಟ ಕೃಷ್ಣಂರಾಜು ನಿಧನ

    ವಿಜಯ್ ದೇವರಕೊಂಡ ಮತ್ತು ನಿರ್ಮಾಪಕ ದಿಲ್ ರಾಜು (Dil Raju) ಕಾಂಬಿನೇಷನ್‌ನಲ್ಲಿ ಹೊಸ ಚಿತ್ರ ಮೂಡಿ ಬರಲಿದೆಯಂತೆ. ʻಲೈಗರ್ʼ ಸಿನಿಮಾ ಸೋತರೂ ಕೂಡ ತಮ್ಮ ಚಿತ್ರಕ್ಕೆ ವಿಜಯ್ ಅವರೇ ಬೇಕು ಅಂತಾ ದಿಲ್ ರಾಜು ಅಡ್ವಾನ್ಸ್ ಕೂಡ ಕೊಟ್ಟಿದ್ದಾರೆ.

    ಇದೀಗ ವಿಜಯ್ ನಟಿಸಿದ ಸತತ ಸಿನಿಮಾಗಳು ಸೋಲುತ್ತಿರುವ ಕಾರಣ ಕಥೆಯಲ್ಲಿ ಬದಲಾವಣೆ ತರಲು ಯೋಚಿಸಿದ್ದಾರೆ. ಈ ಹೊಸ ಚಿತ್ರಕ್ಕೆ ಇಂದ್ರಗAಟಿ ಮೋಹನ್ ಕೃಷ್ಣ ನಿರ್ದೇಶನ ಮಾಡಲಿದ್ದಾರೆ. ತಂಡದ ಸ್ಟೋರಿ ಲೈನ್ ಕೇಳಿ ದೇವರಕೊಂಡ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ. ಸದ್ಯದಲ್ಲೇ ಚಿತ್ರದ ಕುರಿತು ಅಧಿಕೃತ ಅಪ್‌ಡೇಟ್ ನೀಡಲಿದ್ದಾರೆ. ಹಾಗೆಯೇ ಶೂಟಿಂಗ್ ಕೂಡ ಶುರುವಾಗಲಿದೆ.

    Live Tv
    [brid partner=56869869 player=32851 video=960834 autoplay=true]

  • ವಿಜಯ್ ದೇವರಕೊಂಡ ಗರ್ಲ್ ಫ್ರೆಂಡ್ ಅನನ್ಯಾ ಪಾಂಡೆಗೂ ‘ಲೈಗರ್’ ಸೋಲಿನ ಎಫೆಕ್ಟ್

    ವಿಜಯ್ ದೇವರಕೊಂಡ ಗರ್ಲ್ ಫ್ರೆಂಡ್ ಅನನ್ಯಾ ಪಾಂಡೆಗೂ ‘ಲೈಗರ್’ ಸೋಲಿನ ಎಫೆಕ್ಟ್

    ನನ್ಯಾ ಪಾಂಡೆ ಮತ್ತು ವಿಜಯ್ ದೇವರಕೊಂಡ ಕಾಂಬಿನೇಷನ್ ನ ಲೈಗರ್ ಸಿನಿಮಾ ಅಂದುಕೊಂಡಂತೆ ಯಶಸ್ಸು ಕಾಣಲಿಲ್ಲ. ಈ ಸಿನಿಮಾ ರಿಲೀಸ್ ಆಗಿ ಮೂರ್ನಾಲ್ಕು ದಿನದಲ್ಲೇ ನೂರು ಕೋಟಿ ರೂಪಾಯಿ ಕ್ಲಬ್ ಗೆ ಸೇರಲಿದೆ ಎಂಬ ಲೆಕ್ಕಾಚಾರವಿತ್ತು. ಹಾಗಾಗಿಯೇ ವಿಜಯ್ ದೇವರಕೊಂಡ ಧೈರ್ಯದಿಂದಲೇ ಬಾಕ್ಸ್ ಆಫೀಸ್ ಕಲೆಕ್ಷನ್ ಬಗ್ಗೆ ಮಾತನಾಡಿದ್ದಾರೆ. ಈ ಸಿನಿಮಾದ ಬಗ್ಗೆ ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಎಲ್ಲ ನಿರೀಕ್ಷೆಯೂ ಹುಸಿ ಆಗಿವೆ.

    ಲೈಗರ್ ಸೋಲನ್ನು ಒಪ್ಪಿಕೊಂಡಿರುವ ವಿಜಯ್ ದೇವರಕೊಂಡ, ತಾವು ಈ ಸಿನಿಮಾಗಾಗಿ ಪಡೆದಿದ್ದ ಸಂಭಾವನೆಯನ್ನು ನಿರ್ಮಾಪಕರಿಗೆ ವಾಪಸ್ಸು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲಿಗೆ ಸೋಲನ್ನು ಒಪ್ಪಿಕೊಂಡಿದ್ದಾರೆ ಎಂದೇ ಬಣ್ಣಿಸಲಾಗುತ್ತಿದೆ. ಈ ಸೋಲು ಕೇವಲ ವಿಜಯ್ ದೇವರಕೊಂಡ ಅವರನ್ನು ಮಾತ್ರ ಬಾಧಿಸುತ್ತಿಲ್ಲ, ನಾಯಕಿ ಅನನ್ಯಾ ಪಾಂಡೆ ಮೇಲೂ ಸಾಕಷ್ಟು ಪರಿಣಾಮ ಬೀರಿದೆ. ಇದು ಅವರ ಚೊಚ್ಚಲು ಸಿನಿಮಾವಾಗಿದ್ದರೂ,  ಈ ಸಿನಿಮಾದಿಂದ ಅನನ್ಯಾ ಪಾಂಡೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದರು. ಎಲ್ಲವೂ ಠುಸ್ ಪಟಾಕಿ ಆಗಿದೆ. ಇದನ್ನೂ ಓದಿ:ಮಿಸ್ ಮ್ಯಾಚ್ ಜೋಡಿ: ಅತೀ ಹೆಚ್ಚು ಟ್ರೋಲ್ ಗೆ ಒಳಗಾದ ನಟಿ ಮಹಾಲಕ್ಷ್ಮಿ ಮತ್ತು ನಿರ್ಮಾಪಕ ರವೀಂದರ್

    ಲೈಗರ್ ಸಿನಿಮಾದ ಅಬ್ಬರ ನೋಡಿ ಜ್ಯೂನಿಯರ್ ಎನ್.ಟಿ.ಆರ್ ಸಿನಿಮಾಗೆ ಅನನ್ಯಾ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಲೈಗರ್ ಲತ್ತೆ ಹೊಡೆಯುತ್ತಿದ್ದಂತೆಯೇ ಜ್ಯೂನಿಯರ್ ಅಂಡ್ ಟೀಮ್ ಅನನ್ಯಾ ಅವರನ್ನು ಆಯ್ಕೆ ಮಾಡಿಕೊಳ್ಳದಿರಲು ನಿರ್ಧರಿಸಿದ್ದಾರಂತೆ. ಹಾಗಾಗಿ ಜ್ಯೂನಿಯರ್ ಸಿನಿಮಾದಿಂದ ಅನನ್ಯಾರನ್ನು ಹೊರಹಾಕಲಾಗಿದೆ. ಅಲ್ಲದೇ, ಇನ್ನೂ ಹಲವು ನಿರ್ಮಾಪಕರು ಅನನ್ಯಾಗೆ ಅವಕಾಶ ನೀಡಲು ಮೀನಾಮೇಷ ಎಣಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಮೊದಲ ಸಿನಿಮಾದಲ್ಲೇ ಬ್ರೇಕ್ ಗಾಗಿ ನಿರೀಕ್ಷೆ ಮಾಡುತ್ತಿದ್ದ ಅನನ್ಯಾಗೆ ಈ ಸಾರಿ ಬ್ಯಾಡ್ ಲಕ್ ಎನಬೇಕು ಅಷ್ಟೆ.

    Live Tv
    [brid partner=56869869 player=32851 video=960834 autoplay=true]

  • ‘ಲೈಗರ್’ ಸಿನಿಮಾ ಸೋಲು: ನಿರ್ಮಾಪಕರಿಗೆ ಸಂಭಾವನೆ ಹಿಂದಿರುಗಿಸಿದ ವಿಜಯ್ ದೇವರಕೊಂಡ

    ‘ಲೈಗರ್’ ಸಿನಿಮಾ ಸೋಲು: ನಿರ್ಮಾಪಕರಿಗೆ ಸಂಭಾವನೆ ಹಿಂದಿರುಗಿಸಿದ ವಿಜಯ್ ದೇವರಕೊಂಡ

    ಪುರಿ ಜಗನ್ನಾಥ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಲೈಗರ್ ಸಿನಿಮಾ ಹೀನಾಯವಾಗಿ ಸೋಲು ಅನುಭವಿಸಿದೆ. ಬಾಯ್ಕಟ್ ಸೇರಿದಂತೆ, ಸಿನಿಮಾ ನಟನ ದರ್ಪವೇ ಸಿನಿಮಾ ಸೋಲಿಗೆ ಕಾರಣ ಎಂದು ವಿಶ್ಲೇಷಿಸಲಾಗಿದೆ. ಅದರಲ್ಲೂ ಹಿಂದಿ ಸಿನಿಮಾ ರಂಗ ವಿಮರ್ಶಕರು ಕೂಡ ಸಿನಿಮಾ ಚೆನ್ನಾಗಿಲ್ಲವೆಂದು ಕಾಮೆಂಟ್ ಮಾಡಿದ್ದರು. ಹಾಗಾಗಿ ಬಾಕ್ಸ್ ಆಫೀಸಿನಲ್ಲಿ ಸಿನಿಮಾ ಗೆಲ್ಲಲಿಲ್ಲ. ಈ ಸೋಲಿನ ಹೊಣೆಯನ್ನು ಸ್ವತಃ ವಿಜಯ್ ದೇವರಕೊಂಡ ಹೊತ್ತಿದ್ದಾರೆ.

    ಮೂಲಗಳ ಪ್ರಕಾರ, ಲೈಗರ್ ಸಿನಿಮಾದ ಸೋಲಿನ ಹೊಣೆಯನ್ನು ತಾವೇ ಹೊತ್ತುಕೊಂಡಿರುವ ವಿಜಯ್ ದೇವರಕೊಂಡ ತಾವು ಪಡೆದಿದ್ದು ಕೋಟಿ ಕೋಟಿ ಸಂಭಾವನೆಯನ್ನು ವಾಪಸ್ಸು ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ಸಿನಿಮಾಗೆ ಅವರು 25 ಕೋಟಿ ಸಂಭಾವನೆ ಪಡೆದಿದ್ದರು ಎಂದು ಹೇಳಲಾಗುತ್ತಿದೆ. ಅಷ್ಟೂ ಹಣವನ್ನು ಚಾರ್ಮಿ ಕೌರ್ ಮತ್ತು ಪುರಿ ಜಗನ್ನಾಥ್ ಅವರಿಗೆ ವಾಪಸ್ಸು ಮಾಡಿದ್ದಾರೆ ಎಂದು ವರದಿ ಆಗಿದೆ. ಇದನ್ನೂ ಓದಿ: ರಿಯಲ್ ಪ್ರೇಮಿಗಳು ‘ಬಿಗ್ ಬಾಸ್’ ಮನೆಯಲ್ಲಿ ಬೇರೆ ಬೇರೆ ಆಗ್ತಾರಾ?: ದೂರಾಗುವ ಕುರಿತು ಮಾತನಾಡಿದ ನಂದಿನಿ

    ಲೈಗರ್ ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಈ ಸಿನಿಮಾ ನೂರಾರು ಕೋಟಿ ಗಳಿಸಲಿದೆ ಎಂಬ ಲೆಕ್ಕಾಚಾರ ಕೂಡ ನಡೆದಿತ್ತು. ದಕ್ಷಿಣದ ಹೀರೋ ಬಾಲಿವುಡ್ ನಲ್ಲಿ ಮತ್ತೊಂದು ದಾಖಲೆ ನಿರ್ಮಿಸುತ್ತಾರೆ ಎಂದೇ ಹೇಳಲಾಗಿತ್ತು. ಆದರೆ, ಎಲ್ಲ ಲೆಕ್ಕಾಚಾರ ತಲೆಕೆಳಗಾಗಿವೆ. ಹಾಕಿದ ಬಂಡವಾಳವೂ ಬಾರದೇ ಇರುವಷ್ಟು ಸಿನಿಮಾ ಮುಗ್ಗರಿಸಿದೆ.

    Live Tv
    [brid partner=56869869 player=32851 video=960834 autoplay=true]

  • ‘ಲೈಗರ್’ ಸಿನಿಮಾದಲ್ಲಿ ನಟಿಸಲು 25 ಕೋಟಿ ಸಂಭಾವನೆ ಪಡೆದರೂ, ಸಿನಿಮಾನೇ ಮರೆತಿದ್ದರಾ ಮೈಕ್ ಟೈಸನ್

    ‘ಲೈಗರ್’ ಸಿನಿಮಾದಲ್ಲಿ ನಟಿಸಲು 25 ಕೋಟಿ ಸಂಭಾವನೆ ಪಡೆದರೂ, ಸಿನಿಮಾನೇ ಮರೆತಿದ್ದರಾ ಮೈಕ್ ಟೈಸನ್

    ಬಾಕ್ಸಿಂಗ್ ಲೋಕದ ದಂತಕಥೆಯಾಗಿರುವ ಮೈಕ್ ಟೈಸನ್, ಇದೇ ಮೊದಲ ಬಾರಿಗೆ ಭಾರತೀಯ ಸಿನಿಮಾದಲ್ಲಿ ನಟಿಸಿದ್ದರು. ವಿಜಯ್ ದೇವರಕೊಂಡ ನಾಯಕನಾಗಿ ನಟಿಸಿರುವ ಲೈಗರ್ ಸಿನಿಮಾದಲ್ಲಿ ಅವರು ವಿಶೇಷ ಪಾತ್ರವನ್ನು ನಿರ್ವಹಿಸಿದ್ದರು. ಅದು ಕೆಲವೇ ನಿಮಿಷಗಳಲ್ಲಿ ಬಂದು ಹೋಗುವ ಪಾತ್ರವಾದರೂ, ಅವರು ಈ ಚಿತ್ರದಲ್ಲಿ ನಟಿಸಲು ಬರೋಬ್ಬರಿ 25 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ.

    ಪುರಿ ಜಗನ್ನಾಥ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾದಲ್ಲಿ ಬಾಕ್ಸಿಂಗ್ ಕುರಿತಾದ ಕಥೆಯಿದೆ. ಹಾಗಾಗಿ ಕ್ಲೈಮ್ಯಾಕ್ಸ್ ನಲ್ಲಿ ಮೈಕ್ ಟೈಸನ್ ಆಗಮನವಾಗುತ್ತದೆ. ಈ ದೃಶ್ಯದಲ್ಲಿ ನಟಿಸಲು ಅವರು ಭಾರೀ ಮೊತ್ತದ ಹಣ ಬೇಡಿಕೆ ಇಟ್ಟಿದ್ದರು. ಅಷ್ಟೂ ಹಣವನ್ನು ನಿರ್ಮಾಪಕರು ಸಂದಾಯ ಮಾಡಿದ್ದಾರೆ. ಆದರೆ, ಸಿನಿಮಾ ರಿಲೀಸ್ ವೇಳೆಯಲ್ಲಿ ಟೈಸನ್ ತಾವು ಲೈಗರ್ ಸಿನಿಮಾದಲ್ಲಿ ನಟಿಸಿದ್ದೇನೆ ಎನ್ನುವುದನ್ನೇ ಮರೆತು ಹೋಗಿದ್ದರು. ಸಂದರ್ಶನವೊಂದರಲ್ಲಿ ನಾನು ಆ ರೀತಿಯ ಸಿನಿಮಾ ಮಾಡಿದ್ದೇನಾ ಎನ್ನುವಂತೆ ಉತ್ತರ ನೀಡಿದ್ದರು. ಇದನ್ನೂ ಓದಿ:ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ‘ಗಂಡುಮಗ’ ಎಂದು ಹಾಡಿ ಹೊಗಳಿದ ಜಗ್ಗೇಶ್

    ಮೈಕ್ ಟೈಸನ್ ತಮ್ಮ ಸಿನಿಮಾದಲ್ಲಿ ನಟಿಸಿದರೆ, ಚಿತ್ರಕ್ಕೆ ಮತ್ತೊಂದು ತೂಕ ಬರಲಿದೆ ಎಂದು ಚಿತ್ರತಂಡ ನಂಬಿತ್ತು. ಬಹುಶಃ ಆ ನಂಬಿಕೆ ಸುಳ್ಳಾಗಿದೆ. ಸಿನಿಮಾವನ್ನು ಪ್ರೇಕ್ಷಕ ಒಪ್ಪದೇ ಇರುವ ಕಾರಣಕ್ಕಾಗಿ ಸಿನಿಮಾದಲ್ಲಿ ಟೈಸನ್ ಇದ್ದರೂ, ಸಿನಿಮಾ ನಿರೀಕ್ಷೆಯ ಮಟ್ಟ ತಲುಪಿಲ್ಲ. ಸಿನಿಮಾ ರಿಲೀಸ್ ಆಗಿ ಎರಡನೇ ದಿನಕ್ಕೆ ಸಿನಿಮಾ ಫ್ಲ್ಯಾಪ್ ಎಂದು ಘೋಷಿಸಿ ಬಿಟ್ಟರು ನೋಡುಗರು. ಹಾಗಾಗಿ ಸಿನಿಮಾದಲ್ಲಿ ಏನೇ ಕಸರತ್ತು ಮಾಡಿದರು ಅದು ವರ್ಕ್ ಆಗಿಲ್ಲ ಎನ್ನುವುದು ನಿಜವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಅನಕೊಂಡ ಅಂತ ಬೈದ ಥಿಯೇಟರ್ ಮಾಲೀಕನನ್ನು ಭೇಟಿ ಮಾಡಿದ ವಿಜಯ್ ದೇವರಕೊಂಡ

    ಅನಕೊಂಡ ಅಂತ ಬೈದ ಥಿಯೇಟರ್ ಮಾಲೀಕನನ್ನು ಭೇಟಿ ಮಾಡಿದ ವಿಜಯ್ ದೇವರಕೊಂಡ

    ಮುಂಬೈನ ಸುಪ್ರಸಿದ್ಧ ಮರಾಠ ಮಂದಿರ್ ಥಿಯೇಟರ್ ಮಾಲೀಕ ಮನೋಜ್ ದೇಸಾಯಿ ಎರಡು ದಿನಗಳ ಹಿಂದೆಯಷ್ಟೇ ವಿಜಯ್ ದೇವರಕೊಂಡ ಅವರನ್ನು ಹಿಗ್ಗಾಮುಗ್ಗ ಬೈದಿದ್ದರು. ಲೈಗರ್ ಸಿನಿಮಾದಲ್ಲಿ ನಟಿಸಿರುವ ಆ ವಿಜಯ್ ದೇವರಕೊಂಡ ಎನ್ನುವ ನಟ, ದೇವರಕೊಂಡ ಅಲ್ಲ, ಅನಕೊಂಡ ಎಂದು ಜರಿದಿದ್ದರು. ಮನೋಜ್ ದೇಸಾಯಿ ಆಡಿದ ಮಾತುಗಳ ವಿಡಿಯೋ ಸಖತ್ ವೈರಲ್ ಆಗಿತ್ತು. ಇದರ ಬೆನ್ನಲ್ಲೆ ವಿಜಯ್ ಮುಬೈಗೆ ತೆರಳಿ, ಮನೋಜ್ ದೇಸಾಯಿ ಅವರನ್ನು ಭೇಟಿ ಮಾಡಿದ್ದಾರೆ.

    ವಿಜಯ್ ದೇವರಕೊಂಡ ಮೊದಲ ಸಿನಿಮಾದಲ್ಲೇ ಅಹಂಕಾರ ತೋರಿಸಿದ್ದಾರೆ ಎನ್ನುವ ಕಾರಣಕ್ಕಾಗಿ ಮನೋಜ್ ದೇಸಾಯಿ ಹಿಗ್ಗಾಮುಗ್ಗ ಝಾಡಿಸಿದ್ದರು. ‘ನಮ್ಮ ಸಿನಿಮಾವನ್ನು ಯಾರು ತಡೆಯುತ್ತಾರೋ ನೋಡೋಣ’ ಎನ್ನುವ ಮಾತುಗಳನ್ನು ಬಾಯ್ಕಾಟ್ ಸೇರಿದಂತೆ ತಮ್ಮ ಸಿನಿಮಾವನ್ನು ವಿರೋಧಿಸುವವರಿಗೆ ವಿಜಯ್ ದೇವರಕೊಂಡ ಈ ಮಾತುಗಳನ್ನು ಆಡಿದ್ದರು. ಇದಕ್ಕೆ ಮನೋಜ್ ವಿರೋಧ ವ್ಯಕ್ತ ಪಡಿಸಿದ್ದರು. ಇದನ್ನೂ ಓದಿ:ನಾನು ಅಂಬರೀಶ್ ಅಣ್ಣನ ಅಭಿಮಾನಿ, ಅವರ ಮಗನಿಗೆ ಸಿನಿಮಾ ಮಾಡುತ್ತಿರುವುದು ಹೆಮ್ಮೆ : ನಿರ್ದೇಶಕ ಮಹೇಶ್ ಕುಮಾರ್

    ಲೈಗರ್ ಸಿನಿಮಾ ವಿಚಾರದಲ್ಲಿ ವಿಜಯ್ ದೇವರಕೊಂಡ ಅತಿರೇಕವಾಗಿ ಮಾತನಾಡುತ್ತಿದ್ದಾರೆ ಎಂದು ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಆಗಿದೆ. ಓಟಿಟಿ ಹಕ್ಕುಗಳು 200 ಕೋಟಿಗೆ ಸೇಲ್ ಆದಾಗ, ನಾವು ಥಿಯೇಟರ್ ನಲ್ಲಿ ಇದಕ್ಕಿಂತ ಹೆಚ್ಚಿನ ಹಣವನ್ನು ಮಾಡುತ್ತೇವೆ ಎಂದು ನಿರಾಕರಿಸಿದ ಪೋಸ್ಟ್ ವೊಂದನ್ನು ವಿಜಯ್ ಮಾಡಿದ್ದರು. ಅದು ಕೂಡ ಇದೀಗ ಟ್ರೋಲ್ ಆಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ವಿಜಯ್ ದೇವರಕೊಂಡ ವಿರುದ್ಧ ಹಳೆಯ ಸೇಡು ತೀರಿಸಿಕೊಂಡ ನಿರೂಪಕಿ ಅನಸೂಯ

    ವಿಜಯ್ ದೇವರಕೊಂಡ ವಿರುದ್ಧ ಹಳೆಯ ಸೇಡು ತೀರಿಸಿಕೊಂಡ ನಿರೂಪಕಿ ಅನಸೂಯ

    ವಿಜಯ್ ದೇವರಕೊಂಡ ನಟನೆಯ ಅರ್ಜುನ್ ರೆಡ್ಡಿ ಸಿನಿಮಾದ ಕಾರ್ಯಕ್ರಮದಲ್ಲಿ ನಿರೂಪಕಿ ಅನಸೂಯ ಮತ್ತು ವಿಜಯ್ ದೇವರಕೊಂಡ ನಡುವೆ ಜಟಾಪಟಿ ನಡೆದಿತ್ತು. ಮಹಿಳೆಯರ ಕುರಿತಾಗಿ ವಿಜಯ್ ದೇವರಕೊಂಡ ಅವಮಾನಕರ ರೀತಿಯಲ್ಲಿ ಸಂಭಾಷಣೆ ಹೇಳಿದರು ಎಂದು ವೇದಿಕೆಯ ಮೇಲೆಯೇ ಅನಸೂಯ ಆಕ್ಷೇಪಿಸಿದ್ದರು. ಈ ಘಟನೆಯಿಂದ ವಿಜಯ್ ಮುಜಗರ ಕೂಡ ಅನುಭವಿಸಿದ್ದರು. ಹೀಗಾಗಿ ಇಬ್ಬರ ಮಧ್ಯ ಮನಸ್ತಾಪ ಉಂಟಾಗಿತ್ತು.

    ಈ ಘಟನೆಯ ನಂತರ ವಿಜಯ್ ದೇವರಕೊಂಡ ಅವರ ಯಾವ ಕಾರ್ಯಕ್ರಮಕ್ಕೂ ಅನಸೂಯ ಇರುತ್ತಿರಲಿಲ್ಲ ಎನ್ನಲಾಗುತ್ತಿದೆ. ಮಹಿಳೆಯರ ಪರ ನಿಂತಿದ್ದಕ್ಕೆ ಅನಸೂಯ ಸಾಕಷ್ಟು ನೋವುಗಳನ್ನು ಅನುಭವಿಸಿದ್ದರಂತೆ. ಈ ಘಟನೆ ನಡೆದು ಹಲವು ವರ್ಷಗಳಾದರೂ, ವಿಜಯ್ ದೇವರಕೊಂಡ ಮೇಲಿನ ಕೋಪ ಹಾಗೆಯೇ ಇತ್ತು. ವಿಜಯ್ ನಟನೆಯ ಲೈಗರ್ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಸೋಲುತ್ತಿದ್ದಂತೆಯೇ ಅನಸೂಯ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಕರ್ಮ ಯಾವತ್ತಿದ್ದರೂ ವಾಪಸ್ಸು ಕೊಡುತ್ತೆ ಅಂದಿದ್ದಾರೆ. ಇದನ್ನೂ ಓದಿ:ರಮ್ಯಾ ಮನೆಯಲ್ಲೇ ಕಥೆ ಹೇಳಿದ್ರಂತೆ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ : ಪದ್ಮಾವತಿ ಕಮ್ ಬ್ಯಾಕ್ ಕನ್ಫರ್ಮ್

    ಲೈಗರ್ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ನಿರೀಕ್ಷಿತ ಮಟ್ಟ ತಲುಪಿಲ್ಲ. ಜನರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೇ, ಬಾಲಿವುಡ್ ಅಂಗಳದಲ್ಲೇ ಸಿನಿಮಾಗೆ ಅಷ್ಟೊಂದು ಪ್ರತಿಕ್ರಿಯೆ ಸಿಕ್ಕಿಲ್ಲ. ಈ ಎಲ್ಲ ಕಾರಣದಿಂದಾಗಿ ಲೈಗರ್ ಸೋಲು ಎಂದು ಹೇಳಲಾಗುತ್ತಿದೆ. ಈ ಸೋಲನ್ನು ಅನಸೂಯ ಅವರು ಸಂಭ್ರಮಿಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸೌತ್ ಸ್ಟಾರ್ ವಿಜಯ್ ದೇವರಕೊಂಡ ವಿರುದ್ಧ ಸಿಡಿದೆದ್ದ ಬಾಲಿವುಡ್ ಥಿಯೇಟರ್ ಮಾಲೀಕ

    ಸೌತ್ ಸ್ಟಾರ್ ವಿಜಯ್ ದೇವರಕೊಂಡ ವಿರುದ್ಧ ಸಿಡಿದೆದ್ದ ಬಾಲಿವುಡ್ ಥಿಯೇಟರ್ ಮಾಲೀಕ

    ಬಾಲಿವುಡ್ ಮತ್ತು ದಕ್ಷಿಣ ತಾರೆಯರ ಮುಸುಕಿನ ಗುದ್ದಾಟ ಕಲಾವಿದರು ಮತ್ತು ತಾಂತ್ರಿಕ ವರ್ಗದವರನ್ನು ದಾಟಿ ಥಿಯೇಟರ್ ಮಾಲೀಕರ ಅಂಗಳ ತಲುಪಿದೆ. ಭಾರತೀಯ ಸಿನಿಮಾ ರಂಗ ಎಂದರೆ, ಅದು ಕೇವಲ ಬಾಲಿವುಡ್ ಎಂದು ಬಿಂಬಿಸುತ್ತಿದ್ದ ಮನಸುಗಳು ಮತ್ತೆ ಇದೀಗ ಸೌತ್ ನಟನೊಬ್ಬನನ್ನು ಬಾಲಿವುಡ್ ಒಳಗೆ ಬಿಟ್ಟುಕೊಳ್ಳದಂತೆ ಕಿಡಿಕಾರುತ್ತಿವೆ.

    ನಿನ್ನೆಯಷ್ಟೇ ವಿಜಯ್ ದೇವರಕೊಂಡ ನಟನೆಯ ಲೈಗರ್ ಸಿನಿಮಾ ರಿಲೀಸ್ ಆಗಿದೆ. ಅದು ನೇರವಾಗಿ ಹಿಂದಿ ಭಾಷೆಯಲ್ಲಿ ನಿರ್ಮಾಣವಾದರೂ, ಈ ಸಿನಿಮಾದ ನಿರ್ದೇಶಕರು ಮತ್ತು ಹೀರೋ ದಕ್ಷಿಣದವರು. ಹಾಗಾಗಿ ಈ ಸಿನಿಮಾವನ್ನು ಸೋಲಿಸುವಂತಹ ಪ್ರಯತ್ನ ನಡೆದಿದೆಯಾ ಎನ್ನುವಂತಹ ಘಟನೆಗಳು ಮುಂಬೈ ಬಜಾರ್ ನಲ್ಲಿ ನಡೆಯುತ್ತಿವೆ. ಈ ಸಿನಿಮಾವನ್ನು ಪ್ರದರ್ಶನ ಮಾಡುತ್ತಿರುವ ಮುಂಬೈ ಥಿಯೇಟರ್ ಮಾಲಿಕ ಮನೋಜ್ ದೇಸಾಯಿ ಲೈಗರ್ ಸಿನಿಮಾದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇದನ್ನೂ ಓದಿ:ಆ ಒಂದು ಹೆಸರಿನ ಟ್ಯಾಟೋನಿಂದ ಎರಡನೇ ಮದುವೆ ವದಂತಿಗೆ ಫುಲ್ ಸ್ಟಾಪ್ ಹಾಕಿದ ಮೇಘನಾ ರಾಜ್

    ಮನೋಜ್ ದೇಸಾಯಿ ಮುಂಬೈನಲ್ಲಿ ಗೈಟಿ ಗ್ಯಾಲಾಕ್ಷಿ ಮತ್ತು ಮರಾಠ ಮಂದಿರ ಎಂಬ ಎರಡು ಥಿಯೇಟರ್ ನಡೆಸುತ್ತಿದ್ದಾರೆ. ಇವರು ವಿಜಯ್ ದೇವರಕೊಂಡ ಬಗ್ಗೆ ಮಾತನಾಡುತ್ತಾ, ‘ಆತ ದೇವರಕೊಂಡ ಅಲ್ಲ, ಅನಕೊಂಡ ಎಂದು ಜರೆದಿದ್ದಾರೆ. ಈ ಹುಡುಗನ ಅಹಂಕಾರವೇ ಸಿನಿಮಾ ಸೋಲಿಗೆ ಕಾರಣವೆಂದು ನೇರವಾಗಿಯೇ ಆರೋಪಿಸಿದ್ದಾರೆ. ಬಾಯ್ಕಾಟಿ ವಿಚಾರವಾಗಿ ದೇವರಕೊಂಡ ಅಹಂಕಾರದ ಮಾತುಗಳನ್ನು ಆಡಿದ್ದರು ಎಂದು ಹೇಳಿದ್ದಾರೆ.

    ಬಾಯ್ಕಾಟ್ ವಿಚಾರವಾಗಿ ವಿಜಯ್ ದೇವರಕೊಂಡ ಧ್ವನಿ ಎತ್ತಿದ್ದರು. ಸಿನಿಮಾ ನೋಡುವವರು ಬಾಯ್ಕಾಟ್ ಅನ್ನುವುದಿಲ್ಲ. ಹಾಗೆ ಎನ್ನುವವರು ನನ್ನ ಸಿನಿಮಾ ನೋಡಬೇಕು ಎಂದು ಹೇಳಿಕೆಕೊಟ್ಟಿದ್ದರು. ಈ ಅಹಂಕಾರವೇ ಲೈಗರ್ ಹಿನ್ನೆಡೆಗೆ ಕಾರಣವಾಗಿದೆ ಎಂದು ಮನೋಜ್ ದೇಸಾಯಿ ವಿಡಿಯೋ ಮೂಲಕ ಹೇಳಿಕೆ ಕೊಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ವಿಜಯ್ ದೇವರಕೊಂಡ ‘ಲೈಗರ್’ ಸಿನಿಮಾಗೆ ಮಿಶ್ರಪ್ರತಿಕ್ರಿಯೆ: 200 ಕೋಟಿ ಆಫರ್ ಟ್ವಿಟ್ ವೈರಲ್

    ವಿಜಯ್ ದೇವರಕೊಂಡ ‘ಲೈಗರ್’ ಸಿನಿಮಾಗೆ ಮಿಶ್ರಪ್ರತಿಕ್ರಿಯೆ: 200 ಕೋಟಿ ಆಫರ್ ಟ್ವಿಟ್ ವೈರಲ್

    ವಿಜಯ್ ದೇವರಕೊಂಡ ಮತ್ತು ಅನನ್ಯ ಪಾಂಡೆ ಕಾಂಬಿನೇಷನ್ ನಲ್ಲಿ ಮೂಡಿ ಬಂದಿರುವ ಲೈಗರ್ ಸಿನಿಮಾ ಬಿಡುಗಡೆಗೂ ಮುನ್ನ ಭಾರೀ ನಿರೀಕ್ಷೆ ಮೂಡಿಸಿತ್ತು. ಬಾಕ್ಸ್ ಆಫೀಸಿನಲ್ಲಿ ಈ ಚಿತ್ರ ಭಾರೀ ಸೌಂಡ್ ಮಾಡಲಿದೆ ಎಂದು ಅಂದಾಜಿಸಲಾಗಿದೆ. ಹಾಗಾಗಿಯೇ ಈ ಸಿನಿಮಾ ಕೊಳ್ಳಲು ಮುಗಿಬಿದ್ದಿದ್ದರು. ಆದರೆ, ನಿರೀಕ್ಷಿತ ಫಲಿತಾಂಶ ಬಂದಿಲ್ಲ ಎನ್ನುತ್ತಿವೆ ಮೂಲಗಳು. ನೋಡುಗರು ಕೂಡ ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಹಾಗಾಗಿ ರಿಲೀಸ್ ಆದ ಮೊದಲ ದಿನವೇ ಸಿನಿಮಾ ಮುಗ್ಗರಿಸಿದೆ.

    ಈ ನಡುವೆ ವಿಜಯ್ ದೇವರಕೊಂಡ ಮಾಡಿದ್ದ ಟ್ವಿಟ್ ವೊಂದು ಸಖತ್ ವೈರಲ್ ಆಗುತ್ತಿದೆ. ಹಲವು ತಿಂಗಳ ಹಿಂದೆ ಲೈಗರ್ ಸಿನಿಮಾದ ವ್ಯಾಪಾರಕ್ಕೆ ಸಂಬಂಧಿಸಿದಂತೆ ವಿಜಯ್ ದೇವರಕೊಂಡ ಟ್ವಿಟ್ ಮಾಡಿದ್ದರು. ಅದರಲ್ಲಿ ‘ಓಟಿಟಿ ಸಂಸ್ಥೆಯೊಂದು 200 ಕೋಟಿ ರೂಪಾಯಿಗೆ ಲೈಗರ್ ಸಿನಿಮಾ ಕೇಳಿದೆ. ಇದು ಸಣ್ಣ ಮೊತ್ತದ ಹಣ. ಥಿಯೇಟರ್ ನಲ್ಲಿ ನಾವು ನೋಡಿಕೊಳ್ಳುತ್ತೇವೆ’ ಎಂದು ಟ್ವಿಟ್ ಮಾಡಿದ್ದರು. ಆದರೆ, ಈಗಿನ ಬಾಕ್ಸ್ ಆಫೀಸ್ ರಿಪೋರ್ಟ್ ನೋಡಿದರೂ, ಆ ಮೊತ್ತದ ಕಾಲು ಭಾಗವಾದರೂ ದುಡ್ಡು ಬರತ್ತಾ ಎನ್ನುವಂತಾಗಿದೆ. ಇದನ್ನೂ ಓದಿ:ಜಯಶ್ರೀಗೆ ಎರಡು ಮದುವೆ ಆಗ್ತವೆ ಎಂದು ಬಿಗ್ ಬಾಸ್ ಮನೆಯಲ್ಲಿ ಭವಿಷ್ಯ ನುಡಿದ ಆರ್ಯವರ್ಧನ್ ಗುರೂಜಿ

    ವಿಜಯ್ ದೇವರಕೊಂಡ ಆ ವೇಳೆಯಲ್ಲಿ ಹೆಮ್ಮೆಯಿಂದ ಬರೆದುಕೊಂಡರೋ, ಅಥವಾ ಅಹಂನಿಂದ ಬರೆದುಕೊಂಡರೋ ಬೇರೆ ಮಾತು. ಆದರೆ, ನೆಟ್ಟಿಗರು ಅದೇ ಟ್ವಿಟ್ ತಗೆದುಕೊಂಡು ಈಗ ಗೇಲಿ ಮಾಡುತ್ತಿದ್ದಾರೆ. ವಿಜಯ್ ದೇವರಕೊಂಡಗೆ ಇಷ್ಟೊಂದು ಕಾನ್ಫಿಡೆನ್ಸ್ ಇರಬಾರದು ಎಂದು ಪಾಠ ಮಾಡಿದ್ದಾರೆ. ಈ ಸಿನಿಮಾದ ಬಗ್ಗೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದ ವಿಜಯ್ ದೇವರಕೊಂಡಗೆ ವಿಜಯ ದೊರೆಯಲಿ ಎಂದೂ ಹಲವರು ಹಾರೈಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ವಿಜಯ್ ದೇವರಕೊಂಡ ‘ಲೈಗರ್’ ಚಿತ್ರಕ್ಕೂ ಬಾಯ್ಕಾಟ್ ಬಿಸಿ: ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್

    ವಿಜಯ್ ದೇವರಕೊಂಡ ‘ಲೈಗರ್’ ಚಿತ್ರಕ್ಕೂ ಬಾಯ್ಕಾಟ್ ಬಿಸಿ: ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್

    ವಾರವಷ್ಟೇ ವಿಜಯ್ ದೇವರಕೊಂಡ ಮತ್ತು ಪೂರಿ ಜಗನ್ನಾಥ್ ಕಾಂಬಿನೇಷನ್ ನ ಲೈಗರ್ ಸಿನಿಮಾ ದೇಶಾದ್ಯಂತ ಬಿಡುಗಡೆ ಆಗುತ್ತಿದೆ. ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದ್ದು, ಸಿನಿಮಾ ಬಿಡುಗಡೆಗೂ ಮುನ್ನ ಈ ಚಿತ್ರವನ್ನು ಯಾರೂ ನೋಡದಂತೆ ಬಾಯ್ಕಾಟ್ ಅಭಿಯಾನ ಶುರುವಾಗಿದೆ. ಈಗಾಗಲೇ ಟ್ವಿಟರ್ ನಲ್ಲಿ ಬಾಯ್ಕಾಟ್ ಲೈಗರ್ ಟ್ರೆಂಡ್ ಕೂಡ ಆಗಿದೆ.

    ಆಮೀರ್ ಖಾನ್, ಅಕ್ಷಯ್ ಕುಮಾರ್, ಅನುರಾಗ್ ಕಶ್ಯಪ್ ಅವರ ಸಿನಿಮಾಗಳನ್ನು ಕ್ರಮವಾಗಿ ಬಾಯ್ಕಾಟ್ ಮಾಡಿಕೊಂಡೇ ಬಂದಿರುವ ನೆಟ್ಟಿಗರು ಈ ಬಾರಿ ಲೈಗರ್ ಸಿನಿಮಾದ ಹಿಂದೆ ಬಿದ್ದಿದ್ದಾರೆ. ಕಾರಣ ವಿಜಯ್ ದೇವರಕೊಂಡ ಮತ್ತು ಈ ಸಿನಿಮಾವನ್ನು ನಿರ್ಮಾಣ ಮಾಡಿರುವ ಕರಣ್ ಜೋಹಾರ್ ಎಂದು ಹೇಳಲಾಗುತ್ತಿದೆ. ದಕ್ಷಿಣದ ಸಿನಿಮಾಗಳನ್ನು ಕರಣ್ ಜೋಹಾರ್ ಬೆಳೆಯಲು ಬಿಡುತ್ತಿರಲಿಲ್ಲ. ಹಾಗಾಗಿ ಅವರ ಪ್ರೊಡಕ್ಷನ್ ಹೌಸ್ ನಿಂದ ಬಂದಿರುವ ಲೈಗರ್ ಸಿನಿಮಾವನ್ನು ಬಾಯ್ಕಾಟ್ ಮಾಡಬೇಕಿದೆ ಎನ್ನುತ್ತಾರೆ ಹಲವರ. ಇದನ್ನೂ ಓದಿ:ತನ್ನನ್ನು ತಾನೇ ಮದುವೆಯಾದ ಕಿರುತೆರೆ ನಟಿ ಕಾನಿಷ್ಕಾ ಸೋನಿ

    ಅಲ್ಲದೇ ವಿಜಯ್ ದೇವರಕೊಂಡ ಅವರು ಲಾಲ್ ಸಿಂಗ್ ಚಡ್ಡಾ ಸಿನಿಮಾ ಬಗ್ಗೆ ಮಾತನಾಡುತ್ತಾ, ಅದು ಕೇವಲ ಆಮೀರ್ ಖಾನ್ ಅವರ ಸಿನಿಮಾವಲ್ಲ. ಆ ಸಿನಿಮಾ ನಿರ್ಮಾಣದ ಹಿಂದೆ 250ಕ್ಕೂ ಹೆಚ್ಚು ಜನರ ಶ್ರಮವಿರುತ್ತದೆ. ಹಾಗಾಗಿ ಬಾಯ್ಕಾಟ್ ಮಾಡಬೇಡಿ ಎಂದು ಆಮೀರ್ ಪರವಾಗಿ ಮಾತನಾಡಿದ್ದರಂತೆ. ಈ ವಿಷಯವಾಗಿಯೂ ಲೈಗರ್ ಸಿನಿಮಾ ಬಾಯ್ಕಾಟ್ ಸಂಕಟವನ್ನು ಅನುಭವಿಸಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • `ಅರ್ಜುನ್ ರೆಡ್ಡಿ’ ಚಿತ್ರದ ನಂತರ ಕರಣ್ ಜೋಹರ್ ಚಿತ್ರವನ್ನು ವಿಜಯ್ ತಿರಸ್ಕರಿಸಿದ್ದೇಕೆ?

    `ಅರ್ಜುನ್ ರೆಡ್ಡಿ’ ಚಿತ್ರದ ನಂತರ ಕರಣ್ ಜೋಹರ್ ಚಿತ್ರವನ್ನು ವಿಜಯ್ ತಿರಸ್ಕರಿಸಿದ್ದೇಕೆ?

    ಸ್ಟೈ‌ಲೀಶ್ ಸ್ಟಾರ್ ವಿಜಯ್ ದೇವರಕೊಂಡ `ಲೈಗರ್’ ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಈ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಸದ್ದು ಮಾಡುತ್ತಿದ್ದಾರೆ. ಈ ಪ್ರಚಾರದ ವೇಳೆ, ಈ ಹಿಂದೆ ಕರಣ್ ಜೋಹರ್ ಚಿತ್ರವನ್ನು ಕೈಬಿಟ್ಟಿದರ ಬಗ್ಗೆ ವಿಜಯ್ ದೇವರಕೊಂಡ ಮಾತನಾಡಿದ್ದಾರೆ.

    vijaydevarakonda

    ಈಗ ಏಲ್ಲೆಲ್ಲೂ `ಲೈಗರ್ ಸಿನಿಮಾ ಪ್ರಚಾರ ಜೋರಾಗಿದೆ ಸೌಂಡ್ ಮಾಡುತ್ತಿದೆ. ವಿಜಯ್ ದೇವರಕೊಂಡ ವೃತ್ತಿ ಜೀವನದ ನಿರೀಕ್ಷಿತ `ಲೈಗರ್’ ಚಿತ್ರ ಟೀಸರ್, ಟ್ರೆöÊಲರ್, ಪೊಸ್ಟರ್ ಲುಕ್‌ನಿಂದ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡುತ್ತಿದೆ. ಇನ್ನು ಈ ಚಿತ್ರದ ಪ್ರಚಾರ ಕಾರ್ಯ ಹೈದರಾಬಾದ್‌ನಲ್ಲಿ ನಡೆಯುತ್ತಿದ್ದು, ಈ ವೇಳೆ ಕರಣ್ ಜೋಹರ್ ಸಿನಿಮಾ ಆಫರ್ ಅನ್ನು ಕೈಬಿಟ್ಟ ವಿಚಾರದ ಬಗ್ಗೆ ವಿಜಯ್ ರಿವೀಲ್ ಮಾಡಿದ್ದಾರೆ. ಇದನ್ನೂ ಓದಿ:Bigg Boss: ಗರ್ಲ್‌ಫ್ರೆಂಡ್ ವಿಚಾರಕ್ಕೆ ಬಂದ ಸೋನು ಶ್ರೀನಿವಾಸ್ ಗೌಡ ವಿರುದ್ಧ ಕಿಡಿಕಾರಿದ ಜಶ್ವಂತ್

    `ಅರ್ಜುನ್ ರೆಡ್ಡಿ’ ಚಿತ್ರದ ಸಕ್ಸಸ್ ನಂತರ ಕರಣ್ ಜೋಹರ್ ಕಡೆಯಿಂದ ಬಾಲಿವುಡ್ ಸಿನಿಮಾ ಆಫರ್ ಬಂದಿತ್ತು. ಆದರೆ ಆ ಸಮಯದಲ್ಲಿ ನಾನು ಸಿದ್ಧನಾಗಿರಲಿಲ್ಲ. ಈಗ ಪ್ಯಾನ್ ಇಂಡಿಯಾ ಸಿನಿಮಾ ಕಾನ್ಸೆಪ್ಟ್ ಇರುವ ಕಾರಣ ಲೈಗರ್ ಚಿತ್ರ ಒಪ್ಪಿಕೊಂಡೆ ಎಂದು ಮಾತನಾಡಿದ್ದಾರೆ. ಇನ್ನು ಲೈಗರ್ ಚಿತ್ರವು ಸ್ಲಂ ಹುಡುಗರ ಕಥೆಯಾಗಿದ್ದು, ಎಂದೂ ಕಾಣಿಸಿಕೊಂಡಿರದ ಪಾತ್ರದಲ್ಲಿ ವಿಜಯ್ ಮಿಂಚಿದ್ದಾರೆ. ಕರಣ್ ಜೋಹರ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಆಗಸ್ಟ್ ೨೫ಕ್ಕೆ ಲೈಗರ್ ಚಿತ್ರ ತೆರೆಗೆ ಅಪ್ಪಳಿಸಲಿದೆ.

    Live Tv
    [brid partner=56869869 player=32851 video=960834 autoplay=true]