Tag: lifeguard staff

  • ಸಮುದ್ರದಲ್ಲಿ ಮುಳುಗುತ್ತಿದ್ದ ಒಂದೇ ಕುಟುಂಬದ 7 ಜನರ ರಕ್ಷಣೆ

    ಸಮುದ್ರದಲ್ಲಿ ಮುಳುಗುತ್ತಿದ್ದ ಒಂದೇ ಕುಟುಂಬದ 7 ಜನರ ರಕ್ಷಣೆ

    – ಪಿಂಡ ಪ್ರಧಾನಕ್ಕೆ ಬಂದಿದ್ದ ಓರ್ವನ ರಕ್ಷಣೆ

    ಕಾರವಾರ: ಸಮುದ್ರದಲ್ಲಿ ಮುಳುಗುತ್ತಿದ್ದ ಒಂದೇ ಕುಟುಂಬದ 7 ಜನ ಪ್ರವಾಸಿಗರು ಸೇರಿ ಒಟ್ಟು 8 ಜನರನ್ನು ರಕ್ಷಿಸಿದ ಘಟನೆ ಉತ್ತರಕನ್ನಡ (Uttara Kannada) ಜಿಲ್ಲೆಯ ಗೋಕರ್ಣ (Gokarna) ಮುಖ್ಯ ಕಡಲ ತೀರದಲ್ಲಿ ನಡೆದಿದೆ.

    ಲೈಫ್ ಗಾರ್ಡ್ ಸಿಬ್ಬಂದಿ ಪ್ರತ್ಯೇಕ ಘಟನೆಯಲ್ಲಿ ಗೋಕರ್ಣ ಪ್ರವಾಸಕ್ಕೆಂದು ಬಂದಿದ್ದ ಒಂದೇ ಕುಟುಂಬದ 7 ಮಂದಿ ಹಾಗೂ ಪಿಂಡ ಪ್ರಧಾನಕ್ಕೆಂದು ಬಂದಿದ್ದ ಓರ್ವನನ್ನು ರಕ್ಷಿಸಿದ್ದಾರೆ. ಪ್ರವಾಸಿಗರನ್ನು ಪರಶುರಾಮ (44), ರುಕ್ಮಿಣಿ (38), ಧೀರಜ್ (14), ಅಕ್ಷರ (14), ಖುಷಿ (13), ದೀಪಿಕಾ ಹಾಗೂ ನಂದ ಕಿಶೋರ (10) ಎಂದು ಗುರುತಿಸಲಾಗಿದೆ. ಕುಟುಂಬಸ್ಥರು ಹುಬ್ಬಳ್ಳಿಯಿಂದ ಗೋಕರ್ಣ ಪ್ರವಾಸಕ್ಕೆಂದು ಬಂದಿದ್ದರು. ಇದನ್ನೂ ಓದಿ: ಚೈತ್ರಾ ಕೋಟಿ ಡೀಲ್ ಪ್ರಕರಣ – ವಜ್ರದೇಹಿ ಮಠದ ಸ್ವಾಮೀಜಿಗೆ ಸಿಸಿಬಿ ನೋಟಿಸ್

    ಪಿಂಡ ಪ್ರಧಾನಕ್ಕೆಂದು ಬಂದಿದ್ದ ಹುಬ್ಬಳ್ಳಿಯ ಎಲ್.ವಿ.ಪಾಟೀಲ್ (30) ಎಂಬವರನ್ನು ಲೈಫ್ ಗಾರ್ಡ್ ಸಿಬ್ಬಂದಿ ರಕ್ಷಿಸಿದ್ದಾರೆ. ಲೈಫ್‌ಗಾರ್ಡ್ ಸಿಬ್ಬಂದಿ ಶಿವಪ್ರಸಾದ್ ಅಂಬಿಗ ಮತ್ತು ಲೋಕೇಶ್ ಹರಿಕಾಂತ ಎಂಬವರು ರಕ್ಷಣೆ ಮಾಡಿದ್ದು, ಘಟನೆಯ ಕುರಿತು ಗೋಕರ್ಣ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಅತ್ತಿಬೆಲೆ ಪಟಾಕಿ ದುರಂತ, ಮೂವರು ಅಧಿಕಾರಿಗಳು ಸಸ್ಪೆಂಡ್: ಡಿಸಿ, ಎಸ್‌ಪಿಗೆ ನೋಟಿಸ್‌

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನೀರು ಪಾಲಾಗುತ್ತಿದ್ದ ಒಂದೇ ಕುಟುಂಬದ 4 ಜೀವ ಉಳಿಸಿದ ಲೈಫ್‍ಗಾರ್ಡ್ ಸಿಬ್ಬಂದಿ

    ನೀರು ಪಾಲಾಗುತ್ತಿದ್ದ ಒಂದೇ ಕುಟುಂಬದ 4 ಜೀವ ಉಳಿಸಿದ ಲೈಫ್‍ಗಾರ್ಡ್ ಸಿಬ್ಬಂದಿ

    ಕಾರವಾರ: ಸಮುದ್ರದ ಅಲೆಗೆ ಸಿಲುಕಿ ನೀರು ಪಾಲಾಗುತ್ತಿದ್ದ ಒಂದೇ ಕುಟುಂಬದ ನಾಲ್ವರು ಪ್ರವಾಸಿಗರನ್ನ ಲೈಫ್‍ಗಾರ್ಡ್ ಸಿಬ್ಬಂದಿ ರಕ್ಷಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಓಂ ಬೀಚ್‍ನಲ್ಲಿ ಈ ಘಟನೆ ನಡೆದಿದ್ದು, ಹುಸೇನ್(14), ಸಹಝಾದ್(26), ಅಬ್ದುಲ್ಲಾ(20), ಬೇಪರಿ(42) ಪ್ರವಾಸಿಗರನ್ನು ಓಂ ಬೀಚ್ ಲೈಫ್‍ಗಾರ್ಡ್ ಸಿಬ್ಬಂದಿ ರಕ್ಷಿಸಿದ್ದಾರೆ. ಬೆಳಗಾವಿ ಮೂಲದ ಒಂದೇ ಕುಟುಂಬದ ಈ ನಾಲ್ವರು ನೀರುಪಾಲಾಗುತ್ತಿದ್ದದ್ದನ್ನು ಗಮನಿಸಿದ ಸಿಬ್ಬಂದಿ ತಕ್ಷಣ ನೀರಿಗೆ ಹಾರಿ ಅವರನ್ನು ರಕ್ಷಿಸಿ, ಜೀವವನ್ನು ಉಳಿಸಿದ್ದಾನೆ.

    ಈ ನಾಲ್ವರು ಬೀಚ್‍ನಲ್ಲಿ ನೀರಿನಲ್ಲಿ ಆಟವಾಡುತ್ತಿದ್ದರು. ಈ ವೇಳೆ ಬಾಲಕ ಹುಸೇನ್ ಮೊದಲು ಸಮುದ್ರದ ಅಲೆಗಳಿಗೆ ಸಿಲುಕಿ ಕೊಚ್ಚಿಹೋಗಿದ್ದಾನೆ. ಬಳಿಕ ಆತನನ್ನು ರಕ್ಷಿಸಲು ತೆರಳಿದ್ದ ಮೂವರೂ ಕೂಡ ಅಲೆಗಳ ರಭಸಕ್ಕೆ ಕೊಚ್ಚಿಹೋಗಿದ್ದಾರೆ. ತಕ್ಷಣ ಸ್ಥಳದಲ್ಲಿದ್ದ ಲೈಫ್‍ಗಾರ್ಡ್ ಸಿಬ್ಬಂದಿ ಸಮುದ್ರಕ್ಕೆ ಹಾರಿ ಅವರನ್ನು ರಕ್ಷಿಸಿ, 4 ಜೀವಕ್ಕೆ ಪುನರ್ಜನ್ಮ ನೀಡಿದ್ದಾರೆ.

    ತನ್ನ ಜೀವವನ್ನು ಪಣಕ್ಕಿಟ್ಟು ಪ್ರವಾಸಿಗರ ಜೀವವನ್ನು ಉಳಿಸಿದ ಸಿಬ್ಬಂದಿಯ ಶೌರ್ಯ ಎಲ್ಲರ ಮನ ಗೆದ್ದಿದೆ.