Tag: Life imprisonment

  • ಪ್ರಿಯಕರನ ಜೊತೆ ಸೇರಿ ಪತಿಗೆ ಸುಪಾರಿ ಕೊಟ್ಟು ಕೊಲೆ – ಪತ್ನಿ ಸೇರಿ ಐವರಿಗೆ ಜೀವಾವಧಿ ಶಿಕ್ಷೆ

    ಪ್ರಿಯಕರನ ಜೊತೆ ಸೇರಿ ಪತಿಗೆ ಸುಪಾರಿ ಕೊಟ್ಟು ಕೊಲೆ – ಪತ್ನಿ ಸೇರಿ ಐವರಿಗೆ ಜೀವಾವಧಿ ಶಿಕ್ಷೆ

    ರಾಮನಗರ: ಪ್ರಿಯಕರನ ಜೊತೆ ಸೇರಿ ಪತಿಗೆ ಸುಪಾರಿ ಕೊಟ್ಟು ಕೊಲ್ಲಿಸಿದ್ದ ಪತ್ನಿ ಸೇರಿದಂತೆ ಐವರಿಗೆ ರಾಮನಗರ ಮೂರನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

    ಭರತ್, ಸುಕನ್ಯಾ, ಅಬ್ದುಲ್ ರಜಾಕ್, ಮಣಿರಾಜು, ವಾಸು ಜೀವಾವಧಿ ಶಿಕ್ಷೆಗೆ ಒಳಗಾಗಿದ್ದಾರೆ. 2015 ಏಪ್ರಿಲ್ 5 ರಂದು ರಾಮನಗರ ತಾಲೂಕಿನ ವಡೇರಹಳ್ಳಿ ಸಮೀಪ ಆಂಧ್ರ ಮೂಲದ ಗಣೇಶ್ ಎಂಬಾತನನ್ನು ಕತ್ತು ಕೂಯ್ದು ಕೊಲೆ ಮಾಡಲಾಗಿತ್ತು.

    ಈ ಪ್ರಕರಣವನ್ನು ರಾಮನಗರ ಗ್ರಾಮಾಂತರ ಪೊಲೀಸರ ದಾಖಲಿಸಿಕೊಂಡಿದ್ದು, ಮೃತನ ಪತ್ನಿ ಸುಕನ್ಯಾ ಸೇರಿದಂತೆ 7 ಜನರನ್ನು ಬಂಧಿಸಿದ್ದರು. ಮೃತನ ಪತ್ನಿ ಸುಕನ್ಯಾ ತನ್ನ ಪ್ರಿಯಕರ ಭರತ್ ಜೊತೆ ಸೇರಿ 5 ಲಕ್ಷ ರೂಪಾಯಿಗೆ ಪತಿಯನ್ನ ಕೊಲ್ಲಲು ಸುಪಾರಿ ನೀಡಿದ್ದಳು.

    ಸುಪಾರಿ ಪಡೆದ ಹಂತಕರು ನರ್ಸರಿ ಗಿಡ ಖರೀದಿ ನೆಪದಲ್ಲಿ ಗಣೇಶ್ ನನ್ನ ಕರೆಸಿಕೊಂಡು ಕೊಲೆ ಮಾಡಿದ್ದರು. ಅಂದು ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯ ಸಿಪಿಐ ಆಗಿದ್ದ ಅನಿಲ್ ಕುಮಾರ್ ಕೊಲೆ ಆರೋಪಿಗಳನ್ನು ಆಂಧ್ರದ ಕುಪ್ಪಂನಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಇಂದು ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಗೋಪಾಲಕೃಷ್ಣ ರೈ ಐವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.

  • 13ರ ಬಾಲೆ ಮೇಲೆ ಅತ್ಯಾಚಾರವೆಸಗಿದ್ದ 75ರ ಶಿಕ್ಷಕನಿಗೆ ಜೀವಾವಧಿ ಶಿಕ್ಷೆ

    13ರ ಬಾಲೆ ಮೇಲೆ ಅತ್ಯಾಚಾರವೆಸಗಿದ್ದ 75ರ ಶಿಕ್ಷಕನಿಗೆ ಜೀವಾವಧಿ ಶಿಕ್ಷೆ

    ಮುಂಬೈ: ಪರೀಕ್ಷೆಗೆ ಟಿಪ್ಸ್ ಹೇಳಿಕೊಡುವ ನೆಪವೊಡ್ಡಿ 13 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ ಶಿಕ್ಷಕನಿಗೆ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.

    75 ವರ್ಷದ ಶಿಕ್ಷಕನೊಬ್ಬ ಪರೀಕ್ಷೆಗೆ ಟಿಪ್ಸ್ ಹೇಳಿಕೊಡುವ ನೆಪವೊಡ್ಡಿ 13 ವರ್ಷದ ಬಾಲಕಿಯ ಮೇಲೆ ಪದೇ ಪದೇ ಅತ್ಯಾಚಾರ ನಡೆಸಿದ್ದ. ಅಷ್ಟೇ ಅಲ್ಲದೆ ವಿಡಿಯೋ ಚಿತ್ರೀಕರಿಸಿದ್ದ. ಈತನ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪೋಸ್ಕೋ ಕಾಯ್ದೆಯ ಅಡಿಯಲ್ಲಿ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.

    ಶಿಕ್ಷಕನ ಕೃತ್ಯದ ವಿಡಿಯೋವನ್ನು ಯುವಕರು ಮೊಬೈಲ್ ನಲ್ಲಿ ನೋಡುತ್ತಿದ್ದಾಗ ಸಂತ್ರಸ್ತೆಯ ನೆರೆಮನೆಯಾತ ಗಮನಿಸಿದ್ದಾನೆ. ಈ ವಿಚಾರವನ್ನು ಆತ ಬಾಲಕಿಯ ಸಂಬಂಧಿಕರಿಗೆ ತಿಳಿಸಿದ ಪರಿಣಾಮ ಪ್ರಕರಣ ಬೆಳಕಿಗೆ ಬಂದಿದೆ.

    2013ರಲ್ಲಿ ಈ ಪ್ರಕರಣ ಬೆಳಕಿಗೆ ಬಂದಿತ್ತು. ನಂತರ ಅವರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. 4 ವರ್ಷಗಳ ಕಾಲ ನಡೆದ ವಿಚಾರಣೆಯಲ್ಲಿ ಆರೋಪ ಸಾಬೀತಾಗಿದ್ದು, 75 ವರ್ಷದ ಆರೋಪಿಗೆ ಜೀವಾವಧಿ ಶಿಕ್ಷೆಯಾಗಿದೆ.

    ಕೃತ್ಯ ಎಸಗಿದ್ದು ಹೇಗೆ?
    2012ರ ಡಿಸೆಂಬರ್‍ನಲ್ಲಿ ಒಂದು ದಿನ ಬಾಲಕಿ ತನ್ನ ಸ್ನೇಹಿತೆಯರೊಂದಿಗೆ ಪರೀಕ್ಷೆಗೆ ಹೋಗುತ್ತಿದ್ದಳು. ಆರೋಪಿ ಶಿಕ್ಷಕ ಅವರನ್ನು ಕರೆದು ಪರೀಕ್ಷೆಯ ಟಿಪ್ಸ್ ಹಾಗೂ ನೋಟ್ಸ್ ನೀಡುವುದಾಗಿ ಹೇಳಿದ್ದಾನೆ.

    ಹುಡಗಿಯರು ಒಳಗೆ ಬರುತ್ತಿದ್ದಂತೆ ಬಾಗಿಲು ಹಾಕಲು ಪ್ರಯತ್ನಿಸಿದಾಗ ಸಂತ್ರಸ್ತ ಬಾಲಕಿಯನ್ನು ಬಿಟ್ಟು ಎಲ್ಲ ಹುಡುಗಿಯರು ತಪ್ಪಿಸಿಕೊಂಡಿದ್ದಾರೆ. ಆದರೆ, ಅಲ್ಲೆ ಉಳಿದುಕೊಂಡ ಬಾಲಕಿಯ ಮೇಲೆ ಶಿಕ್ಷಕ ಅತ್ಯಾಚಾರವೆಸಗಿದ್ದ. ನಂತರ ಮತ್ತೆರಡು ಬಾರಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಈ ವೇಳೆ ವಿಡಿಯೋ ಕೂಡ ಮಾಡಿಕೊಂಡಿದ್ದನು. ಅಲ್ಲದೇ ಯಾರಿಗಾದರೂ ಹೇಳಿದರೆ ನಿಮ್ಮ ತಂದೆ-ತಾಯಿಯರನ್ನು ಕೊಲೆ ಮಾಡುವುದಾಗಿ ಬೆದರಿಸಿದ್ದ.

  • 17 ವರ್ಷಗಳ ಬಳಿಕ ಮರುವಿಚಾರಣೆ- ದಂಡುಪಾಳ್ಯ ಗ್ಯಾಂಗ್ ಗೆ ಮತ್ತೊಂದು ಪ್ರಕರಣದಲ್ಲೂ ಜೀವಾವಧಿ ಶಿಕ್ಷೆ

    17 ವರ್ಷಗಳ ಬಳಿಕ ಮರುವಿಚಾರಣೆ- ದಂಡುಪಾಳ್ಯ ಗ್ಯಾಂಗ್ ಗೆ ಮತ್ತೊಂದು ಪ್ರಕರಣದಲ್ಲೂ ಜೀವಾವಧಿ ಶಿಕ್ಷೆ

    ಬೆಂಗಳೂರು: ಹೈಕೋರ್ಟ್ ಆದೇಶದಂತೆ ದಂಡುಪಾಳ್ಯ ಗ್ಯಾಂಗ್ ನ ಅಪರಾಧ ಕೃತ್ಯಗಳ ಕುರಿತು ಮರುವಿಚಾರಣೆಯನ್ನು ನಡೆಸಿ, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 34ನೇ ವಿಶೇಷ ಸತ್ರನ್ಯಾಯಾಲಯ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ನೀಡಿ ತೀರ್ಪು ಪ್ರಕಟಿಸಿದೆ.

    ಈ ಪ್ರಕರಣದಲ್ಲಿ ಈ ಹಿಂದೆಯೇ ಕೆಳಹಂತದ ನ್ಯಾಯಾಲಯ 14 ವರ್ಷಗಳ ಶಿಕ್ಷೆ ಪ್ರಕಟಿಸಿತ್ತು. ಈ ಆದೇಶದ ವಿರುದ್ಧ ದಂಡುಪಾಳ್ಯ ಗ್ಯಾಂಗ್ ಶಿಕ್ಷೆ ರದ್ದುಪಡಿಸಿ ಮರುವಿಚಾರಣೆ ನಡೆಸುವಂತೆ ಹೈಕೋರ್ಟ್ ಮೊರೆಹೋಗಿದ್ದರು. ಕಳೆದ 17 ವರ್ಷಗಳಿಂದ ಜೈಲಿನಲ್ಲಿ ಕೊಳೆಯುತ್ತಿದ್ದೇವೆ. ಮಕ್ಕಳು ದೊಡ್ಡವರಾಗಿದ್ದಾರೆ. ನಮಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲವೆಂದು ಹೈಕೋರ್ಟ್‍ಗೆ ಮನವಿ ಸಲ್ಲಿಸಿದ್ದರು. ಅದರಂತೆ ಹೈಕೋರ್ಟ್ ಕೆಳ ನ್ಯಾಯಾಲಯದ ಶಿಕ್ಷೆ ರದ್ದುಪಡಿಸಿ, 3 ತಿಂಗಳ ಒಳಗೆ ಮರುವಿಚಾರಣೆ ನಡೆಸಿ ತೀರ್ಪು ನೀಡುವಂತೆ ಆದೇಶಿಸಿತ್ತು.

    ಅದರಂತೆ ಕಳೆದ ಮೂರು ತಿಂಗಳಿಂದ ಮರುವಿಚಾರಣೆ ನಡೆಸಿದ ನ್ಯಾಯಾಧೀಶರಾದ ಶಿವನಗೌಡರು, ಸರ್ಕಾರದ ಪರ ವಕೀಲರಾದ ಬಿ.ಎಸ್.ಪಾಟೀಲ ಅವರು ಸಲ್ಲಿಸಿದ 15 ಜನರ ಸಾಕ್ಷ್ಯಾಧಾರಗಳನ್ನು ಪರಿಗಣಿಸಿ ಅಂತಿಮವಾಗಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 5 ಸಾವಿರ ರೂ ದಂಡ ವಿಧಿಸಿ ತೀರ್ಪು ಪ್ರಕಟಿಸಿದರು.

    ದಂಡು ಪಾಳ್ಯ ಗ್ಯಾಂಗ್‍ನ ದೊಡ್ಡಹನುಮ, ಮುನಿಕೃಷ್ಣ, ವೆಂಕಟೇಶ, ನಲ್ಲ ತಿಮ್ಮ ಮತ್ತು ಲಕ್ಷ್ಮೀ ತಂಡ ಬೆಂಗಳೂರು ನಗರ ಹೊರವಲಯದ ಅಗ್ರಹಾರ ದಾಸರಹಳ್ಳಿಯ ಗೀತಾ ಎಂಬ ಒಂಟಿ ಮಹಿಳೆಯನ್ನು ಕೊಲೆ ಮಾಡಿ, ಮನೆಯಲ್ಲಿದ್ದ ನಗ-ನಾಣ್ಯ ದೋಚಿ ಪರಾರಿಯಾಗಿತ್ತು. ಅಲ್ಲದೇ ಈ ಗ್ಯಾಂಗ್ 2000 ದಶಕದಲ್ಲಿ ರಾಜ್ಯಾದ್ಯಂತ ಒಂಟಿ ಮಹಿಳೆಯರ ಮೇಲೆ ಅತ್ಯಾಚಾರ, ಕೊಲೆ ಮತ್ತು ಸುಲಿಗೆಯಂತಹ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿತ್ತು. ಅಲ್ಲದೆ ಅಪರಾಧಿಗಳ ತಂಡ ಒಟ್ಟು 88 ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಗಳಿರುವುದರಿಂದ ಇವರಿಗೆ ಮರಣದಂಡನೆ ನೀಡಬೇಕೆಂದು ಸರ್ಕಾರದ ಪರ ವಕೀಲರು ವಾದ ಮಂಡಿಸಿದ್ದರು.

    ಸತತ ಮೂರು ದಶಕಗಳ ಕಾಲ ಇಡೀ ರಾಜ್ಯದ ಜನತೆಯನ್ನು ಬೆಚ್ಚಿಬೀಳಿಸಿದ್ದ ಈ ತಂಡ ಪೊಲೀಸ್ ಇಲಾಖೆಯ ನಿದ್ದೆಗೆಡಿಸಿತ್ತು. ಅಲ್ಲದೇ ಬರೋಬ್ಬರಿ 88 ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆ ಪಾತಕಿಗಳ ಭಾವಚಿತ್ರಗಳು ಸಹ ಇದೇ ಮೊದಲ ಬಾರಿಗೆ ನೀಡಲಾಗಿದೆ.


    ಯಾವ ಪ್ರಕರಣಕ್ಕೆ ತೀರ್ಪು: 2000 ಇಸವಿಯ ನವೆಂಬರ್ 02 ರಂದು ಮಾಗಡಿ ರಸ್ತೆಯ ಅಗ್ರಹಾರ ದಾಸರಹಳ್ಳಿಯಲ್ಲಿ ಕುಡಿಯುವ ನೀರಿನ ನೆಪದಲ್ಲಿ ಗೀತಾ ಎಂಬವರ ಮನೆಗೆ ಹೋಗುವ ಪಾತಕಿ ಲಕ್ಷ್ಮೀ, ಮನೆಯಲ್ಲಿ ಒಂಟಿ ಮಹಿಳೆಯಿರುವುದನ್ನು ಖಾತ್ರಿಪಡಿಸಿಕೊಂಡಿದ್ದಳು. ಲಕ್ಷ್ಮೀ ಹಿಂದೆಯೇ ದೊಡ್ಡ ಹನುಮ, ವೆಂಕಟೇಶ, ಮುನಿಕೃಷ್ಣ ಮತ್ತು ನಲ್ಲತಿಮ್ಮ ಬಂದು ಪ್ರಾಣಿಗಳಂತೆ ಗೀತಾರನ್ನು ಚಾಕುವಿನಿಂದ ಕ್ರೂರವಾಗಿ ಕುತ್ತಿಗೆ ಕುಯ್ದು ಹೊಟ್ಟೆಗೆ ತಿವಿದು ಮೈ ಮೇಲಿದ್ದ ಮಾಂಗಲ್ಯಸರ, ಜುಮುಕಿ, ಮಾಟಿ ಮತ್ತು ಮನೆಯಲ್ಲಿದ್ದ ಬೆಲೆಬಾಳುವ ಸೀರೆ ಮತ್ತು ಇನ್ನಷ್ಟು ಒಡವೆಗಳನ್ನು ದೊಚಿ ಪರಾರಿಯಾಗಿದ್ದರು.

    ಸೆರೆಯಾಗಿದ್ದು ಹೇಗೆ: ಅಪರಾಧಿಗಳು ತಾವು ದೋಚಿದ್ದ ವಸ್ತುಗಳನ್ನು ನಗರದ ಅವೆನ್ಯೂ ರಸ್ತೆಯ ರಾಜಮಾರುಕಟ್ಟೆಯ ಸತ್ಯನಾರಾಯಣ ಜ್ಯುವೆಲರಿ ಶಾಪ್ ನಲ್ಲಿ ಮಾರಾಟ ಮಾಡಿದ್ದರು. ಪೊಲೀಸರ ವಿಚಾರಣೆ ವೇಳೆ ಈ ಅಂಶ ಬೆಳಕಿಗೆ ಬಂದಿತ್ತು. ಅಲ್ಲದೇ ಪೊಲೀಸರು ಬಂಗಾರದ ಅಂಗಡಿಯ ಮಾಲೀಕನ ಸಾಕ್ಷಿಯನ್ನು ಕೋರ್ಟ್‍ಗೆ ಸಲ್ಲಿಸಿದ್ದರು. ಬಂಗಾರದ ಅಂಗಡಿಯ ಮಾಲೀಕನ ಸಾಕ್ಷಿಯೇ ಈ ಪ್ರಕರಣಕ್ಕೆ ದೊಡ್ಡ ಅಡಿಪಾಯವಾಯಿತು. ಇನ್ನುಳಿದಂತೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇತರೆ 15 ಜನರ ಸಾಕ್ಷಿಗಳನ್ನು ಕೋರ್ಟ್ ಮುಂದೆ ಪ್ರಸ್ತುತ ಪಡಿಸಲಾಗಿತ್ತು.

    ರಾಜ್ಯದಲ್ಲಿನ ಒಂಟಿ ಮಹಿಳೆಯರ ಪಾಲಿಗೆ ಯಮಕಿಂಕರರಾಗಿದ್ದ ಈ ಪಾತಕಿಗಳ ಬಗ್ಗೆ ಚಲನಚಿತ್ರ ನಿರ್ಮಾಣವಾದಾಗ ರಾಜ್ಯದ ಜನತೆ ಈ ದೊಡ್ಡ ಹನುಮ ಹಾಗೂ ಇವನ ಎಲ್ಲಾ ಕೃತ್ಯಗಳಲ್ಲೂ ಭಾಗಿಯಾಗಿದ್ದ ಲಕ್ಷ್ಮೀ, ವೆಂಕಟೇಶ, ಮುನಿಕೃಷ್ಣ ಮತ್ತು ನಲ್ಲತಿಮ್ಮನ ಪಾತ್ರಗಳನ್ನು ನಿರ್ವಹಿಸಿದ್ದ ಚಿತ್ರ ನಟರನ್ನು ನೋಡಿ, ಅಸಲೀ ದಂಡುಪಾಳ್ಯದ ಗ್ಯಾಂಗ್ ನೋಡಲು ಇಡೀ ರಾಜ್ಯದ ಜನತೆ ಕಾದು ಕುಳಿತಿದ್ದರು. ಪರಪ್ಪನ ಅಗ್ರಹಾರದ ನ್ಯಾಯಾಲಯಕ್ಕೆ ಬೆಳಗಾವಿಯ ಹಿಂಡಲಗಾದಿಂದ ಬಂದಿದ್ದ ಈ ಪಾತಕಿಗಳನ್ನು ನೋಡಿ ಬೆಂಗಳೂರಿನ ಸಜಾ ಬಂಧಿಗಳು ಬೆಚ್ಚಿದ್ದರು.

     

     

  • ಸೈನೆಡ್ ಮೋಹನ್‍ಗೆ ಗಲ್ಲುಶಿಕ್ಷೆ ಇಲ್ಲ: ಸಾಯೋವರೆಗೂ ಜೈಲು ಶಿಕ್ಷೆ

    ಸೈನೆಡ್ ಮೋಹನ್‍ಗೆ ಗಲ್ಲುಶಿಕ್ಷೆ ಇಲ್ಲ: ಸಾಯೋವರೆಗೂ ಜೈಲು ಶಿಕ್ಷೆ

    ಬೆಂಗಳೂರು: ಸೈನೆಡ್ ಮೋಹನ್ ಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದ್ದು, ಕೆಳ ನ್ಯಾಯಾಲಯ ನೀಡಿದ್ದ ಗಲ್ಲು ಶಿಕ್ಷೆಯನ್ನು ರದ್ದು ಪಡಿಸಿ ಜೀವಾವಧಿ ಶಿಕ್ಷೆಗೆ ಇಳಿಸಿದೆ.

    ನಾಲ್ಕು ಪ್ರಕರಣಗಳಲ್ಲಿ ಮರಣದಂಡನೆ ಶಿಕ್ಷೆ ವಿಧಿಸಿದ್ದನ್ನು ಪ್ರಶ್ನಿಸಿ ಮೋಹನ್ ಕುಮಾರ್ ಹೈಕೋರ್ಟ್ ಮೆಟ್ಟಿಲೇರಿದ್ದ. ಪ್ರಕರಣದ ವಿಚಾರಣೆ ನಡೆಸಿದ ನ್ಯಾ.ಮಳೀಮಠ್, ನ್ಯಾ ಜಾನ್ ಮೈಕೆಲ್ ಕುನ್ನಾ ಅವರಿದ್ದ ವಿಭಾಗೀಯ ಪೀಠ, ಸೈನೆಡ್ ಮೋಹನ್ ಕುಮಾರ್ ಸಮಾಜಕ್ಕೆ ಮಾರಕ. ಹೀಗಾಗಿ ಈತ ಸಾಯುವವರೆಗೂ ಜೈಲಿನಲ್ಲಿರಬೇಕು ಎಂದು ಆದೇಶ ನೀಡಿದರು.

    20 ಯುವತಿಯರನ್ನು ಪುಸಲಾಯಿಸಿ ಅತ್ಯಾಚಾರ ನಡೆಸಿ ಸೈನೆಡ್ ನೀಡಿ ಕೊಲೆ ಮಾಡಿದ್ದ ಆರೋಪ ಎದುರಿಸುತ್ತಿದ್ದ ಮೋಹನ್ ಕುಮಾರ್‍ಗೆ ಮಂಗಳೂರು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 2013ರ ಡಿಸೆಂಬರ್ 21ರಂದು ಗಲ್ಲುಶಿಕ್ಷೆ ವಿಧಿಸಿತ್ತು. ಈ ಶಿಕ್ಷೆಯನ್ನು ಪ್ರಶ್ನಿಸಿದ್ದ ಮೋಹನ್ ಕುಮಾರ್‍ಗೆ ಹೈಕೋರ್ಟ್ ರಿಲೀಫ್ ನೀಡಿ ಗಲ್ಲು ಶಿಕ್ಷೆಯನ್ನು ಜೀವಾವಧಿಗೆ ಇಳಿಸಿದೆ.

    ತಾನೇ ವಾದಿಸಿದ್ದ:
    ವಿಚಾರಣೆ ವೇಳೆ ನನ್ನ ವಿರುದ್ಧದ ಆರೋಪಗಳಿಗೆ ಯಾವುದೇ ಸಾಕ್ಷ್ಯಇಲ್ಲ. ನಾನು ಅತ್ಯಾಚಾರ ನಡೆಸಿದ್ದಕ್ಕೆ ಪುರಾವೆಯೇ ಇಲ್ಲ. ನಾನು ಸೈನೆಡ್ ತಿನ್ನಿಸಿ ಸಾಯಿಸಿದ್ದೇನೆ ಎಂದು ವಕೀಲರು ವಾದಿಸಿದ್ದಾರೆ. ಆದರೆ ಪ್ರಯೋಗಾಲಯದಲ್ಲಿ ನಾನು ನಾನು ಸೈನೆಡ್ ನೀಡಿ ಕೊಲೆ ಮಾಡಿದ್ದೇನೆ ಎನ್ನುವುದಕ್ಕೆ ಯಾವುದೇ ಪುರಾವೆ ಇಲ್ಲ. ಸೈನೆಡ್ ಸೇವಿಸಿದ್ದರೆ ಹೃದಯ ಬಡಿತ ನಿಂತುಹೋಗಿ ನರಗಳು ಹೆಪ್ಪುಗಟ್ಟಿ ಸಾವನ್ನಪ್ಪುತ್ತಾರೆ. ಆದರೆ ವರದಿಯಲ್ಲಿ ಈ ಯಾವುದೇ ವಿವರಗಳು ಇಲ್ಲ ಎಂದು ವಾದಿಸಿದ್ದ.

    ಸುಮಾರು 25ಕ್ಕೂ ಹೆಚ್ಚು ಖಾಲಿ ಪೇಪರ್ ಗಳಿಗೆ ನನ್ನ ಸಹಿ ಮಾಡಿಸಿಕೊಂಡು ಪೊಲೀಸರು ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ. ಹೀಗಾಗಿ ಕೋರ್ಟ್ ನೀಡಿರುವ ಗಲ್ಲು ಶಿಕ್ಷೆಯನ್ನು ರದ್ದುಗೊಳಿಸಿ ಎಂದು ಮನವಿ ಮಾಡಿಕೊಂಡಿದ್ದ.

    2004ರಿಂದ 2009ರ ಅವಧಿಯಲ್ಲಿ 20 ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ ಸೈನೆಡ್ ಮೋಹನ್ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ವಾದಿಸಿದ್ದರು. ಬಂಟ್ವಾಳ ಮೂಲದ ಶಿಕ್ಷಕನಾದ ಮೋಹನ್ 2002ರಲ್ಲಿ ಸ್ವಯಂ ನಿವೃತ್ತಿ ಪಡೆದುಕೊಂಡಿದ್ದ.

  • ಒಂದೇ ಕುಟುಂಬದ ನಾಲ್ವರಿಗೆ ಜೀವಾವಧಿ ಶಿಕ್ಷೆ

    ಒಂದೇ ಕುಟುಂಬದ ನಾಲ್ವರಿಗೆ ಜೀವಾವಧಿ ಶಿಕ್ಷೆ

    ರಾಯಚೂರು: 2010 ನವೆಂಬರ್ 10 ರಂದು ಕೌಟುಂಬಿಕ ಕಲಹ ಹಿನ್ನೆಯಲ್ಲಿ ಪತಿಯನ್ನೇ ಕೊಂದಿದ್ದ ಪತ್ನಿ ಸೇರಿ ನಾಲ್ಕು ಜನರಿಗೆ ರಾಯಚೂರಿನ ಒಂದನೇ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಜೊತೆಗೆ ತಲಾ 25 ಸಾವಿರ ರೂ. ದಂಡ ಹಾಕಿ ಕೋರ್ಟ್ ಆದೇಶಿಸಿದೆ.

    ರಾಯಚೂರಿನ ಮಂಗಳವಾರಪೇಟೆ ನಿವಾಸಿ ಶ್ರೀನಿವಾಸ್ (36) ಎಂಬಾತನ ಯರಮರಸ್ ಬೈಪಾಸ್ ಬಳಿ ಕಬ್ಬಿಣದ ಸರಳಿನಿಂದ ಹೊಡೆದು ಕೊಲೆ ಮಾಡಲಾಗಿತ್ತು. ಕೊಲೆ ಪ್ರಕರಣದಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮೃತನ ಪತ್ನಿ ಮಹಾದೇವಿ, ಮಾವ ಬಸಪ್ಪ, ಅಳಿಯ ಹನುಮಂತ, ಅತ್ತೆ ಚಂದಮ್ಮಳಿಗೆ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ಈ ಸಂಬಂಧ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

    ವಾದ, ಪ್ರತಿವಾದ ಆಲಿಸಿದ ನ್ಯಾಯಾಧೀಶರಾದ ಎಂ.ಮಹಾದೇವಯ್ಯ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಜಿ.ಸುದರ್ಶನ ಅವರು ವಾದ ಮಂಡಿಸಿದ್ದರು.

     

     

  • ಮಂಗಳೂರು ಟೆರರ್ ಕೇಸ್: ಮೂವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

    ಮಂಗಳೂರು ಟೆರರ್ ಕೇಸ್: ಮೂವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

    ಮಂಗಳೂರು: 2008ರಲ್ಲಿ ಮಂಗಳೂರಿನ ವಿವಿಧೆಡೆ ಉಗ್ರವಾದಿ ಚಟುವಟಿಕೆ ಆರೋಪದಲ್ಲಿ ಬಂಧಿತರಾಗಿದ್ದವರ ಪೈಕಿ ಮೂವರಿಗೆ 3ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

    ಸೋಮವಾರ ಮೂವರ ಮೇಲಿನ ಆರೋಪ ಸಾಬೀತಾಗಿದೆ ಎಂದು ಹೇಳಿದ್ದ ಕೋರ್ಟ್, ಬುಧವಾರ ಶಿಕ್ಷೆಯ ಪ್ರಮಾಣವನ್ನು ತಿಳಿಸುವುದಾಗಿ ಹೇಳಿತ್ತು.

    ಸೈಯದ್ ಮಹಮ್ಮದ್ ನೌಶಾದ್,ಅಹ್ಮದ್ ಬಾವಾ ಅಬುಬಕ್ಕರ್, ಫಕೀರ್ ಅಹ್ಮದ್ ಎಂಬ ಮೂವರು ಶಿಕ್ಷೆಗೆ ಗುರಿಯಾದ ಅಪರಾಧಿಗಳು. ಸಾಕ್ಷ್ಯಾಧಾರಗಳ ಕೊರತೆಯಿಂದ ಶಬೀರ್ ಭಟ್ಕಳ, ಅಹ್ಮದ್ ಅಲಿ, ಜಾವೇದ್ ಅಲಿ ಮತ್ತು ಉಮರ್ ಫಾರೂಕ್ ಅವರನ್ನು ಕೋರ್ಟ್ ಆರೋಪದಿಂದ ಖುಲಾಸೆಗೊಳಿಸಿದೆ.

    2008ರಲ್ಲಿ ಮುಂಬೈ ಮತ್ತು ಮಂಗಳೂರು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ, ಮಂಗಳೂರಿನ ಉಳ್ಳಾಲದ ಮುಕ್ಕಚ್ಚೇರಿ, ಚೆಂಬುಗುಡ್ಡೆ, ಹಳೆಯಂಗಡಿ, ಪಾಂಡೇಶ್ವರದ ಸುಭಾಷ್‍ನಗರದಿಂದ ಏಳು ಮಂದಿಯನ್ನು ಉಗ್ರವಾದ ಚಟುವಟಿಕೆಯಲ್ಲಿ ಭಾಗಿಯಾದ ಆರೋಪದಲ್ಲಿ ಬಂಧಿಸಿದ್ದರು. ಆ ಬಳಿಕ ದೇಶವಿರೋಧಿ ಚಟುವಟಿಕೆ, ವಿಧ್ವಂಸಕ ಕೃತ್ಯಕ್ಕೆ ಸಂಚು, ಸ್ಪೋಟಕ ತಯಾರಿಕೆ ಆರೋಪದಲ್ಲಿ ಏಳು ಮಂದಿ ವಿರುದ್ಧ ಕೇಸು ದಾಖಲಾಗಿತ್ತು.