Tag: Life imprisonment

  • ಉತ್ತರ ಪ್ರದೇಶ | ಎರಡು ಬಾರಿ ಕಚ್ಚಿದ್ರೆ ಬೀದಿ ನಾಯಿಗೆ ಜೀವಾವಧಿ ಶಿಕ್ಷೆ!

    ಉತ್ತರ ಪ್ರದೇಶ | ಎರಡು ಬಾರಿ ಕಚ್ಚಿದ್ರೆ ಬೀದಿ ನಾಯಿಗೆ ಜೀವಾವಧಿ ಶಿಕ್ಷೆ!

    – ಮೊದಲ ಸಲ ಕಚ್ಚಿದ್ರೆ 10 ದಿನ ಬಂಧನ, 2ನೇ ಬಾರಿ ಕಚ್ಚಿದ್ರೆ ಜೀವಾವಧಿ ಶಿಕ್ಷೆ!

    ಲಕ್ನೋ: ಉತ್ತರ ಪ್ರದೇಶ (Uttar Pradesh) ಸರ್ಕಾರ ಬೀದಿ ನಾಯಿಗಳ (Stray Dogs) ದಾಳಿಯನ್ನು ತಡೆಯಲು ದಿಟ್ಟ ಕ್ರಮಕೈಗೊಂಡಿದೆ. ಪ್ರಚೋದನೆ ಇಲ್ಲದೆ ಮನುಷ್ಯರನ್ನು ಮೊದಲ ಸಲ ಕಚ್ಚಿದ್ರೆ ಅದನ್ನು 10 ದಿನಗಳವರೆಗೆ ಪ್ರಾಣಿ ಕೇಂದ್ರದಲ್ಲಿ ಇರಿಸಲಾಗುತ್ತದೆ. ಮತ್ತೆ ಅದೇ ತಪ್ಪನ್ನು ಅದು ಮುಂದುವರಿಸಿದರೆ ಅದಕ್ಕೆ ಜೀವಾವಧಿ ಶಿಕ್ಷೆ  (Life Imprisonment) ವಿಧಿಸಲು ಸರ್ಕಾರ ನಿರ್ಧರಿಸಿದೆ.

    ಶಿಕ್ಷೆಗೆ ಗುರಿಯಾದ ನಾಯಿಗಳಿಗೆ ಬಚಾವ್‌ ಆಗಲು ಇರುವ ಏಕೈಕ ಮಾರ್ಗವೆಂದರೆ ಯಾರಾದರೂ ಅವುಗಳನ್ನು ದತ್ತು ತೆಗೆದುಕೊಳ್ಳಬೇಕು. ದತ್ತು ತೆಗೆದುಕೊಳ್ಳಬೇಕಾದರೆ ಮತ್ತೆ ಅವುಗಳನ್ನು ಬೀದಿಗಳಲ್ಲಿ ಬಿಡುವುದಿಲ್ಲ ಎಂದು ಅಫಿಡವಿಟ್ ಸಲ್ಲಿಸಬೇಕು. ಈ ಬಗ್ಗೆ ಗ್ರಾಮೀಣ ಮತ್ತು ನಗರ ನಾಗರಿಕ ಸಂಸ್ಥೆಗಳಿಗೆ ಪ್ರಧಾನ ಕಾರ್ಯದರ್ಶಿ ಅಮೃತ್ ಅಭಿಜತ್ ಹೊರಡಿಸಿದ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಬೀದಿ ನಾಯಿಗಳನ್ನ ಹಿಡಿಯಿರಿ, ಸಂತಾನಹರಣ ಶಸ್ತ್ರಚಿಕಿತ್ಸೆ ಬಳಿಕ ಬಿಟ್ಟುಬಿಡಿ: ಸುಪ್ರೀಂ ತೀರ್ಪಿನಲ್ಲಿ ಮಹತ್ವದ ತಿದ್ದುಪಡಿ

    ಬೀದಿ ನಾಯಿ ಕಚ್ಚಿದ ನಂತರ ಯಾರಾದರೂ ರೇಬೀಸ್‌ ತಡೆಗೆ ಲಸಿಕೆಯನ್ನು ತೆಗೆದುಕೊಂಡರೆ, ತನಿಖೆ ಮಾಡಲಾಗುತ್ತದೆ. ಬಳಿಕ ನಾಯಿಯನ್ನು ಪತ್ತೆ ಮಾಡಿ ಹತ್ತಿರದ ಪ್ರಾಣಿ ಜನನ ನಿಯಂತ್ರಣ ಕೇಂದ್ರಕ್ಕೆ ಕರೆದೊಯ್ಯಲಾಗುತ್ತದೆ. ಅದರ ಮೇಲೆ 10 ದಿನಗಳವರೆಗೆ ನಿಗಾ ಇಡಲಾಗುತ್ತದೆ. ಅದರ ನಡವಳಿಕೆಯನ್ನು ಗಮನಿಸಿ, ಮೈಕ್ರೋಚಿಪ್ ಅಳವಡಿಸಿ ಬಿಡುಗಡೆ ಮಾಡಲಾಗುತ್ತದೆ. ಈ ಮೈಕ್ರೋಚಿಪ್‌ ನಾಯಿಯ ಎಲ್ಲಾ ವಿವರಗಳನ್ನು ಹೊಂದಿರುತ್ತದೆ. ಇದರಿಂದಾಗಿ ಸ್ಥಳವನ್ನು ಪತ್ತೆಹಚ್ಚಲು ಅನುಕೂಲವಾಗುತ್ತದೆ ಎಂದು ಪ್ರಯಾಗ್‌ರಾಜ್ ಪುರಸಭೆಯ ಪಶುವೈದ್ಯ ಅಧಿಕಾರಿ ಡಾ. ಬಿಜಯ್ ಅಮೃತ್ ರಾಜ್ ತಿಳಿಸಿದ್ದಾರೆ.

    ಇನ್ನೂ ಅದೇ ನಾಯಿ ಎರಡನೇ ಬಾರಿಗೆ ಪ್ರಚೋದನೆಗೆ ಒಳಗಾಗದೆ ಮನುಷ್ಯನನ್ನು ಕಚ್ಚಿದರೆ, ಅದನ್ನು ಜೀವಿತಾವಧಿಯವರೆಗೆ ಕೇಂದ್ರದಲ್ಲಿ ಇಡಲಾಗುತ್ತದೆ. ನಾಯಿ ಪ್ರಚೋದನೆಯಿಂದ ಕಚ್ಚಿದೆಯೇ ಇಲ್ಲವೇ ಎಂಬುದ್ದನ್ನು ಅರಿಯಲು ಆ ಪ್ರದೇಶದ ಪಶುವೈದ್ಯರು, ಪ್ರಾಣಿಗಳ ಬಗ್ಗೆ ಅನುಭವ ಹೊಂದಿರುವ ಮತ್ತು ಅವುಗಳ ನಡವಳಿಕೆಯನ್ನು ಅರ್ಥಮಾಡಿಕೊಳ್ಳುವ ಮೂರು ಜನರ ಸಮಿತಿಯನ್ನು ರಚಿಸಲಾಗುತ್ತದೆ. ದಾಳಿಯು ಅಪ್ರಚೋದಿತವಾಗಿದೆಯೇ ಎಂದು ಅವರು ಪರಿಶೀಲಿಸುತ್ತಾರೆ. ಯಾರಾದರೂ ಕಲ್ಲು ಎಸೆದ ನಂತರ ಪ್ರಾಣಿ ಕಚ್ಚಿದರೆ, ಅದನ್ನು ಅಪ್ರಚೋದಿತ ದಾಳಿ ಎಂದು ಪರಿಗಣಿಸಲಾಗುವುದಿಲ್ಲ ಎಂದಿದ್ದಾರೆ.

    ಶಿಕ್ಷೆಗೆ ಗುರಿಯಾದ ನಾಯಿಗಳನ್ನು ದತ್ತು ಪಡೆಯಬಹುದು ಎಂದು ಆದೇಶದಲ್ಲಿ ಹೇಳಲಾಗಿದೆ. ದತ್ತು ಪಡೆಯುವ ವ್ಯಕ್ತಿಯ ಹೆಸರು, ವಿಳಾಸ ಇತ್ಯಾದಿಗಳ ಎಲ್ಲಾ ವಿವರಗಳನ್ನು ಒದಗಿಸಬೇಕು. ನಾಯಿಯನ್ನು ಬೀದಿಗಳಲ್ಲಿ ಬಿಡುವುದಿಲ್ಲ ಎಂದು ಅಫಿಡವಿಟ್ ಸಲ್ಲಿಸಬೇಕು. ಅದನ್ನು ದತ್ತು ಪಡೆದ ವ್ಯಕ್ತಿಗೆ ಒಪ್ಪಿಸಬೇಕಾದರೆ ನಾಯಿಯ ಮೈಕ್ರೋಚಿಪ್ ವಿವರಗಳನ್ನು ದಾಖಲಿಸಿಕೊಳ್ಳಲಾಗುತ್ತದೆ. ಅದನ್ನು ಬಿಡುಗಡೆ ಮಾಡಿದರೆ, ದತ್ತು ಪಡೆದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಇದನ್ನೂ ಓದಿ: ಬಾಗಲಕೋಟೆ ನಗರದಲ್ಲಿ ಹೆಚ್ಚಾಯ್ತು ಬೀದಿ ನಾಯಿಗಳ ಹಾವಳಿ – ಒಂದೇ ದಿನ 15 ಮಂದಿ ಮೇಲೆ ದಾಳಿ

  • ಬೆಳಗಾವಿ| ದೇವಸ್ಥಾನದ ಜಾಗಕ್ಕಾಗಿ ಕೊಲೆ – ಐವರಿಗೆ ಜೀವಾವಧಿ ಶಿಕ್ಷೆ ಪ್ರಕಟ

    ಬೆಳಗಾವಿ| ದೇವಸ್ಥಾನದ ಜಾಗಕ್ಕಾಗಿ ಕೊಲೆ – ಐವರಿಗೆ ಜೀವಾವಧಿ ಶಿಕ್ಷೆ ಪ್ರಕಟ

    ಬೆಳಗಾವಿ: ಗೌಂಡವಾಡದ ಯುವಕನ ಕೊಲೆ ಪ್ರಕರಣದ ಐವರು ಅಪರಾಧಿಗಳಿಗೆ ಕಠಿಣ ಜೀವಾವಧಿ ಶಿಕ್ಷೆ ವಿಧಿಸಿ ಬೆಳಗಾವಿಯ ಎರಡನೇ ಹೆಚ್ಚುವರಿ ಜಿಲ್ಲಾ ‌ಮತ್ತು ಸತ್ರ ನ್ಯಾಯಾಲಯ ಮಹತ್ವದ ಆದೇಶ ಹೊರಡಿಸಿದೆ.

    ಗೌಂಡವಾಡ ಗ್ರಾಮದ ಭೈರವನಾಥ ದೇವಸ್ಥಾನ ಜಾಗ ಸಂಬಂಧ ಎರಡು ಗುಂಪುಗಳ ಮಧ್ಯೆ ಗಲಾಟೆಗಳು ನಡೆಯುತ್ತಿತ್ತು. ಭೈರವನಾಥ ದೇವಸ್ಥಾನ ಜಾಗದ ಪರ ಹೋರಾಟ ನಡೆಸುತ್ತಿದ್ದ ಸತೀಶ್ ಪಾಟೀಲನನ್ನು 18 ಸೆಪ್ಟೆಂಬರ್ 2022 ರಂದು ರಾತ್ರಿ ಮನೆ ಮುಂದೆ ಕೊಲೆ ಮಾಡಿದ್ದರು.

     

    ಈ ಸಂಬಂಧ ಐವರಿಗೆ ಕಠಿಣ ಜೀವಾವಧಿ ಶಿಕ್ಷೆ, ಹಾಗೂ ತಲಾ ಎರಡು ಲಕ್ಷ ದಂಡವನ್ನು ಕೋರ್ಟ್ ವಿಧಿಸಿದ್ದು ಪ್ರಕರಣದ ನಾಲ್ವರು ಅಪರಾಧಿಗಳಿಗೆ ಸಾಮಾನ್ಯ ಶಿಕ್ಷೆಯನ್ನು ನ್ಯಾಯಾಲಯ ಪ್ರಕಟಿಸಿದೆ. ಮೂರು ವರ್ಷಗಳ ಕಾಲ ವಾದ ಪ್ರತಿವಾದ ಆಲಿಸಿ ಅಂತಿಮ ತೀರ್ಪುನ್ನು ಕೋರ್ಟ್ ಪ್ರಕಟಿಸಿದೆ.  ಇದನ್ನೂ ಓದಿ: ಧರ್ಮಸ್ಥಳದ ಅಪಪ್ರಚಾರಕ್ಕೆ ಫಂಡಿಂಗ್ ಸಮೀರ್ ವಿರುದ್ಧ ಐಟಿಗೆ ದೂರು ನೀಡಲು ಚಿಂತನೆ

    ಬೆಳಗಾವಿ ಎರಡನೇ ಹೆಚ್ಚುವರಿ ಜಿಲ್ಲಾ ‌ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಗಂಗಾಧರ ಕೆ.ಎ‌ನ್‌ ಅವರು ಈ ತೀರ್ಪು ಪ್ರಕಟಿಸಿದ್ದಾರೆ.

    ಗೌಂಡವಾಡ ಗ್ರಾಮದ ಆನಂದ ರಾಮಾ ಕುಟ್ರೆ, ಅನರ್ವ್ ಕುಟ್ರೆ, ಜಾಯಪ್ಪ ನೀಲಜಕರ, ಮಹಾಂತೇಶ ನೀಲಜಕರ ಹಾಗೂ ಶಶಿಕಲಾ ಕುಟ್ರೆಗೆ ಕಠಿಣ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

  • ಹಲವು ಮಹಿಳೆಯರ ರೇಪ್‌, ವೀಡಿಯೋ ಮಾಡಿ ಸುಲಿಗೆ – ಪೊಲ್ಲಾಚಿ ಕೇಸ್‌ನ 9 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

    ಹಲವು ಮಹಿಳೆಯರ ರೇಪ್‌, ವೀಡಿಯೋ ಮಾಡಿ ಸುಲಿಗೆ – ಪೊಲ್ಲಾಚಿ ಕೇಸ್‌ನ 9 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

    ಚೆನ್ನೈ: ಪೊಲ್ಲಾಚಿ ಲೈಂಗಿಕ ದೌರ್ಜನ್ಯ ಪ್ರಕರಣದ (Pollachi sexual assault case) ಎಲ್ಲಾ 9 ಅಪರಾಧಿಗಳಿಗೆ ಕೊಯಮತ್ತೂರಿನ ಮಹಿಳಾ ನ್ಯಾಯಾಲಯ (Mahila Court) ಜೀವಾವಧಿ ಶಿಕ್ಷೆ (Life Imprisonment) ವಿಧಿಸಿದೆ. 6 ವರ್ಷಗಳ ಹಿಂದೆ ತಮಿಳುನಾಡನ್ನು (Tamil Nadu) ಬೆಚ್ಚಿಬೀಳಿಸಿದ್ದ ಈ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್. ನಂದಿನಿ ದೇವಿ ಅವರಿದ್ದ ಪೀಠ ಈ ತೀರ್ಪನ್ನು ನೀಡಿದೆ.

    ಅಪರಾಧಿಗಳಾದ ಕೆ. ತಿರುನಾವುಕ್ಕರಸು (34), ಎನ್. ರಿಶ್ವಂತ್, ಅಲಿಯಾಸ್ ಶಬರಿರಾಜನ್(32), ಎಂ. ಸತೀಶ್ (33), ಟಿ. ವಸಂತ ಕುಮಾರ್ (30), ಆರ್. ಮಣಿವಣ್ಣನ್ (32), ಹರೋನ್ ಪಾಲ್ (32), ಪಿ. ಬಾಬು, ಅಲಿಯಾಸ್ ಬೈಕ್ ಬಾಬು (33), ಕೆ. ಅರುಳಾನಂದಂ (39), ಮತ್ತು ಎಂ. ಅರುಣ್‌ಕುಮಾರ್‌ಗೆ ಶಿಕ್ಷೆ ವಿಧಿಸಲಾಗಿದೆ. ಸಂತ್ರಸ್ತ ಮಹಿಳೆಯರಿಗೆ ಒಟ್ಟಾರೆ 85 ಲಕ್ಷ ರೂ. ಪರಿಹಾರ ನೀಡುವಂತೆ ನ್ಯಾಯಾಲಯ ತೀರ್ಪಿನಲ್ಲಿ ಆದೇಶಿಸಿದೆ. ಇದನ್ನೂ ಓದಿ: ʼಆಪರೇಷನ್‌ ಸಿಂಧೂರ್‌ʼ ಟ್ರೇಡ್‌ ಮಾರ್ಕ್‌ಗಾಗಿ ರಿಲಯನ್ಸ್‌ ಸೇರಿ ಹಲವರಿಂದ ಅರ್ಜಿ

    2016 ಮತ್ತು 2018ರ ಅವಧಿಯಲ್ಲಿ ಈ ಅಪರಾಧಿಗಳು ಹಲವಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು. ಕೃತ್ಯಗಳನ್ನು ರೆಕಾರ್ಡ್ ಮಾಡಿಕೊಂಡು, ಬೆದರಿಸಿ ಅತ್ಯಾಚಾರ ಎಸಗಿದ್ದರು. ಅಲ್ಲದೇ ವೀಡಿಯೋ ತೋರಿಸಿ ಹಣವನ್ನು ಸುಲಿಗೆ ಮಾಡಿದ್ದರು.

    2019ರ ಫೆ.24 ರಂದು 19 ವರ್ಷದ ಸಂತ್ರಸ್ತೆಯೊಬ್ಬಳು ನೀಡಿದ್ದ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸಿ, 2019ರ ಮೇ 21 ರಂದು ಕೊಯಮತ್ತೂರು ಮಹಿಳಾ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಿದ್ದರು. ಆದಾಗ್ಯೂ, ವಿಚಾರಣೆಯ ವಿಳಂಬದಿಂದಾಗಿ ಮದ್ರಾಸ್ ಹೈಕೋರ್ಟ್ ಮಧ್ಯಪ್ರವೇಶಿಸಿಸಿತ್ತು. ಈ ಪ್ರಕರಣವನ್ನು ಕೊಯಮತ್ತೂರಿನ ಇಂಟಿಗ್ರೇಟೆಡ್ ಕೋರ್ಟ್ ಕಾಂಪ್ಲೆಕ್ಸ್‌ಗೆ ವರ್ಗಾಯಿಸಿ, ಪ್ರತ್ಯೇಕ ಕೋರ್ಟ್ ರೂಮ್ ವ್ಯವಸ್ಥೆ ಮಾಡುವಂತೆ ನಿರ್ದೇಶಿಸಿತ್ತು. ಇದೀಗ ಸುದೀರ್ಘ ವಿಚಾರಣೆ ಬಳಿಕ ಇಂದು ತೀರ್ಪು ಹೊರಬಿದ್ದಿದೆ.

    ಏನಿದು ಪ್ರಕರಣ?
    2019ರ ಫೆಬ್ರುವರಿಯಲ್ಲಿ ಯುವತಿಯೊಬ್ಬಳು, ನಾಲ್ವರು ಪುರುಷರ ತಂಡ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಆ ದೃಶ್ಯವನ್ನು ರೆಕಾರ್ಡ್ ಮಾಡಿಕೊಂಡಿದ್ದಾರೆ. ವಿಡಿಯೊಗಳನ್ನಿಟ್ಟುಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಳು. ಇದೇ ವೇಳೆ ಪೊಲ್ಲಾಚಿಯಲ್ಲಿ ಅನೇಕ ಮಹಿಳೆಯರ ಮೇಲೆ ಇಂಥದ್ದೇ ಗುಂಪೊಂದು ಲೈಂಗಿಕ ದೌರ್ಜನ್ಯ ಎಸಗಿ, ಬ್ಲಾಕ್ ಮೇಲ್ ಮಾಡುತ್ತಿದೆ ಎಂದು ವರದಿಯಾಗಿತ್ತು.

    ಸಾರ್ವಜನಿಕ ವಲಯದಲ್ಲಿ ಈ ಸುದ್ದಿ ಹರಡುತ್ತಿದ್ದಂತೆ ಸರ್ಕಾರದ ವಿರುದ್ಧ ಅಕ್ರೋಶ ವ್ಯಕ್ತವಾಗಿತ್ತು. ವಿಧಾನಸಭೆಯಲ್ಲೂ ಈ ವಿಚಾರ ಚರ್ಚೆಯಾಗಿತ್ತು. ಆರಂಭದಲ್ಲಿ ಸ್ಥಳೀಯ ಪೊಲೀಸರು ಈ ಪ್ರಕರಣದ ತನಿಖೆ ನಡೆಸಿದ್ದರು. ಬಳಿಕ ಪ್ರಕರಣದ ತನಿಖೆ ನಡೆಸುವಂತೆ ಸಿಬಿ ಸಿಐಡಿ ಪೊಲೀಸರಿಗೆ ತಮಿಳುನಾಡು ಸರ್ಕಾರ ಆದೇಶಿಸಿತ್ತು. ನಂತರ ಪ್ರಕರಣವನ್ನು ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ಹಸ್ತಾಂತರಿಸಲಾಗಿತ್ತು. ಇದನ್ನೂ ಓದಿ: ಮೈನಿಂಗ್ ಕೇಸಲ್ಲಿ 7 ವರ್ಷ ಜೈಲು – ಶಾಸಕ ಸ್ಥಾನದಿಂದ ಅನರ್ಹರಾಗ್ತಾರಾ ರೆಡ್ಡಿ?

  • ಐರಿಷ್-ಬ್ರಿಟಿಷ್ ಪ್ರವಾಸಿ ಯುವತಿಯ ರೇಪ್ & ಮರ್ಡರ್ ಕೇಸ್ – ಗೋವಾ ನಿವಾಸಿಗೆ ಜೀವಾವಧಿ ಶಿಕ್ಷೆ

    ಐರಿಷ್-ಬ್ರಿಟಿಷ್ ಪ್ರವಾಸಿ ಯುವತಿಯ ರೇಪ್ & ಮರ್ಡರ್ ಕೇಸ್ – ಗೋವಾ ನಿವಾಸಿಗೆ ಜೀವಾವಧಿ ಶಿಕ್ಷೆ

    ನವದೆಹಲಿ: ಐರಿಷ್‌-ಬ್ರಿಟಿಷ್‌ ಪ್ರವಾಸಿ (Irish Tourist) ಯುವತಿಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 31 ವರ್ಷದ ವಿಕಾಸ್ ಭಗತ್‌ಗೆ ಸುಮಾರು 8 ವರ್ಷಗಳ ಬಳಿಕ ಗೋವಾ ಕೋರ್ಟ್‌ (Goa Court) ಕಠಿಣ ಶಿಕ್ಷೆ ವಿಧಿಸಿದೆ. ಅಪರಾಧಿ ವಿಕಾಸ್‌ 2017ರಲ್ಲಿ ಎಸಗಿದ ಕೃತ್ಯಕ್ಕಾಗಿ ಕೋರ್ಟ್‌ ಜೀವಾವಧಿ ಶಿಕ್ಷೆ ವಿಧಿಸಿ ಅಂತಿಮ ತೀ‌ರ್ಪು ಪ್ರಕಟಿಸಿದೆ.

    2017ರ ಮಾರ್ಚ್‌ ತಿಂಗಳಲ್ಲಿ 28 ವರ್ಷ ವಯಸ್ಸಿನ ಐರಿಷ್-ಬ್ರಿಟಿಷ್ ಯುವತಿ ಗೋವಾ ಪ್ರವಾಸಕ್ಕೆ ಬಂದಿದ್ದರು. ಮಾರ್ಚ್‌ 14ರಂದು ದಕ್ಷಿಣ ಗೋವಾದ ಕ್ಯಾನಕೋನಾ ಗ್ರಾಮದ (Canacona village) ಅರಣ್ಯ ಪ್ರದೇಶದಲ್ಲಿ ಪ್ರವಾಸಿ ಯುವತಿಯ ಶವ ಕೊಲೆ ಮತ್ತು ಅತ್ಯಾಚಾರ ಮಾಡಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಶುಕ್ರವಾರ ಅಪರಾಧಿ ಎಂದು ಘೋಷಿಸಿತ್ತು. ಇಂದು ಶಿಕ್ಷೆ ಪ್ರಕಟ ಮಾಡಿತು. ಇದನ್ನೂ ಓದಿ: ಮಾರ್ಚ್ 7 ರಂದು 2025-26ನೇ ಸಾಲಿನ ಬಜೆಟ್ ಮಂಡನೆ – ಸಿದ್ದರಾಮಯ್ಯ

    ಶುಕ್ರವಾರ ಕೋರ್ಟ್‌ ತೀರ್ಪು ಹೊರಬೀಳುತ್ತಿದ್ದಂತೆ ಸಂತ್ರಸ್ತೆ ಕುಟುಂಬಸ್ಥರು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದರು. ಡೇನಿಯಲ್‌ (ಸಂತ್ರಸ್ತೆ ಹೆಸರು ಬದಲಾಯಿಸಲಾಗಿದೆ) ನಮ್ಮ ಮಗಳಿದ್ದಂತೆ, ಆಕೆಯ ಪರ ನ್ಯಾಯಕ್ಕಾಗಿ ಹೋರಾಡಿದ ಎಲ್ಲರಿಗೂ ಧನ್ಯವಾದಗಳು, ನಾವು ಕೃತಜ್ಞರಾಗಿರುತ್ತೇವೆ ಎಂದು ಭಾವುರಾಗಿದ್ದಾರೆ. ಇದನ್ನೂ ಓದಿ: ಹೆಚ್‌ಡಿಕೆ ವಿರುದ್ಧ 14 ಎಕರೆ ಸರ್ಕಾರಿ ಜಮೀನು ಒತ್ತುವರಿ ಆರೋಪ – ಕಂದಾಯ ಇಲಾಖೆ ಅಧಿಕಾರಿಗಳಿಂದ ಸರ್ವೇ

    ಏನಿದು ಕೇಸ್‌?
    2017ರ ಮಾರ್ಚ್‌ನಲ್ಲಿ ದಕ್ಷಿಣ ಗೋವಾದ ಅರಣ್ಯ ಪ್ರದೇಶದಲ್ಲಿ 28 ವರ್ಷದ ಸಂತ್ರಸ್ತೆಯ ಮೃತದೇಹ ಪತ್ತೆಯಾಗಿತ್ತು. ದೇಹದ ಮೇಲೆ ಒಂದು ತುಂಡು ಬಟ್ಟೆ ಸಹ ಇಲ್ಲದೇ ರಕ್ತದ ಮಡುವಿನಲ್ಲಿ ಪತ್ತೆಯಾಗಿತ್ತು. ತಲೆ ಮತ್ತು ಮುಖದ ಭಾಗ ಗಾಯಗೊಂಡ ಸ್ಥಿತಿಯಲ್ಲಿತ್ತು. ಈ ಸಂಬಂಧ ಆರೋಪಿಯನ್ನು ಬಂಧಿಸಿದ ಪೊಲೀಸರು ತನಿಖೆ ನಡೆಸಿದ್ದರು.

    ಸಂತ್ರಸ್ತೆ ಪರ ವಕೀಲ ವಿಕಾಸ್‌ ವರ್ಮಾ ವಾದ ಮಂಡಿಸಿದರು. ಯುವತಿಯ ಮೇಲೆ ಅತ್ಯಾಚಾರ ಎಸಗಿರುವುದನ್ನು ಫೋರೆನ್ಸಿಕ್‌ ವರದಿಗಳು ದೃಢಪಡಿಸಿವೆ. ಅತ್ಯಾಚಾರ ಎಸಗಿದ ಬಳಿಕ ಆಕೆಯ ಮುಖವನ್ನು ಬಿಯರ್‌ ಬಾಟಲಿಯಿಂದ ಜಜ್ಜಿದ್ದಾರೆ. ಈ ಕೃತ್ಯಕ್ಕೆ ಯಾವುದೇ ಕಾರಣಕ್ಕೂ ಕ್ಷಮೆ ನೀಡದಂತೆ ಕೋರ್ಟ್‌ಗೆ ಮನವಿ ಮಾಡಿದ್ದರು. ಇದನ್ನೂ ಓದಿ: Bengaluru | ಪತಿಗೆ ಅಕ್ರಮ ಸಂಬಂಧ – ಮಗಳನ್ನು ಕೊಲೆಗೈದು ಪತ್ನಿ ಆತ್ಮಹತ್ಯೆ

  • ಪೊಲೀಸರಿಗೆ ಗಾಂಜಾ ಮಾರಾಟ ಮಾಹಿತಿ ಕೊಟ್ಟವನ ಹತ್ಯೆಗೈದಿದ್ದ 8 ಮಂದಿಗೆ ಜೀವಾವಧಿ ಶಿಕ್ಷೆ

    ಪೊಲೀಸರಿಗೆ ಗಾಂಜಾ ಮಾರಾಟ ಮಾಹಿತಿ ಕೊಟ್ಟವನ ಹತ್ಯೆಗೈದಿದ್ದ 8 ಮಂದಿಗೆ ಜೀವಾವಧಿ ಶಿಕ್ಷೆ

    ಶಿವಮೊಗ್ಗ: ನಗರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳ ಬಗ್ಗೆ ಮಾಹಿತಿ ನೀಡಿದ್ದ ವ್ಯಕ್ತಿಯನ್ನು ಹತ್ಯೆಗೈದಿದ್ದ ಆರೋಪಿಗಳಿಗೆ ಶಿವಮೊಗ್ಗ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (Court) ಜೀವಾವಧಿ ಶಿಕ್ಷೆ (Life Imprisonment) ನೀಡಿ ತೀರ್ಪು ನೀಡಿದೆ.

    ಶಿಕ್ಷೆಗೆ ಗುರಿಯಾದ ಅಪರಾಧಿಗಳನ್ನು ಲತೀಫ್, ಪರ್ವೇಜ್, ಸೈಯದ್ ಜಿಲಾನ್, ಜಾಫರ್ ಸಾದಿಕ್, ಸೈಯದ್ ರಾಜೀಕ್, ಮಹಮ್ಮದ್ ಶಾಬಾಜ್, ಸಾಬಿರ್ ಮತ್ತು ಮಹಮ್ಮದ್ ಯೂಸುಫ್ ಎಂದು ಗುರುತಿಸಲಾಗಿದೆ. ಅಪರಾಧಿಗಳು 2021ರಲ್ಲಿ, ಗಾಂಜಾ ಮಾರಾಟದ ಬಗ್ಗೆ ಪೊಲೀಸರಿಗೆ ಮಾಹಿತಿ ಕೊಡುತ್ತಾನೆ ಎಂಬ ಕಾರಣಕ್ಕೆ ಇರ್ಫಾನ್ ಎಂಬಾತನನ್ನು ಟಿಪ್ಪು ನಗರದಲ್ಲಿ ಮಾರಕಾಸ್ತ್ರಗಳಿಂದ ಚುಚ್ಚಿ ಹತ್ಯೆಗೈದಿದ್ದರು.

    ಪ್ರಕರಣ ಸಂಬಂಧ ತುಂಗಾನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಅಲ್ಲದೇ ಈ ಆರೋಪಿಗಳಿಗೆ ಜಾಮೀನು ನೀಡಬಾರದು. ಜಾಮೀನು ನೀಡಿದರೆ ಮೃತ ಇರ್ಫಾನ್ ಕುಟುಂಬಕ್ಕೆ ತೊಂದರೆ ನೀಡುತ್ತಾರೆ ಎಂದು ಪೊಲೀಸರು ಹಾಗೂ ಸರ್ಕಾರಿ ವಕೀಲರು ನ್ಯಾಯಾಲಯದ ಗಮನಕ್ಕೆ ತಂದಿದ್ದರು.

    ವಾದ ಆಲಿಸಿದ ನ್ಯಾಯಾಲಯ ಎಂಟು ಮಂದಿ ಆರೋಪಿಗಳಿಗೆ ತಲಾ 5 ಸಾವಿರ ರೂ. ದಂಡ ಹಾಗೂ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

  • ಸ್ನೇಹಿತನ ಮಗನನ್ನು ಅಪಹರಿಸಿ ಕೊಲೆ- ಅಪರಾಧಿಗೆ ಜೀವಾವಧಿ ಶಿಕ್ಷೆ, 3.25 ಲಕ್ಷ ರೂ. ದಂಡ

    ಸ್ನೇಹಿತನ ಮಗನನ್ನು ಅಪಹರಿಸಿ ಕೊಲೆ- ಅಪರಾಧಿಗೆ ಜೀವಾವಧಿ ಶಿಕ್ಷೆ, 3.25 ಲಕ್ಷ ರೂ. ದಂಡ

    ಶಿವಮೊಗ್ಗ: ಸ್ನೇಹಿತನ ಮೇಲಿನ ದ್ವೇಷಕ್ಕೆ ಆತನ ಮಗನನ್ನು ಅಪಹರಿಸಿ, ನದಿಯಲ್ಲಿ ಮುಳುಗಿಸಿ ಕೊಲೆ ಮಾಡಿದ್ದ ವ್ಯಕ್ತಿಗೆ ಶಿವಮೊಗ್ಗ (Shivamogga) ನ್ಯಾಯಾಲಯ (Court) ಜೀವಾವಧಿ ಶಿಕ್ಷೆ (Life Imprisonment) ಮತ್ತು 3.25 ಲಕ್ಷ ರೂ. ದಂಡ (Penalty) ವಿಧಿಸಿದೆ.

    ಜಿಲ್ಲೆಯ ಶಿಕಾರಿಪುರ (Shikaripura) ತಾಲೂಕಿನ ಚುರ್ಚಿಗುಂಡಿ ಗ್ರಾಮದ ಎನ್‌ಎಂ ಬಸವರಾಜಪ್ಪ (40) ಶಿಕ್ಷೆಗೆ ಒಳಗಾದ ಅಪರಾಧಿ. ಶಿವಮೊಗ್ಗದ ಆಲ್ಕೊಳ ನಿವಾಸಿ ನಿಂಗರಾಜು ಮತ್ತು ಬಸವರಾಜಪ್ಪ ಮೊದಲಿನಿಂದ ಪರಿಚಿತರು. ನಿಂಗರಾಜು ಮೇಲಿನ ಹಳೇ ದ್ವೇಷಕ್ಕೆ (Feud) ಆತನ ಮಗ ಪ್ರೇಮ್ ಕುಮಾರ್‌ನನ್ನು (8) ಬಸವರಾಜಪ್ಪ ಅಪಹರಣ (Kidnap) ಮಾಡಿದ್ದ. 2017ರ ಮಾರ್ಚ್ 2 ರಂದು ಆಳ್ಕೊಳ ಸರ್ಕಲ್‌ನಿಂದ ಅಪಹರಣ ಮಾಡಿ, ಚುರ್ಚಿಗುಂಡಿ ಹತ್ತಿರ ಕುಮದ್ವತಿ ನದಿ ಬಳಿ ಕರೆದೊಯ್ದು ನೀರಿನಲ್ಲಿ ಮುಳುಗಿಸಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದ. ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ – ತಮಿಳುನಾಡು ಸಚಿವ ಸೆಂಥಿಲ್ ಬಾಲಾಜಿಗೆ ನ್ಯಾಯಾಂಗ ಬಂಧನ

    ವಿನೋಬನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿತ್ತು. ದೊಡ್ಡಪೇಟೆ ಠಾಣೆ ಇನ್ಸ್ಪೆಕ್ಟರ್ ಕೆಟಿ ಗುರುರಾಜ್ ಪ್ರಕರಣದ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಲ್ಲದೇ ಆತನ ವಿರುದ್ಧ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಇದನ್ನೂ ಓದಿ: ವಿಪಕ್ಷಗಳ ಮೈತ್ರಿಯಲ್ಲಿರುವ INDIA ಹೆಸರನ್ನು ನಿರ್ಬಂಧಿಸಿ – ಅರ್ಜಿ ವಿಚಾರಣೆಗೆ ಸುಪ್ರೀಂ ನಕಾರ

    ಸರ್ಕಾರದ ಪರವಾಗಿ ವಕೀಲೆ ಪುಷ್ಪಾ ವಾದ ಮಂಡಿಸಿದ್ದು, ವಿಚಾರಣೆ ನಡೆಸಿದ ಬಳಿಕ ನ್ಯಾಯಾಧೀಶೆ ಬಿಆರ್ ಪಲ್ಲವಿ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ. ಇದನ್ನೂ ಓದಿ: ಭಾಷಣದಲ್ಲಿ ಮತದಾರರಿಗೆ ಆಮಿಷ – ಜೆಪಿ ನಡ್ಡಾ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ ರದ್ದು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 10 ಜನ ದಲಿತರ ಹತ್ಯೆಗೈದಿದ್ದ ಅಪರಾಧಿಗೆ 42 ವರ್ಷಗಳ ಬಳಿಕ ಶಿಕ್ಷೆ ಕೊಟ್ಟ ಕೋರ್ಟ್

    10 ಜನ ದಲಿತರ ಹತ್ಯೆಗೈದಿದ್ದ ಅಪರಾಧಿಗೆ 42 ವರ್ಷಗಳ ಬಳಿಕ ಶಿಕ್ಷೆ ಕೊಟ್ಟ ಕೋರ್ಟ್

    ಲಕ್ನೋ: ಹತ್ತು ಜನ ದಲಿತರನ್ನು (Dalits) ಹತ್ಯೆ ಮಾಡಿದ್ದ ಉತ್ತರಪ್ರದೇಶದ (Uttar Pradesh) ವ್ಯಕ್ತಿಯೊಬ್ಬನಿಗೆ 90ನೇ ವಯಸ್ಸಿನಲ್ಲಿ ಕೋರ್ಟ್ ಶಿಕ್ಷೆ ಪ್ರಕಟಿಸಿದೆ.

    ಅಪರಾಧಿ ಗಂಗಾ ದಯಾಳ್‍ಗೆ ಜೀವಾವಧಿ ಶಿಕ್ಷೆ (Life Imprisonment) ವಿಧಿಸಿರುವ ಫಿರೋಜಾಬಾದ್ ಜಿಲ್ಲಾ ಕೋರ್ಟ್ (Firozabad Court), ಜೊತೆಗೆ 55,000 ರೂ. ದಂಡವನ್ನು ಸಹ ವಿಧಿಸಿದೆ. ದಂಡ ಪಾವತಿಸಲು ತಪ್ಪಿದಲ್ಲಿ 13 ತಿಂಗಳ ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ನ್ಯಾಯಾಲಯ ತೀರ್ಪಿನಲ್ಲಿ ಉಲ್ಲೇಖಿಸಿದೆ. ಇದನ್ನೂ ಓದಿ: ಗುರುತಿನ ಪುರಾವೆಗಳಿಲ್ಲದೇ 2,000 ರೂ. ನೋಟುಗಳ ವಿನಿಮಯ – ತುರ್ತು ವಿಚಾರಣೆಗೆ ನಿರಾಕರಿಸಿದ ಸುಪ್ರೀಂ

    42 ವರ್ಷಗಳ ಹಿಂದೆ ನಡೆದಿದ್ದ ಈ ಹತ್ಯೆ ಪ್ರಕರಣ ದೇಶಾದ್ಯಂತ ಆಘಾತವನ್ನುಂಟು ಮಾಡಿತ್ತು. 1981ರಲ್ಲಿ ಸದುಪುರ (Sadupur) ಗ್ರಾಮದಲ್ಲಿ ಹಿಂಸಾಚಾರ ನಡೆದು 10 ಮಂದಿಯನ್ನು ನಿರ್ದಯವಾಗಿ ಕೊಲ್ಲಲಾಗಿತ್ತು. ಅಲ್ಲದೆ ಹಿಂಸಾಚಾರದಲ್ಲಿ ಇಬ್ಬರು ಗಾಯಗೊಂಡಿದ್ದರು. ತನಿಖೆಯಲ್ಲಿ 10 ಮಂದಿಯನ್ನು ಆರೋಪಿಗಳೆಂದು ಗುರುತಿಸಲಾಗಿತ್ತು. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 302 ಮತ್ತು 307 ಅಡಿಯಲ್ಲಿ ಕೊಲೆ ಹಾಗೂ ಹಲ್ಲೆ ಪ್ರಕರಣಗಳನ್ನು ದಾಖಲಿಸಲಾಗಿತ್ತು.

    ಗುರುತಿಸಲಾಗಿದ್ದ 10 ಆರೋಪಿಗಳಲ್ಲಿ 9 ಜನ ಆರೋಪಿಗಳು ವಿಚಾರಣೆ ಎದುರಿಸುತ್ತಿರುವಾಗಲೇ ಸಾವನ್ನಪ್ಪಿದ್ದರು. ಉಳಿದ ಏಕೈಕ ಅಪರಾಧಿ ಗಂಗಾ ದಯಾಳ್ ಈಗ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾನೆ. ಇದನ್ನೂ ಓದಿ: ಮಂಗಳೂರಿನಲ್ಲಿ ಮತ್ತೆ ನೈತಿಕ ಪೊಲೀಸ್‍ಗಿರಿ – ಅನ್ಯಕೋಮಿನ ಯುವತಿ ಜೊತೆ ಬಂದಿದ್ದಕ್ಕೆ ಯುವಕರ ಮೇಲೆ ಹಲ್ಲೆ

  • ಮಕ್ಕಳನ್ನು ಅಪಹರಿಸಿ ಅತ್ಯಾಚಾರಗೈದು ಹತ್ಯೆ- ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿದ ದೆಹಲಿ ಕೋರ್ಟ್

    ಮಕ್ಕಳನ್ನು ಅಪಹರಿಸಿ ಅತ್ಯಾಚಾರಗೈದು ಹತ್ಯೆ- ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿದ ದೆಹಲಿ ಕೋರ್ಟ್

    ನವದೆಹಲಿ: 30 ಮಕ್ಕಳನ್ನು ಅಪಹರಿಸಿ ಅತ್ಯಾಚಾರಗೈದು (Rape) ನಂತರ ಹತ್ಯೆಗೈದ ಅಪರಾಧಿಗೆ ದೆಹಲಿ (Delhi) ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.

    ರವೀಂದರ್ ಕುಮಾರ್ ಎಂಬಾತ ಆರು ವರ್ಷದ ಮಗುವನ್ನು ಅಪಹರಿಸಿ ಅತ್ಯಾಚಾರ ನಡೆಸಿ ಕೊಲೆಗೈದ ಬಳಿಕ ಮೇ 6ರಂದು ರೋಹಿಣಿ ನ್ಯಾಯಾಲಯವು ಆತ ಅಪರಾಧಿ ಎಂಬ ತೀರ್ಪನ್ನು ನೀಡಿತ್ತು. ಈ ಕುರಿತು ಕಳೆದ ವಾರ ತೀರ್ಪು ನಡೆಯಬೇಕಿತ್ತು. ಆದರೆ ಕುಮಾರ್ ಆದಾಯ ಮತ್ತು ಆಸ್ತಿಯ ಬಗ್ಗೆ ವಿವರ ತಿಳಿಯದ ಕಾರಣ ತೀರ್ಪನ್ನು ಮುಂದೂಡಲಾಯಿತು. ಇದನ್ನೂ ಓದಿ: ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಮಹಿಳೆಯನ್ನು ಕೊಲೆಗೈದು ದೇಹದ ಭಾಗಗಳನ್ನು ಫ್ರಿಡ್ಜ್‌ನಲ್ಲಿಟ್ಟ!

    ಮೂಲತಃ ಉತ್ತರಪ್ರದೇಶದ ಕಾಸ್‌ಗಂಜ್‌ನ ನಿವಾಸಿಯಾದ ರವೀಂದರ್ ಕುಮಾರ್ 2008ರಲ್ಲಿ ದೆಹಲಿಗೆ ಬಂದಿದ್ದ. ಆಗ ಆತನ ವಯಸ್ಸು 18 ಆಗಿತ್ತು. ತೀವ್ರ ಮದ್ಯವ್ಯಸನಿ ಮತ್ತು ಡ್ರಗ್ಸ್ (Drugs) ಚಟ ಹೊಂದಿದ್ದ ಈತ ಒಂದು ಗುಡಿಸಲಿನಲ್ಲಿ ವಾಸಿಸುತ್ತಿದ್ದು, ದಿನವಿಡೀ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: 7ನೇ ಕ್ಲಾಸ್ ವಿದ್ಯಾರ್ಥಿನಿಯ ಮೇಲೆ ಗ್ಯಾಂಗ್ ರೇಪ್ – ನಾಲ್ವರು ಅಪ್ರಾಪ್ತರು ಅರೆಸ್ಟ್

    ಈತ ಡ್ರಗ್ಸ್ ಸೇವಿಸಿದ ಬಳಿಕ ಮಕ್ಕಳನ್ನು ಹುಡುಕಿಕೊಂಡು ಸುಮಾರು 40 ಕಿಲೋ ಮೀಟರ್‌ವರೆಗೂ ನಡೆದುಕೊಂಡೇ ಹೋಗುತ್ತಿದ್ದ. ಕಟ್ಟಡ ನಿರ್ಮಾಣ ಸ್ಥಳಗಳು ಮತ್ತು ಕೊಳಗೇರಿಗಳೇ ಈತನ ಟಾರ್ಗೆಟ್. ಅಲ್ಲಿ ಹಿಂದುಳಿದ ಕುಟುಂಬಗಳು ಹೆಚ್ಚಾಗಿ ವಾಸಿಸುತ್ತಿದ್ದು, ಮಕ್ಕಳಿಗೆ 10 ರೂ. ಅಥವಾ ಸಿಹಿ ತಿನಿಸುಗಳ ಆಮಿಷವೊಡ್ಡಿ ನಿರ್ಜನ ಪ್ರದೇಶಕ್ಕೆ ಕರೆದೊಯ್ಯುತ್ತಿದ್ದ. ಬಳಿಕ ಮಗುವಿನ ಮೇಲೆ ಅತ್ಯಾಚಾರಗೈದು ಕೊಲೆಮಾಡುತ್ತಿದ್ದ. ಇದನ್ನೂ ಓದಿ: ಪರಾರಿಯಾಗಲು ಯತ್ನಿಸಿದ ವರನನ್ನು 20 ಕಿ.ಮೀ ಚೇಸ್ ಮಾಡಿ ಮಂಟಪಕ್ಕೆ ಕರೆತಂದ ಗಟ್ಟಿಗಿತ್ತಿ ವಧು!

    ಹೀಗೇ 2008ರಿಂದ 2015ರ ಒಳಗಾಗಿ ಒಟ್ಟು 30 ಮಕ್ಕಳ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾನೆ. ಈ ಕುರಿತು ಬೇಗಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು 2015ರಲ್ಲಿ ಈತನನ್ನು ದೆಹಲಿಯಲ್ಲಿ ಬಂಧಿಸಲಾಯಿತು. ಶಿಕ್ಷೆಯ ಕುರಿತು ವಾದ ಮಂಡಿಸುವ ಸಂದರ್ಭದಲ್ಲಿ ದೆಹಲಿ ಪೊಲೀಸರು ಈತನಿಗೆ ಗರಿಷ್ಠ ಶಿಕ್ಷೆಯನ್ನು ನೀಡಬೇಕು ಎಂದು ಕೋರಿದ್ದರು. ಹೀಗಾಗಿ ಈತನಿಗೆ ದೆಹಲಿ ನ್ಯಾಯಾಲಯವು ಜೀವಾವಧಿ ಶಿಕ್ಷೆಯನ್ನು ನೀಡಿದೆ. ಇದನ್ನೂ ಓದಿ: ಐಸಿಸ್ ಸೇರಲು ಕೇರಳ ತೊರೆದಿದ್ದ ವ್ಯಕ್ತಿ ಪಾಕ್ ಜೈಲಿನಲ್ಲಿ ಸಾವು

  • ಪ್ರಿಯಕರನೊಂದಿಗೆ ಸೇರಿ ಪತಿ ಕೊಲೆಗೈದ ಪತ್ನಿಗೆ ಜೀವಾವಧಿ ಶಿಕ್ಷೆ

    ಪ್ರಿಯಕರನೊಂದಿಗೆ ಸೇರಿ ಪತಿ ಕೊಲೆಗೈದ ಪತ್ನಿಗೆ ಜೀವಾವಧಿ ಶಿಕ್ಷೆ

    ಚಂಡೀಗಢ: ಪತಿಯನ್ನು ಕೊಂದಿದ್ದ ಮಹಿಳೆಗೆ ಹಾಗೂ ಆಕೆಯ ಪ್ರಿಯಕರನಿಗೆ ಶುಕ್ರವಾರ ನುಹ್ (Nuh) ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ (Life imprisonment) ಪ್ರಕಟಿಸಿದೆ.

    ಸೋಹ್ನಾ ನಿವಾಸಿ ಗೀತಾ ಹಾಗೂ ದೆಹಲಿಯ (Delhi) ಚತ್ತರ್‌ಪುರ (Chattarpur) ನಿವಾಸಿ ಸುರ್ಜಿತ್ ಚೌಹಾನ್ ಶಿಕ್ಷೆಗೆ ಗುರಿಯಾದ ಅಪರಾಧಿಗಳು. 2017ರಲ್ಲಿ ವಿಪಿನ್ ತೋಮರ್ ಅವರನ್ನು ಕೊಲೆ ಮಾಡಲಾಗಿತ್ತು. ಮೃತ ದೇಹವನ್ನು ಶಿಕ್ರಾವಾ (Shikrawa) ರಸ್ತೆಯ ಬಳಿ ಎಸೆದು ಹೋಗಿದ್ದರು.

    ಅರ್ಧ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ ವಿಪಿನ್ ತೋಮರ್ ಮೃತದೇಹದ ಬಗ್ಗೆ ಸ್ಥಳೀಯ ನಿವಾಸಿ ಓಂ ಪ್ರಕಾಶ್ ಎಂಬವರು ನಾಗಿನಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ದೂರಿನ ಅಡಿ ತಪ್ಪಿತಸ್ಥರ ವಿರುದ್ಧ ಸೆಕ್ಷನ್ 302 (ಕೊಲೆ) ಹಾಗೂ 201ರ (ಸಾಕ್ಷ್ಯ ನಾಶ) ಅಡಿ ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ:  ದೇವಸ್ಥಾನದ ಹುಂಡಿಗೆ ಹಾಕಲು ತೆಗೆದುಕೊಂಡು ಹೋಗುತ್ತಿದ್ದ 2.50 ಸಾವಿರ ಹಣ ಸೀಜ್

    ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸಂದೀಪ್ ಕುಮಾರ್ ದುಗ್ಗಲ್  (Sandeep Kumar Duggal) ಅವರು ಕೊಲೆಗಾರರನ್ನು ಬುಧವಾರ ಅಪರಾಧಿಗಳು ಎಂದು ಘೋಷಿಸಿ, ಶುಕ್ರವಾರ ಶಿಕ್ಷೆ ಪ್ರಕಟ ಮಾಡಿದ್ದಾರೆ. ಇದನ್ನೂ ಓದಿ: ಮಾಡಾಳ್‍ನ ಮೈಂಟೇನ್ ಮಾಡೋದೇ ‘ಲೋಕಾ’ಗೆ ಸವಾಲು- ರಾತ್ರಿಪೂರ್ತಿ ಕಣ್ಣೀರಿಡ್ತಿರೋ ಭ್ರಷ್ಟ ಮಾಡಾಳ್

     

  • ಅತ್ಯಾಚಾರಕ್ಕೆ ಯತ್ನಿಸಿ ಮಹಿಳೆಗೆ ಬೆಂಕಿ ಹಚ್ಚಿದ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ

    ಅತ್ಯಾಚಾರಕ್ಕೆ ಯತ್ನಿಸಿ ಮಹಿಳೆಗೆ ಬೆಂಕಿ ಹಚ್ಚಿದ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ

    ಕೊಪ್ಪಳ: ಲೈಂಗಿಕ ಕ್ರಿಯೆಗೆ ಸಹಕರಿಸದ ಮಹಿಳೆಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಸಾಯಿಸಿದ ಆರೋಪಿಗೆ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

    ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ಒಂದನೇ ಹೆಚ್ಚುವರಿ ಸತ್ರ ಮತ್ತು ಜಿಲ್ಲಾ ನ್ಯಾಯಾಧೀಶ ಎಂ.ಜಿ.ಶಿವಳ್ಳಿಯವರು ಕಲಂ 448 ಅನ್ವಯ ಒಂದು ವರ್ಷ ಜೈಲು ಶಿಕ್ಷೆ ಒಂದು ಸಾವಿರ ರೂ. ದಂಡ ಹಾಗೂ 302 ಕಲಂ ಅನ್ವಯ ಜೀವಾವಧಿ ಶಿಕ್ಷೆ, 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

    ನಡೆದಿದ್ದೇನು?
    ಗಂಗಾವತಿ ತಾಲೂಕಿನ ಸಂಗಾಪೂರ ಗ್ರಾಮದಲ್ಲಿ 2015ರ ಜುಲೈ 27 ರಂದು ವಿಧವೆಯೊರ್ವಳು ತನ್ನ ಚಿಕ್ಕ ಮಗನ ಜೊತೆ ವಾಸವಿದ್ದಳು. ಆ ಸಮಯದಲ್ಲಿ ಸಂಗಾಪೂರ ಗ್ರಾಮದ ಬಾಲಪ್ಪ ತಂದೆ ಗೋವಿಂದಪ್ಪ ವಿಧವೆಯ ಮನೆಗೆ ತೆರಳಿ ಲೈಂಗಿಕ ಕ್ರಿಯೆಗೆ ಕರೆದಿದ್ದಾನೆ. ಆಗ ಆಕೆ ನಿರಾಕರಿಸಿ ಕೂಗಾಡಿದ್ದರಿಂದ ಸೀಮೆ ಎಣ್ಣೆಯನ್ನು ಸುರಿದು ಬೆಂಕಿ ಹಚ್ಚಿದ್ದಾನೆ. ಇದನ್ನೂ ಓದಿ: ನಿದ್ದೆಯಿಂದ ಎಬ್ಬಿಸಿದಕ್ಕೆ ಪೊಲೀಸರನ್ನ ಅಸಭ್ಯವಾಗಿ ನಿಂದಿಸಿದ ವ್ಯಕ್ತಿಗೆ 1 ವರ್ಷ 7  ತಿಂಗಳು ಜೈಲು 

    ಇದರಿಂದ ಮಹಿಳೆ ಗಂಭೀರ ಗಾಯಗೊಂಡಿದ್ದು, ಗಂಗಾವತಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ ಆಕೆಯನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೇ, 2015 ಆ 01 ರಂದು ಮಹಿಳೆ ಮೃತಪಟ್ಟಿದ್ದಳು.

    ಗ್ರಾಮೀಣ ಪೊಲೀಸ್ ಠಾಣೆಯ ಅಂದಿನ ಸಿಪಿಐ ಆಗಿದ್ದ ಪ್ರಭಾಕರ್ ಧರ್ಮಟ್ಟಿ ಪ್ರಕರಣದ ತನಿಖೆ ನಡೆಸಿ ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ವಿಚಾರಣೆಯ ಸಂದರ್ಭದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಧಾರರ ಸಾಕ್ಷ್ಯ ಮತ್ತು ದಾಖಲೆಗಳನ್ನು ಪರಿಶೀಲಿಸಿ ಒಂದನೇಯ ಹೆಚ್ಚುವರಿ ಸತ್ರ ಮತ್ತು ಜಿಲ್ಲಾ ನ್ಯಾಯಾಧೀಶ ಎಂ.ಜಿ.ಶಿವಳ್ಳಿ ಅವರು ಕಲಂ 448 ಅನ್ವಯ ಒಂದು ವರ್ಷ ಜೈಲು ಶಿಕ್ಷೆ, ಒಂದು ಸಾವಿರ ರೂ. ದಂಡ ಹಾಗೂ 302 ಕಲಂ ಅನ್ವಯ ಜೀವಾವಧಿ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

    ಜೊತೆಗೆ ಮಹಿಳೆಯ ಸಾವಿಗೆ ಪರಿಹಾರಕ್ಕಾಗಿ ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸುವಂತೆ ಮೃತಳ ಪುತ್ರನಿಗೆ ಸೂಚನೆ ನೀಡಿದ್ದಾರೆ. ಅಭಿಯೋಜನಾ ಪರವಾಗಿ ಸರ್ಕಾರಿ ಅಭಿಯೋಜಕಿ ನಾಗಲಕ್ಷ್ಮಿ.ಎಸ್ ವಾದ ಮಂಡಿಸಿದ್ದರು.

    Live Tv
    [brid partner=56869869 player=32851 video=960834 autoplay=true]