Tag: life sentence

  • ಅತ್ಯಾಚಾರ ಕೇಸಲ್ಲಿ ಪ್ರಜ್ವಲ್ ರೇವಣ್ಣಗೆ ಜೀವನಪರ್ಯಂತ ಜೈಲು – ಸಂತ್ರಸ್ತೆಗೆ 11 ಲಕ್ಷ ಪರಿಹಾರ

    ಅತ್ಯಾಚಾರ ಕೇಸಲ್ಲಿ ಪ್ರಜ್ವಲ್ ರೇವಣ್ಣಗೆ ಜೀವನಪರ್ಯಂತ ಜೈಲು – ಸಂತ್ರಸ್ತೆಗೆ 11 ಲಕ್ಷ ಪರಿಹಾರ

    – ಅಪರಾಧಿಗೆ ತೀರ್ಪಿನ ಪ್ರತಿಯನ್ನ ಉಚಿತವಾಗಿ ನೀಡಲು ಕೋರ್ಟ್‌ ಸೂಚನೆ

    ಬೆಂಗಳೂರು: ಮನೆಗೆಲಸದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪ ಪ್ರಕರಣದಲ್ಲಿ ಅಪರಾಧಿ ಪ್ರಜ್ವಲ್ ರೇವಣ್ಣಗೆ (Prajwal Revanna) ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಅತ್ಯಾಚಾರ ಸಂತ್ರಸ್ತೆಗೆ 11 ಲಕ್ಷ ಪರಿಹಾರ ನೀಡುವಂತೆ ಕೋರ್ಟ್ ಆದೇಶ ಹೊರಡಿಸಿದೆ.

    ಪ್ರಕರಣದ ವಾದ-ಪ್ರತಿವಾದ ಆಲಿಸಿದ್ದ ಜನಪ್ರತಿನಿಧಿಗಳ ವಿಶೇಷ (ಸೆಷನ್ಸ್) ನ್ಯಾಯಾಲಯವು, ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಅಪರಾಧಿ ಎಂದು ತೀರ್ಪು ನೀಡಿತ್ತು. ಶಿಕ್ಷೆ ಪ್ರಮಾಣವನ್ನು ಶನಿವಾರ ಪ್ರಕಟಿಸಿದೆ. ನ್ಯಾ. ಗಜಾನನ ಭಟ್ ಅವರಿದ್ದ ಪೀಠವು, ಅಪರಾಧಿಗೆ ಜೀವನ ಪರ್ಯಂತ ಕಾರಾಗೃಹ ವಾಸ ಶಿಕ್ಷೆ ಪ್ರಕಟಿಸಿದೆ. ಇದನ್ನೂ ಓದಿ: ಮನೆಗೆಲಸದಾಕೆ ಮೇಲೆ ಅತ್ಯಾಚಾರ ಕೇಸ್ – ಅಪರಾಧಿ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ

    ಅಪರಾಧಿ ಪ್ರಜ್ವಲ್ ರೇವಣ್ಣಗೆ ಗರಿಷ್ಠ ಶಿಕ್ಷೆ ಜೊತೆ 2 ಸೆಕ್ಷನ್‌ಗಳಡಿ ತಲಾ 5 ಲಕ್ಷದಂತೆ ಒಟ್ಟು 10 ಲಕ್ಷ ರೂ. ದಂಡ ಕೂಡ ವಿಧಿಸಲಾಗಿದೆ. ಜೊತೆಗೆ ಸಂತ್ರಸ್ತೆಗೆ 11.25 ಲಕ್ಷ ಪರಿಹಾರ ನೀಡುವಂತೆ ಸೂಚಿಸಿದೆ. ತೀರ್ಪಿನ ಪ್ರತಿಯನ್ನು ಅಪರಾಧಿಗೆ ಉಚಿತವಾಗಿ ನೀಡುವಂತೆ ಕೋರ್ಟ್‌ ತಿಳಿಸಿದೆ.

    ಐಪಿಸಿ ಸೆಕ್ಷನ್ 376 (ಎನ್) ಅಡಿ ಜೀವನ ಅಂತ್ಯವಾಗುವವರೆಗೆ ಸಜೆ ವಿಧಿಸಲು ಅವಕಾಶವಿದೆ. ಅದೇ ಮಹಿಳೆಯನ್ನ ಪದೇ ಪದೆ ಅತ್ಯಾಚಾರ ಎಸಗಿದ್ರೆ ಜೀವಾವಧಿ ಶಿಕ್ಷೆ ವಿಧಿಸಲು ಅವಕಾಶವಿದೆ. ಇದನ್ನೂ ಓದಿ: ಕಾಲೇಜಲ್ಲಿ ನಾನು ಮೆರಿ‌ಟ್‌ ವಿದ್ಯಾರ್ಥಿ, ಶಿಕ್ಷೆ ಕೊಡುವಾಗ ನನ್ನ ಕುಟುಂಬವನ್ನ ಪರಿಗಣಿಸಿ: ಕೋರ್ಟಲ್ಲಿ ಪ್ರಜ್ವಲ್‌ ರೇವಣ್ಣ ಕಣ್ಣೀರು

    ಏನಿದು ಪ್ರಕರಣ?
    2024ರ ಲೋಕಸಭಾ ಚುನಾವಣೆಗೆ ಹಾಸನ ಕ್ಷೇತ್ರದಿಂದ ಪ್ರಜ್ವಲ್ ರೇವಣ್ಣ ಚುನಾವಣೆಗೆ ಸ್ಪರ್ಧಿಸಿದ್ದ. ಇದೇ ಹೊತ್ತಿನಲ್ಲಿ ಸಂಸದ ಪ್ರಜ್ವಲ್‌ದು ಎನ್ನಲಾದ ಲೈಂಗಿಕ ದೌರ್ಜನ್ಯ ಕೃತ್ಯಗಳ ಹಲವು ವೀಡಿಯೋಗಳು ಮತ್ತು ಫೋಟೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಸಂಸದನ ಮನೆಯಲ್ಲೇ ಕೆಲಸ ಮಾಡಿಕೊಂಡಿದ್ದ 48 ವರ್ಷದ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ವೀಡಿಯೋ ಕೂಡ ಹರಿದಾಡಿತ್ತು. ವೀಡಿಯೋ ವೈರಲ್ ಆಗುತ್ತಿದ್ದಂತೆ ಸಂತ್ರಸ್ತೆ ಕಣ್ಮರೆಯಾಗಿದ್ದರು. ಈ ಸಂಬಂಧ ಸಂತ್ರಸ್ತೆ ಪುತ್ರ 2024ರ ಮೇ 2 ರಂದು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ನನ್ನ ತಾಯಿಯನ್ನು ಜೆಡಿಎಸ್ ಶಾಸಕ ಹೆಚ್.ಡಿ.ರೇವಣ್ಣ ಮತ್ತು ಅವರ ಸಂಬಂಧಿ ಕಿಡ್ನ್ಯಾಪ್ ಮಾಡಿದ್ದಾರೆಂದು ದೂರಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಎಸ್‌ಐಟಿ, ತೋಟದ ಮನೆಯೊಂದರಲ್ಲಿ ಸಂತ್ರಸ್ತೆ ಇರುವುದನ್ನು ಪತ್ತೆಹಚ್ಚಿತ್ತು. ವಿಚಾರಣೆ ವೇಳೆ, ತನ್ನ ಮೇಲೆ ಪ್ರಜ್ವಲ್ ರೇವಣ್ಣ ಅತ್ಯಾಚಾರ ಎಸಗಿದ್ದಾರೆಂದು ಆರೋಪಿಸಿದ್ದರು.

  • ತಾಯಿಗೆ ಕೆಟ್ಟ ಸನ್ನೆ ಮಾಡಿದ್ದವನ ತಲೆ ಕಡಿದು ಪೊಲೀಸ್ ಠಾಣೆಗೆ ತಂದಿದ್ದವನಿಗೆ ಜೀವಾವಧಿ ಶಿಕ್ಷೆ

    ತಾಯಿಗೆ ಕೆಟ್ಟ ಸನ್ನೆ ಮಾಡಿದ್ದವನ ತಲೆ ಕಡಿದು ಪೊಲೀಸ್ ಠಾಣೆಗೆ ತಂದಿದ್ದವನಿಗೆ ಜೀವಾವಧಿ ಶಿಕ್ಷೆ

    ಮಂಡ್ಯ: ತನ್ನ ತಾಯಿಗೆ ಕೆಟ್ಟದಾಗಿ ಸನ್ನೆ ಮಾಡಿದ್ದ ವ್ಯಕ್ತಿಯ ತಲೆ ಕಡಿದುಕೊಂಡು ಪೊಲೀಸ್ ಠಾಣೆಗೆ ತಂದಿದ್ದ ಅಪರಾಧಿಗೆ ಮಂಡ್ಯದ (Mandya ) 2ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (Court) ಜೀವಾವಧಿ ಶಿಕ್ಷೆ (Life Sentence) ಹಾಗೂ 2 ಲಕ್ಷ ರೂ. ದಂಡ ವಿಧಿಸಿದೆ.

    ಮಳವಳ್ಳಿ ತಾಲೂಕಿನ ಚಿಕ್ಕಬಾಗಿಲು ಗ್ರಾಮದ ಪಶುಪತಿ ಜೀವಾವಧಿ ಶಿಕ್ಷೆಗೆ ಗುರಿಯಾದ ಅಪರಾಧಿಯಾಗಿದ್ದಾನೆ. ಆತ ತನ್ನ ತಾಯಿಗೆ ಕೆಟ್ಟ ಸನ್ನೆ ಮಾಡಿದ ಎಂಬ ಕಾರಣಕ್ಕೆ ಗಿರೀಶ್ ಎಂಬಾತನನ್ನು 2018ರ ಸೆ. 29ರಂದು ಜಮೀನಿನ ಬಳಿ ಕೆಲಸ ಮಾಡಲು ಕೊಡಲಿಯನ್ನು ತೆಗೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರ ಕೈಯಲ್ಲಿದ್ದ ಕೊಡಲಿಯನ್ನು ಕಿತ್ತುಕೊಂಡು ಏಕಾಏಕಿ ಗಿರೀಶನ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದ. ಬಳಿಕ ತಲೆ ಕತ್ತರಿಸಿಕೊಂಡು ಬೈಕ್‌ನಲ್ಲಿ ತಂದು ಮಳವಳ್ಳಿ ಪುರ ಪೊಲೀಸ್ ಠಾಣೆಗೆ ತಂದು ಶರಣಾಗಿದ್ದ. ಇದನ್ನೂ ಓದಿ: ನ್ಯಾ.ವರ್ಮಾ ಬಂಗ್ಲೆಯಲ್ಲಿ ಕಂತೆ ಕಂತೆ ನಗದು ಪತ್ತೆ ಕೇಸ್‌ – ಪೊಲೀಸರಿಂದ 8 ಮೊಬೈಲ್‌ ಸೀಜ್‌!

    ಈ ಸಂಬಂಧ ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ವೃತ್ತ ನಿರೀಕ್ಷಕರಾದ ತನಿಖಾಧಿಕಾರಿ ಸರ್ಕಲ್ ಇನ್ಸ್‌ಪೆಕ್ಟರ್ ಶ್ರೀಕಾಂತ್ ಆರ್. ತನಿಖೆ ನಡೆಸಿ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಇದನ್ನೂ ಓದಿ: ಲಾಂಗ್ ವಿವಾದ: ರಜತ್, ವಿನಯ್ 3 ದಿನ ಪೊಲೀಸ್ ಕಸ್ಟಡಿಗೆ

  • ಪತ್ನಿಗೆ 17 ಬಾರಿ ಇರಿದು, ದೇಹದ ಮೇಲೆ ಗಾಡಿ ಓಡಿಸಿದ್ದ ಕೇರಳದ ವ್ಯಕ್ತಿಗೆ ಅಮೆರಿಕದಲ್ಲಿ ಜೀವಾವಧಿ ಶಿಕ್ಷೆ

    ಪತ್ನಿಗೆ 17 ಬಾರಿ ಇರಿದು, ದೇಹದ ಮೇಲೆ ಗಾಡಿ ಓಡಿಸಿದ್ದ ಕೇರಳದ ವ್ಯಕ್ತಿಗೆ ಅಮೆರಿಕದಲ್ಲಿ ಜೀವಾವಧಿ ಶಿಕ್ಷೆ

    ವಾಷಿಂಗ್ಟನ್: 2020 ರಲ್ಲಿ ತನ್ನ ಪತ್ನಿಯನ್ನು ಬರ್ಬರವಾಗಿ ಕೊಂದಿದ್ದ (Murder) ಭಾರತೀಯ ವ್ಯಕ್ತಿಗೆ (Indian) ಫ್ಲೋರಿಡಾದ ನ್ಯಾಯಾಲಯ ಜೀವಾವಧಿ ಶಿಕ್ಷೆಯನ್ನು (Life Sentence) ವಿಧಿಸಿದೆ.

    ವರದಿಗಳ ಪ್ರಕಾರ ದೋಷಿ ಫಿಲಿಪ್ ಮ್ಯಾಥ್ಯೂ ತನ್ನ ಪತ್ನಿ ಮೆರಿನ್ ಜಾಯ್‌ಗೆ 2020ರಲ್ಲಿ 17 ಬಾರಿ ಚಾಕುವಿನಿಂದ ಇರಿದು ಮಾತ್ರವಲ್ಲದೇ ಆಕೆಯ ಕಾರನ್ನು ತೆಗೆದುಕೊಂಡು ಆಕೆಯ ದೇಹದ ಮೇಲೆ ಹರಿಸಿ, ಸ್ಥಳದಿಂದ ಪರಿಯಾಗಿದ್ದ.

    ದಂಪತಿ ಮೂಲತಃ ಕೇರಳದವರು. ಕೇರಳದ (Kerala) ಕೊಟ್ಟಾಯಂ ಮೂಲದ ಮೆರಿನ್ ಜಾಯ್ ಅಮೆರಿಕದಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಆಸ್ಪತ್ರೆಯ ಹೊರಗಡೆ ಆಕೆಯ ಪತಿ ಮ್ಯಾಥ್ಯೂ ಬರ್ಬರವಾಗಿ ಹತ್ಯೆ ಮಾಡಿದ್ದ. ಘಟನೆ ಬಳಿಕ ಜಾಯ್‌ನ ಸಹೋದ್ಯೋಗಿಯೊಬ್ಬರು ವ್ಯಕ್ತಿಯೊಬ್ಬ ಆಕೆಯ ದೇಹದ ಮೇಲೆ ಕಾರನ್ನು ಓಡಿಸಿದ್ದನ್ನು ನೋಡಿದ್ದಾಗಿ ತಿಳಿಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಆಕೆಗೆ ಪದೇ ಪದೇ ಅಳಲು ಮಾತ್ರವೇ ಸಾಧ್ಯವಾಗುತ್ತಿತ್ತು. ಈ ವೇಳೆ ಆಕೆ ತನಗೆ ಒಂದು ಮಗುವಿದೆ ಎಂದು ಹೇಳಿದ್ದಾಗಿ ತಿಳಿಸಿದ್ದರು. ಇದನ್ನೂ ಓದಿ: ದೆಹಲಿ ಮಾಲಿನ್ಯ ನಿಯಂತ್ರಣಕ್ಕೆ ಸಮ ಬೆಸ ಯೋಜನೆ ಜಾರಿ

    ಜಾಯ್ ಸಾವನ್ನಪ್ಪುವುದಕ್ಕೂ ಮುನ್ನ ಪತಿಯ ಬಗ್ಗೆ ಹೇಳಿದ್ದಳು. ಇದರಿಂದ ಆರೋಪಿಯನ್ನು ಬಂಧಿಸಲು ಸಹಾಯವಾಗಿತ್ತು. ನವೆಂಬರ್ 3 ರಂದು ಫ್ಲೋರಿಡಾದ ನ್ಯಾಯಾಲಯ ಆತನಿಗೆ ಅಂತಿಮವಾಗಿ ಜೀವಾವಧಿ ಶಿಕ್ಷೆ ವಿಧಿಸಿದೆ.

    ಮೆರಿನ್ ಜಾಯ್ ಫಿಲಿಪ್ ಮ್ಯಾಥ್ಯೂ ಜೊತೆಗಿನ ಸಂಬಂಧವನ್ನು ಕೊನೆಗೊಳಿಸಲು ಬಯಸಿದ್ದಳು. ಈ ಹಿನ್ನೆಲೆ ಪತಿಯೇ ಆಕೆಯನ್ನು ಕೊಂದಿದ್ದಾನೆ ಎಂದು ವರದಿಯಾಗಿದೆ. ಇದನ್ನೂ ಓದಿ: ಕೇರಳ ಬ್ಲಾಸ್ಟ್- ತೀವ್ರವಾಗಿ ಗಾಯಗೊಂಡಿದ್ದ 61 ವರ್ಷದ ಮಹಿಳೆ ಸಾವು

  • ಅತ್ತೆಯನ್ನ ಕೊಲೆ ಮಾಡಿದ ಅಳಿಯನಿಗೆ ಜೀವಾವಧಿ ಶಿಕ್ಷೆ

    ಅತ್ತೆಯನ್ನ ಕೊಲೆ ಮಾಡಿದ ಅಳಿಯನಿಗೆ ಜೀವಾವಧಿ ಶಿಕ್ಷೆ

    ದಾವಣಗೆರೆ: ಆಸ್ತಿಯ ಸಲುವಾಗಿ ಜಗಳವಾಡಿ ಇಲ್ಲಸಲ್ಲದ ಆರೋಪಗಳನ್ನು ಮಾಡಿ, ಕೊನೆಗೆ ಅಳಿಯ ಅತ್ತೆಯನ್ನು ಕೊಲೆ ಮಾಡಿದ್ದ. ಈಗ ಅವನಿಗೆ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ 10 ಸಾವಿರ ದಂಡವನ್ನು ವಿಧಿಸಿದೆ.

    ದಾವಣಗೆರೆ ನಗರದ ಹೊಂಡದ ಸರ್ಕಲ್‍ನ ಅಭಿರಾಜ್ ಶಿಕ್ಷೆಗೆ ಒಳಗಾದ ಯುವಕ. ಅತ್ತೆ ಭಾಗ್ಯಮ್ಮ ಕೊಲೆಯಾಗಿದ್ದ ಮಹಿಳೆ. 2019 ರ ಜುಲೈ 18 ರಂದು ಭಾಗ್ಯಮ್ಮಳನ್ನು ಆಸ್ತಿ ಆಸೆಗೆ ಅಭಿರಾಜ್ ಕೊಲೆ ಮಾಡಿದ್ದನು. ಈ ಪ್ರಕರಣ ಇನ್ನೂ ನ್ಯಾಯಾಲಯದ ಮುಂದೆ ಇತ್ತು. ಅಭಿರಾಜ್‍ಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ಕೊಟ್ಟಿದ್ದು, ಈ ಕೇಸ್‍ಗೆ ಮುಕ್ತಿ ಸಿಕ್ಕಿದೆ. ಇದನ್ನೂ ಓದಿ: ಇಂದು ರಾಜ್ಯದ ಮೊದಲ ಕೋಕಾ ಕೇಸ್‍ನ ತೀರ್ಪು ಪ್ರಕಟ- ಪಾತಕಿ ಬನ್ನಂಜೆ ರಾಜಾ ಸೇರಿ 13 ಪಾತಕಿಗಳ ಭವಿಷ್ಯ ನಿರ್ಧಾರ

    ಪ್ರಕರಣದ ಹಿನ್ನೆಲೆ: ಈಗಿನ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ನೀಲಗುಂದದ ಹನುಮಂತಪ್ಪ ಅವರ ಪುತ್ರಿ ಭಾಗ್ಯಮ್ಮ ಅವರು 14 ವರ್ಷಗಳ ಹಿಂದೆ ದಾವಣಗೆರೆಯ ಶಿವಕುಮಾರ್ ಅವರನ್ನು ಮದುವೆಯಾಗಿದ್ದರು.

    ಈ ದಂಪತಿಗೆ ಒಂದು ಹೆಣ್ಣು ಮಗು ಜನಿಸಿತ್ತು. ಮದ್ಯವ್ಯಸನ ಚಟದಿಂದಾಗಿ ಶಿವಕುಮಾರ್ ಐದು ವರ್ಷಗಳ ಹಿಂದೆ ಮೃತಪಟ್ಟಿದ್ದ. ಭಾಗ್ಯಮ್ಮ ಮಗಳನ್ನು ಅಕ್ಕನ ಮನೆಯಲ್ಲಿ ಬಿಟ್ಟು, ಗಂಡನ ಸ್ವಂತ ಮನೆಯಲ್ಲಿ ಒಬ್ಬಳೇ ವಾಸವಾಗಿದ್ದಳು. ಶಿವಕುಮಾರ್ ಅಕ್ಕನ ಮಗನಾದ ಅಭಿರಾಜ್, ಭಾಗ್ಯಮ್ಮ ಅವರ ಹಿಂದಿನ ಮನೆಯಲ್ಲೇ ವಾಸವಾಗಿದ್ದ. ಭಾಗ್ಯಮ್ಮ ವಾಸವಿರುವ ಮನೆಯನ್ನು ಹೇಗಾದರೂ ಮಾಡಿ ತನ್ನ ವಶಕ್ಕೆ ಪಡೆದುಕೊಳ್ಳಬೇಕು ಎಂದು ಅವರ ಮನೆಗೆ ಹೋಗಿ ಕಿರುಕುಳ ನೀಡುತ್ತಿದ್ದ.

    ಮಚ್ಚಿನಿಂದ ಕೊಚ್ಚಿದ
    ಭಾಗ್ಯಮ್ಮ ಮನೆಗೆ ಬೇರೆ-ಬೇರೆ ಗಂಡಸರು ಬಂದು ಹೋಗುತ್ತಿದ್ದಾರೆ ಎಂದು ಆಕೆಯ ತಾಯಿ ಹಾಗೂ ಅಣ್ಣನಿಗೆ ಚಾಡಿ ಹೇಳುತ್ತಿದ್ದ. 2019ರ ಜುಲೈ 18 ರಂದು ರಾತ್ರಿ ಅಭಿರಾಜ್ ಮನೆಗೆ ಬಂದಾಗ ತನ್ನ ಬಗ್ಗೆ ಚಾಡಿ ಹೇಳುತ್ತಿರುವುದನ್ನು ಭಾಗ್ಯಮ್ಮ ಪ್ರಶ್ನಿಸಿದ್ದಾರೆ. ಈಕೆಯನ್ನು ಸುಮ್ಮನೆ ಬಿಟ್ಟರೆ ತನಗೆ ಆಸ್ತಿ ಸಿಗುವುದಿಲ್ಲ ಎಂದು ಅಭಿರಾಜ್ ಮಚ್ಚಿನಿಂದ ಭಾಗ್ಯಮ್ಮ ಅವರನ್ನು ಕೊಲೆ ಮಾಡಿದ್ದ. ಇದನ್ನೂ ಓದಿ: ರಣಬೀರ್ ಕಪೂರ್‌ಗೆ ಪತ್ನಿ ಆಗ್ತಾರಾ ನ್ಯಾಷಿನಲ್ ಕ್ರಶ್ ರಶ್ಮಿಕಾ ಮಂದಣ್ಣ?

    ಈ ಪರಿಣಾಮ ಅಂದಿನ ಸಿಪಿಐ ಉಮೇಶ್ ಜಿ.ಬಿ.ತನಿಖೆ ನಡೆಸಿ ದೋಷಾರೋಪಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ವಿಚಾರಣೆ ನಡೆಸಿದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಜೆ.ವಿ.ವಿಜಯಾನಂದ ಅವರು ಆರೋಪ ಸಾಬೀತಾಗಿದೆ ಎಂದು ಅಭಿಪ್ರಾಯಪಟ್ಟಿದ್ದು, ಶಿಕ್ಷೆಯನ್ನು ಪ್ರಕಟಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಕೆ.ಕೆಂಚಪ್ಪ ವಾದ ಮಂಡಿಸಿದ್ದರು.

  • ಗುರಾಯಿಸಿದಕ್ಕೆ ಕೊಲೆ – ಇಬ್ಬರಿಗೆ ಜೀವಾವಧಿ ಶಿಕ್ಷೆ ಪ್ರಕಟ

    ಗುರಾಯಿಸಿದಕ್ಕೆ ಕೊಲೆ – ಇಬ್ಬರಿಗೆ ಜೀವಾವಧಿ ಶಿಕ್ಷೆ ಪ್ರಕಟ

    ಹುಬ್ಬಳ್ಳಿ: ರಸ್ತೆ ಬದಿಯಲ್ಲಿ ಕುಳಿತಾಗ ಗುರಾಯಿಸಿದ್ದಕ್ಕೆ ಓರ್ವ ವ್ಯಕ್ತಿಯನ್ನು ಹತ್ಯೆ ಮಾಡಿದ ಇಬ್ಬರಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.

    2020ರ ಮಾರ್ಚ್‍ನಲ್ಲಿ ನಡೆದಿದ್ದ ಪ್ರಕರಣ ಇದಾಗಿದ್ದು, ಹುಬ್ಬಳ್ಳಿಯ ಪಠಾಣ ಗಲ್ಲಿಯಲ್ಲಿ ಈ ಘಟನೆ ನಡೆದಿತ್ತು. ಇದೇ ಗಲ್ಲಿಯ ನಿವಾಸಿಗಳಾದ ಶಂಶುದ್ದೀನ್ ಸವಣೂರು ಮತ್ತು ಜುಬೇರ್ ಅಹ್ಮದ್ ಅಲಿಯಾಸ್ ಹಾಜಿ ಎಂಬುವವರು ರಸ್ತೆ ಬದಿಯಲ್ಲಿ ಕುಳಿತಿದ್ದರು. ಇದನ್ನೂ ಓದಿ: ಪರವಾನಿಗೆ ಇಲ್ಲದೆ ಬಂದೂಕುಗಳನ್ನು ಹೊಂದಲು ಕೊಡವರಿಗೆ ಅವಕಾಶ- ರಾಜ್ಯಕ್ಕೆ ಸುಪ್ರೀಂ ನೋಟಿಸ್‌

    ಈ ವೇಳೆ ಶಾಬುದ್ದಿನ್ ಇಬ್ಬರಮನ್ನು ಗುರಾಯಿಸಿದ್ದ. ಈ ಕಾರಕ್ಕೆ ಶಂಶುದ್ದೀನ್ ಮತ್ತು ಅಹ್ಮದ್ ಇಬ್ಬರು ಸೇರಿ ಶಾಬುದ್ದಿನ್‍ಗೆ ಮನಬಂದಂತೆ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದಿದ್ದಾರೆ. ಇದನ್ನೂ ಓದಿ: ಚಾಲಕನ ನಿಯಂತ್ರಣ ತಪ್ಪಿದ ಲಾರಿ: ಅರ್ಧ ಮನೆಯೇ ಧ್ವಂಸ

    BRIBE

    ಇಬ್ಬರ ಆರೋಪ ಸಾಬೀತಾಗಿದ್ದು, 5ನೇ ಅಪರ ಮತ್ತು ಜಿಲ್ಲಾ ಸತ್ರ ನ್ಯಾಯಾಲಯವು, ಆರೋಪಿಗಳಿಗೆ ಜೀವಾವಧಿ ಕಠಿಣ ಕಾರಾಗೃಹ ಶಿಕ್ಷೆ ಜೊತೆಗೆ ತಲಾ 1.50 ಲಕ್ಷ ದಂಡ ವಿಧಿಸಿ ತೀರ್ಪು ನೀಡಿದೆ. ದಂಡ ಪಾವತಿಸದೇ ಇದ್ದಲ್ಲಿ ಇನ್ನೂ 2 ವರ್ಷ ಕಾರಾಗೃಹ ಶಿಕ್ಷೆ ಮುಂದುವರಿಸುವಂತೆ, ಜೊತೆಗೆ ದಂಡದ ಮೊತ್ತದಲ್ಲಿ 1.45 ಲಕ್ಷ ಹಣವನ್ನು ಮೃತನ ತಂದೆ ತಾಯಿಗೆ ನೀಡಲು ನ್ಯಾಯಮೂರ್ತಿಗಳು ಆದೇಶ ನೀಡಿದ್ದಾರೆ.

  • ಜೈಲಿನಲ್ಲಿಯೇ ಆತ್ಮಹತ್ಯೆಗೆ ಶರಣಾದ ಕೈದಿ

    ಜೈಲಿನಲ್ಲಿಯೇ ಆತ್ಮಹತ್ಯೆಗೆ ಶರಣಾದ ಕೈದಿ

    ಮುಂಬೈ: ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಕೈದಿಯೊಬ್ಬ ಜೈಲಿನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡ ಘಟನೆ ಯರವಾಡ ತೆರೆದ ಜೈಲಿನಲ್ಲಿರುವ ಬ್ಯಾರಕ್‍ನಲ್ಲಿ ನಡೆದಿದೆ.

    ಗಣೇಶ್ ತಾಂಬೆ (53) ಆತ್ಮಹತ್ಯೆಗೆ ಶರಣಾದ ಕೈದಿ. 2010ರಲ್ಲಿ ವಿರಾರ್‌ನಲ್ಲಿ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ 2011ರಲ್ಲಿ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದನ್ನೂ ಓದಿ: Galwan Clash ಚೀನಾದ ಸುಳ್ಳು ಬಯಲು – 38 ಪಿಎಲ್‌ಎ ಯೋಧರು ಸಾವು – ಭಾರತದ ಸೇನೆಗೆ ಹೆದರಿ ಪರಾರಿಯಾದ ಚೀನಿ ಸೈನಿಕರು

    ಗುರುವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಅಡುಗೆ ಮನೆಯಲ್ಲಿ ಕೆಲಸ ಮುಗಿಸಿದ್ದ ತಾಂಬೆ ಬ್ಯಾರಕ್‍ನೊಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಇತರೆ ಜೈಲು ಕೈದಿಗಳು ಆತನ ಶವವನ್ನು ಕಂಡು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಬಾಲಕಿಯ ತಲೆ ಕಡಿದು ರುಂಡದೊಂದಿಗೆ ಊರಿಡೀ ಸುತ್ತಿದ

    ಉಪ ಪೊಲೀಸ್ ಆಯುಕ್ತ ರೋಹಿದಾಸ್ ಪವಾರ್ ಮಾತನಾಡಿ, ಕೈದಿ ಗುರುವಾರ ಮಧ್ಯಾಹ್ನ ಯರವಾಡ ಜೈಲಿನ ಬ್ಯಾರಕ್‍ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಪ್ರಾಥಮಿಕ ತನಿಖೆಯು ಆತ್ಮಹತ್ಯೆಯನ್ನು ಸೂಚಿಸುತ್ತದೆ. ಆತ್ಮಹತ್ಯೆಗೆ ಕಾರಣ ಹುಡುಕುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಹಣದಾಸೆಗೆ ಅಂಧ ಸ್ನೇಹಿತನನ್ನ ಕೊಂದ ವ್ಯಕ್ತಿಗೆ ಜೀವಾವಧಿ ಶಿಕ್ಷೆ!

    ಹಣದಾಸೆಗೆ ಅಂಧ ಸ್ನೇಹಿತನನ್ನ ಕೊಂದ ವ್ಯಕ್ತಿಗೆ ಜೀವಾವಧಿ ಶಿಕ್ಷೆ!

    ಹುಬ್ಬಳ್ಳಿ: ಹಣದಾಸೆಗಾಗಿ ಕುರುಡ ಸ್ನೇಹಿತನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ 1ನೇ ಅಧಿಕ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ ಅಪರಾಧಿ ಬಸವರಾಜ್ ಜಿಗಳೂರಗೆ 21 ಲಕ್ಷ ರೂ. ದಂಡ ಹಾಗೂ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ.

    ಹುಬ್ಬಳ್ಳಿಯ ಉಣಕಲ್ ಕೆರೆ ಬಳಿ 2015 ಮೇ 23 ರಂದು ರಾತ್ರಿ ಅಂಧ ಜಗದೀಶ್ ಪರಮೇಶ್ವರ್ ಶಿರಗುಪ್ಪಿ ಅವರನ್ನು ಕೊಲೆಗೈದ ಬಸವರಾಜ್, 51.40 ಲಕ್ಷ ದೋಚಿಕೊಂಡು ಪರಾರಿಯಾಗಿದ್ದ. ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈಗ ಬಸವರಾಜ್ ಗೆ ಜೀವಾವಧಿ ಶಿಕ್ಷೆಯನ್ನು ನ್ಯಾಯಾಲಯ ವಿಧಿಸಿದೆ. ಇದನ್ನೂ ಓದಿ: ‘ಜೈ ಶ್ರೀ ರಾಮ್’ ಹೇಳುವಂತೆ ಒತ್ತಾಯಿಸಿ ಕಾಶ್ಮೀರದ ವ್ಯಾಪಾರಿಗಳ ಮೇಲೆ ಹಲ್ಲೆ

    ಹೇಗೆ ನಡೆಯಿತು?
    ಜಗದೀಶ್ ಅವರ ಸಂಬಳದ ಅರಿಯರ್ಸ್ 21.50 ಲಕ್ಷ ಗದಗ ಬ್ಯಾಂಕ್ ಖಾತೆಗೆ ಜಮೆ ಆಗಿತ್ತು. ಅಂಧನಾಗಿರುವ ಜಗದೀಶ್ ಸಹಾಯಕ್ಕಾಗಿ ಧಾರವಾಡದ ಗೆಳೆಯ ಬಸವರಾಜ್ ಗೆ ಹಣವನ್ನು ತೆಗೆದುಕೊಂಡು ಬರಲು ಜೊತೆಗೆ ಬರುವಂತೆ ಕೇಳಿಕೊಂಡಿದ್ದ. ಅದರಂತೆ 2015 ಮೇ 22 ರಂದು ಬಸವರಾಜ್ ಜಗದೀಶ್ ಅವರನ್ನು ಕರೆದುಕೊಂಡು ಹೋಗಿ ಹಣ ವಿತ್ ಡ್ರಾ ಮಾಡಿಸಿಕೊಟ್ಟಿದ್ದ. ಆದರೆ ಇದಕ್ಕೂ ಮೊದಲೇ ಹಣವನ್ನು ದೋಚಿಕೊಂಡು ಹೋಗಬೇಕೆಂದು ಸಂಚು ರೂಪಿಸಿದ್ದನು.

    ಈ ಹಿನ್ನೆಲೆ ಆತ ಗದಗದ ಗ್ರೇನ್ ಮಾರ್ಕೆಟ್‍ನಲ್ಲಿ ಮಚ್ಚು ಖರೀದಿ ಮಾಡಿ ತಂದಿದ್ದ. ಜಗದೀಶ್ ಅವರನ್ನು ಮೇ 23 ರಂದು ರಾತ್ರಿ 8 ರ ಸುಮಾರಿಗೆ ಉಪಾಯದಿಂದ ಉಣಕಲ್ ಸಿದ್ಧಪಜ್ಜನ ಮಠದ ಹಿಂದಿರುವ ಕೆರೆ ಬಳಿ ಕರೆದುಕೊಂಡು ಹೋಗಿದ್ದ ಬಸವರಾಜ್ ಅಲ್ಲಿ ಅಂಧ ಗೆಳೆಯನಿಗೆ ಮಚ್ಚಿನಿಂದ ಸಿಕ್ಕಸಿಕ್ಕಲ್ಲಿ ಹೊಡೆದಿದ್ದ. ಗಂಭೀರ ಗಾಯಗೊಂಡ ಜಗದೀಶ್ ಬಸವರಾಜ್ ಬಳಿಯಿಂದ 1.40 ಲಕ್ಷ ಕಿತ್ತುಕೊಂಡು ಜಾಗ ಖಾಲಿ ಮಾಡಿದ್ದು, ನಂತರ ಚಿಕಿತ್ಸೆ ಫಲಕಾರಿ ಆಗದೇ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಇದನ್ನೂ ಓದಿ: ಜಿನೋಮಿಕ್ ಸೀಕ್ವೆನ್ಸ್ ಫಲಿತಾಂಶಕ್ಕೆ ಕನಿಷ್ಠ 7-8 ದಿನಗಳು ಬೇಕಾಗುತ್ತದೆ: ಸುಧಾಕರ್

    ಈ ಕುರಿತು ತನಿಖೆ ನಡೆಸಿದ ವಿದ್ಯಾನಗರ ಠಾಣೆ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಬಿರಾದಾರ ದೇವೇಂದ್ರಪ್ಪ ಎನ್ ಅವರು ಶನಿವಾರ ಶಿಕ್ಷೆ ಪ್ರಮಾಣ ಪ್ರಕಟಿಸಿದ್ದಾರೆ. ದಂಡದ 46 ಲಕ್ಷದಲ್ಲಿ 8.90 ಸಾವಿರ ಜಗದೀಶ್ ತಾಯಿಗೆ, 10 ಸಾವಿರ ಕಾನೂನು ಸೇವಾ ಪ್ರಾಧಿಕಾರಕ್ಕೆ ಭರಿಸಲು ಆದೇಶ ನೀಡಲಾಗಿದೆ. ಸರ್ಕಾರಿ ಅಭಿಯೋಜಕ ಗಿರಿಜಾ ಎಸ್. ತಮ್ಮಿನಾಳ ಈ ವಾದ ಮಂಡಿಸಿದ್ದರು.

  • ಶ್ರೀಮಂತನ ಸ್ನೇಹ ಬೆಳೆಸಿ ಸುಲಿಗೆ – ಹನಿಟ್ರ್ಯಾಪ್ ಸಂಚುಕೋರರಿಗೆ ಜೀವಾವಧಿ ಶಿಕ್ಷೆ

    ಶ್ರೀಮಂತನ ಸ್ನೇಹ ಬೆಳೆಸಿ ಸುಲಿಗೆ – ಹನಿಟ್ರ್ಯಾಪ್ ಸಂಚುಕೋರರಿಗೆ ಜೀವಾವಧಿ ಶಿಕ್ಷೆ

    ಹುಬ್ಬಳ್ಳಿ: ಶ್ರೀಮಂತ ವ್ಯಕ್ತಿಯೊಂದಿಗೆ ಸಲುಗೆ ಬೆಳೆಸಿಕೊಂಡು ಆತನನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸಹಚರರೊಂದಿಗೆ ಚಾಕುವಿನಿಂದ ಇರಿದು ಸುಲಿಗೆ ಮಾಡಿದ ಯುವತಿ ಸೇರಿದಂತೆ ನಾಲ್ವರು ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾರೆ.

    ಹನಿಟ್ರ್ಯಾಪ್ ಹಾಗೂ ಸುಲಿಗೆ ಮಾಡಿದ ನಾಲ್ವರಿಗೆ ಹುಬ್ಬಳ್ಳಿಯ 5ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಾಲ್ವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ನೀಡಿದ್ದು, ಸುಲಿಗೆಕೋರರು ಕಂಬಿ ಪಾಲಾಗಿದ್ದಾರೆ.

    ಏನಿದು ಪ್ರಕರಣ?
    ಶ್ರೀಮಂತರನ್ನು ಪತ್ತೆ ಮಾಡಿ ಅವರೊಂದಿಗೆ ಸ್ನೇಹ ಬೆಳೆಸಿ ಸಲುಗೆಯಿಂದ ಹಣ ಕೀಳುವ ಉದ್ದೇಶದಿಂದ ಹುಬ್ಬಳ್ಳಿಯ ನಾಲ್ವರು ಹೊಂಚು ಹಾಕಿದ್ದರು. ಅನಘಾ ವಡವಿ ಎನ್ನುವ ಯುವತಿಯೊಂದಿಗೆ ಸ್ನೇಹ ಬೆಳೆಸಿದ ಬಲಬೀರ ದುರ್ಗಾಜಿರಾವ್ ಎಂಬವರನ್ನು 2017ರ ಜುಲೈ 30 ರಂದು ಅನಘಾ ಕಾರವಾರ ರಸ್ತೆಯ ಸೈನಿಕ ಶಾಲೆಯ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ಯಿದ್ದಳು. ಈ ವೇಳೆಗೆ ಅಲ್ಲಿಗೆ ಬಂದ ಅನಘಾ ಸಹಚರರಾದ ರಮೇಶ್ ಹಜಾರೆ, ಗಣೇಶ ಶೆಟ್ಟಿ, ವಿನಾಯಕ ಹಜಾರೆ, ಬಲಬೀರ ಮೇಲೆ ದಾಳಿ ಮಾಡಿದ್ದರು. ನಮ್ಮ ಹುಡುಗಿಯನ್ನ ರೇಪ್ ಮಾಡಲು ಬಂದಿದ್ದೀಯ ಎಂದು ಬೆದರಿಸಿ 5 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಆದರೆ ಹನಿಟ್ರ್ಯಾಪ್ ಗೆ ಒಳಗಾದ ಬಲಬೀರ ತನ್ನ ಬಳಿ ಹಣವಿಲ್ಲ ಎಂದಾಗ ಸುಲಿಗೆಕೋರರು ಬಲಬೀರಗೆ ಚಾಕುವಿನಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದರು.

    ಬಲಬೀರ ಬಳಿಯ ಇದ್ದ ಮೊಬೈಲ್ ಫೋನ್, ಎಟಿಎಂ ಕಾರ್ಡ್ ಕಿತ್ತುಕೊಂಡು ಹತ್ತಿರದ ಎಟಿಎಂಗೆ ಕರೆದುಕೊಂಡು ಹೋಗಿ 10 ಸಾವಿರ ರೂಪಾಯಿ ಡ್ರಾ ಮಾಡಿಸಿಕೊಂಡು ಬಲಬೀರನನ್ನ ಸಿದ್ಧಾರೂಢ ಮಠದ ಬಳಿ ಬಿಟ್ಟು ಪರಾರಿಯಾಗಿದ್ದರು. ಘಟನೆಯ ಕುರಿತು ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.

    ಈ ಪ್ರಕರಣದ ವಿಚಾರಣೆ ನಡೆಸಿದ 5ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಕೆ.ಎನ್. ಗಂಗಾಧರ್ ಅವರು ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಲು ಆದೇಶಿಸಿದ್ದಾರೆ.

    ಆರೋಪಿಗಳಾದ ನಾಲ್ವರಿಗೆ ಜೀವಾವಧಿ ಶಿಕ್ಷೆ ಹಾಗೂ ರಮೇಶ್, ಗಣೇಶ್. ವಿನಾಯಕ್‍ಗೆ ತಲಾ 17,500 ರೂಪಾಯಿ ದಂಡ ಹಾಗೂ ಆರೋಪಿತಳಾದ ಯುವತಿ ಅನಘಾಗೆ 15,000 ಸಾವಿರ ದಂಡ ವಿಧಿಸಿದ್ದಾರೆ. ಇದನ್ನೂ ಓದಿ: ಕಂಟೇನರ್​ಗೆ ಲಾರಿ ಡಿಕ್ಕಿ – ಇಬ್ಬರ ದುರ್ಮರಣ

  • ಮೊಬೈಲ್ ಚಾರ್ಜರ್ ವಯರ್‌ನಿಂದ ಪತಿಯ ಕೊಲೆ – ವಕೀಲೆಗೆ ಜೀವಾವಧಿ ಶಿಕ್ಷೆ

    ಮೊಬೈಲ್ ಚಾರ್ಜರ್ ವಯರ್‌ನಿಂದ ಪತಿಯ ಕೊಲೆ – ವಕೀಲೆಗೆ ಜೀವಾವಧಿ ಶಿಕ್ಷೆ

    – ನಾನು ಕೊನೆಯವರೆಗೂ ಹೋರಾಡುತ್ತೇನೆ

    ಕೋಲ್ಕತ್ತಾ: ಮೊಬೈಲ್ ಚಾರ್ಜರ್ ವಯರ್‌ನಿಂದ ಪತಿಯ ಕತ್ತು ಬಿಗಿದು ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ವಕೀಲೆಗೆ ಪಶ್ಚಿಮ ಬಂಗಾಳದ ಪ್ರಥಮ ದರ್ಜೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

    ವಕೀಲೆ ಅನಿಂದಿತಾ ಪಾಲ್‍ಗೆ ಶಿಕ್ಷೆಗೆ ಒಳಗಾಗಿದ್ದು, ಜೀವಾವಧಿ ಶಿಕ್ಷೆ ಮತ್ತು 10,000 ರೂಪಾಯಿ ದಂಡ ವಿಧಿಸಲಾಗಿದೆ. ಪಶ್ಚಿಮ ಬಂಗಾಳದ 24 ಪರಗಣ ಜಿಲ್ಲೆಯ ತ್ವರಿತ ನ್ಯಾಯಾಲಯವು ವಕೀಲೆಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

    ಅಪರಾಧಿ ಸಾಕ್ಷ್ಯಗಳ ನಾಶಕ್ಕೂ ಕಾರಣ ಆಗಿದ್ದಾಳೆ ಎಂದು ನ್ಯಾಯಾಲಯ ಅಭಿಪ್ರಾಯ ವ್ಯಕ್ತಪಡಿಸಿದ್ದು, ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ.

    ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಬಿಭಾಸ್ ಚಟರ್ಜಿ, ಇದು ಪೂರ್ವನಿಯೋಜಿತ ಕೊಲೆ ಎಂದು ಆರೋಪಿಸಿ ಮರಣದಂಡನೆ ಶಿಕ್ಷೆ ವಿಧಿಸುವಂತೆ ವಾದ ಮಾಡಿಸಿದ್ದರು. ಆದರೆ ಅಪರಾಧಿ ಮೂರು ವರ್ಷದ ಮಗುವನ್ನು ಹೊಂದಿದ್ದರಿಂದ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. ಅಲ್ಲದೇ ಪ್ರತ್ಯಕ್ಷ ದರ್ಶಿಗಳಿಲ್ಲದ ಕಾರಣ ಮತ್ತು ಸಾಂದರ್ಭಿಕ ಸಾಕ್ಷ್ಯಗಳ ಆಧಾರದ ಮೇಲೆ ಆಕೆಯನ್ನು ಅಪರಾಧಿ ಎಂದು ಪರಿಗಣಿಸಿ ಶಿಕ್ಷೆ ವಿಧಿಸಿದೆ.

    ನ್ಯಾಯಾಲಯದಿಂದ ಅನಿಂದಿತಾಳನ್ನು ಜೈಲು ವ್ಯಾನ್‍ಗೆ ಕರೆದುಕೊಂಡು ಹೋಗುತ್ತಿದ್ದಾಗ “ನಾನು ಕೊನೆಯವರೆಗೂ ಈ ಪ್ರಕರಣದಲ್ಲಿ ಹೋರಾಡುತ್ತೇನೆ” ಎಂದು ಹೇಳಿದ್ದಾಳೆ.

    ಏನಿದು ಪ್ರಕರಣ?
    ವಕೀಲೆಯಾಗಿದ್ದ ಅನಿಂದಿತಾ ಪಾಲ್, ರಜತ್ ಡೇ ಜೊತೆ ವಿವಾಹವಾಗಿದ್ದಳು. ಪತಿಯೂ ಕೂಡ ವಕೀಲರಾಗಿದ್ದರು. ಆದರೆ 2018ರ ನವೆಂಬರ್ 24 ಮಧ್ಯರಾತ್ರಿ ಕೊಲ್ಕತ್ತಾದ ತಮ್ಮ ನ್ಯೂ ಟೌನ್ ಫ್ಲ್ಯಾಟ್‍ನಲ್ಲಿ ಮೊಬೈಲ್ ಫೋನ್ ಚಾರ್ಜರ್ ವಯರ್‌ನಿಂದ ಪತಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಳು. ದಂಪತಿಯ ಮಧ್ಯೆ ವೈಮನಸ್ಸು ಉಂಟಾಗಿತ್ತು. ಇದೇ ರಜತ್ ಡೇ ಕೊಲೆಗೆ ಕಾರಣವಾಗಿತ್ತು.

    ಅನಿಂದಿತಾ ಬೇರೆ ರೂಮಿನಲ್ಲಿ ಮಲಗಿದ್ದಳು. ಆಗ ಪತಿಯ ರೂಮಿನಿಂದ ಏನೋ ಶಬ್ದ ಕೇಳಿದಾಗ ಓಡಿ ಹೋಗಿ ನೋಡಿದ್ದಳು. ಆಗ ಆಕೆಯ ಪತಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು ಎಂದು ಅನಿಂದಿತಾ ಪಾಲ್ ಪರ ವಕೀಲ ಪಿನಾಕ್ ಮಿತ್ರಾ ವಾದ ಮಂಡಿಸಿದ್ದರು.

    ರಜತ್ ಡೇ ಅವರ ತಂದೆ ಅನಿಂದಿತಾ ಪಾಲ್ ತನ್ನ ಮಗನನ್ನು ಕೊಲೆ ಮಾಡಿದ್ದಾಳೆ ಎಂದು ಆರೋಪಿಸಿ ಎಫ್‍ಐಆರ್ ದಾಖಲಿಸಿದ್ದರು. ನಂತರ ಪೊಲೀಸರು ವಿಚಾರಣೆ ಮಾಡಿ ನವೆಂಬರ್ 29 ರಂದು ಆಕೆಯನ್ನು ಬಂಧಿಸಿದ್ದರು. ಈ ಪ್ರಕರಣದ ವಿಚಾರಣೆ ಮತ್ತು ವಾದಗಳು ಈ ವರ್ಷದ ಮಾರ್ಚ್ ನಲ್ಲಿ ಪೂರ್ಣಗೊಂಡಿತ್ತು. ಅಪರಾಧಿ ಅನಿಂದಿತಾ ಪಾಲ್ ಮತ್ತು ಅವರ ಪತಿ ಇಬ್ಬರೂ ಕೋಲ್ಕತ್ತಾ ಹೈಕೋರ್ಟ್‌ನಲ್ಲಿ ಕಾನೂನು ಅಭ್ಯಾಸ ಮಾಡುತ್ತಿದ್ದರು.

  • ಶೀಲ ಶಂಕಿಸಿ ಪತ್ನಿಯನ್ನ ಗೋಡೆಗೆ ಗುದ್ದಿ ಕೊಲೆಗೈದಿದ್ದ ಪತಿಗೆ ಜೀವಾವಧಿ ಶಿಕ್ಷೆ

    ಶೀಲ ಶಂಕಿಸಿ ಪತ್ನಿಯನ್ನ ಗೋಡೆಗೆ ಗುದ್ದಿ ಕೊಲೆಗೈದಿದ್ದ ಪತಿಗೆ ಜೀವಾವಧಿ ಶಿಕ್ಷೆ

    ಚಿಕ್ಕಬಳ್ಳಾಪುರ: ಶೀಲ ಶಂಕಿಸಿ ಪತ್ನಿಯನ್ನು ಗೋಡೆಗೆ ಗುದ್ದಿ ಕೊಲೆ ಮಾಡಿದ್ದ ಆರೋಪಿಗೆ 4ನೇ ಜಿಲ್ಲಾ ಅಪರ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.

    ಪತಿ ಮಂಜುನಾಥ್ ಜೀವಾವಧಿ ಶಿಕ್ಷೆಗೆ ಗುರಿಯಾದ ಅಪರಾಧಿ. 2018ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದ ದರ್ಗಾಜೋಗಹಳ್ಳೀಯ ಹೈಟೆಕ್ ಕಾಲೋನಿಯಲ್ಲಿ ಘಟನೆ ನಡೆದಿತ್ತು.

    ಮಂಜುನಾಥ್ ತನ್ನ ಪತ್ನಿ ವಿಜಯಮ್ಮನ ಶೀಲ ಶಂಕಿಸಿ ಕೊಲೆ ಮಾಡಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಪೊಲೀಸರು ಅಪರಾಧಿಯನ್ನು ಬಂಧಿಸಿ, ವಿಚಾರಣೆ ನಡೆಸಿದ್ದರು. ಸುದೀರ್ಘ ತನಿಖೆ ನಡೆಸಿದ ಸರ್ಕಲ್ ಇನ್ಸ್‌ಪೇಕ್ಟರ್ ಸಿದ್ದರಾಜು ಅವರು ದೊಡ್ಡಬಳ್ಳಾಪುರದ ಜಿಲ್ಲಾ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಚಂದ್ರಶೇಖರ್ ಅವರು ಕೊಲೆ ಮಾಡಿದ್ದ ಮಂಜುನಾಥ್‍ಗೆ 50 ಸಾವಿರ ರೂ. ದಂಡ ಮತ್ತು ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.