Tag: Liger

  • ಬಿಕಿನಿಯಲ್ಲಿ ಅನನ್ಯಾ ಮಿಂಚಿಂಗ್, ಬಾಯ್‌ಫ್ರೆಂಡ್ ಎಲ್ಲಿ ಎಂದು ಕಾಲೆಳೆದ ನೆಟ್ಟಿಗರು

    ಬಿಕಿನಿಯಲ್ಲಿ ಅನನ್ಯಾ ಮಿಂಚಿಂಗ್, ಬಾಯ್‌ಫ್ರೆಂಡ್ ಎಲ್ಲಿ ಎಂದು ಕಾಲೆಳೆದ ನೆಟ್ಟಿಗರು

    ‘ಲೈಗರ್’ (Liger) ಬ್ಯೂಟಿ ಅನನ್ಯಾ ಪಾಂಡೆ (Ananya Panday) ಅವರು ಸದ್ಯ ಫಾರಿನ್‌ಗೆ ಹಾರಿದ್ದಾರೆ. ವಿದೇಶದ ಪ್ರಯಾಣವನ್ನು ಎಂಜಾಯ್ ಮಾಡ್ತಿದ್ದಾರೆ. ಸದ್ಯ ಅವರು ಬಿಕಿನಿ ಧರಿಸಿ ಹಾಟ್ ಆಗಿ ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿದ್ದಾರೆ. ಅನನ್ಯಾ ಪಾಂಡೆ ತಮ್ಮ ನಯಾ ಬಿಕಿನಿ ಫೋಟೋ ಶೇರ್ ಮಾಡ್ತಿದ್ದಂತೆ ಆದಿತ್ಯ ಕಪೂರ್ ಎಲ್ಲಿ ಎಂದು ಕಾಮೆಂಟ್ ಮಾಡುವ ಮೂಲಕ ಕಾಲೆಳೆದಿದ್ದಾರೆ. ಇದನ್ನೂ ಓದಿ:ಡೈರೆಕ್ಟರ್ ಕ್ಯಾಪ್ ತೊಟ್ಟ ‘ಚುಟು ಚುಟು’ ಕೊರಿಯೋಗ್ರಾಫರ್ ಭೂಷಣ್ ಮಾಸ್ಟರ್

    ವಿಜಯ್ ದೇವರಕೊಂಡ ಜೊತೆಗಿನ ‘ಲೈಗರ್’ ಸಿನಿಮಾ ಸೋಲುಂಡಿದೆ. ಗಲ್ಲಾಪೆಟ್ಟಿಗೆಯಲ್ಲಿ ಸಿನಿಮಾ ಮಕಾಡೆ ಮಲಗಿದೆ. ಸಿನಿಮಾದ ನಂತರ ನಟಿ ಆದಿತ್ಯ ರಾಯ್ ಕಪೂರ್ ಜೊತೆಗಿನ ಡೇಟಿಂಗ್ ವಿಚಾರವಾಗಿ ಭಾರೀ ಸುದ್ದಿಯಲ್ಲಿದ್ದಾರೆ. ಸದ್ಯ ವಿದೇಶದಲ್ಲಿ ಬೀಡು ಬಿಟ್ಟಿರುವ ಅನನ್ಯಾ ಪಾಂಡೆ, ಹಸಿ ಬಿಸಿ ಫೋಟೋಗಳು ಸಖತ್ ಸದ್ದು ಮಾಡುತ್ತಿದೆ.

    ರೆಸ್ಟೋರೆಂಟ್‌ವೊಂದರಲ್ಲಿ ಅನನ್ಯಾ ಪಾಂಡೆ ಅವರು ಎಂಜಾಯ್ ಮಾಡುತ್ತಿದ್ದು, ನಟಿಯ ಬಿಕಿನಿ ಲುಕ್ ಎಲ್ಲರ ಗಮನ ಸೆಳೆಯುತ್ತಿದೆ. ಅನನ್ಯಾ ಅವರ ಬಿಕಿನಿ (Bikini) ಫೋಟೋವನ್ನ ಆದಿತ್ಯಾ ಕಪೂರ್ (Adithya Kapur) ಕ್ಲಿಕ್ಕಿಸಿದ್ದಾರೆ ಎಂದು ನೆಟ್ಟಿಗರು ಊಹಿಸಿದ್ದಾರೆ. ಹಾಗಾಗಿ ಬಾಯ್‌ಫ್ರೆಂಡ್ ಆದಿ ಎಲ್ಲಿ ಎಂದು ಕಾಮೆಂಟ್ ಮಾಡುವ ಮೂಲಕ ನಟಿಯ ಕಾಲೆಳೆದಿದ್ದಾರೆ.

    ಸಾಕಷ್ಟು ವರ್ಷಗಳಿಂದ ಆಶಿಕಿ 2 ಹೀರೋ ಆದಿತ್ಯ- ಅನನ್ಯಾ ಪಾಂಡೆ ಇಬ್ಬರು ಪರಿಚಿತರು. ಹಾಗಾಗಿ ಡೇಟಿಂಗ್ ಸುದ್ದಿಗೆ ಈ ಜೋಡಿಯ ನಯಾ ಪುಷ್ಟಿ ನೀಡುತ್ತಿದೆ. ಇಬ್ಬರೂ ಅವರು ಪ್ರತ್ಯೇಕವಾಗಿ ವಿಮಾನ ಏರಿ ವಿದೇಶಕ್ಕೆ ತೆರಳಿದ್ದಾರೆ. ಆದರೆ ಅವರಿಬ್ಬರೂ ಹೋಗಿರುವುದು ಒಂದೇ ಲೊಕೇಷನ್‌ಗೆ. ಸ್ಪೇನ್‌ನಲ್ಲಿ ಸಂಗೀತ ಕರ‍್ಯಕ್ರಮವೊಂದಕ್ಕೆ ಈ ಜೋಡಿ ಇತ್ತೀಚಿಗೆ ಹಾಜರಿ ಹಾಕಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಸ್ಟೋರಿಗಳನ್ನು ಅಪ್‌ಲೋಡ್ ಮಾಡಿಕೊಂಡಿದ್ದರು. ಇಬ್ಬರ ಸ್ಟೋರಿಯಲ್ಲೂ ಸಾಮ್ಯತೆ ಇರುವುದರಿಂದ ಒಟ್ಟಿಗೆ ಇರೋದು ಅಭಿಮಾನಿಗಳಿಗೆ ಎಲ್ಲವೂ ಸ್ಪಷ್ಟವಾಗಿತ್ತು. ಇಷ್ಟೇ ಅಲ್ಲ, ಅವರಿಬ್ಬರ ನಡುವಿನ ಆಪ್ತತೆಗೆ ಸಾಕ್ಷಿ ಒದಗಿಸುವಂತಹ ಇನ್ನೊಂದು ಫೋಟೋ ಕೂಡ ವೈರಲ್ ಆಗಿದೆ. ಅನನ್ಯಾರನ್ನ ಹಿಂಬದಿಯಿಂದ ಆದಿತ್ಯ ತಬ್ಬಿಕೊಂಡಿದ್ದರು. ಇದಾದ ಬಳಿಕ ಪರ‍್ಚುಗಲ್‌ನಲ್ಲಿ ಇಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದರು. ಸದ್ಯದ ಬಾಲಿವುಡ್ ಹೊಸ ಜೋಡಿ ಅಂದರೆ, ಅನನ್ಯಾ- ಆದಿತ್ಯ ಕಪೂರ್ ಕಪಲ್.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಲೈಗರ್‌’ ನಟಿ ಜೊತೆ ಆದಿತ್ಯ ಕಪೂರ್ ಕಣ್ ಕಣ್ ಸಲಿಗೆ

    ‘ಲೈಗರ್‌’ ನಟಿ ಜೊತೆ ಆದಿತ್ಯ ಕಪೂರ್ ಕಣ್ ಕಣ್ ಸಲಿಗೆ

    ಬಾಲಿವುಡ್‌ನ (Bollywood) ನಯಾ ಜೋಡಿ ಅನನ್ಯಾ ಪಾಂಡೆ- ಆದಿತ್ಯ ರಾಯ್ ಕಪೂರ್ (Adithya Roy Kapoor) ಅವರು ರೊಮ್ಯಾಂಟಿಕ್ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಪೋರ್ಚುಗಲ್‌ನಲ್ಲಿ ಈ ಲವ್ ಬರ್ಡ್ಸ್ ಫೋಟೋಗ್ರಾಫರ್ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದಾರೆ.

    ಕೆ.ಎಲ್ ರಾಹುಲ್- ಅಥಿಯಾ ಶೆಟ್ಟಿ, ಸಿದ್- ಕಿಯಾರಾ ಜೋಡಿಯಂತೆ ಮತ್ತೊಂದು ಹೊಸ ಜೋಡಿ ಹಸೆಮಣೆ ಏರುವ ಸುದ್ದಿ ಕೊಡ್ತಾರಾ ಕಾಯಬೇಕಿದೆ. ಸದ್ಯ ಮುಂಬೈ ಗಲ್ಲಿ ಮತ್ತು ವಿದೇಶದಲ್ಲೂ ಅನನ್ಯಾ ಪಾಂಡೆ(Ananya Panday) – ಆದಿತ್ಯ ರಾಯ್ ಕಪೂರ್ ಜೋಡಿ ಕೈ ಕೈ ಹಿಡಿದು ಓಡಾಡುತ್ತಿದ್ದಾರೆ. ಇಬ್ಬರ ಡೇಟಿಂಗ್ ಬಗ್ಗೆ ಸಾಕಷ್ಟು ಸುದ್ದಿ ಸೌಂಡ್ ಮಾಡ್ತಿದೆ.

    ಕೆಲ ದಿನಗಳ ಹಿಂದೆ ಸ್ಪೇನ್‌ನಲ್ಲಿ ಅನನ್ಯಾ- ಆದಿತ್ಯ ಜೋಡಿ ಒಟ್ಟಿಗೆ ಇರುವ ರೊಮ್ಯಾಂಟಿಕ್ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ಈಗ ಇಬ್ಬರು ಪೋರ್ಚುಗಲ್‌ನ (Portugal) ರೆಸ್ಟೋರೆಂಟ್‌ವೊಂದರಲ್ಲಿ ಅನನ್ಯಾ- ಆದಿತ್ಯ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಇಬ್ಬರ ಕಣ್ ಸಲಿಗೆ ಫೋಟೋ ಸಖತ್ ವೈರಲ್ ಆಗುತ್ತಿದೆ.

    ಸಾಕಷ್ಟು ವರ್ಷಗಳಿಂದ ಆದಿತ್ಯ- ಅನನ್ಯಾ ಪಾಂಡೆ ಇಬ್ಬರು ಪರಿಚಿತರು. ಹಾಗಾಗಿ ಡೇಟಿಂಗ್ ಸುದ್ದಿಗೆ ಈ ಜೋಡಿಯ ನಯಾ ಪುಷ್ಟಿ ನೀಡುತ್ತಿದೆ. ಇಬ್ಬರೂ ಅವರು ಪ್ರತ್ಯೇಕವಾಗಿ ವಿಮಾನ ಏರಿ ವಿದೇಶಕ್ಕೆ ತೆರಳಿದ್ದಾರೆ. ಆದರೆ ಅವರಿಬ್ಬರೂ ಹೋಗಿರುವುದು ಒಂದೇ ಲೊಕೇಷನ್‌ಗೆ. ಸ್ಪೇನ್‌ನಲ್ಲಿ ಸಂಗೀತ ಕಾರ್ಯಕ್ರಮವೊಂದಕ್ಕೆ ಅವರು ಹಾಜರಿ ಹಾಕಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸ್ಟೋರಿಗಳನ್ನು ಅಪ್‌ಲೋಡ್ ಮಾಡಿಕೊಂಡಿದ್ದಾರೆ. ಇಬ್ಬರ ಸ್ಟೋರಿಯಲ್ಲೂ ಸಾಮ್ಯತೆ ಇರುವುದರಿಂದ ಅಭಿಮಾನಿಗಳಿಗೆ ಎಲ್ಲವೂ ಸ್ಪಷ್ಟವಾಗಿದೆ. ಇಷ್ಟೇ ಅಲ್ಲ, ಅವರಿಬ್ಬರ ನಡುವಿನ ಆಪ್ತತೆಗೆ ಸಾಕ್ಷಿ ಒದಗಿಸುವಂತಹ ಇನ್ನೊಂದು ಫೋಟೋ ಕೂಡ ವೈರಲ್ ಆಗಿದೆ. ಇದನ್ನೂ ಓದಿ:ತೆಲುಗಿನ ಮತ್ತೊಬ್ಬ ನಟಿಯ ದಾಂಪತ್ಯದಲ್ಲಿ ಬಿರುಕು- ಪತಿ ಜೊತೆ ಸ್ವಾತಿ ರೆಡ್ಡಿ ಡಿವೋರ್ಸ್?

    ಅನನ್ಯಾರನ್ನು ಆದಿತ್ಯ ಅವರು ಹಿಂಬದಿಯಿಂದ ತಬ್ಬಿಕೊಂಡು ನಿಂತಿರುವ ಫೋಟೋ ಸದ್ದು ಮಾಡುತ್ತಿದೆ. ಇದನ್ನು ನೋಡಿ ಅಭಿಮಾನಿಗಳು ಹುಬ್ಬೇರಿಸಿದ್ದಾರೆ. ಇಷ್ಟು ದಿನಗಳ ಕಾಲ ಈ ಜೋಡಿ ಹಕ್ಕಿಗಳು ತಮ್ಮ ಪ್ರೀತಿ ಬಗ್ಗೆ ಬಾಯಿ ಬಿಟ್ಟಿರಲಿಲ್ಲ. ಆದರೆ ಈಗ ಎಲ್ಲವೂ ಬಟಾಬಯಲಾಗಿದೆ. ಕದ್ದು-ಮುಚ್ಚಿ ಡೇಟಿಂಗ್ ಮಾಡುತ್ತಿರುವ ರಹಸ್ಯ ರಿವೀಲ್ ಆಗಿದೆ. ಫ್ಯಾನ್ಸ್ ಬಗೆ ಬಗೆಯ ರೀತಿಯಲ್ಲಿ ಕಾಮೆಂಟ್ ಮಾಡ್ತಿದ್ದಾರೆ.ಇನ್ನೂ ಕೆಲವು ತಿಂಗಳುಗಳ ಹಿಂದೆ ಇವೆಂಟ್‌ವೊಂದರಲ್ಲಿ ಇಬ್ಬರು ಜೊತೆಯಾಗಿ ರ‍್ಯಾಂಪ್ ವಾಕ್ ಮಾಡಿದ್ದು. ಜೋಡಿಯಾಗಿ ಹಲವು ಇವೆಂಟ್‌ನಲ್ಲಿ ಭಾಗಿಯಾಗುತ್ತಿದ್ದರು. ಅಂದಿನ ಆದಿತ್ಯ- ಅನನ್ಯಾ ಅವರ ಫೋಟೋಶೂಟ್ ಸಖತ್ ವೈರಲ್ ಆಗಿತ್ತು. ಇಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದರು ಕೂಡ ತಮ್ಮ ರಿಲೇಷನ್‌ಶಿಪ್ ಬಗ್ಗೆ ಅಧಿಕೃತವಾಗಿ ಹೇಳಿಕೊಂಡಿಲ್ಲ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಲೈಗರ್’ ಬ್ಯೂಟಿ ಜೊತೆ ಆದಿತ್ಯ ರಾಯ್ ಲವ್ವಿ-ಡವ್ವಿ: ಲೀಕ್ ಆಯ್ತು ರೊಮ್ಯಾಂಟಿಕ್ ಫೋಟೋ

    ‘ಲೈಗರ್’ ಬ್ಯೂಟಿ ಜೊತೆ ಆದಿತ್ಯ ರಾಯ್ ಲವ್ವಿ-ಡವ್ವಿ: ಲೀಕ್ ಆಯ್ತು ರೊಮ್ಯಾಂಟಿಕ್ ಫೋಟೋ

    ಬಾಲಿವುಡ್‌ನ ‘ಆಶಿಕಿ 2’ (Ashiqui 2) ಹೀರೋ ಆದಿತ್ಯ ರಾಯ್ ಕಪೂರ್ (Aditya Roy Kapoor) ಅವರು ಸಿನಿಮಾಗಿಂತ ಹೆಚ್ಚುಚ್ಚು ಖಾಸಗಿ ವಿಚಾರವಾಗಿಯೇ ಸುದ್ದಿಯಾಗುತ್ತಿದ್ದಾರೆ. ಅನನ್ಯಾ ಪಾಂಡೆ (Ananya Panday) ಜೊತೆ ಆದಿತ್ಯ ಡೇಟ್ ಮಾಡ್ತಿದ್ದಾರೆ ಎನ್ನಲಾಗಿತ್ತು. ಇಬ್ಬರೂ ಈ ಬಗ್ಗೆ ತುಟಿಕ್ ಪಿಟಿಕ್ ಎನ್ನುತ್ತಿರಲಿಲ್ಲ. ಈಗ ಇಬ್ಬರೂ ಜೊತೆಯಿರುವ ಫೋಟೋ ಲೀಕ್ ಆಗಿದೆ. ಸೋಷಿಯಲ್ ಮೀಡಿಯಾ ತುಂಬೆಲ್ಲಾ ಈ ಜೋಡಿಯ ಫೋಟೋ ಸದ್ದು ಮಾಡುತ್ತಿದೆ.

    ಆದಿತ್ಯ ಕಪೂರ್ ಮತ್ತು ಲೈಗರ್‌ (Liger) ನಟಿ ಅನನ್ಯಾ ಪಾಂಡೆ ಇಬ್ಬರು ಸ್ಟಾರ್ ಕಿಡ್ಸ್ ಆಗಿದ್ದರು ಕೂಡ ಅವರಿಗೆ ಹೇಳಿಕೊಳ್ಳುವಂತಹ ಯಶಸ್ಸು ಸಿಕ್ಕಿಲ್ಲ. ‘ಆಶಿಕಿ 2’ ಚಿತ್ರದಲ್ಲಿ ಗಮನ ಸೆಳೆದ ಆದಿತ್ಯ, ತಮ್ಮ ವೃತ್ತಿ ಜೀವನದಲ್ಲಿ ಒಂದೊಳ್ಳೆ ಬ್ರೇಕ್‌ಗಾಗಿ ಕಾಯ್ತಿದ್ದಾರೆ. ಹೀಗಿರುವಾಗ ಲೈಗರ್ ನಟಿ ಜೊತೆ ಆದಿತ್ಯ ಹೆಸರು ಕೇಳಿ ಬರುತ್ತಿದೆ. ಸಾಕಷ್ಟು ವರ್ಷಗಳಿಂದ ಇಬ್ಬರು ಡೇಟಿಂಗ್ ಮಾಡ್ತಿದ್ದಾರೆ. ಇದನ್ನೂ ಓದಿ:ಗಂಡು ಮಗುವಿಗೆ ಜನ್ಮ ನೀಡಿದ ರಾಧಿಕಾ ರಾವ್

    ಸಾಕಷ್ಟು ವರ್ಷಗಳಿಂದ ಆದಿತ್ಯ- ಅನನ್ಯಾ ಪಾಂಡೆ ಇಬ್ಬರು ಪರಿಚಿತರು. ಹಾಗಾಗಿ ಡೇಟಿಂಗ್ ಸುದ್ದಿಗೆ ಈ ಜೋಡಿಯ ನಯಾ ಪುಷ್ಟಿ ನೀಡುತ್ತಿದೆ. ಇಬ್ಬರೂ ಅವರು ಪ್ರತ್ಯೇಕವಾಗಿ ವಿಮಾನ ಏರಿ ವಿದೇಶಕ್ಕೆ ತೆರಳಿದ್ದಾರೆ. ಆದರೆ ಅವರಿಬ್ಬರೂ ಹೋಗಿರುವುದು ಒಂದೇ ಲೊಕೇಷನ್‌ಗೆ. ಸ್ಪೇನ್‌ನಲ್ಲಿ ಸಂಗೀತ ಕಾರ್ಯಕ್ರಮವೊಂದಕ್ಕೆ ಅವರು ಹಾಜರಿ ಹಾಕಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸ್ಟೋರಿಗಳನ್ನು ಅಪ್‌ಲೋಡ್ ಮಾಡಿಕೊಂಡಿದ್ದಾರೆ. ಇಬ್ಬರ ಸ್ಟೋರಿಯಲ್ಲೂ ಸಾಮ್ಯತೆ ಇರುವುದರಿಂದ ಅಭಿಮಾನಿಗಳಿಗೆ ಎಲ್ಲವೂ ಸ್ಪಷ್ಟವಾಗಿದೆ. ಇಷ್ಟೇ ಅಲ್ಲ, ಅವರಿಬ್ಬರ ನಡುವಿನ ಆಪ್ತತೆಗೆ ಸಾಕ್ಷಿ ಒದಗಿಸುವಂತಹ ಇನ್ನೊಂದು ಫೋಟೋ ಕೂಡ ವೈರಲ್ ಆಗಿದೆ.

     

    View this post on Instagram

     

    A post shared by Manav Manglani (@manav.manglani)

    ಅನನ್ಯಾರನ್ನು ಆದಿತ್ಯ ಅವರು ಹಿಂಬದಿಯಿಂದ ತಬ್ಬಿಕೊಂಡು ನಿಂತಿರುವ ಫೋಟೋ ಸದ್ದು ಮಾಡುತ್ತಿದೆ. ಇದನ್ನು ನೋಡಿ ಅಭಿಮಾನಿಗಳು ಹುಬ್ಬೇರಿಸಿದ್ದಾರೆ. ಇಷ್ಟು ದಿನಗಳ ಕಾಲ ಈ ಜೋಡಿ ಹಕ್ಕಿಗಳು ತಮ್ಮ ಪ್ರೀತಿ ಬಗ್ಗೆ ಬಾಯಿ ಬಿಟ್ಟಿರಲಿಲ್ಲ. ಆದರೆ ಈಗ ಎಲ್ಲವೂ ಬಟಾಬಯಲಾಗಿದೆ. ಕದ್ದು-ಮುಚ್ಚಿ ಡೇಟಿಂಗ್ ಮಾಡುತ್ತಿರುವ ರಹಸ್ಯ ರಿವೀಲ್ ಆಗಿದೆ. ಫ್ಯಾನ್ಸ್ ಬಗೆ ಬಗೆಯ ರೀತಿಯಲ್ಲಿ ಕಾಮೆಂಟ್ ಮಾಡ್ತಿದ್ದಾರೆ.

    ಇನ್ನೂ ಕೆಲವು ತಿಂಗಳುಗಳ ಹಿಂದೆ ಇವೆಂಟ್‌ವೊಂದರಲ್ಲಿ ಇಬ್ಬರು ಜೊತೆಯಾಗಿ ರ‍್ಯಾಂಪ್ ವಾಕ್ ಮಾಡಿದ್ದು. ಜೋಡಿಯಾಗಿ ಹಲವು ಇವೆಂಟ್‌ನಲ್ಲಿ ಭಾಗಿಯಾಗುತ್ತಿದ್ದರು. ಅಂದಿನ ಆದಿತ್ಯ- ಅನನ್ಯಾ ಅವರ ಫೋಟೋಶೂಟ್ ಸಖತ್ ವೈರಲ್ ಆಗಿತ್ತು. ಬಾಲಿವುಡ್‌ನಲ್ಲೂ ಸ್ಟಾರ್ ನಟ-ನಟಿಯರ ಮದುವೆ ಸೀಸನ್ ಶುರುವಾಗಿರೋದ್ರಿಂದ ಈ ಜೋಡಿ ಕೂಡ ಮದುವೆ ಬಗ್ಗೆ ಸಿಹಿಸುದ್ದಿ ಕೊಡ್ತಾರಾ ಕಾಯಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಲೈಗರ್ ಬ್ಯೂಟಿ ಜೊತೆ ಹಸೆಮಣೆ ಏರಲಿದ್ದಾರೆ `ಆಶಿಕಿ 2′ ಹೀರೋ

    ಲೈಗರ್ ಬ್ಯೂಟಿ ಜೊತೆ ಹಸೆಮಣೆ ಏರಲಿದ್ದಾರೆ `ಆಶಿಕಿ 2′ ಹೀರೋ

    ಚಿತ್ರರಂಗದಲ್ಲಿ ಗಟ್ಟಿಮೇಳ ಸೌಂಡ್ ಜೋರಾಗಿದೆ. ಸಾಲು ಸಾಲಾಗಿ ನಟ- ನಟಿಯರು ಹಸೆಮಣೆ ಏರುತ್ತಿದ್ದಾರೆ. ಇದೀಗ ಬಾಲಿವುಡ್‌ನ ಮತ್ತೊಂದು ಜೋಡಿ ಹಸೆಮಣೆ ಏರಲು ಸಜ್ಜಾಗಿದ್ದಾರೆ.

    ಅಥಿಯಾ ಶೆಟ್ಟಿ-ರಾಹುಲ್, ಕಿಯಾರಾ- ಸಿದ್ ಜೋಡಿಯ ಅದ್ದೂರಿ ಮದುವೆ ನಂತರ ಆದಿತ್ಯ ರಾಯ್ ಕಪೂರ್ (Aditya Roy Kapoor) ಮತ್ತು ಅನನ್ಯಾ ಪಾಂಡೆ (Ananya Panday) ದಾಂಪತ್ಯ (Wedding) ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ.

    ಆದಿತ್ಯ ಕಪೂರ್ ಮತ್ತು ಅನನ್ಯಾ ಪಾಂಡೆ ಇಬ್ಬರು ಸ್ಟಾರ್ ಕಿಡ್ಸ್ ಆಗಿದ್ದರು ಕೂಡ ಅವರಿಗೆ ಹೇಳಿಕೊಳ್ಳುವಂತಹ ಯಶಸ್ಸು ಸಿಕ್ಕಿಲ್ಲ. `ಆಶಿಕಿ 2′ (Aashiqui 2) ಚಿತ್ರದಲ್ಲಿ ಗಮನ ಸೆಳೆದ ಆದಿತ್ಯ, ತಮ್ಮ ವೃತ್ತಿ ಜೀವನದಲ್ಲಿ ಒಂದೊಳ್ಳೆ ಬ್ರೇಕ್‌ಗಾಗಿ ಕಾಯ್ತಿದ್ದಾರೆ. ಹೀಗಿರುವಾಗ `ಲೈಗರ್’ (Liger) ನಟಿ ಜೊತೆ ಆದಿತ್ಯ ಹೆಸರು ಕೇಳಿ ಬರುತ್ತಿದೆ. ಸಾಕಷ್ಟು ವರ್ಷಗಳಿಂದ ಇಬ್ಬರು ಡೇಟಿಂಗ್ ಮಾಡ್ತಿದ್ದಾರೆ. ಇದನ್ನೂ ಓದಿ: ಆಸ್ಕರ್‌ನಲ್ಲಿ ಜ್ಯೂ.ಎನ್‌ಟಿಆರ್-ಚರಣ್ ಡ್ಯಾನ್ಸ್ ಮಾಡಿಲ್ಲ ಯಾಕೆ? ಇಲ್ಲಿದೆ ಅಸಲಿ ಕಾರಣ

    ಸಾಕಷ್ಟು ವರ್ಷಗಳಿಂದ ಆದಿತ್ಯ- ಅನನ್ಯಾ ಪಾಂಡೆ ಇಬ್ಬರು ಪರಿಚಿತರು. ಈ ಪರಿಚಯವೇ ಪ್ರೀತಿಗೆ ತಿರುಗಿ ಸದ್ಯದಲ್ಲೇ ಹಸೆಮಣೆ ಏರುತ್ತಿದ್ದಾರೆ ಎಂದು ಹೇಳುಲಾಗುತ್ತಿದೆ. ಬಾಲಿವುಡ್ (Bollywood) ಅಂಗಳದಲ್ಲಿ ಸದ್ಯ ಅನನ್ಯಾ ಮತ್ತು ಆದಿತ್ಯ ಮದುವೆ ಸುದ್ದಿಯೇ ಸಖತ್ ಚರ್ಚೆಯಾಗುತ್ತಿದೆ. ಅದಕ್ಕೆ ಪುಷ್ಠಿ ನೀಡುವಂತಹ ಇಬ್ಬರ ಫೋಟೋಶೂಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಇತ್ತೀಚಿಗೆ ಖಾಸಗಿ ಇವೆಂಟ್‌ವೊಂದರಲ್ಲಿ ಇಬ್ಬರು ಜೊತೆಯಾಗಿ ರ‍್ಯಾಂಪ್ ವಾಕ್ ಮಾಡಿದ್ದಾರೆ. ಜೋಡಿಯಾಗಿ ಹಲವು ಇವೆಂಟ್‌ನಲ್ಲಿ ಭಾಗಿಯಾಗುತ್ತಿದ್ದಾರೆ. `ಲೈಗರ್’ ಸೋಲಿನ ಸುಳಿಯಲ್ಲಿರುವ ನಟಿ ಅನನ್ಯಾ ಅವರು ಮದುವೆ ಮನಸ್ಸು ಮಾಡಿದ್ದಾರೆ ಎನ್ನಲಾಗುತ್ತಿದೆ. ಬಿಟೌನ್‌ ಸಿನಿಪಂಡಿತರ ಪ್ರಕಾರ ಈ ವರ್ಷದ ಕೊನೆಯಲ್ಲಿ ದಾಂಪತ್ಯ ಬದುಕಿಗೆ ಕಾಲಿಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಅಷ್ಟಕ್ಕೂ ಈ ಸುದ್ದಿ ನಿಜಾನಾ ಎಂಬುದನ್ನ ಕಾದುನೋಡಬೇಕಿದೆ.

  • ಮದುವೆ ಮನೆಯಲ್ಲಿ ‘ಧಮ್’ ಹೊಡೆದು ಸಿಕ್ಕಿಬಿದ್ದ ನಟಿ ಅನನ್ಯಾ ಪಾಂಡೆ

    ಮದುವೆ ಮನೆಯಲ್ಲಿ ‘ಧಮ್’ ಹೊಡೆದು ಸಿಕ್ಕಿಬಿದ್ದ ನಟಿ ಅನನ್ಯಾ ಪಾಂಡೆ

    ವಿಜಯ್ ದೇವರಕೊಂಡ ನಟನೆಯ ಲೈಗರ್ ಸೇರಿದಂತೆ ಸಾಕಷ್ಟು ಬಾಲಿವುಡ್ (Bollywood) ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಅನನ್ಯಾ ಪಾಂಡೆ (Ananya Pandey) ಸಲ್ಲದ ಕಾರಣಕ್ಕಾಗಿ ಸುದ್ದಿ ಆಗುತ್ತಲೇ ಇರುತ್ತಾರೆ. ಈ ಹಿಂದೆ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಸೆಕ್ಸ್, ಡೇಟಿಂಗ್ ಬಗ್ಗೆ ಮಾತನಾಡಿ ಅಚ್ಚರಿ ಮೂಡಿಸಿದ್ದರು. ವಿಜಯ್ ದೇವರಕೊಂಡ ಮತ್ತು ಅನನ್ಯಾ ಪಾಂಡೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ವಿಚಾರ ಕೂಡ ಚರ್ಚೆಗೆ ಕಾರಣವಾಗಿತ್ತು. ಇದೀಗ ಸಿಗರೇಟ್ (Cigarette) ಸೇದಿದ ಕಾರಣಕ್ಕಾಗಿ ವೈರಲ್ ಆಗಿದ್ದಾರೆ.

    ಅನನ್ಯಾ ಪಾಂಡೆ ಅವರ ಸಂಬಂಧಿ ಅಲನಾ ಪಾಂಡೆ ಅವರ ವಿವಾಹ ಕಾರ್ಯಕ್ರಮ ನಿನ್ನೆಯಿಂದ ನಡೆದಿದೆ. ಮೊದಲ ದಿನ ಮೆಹಂದಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಇದರಲ್ಲಿ ಪಾಲ್ಗೊಳ್ಳಲು ಅನನ್ಯಾ ಕೂಡ ಬಂದಿದ್ದರು. ಒಂದು ಕಡೆ ಇಡೀ ಕುಟುಂಬ ಮೆಹಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರೆ, ಅನನ್ಯಾ ಮಾತ್ರ ಧಮ್ ಎಳೆದುಕೊಂಡು ನಿಂತಿದ್ದಾರೆ. ಯಾರೋ ಸೆರೆ ಹಿಡಿದ ವಿಡಿಯೋದಲ್ಲಿ ಅನನ್ಯಾ ಸಿಕ್ಕಿಬಿದ್ದಿದ್ದಾರೆ. ಇದನ್ನೂ ಓದಿ: ಆಸ್ಕರ್ ಪಾರ್ಟಿಯಲ್ಲಿ ಕಂಗೊಳಿಸಿದ ರಾ ರಾ ರಕ್ಕಮ್ಮ

    ಮೆಹಂದಿ ಕಾರ್ಯಕ್ರಮವನ್ನು ಅಲ್ಲಿ ಬಂದಿದ್ದವರು ಮೊಬೈಲ್ ನಲ್ಲಿ ಸೆರೆ ಹಿಡಿದ್ದಾರೆ. ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಕೂಡ ಮಾಡಿದ್ದರು. ಈ ವಿಡಿಯೋದಲ್ಲಿ ಅನನ್ಯಾ ಸಿಗರೇಟು ಸೇದುತ್ತಾ ನಿಂತಿರುವ ದೃಶ್ಯ ಸೆರೆಯಾಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ವಿಡಿಯೋವನ್ನು ಡಿಲೀಟ್ ಮಾಡಿಸುವ ಪ್ರಯತ್ನ ಕೂಡ ನಡೆದಿದೆ. ಅಷ್ಟರಲ್ಲಿ ಫೋಟೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆಯಾಗಿದೆ.

    ಅನನ್ಯಾ ಪಾಂಡೆ ಅವರ ಈ ನಡೆಗೆ ನಾನಾ ರೀತಿಯ ಕಾಮೆಂಟ್ ಗಳು ಹರಿದು ಬರುತ್ತಿವೆ. ಸ್ಟಾರ್ ಕಿಡ್ಸ್ ಯಾವತ್ತಿಗೂ ಹೀಗೆ ಎಂದು ಕೆಲವರು ಕಾಮೆಂಟ್ ಮಾಡಿದ್ದರೆ, ಬಹುಶಃ ವಿಜಯ್ ದೇವರಕೊಂಡ ಅವರೇ ಕಲಿಸಿರಬೇಕು ಎಂದು ಕಾಲೆಳೆದವರೂ ಇದ್ದಾರೆ. ಈ ನಟಿಗೆ ಇಂಥದ್ದೊಂದು ಕೆಟ್ಟ ಅಭ್ಯಾಸ ಇದೆ ಎಂದು ಗೊತ್ತಿರಲಿಲ್ಲ ಎಂದು ಅಚ್ಚರಿ ಪಟ್ಟವರೂ ಇದ್ದಾರೆ.

  • ‘ಲೈಗರ್’ ಸೋಲಿನಿಂದ ಆಚೆ ಬಂದು ಹೊಸ ಸಿನಿಮಾ ಒಪ್ಪಿಕೊಂಡ ವಿಜಯ್ ದೇವರಕೊಂಡ

    ‘ಲೈಗರ್’ ಸೋಲಿನಿಂದ ಆಚೆ ಬಂದು ಹೊಸ ಸಿನಿಮಾ ಒಪ್ಪಿಕೊಂಡ ವಿಜಯ್ ದೇವರಕೊಂಡ

    ಸದಾ ಯಶಸ್ಸಿನ ಬೇಟೆಯನ್ನೇ ಆಡುತ್ತಿದ್ದ ನಟ ವಿಜಯ್ ದೇವರಕೊಂಡ, ಮೊದಲ ಬಾರಿಗೆ ಅನ್ನುವಂತೆ ಲೈಗರ್ ಸಿನಿಮಾದಿಂದ ಮಕಾಡೆ ಮಲಗಿಕೊಂಡರು. ಈ ಸಿನಿಮಾದ ಸೋಲು ಅವರನ್ನು ದಿಕ್ಕೆಡಿಸಿತ್ತು. ಅದರಿಂದ ಆಚೆ ಬರಲು ಸಾಕಷ್ಟು ಒದ್ದಾಡಿದರು. ಈ ಸಿನಿಮಾದ ಸೋಲು ಕೇವಲ ವಿಜಯ್ ಗೆ ಮಾತ್ರವಲ್ಲ ನಿರ್ದೇಶಕ ಪೂರಿ ಜಗನ್ನಾಥ್ ಅವರಿಗೂ ಸಂಕಷ್ಟ ತಂದಿತ್ತು. ಈಗ ವಿಜಯ್ ಗೆ ಎಲ್ಲ ನೋವನ್ನೂ ಮರೆಯುವ ಅವಕಾಶ ಒಂದು ಬಂದಿದೆ. ಈಗವರು ಹೊಸ ಸಿನಿಮಾವನ್ನು ಒಪ್ಪಿಕೊಳ್ಳುವ ಮೂಲಕ ನೋವಿನಿಂದ ಆಚೆ ಬರುವ ಪ್ರಯತ್ನದಲ್ಲಿ ಇದ್ದಾರೆ.

    ಹೌದು, ಲೈಗರ್ ಸೋಲಿನ ನಂತರ ವಿಜಯ್ ದೇವರಕೊಂಡ ಅವರು ಎರಡು ಸಿನಿಮಾಗಳು ನಿಂತುಕೊಂಡವು. ಪೂರಿ ಜಗನ್ನಾಥ್ ಜೊತೆಯೇ ಮಾಡಬೇಕಿದ್ದ ಸಿನಿಮಾ ಅರ್ಧಕ್ಕೆ ನಿಂತಿದೆ. ಸಮಂತಾ ಜೊತೆ ಮತ್ತೊಂದು ಸಿನಿಮಾ  ಮಾಡುತ್ತಿದ್ದರು. ಸದ್ಯಕ್ಕೆ ಅದು ಕೂಡ ಸ್ಥಗಿತಗೊಂಡಿದೆ. ಹಾಗಾಗಿ ಈಗ ಒಪ್ಪಿಕೊಂಡಿರುವ ಸಿನಿಮಾಗೆ ಮಹತ್ವ ಬಂದಿದೆ. ಈ ಸಿನಿಮಾವನ್ನು ಜೆರ್ಸಿ ಖ್ಯಾತಿಯ ನಿರ್ದೇಶಕ ಗೌತಮ್ ತಿನ್ನನೂರು ನಿರ್ದೇಶನ ಮಾಡುತ್ತಿದ್ದಾರೆ. ಇದನ್ನೂ ಓದಿ: ಮದುವೆ ಬಗ್ಗೆ ಮೌನ ಮುರಿದ ರಾಗಿಣಿ ದ್ವಿವೇದಿ

    ಈ ಸಿನಿಮಾದಲ್ಲಿ ವಿಜಯ್ ಪೊಲೀಸ್ ಅಧಿಕಾರಿಯ ಪಾತ್ರವನ್ನು ಮಾಡಲಿದ್ದಾರಂತೆ. ಅವರೇ ಸಿನಿಮಾದ ಪೋಸ್ಟರ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದ್ದಾರೆ. ಖಾಕಿ ಧರಿಸಿ ಮುಖಕ್ಕೆ ಮಾಸ್ಕರ್ ಧರಿಸಲಾದ ಹಾಗೂ ಬೆಂಕಿ ಹೊತ್ತಿ ಉರಿಯುತ್ತಿರುವ ಪೋಸ್ಟರ್ ವೊಂದನ್ನು ಅವರು ಶೇರ್ ಮಾಡಿದ್ದಾರೆ. ಅಂದಹಾಗೆ ಇದು ವಿಜಯ್ ಅವರ 12ನೇ ಸಿನಿಮಾ. ಈ ಚಿತ್ರಕ್ಕೆ ಇನ್ನೂ ಯಾವುದೇ ಹೆಸರಿಟ್ಟಿಲ್ಲ.

    ನಿರ್ದೇಶಕ ಗೌತಮ್ ಕೂಡ ಹಿಟ್ ಸಿನಿಮಾಗಳನ್ನು ಕೊಟ್ಟವರು. ಅಲ್ಲದೇ, ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕರು. ಅವರ ಸಿನಿಮಾಗಳ ಬಗ್ಗೆ ಯಾವಾಗಲೂ ನಿರೀಕ್ಷೆ ಇದ್ದೇ ಇರುತ್ತದೆ. ಜೊತೆಗೆ ವಿಜಯ್ ದೇವರಕೊಂಡ ಕೂಡ ಸೇರಿಕೊಂಡಿದ್ದರಿಂದ ಈ ಹೊಸ ಸಿನಿಮಾದ ಬಗ್ಗೆ ಮತ್ತಷ್ಟು ಕುತೂಹಲ ಹೆಚ್ಚಾಗಿದೆ. ಸದ್ಯದಲ್ಲೇ ಈ ಸಿನಿಮಾದ ಬಗ್ಗೆ ಚಿತ್ರತಂಡ ಮತ್ತಷ್ಟು ಮಾಹಿತಿಯನ್ನು ನೀಡಲಿದೆಯಂತೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಲೈಗರ್ ಸೋಲಿನ ನಂತರ ಪುರಿ ಕೈ ಹಿಡಿದ ಸಲ್ಮಾನ್ ಖಾನ್

    ಲೈಗರ್ ಸೋಲಿನ ನಂತರ ಪುರಿ ಕೈ ಹಿಡಿದ ಸಲ್ಮಾನ್ ಖಾನ್

    ದಕ್ಷಿಣದ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಲೈಗರ್ ಸೋಲಿನ ನಂತರ ಅಕ್ಷರಶಃ ಕನಲಿ ಹೋಗಿದ್ದರು. ಮೈತುಂಬಾ ಸಾಲ, ಸೋಲಿನ ಅವಮಾನ, ಕೈಯಲ್ಲಿದ್ದ ಒಂದು ಸಿನಿಮಾ ಕೂಡ ಕೈ ಬಿಟ್ಟು ಹೋಗಿತ್ತು. ಇಂತಹ ಸನ್ನಿವೇಶದಲ್ಲಿ ಪುರಿಯನ್ನು ಕೈ ಹಿಡಿಯುವವರು ಯಾರು ಎನ್ನುವ ಪ್ರಶ್ನೆ ಕೂಡ ಮೂಡಿತ್ತು. ಕನ್ನಡ, ತಮಿಳು, ತೆಲುಗಿನಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಪುರಿ ಅವರಿಗೆ ಇದೇ ಸಿನಿಮಾ ರಂಗವೇ ಮತ್ತೆ ಮೇಲಕ್ಕೆತ್ತುವುದೇ ಎಂದು ನಂಬಲಾಗಿತ್ತು. ಆದರೆ, ಅದು ಸುಳ್ಳಾದಂತೆ ಕಾಣುತ್ತಿದೆ.

    ಹೌದು, ಸದ್ಯ ಬಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿರುವ ತಾಜಾ ಸಮಾಚಾರ ಏನೆಂದರೆ, ಪುರಿ ಜಗನ್ನಾಥ್ ಅವರಿಗಾಗಿ ಸಲ್ಮಾನ್ ಖಾನ್ ಕಾಲ್‌ಶೀಟ್ ನೀಡಿದ್ದಾರೆ ಎನ್ನಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪುರಿ ಮತ್ತು ಸಲ್ಮಾನ್ ಖಾನ್ ಕಾಂಬಿನೇಷನ್ ನಲ್ಲಿ ಸಿನಿಮಾ ಒಂದು ಮೂಡಿ ಬಂದರೂ ಅಚ್ಚರಿಯಿಲ್ಲ. ಈಗಾಗಲೇ ಇಬ್ಬರ ಮಧ್ಯ ಮಾತುಕತೆ ನಡೆದಿದೆಯಂತೆ. ತಮಗೆ ಎಂತಹ ಚಿತ್ರ ಮಾಡಬೇಕು ಎಂದು ಸಲ್ಮಾನ್ ಹೇಳಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ : ಬೆಂಗಳೂರು ವಿಶ್ವವಿದ್ಯಾಲಯ ಬಿಕಾಂ ಪಠ್ಯದಲ್ಲಿ ಪುನೀತ್ ರಾಜಕುಮಾರ್

    ವಿಜಯ್ ದೇವರಕೊಂಡ ಮತ್ತು ಪುರಿ ಜಗನ್ನಾಥ್ ಕಾಂಬಿನೇಷನ್‌ನ ಲೈಗರ್ ಸಿನಿಮಾ ಅಂದುಕೊಂಡಷ್ಟು ಯಶಸ್ಸು ಕಾಣಲಿಲ್ಲ. ಬಾಕ್ಸ್ ಆಫೀಸಿನಲ್ಲೂ ಮಕಾಡೆ ಮಲಗಿತ್ತು. ನಿರ್ಮಾಪಕರಿಗೆ ಭಾರೀ ನಷ್ಟ ಮಾಡಿತ್ತು. ಈ ಸೋಲು ಅವರನ್ನು ಹತಾಷೆಗೆ ದೂಡಿತ್ತು. ಸಿನಿಮಾ ಬಿಡುಗಡೆ ನಂತರ ಅವರು ಎಷ್ಟೋ ದಿನಗಳ ಕಾಲ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲೇ ಇಲ್ಲ. ಇದೀಗ ಆ ಎಲ್ಲ ನೋವಿನಿಂದಲೂ ಅವರು ಆಚೆ ಬಂದಿದ್ದಾರೆ ಎಂದು ಹೇಳಲಾಗುತ್ತಿದ್ದು. ಹೊಸ ಸಿನಿಮಾದ ಕೆಲಸದಲ್ಲಿ ಅವರು ಸದ್ಯದಲ್ಲೇ ತೊಡಗಿಕೊಳ್ಳಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಚಿರಂಜೀವಿ ಮುಂದೆ ‘ಲೈಗರ್’ ಸೋಲಿನ ನೋವು ಹಂಚಿಕೊಂಡ ಪುರಿ ಜಗನ್ನಾಥ್

    ಚಿರಂಜೀವಿ ಮುಂದೆ ‘ಲೈಗರ್’ ಸೋಲಿನ ನೋವು ಹಂಚಿಕೊಂಡ ಪುರಿ ಜಗನ್ನಾಥ್

    ಕ್ಷಿಣದ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಇದೇ ಮೊದಲ ಬಾರಿಗೆ ತಮ್ಮ ಲೈಗರ್ (Liger) ಸಿನಿಮಾದ ಸೋಲಿನ ಕುರಿತು ಮಾತನಾಡಿದ್ದಾರೆ. ತೆಲುಗಿನ ಮೆಗಾಸ್ಟಾರ್ ಚಿರಂಜೀವಿ (Chiranjeevi) ಜೊತೆ ವಿಡಿಯೋ ಕಾಲ್ ನಲ್ಲಿ ಮಾತನಾಡಿರುವ ಪುರಿ, ತಮಗಾದ ನಷ್ಟ ಮತ್ತು ನೋವುಗಳನ್ನು ಹಂಚಿಕೊಂಡಿದ್ದು, ಸೋಲಿನಿಂದ ಆದಷ್ಟು ಹೊರ ಬರುವ ವಿಶ್ವಾಸವನ್ನೂ ಅವರು ವ್ಯಕ್ತ ಪಡಿಸಿದ್ದಾರೆ.

    ವಿಜಯ್ ದೇವರಕೊಂಡ ನಟನೆಯ ‘ಲೈಗರ್’ ಸಿನಿಮಾ ಭಾರತೀಯ ಸಿನಿಮಾ ರಂಗದಲ್ಲಿ ಭಾರೀ ನಿರೀಕ್ಷೆ ಮೂಡಿಸಿತ್ತು. ಸಿನಿಮಾ ರಿಲೀಸ್ ಗೂ ಮುನ್ನ ನೂರಾರು ಕೋಟಿ ಬಿಸ್ನೆಸ್ ಆಗಲಿದೆ ಎಂದು ಅಂದಾಜು ಮಾಡಲಾಗಿತ್ತು. ಹಾಗಾಗಿಯೇ ಡಿಜಿಟಲ್ ರೈಟ್ಸ್ ಇನ್ನೂರು ಕೋಟಿಗೆ ಕೇಳಿದರೂ, ಚಿತ್ರತಂಡ ಕೊಟ್ಟಿರಲಿಲ್ಲ. ಆ ಮಟ್ಟಿಗೆ ಸಿನಿಮಾದ ಮೇಲೆ ಚಿತ್ರತಂಡಕ್ಕೆ ವಿಶ್ವಾಸವಿತ್ತು. ಸಿನಿಮಾ ರಿಲೀಸ್ ನಂತರ ಆಗಿದ್ದೇ ಬೇರೆ. ಇದನ್ನೂ ಓದಿ:ಬಾಲಿವುಡ್ ಬದುಕಿಸಿದ ಶಾರುಖ್ ಖಾನ್ ಚಿತ್ರ: 100 ಕೋಟಿ ರೂಪಾಯಿಗೆ ಸೇಲ್

    ಲೈಗರ್ ಸಿನಿಮಾ ಪುರಿ ಜಗನ್ನಾಥ್ (Puri Jagannath) ಅವರಿಗೆ ಮತ್ತು ವಿಜಯ್ ದೇವರಕೊಂಡಗೆ (Vijay Devarakonda) ಬಾಲಿವುಡ್ ನಲ್ಲಿ ಭಾರೀ ಯಶಸ್ಸು ತಂದು ಕೊಡಲಿದೆ ಎಂದು ಹೇಳಲಾಗಿತ್ತು. ಹಾಗಾಗಿ ಭರ್ಜರಿಯಾಗಿಯೇ ಪ್ರಮೋಷನ್ ಕೂಡ ಮಾಡಲಾಗಿತ್ತು. ದೇಶದ ಅನೇಕ ಕಡೆ ಪ್ರಿ ರಿಲೀಸ್ ಇವೆಂಟ್ ಕೂಡ ಮಾಡಿ, ಸಾಕಷ್ಟು ಖರ್ಚು ಮಾಡಿದ್ದರು. ಆದರೆ, ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಹೀನಾಯವಾಗಿ ಸೋಲು ಕಂಡಿತು. ಈ ನೋವು ಇಡೀ ಚಿತ್ರತಂಡವನ್ನೇ ಬಾಧಿಸಿತ್ತು.

    ಲೈಗರ್ ಸಿನಿಮಾದ ನೋವಿನಲ್ಲಿದ್ದ ಪುರಿ ಜಗನ್ನಾಥ್ ಅವರು ಚಿರಂಜೀವಿಗೆ ಕಾಲ್ ಮಾಡಿ, ಆ ನೋವಿನ ವಿಷಯ ಹಂಚಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ತಮ್ಮ ಸಿನಿಮಾನೂ ಸೋತ ಬಗ್ಗೆ ಉದಾಹರಣೆ ಕೊಟ್ಟಿರುವ ಚಿರಂಜೀವಿ, ‘ನೀನು ಪ್ರತಿಭಾವಂತ ತಂತ್ರಜ್ಞ. ಸೋಲನ್ನು ಮನಸ್ಸಿಗೆ ಹಚ್ಚಿಕೊಳ್ಳಬೇಡ. ನನ್ನ ಒಂದು ಸಿನಿಮಾ ಸೋತಿತು. ಈಗ ಮತ್ತೊಂದು ಸಿನಿಮಾ ಗೆದ್ದಿದೆ. ನೀನೂ ಗೆಲ್ಲುತ್ತೀಯಾ’ ಎಂದು ಸಮಾಧಾನದ ಮಾತುಗಳನ್ನು ಆಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರಶ್ಮಿಕಾ- ವಿಜಯ್ ದೇವರಕೊಂಡ ಜೋಡಿಯನ್ನು ಮತ್ತೆ ಬೆಸೆದ ‘ಲೈಗರ್’ ಸೋಲು

    ರಶ್ಮಿಕಾ- ವಿಜಯ್ ದೇವರಕೊಂಡ ಜೋಡಿಯನ್ನು ಮತ್ತೆ ಬೆಸೆದ ‘ಲೈಗರ್’ ಸೋಲು

    ವಿಜಯ್ ದೇವರಕೊಂಡ (Vijay Devarakonda) ನಟನೆಯ ಲೈಗರ್ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಭಾರೀ ಸೋಲು ಕಂಡಿತು. ನಿರ್ದೇಶಕ ಪೂರಿ ಜಗನ್ನಾಥ್, ಕಾರ್ಯಕಾರಿ ನಿರ್ಮಾಪಕಿ ಚಾರ್ಮಿ ಹಾಗೂ ನಟ ವಿಜಯ್ ದೇವರಕೊಂಡ ಲೈಗರ್ ಸೋಲಿನ ಹೊಡೆತಕ್ಕೆ ತತ್ತರಿಸಿ ಹೋದರು. ಸೋಲಿನ ಕಾಮೆಂಟ್ ಕೇಳದೇ ಚಾರ್ಮಿ ಕೌರ್ ಸೋಷಿಯಲ್ ಮೀಡಿಯಾವನ್ನೇ ಬಿಡಬೇಕಾಯಿತು. ವಿಜಯ್ ದೇವರಕೊಂಡ ಮೀಡಿಯಾಗಳಿಂದ ತಪ್ಪಿಸಿಕೊಂಡು ಓಡಾಡಿದರು.

    ಲೈಗರ್ ಸೋಲು ಇಡೀ ಟೀಮ್ ಗೆ ಆಘಾತ ಮೂಡಿಸಿದ್ದು ಸತ್ಯ. ಆದರೆ, ವಿಜಯ್ ದೇವರಕೊಂಡ ಅವರಿಗೆ ಮತ್ತೆ ತಮ್ಮ ಹುಡುಗಿ ಸಿಗುವಂತೆ ಮಾಡಿದ್ದು ಅಷ್ಟೇ ಸತ್ಯ ಎನ್ನುತ್ತಿದೆ ತೆಲುಗು ಮತ್ತು ತಮಿಳು ಇಂಡಸ್ಟ್ರಿ. ಲೈಗರ್ (Liger) ಸೋಲಿನಿಂದ ಬೇಸತ್ತು ತುಂಬಾ ನೊಂದುಕೊಂಡಿದ್ದರಂತೆ ವಿಜಯ್ ದೇವರಕೊಂಡ. ಪೂರಿ ಜಗನ್ನಾಥ್ ಜೊತೆಗಿನ ಮತ್ತೊಂದು ಸಿನಿಮಾ ಕೂಡ ಅರ್ಧಕ್ಕೆ ನಿಂತು ಹೋಯಿತು. ಹೀಗಾಗಿ ವಿಜಯ್ ಡಿಪ್ರೆಶನ್ ಗೆ ಒಳಗಾಗಿದ್ದರಂತೆ. ಇದನ್ನೂ ಓದಿ:ಹಾಲಿವುಡ್‌ಗೆ ಯಶ್‌ ಎಂಟ್ರಿ? ವಿಶ್ವದ ಟಾಪ್‌ ರೇಸರ್‌ ಲೇವಿಸ್‌ ಹ್ಯಾಮಿಲ್ಟನ್‌ ಭೇಟಿ

    ಇಂತಹ ವೇಳೆಯಲ್ಲಿ ಮತ್ತೆ ವಿಜಯ್ ಗೆ ಕಾಲ್ ಮಾಡಿ ‘ಹಲೋ’ ಹೇಳಿದ್ದಾರಂತೆ ರಶ್ಮಿಕಾ ಮಂದಣ್ಣ (Rashmika Mandanna). ಬ್ರೇಕ್ ಅಪ್ (Love Breakup)ಮಾಡಿಕೊಂಡು ದೂರವೇ ಉಳಿದಿದ್ದ ರಶ್ಮಿಕಾ ಮತ್ತೆ ಕರೆ ಮಾಡಿದ್ದಕ್ಕೆ ವಿಜಯ್ ಸಂಭ್ರಮಿಸಿದ್ದಾರೆ. ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕಿದ್ದಾರೆ. ಈ ಸೋಲಿನ ನೋವಿನಿಂದ ಆಚೆ ಬರಲು ಟೂರ್ ಪ್ಲ್ಯಾನ್ ಮಾಡಿದ್ದಾರೆ. ಅದರಂತೆಯೇ ನಿನ್ನೆ ಇಬ್ಬರೂ ವಿಮಾನ ಏರಿದ್ದಾರೆ.

    ತೆಲುಗು ಮತ್ತು ತಮಿಳು ಮಾಧ್ಯಮಗಳು ವರದಿ ಮಾಡಿದಂತೆ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಇದೀಗ ಮಾಲ್ಡೀವ್ಸ್ ಗೆ (Maldives) ಹಾರಿದ್ದಾರೆ. ಇಬ್ಬರೂ ನಿನ್ನೆ ವಿಮಾನ ನಿಲ್ದಾಣದಲ್ಲಿ ಕೆಲವೇ ನಿಮಿಷಗಳ ಅಂತರದಲ್ಲಿ ಕಾಣಿಸಿಕೊಂಡು ಕುತೂಹಲ ಮೂಡಿಸಿದ್ದರು. ಮತ್ತೆ ಈ ರೀತಿ ಅವರಿಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳುವುದಕ್ಕೆ ಲೈಗರ್ ಸೋಲು ಕಾರಣ ಎಂದು ಹೇಳಲಾಗುತ್ತಿದೆ. ಇದು ಎಷ್ಟರ ಮಟ್ಟಿಗೆ ಸತ್ಯವೋ ಅವರೇ ಹೇಳಬೇಕು.

    Live Tv
    [brid partner=56869869 player=32851 video=960834 autoplay=true]

  • ದುಬಾರಿ ಸೀರೆಯಲ್ಲಿ ಮಿಂಚಿದ `ಬಾಹುಬಲಿ’ ನಟಿ ರಮ್ಯಾ ಕೃಷ್ಣನ್

    ದುಬಾರಿ ಸೀರೆಯಲ್ಲಿ ಮಿಂಚಿದ `ಬಾಹುಬಲಿ’ ನಟಿ ರಮ್ಯಾ ಕೃಷ್ಣನ್

    ಹುಭಾಷಾ ನಟಿ ರಮ್ಯಾ ಕೃಷ್ಣನ್ ( Ramya Krishnan) ಮತ್ತೆ ಸುದ್ದಿಯಲ್ಲಿದ್ದಾರೆ. ಸದಾ ಸಿನಿಮಾ ವಿಚಾರವಾಗಿ ಸುದ್ದಿಯಲ್ಲಿ ಇರುತ್ತಿದ್ದ ಈ ನಟಿ ಇದೀಗ ತಮ್ಮ ದುಬಾರಿ ಸೀರೆ ವಿಷ್ಯವಾಗಿ ಟಾಲಿವುಡ್‌ನಲ್ಲಿ ಸಖತ್ ಸುದ್ದಿಯಲ್ಲಿದ್ದಾರೆ.

     

    View this post on Instagram

     

    A post shared by Ramya Krishnan (@meramyakrishnan)

    `ಬಾಹುಬಲಿ’ (Bahubali) ಶಿವಗಾಮಿ ಎಂದೇ ರಮ್ಯಾ ಕೃಷ್ಣನ್ ಗುರುತಿಸಿಕೊಂಡಿದ್ದಾರೆ. ಆದರೆ ಇತ್ತೀಚೆಗೆ ರಮ್ಯಾ ಕೃಷ್ಣನ್ ನಟನೆಯ `ಲೈಗರ್’ (Liger) ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಸೋತಿತ್ತು. ವಿಜಯ್ ದೇವರಕೊಂಡ ತಾಯಿಯಾಗಿ ಪವರ್‌ಫುಲ್ ಪಾತ್ರದಲ್ಲಿ ರಮ್ಯಾ ಕಾಣಿಸಿಕೊಂಡಿದ್ದರು. ಇನ್ನು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಿರುವ ಈ ನಟಿ ಇತ್ತೀಚೆಗೆ ಖಾಸಗಿ ಶೋವೊಂದರಲ್ಲಿ ದುಬಾರಿ ಸೀರೆಯುಟ್ಟು ಬಂದಿದ್ದಾರೆ. ಅವರು ಧರಿಸಿದ್ದ ಗ್ರ್ಯಾಂಡ್ ಸೀರೆ ಸದ್ಯ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ.‌ ಇದನ್ನೂ ಓದಿ:ನಟ ರಮೇಶ್ ಅರವಿಂದ್‌ಗೆ ಗೌರವ ಡಾಕ್ಟರೇಟ್

    ಕಿರುತೆರೆ ರಿಯಾಲಿಟಿ ಶೋವೊಂದರಲ್ಲಿ ರಮ್ಯಾ ಕೃಷ್ಣನ್ ದುಬಾರಿ ಸೀರೆ ಧರಿಸಿದ್ದರು. ಪಿಂಕ್ ಕಲರ್ ವೆಲ್ವೆಟ್ ಸೀರೆಗೆ ಗೋಲ್ಡನ್ ಥ್ರೆಡ್ ಡಿಸೈನ್ ಮಾಡಿರುವ ಸೀರೆಯಲ್ಲಿ ನಟಿ ಮಿಂಚಿದ್ದರು. ಇನ್ನು 2,00,000 ರೂಪಾಯಿ ಬೆಲೆ ಬಾಳುವ ದುಬಾರಿ ಸೀರೆಯಲ್ಲಿ ನಟಿ ಶೋನಲ್ಲಿ ಎಂಟ್ರಿ ಕೊಟ್ಟಿದ್ದಾರೆ. 51ರ ವಯಸ್ಸಿನಲ್ಲೂ ಗ್ಲಾಮರಸ್‌ ಲುಕ್‌ನಲ್ಲಿ ಮಿಂಚಿರುವ ರಮ್ಯಾ ಕೃಷ್ಣನ್ ಅವರನ್ನ ನೋಡಿ, ಫ್ಯಾನ್ಸ್ ಫಿದಾ ಆಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]