Tag: letter

  • ಕಾರ್ಯಕ್ರಮದಲ್ಲಿ ದೀಪಿಕಾ ಕಣ್ಣೀರು ಒರೆಸಿದ ಬಾದ್ ಶಾ

    ಕಾರ್ಯಕ್ರಮದಲ್ಲಿ ದೀಪಿಕಾ ಕಣ್ಣೀರು ಒರೆಸಿದ ಬಾದ್ ಶಾ

    ಮುಂಬೈ: ಬಾಲಿವುಡ್ ಬಾದ್‍ ಶಾ ಶಾರೂಖ್ ಖಾನ್ ರನ್ನ ಜೆಂಟಲ್‍ ಮ್ಯಾನ್ ಅಂತ ಸುಮ್ಮನೆ ಕರೆಯಲ್ಲ. ತಮ್ಮ ಜೊತೆಯಲ್ಲಿರುವ ಮಹಿಳೆಯರನ್ನ ಆರಾಮಾಗಿ ಆಗಿ ಇರುವಂತೆ ನೋಡಿಕೊಳ್ಳೋದು ಶಾರೂಖ್‍ ಗೆ ಗೊತ್ತು. ತಮ್ಮ ಸಹ-ನಟರಿಗೆ ಅವರು ಒಳ್ಳೆಯ ಮಾರ್ಗದರ್ಶಕರಾಗಿತ್ತಾರೆ ಅನ್ನೋದನ್ನ ನಿರೂಪಿಸಿದ್ದಾರೆ.

    ಲಕ್ಸ್ ಗೋಲ್ಡನ್ ದೀವಾಸ್ ಅರ್ಪಿಸುವ ಬಾತೇ ವಿತ್ ಬಾದ್‍ಶಾ ರಿಯಾಲಿಟಿ ಶೋನಲ್ಲಿ ದೀಪಿಕಾ ಪಡುಕೋಣೆ ಕಣ್ಣೀರು ಹಾಕಿದ್ದಾರೆ. ತನ್ನ ತಾಯಿ ಉಜಾಲಾ ಬಗ್ಗೆ ಮಾತಾಡುವ ವೇಳೆ ಪದ್ಮಾವತಿ ಚಿತ್ರದ ನಾಯಕಿಯ ಕಣ್ಣಂಚಲ್ಲಿ ನೀರು ಬಂದಿದ್ದು, ಶೋ ನಡೆಸಿಕೊಡ್ತಿದ್ದ ಶಾರುಖ್ ಖಾನ್ ಎದ್ದು ಬಂದು ಡಿಪ್ಪಿಗೆ ಕಣ್ಣೀರು ಒರೆಸಿದ್ರು.

    ದೀಪಿಕಾ ಪಡುಕೋಣೆ ಅವರ ತಾಯಿ ಉಜಾಲಾ ಪಡುಕೋಣೆ ದೀಪಿಕಾ ಅವರ ಯಶಿಸ್ಸಿನ ಕುರಿತು ಪತ್ರ ಬರೆದಿದ್ದರು. ಶಾರೂಖ್ ಆ ಪತ್ರವನ್ನು ಕಾರ್ಯಕ್ರಮದಲ್ಲಿ ಎಲ್ಲರ ಮುಂದೆ ಓದಿದ್ದರು. ನೀನು ನಿನ್ನ ವೃತ್ತಿ ಜೀವನದಲ್ಲಿ ಸಾಕಷ್ಟು ಸಾಧನೆ ಮಾಡಿದ್ದೀಯ. ನಿನ್ನ ಬಗ್ಗೆ ನನಗೆ ತುಂಬ ಹೆಮ್ಮೆಯಾಗುತ್ತೆ. ನೀನು ನಿನ್ನ ವೃತ್ತಿ ಜೀವನ ಹಾಗೂ ವೈಯಕ್ತಿಕ ಜೀವನವನ್ನು ಸರಿಯಾಗಿ ನಡೆಸಿಕೊಂಡು ಹೋಗುತ್ತಿದ್ದೀಯ ಎಂದು ದೀಪಿಕಾ ಅವರ ತಾಯಿ ಪತ್ರದಲ್ಲಿ ಬರೆದಿದ್ದರು. ಇದನ್ನು ಕೇಳಿದ ದೀಪಿಕಾ ಅಳಲಾರಂಭಿಸಿದ್ದರು. ಅವರು ಕಣ್ಣಿನಿಂದ ನೀರು ಬಂದ ತಕ್ಷಣ ಶಾರೂಖ್ ಅವರ ಕಣ್ಣಿರನ್ನು ಒರೆಸಿ ಆಕೆಯನ್ನು ಸಮಾಧಾನ ಮಾಡಿದ್ರು.

    * ^^ OMG!! ????❤️ . #DeepikaPadukone

    A post shared by Deepika Padukone ♡ (@deepikaworldwide) on

    ದೀಪಿಕಾ ಬಾಲಿವುಡ್‍ ನಲ್ಲಿ ತಮ್ಮ ವೃತ್ತಿ ಜೀವನವನ್ನು ಶಾರೂಖ್ ಜೊತೆ ಆರಂಭಿಸಿದ್ದರು. 2007 ರಲ್ಲಿ ತೆರೆಕಂಡ ಓಂ ಶಾಂತಿ ಓಂ ಚಿತ್ರದಲ್ಲಿ ಮೊದಲ ಬಾರಿಗೆ ಶಾರೂಖ್ ಗೆ ನಾಯಕಿಯಾಗಿ ದೀಪಿಕಾ ಕಾಣಿಸಿಕೊಂಡಿದ್ದರು. ನಂತರ ಚನ್ನೈ ಎಕ್ಸ್ ಪ್ರೆಸ್ ಹಾಗೂ ಹ್ಯಾಪಿ ನ್ಯೂ ಇಯರ್ ಸಿನಿಮಾದಲ್ಲಿ ಶಾರೂಖ್ ಜೊತೆ ನಟಿಸಿದ್ದರು.

    ಸದ್ಯ ದೀಪಿಕಾ ಪಡುಕೋಣೆ ಪದ್ಮಾವತಿ ಸಿನಿಮಾದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ದೀಪಿಕಾ ರಾಣಿ ಪದ್ಮಾವತಿಯಾಗಿ ಕಾಣಿಸಿಕೊಂಡಿದ್ದು, ಶಾಹಿದ್ ಕಪೂರ್ ರಾಣಾ ರತನ್ ಸಿಂಗ್ ಆಗಿ ನಟಿಸಿದ್ದಾರೆ. ಅಲ್ಲಾವುದ್ದೀನ್ ಖಿಲ್ಜಿ ಆಗಿ ನಟ ರಣ್‍ವೀರ್ ಸಿಂಗ್ ನಟಿಸಿದ್ದಾರೆ.

    * ^^ ????❤️ . #DeepikaPadukone

    A post shared by Deepika Padukone ♡ (@deepikaworldwide) on

    * ^^ 2/2 @iamsrk reads a letter from @deepikapadukone’s mother ❤️????????

    A post shared by Deepika Padukone ♡ (@deepikaworldwide) on

    * ^^ 2/2 @iamsrk reads a letter from @deepikapadukone’s mother ❤️????

    A post shared by Deepika Padukone ♡ (@deepikaworldwide) on

    * ^^ ????❤️ . #DeepikaPadukone

    A post shared by Deepika Padukone ♡ (@deepikaworldwide) on

    * ^^ 2/2 @iamsrk reads a letter from @deepikapadukone’s mother ❤️????

    A post shared by Deepika Padukone ♡ (@deepikaworldwide) on

    * ^^ 2/2 @iamsrk reads a letter from @deepikapadukone’s mother ❤️????????

    A post shared by Deepika Padukone ♡ (@deepikaworldwide) on

    * ^^ Video: teamdeepikamySanjay Leela Bhansali’s letter to @deepikapadukone ❤️????

    A post shared by Deepika Padukone ♡ (@deepikaworldwide) on

    * ^^ ShahRukh Khan reads a letter from Deepika’s mother ????❤️???????? . Deepika’s mother says that Deepika was a tomboy when she was a kid. She used to beat boys and spill food in restaurants but she was determined that she will play badminton since she was a child. Her parents supported her dream of becoming an actress and was wdecision about settling in Mumbai but was sure that she will definitely succeed in this. Deepika has a pure heart and if by mistake she hurts someone she won’t sleep until and unless she apologised to that person. Her mother also mentions that whatever she did, she did it on her own and single- handedly succeeded in her career and fulfilled her dreams of becoming an inspiration. She has also build up her own house along with her career and she was, is and will always be determined . #DeepikaPadukone

    A post shared by Deepika Padukone ♡ (@deepikaworldwide) on

  • ಚುನಾವಣೆಗೆ ಸ್ಪರ್ಧಿಸೋ ಆಸೆ ವ್ಯಕ್ತಪಡಿಸಿದ ಬಸವಾನಂದ ಸ್ವಾಮೀಜಿ: ಅಮಿತ್ ಶಾಗೆ ಬರೆದ ಪತ್ರದಲ್ಲಿ ಏನಿದೆ?

    ಚುನಾವಣೆಗೆ ಸ್ಪರ್ಧಿಸೋ ಆಸೆ ವ್ಯಕ್ತಪಡಿಸಿದ ಬಸವಾನಂದ ಸ್ವಾಮೀಜಿ: ಅಮಿತ್ ಶಾಗೆ ಬರೆದ ಪತ್ರದಲ್ಲಿ ಏನಿದೆ?

    ಧಾರವಾಡ: ಜಿಲ್ಲೆಯ ಮನಗುಂಡಿ ಶ್ರೀ ಬಸವಾನಂದ ಸ್ವಾಮೀಜಿ ಯವರು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಅವರಿಗೂ ಪತ್ರವನ್ನು ಬರೆದಿದ್ದಾರೆ.

    ಧಾರವಾಡ ತಾಲೂಕಿನ ಮನಗುಂಡಿಯಲ್ಲಿ ಶ್ರೀ ಗುರು ಬಸವ ಮಹಾಮನೆ ಆಶ್ರಮ ಹೊಂದಿರುವ ಶ್ರೀ ಬಸವಾನಂದ ಸ್ವಾಮೀಜಿ, ತನಗೆ ದೃಷ್ಟಿ ಇಲ್ಲದೇ ಇದ್ದರೂ ಕಲಘಟಗಿ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸುವ ಇಚ್ಛೆ ಹೊಂದಿದ್ದೇನೆ ಎಂದು ಅಮಿತ್ ಶಾಗೆ ಪತ್ರವನ್ನು ಬರೆದಿದ್ದಾರೆ.

    ಸ್ವಾಮೀಜಿಗಳು ಬರೆದಿರುವ ಮೂರು ಪುಟಗಳ ಸುದೀರ್ಘ ಪತ್ರದಲ್ಲಿ ಇತ್ತೀಚೆಗೆ ಉತ್ತರ ಪ್ರದೇಶದ ರಾಜಕೀಯದಲ್ಲಾಗಿರುವ ಬದಲಾವಣೆಗಳನ್ನು ಪ್ರಸ್ತಾಪಿಸಿದ್ದಾರೆ. ಅಲ್ಲದೇ ಕರ್ನಾಟಕದಲ್ಲಿ ನಡೆಯುವ ಮುಂದಿನ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಸಂಬಂಧಿಸಿದಂತೆ ಕೆಲ ಸಲಹೆಗಳನ್ನು ನೀಡಿದ್ದಾರೆ.

    ಸಲಹೆ ಏನು?
    ಅಭ್ಯರ್ಥಿಗಳಿಗೆ ಟಿಕೆಟ್ ಕೊಡುವ ಮುಂಚೆ ಆಕಾಂಕ್ಷಿಗಳಿಗೆ ಒಂದು ಪರೀಕ್ಷೆ ನಡೆಸಬೇಕು. ಆ ಪರೀಕ್ಷೆಗೆ ತಲಾ ಒಂದು ಲಕ್ಷ ರೂಪಾಯಿ ಶುಲ್ಕ ವಿಧಿಸಬೇಕು. ಅದಕ್ಕಾಗಿಯೇ ಒಂದು ಪರೀಕ್ಷಾ ಸಮಿತಿ ರಚಿಸಬೇಕು. ದೇಶಭಕ್ತಿ, ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರದ ವಿದ್ಯಮಾನಗಳಿಗೆ ಸಂಬಂಧಿಸಿದ ಅರಿವು ಸೇರಿದಂತೆ ಬಿಜೆಪಿ ಪಕ್ಷವು ನಡೆದು ಬಂದ ದಾರಿ ಹಾಗೂ ಪ್ರಾದೇಶಿಕ ವಿಷಯಗಳ ಕುರಿತು ಪ್ರಶ್ನೆಗಳಿರಬೇಕು.

    ಪರೀಕ್ಷೆ ನಡೆಸುವ ಕಾರಣ ಒಂದು ಪುಸ್ತಕ ಪ್ರಕಟಿಸುವುದು ಸೂಕ್ತ. ಈ ರೀತಿ ಮಾಡುವುದರಿಂದ 224 ಕ್ಷೇತ್ರಗಳಿಗೆ ಏನಿಲ್ಲವಾದರೂ ಸಾವಿರದ ಐನೂರಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆ ಬರೆಯಬಹುದು. ಇದರಿಂದ ಪಕ್ಷದ ಖಜಾನೆಗೂ 15 ರಿಂದ 20 ಕೋಟಿ ರೂ. ಸಂಗ್ರಹವಾಗುತ್ತದೆ. ಅಲ್ಲದೇ ಒಳ್ಳೆಯ ಅಭ್ಯರ್ಥಿಗಳು ಸಹ ಕಣದಲ್ಲಿರುತ್ತಾರೆ ಎಂದು ಸ್ವಾಮೀಜಿ ಅಮಿತ್ ಶಾ ಅವರಿಗೆ ಸಲಹೆ ನೀಡಿದ್ದಾರೆ.

     

  • ಪ್ರಧಾನಿ ಮೊರೆ ಹೋದ ಗ್ಯಾಂಗ್‍ರೇಪ್ ಅಪ್ರಾಪ್ತೆ

    ಪ್ರಧಾನಿ ಮೊರೆ ಹೋದ ಗ್ಯಾಂಗ್‍ರೇಪ್ ಅಪ್ರಾಪ್ತೆ

    ಸೋನಿಪತ್: ಶಾಲಾ ಬಾಲಕಿಯೊಬ್ಬಳು ತನ್ನ ಮೇಲೆ ಆಗಿರುವ ಲೈಂಗಿಕ ದೌರ್ಜನ್ಯವನ್ನು ವಿವರಿಸಿ, ತನ್ನನ್ನು ರಕ್ಷಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಮನವಿ ಸಲ್ಲಿಸಿದ್ದಾಳೆ.

    ನನ್ನ ಮೇಲೆ ಇಬ್ಬರು ಶಾಲಾ ಸಿಬ್ಬಂದಿ ಅತ್ಯಾಚಾರ ಎಸಗಿದ್ದಾರೆ. ಅಷ್ಟೇ ಅಲ್ಲದೇ ಅತ್ಯಾಚಾರ ಮಾಡುವ ಮೊದಲು ಬಲವಂತವಾಗಿ ಬ್ಲೂ ಫಿಲ್ಮ್ ತೋರಿಸಿರುವುದಾಗಿ ಅಪ್ರಾಪ್ತೆ ಪತ್ರದಲ್ಲಿ ತಿಳಿಸಿದ್ದಾಳೆ.

    ಅತ್ಯಾಚಾರಿಗಳನ್ನು ಕರಾಂಬೀರ್ ಮತ್ತು ಸುಖ್ಬೀರ್ ಎಂದು ಗುರುತಿಸಲಾಗಿದ್ದು. ಇವರು ಶಾಲೆಯ ಭೋದನೇತರ ಸಿಬ್ಬಂದಿ ಎಂದು ತಿಳಿದುಬಂದಿದೆ ಎಂದು ಹರಿಯಾಣದ ಪೊಲೀಸ್ ಅಧಿಕಾರಿ ಮುಖೇಶ್ ಜಾಖಡ್ ತಿಳಿಸಿದ್ದಾರೆ.

    ಬಾಲಕಿಯು ಮೋದಿಯವರಿಗೆ ಇ-ಮೇಲ್ ಮಾಡುವ ಮೂಲಕ ತನ್ನ ಮೇಲೆ ಅತ್ಯಾಚಾರ ಮಾಡಿದವರ ಬಗ್ಗೆ ಮಾಹಿತಿ ನೀಡಿದ್ದಾಳೆ. ಈ ಮೇಲ್ ಆಧಾರಿಸಿ ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿರುವುದಾಗಿ ಮುಖೇಶ್ ಹೇಳಿದರು. ಅಲ್ಲದೆ ಶಾಲೆಯ ಇತರೆ ಸಿಬ್ಬಂದಿ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರ ಎಂದು ತನಿಖೆ ನಡೆಸುತ್ತಿರುವುದಾಗಿ ತಿಳಿಸಿದರು.

    ಅತ್ಯಾಚಾರಕ್ಕೆ ಒಳಗಾಗಿರುವ ಬಾಲಕಿಯ ಪೋಷಕರು ಶಾಲೆಗೆ ಈ ಕುರಿತು ಯಾವುದೇ ಮಾಹಿತಿಯನ್ನು ನೀಡಿಲ್ಲ ಹಾಗೂ ದೂರನ್ನು ದಾಖಲಿಸಿಲ್ಲ. ನಾವು ದೂರನ್ನು ನೀಡಲು ತಿಳಿಸಿದ್ದೇವೆ ಎಂದರು.

    ಶಾಲೆಯ ಆಡಳಿತ ಮಂಡಳಿ ಈ ಪ್ರಕರಣವನ್ನು ನಿರಾಕರಿಸಿದೆ. ಮೂಲಗಳ ಪ್ರಕಾರ, ಬಾಲಕಿ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಅವರಿಗೂ ಇ-ಮೇಲ್ ಮಾಡಿದ್ದಾಳೆ ಎಂದು ತಿಳಿದು ಬಂದಿದೆ.

  • ಗಂಡನನ್ನು ಕೊಂದು ನನ್ನ ವಿಧವೆ ಮಾಡು, ವಾಟ್ಸಪ್ uninstall ಮಾಡ್ತೀನಿ ಅತ್ತೆಮಗಳ ಬಗ್ಗೆ ಯೋಚಿಸಲ್ಲ- ಬನಶಂಕರಿದೇವಿಗೆ ಭಕ್ತರ ವಿಚಿತ್ರ ಪತ್ರ

    ಗಂಡನನ್ನು ಕೊಂದು ನನ್ನ ವಿಧವೆ ಮಾಡು, ವಾಟ್ಸಪ್ uninstall ಮಾಡ್ತೀನಿ ಅತ್ತೆಮಗಳ ಬಗ್ಗೆ ಯೋಚಿಸಲ್ಲ- ಬನಶಂಕರಿದೇವಿಗೆ ಭಕ್ತರ ವಿಚಿತ್ರ ಪತ್ರ

    ಬೆಂಗಳೂರು: ನಗರದ ಬನಶಂಕರಿ ದೇವಿ ದೇವಸ್ಥಾನದಲ್ಲಿ ಭಕ್ತರ ವಿಚಿತ್ರ ಬೇಡಿಕೆಯ ಪತ್ರಗಳು ಸಿಕ್ಕಿವೆ.

    ಮಾಂಗಲ್ಯ ಉಳಿಸಲು ದೇವಿಗೆ ಹರಕೆ ನೀಡುತ್ತಾರೆ. ಆದ್ರೇ ಇಲ್ಲೊಬ್ಬ ಭಕ್ತೆ ನನ್ನ ಗಂಡನನ್ನು ಕೊಲ್ಲಮ್ಮ. ನನ್ನ ವಿಧವೆ ಮಾಡು ಅಂತಾ ಪತ್ರ ಬರೆದು ದೇವಿ ಹುಂಡಿಗೆ ಹಾಕಿದ್ದಾರೆ. ನನ್ನನ್ನು ರಕ್ಷಿಸಿ, ನನ್ನ ಗಂಡನನ್ನು ಕೊಂದು ಹಾಕು. ಆತನ ಅಹಂಕಾರ ಹುಟ್ಟಡಗಿಸು ಅಂತಾ ಪತ್ರದಲ್ಲಿ ಬರೆಯಲಾಗಿದೆ.

    ಇನ್ನೋರ್ವ ಯುವಕ ನಾನಿನ್ನು ವಾಟ್ಸಾಪ್ ಅನ್ ಇನ್ಸ್ಟಾಲ್ ಮಾಡಿಕೊಳ್ಳುತ್ತೇನೆ. ಅತ್ತೆ ಮಗಳು ಸೌಂದರ್ಯ ಹಾಗೂ ಸೌಮ್ಯ ಜೊತೆ ಚಾಟ್ ಮಾಡಲ್ಲ. ಕೆಟ್ಟ ವಿಡಿಯೋ ನೋಡಲ್ಲ. ಒಬ್ಬನೇ ಪಾನಿಪುರಿ ಕಾಫಿ-ಟೀ ಕುಡಿಯಲ್ಲ. ಇದಕ್ಕೆಲ್ಲ ನಂಗೆ ಶಕ್ತಿ ಕೊಡು ಅಂತಾ ಪತ್ರ ಬರೆದಿದ್ದಾರೆ. ಹೀಗೆ ದೇವಿಗೆ ಸಾಕಷ್ಟು ಜನ ಚಿತ್ರ ವಿಚಿತ್ರ ಬೇಡಿಕೆಯ ಪತ್ರ ಬರೆದಿದ್ದಾರೆ. ಪತ್ರ ನೋಡಿ ಮುಜರಾಯಿ ಇಲಾಖೆ ಅಧಿಕಾರಿಗಳು ದಂಗಾಗಿದ್ದಾರೆ.

    ಮಹಿಳೆಯ ಪತ್ರದಲ್ಲಿ ಏನಿದೆ?: ನನ್ನ ವಿಧವೆ ಮಾಡು. ನನ್ನ ಗಂಡನ ಅಹಂಕಾರವನ್ನು ಅಡಗಿಸು. ನನ್ನ ಗಂಡ ಸತ್ತರೆ ಸಾಕು. ನಾನು ವಿಧವೆ ಆದರೆ ಸಾಕು. ನನ್ನ ಮಗನನ್ನು, ನನ್ನನ್ನು ನೆಮ್ಮದಿಯಾಗಿಡು ತಾಯಿ. ನನ್ನ ಗಂಡನ ಅಹಂಕಾರವನ್ನು ತುಳಿದು ಹಾಕು. ನನ್ನ ಗಂಡನ ಅಟ್ಟಹಾಸಕ್ಕೆ ಮಟ್ಟ ಹಾಕು ತಾಯಿ. ತಾಯಿ ಬನಶಂಕರಿ ದೇವಿ ನನ್ನ ಮನಸ್ಸಿನಲ್ಲಿರುವ ಇಷ್ಟಾರ್ಥಗಳನ್ನು ನೆರವೇರಿಸು ದೇವಿ. ನನ್ನ ಮಗನಿಗೆ ಒಳ್ಳೆಯ ವಿದ್ಯೆ, ಬುದ್ಧಿ, ಸಕಲ ಸಂತೋಷ, ಸಂಪತ್ತು, ದೀರ್ಘಾಯುಷ್ಯ, ಅಷ್ಟೈಶ್ವರ್ಯಗಳನ್ನು ದಯಪಾಲಿಸು ದೇವಿ. ನನ್ನನ್ನು ನೀನೇ ರಕ್ಷಿಸಬೇಕು. ನನ್ನ ಗಂಡನಿಗೆ ಸಾವು ಕೊಡು. ಬನಶಂಕರಿ ಅಮ್ಮ ನನ್ನ ಮಗ ಆರ್.ಪರೀಕ್ಷಿತ್ ಎಂಜಿನಿಯರ್ ಫಸ್ಟ್ ಸೆಮ್ ಎಲೆಕ್ಟ್ರಿಕಲ್ ಸಬ್ಜೆಕ್ಟ್ ರಿವ್ಯಾಲ್ಯುವೇಷನ್‍ಗೆ ಹಾಕಿದ್ದಾನೆ. ಅಮ್ಮ ನಿನಗೆ ಅಸಾಧ್ಯವಾದುದು ಯಾವುದೂ ಈ ಪ್ರಪಂಚದಲ್ಲಿ ಇಲ್ಲ. ನಿನ್ನ ಕಾಲಿಗೆ ಬಿದ್ದು ಬೇಡಿಕೊಳ್ಳುವೆ ತಾಯಿ. ರಿವ್ಯಾಲ್ಯುವೇಷನ್‍ನಲ್ಲಿ ನನ್ನ ಮಗ ಪಾಸ್ ಅಂತ ಇನ್ನು 12 ದಿನದೊಳಗೆ ಮೊಬೈಲ್‍ಗೆ ಮೆಸೇಜ್ ಬರುವ ಹಾಗೆ ಮಾಡವ್ವ. ನನ್ನ ಮಗನ ಕೈ ಬಿಡಬೇಡ ತಾಯಿ ನೀನೇ ಗತಿ.

  • ಸಿಎಂಗೆ ಆಸೆ ಹುಟ್ಟಿಸಿದ ಯುವಕನ ಕನಸು- ನಿಧಿ ಹುಡುಕುವಂತೆ ಸರ್ಕಾರದ ಆದೇಶ

    ಸಿಎಂಗೆ ಆಸೆ ಹುಟ್ಟಿಸಿದ ಯುವಕನ ಕನಸು- ನಿಧಿ ಹುಡುಕುವಂತೆ ಸರ್ಕಾರದ ಆದೇಶ

    ಬೆಂಗಳೂರು: ಸಿಎಂ ಸಿದ್ದರಾಮಯ್ಯ ಸರ್ಕಾರ ನಿಗೂಢ ನಿಧಿ ಹಿಂದೆ ಬಿದ್ದಿದೆ. ಬಂಗಾರದ ನಾಣ್ಯ, ಬಂಗಾರ ಸೇರಿದಂತೆ ಅಪಾರ ಸಂಪತ್ತು ಸಿಗುತ್ತೆ ಎಂಬ ನಿರೀಕ್ಷೆಯಲ್ಲಿ ಸರ್ಕಾರ ಇದೆ. 29 ವರ್ಷದ ಯುವಕ ಹೇಳಿದ ಕನಸು ನಂಬಿ ಭೂಮಿ ಅಗೆಯಲು ಚಿಂತನೆ ನಡೆಸಿದೆ.

    ನನಗೆ ಕನಸು ಬಿದ್ದಿದೆ, ನನ್ನ ಕನಸಲ್ಲಿ ಅಪಾರ ಸಂಪತ್ತಿರುವ ಮಾಹಿತಿ ಸಿಕ್ಕಿದೆ. ಆ ರಹಸ್ಯ ಬಂಗಲೆಯಲ್ಲಿ ಶೋಧ ಕೈಗೊಂಡರೆ ಅಪಾರ ಪ್ರಮಾಣದ ನಿಧಿ ಸಿಗಲಿದೆ. ಆ ನಿಧಿಯನ್ನು ಈ ರಾಜ್ಯದ ಉದ್ಧಾರಕ್ಕೆ ಬಳಸಿಕೊಳ್ಳಬಹುದು ಎಂದು ತುಮಕೂರಿನ 29 ವರ್ಷದ ಪ್ರದ್ಯುಮ್ನ ಯಾದವ್ ಎಂಬ ವ್ಯಕ್ತಿ ಸಿಎಂಗೆ ಪತ್ರ ಬರೆದಿದ್ದಾರೆ.

    ಪ್ರದ್ಯುಮ್ನ ಅವರಿಗೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಪ್ರಾಚೀನ ಬಂಗಲೆಯಲ್ಲಿ ಅಪಾರ ನಿಧಿಯಿರುವ ಕನಸು ಬಿದ್ದಿದೆಯಂತೆ. 2 ಬಂಗಲೆ, 6 ರೂಂಗಳಲ್ಲಿ ಅಪಾರ ಚಿನ್ನಭಾರಣ, ಸಂಪತ್ತಿದೆಯಂತೆ. 300 ವರ್ಷಗಳ ಹಿಂದೆ ಈ ಪ್ರದೇಶವನ್ನು ಆಳುತ್ತಿದ್ದ ಯದುನಂದನ ಚಿತ್ರಭೂಪಾಲ ಸಾಮ್ರಾಟ, ಸಾಮ್ರಾಜ್ಯದ ಮೇಲೆ ದಾಳಿಯಾಗುವ ಭಯದಲ್ಲಿ ಸಂಪತ್ತನ್ನು 6 ಕೋಣೆಗಳಲ್ಲಿ ಬಚ್ಚಿಟ್ಟಿದ್ದನಂತೆ.

    ಪದ್ಯುಮ್ನ ಪತ್ರದ ಹಿನ್ನೆಲೆಯಲ್ಲಿ ಈ ಬಗ್ಗೆ ಪರಿಶೀಲನೆ ಮಾಡುವಂತೆ ಪ್ರಾಚ್ಯವಸ್ತು ಇಲಾಖೆಯ ಮುಖ್ಯ ಕಾರ್ಯದರ್ಶಿಗೆ ಸಿದ್ದರಾಮಯ್ಯ ಕಾರ್ಯದರ್ಶಿ ಎಲ್‍ಕೆ ಅತೀಕ್ ಪತ್ರ ಬರೆದಿದ್ದಾರೆ. ಅಲ್ಲದೆ ಈ ಬಗ್ಗೆ ಪರಿಶೀಲಿಸುವಂತೆ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಮಾಜ ಕಲ್ಯಾಣ ಸಚಿವ ಆಂಜನೇಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಪತ್ರ ಬರೆದಿದ್ದಾರೆ.

     

     

  • ರಸ್ತೆಗಾಗಿ ಪ್ರಧಾನಿಗೆ ಪತ್ರ ಬರೆದ ಉಡುಪಿಯ 85ರ ನಿವೃತ್ತ ಶಿಕ್ಷಕ- ಪ್ರಧಾನಿಯ ರಿಪ್ಲೈ ಬಂದ್ರೂ ರಾಜ್ಯಸರ್ಕಾರದಿಂದ ನೋ ರಿಪ್ಲೈ

    ರಸ್ತೆಗಾಗಿ ಪ್ರಧಾನಿಗೆ ಪತ್ರ ಬರೆದ ಉಡುಪಿಯ 85ರ ನಿವೃತ್ತ ಶಿಕ್ಷಕ- ಪ್ರಧಾನಿಯ ರಿಪ್ಲೈ ಬಂದ್ರೂ ರಾಜ್ಯಸರ್ಕಾರದಿಂದ ನೋ ರಿಪ್ಲೈ

    ಉಡುಪಿ: ಇಲ್ಲಿನ ನಿವೃತ್ತ ಶಿಕ್ಷಕರೊಬ್ಬರು ತನ್ನೂರಿಗೊಂದು ರಸ್ತೆ ಬೇಕು ಅಂತ ಕಳೆದ 25 ವರ್ಷಗಳಿಂದ ಹೋರಾಟ ಮಾಡ್ತಿದ್ದಾರೆ. ಗ್ರಾಮ ಪಂಚಾಯತ್ ಹಾಗೂ ರಾಜ್ಯ ಸರ್ಕಾರದ ಮೊರೆ ಹೋದ್ರೂ ಪ್ರಯೋಜನವಾಗದೆ ಕೊನೆಗೆ ಪ್ರಧಾನಿಗೆ ಪತ್ರ ಬರೆದಿದ್ದಾರೆ.

    ನಿವೃತ್ತ ಶಿಕ್ಷಕರಾಗಿರೋ ಗಣಪತಿ ರಸ್ತೆಗಾಗಿ ಹೋರಾಡುತ್ತಿರುವವರು. ಉಡುಪಿಯ ಹೆಬ್ರಿ ಸಮೀಪದ ಕಳ್ತೂರಿನವರಾದ ಇವರಿಗೆ 85 ವರ್ಷ ವಯಸ್ಸು. ಊರುಗೋಲು ಹಿಡ್ಕೊಂಡು ತಿರುಗೋ ಇವರು ನಮಗೆ ಏನಾದ್ರೂ ಸೌಲಭ್ಯ ಕೊಡಿ ಅಂತಿಲ್ಲ. ಬದಲಾಗಿ ನಮ್ಮೂರಿಗೊಂದು ರಸ್ತೆ ಮಾಡಿಕೊಡಿ ಅಂತಿದ್ದಾರೆ. ಇದಕ್ಕಾಗಿ ಈ ಜೀವ 25 ವರ್ಷಗಳಿಂದ ಹೋರಾಟ ಮಾಡ್ತಿದ್ದಾರೆ. ಗ್ರಾ.ಪಂ ನಿಂದ ಹಿಡಿದು ರಾಜ್ಯ ಸರ್ಕಾರದವರೆಗೂ ಪತ್ರ ಬರೆದು ಬರೆದು ಸುಸ್ತಾದ್ರು. ಆದ್ರೂ ಕೆಲಸ ಆಗಿಲ್ಲ. ಪ್ರಯತ್ನ ಬಿಡದೇ ಕೊನೆಗೆ ಪ್ರಧಾನಿಗೂ ಪತ್ರ ಬರೆದೇ ಬಿಟ್ಟರು.

    ಪ್ರಧಾನಿ ಕಚೇರಿಗೆ ಪತ್ರ ಬರೆದು 6 ತಿಂಗಳೊಳಗೆ ಅಲ್ಲಿಂದ ರಿಪ್ಲೈ ಬಂದಿದೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸಮಸ್ಯೆ ಬಗೆಹರಿಸಿಕೊಡುವಂತೆ ಪ್ರಧಾನಿ ಹೇಳಿ 6 ತಿಂಗಳು ಕಳೆದಿದೆ. ಆದ್ರೆ ರಾಜ್ಯ ಸರ್ಕಾರ ಅದರ ಬಗ್ಗೆ ಯೋಚನೆ ಮಾಡೋದ್ ಬಿಡಿ, ಪತ್ರಕ್ಕೆ ಕವಡೆ ಕಾಸಿನ ಕಿಮ್ಮತ್ತು ಕೂಡ ಕೊಟ್ಟಿಲ್ಲ.

    ಒಟ್ಟಿನಲ್ಲಿ ಇಳಿ ವಯಸ್ಸಿನಲ್ಲೂ ತಮ್ಮೂರಿಗೆ ಒಂದು ರಸ್ತೆ ಆಗ್ಬೇಕು ಅಂತಾ ಹೋರಾಡ್ತಿರೋ ಈ ಹಿರಿ ಜೀವದ ಪ್ರಯತ್ನವನ್ನು ಮೆಚ್ಚಲೇ ಬೇಕು. ಆದ್ರೆ ಸರ್ಕಾರ ಮಾತ್ರ ರಸ್ತೆಯಲ್ಲಿ ಓಡಾಡುವ ಭಾಗ್ಯ ಕರುಣಿಸ್ತಿಲ್ಲ. ಹೀಗಾಗಿ ಕಳ್ತೂರಿಗೆ ಗದ್ದೆಯಂತಹ ರಸ್ತೆಯೇ ಗತಿ ಆಗಿದೆ.

     

  • ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ, ನ್ಯಾಯ ಕೊಡಿಸಿ – ಪ್ರಧಾನಿ ಮೋದಿಗೆ ಬಾಗಲಕೋಟೆ ಬಾಲಕಿಯಿಂದ ಪತ್ರ

    ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ, ನ್ಯಾಯ ಕೊಡಿಸಿ – ಪ್ರಧಾನಿ ಮೋದಿಗೆ ಬಾಗಲಕೋಟೆ ಬಾಲಕಿಯಿಂದ ಪತ್ರ

    ಬಾಗಲಕೋಟೆ: ಬಾಲಕಿಯೋರ್ವಳು ನನ್ನ ಮೇಲೆ ಅತ್ಯಾಚಾರ ನಡೆದಿದೆ. ನನಗೆ ನ್ಯಾಯ ಕೊಡಿಸಿ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಸಚಿವೆ ಮನೇಕಾ ಗಾಂಧಿ, ಪಬ್ಲಿಕ್ ಟಿವಿಗೂ ಸೇರಿದಂತೆ ಜಿಲ್ಲೆಯ ಹತ್ತಾರು ಇಲಾಖೆಗಳ ಅಧಿಕಾರಿಗಳಿಗೆ ಮನನೊಂದು ಪತ್ರ ಬರೆದಿದ್ದಾಳೆ.

    ಬಾಗಲಕೋಟೆ ತಾಲೂಕಿನ ಶಿರೂರು ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಜವಾನ ವಿಜಯಕುಮಾರ್ ಗಾಳಪ್ಪಗೋಳ್ ಹಾಗೂ ಆತನ ಮೂವರು ಸ್ನೇಹಿತರು ಸೇರಿ ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ವೆಸಗಿದ್ದಾರೆಂದು ಪತ್ರದಲ್ಲಿ ಬಾಲಕಿ ಉಲ್ಲೇಖಿಸಿದ್ದಾಳೆ. ನಾನು ದಲಿತಳಾಗಿ ಹುಟ್ಟಿದ್ದು ತಪ್ಪಾ, ನಮಗೆ ನ್ಯಾಯ ಕೊಡಿಸಿ ಎಂದು ಬಾಲಕಿ ಅಳಲು ತೋಡಿಕೊಂಡಿದ್ದಾಳೆ. ಆದರೆ ಬಾಲಕಿ ಪತ್ರದಲ್ಲಿ ತನ್ನ ಹೆಸರನ್ನ ಎಲ್ಲಿಯೋ ಬರೆದಿಲ್ಲ.

    ಬಾಲಕಿ ಮೇ 27ರಂದು ಮೋದಿಯವರಿಗೆ ಪತ್ರ ಬೆರೆದಿದ್ದಾಳೆ. ಆದರೆ ಪ್ರಧಾನ ಮಂತ್ರಿ ಕಾರ್ಯಲಯದಿಂದ ಇದೂವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ವಿಷಯ ಮಾಧ್ಯಮಗಳಲ್ಲಿ ಪ್ರಸಾರವಾಗ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು ಪತ್ರ ನಮ್ಮ ಕೈ ಸೇರಿದೆ. ಈಗಾಗಲೇ ಈ ಬಗ್ಗೆ ಸ್ಥಳ ಪರೀಕ್ಷೆ ಮಾಡಲು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿದ್ದೇವೆ. ಅಲ್ಲದೇ ಈ ಬಗ್ಗೆ ತನಿಖೆಗೆ ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದೇವೆ ಎಂದು ಜಿಲ್ಲಾ ಪಂಚಾಯತ್ ಸಿಇಓ ವಿಕಾಸ್ ಸುರಳ್ಕರ್ ಹೇಳಿದ್ದಾರೆ.

    https://www.youtube.com/watch?v=TQ32k2cV-tw

     

  • ಉಪಚುನಾವಣೆಗೆ ಸಂಗ್ರಹಿಸಿದ್ದು 60 ಕೋಟಿ, ಬಳಸಿದ್ದು 20 ಕೋಟಿ – ಬಿಎಸ್‍ವೈ ವಿರುದ್ಧ ಗಂಭೀರ ಆರೋಪ

    ಉಪಚುನಾವಣೆಗೆ ಸಂಗ್ರಹಿಸಿದ್ದು 60 ಕೋಟಿ, ಬಳಸಿದ್ದು 20 ಕೋಟಿ – ಬಿಎಸ್‍ವೈ ವಿರುದ್ಧ ಗಂಭೀರ ಆರೋಪ

    ಬೆಂಗಳೂರು: `ಬಿಜೆಪಿ ಉಳಿಸಿ’ ಅಂತ ಅತೃಪ್ತರ ಜೊತೆ ಸಭೆ ನಡೆಸಿ, ತಮ್ಮ ವಿರುದ್ಧ ಕಿಡಿಕಾರಿದ್ದ ಈಶ್ವರಪ್ಪ ವಿರುದ್ಧ ಕಂಪ್ಲೆಂಟ್ ಕೊಡೋಕೆ ಅಂತ ಯಡಿಯೂರಪ್ಪ ದೆಹಲಿಗೆ ತರಳಿದ್ದಾರೆ. ಅದಕ್ಕೂ ಮುಂಚೆಯೇ ಯಡಿಯೂರಪ್ಪ ಮತ್ತು ಶೋಭಾ ಕರಂದ್ಲಾಜೆ ವಿರುದ್ಧ ನೊಂದ ಬಿಜೆಪಿ ಕಾರ್ಯಕರ್ತರ ಹೆಸರಿನಲ್ಲಿ ಅಮಿತ್ ಷಾ ಅವರಿಗೆ ಪತ್ರ ಬರೆಯಲಾಗಿದೆ.

    ಕಾರ್ಯಕರ್ತರ ನೋವಿಗೆ ಬಿಎಸ್‍ವೈ ಸ್ಪಂದಿಸುತ್ತಿಲ್ಲ. ಯಡಿಯೂರಪ್ಪನವರಿಗೆ ಭ್ರಷ್ಟಾಚಾರವೇ ಬಂಡವಾಳ. ಸಿಎಂ ಆದರೆ ಮತ್ತೆ ಚಾಳಿ ಮುಂದುವರಿಸಬಹುದು. ಬಿಎಸ್‍ವೈ ಗೆ ಲಿಂಗಾಯಿತರನ್ನ ಆಕರ್ಷಿಸುವ ಶಕ್ತಿ ಕುಂದಿದೆ. ಒಂದು ಕೋಮಿಗೆ ಮಾತ್ರ ಅತೀ ಪ್ರಾಶಸ್ತ್ಯ ನೀಡಲಾಗ್ತಿದೆ. ಉಪಚುನಾವಣೆ ಫಲಿತಾಂಶವೇ ಇದಕ್ಕೆ ಸಾಕ್ಷಿ. ಉಪಚುನಾವಣೆಗೆ 60 ಕೋಟಿ ಸಂಗ್ರಹಿಸಿದ್ರು. ಅದರಲ್ಲಿ ಖರ್ಚು ಮಾಡಿದ್ದು 20 ಕೋಟಿ ಮಾತ್ರ. ಉಳಿದ ಹಣ ವೈಯಕ್ತಿಕ ಬಳಕೆಗೆ ವೆಚ್ಚ ಮಾಡಿದ್ದಾರೆ. ಈ ಬಗ್ಗೆ ಸಾಕ್ಷ್ಯಾಧಾರಗಳಿವೆ. ಆಡಿಯೋ -ವಿಡಿಯೋ ಕ್ಲಿಪಿಂಗ್ಸ್ ಇವೆ. ಕೊಡಲು ಸಿದ್ಧ. ಬಿಎಸ್‍ವೈ ವಿರುದ್ಧವೇ ಶಿಸ್ತು ಕ್ರಮ ಜರುಗಿಸಿ ಅಂತ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

    ಅಮಿತ್ ಷಾ ಸೇರಿದಂತೆ 19 ನಾಯಕರಿಗೆ ಪತ್ರದ ಪ್ರತಿಯನ್ನ ರವಾನಿಸಲಾಗಿದೆ. ಆದ್ರೆ ಪತ್ರದಲ್ಲಿ ಯಾರ ಸಹಿಯೂ ಇಲ್ಲ. ಈ ಮಧ್ಯೆ ದೆಹಲಿಯಲ್ಲಿರೋ ಬಿಎಸ್‍ವೈಗೆ ಅಮಿತ್ ಷಾ ಸಿಗುತ್ತಿಲ್ಲ. ಹೀಗಾಗಿ, ಕೇವಲ ರಾಮ್‍ಲಾಲ್ ಅವ್ರನ್ನ ಮಾತ್ರ ಭೇಟಿಯಾಗ್ತಿದ್ದಾರೆ.

     

  • ಉತ್ತರಪ್ರದೇಶದಲ್ಲಿ ಬಿಜೆಪಿ ಗೆಲುವಿಗೆ 11ರ ಪಾಕ್ ಬಾಲಕಿಯಿಂದ ಮೋದಿಗೆ ಶುಭಾಶಯ!

    ಉತ್ತರಪ್ರದೇಶದಲ್ಲಿ ಬಿಜೆಪಿ ಗೆಲುವಿಗೆ 11ರ ಪಾಕ್ ಬಾಲಕಿಯಿಂದ ಮೋದಿಗೆ ಶುಭಾಶಯ!

    ಇಸ್ಲಾಮಾಬಾದ್: ಉತ್ತರಪ್ರದೇಶದಲ್ಲಿ ಬಿಜೆಪಿ ಭರ್ಜರಿ ಜಯ ಗಳಿಸಿರೋದಕ್ಕೆ ಪಾಕಿಸ್ತಾನದ 11ರ ಬಾಲಕಿಯೊಬ್ಬಳು ಪ್ರಧಾನಿ ನರೇಂದ್ರ ಮೋದಿಯವರಿಗೆ ಶುಭ ಕೋರಿದ್ದಾಳೆ.

    ಪಾಕಿಸ್ತಾನದ 11ರ ಹರೆಯದ ಅಖೀದತ್ ನವೀದ್ ಎಂಬಾಕೆ ಪತ್ರದ ಮೂಲಕ ಪ್ರಧಾನಿಗೆ ವಿಶ್ ಮಾಡಿದ್ದಾಳೆ. ಪಾಕಿಸ್ತಾನ ಮತ್ತು ಭಾರತದ ಮಧ್ಯೆ ಶಾಂತಿಯ ಅಗತ್ಯವಿದ್ದು, ಮೋದಿ ಅವರಿಂದ ಈ ಕೆಲಸ ಶೀಘ್ರವಾಗಿ ಆಗುತ್ತದೆ ಎಂದು ಹೇಳಿದ್ದಾಳೆ.

    ಪತ್ರದಲ್ಲೇನಿದೆ?: `ಜನರ ಮನಸ್ಸನ್ನು ಗೆಲ್ಲುವುದು ಅದ್ಭುತವಾದ ಕೆಲಸ ಎಂದು ನನ್ನ ತಂದೆ ಹೇಳುತ್ತಿದ್ದರು. ಅಂತೆಯೇ ನೀವು ಈಗಾಗಲೇ ಭಾರತೀಯರ ಮನ ಗೆದ್ದಿದ್ದೀರಿ. ಹೀಗಾಗಿ ನೀವು ಉತ್ತರಪ್ರದೇಶದಲ್ಲಿ ಭರ್ಜರಿ ಜಯ ಗಳಿಸಿದ್ದೀರಿ. ಅಂತೆಯೇ ಮತ್ತಷ್ಟು ಭಾರತೀಯರು ಹಾಗೂ ಪಾಕಿಸ್ತಾನ ಜನತೆಯ ಹೃದಯಗಳನ್ನು ಗೆಲ್ಲಬೇಕಾದರೆ, ಉಭಯ ರಾಷ್ಟ್ರಗಳ ನಡುವೆ ಸ್ನೇಹ ಮತ್ತು ಶಾಂತಿಯನ್ನು ಕಾಪಾಡಬೇಕು. ಈ ಎರಡೂ ರಾಷ್ಟ್ರಗಳ ನಡುವೆ ಉತ್ತಮ ಸಂಬಂಧದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಶಾಂತಿಯ ಸೇತುವೆಯನ್ನು ನಿರ್ಮಾಣ ಮಾಡಿ. ನಾವು ಬುಲೆಟ್‍ಗಳನ್ನು ಖರೀದಿ ಮಾಡುವ ಬದಲಾಗಿ ಪುಸ್ತಕಗಳನ್ನು ಖರೀದಿ ಮಾಡಲು ನಿರ್ಧರಿಸೋಣ. ಪಿಸ್ತೂಲ್‍ಗಳನ್ನು ಖರೀದಿ ಮಾಡೋ ಬದಲು ಬಡವರಿಗಾಗಿ ಔಷಧಿಗಳನ್ನು ಖರೀದಿ ಮಾಡೋಣವೆಂದು ನಿರ್ಧಾರ ಕೈಗೊಳ್ಳೋಣ ಅಂತಾ ಅಖೀದತ್ ಪ್ರಧಾನಿಗೆ ಬರೆದ ಪತ್ರದಲ್ಲಿ ವಿವರಿಸಿದ್ದಾಳೆ.

    ಪತ್ರದ ಕೊನೆಯಲ್ಲಿ ಶಾಂತಿ ಮತ್ತು ಸಂಘರ್ಷ ಯಾವುದು ಬೇಕು ಎಂಬ ಆಯ್ಕೆ ಎರಡೂ ರಾಷ್ಟ್ರಗಳ ಕೈಯಲ್ಲಿದೆ ಎಂದು ಹೇಳಿದ್ದು, ಉತ್ತರಪ್ರದೇಶದಲ್ಲಿ ಬಿಜೆಪಿ ಗೆಲುವಿಗೆ ಪ್ರಧಾನಿಗೆ ಶುಭಾಶಯ ತಿಳಿಸಿದ್ದಾಳೆ.

     

  • ಉದ್ಯೋಗ ನೀಡುವಂತೆ ಗೂಗಲ್‍ಗೆ 7ರ ಬಾಲಕಿಯಿಂದ ಪತ್ರ: ಸಿಇಒ ಪಿಚೈ ನೀಡಿದ ಉತ್ತರ ಇದು

    ಉದ್ಯೋಗ ನೀಡುವಂತೆ ಗೂಗಲ್‍ಗೆ 7ರ ಬಾಲಕಿಯಿಂದ ಪತ್ರ: ಸಿಇಒ ಪಿಚೈ ನೀಡಿದ ಉತ್ತರ ಇದು

    ಕ್ಯಾಲಿಫೋರ್ನಿಯಾ: 7 ವರ್ಷದ ಬಾಲಕಿಯೊಬ್ಬಳು ಗೂಗಲ್ ಸಿಇಒ ಸುಂದರ್ ಪಿಚೈಗೆ ಕೆಲಸ ಬೇಕೆಂದು ಬರೆದ ಪತ್ರ ಈಗ ವೈರಲ್ ಆಗಿದೆ.

    ಇಂಗ್ಲೆಂಡಿನ ಕೋಲೆ ಬ್ರಿಡ್ಜ್ ವಾಟರ್ ಎಂಬಾಕೆ ನನಗೆ ಗೂಗಲ್‍ನಲ್ಲಿ ಉದ್ಯೋಗ ಬೇಕೆಂದು ನೇರವಾಗಿ ಸುಂದರ್ ಪಿಚೈಗೆ ಪತ್ರ ಬರೆದಿದ್ದಾಳೆ. ಈ ಪತ್ರಕ್ಕೆ ಪ್ರತಿಕ್ರಿಯಿಸಿದ ಪಿಚೈ, ಶ್ರಮವಹಿಸಿ ಓದಿ ನಿನ್ನ ಕನಸನ್ನ ನನಸು ಮಾಡು. ಶಾಲಾ ಶಿಕ್ಷಣದ ಬಳಿಕ ಗೂಗಲ್‍ನಲ್ಲಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸು ಎಂದು ಮರು ಪತ್ರ ಬರೆದಿದ್ದಾರೆ.

    ಕೆಲ ದಿನಗಳ ಹಿಂದೆ ಬಾಲಕಿ ತನ್ನ ತಂದೆಯ ಜೊತೆ ಉದ್ಯೋಗಕ್ಕೆ ಯೋಗ್ಯವಾದ ಸ್ಥಳ ಯಾವುದು ಎಂದು ಪ್ರಶ್ನೆ ಕೇಳಿದ್ದಾಳೆ. ಇದಕ್ಕೆ ತಂದೆ ಗೂಗಲ್ ಅತ್ಯುತ್ತಮ ಸ್ಥಳ ಎಂದು ಉತ್ತರಿಸಿದ್ದಾರೆ. ಗೂಗಲ್ ಬಗ್ಗೆ ಮತ್ತಷ್ಟು ಪ್ರಶ್ನೆ ಕೇಳಿದ ಈಕೆ ಕೊನೆಗೆ ನಾನು ಗೂಗಲ್‍ನಲ್ಲಿ ಉದ್ಯೋಗ ಮಾಡಬೇಕು ಎಂದು ಕೇಳಿದ್ದಾಳೆ.

    ಈಕೆಯ ಪ್ರಶ್ನೆಗೆ ತಂದೆ ನನಗೆ ಉದ್ಯೋಗ ಬೇಕೆಂದು ಗೂಗಲ್‍ಗೆ ಒಂದು ಪತ್ರ ಬರೆ ಎಂದು ಸೂಚಿಸಿದ್ದಾರೆ. ಅದರಂತೆ ಆಕೆ ಕಂಪ್ಯೂಟರ್, ರೊಬೊಟ್, ಟ್ಯಾಬ್ಲೆಟ್ ಅಂದರೆ ನನಗೆ ಇಷ್ಟ. ಹೀಗಾಗಿ ನಿಮ್ಮ ಕಂಪೆನಿಯಲ್ಲಿ ಉದ್ಯೋಗ ಬೇಕೆಂದು ಪಿಚೈಗೆ ಪತ್ರ ಬರೆದಿದ್ದಾಳೆ.

    ಈ ಪತ್ರಕ್ಕೆ ಸುಂದರ್ ಪಿಚೈ,”ಪತ್ರ ಬರೆದಿದ್ದಕ್ಕೆ ಧನ್ಯವಾದಗಳು, ರೊಬೊಟ್ ಮತ್ತು ಕಂಪ್ಯೂಟರ್ ಅಂದರೆ ಇಷ್ಟ ಎಂದು ನೀನು ತಿಳಿಸಿರುವುದನ್ನು ಓದಿ ಸಂತೋಷವಾಯಿತು. ಮುಂದೆ ಚೆನ್ನಾಗಿ ಓದಿ ಕನಸನ್ನು ನನಸು ಮಾಡು. ಶಾಲಾ ಶಿಕ್ಷಣ ಮುಗಿದ ಬಳಿಕ ಉದ್ಯೋಗಕ್ಕೆ ಅರ್ಜಿ ಸಲ್ಲಿಸು. ನಿನಗೆ ಮತ್ತು ನಿನ್ನ ಕುಟುಂಬಕ್ಕೆ ಒಳ್ಳೆದಾಗಲಿ” ಎಂದು ಮರು ಪತ್ರ ಬರೆದಿದ್ದಾರೆ.