Tag: letter

  • ಅನ್ನ ಭಾಗ್ಯ ಅಕ್ಕಿ ಕಡಿತ: ಮಾಜಿ ಸಿಎಂಗೆ ಡಿಕೆಶಿ ಟಾಂಗ್

    ಅನ್ನ ಭಾಗ್ಯ ಅಕ್ಕಿ ಕಡಿತ: ಮಾಜಿ ಸಿಎಂಗೆ ಡಿಕೆಶಿ ಟಾಂಗ್

    ಬೆಂಗಳೂರು: 2 ಕೆ.ಜಿ. ಪಡಿತರ ಅಕ್ಕಿ ಕಡಿತದ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಪತ್ರ ಬರೆದ ವಿಚಾರವಾಗಿ ಈಗ ಪರೋಕ್ಷವಾಗಿ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಮಾಜಿ ಸಿಎಂ ಸಿದ್ದರಾಮಯ್ಯಗೆ ಟಾಂಗ್ ನೀಡಿದ್ದಾರೆ.

    ಯಾರಿಗೆ ಆಗಲಿ ಒತ್ತಡ ಹೇರೋಕೆ ಒಂದು ಲಿಮಿಟ್ ಇರುತ್ತದೆ. ಸಿಎಂ ಕುಮಾರಸ್ವಾಮಿ ಈಗಾಗಲೇ ಅಕ್ಕಿ ವಿತರಣೆಯ ವಿಚಾರ ಸ್ಪಷ್ಟಪಡಿಸಿದ್ದಾರೆ. 7 ಕೆ.ಜಿ. ಅಕ್ಕಿ ಕೊಡುವುದರಿಂದ 2,500 ಕೋಟಿ ರೂ. ಹೊರೆಯಾಗುತ್ತದೆ. ಕೆಲವರು 7 ಕೆ.ಜಿ ಅಕ್ಕಿ ಕೇಳಿದ್ದಾರೆ. ಇನ್ನು ಕೆಲವರು 5 ಕೆ.ಜಿ ಕೇಳಿದ್ದಾರೆ. ಇಂತ ಹಲವು ದ್ವಂದ್ವಗಳಿವೆ. ಯಾರೂ ಈ ಬಗ್ಗೆ ಗಾಬರಿ ಪಡಬೇಕಿಲ್ಲ. ಸಿದ್ದರಾಮಯ್ಯ ತಮ್ಮ ಅಭಿಪ್ರಾಯವನ್ನು ತಾವು ಪತ್ರದ ಮೂಲಕ ಹೇಳಿದ್ದಾರೆ. ಒಬ್ಬೊಬ್ಬರು ಒಂದೊಂದು ಅಭಿಪ್ರಾಯ ಹೇಳುತ್ತಾರೆ ಎಂದು ಶಿವಕುಮಾರ್ ಹೇಳಿದರು. ಇದನ್ನೂ ಓದಿ: ಅನ್ನಭಾಗ್ಯದ ಭಾವನಾತ್ಮಕ ನಂಟು ತೆರೆದಿಟ್ಟು ಎಚ್‍ಡಿಕೆಗೆ ದೀರ್ಘ ಪತ್ರ ಬರೆದ ಮಾಜಿ ಸಿಎಂ

    ಕೆಲವರು ಬಜೆಟ್ ನಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯ ಆಗಿದೆ ಎಂದಿದ್ದಾರೆ. ಹಾಗಂತ ಉತ್ತರ ಕರ್ನಾಟಕಕ್ಕೆ ನಿರ್ಲಕ್ಷ್ಯ ಆಗಿದೆಯಾ? ನೀರಾವರಿ ಇಲಾಖೆಯಲ್ಲಿ ಕೇವಲ 2.5 ಕೋಟಿ ರೂ. ಮಾತ್ರ ಕಾವೇರಿ ಪ್ರದೇಶಾಭಿವೃದ್ಧಿಗೆ ನೀಡಲಾಗಿದೆ. ಉಳಿದದ್ದು ಉತ್ತರ ಕರ್ನಾಟಕಕ್ಕೇ ನೀಡಲಾಗಿದೆ. ಸಂಬಳ, ಸಾರಿಗೆ ಮುಂತಾದ ಕೆಲಸಗಳಿವೆ. ಹೈದರಾಬಾದ್ ಕರ್ನಾಟಕ ಪ್ರಾದೇಶಾಭಿವೃದ್ಧಿ ಸಂಬಂಧಿಸಿದಂತೆ ಅನುದಾನವಿದ್ದು, ಆ ಹಣವನ್ನು ಬೇರೆ ಕಡೆ ಖರ್ಚು ಮಾಡಲು ಆಗುತ್ತಾ? ಸಲಹೆ ಕೊಡೋದು ತಪ್ಪಲ್ಲ. ಇದರಲ್ಲಿ ರಾಜಕಾರಣ ಸೃಷ್ಟಿ ಮಾಡೋದು ಸರಿಯಲ್ಲ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

    ವಿಧಾನಸಭೆ ಸಚಿವಾಲಯದಿಂದ ಸೂಟ್ ಕೇಸ್ ಖರೀದಿ ವಿಚಾರವಾದ ಬಗ್ಗೆ ಪ್ರತಿಕ್ರಿಯಿಸಿದ ಶಿವಕುಮಾರ್, ಅದು ನನಗೆ ಗೊತ್ತಿಲ್ಲ. ಅದು ವಿಧಾನಸಭಾ ಸಚಿವಾಲಯ ವಿಚಾರ. ಸ್ಪೀಕರ್ ಗರಂ ಆಗಿದ್ದ ವಿಚಾರವೂ ಗೊತ್ತಿಲ್ಲ. ಸ್ಪೀಕರ್ ಅದೆಲ್ಲವನ್ನೂ ವಿಚಾರ ಮಾಡುತ್ತಾರೆ ಎಂದು ತಿಳಿಸಿದರು.

    ನಿರ್ಧಾರ ಆಗಿಲ್ಲ: ಮಂಡ್ಯ ಲೋಕಸಭೆ ಉಪಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ವೇಣುಗೋಪಾಲ್, ಜೆಡಿಎಸ್ ರಾಷ್ಟ್ರೀಯ ಕಾರ್ಯದರ್ಶಿ ಡ್ಯಾನಿಷ್ ಅಲಿ ನೇತೃತ್ವದಲ್ಲಿ ಸಭೆ ಕರೆದು ತೀರ್ಮಾನ ಆಗಿದೆ. ಒಟ್ಟಿಗೆ ಲೋಕಸಭೆ ಚುನಾವಣೆಗೆ ಹೋಗುತ್ತೇವೆ. ಆದರೆ ಮಂಡ್ಯದಲ್ಲಿ ಯಾರಿಗೆ ಟಿಕೆಟ್ ಅನ್ನೋದು ಈಗಲೇ ನಿರ್ಧಾರ ಆಗಿಲ್ಲ. ಅದನ್ನ ಎಲ್ಲ ನಾಯಕರು ಕೂತು ಚರ್ಚೆ ಮಾಡಿ ಮಾಧ್ಯಮಗಳ ಮುಂದೆ ಬರುತ್ತೇವೆ ಎಂದು ಸ್ಪಷ್ಟಪಡಿಸಿದರು.

    ದೆಹಲಿಯಲ್ಲಿ ಚರ್ಚೆ: ಕಾವೇರಿ ನದಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಜುಲೈ 18ಕ್ಕೆ ದೆಹಲಿಯಲ್ಲಿ ಸಂಸದರ ಸಭೆ ಕರೆಯಲಾಗಿದೆ. ಅದಕ್ಕಾಗಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಜುಲೈ 18ಕ್ಕೆ ದೆಹಲಿಗೆ ಹೋಗೋಣ ಅಂದಿದ್ದಾರೆ. ಅಂದು ದೆಹಲಿಯಲ್ಲಿ ಎಲ್ಲ ಸಂಸದರ ಸಭೆ ಕರೆಯಲಾಗಿದೆ. ಈ ರಾಜ್ಯದ ಹಿತ ಕಾಯಲು ಪಕ್ಷ ಬೇಧ ಮರೆತು ಎಲ್ಲರೂ ಚರ್ಚೆ ಮಾಡುತ್ತೀವಿ. ಕಾವೇರಿ ವಿಚಾರದಲ್ಲಿ ನಮ್ಮ ಎಲ್ಲ ದಾಖಲೆಗಳನ್ನು ಸಲ್ಲಿಕೆ ಮಾಡುತ್ತೇವೆ ಎಂದು ತಿಳಿಸಿದರು.

  • ಧಾರವಾಡ ವಿವಿ ವಿದ್ಯಾರ್ಥಿಗೆ ಬಂತು ಧಮ್ಕಿ ಲೆಟರ್

    ಧಾರವಾಡ ವಿವಿ ವಿದ್ಯಾರ್ಥಿಗೆ ಬಂತು ಧಮ್ಕಿ ಲೆಟರ್

    ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಯೊಬ್ಬನಿಗೆ ಧಮ್ಕಿ ಹಾಕಿದ ಪತ್ರವೊಂದು ಬಂದಿದೆ.

    ಕಳೆದ ಜುಲೈ 6 ರಂದು ಈ ಧಮ್ಕಿ ಹಾಕಿದ ಪತ್ರವೊಂದು ಭೂಗೋಳಶಾಸ್ತ್ರ ಸಂಶೋಧನಾ ವಿದ್ಯಾರ್ಥಿ ಮಂಜುನಾಥ ಹೋಗಲ ಅವರಿಗೆ ಬಂದಿದೆ.

    ಸರಿಯಾಗಿ ಇದ್ದರೆ ಸರಿ, ಇಲ್ಲಾಂದ್ರೆ ನಿನ್ ಕಥೆ ಮುಗಿಯುತ್ತೆ ಎಂದು ಬರೆಯಲಾಗಿದೆ. ಅಷ್ಟೇ ಅಲ್ಲದೇ ನೀನೊಬ್ಬ ಅಯೋಗ್ಯ, ನಿನ್ನಂತವರು ಈ ವಿವಿಯಲ್ಲಿ ಇರುವುದು ದುರಂತ. ನೀನೊಬ್ಬ ಸಂಶೋಧನಾ ವಿದ್ಯಾರ್ಥಿ, ನಿನಗೆ ಎಸ್‍ಎಸ್‍ಎಲ್‍ಸಿ ಅರ್ಹತೆ ಕೂಡ ಇಲ್ಲ. ಕರ್ನಾಟಕ ವಿವಿಯಲ್ಲಿ ಇರಬೇಕಾದರೆ ಮುಚ್ಚಿಕೊಂಡು ಇರಬೇಕು ಎಂದು ಬರೆಯಲಾಗಿದೆ.

    ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿ ಮಂಜುನಾಥ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ನಾನು ಕರ್ನಾಟಕ ವಿವಿಯಲ್ಲಿ ಅಮಾಯಕರ ಬೆನ್ನಿಗೆ ನಿಂತು ಹೋರಾಟ ಮಾಡಿದ್ದಕ್ಕೆ ಈ ರೀತಿ ಮಾಡಲಾಗುತ್ತಿದೆ. ಆದರೆ ಇದಕ್ಕೆ ನಾನು ಜಗ್ಗಲ್ಲ ಎಂದು ಮಂಜುನಾಥ ಹೇಳಿದ್ದಾರೆ. ಸಂಶೋಧನಾ ವಿದ್ಯಾರ್ಥಿ ಆಗಿರುವ ಮಂಜುನಾಥ ಅವರು ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿದ್ದಾರೆ.

  • ಗಣ್ಯ ವ್ಯಕ್ತಿಗಳ ಸಂಚಾರ ಸಂದರ್ಭದಲ್ಲೂ ಅಂಬುಲೆನ್ಸ್‌ಗೆ ಮೊದಲ ಆದ್ಯತೆ: ಪರಮೇಶ್ವರ್

    ಗಣ್ಯ ವ್ಯಕ್ತಿಗಳ ಸಂಚಾರ ಸಂದರ್ಭದಲ್ಲೂ ಅಂಬುಲೆನ್ಸ್‌ಗೆ ಮೊದಲ ಆದ್ಯತೆ: ಪರಮೇಶ್ವರ್

    ಬೆಂಗಳೂರು: ಗಣ್ಯ ವ್ಯಕ್ತಿಗಳ ಸಂಚಾರ ಸಂದರ್ಭದಲ್ಲೂ ಅಂಬುಲೆನ್ಸ್ ಗೆ ಮೊದಲ ಆದ್ಯತೆ ನೀಡಬೇಕು ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಆದೇಶಿಸಿದ್ದಾರೆ.

    ಈ ಬಗ್ಗೆ ಪರಮೇಶ್ವರ್ ಅವರು ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆಸಿದ್ದಾರೆ. ಈ ಹಿಂದೆ ಪರಮೇಶ್ವರ್ ಪ್ರಯಾಣದ ಸಂದರ್ಭದಲ್ಲಿ ಶಿಷ್ಟಾಚಾರಕ್ಕಾಗಿ ಅಂಬುಲೆನ್ಸ್ ತಡೆದಿರುವ ಹಿನ್ನೆಲೆಯಲ್ಲಿ ಈಗ ಈ ಪತ್ರ ಬರೆದಿದ್ದಾರೆ.

    ಪತ್ರದಲ್ಲಿ ಏನಿದೆ?:
    ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ನಾನು ಸಂಚರಿಸುವ ಮಾರ್ಗಗಳಲ್ಲಿ ನನಗೆ ಶಿಷ್ಟಾಚಾರದಂತೆ ಟ್ರಾಫಿಕ್ ಫ್ರೀ ಸಂಚಾರ ಮಾಡುವ ಸಲುವಾಗಿ ಕೆಲವು ಬಾರಿ ಅಂಬುಲೆನ್ಸ್ ವಾಹನಗಳನ್ನು ತಡೆದು ನಿಲ್ಲಿಸಿರುವುದನ್ನು ನಾನು ಗಮನಿಸಿರುತ್ತೇನೆ ನನಗೆ ಮತ್ತು ಇನ್ನಿತರ ವಿಐಪಿಗಳಿಗೆ ನೀಡಿರುವ ಶಿಷ್ಟಾಚಾರವನ್ನು ಬದಿಗೊತ್ತಿ, ಗಣ್ಯವ್ಯಕ್ತಿಗಳು ಸಂಚಾರದ ಸಂದರ್ಭದಲ್ಲಿ ಅಂಬುಲೆನ್ಸ್ ವಾಹನಗಳು ಮುಕ್ತವಾಗಿ ಯಾವುದೇ ರೀತಿಯ ತೊಂದರೆ ಆಗದಂತೆ ಅಗತ್ಯಕ್ರಮ ವಹಿಸಲು ಸೂಚಿಸಿದೆ.

  • ಒಂದು ದಿನ ರಜೆಗೆ ಡಿವೈಎಸ್‍ಪಿ ಪರದಾಟ – ರೊಚ್ಚಿಗೆದ್ದ ಡಿವೈಎಸ್‍ಪಿಯಿಂದ ಡಿಜಿಐಜಿಪಿಗೆ ಪತ್ರ

    ಒಂದು ದಿನ ರಜೆಗೆ ಡಿವೈಎಸ್‍ಪಿ ಪರದಾಟ – ರೊಚ್ಚಿಗೆದ್ದ ಡಿವೈಎಸ್‍ಪಿಯಿಂದ ಡಿಜಿಐಜಿಪಿಗೆ ಪತ್ರ

    -ಗಣಪತಿ, ಕಲ್ಲಪ್ಪ ಕೇಸ್ ಬಗ್ಗೆಯೂ ಉಲ್ಲೇಖ!

    ಬೆಂಗಳೂರು: ಒಂದು ದಿನ ರಜೆ ಸಿಗದೆ ಡಿವೈಎಸ್‍ಪಿಯವರು ಪೊಲೀಸ್ ಇಲಾಖೆಯಲ್ಲಿ ನಡೆಯುತ್ತಿರುವ ಕಿರುಕುಳ ಹಾಗೂ ತಾರತಮ್ಯದ ಬಗ್ಗೆ ಡಿಜಿಐಜಿಪಿಗೆ ಪತ್ರ ಬರೆದು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

    ಡಿವೈಎಸ್‍ಪಿ ಅವರ ಮಗಳಿಗೆ ರಾಜ್ಯ ತಂಡವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಮಗಳನ್ನು ತರಬೇತಿ ಕ್ಯಾಂಪ್‍ಗೆ ಬಿಟ್ಟು ಬರಲು 1 ದಿನದ ರಜೆಗಾಗಿ 9 ದಿನಗಳ ಮುನ್ನವೇ ರಜೆಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ರಜೆ ದೊರಕದ ಹಿನ್ನೆಲೆಯಲ್ಲಿ ಮೌಖಿಕವಾಗಿ ಹಿರಿಯ ಅಧಿಕಾರಿಗಳಿಗೆ ತಿಳಿಸಿ ಹೋಗಿದ್ದ ಡಿವೈಎಸ್‍ಪಿ. ಆದರೆ ಇದನ್ನು ಅಶಿಸ್ತು ಎಂದು ಪರಿಗಣಿಸಿ ಕಾರಣ ಕೇಳಿ ಅವರಿಗೆ ನೋಟಿಸ್ ನೀಡಲಾಗಿತ್ತು.

    23 ದಿನಗಳ ತರಬೇತಿಯಲ್ಲಿ ಕೇವಲ 1 ದಿನ ಮಾತ್ರ ರಜೆ ಹಾಕಿದ್ದೇನೆ. ಆದರೆ ಮತ್ತೊಬ್ಬ ಅಧಿಕಾರಿ ಅರ್ಜಿ ಸಹ ನೀಡದೆ ರಜೆ ಮೇಲೆ ಹೋಗಿದ್ರು, ಅವರು ಹಿರಿಯ ಅಧಿಕಾರಿ/ಸಲಹೆಗಾರರ ವೈಯಕ್ತಿಕ ಕೆಲಸಕ್ಕೆ ಹೋಗಿದ್ದರು. ಅಲ್ಲದೇ ಇನ್ನೂ ಕೆಲವರಿಗೆ 3-4 ದಿನ ಹೊರಗಡೆ ಹೋಗಲು ಅನುಮತಿ ನೀಡಲಾಗಿತ್ತು. ಆದರೆ ನನಗೆ 1 ದಿನವೂ ರಜೆ ಸಿಕ್ಕಿಲ್ಲ. ಇಲಾಖೆಯ ಈ ತಾರತಮ್ಯ ನೀತಿಯನ್ನು ಪ್ರಶ್ನಿಸಿ ಡಿಜಿ ಐಜಿಪಿಯಾದ ನೀಲಮಣಿ ಎನ್ ರಾಜುರವರರಿಗೆ ಪತ್ರ ಬರೆಯುವ ಮೂಲಕ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

    ಜೊತೆಗೆ ಮೃತ ಡಿವೈಎಸ್‍ಪಿ ಎಂಕೆ ಗಣಪತಿ ವಿಚಾರ ಸಹ ಪತ್ರದಲ್ಲಿ ಪ್ರಸ್ತಾಪ ಮಾಡಿದ್ದಾರೆ. ಸೆಪ್ಟೆಂಬರ್ 7ರಂದು ಎಂ.ಕೆ. ಗಣಪತಿ ಆತ್ಮಹತ್ಯೆಗೆ ಶರಣಾಗಿದ್ದರು, ಆದರೆ ಸೆಪ್ಟೆಂಬರ್ 8ರಂದು ಗಣಪತಿ ವಿರುದ್ಧದ ಆರೋಪಕ್ಕೆ ಕ್ಲೀನ್ ಚಿಟ್‍ನ್ನು ಇಲಾಖೆ ನೀಡಿತ್ತು. ಒಂದು ದಿನ ಮುಂಚಿತವಾಗಿ ಕ್ಲೀನ್ ಚಿಟ್ ನೀಡಿದ್ದರೆ ಗಣಪತಿಯವರು ಬದುಕಿರುತ್ತಿದ್ದರು. ಡಿವೈಎಸ್ ಪಿ ಗಣಪತಿ ಆತ್ಮಹತ್ಯೆ ಮಾಡಿಕೊಂಡು ಇಂದಿಗೆ ಎರಡು ವರ್ಷ ವಾಯ್ತು. ಅಲ್ಲದೇ ಕಲ್ಲಪ್ಪ ಹಂಡಿಬಾಗ್ ಪ್ರಕರಣದಲ್ಲೂ ಇಲಾಖೆ ಪ್ರಾಮಾಣಿಕ ತನಿಖೆ ನಡೆಸಲಿಲ್ಲ. ಇಲಾಖೆಯಲ್ಲಿನ ಕಿರುಕುಳದಿಂದ ಇಂತಹ ಘಟನೆಗಳು ಸಂಭವಿಸುತ್ತಿವೆ ಎಂದು ಬರೆದಿದ್ದಾರೆ.

    ನೀಲಮಣಿ ಎನ್ ರಾಜು ಡಿಜಿ & ಐಜಿಪಿಯಾಗಿ ಒಂದೂವರೆ ವರ್ಷವಾಯ್ತು ಈವರೆಗೂ ಅಧಿಕಾರಿ-ಸಿಬ್ಬಂದಿಯ ಕುಂದುಕೊರತೆಗಳನ್ನು ಆಲಿಸಿಲ್ಲ. ಅಲ್ಲದೇ ಡಿಜಿ ಐಜಿಪಿ ನೀಲಮಣಿ ರಾಜು ಅವರಿಗೆ ಸರಿಯಾಗಿ ಕನ್ನಡ ಬರುವುದಿಲ್ಲ. ಕನ್ನಡದಲ್ಲಿ ಬರೆದಿರುವ ಪತ್ರವನ್ನ ಓದಿ ಅರಗಿಸಿಕೊಳ್ಳೊದಕ್ಕೆ ಆಗಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದಯವಿಟ್ಟು ನೇರವಾಗಿ ಮಾತನಾಡಲಿಕ್ಕೆ ಅವಕಾಶ ಕೊಡಲು ಪತ್ರದಲ್ಲಿ ಮನವಿಮಾಡಿಕೊಂಡಿದ್ದಾರೆ.

    ಮೇಲಧಿಕಾರಿಗಳಿಂದ ಆಗುತ್ತಿರುವ ಕಿರುಕುಳದಿಂದ ಬೇಸತ್ತು 2017ರ ಡಿಸೆಂಬರ್‍ನಿಂದ ಈವರೆಗೆ ಒಟ್ಟು ನಾಲ್ಕು ಪತ್ರವನ್ನು ಡಿವೈಎಸ್‍ಪಿಯವರು ಬರೆದಿದ್ದಾರೆ. ಮೇಲಾಧಿಕಾರಿಗಳಿಂದ ಸರಿಯಾದ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಜೂನ್ 18ರಂದು ಮತ್ತೊಂದು ಪತ್ರವನ್ನು ನೇರವಾಗಿ ಡಿಜಿ ನೀಲಮಣಿಯವರಿಗೆ ಪತ್ರ ಬರೆದು ಭೇಟಿಗೆ ಯತ್ನಿಸಿದ್ದಾರೆ. ಭೇಟಿಗೆ ಅವಕಾಶ ಸಿಗದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಪತ್ರ ಬರೆದಿದ್ದಾರೆ.

  • ಮುಖ್ಯಮಂತ್ರಿ ಕುಮಾರಸ್ವಾಮಿಗೆ ಮತ್ತೊಂದು ಪತ್ರ ಬರೆದ ಮಾಜಿ ಸಿಎಂ

    ಮುಖ್ಯಮಂತ್ರಿ ಕುಮಾರಸ್ವಾಮಿಗೆ ಮತ್ತೊಂದು ಪತ್ರ ಬರೆದ ಮಾಜಿ ಸಿಎಂ

    ಬಾಗಲಕೋಟೆ: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಮಾಜಿ ಸಿಎಂ, ಬದಾಮಿ ಕ್ಷೇತ್ರದ ಶಾಸಕ ಸಿದ್ದರಾಮಯ್ಯ ಮತ್ತೊಂದು ಪತ್ರ ಬರೆದಿದ್ದಾರೆ. ಇದನ್ನೂ ಓದಿ: ನನ್ನ ಕ್ಷೇತ್ರ ಬದಾಮಿ ಅಭಿವೃದ್ಧಿ ಮಾಡಿ – ಸಿಎಂ ಕುಮಾರಸ್ವಾಮಿಗೆ ಸಿದ್ದರಾಮಯ್ಯ ಪತ್ರ

    ಪತ್ರದಲ್ಲಿ ಏನಿದೆ?:
    ನನ್ನ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಬಾಗಲಕೋಟೆ ಜಿಲ್ಲೆಯ, ಗುಳೇದಗುಡ್ಡ ನಗರದಲ್ಲಿರುವ ಕುಡಿಯುವ ನೀರು ವ್ಯವಸ್ಥೆ ಝೋನ್-1ಕ್ಕೆ 24 ಗಂಟೆಯೂ ನೀರು ವಿತರಣಾ ವ್ಯವಸ್ಥೆ ಒದಗಿಸಲು ಪ್ರಸ್ತಾವನೆಯನ್ನು ಅಂದಾಜು ಪಟ್ಟಿಯೊಂದಿಗೆ ಈಗಾಗಲೇ ಸಲ್ಲಿಸಲಾಗಿದೆ. 2017-2018ನೇ ಸಾಲಿನ ಅನುಮೋದಿತ ಕ್ರಿಯಾ ಯೋಜನೆಯಲ್ಲಿ ನೀರು ಸರಬರಾಜು ಯೋಜನೆಗಳಿಗೆ ರೂ.2998.32 ಲಕ್ಷಗಳ ಲಮ್ ಸಮ್ ಅವಕಾಶ ಕಲ್ಪಸಿರುವುದಾಗಿ ತಿಳಿದು ಬಂದಿದ್ದು, ಗುಳೇದಗುಡ್ಡ ಪಟ್ಟಣ ಝೋನ್-1ಕ್ಕೆ 24 ಗಂಟೆ ನೀರು ಒದಗಿಸಲು 14.97 ಲಕ್ಷ ರೂಪಾಯಿ ಅನುದಾನವನ್ನು ಕೂಡಲೇ ಬಿಡುಗಡೆ ಮಾಡುವಂತೆ ಪತ್ರದಲ್ಲಿ ಮನವಿ ಮಾಡಿದ್ದಾರೆ.

    ಈ ಹಿಂದೆಯೂ ಸಿಎಂ ಕುಮಾರಸ್ವಾಮಿಗೆ ಎರಡು ಪತ್ರವನ್ನು ಸಿದ್ದರಾಮಯ್ಯ ಬರೆದಿದ್ದರು. ಆ ಪತ್ರದಲ್ಲಿ ಕೆರೆ ತುಂಬಿಸಲು, ಜವಳಿ ಪಾರ್ಕ್ ಹಾಗೂ ಗಾರ್ಮೆಂಟ್ಸ್ ಸ್ಥಾಪನೆಗೆ ಮನವಿ ಮಾಡಿಕೊಂಡಿದ್ದರು. ಸದ್ಯ ಸಿದ್ದರಾಮಯ್ಯ ಬದಾಮಿ ಕ್ಷೇತ್ರದ ಶಾಸಕರಾಗಿದ್ದಾರೆ.

  • ಸಾರಿಗೆ ಇಲಾಖೆಯಿಂದ ಮಹಿಳಾ ಸಿಬ್ಬಂದಿಗೆ ಶಾಕಿಂಗ್ ನ್ಯೂಸ್!

    ಸಾರಿಗೆ ಇಲಾಖೆಯಿಂದ ಮಹಿಳಾ ಸಿಬ್ಬಂದಿಗೆ ಶಾಕಿಂಗ್ ನ್ಯೂಸ್!

    ಹಾಸನ: ಮೋದಿ ಸರ್ಕಾರದಲ್ಲಿ ಭೇಟಿ ಪಡಾವೋ, ಭೇಟಿ ಬಚಾವೋ ಎಂದು ಮಹಿಳೆಯ ಅಭಿವೃದ್ಧಿಗೆ ಪಣತೊಟ್ಟಿದೆ. ಆದರೆ ರಾಜ್ಯ ಸಾರಿಗೆ ಇಲಾಖೆಯಲ್ಲಿ ಮಾತ್ರ ಮಹಿಳೆಯರು ಕೆಲಸಕ್ಕೆ ಬೇಡ ಎಂದು ಹೇಳಲಾಗುತ್ತಿದೆ.

    ಹಾಸನ ಕೆಎಸ್‍ಆರ್ ಟಿಸಿಯ ವಿಭಾಗೀಯ ನಿಯಂತ್ರಣಾಧಿಕಾರಿ, ಮಹಿಳೆಯರಿಗೆ ಕೆಲಸ ಕೊಡೋದು ಬೇಡ ಪ್ಲೀಸ್ ಎಂದು ಎಡವಟ್ಟು ಪತ್ರವನ್ನು ಬರೆದಿದ್ದಾರೆ. ಕೆಎಸ್‍ಆರ್ ಟಿಸಿ ತಾಂತ್ರಿಕ ವಿಭಾಗದಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, ಈ ಕೆಲಸಕ್ಕೆ ಮಹಿಳೆಯರ ನೇಮಕ ಬೇಡ, ಪುರುಷರಿಗಷ್ಟೇ ಅವಕಾಶ ನೀಡೋಣ ಅಂತಾ ಬೆಂಗಳೂರು ಕೆಎಸ್‍ಆರ್ ಟಿಸಿ ಕೇಂದ್ರ ಕಚೇರಿಗೆ ಪತ್ರ ಬರೆದಿದ್ದಾರೆ.

    ಮಹಿಳೆಯರಿಗೆ ಕೆಲ್ಸ ಕೊಡೋದು ಬೇಡ!
    * ತಾಂತ್ರಿಕ ವಿಭಾಗದಲ್ಲಿ ಭದ್ರತೆಗಾಗಿ ಮಹಿಳೆಯರನ್ನು ನಿಯೋಜಿಸೋದಕ್ಕೆ ಕಷ್ಟವಾಗುತ್ತೆ.
    * ಮಹಿಳೆಯರು ಸಿಕ್ಕಾಪಟ್ಟೆ ಸೂಕ್ಷ್ಮ ಮನಸ್ಥಿತಿಯವರು ರಜೆ ಜಾಸ್ತಿ ಹಾಕುತ್ತಾರೆ.
    * ಪ್ರಸೂತಿ ರಜೆ, ಆರೋಗ್ಯ ಸರಿ ಇಲ್ಲ ಹೀಗೆ ನಾನಾ ಕಾರಣದಿಂದ ದೀರ್ಘ ರಜೆ ಹಾಕುತ್ತಾರೆ. ಪಾಪ ಆಗ ಪುರುಷ ಸಿಬ್ಬಂದಿಗಳ ಮೇಲೆ ಹೊರೆ ಬೀಳುತ್ತೆ.
    * ಮಕ್ಕಳ ಲಾಲಾನೆ ಪಾಲನೆ ಅಂತಾ ಹೆಚ್ಚಿನ ರಜೆ ಕೇಳುತ್ತಾರೆ.

    ಹೀಗೆ ನಾನಾ ಕಾರಣವನ್ನು ಅಧಿಕಾರಿ ಮುಂದಿಟ್ಟಿದ್ದಾರೆ. ಈಗಾಗಲೇ ತಾಂತ್ರಿಕ ವಿಭಾಗದಲ್ಲಿ ಇರುವ ಮಹಿಳೆಯರು ಕಾರ್ಯ ನಿರ್ವಹಿಸುತ್ತಿಲ್ಲ ಅಂತಾ ಅವಲತ್ತುಕೊಂಡಿದ್ದಾರೆ.

  • ನನ್ನ ಕ್ಷೇತ್ರ ಬದಾಮಿ ಅಭಿವೃದ್ಧಿ ಮಾಡಿ – ಸಿಎಂ ಕುಮಾರಸ್ವಾಮಿಗೆ ಸಿದ್ದರಾಮಯ್ಯ ಪತ್ರ

    ನನ್ನ ಕ್ಷೇತ್ರ ಬದಾಮಿ ಅಭಿವೃದ್ಧಿ ಮಾಡಿ – ಸಿಎಂ ಕುಮಾರಸ್ವಾಮಿಗೆ ಸಿದ್ದರಾಮಯ್ಯ ಪತ್ರ

    ಬೆಂಗಳೂರು: ನನ್ನ ಕ್ಷೇತ್ರದಲ್ಲಿ ಜವಳಿ ಪಾರ್ಕ್ ಮಾಡಿ, ನನ್ನ ಕ್ಷೇತ್ರದ ಜನ ಗುಳೆ ಹೋಗುವುದನ್ನು ತಡೆಯಿರಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಿಎಂ ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದ್ದಾರೆ.

    ಬಾಗಲಕೋಟೆ ಜಿಲ್ಲೆ ಬಾದಾಮಿ ಶಾಸಕರೂ ಆಗಿರುವ ಸಿದ್ದರಾಮಯ್ಯ ಅವರು ತಮ್ಮ ಕ್ಷೇತ್ರದ ಅಭಿವೃದ್ಧಿ ಮಾಡಲು ಸಹಕಾರ ಕೋರಿ 5 ದಿನಗಳ ಅವಧಿಯಲ್ಲಿ ಎರಡು ಪತ್ರ ಬರೆದಿದ್ದಾರೆ. ಮೊದಲ ಪಾತ್ರ ಜೂನ್ 20 ರಂದು ಬರೆದಿದ್ದು, ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಪರ್ವತಿಕೆರೆ, ಗಂಜಿಕೆರೆ, ಹಿರೆಕೆರೆಗಳಿಗೆ ಮಲಪ್ರಭ ನದಿ (ಅಸಂಗಿ) ಬ್ಯಾರೇಜ್ ನಿಂದ ನೀರು ತುಂಬಿಸುವಂತೆ ಮನವಿ ಮಾಡಿದ್ದಾರೆ. ಅಲ್ಲದೇ ಪತ್ರದೊಂದಿಗೆ ಮೂರು ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಾಗಿ 12 ಕೋಟಿ ರೂ. ಅಂದಾಜು ಪಟ್ಟಿಯನ್ನು ಲಗತ್ತಿಸಿ ಸಿಎಂ ಹೆಚ್‍ಡಿ ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದ್ದಾರೆ.

    ಮತ್ತೊಂದು ಪತ್ರ ಜೂನ್ 25 ರಂದು ಬರೆಯಲಾಗಿದ್ದು, ಬಾಗಲಕೋಟೆ ಜಿಲ್ಲೆಯಲ್ಲಿ ಸಂಘಟಿತ ಹಾಗೂ ಅಸಂಘಟಿತ ವಲಯದಲ್ಲಿ ದುಡಿಯುವ ನೇಕಾರರ ವಲಸೆಯನ್ನು ತಪ್ಪಿಸಲು ಜವಳಿ ಪಾರ್ಕ್, ಪವರ್ ಲೂಮ್ ಪಾರ್ಕ್, ಗಾರ್ಮೆಂಟ್ ಕಂಪೆನಿ ನಿರ್ಮಾಣ ಬೇಡಿಕೆ ಈಡೇರಿಸುವಂತೆ ಮನವಿ ಮಾಡಿದ್ದಾರೆ.

  • ಪ್ರಣಬ್ ಭಾಷಣದ ಬಳಿಕ ಆರ್ ಎಸ್‍ಎಸ್ ಸೇರುವವರ ಸಂಖ್ಯೆ 4 ಪಟ್ಟು ಹೆಚ್ಚಳ

    ಪ್ರಣಬ್ ಭಾಷಣದ ಬಳಿಕ ಆರ್ ಎಸ್‍ಎಸ್ ಸೇರುವವರ ಸಂಖ್ಯೆ 4 ಪಟ್ಟು ಹೆಚ್ಚಳ

    ಕೋಲ್ಕತ್ತಾ: ಜೂನ್ 07 ರಂದು ನಾಗ್ಪುರದಲ್ಲಿ ನಡೆದ ಆರ್ ಎಸ್‍ಎಸ್ ಕಾರ್ಯಕ್ರಮದಲ್ಲಿ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಭಾಗವಹಿಸಿದ ಬಳಿಕ ಆರ್ ಎಸ್‍ಎಸ್ ಸೇರುವವರ ಸಂಖ್ಯೆ 4 ಹೆಚ್ಚಳವಾಗಿದೆ.

    ಈ ಕುರಿತು ಆರ್ ಎಸ್‍ಎಸ್ ಮಾಹಿತಿ ನೀಡಿದ್ದು, ಆರ್ ಎಸ್‍ಎಸ್ ಸೇರಲು ಜೂನ್ 1 ರಿಂದ 6 ಅವಧಿಯಲ್ಲಿ ಸಂಸ್ಥೆಯ ವೆಬ್ ಸೈಟ್‍ನಿಂದ ಸರಾಸರಿ 378 ಅರ್ಜಿಗಳು ಸಲ್ಲಿಕೆಯಾಗುತ್ತಿತ್ತು, ಆದರೆ ಜೂನ್ 7 ರಂದು 1,779 ಅರ್ಜಿಗಳು ಸಲ್ಲಿಕೆಯಾಗಿದೆ ಎಂದು ಬಂಗಾಳದ ಆರ್ ಎಸ್‍ಎಸ್ ಸದಸ್ಯರೊಬ್ಬರು ಮಾಹಿತಿ ನೀಡಿದ್ದಾರೆಂದು ಮಾಧ್ಯಮವೊಂದು ವರದಿ ಮಾಡಿದೆ.

    ಆರ್ ಎಸ್‍ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಣಬ್ ಅವರಿಗೆ ತೀವ್ರ ವಿರೋಧ ವ್ಯಕ್ತವಾಗಿದ್ದರೂ ಸಹ ಭಾಗಿಯಾಗಿದಕ್ಕಾಗಿ ಕೃತಜ್ಞತೆ ತಿಳಿಸಿ ಆರ್ ಎಸ್‍ಎಸ್ ಪತ್ರ ಬರೆದಿದೆ. ಸೋಮವಾರ ಈ ಕುರಿತು ಪತ್ರ ಬರೆದಿರುವ ಸಂಘದ ಮನಮೋಹನ್ ವೈದ್ಯ ಅವರು ಪ್ರಣಬ್ ಅವರ `ಒಂದು ಭಾರತ’ ಮತ್ತು `ಒಂದು ಸಂಸ್ಕೃತಿ’ ಅಭಿಪ್ರಾಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಪ್ರಣಬ್ ಅವರಿಗೆ ಪತ್ರ ರವಾನಿಸುವ ಮುನ್ನ ವೈದ್ಯ ಅವರು ಬಂಗಾಳದ ಆರ್ ಎಸ್‍ಎಸ್ ಕಾರ್ಯಕರ್ತರನ್ನ ಕುರಿತು ಮಾತನಾಡಿ, ಪ್ರಣಬ್ ಅವರಿಗೆ ವಿರೋಧ ವ್ಯಕ್ತಪಡಿಸಿದ ಬಳಿಕ ದೇಶದ್ಯಾಂತ ಆರ್ ಎಸ್‍ಎಸ್ ಕಾರ್ಯಕ್ರಮ ಪ್ರಸಾರವಾಗಿದೆ ಎಂದು ಹೇಳಿದ್ದಾರೆ. ಪ್ರಮುಖವಾಗಿ ಆರ್ ಎಸ್‍ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಕಾಂಗ್ರೆಸ್ ಪಕ್ಷದ ಹಲವು ಹಿರಿಯ ನಾಯಕರು ಬಹಿರಂಗವಾಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೇ ಪ್ರಣಬ್ ಅವರ ಪುತ್ರಿ ಕಾಂಗ್ರೆಸ್ ನಾಯಕಿ ಶರ್ಮಿಷ್ಠ ಮುಖರ್ಜಿ ಸಹ ತಮ್ಮ ವಿರೋಧ ತಿಳಿಸಿ ಟ್ವೀಟ್ ನಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದರು.

    ಸದ್ಯ ಆರ್ ಎಸ್‍ಎಸ್ ಪ್ರಣಬ್ ಅವರಿಗೆ ಬರೆದಿರುವ ಪತ್ರದ ಕುರಿತು ಪ್ರತಿಕ್ರಿಯೆ ನೀಡಲು ಶರ್ಮಿಷ್ಠ ಅವರು ನಿರಾಕರಿಸಿದ್ದಾರೆ. ಆರ್ ಎಸ್‍ಎಸ್ ಪ್ರಣಬ್ ಅವರಿಗೆ ಬರೆದಿರುವ ಪತ್ರದಲ್ಲಿ ಅವರನ್ನು ಪ್ರಣಬ್‍ಬಾಬು ಎಂದು ಸಂಬೋಧಿಸಲಾಗಿದೆ ಎನ್ನಲಾಗಿದ್ದು, ಕಾರ್ಯಕ್ರಮದಲ್ಲಿ ಪ್ರಣಬ್ ಅವರು ಭಾಗವಹಿಸುವ ಮೂಲಕ ತಮ್ಮನ್ನು ತಾವು ಪರಿಚಯಿಸಿಕೊಂಡಿದ್ದಾರೆ. ಅವರ ಭಾಷಣ ಎಲ್ಲರ ಮನಸ್ಸು ತಟ್ಟಿದೆ ಎಂದಿದ್ದಾರೆ. ಅಲ್ಲದೇ ಮೋಹನ್ ಭಾಗವತ್ ಹಾಗೂ ಮುಖರ್ಜಿ ಅವರ ದೃಷ್ಟಿಕೋನ ಒಂದೇ ರೀತಿ ಇದೆ ಎಂದು ಪತ್ರದಲ್ಲಿ ಹೇಳಲಾಗಿದೆ. ಪತ್ರದ ಕೊನೆಯಲ್ಲಿ ಆರ್ ಎಸ್‍ಎಸ್‍ಗೆ ವ್ಯಕ್ತವಾಗುತ್ತಿರುವ ಜನ ಬೆಂಬಲದ ಕುರಿತು ಕೂಡ ಉಲ್ಲೇಖಿಸಿದ್ದಾರೆ.

  • ಕೇಳಿದ್ದು 30 ದಿನ, ಸಿಕ್ಕಿದ್ದು 45 ದಿನ- ಪೊಲೀಸ್ ಪೇದೆ ಬರೆದ ರಜೆ ಪತ್ರ ಫುಲ್ ವೈರಲ್

    ಕೇಳಿದ್ದು 30 ದಿನ, ಸಿಕ್ಕಿದ್ದು 45 ದಿನ- ಪೊಲೀಸ್ ಪೇದೆ ಬರೆದ ರಜೆ ಪತ್ರ ಫುಲ್ ವೈರಲ್

    ಲಕ್ನೋ: ಪೊಲೀಸರು ತಮ್ಮ ವೈಯಕ್ತಿಯ ಜೀವನದಿಂದ ದೂರವಿದ್ದು, ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಾರೆ. ಆದರೆ ಈಗ ಪೊಲೀಸ್ ಪೇದೆಯೊಬ್ಬರು ರಜೆ ಕೋರಿ ಅಧಿಕಾರಿಗಳಿಗೆ ಬರೆದ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯ ಪೊಲೀಸ್ ಕಾನ್ಸ್ ಟೇಬಲ್ ಸೋಮ್‍ ಸಿಂಗ್ ಎಂಬವರು ರಜೆಗಾಗಿ ಬರೆದ ಪತ್ರ ವೈರಲ್ ಆಗಿದೆ. ಸೋಮ್‍ಸಿಂಗ್ ತಮ್ಮ ವೈಯಕ್ತಿಕ ಜೀವನದಿಂದ ದೂರು ಇದ್ದು ಮರಳಿ ಕುಟುಂಬಕ್ಕೆ ಹೋಗಬೇಕೆಂದು ನಿರ್ಧರಿಸಿದ್ದರು. ಆದ್ದರಿಂದ ಅವರು ಒಂದು ತಿಂಗಳ ರಜೆಯನ್ನು ಕೋರಿ ಅರ್ಜಿಯನ್ನು ಸಲ್ಲಿಸಿದರು. ಆದರೆ ಅವರು ರಜೆಗಾಗಿ ಉಲ್ಲೇಖಿಸಿದ ಕಾರಣ ಅವರ ಅರ್ಜಿಯಲ್ಲಿ ಎಲ್ಲರ ಗಮನ ಸೆಳೆದಿದ್ದು, ಆ ಪತ್ರವೀಗ ವೈರಲ್ ಆಗಿದೆ.

    ಸೋಮ್ ಸಿಂಗ್ ಅವರು ಪತ್ರದಲ್ಲಿ `ಕುಟುಂಬ ವಿಸ್ತರಿಸಲು’ ಮತ್ತು ನನ್ನ ಕುಟುಂದವರ ಜೊತೆ ಕೆಲ ಕಾಲ ಸಮಯ ಕಳೆಯಬೇಕು ಆದ್ದರಿಂದ ನನಗೆ 30 ರಜೆ ಬೇಕು ಎಂದು ಉಲ್ಲೇಖಿಸಿದ್ದಾರೆ. ಸಿಂಗ್ ಅವರು ಜೂನ್ 23 ರಿಂದ ರಜೆ ತೆಗೆದುಕೊಳ್ಳಲು ಅನುಮತಿ ನೀಡಬೇಕೆಂದು ಕೋರಿದ್ದಾರೆ. ಇವರ ರಜೆ ಅರ್ಜಿಯನ್ನು ನೋಡಿದ ಅಧಿಕಾರಿಗಳು ಸಿಂಗ್ ಅವರಿಗೆ ಬೇರೆ ಕಾರಣ ಕೊಟ್ಟು ಮನವಿ ಮಾಡುವಂತೆ ಹೇಳಿದ್ದಾರೆ. ಆದರೆ ಸಿಂಗ್ ಇದನ್ನು ಒಪ್ಪದೇ ಅದೇ ಕಾರಣ ನೀಡಿದ್ದಾರೆ.

    ಅಧಿಕಾರಿಗಳು  ಸಿಂಗ್ ಅವರಿಗೆ ಜೂನ್ 23 ರಿಂದ 45 ದಿನಗಳ ರಜೆ ನೀಡಿದ್ದಾರೆ. ಅಂದರೆ ಸೋಮ್‍ ಸಿಂಗ್ 30 ದಿನ ರಜೆ ಕೇಳಿದರೆ ಅಧಿಕಾರಿಗಳು 10 ದಿನ ಅಧಿಕವಾಗಿ ಸೇರಿಸಿ ಒಟ್ಟು 45 ದಿನಗಳ ರಜೆಗೆ ಸಹಿ ಹಾಕಿದ್ದಾರೆ.

  • ರಾಜಭವನದ ಅಧಿಕಾರಿಗಳ ವಿರುದ್ಧ ಖಾರವಾಗಿ ಪತ್ರ ಬರೆದು ಪ್ರತಿಭಟಿಸಿದ ಸ್ಪೀಕರ್

    ರಾಜಭವನದ ಅಧಿಕಾರಿಗಳ ವಿರುದ್ಧ ಖಾರವಾಗಿ ಪತ್ರ ಬರೆದು ಪ್ರತಿಭಟಿಸಿದ ಸ್ಪೀಕರ್

    ಬೆಂಗಳೂರು: ರಾಜಭವನದ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಸ್ಪೀಕರ್ ರಮೇಶ್ ಕುಮಾರ್ ಅವರು ಸರ್ಕಾರ ಮುಖ್ಯ ಕಾರ್ಯದರ್ಶಿ ಅವರಿಗೆ ಖಾರವಾಗಿ ಪತ್ರ ಬರೆದಿದ್ದಾರೆ.

    ಈ ಕುರಿತು ಪತ್ರದಲ್ಲಿ ಅಸಮಾಧಾನ ಹೊರ ಹಾಕಿರುವ ಸ್ಪೀಕರ್, ರಾಜ್ಯ ಮುಖ್ಯ ಕಾರ್ಯದರ್ಶಿಗಳಾದ ನಿಮ್ಮ ಆಹ್ವಾನದ ಮೇಲೆ ಸಚಿವ ಸಂಪುಟ ಸಚಿವರ ಪ್ರಮಾಣ ವಚನ ಹಾಗೂ ಪ್ರತಿಜ್ಞಾ ವಿಧಿ ಸಮಾರಂಭಕ್ಕೆ ಆಗಮಿಸಿದ್ದೆ. ಆದರೆ ಈ ವೇಳೆ ರಾಜಭವನದ ಮುಂದೆ ಅರ್ಧ ಗಂಟೆ ಕಾದಿದ್ದು, ಅಸಹಾಯಕನಾಗಿ ಹಿಂದಿರುತ್ತೇನೆ, ಈ ಪರಿಸ್ಥಿತಿಗೆ ಯಾರು ಕಾರಣ ಎಂಬುವುದು ನನಗೆ ಗೊತ್ತಿಲ್ಲ ಎಂದು ತಿಳಿಸಿದ್ದಾರೆ.

    ಅಧಿಕಾರಿಗಳ ವಿರುದ್ಧ ಆಕ್ರೋಶ: ಮಾನ್ಯ ಮುಖ್ಯ ಮಂತ್ರಿಗಳು, ಉಪ ಮುಖ್ಯಮಂತಿಗಳು, ವಿಧಾನಸಭಾ ಪರಿಷತ್ ಸಭಾಪತಿಗಳ ಹೊರತಾಗಿ ಮತ್ತೊಂದು ಸಾಂವಿಧಾನಿಕ ಸ್ಥಾನ ವಿಧಾನಸಭಾಧ್ಯಕ್ಷರದ್ದು ಮಾತ್ರ. ಮುಖ್ಯ ಮಂತ್ರಿಗಳು ಹಾಗೂ ಸಭಾಪತಿಗಳಿಗೆ ಒಂದು ಗೌರವಯುತ ವ್ಯವಸ್ಥೆ ಮಾಡುವುದು ಜವಾಬ್ದಾರಿಯಾಗಿರುತ್ತದೆ. ನಿಮ್ಮ ಅಧಿಕಾರಿಗಳ ದುರಹಂಕಾರ, ಅಜ್ಞಾನ ಹಾಗೂ ರಾಜಭವನದ ಒಳಗಿರತಕ್ಕಂತಹ ಅಧಿಕಾರಿಗಳ ದುರಂಹಾರ ಇದಕ್ಕೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಇದೇ ವೇಳೆ ರಾಜಭವನದ ಒಳಗೂ ಹಾಗೂ ಹೊರಗೂ ತುಂಬಿದ್ದಂತಹ ವಾಹನಗಳು ಯಾರದ್ದು ಎಂದು ಪ್ರಶ್ನಿಸಿರುವ ರಮೇಶ್ ಕುಮಾರ್, ಯಾರು ಅವರಿಗೆ ಅನುಮತಿ ನೀಡಿದರು ಹಾಗೂ ಸಾರ್ವಜನಿಕ ಜೀವನದಲ್ಲಿ ಇವರ ಸ್ಥಾನಮಾನ ಏನೆಂದು ತಿಳಿದುಕೊಳ್ಳಲು ಕುತೂಹಲನಾಗಿದ್ದೇನೆ. ಈ ಅಪರಾಧಕ್ಕೆ ಪ್ರತಿಭಟನೆ ವ್ಯಕ್ತಪಡಿಸುತ್ತಿದ್ದೇನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.