Tag: LGBTQ

  • ‘ಸಲಿಂಗ ವಿವಾಹ’ ಪುರಾಣ; ಭಾರತದಲ್ಲಿ ಅನುಮತಿ ಯಾಕಿಲ್ಲ? – ಯಾವ್ಯಾವ ದೇಶಗಳಲ್ಲಿ ಸಿಕ್ಕಿದೆ ಮಾನ್ಯತೆ?

    ‘ಸಲಿಂಗ ವಿವಾಹ’ ಪುರಾಣ; ಭಾರತದಲ್ಲಿ ಅನುಮತಿ ಯಾಕಿಲ್ಲ? – ಯಾವ್ಯಾವ ದೇಶಗಳಲ್ಲಿ ಸಿಕ್ಕಿದೆ ಮಾನ್ಯತೆ?

    ಲಿಂಗ ವಿವಾಹಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ (Supreme Court) ಕೆಲ ದಿನಗಳ ಹಿಂದೆಯಷ್ಟೇ ಮಹತ್ವದ ತೀರ್ಪೊಂದನ್ನು ನೀಡಿದೆ. ಸಲಿಂಗ ವಿವಾಹಕ್ಕೆ ಕಾನೂನಿನಲ್ಲಿ ಮಾನ್ಯತೆ ನೀಡಬೇಕು ಎಂದು ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ನಿರಾಕರಿಸಿದೆ. ಸಲಿಂಗ ವಿವಾಹಕ್ಕೆ ಕಾನೂನಿನಲ್ಲಿ ಮಾನ್ಯತೆ ಇಲ್ಲ ಎಂಬ ವಿಚಾರವನ್ನೂ ಸ್ಪಷ್ಟಪಡಿಸಿದೆ. ಈ ತೀರ್ಪಿನಿಂದ ಸಹಜವಾಗಿ ಎಲ್‌ಜಿಬಿಟಿಕ್ಯೂ (Lesbian, Gay, Bisexual, Transgender and Queer) ಸಮುದಾಯಕ್ಕೆ ಬೇಸರವಾಗಿದೆ. ಈ ಸಮಾಜದಲ್ಲಿ ತಾವು ಎದುರಿಸುತ್ತಿರುವ ಸವಾಲುಗಳಿಗೆ ಸುಪ್ರೀಂ ತೀರ್ಪಿನಿಂದ ಪರಿಹಾರ ಸಿಗಬಹುದು ಎಂದು ನಿರೀಕ್ಷಿಸಿದ್ದ ಈ ಸಮುದಾಯಕ್ಕೆ ನಿರಾಸೆಯಾಗಿದೆ.

    ಸಲಿಂಗ ವಿವಾಹ (Same Sex Marriage) ಮತ್ತು ಕಾನೂನು ಎನ್ನುವುದು ತುಂಬಾ ಸಂಕೀರ್ಣವಾದ ವಿಚಾರ. ಯಾವುದೇ ದೇಶದ ಸಮಾಜ, ಸಂಸ್ಕೃತಿ, ಸಂಪ್ರದಾಯ, ವಿವಾಹ ಪದ್ಧತಿ, ಕಾನೂನು ಎಲ್ಲವನ್ನೂ ಮುಖ್ಯವಾಗಿಟ್ಟುಕೊಂಡು ಸಲಿಂಗ ವಿವಾಹ ವಿಚಾರವನ್ನು ನೋಡಬೇಕಾಗುತ್ತದೆ. ಸಲಿಂಗ ವಿವಾಹಕ್ಕೆ ಮಾನ್ಯತೆ ಬೇಕು ಎಂದು ಹೋರಾಡುವವರಂತೆಯೇ, ಅದನ್ನು ವಿರೋಧಿಸುವವರೂ ಇದ್ದಾರೆ. ಸಲಿಂಗ ಸಂಬಂಧ ಅಥವಾ ವಿವಾಹ ವಿಚಾರವನ್ನು ಒಂದೊಂದು ದೇಶದಲ್ಲೂ ಒಂದೊಂದು ದೃಷ್ಟಿಕೋನದಲ್ಲಿ ವಿಶ್ಲೇಷಿಸಲಾಗುತ್ತದೆ. ಆದರೆ ಭಾರತದಲ್ಲಿ ಇದನ್ನು ನೋಡುವ ದೃಷ್ಟಿಕೋನವೇ ಬೇರೆ. ಇದನ್ನೂ ಓದಿ: ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡದಿರುವುದು ದೇಶಕ್ಕೆ ಅವಮಾನ- ಲಕ್ಷ್ಮಿ ಮಂಚು

    ಏನಿದು ಸಲಿಂಗ ಕಾಮ ಮತ್ತು ವಿವಾಹ? ಈ ವಿವಾಹಕ್ಕೆ ಯಾವ್ಯಾವ ದೇಶಗಳು ಮಾನ್ಯತೆ ನೀಡಿವೆ? ಮೊದಲ ಸಲಿಂಗ ವಿವಾಹ ಎಲ್ಲಿ ಆಗಿದ್ದು? ಭಾರತದಲ್ಲಿ ಇದಕ್ಕಿರುವ ಪರ ಮತ್ತು ವಿರೋಧ ಏನು ಎಂಬ ಬಗ್ಗೆ ವಿವರವಾಗಿ ಇಲ್ಲಿ ತಿಳಿಸಲಾಗಿದೆ. ಭಾರತದ ವಿಚಾರಕ್ಕೆ ಬಂದರೆ ವಿಶೇಷ ವಿವಾಹ ಕಾಯ್ದೆ ಬಗ್ಗೆ ತಿಳಿದುಕೊಳ್ಳುವುದು ಮುಖ್ಯ.

    ಏನಿದು ಸಲಿಂಗ ಕಾಮ?
    Homosexuality ಎಂಬ ಪದ ಬಂದಿದ್ದು ಗ್ರೀಕ್ ಹಾಗೂ ಲ್ಯಾಟಿನ್ ಮೂಲದಿಂದ. Homos ಎಂದರೆ Same ಎಂದರ್ಥ. Homosexuality ಎಂದರೆ ಒಂದೇ ಲಿಂಗದವರು ನಡೆಸುವ ಲೈಂಗಿಕತೆ (ಹೆಣ್ಣು ಹೆಣ್ಣನ್ನು ಹಾಗೂ ಗಂಡು ಗಂಡನ್ನು ಮೋಹಿಸುವುದು). ಸಾಮಾನ್ಯವಾಗಿ ಗಂಡಸರಿಬ್ಬರ ನಡುವಿನ ರತಿಕ್ರೀಡೆಯನ್ನು Gay ಎಂದು ಕರೆದರೆ, ಸ್ತ್ರೀಯರ ನಡುವಿನ ಸಲಿಂಗ ಕಾಮವನ್ನು Lesbianism ಎನ್ನುತ್ತಾರೆ. ಪುರುಷ ಹಾಗೂ ಸ್ತ್ರೀ ಇಬ್ಬರ ಜತೆಯೂ ಸರಸವಾಡುವವರನ್ನು Bisexual ಎಂದು ಕರೆಯಲಾಗುತ್ತದೆ. ಇದನ್ನೂ ಓದಿ: ಸಲಿಂಗ ವಿವಾಹಕ್ಕೆ ಕಾನೂನಿನ ಮಾನ್ಯತೆ ನೀಡಲು ಸಾಧ್ಯವಿಲ್ಲ: ಸುಪ್ರೀಂ ತೀರ್ಪಿನಲ್ಲಿ ಏನಿದೆ?

    1960 ರ ದಶಕದಲ್ಲಿ ಸಲಿಂಗ ಕಾಮ ವಿಚಾರ ಬ್ರಿಟನ್‌ನಲ್ಲಿ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕುತ್ತದೆ. ನಂತರ ಅದು ವಿಶ್ವಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗುತ್ತದೆ. ಬರಬರುತ್ತ ಅದೊಂದು ಹೋರಾಟವಾಗಿಯೂ ರೂಪುಗೊಳ್ಳುತ್ತದೆ. ಸಲಿಂಗಿಗಳು ಸಲಿಂಗ ವಿವಾಹವನ್ನು ಮಾನ್ಯ ಮಾಡಬೇಕು, ಅದಕ್ಕೆ ಕಾನೂನಿನಲ್ಲಿ ಒಂದು ಹಕ್ಕಾಗಿ ಅವಕಾಶ ನೀಡಬೇಕು ಎಂದು ಒತ್ತಾಯಿಸುತ್ತಾರೆ. ಯೂರೋಪ್‌ನಲ್ಲಿ ಹೆಚ್ಚು ಚರ್ಚೆ ಹುಟ್ಟುಹಾಕಿದ ಈ ವಿಚಾರ ನಂತರ ಭಾರತಕ್ಕೂ ಕಾಲಿಡುತ್ತದೆ. ‘ಸಲಿಂಗ ಕಾಮವೇನು ಶಿಕ್ಷಾರ್ಹ ಅಪರಾಧವಲ್ಲ’ ಎಂದು 2009 ರಲ್ಲಿ ದೆಹಲಿ ಹೈಕೋರ್ಟ್ ತೀರ್ಪೊಂದನ್ನು ನೀಡುತ್ತದೆ. ಅಲ್ಲಿಂದೀಚೆಗೆ ಭಾರತದಲ್ಲಿ ಇದರ ಪರವಾಗಿ ಹೋರಾಡುವವರಿಗೆ ನೈತಿಕ ಸ್ಥೈರ್ಯ ಬರುತ್ತದೆ.

    2001 ರಲ್ಲಿ ಜಗತ್ತಿನಲ್ಲೇ ಮೊದಲ ಬಾರಿಗೆ ನೆದರ್ಲೆಂಡ್ಸ್‌ನಲ್ಲಿ ಸಲಿಂಗ ವಿವಾಹ ನಡೆಯಿತು. ಅಲ್ಲಿಂದೀಚೆಗೆ 30 ಕ್ಕೂ ಹೆಚ್ಚು ದೇಶಗಳು ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಿದವು. ಹೆಚ್ಚಾಗಿ ಅಮೆರಿಕ ಮತ್ತು ಯುರೋಪ್‌ ರಾಷ್ಟ್ರಗಳಲ್ಲಿ ಈ ವಿವಾಹಗಳಿಗೆ ಮಾನ್ಯತೆ ದೊರಕಿದೆ. ಯಾವ್ಯಾವ ದೇಶಗಳಲ್ಲಿ ಯಾವ್ಯಾವ ವರ್ಷದಲ್ಲಿ ಸಲಿಂಗ ವಿವಾಹಕ್ಕೆ ಕಾನೂನುಬದ್ಧ ಮಾನ್ಯತೆ ನೀಡಲಾಗಿದೆ ಎಂಬ ವಿವರ ಇಲ್ಲಿದೆ.

    ಯಾವ ದೇಶಗಳಲ್ಲಿ ಮಾನ್ಯತೆ?
    2013 ರಲ್ಲಿ ಉರುಗ್ವೆ ದೇಶದಲ್ಲಿ ಸಲಿಂಗ ವಿವಾಹಕ್ಕೆ ಕಾನೂನುಬದ್ಧ ಮಾನ್ಯತೆ ದೊರೆಯಿತು. ಅಂತೆಯೇ 2001 ರಲ್ಲಿ ನೆದರ್ಲೆಂಡ್ಸ್‌,‌ 2003 ರಲ್ಲಿ ಬೆಲ್ಜಿಯಂ, 2005 ರಲ್ಲಿ ಸ್ಪೇನ್ ಮತ್ತು ಕೆನಡಾ,‌ 2006 ರಲ್ಲಿ ದಕ್ಷಿಣ ಆಫ್ರಿಕಾ, 2009 ರಲ್ಲಿ ಸ್ವೀಡನ್‌ ಮತ್ತು ನಾರ್ವೆ, 2010 ರಲ್ಲಿ ಪೋರ್ಚುಗಲ್‌‌-ಐಸ್‌ಲೆಂಡ್-ಅರ್ಜೆಂಟೀನಾ, 2012 ರಲ್ಲಿ ಡೆನ್ಮಾರ್ಕ್‌, 2013 ರಲ್ಲಿ ನ್ಯೂಜಿಲೆಂಡ್‌ ಮತ್ತು ಬ್ರೆಜಿಲ್, 2014 ರಲ್ಲಿ ಲಂಡನ್‌, 2015 ರಲ್ಲಿ ಅಮೆರಿಕ-ಲಕ್ಸೆಂಬರ್ಗ್-ಐರ್ಲೆಂಡ್, 2016 ರಲ್ಲಿ ಕೊಲಂಬಿಯಾ, 2017 ರಲ್ಲಿ ಮಾಲ್ಟಾ‌-ಫಿನ್‌ಲೆಂಡ್-ಆಸ್ಟ್ರೇಲಿಯಾ, 2019 ರಲ್ಲಿ ತೈವಾನ್‌-ಈಕ್ವೆಡಾರ್-ಆಸ್ಟ್ರಿಯಾ, 2020 ರಲ್ಲಿ ಕೋಸ್ಟ ರಿಕಾ, 2022 ರಲ್ಲಿ ಸ್ವಿಜರ್ಲೆಂಡ್‌-ಸ್ಲೊವೇನಿಯಾ-ಮೆಕ್ಸಿಕೊ, ಕ್ಯೂಬಾ-ಚಿಲಿ, 2023 ರಲ್ಲಿ ಅಂಡೋರಾ ದೇಶಗಳಲ್ಲಿ ಅನುಮತಿ ನೀಡಲಾಯಿತು. ಇದನ್ನೂ ಓದಿ: ಸಲಿಂಗ ವಿವಾಹ ಕಾನೂನು ಮಾನ್ಯತೆ ವಿಚಾರಣೆ – ಸಿಜೆಐ ಹಿಂದೆ ಸರಿಯುವಂತೆ ಸಲ್ಲಿಸಿದ್ದ ಮನವಿ ತಿರಸ್ಕೃತ

    ಪಾಶ್ಚಾತ್ಯ ದೇಶಗಳ ಸಂಸ್ಕೃತಿಯೇ?
    ಸಲಿಂಗ ಸಂಬಂಧ ಮತ್ತು ಸಲಿಂಗ ವಿವಾಹ ಎಂಬುದು ಭಾರತೀಯತೆ ಅಲ್ಲ. ಭಾರತೀಯ ಸಂಸ್ಕೃತಿಯೂ ಅಲ್ಲ, ನೈಸರ್ಗಿಕವೂ ಅಲ್ಲ. ಇದು ಪಾಶ್ಚಾತ್ಯ ದೇಶಗಳಿಂದ ಬಂದ ಸಂಸ್ಕೃತಿ. ಇದು ಭಾರತೀಯ ಸಂಸ್ಕೃತಿ ಅಲ್ಲದೇ ಇರುವ ಕಾರಣಕ್ಕೆ ಸಲಿಂಗ ವಿವಾಹಕ್ಕೆ ಕಾನೂನಿನ ಮಾನ್ಯತೆ ನೀಡಬಾರದು ಎಂಬುದು ಕೇಂದ್ರ ಸರ್ಕಾರದ ವಾದ. ಸುಪ್ರೀಂ ಕೋರ್ಟ್‌ನಲ್ಲಿ ಈ ಸಂಬಂಧ ಕೇಂದ್ರ ಸರ್ಕಾರ ತನ್ನ ಪ್ರತಿಪಾದನೆ ವ್ಯಕ್ತಪಡಿಸಿದೆ.

    ಭಾರತದಲ್ಲಿ ವಿವಾಹಗಳಿಗೆ ನೋಂದಣಿ ಹೇಗೆ?
    ಮದುವೆ, ವಿಚ್ಛೇದನ ಮತ್ತು ದತ್ತು ಪಡೆಯುವುದು ಮುಂತಾದ ವೈಯಕ್ತಿಕ ಕಾನೂನಿನ ಸಮಸ್ಯೆಗಳು ಧಾರ್ಮಿಕ ಕಾನೂನುಗಳಿಂದ ನಿಯಂತ್ರಿಸಲ್ಪಡುತ್ತವೆ. ಭಾರತದಲ್ಲಿನ ವಿವಾಹಗಳನ್ನು ಹಿಂದೂ ವಿವಾಹ ಕಾಯ್ದೆ-1955, ಮುಸ್ಲಿಂ ವಿವಾಹ ಕಾಯ್ದೆ-1954 ಅಥವಾ ವಿಶೇಷ ವಿವಾಹ ಕಾಯಿದೆ-1954 ರಂತಹ ಆಯಾ ವೈಯಕ್ತಿಕ ಕಾನೂನುಗಳ ಅಡಿಯಲ್ಲಿ ನೋಂದಾಯಿಸಲಾಗಿದೆ. ದಂಪತಿ ಒಂದೇ ಧರ್ಮಕ್ಕೆ ಸೇರಿದ ಸಂದರ್ಭಗಳಲ್ಲಿ ಮಾತ್ರ ಕಾಯ್ದೆಗಳು ಅನ್ವಯವಾಗುತ್ತದೆ. ಇಲ್ಲದಿದ್ದರೆ, ಮದುವೆಗೆ ಮೊದಲು ಸಂಗಾತಿಯು ಇನ್ನೊಬ್ಬರ ಧರ್ಮಕ್ಕೆ ಮತಾಂತರಗೊಳ್ಳಬೇಕು. ಇದನ್ನೂ ಓದಿ: ಸಲಿಂಗ ವಿವಾಹಗಳು ಶ್ರೀಮಂತರ ಪರಿಕಲ್ಪನೆಗಳಲ್ಲ – ಸುಪ್ರೀಂ ಕೋರ್ಟ್

    ಏನಿದು ವಿಶೇಷ ವಿವಾಹ ಕಾಯ್ದೆ?
    1954 ರ ಅಕ್ಟೋಬರ್‌ನಲ್ಲಿ ಸಂಸತ್ತಿನಲ್ಲಿ ವಿಶೇಷ ವಿವಾಹ ಕಾಯ್ದೆಯನ್ನು ಅಂಗೀಕರಿಸಲಾಯಿತು. ತಮ್ಮ ಧಾರ್ಮಿಕ ಗುರುತನ್ನು ಬಿಟ್ಟುಕೊಡದೆ ಅಥವಾ ಮತಾಂತರಗೊಳ್ಳದೆ ಅಂತರ್-ಧರ್ಮೀಯ ಅಥವಾ ಅಂತರ-ಜಾತಿ ಜೋಡಿಗಳು ವಿವಾಹವಾಗುವುದಕ್ಕೆ ವಿಶೇಷ ವಿವಾಹ ಕಾಯಿದೆ-1954 ಅನುವು ಮಾಡಿಕೊಡುತ್ತದೆ. ಧರ್ಮ, ಜಾತಿ ಭೇದವಿಲ್ಲದೇ ವಿಶೇಷ ವಿವಾಹ ಕಾಯ್ದೆಯು ದೇಶದ ಎಲ್ಲ ನಾಗರಿಕರನ್ನೂ ಒಳಗೊಳ್ಳುತ್ತದೆ. ಮದುವೆಯ ಶಾಸ್ತ್ರೋಕ್ತ ಮತ್ತು ನೋಂದಣಿ ಎರಡಕ್ಕೂ ಇದು ಕಾರ್ಯವಿಧಾನವನ್ನು ನೀಡುತ್ತದೆ. ಈ ಕಾಯಿದೆಯು ಧರ್ಮಕ್ಕಿಂತ ಹೆಚ್ಚಾಗಿ ಮದುವೆಯನ್ನು ಅನುಮೋದಿಸುತ್ತದೆ.

    ವಿಶೇಷ ವಿವಾಹ ಕಾಯ್ದೆ ಚರ್ಚೆ ಯಾಕೆ?
    ಧರ್ಮ, ಜಾತಿ, ಲಿಂಗ ಭೇದವಿಲ್ಲದೇ ವಿಶೇಷ ವಿವಾಹ ಕಾಯ್ದೆಯು ದೇಶದ ಎಲ್ಲ ನಾಗರಿಕರನ್ನೂ ಒಳಗೊಳ್ಳುತ್ತದೆ ಎಂಬ ವಿಚಾರವನ್ನು ಈ ಹಿಂದೆ ಸುಪ್ರೀಂ ಕೋರ್ಟ್‌ ಪ್ರತಿಪಾದಿಸಿತ್ತು. ಹೀಗಾಗಿ ಈ ಕಾಯ್ದೆ ಅಡಿಯಲ್ಲೇ ಸಲಿಂಗ ಜೋಡಿಗಳ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಬೇಕು ಎಂದು ಮನವಿ ಮಾಡಲಾಗಿತ್ತು. ಆದರೆ ಅದಕ್ಕೆ ಸುಪ್ರೀಂ ಕೋರ್ಟ್‌ ನಿರಾರಿಸಿದೆ. ಸಲಿಂಗ ಜೋಡಿ ಮದುವೆಯಾಗುವ ಹಕ್ಕನ್ನು ನ್ಯಾಯಾಂಗ ಗುರುತಿಸುವುದಿಲ್ಲ. ಈ ವಿಷಯದ ಬಗ್ಗೆ ಕಾನೂನು ರೂಪಿಸುವುದು ಸಂಸತ್ತು ಅಥವಾ ರಾಜ್ಯ ಶಾಸಕಾಂಗಕ್ಕೆ ಬಿಟ್ಟಿದ್ದು ಎಂದು ತೀರ್ಪಿನಲ್ಲಿ ತಿಳಿಸಿದೆ. ಇದನ್ನೂ ಓದಿ: ಸಲಿಂಗ ವಿವಾಹಕ್ಕೆ ನಟ ಚೇತನ್‌ ಬೆಂಬಲ

    ವಿಶೇಷ ವಿವಾಹ ಕಾಯ್ದೆಗೆ ಸಲಿಂಗ ಒಕ್ಕೂಟವನ್ನ ಏಕೆ ಸೇರಿಸಲಿಲ್ಲ?
    * ವಿಶೇಷ ವಿವಾಹ ಕಾಯ್ದೆ ವಿಷಯವನ್ನು ಸಂಸತ್ತು ನಿರ್ಧರಿಸಬೇಕು. ವಿಶೇಷ ವಿವಾಹ ಕಾಯ್ದೆಯ ಸೆಕ್ಷನ್‌ 4 ಅನ್ನು ರದ್ದುಪಡಿಸಿದರೆ ಪ್ರಗತಿಪರ ಶಾಸನದ ಪ್ರಯೋಜನಗಳನ್ನು ಕಳೆದುಕೊಳ್ಳಬೇಕಾಗುವ ಅಪಾಯವಿದೆ. ಇದು ದೇಶವನ್ನು ಸ್ವಾತಂತ್ರ್ಯಪೂರ್ವ ಯುಗಕ್ಕೆ ಕೊಂಡೊಯ್ಯಲಿದೆ. ಭಾರತೀಯ ಉತ್ತರಾಧಿಕಾರ ಕಾಯ್ದೆ ಅಥವಾ ಹಿಂದೂ ಉತ್ತರಾಧಿಕಾರ ಕಾಯ್ದೆಯನ್ನು ಒಮ್ಮೆ ಗಮನಿಸಿದರೆ ಈ ಪ್ರಕರಣವು ಶಾಸಕಾಂಗದ ವ್ಯಾಪ್ತಿಗೆ ಸೇರುತ್ತದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಾನೊಬ್ಬ ಟ್ರಾನ್ಸ್ ಮ್ಯಾನ್ – ಲಿಂಗ ಪರಿವರ್ತನೆಗೆ ಒಳಗಾಗ್ತಿದ್ದಾರೆ ಪಶ್ಚಿಮ ಬಂಗಾಳದ ಮಾಜಿ ಸಿಎಂ ಪುತ್ರಿ!

    ನಾನೊಬ್ಬ ಟ್ರಾನ್ಸ್ ಮ್ಯಾನ್ – ಲಿಂಗ ಪರಿವರ್ತನೆಗೆ ಒಳಗಾಗ್ತಿದ್ದಾರೆ ಪಶ್ಚಿಮ ಬಂಗಾಳದ ಮಾಜಿ ಸಿಎಂ ಪುತ್ರಿ!

    ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇವ್‌ ಭಟ್ಟಾಚಾರ್ಯ (Buddhadeb Bhattacharya) ಅವರ ಪುತ್ರಿ ಸುಚೇತನಾ ಭಟ್ಟಾಚಾರ್ಯ (Suchetana Bhattacharya) ಪುರುಷನಾಗಿ ರೂಪಾಂತರಗೊಳ್ಳಲು ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಉದ್ದೇಶಿಸಿದ್ದಾರೆ. ಅಲ್ಲದೇ ತಮ್ಮ ಹೆಸರನ್ನ ʻಸುಚೇತನ್‌ʼ ಎಂದೂ ಬಸಲಿಸಿಕೊಳ್ಳಲು ನಿರ್ಧರಿಸಿದ್ದಾರೆ.

    ಲಿಂಗಪರಿವರ್ತನೆಗೆ ಒಳಗಾಗಲು ಸಕಲ ಸಿದ್ಧತೆ ನಡೆಸಿದ್ದು, ಅಗತ್ಯ ಪ್ರಮಾಣ ಪತ್ರಗಳನ್ನ ಪಡೆದುಕೊಳ್ಳಲು ಮನೋವೈದ್ಯರನ್ನ (Psychiatrists) ಸಂಪರ್ಕಿಸುತ್ತಿದ್ದಾರೆ. ಜೊತೆಗೆ ಪರಿಣಿತರಿಂದ ಸೂಕ್ತ ಸಲಹೆಗಳನ್ನೂ ಅವರು ಪಡೆಯುತ್ತಿದ್ದಾರೆ. ಇತ್ತೀಚೆಗೆ ನಡೆದ ಎಲ್‌ಜಿಬಿಟಿಕ್ಯೂ ಕಾರ್ಯಾಗಾರದಲ್ಲಿ ಸುಚೇತನಾ ತಮ್ಮನ್ನ ಒಬ್ಬ ಪುರುಷ ಎಂದು ಗುರುತಿಸಿಕೊಂಡಿದ್ದರು. ದೈಹಿಕವಾಗಿಯೂ ಪುರುಷನ ಹಾಗೆ ಕಾಣಿಸಿಕೊಳ್ಳಲು ಬಯಸಿರುವುದಾಗಿ ಹೇಳಿಕೊಂಡಿದ್ದರು. ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಪ್ರಧಾನಿ ಮೋದಿ ಕೊಲ್ಲುತ್ತೇನೆ ಎಂದು ಕರೆ ಮಾಡಿದ್ದ ವ್ಯಕ್ತಿ ಬಂಧನ

    ಈ ಕುರಿತು ಖಾಸಗಿ ವಾಹಿನಿಯೊಂದಿಗಿನ ಸಂದರ್ಶನದಲ್ಲಿ ಮಾತನಾಡಿರುವ ಅವರು, ನಾನು ನನ್ನ ಎಲ್‌ಜಿಬಿಟಿಕ್ಯೂ (LGBTQ) ಚಳವಳಿಯ ಭಾಗವಾಗಿ ಇದನ್ನು ಮಾಡ್ತಿದ್ದೇನೆ. ನನ್ನ ಪೋಷಕರು ಗುರುತಾಗಲಿ, ಕುಟುಂಬದ ಐಡೆಂಟಿಟಿಯಾಗಲಿ ಇಲ್ಲಿ ದೊಡ್ಡ ವಿಷಯವಲ್ಲ. ಲಿಂಗ ಪರಿವರ್ತನೆ ಆಗುವ ಮೂಲಕ ಪ್ರತಿದಿನ ಎದುರಿಸುವ ಸಾಮಾಜಿಕ ಕಿರುಕುಳ ತಡೆಯಲು ನಾನು ಬಯಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಅಕ್ಕಿ ವಿಚಾರದಲ್ಲಿ ದ್ವೇಷದ ರಾಜಕೀಯ ಮಾಡೋದು ಬೇಡ – ಅಮಿತ್ ಶಾಗೆ ಸಿದ್ದರಾಮಯ್ಯ ಮನವಿ

    ನನ್ನ ನಿರ್ಧಾರ ನಾನೇ ತೆಗೆದುಕೊಳ್ಳಬಹುದು:
    ಅಲ್ಲದೇ ನಾನೀಗ ವಯಸ್ಕಳಾಗಿದ್ದೇನೆ, ನನಗೆ ಈಗ 41 ವರ್ಷ ವಯಸ್ಸು. ಹೀಗಾಗಿ ನನ್ನ ಜೀವನಕ್ಕೆ ಸಂಬಂಧಿಸಿದ ಎಲ್ಲಾ ನಿರ್ಧಾರಗಳನ್ನೂ ನಾನೇ ತೆಗೆದುಕೊಳ್ಳಬಹುದು, ಅದೇ ರೀತಿಯಲ್ಲಿ ಈ ನಿರ್ಧಾರ ಕೂಡ ನಾನು ತೆಗೆದುಕೊಳ್ಳುತ್ತಿದ್ದೇನೆ. ಈ ವಿಚಾರಕ್ಕೆ ದಯವಿಟ್ಟು ನನ್ನ ಪೋಷಕರನ್ನು ಎಳೆದು ತರಬೇಡಿ. ಯಾರು ತಮ್ಮನ್ನು ಮಾನಸಿಕವಾಗಿ ಪುರುಷ ಎಂದು ಪರಿಗಣಿಸುತ್ತಾರೋ, ಅವರು ವಾಸ್ತವವಾಗಿಯೂ ಪುರುಷರೇ ಆಗಿರುತ್ತಾರೆ. ನನ್ನನ್ನು ನಾನು ಮಾನಸಿಕವಾಗಿ ಪುರುಷ ಎಂದೇ ಪರಿಗಣಿಸಿದ್ದೇನೆ. ಅದನ್ನು ದೈಹಿಕವಾಗಿ ಕೂಡ ಸಾಧ್ಯವಾಗಿಸಲು ಬಯಸಿದ್ದೇನೆ. ನನ್ನ ತಂದೆ ಬಾಲ್ಯದಿಂದಲೂ ನನ್ನ ನಿರ್ಧಾರಗಳಿಗೆ ಸಹಕರಿಸುತ್ತಲೇ ಬಂದಿದ್ದಾರೆ. ಈಗಲೂ ಅವರು ನನ್ನ ನಿರ್ಧಾರವನ್ನು ಒಪ್ಪುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಏಕಾಂಗಿಯಾಗಿ ಹೋರಾಟ ಮಾಡ್ತೀನಿ:
    ಯಾರೂ ಏನಾದರೂ ಹೇಳಿಕೊಳ್ಳಲಿ, ನಾನಂತೂ ನಿರ್ಧಾರ ತೆಗೆದುಕೊಂಡಿದ್ದೇನೆ. ಅದಕ್ಕಾಗಿ ಹೋರಾಟ ನಡೆಸುವ ಧೈರ್ಯವೂ ನನಗಿದೆ. ಪ್ರತಿಯೊಬ್ಬರ ಪ್ರಶ್ನೆಗೆ ಉತ್ತರ ಕೊಡೋದಕ್ಕೂ ನಾನೂ ಸಿದ್ಧವಾಗಿದ್ದೇನೆ. ಇದು ನನ್ನ ಸ್ವಂತ ನಿರ್ಧಾರ, ಏಕಾಂಗಿಯಾಗಿ ಹೋರಾಡಲು ಇಚ್ಛಿಸುತ್ತೇನೆ. ನನಗೆ ಬಾಲ್ಯದಿಂದಲೂ ಈ ದೃಷ್ಟಿಕೋನವಿತ್ತು. ಅನೇಕ ಜನರು ಇದನ್ನು ಬೆಂಬಲಿಸಿದ್ದಾರೆ, ಮತ್ತೂ ಕೆಲವರು ಲೇವಡಿ ಮಾಡಿದ್ದಾರೆ. ನಾನು ಒಬ್ಬ ಟ್ರಾನ್ಸ್ ಮ್ಯಾನ್. ದೈಹಿಕವಾಗಿಯೂ ನಾನು ಹಾಗೇ ಆಗಲು ಬಯಸಿದ್ದೇನೆ ಎಂದು ತಿಳಿಸಿದ್ದಾರೆ.

  • ಸಲಿಂಗಕಾಮಿಗಳು ಅಂತಾ ಹೇಳಿಕೊಂಡ್ರೆ ಮರಣದಂಡನೆ – ಮಸೂದೆ ಪಾಸ್‌ ಮಾಡಿದ ಉಗಾಂಡ

    ಸಲಿಂಗಕಾಮಿಗಳು ಅಂತಾ ಹೇಳಿಕೊಂಡ್ರೆ ಮರಣದಂಡನೆ – ಮಸೂದೆ ಪಾಸ್‌ ಮಾಡಿದ ಉಗಾಂಡ

    ಕಂಪಾಲಾ: ಉಗಾಂಡ (Uganda) ಸಂಸತ್ (Parliament) ಲೈಂಗಿಕ ಅಲ್ಪಸಂಖ್ಯಾತ (LGBTQ) ಸಮುದಾಯದ ವಿರುದ್ಧ ವಿವಾದಾತ್ಮಕ ಮಸೂದೆಯೊಂದನ್ನು ಅಂಗೀಕರಿಸಿದೆ. ಸಲಿಂಗ ಸಂಬಂಧಗಳಿಗೆ 10 ವರ್ಷ ಜೈಲು ಶಿಕ್ಷೆ ಹಾಗೂ ಮರಣದಂಡನೆಯಂತಹ ಕಠಿಣ ಕ್ರಮದ ಅಂಶಗಳನ್ನು ಮಸೂದೆ ಒಳಗೊಂಡಿದೆ.

    ಈಗಾಗಲೇ ಆಫ್ರಿಕನ್ ದೇಶಗಳು ಸಲಿಂಗ ಸಂಬಂಧಗಳನ್ನು ನಿಷೇಧಿಸಿ ಕಾನೂನು ರೂಪಿಸಿವೆ. ಆದರೆ ನೂತನ ಮಸೂದೆಯು ಹಿಂದಿನ ನಿಯಮಗಳನ್ನು ಮತ್ತಷ್ಟು ಭದ್ರಪಡಿಸುತ್ತವೆ. ಇದನ್ನೂ ಓದಿ: ಗಗನಕ್ಕೇರಿದ Gold Rate – 60 ಸಾವಿರ ಗಡಿ ದಾಟಿದ ಚಿನ್ನ

    ಮಸೂದೆಯ ಅನ್ವಯ ಅಧಿಕಾರಿಗಳಿಗೆ, ಸಲಿಂಗ ಸಂಬಂಧದಲ್ಲಿರುವವರನ್ನು ಗುರುತಿಸಿ ವರದಿ ಮಾಡಲು ಅವಕಾಶ ನೀಡಲಾಗಿದೆ. ಎಲ್‍ಜಿಬಿಟಿ ಸಮುದಾಯಗಳ ಹಕ್ಕುಗಳಿಗೆ ಹೋರಾಡುವ ಹಾಗೂ ಅಂತಹ ಸಂಸ್ಥೆಗಳಿಗೆ ಬೆಂಬಲ ನೀಡಿ ಹಣಕಾಸಿನ ನೆರವು ನೀಡುವ ವ್ಯಕ್ತಿಗಳಿಗೆ ಅಥವಾ ಸಂಸ್ಥೆಗಳನ್ನು ಶಿಕ್ಷೆಗೆ ಗುರಿಪಡಿಸಲು ನೆರವಾಗಲಿದೆ.

    ಚರ್ಚ್ ಸಂಸ್ಕಂತಿ ರಕ್ಷಿಸುವ ಗುರಿಯಿಂದ ಮಸೂದೆ ರಚಿಸಿ ಮಂಡಿಸಲಾಗಿದೆ. ಕೌಟುಂಬಿಕ ಹಾಗೂ ಧಾರ್ಮಿಕ ಮೌಲ್ಯಗಳನ್ನು ಎತ್ತಿ ಹಿಡಿದು ಲೈಂಗಿಕ ಅಶ್ಲೀಲತೆಯಿಂದ ದೇಶವನ್ನು ಕಾಪಾಡಬೇಕಿದೆ. 389 ಸದಸ್ಯರು ಮಸೂದೆಗೆ ಬೆಂಬಲ ಸೂಚಿಸಿದ್ದಾರೆ. ಪ್ರತಿಯನ್ನು ಅಧ್ಯಕ್ಷ ಯೊವೆರೆ ಮುಸೆವೆನಿಯವರ ಸಹಿಗೆ ಕಳುಹಿಸಿ ಕೊಡಲಾಗುವುದು ಎಂದು ಮಸೂದೆ ಮಂಡಿಸಿರುವ ಶಾಸಕ ಅಸುಮಾನ್ ಬಸಲಿರ್ವಾ ತಿಳಿಸಿದ್ದಾರೆ.

    ಮಸೂದೆಯನ್ನು ವಿರೋಧಿಸಿ ಕಂಪಾಲಾ (Kampala) ಮೂಲದ ವಕೀಲೆ ಹಾಗೂ ಮಾನವ ಹಕ್ಕುಗಳ ಕಾರ್ಯಕರ್ತೆ (Lawyer and human rights activist)ಸಾರಾ ಕಸಂಡೆ ಟ್ವೀಟ್ ಮಾಡಿ, ಉಗಾಂಡದ ಇತಿಹಾಸದಲ್ಲಿ ದುರಂತದ ದಿನವಾಗಿದೆ. ದ್ವೇಷಕ್ಕೆ ಮಹತ್ವ ಕೊಟ್ಟು ಎಲ್‍ಜಿಬಿಟಿಐಕ್ಯೂ ಸಮುದಾಯದ ವ್ಯಕ್ತಿಗಳ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳುವ ಕಾನೂನಾಗಿದೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: 2 ಸಾವಿರಕ್ಕೂ ಅಧಿಕ ಮೋದಿ ವಿರೋಧಿ ಪೋಸ್ಟರ್‌ಗಳು – ನಾಲ್ವರು ಅರೆಸ್ಟ್

  • ಮಳೆಬಿಲ್ಲು ಬಣ್ಣದ ಶರ್ಟ್ ಧರಿಸಿ ಬಂಧನವಾಗಿದ್ದ ಅಮೆರಿಕದ ಪತ್ರಕರ್ತ ಕತಾರ್‌ನಲ್ಲಿ ನಿಧನ

    ಮಳೆಬಿಲ್ಲು ಬಣ್ಣದ ಶರ್ಟ್ ಧರಿಸಿ ಬಂಧನವಾಗಿದ್ದ ಅಮೆರಿಕದ ಪತ್ರಕರ್ತ ಕತಾರ್‌ನಲ್ಲಿ ನಿಧನ

    ಕತಾರ್: ಫಿಫಾ ವಿಶ್ವಕಪ್ (FIFA World Cup) ಪ್ರಾರಂಭದ ವೇಳೆ ಕತಾರ್‌ನಲ್ಲಿ (Qatar) ‘LGBTQ’ ಸಮುದಾಯವನ್ನು ಬೆಂಬಲಿಸಿ ಮಳೆಬಿಲ್ಲಿನ ಬಣ್ಣಹೊಂದಿದ್ದ ಶರ್ಟ್ (Rainbow Shirt) ಧರಿಸಿದ್ದಕ್ಕಾಗಿ ಬಂಧಿತರಾಗಿದ್ದ ಅಮೆರಿಕದ ಪತ್ರಕರ್ತ (American Journalist) ಗ್ರಾಂಟ್ ವಾಲ್ ಅವರು ಫಿಫಾ ವಿಶ್ವಕಪ್ ವರದಿ ಮಾಡುತ್ತಿದ್ದಾಗ ಸಾವನ್ನಪ್ಪಿದ್ದಾರೆ ಎಂದು ಅವರ ಸಹೋದರ ಶನಿವಾರ ತಿಳಿಸಿದ್ದಾರೆ.

    ಲುಸೈಲ್ ಐಕಾನಿಕ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಅರ್ಜೆಂಟೀನಾ ಮತ್ತು ನೆದರ್ಲೆಂಡ್ ನಡುವಿನ ಕ್ವಾರ್ಟರ್ ಫೈನಲ್ ಪಂದ್ಯವನ್ನು ವರದಿ ಮಾಡುತ್ತಿದ್ದ ವೇಳೆ ಗ್ರಾಂಟ್ ಕುಸಿದುಬಿದ್ದಿದ್ದಾರೆ ಎನ್ನಲಾಗಿದೆ. ಆದರೆ ಅವರ ಸಾವಿನ ಹಿಂದೆ ಕತಾರ್ ಸರ್ಕಾರ ಭಾಗಿಯಾಗಿದೆ ಎಂದು ಗ್ರಾಂಟ್ ಅವರ ಸಹೋದರ ಎರಿಕ್ ಆರೋಪಿಸಿದ್ದಾರೆ.

    ಈ ಬಗ್ಗೆ ತಿಳಿಸಿರುವ ಎರಿಕ್, ನಾನು ಸಲಿಂಗಕಾಮಿ ಎಂದು ಗ್ರಾಂಟ್ ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದ ವೀಡಿಯೋವೊಂದರಲ್ಲಿ ಹೇಳಿದ್ದರು. ಅವರು ವಿಶ್ವಕಪ್‌ಗೆ ಮಳೆಬಿಲ್ಲಿನ ಶರ್ಟ್ ಧರಿಸಲು ನಾನೇ ಕಾರಣ. ನನ್ನ ಸಹೋದರ ಆರೋಗ್ಯವಾಗಿದ್ದ. ಆದರೆ ಅಲ್ಲಿ ನಡೆದಿರುವ ಘಟನೆಗಳ ಬಳಿಕ ಆತನಿಗೆ ಕೊಲೆ ಬೆದರಿಕೆಗಳು ಬಂದಿವೆ ಎಂದು ಆತ ನನಗೆ ಹೇಳಿದ್ದ. ಆತ ಸತ್ತಿದ್ದಾನೆ ಎಂಬುದನ್ನು ನನ್ನಿಂದ ನಂಬಲು ಸಾಧ್ಯವಾಗುತ್ತಿಲ್ಲ. ಬದಲಿಗೆ ಆತನ ಕೊಲೆಯಾಗಿದೆ ಎಂಬ ಶಂಕೆಯಿದೆ ಎಂದಿದ್ದಾರೆ. ಇದನ್ನೂ ಓದಿ: ಸಿಕ್ಸರ್, ಬೌಂಡರಿಗಳ ಸುರಿಮಳೆ – ಇಶಾನ್ ಕಿಶನ್ ಸ್ಫೋಟಕ ದ್ವಿಶತಕ

    ಇತ್ತೀಚೆಗೆ ವಿಶ್ವಕಪ್ ಆರಂಭದಲ್ಲಿ ಅಲ್ ರಯಾನ್‌ನಲ್ಲಿರುವ ಅಹ್ಮದ್ ಬಿನ್ ಅಲಿ ಸ್ಟೇಡಿಯಂನಲ್ಲಿ ವೇಲ್ಸ್ ವಿರುದ್ಧ ಅಮೆರಿಕದ ಆರಂಭಿಕ ಪಂದ್ಯಕ್ಕೆ ವಿಶ್ವಕಪ್‌ನ ಭದ್ರತಾ ತಂಡ ನನ್ನನ್ನು ತಡೆದಿತ್ತು. ನಾನು ಧರಿಸಿದ್ದ ರೈನ್‌ಬೋ ಶರ್ಟ್ ಅನ್ನು ತೆಗೆಯುವಂತೆ ಕೇಳಿಕೊಳ್ಳಲಾಗಿತ್ತು. ಈ ಘಟನೆಯ ಬಗ್ಗೆ ಟ್ವೀಟ್ ಮಾಡಲು ಹೊರಟಾಗ ನನ್ನ ಫೋನ್ ಅನ್ನು ಕಿತ್ತುಕೊಳ್ಳಲಾಗಿತ್ತು ಎಂದು ಗ್ರಾಂಟ್ ಈ ಹಿಂದೆ ಆರೋಪಿಸಿದ್ದರು.

     

    ಈ ಘಟನೆಯ ಬಳಿಕ ಸ್ಥಳದಲ್ಲಿದ್ದ ಭದ್ರತಾ ಅಧಿಕಾರಿಯೊಬ್ಬರು ಅವರನ್ನು ಸಂಪರ್ಕಿಸಿ, ಕ್ಷಮೆಯಾಚಿಸಿದ್ದಾರೆ. ಹಾಗೂ ಕ್ರೀಡಾಂಗಣದೊಳಗೆ ಪ್ರವೇಶಿಸಲು ಅನುಮತಿ ನೀಡಲಾಯಿತು ಎಂದಿದ್ದರು. ಇದನ್ನೂ ಓದಿ: ಹಾದಿ ಬೀದಿಯಲ್ಲಿ ಹುಡುಗಿಯರನ್ನ ರೇಗಿಸಿದ್ರೆ 2 ವರ್ಷ ಜೈಲು..!

    Live Tv
    [brid partner=56869869 player=32851 video=960834 autoplay=true]