Tag: life style

  • ಈ ಟ್ರಿಕ್ಸ್‌ ಗೊತ್ತಿದ್ರೆ ಅವಳು ನಿಮ್ಮನ್ನ ನಿಜವಾಗ್ಲೂ ಪ್ರೀತಿಸ್ತಿದ್ದಾಳಾ ಅನ್ನೋದು ಗೊತ್ತಾಗುತ್ತೆ

    ಈ ಟ್ರಿಕ್ಸ್‌ ಗೊತ್ತಿದ್ರೆ ಅವಳು ನಿಮ್ಮನ್ನ ನಿಜವಾಗ್ಲೂ ಪ್ರೀತಿಸ್ತಿದ್ದಾಳಾ ಅನ್ನೋದು ಗೊತ್ತಾಗುತ್ತೆ

    ಪ್ರೀತಿಯೊಂದು (Love) ಸುಂದರ ಅನುಭವ. ಅದನ್ನು ಅನುಭವಿಸಬೇಕೇ ಹೊರತು ಹೇಳಿಕೊಳ್ಳಲಾಗುವುದಿಲ್ಲ. ಅದಕ್ಕಾಗಿ ಕೆಲವರು ಪ್ರೀತಿಯೆಂಬುದೇ ಮಾಯೆ ಎನ್ನುತ್ತಾರೆ. ಕೆಲವರಿಗೆ ಹೇಳಿಕೊಳ್ಳಲು ಸಂಕೋಚ, ಹೇಳಿಕೊಂಡರೇ ಇದ್ದ ಸಂಬಂಧವೂ ಬಿಟ್ಟುಹೋಗುತ್ತದೆ ಅನ್ನೋ ಆತಂಕ. ಹಾಗಾಗಿಯೇ ಅನೇಕ ಮಂದಿ ಪ್ರೀತಿಯ ಭಾವನೆ ಹೊಂದಿದ್ದರೂ, ಹೃದಯದಲ್ಲಿ ಬಚ್ಚಿಟ್ಟುಕೊಳ್ಳುತ್ತಾರೆ.

    ಕೆಲವರಿಗೆ ಮನಸ್ಸಿನ ಮಾತು ಅರ್ಥವಾದರೆ, ಇನ್ನೂ ಕೆಲವರು ತಮ್ಮ ಬಾಡಿ ಲಾಂಗ್ವೇಜ್‌ನಿಂದಲೇ ತಮ್ಮ ಪ್ರೀತಿ ವ್ಯಕ್ತಪಡಿಸುತ್ತಾರೆ. ಇದರ ಸಹಾಯದಿಂದ ಅವರು ನಿಮ್ಮನ್ನು ಪ್ರೀತಿಸುತ್ತಿದ್ದಾರಾ ಎಂದು ತಿಳಿದುಕೊಳ್ಳಬಹುದು ಆದರೆ ಸಂಪೂರ್ಣವಾಗಿ ಅದೇ ನಿಜ ಎಂದು ಹೇಳಲಾಗುವುದಿಲ್ಲ. ಆದರೀಗ ಅದಕ್ಕೂ ಆನ್‌ಲೈನ್ ದಾರಿ ಮಾಡಿಕೊಟ್ಟಿದೆ. ಅದು ಹೇಗೆ ಅನ್ನೋದನ್ನ ನೋಡಿ..

    1. ಕಣ್ಸನ್ನೆಯ ಮಾತು:
    ಇನ್ನೂ ಆನ್‌ಲೈನ್ ಹೊರತಾಗಿ ನೋಡುವುದಾದರೆ, ಪ್ರೇಮಿಗಳು ಇಷ್ಟಪಡೋದು ಕಣ್ಸನ್ನೆ ಮಾತು. ಉದಾಹರಣೆಗೆ ಅನೇಕ ಸ್ನೇಹಿತರು ಒಟ್ಟಿಗೆ ಎಲ್ಲೋ ಹೋಗಿದ್ದಾರೆ ಎಂದು ಭಾವಿಸೋಣ. ಈ ವೇಳೆ ನಿಮ್ಮ ಸ್ನೇಹಿತ ನೀವು ಅವರತ್ತ ನೋಡಲೆಂದೇ ಪ್ರಯತ್ನಿಸುತ್ತಿದ್ದರೆ ಮತ್ತು ವಿವಿಧ ಕಾರಣಗಳಿಗಾಗಿ ನಿಮ್ಮನ್ನು ನೋಡುತ್ತಿದೆ. ಅವರು ನಿಮ್ಮನ್ನು ಇಷ್ಟಪಡುತ್ತಾರೆ ಎಂದು ಅರ್ಥಮಾಡಿಕೊಳ್ಳಬಹುದು. ಇದನ್ನೂ ಓದಿ: ಬಿದಿರಿನ ಉಡುಪಿನಲ್ಲಿ ಕ್ಯಾಮೆರಾ ಕಣ್ಣಿಗೆ ಪೋಸ್ ಕೊಟ್ಟ ಉರ್ಫಿ ಜಾವೇದ್

    2. ಡೇಟಿಂಗ್ ಆ್ಯಪ್:
    ದೇಶಾದ್ಯಂತ ಡೇಟಿಂಗ್ ಆ್ಯಪ್‌ಗಳು (Dating App) ಹೆಚ್ಚು ಬಳಕೆಯಲ್ಲಿವೆ. ಹೆಚ್ಚಿನ ಯುವಕ ಯುವತಿಯರು ಸ್ವಲ್ಪ ಡಿಫರೆಂಟ್ ಆಗಿ ಇರಬೇಕು ಅಂತಾ ನೆಚ್ಚಿನ ಸಂಗಾತಿ ಆಯ್ಕೆಗಾಗಿ ಈ ಆ್ಯಪ್‌ಗಳ ಮೊರೆಹೋಗುತ್ತಾರೆ. ಸಾವಿರಾರು ಕಿಮೀ ಗಳ ದೂರದಲ್ಲಿರುವ ಗೆಳೆಯ ಗೆಳತಿಯರನ್ನ ಹುಡುಗಿ ಲೈಫ್ ಪಾರ್ಟ್ನರ್ ಮಾಡಿಕೊಳ್ಳುತ್ತಾರೆ. ಆದರೆ ಬಹುತೇಕ ಮಂದಿ ಇಂತಹ ಡೇಟಿಂಗ್ ಆ್ಯಪ್‌ಗಳ ಬಳಕೆಯಿಂದ ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡಿರುವುದೂ ಉಂಟು. ಇದನ್ನೂ ಓದಿ: ಆಸ್ಕರ್ ಪ್ರಶಸ್ತಿ ಪ್ರದಾನಕ್ಕೆ ಕ್ಷಣಗಣನೆ : ಭಾರತದ ಯಾವ ಚಿತ್ರಕ್ಕೆ ಸಿಗತ್ತೆ ಆಸ್ಕರ್?

    3. ಇಷ್ಟ ಆಗಿದ್ರೆ ಹೀಗೆ ತಿಳಿಯುತ್ತೆ:
    ನೀವು ಆನ್‌ಲೈನ್‌ನಲ್ಲಿ ಸಂದೇಶ ಕಳುಹಿಸಿದಾಗ ಅವನು/ಅವಳು ಯಾವಾಗ ಉತ್ತರಿಸುತ್ತಾನೆ ಎಂಬುದು ಗಮನಿಸಬೇಕಾದ ಸಂಗತಿ. ನಿಮ್ಮ ಸಂದೇಶಗಳಿಗೆ ತ್ವರಿತವಾಗಿ ಪ್ರತ್ಯುತ್ತರಿಸಿದರೆ, ಅವರು ನಿಮ್ಮತ್ತ ಸ್ವಲ್ಪವಾದರೂ ಆಕರ್ಷಿತರಾಗಿರುತ್ತಾರೆ ಎಂದರ್ಥ. ಸಂಬಂಧಕ್ಕೆ ಪ್ರಾಮುಖ್ಯತೆ ನೀಡುವುದು. ಸಮಯವನ್ನು ಪ್ರತ್ಯೇಕವಾಗಿ ತೆಗೆದುಕೊಳ್ಳುವುದರಲ್ಲಿಯೇ ನಿಮಗೆ ತಿಳಿಯುತ್ತದೆ.

  • ಲೈಂಗಿಕ ಆಸಕ್ತಿ ಹೆಚ್ಚಾಗ್ತಿದೆಯೇ? – ಪ್ರತಿಯೊಬ್ಬರೂ ತಿಳಿದುಕೊಳ್ಳಲೇಬೇಕಾದ ವಿಷಯಗಳಿವು..

    ಲೈಂಗಿಕ ಆಸಕ್ತಿ ಹೆಚ್ಚಾಗ್ತಿದೆಯೇ? – ಪ್ರತಿಯೊಬ್ಬರೂ ತಿಳಿದುಕೊಳ್ಳಲೇಬೇಕಾದ ವಿಷಯಗಳಿವು..

    ವೈಯಕ್ತಿಕ ಜೀವನಕ್ಕೆ ಲೈಂಗಿಕತೆ ಎಂಬುದು ತುಂಬಾನೇ ಮುಖ್ಯ. ಇದು ಸಂಬಂಧವನ್ನು ಗಟ್ಟಿಗೊಳಿಸುವ ಒಂದು ಭಾಗವೂ ಆಗಿದೆ. ಜೊತೆಗೆ ಆರೋಗ್ಯ (Health) ಸ್ವಾಸ್ಥ್ಯವನ್ನೂ ಕಾಪಾಡುತ್ತದೆ. ಆದ್ರೆ ಜೀವನಕ್ಕೆ ಸೆಕ್ಸ್ ಎಷ್ಟು ಮುಖ್ಯ ಎಂದು ಕೇಳಿದಾಗ ಒಬ್ಬೊಬ್ಬರು ಒಂದೊಂದು ಉತ್ತರ ನೀಡುತ್ತಾರೆ. ಹಾಗೆಯೇ ಹದಿಹರೆಯದವರು, ಯುವಕರು ತಮ್ಮ ದೇಹವು ಪ್ರೌಢಾವಸ್ಥೆಗೆ ಬರುವಾಗ ಹಾರ್ಮೋನ್‌ಗಳ ಪ್ರಭಾವದಿಂದ ಸಾಕಷ್ಟು ದೈಹಿಕ ಮತ್ತು ಭಾವನಾತ್ಮಕ ಬದಲಾವಣೆಗೆ ಒಳಗಾಗುತ್ತದೆ. ಇದರಿಂದ ನಿಮ್ಮ ಸಂವಹನ ಕ್ರಿಯೆಯೂ ಬದಲಾಗಬಹುದು.

    ಈ ಸಂದರ್ಭದಲ್ಲಿ ನಿಮ್ಮ ಲೈಂಗಿಕ ಆರೋಗ್ಯದ (Sexual Health) ಬಗ್ಗೆ ತಿಳಿವಳಿಕೆ ತುಂಬಾನೆ ಮುಖ್ಯವಾಗುತ್ತದೆ. ಕೆಲವು ತಜ್ಞ ವೈದ್ಯರು ನಿಮ್ಮ ದೈಹಿಕ ಮತ್ತು ಭಾವನಾತ್ಮಕ ಆರೋಗ್ಯದ ಮೇಲೆ ಲೈಂಗಿಕತೆಯು ಹೇಗೆ ಪರಿಣಾಮ ಬೀರುತ್ತದೆ? ಅನಗತ್ಯ ಗರ್ಭಧಾರಣೆಗಳಿಂದ, ಅನಾರೋಗ್ಯಕರ ಸಂಬಂಧಗಳಿಂದ ಹೇಗೆ ರಕ್ಷಿಸಿಕೊಳ್ಳಬೇಕು? ಅದಕ್ಕಾಗಿ ಉತ್ತಮ ಲೈಂಗಿಕ ಆರೋಗ್ಯ ಅಭ್ಯಾಸಗಳು ಹೇಗಿರಬೇಕು? ಎನ್ನುವುದರ ಬಗ್ಗೆ ಸಲಹೆ ನೀಡಿದ್ದಾರೆ.ಇದನ್ನೂ ಓದಿ: Exclusive Details- ಯುವರಾಜ್ ಸಿನಿಮಾಗೆ ಮೂರು ಟೈಟಲ್: ‘ಯುವ’ ಫಿಕ್ಸ್ ಆಗಿದ್ದು ಯಾಕೆ?

    ನೀವು ಸಂಭೋಗಿಸಲು ಬಯಸಿದ್ರೆ ಅದು ನಿಮ್ಮ ಆಯ್ಕೆಯಾಗಿರುತ್ತದೆ. ಆದರೆ ನೀವು ಲೈಂಗಿಕ ಸಂಬಂಧ ಹೊಂದಲು ನಿರ್ಧರಿಸಿದರೆ ಸುರಕ್ಷಿತ ಅಭ್ಯಾಸಗಳನ್ನು ತಪ್ಪದೇ ಅನುಸರಿಸಬೇಕಾಗುತ್ತದೆ. ಮುಖ್ಯವಾಗಿ…

    ಯಾವುದೇ ಲೈಂಗಿಕ ಸಂಬಂಧಕ್ಕೆ ಪ್ರವೇಶಿಸುವ ಮೊದಲು ದೀರ್ಘವಾಗಿ ಯೋಚಿಸಿ. ಏಕೆಂದರೆ ಲೈಂಗಿಕ ಕ್ರಿಯೆಗೆ ಒಮ್ಮೆ ಒಡ್ಡಿಕೊಂಡರೆ ಪದೇ ಪದೇ ಪ್ರಚೋದನೆಗೆ ಒಳಗಾಗಬಹುದು. ಇದನ್ನೂ ಓದಿ: Breaking- ‘ಕಬ್ಜ’ ಟ್ರೈಲರ್ ಬಿಡುಗಡೆ ಮಾಡಲಿದ್ದಾರೆ ಬಿಗ್ ಬಿ ಅಮಿತಾಬ್ ಬಚ್ಚನ್

    • ಲೈಂಗಿಕತೆಯಿಂದ ಹರಡುವ ರೋಗಗಳ ಬಗ್ಗೆ ನಿಮ್ಮ ಸಂಗಾತಿಯೊಂದಿಗೆ ಚರ್ಚಿಸಬೇಕು.
    • ಲೈಂಗಿಕತೆಯಿಂದ ಹರಡುವ ರೋಗಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಕಾಂಡೋಮ್‌ಗಳಂತಹ ಸುರಕ್ಷತೆಯನ್ನು ಯಾವಾಗಲೂ ಬಳಸಬೇಕು.
    • ಗರ್ಭಕಂಠದ ಕ್ಯಾನ್ಸರ್ ಲಸಿಕೆ ತೆಗೆದುಕೊಳ್ಳಬೇಕಾಗುತ್ತದೆ.
    • ಲೈಂಗಿಕತೆ ಬಯಸುವವರು ಒಬ್ಬರು ಪಾಲುದಾರರನ್ನ ಮಾತ್ರ ಹೊಂದಿರಬೇಕಾಗುತ್ತೆ.
    • ಮೊದಲು ಗರ್ಭನಿರೋಧಕ ಆಯ್ಕೆಗಳ ಬಗ್ಗೆ ತಿಳಿದುಕೊಳ್ಳಿ. ನಂತರ ಸೂಕ್ತವಾದ ಕ್ರಮ ಅನುಸರಿಸಿ
    • ನಿಯಮಿತ ಪ್ಯಾಪ್ ಪರೀಕ್ಷೆಗಳು (ಯಾವುದೇ ಅಸಹಜತೆಯನ್ನು ಪರೀಕ್ಷಿಸಲು ಗರ್ಭಾಶಯದ ಭಾಗವನ್ನು ಪರಿಶೀಲಿಸಲಾಗುತ್ತದೆ), ಶ್ರೋಣಿಯ ಪರೀಕ್ಷೆಗಳು (ಪುರುಷರ ಮೂತ್ರಭಾಗದ ಪರೀಕ್ಷೆ) ಹಾಗೂ ಲೈಂಗಿಕತೆಯ ಆವರ್ತಕ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು.
    • ಲೈಂಗಿಕ ಕ್ರಿಯೆಗೂ ಮುನ್ನ ನಿಮ್ಮ ಸಂಗಾತಿ ದೇಹದ ಆರೋಗ್ಯದ ಬಗ್ಗೆಯೂ ತಿಳಿದುಕೊಳ್ಳಬೇಕಾಗುತ್ತದೆ. ಅವರ ಗುಪ್ತಾಂಗಗಳಲ್ಲಿ ನೋವಾಗುತ್ತಿದೆಯೇ ಅಥವಾ ಗುಳ್ಳೆಗಳು ಇವೆಯೇ? ವಿಸರ್ಜನೆಯಾಗುತ್ತಿವೆಯೇ? ಅನ್ನೋದರ ಬಗ್ಗೆ ಮೊದಲು ತಿಳಿದುಕೊಳ್ಳಬೇಕು.
    • ಮದ್ಯ ಸೇವನೆ ಮಾಡುವುದು ಹಾಗೂ ಅತಿಯಾದ ಲೈಂಗಿಕತೆಗಾಗಿ ಉದ್ರೇಕಗೊಳಿಸುವ ಮಾತ್ರೆಗಳನ್ನು ಬಳಸೋದನ್ನ ತಪ್ಪಿಸಿ. ಇದರಿಂದ ಅಪಾಯದ ಲೈಂಗಿಕತೆಯಿಂದ ದೂರ ಉಳಿಯಬಹುದು.
    • ಆರೋಗ್ಯಕರ ಸಂಬಂಧಕ್ಕಾಗಿ ಯಾವಾಗಲೂ ನಿಮ್ಮ ಸಂಗಾತಿಯೊಂದಿಗೆ ಗೌರವದಿಂದ ನಡೆದುಕೊಳ್ಳಿ, ಉತ್ತಮ ಸಂವಹನ ನಡೆಸಿ.

    ಸೆಕ್ಸ್ ಏಕೆ ಮುಖ್ಯ?
    * ಇದು ಹೆಣ್ಣು-ಗಂಡಿನ ನಡುವೆ ಬಾಂಧವ್ಯ ಬೆಸೆಯುತ್ತದೆ
    * ಸಂಗಾತಿಯೊಡೆಗೆ ನಿಮ್ಮ ಪ್ರೀತಿ ಹಾಗೂ ಸೆಳೆತ ಎಷ್ಟಿದೆ ಎಂದು ನಿರ್ಧರಿಸುತ್ತದೆ.
    * ಲೈಂಗಿಕ ಅತೃಪ್ತಿಯಿಂದ ದಾಂಪತ್ಯದಲ್ಲಿ ಬಿರುಕುಂಟಾಗುವುದನ್ನು ತಡೆಯುತ್ತದೆ.
    * ಸಂಬಂಧದಲ್ಲಿ ಭದ್ರತೆ ಭಾವನೆ ಮೂಡಿಸುತ್ತದೆ
    * ಇದು ಮನಸ್ಸು ಹಾಗೂ ದೇಹಕ್ಕೆ ಉಲ್ಲಾಸವನ್ನು ನೀಡುತ್ತದೆ
    * ಅಲ್ಲದೆ ಮಗುವನ್ನು ಪಡೆಯಬೇಕೆಂದರೆ ಸೆಕ್ಸ್ ಅತ್ಯವಶ್ಯಕ.
    * ಲೈಂಗಿಕ ಆರೋಗ್ಯದಿಂದ ನಿಮ್ಮ ದೈಹಿಕ ಆರೋಗ್ಯ ಸ್ವಾಸ್ಥ್ಯ ಸುರಕ್ಷಿತವಾಗಿರಲಿದೆ.
    * ಅನಪೇಕ್ಷಿತ ಗರ್ಭಧಾರಣೆ ತಡೆಯಬಹುದು.

  • ಡಯಾಬಿಟಿಸ್ ನಿಯಂತ್ರಿಸಲು ಉಪಯುಕ್ತವಾದ 10 ಆಹಾರಗಳು

    ಡಯಾಬಿಟಿಸ್ ನಿಯಂತ್ರಿಸಲು ಉಪಯುಕ್ತವಾದ 10 ಆಹಾರಗಳು

    ಈಗಿನ ಕಾಲದಲ್ಲಿ ಡಯಾಬಿಟಿಸ್ ಅನ್ನೋ ಪದ ಕೇಳಿದ್ರೆ ಸಾಕು ಎಲ್ಲರು ಹೆದರುವ ಪರಿಸ್ಥಿತಿ ಬಂದಿದೆ. ಹಿಂದೆಲ್ಲ ಸಕ್ಕರೆ ಕಾಯಿಲೆ ಬರೀ ವಯಸ್ಸಾದೋರಿಗೆ ಬರುತ್ತೇ ಅಂತಾ ಮಾತಿತ್ತು. ಆದ್ರೆ ಈಗಿನ ಕಾಲಮಾನದಲ್ಲಿ ಸಣ್ಣ ಸಣ್ಣ ಮಕ್ಕಳು ಕೂಡ ಸಕ್ಕರೆ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಅದಕ್ಕೆ ಕಾರಣ ನಮ್ಮ ಜೀವನ ಶೈಲಿ. ಹೌದು, ನಮ್ಮ ದೇಹದ ಆರೋಗ್ಯ ನಿಂತಿರೋದೆ ನಮ್ಮ ಜೀವನ ಶೈಲಿ ಮೇಲೆ ಅಂದ್ರೆ ತಪ್ಪಾಗಲ್ಲ. ನಾವು ಪ್ರತಿನಿತ್ಯ ಹೇಗೆ ನಮ್ಮ ಆರೋಗ್ಯದ ಬಗ್ಗೆ ಕಾಳಜಿ ಮಾಡ್ತಿವೋ ಹಾಗೆ ನಮ್ಮ ಆರೋಗ್ಯ ಇರತ್ತೆ.

    ಈಗಿನ ಕಾಲದಲ್ಲಿ ನಾವು ಆರೋಗ್ಯದ ಬಗ್ಗೆ ಕಾಳಜಿ ವಹಿಸೋದು ಕಡಿಮೆ. ಡಯಾಬಿಟಿಸ್ ಕಾಯಿಲೆಗಳು ಇತ್ತೀಚೆಗೆ ಸರ್ವೆ ಸಾಮಾನ್ಯ ವೃದ್ಧರಿಂದ ಹಿಡಿದು ಪುಟ್ಟ ಮಕ್ಕಳಲ್ಲೂ ಡಯಾಬಿಟಿಸ್ ಕಾಯಿಲೆ ಕಂಡುಬರುತ್ತದೆ. ಡಯಾಬಿಟಿಸ್ ನಿಯಂತ್ರಿಸಲು ರೋಗಿಗಳು ಹಲವಾರು ಮಾತ್ರೆ, ಔಷಧಿಗಳನ್ನು ಸೇವಿಸ್ತಾರೆ. ಆದ್ರೆ ಕೇವಲ ಮಾತ್ರೆ ಸೇವಿಸದ್ರೆ ಡಯಾಬಿಟಿಸ್ ನಿಯಂತ್ರಣವಾಗಲ್ಲ. ಔಷಧಿ ಜೊತೆಗೆ ಸರಿಯಾಗಿ ಮಿತವಾದ ಆಹಾರ ಸೇವನೆಯಿಂದ ಹಾಗೂ ವ್ಯಾಯಾಮದಿಂದ ಡಯಾಬಿಟಿಸ್ ಕಾಯಿಲೆಯನ್ನು ನಿಯಂತ್ರಿಸಬಹುದು. ಯಾವೆಲ್ಲ ಆಹಾರಗಳು ಡಯಾಬಿಟಿಸ್ ನಿಯಂತ್ರಿಸಲು ಉಪಯುಕ್ತ ಎಂಬ ಪಟ್ಟಿ ಇಲ್ಲಿದೆ.

    ಡಯಾಬಿಟಿಸ್ ನಿಯಂತ್ರಿಸಲು ಉಪಯುಕ್ತವಾದ 10 ಆಹಾರಗಳು:

    1. ಕೊಬ್ಬಿನಾಂಶವಿರುವ ಮೀನುಗಳು: ಸಾಲ್ಮನ್, ಹೆರ್ರಿಂಗ್ ಮ್ಯಾಕ್ರೆಲ್ ತರಹದ ಮೀನುಗಳಲ್ಲಿ ಡಿಎಚ್‍ಎ ಮತ್ತು ಇಎಫ್‍ಎ, ಓಮೆಗಾ-3 ಕೊಬ್ಬಿನಾಂಶವಿರುತ್ತದೆ. ಇದು ಹೃದಯದ ಆರೋಗ್ಯಕ್ಕೆ ಒಳ್ಳೆದು. ಇಂತಹ ಮೀನಿನಲ್ಲಿರುವ ಪೌಷ್ಟಿಕಾಂಶವು ರಕ್ತನಾಳದಲ್ಲಿರುವ ಜೀವಕೋಶಗಳನ್ನು ಕಾಪಾಡಿ, ದೇಹದಲ್ಲಿ ರಕ್ತ ಸಂಚಲನವನ್ನು ವೃದ್ಧಿಸುತ್ತದೆ. ಅಲ್ಲದೆ ಇದನ್ನು ಸೇವಿಸುವುದರಿಂದ ಡಯಾಬಿಟಿಸ್ ನಿಯಂತ್ರಿಸಬಹುದು.

    2. ಹಸಿರು ತರಕಾರಿಗಳು: ಹಸಿರು ತರಕಾರಿಗಳಲ್ಲಿ ಹೆಚ್ಚು ಪೌಷ್ಟಿಕಾಂಶದ ಜೊತೆಗೆ ಕಡಿಮೆ ಕ್ಯಾಲೋರಿಯನ್ನು ಹೊಂದಿರುತ್ತವೆ. ಇದನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಅಂಶವು ನಿಯಂತ್ರಣದಲ್ಲಿರುತ್ತದೆ. ಅಷ್ಟೆ ಅಲ್ಲದೆ ಹಸಿರು ತರಕಾರಿ ಹೃದಯಕ್ಕೆ ಹಾಗೂ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು.

    3. ದಾಲ್ಚಿನ್ನಿ: ಇದರಲ್ಲಿ ರೋಗನಿರೋಧಕ ಅಂಶವು ಹೆಚ್ಚಾಗಿ ಇರುತ್ತದೆ. ದಾಲ್ಚಿನ್ನಿಯನ್ನು ನಿತ್ಯದ ಆಹಾರದಲ್ಲಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸಿ, ದೇಹದಲ್ಲಿನ ಇನ್ಸುಲಿನ್ ಪ್ರಮಾಣವನ್ನು ಸರಿಯಾಗಿ ಇಡುತ್ತದೆ. ಅಲ್ಲದೆ ಇದರಲ್ಲಿ ಕಡಿಮೆ ಕೊಲೆಸ್ಟ್ರಾಲ್ ಇರುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

    4. ಮೊಟ್ಟೆ: ಪ್ರತಿದಿನವು ಕೋಳಿ ಮೊಟ್ಟೆಯನ್ನು ಆಹಾರದಲ್ಲಿ ಸೇವಿಸುವುದರಿಂದ ಅದ್ಭುತ ಪ್ರಯೋಜನವನ್ನು ಪಡೆಯಬಹುದು. ಇದು ಹೃದಯ ಸಂಬಂಧಿ ಕಾಯಿಲೆಗಳು ಬಾರದಂತೆ ನೊಡಿಕೊಳ್ಳುತ್ತದೆ. ಮೊಟ್ಟೆಯಲ್ಲಿ ಉತ್ತಮ ಪೌಷ್ಟಿಕಾಂಶ ಹಾಗೂ ಕೊಬ್ಬಿನಾಂಶ ಇರುವುದರಿಂದ ದೇಹಕ್ಕೆ ಒಳ್ಳೆಯ ಕೊಲೆಸ್ಟ್ರಾಲ್‍ಗಳನ್ನು ನೀಡಿ ಕೆಟ್ಟ ಕೊಲೆಸ್ಟ್ರಾಲ್‍ಗಳನ್ನು ದೂರವಿಡುತ್ತದೆ.

    5. ಕಾಮಕಸ್ತೂರಿ ಬೀಜ: ದಿನನಿತ್ಯ ಆಹಾದಲ್ಲಿ ನೇರವಾಗಿ ಅಥವಾ ಹಾಲು, ನೀರು, ಜ್ಯೂಸ್‍ನಲ್ಲಿ ಕಾಮಸ್ತೂರಿ ಬೀಜವನ್ನು ಸೇರಿಸಿ ತಿನ್ನುವುದರಿಂದ ದೇಹಕ್ಕೆ ಫೈಬರ್ ಅಂಶ ದೊರೆಯುತ್ತದೆ. ಹಾಗೆಯೆ ಇದು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಇಂಸುಲಿನ್ ಪ್ರಮಾಣವನ್ನು ನಿಯಂತ್ರಿಸುತ್ತದೆ.

    6. ಅರಶಿಣ: ಅರಶಿಣ ಒಂದು ಉತ್ತಮ ರೋಗನಿರೋಧಕ ಶಕ್ತಿ ಹೊಂದಿರುವ ಪದಾರ್ಥವಾಗಿದೆ. ಪ್ರತಿದಿನ ಹಾಲು ಅಥವಾ ನೀರಿನಲ್ಲಿ ಅರಶಿಣ ಪುಡಿಯನ್ನು ಸೇರಿಸಿ ಕುಡಿಯುವುದರಿಂದ ರಕ್ತದಲ್ಲಿ ಸಕ್ಕರೆ ಅಂಶ ನಿಯಂತ್ರಿಸಬಹುದು ಹಾಗೂ ಹೃದಯ ಮತ್ತು ಕಿಡ್ನಿ ಸರಿಯಾಗಿ ದೇಹದಲ್ಲಿ ಕಾರ್ಯ ನಿರ್ವಹಿಸಲು ಸಹಾಯ ಮಾಡುತ್ತದೆ.

    7. ಒಣ ಬೀಜಗಳು: ಬಾದಾಮಿ, ಗೇರು ಬೇಜ, ಪಿಸ್ತಾ, ಶೇಗಾ ಬೀಜ, ವಾಲ್‍ನಟ್ಸ್‍ನಲ್ಲಿ ಆರೋಗ್ಯಕರ ಪೌಷ್ಟಿಕಾಂಶ ಇರುತ್ತದೆ. ಒಣ ಬೀಜಗಳನ್ನು ನಿತ್ಯವು ಸೇವಿಸುವುದರಿಂದ ಜೀರ್ಣಶಕ್ತಿಯು ಹೆಚ್ಚಾಗುತ್ತದೆ. ಇದು ದೇಹದಲ್ಲಿ ಕೊಲೆಸ್ಟ್ರಾಲ್ ನಿಯಂತ್ರಿಸುತ್ತದೆ. ಅಲ್ಲದೆ ದೇಹದಲ್ಲಿ ಸಕ್ಕರೆ ಅಂಶ ಮಿತವಾಗಿ ಇರುವಂತೆ ನೋಡಿಕೊಳ್ಳುತ್ತದೆ.

    8. ಆಲಿವ್ ಎಣ್ಣೆ: ಅಡುಗೆಯಲ್ಲಿ ಆಲಿವ್ ಎಣ್ಣೆ ಬಳಸುವುದರಿಂದ ದೇಹಕ್ಕೆ ಉತ್ತಮ ಒಲಿವಿಕ್ ಆಮ್ಲ ದೊರೆಯುತ್ತದೆ. ಇದು ದೇಹದಲ್ಲಿ ರಕ್ತ ಸಂಚಲನ ಸರಿಯಾಗಿ ಆಗುವಂತೆ ನೋಡಿಕೊಳ್ಳುತ್ತದೆ. ಹಾಗೆಯೆ ಹೃದಯದ ಆರೋಗ್ಯಕ್ಕೂ ಒಳ್ಳೆಯದು.

    9. ಬೆಳುಳ್ಳಿ: ಇದರಲ್ಲಿ ರೋಗನಿರೋಧಕ ಅಂಶವಿರುತ್ತದೆ. ಇದು ಕೆಟ್ಟ ಕೊಲೆಸ್ಟ್ರಾಲ್ ರಕ್ತದಲ್ಲಿ ಸೇರೆದಂತೆ ನೋಡಿಕೊಳ್ಳುತ್ತದೆ. ರಕ್ತದ ಒತ್ತಡವನ್ನು ನಿಯಂತ್ರಿಸುತ್ತದೆ.

    10. ಅಗಸೆ ಬೀಜ: ಅಗಸೆ ಬೀಜವನ್ನು ನೇರವಾಗಿ ಅಥವಾ ಪುಡಿ ಮಾಡಿ ಆಹಾರದೊಂದಿಗೆ ಸೇರಿಸಿ ತಿನ್ನುವುದರಿಂದ ಹೃದಯದ ಆರೋಗ್ಯ ಉತ್ತಮಗೊಳ್ಳುತ್ತದೆ. ಇದು ದೇಹದಲ್ಲಿ ಇನ್ಸುಲಿನ್ ಪ್ರಮಾಣವನ್ನು ನಿಯಂತ್ರಿಸುತ್ತದೆ ಆದ್ದರಿಂದ ಡಯಾಬಿಟಿಸ್ ಕಾಯಿಲೆಯನ್ನು ನಿಯಂತ್ರಣವಾಗುತ್ತದೆ.

    ನೋಡದ್ರಲ್ಲ ಯಾವ ಯಾವ ಆಹಾರವನ್ನು ಸೇವಿಸುವುದರಿಂದ ಡಯಾಬಿಟಿಸ್ ಕಾಯಿಲೆಯನ್ನು ನಿಯಂತ್ರಣವಾಗುತ್ತೆ ಅಂತಾ. ಕೇವಲ ಆರೋಗ್ಯಕರ ಆಹಾರವನ್ನು ಸೇವಿಸಿದರೆ ಸಾಲಲ್ಲಾ. ಆಹಾರದ ಜೊತೆ ಯೋಗ, ವ್ಯಾಯಾಮದ ಅಭ್ಯಾಸ ಮಾಡಿಕೊಂಡರೆ ಉತ್ತಮ ಆರೋಗ್ಯವನ್ನು ನಿಮ್ಮದಾಗಿಸಿಕೊಳ್ಳಬಹುದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಗರ್ಭಿಣಿಯರು ಪಾಲಿಸಲೇಬೇಕಾದ ನಿಯಮಗಳ ಪಟ್ಟಿ ಇಲ್ಲಿದೆ

    ಗರ್ಭಿಣಿಯರು ಪಾಲಿಸಲೇಬೇಕಾದ ನಿಯಮಗಳ ಪಟ್ಟಿ ಇಲ್ಲಿದೆ

    ಸುನಿತಾ ಎ.ಎನ್.

    ರ್ಭಾವಸ್ಥೆ ಎಂಬುದು ಹೆಣ್ಣಿನ ಬಾಳಿನಲ್ಲಿ ಅತ್ಯಾನಂದವನ್ನುಂಟು ಮಾಡುವ ಸಮಯವಾಗಿದೆ. ಈ ಸಮಯದಲ್ಲಿ ತನ್ನ ಆರೋಗ್ಯ ಮಾತ್ರವಲ್ಲದೆ ಗರ್ಭದೊಳಗಿರುವ ಕೂಸಿನ ಕಾಳಜಿಯನ್ನು ಆಕೆ ಮಾಡಬೇಕು. ನವ ಮಾಸವೂ ಆ ಮಗುವನ್ನು ಗರ್ಭದಲ್ಲಿ ಹೊತ್ತು ತನ್ನ ಮತ್ತು ಮಗುವಿನ ಆರೋಗ್ಯವನ್ನು ಕಾಪಾಡಬೇಕಾಗುತ್ತದೆ. ಕೆಲವೊಂದು ನಿಯಮಗಳನ್ನು ಚಾಚೂ ತಪ್ಪದೆ ಅನುಸರಿಸಬೇಕಾಗುತ್ತದೆ.

    ಏನು ತಿನ್ನಬೇಕು? ಏನು ತಿನ್ನಬಾರದು? ಎಂಬುದಾಗಿ ಪಟ್ಟಿ ಮಾಡಿ ಆ ರೀತಿಯೇ ಸೇವಿಸಬೇಕು. ನಿಮಗಿಷ್ಟವಿದ್ದರೂ ಅದು ನಿಮ್ಮ ಮಗುವಿನ ಮೇಲೆ ಪರಿಣಾಮ ಬೀರಬಹುದಾದ್ದರಿಂದ ಕೆಲವು ಆಹಾರಗಳನ್ನು ಕೆಲವೊಂದು ಚಟುವಟಿಕೆಗಳನ್ನು ನೀವು ಮಾಡಲೇಬಾರದು. ವೈದ್ಯರ ಸಲಹೆಯನ್ನು ಪ್ರತಿಯೊಂದು ಹೆಜ್ಜೆ ಹೆಜ್ಜೆಯಲ್ಲೂ ಪಡೆದುಕೊಳ್ಳುತ್ತಿರಬೇಕಾಗುತ್ತದೆ.

    ನಿಮ್ಮ ಗರ್ಭಾವಸ್ಥೆಯ ಸಮಯದಲ್ಲಿ ನಿಮಗೆ ತಿಳಿಯದಂತೆ ನಿಮ್ಮ ದೇಹದಲ್ಲಿ ಅನೇಕ ಬದಲಾವಣೆಗಳು ಉಂಟಾಗುತ್ತಿರುತ್ತವೆ. ಈ ಸಮಯದಲ್ಲಿ ಮನೆಯ ಇತರ ಸದಸ್ಯರುಗಳಿಗಿಂತ ಹೆಚ್ಚಾಗಿ ನೀವು ನಿಮ್ಮ ಗರ್ಭದೊಳಗಿರುವ ಕಂದನಿಗೆ ಹೆಚ್ಚಿನ ಅಸ್ಥೆ ಕಾಳಜಿಯನ್ನು ನೀಡಬೇಕಾಗುತ್ತದೆ. ನಿಮ್ಮ ಆಹಾರದ ಕಡೆಗೆ ಗಮನ ಹರಿಸುವುದರ ಜೊತೆಗೆ ಮದ್ಯಪಾನ, ಧೂಮಪಾನ, ಹೆಚ್ಚಿನ ಕೆಫೀನ್ ಅಂಶಗಳ ಸೇವನೆಯನ್ನು ನೀವು ತ್ಯಜಿಸಬೇಕಾಗುತ್ತದೆ. ಇದರೊಂದಿಗೆ ಇನ್ನೂ ಹೆಚ್ಚಿನ ಚಟುವಟಿಕೆಗಳನ್ನು ನೀವು ಮಾಡುತ್ತಿದ್ದಲ್ಲಿ ಅದಕ್ಕೆಲ್ಲಾ ಪೂರ್ಣ ವಿರಾಮ ಇಡುವ ಸಮಯ ಇದಾಗಿದೆ. ಹೀಗಾಗಿ ಇಲ್ಲಿ ನಿಮ್ಮ ಮತ್ತು ಮಗುವಿನ ಉತ್ತಮ ಆರೋಗ್ಯಕ್ಕಾಗಿ ನೀವು ಏನು ಮಾಡಬೇಕು ಏನು ಮಾಡಬಾರದು ಎನ್ನುವ ಮಾಹಿತಿಯನ್ನು ನೀಡಲಾಗಿದೆ. ಇದನ್ನೂ ಓದಿ: ಗರ್ಭಿಣಿಯರು ಸೇವಿಸಬೇಕಾದ 10 ಸಸ್ಯಹಾರಿ ಆಹಾರ

    ಮಗುವಿನ ಉತ್ತಮ ಆರೋಗ್ಯಕ್ಕಾಗಿ ಏನು ಮಾಡಬೇಕು?

    1. ಸಾಹಸ ಕ್ರಿಯೆಗಳಲ್ಲಿ ಭಾಗವಹಿಸುವುದು ಅಮ್ಯೂಸ್‍ಮೆಂಟ್ ಪಾರ್ಕ್ ಗಳಲ್ಲಿ ಸಾಹಸ ಕ್ರೀಡೆಗಳು, ಏರುವುದು, ಹತ್ತುವುದು, ನೀರಾಟ ಮೊದಲಾದ ಚಟುವಟಿಕೆಗಳಿರುತ್ತವೆ. ನಿಮ್ಮ ಗರ್ಭಾವಸ್ಥೆಯಲ್ಲಿ ಇಂತಹ ಕ್ರಿಯೆಗಳನ್ನು ನೀವು ಮಾಡಲೇಬಾರದು. ರೋಲರ್ ಕೋಸ್ಟರ್ ಸವಾರಿ, ನೀರಿನಾಟ ಮತ್ತು ಒಮ್ಮೆಲೆ ನಿಲ್ಲುವಿಕೆಗಳನ್ನು ಒಳಗೊಂಡಿರುವ ಚಟುವಟಿಕೆಗಳನ್ನು ಮಾಡಬೇಡಿ. ಇದರಿಂದ ಗರ್ಭಪಾತ ಅಥವಾ ನಿಮ್ಮ ಮಗುವಿಗೆ ಹಾನಿಯಾಗುವ ಸಾಧ್ಯತೆ ಇರುತ್ತದೆ.

    2. ಕ್ರೀಡೆಗಳಲ್ಲಿ ಭಾಗವಹಿಸದಿರಿ ಎಲ್ಲಾ ರೀತಿಯ ಕ್ರೀಡೆಗಳು ಗರ್ಭಾವಸ್ಥೆಯ ಸಮಯದಲ್ಲಿ ಹೆಚ್ಚು ಹಾನಿಕಾರಕವಾಗಿರುತ್ತವೆ. ಕ್ರೀಡೆಗಳಲ್ಲಿ ಭಾಗವಹಿಸದಿರಿ. ಫುಟ್‍ಬಾಲ್, ಕ್ರಿಕೆಟ್ ಮತ್ತು ವಾಲಿಬಾಲ್‍ನಂತಹ ಕ್ರೀಡೆಗಳನ್ನು ಗರ್ಭಾವಸ್ಥೆಯಲ್ಲಿ ಆಡಲೇಬಾರದು.

    3. ಸೈಕಲ್ ಸವಾರಿ ಮಾಡಬೇಡಿ. ಮೂರನೇ ತ್ರೈಮಾಸಿಕದಲ್ಲಿ ನಿಮಗೆ ಸೈಕಲ್ ಸವಾರಿಯ ಹುಚ್ಚಿದ್ದರೂ ಈ ಕ್ರಿಯೆಗೆ ಇಳಿಯಬೇಡಿ. ಸೈಕಲ್ ಸವಾರಿ ಮಾಡುವಾಗ ಸೈಕಲ್ ನಿರ್ವಹಣೆಯನ್ನು ಮಾಡುವುದು ಗರ್ಭಕ್ಕೆ ದುಷ್ಪರಿಣಾಮವನ್ನುಂಟು ಮಾಡಬಹುದು. ಅದಲ್ಲದೆ ನೀವು ನಿಯಂತ್ರಣ ತಪ್ಪಿ ಕೆಳಕ್ಕೆ ಬೀಳುವ ಸಾಧ್ಯತೆ ಕೂಡ ಇರುತ್ತದೆ.

    5. ಭಾರ ಎತ್ತುವ ವ್ಯಾಯಾಮಗಳನ್ನು ಮಾಡಬೇಡಿ. ಗರ್ಭಾವಸ್ಥೆಯಲ್ಲಿ ಸಕ್ರಿಯರಾಗಿರುವುದು ಒಳ್ಳೆಯ ವಿಷಯವೇ. ಆದರೆ ಈ ಸಮಯದಲ್ಲಿ ಯಾವುದೇ ಭಾರ ಎತ್ತುವ ವ್ಯಾಯಾಮಗಳನ್ನು ಮಾಡಬೇಡಿ. ಹೊಟ್ಟೆಯ ಮೇಲೆ ಮಲಗಿ ಮಾಡುವ ವ್ಯಾಯಾಮಗಳನ್ನು ಅನುಸರಿಸದಿರಿ. ಹೆಚ್ಚು ನೋವನ್ನುಂಟು ಮಾಡುವ ಸಾಧ್ಯತೆ ಇರುತ್ತದೆ.

    6. ಬಿಸಿ ಬಿಸಿ ನೀರಿನ ಸ್ನಾನ ಮಾಡದಿರಿ. ಹಾಟ್ ಟಬ್‍ನಲ್ಲಿ ಸ್ನಾನ ಮಾಡುವುದು ಅನಾರೋಗ್ಯವನ್ನುಂಟು ಮಾಡುವ ಸಾಧ್ಯತೆ ಇರುತ್ತದೆ. ನಿಮ್ಮ ಮಗುವಿನ ಆರೋಗ್ಯದ ಮೇಲೆ ಇದು ಹಾನಿಯನ್ನುಂಟು ಮಾಡಬಹುದು. ಸೌನಾ ಅಥವಾ ಹಾಟ್ ಬಾತ್ ನಿಮ್ಮ ಆರೋಗ್ಯದ ಮೇಲೆ ಹಾನಿಯನ್ನು ಉಂಟು ಮಾಡಿ ಮಗುವಿಗೆ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಉಗುರು ಬೆಚ್ಚಗಿನ ನೀರಿನ ಸ್ನಾನ ಉತ್ತಮ.

    7. ಜಾಗಿಂಗ್ ಬೇಡ ಎರಡನೆಯ ಮತ್ತು ಮೂರನೆಯ ಮಾಸಿಕದಲ್ಲಿ ಓಡುವುದು, ನೆಗೆಯುವುದು ಮೊದಲಾದ ಕ್ರಿಯೆಗಳನ್ನು ಮಾಡಬೇಡಿ. ಓಟದಲ್ಲಿ ಹೆಚ್ಚಿನ ನಿಯಂತ್ರಣ ಬೇಕಾಗಿರುತ್ತದೆ ಈ ಸಮಯದಲ್ಲಿ ನಮ್ಮ ದೇಹ ಒಗ್ಗುವುದಿಲ್ಲ. ಆದ್ದರಿಂದ ಓಡುವುದನ್ನು ಮಾಡದಿರಿ. ಇದರಿಂದ ಗರ್ಭಪಾತವಾಗುವ ಸಾಧ್ಯತೆ ಇರುತ್ತದೆ.

    8. ಯೋಗ ಮನಸ್ಸಿಗೆ ಉಲ್ಲಾಸ ನೀಡುತ್ತದೆ. ಹಾಗೆಂದ ಮಾತ್ರಕ್ಕೆ ಯೋಗದಲ್ಲಿ ಕಷ್ಟದ ಭಂಗಿಗಳನ್ನು ಅಭ್ಯಸಿಸಬೇಡಿ. ಗರ್ಭಾವಸ್ಥೆಯಲ್ಲಿ ನೀವು ಯೋಗವನ್ನು ಮಾಡದಿರಿ. ಆದರೆ ಕಷ್ಟವಾಗಿರುವ ಭಂಗಿಗಳನ್ನು ಮಾಡದಿರಿ.

    9. ಮನೆಯ ಸ್ವಚ್ಛತೆ ಮಾಡದಿರಿ. ಗರ್ಭಾವಸ್ಥೆಯಲ್ಲಿ ಎಲ್ಲಾ ಕೆಲಸಗಳನ್ನು ಮಾಡುವುದು ಸರಳ ಹೆರಿಗೆಗೆ ಅನುಕೂಲವಾಗಿರುತ್ತದೆ. ಆದರೆ ಮನೆಗೆಲಸ ಮಾಡುವಾಗ ಎತ್ತುವುದು, ಎಳೆಯುವುದು ಮೊದಲಾದ ಕೆಲಸಗಳನ್ನು ಮಾಡದಿರಿ. ಮನೆಯ ಇತರ ಸದಸ್ಯರು ಈ ಕೆಲಸಗಳನ್ನು ಮಾಡುತ್ತಾರೆ. ನೀವು ಆದಷ್ಟು ನಿಮ್ಮ ಆರೋಗ್ಯಕ್ಕೆ ಹೆಚ್ಚು ಗಮನ ನೀಡಬೇಕು. ಅದರಲ್ಲೂ ಮನೆಯ ಸ್ವಚ್ಛಗೊಳಿಸುವ ಕಾರ್ಯದಲ್ಲಿ ಅತಿ ಹೆಚ್ಚಾಗಿ ಬಗ್ಗುವಂತಹ ಕೆಲಸಗಳನ್ನು ಮಾಡಕೂಡದು. ಏಕೆಂದರೆ ಈ ಪರಿ ಬಗ್ಗುವುದರಿಂದ (sciatic nerve) ಅಥವಾ ಬೆನ್ನುಮೂಳೆಯ ಕೆಳಭಾಗದಿಂದ ಕಾಲಿಗೆ ಧಾವಿಸುವ ನರದ ಮೇಲೆ ಹೆಚ್ಚಿನ ಒತ್ತಡ ಬಿದ್ದು ಈ ನರವನ್ನು ಘಾಸಿಗೊಳಿಸಬಹುದು.

    10. ಕೆಲವರಿಗೆ ಕುದುರೆ ಸವಾರಿ ಮಾಡುವ ಅಭ್ಯಾಸವಿರುತ್ತದೆ. ಆದರೆ ಗರ್ಭಾವಸ್ಥೆಯಲ್ಲಿ ಕುದುರೆ ಸವಾರಿ ಮಾಡುವುದು ನಿಮ್ಮ ಗರ್ಭಕ್ಕೆ ಹಾನಿಯನ್ನುಂಟು ಮಾಡುವ ಸಾಧ್ಯತೆ ಹೆಚ್ಚು.

    11. ಹೈಕಿಂಗ್ ನಮ್ಮ ದೇಹಕ್ಕೆ ಉತ್ತಮ ಚಟುವಕೆಯನ್ನು ನೀಡುವ ಕ್ರಿಯೆಯಾಗಿದೆ ಹೈಕಿಂಗ್. ಆದರೆ ಹೈಕಿಂಗ್ ಸಮಯದಲ್ಲಿ ನೀವು ಬೀಳುವ, ಏಟು ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ. ಇದರಿಂದ ನಿಮ್ಮ ಮಗುವಿಗೆ ಹಾನಿಯುಂಟಾಗುವುದು ಹೆಚ್ಚು.

    12. ಗುಡಿಸುವುದು, ಬಟ್ಟೆ ಒಣಗಿಸುವುದು ಇವುಗಳನ್ನೆಲ್ಲಾ ಮಾಡಬೇಡಿ. ಗುಡಿಸುವುದು, ಭಾರವಾದ ವಸ್ತುಗಳನ್ನು ಮೇಲಿಡುವುದು, ಬಟ್ಟೆ ಒಣಗಿಸುವುದು ಗರ್ಭಾವಸ್ಥೆಯಲ್ಲಿ ದೇಹದ ಪ್ರಮುಖ ಗಂಟುಗಳು ಮತ್ತು ಮಡಚುವ ಮೂಳೆಗಳ ಭಾಗಗಳು ಕೊಂಚ ಮೆತ್ತಗಾಗುತ್ತವೆ. ಆದ್ದರಿಂದ ಇತರ ಸಮಯದಲ್ಲಿ ಸುಲಭವಾಗುತ್ತಿದ್ದ ಕೆಲಸಗಳು ಈಗ ಕಷ್ಟವಾಗುತ್ತವೆ. ಆದ್ದರಿಂದ ಈ ಕೆಲಸಗಳಿಗೆಲ್ಲಾ ಮನೆಯವರ ಅಥವಾ ಕೆಲಸದವರ ಸಹಾಯ ಪಡೆಯುವುದು ಒಳ್ಳೆಯದು. ಗುಡಿಸುವುದು, ಭಾರವಾದ ವಸ್ತುಗಳನ್ನು ಮೇಲಿಡುವುದು, ಬಟ್ಟೆ ಒಣಗಿಸುವುದು ಮೊದಲಾದ ಕೆಲಸಗಳಿಗೆ ಸಹಾಯ ಪಡೆದುಕೊಳ್ಳುವುದೇ ಜಾಣತನವಾಗಿದೆ.

     

    13. ಬೆಕ್ಕಿನ ಸಂಗ ಬಿಟ್ಟು ಬಿಡಿ! ಒಂದು ವೇಳೆ ನಿಮ್ಮ ಮನೆಯಲ್ಲಿ ಸಾಕಿರುವ ಬೆಕ್ಕು ಇದ್ದರೆ ಬೆಕ್ಕಿನ ಸಂಗ ಈ ಸಮಯದಲ್ಲಿ ಸಲ್ಲದು. ವಿಶೇಷವಾಗಿ ಬೆಕ್ಕಿನ ಮಲವನ್ನು ಸ್ವಚ್ಛಗೊಳಿಸುವುದಿರಲಿ, ಬಳಿಗೂ ಸುಳಿಯಕೂಡದು. ಏಕೆಂದರೆ ಇದರಲ್ಲಿ ಕೆಲವು ಪರಾವಲಂಬಿ ಕ್ರಿಮಿಗಳಿದ್ದು ಗರ್ಭಿಣಿಗೆ ಮಾರಕವಾಗುತ್ತವೆ. ಅಷ್ಟೇ ಅಲ್ಲ, ಬೆಕ್ಕಿನ ಕೂದಲು ಯಾವುದೇ ಕಾರಣಕ್ಕೂ ಆಹಾರ ಅಥವಾ ನೀರಿನ ಮೂಲಕ ದೇಹ ಪ್ರವೇಶಿಸಬಾರದು. ಇದು ಭಾರೀ ಅಲರ್ಜಿಕಾರಕವಾಗಿದ್ದು ಗರ್ಭಿಣಿಯ ಆರೋಗ್ಯವನ್ನು ಕೆಡಿಸಬಹುದು.

    ಧ್ಯಾನ ಮಾಡಿ
    * ನಿಮಗೆ ಆರಾಮವೆನಿಸುವ ಭಂಗಿಯಲ್ಲಿ ಚಕ್ಕಲೆಮಕ್ಕಲೆ ಕುಳಿತುಕೊಳ್ಳಿ. ಆರಾಮ ಅನ್ನಿಸದಿದ್ದರೆ ಕುರ್ಚಿಯ ಮೇಲೂ ಕುಳಿತುಕೊಳ್ಳಹುದು. ಸಾಧ್ಯವಾದಷ್ಟು ಬೆನ್ನುಮೂಳೆ ನೆಟ್ಟಗೇ ಇರಲಿ.
    * ಮನಸ್ಸು ಸೆಳೆಯುವ ಯಾವುದೇ ವಸ್ತು ಎದುರಿಗಿರದಂತೆ ನೋಡಿಕೂಳ್ಳಿ. ಕಣ್ಣುಮುಚ್ಚಿಕೊಂಡು ನಿಮ್ಮ ಗಮನವನ್ನು ಒಂದು ವಿಷಯದತ್ತ ಕೇಂದ್ರೀಕರಿಸಿ.
    * ಈ ಸಮಯದಲ್ಲಿ ಕೇವಲ ಧನಾತ್ಮಕ ವಿಚಾರಗಳು ಆವರಿಸಲಿ. ಉದಾಹರಣೆಗೆ ನನಗೆ ಹುಟ್ಟಲಿರುವ ಮಗು ಉತ್ತಮ ವ್ಯಕ್ತಿಯಾಗಿದ್ದು ಸಮಾಜದಲ್ಲಿ ಮನ್ನಣೆ ಮತ್ತು ಗೌರವ ಪಡೆಯುತ್ತಾನೆ/ತ್ತಾಳೆ ಇತ್ಯಾದಿ.
    * ಪ್ರತಿದಿನ ಒಂದೇ ಸಮಯವನ್ನು ಆಯ್ದುಕೊಂಡು ಆ ಪ್ರಕಾರವೇ ಅನುಸರಿಸಿ. ಇದರಿಂದ ಹೆರಿಗೆಯ ಸಮಯದಲ್ಲಿ ಮಾತ್ರವಲ್ಲ ಮುಂದಿನ ಜೀವನದಲ್ಲಿಯೂ ಒತ್ತಡವನ್ನು ಸಮರ್ಥವಾಗಿ ಎದುರಿಸಲು ಸಾಧ್ಯ.

    ಗರ್ಭಪಾತದ ಸಾಧ್ಯತೆ:
    ಗರ್ಭಾವಸ್ಥೆಯಲ್ಲಿ ಉಂಟಾಗುವ ಒತ್ತಡವು ಗರ್ಭಕೋಶದಲ್ಲಿ ರಾಸಾಯನಿಕ ಹಾನಿಯನ್ನುಂಟುಮಾಡುವುದು ಎಂದು ವೈದ್ಯರು ಹೇಳುತ್ತಾರೆ. ಒತ್ತಡ ಉಂಟಾದಾಗ ಕಾರ್ಟಿಕೋಟ್ರೋಪಿನ್ ಎನ್ನುವ ಹಾರ್ಮೋನ್ ಬಿಡುಗಡೆಯಾಗುವುದು. ಈ ಹಾರ್ಮೋನ್‍ಗಳ ಬದಲಾವಣೆಯಿಂದ ಗರ್ಭಕೋಶದಲ್ಲಿ ಅಧಿಕ ಸಂಕೋಚನವನ್ನು ಉಂಟುಮಾಡುವುದು. ಇದು ಬಹುತೇಕ ಸಂದರ್ಭದಲ್ಲಿ ಗರ್ಭವನ್ನು ಕುಗ್ಗಿಸುವುದು ಅಥವಾ ಗರ್ಭಪಾತಕ್ಕೆ ಕಾರಣವಾಗುವುದು. ಹಾಗಾಗಿ ಬಾಹ್ಯ ಪರಿಸ್ಥಿತಿ ಹೇಗೇ ಇರಲಿ, ನಿಮ್ಮ ಮಗುವಿನ ಬೆಳವಣಿಗೆ ಉತ್ತಮವಾಗಿರಬೇಕು ಎಂದು ನೀವು ಬಯಸುವುದಾದರೆ ಒತ್ತಡದಿಂದ ದೂರ ಇರಲು ಪ್ರಯತ್ನಿಸಿ. ಮಾನಸಿಕ ಹಾಗೂ ದೈಹಿಕವಾಗಿ ಆರೋಗ್ಯ ಉತ್ತಮವಾಗಿರಿಸಿಕೊಳ್ಳಲು ಹೇಗಿರಬೇಕು ಎನ್ನುವುದರ ಕುರಿತು ಚಿಂತಿಸಿ.

    ಭ್ರೂಣದ ಮೆದುಳು ಬೆಳವಣಿಗೆ:
    ತಾಯಿಯಲ್ಲಾಗುವ ಒತ್ತಡವು ಮಗುವಿನ ಮಿದುಳು ಬೆಳವಣಿಗೆಯ ಮೇಲೆ ನೇರವಾದ ಪ್ರಭಾವ ಉಂಟಾಗುವುದು ಎಂದು ವೈದ್ಯರು ಹೇಳುತ್ತಾರೆ. ಇದು ಮಗುವಿನ ಮೇಲೆ ದೀರ್ಘ ಕಾಲದ ಪರಿಣಾಮ ಬೀರುವುದು ಎಂದು ಹೇಳಲಾಗುವುದು. ಮಗುವಿನ ಮೆದುಳಿನ ಮೇಲೆ ಉಂಟಾದ ಪ್ರಭಾವಗಳು ಮಗು ಹುಟ್ಟಿದ ತಕ್ಷಣ ತಿಳಿಯದು. ದಿನಕಳೆದಂತೆ ಮಗುವಿನ ಬೆಳವಣಿಗೆ ನಡೆಯುವುದು. ಆಗ ಸಮಸ್ಯೆಗಳನ್ನು ಗುರುತಿಸಬಹುದು. ಇಂತಹ ಮಕ್ಕಳಲ್ಲಿ ಅಧಿಕ ರಕ್ತದ ಒತ್ತಡದಂತಹ ಅಪಾಯ ಉಂಟಾಗಬಹುದು. ಮಕ್ಕಳಲ್ಲಿ ಮಾನಸಿಕ ಬದಲಾವಣೆಗಳು ಚಿಂತನೀಯ ರೀತಿಯಲ್ಲಿ ಉಂಟಾಗುವುದು. ಅಲ್ಲದೆ ಮಕ್ಕಳು ಬೆಳವಣಿಗೆ ಹೊಂದಿದ ನಂತರ ಜೀವನದಲ್ಲೂ ಬಹುಬೇಗ ಅಧಿಕ ಒತ್ತಡಕ್ಕೆ ಒಳಗಾಗುವ ಮಾನಸಿಕ ಶಕ್ತಿಯನ್ನು ಪಡೆದುಕೊಳ್ಳುವರು.