Tag: Lifetime Achievement Award

  • ಡಾ.ಸೋಮೇಶ್ವರ ಅವರಿಗೆ ಜೀವಮಾನ ಪುರಸ್ಕಾರ

    ಡಾ.ಸೋಮೇಶ್ವರ ಅವರಿಗೆ ಜೀವಮಾನ ಪುರಸ್ಕಾರ

    ಬೆಂಗಳೂರು: ವಿಜ್ಞಾನ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿರುವ ಡಾ. ಸಿ.ಎ. ವಿರಕ್ತ ಮಠ ಮತ್ತು ಡಾ. ಬಿ. ಶಿವಾನಂದಪ್ಪ ಅವರಿಗೆ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ 2022ನೇ ಸಾಲಿನ ಸಿ.ಎನ್.ಆರ್. ರಾವ್ ಜೀವಮಾನ ಸಾಧನೆ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

    ಮಂಗಳವಾರ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯಿಂದ ಆಯೋಜಿಸಿದ್ದ ಸಮಾರಂಭದಲ್ಲಿ ತಜ್ಞರಿಗೆ ಅಕಾಡೆಮಿ ಪ್ರಶಸ್ತಿ ಹಾಗೂ ಫೆಲೋಶಿಪ್‌ಗಳನ್ನು ಐಟಿ- ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಸಿ.ಎನ್. ಅಶ್ವಥ್‌ನಾರಾಯಣ ಅವರು ಪ್ರದಾನ ಮಾಡಿದರು.

    ಪ್ರೊ. ಕೆ.ವಿ. ರಾವ್ ಮತ್ತು ಡಾ. ನಾ. ಸೋಮೇಶ್ವರ ಅವರಿಗೆ ಅಕಾಡೆಮಿ ವತಿಯಿಂದ ವಿಜ್ಞಾನ ಸಂವಹನೆಗಾಗಿ ಕೊಡ ಮಾಡುವ ಜೀವಮಾನ ಪುರಸ್ಕಾರಗಳನ್ನು ನೀಡಲಾಯಿತು.

    ನಂತರ ಮಾತನಾಡಿದ ಸಚಿವರು, ವಿಜ್ಞಾನ ಮತ್ತು ತಂತ್ರಜ್ಞಾನಗಳಲ್ಲಿ ತೊಡಗಿಕೊಂಡಿರುವವರು ಸಮಾಜದ ವಾಸ್ತವ ಪರಿಸ್ಥಿತಿಗಳನ್ನು ಆಧರಿಸಿ ಸಂಶೋಧನೆ ಮಾಡಿದರೆ ಅದರಿಂದ ಸಮುದಾಯಗಳ ಸಬಲೀಕರಣ ಸುಗಮವಾಗುತ್ತದೆ ಎಂದರು.

    ಕರ್ನಾಟಕ ರಾಜ್ಯವು ಸಂಶೋಧನೆ ಮತ್ತು ನಾವಿನ್ಯತೆಯಲ್ಲಿ ಇಡೀ ದೇಶಕ್ಕೆ ಪ್ರಥಮ ಸ್ಥಾನದಲ್ಲಿದೆ. ಇದನ್ನು ಬೇರೆ ರಾಜ್ಯಗಳಿಗೆ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ಸಂಶೋಧನೆ ಮತ್ತು ನಾವಿನ್ಯತೆಗೆ ಸರ್ಕಾರವು ಸಾಕಷ್ಟು ಉತ್ತೇಜನ ಕೊಡುತ್ತಿದೆ ಎಂದು ಹೇಳಿದರು.

    ರಾಜ್ಯವು ನವೋದ್ಯಮ ವಲಯದಲ್ಲೂ ಕೂಡ ಭಾರತಕ್ಕೆ ನಂಬರ್ ಒನ್ ಆಗಿದ್ದು, ಈ ಸ್ಥಾನವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಬೇಕು. ಇದಕ್ಕಾಗಿ ಸರ್ಕಾರವು ವಿಜ್ಞಾನಿಗಳ ತಂತ್ರಜ್ಞಾನಿಗಳ ಮತ್ತು ಹೂಡಿಕೆದಾರರ ಸಹಕಾರವನ್ನು ಬಯಸುತ್ತದೆ. ಪ್ರಯೋಗಾಲಯಗಳಲ್ಲಿ ಸಿದ್ಧವಾಗುವ ವಿಜ್ಞಾನದ ಫಲಿತಗಳು ತಂತ್ರಜ್ಞಾನದ ಮೂಲಕ ಜನರನ್ನು ತಲುಪುತ್ತವೆ. ಇವು ಸಮುದಾಯಗಳ ಕೈಗೆ ಅಂತಿದ್ದರೆ ಕೆಟಕುವಂತೆ ಇದ್ದರೆ ಮಾತ್ರ ಸಂಶೋಧನೆಗಳಿಗೆ ಬೆಲೆ ಬರುತ್ತದೆ ಎಂದರು.

    ಗೌರವ ಫೆಲೋಶಿಪ್ ಪಡೆದವರು: ಸಿಎಲ್‌ಎಲ್ ಗೌಡ, ಡಿ.ಜೆ. ಭಾಗ್ಯರಾಜ್, ಸಿ.ಎಸ್. ಪ್ರಸಾದ್, ಎಸ್.ಎಸ್. ಹೊನ್ನಪ್ಪಗೋಳ್, ಲಲಿತ ಆರ್ ಗೌಡ, ಕೆ.ಎಂ. ಶಂಕರ್, ಬಿ. ತಿಮ್ಮೇಗೌಡ, ಮನೋಹರ ಕುಲಕರ್ಣಿ, ಬಾಲಸುಬ್ರಮಣಿಯನ್, ಟಿ.ವಿ. ರಾಮಚಂದ್ರ, ಎಸ್. ವಿಶ್ವನಾಥ್, ನವಕಾಂತ್ ಭಟ್, ಎ. ಆದಿಮೂರ್ತಿ, ಜಿ.ಡಿ. ವೀರಪ್ಪಗೌಡ, ಎ.ವಿ. ಕುರುಪದ್, ಆರ್.ಆರ್. ನವಲಗುಂದ, ಎ.ಕೆ. ಸೂದ್, ಎಸ್.ಪಿ. ದಂಡಿನ್, ಆರ್. ಉಮಾಶಂಕರ್, ಎಚ್. ಸುದರ್ಶನ್, ಹೆಚ್. ರಾಮಕೃಷ್ಣರಾವ್ ಮತ್ತು ಶ್ರೀದೇವಿ ಸಿಂಗ್ ಅವರಾಗಿದ್ದಾರೆ. ಇದನ್ನೂ ಓದಿ: ಪ್ರವೀಣ್ ಹಂತಕರು ಯಾರೆಂದು ಗೊತ್ತಾಗಿದೆ, ಶೀಘ್ರವೇ ಬಂಧನ ಮಾಡ್ತೇವೆ: ಆರಗ ಜ್ಞಾನೇಂದ್ರ

    ಫೆಲೋಶಿಪ್ ಪುರಸ್ಕೃತರು: ಅಬ್ರಹಾಂ ವರ್ಗೀಸ್, ಕೆ.ಎಂ. ಇಂದಿರೇಶ, ಎನ್.ಕೆ.ಎಸ್. ಗೌಡ, ಎಸ್.ಆರ್. ರಮೇಶ್, ಬಿ. ರಂಗಸ್ವಾಮಿ, ಕೆ. ವೆಂಕಟರಾಮನ್, ಎಚ್. ರೇವಣ್ಣ ಸಿದ್ದಪ್ಪ, ಎಸ್.ಜಿ. ಶ್ರೀಕಂಠೇಶ್ವರ ಸ್ವಾಮಿ, ಎಂ.ಬಿ. ರಜನಿ, ಎಂ. ಜೆಡ್ ಸಿದ್ದಿಕಿ, ಕೆ.ಎನ್.ಬಿ. ಮೂರ್ತಿ, ಕೆ.ಎಂ. ರೂಪಾ, ಎನ್.ಬಿ. ನಡುವಿನಮನಿ, ಅರುಣ್ ಇನಾಮ್ದಾರ್, ಸುಪರ್ಣ ರಾಯ್, ಜಿ. ಜಗದೀಶ್, ಎಂ.ಕೆ. ರಬಿನಾಯ್, ಕೆ.ಎನ್. ಅಮೃತೇಶ್, ರವಿಶಂಕರ್ ರೈ, ಕೃಷ್ಣ ಇಸಲೂರು, ವಿಶಾಲ್ ರಾವ್, ವಿಜಯಲಕ್ಷ್ಮಿ ಡೇಗಾ ಮತ್ತು ಜಗದೀಶ್ ಆರ್ ತೋನಣ್ಣನವರ್. ಫಿಲೋಶಿಪ್ ಪುರಸ್ಕೃತರಾಗಿದ್ದಾರೆ. ಇದನ್ನೂ ಓದಿ: ಹಿಜಬ್ ನಿಷೇಧದ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ವಿಳಂಬ: ಸಿಜೆಐ

    Live Tv
    [brid partner=56869869 player=32851 video=960834 autoplay=true]

  • ನಟ ರಾಘವೇಂದ್ರ ರಾಜ್‍ಕುಮಾರ್‌ಗೆ ಜೀವಮಾನ ಸಾಧನೆ ಪ್ರಶಸ್ತಿ

    ನಟ ರಾಘವೇಂದ್ರ ರಾಜ್‍ಕುಮಾರ್‌ಗೆ ಜೀವಮಾನ ಸಾಧನೆ ಪ್ರಶಸ್ತಿ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ರಾಘವೇಂದ್ರ ರಾಜ್‍ಕುಮಾರ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ ವತಿಯಿಂದ ಜೀವಮಾನ ಸಾಧನೆ ಪ್ರಶಸ್ತಿ ದೊರೆತಿದೆ.

    ragavendra rajkumar

    ಈ ಕುರಿತಂತೆ ರಾಘವೇಂದ್ರ ರಾಜ್‍ಕುಮಾರ್ ಅವರು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಪ್ರಶಸ್ತಿ ಸ್ವೀಕರಿಸಿದ ವೀಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ವೀಡಿಯೋದಲ್ಲಿ ಚಂದನವನದಲ್ಲಿ ರಾಘವೇಂದ್ರ ರಾಜ್‍ಕುಮಾರ್ ಅವರ ಜರ್ನಿಯನ್ನು ವಿವರಿಸಲಾಗಿದೆ. ಇದನ್ನೂ ಓದಿ: ವೈನ್ ಸ್ಟೋರ್ ಫ್ಯಾಮಿಲಿಯನ್ನು ಭೇಟಿಯಾದ ವೈಷ್ಣವಿ

    ragavendra rajkumar

    ವೀಡಿಯೋ ಜೊತೆಗೆ, ನಿನ್ನೆ ಬೆಂಗಳೂರಿನಲ್ಲಿ ನಡೆದ ಇನ್ನೋವೆಟಿವ್‌  ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ‘ದಾದಾ ಸಾಹೇಬ್ ಫಾಲ್ಕೆ ಎಂಎಸ್‍ಕೆ ಟ್ರಸ್ಟ್’ ವತಿಯಿಂದ ‘ಜೀವಮಾನ ಸಾಧನೆ ಪ್ರಶಸ್ತಿಯನ್ನು ನನಗೆ ನೀಡಿ ಗೌರವಿಸಿದ್ದಾರೆ. ಈ ಪ್ರಶಸ್ತಿಯು ಅಪ್ಪಾಜಿ, ಅಮ್ಮ, ಕುಟುಂಬ ವರ್ಗ ಹಾಗೂ ನನ್ನೆಲ್ಲಾ ಅಭಿಮಾನಿ ದೇವರುಗಳಿಗೆ ಅರ್ಪಿಸುತ್ತಿದ್ದೇನೆ. ತುಂಬು ಹೃದಯದ ಧನ್ಯವಾದಗಳು ಎಂದು ಕಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಎಷ್ಟು ದಿನ ಬದುಕಿರ್ತೀನೋ ಗೊತ್ತಿಲ್ಲ, ಮತಭಿಕ್ಷೆ ನೀಡಿ: ಹೆಚ್‍ಡಿಡಿ

    Raghavendra Rajkumar

    ವರನಟ ಡಾ. ರಾಜ್‍ಕುಮಾರ್‌ರವರ ಪ್ರೀತಿಯ ಸುಪುತ್ರರಲ್ಲಿ ರಾಘವೇಂದ್ರ ರಾಜ್‍ಕುಮಾರ್ ಅವರು ದ್ವಿತೀಯ ಪುತ್ರರಾಗಿದ್ದಾರೆ. ರಾಘವೇಂದ್ರರಾಜ್‍ಕುಮಾರ್ ಕನ್ನಡ ಚಿತ್ರರಂಗದಲ್ಲಿ ಗಾಯಕ ಹಾಗೂ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. 1974ರಲ್ಲಿ ಡಾ. ರಾಜ್‍ಕುಮಾರ್ ಅಭಿನಯಿಸಿದ್ದ ಶ್ರೀನಿವಾಸ ಕಲ್ಯಾಣ ಸಿನಿಮಾದಲ್ಲಿ ಬಾಲನಟರಾಗಿ ನಟಿಸಿದ್ದರು. ನಂತರ ಚಿರಂಜೀವಿ ಸುಧಾಕರ ಸಿನಿಮಾದ ಮೂಲಕ ನಾಯಕ ನಟನಾಗಿ ಚಂದನವನಕ್ಕೆ ಪಾದಾರ್ಪಣೆ ಮಾಡಿದರು. ನಂತರ 1989ರಲ್ಲಿ ಬಿಡುಗಡೆಗೊಂಡ ನಂಜುಂಡಿ ಕಲ್ಯಾಣ ಸಿನಿಮಾ ರಾಘವೇಂದ್ರ ರಾಜ್‍ಕುಮಾರ್ ಅವರಿಗೆ ಬಹುದೊಡ್ಡ ಹಿಟ್ ಜೊತೆಗೆ ನೇಮ್ ಹಾಗೂ ಫ್ರೇಮ್ ತಂದುಕೊಟ್ಟಿತ್ತು.

    ಇಲ್ಲಿಯವರೆಗೂ ರಾಘವೇಂದ್ರ ರಾಜ್‍ಕುಮಾರ್ ಅವರು 23 ಸಿನಿಮಾಗಳಲ್ಲಿ ಅಭಿನಯಿಸಿದ್ದು, ಸಾಕಷ್ಟು ಗೀತೆಗಳನ್ನು ಹಾಡಿದ್ದಾರೆ ಮತ್ತು 5 ಸಿನಿಮಾಗಳನ್ನು ನಿರ್ಮಿಸಿದ್ದಾರೆ. 2019ರಲ್ಲಿ ತೆರೆ ಕಂಡ ಅಮ್ಮನ ಮನೆ ಸಿನಿಮಾಕ್ಕಾಗಿ ರಾಘವೇಂದ್ರ ರಾಜ್‍ಕುಮಾರ್ ಅವರು ಉತ್ತಮ ನಟರಾಗಿ ಕರ್ನಾಟಕ ರಾಜ್ಯ ಪ್ರಶಸ್ತಿಯನ್ನು ಮೂಡಿಗೇರಿಸಿಕೊಂಡಿದ್ದಾರೆ. ಇದನ್ನೂ ಓದಿ: ಅ.21ರಿಂದ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿ ಊಟ – ಶಿಕ್ಷಣ ಇಲಾಖೆಯಿಂದ ಎಸ್‍ಒಪಿ ಜಾರಿ

    ragavendra rajkumar

    ಇದೀಗ ರಾಘವೇಂದ್ರ ರಾಜ್‍ಕುಮಾರ್ ಅವರ ಸಾಧನೆ ಮೆಚ್ಚಿ ‘ದಾದಾ ಸಾಹೇಬ್ ಫಾಲ್ಕೆ ಎಂಎಸ್‍ಕೆ ಟ್ರಸ್ಟ್’ ವತಿ ಜೀವಮಾನ ಸಾಧನೆ ಪ್ರಶಸ್ತಿ ನೀಡುವ ಮೂಲಕ ಗೌರವಿಸಿದೆ.