Tag: Ligar

  • ಲೈಗರ್ ಚಿತ್ರಕ್ಕೆ ಅಕ್ರಮ ಹಣ: ಇಡಿ ವಿಚಾರಣೆ ಎದುರಿಸಿದ ವಿಜಯ್ ದೇವರಕೊಂಡ

    ಲೈಗರ್ ಚಿತ್ರಕ್ಕೆ ಅಕ್ರಮ ಹಣ: ಇಡಿ ವಿಚಾರಣೆ ಎದುರಿಸಿದ ವಿಜಯ್ ದೇವರಕೊಂಡ

    ಪುರಿ ಜಗನ್ನಾಥ್ ನಿರ್ದೇಶನದ ಲೈಗರ್ ಸಿನಿಮಾ ಹೀನಾಯವಾಗಿ ಸೋಲು ಕಂಡು, ಇಡೀ ಸಿನಿಮಾ ತಂಡದ ಮನಸ್ಸಿನಲ್ಲಿ ಕಹಿ ಸೌಧವನ್ನೇ ಕಟ್ಟಿದೆ. ಅದರಿಂದ ದೂರ ಬಂದು ಮತ್ತೊಂದು ಮಗ್ಗುಲಗೆ ಹೊರಳೋಣವೆಂದರೆ, ಇದೀಗ ಜಾರಿ ನಿರ್ದೇಶನಾಲಯವು (ಇಡಿ) ನಿದ್ದೆ ಮಾಡದಂತೆ ಮಾಡಿದೆ. ಲೈಗರ್ ಸಿನಿಮಾ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ವಿಚಾರ ಗೊತ್ತಿದ್ದದ್ದೆ. ಈ ಸಿನಿಮಾ ನೂರಾರು ಕೋಟಿ ಕಲೆಕ್ಷನ್ ಮಾಡಲಿದೆ ಎಂದು ಹೇಳಲಾಗಿತ್ತು. ಚಿತ್ರತಂಡಕ್ಕೆ ಆ ನಂಬಿಕೆಯೂ ಇತ್ತು. ಆದರೆ, ಅದು ಸುಳ್ಳಾಯಿತು.

    ಲೈಗರ್ ಸಿನಿಮಾ ಸೋತರೂ, ಅದು ಕೊಡುತ್ತಿರುವ ನೋವು ಅಷ್ಟಿಷ್ಟಲ್ಲ. ಸೋಲಿನ ನಂತರ ಈ ಸಿನಿಮಾಗೆ ಹಣ ಹೂಡಿದ್ದು ಹೇಗೆ ಎನ್ನುವ ವಿಚಾರ ಮುನ್ನೆಲೆಗೆ ಬಂದಿದೆ. ಅಕ್ರಮ ಹಣದಿಂದ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ ಎನ್ನುವುದು ಜಾರಿ ನಿರ್ದೇಶನಾಲಯದ ಆರೋಪ. ಹಾಗಾಗಿಯೇ ಈ ಸಿನಿಮಾದ ನಟ ವಿಜಯ್ ದೇವರಕೊಂಡ ಅವರಿಗೆ ಇಡಿ ನೋಟಿಸ್ ನೋಡಿತ್ತು. ವಿಚಾರಣೆಗೆ ಹಾಜರಾಗುವಂತೆ ತಿಳಿಸಿತ್ತು. ನಿನ್ನೆ ವಿಜಯ್ ದೇವರಕೊಂಡ ಹೈದರಾಬಾದ್‍ ನಲ್ಲಿರುವ ಇಡಿ ಕಚೇರಿಗೆ ಭೇಟಿ ನೀಡಿ ವಿಚಾರಣೆ ಎದುರಿಸಿದ್ದಾರೆ. ಇದನ್ನೂ ಓದಿ: ಬ್ಯಾನ್ ಆಕ್ರೋಶದ ಬೆನ್ನಲ್ಲೇ ವಿದೇಶಕ್ಕೆ ಹಾರಿದ ರಶ್ಮಿಕಾ ಮಂದಣ್ಣ

    ಲೈಗರ್ ಸಿನಿಮಾಗೆ ಬಳಸಿರುವ ಹಣವು ವಿದೇಶದಿಂದ ಹರಿದು ಬಂದಿದೆ ಎನ್ನುವುದು ಹಾಗೂ ಹಣ ವರ್ಗಾವಣೆಯಲ್ಲಿ ನಿಯಮ ಉಲ್ಲಂಘನೆ ಆಗಿದೆ ಎನ್ನುವುದು ಇಡಿ ಆರೋಪ. ಹಾಗಾಗಿಯೇ ಸಿನಿಮಾ ನಿರ್ದೇಶಕ ಪೂರಿ ಜಗನ್ನಾಥ್, ನಿರ್ಮಾಪಕಿ ಚಾರ್ಮಿ ಕೌರ್ ಹಾಗೂ ವಿಜಯ್ ದೇವರಕೊಂಡ ಸೇರಿದಂತೆ ಹಲವರಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ಈ ಹಿಂದೆಯೇ ಪೂರಿ ಮತ್ತು ಚಾರ್ಮಿ ಕೌರ್ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮುಂದೆ ಹಾಜರಾಗಿದ್ದರು. ಇದೀಗ ವಿಜಯ್ ದೇವರಕೊಂಡ ಕೂಡ ಅಧಿಕಾರಿಗಳ ಪ್ರಶ್ನೆಯನ್ನು ಎದುರಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ‘ಲೈಗರ್’ ಸಿನಿಮಾಗೆ ಹಣ ಎಲ್ಲಿಂದ ಬಂತು?: ನಟಿ, ನಿರ್ದೇಶಕನಿಗೆ ‘ಇಡಿ’ ಗ್ರಿಲ್

    ‘ಲೈಗರ್’ ಸಿನಿಮಾಗೆ ಹಣ ಎಲ್ಲಿಂದ ಬಂತು?: ನಟಿ, ನಿರ್ದೇಶಕನಿಗೆ ‘ಇಡಿ’ ಗ್ರಿಲ್

    ವಿಜಯ್ ದೇವರಕೊಂಡ ನಟಿಸಿದ್ದ, ಪುರಿ ಜಗನ್ನಾಥ್ ನಿರ್ದೇಶನ ಮಾಡಿರುವ ಲೈಗರ್ ಸಿನಿಮಾ ಹೇಳೊಕೆ ಹೆಸರಿಲ್ಲದಂತೆ ನೆಲಕಚ್ಚಿತು. ಬಾಕ್ಸ್ ಆಫೀಸಿನಿಂದ ನಯಾ ಪೈಸೆಯೂ ಲಾಭವಾಗಿ ಬರಲಿಲ್ಲ. ವಿಜಯ್ ದೇವರಕೊಂಡ ಕೂಡ ನಟನೆಯಾಗಿಯೂ ಗೆಲ್ಲಲಿಲ್ಲ. ಹಾಗಾಗಿ ಲೈಗರ್ ಟೀಮ್ ಮನೆಯಿಂದಾನೇ ಕೆಲವು ದಿನ ಆಚೆ ಬರಲಿಲ್ಲ. ಆನಂತರ ಲೈಗರ್ ಸೋಲನ್ನು ಒಬ್ಬೊಬ್ಬರೇ ಒಪ್ಪಿಕೊಳ್ಳುವುದಕ್ಕೆ ಶುರು ಮಾಡಿದರು. ಇನ್ನೇನು ಆ ಕಹಿಯನ್ನು ಮರೆತು ಹೊಸ ಸಿನಿಮಾದಲ್ಲಿ ತೊಡಗಿಸಿಕೊಳ್ಳುವ ಹೊತ್ತಲ್ಲಿ ಇಡಿ ಸಂಕಟ ಶುರುವಾಗಿದೆ.

    ನಿರ್ದೇಶಕ ಪುರಿ ಜಗನ್ನಾಥ್, ನಟಿ ಹಾಗೂ ಈ ಸಿನಿಮಾದ ಕಾರ್ಯಕಾರಿ ನಿರ್ಮಾಪಕ ಚಾರ್ಮಿ ಕೌರ್ ಹಿಂದೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಿದ್ದಿದ್ದು, ಸತತ 13 ಗಂಟೆಗಳ ಕಾಲ ಈ ಇಬ್ಬರನ್ನೂ ಇಡಿ ಅಧಿಕಾರಿಗಳು ಗ್ರಿಲ್ ಮಾಡಿದ್ದಾರೆ. ಲೈಗರ್ ಸಿನಿಮಾದ ನಿರ್ಮಾಣಕ್ಕೆ ಹಣವನ್ನು ಎಲ್ಲಿಂದ ತಂದಿದ್ದೀರಿ? ಹಣದ ಮೂಲ ಏನು ಎಂದು ಕೇಳಿದೆ. ಅಲ್ಲದೇ, ಸತತ 13 ಗಂಟೆಗಳ ಕಾಲ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದೆ. ಇದನ್ನೂ ಓದಿ:‘ಸಲಾರ್’ ಸಿನಿಮಾದಲ್ಲಿ ಕನ್ನಡದ ಯುವ ನಾಯಕ ಪ್ರಮೋದ್ ನಟಿಸಿದ್ದು ನಿಜ : ಪ್ರಶಾಂತ್ ನೀಲ್

    ಲೈಗರ್ ಸಿನಿಮಾದಿಂದ ದುಡ್ಡು ಬರದೇ ಇದ್ದರೂ, ಈ ಸಿನಿಮಾ ಮಾಡಲು ಹಣವನ್ನು ಎಲ್ಲಿಂದ ತಂದಿದ್ದೀರಿ? ಸಾಲ ಮಾಡಿದ್ದೀರಾ? ಯಾರು ಬಳಿ ಸಾಲ ಮಾಡಿದ್ದು? ಹಾಕಿರುವ ಬಂಡವಾಳ ಎಷ್ಟು? ವಾಪಸ್ಸು ಹಣ ಬಂದಿದ್ದು ಎಷ್ಟು? ಹೀಗೆ ನೂರಾರು ಪ್ರಶ್ನೆಗಳನ್ನು ಇಡಿ ಅಧಿಕಾರಿಗಳು ಪೂರಿ ಜಗನ್ನಾಥ್ ಮತ್ತು ಚಾರ್ಮಿಗೆ ಕೇಳಿದ್ದಾರೆ. ಅರ್ಧ ದಿನ ಇಡಿ ಅಧಿಕಾರಿಗಳ ಜೊತೆಯೇ ಇಬ್ಬರೂ ಕಳೆದಿದ್ದರು.

    Live Tv
    [brid partner=56869869 player=32851 video=960834 autoplay=true]

  • ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಗೆ ಜೀವ ಬೆದರಿಕೆ: ದೂರು ದಾಖಲು

    ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಗೆ ಜೀವ ಬೆದರಿಕೆ: ದೂರು ದಾಖಲು

    ಲೈಗರ್ (Ligar) ಸಿನಿಮಾಗೆ ಸಂಬಂಧಿಸಿದ ವಿವಾದ ಇದೀಗ ಜೀವ ಬೆದರಿಕೆ ಹಂತಕ್ಕೂ ಹೋಗಿದ್ದು, ತಮಗೆ ಜೀವ ಬೆದರಿಕೆ ಇದೆ ಎಂದು ನಿರ್ದೇಶಕ ಪುರಿ ಜಗನ್ನಾಥ್ (Puri Jagannath) ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ. ಸಿನಿಮಾ ವಿತರಕರಿಂದ ತಮಗೆ ಜೀವ ಬೆದರಿಕೆ ಇದೆ ಎಂದು ಚೆನ್ನೈನ ಜೂಬ್ಲಿ ಹಿಲ್ಸ್ ಪೊಲೀಸ್ ಠಾಣೆಗೆ ದೂರು (Complaint) ಸಲ್ಲಿಸಿದ್ದಾರೆ. ಆಗಸ್ಟ್ 25ಕ್ಕೆ ಬಿಡುಗಡೆ ಆಗಿದ್ದ ಲೈಗರ್ ಸಿನಿಮಾ ಭಾರೀ ಸೋಲು ಕಂಡಿತ್ತು. ವಿತರಕರಿಗೆ ಭಾರೀ ನಷ್ಟವನ್ನುಂಟು ಮಾಡಿತ್ತು.

    ಪುರಿ ಜಗನ್ನಾಥ್ ಮತ್ತು ವಿಜಯ್ ದೇವರಕೊಂಡ (Vijay Devarakonda) ಕಾಂಬಿನೇಷನ್ ನ ಈ ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಆ ಕಾರಣದಿಂದಾಗಿಯೇ ಅದ್ಧೂರಿ ಪ್ರಚಾರ ಮತ್ತು ಭಾರೀ ಸಂಖ್ಯೆಯ ಥಿಯೇಟರ್ ನಲ್ಲಿ ಚಿತ್ರವನ್ನು ಬಿಡುಗಡೆ ಮಾಡಲಾಯಿತು. ತುಂಬಾ ನಿರೀಕ್ಷೆಯ ಸಿನಿಮಾ ಎನ್ನುವ ಕಾರಣಕ್ಕಾಗಿ ದೊಡ್ಡ ಮೊತ್ತದ ಹಣಕೊಟ್ಟು ವಿತರಕರು ಈ ಸಿನಿಮಾವನ್ನು ಖರೀದಿಸಿದ್ದರು. ಆದರೆ, ಸಿನಿಮಾ ಸೋಲು ಕಂಡಿತ್ತು. ಇದನ್ನೂ ಓದಿ:ದೇಶ-ವಿದೇಶದಲ್ಲಿ ಮಾರ್ದನಿಸ್ತಿರೋ ಗಗ್ಗರ ಶಬ್ಧ- ಅಮೆರಿಕಾದಲ್ಲಿ ಎಂಟೂವರೆ ಕೋಟಿ ಬಾಚಿದ ಕಾಂತಾರ

    ನಷ್ಟಕ್ಕೆ ಸಂಬಂಧಿಸಿದಂತೆ ಮೊನ್ನೆಯಷ್ಟೇ ವಿತರಕರು ಪುರಿ ಜಗನ್ನಾಥ್ ಮನೆಯ ಮುಂದೆ ಧರಣಿ ಕೂರುವುದಾಗಿ ಹೇಳಿದ್ದರು. ಅದಕ್ಕೂ ಪ್ರತಿಕ್ರಿಯೆ ನೀಡಿದ್ದ ಪುರಿ, ಇಂತಹ ಬೆದರಿಕೆಗೆ ನಾನು ಬಗ್ಗುವುದಿಲ್ಲ. ಹೆದರುವುದೂ ಇಲ್ಲ ಎಂದಿದ್ದರು. ಇದೀಗ ಜೂಬ್ಲಿ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ವಿತರಕರಾದ ವರಂಗಲ್ ಶ್ರೀನು ಹಾಗೂ ಫೈನಾನ್ಸಿಯರ್ ಶೋಭನ್ ವಿರುದ್ಧ ದೂರು ದಾಖಲಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ‘ಲೈಗರ್’ ಸಿನಿಮಾ ಸೋಲು: ನಿರ್ದೇಶಕರ ಮನೆ ಮುಂದೆ ಧರಣಿಗೆ ನಿರ್ಧಾರ

    ‘ಲೈಗರ್’ ಸಿನಿಮಾ ಸೋಲು: ನಿರ್ದೇಶಕರ ಮನೆ ಮುಂದೆ ಧರಣಿಗೆ ನಿರ್ಧಾರ

    ಪುರಿ ಜಗನ್ನಾಥ್ (Puri Jagannath) ನಿರ್ದೇಶನದಲ್ಲಿ ಮೂಡಿ ಬಂದ ಲೈಗರ್(Ligar) ಸಿನಿಮಾ ನಿರ್ಮಾಪಕರಿಗೆ ಮಾತ್ರವಲ್ಲ, ವಿತರಕರಿಗೂ ಭಾರೀ ನಷ್ಟವನ್ನುಂಟು ಮಾಡಿತ್ತು. ಭಾರೀ ಬಜೆಟ್ ನಲ್ಲಿ ತಯಾರಾದ ಈ ಸಿನಿಮಾವನ್ನು ಬಿಡುಗಡೆ ಮುಂಚೆಯೇ ಕೆಲ ವಿತರಕರು ಭಾರೀ ಮೊತ್ತಕ್ಕೆ ವಿತರಣಾ ಹಕ್ಕುಗಳನ್ನು ಪಡೆದಿದ್ದರು. ಆದರೆ, ಸಿನಿಮಾ ಗೆಲ್ಲಲೇ ಇಲ್ಲ. ಹೀಗಾಗಿ ವಿತರಕರಿಗೆ ಸಾಕಷ್ಟು ನಷ್ಟವೇ ಆಯಿತು.

    ಇದೀಗ ನಷ್ಟ ಮಾಡಿಕೊಂಡ ವಿತರಕರು (Distributor) ಪುರಿ ಜಗನ್ನಾಥ್ ಮನೆಯ ಮುಂದೆ ಧರಣಿ ಕೂರುವುದಾಗಿ ಹೇಳಿದ್ದಾರೆ. ಹಾಗೇನಾದರೂ ಮಾಡಿದರೆ, ಒಂದು ಪೈಸೆ ಕೂಡ ಸಿಗುವುದಿಲ್ಲ ಎಂದು ಪುರಿ ಖಡಕ್ ಸಂದೇಶವನ್ನೇ ರವಾನಿಸಿದ್ದಾರೆ. ‘ನನ್ನ ಬ್ಲ್ಯಾಕ್ ಮೇಲ್ ಮಾಡುವುದಾಗಲಿ, ಹೆದರಿಸುವುದಾಗಲಿ ಮಾಡಿದರೆ ಒಂದು ಪೈಸೆ ಕೂಡ ಸಿಗುವುದಿಲ್ಲ’ ಎಂದು ಪುರಿ ಹೇಳಿದ್ದಾರೆ ಎನ್ನಲಾದ ಆಡಿಯೋ ತೆಲುಗು ಸಿನಿಮಾ ರಂಗದಲ್ಲಿ ಸಖತ್ ವೈರಲ್ ಆಗಿದೆ. ಇದನ್ನೂ ಓದಿ: ಹಿಂದುತ್ವದಲ್ಲೇ ಬ್ರಾಹ್ಮಣತ್ವವಿದೆ; ಪಬ್ಲಿಸಿಟಿಗೋಸ್ಕರ ನಟ ಚೇತನ್ ವಿವಾದಿತ ಹೇಳಿಕೆ – ಪೇಜಾವರ ಶ್ರೀ

    ಈ ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಮೊದಲ ವಾರವೇ ನೂರು ಕೋಟಿ ಕ್ಲಬ್ ಗೆ ಈ ಸಿನಿಮಾ ಸೇರಲಿದೆ ಎಂದು ಚಿತ್ರದ ನಾಯಕ ವಿಜಯ್ ದೇವರಕೊಂಡ ಹೇಳಿಕೊಂಡಿದ್ದರು. ಇದೊಂದು ಸೂಪರ್ ಹಿಟ್ ಸಿನಿಮಾ ಆಗಲಿದೆ ಎಂದು ಎಲ್ಲ ಕಡೆಯೂ ಹೇಳಿಕೊಂಡು ಬಂದಿದ್ದರು. ಆದರೆ, ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಸದ್ದೇ ಮಾಡಲಿಲ್ಲ. ಮೊದಲ ದಿನದಿಂದಲೇ ಮಕಾಡೆ ಮಲಗಿತು.

    ಲೈಗರ್ ಸಿನಿಮಾದ ಸೋಲು ಕೇವಲ ನಿರ್ಮಾಪಕರನ್ನು ಮಾತ್ರವಲ್ಲ, ವಿಜಯ್ ದೇವರಕೊಂಡ (Vijay Devarakonda) ಅವರನ್ನು ನಿದ್ದೆಗೆಡಿಸಿತ್ತು. ಸಹ ನಿರ್ಮಾಪಕಿ ಚಾರ್ಮಿ ಕೌರ್ ಕೂಡ ಸೋಲಿನ ನೋವಿನಲ್ಲಿ ಇದ್ದರು. ಇದೀಗ ವಿತರಕರು ಮತ್ತೆ ಚಿತ್ರತಂಡಕ್ಕೆ ಸಂಕಷ್ಟ ತಂದಿಟ್ಟಿದ್ದಾರೆ. ತಮಗಾದ ಸೋಲನ್ನು ಕಟ್ಟಿಕೊಡುವಂತೆ ಕೇಳಿಕೊಂಡಿದ್ದಾರೆ. ಇದಕ್ಕೆ ನಿರ್ಮಾಪಕರು ಸ್ಪಂದಿಸದೇ ಇದ್ದರೆ, ಧರಣಿ ಕೂರುವುದಾಗಿಯೂ ಹೇಳಿದ್ದಾರಂತೆ.

    Live Tv
    [brid partner=56869869 player=32851 video=960834 autoplay=true]

  • ವಿಜಯ್ ದೇವರಕೊಂಡ ‘ಜನ ಗಣ ಮನ’ ಅನ್ನುವುದು ಅನುಮಾನ : 8 ಕೋಟಿ ನೀರಿನಲ್ಲಿ ಹೋಮ

    ವಿಜಯ್ ದೇವರಕೊಂಡ ‘ಜನ ಗಣ ಮನ’ ಅನ್ನುವುದು ಅನುಮಾನ : 8 ಕೋಟಿ ನೀರಿನಲ್ಲಿ ಹೋಮ

    ಟ ವಿಜಯ್ ದೇವರಕೊಂಡ (Vijay Devarakonda) ಮತ್ತು ನಿರ್ದೇಶಕ ಪೂರಿ ಜಗನ್ನಾಥ್ ಕಾಂಬಿನೇಷನ್ ನ ‘ಲೈಗರ್’ (Ligar) ಸಿನಿಮಾ ಬಾಕ್ಸ್ ಆಫೀಸಿನಲ್ಲಿ (Box Office) ಮಕಾಡೆ ಮಲಗಿದೆ. ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ಈ ಸಿನಿಮಾ ಅತೀ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಘಟಾನುಘಟಿಗಳೇ ಈ ಸಿನಿಮಾದ ಬೆನ್ನಿಗೆ ನಿಂತಿದ್ದರು. ಆದರೆ, ಸಿನಿಮಾ ಅಂದುಕೊಂಡಷ್ಟು ಸದ್ದು ಮಾಡಲಿಲ್ಲ. ನಿರ್ಮಾಪಕರಿಗೂ ಕಾಸು ತಂದುಕೊಡಲಿಲ್ಲ. ಹೀಗಾಗಿ ಈ ಕಾಂಬಿನೇಷನ್ ನ ಮತ್ತೊಂದು ಸಿನಿಮಾ ಬರುವುದು ಅನುಮಾನ ಎನ್ನಲಾಗುತ್ತಿದೆ.

    ಲೈಗರ್ ಸಿನಿಮಾದ ಬೆನ್ನಲ್ಲೇ ವಿಜಯ್ ದೇವರಕೊಂಡು ಹಾಗೂ ಪೂರಿ ಜಗನ್ನಾಥ್ (Puri Jagannath) ಮತ್ತೊಂದು ಸಿನಿಮಾ ಘೋಷಣೆ ಮಾಡಿದ್ದರು. ಈ ಚಿತ್ರಕ್ಕೆ ‘ಜನ ಗಣ ಮನ’ ಎಂದು ಹೆಸರು ಇಡಲಾಗಿತ್ತು. ಅದ್ದೂರಿಯಾಗಿ ಮುಹೂರ್ತವನ್ನು ಮಾಡಿದ್ದರು. ಬರೋಬ್ಬರಿ ಎಂಟು ಕೋಟಿ ಖರ್ಚು ಮಾಡಿ ಕೆಲವು ದೃಶ್ಯಗಳನ್ನೂ ಶೂಟ್ ಮಾಡಿತ್ತು. ಆದರೆ, ಇದೀಗ ಆ ಸಿನಿಮಾ ಮುಂದುವರೆಯುವುದು ಡೌಟು ಎಂಬ ಸುದ್ದಿ ಹರಿದಾಡುತ್ತಿದೆ. ಇದನ್ನೂ ಓದಿ:ನಂದಿನಿ ಔಟ್ ಆದ್ಮೇಲೆ ಸಾನ್ಯ ಜೊತೆ ಜಶ್ವಂತ್ ಲವ್ವಿ-ಡವ್ವಿ: ರೂಪೇಶ್‌ಗೆ ಟೆನ್ಷನ್ ಶುರು

     

    ಮೊನ್ನೆಯಷ್ಟೇ ವಿಜಯ್ ದೇವರಕೊಂಡ ಬೆಂಗಳೂರಿಗೆ (Bangalore) ಆಗಮಿಸಿದ್ದರು. ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಬಂದ ವಿಜಯ್ ಅವರನ್ನು ಮಾಧ್ಯಮದವರು ‘ಜನ ಗಣ ಮನ’ (Jana Gana Mana) ಸಿನಿಮಾದ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಆ ಸಿನಿಮಾದ ಬಗ್ಗೆ ಮಾತನಾಡದ ವಿಜಯ್, ‘ಆ ವಿಷ್ಯ ಬಿಟ್ಟಾಕಿ, ಇದೀಗ ಬಂದಿರುವುದು ಪ್ರಶಸ್ತಿ ಸಮಾರಂಭಕ್ಕೆ. ಈ ಗಳಿಗೆಯನ್ನು ಎಂಜಾಯ್ ಮಾಡೋಣ’ ಎಂದು ಹೇಳಿ ತಪ್ಪಿಸಿಕೊಂಡಿದ್ದಾರೆ. ಈ ಸಿನಿಮಾದ ಬಗ್ಗೆ ಏನೂ ಮಾತನಾಡದೇ ಅಲ್ಲಿಂದ ತೆರಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅಪ್ಪು ಸಮಾಧಿಗೆ ಭೇಟಿ ನೀಡಿ ಪುಷ್ಪ ನಮನ ಸಲ್ಲಿಸಿದ ನಟ ವಿಜಯ್ ದೇವರಕೊಂಡ

    ಅಪ್ಪು ಸಮಾಧಿಗೆ ಭೇಟಿ ನೀಡಿ ಪುಷ್ಪ ನಮನ ಸಲ್ಲಿಸಿದ ನಟ ವಿಜಯ್ ದೇವರಕೊಂಡ

    ತೆಲುಗಿನ ಖ್ಯಾತ ನಟ ವಿಜಯ್ ದೇವರಕೊಂಡ ಇಂದು ಬೆಂಗಳೂರಿಗೆ ಆಗಮಿಸಿದ್ದಾರೆ. ಲೈಗರ್ ಸಿನಿಮಾದ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಳ್ಳಲು ಉದ್ಯಾನ ನಗರಕ್ಕೆ ಆಗಮಿಸಿರುವ ಅವರು, ಮೊದಲಿಗೆ ಅಪ್ಪು ಸಮಾಧಿಗೆ ತೆರಳಿ ಪುಷ್ಪ ನಮನ ಸಲ್ಲಿಸಿದರು. ಏರ್ ಪೋರ್ಟ್ ನಿಂದ ನೇರವಾಗಿಯೇ ಕಂಠೀರವ ಸ್ಟುಡಿಯೋಗೆ ಆಗಮಿಸಿದ ವಿಜಯ್ ದೇವರಕೊಂಡ, ಭಾವುಕರಾಗಿಯೇ ಅಪ್ಪು ಸಮಾಧಿಗೆ ನಮನ ಸಲ್ಲಿಸಿದರು.

    ಆಗಸ್ಟ್ 25 ರಂದು ದೇಶಾದ್ಯಂತ ರಿಲೀಸ್ ಆಗುತ್ತಿರುವ ಲೈಗರ್ ಸಿನಿಮಾದ ಪತ್ರಿಕಾಗೋಷ್ಠಿ ಮತ್ತು ಪ್ರಿ ರಿಲೀಸ್ ಇವೆಂಟ್ ಇಂದು ಬೆಂಗಳೂರಿನಲ್ಲಿ ನಡೆಯುತ್ತಿದ್ದು, ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ವಿಜಯ್ ದೇವರಕೊಂಡ, ಅನನ್ಯಾ ಪಾಂಡೆ, ನಟ ವಿಶ್, ನಿರ್ದೇಶಕ ಜಗನ್ನಾಥ್ ಪೂರಿ ಸೇರಿದಂತೆ ಹಲವರು ಬೆಂಗಳೂರಿಗೆ ಆಗಮಿಸಿದ್ದಾರೆ. ಅದಕ್ಕೂ ಮುನ್ನ ಎಲ್ಲರೂ ಅಪ್ಪು ಸಮಾಧಿಗೆ ಬಂದು ನಮನ ಸಲ್ಲಿಸಿದ್ದಾರೆ. ಇದನ್ನೂ ಓದಿ: ಕೊನೆಗೂ ಶಿವಣ್ಣ, ಅನುಶ್ರೀ ಭೇಟಿಯಾಗಿ ಆಸೆ ಈಡೇರಿಸಿಕೊಂಡ ಕಾಫಿನಾಡು ಚಂದು

    ವಿಜಯ್ ದೇವರಕೊಂಡ ಮತ್ತು ಅನನ್ಯಾ ಪಾಂಡೆ ಕಾಂಬಿನೇಷನ್ ನ ಮೊದಲ ಸಿನಿಮಾ ಇದಾಗಿದ್ದು, ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಈಗಾಗಲೇ ದೇಶದ ನಾನಾ ಭಾಗಗಳಲ್ಲಿ ಸಿನಿಮಾದ ಪ್ರಮೋಷನ್ ಶುರು ಮಾಡಿದೆ ಚಿತ್ರತಂಡ. ಈ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಖಡಕ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ಬಾಕ್ಸರ್ ಪಾತ್ರವನ್ನು ನಿರ್ವಹಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]