Tag: Lieutenant

  • ಪತಿ ಆಸೆ ಈಡೇರಿಸಿದ ಮಡದಿ: ಹುತಾತ್ಮ ಯೋಧನ ಪತ್ನಿ ಈಗ ಲೆಫ್ಟಿನೆಂಟ್

    ಪತಿ ಆಸೆ ಈಡೇರಿಸಿದ ಮಡದಿ: ಹುತಾತ್ಮ ಯೋಧನ ಪತ್ನಿ ಈಗ ಲೆಫ್ಟಿನೆಂಟ್

    ನವದೆಹಲಿ: ಲ್ಯಾನ್ಸ್ ನಾಯಕ ಮತ್ತು ವೀರಚಕ್ರ ಪ್ರಶಸ್ತಿ ಪುರಸ್ಕೃತ ಶಾಹಿದ್ ದೀಪಕ್ ಸಿಂಗ್ ಅವರ ಪತ್ನಿ ರೇಖಾ ಸಿಂಗ್ ಅವರು ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಆಗಿ ಆಯ್ಕೆಯಾಗಿದ್ದಾರೆ.

    ರೇಖಾ ಸಿಂಗ್ ಬಿಹಾರ ರೆಜಿಮೆಂಟ್‍ನ 16ನೇ ಬೆಟಾಲಿಯನ್ ನಾಯಕ ಶಾಹಿದ್ ದೀಪಕ್ ಸಿಂಗ್ ಅವರನ್ನು ವಿವಾಹವಾಗಿದ್ದರು. ಜೂನ್ 15, 2020 ರಂದು ಗಾಲ್ವಾನ್ ಕಣಿವೆಯಲ್ಲಿ ಚೀನಾ ಸೈನಿಕರ ವಿರುದ್ಧ ಹೋರಾಡುತ್ತಿದ್ದಾಗ ದೀಪಕ್ ಸಿಂಗ್ ಹುತಾತ್ಮರಾದರು. ದೀಪಕ್ ಸಿಂಗ್ ಅವರ ಧೈರ್ಯ ಮೆಚ್ಚಿದ ಸರ್ಕಾರ ಮರಣೋತ್ತರ ಪವಿತ್ರ ಪ್ರಶಸ್ತಿಯಾದ ‘ವೀರಚಕ್ರ’ ಪ್ರಶಸ್ತಿಯನ್ನು ಕೊಟ್ಟು ಗೌರವಿಸಿತು. ಇದನ್ನು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ನೀಡಿದರು. ಇದನ್ನೂ ಓದಿ: ನಾನು ಒಳ್ಳೆಯದನ್ನೂ ಮಾಡಿದ್ದೀನಿ, ಅದನ್ನೂ ತೋರಿಸಿ – ಕ್ಯಾಮೆರಾ ಮುಂದೆ ಕೈ ಮುಗಿದ ಕಿಂಗ್‍ಪಿನ್ ಆರ್.ಡಿ.ಪಾಟೀಲ್

    Lieutenant Rekha Singh Fulfils The Dream Of Her Husband Who Got Martyred In Galwan Valley. Salutes!

    ದೀಪಕ್ ಸಿಂಗ್ ಅವರಿಗೆ ಯೋಧ ಪರಂಪರೆಯನ್ನು ಮುಂದುವರಿಯಬೇಕು ಎಂಬ ಕನಸಿತ್ತು. ಅದಕ್ಕೆ ಸಾಥ್ ಕೊಟ್ಟ ರೇಖಾ ಸಿಂಗ್ ಯೋಧೆಯಾಗಿ ವೃತ್ತಿಜೀವನವನ್ನು ಮುಂದುವರಿಸಲು ನಿರ್ಧರಿಸಿದರು. ರೇಖಾ ಮತ್ತು ದೀಪಕ್ ವಿವಾಹವಾಗಿ ಕೇವಲ 15 ತಿಂಗಳುಗಳಾಗಿದ್ದವು.

    ಈ ಕುರಿತು ಮಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಸೇನೆಗೆ ಸೇರಬೇಕು ಎಂಬುದು ನನ್ನ ಪತಿಯ ಕನಸು ಮತ್ತು ನನಗೆ ಇದ್ದ ದೇಶಭಕ್ತಿಯ ಕಾರಣ ನಾನು ಶಿಕ್ಷಕ ವೃತ್ತಿಯನ್ನು ಬಿಟ್ಟು ಸೈನ್ಯದಲ್ಲಿ ಕೆಲಸ ಮಾಡಲು ಮನಸ್ಸು ಮಾಡಿದೆ. ಆದರೆ ನೋಯ್ಡಾಕ್ಕೆ ಹೋಗುವುದು ಮತ್ತು ಸೇನೆಗೆ ಸೇರಲು ಪ್ರವೇಶ ಪರೀಕ್ಷೆಗೆ ತರಬೇತಿ ಪಡೆಯುವುದು ಸುಲಭವಾಗಿರಲಿಲ್ಲ. ದೈಹಿಕ ತರಬೇತಿ ಪಡೆದರೂ ಮೊದಲ ಪ್ರಯತ್ನದಲ್ಲಿ ಯಶಸ್ಸು ಸಿಗಲಿಲ್ಲ. ಆದರೆ ನಾನು ಧೈರ್ಯ ಕಳೆದುಕೊಳ್ಳದೆ ಸೇನೆಗೆ ಸೇರಲು ತಯಾರಿ ನಡೆಸುತ್ತಿದ್ದೆ ಎಂದು ತಮ್ಮ ಕಷ್ಟದ ದಿನಗಳನ್ನು ನೆನಪಿಸಿಕೊಂಡರು.ಇದನ್ನೂ ಓದಿ:  ನಮ್ಮ ಮನೆ ಎಕ್ಸ್ ಪೋ 4ನೇ ಆವೃತ್ತಿಗೆ ಎರಡನೇ ದಿನವು ಭರ್ಜರಿ ರೆಸ್ಪಾನ್ಸ್

    Galwan valley martyrs wife passes army test, to be trained as an officer

    ಎರಡನೆ ಪ್ರಯತ್ನದಲ್ಲಿ ನನ್ನ ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಕ್ಕಿದ್ದು, ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಹುದ್ದೆಗೆ ಆಯ್ಕೆಯಾಗಿದ್ದೇನೆ. ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಹುದ್ದೆಯ ತರಬೇತಿಯು ಮೇ 28 ರಿಂದ ಚೆನ್ನೈನಲ್ಲಿ ಪ್ರಾರಂಭವಾಗಲಿದೆ ಎಂದು ತಿಳಿಸಿದರು.

  • 8ನೇ ಪರೀಕ್ಷೆಯಲ್ಲಿ ಪಾಸ್‌ – ಲೆಫ್ಟಿನೆಂಟ್‌ ಹುದ್ದೆಗೆ ಆಯ್ಕೆಯಾದ ಎಂಜಿನಿಯರ್‌

    8ನೇ ಪರೀಕ್ಷೆಯಲ್ಲಿ ಪಾಸ್‌ – ಲೆಫ್ಟಿನೆಂಟ್‌ ಹುದ್ದೆಗೆ ಆಯ್ಕೆಯಾದ ಎಂಜಿನಿಯರ್‌

    ಕಾರವಾರ: ಇಂದಿನ ಯುವ ಪೀಳಿಗೆಯವರು ನಾನು ಡಾಕ್ಟರ್, ಎಂಜಿನಿಯರ್, ಲಾಯರ್, ಟೀಚರ್ ಹೀಗೆ ಏನೇನೋ ಆಗಬೇಕು ಎಂಬ ಕನಸು ಕಟ್ಟಿಕೊಳ್ಳುವುದು ಸಾಮಾನ್ಯ. ತಾನೊಬ್ಬ ಯೋಧನಾಗಬೇಕು ಎಂದು ಆಸೆ ಪಡುವವರ ಸಂಖ್ಯೆ ಕಡಿಮೆ. ಆದರೆ ಮುಂಡಗೋಡು ನಗರದ ಹಳೂರಿನ ನಿವಾಸಿ ಅಭಯ್ ಪಂಡಿತ್ ತಾನು ಯೋಧನಾಗಬೇಕು ಎಂದು ಸತತ ಎಂಟು ಬಾರಿ ಲೆಫ್ಟಿನೆಂಟ್‌ ಹುದ್ದೆಯ ಪರೀಕ್ಷೆ ಬರೆದು ಕೊನೆಗೂ ತನ್ನ ಗುರಿ ಸಾಧಿಸಿದ್ದಾರೆ.

    ಅಭಯ್ ಓದಿದ್ದು ಎಂಜಿಜಿನಿಯರಿಂಗ್. ಮನಸ್ಸು ಮಾಡಿದ್ರೆ ಕೈತುಂಬ ಸಂಬಳದ ಜೊತೆ ಐಷಾರಾಮಿ ಜೀವನ ತನ್ನದಾಗಿಸಿಕೊಳ್ಳಬಹುದಿತ್ತು. ಆದರೆ ಸೈನ್ಯ ಸೇರಿ ದೇಶಸೇವೆ ಮಾಡಬೇಕು ಎಂಬ ತುಡಿತವಿತ್ತು. ಈ ಕಾರಣಕ್ಕೆ ಎಂಜಿನಿಯರಿಂಗ್ ಓದಿ ಕೆಲಸ ಸಿಕ್ಕರೂ ಬಿಡುವಿನ ಸಮಯ ಸೈನ್ಯ ಸೇರಲು ದೇಹ ಹುರಿಗೊಳಿಸಿ ಸತತ ಅಭ್ಯಾಸದಲ್ಲಿ ನಿರತರಾಗಿದ್ದರು. ಪ್ರತಿ ಭಾರಿ ಸೈನಿಕ ಪರೀಕ್ಷೆ ಬರೆದಾಗಲೂ ಸೋಲು ಕಾಣುತಿದ್ದರು. ಆದರೆ ಛಲ ಬಿಡದ ಇವರು ಎಂಟನೇ  ಪರೀಕ್ಷೆಯಲ್ಲಿ ಪಾಸಾಗುವ ಮೂಲಕ ಕರ್ನಾಟಕದಿಂದ ಆಯ್ಕೆಯಾದ ಆರು ಜನರಲ್ಲಿ ಲೆಫ್ಟಿನೆಂಟ್‌ ಹುದ್ದೆ ಗಿಟ್ಟಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ.

    ಚೆನ್ನೈನಲ್ಲಿರುವ ಭಾರತೀಯ ಸೈನಿಕ ಅಕಾಡಮಿಯಲ್ಲಿ ತರಬೇತಿ ಮುಗಿಸಿರುವ ಇವರು ನ.21 ರಂದು ಲೆಫ್ಟಿನೆಂಟ್‌ ಆಗಿ ನಿಯುಕ್ತಿಗೊಂಡಿದ್ದು, ರಾಜಸ್ಥಾನದ ವೆಸ್ಟರ್ನ್‌ ಸೆಕ್ಟರ್ ನಲ್ಲಿ ಸೇವೆ ಸಲ್ಲಿಸಲು ಡಿ.10 ರಂದು ತೆರಳಲಿದ್ದಾರೆ.

    ಸಾಧನೆ ಇಲ್ಲದೇ ಜೀವನದಲ್ಲಿ ಏನೂ ಸಿಗುವುದಿಲ್ಲ. ನನಗೆ ಕೆಲಸ ಸಿಗಲಿಲ್ಲ ಎಂದುಕೊಳ್ಳುವ ಬದಲು ಆ ಕೆಲಸಕ್ಕೆ ನಾನು ಎಷ್ಟು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂಬ ಆತ್ಮಾವಲೋಕನ ಅಗತ್ಯ. ಸಾಧಿಸುವ ಛಲವಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಎನ್ನುತ್ತಾರೆ ಲೆಫ್ಟಿನೆಂಟ್‌ ಅಭಯ್‌.

  • ಭಾರತೀಯ ಸೇನೆಯಲ್ಲಿ ಇತಿಹಾಸ ಸೃಷ್ಟಿ – ಪತಿ ಬಳಿಕ ಪತ್ನಿಗೆ 3 ಸ್ಟಾರ್

    ಭಾರತೀಯ ಸೇನೆಯಲ್ಲಿ ಇತಿಹಾಸ ಸೃಷ್ಟಿ – ಪತಿ ಬಳಿಕ ಪತ್ನಿಗೆ 3 ಸ್ಟಾರ್

    ನವದೆಹಲಿ: ಭಾರತೀಯ ಸೇನೆಯಲ್ಲಿ ಮಾಧುರಿ ಕಾನಿಟ್ಕರ್ ಅವರು ಶನಿವಾರ ಲೆಫ್ಟಿನೆಂಟ್ ಸ್ಥಾನವನ್ನು ಪಡೆಯುವ ಮೂಲಕ ವಿಶೇಷ ದಾಖಲೆಯನ್ನು ನಿರ್ಮಿಸಿದ್ದಾರೆ. ಭಾರತೀಯ ಸೇನೆಯಲ್ಲಿ ಮೂರನೇ ಲೆಫ್ಟಿನೆಂಟ್ ಸ್ಥಾನ ಪಡೆದ ಹೆಗ್ಗಳಿಕೆಗೆ ಮಾಧುರಿ ಪಾತ್ರರಾಗಿದ್ದಾರೆ.

    ಲೆಫ್ಟಿನೆಂಟ್ ಜನರಲ್ ಮಾಧುರಿ ಕಾನಿಟ್ಕರ್ ಅವರು ದೆಹಲಿಯಲ್ಲಿ ಡೆಪ್ಯೂಟಿ ಚೀಫ್, ಇಂಟಿಗ್ರೇಟೆಡ್ ಡಿಫೆನ್ಸ್ ಸ್ಟ್ಯಾಫ್(ಡಿಸಿಐಡಿಎಸ್) ಹಾಗೂ ವೈದ್ಯಕೀಯ(ಅಂಡರ್ ಚೀಫ್ ಆಫ್ ಡಿಫೆನ್ಸ್ ಸ್ಟ್ಯಾಫ್) ಆಗಿ ಅಧಿಕಾರ ವಹಿಸಿಕೊಂಡಿದ್ದರು. ಶುಕ್ರವಾರ ಇಲಾಖೆ ಮಾಧುರಿ ಅವರಿಗೆ ಪ್ರಮೋಶನ್ ನೀಡಿದೆ.

    ಮಾಧುರಿ ಅವರ ಪತಿ ರಾಜೀವ್ ಅವರು ಕೂಡ ಲೆಫ್ಟಿನೆಂಟ್ ಜನರಲ್ ಆಗಿ ಭಾರತೀಯ ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಮೂಲಕ ಮಾಧುರಿ ಹಾಗೂ ರಾಜೀವ್ ಲೆಫ್ಟಿನೆಂಟ್ ಆದ ದೇಶದ ಮೊದಲ ದಂಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮಾಧುರಿ ಅವರು 37 ವರ್ಷದಿಂದ ಭಾರತೀಯ ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಳೆದ ವರ್ಷ ಲೆಫ್ಟಿನೆಂಟ್ ಜನರಲ್ ಹುದ್ದೆಗೆ ಮಾಧುರಿ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಈ ಹುದ್ದೆ ಖಾಲಿ ಇಲ್ಲ ಕಾರಣ ಶನಿವಾರ ಅವರಿಗೆ ಲೆಫ್ಟಿನೆಂಟ್ ಸ್ಥಾನವನ್ನು ನೀಡಲಾಯಿತು.

    1982ರಲ್ಲಿ ಸೇನಾ ಮೆಡಿಕಲ್ ಕಾರ್ಪ್ಸ್ ಗೆ ಮಾಧುರಿ ಸೇರ್ಪಡೆಯಾಗಿದ್ದರು. ಸೇನಾ ಪಡೆಗಳಲ್ಲಿ ಮಾಧುರಿ ಮೂರು ಸ್ಟಾರ್ ಪಡೆದು ಮೂರನೇ ಮಹಿಳೆ ಎಂಬ ಖ್ಯಾತಿ ಪಡೆದಿದ್ದಾರೆ. ವೈಸ್ ಅಡ್ಮಿರಲ್ ಡಾ. ಪುನೀತಾ ಅರೋರಾ ನೌಕಾಪಡೆಯಲ್ಲಿ ಮೊದಲ ಬಾರಿಗೆ ಈ ಸಾಧನೆಯನ್ನು ಮಾಡಿದ್ದಾರೆ. ವಾಯುಪಡೆ ಮಹಿಳೆ ಏರ್ ಮಾರ್ಷಲ್ ಪದ್ಮಾವತಿ ಬಂದೋಪಾಧ್ಯಾಯ ಈ ಸ್ಥಾನವನ್ನು ಸ್ವೀಕರಿಸಿದ ಎರಡನೇ ಮಹಿಳೆ. ಈಗ ಮಾಧುರಿ ಕನಿಟ್ಕರ್ ಈ ಸಾಧನೆ ಮಾಡಿದ್ದಾರೆ.

  • ಪೊಲೀಸ್ ಕರ್ತವ್ಯಕ್ಕೆ ಅಡ್ಡಿ: ಹಾಸನ ಶಾಸಕ ಪ್ರೀತಂ ಗೌಡ ವಿರುದ್ಧ ಎಫ್‍ಐಆರ್

    ಪೊಲೀಸ್ ಕರ್ತವ್ಯಕ್ಕೆ ಅಡ್ಡಿ: ಹಾಸನ ಶಾಸಕ ಪ್ರೀತಂ ಗೌಡ ವಿರುದ್ಧ ಎಫ್‍ಐಆರ್

    ಹಾಸನ: ಸ್ಥಳೀಯ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಆಮಿಷ ಒಡ್ಡಿ ಹಾಗೂ ಪೊಲೀಸ್ ಕರ್ತವ್ಯಕ್ಕೆ ಅಡ್ಡಿ ನೀಡಿದ್ದ ಆರೋಪದಡಿ ಹಾಸನ ಬಿಜೆಪಿ ಶಾಸಕ ಪ್ರೀತಂ ಗೌಡ ವಿರುದ್ಧ ನಗರದ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

    ನಗರಸಭೆ 8ನೇ ವಾರ್ಡ್ ನಲ್ಲಿ ಬಿಜೆಪಿ ಕಾರ್ಯಕರ್ತರು ಮತದಾರರಿಗೆ ಮದ್ಯ ಹಂಚುತ್ತಿದ್ದಾರೆ ಎನ್ನುವ ವಿಚಾರ ತಿಳಿದು ಪೊಲೀಸರು ಸ್ಥಳಕ್ಕೆ ತೆರಳಿ ಅಲ್ಲಿದ್ದ ಮೂರು ಮಂದಿಯನ್ನು ಬಂಧಿಸಿ ಠಾಣೆಗೆ ಕರೆ ತಂದಿದ್ದರು. ಈ ವೇಳೆ ವಿಷಯ ತಿಳಿದು ಪ್ರೀತಂ ಗೌಡ ಪೊಲೀಸ್ ಠಾಣೆಗೆ ಬಂದು ಪೊಲೀಸರಿಗೆ ನಿಂದನೆ ಮಾಡಿದ್ದಾರೆ. ಬಳಿಕ ಪೊಲೀಸರು ಬಂಧಿಸಿದ್ದ ಆರೋಪಿಗಳನ್ನ ಠಾಣೆಗೆ ನುಗ್ಗಿ ಹೊರ ಕರೆತರಲು ಯತ್ನಿಸಿದ್ದು, ಶಾಸಕನನ್ನು ಸೇರಿ 20 ಮಂದಿ ಬೆಂಬಗಲಿಗರು ಅಸಭ್ಯ ವರ್ತಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

    ಈ ಘಟನೆ ಕುರಿತು ಸಿಪಿಐ ಸತ್ಯನಾರಾಯಣ ನೀಡಿದ ದೂರಿನಡಿ ಶಾಸಕ ಪ್ರೀತಂ ಗೌಡ ವಿರುದ್ಧ ಐಪಿಸಿ ಸೆಕ್ಷನ್ 143, 353, 225ರ ಅಡಿ ಪ್ರಕರಣ ದಾಖಲಿಸಲಾಗಿದೆ.

    ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಪ್ರೀತಂ ಗೌಡ, ರಾಜಕೀಯ ದುರುದ್ದೇಶದಿಂದ ನನ್ನ ಮೇಲೆ ಜೆಡಿಎಸ್ ನವರು ಎಫ್‍ಐಆರ್ ದಾಖಲು ಮಾಡಿಸಿದ್ದಾರೆ. ನನ್ನ ಗೆಲುವನ್ನು ಸಹಿಸಿಕೊಳ್ಳಲು ಅವರಿಗೆ ಇನ್ನೂ ಸಾಧ್ಯವಾಗುತ್ತಿಲ್ಲ. ನಗರಸಭೆಯ 8ನೇ ವಾರ್ಡ್ ನಲ್ಲಿ ಕಳೆದ ರಾತ್ರಿ ಯಾವುದೇ ರೀತಿಯ ಸಂಘರ್ಷ ನಡೆದಿಲ್ಲ. ನಾನು ಯಾವುದೇ ರೀತಿಯ ಗೂಂಡಾ ವರ್ತನೆ ತೋರಿಲ್ಲ. ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿಲ್ಲ. ಆದರೂ ರಾಜಕೀಯವಾಗಿ ನನ್ನನ್ನು ತುಳಿಯುವ ಹುನ್ನಾರದಿಂದ ಎಫ್‍ಐಆರ್ ದಾಖಲಾಗಿದೆ ಎಂದರು.

    ಇದರಿಂದ ನಾನು ಹೆದರಿಕೊಂಡು ಹೋಗೋದಿಲ್ಲ. ಇದನ್ನು ಎದುರಿಸುವ ಶಕ್ತಿ ನನಗಿದೆ. ನನ್ನ ಹಿಂದೆ ಬಿಜೆಪಿ ಪಕ್ಷ ಹಾಗೂ ಕಾರ್ಯಕರ್ತರಿದ್ದಾರೆ. ಈ ಬಗ್ಗೆ ಉನ್ನತಮಟ್ಟದ ತನಿಖೆ ನಡೆಸಿ, ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ಬಹಿರಂಗ ಪಡಿಸಬೇಕು. ರಾತ್ರಿ ನಡೆದ ಎಲ್ಲಾ ಅವಘಡಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ದಬ್ಬಾಳಿಕೆಗೆ ಹೆದರಿ ಓಡಿ ಹೋಗುವ ಜಾಯಮಾನ ನನ್ನದಲ್ಲ. ಈ ಮೂಲಕ ನನ್ನನ್ನು ಹತ್ತಿಕ್ಕಬಹುದು ಎಂದುಕೊಂಡಿರುವವರಿಗೆ ಭ್ರಮ ನಿರಸನವಾಗಲಿದೆ ಎಂದು ಉಸ್ತುವಾರಿ ಸಚಿವ ಹೆಚ್‍ಡಿ ರೇವಣ್ಣ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

    ಸಿಪಿಐ ಸತ್ಯನಾರಾಯಣ ನೀಡಿದ ದೂರಿನಲ್ಲಿ ಏನಿದೆ?
    ಆಗಸ್ಟ್ 29 ರಂದು ನನಗೆ ಹಾಸನ ನಗರ ಸಭೆ ಚುನಾವಣೆ ಪ್ರಯುಕ್ತ ಸೆಕ್ಟರ್ 1ಕ್ಕೆ ನನಗೆ ಮತ್ತು ನಮ್ಮ ಠಾಣಾ ಪಿಸಿ-371 ಚಿದಾನಂದ ರವರನ್ನು ನೇಮಕ ಮಾಡಿದ್ದರು. ಅದರಂತೆ ರಾತ್ರಿ 11ಕ್ಕೆ ನಾವು ಕರ್ತವ್ಯದಲ್ಲಿರುವಾಗ 8ನೇ ವಾರ್ಡ್‍ನಲ್ಲಿ ಮತದಾರರನ್ನು ಸೆಳೆಯಲು ಮದ್ಯವನ್ನು ಸುಜಲ ಕಾಲೇಜು ಹತ್ತಿರ ಹಂಚುತ್ತಿದ್ದಾರೆ ಎನ್ನುವ ಮಾಹಿತಿ ಸಿಕ್ಕಿತ್ತು. ಅಲ್ಲಿಗೆ ಹೋದಾಗ ಬಿಜೆಪಿ ಅಭ್ಯರ್ಥಿ ವೇಣು ಮತ್ತು ಇಬ್ಬರು ಕೈಯಲ್ಲಿ ಮದ್ಯದ ಬಾಟಲಿಗಳನ್ನು ಒಂದು ಬಟ್ಟೆಯ ಬ್ಯಾಗಿನಲ್ಲಿ ಹಿಡಿದುಕೊಂಡು ನಿಂತಿದ್ದರು. ಅಲ್ಲಿಯೇ ಮಾಹಿತಿ ನೀಡಿದ್ದ ಪ್ರವೀಣ್ ಮತ್ತು ಅವರ ಸ್ನೇಹಿತರು ನಿಂತಿದ್ದರು. ನಾನು ವೇಣು ರವರ ಬಳಿ ಇದ್ದ ಬ್ಯಾಗನ್ನು ಪಡೆದು ನೋಡಿದಾಗ ಅದರಲ್ಲಿ 8 ರಿಂದ 9 ಮ್ಯಾಕ್ ಡೆವೆಲ್ ಸಿಲ್ಮ್ ಬ್ರಾಂಡ್‍ನ ತಲಾ 180 ಎಂ ಎಲ್ ನ ಒಟ್ಟು 9 ಮದ್ಯದ ಬಾಟಲಿಗಳು ಇದ್ದವು. ಮತದಾರರನ್ನು ಸೆಳೆಯಲು ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿ ಮದ್ಯವನ್ನು ಹಂಚುತ್ತಿರುವುದು ಖಚಿತಗೊಂಡ ಮೇರೆಗೆ ವೇಣು ಮತ್ತು ಆತನ ಸ್ನೇಹಿತರಾದ 2 ಜನರನ್ನು ಮದ್ಯ ಬಾಟಲಿಯ ಸಮೇತ ಠಾಣೆಗೆ ಕರೆದುಕೊಂಡು ಬಂದು ಎಸ್ ಹೆಚ್ಓ ರವರ ಮುಂದೆ ಹಾಜರುಪಡಿಸಿದ್ದೆ.

    ನನ್ನ ವರದಿಯ ಮೇರೆಗೆ ಎಸ್‍ಹೆಚ್‍ಓ ಅವರು ಪ್ರಕರಣ ದಾಖಲಿಸುತ್ತಿರುವಾಗ ರಾತ್ರಿ 11.45 ಕ್ಕೆ ಹಾಸನದ ಶಾಸಕರಾದ ಪ್ರೀತಂ ಗೌಡ ರವರು ತಮ್ಮೊಂದಿಗೆ 15 ರಿಂದ 20 ಜನರನ್ನು ಕರೆದುಕೊಂಡು ಠಾಣೆಗೆ ಬಂದರು. ಈ ಬಗ್ಗೆ ಪಕ್ರರಣವನ್ನು ದಾಖಲಿಸುವುದು ಬೇಡ ಎಂದು ಬಂಧಿಸಿದ್ದ ವೇಣು ಮತ್ತು ಇಬ್ಬರು ಸ್ನೇಹಿತರನ್ನು ಠಾಣೆಯಿಂದ ಕರೆದುಕೊಂಡು ಹೋಗಲು ಪ್ರಯತ್ನಿಸುತ್ತಾರೆ. ಆಗ ನಾನು ಬಂಧಿತ ಆರೋಪಿಗಳನ್ನ ಈ ರೀತಿ ಠಾಣೆಯಿಂದ ಕರೆದುಕೊಂಡು ಹೋಗುವುದು ಸರಿಯಲ್ಲ ಅವರುಗಳ ಮೇಲೆ ಪ್ರಕರಣ ದಾಖಲಾಗುತ್ತಿದೆ ಎಂದು ತಿಳಿ ಹೇಳಿದರೂ ಕೇಳದೆ ನನ್ನ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಬಲವಂತದಿಂದ ವೇಣು ಮತ್ತು ಇಬ್ಬರು ಸ್ನೇಹಿತರನ್ನು ಕರೆದುಕೊಂಡು ಹೋಗಿರುತ್ತಾರೆ. ಆದ್ದರಿಂದ ಹಾಸನದ ಶಾಸಕರಾದ ಪ್ರೀತಂಗೌಡ ಹಾಗೂ ಅವರ ಜೊತೆಯಲ್ಲಿದ್ದ ಸುಮಾರು 15 ರಿಂದ 20 ಜನರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೋರುತ್ತೇನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv