Tag: life threat

  • ಭೂಗಳ್ಳರಿಂದ ಮಳವಳ್ಳಿ ಶಾಸಕರಿಗೆ ಜೀವ ಬೆದರಿಕೆ – ಕೆಡಿಪಿ ಸಭೆಯಲ್ಲೇ ನರೇಂದ್ರಸ್ವಾಮಿ ಆತಂಕ

    ಭೂಗಳ್ಳರಿಂದ ಮಳವಳ್ಳಿ ಶಾಸಕರಿಗೆ ಜೀವ ಬೆದರಿಕೆ – ಕೆಡಿಪಿ ಸಭೆಯಲ್ಲೇ ನರೇಂದ್ರಸ್ವಾಮಿ ಆತಂಕ

    ಮಂಡ್ಯ: ಇತ್ತೀಚೆಗೆ ದೇಶದಾದ್ಯಂತ ಕರ್ನಾಟಕ ಸರ್ಕಾರ ಸಾಕಷ್ಟು ವಿಚಾರದಲ್ಲಿ ಸುದ್ದಿಯಲ್ಲಿದೆ. ಅದರಲ್ಲೂ ರಾಜ್ಯದ ಕಾನೂನು ವ್ಯವಸ್ಥೆ ನಾನಾ ರೀತಿಯ ಆಯಾಮಗಳಲ್ಲಿ ಚರ್ಚೆಯಾಗ್ತಿದೆ. ಇದರ ನಡುವೆಯೇ, ರಾಜ್ಯದ ಪ್ರಭಾವಿ ಕಾಂಗ್ರೆಸ್‌ ಶಾಸಕರೊಬ್ಬರ (Congress MLA) ಆತಂಕಕಾರಿ ಹೇಳಿಕೆ, ಚರ್ಚೆಯ ಗಂಭೀರತೆ ಪ್ರಶ್ನೆ ಮಾಡುವಂತೆ ಮಾಡಿದೆ.

    ನಿನ್ನೆಯಷ್ಟೇ ಸಕ್ಕರೆನಾಡು ಮಂಡ್ಯ ಜಿಲ್ಲೆಯ ಅಭಿವೃದ್ಧಿ ಕಾಮಗಾರಿಗಳ ಸಂಬಂಧ ಕೆಡಿಪಿ ಸಭೆ ನಡೆಯಿತು. ಈ ಸಭೆಯಲ್ಲಿ ಪಾಲ್ಗೊಂಡಿದ್ದ ಮಳವಳ್ಳಿ ಕ್ಷೇತ್ರದ ಶಾಸಕ ಪಿ.ಎಂ.ನರೇಂದ್ರಸ್ವಾಮಿ (PM Narendraswamy), ಗಂಭೀರ ವಿಚಾರವೊಂದನ್ನ ಪ್ರಸ್ತಾಪಿಸಿದ್ದಾರೆ.

    ಮಂಡ್ಯದ ಜಿಲ್ಲಾ ಪಂಚಾಯಿತಿ ಕಾವೇರಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯ ಅಧ್ಯಕ್ಷತೆಯನ್ನ ಸಚಿವ ಚಲುವರಾಯಸ್ವಾಮಿ ವಹಿಸಿದ್ರು. ಸಭೆಯಲ್ಲಿ ಭಾಗವಹಿಸಿದ್ದ ಶಾಸಕರು, ತಮಗೆ ಭೂಗಳ್ಳರಿಂದ ಜೀವ ಬೆದರಿಕೆ ಇರೋ ವಿಚಾರ ಪ್ರಸ್ತಾಪಿಸಿದ್ದಾರೆ. ಇತ್ತೀಚೆಗೆ ಶಾಸಕ ನರೇಂದ್ರಸ್ವಾಮಿ ತಮ್ಮ ಸ್ವಕ್ಷೇತ್ರ ಮಳವಳ್ಳಿ ತಾಲೂಕಿನಲ್ಲಿ ನಡೆದಿರುವ ಭೂಗಳ್ಳತನದ ವಿರುದ್ಧ ಧ್ವನಿ ಎತ್ತಿದ್ರು. ಮಳವಳ್ಳಿ ತಾಲೂಕು ಒಂದರಲ್ಲೇ 2,500 ಎಕರೆಗೂ ಹೆಚ್ಚಿನ ಸರ್ಕಾರಿ ಆಸ್ತಿಯನ್ನ ಭೂಗಳ್ಳರು ಕಬಳಿಸಿದ್ದಾರೆ ಅಂತಾ ಆರೋಪಿಸಿದ್ರು.

    ಈ ಬಗ್ಗೆ ಸದನದಲ್ಲೂ ಚರ್ಚಿಸಿದ ಪರಿಣಾಮ ಸರ್ಕಾರ ತನಿಖಾ ತಂಡ ಕೂಡ ರಚಿಸಿತ್ತು. ತನಿಖಾ ತಂಡದ ವರದಿ ಆಧರಿಸಿ, ಭೂಗಳ್ಳರ ಪಾಲಾಗಿದ್ದ ಸುಮಾರು 800 ಎಕರೆ ಸರ್ಕಾರಿ ಭೂಮಿ ಮತ್ತೆ ಸರ್ಕಾರದ ವಶಕ್ಕೆ ಸೇರಿದೆ. ಇದು ಭೂಗಳ್ಳರ ಆಕ್ರೋಶಕ್ಕೆ ಕಾರಣವಾಗಿದ್ದು ಶಾಸಕ ನರೇಂದ್ರಸ್ವಾಮಿ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದಾರಂತೆ. ಈ ವಿಚಾರವನ್ನ ಸಚಿವ, ಶಾಸಕರು, ಅಧಿಕಾರಿಗಳ ಸಮ್ಮುಖದಲ್ಲೇ ಪ್ರಸ್ತಾಪಿಸಿದ್ದಾರೆ.

    ಇನ್ನೂ ಶಾಸಕ ಪಿ.ಎಂ ನರೇಂದ್ರಸ್ವಾಮಿಗೆ ಥ್ರೆಟ್ (Life Threat) ಇರುವ ಬಗ್ಗೆ ಸ್ವತಃ ಶಾಸಕರು ಸಭೆಯಲ್ಲಿ ಇಂಚಿಂಚೂ ಮಾಹಿತಿ ಬಿಚ್ಚಿಟ್ಟಿದ್ದಾರೆ. ಈಗಾಗಲೇ ಮಂಡ್ಯದಲ್ಲಿ ಭೂಗಳ್ಳರ ಬಗ್ಗೆ ಸಾಕಷ್ಟು ಆರೋಪಗಳಿವೆ. ಈ ನಡುವೆ ಶಾಸಕರಿಗೆ ಜೀವ ಬೆದರಿಕೆ ಹಾಕುವಷ್ಟು ಹಂತಕ್ಕೆ ತಲುಪಿದೆಯಾ ಎಂಬ ಚರ್ಚೆ ಶುರುವಾಗಿದೆ. ಸಮಯ ಬಂದಾಗ ದಾಖಲೆ ಬಿಡುಗಡೆ ಮಾಡುವುದಾಗಿ ನರೇಂದ್ರಸ್ವಾಮಿ ಹೇಳಿಕೆ ನೀಡಿದ್ದು, ಇದು ಮುಂದೆ ಯಾವ ಹಂತ ತಲುಪಲಿದೆ ಕಾದು ನೋಡ್ಬೇಕಿದೆ.

  • ನಟ ಶಾರುಖ್ ಖಾನ್‌ಗೆ ಜೀವ ಬೆದರಿಕೆ ಪ್ರಕರಣ – ಛತ್ತೀಸ್‌ಗಢದಲ್ಲಿ ಆರೋಪಿ ಅರೆಸ್ಟ್

    ನಟ ಶಾರುಖ್ ಖಾನ್‌ಗೆ ಜೀವ ಬೆದರಿಕೆ ಪ್ರಕರಣ – ಛತ್ತೀಸ್‌ಗಢದಲ್ಲಿ ಆರೋಪಿ ಅರೆಸ್ಟ್

    ರಾಯಪುರ: ಬಾಲಿವುಡ್ ನಟ ಶಾರುಖ್ ಖಾನ್‌ಗೆ (Shah Rukh Khan) ಜೀವ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಛತ್ತೀಸ್‌ಗಢ (Chhattisgarh) ರಾಯಪುರದಲ್ಲಿ (Raipur) ಮುಂಬೈ(Mumbai) ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಆರೋಪಿಯನ್ನು ವಕೀಲ ಮೊಹಮ್ಮದ್ ಫೈಜಾನ್ ಖಾನ್ ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಟಾಕ್ಸಿಕ್ ಸಿನಿಮಾ ಸೆಟ್‍ಗೆ ಮರಗಳ ಮಾರಣಹೋಮ – ಎಫ್‍ಐಆರ್ ದಾಖಲು

    ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್‌ಗೆ ಅಪರಿಚಿತ ವ್ಯಕ್ತಿಯಿಂದ ಕೊಲೆ ಬೆದರಿಕೆ ಕರೆಯೊಂದು ಬಂದಿತ್ತು. ನ.5 ರಂದು ಮಧ್ಯಾಹ್ನ 1:20ರ ಸುಮಾರಿಗೆ ಮುಂಬೈನ ಬಾಂದ್ರಾ ಪೊಲೀಸರಿಗೆ ಕರೆ ಮಾಡಿ ವ್ಯಕ್ತಿ 50 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದ.

    ಛತ್ತೀಸ್‌ಗಢದ ರಾಯಪುರದ ಫೈಜಾನ್ ಖಾನ್ ಎಂಬುವರ ಹೆಸರಿನಲ್ಲಿ ನೋಂದಾಯಿಸಲಾದ ಮೊಬೈಲ್ ಸಂಖ್ಯೆಯಿಂದ ಬೆದರಿಕೆ ಕರೆ ಬಂದಿತ್ತು. ಈ ಸಂಬಂಧ ಫೈಜಾನ್ ಖಾನ್ ಅವರನ್ನು ಪೊಲೀಸರು ವಿಚಾರಣೆಗೆ ಕರೆಯಿಸಿದ್ದರು. ವಿಚಾರಣೆಯಲ್ಲಿ ತಾನು ವಕೀಲನಾಗಿದ್ದು, ನ.2 ರಂದು ಮೊಬೈಲ್ ಕಳ್ಳತನವಾಗಿದೆ. ಈ ಬಗ್ಗೆ ದೂರು ದಾಖಲಾಗಿದೆ. ಶಾರುಖ್ ಖಾನ್‌ಗೆ ಬೆದರಿಕೆ ಹಾಕಲು ಯಾರೋ ಅದನ್ನು ದುರ್ಬಳಕೆ ಮಾಡಿಕೊಂಡಿರಬಹುದು ಎಂದು ಹೇಳಿದ್ದನು.

    ಅದಾದ ಬಳಿಕ ತನಗೆ ಬೆದರಿಕೆ ಬರುತ್ತಿರುವ ಹಿನ್ನೆಲೆ ಸುರಕ್ಷತೆ ಒದಗಿಸುವಂತೆ ಪೊಲೀಸರಿಗೆ ಮನವಿ ಮಾಡಿದ್ದ. ಜೊತೆಗೆ ಸುರಕ್ಷತೆಯ ನೆಪದಲ್ಲಿ ಎರಡು ಬಾರಿ ವಿಚಾರಣೆಗೆ ಗೈರು ಹಾಜರಾಗಿದ್ದ. ಇದೀಗ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದು, ಭಾರತೀಯ ನ್ಯಾಯ ಸಂಹಿತೆಯ 308(4), 351(3)(4) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

    ಕಳೆದ ವರ್ಷ ಅಕ್ಟೋಬರ್‌ನಲ್ಲಿ ಶಾರುಖ್ ಖಾನ್ ಅವರಿಗೆ ಜೀವ ಬೆದರಿಕೆ ಬಂದಿತ್ತು. ಅದಾದ ಬಳಿಕ ಅವರ ಭದ್ರತೆಯನ್ನು Y+ ಮಟ್ಟಕ್ಕೆ ಹೆಚ್ಚಿಸಲಾಯಿತು. ದಿನದ 24 ಗಂಟೆ ಆರು ಶಸ್ತ್ರಸಜ್ಜಿತ ಸಿಬ್ಬಂದಿಗಳ ಜೊತೆಯಲ್ಲಿ ಇರುವುದನ್ನು ಖಚಿತಪಡಿಸುತ್ತದೆ. ಇದಕ್ಕೂ ಮೊದಲು ಶಾರುಖ್ ಖಾನ್ ಇಬ್ಬರು ಶಸ್ತ್ರಸಜ್ಜಿತ ಭದ್ರತಾ ಸಿಬ್ಬಂದಿಗಳನ್ನು ಹೊಂದಿದ್ದರು.ಇದನ್ನೂ ಓದಿ: ಆರ್‌ಡಿಎಕ್ಸ್ ಇಟ್ಟು ಅಯೋಧ್ಯೆಯ ರಾಮಮಂದಿರ ಸ್ಫೋಟಿಸುವ ಬೆದರಿಕೆ

  • ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್‌ಗೆ ಕೊಲೆ ಬೆದರಿಕೆ – 50 ಲಕ್ಷಕ್ಕೆ ಬೇಡಿಕೆ

    ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್‌ಗೆ ಕೊಲೆ ಬೆದರಿಕೆ – 50 ಲಕ್ಷಕ್ಕೆ ಬೇಡಿಕೆ

    ಮುಂಬೈ: ಸಲ್ಮಾನ್ ಖಾನ್ (Salman Khan) ಬಳಿಕ ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್‌ಗೆ (Shah Rukh Khan) ವ್ಯಕ್ತಿಯೊಬ್ಬ ಕೊಲೆ ಬೆದರಿಕೆ ಹಾಕಿದ್ದಾನೆ.

    ಬಾಲಿವುಡ್ ನಟ ಸಲ್ಮಾನ್ ಖಾನ್ ಬಳಿಕ ಇದೀಗ ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್‌ಗೆ ಅಪರಿಚಿತ ವ್ಯಕ್ತಿಯಿಂದ ಕೊಲೆ ಬೆದರಿಕೆ ಕರೆಯೊಂದು ಬಂದಿದೆ. ಮುಂಬೈನ ಬಾಂದ್ರಾ ಪೊಲೀಸರಿಗೆ (Bandra Police) ಕರೆ ಮಾಡಿರುವ ವ್ಯಕ್ತಿ ಐವತ್ತು ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾನೆ. ಇದರ ಬೆನ್ನಲ್ಲೇ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಚುಮು ಚುಮು ಚಳಿಯಲ್ಲಿ ಓಡಾಡಿದ ಬೆಟ್ಟದ ಹುಲಿ

    ಛತ್ತೀಸ್‌ಗಢದ (Chattisgarh) ರಾಯಪುರದ ಫೈಜಾನ್ ಖಾನ್ ಎಂಬುವರ ಹೆಸರಿನಲ್ಲಿ ನೋಂದಾಯಿಸಲಾದ ಮೊಬೈಲ್ ಸಂಖ್ಯೆಯಿಂದ ಬೆದರಿಕೆ ಕರೆ ಸ್ವೀಕರಿಸಲಾಗಿದೆ. ಈ ಸಂಬಂಧ ಫೈಜಾನ್ ಖಾನ್‌ನನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ವಿಚಾರಣೆಯಲ್ಲಿ ತಾನು ವಕೀಲನಾಗಿದ್ದು, ನ.2 ರಂದು ಮೊಬೈಲ್ ಕಳ್ಳತನವಾಗಿದೆ. ಈ ಬಗ್ಗೆ ದೂರು ದಾಖಲಾಗಿದೆ. ಶಾರುಖ್ ಖಾನ್‌ಗೆ ಬೆದರಿಕೆ ಹಾಕಲು ಯಾರೋ ಅದನ್ನು ದುರ್ಬಳಕೆ ಮಾಡಿಕೊಂಡಿರಬಹುದು ಎಂದು ಹೇಳಿದ್ದಾನೆ ಎನ್ನಲಾಗಿದೆ.

    ಕರೆ ಮಾಡಿದ ವ್ಯಕ್ತಿಗೆ ಆತನ ಗುರುತು ಮತ್ತು ಸ್ಥಳದ ಬಗ್ಗೆ ಪೊಲೀಸರು ಪ್ರಶ್ನಿಸಿದ್ದಾರೆ. ಆದ ಆತ ನನ್ನನ್ನು “ಹಿಂದೂಸ್ತಾನಿ” ಎಂದು ಕರೆಯಲು ಪೊಲೀಸರಿಗೆ ತಿಳಿಸಿದ್ದಾನೆ. ನ.5 ರಂದು ಮಧ್ಯಾಹ್ನ 1:20ರ ಸುಮಾರಿಗೆ ಕರೆ ಮಾಡಿ ಈ ಬೆದರಿಕೆ ಹಾಕಲಾಗಿದೆ ಎಂದು ಮೂಲಗಳು ಹೇಳಿವೆ.

    ಕಳೆದ ವರ್ಷ ಅಕ್ಟೋಬರ್‌ನಲ್ಲಿ ಶಾರುಖ್ ಖಾನ್ ಅವರಿಗೆ ಜೀವ ಬೆದರಿಕೆ ಬಂದಿತ್ತು. ಅದಾದ ಬಳಿಕ ಅವರ ಭದ್ರತೆಯನ್ನು ಙ+ ಮಟ್ಟಕ್ಕೆ ಹೆಚ್ಚಿಸಲಾಯಿತು. ದಿನದ 24 ಗಂಟೆ ಆರು ಶಸ್ತ್ರಸಜ್ಜಿತ ಸಿಬ್ಬಂದಿಗಳ ಜೊತೆಯಲ್ಲಿ ಇರುವುದನ್ನು ಖಚಿತಪಡಿಸುತ್ತದೆ. ಇದಕ್ಕೂ ಮೊದಲು ಶಾರುಖ್ ಖಾನ್ ಇಬ್ಬರು ಶಸ್ತ್ರಸಜ್ಜಿತ ಭದ್ರತಾ ಸಿಬ್ಬಂದಿಗಳನ್ನು ಹೊಂದಿದ್ದರು.

    ಸಲ್ಮಾನ್ ಖಾನ್‌ಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಬೆದರಿಕೆ ಬಂದ ಬೆನ್ನಲ್ಲೇ ಹಲವಾರು ವ್ಯಕ್ತಿಗಳು ಮುಂಬೈ ಟ್ರಾಫಿಕ್ ಪೊಲೀಸರಿಗೆ ಸಂದೇಶ ಕಳುಹಿಸಿ ಸಲ್ಮಾನ್ ಖಾನ್ ಹತ್ಯೆ ಮಾಡುವ ಬೆದರಿಕೆ ಹಾಕಿದ್ದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಈ ವ್ಯಕ್ತಿಗಳನ್ನು ಬಂಧಿಸಿದ್ದಾರೆ. ಇಂತಹದೇ ಪ್ರಕರಣದಲ್ಲಿ ಇತ್ತೀಚಿಗೆ ತುಮಕೂರು ಮೂಲದ ವಿಕ್ರಮ್ ಎನ್ನುವವರನ್ನು ಪೊಲೀಸರು ಬಂಧಿಸಿದ್ದರು.ಇದನ್ನೂ ಓದಿ: Kodagu | ಬಸ್‌ ಸೌಲಭ್ಯದ ಕೊರತೆ – ವಿದ್ಯಾರ್ಥಿಗಳಿಗೆ ಸಂಕಷ್ಟ

  • ನಟ ಸಲ್ಮಾನ್ ಖಾನ್‌ಗೆ ಮತ್ತೆ ಜೀವ ಬೆದರಿಕೆ – ಅಪರಿಚಿತ ವ್ಯಕ್ತಿಯಿಂದ 2 ಕೋಟಿಗೆ ಬೇಡಿಕೆ

    ನಟ ಸಲ್ಮಾನ್ ಖಾನ್‌ಗೆ ಮತ್ತೆ ಜೀವ ಬೆದರಿಕೆ – ಅಪರಿಚಿತ ವ್ಯಕ್ತಿಯಿಂದ 2 ಕೋಟಿಗೆ ಬೇಡಿಕೆ

    ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ (Salman Khan) ಅಪರಿಚಿತ ವ್ಯಕ್ತಿಯಿಂದ ಮತ್ತೆ ಜೀವ ಬೆದರಿಕೆ ಬಂದಿದ್ದು, 2 ಕೋಟಿ ರೂ.ಗೆ ಬೇಡಿಕೆಯಿಟ್ಟಿರುವುದಾಗಿ ಮುಂಬೈ ಟ್ರಾಫಿಕ್ ಪೊಲೀಸರಿಗೆ (Mumbai Traffice Police) ಸಂದೇಶ ಕಳುಹಿಸಿದ್ದಾರೆ.

    ಮೇಲಿಂದ ಮೇಲೆ ಸಲ್ಮಾನ್ ಖಾನ್ ಜೀವಕ್ಕೆ ಕುತ್ತು ಬರುತ್ತಿದ್ದು, ಜೀವ ಬೆದರಿಕೆಗಳು ಬರುತ್ತಲೇ ಇವೆ. ಜೀವ ಬೆದರಿಕೆ ಸಂದೇಶದ ಜೊತೆಗೆ 2 ಕೋಟಿ ರೂ. ಬೇಡಿಕೆಯಿಟ್ಟಿದ್ದಾರೆ. ಜೊತೆಗೆ ಹಣ ನೀಡದಿದ್ದರೆ ಹತ್ಯೆ ಮಾಡುವುದಾಗಿ ಸಂದೇಶ ಕಳುಹಿಸಲಾಗಿದೆ.

    ಬೆದರಿಕೆ ಸಂದೇಶ ಬಂದ ಬೆನ್ನಲ್ಲೇ ಮುಂಬೈನ ವರ್ಲಿ ಜಿಲ್ಲೆಯ ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

    ಎನ್‌ಸಿಪಿ ಶಾಸಕ ದಿವಂಗತ ಬಾಬಾ ಸಿದ್ದಿಕಿ ಅವರ ಪುತ್ರ ಜೀಶನ್ ಸಿದ್ದಿಕಿ ಹಾಗೂ ನಟ ಸಲ್ಮಾನ್ ಖಾನ್ ಇಬ್ಬರಿಗೂ ಜೀವ ಬೆದರಿಕೆ ಬಂದಿತ್ತು. ಇದರ ಬೆನ್ನಲ್ಲೇ ಮುಂಬೈ ಪೊಲೀಸರು ಮಂಗಳವಾರ ನೋಯ್ಡಾದಲ್ಲಿ 20 ವರ್ಷದ ಗುರ್ಫಾನ್ ಖಾನ್ ಎಂಬುವರನ್ನು ಬಂಧಿಸಿದ್ದಾರೆ. ಮೊಹಮ್ಮದ್ ತಯ್ಯಬ್ ಎಂದು ಗುರುತಿಸಲಾದ ಆರೋಪಿಯನ್ನು ನೋಯ್ಡಾದ ಸೆಕ್ಟರ್ 39ರಲ್ಲಿ ಬಂಧಿಸಲಾಗಿದೆ.

    ಅ.12 ರಂದು, ಬಾಬಾ ಸಿದ್ದಿಕಿ (Baba Siddique) ಅವರು ದಸರಾ ಸಂದರ್ಭದಲ್ಲಿ ಪಟಾಕಿ ಸಿಡಿಸುವಾಗ ಪುತ್ರ ಜೀಶನ್ ಸಿದ್ದಿಕಿ ಅವರ ಕಚೇರಿಯ ಹೊರಗೆ ಗುಂಡಿನ ದಾಳಿಯಿಂದಾಗಿ ಕೊಲ್ಲಲ್ಪಟ್ಟರು. ಘಟನೆಯ ಒಂದು ದಿನದ ನಂತರ, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ (Lawrence Bishnoi Gang) ಹತ್ಯೆಯ ಹೊಣೆಯನ್ನು ಹೊತ್ತುಕೊಂಡಿತ್ತು. ಸಲ್ಮಾನ್ ಖಾನ್ ಅವರೊಂದಿಗಿನ ನಿಕಟ ಸಂಬಂಧದಿಂದಾಗಿ ಅವರ ಮೇಲೆ ದಾಳಿ ಮಾಡಲಾಗಿದೆ ಎಂದು ಹೇಳಿದ್ದಾರೆ. ಇದುವರೆಗೆ ಬಾಬಾ ಸಿದ್ದಿಕಿ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು 15 ಮಂದಿಯನ್ನು ಬಂಧಿಸಿದ್ದಾರೆ.

    ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ ಬಂದಿರುವುದು ಇದೇ ಮೊದಲಲ್ಲ. ಈ ಹಿಂದೆ 2022 ರಲ್ಲಿ ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆಯ ಪತ್ರವು ಅವರ ನಿವಾಸದ ಬಳಿಯ ಬೆಂಚ್‌ನಲ್ಲಿ ಕಂಡುಬಂದಿತ್ತು. ಮಾರ್ಚ್ 2023ರಲ್ಲಿ ಗೋಲ್ಡಿ ಬ್ರಾರ್ ಅವರು ಕಳುಹಿಸಿದ್ದಾರೆಂದು ಆರೋಪಿಸಲಾದ ಇಮೇಲ್ ಕೂಡ ಖಾನ್‌ಗೆ ಸಿಕ್ಕಿತ್ತು. 2024 ರಲ್ಲಿ, ಇಬ್ಬರು ಅಪರಿಚಿತ ವ್ಯಕ್ತಿಗಳು ನಕಲಿ ಗುರುತುಗಳನ್ನು ಬಳಸಿಕೊಂಡು ಪನ್ವೆಲ್‌ನಲ್ಲಿರುವ ಖಾನ್ ಅವರ ಫಾರ್ಮ್ಹೌಸ್‌ಗೆ ಅತಿಕ್ರಮಣ ಮಾಡಲು ಪ್ರಯತ್ನಿಸಿದ್ದರು.

  • ಮಾಜಿ ಸಚಿವ ಗೋಪಾಲಯ್ಯಗೆ ಕೊಲೆ ಬೆದರಿಕೆ – ಮಾಜಿ ಕಾರ್ಪೊರೇಟರ್ ಪದ್ಮರಾಜ್ ವಿರುದ್ಧ ಎಫ್‌ಐಆರ್

    ಮಾಜಿ ಸಚಿವ ಗೋಪಾಲಯ್ಯಗೆ ಕೊಲೆ ಬೆದರಿಕೆ – ಮಾಜಿ ಕಾರ್ಪೊರೇಟರ್ ಪದ್ಮರಾಜ್ ವಿರುದ್ಧ ಎಫ್‌ಐಆರ್

    – ವಿಧಾನಸೌಧಕ್ಕೆ ಹೋಗುವಾಗ ಕೊಂದೇ ಕೊಲ್ತೀನಿ ಎಂದು ಬೆದರಿಕೆ

    ಬೆಂಗಳೂರು: ವಿಧಾನಸೌಧಕ್ಕೆ ಹೋಗುವಾಗ ಕೊಂದೇ ಕೊಲ್ತೀನಿ, ಇಲ್ಲ ಮನೆಯೊಳಗೆ ಬಂದು ಕೊಲೆ ಮಾಡ್ತೀನಿ ಎಂದು ಮಾಜಿ ಸಚಿವ ಗೋಪಾಲಯ್ಯಗೆ (K. Gopalaiah) ಮಾಜಿ ಕಾರ್ಪೊರೇಟರ್ ಪದ್ಮರಾಜ್ (Padmaraj) ಕೊಲೆ ಬೆದರಿಕೆ (Life Threat) ಹಾಕಿದ್ದಾರೆ.

    ಮಂಗಳವಾರ ರಾತ್ರಿ ಗೋಪಾಲಯ್ಯ ಮನೆ ಬಳಿ ಬಂದು ಪದ್ಮರಾಜ್ ಗಲಾಟೆ ಮಾಡಿದ್ದು, ಹಳೆ ವೈಷಮ್ಯದಿಂದ ಕೊಲೆ ಬೆದರಿಕೆ ಹಾಕಿದ್ದಾರೆ. ಈ ಹಿನ್ನೆಲೆ ಕಾಮಾಕ್ಷಿಪಾಳ್ಯ (Kamakshipalya) ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿದೆ. ರಾತ್ರಿ ಮಾಜಿ ಸಚಿವ ಗೋಪಾಲಯ್ಯ ಹಾಗೂ ಮಾಜಿ ಕಾರ್ಪೊರೇಟರ್ ಪದ್ಮರಾಜ್ ನಡುವೆ ಗಲಾಟೆ ನಡೆದಿದೆ. ಇದೀಗ ಕಾಮಾಕ್ಷಿಪಾಳ್ಯ ಸ್ಟೇಶನ್‌ನಲ್ಲಿ ಗೋಪಾಲಯ್ಯ ಕುಳಿತಿದ್ದು, ಪದ್ಮರಾಜ್ ಮನೆ ಮುಂದೆ 4 ಹೊಯ್ಸಳ ಪೊಲೀಸರು ಜಮಾವಣೆಗೊಂಡಿದ್ದಾರೆ. ಇದನ್ನೂ ಓದಿ: ಮಗನನ್ನು ಕೊಂದ ಸುಚನಾ ಸೇಠ್‌ಗೆ ಯವುದೇ ಮಾಸಿಕ ಖಿನ್ನತೆ ಇಲ್ಲ

    ಪದ್ಮರಾಜ್ ಮಂಗಳವಾರ ತಡರಾತ್ರಿ ಗೋಪಾಲಯ್ಯಗೆ ಕರೆ ಮಾಡಿ ಹಣ ಬೇಕೆಂದು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಹಣ ಕೊಡದಿದ್ರೆ ಏನು ಮಾಡ್ತೀನಿ ಗೊತ್ತಾ ಎಂದು ಬೆದರಿಕೆಯೊಡ್ಡಿದ್ದು, ಇದರಿಂದ ನೊಂದ ಗೋಪಾಲಯ್ಯ ಇಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇದರ ಜೊತೆಗೆ ಸ್ಪೀಕರ್ ಮತ್ತು ಸಿಎಂಗೂ ದೂರು ಕೊಡಲು ಗೋಪಾಲಯ್ಯ ಮುಂದಾಗಿದ್ದಾರೆ. ಇದನ್ನೂ ಓದಿ: ರಾಜಸ್ಥಾನದಿಂದ ಸೋನಿಯಾ ಗಾಂಧಿ ರಾಜ್ಯಸಭೆಗೆ ಸ್ಪರ್ಧೆ

    ಪದ್ಮರಾಜ್‌ಗೆ ಸಾಕಷ್ಟು ಬಾರಿ ಸಹಾಯ ಮಾಡಿದ್ದೇನೆ. ಆದರೆ ಈ ಥರ ಕುಡಿದು ನಿಂದಿಸಿದ್ದು, ಬೆದರಿಕೆ ಹಾಕಿದ್ದು ನೋವಾಗಿದೆ ಎಂದು ಗೋಪಾಲಯ್ಯ ಅಳಲು ತೋಡಿಕೊಂಡಿದ್ದಾರೆ. ಕಳೆದ ಏಪ್ರಿಲ್‌ನಲ್ಲಿ ಪದ್ಮರಾಜ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದರು. ವಿಚಾರಣೆಗೆ ನೋಟಿಸ್ ನೀಡಲು ಪೊಲೀಸರು ಪದ್ಮರಾಜ್ ಮನೆ ಬಾಗಿಲಿಗೆ ತೆರಳಿದ್ದಾರೆ. ಈ ವೇಳೆ ಮನೆಯ ಬಾಗಿಲು ತೆರೆಯದೆ ಪದ್ಮರಾಜ್ ಗಲಾಟೆ ಮಾಡುತ್ತಿದ್ದು, ಪೊಲೀಸರು ಪದ್ಮರಾಜ್ ಬಂಧನಕ್ಕೆ ಹರಸಾಹಸ ಪಡುತ್ತಿದ್ದಾರೆ. ಇದನ್ನೂ ಓದಿ: ಅಯೋಧ್ಯೆಗೆ ಬೆಂಗಳೂರಿನಿಂದ ಹೊರಟಿತು ವಿಶೇಷ ರೈಲು

  • ಸಲ್ಮಾನ್ ಗೆ ಮತ್ತೆ ಜೀವ ಬೆದರಿಕೆ ಹಾಕಿದ ಗ್ಯಾಂಗ್ ಸ್ಟರ್: ಭದ್ರತೆ ಪರಿಶೀಲನೆ

    ಸಲ್ಮಾನ್ ಗೆ ಮತ್ತೆ ಜೀವ ಬೆದರಿಕೆ ಹಾಕಿದ ಗ್ಯಾಂಗ್ ಸ್ಟರ್: ಭದ್ರತೆ ಪರಿಶೀಲನೆ

    ಕೃಷ್ಣಮೃಗ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan), ಕೋರ್ಟಿನಿಂದ ನೆಮ್ಮದಿ ಸಿಕ್ಕಿದ್ದರೂ, ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ (Lawrence Bishnoi)  ಮಾತ್ರ ನೆಮ್ಮದಿ ನೀಡುತ್ತಿಲ್ಲ. ಪದೇ ಪದೇ ನಟನಿಗೆ ಜೀವ ಬೆದರಿಕೆ ಹಾಕುತ್ತಿದ್ದಾನೆ. ಮತ್ತೆ ಶಾರುಖ್ ಇ-ಮೇಲ್ ಖಾತೆಗೆ ಸಂದೇಶವೊಂದನ್ನು ಕಳುಹಿಸಿದ್ದು, ವಿದೇಶದಲ್ಲಿ ನೆಲೆಸೋಕೆ ವಿಸಾ ಇರಬಹುದು. ಸಾವಿಗೆ ಇಲ್ಲ ಎಂದು ಬರೆದಿದ್ದಾನೆ.

    salman

    ಲಾರೆನ್ಸ್ ನಿಂದ ಜೀವ ಬೆದರಿಕೆ (Life Threat) ಮೇಲ್ ಬರುತ್ತಿದ್ದಂತೆಯೇ ಮತ್ತೆ ಪೊಲೀಸ್ ಅಧಿಕಾರಿಗಳು ಸಲ್ಮಾನ್ ಮನೆಯ ಭದ್ರತೆಯನ್ನು ತಪಾಸಣೆ ಮಾಡಿದ್ದಾರೆ. ಸಾರ್ವಜನಿಕ ಸಮಾರಂಭದಲ್ಲಿ ಭಾಗಿಯಾಗದಿರುವಂತೆ ಸೂಚನೆ ನೀಡಿದ್ದಾರೆ. ಅಲ್ಲದೇ, ಮತ್ತಷ್ಟು ಭದ್ರತೆಯನ್ನು ಹೆಚ್ಚಿಸುವ ಕುರಿತಂತೆ ಚರ್ಚಿಸಿದ್ದಾರೆ.

    ಸಲ್ಮಾನ್ ಖಾನ್ ಗೆ ಜೀವ ಬೆದರಿಕೆ ಹಿನ್ನೆಲೆಯಲ್ಲಿ ಈ ಹಿಂದೆ ಲಾರೆನ್ಸ್ ಸಹಚರರನ್ನು ಬಂಧಿಸಿ ಅಗತ್ಯ ಮಾಹಿತಿಯನ್ನು ಮುಂಬೈ ಪೊಲೀಸ್ ಪಡೆದಿದ್ದಾರೆ. ಈ ಸಂದರ್ಭದಲ್ಲಿ ಗಾಬರಿ ಹುಟ್ಟಿಸುವಂತಹ ಹೇಳಿಕೆಗಳು ಆ ಟೀಮ್ ನಿಂದ ಬಂದಿವೆ ಎಂದು ಸುದ್ದಿ ಆಗಿತ್ತು. ಹಾಗಾಗಿ ಈ ಹಿಂದೆಯೂ ಸಲ್ಮಾನ್ ಖಾನ್ ಗೆ ಭಾರೀ ಭದ್ರತೆ ನೀಡಲಾಗಿತ್ತು.

    ಸಲ್ಮಾನ್ ಖಾನ್ ಗೆ ಈ ಹಿಂದೆ ಬರೆದ ಪತ್ರದಲ್ಲಿ ಮನೆಯ ಮುಂದೇ ಅವರನ್ನು ಕೊಲ್ಲಲು ಪ್ಲ್ಯಾನ್ ಮಾಡಿರುವ ವಿಷಯವನ್ನು ಲಾರೆನ್ಸ್ ಅಂಡ್ ಟೀಮ್ ಬಹಿರಂಗಪಡಿಸಿತ್ತು. ಈ ಹತ್ಯೆಗಾಗಿ ಗನ್ ಕೂಡ ಖರೀದಿಸಲಾಗಿತ್ತು ಎನ್ನುವ ವಿಷಯವನ್ನು ಬಾಯ್ಬಿಟ್ಟಿದ್ದರು. ಅಲ್ಲದೇ, ಯಾವುದೇ ಕಾರಣಕ್ಕೂ ಸ‍ಲ್ಮಾನ್ ಖಾನ್ ಅವರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ ಎಂದೂ ಹೇಳಿರುವ ಅಂಶ ಬೆಳಕಿಗೆ ಬಂದಿತ್ತು.

    ಪ್ರತಿ ವರ್ಷವೂ ಸಲ್ಮಾನ್ ಖಾನ್ ಮನೆಯ ಮುಂದೆ ನಿಂತು ಅಭಿಮಾನಿಗಳಿಗೆ ಈದ್ ಶುಭಾಶಯ ಹೇಳುವುದನ್ನು ಸಂಪ್ರದಾಯದಂತೆ ಪಾಲಿಸಿಕೊಂಡು ಬಂದಿದ್ದರು. ಆದರೆ, ಈ ಬಾರಿ ಅವರು ಹಾಗೆ ಮಾಡಲಿಲ್ಲ. ಅಭಿಮಾನಿಗಳ ಮಧ್ಯೆಯ ಆಗಂತುಕರು ಬರಬಹುದು ಎನ್ನುವ ಆತಂಕದಿಂದಾಗಿ ವಿಶ್ ಮಾಡಲಿಲ್ಲ. ಮುಂಬೈ ಮತ್ತು ದೆಹಲಿ ಪೊಲೀಸರು ಲಾರೆನ್ಸ್ ಅಂಡ್ ಟೀಮ್ ಬೆನ್ನು ಬಿದ್ದಿದ್ದು, ಹಲವು ಆಘಾತಕಾರಿ ಅಂಶಗಳನ್ನು ಅವರಿಂದ ಪಡೆಯುತ್ತಿದ್ದಾರೆ. ಈ ನಡುವೆ ಲಾರೆನ್ಸ್ ಮತ್ತೊಂದು ಸಂದೇಶವನ್ನು ಕಳುಹಿಸಿ ಮತ್ತಷ್ಟು ನಿದ್ದೆಗೆಡಿಸಿದ್ದಾರೆ.

  • ಜೀವ ಬೆದರಿಕೆ ಹಿನ್ನೆಲೆ ಶಾರುಖ್ ಖಾನ್ ಗೆ ವೈಪ್ಲಸ್ ಸೆಕ್ಯೂರಿಟಿ

    ಜೀವ ಬೆದರಿಕೆ ಹಿನ್ನೆಲೆ ಶಾರುಖ್ ಖಾನ್ ಗೆ ವೈಪ್ಲಸ್ ಸೆಕ್ಯೂರಿಟಿ

    ವಾನ್ ಸಿನಿಮಾ ಗೆದ್ದ ಹಿನ್ನೆಲೆಯಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಗೆ ಸಾಕಷ್ಟು ಜೀವ ಬೆದರಿಕೆ ಬರುತ್ತಿವೆಯಂತೆ. ವಿಶ್ವ ಮಟ್ಟದಲ್ಲಿ ಜವಾನ್ ಸಿನಿಮಾ ಸದ್ದು ಮಾಡಿದೆ. ಸಾವಿರಾರು ಕೋಟಿ ರೂಪಾಯಿ ಸಂಪಾದನೆ ಮಾಡಿದೆ. ಇನ್ನೂ ಹಲವಾರು ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರಸಾರ ಕಾಣುತ್ತಿದೆ. ಈ ಸಂದರ್ಭದಲ್ಲಿ ಅವರಿಗೆ ಜೀವ ಬೆದರಿಕೆ (Life Threat) ಇದೆ ಎಂದು ಹೇಳಲಾಗುತ್ತಿದೆ. ಹಾಗಾಗಿಯೇ ಮಹಾರಾಷ್ಟ್ರ ಸರ್ಕಾರ ಅವರಿಗೆ ವೈಪ್ಲಸ್ ಸೆಕ್ಯೂರಿಟಿ ನೀಡಿದೆ.

    ಜವಾನ್ ಸಿನಿಮಾದ ಈವರೆಗಿನ ಕಲೆಕ್ಷನ್ 1103.27 ಕೋಟಿ ರೂಪಾಯಿ ಎಂದು ಸ್ವತಃ ನಿರ್ಮಾಣ ಸಂಸ್ಥೆಯೇ ಘೋಷಣೆ ಮಾಡಿದೆ. ಶಾರುಖ್ ಖಾನ್ ಅವರ ರೆಡ್ ಚಿಲ್ಲಿ ಎಂಟರ್ ಟೇನ್ಮೆಂಟ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟರ್ ವೊಂದನ್ನು ಹಂಚಿಕೊಳ್ಳುವ ಮೂಲಕ ಅಧಿಕೃತ ಮಾಹಿತಿಯನ್ನು ಹೊರ ಹಾಕಿದೆ. ಇದು ವಿಶ್ವದಾದ್ಯಂತ ಬಂದ ಒಟ್ಟು ಕಲೆಕ್ಷನ್ ಆಗಿದೆ.

    ವಿಶ್ವದಾದ್ಯಂತ ‘ಜವಾನ್’ ಸಿನಿಮಾ ದಾಖಲೆ ರೀತಿಯಲ್ಲಿ ಕಲೆಕ್ಷನ್ (Collection) ಮಾಡಿದರೆ, ಭಾರತದಲ್ಲೇ ಅದು ಗಳಿಸಿದ ಒಟ್ಟು ಮೊತ್ತ ಅಂದಾಜು 600 ಕೋಟಿ ರೂಪಾಯಿಗೂ ಹೆಚ್ಚು ಆಗಿದೆ. ಈ ಪ್ರಮಾಣದಲ್ಲಿ ಹಣ ಗಳಿಕೆ ಮಾಡಿದ ಮೊದಲ ಹಿಂದಿ ಸಿನಿಮಾ ಎನ್ನುವ ದಾಖಲೆ ಕೂಡ ಬರೆದಿದೆ. ಇದೆಲ್ಲವೂ ಅಧಿಕೃತ ಘೋಷಣೆ ಎನ್ನುವುದು ವಿಶೇಷ.

    ಸಿನಿಮಾ ಭರ್ಜರಿ ಗೆಲುವು ಕಾಣುತ್ತಿದ್ದಂತೆಯೇ ಸಿನಿಮಾ ನಿರ್ದೇಶಕ ಅಟ್ಲಿ (Atli) ತಮ್ಮ ಅಭಿಮಾನಿಗಳಿಗೆ ಭರ್ಜರಿ ಸುದ್ದಿಯೊಂದನ್ನು ನೀಡಿದ್ದಾರೆ. ‘ಜವಾನ್’ ಯಶಸ್ಸಿನ ಬೆನ್ನಲ್ಲೇ ಅವರು ‘ಜವಾನ್ 2’ (Jawan 2) ಸಿನಿಮಾ ಮಾಡಲು ಮುಂದಾಗಿದ್ದು, ಇದರ ಜೊತೆಗೆ ಶಾರುಖ್ ಖಾನ್ (Shahrukh Khan) ಅಭಿಮಾನಿಗಳಿಗೆ ಮತ್ತೊಂದು ಸರ್ ಪ್ರೈಸ್ ನೀಡಿದ್ದಾರೆ.

     

    ಜವಾನ್ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಸಾವಿರಾರು ಕೋಟಿ ಬ್ಯುಸಿನೆಸ್ ಮಾಡಿದೆ. ಈ ಖುಷಿಯಲ್ಲೇ ಅಟ್ಲಿ ಜವಾನ್ 2 ಸಿನಿಮಾ ಘೋಷಣೆ ಮಾಡಿದ್ದಾರೆ. ಜೊತೆಗೆ ಶಾರುಖ್ ಖಾನ್ ಮತ್ತು ವಿಜಯ್ ಕಾಂಬಿನೇಷನ್ ನಲ್ಲಿ ಮತ್ತೊಂದು ಸಿನಿಮಾ ಮಾಡುವ ಆಲೋಚನೆಯನ್ನೂ ಅವರು ಹೇಳಿಕೊಂಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಲ್ಮಾನ್ ಖಾನ್ ಗೆ ಜೀವ ಬೆದರಿಕೆ : ಬಾಲಿವುಡ್ ನಟನಿಗೆ ಭದ್ರತೆ ಹೇಗಿದೆ?

    ಸಲ್ಮಾನ್ ಖಾನ್ ಗೆ ಜೀವ ಬೆದರಿಕೆ : ಬಾಲಿವುಡ್ ನಟನಿಗೆ ಭದ್ರತೆ ಹೇಗಿದೆ?

    ಬಾಲಿವುಡ್ (Bollywood) ನ ಖ್ಯಾತ ನಟ ಸಲ್ಮಾನ್ ಖಾನ್ ಗೆ ಗ್ಯಾಂಗ್ ಸ್ಟರ್ ಗಳು ಪದೇ ಪದೇ ಜೀವ ಬೆದರಿಕೆ ಹಾಕುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಮತ್ತಷ್ಟು ಭದ್ರತೆಯನ್ನು ಒದಗಿಸಲಾಗಿದೆ. ಅಲ್ಲದೇ, ಅವರು ಬಳಸುವ ಕಾರನ್ನು ಸಹ ಬದಲಾಯಿಸಲಾಗಿದೆ. ಅತ್ಯಂತ ಸುರಕ್ಷಿತ ಹಾಗೂ ಗುಂಡು ನಿರೋಧಕ ದುಬಾರಿ ಕಾರನ್ನೇ ಸಲ್ಮಾನ್ ಖಾನ್ ಖರೀದಿಸಿದ್ದಾರೆ.  ಈಗಾಗಲೇ ಬಹಿರಂಗ ಸಭೆ, ಸಿನಿಮಾ ಪ್ರಚಾರ ಮತ್ತು ಜನಸಂದಣಿ ಇರುವಂತಹ ಸ್ಥಳಗಳಲ್ಲಿ ಕಾಣಿಸಿಕೊಳ್ಳದಂತೆ ಭದ್ರತಾ (Security) ಸಿಬ್ಬಂದಿಗಳು ಎಚ್ಚರಿಸಿದ ಹಿನ್ನೆಲೆಯಲ್ಲಿ ಸಲ್ಮಾನ್ ಖಾನ್ ಅದರಂತೆ ನಡೆದುಕೊಳ್ಳುತ್ತಿದ್ದಾರೆ. ಶೂಟಿಂಗ್ ಸ್ಥಳದಲ್ಲಿ ಸಲ್ಮಾನ್ ಖಾನ್ ಅವರನ್ನು ಅವರ ಆಪ್ತರು ಕೂಡ ಸಮೀಪಕ್ಕೆ ಬಾರದಂತೆ ಭದ್ರತೆ ಒದಗಿಸಲಾಗಿದೆ.

    ಸಲ್ಮಾನ್ ಖಾನ್ ಅವರ ಖಾಸಗಿ ಭದ್ರತೆಯನ್ನು  ಅವರ ಆಪ್ತರೇ ಆಗಿರುವ ಶೇರಾ (Shera) ನೋಡಿಕೊಳ್ಳುತ್ತಾರೆ. ಸಲ್ಮಾನ್ ಖಾನ್ ಅವರ ಸಮೀಪ ಶೇರಾ ನೋಡಿಕೊಳ್ಳುವ ಭದ್ರತಾ ಸಿಬ್ಬಂದಿ ಇದ್ದರೆ, ನಂತರ ಸುತ್ತಿನಲ್ಲಿ ಮುಂಬೈ ಪೊಲೀಸರು ನಿಯೋಜನೆಗೊಂಡಿರುವ ಭದ್ರತಾ ಸಿಬ್ಬಂದಿ ಇರುತ್ತಾರೆ. ಹಾಗಾಗಿ ಸಲ್ಮಾನ್ ಖಾನ್ ಬಳಿ ನಟರು ಬಂದರೂ, ಭೇಟಿ ಆಗದಂತಹ ಘಟನೆಗಳು ಆಗಾಗ್ಗೆ ನಡೆಯುತ್ತಿವೆ. ಕೆಲ ವಾರಗಳ ಹಿಂದೆಯಷ್ಟೇ ಬಾಲಿವುಟ್ ನಟ ವಿಕ್ಕಿ ಕೌಶಲ್ ಅವರನ್ನು ಸಲ್ಮಾನ್ ಖಾನ್ ಭದ್ರತಾ ಸಿಬ್ಬಂದಿ ತಳ್ಳಿದರು ಎನ್ನುವ ಕಾರಣಕ್ಕಾಗಿ ದೊಡ್ಡ ಸುದ್ದಿಯಾಗಿತ್ತು. ಕೆಲ ದಿನಗಳ ಹಿಂದೆಯಷ್ಟೇ ಇಂಥದ್ದೆ ಘಟನೆಯನ್ನು ನೆನಪಿಸಿಕೊಂಡಿದ್ದಾರೆ ನಟಿ ಹೇಮಾ ಶರ್ಮಾ. ಸಲ್ಮಾನ್ ಖಾನ್ ಭದ್ರತಾ ಸಿಬ್ಬಂದಿ ನನ್ನನ್ನು ನಾಯಿಯನ್ನು ಎಳೆದು ಹೊರ ಹಾಕಿದಂತೆ ಹೊರಹಾಕಿದರು ಎಂದು ಅಳಲು ತೋಡಿಕೊಂಡಿದ್ದಾರೆ. ಈ ಪ್ರಮಾಣದಲ್ಲಿ ಸಲ್ಮಾನ್ ಗೆ ಭದ್ರತೆ ಒದಗಿಸಲಾಗಿದೆ.

    ಇಷ್ಟೊಂದು ಭಾರೀ ಭದ್ರತೆಯನ್ನು ನೀಡಲು ಕಾರಣವೂ ಇದೆ. ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದಾಗಿ ಈ ಹಿಂದೆ ಲಾರೆನ್ಸ್ ಬಿಷ್ಣೋಯ್ ಹೇಳಿಕೆ ನೀಡಿದ್ದಾನೆ. ಅವನ ತಂಡ ಅನೇಕ ಸದಸ್ಯರು ಪೊಲೀಸರ ಕೈಗೆ ಸಿಕ್ಕಿಬಿದ್ದಾಗಲೂ ಸಲ್ಮಾನ್ ಕೊಲ್ಲುವ ಮಾತುಗಳನ್ನು ಆಡಿದ್ದಾರೆ. ಹೀಗಾಗಿ ಸಲ್ಮಾನ್ ಖಾನ್ ಅವರಿಗೆ ವಿಶೇಷ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ. ಕೇವಲ ಸಲ್ಮಾನ್ ಗೆ ಮಾತ್ರವಲ್ಲ, ಅವರ ತಂದೆ ಮತ್ತು ಕುಟುಂಬಕ್ಕೆ ಭದ್ರತೆ ನೀಡಲಾಗಿದೆ. ಲಾರೆನ್ಸ್ ತಣ್ಣಗಾದ ಎನ್ನುವ ಹೊತ್ತಿಗೆ ಇದೀಗ ಮತ್ತೊಬ್ಬ ಗ್ಯಾಂಗ್ ಸ್ಟಾರ್ ಸಲ್ಮಾನ್ ಕೊಲ್ಲುವ ಕುರಿತು ಮಾತನಾಡಿದ್ದಾನೆ.

    ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರನ್ನು ಕೊಂದಿರುವುದು ತಾನೇ ಎಂದು ಹೇಳಿಕೊಂಡಿರುವ ಗ್ಯಾಂಗ್ ಸ್ಟರ್ ಗೋಲ್ಡಿ ಬ್ರಾರ್ (Goldie Brar) ನನ್ನ ಮುಂದಿನ ಟಾರ್ಗೆಟ್ ಸಲ್ಮಾನ್ ಖಾನ್ ಎಂದು ಹೇಳುವ ಮೂಲಕ ಆತಂಕ ಸೃಷ್ಟಿ ಮಾಡಿದ್ದಾನೆ. ರಾಷ್ಟ್ರೀಯ ವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿದ ಗೋಲ್ಡಿ ಬ್ರಾರ್, ‘ನನ್ನ ಮುಂದಿನ ಗುರಿ ಇರುವುದು ಸಲ್ಮಾನ್ ಖಾನ್ ನನ್ನು ಕೊಲ್ಲುವುದು. ಕೊಂದೇ ಕೊಲ್ಲುತ್ತೇನೆ. ನನ್ನಿಂದ ಅವನು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ’ ಎಂದು ಸಂದರ್ಶನದಲ್ಲಿ ಹೇಳಿದ್ದಾನೆ.

    ರಾಷ್ಟ್ರೀಯ ವಾಹಿನಿಯಲ್ಲಿ  ಹಲವು ರಾಜ್ಯಗಳ ಪೊಲೀಸರಿಗೆ ಬೇಕಾಗಿರುವ, ಮೋಸ್ಟ್ ವಾಂಟೆಡ್ ಕ್ರಿಮಿನಲ್ ಗೋಲ್ಡಿ ಬ್ರಾರ್ ಈ ರೀತಿ ಹೇಳಿಕೆ ನೀಡಿರುವುದು ಭಾರೀ ಆತಂಕಕ್ಕೆ ಕಾರಣವಾಗಿದೆ. ಬಹಿರಂಗವಾಗಿ ಈ ರೀತಿ ಹೇಳಿಕೆ ನೀಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹವೂ ಹೆಚ್ಚಾಗಿದೆ. ಈಗಾಗಲೇ ಸಲ್ಮಾನ್ ಖಾನ್ ಗೆ ಕೊಲೆ ಬೆದರಿಕೆ ಹಿನ್ನೆಲೆಯಲ್ಲಿ ಅವರ ಬಾಂದ್ರಾದಲ್ಲಿರುವ ಗ್ಯಾಲಕ್ಸಿ ಅಪಾರ್ಟ್ಮೆಂಟ್ ಗೆ ಮುಂಬೈ ಪೊಲೀಸರು ಟೈಟ್ ಸೆಕ್ಯೂರಿಟಿ ನೀಡಿದ್ದಾರೆ. ಯಾವುದೇ ಬಹಿರಂಗ ಕಾರ್ಯಕ್ರಮದಲ್ಲಿ ಭಾಗಿಯಾಗದಂತೆ ತಿಳಿಸಿದ್ದಾರೆ. ಸಲ್ಮಾನ್ ಖಾನ್ ಅವರನ್ನು ಕುಖ್ಯಾತ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಕೊಲ್ಲುವುದಾಗಿ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಪೊಲೀಸರು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದ್ದಾರೆ.

    ಕೃಷ್ಣಮೃಗ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ಯಾಂಗ್ ಸ್ಟರ್ (gangster) ಲಾರೆನ್ಸ್ ಬಿಷ್ಣೋಯ್ (Lawrence Bishnoi) ಮತ್ತು ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ನಡುವಿನ ಕಾಳಗ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ಈಗಾಗಲೇ ಸಲ್ಮಾನ್ ಖಾನ್ ಕೊಲ್ಲಲು (Death Threats) ಬಿಷ್ಣೋಯ್ ಮತ್ತು ಟೀಮ್ ಹಲವು ರೀತಿಯಲ್ಲಿ ಪ್ರಯತ್ನ ಮಾಡಿ ವಿಫಲವಾಗಿದೆ. ಈ ಸಂಬಂಧವಾಗಿ ಅನೇಕರು ಬಂಧನ ಕೂಡ ಆಗಿದ್ದಾರೆ. ಸ್ವತಃ ಬಿಷ್ಣೋಯ್ ಜೈಲಿನಲ್ಲೇ ಇದ್ದಾರೆ. ಜೈಲಿನಿಂದಲೇ ಸಲ್ಮಾನ್ ಬಗ್ಗೆ ಕೊಲ್ಲುವ ಮಾತುಗಳನ್ನು ಆಡಿದ್ದಾನೆ.

     

    ಈ ಹಿಂದೆ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ್ದ ಲಾರೆನ್ಸ್ ಬಿಷ್ಣೋಯ್ ‘ನನ್ನ ಜೀವನದ ಅಂತಿಮ ಗುರಿ ಅಂತಿದ್ದರೆ ಅದು ನಟ ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದೇ ಆಗಿದೆ. ಸಲ್ಮಾನ್ ಖಾನ್ ಬಿಷ್ಣೋಯ್ ಸಮುದಾಯಕ್ಕೆ ಕ್ಷಮೆಯಾಚಿಸಿದ ನಂತರವೇ ಈ ದ್ವೇಷ ಕೊನೆಗೊಳ್ಳುತ್ತದೆ’ ಎಂದು ಮಾತನಾಡಿದ್ದಾನೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

  • ಸಲ್ಮಾನ್ ಖಾನ್ ಕೊಲ್ಲುವುದೇ ನನ್ನ ಗುರಿ : ಗ್ಯಾಂಗ್ ಸ್ಟರ್ ಗೋಲ್ಡಿ ಬಹಿರಂಗ ಹೇಳಿಕೆ

    ಸಲ್ಮಾನ್ ಖಾನ್ ಕೊಲ್ಲುವುದೇ ನನ್ನ ಗುರಿ : ಗ್ಯಾಂಗ್ ಸ್ಟರ್ ಗೋಲ್ಡಿ ಬಹಿರಂಗ ಹೇಳಿಕೆ

    ಬಾಲಿವುಡ್ (Bollywood) ಖ್ಯಾತ ನಟ ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದಾಗಿ ಈ ಹಿಂದೆ ಲಾರೆನ್ಸ್ ಬಿಷ್ಣೋಯ್ ಹೇಳಿಕೆ ನೀಡಿದ್ದ. ಅವನ ತಂಡ ಅನೇಕ ಸದಸ್ಯರು ಪೊಲೀಸರ ಕೈಗೆ ಸಿಕ್ಕಿಬಿದ್ದಾಗಲೂ ಸಲ್ಮಾನ್ ಕೊಲ್ಲುವ ಮಾತುಗಳನ್ನು ಅವರು ಆಡಿದ್ದರು. ಹೀಗಾಗಿ ಸಲ್ಮಾನ್ ಖಾನ್ ಅವರಿಗೆ ವಿಶೇಷ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ. ಕೇವಲ ಸಲ್ಮಾನ್ ಗೆ ಮಾತ್ರವಲ್ಲ, ಅವರ ತಂದೆ ಮತ್ತು ಕುಟುಂಬಕ್ಕೆ ಭದ್ರತೆ ನೀಡಲಾಗಿದೆ. ಲಾರೆನ್ಸ್ ತಣ್ಣಗಾದ ಎನ್ನುವ ಹೊತ್ತಿಗೆ ಇದೀಗ ಮತ್ತೊಬ್ಬ ಗ್ಯಾಂಗ್ ಸ್ಟಾರ್ ಸಲ್ಮಾನ್ ಕೊಲ್ಲುವ ಕುರಿತು ಮಾತನಾಡಿದ್ದಾನೆ.

    ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರನ್ನು ಕೊಂದಿರುವುದು ತಾನೇ ಎಂದು ಹೇಳಿಕೊಂಡಿರುವ ಗ್ಯಾಂಗ್ ಸ್ಟರ್ ಗೋಲ್ಡಿ ಬ್ರಾರ್ (Goldie Brar) ನನ್ನ ಮುಂದಿನ ಟಾರ್ಗೆಟ್ ಸಲ್ಮಾನ್ ಖಾನ್ ಎಂದು ಹೇಳುವ ಮೂಲಕ ಆತಂಕ ಸೃಷ್ಟಿ ಮಾಡಿದ್ದಾನೆ. ರಾಷ್ಟ್ರೀಯ ವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿದ ಗೋಲ್ಡಿ ಬ್ರಾರ್, ‘ನನ್ನ ಮುಂದಿನ ಗುರಿ ಇರುವುದು ಸಲ್ಮಾನ್ ಖಾನ್ ನನ್ನು ಕೊಲ್ಲುವುದು. ಕೊಂದೇ ಕೊಲ್ಲುತ್ತೇನೆ. ನನ್ನಿಂದ ಅವನು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ’ ಎಂದು ಸಂದರ್ಶನದಲ್ಲಿ ಹೇಳಿದ್ದಾನೆ.

    salman

    ರಾಷ್ಟ್ರೀಯ ವಾಹಿನಿಯಲ್ಲಿ  ಹಲವು ರಾಜ್ಯಗಳ ಪೊಲೀಸರಿಗೆ ಬೇಕಾಗಿರುವ, ಮೋಸ್ಟ್ ವಾಂಟೆಡ್ ಕ್ರಿಮಿನಲ್ ಗೋಲ್ಡಿ ಬ್ರಾರ್ ಈ ರೀತಿ ಹೇಳಿಕೆ ನೀಡಿರುವುದು ಭಾರೀ ಆತಂಕಕ್ಕೆ ಕಾರಣವಾಗಿದೆ. ಬಹಿರಂಗವಾಗಿ ಈ ರೀತಿ ಹೇಳಿಕೆ ನೀಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹವೂ ಹೆಚ್ಚಾಗಿದೆ.

    ಈಗಾಗಲೇ ಸಲ್ಮಾನ್ ಖಾನ್ ಗೆ ಕೊಲೆ ಬೆದರಿಕೆ ಹಿನ್ನೆಲೆಯಲ್ಲಿ ಅವರ ಬಾಂದ್ರಾದಲ್ಲಿರುವ ಗ್ಯಾಲಕ್ಸಿ ಅಪಾರ್ಟ್ಮೆಂಟ್ ಗೆ ಮುಂಬೈ ಪೊಲೀಸರು ಟೈಟ್ ಸೆಕ್ಯೂರಿಟಿ ನೀಡಿದ್ದಾರೆ. ಯಾವುದೇ ಬಹಿರಂಗ ಕಾರ್ಯಕ್ರಮದಲ್ಲಿ ಭಾಗಿಯಾಗದಂತೆ ತಿಳಿಸಿದ್ದಾರೆ. ಸಲ್ಮಾನ್ ಖಾನ್ ಅವರನ್ನು ಕುಖ್ಯಾತ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಕೊಲ್ಲುವುದಾಗಿ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಪೊಲೀಸರು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದ್ದಾರೆ.

    ಕೃಷ್ಣಮೃಗ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ಯಾಂಗ್ ಸ್ಟರ್ (gangster) ಲಾರೆನ್ಸ್ ಬಿಷ್ಣೋಯ್ (Lawrence Bishnoi) ಮತ್ತು ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ನಡುವಿನ ಕಾಳಗ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ಈಗಾಗಲೇ ಸಲ್ಮಾನ್ ಖಾನ್ ಕೊಲ್ಲಲು (Death Threats) ಬಿಷ್ಣೋಯ್ ಮತ್ತು ಟೀಮ್ ಹಲವು ರೀತಿಯಲ್ಲಿ ಪ್ರಯತ್ನ ಮಾಡಿ ವಿಫಲವಾಗಿದೆ. ಈ ಸಂಬಂಧವಾಗಿ ಅನೇಕರು ಬಂಧನ ಕೂಡ ಆಗಿದ್ದಾರೆ. ಸ್ವತಃ ಬಿಷ್ಣೋಯ್ ಜೈಲಿನಲ್ಲೇ ಇದ್ದಾರೆ. ಜೈಲಿನಿಂದಲೇ ಸಲ್ಮಾನ್ ಬಗ್ಗೆ ಕೊಲ್ಲುವ ಮಾತುಗಳನ್ನು ಆಡಿದ್ದ.

    ಈ ಹಿಂದೆ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ್ದ ಲಾರೆನ್ಸ್ ಬಿಷ್ಣೋಯ್ ‘ನನ್ನ ಜೀವನದ ಅಂತಿಮ ಗುರಿ ಅಂತಿದ್ದರೆ ಅದು ನಟ ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದೇ ಆಗಿದೆ. ಸಲ್ಮಾನ್ ಖಾನ್ ಬಿಷ್ಣೋಯ್ ಸಮುದಾಯಕ್ಕೆ ಕ್ಷಮೆಯಾಚಿಸಿದ ನಂತರವೇ ಈ ದ್ವೇಷ ಕೊನೆಗೊಳ್ಳುತ್ತದೆ’ ಎಂದು ಮಾತನಾಡಿದ್ದ.

     

    ಸಲ್ಮಾನ್ ಖಾನ್ ಜೀವ ಉಳಿಯಬೇಕು ಎಂದರೆ, ತನ್ನ ಮಾತನ್ನು ಕೇಳಲೇಬೇಕು ಎಂದು ಲಾರೆನ್ಸ್ ಹೇಳಿಕೊಂಡಿದ್ದ. ಯಾವುದೋ ಜಾಗದಲ್ಲಿ ನಿಂತು ಕ್ಷಮೆ ಕೇಳಿದರೆ ನಾವು ಒಪ್ಪುವುದಿಲ್ಲ. ಬಿಕಾನೇರ್ ನಲ್ಲಿರುವ ಅವರ ದೇವಸ್ಥಾನಕ್ಕೆ ಹೋಗಿ ಕ್ಷಮೆ ಕೇಳಬೇಕು ಎಂದು ಲಾರೆನ್ಸ್ ಮಾತನಾಡಿದ್ದ. ಸಲ್ಮಾನ್ ಖಾನ್ ಗೆ ತುಂಬಾ ಅಹಂ ಇದೆ. ಆ ನಟನಿಗೆ ಅಂಗರಕ್ಷಕರು ಇಲ್ಲದಿದ್ದರೆ ಇಷ್ಟೊತ್ತಿಗೆ ಪ್ರಾಣ ಹೋಗಿರುತ್ತಿತ್ತು ಎನ್ನುವ ಮಾತುಗಳನ್ನೂ ಆಡಿದ್ದ. ಲಾರೆನ್ಸ್ ನಂತರ ಇದೀಗ ಗೋಲ್ಡಿ ಬ್ರಾರ್ ಕೂಡ ಅದೇ ಮಾತುಗಳನ್ನು ಆಡಿದ್ದಾನೆ.

     

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

  • ‘ದಿ ಕೇರಳ ಸ್ಟೋರಿ’ ನಟಿ ಅದಾ ಫೋನ್ ನಂಬರ್ ಲೀಕ್ ಮಾಡಿದ ಕಿಡಿಗೇಡಿಗಳು

    ‘ದಿ ಕೇರಳ ಸ್ಟೋರಿ’ ನಟಿ ಅದಾ ಫೋನ್ ನಂಬರ್ ಲೀಕ್ ಮಾಡಿದ ಕಿಡಿಗೇಡಿಗಳು

    ದಿ ಕೇರಳ ಸ್ಟೋರಿ (The Kerala Story) ಸಿನಿಮಾದ ನಾಯಕಿ ಅದಾ ಶರ್ಮಾ ಅವರ ಫೋನ್ ನಂಬರ್ (Phone Number) ಅನ್ನು ಕಿಡಿಗೇಡಿಗಳು ಲೀಕ್ ಮಾಡಿದ್ದಾರೆ. ಅದಾ ಬಳಸುತ್ತಿದ್ದ ಪರ್ಸನಲ್ ನಂಬರ್ ಅನ್ನು ಜಾಲತಾಣದಲ್ಲಿ ಕಿಡಿಕೇಡಿಗಳು ಪೋಸ್ಟ್ ಮಾಡಿದ್ದು, ಅದರಿಂದಾಗಿ ಅವರು ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದಾರಂತೆ. ಅಪರಿಚಿತರು ನಿರಂತರ ಕರೆ ಮತ್ತು ಮಸೇಜ್ ಗಳನ್ನು ಮಾಡುತ್ತಿದ್ದಾರಂತೆ. ಕೆಲವರಂತೂ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ನಟಿ ಹೇಳಿಕೊಂಡಿದ್ದಾರೆ.

    ಹಲವು ವಾರಗಳಿಂದ ದೇಶಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿರುವ ‘ದಿ ಕೇರಳ ಸ್ಟೋರಿ’ (The Kerala Story) ಚಿತ್ರದಲ್ಲಿ ಮುಸ್ಲಿಂ ಹುಡುಗಿಯಾಗಿ ನಟಿಸಿದ್ದ ನಟಿ ಸೋನಿಯಾ ಬಾಲಾನಿಗೂ ಈ ಹಿಂದೆ ಕೊಲೆ ಬೆದರಿಕೆ  (Death Threat) ಹಾಕಲಾಗಿತ್ತು. ಅಲ್ಲದೇ ಅದಾ ಶರ್ಮಾಗೂ (Adah Sharma) ಕೊಲೆ ಬೆದರಿಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಅವರಿಗೆ ಪೊಲೀಸ್ ಭದ್ರತೆಯನ್ನೂ ನೀಡಲಾಗಿತ್ತು. ಇದನ್ನೂ ಓದಿ:ಮಗಳ ವಯಸ್ಸಿನ ಫಾತಿಮಾ ಜೊತೆ ಮತ್ತೆ ಮದುವೆಗೆ ಸಜ್ಜಾದ ಆಮೀರ್‌ ಖಾನ್

    ದಿ ಕೇರಳ ಸ್ಟೋರಿ ಸಿನಿಮಾದಲ್ಲಿ ಸೋನಿಯಾ (Sonia Balani) ಮುಸ್ಲಿಂ ಹುಡುಗಿಯಾಗಿ, ಹಿಂದೂ ಹುಡುಗಿಯರನ್ನು ಮತಾಂತರ ಮಾಡುವ ಪ್ರಕ್ರಿಯೆಯಲ್ಲಿ ಸಹಾಯ ಮಾಡುತ್ತಾರೆ. ನಟಿಯಾಗಿ ಅವರು ಪಾತ್ರಕ್ಕೆ ಜೀವ ತುಂಬಿದ್ದಾರೆ. ಈ ಪಾತ್ರ ಹಲವರ ಕೋಪಕ್ಕೆ ಕಾರಣವಾಗಿದೆ. ಹಾಗಾಗಿ ಕೊಲೆ ಬೆದರಿಕೆಯ ಸಂದೇಶಗಳು ಸೋನಿಯಾಗೆ ಬಂದಿವೆಯಂತೆ. ಹಾಗಾಗಿ ಆ ನಟಿಗೂ ಭದ್ರತೆಯನ್ನು ಒದಗಿಸಬೇಕು ಎಂದು ಚಿತ್ರತಂಡ ಮನವಿ ಮಾಡಿಕೊಂಡಿತ್ತು.

    ನಟಿಯರಿಗೆ ಒಂದು ಕಡೆ ಜೀವ ಬೆದರಿಕೆ ಮಸೇಜ್ ಗಳು ಬರುತ್ತಿದ್ದರೆ, ಮತ್ತೊಂದು ಕಡೆ ಬಾಕ್ಸ್ ಆಫೀಸಿನಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ ಈ ಸಿನಿಮಾ. ವಿವಾದ, ನಿಷೇಧದ ನಡುವೆಯೂ ಸಿನಿಮಾ 200 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಬಾಕ್ಸ್ ಆಫೀಸಿನಲ್ಲಿ ದೋಚಿದೆ. ಕರ್ನಾಟಕವೂ ಸೇರಿದಂತೆ ದೇಶದ ನಾನಾ ಕಡೆ ಸಿನಿಮಾ ತುಂಬಿದ ಪ್ರದರ್ಶನ ಕಾಣುತ್ತಿದೆ.