Tag: LGBT Community

  • LGBTQ | ಸಮುದಾಯಕ್ಕೆ ಜಂಟಿ ಬ್ಯಾಂಕ್ ಖಾತೆ ತೆರೆಯಲು ಅನುಮತಿ

    LGBTQ | ಸಮುದಾಯಕ್ಕೆ ಜಂಟಿ ಬ್ಯಾಂಕ್ ಖಾತೆ ತೆರೆಯಲು ಅನುಮತಿ

    ನವದೆಹಲಿ: ಎಲ್‌ಜಿಬಿಟಿಕ್ಯು ಸಮುದಾಯಕ್ಕೆ (LGBT Community) ಸೇರಿದ ಜನರಿಗೆ, ಜಂಟಿ ಬ್ಯಾಂಕ್ ಖಾತೆಯನ್ನು ತೆರೆಯಲು ಅಥವಾ ಕ್ವೀರ್ ಸಂಬಂಧದಲ್ಲಿರುವ ವ್ಯಕ್ತಿಯನ್ನು ಫಲಾನುಭವಿಯಾಗಿ ನಾಮನಿರ್ದೇಶನ ಮಾಡಲು ಇನ್ನು ಮುಂದೆ ಯಾವುದೇ ನಿರ್ಬಂಧಗಳಿಲ್ಲ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ಸುಪ್ರೀಂಕೋರ್ಟ್ (Supremecourt) ಆದೇಶದ ಬಳಿಕ ಸರ್ಕಾರ ಈ ಆದೇಶ ಹೊರಡಿಸಿದೆ.

    ಈ ಸಂಬಂಧ ಭಾರತೀಯ ರಿಸರ್ವ್ ಬ್ಯಾಂಕ್ (RBI) ಎಲ್ಲಾ ವಾಣಿಜ್ಯ ಬ್ಯಾಂಕ್‌ಗಳಿಗೆ ಆಗಸ್ಟ್ 21 ರಂದು ಈ ಬಗ್ಗೆ ಸ್ಪಷ್ಟೀಕರಣವನ್ನು ನೀಡಿದೆ. ತೃತೀಯಲಿಂಗಿಗಳೆಂದು ಗುರುತಿಸಿಕೊಳ್ಳುವ ಜನರಿಗೆ ಬ್ಯಾಂಕ್ ಖಾತೆಗಳನ್ನು ತೆರೆಯಲು ಮತ್ತು ಲಭ್ಯವಿರುವ ಸೇವೆಗಳನ್ನು ಬಳಸಿಕೊಳ್ಳಲು ಸಹಾಯ ಮಾಡಲು ಎಲ್ಲಾ ಫಾರ್ಮ್ ಗಳು ಮತ್ತು ಅಪ್ಲಿಕೇಶನ್‌ಗಳಲ್ಲಿ ‘ತೃತಿಯ ಲಿಂಗ’ ಎಂಬ ಪ್ರತ್ಯೇಕ ಕಾಲಮ್ ಅನ್ನು ಸೇರಿಸಲು ಆರ್‌ಬಿಐ 2015 ರಲ್ಲಿ ಬ್ಯಾಂಕ್‌ಗಳಿಗೆ  ನಿರ್ದೇಶನ ನೀಡಿತ್ತು. ಇದನ್ನೂ ಓದಿ: ಬೆಂಗಳೂರಿನಲ್ಲಿ ಗಣೇಶನನ್ನು ಕೂರಿಸ್ತೀರಾ – ಪೊಲೀಸರ ಮಾರ್ಗಸೂಚಿಯಲ್ಲಿ ಏನಿದೆ?

    2022 ರಲ್ಲಿ ಇಎಸ್‌ಎಎಫ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಲಿಮಿಟೆಡ್, ತೃತೀಯಲಿಂಗಿ ಸಮುದಾಯಕ್ಕಾಗಿ ಪ್ರತ್ಯೇಕವಾಗಿ ‘ರೇನ್ಬೋ ಉಳಿತಾಯ ಖಾತೆ’ ಯೋಜನೆಯನ್ನು ಪ್ರಾರಂಭಿಸಿತು. ಈ ಯೋಜನೆಯು ಹೆಚ್ಚಿನ ಉಳಿತಾಯ ದರಗಳು ಮತ್ತು ಡೆಬಿಟ್ ಕಾರ್ಡ್ ಕೊಡುಗೆಗಳು ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ನೀಡಿತು.  ಇದನ್ನೂ ಓದಿ: ಕಿತ್ತೂರು ಪಟ್ಟಣ ಪಂಚಾಯಿತಿ ಬಿಜೆಪಿ ಸದಸ್ಯನ ಕಿಡ್ನ್ಯಾಪ್ – ಕಾಂಗ್ರೆಸ್ ಶಾಸಕನ ಆಪ್ತರ ವಿರುದ್ಧ ದೂರು

  • ವಿವಾಹಪೂರ್ವ ಸೆಕ್ಸ್ ಮಾಡಿದ್ರೆ 1 ವರ್ಷ ಜೈಲು – ಹೊಸ ಕಾನೂನು ಜಾರಿಗೆ ಇಂಡೋನೇಷ್ಯಾ ಸಜ್ಜು

    ವಿವಾಹಪೂರ್ವ ಸೆಕ್ಸ್ ಮಾಡಿದ್ರೆ 1 ವರ್ಷ ಜೈಲು – ಹೊಸ ಕಾನೂನು ಜಾರಿಗೆ ಇಂಡೋನೇಷ್ಯಾ ಸಜ್ಜು

    ಜಕಾರ್ತ: ವಿವಾಹಪೂರ್ವ ಸೆಕ್ಸ್ ತಡೆಯಲು ಇಂಡೋನೇಷ್ಯಾ ಸರ್ಕಾರ (Indonesia Government) ಹೊಸ ಕ್ರಿಮಿನಲ್ ಕಾನೂನು (Criminal Law) ಜಾರಿಗೆ ತರಲು ಸಜ್ಜಾಗಿದೆ. ಅದಕ್ಕಾಗಿ ಕರಡನ್ನೂ ಸಿದ್ಧಪಡಿಸಿದೆ.

    ಹೊಸ ಕ್ರಿಮಿನಲ್ ಕಾನೂನು (Criminal Law) ಪ್ರಕಾರ ವಿವಾಹ (Marriage) ಪೂರ್ವ ಸೆಕ್ಸ್ ಮಾಡಿದ್ರೆ ಅಂತಹವರಿಗೆ 1 ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಬಹುದು ಎಂದು ಸರ್ಕಾರ ಹೇಳಿದೆ. ಇದನ್ನೂ ಓದಿ: ಕ್ಯಾಂಪಸ್‌ನಲ್ಲಿ ಲವ್‌ಜಿಹಾದ್‌ಗೆ ಉತ್ತೇಜನ, ಸೇನೆಗೆ ಅಪಮಾನ – 6 ಶಿಕ್ಷಕರಿಗೆ ಪಾಠ ಮಾಡದಂತೆ ಸೂಚನೆ

    ಇಂಡೋನೇಷ್ಯಾ ತನ್ನ ದೇಶದ ಮೌಲ್ಯಗಳಿಗೆ ತಕ್ಕಂತೆ ಕ್ರಿಮಿನಲ್ ಕಾನೂನು ರೂಪಿಸಿರುವುದು ನಮ್ಮ ಹೆಮ್ಮೆ. ಮುಂದಿನ ಸಂಸತ್ತಿನಲ್ಲಿ ಹೊಸ ಶಾಸನವಾಗಿ ಈ ಕ್ರಿಮಿನಲ್ ಕೋಡ್ ಅಂಗೀಕಾರವಾಗುವ ನಿರೀಕ್ಷೆಯಿದೆ ಎಂದು ಉಪ ಕಾನೂನು ಮಂತ್ರಿ ಎಡ್ವರ್ಡ್ ಒಮರ್ ಷರೀಫ್ ಹೇಳಿದ್ದಾರೆ. ಇದನ್ನೂ ಓದಿ: ಜನಾರ್ದನ ರೆಡ್ಡಿ ಮೊಮ್ಮಗಳ ನಾಮಕರಣ ಸಮಾರಂಭದಲ್ಲಿ ಬಿಎಸ್‌ವೈ ಭಾಗಿ

    ಈ ಕಾನೂನು ವಿಶ್ವದ ಮುಸ್ಲಿಂ (Muslims Nation) ಬಹುಸಂಖ್ಯಾತ ದೇಶದ ಜನರ ಮೇಲೆ ಪರಿಣಾಮ ಬೀರಬಹುದು. ದಂಪತಿ ವಿವಾಹಪೂರ್ವವಾಗಿ ಅಕ್ರಮ ಸಂಬಂಧ ಹೊಂದಿದ್ದರೆ ಜೈಲು ಶಿಕ್ಷೆ ಎದುರಿಸಬೇಕಾಗುತ್ತದೆ. ಆದರೆ ಇಂಡೋನೇಷ್ಯಾದಲ್ಲಿ ಸಲಿಂಗ ಕಾಮ ಅನುಮತಿಸಿದ ಕಾರಣ, ಆಗ್ನೇಯ ಏಷ್ಯಾದ ರಾಷ್ಟ್ರದ ಸಣ್ಣ LGBT (ಲೆಸ್ಬಿಯನ್, ಗೇ ಸೇಕ್ಸ್ ಮಾಡುವರು) ಗುಂಪುಗಳನ್ನು ಶಿಕ್ಷಿಸಬಹುದೆಂಬ ಆತಂಕ ವ್ಯಕ್ತಪಡಿಸಿದೆ.

    ಪತಿ ಅಥವಾ ಪತ್ನಿ ಸಂಬಂಧ ಇಲ್ಲದವರೊಂದಿಗೆ ಸಂಭೋಗಿಸಿದರೆ, ಅದನ್ನು ವ್ಯಬಿಚಾರವೆಂದು ಪರಿಗಣಿಸಿ ಆರ್ಟಿಕಲ್ 413ರಲ್ಲಿ ಉಲ್ಲೇಖಿಸಿ ಗರಿಷ್ಠ 1 ವರ್ಷ ಜೈಲು ಶಿಕ್ಷೆ ಅಥವಾ ಗರಿಷ್ಠ ದಂಡವನ್ನು ವಿಧಿಸಲಾಗುತ್ತದೆ ಎಂದು ಇಂಡೋನೇಷ್ಯಾ ಸರ್ಕಾರ ತಿಳಿಸಿದೆ.

    Live Tv
    [brid partner=56869869 player=32851 video=960834 autoplay=true]