Tag: licenses

  • ದೀಪಾವಳಿಗೆ ಪಟಾಕಿ ಮಾರೋದಕ್ಕೆ ಬೇಕು ಲೈಸನ್ಸ್

    ದೀಪಾವಳಿಗೆ ಪಟಾಕಿ ಮಾರೋದಕ್ಕೆ ಬೇಕು ಲೈಸನ್ಸ್

    ಬೆಂಗಳೂರು: ದೀಪಾವಳಿ ಹಬ್ಬಕ್ಕೆ ಬೆಂಗಳೂರಲ್ಲಿ ಪಟಾಕಿ ಮಾರೋಕೆ ಲೈಸನ್ಸ್ ಕಡ್ಡಾಯಗೊಳಿಸಿ ಬೆಂಗಳೂರು ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಪಟಾಕಿ ಮಾರಾಟಕ್ಕೆ ಹಲವು ನಿಯಮಗಳನ್ನು ವಿಧಿಸಿದ್ದಾರೆ.

    ನಿಯಮಗಳು:
    1. ಕರ್ನಾಟಕ ಅಗ್ನಿಶಾಮಕದಳ ಡಿಜಿಪಿ ಹೆಸರಲ್ಲಿ 5 ಸಾವಿರ ರೂಪಾಯಿ ಡಿಡಿ
    2. ಬೆಂಗಳೂರು ಪೊಲೀಸ್ ಆಯುಕ್ತರ ಹೆಸರಲ್ಲಿ 1 ಸಾವಿರ ರೂಪಾಯಿ ಡಿಡಿ ಪಾವತಿಸಬೇಕು.
    3. ಮೂರು ತಿಂಗಳಿಗೂ ಇತ್ತೀಚಿನ ಭಾವಚಿತ್ರ
    4. ದೃಢೀಕೃತ ಆಧಾರ್ ಕಾರ್ಡ್ ಅಥವಾ ವೋಟರ್ ಐಡಿ ಜೆರಾಕ್ಸ್
    5. ಒಂದು ಕುಟುಂಬಕ್ಕೆ ಒಂದೇ ಮೈದಾನದಲ್ಲಿ ಪಟಾಕಿ ಮಾರಾಟಕ್ಕೆ ಅವಕಾಶ
    6. ವ್ಯಾಪಾರಸ್ಥರು ಜಿಎಸ್‍ಟಿ ನಂಬರ್ ಹೊಂದಿರಬೇಕು.
    7. ಅಕ್ಟೋಬರ್ 13ರಿಂದ 26ರವರೆಗೆ ಲೈಸನ್ಸ್‍ಗೆ ಅರ್ಜಿ ಸಲ್ಲಿಸಬಹುದು.

    ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಅಗ್ನಿ ಶಾಮಕದಳ ಅವರಿಂದ ಗುರುತಿಸಲ್ಪಟ್ಟಿರುವ ಸುರಕ್ಷಿತ ಮೈದನಾ ಅಥವಾ ಸ್ಥಳಗಳಲ್ಲಿ ಮಾತ್ರ ತಾತ್ಕಲಿಕ ಪಟಾಕಿ ಮಳಿಗೆಯನ್ನು ತೆರೆಯಲು ಅವಕಾಶ ನೀಡಲಾಗಿದೆ. ಇದನ್ನು ಹೊರತುಪಡಿಸಿ ಬೇರೆ ಯಾವುದೇ ಸ್ಥಳಗಳಲ್ಲಿ ಪಟಾಕಿ ಮಾರಾಟ ಮಾಡಿದ್ದಲ್ಲಿ, ಅಂತಹವರ ವಿರುದ್ಧ ಸ್ಫೋಟಕ ಕಾಯ್ದೆ, ಕರ್ನಾಟಕ ಪೊಲೀಸ್ ಕಾಯ್ದೆ, ಇನ್ನಿತರ ಅಪರಾಧ ಸಂಹಿತೆ ಅಡಿಗಳಲ್ಲಿ ಕಾನೂನು ರೀತಿ ಕ್ರಮ ಜರುಗಿಸಲಾಗವುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಿಡಿಯೋ: ಕೊಪ್ಪಳದಲ್ಲಿ ಕ್ಯೂ ನಿಂತ ಮದ್ಯಪ್ರಿಯರು – ನೂಕುನುಗ್ಗಲು ತಪ್ಪಿಸಲು ಖಾಕಿ ಹರಸಾಹಸ

    ವಿಡಿಯೋ: ಕೊಪ್ಪಳದಲ್ಲಿ ಕ್ಯೂ ನಿಂತ ಮದ್ಯಪ್ರಿಯರು – ನೂಕುನುಗ್ಗಲು ತಪ್ಪಿಸಲು ಖಾಕಿ ಹರಸಾಹಸ

    ಕೊಪ್ಪಳ: ಹೆದ್ದಾರಿ ಸಮೀಪವಿರೋ ಮದ್ಯದಂಗಡಿಯಲ್ಲಿ ಮದ್ಯ ಮಾರಾಟಕ್ಕೆ ಸುಪ್ರೀಂ ಕೋರ್ಟ್ ಬ್ರೇಕ್ ಹಾಕಿದ ಹಿನ್ನೆಲೆಯಲ್ಲಿ ಮದ್ಯಪ್ರಿಯರು ಮದ್ಯಕ್ಕಾಗಿ ಕ್ಯೂ ಹೆಚ್ಚಿದ್ದರಿಂದ ನೂಕು ನುಗ್ಗಲು ಉಂಟಾಗಿ ಟ್ರಾಫಿಕ್ ಜಾಮ್ ಉಂಟಾಗಿತ್ತು.

    ಜಿಲ್ಲೆಯಲ್ಲಿ ಒಟ್ಟು 139 ಬಾರ್ ಆ್ಯಂಡ್ ರೆಸ್ಟೋರೆಂಟ್‍ಗಳಿದ್ದು, ಇವುಗಳಲ್ಲಿ ಕೇವಲ 19 ಮಾತ್ರಗಳು ಲೈಸನ್ಸ್ ನವೀಕರಣ ಪಡೆದುಕೊಂಡಿವೆ. ಹೀಗಾಗಿ ನಗರದ ಮದ್ಯಪ್ರಿಯರಿಗೆ ಮದ್ಯದ ಕೊರತೆ ಉಂಟಾಗಿದ್ದು, ತೆರೆದಿರುವ ಬಾರ್‍ಗಳ ಮುಂದೆ ನೂಕು ನುಗ್ಗಲು ಏರ್ಪಟ್ಟಿತ್ತು.

    ಸುಪ್ರೀಂ ಕೋರ್ಟ್ ಆದೇಶದ ಜೊತೆಗೆ ಲೈಸನ್ಸ್ ನವೀಕರಣ ಮಾಡದೇ ಇರೋದ್ರಿಂದ ಬಾರ್‍ಗಳು ಬಾಗಿಲು ಹಾಕಿಕೊಂಡಿವೆ. ಇದರಿಂದಾಗಿ ಮದ್ಯದಂಗಡಿಗಳಿಗಾಗಿ ಮದ್ಯಪ್ರಿಯರು ಅಲೆದಾಡುವಂತಾಗಿದೆ.

    ಸುಪ್ರೀಂ ಹೇಳಿದ್ದು ಏನು?
    ಮದ್ಯಪಾನದಿಂದಾಗಿ ರಸ್ತೆ ಅಪಘಾತಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ 2017ರ ಏಪ್ರಿಲ್ 1ರ ಒಳಗಡೆ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ ಎರಡೂ ಬದಿಯ 500 ಮೀಟರ್ ವ್ಯಾಪ್ತಿಯಲ್ಲಿನ ಮದ್ಯದ ಅಂಗಡಿಗಳನ್ನು ಮುಚ್ಚುವಂತೆ ಆದೇಶ ನೀಡಿತ್ತು. ಅಷ್ಟೇ ಅಲ್ಲದೇ ಈ ಮದ್ಯದ ಅಂಗಡಿಗಳ ಪರಾವನಗಿಗಳನ್ನು ಮಾರ್ಚ್ 31ರ ಬಳಿಕ ನವೀಕರಿಸಬಾರದು ಎಂದು ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಠಾಕೂರ್ ಅವರ ನೇತೃತ್ವದ ಪೀಠ ಹೇಳಿತ್ತು.