ಇಸ್ಲಾಮಾಬಾದ್: ಹೊಸದಾಗಿ ಚುನಾಯಿತರಾಗಿರುವ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಭಾರತದೊಂದಿಗಿನ ಸಂಬಂಧವನ್ನು ಸುಧಾರಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ. ಈ ಬಗ್ಗೆ ಷರೀಫ್ ಭಾರತದ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದು, ಶಾಂತಿಯುತ ಹಾಗೂ ಸಹಕಾರಿ ಸಂಬಂಧವನ್ನು ಬೆಳೆಸುವಂತೆ ಕೋರಿದ್ದಾರೆ.
ಶೆಹಬಾಜ್ ಷರೀಫ್ ಕೆಲವು ದಿನಗಳ ಹಿಂದೆ ನರೇಂದ್ರ ಮೋದಿಗೆ ಪತ್ರ ಬರೆದಿದ್ದು, ಭಾರತ ಹಾಗೂ ಪಾಕಿಸ್ತಾನದ ನಡುವಿನ ಶಾಂತಿಯುತ ಬಾಂಧವ್ಯ ಹಾಗೂ ಜಮ್ಮು-ಕಾಶ್ಮೀರದ ಸಂಘರ್ಷ ಸೇರಿದಂತೆ ಹಲವಾರು ಸಮಸ್ಯೆಗಳಿಗೆ ಪರಿಹಾರ ಕೋರಿದ್ದಾರೆ ಎಂದು ಭಾನುವಾರ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಸ್ವೀಡನ್‌ನಲ್ಲಿ ಕುರಾನ್ ದಹನದ ಬೆದರಿಕೆ – ವಾಹನಗಳಿಗೆ ಬೆಂಕಿ, ಪೊಲೀಸ್ ವಾಹನಗಳು ಧ್ವಂಸ
ಶೆಹಬಾಜ್ ಷರೀಫ್ ಪಾಕಿಸ್ತಾನದ ಪ್ರಧಾನಿ ಸ್ಥಾನವನ್ನು ಅಲಂಕರಿಸಿದ ಬಳಿಕ ನರೇಂದ್ರ ಮೋದಿ ಅವರನ್ನು ಅಭಿನಂದಿಸಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಷರೀಫ್ ಪತ್ರವನ್ನು ಕಳುಹಿಸಿದ್ದಾರೆ. ಪಾಕಿಸ್ತಾನದ ರಾಜಕೀಯ ಪಕ್ಷ ಪಿಎಂಎಲ್ ಜಮ್ಮು-ಕಾಶ್ಮೀರ ಹಾಗೂ ಬಾಕಿ ಉಳಿದಿರುವ ಎಲ್ಲಾ ಸಮಸ್ಯೆಗಳನ್ನೂ ಶಾಂತಿಯುತವಾಗಿ ಪರಿಹರಿಸಿಕೊಳ್ಳುವ ಮೂಲಕ ಭಾರತದೊಂದಿಗೆ ಉತ್ತಮ ಬಾಂಧವ್ಯವನ್ನು ಸಾಧಿಸಬಹುದು ಎಂದು ಹೇಳಿತ್ತು. ಇದನ್ನೂ ಓದಿ: ಭೀಕರ ಪ್ರವಾಹಕ್ಕೆ ದಕ್ಷಿಣ ಆಫ್ರಿಕಾ ತತ್ತರ – 443ಕ್ಕೆ ಏರಿದ ಸಾವಿನ ಸಂಖ್ಯೆ
ಏಪ್ರಿಲ್ 11 ರಂದು ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಷರೀಫ್ ಪಾಕಿಸ್ತಾನದ ಪ್ರಧಾನಿಯಾಗಿ ಆಯ್ಕೆಯಾದ ಬಳಿಕ ಮೋದಿ ಟ್ವೀಟ್ ಮೂಲಕ ಅವರನ್ನು ಅಭಿನಂದಿಸಿದ್ದರು ಹಾಗೂ ಉಭಯ ರಾಷ್ಟ್ರಗಳು ಒಟ್ಟಾಗಿ ಜನರ ಯೋಗಕ್ಷೇಮ ಹಾಗೂ ಸಮೃದ್ಧಿಗಾಗಿ ಕೆಲಸ ಮಾಡಲು ಬಯಸುತ್ತೇವೆ ಎಂದಿದ್ದರು.
ಕೀವ್: ರಷ್ಯಾ ಆಕ್ರಮಣದಿಂದಾಗಿ ಮೃತಪಟ್ಟ ತನ್ನ ತಾಯಿಗೆ 9 ವರ್ಷ ವಯಸ್ಸಿನ ಮಗಳು ಬರೆದಿರುವ ಪತ್ರ ಮನಕಲಕುವಂತಿದೆ.
ಉಕ್ರೇನ್‌ನ ಬೊರೊಡ್ಯಾಂಕದ ಗಾಲಿಯಾ ಎಂಬ ಹುಡುಗಿ, ರಷ್ಯಾ ಆಕ್ರಮಣದಿಂದಾಗಿ ಮೃತಪಟ್ಟ ತನ್ನ ತಾಯಿಗೆ ಭಾವುಕವಾಗಿ ಪತ್ರ ಬರೆದಿದ್ದಾಳೆ. ಪತ್ರದ ಹಸ್ತಾಕ್ಷರದ ಫೋಟೋವನ್ನು ಉಕ್ರೇನ್ ಸಚಿವ ಆಂಟನ್ ಗೆರಾಶ್ಚೆಂಕೊ ಅವರು ಟ್ವೀಟ್ ಮಾಡಿದ್ದಾರೆ. ಇದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಭಾರತದೊಂದಿಗೆ ಶಾಂತಿಯುತ, ಸಹಕಾರಿ ಬಾಂಧವ್ಯ ಬಯಸುತ್ತೇವೆ: ಮೋದಿಗೆ ಪಾಕ್ ಪ್ರಧಾನಿ ಪ್ರತಿಕ್ರಿಯೆ
ಪತ್ರದಲ್ಲೇನಿದೆ?
ಅಮ್ಮ! ವಿಶ್ವದಲ್ಲೇ ನೀನು ನನ್ನ ಶ್ರೇಷ್ಠ ಅಮ್ಮ. ನಿನ್ನನ್ನು ನಾನೆಂದಿಗೂ ಮರೆಯುವುದಿಲ್ಲ. ನೀನು ಸ್ವರ್ಗಸ್ಥಳಾಗಿ ಸಂತೋಷದಿಂದಿರಬೇಕು ಎಂದು ನಾನು ಬಯಸುತ್ತೇನೆ. ನಾನು ಕೂಡ ಒಳ್ಳೆಯ ವ್ಯಕ್ತಿಯಾಗಿ ಸ್ವರ್ಗಕ್ಕೆ ಬರುವಂತಹ ಕೆಲಸವನ್ನು ಮಾಡಲು ಪ್ರಯತ್ನಿಸುತ್ತೇನೆ. ನಿಮ್ಮನ್ನು ಸ್ವರ್ಗದಲ್ಲಿ ಭೇಟಿಯಾಗುತ್ತೇನೆ! ಗಾಲಿಯಾ.. ಎಂದು ಭಾವನಾತ್ಮಕವಾಗಿ ಪತ್ರ ಬರೆದಿದ್ದಾಳೆ.
Here's the letter from 9-old girl to her mom who died in #Borodianka.
"Mom!
You're the best mom in the whole world. I'll never forget you. I wish you'll get in Heaven and be happy there. I'll do my best to be a good person and get in Heaven too. See you in Heaven!
ಬಾಲಿವುಡ್‍ನ ಶಾಹೆನ್‍ಶಾ ಶಾರೂಖ್ ಖಾನ್ ಅವರು ತಮ್ಮ ಮುಂಬರುವ ‘ಪಠಾನ್’ ಚಿತ್ರದ ಸಹಾಯಕ ನಿರ್ದೇಶಕರಾದ ಅಭಿಷೇಕ್ ಅನಿಲ್ ತಿವಾರಿ ಅವರಿಗೆ ಹೃದಯಸ್ಪರ್ಶಿ ಪತ್ರವೊಂದನ್ನು ಬರೆದಿದ್ದಾರೆ.
ಪತ್ರದಲ್ಲಿ ಖಾನ್ ತಮ್ಮ ಕೈಬರಹದ ಟಿಪ್ಪಣಿಯ ಮೂಲಕ ಚಲನಚಿತ್ರದ ಬಗ್ಗೆ ಮತ್ತು ಸಹ ನಿರ್ದೇಶಕನ ಮೇಲಿರುವ ಮೆಚ್ಚುಗೆ ಮತ್ತು ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಟಿಪ್ಪಣಿಯ ಆ ಚಿತ್ರವನ್ನು ಅಭಿಷೇಕ್ ತಮ್ಮ ಇನ್‍ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಶಾರೂಖ್ ಜೊತೆಗಿನ ಸಿನಿಮಾಗೆ ನಯನ ಶೆಡ್ಯೂಲ್ ಮುಗಿಸೋದು ಯಾವಾಗ? – ಇಲ್ಲಿದೆ ಅಪ್ಡೇಟ್
ಪತ್ರದಲ್ಲಿ ಏನಿದೆ?
ಅಭಿಷೇಕ್ ನೀವು ನನಗಾಗಿ ಪಠಾನ್ ಅಂತಹ ಚಿತ್ರವನ್ನು ನಿರ್ಮಿಸಿದ್ದಕ್ಕಾಗಿ ಧನ್ಯವಾದಗಳು. ನಮ್ಮೆಲ್ಲರಿಗೂ ಚಿತ್ರದ ಶೂಟಿಂಗ್ ಸೆಟ್‍ನಲ್ಲಿ ವಿಶೇಷವಾಗಿ ನನಗೆ ಅದ್ಭುತ ಅನುಭವಗಳು ಸಿಕ್ಕಿವೆ. ಚಿತ್ರಕ್ಕಾಗಿ ನೀವು ಪಟ್ಟ ಕಠಿಣ ಪರಿಶ್ರಮ, ದಕ್ಷತೆ ಆ ನಿಮ್ಮ ನಗು ನನಗೆ ತುಂಬಾ ಮೆಚ್ಚುಗೆಯಾಗಿದೆ. ಸಿನಿಮಾರಂಗದಲ್ಲಿ ನಿಮಗೆ ಮುಂದೆ ಒಳ್ಳೆಯ ಭವಿಷ್ಯವಿದೆ. ಏನೇ ಆಗಲಿ ನಿಮ್ಮನ್ನೂ ನಾನು ತುಂಬಾ ಮೀಸ್ ಮಾಡಿಕೊಳ್ಳುತ್ತೇನೆ ಎಂದು ಬರೆದು ಕೆಳಗಡೆ ತಮ್ಮ ಹಸ್ತಾಕ್ಷರವನ್ನು ಹಾಕಿದ್ದಾರೆ. ಇದನ್ನೂ ಓದಿ:ಬಿಯರ್ ದಾನ ಮಾಡಿ ಎಂದ ಅಭಿಮಾನಿ – ಬಿಯರ್ ಜೊತೆ ಆಲೂ ಭುಜಿಯಾ ಮಿಕ್ಸ್‌ಚರ್ ಸಾಕಾ ಎಂದ ಸೋನು
ಈ ಹಿಂದೆ ಶಾರೂಖ್ ಖಾನ್ ಅವರು ಪಠಾನ್ ಚಿತ್ರದ ಶೂಟಿಂಗ್ ಸೆಟ್‍ನಿಂದ ಶರ್ಟ್‍ಲೆಸ್ ಅವತಾರದ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಫೋಟೋದಲ್ಲಿ ಅವರು ತಮ್ಮ 8 ಪ್ಯಾಕ್ಸ್ ಅನ್ನು ಪ್ರದರ್ಶಿಸಿದ್ದು, ತಮ್ಮ ವಿಭಿನ್ನ ಕೇಶ ವಿನ್ಯಾಸದೊಂದಿಗೆ ಮಾಸ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದರು.
ಸಿದ್ಧಾರ್ಥ್ ಆನಂದ್ ನಿರ್ದೇಶನದ, ಪಠಾಣ್ ಚಿತ್ರವು 2023ರ ಜನವರಿ 25ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರವನ್ನು ಯಶ್ ರಾಜ್ ಫಿಲ್ಮ್ ನಿರ್ಮಿಸಿದೆ. ಇದರಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಚಿಕ್ಕಮಗಳೂರು: ಭಕ್ತರು ಕಾಣಿಕೆ ಹುಂಡಿಗೆ ಚಿನ್ನ-ಬೆಳ್ಳಿಯ ಒಡವೆಗಳು, ಮುಖವಾಡ, ಬಳೆ, ಉಂಗುರ ಚೈನು, ಹಣ ಹೀಗೆ ನಾನಾ ರೀತಿಯ ವಸ್ತುಗಳನ್ನ ಹಾಕಿ ಹರಕೆ ತೀರಿಸುತ್ತಾರೆ. ಭಕ್ತನೋರ್ವ ಕಾಣಿಕೆ ಹುಂಡಿಯಲ್ಲಿ ಮಗ ರಾತ್ರಿ ಹೊತ್ತು ಬೇಗ ಮಲಗುವಂತೆ ಮಾಡು ಭಗವಂತ ಎಂದು ಪತ್ರ ಬರೆದು ಕಾಣಿಕೆ ಹುಂಡಿಯಲ್ಲಿ ಹಾಕಿರುವ ಅಪರೂಪದ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಕಳಸ ತಾಲೂಕಿನಲ್ಲಿರುವ ದಕ್ಷಿಣ ಕಾಶಿ ಎಂದು ಖ್ಯಾತಿಯಾಗಿರುವ ಕಳಸ ಕಳಸೇಶ್ವರ ಸ್ವಾಮಿ ಹಾಗೂ ಪರಿವಾರ ದೇವರುಗಳ ಕಾಣಿಕೆ ಹುಂಡಿ ಎಣಿಕೆ ಕಾರ್ಯ ನಡೆಯಿತು. ಕಾಣಿಕೆ ಹುಂಡಿಯಲ್ಲಿ ಭಕ್ತನೋರ್ವ ಮಗನ ಇಡೀ ಬದುಕನ್ನೇ ಬದಲಿಸಪ್ಪಾ ಎಂದು ಪತ್ರ ಬರೆದು ಕಾಣಿಕೆ ಹುಂಡಿಗೆ ಹಾಕಿ ಬೇಡಿಕೊಂಡಿದ್ದಾರೆ. ಇದನ್ನೂ ಓದಿ: ಮಗ ಅಳುತ್ತಿದ್ದರೂ ನನ್ನ ಮೇಲೆ ಅತ್ಯಾಚಾರ ಮಾಡಿದ್ರು- ಉಕ್ರೇನ್ ಮಹಿಳೆ
ಪತ್ರದಲ್ಲಿ ಏನಿದೆ?: ಮಗನ ಹೆಸರು ಬರೆದಿರುವ ಅಪ್ಪ, ಮಗನ ಕುಡಿತದ ಚಟ ಬಿಡಿಸಿ ಒಳ್ಳೆಯ ಬುದ್ಧಿ ಕೊಡು. ಬೇಗ ಕೆಲಸ ಸಿಗುವಂತೆ ಮಾಡು. ಅವನ ಕುಡಿತದ ಚಟ ಹೋಗಲಾಡಿಸು. ಅವನು ಭಾರೀ ಮುಂಗೋಪಿ. ಅದನ್ನೂ ಕಡಿಮೆ ಮಾಡು. ಚಂಚಲ ಸ್ವಭಾವ ತೊಲಗಿಸು. ರಾತ್ರಿ ಹೊತ್ತು ಬೇಗ ಮಲಗುವಂತೆ ಮಾಡು. ಅವನಿಗಿರುವ ಭಯವನ್ನ ಹೋಗಲಾಡಿಸಿ ಧೈರ್ಯ ತುಂಬು, ಹೆಂಡತಿ ಮಕ್ಕಳನ್ನ ಚೆನ್ನಾಗಿ ನೋಡಿಕೊಳ್ಳುವಂತೆ ಬುದ್ಧಿಕೊಡು. ಮೊಮ್ಮಕ್ಕಳಿಗೂ ವಯಸ್ಸಿಗೆ ತಕ್ಕಂತೆ ಬುದ್ಧಿ ಕೊಡು. ಮಗಳ ಸಂಸಾರವನ್ನೂ ಚೆನ್ನಾಗಿ ಕಾಪಾಡು ತಂದೆ ಎಂದು ಬರೆದಿದ್ದಾರೆ. ಇದನ್ನೂ ಓದಿ: ಪ್ಲುಟೋದಲ್ಲಿ ಹೊಸ ವಿಸ್ಮಯ – ಸೌರವ್ಯೂಹದಲ್ಲಿ ಎಲ್ಲೂ ಕಾಣಿಸದ ಮಂಜಿನ ಜ್ವಾಲಾಮುಖಿಯ ಸುಳಿವು
ಪತ್ರವನ್ನ ನೋಡಿದ ಅಧಿಕಾರಿಗಳು ನಸುನಕ್ಕು ಪತ್ರವನ್ನ ತೆಗೆದಿಟ್ಟು ಹಣ ಏಣಿಕೆ ಕಾರ್ಯ ಮುಂದುವರಿಸಿದ್ದಾರೆ. ಕಾಣಿಕೆ ಹುಂಡಿಯಲ್ಲಿ ಕಳೆದ ಐದು ತಿಂಗಳಲ್ಲಿ 19 ಲಕ್ಷದ 66 ಸಾವಿರದ 573 ರೂಪಾಯಿ ಹಣ ಸಂಗ್ರಹವಾಗಿದೆ. ಕೊರೊನಾ ಕಾರಣದಿಂದಾಗಿ ದೇವಸ್ಥಾನಕ್ಕೆ ಆಗಮಿಸುವ ಭಕ್ತರ ಸಂಖ್ಯೆ ತೀರಾ ಇಳಿಮುಖವಾಗಿತ್ತು. ಇದರಿಂದ ದೇವಸ್ಥಾನದ ಆದಾಯಕ್ಕೂ ಪೆಟ್ಟು ಬಿದ್ದಿತ್ತು. ಇದೀಗ ಕೊರೊನಾ ನಿಯಾಮಾವಳಿಗಳು ಬಹುತೇಕ ರದ್ದುಗೊಂಡಿದ್ದು, ಜನಜೀವನ ಎಂದಿನಂತೆ ಆರಂಭವಾಗುತ್ತಿದೆ. ದೇವಸ್ಥಾನಕ್ಕೆ ಬರುತ್ತಿರುವ ಭಕ್ತರ ಸಂಖ್ಯೆಯೂ ಹೆಚ್ಚಾಗಿದ್ದು ಆದಾಯದಲ್ಲೂ ಏರಿಕೆ ಕಂಡಿದೆ. ದೇವಸ್ಥಾನದ ಆದಾಯದಲ್ಲಿ ಹಿಂದೆಂದಿಗಿಂತಲೂ ಈ ಬಾರಿ ಹೆಚ್ಚಿನ ಕಾಣಿಕೆ ಹಣ ಸಂಗ್ರಹವಾಗಿದೆ.
ಮಡಿಕೇರಿ: ಮನೆಯ ಸುತ್ತಲೂ ಕಂದಕ ತೋಡಿ ಕಾರ್ಮಿಕನಿಗೆ ಹಿಂಸೆ ನೀಡುತ್ತಿರುವ ತೋಟದ ಮಾಲೀಕರ ಕ್ರಮದಿಂದ ಬೇಸತ್ತು ಕಾರ್ಮಿಕನ ಕುಟುಂಬದ ಸದಸ್ಯರು ದಯಾಮರಣ ನೀಡಬೇಕೆಂದು ರಾಷ್ಟ್ರಪತಿಗೆ ಪತ್ರ ಬರೆದಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.
ಹೌದು, ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಪಾಲಿಬೆಟ್ಟ ಗ್ರಾಮದಲ್ಲಿ ದುಬಾರಿ ಗ್ರೂಪ್‌ಗೆ ಸೇರಿದ ಮಸ್ಕಲ್ ಕಾಫಿ ತೋಟದಲ್ಲಿ ವಾಸವಿರುವ ಕಾರ್ಮಿಕ ಸುಬ್ರಮಣಿ ಎಸ್ ಕಳೆದ 25 ವರ್ಷದಿಂದ ಚಾಲಕನಾಗಿ ಸೇವೆ ಸಲ್ಲಿಸುತ್ತಿದ್ದರು. 2016ರಲ್ಲಿ ಯಾವುದೇ ನೋಟೀಸ್ ನೀಡದೇ ತೋಟದ ಮಾಲೀಕರು ಸುಬ್ರಮಣಿಯನ್ನು ಕೆಲಸದಿಂದ ತೆಗೆದುಹಾಕಿದ್ದರು. ಈ ಬಗ್ಗೆ ಜಿಲ್ಲಾ ಕಾರ್ಮಿಕ ನ್ಯಾಯಾಲಯದಲ್ಲಿ ದೂರು ನೀಡಿದ್ದರು.
ನ್ಯಾಯಾಲಯದ ತೀರ್ಪು ಬರುವವರೆಗೂ ಕಾಫಿ ತೋಟದ ಮನೆಯಲ್ಲೇ ವಾಸವಿದ್ದ ಸುಬ್ರಮಣಿ ಕುಟುಂಬಕ್ಕೆ ಇದೀಗ ಮಾಲೀಕರು ತೊಂದರೆ ನೀಡುತ್ತಿದ್ದಾರೆ. ತೋಟದ ಮನೆಯಿಂದ ಕಾರ್ಮಿಕ ಹಾಗೂ ಅವರ ಕುಟುಂಬ ಹೊರಬರದಂತೆ ಮನೆಯ ಸುತ್ತಲೂ ಕಂದಕ ತೋಡಿದ್ದಾರೆ. ಈ ಬಗ್ಗೆ ಸುಬ್ರಮಣಿ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಮನನೊಂದ ಕಾರ್ಮಿಕ ರಾಷ್ಟ್ರಪತಿಗೆ ದಯಾಮರಣ ಕೋರಿ ಪತ್ರ ಬರೆದಿದ್ದಾರೆ. ಇದನ್ನೂ ಓದಿ: ಸೇನಾ ಹೆಲಿಕಾಪ್ಟರ್ ಪತನ – ಪೈಲಟ್‌ಗಳ ಸ್ಥಿತಿ ಚಿಂತಾಜನಕ
ಕಾರ್ಮಿಕ ಸುಬ್ರಮಣಿಗೆ ತೋಟದ ವತಿಯಿಂದ ನೀಡಿದ್ದ ಮನೆಯಲ್ಲಿ ಪತ್ನಿ, ಮಗಳೊಂದಿಗೆ ವಾಸವಾಗಿದ್ದಾರೆ. ಮೊದಲ ಮಹಡಿಯಲ್ಲಿ ಮನೆ ಇದ್ದು, ಕೆಳಭಾಗದಲ್ಲಿ ತೋಟದ ಸಾಮಗ್ರಿಗಳ ಕೊಠಡಿ ಇದೆ. ತೋಟದ ಮನೆಯನ್ನು ಬಿಟ್ಟು ತೆರಳಬೇಕೆಂದು ತೋಟದ ಮಾಲೀಕರು ಹಾಗೂ ವ್ಯವಸ್ಥಾಪಕರು ಆಗಿಂದಾಗ್ಗೆ ಕಿರುಕುಳ ನೀಡುತ್ತಿದ್ದರು ಎಂದು ಸುಬ್ರಮಣಿ ಆರೋಪಿಸಿದ್ದಾರೆ.
ಸುಬ್ರಮಣಿ ಹಾಗೂ ಅವರ ಕುಟುಂಬ ಮನೆ ಖಾಲಿ ಮಾಡದ ಹಿನ್ನೆಲೆಯಲ್ಲಿ ಮಾಲೀಕರು 2 ಹಿಟಾಚಿ ಹಾಗೂ 2 ಜೆಸಿಬಿ ಬಳಸಿ ಮನೆಯ ಸುತ್ತಲೂ ಕಂದಕ ನಿರ್ಮಾಣ ಮಾಡಿದ್ದಾರೆ. ಇದೀಗ ಸುಬ್ರಮಣಿ ಮನೆಗೆ ತೆರಳುವ ರಸ್ತೆಯಲ್ಲಿ ಗುಂಡಿ ತೋಡಲಾಗಿದ್ದು, ಮನೆಯಿಂದ ಹೊರಬರಲು ಹಾಗೂ ಒಳಗೆ ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ. ಇದನ್ನೂ ಓದಿ: ಹೃದಯ ಸಂಬಂಧಿ ಸಮಸ್ಯೆಯಿಂದ ತೆಲಂಗಾಣ ಸಿಎಂ ಆಸ್ಪತ್ರೆಗೆ ದಾಖಲು
ಈ ಬಗ್ಗೆ ಜಿಲ್ಲಾಧಿಕಾರಿ, ಮುಖ್ಯಮಂತ್ರಿ ಸೇರಿದಂತೆ ವಿವಿಧ ಅಧಿಕಾರಿಗಳಿಗೆ ಸುಬ್ರಮಣಿ ಮನವಿ ಸಲ್ಲಿಸಿದ್ದರು. ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ನೀಡಿದ ದೂರಿನನ್ವಯ ಜಿಲ್ಲಾ ನ್ಯಾಯಾಲಯದ ನ್ಯಾಯಮೂರ್ತಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಮನೆಯ ಸುಮಾರು 15 ಅಡಿ ಕೆಳಕ್ಕೆ ಕಂದಕ ನಿರ್ಮಾಣ ಮಾಡಿರುವ ಕಾರಣ ಮನೆಗೆ ತೆರಳಲು ಹಾಗೂ ಮನೆಯಿಂದ ಹೊರಹೋಗಲು ಸುಬ್ರಮಣಿ ಕುಟುಂಬಕ್ಕೆ ಸಾಧ್ಯವಾಗದೇ ಗೃಹಬಂಧನದಲ್ಲಿ ಇದ್ದಾರೆ. ಇದೀಗ ಏಣಿಯ ಸಹಾಯದಿಂದ ಸುಬ್ರಮಣಿ ಹಾಗೂ ಮಗಳು ಅಗತ್ಯ ಸಾಮಗ್ರಿಗಳ ಖರೀದಿಗೆ ತೆರಳುತ್ತಿದ್ದಾರೆ. ಆದರೆ ಗ್ಯಾಸ್ ಸೇರಿದಂತೆ ಭಾರವಾದ ವಸ್ತುಗಳನ್ನು ಮನೆಗೆ ಸಾಗಿಸುವುದು ಅಸಾಧ್ಯವಾಗಿದೆ. ಇದನ್ನೂ ಓದಿ: ಕೋವಿಡ್ ರೋಗಿಗಳಿಂದ ಪಡೆದ ಹೆಚ್ಚುವರಿ ಶುಲ್ಕ ಮರು ಪಾವತಿಗೆ ಜಿಲ್ಲಾಧಿಕಾರಿ ಆದೇಶ
ಇನ್ನೂ ತನಗೆ ಸಿಗಬೇಕಾದ ಬೋನಸ್, ವೇತನ ಸೇರಿದಂತೆ ಅಂದಾಜು 19 ಲಕ್ಷ ರೂ. ಹಣ ತೋಟದ ಮಾಲೀಕರಿಂದ ಸಿಗಬೇಕು. ನ್ಯಾಯಾಲಯದಲ್ಲಿ ಈ ಬಗ್ಗೆ ದಾವೆ ಕೂಡ ಹೂಡಲಾಗಿದೆ. ಹೀಗಿರುವಾಗ ಏಕಾಏಕಿ ಮನೆಯ ಸುತ್ತಲೂ ಕಂದಕ ನಿರ್ಮಿಸಿ ನಿತ್ಯ ಕಿರುಕುಳ ನೀಡುತ್ತಿದ್ದಾರೆ. ಅನಾರೋಗ್ಯದಲ್ಲಿರುವ ಪತ್ನಿ, ಮಗಳ ಮುಖ ನೋಡಿ ಆತ್ಮಹತ್ಯೆಗೂ ಮನಸ್ಸು ಬರುತ್ತಿಲ್ಲ. ಹೀಗಾಗಿ ದಯಾಮರಣ ನೀಡಬೇಕೆಂದು ರಾಷ್ಟ್ರಪತಿಗಳಿಗೆ ಈ ಕುಟುಂಬ ಮನವಿ ಮಾಡಿದೆ.
ಲಕ್ನೋ: ವಾರಣಾಸಿಯಲ್ಲಿ ಇವಿಎಂ ದುರ್ಬಳಕೆಯಾಗುತ್ತಿದೆ ಎಂಬ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಆರೋಪಕ್ಕೆ ಸಂಬಂಧಿಸಿದಂತೆ, ಚುನಾವಣಾ ಆಯೋಗಕ್ಕೆ ಸಮಾಜವಾದಿ ಪಕ್ಷ ಪತ್ರವೊಂದನ್ನು ಬರೆದಿದೆ.
ಎಲ್ಲಾ ಕ್ಷೇತ್ರಗಳಿಗೆ ಮತ ಎಣಿಕೆ ಪ್ರಕ್ರಿಯೆಯನ್ನು ವೆಬ್‌ಕಾಸ್ಟಿಂಗ್ ಮಾಡಬೇಕು. ಅದಕ್ಕೆ ಸಂಬಂಧಿಸಿದ ಲಿಂಕ್ ಅನ್ನು ಚುನಾವಣಾ ಆಯೋಗ, ಮುಖ್ಯ ಚುನಾವಣಾ ಆಯುಕ್ತರು, ಮತಗಟ್ಟೆ ಅಧಿಕಾರಿಗಳು ಮತ್ತು ರಾಜಕೀಯ ಪಕ್ಷಗಳೊಂದಿಗೆ ಹಂಚಿಕೊಳ್ಳಬೇಕು ಎಂದು ಎಸ್‌ಪಿ ಒತ್ತಾಯಿಸಿದೆ. ಇದನ್ನೂ ಓದಿ: EVM ಪ್ರೋಟೋಕಾಲ್‍ನಲ್ಲಿ ಲೋಪ: ಚುನಾವಣಾಧಿಕಾರಿಯ ವೀಡಿಯೋ ಹಂಚಿಕೊಂಡ ಎಸ್‍ಪಿ
ಇದರಿಂದ ರಾಜಕೀಯ ಪಕ್ಷಗಳು ಎಣಿಕೆ ಪ್ರಕ್ರಿಯೆಯನ್ನು ಲೈವ್ ವೀಕ್ಷಿಸಬಹುದು. ಪ್ರಕ್ರಿಯೆಯನ್ನು ಪಾರದರ್ಶಕವಾಗಿ ಮತ್ತು ಸ್ವತಂತ್ರವಾಗಿ ನಡೆಸಬಹುದು ಎಂದು ಮನವಿಯಲ್ಲಿ ಉಲ್ಲೇಖಿಸಿದೆ.
ವಾರಣಾಸಿಯ ಮತಗಟ್ಟೆಯಿಂದ ಇವಿಎಂಗಳನ್ನು ಸಾಗಿಸುತ್ತಿರುವುದಕ್ಕೆ ಸಂಬಂಧಿಸಿದಂತೆ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿತ್ತು. ಸ್ಥಳೀಯ ಅಭ್ಯರ್ಥಿಗಳ ಗಮನಕ್ಕೂ ತಾರದೇ ಇವಿಎಂಗಳನ್ನು ಅಧಿಕಾರಿಗಳು ಸಾಗಾಟ ಮಾಡುತ್ತಿದ್ದಾರೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಗಂಭೀರ ಆರೋಪ ಮಾಡಿದ್ದರು. ಇದನ್ನೂ ಓದಿ:ವಾರಣಾಸಿಯಲ್ಲಿ EVM ಕಳವು: ಅಖಿಲೇಶ್ ಯಾದವ್ ಗಂಭೀರ ಆರೋಪ
ನವದೆಹಲಿ: ಭಾರತ ಕ್ರಿಕೆಟ್ ತಂಡದ ಎಲ್ಲಾ ಮಾದರಿಯ ನಾಯಕತ್ವಕ್ಕೆ ನಿವೃತ್ತಿ ಹೇಳಿರುವ ವಿರಾಟ್ ಕೊಹ್ಲಿಗೆ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಹೃದಯಪೂರ್ವಕ ಪತ್ರವೊಂದನ್ನು ಬರೆದಿದ್ದಾರೆ. ಕೊಹ್ಲಿ ಬದ್ಧತೆ ಮತ್ತು ಶಿಸ್ತು ಕುರಿತು ಪತ್ರದಲ್ಲಿ ಹೊಗಳಿಸಿದ್ದಾರೆ.
ಯುವಿ ಪತ್ರದಲ್ಲೇನಿದೆ?
ವಿರಾಟ್, ನೀವು ಒಬ್ಬ ಕ್ರಿಕೆಟಿಗನಾಗಿ ಮತ್ತು ವ್ಯಕ್ತಿಯಾಗಿ ಬೆಳೆಯುತ್ತಿರುವುದನ್ನು ನಾನು ನೋಡಿದ್ದೇನೆ. ಭಾರತೀಯ ಕ್ರಿಕೆಟ್‌ನ ದಿಗ್ಗಜರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಡೆದಿದ್ದೀರಿ. ನೀವು ಹೊಸ ಪೀಳಿಗೆಗೆ ದಾರಿ ಮಾಡಿಕೊಡುವ ದಂತಕಥೆಯಾಗಿದ್ದೀರಿ. ನೆಟ್ಸ್‌ನಲ್ಲಿ ನಿಮ್ಮ ಶಿಸ್ತು, ಮೈದಾನದಲ್ಲಿನ ಉತ್ಸಾಹ ಮತ್ತು ಕ್ರೀಡೆಯಲ್ಲಿನ ಸಮರ್ಪಣೆ ಈ ದೇಶದ ಪ್ರತಿ ಮಕ್ಕಳೂ ಕ್ರಿಕೆಟ್ ಬಗ್ಗೆ ಉತ್ಸಾಹ ಹೊಂದಲು ಕಾರಣವಾಗಿದೆ. ಮುಂದೊಂದು ದಿನ ಪ್ರತಿಯೊಬ್ಬರಲ್ಲೂ ನೀಲಿ ಜೆರ್ಸಿಯನ್ನು ಹಾಕುವ ಕನಸನ್ನು ಪ್ರೇರೇಪಿಸುತ್ತದೆ. ಇದನ್ನೂ ಓದಿ: ವೃದ್ಧಿಮಾನ್ ಸಹಾ ಹೇಳಿಕೆಯಿಂದ ಬೇಸರವಾಗಿಲ್ಲ: ದ್ರಾವಿಡ್
ನೀವು ಪ್ರತಿ ವರ್ಷವೂ ನಿಮ್ಮ ಕ್ರಿಕೆಟ್ ಆಟದ ಸಾಮರ್ಥ್ಯವನ್ನು ಹೆಚ್ಚಿಸಿದ್ದೀರಿ. ಈ ಅದ್ಭುತ ಆಟದಲ್ಲಿ ಈಗಾಗಲೇ ಸಾಕಷ್ಟು ಸಾಧಿಸಿದ್ದೀರಿ. ನೀವೊಬ್ಬ ದಿಗ್ಗಜ ನಾಯಕ, ಅದ್ಭುತ ಆಟಗಾರ. ನೀವೊಬ್ಬ ಸೂಪರ್‌ಸ್ಟಾರ್. ನಿಮಗಾಗಿ ಈ ವಿಶೇಷ ಚಿನ್ನದ ಬೂಟ್‌ಗಳನ್ನು ನೀಡುತ್ತಿದ್ದೇನೆ. ದೇಶ ಹೆಮ್ಮೆ ಪಡುವಂತೆ ಆಡುತ್ತಿರಿ ಎಂದು ಕೊಹ್ಲಿಗೆ ಯುವರಾಜ್ ಸಿಂಗ್ ಹಾರೈಸಿ ಪತ್ರ ಬರೆದಿದ್ದಾರೆ.
ಪತ್ರದ ಜೊತೆಗೆ ಪೂಮಾ ಬ್ರ್ಯಾಂಡ್‌ನ ಚಿನ್ನದ ಶೂಗಳನ್ನು ವಿರಾಟ್ ಕೊಹ್ಲಿಗೆ ಯುವರಾಜ್ ಸಿಂಗ್ ಉಡುಗೊರೆ ನೀಡಿದ್ದಾರೆ. ಅದರ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಎರಡು ವರ್ಷಗಳ ಬಳಿಕ ಮಗನನ್ನು ಭೇಟಿಯಾದ ಶಿಖರ್ ಧವನ್
ಮುಂಬೈ: ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಹಾಗೂ ಸುಕೇಶ್ ಚಂದ್ರಶೇಖರ್ ಅವರು ಕ್ಲೋಸ್ ಆಗಿರುವ ಫೋಟೋವೊಂದು ಒಂದೆರಡು ವಾರಗಳ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ಈ ಬಗ್ಗೆ ಸುಕೇಶ್ ಚಂದ್ರಶೇಖರ್ ವಕೀಲರಿಗೆ ಪತ್ರ ಬರೆಯುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
200 ಕೋಟಿ ವಂಚನೆ ಪ್ರಕರಣದಲ್ಲಿ ಸುಕೇಶ್ ಚಂದ್ರಶೇಖರ್ ಜೊತೆ ಜಾಕ್ವೆಲಿನ್ ಹೆಸರು ಕೇಳಿ ಬಂದಾಗಲಿಂದ ಇವರಿಬ್ಬರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಸದ್ಯ ಈ ಕುರಿತಂತೆ ಸುಕೇಶ್ ತಮ್ಮ ಖಾಸಗಿತನಕ್ಕೆ ಧಕ್ಕೆ ಉಂಟಾಗುತ್ತಿದೆ ಎಂದು ತಿಳಿಸುವ ಮೂಲಕ ವಕೀಲರಿಗೆ ಪತ್ರ ಬರೆದಿದ್ದಾರೆ. ಅಲ್ಲದೇ ಜಾಕ್ವೆಲಿನ್ ಜೊತೆಗೆ ರಿಲೇಶನ್ ಶಿಪ್‍ನಲ್ಲಿದ್ದು, ಆಕೆಗೆ ಪ್ರೀತಿಯಿಂದ ಉಡುಗೊರೆಗಳನ್ನು ನೀಡಲಾಗಿದೆ ಎಂದು ಸುಕೇಶ್ ಪತ್ರದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಶಕ್ತಿಧಾಮದ ಮಕ್ಕಳ ಜೊತೆ ಪ್ರವಾಸಕ್ಕೆ ಬಂದ ನಟ ಶಿವಣ್ಣ
ಕಳೆದ ವಾರ ವೈರಲ್ ಆದ ಫೋಟೋಗಳ ಬಗ್ಗೆ ನನಗೆ ತಿಳಿಯಿತು. ಇದು ನಿಜವಾಗಿಯೂ ದುಃಖ ಹಾಗೂ ಗೊಂದಲದ ಸಂಗತಿಯಾಗಿದೆ. ಇದು ಒಬ್ಬರ ಖಾಸಗಿತನ ಹಾಗೂ ವೈಯಕ್ತಿಕತೆಗೆ ಧಕ್ಕೆ ಉಂಟಾಗಿದೆ. ನಾನು ಮತ್ತು ಜಾಕ್ವೆಲಿನ್ ರಿಲೇಶನ್ ಶಿಪ್‍ನಲ್ಲಿದ್ದೇವೆ ಎಂದು ನಾನು ಮೊದಲಿನಿಂದಲೂ ಹೇಳುತ್ತಿದ್ದೇನೆ. ಒಬ್ಬರನ್ನೊಬ್ಬರು ಭೇಟಿಯಾಗುವುದು ಮತ್ತು ನಮ್ಮ ಸಂಬಂಧ ಯಾವುದೇ ರೀತಿಯ ಪ್ರಯೋಜನದ ಮೇಲೆ ಆಧರಿತವಾಗಿಲ್ಲ. ಆದರೆ ಕೆಟ್ಟ ರೀತಿ ಕಾಮೆಂಟ್ ಮತ್ತು ಟ್ರೋಲ್ ಮಾಡಲಾಗುತ್ತಿದೆ. ನಮ್ಮ ಪ್ರೀತಿಯು ಯಾವುದೇ ನಿರೀಕ್ಷೆಗಳ ಅವಲಂಬಿತವಾಗದೇ ಪ್ರೀತಿ ಹಾಗೂ ಗೌರವದ ಮೇಲೆ ಆಧಾರಿತವಾಗಿದೆ. ಏನನ್ನು ಅಪೇಕ್ಷಿಸದೇ ಪ್ರೀತಿಸಿದ ಅವಳನ್ನು ಕೆಟ್ಟ ರೀತಿಯಲ್ಲಿ ಬಿಂಬಿಸುವುದನ್ನು ದಯವಿಟ್ಟು ನಿಲ್ಲಿಸಿ ಎಂದು ಎಲ್ಲರಿಗೂ ವಿನಂತಿಸುತ್ತೇನೆ. ನಡೆದಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೂ ಆಕೆಗೂ ಯಾವುದೇ ಸಂಬಂಧವಿಲ್ಲ ಎಂದು ಮೊದಲೇ ತಿಳಿಸಿದ್ದೇನೆ ಎಂದಿದ್ದಾರೆ.
ನಾನು ಜಾಕ್ವೆಲಿನ್‍ಗೆ ಗಿಫ್ಟ್‌ಗಳನ್ನು ನೀಡಿದ್ದೇನೆ ಮತ್ತು ಅವಳ ಕುಟುಂಬಕ್ಕೆ ಸಹಾಯ ಮಾಡಿದ್ದೇನೆ. ರಿಲೇಶನ್ ಶಿಪ್‍ನಲ್ಲಿ ಪ್ರೀತಿ ಪಾತ್ರರಿಗೆ ಏನಾದರೂ ನೀಡುವುದು ಸಾಮಾನ್ಯ. ಆದರೆ ವೈಯಕ್ತಿಕವಾಗಿ ದೊಡ್ಡ ವ್ಯವಹಾರದಲ್ಲಿ ಅವರ ಹೆಸರನ್ನು ಏಕೆ ತರುತ್ತಿದ್ದೀರಾ ಎಂದು ನನಗೆ ಅರ್ಥವಾಗುತ್ತಿಲ್ಲ. ಎಲ್ಲವೂ ಕಾನೂನಿನ ಪ್ರಕಾರ ನಡೆಯುತ್ತಿದೆ ಮತ್ತು ಶೀಘ್ರವೇ ನ್ಯಾಯಾಲಯದಲ್ಲಿ ಸಾಬೀತಾಗಲಿದೆ.
ಕೊಪ್ಪಳ: ಗುತ್ತಿಗೆದಾರರ ಜೀವ ಉಳಿಸುವಂತೆ ಪ್ರಧಾನಿಗೆ ಕೊಪ್ಪಳ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆಯೊಬ್ಬರು ಪತ್ರ ಬರೆದಿದ್ದಾರೆ.
ಪ್ರೌಢಶಾಲಾ ಕಟ್ಟಡ ಕಾಮಗಾರಿಯನ್ನು ನಿಗದಿತ ವೇಳೆಗೆ ಪೂರ್ಣಗೊಳಿಸಿದರೂ ಶಿಕ್ಷಣ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆಯು, ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರಿಗೆ ಹಣ ಪಾವತಿಸದೇ ಸತಾಯಿಸುತ್ತಿದೆ ಎಂದು ಹುಲಿಹೈದರ್ ಕ್ಷೇತ್ರದ ಮಾಜಿ ಸದಸ್ಯೆ ಶಾಂತಾ ರಮೇಶ್ ನಾಯಕ್ ಪ್ರಧಾನ ಮಂತ್ರಿಗೆ ಪತ್ರ ಬರೆದಿದ್ದಾರೆ. ಇದನ್ನೂ ಓದಿ: 4 ಲಕ್ಷ ರೂ.ಮೌಲ್ಯದ ಪಡಿತರ ಅಕ್ಕಿ ಅಕ್ರಮ ಸಂಗ್ರಹ
2018-19ನೇ ಸಾಲಿನ ಅನುದಾನದಡಿ ಜಿಲ್ಲೆಯ ವಿವಿಧೆಡೆ ಪ್ರೌಢಶಾಲಾ ಕಟ್ಟಡಗಳ ನಿರ್ಮಾಣದ ಟೆಂಡರ್ ಪಡೆದ ಗುತ್ತಿಗೆದಾರರು ಕಾಮಗಾರಿ ಮುಗಿಸಿ ಎರಡು ವರ್ಷಗಳಾದರೂ ಶಿಕ್ಷಣ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆ ಕೋಟಿಗಟ್ಟಲೇ ಹಣ ಬಾಕಿ ಉಳಿಸಿಕೊಂಡಿದೆ.
ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರು ಇಲಾಖೆಗೆ ಸಾಕಷ್ಟು ಬಾರಿ ಅಲೆದಾಡಿದರೂ ಅವರಿಗೆ ಸೇರಬೇಕಾದ ಅರ್ಧದಷ್ಟು ಹಣವನ್ನೂ ನೀಡದೇ ಸತಾಯಿಸುತ್ತಿದೆ. ಆರ್ಥಿಕ ಸಂಕಷ್ಟದಲ್ಲಿರುವ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬಂದೊದಗಿದ್ದು, ಕೂಡಲೇ ಶಿಕ್ಷಣ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆಗೆ ಬಾಕಿ ಹಣ ನೀಡುವಂತೆ ಆದೇಶಿಸಬೇಕೆಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ಸಲ್ಲಿ ದಲಿತ ಸಿಎಂಗೆ ಸಿದ್ದು ಅಡ್ಡಿನಾ..?- ಪರಂ ಹೇಳಿಕೆ ಪ್ರಸ್ತಾಪಿಸಿ ಬಿಜೆಪಿ ತಿರುಗೇಟು
ಚಂಡೀಗಢ: ಗುರು ರವಿದಾಸ್ ಜಯಂತಿ ಇರುವುದರಿಂದ ಫೆಬ್ರವರಿ 14ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ಆರು ದಿನಗಳ ಕಾಲ ಮುಂದೂಡುವಂತೆ ಚುನಾವಣಾ ಆಯೋಗಕ್ಕೆ ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಮನವಿ ಮಾಡಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಅವರಿಗೆ ಪತ್ರ ಬರೆದಿರುವ ಪಂಜಾಬ್ ಸಿಎಂ, ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ.32 ರಷ್ಟು ಇರುವ ಪರಿಶಿಷ್ಟ ಜಾತಿ ಸಮುದಾಯದ ಕೆಲವು ಪ್ರತಿನಿಧಿಗಳು, ಗುರು ರವಿದಾಸ್ ಅವರ ಜನ್ಮದಿನ ಫೆಬ್ರವರಿಯಲ್ಲೇ ನಡೆಯಲಿದೆ ಎಂದು ನನ್ನ ಗಮನಕ್ಕೆ ತಂದಿದ್ದಾರೆ. ಹೀಗಾಗಿ ಚುನಾವಣೆಯನ್ನು ಮುಂದೂಡಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಮಿಸ್ ಬಿಕಿನಿ ಇಂಡಿಯಾ ಅರ್ಚನಾ ಕಾಂಗ್ರೆಸ್‍ನಿಂದ ಚುನಾವಣಾ ಅಭ್ಯರ್ಥಿ- ರಾಜಕೀಯಕ್ಕೆ ನನ್ನ ವೃತ್ತಿ ಬೆಸೆಯಬೇಡಿ
ಗುರು ರವಿದಾಸ್ ಅವರ ಜಯಂತಿ ಹಿನ್ನೆಲೆಯಲ್ಲಿ ಪರಿಶಿಷ್ಟ ಸಮುದಾಯದ ಲಕ್ಷಾಂತರ ಜನರು ಉತ್ತರ ಪ್ರದೇಶದ ಬನಾರಸ್‌ಗೆ ಫೆಬ್ರವರಿ 10ರಿಂದ 16ರವರೆಗೆ ಭೇಟಿ ನೀಡುವ ಸಾಧ್ಯತೆ ಇದೆ. ಇಂತಹ ಪರಿಸ್ಥಿತಿಯಲ್ಲಿ ಈ ಸಮುದಾಯದ ಅನೇಕ ಜನರು ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಮತ ಚಲಾಯಿಸಲು ಸಾಧ್ಯವಾಗುವುದಿಲ್ಲ. ಮತದಾನ ಅವರ ಸಂವಿಧಾನಬದ್ಧ ಹಕ್ಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಫೆಬ್ರವರಿ 10ರಿಂದ 16ರವರೆಗೆ ಬನಾರಸ್‌ಗೆ ಭೇಟಿ ನೀಡಲು ಮತ್ತು ವಿಧಾನಸಭಾ ಚುನಾವಣೆಯಲ್ಲಿ ಭಾಗವಹಿಸಲು ಸಾಧ್ಯವಾಗುವ ರೀತಿಯಲ್ಲಿ ಮತದಾನದ ದಿನಾಂಕವನ್ನು ವಿಸ್ತರಿಸಬಹುದು ಎಂದು ಸಮುದಾಯದ ಪ್ರತಿನಿಧಿಗಳು ಮನವಿ ಮಾಡಿದ್ದಾರೆಂದು ಸಿಎಂ ತಿಳಿಸಿದ್ದಾರೆ. ಇದನ್ನೂ ಓದಿ: ಅಯೋಧ್ಯೆ ಅಲ್ಲ, ಗೋರಖ್‌ಪುರ ಕ್ಷೇತ್ರದಿಂದ ಯೋಗಿ ಆದಿತ್ಯನಾಥ್ ಸ್ಪರ್ಧೆ
2022ರ ಪಂಜಾಬ್ ವಿಧಾನಸಭಾ ಚುನಾವಣೆಯ ಮತದಾನದ ದಿನಾಂಕವನ್ನು ಕನಿಷ್ಠ 6 ದಿನಗಳವರೆಗೆ ಮುಂದೂಡಿ ಫೆ.20ಕ್ಕೆ ನಿಗದಿಪಡಿಸಬಹುದು. ಆ ಮೂಲಕ ಸುಮಾರು 20 ಲಕ್ಷ ಜನತೆ ಮತದಾನ ಮಾಡಲು ಅನುವು ಮಾಡಿಕೊಡುವುದು ನ್ಯಾಯಯುತ ಮತ್ತು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪಂಜಾಬ್‌ನ 117 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಫೆ.14ರಂದು ಮತದಾನ ನಡೆಯಲಿದೆ. ಮಾ.10 ರಂದು ಫಲಿತಾಂಶ ಹೊರಬೀಳಲಿದೆ ಎಂದು ಚುನಾವಣಾ ಆಯೋಗ ಘೋಷಿಸಿತ್ತು.