Tag: letter

  • ಮೇಕೆದಾಟು ಯೋಜನೆ: ಮಾತುಕತೆಗೆ ಸಿದ್ಧವಿಲ್ಲವೆಂದ ತಮಿಳುನಾಡು

    ಮೇಕೆದಾಟು ಯೋಜನೆ: ಮಾತುಕತೆಗೆ ಸಿದ್ಧವಿಲ್ಲವೆಂದ ತಮಿಳುನಾಡು

    ಬೆಂಗಳೂರು: ಮೇಕೆದಾಟು ಯೋಜನೆ ಸಂಬಂಧ ಕರ್ನಾಟಕದ ಜೊತೆ ಮಾತುಕತೆಗೆ ಸಿದ್ಧವಿಲ್ಲವೆಂದು ತಮಿಳುನಾಡು ಸರ್ಕಾರ ಪತ್ರ ಬರೆಯುವ ಮೂಲಕ ಮತ್ತೆ ಕ್ಯಾತೆ ಎತ್ತಿದೆ.

    ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಬರೆದ ಪತ್ರಕ್ಕೆ ಪ್ರತಿಕ್ರಿಯಿಸಿ ತಮಿಳುನಾಡು ಸರ್ಕಾರ ಮರು ಪತ್ರ ಕಳುಹಿಸಿದೆ. ಪತ್ರದಲ್ಲಿ ಮೇಕೆದಾಟು ಯೋಜನೆ ನ್ಯಾಯಾಲಯದಲ್ಲಿ ಇರುವುದರಿಂದ ಕರ್ನಾಟಕದ ಜೊತೆ ಯಾವುದೇ ಮಾತುಕತೆ ನಡೆಸಲು ತಮಿಳುನಾಡು ಸಿದ್ಧವಿಲ್ಲವೆಂದು ತಿಳಿಸಿದೆ.

    ಡಿಕೆಶಿ ಬರೆದ ಪತ್ರಕ್ಕೂ ಡೋಂಟ್ ಕೇರ್ ಎಂದಿರುವ ತಮಿಳುನಾಡು, ತಾನು ನ್ಯಾಯಾಲಯದಲ್ಲೇ ಮೇಕೆದಾಟು ಯೋಜನೆಯನ್ನು ನೋಡಿಕೊಳ್ಳುತ್ತೇನೆಂದು ಪರೋಕ್ಷವಾಗಿ ಕರ್ನಾಟಕದೊಂದಿಗೆ ಮತ್ತೆ ಕ್ಯಾತೆ ಎತ್ತಿದೆ. ಇದನ್ನೂ ಓದಿ: ಮೇಕೆದಾಟು ವಿಚಾರ ಸಮಸ್ಯೆ ಬಗೆಹರಿಸಲು ತಮಿಳುನಾಡಿಗೆ ಪತ್ರ ಬರೆದ ಡಿಕೆಶಿ

    ರಾಜ್ಯದ ಮೇಕೆದಾಟು ಯೋಜನೆಗೆ ಕೇಂದ್ರ ಜಲಸಂಪನ್ಮೂಲ ಇಲಾಖೆ ಒಪ್ಪಿಗೆ ಸೂಚಿಸಿದ್ದರ ಬೆನ್ನಲ್ಲೇ, ತಮಿಳುನಾಡು ಸರ್ಕಾರ ಯೋಜನೆಗೆ ತಡೆ ಕೋರುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿತ್ತು. ಅಲ್ಲದೇ ಕಾನೂನು ಹೋರಾಟಕ್ಕೂ ಸಹ ತಜ್ಞರನ್ನು ಕಳುಹಿಸಿತ್ತು. ಈ ಹಿನ್ನೆಲೆಯಲ್ಲಿ ಮೇಕೆದಾಟು ಯೋಜನೆಯ ವಾಸ್ತವಾಂಶ ತಿಳಿಸಲು ಡಿ.ಕೆ.ಶಿವಕುಮಾರ್ ಪತ್ರ ಬರೆದು, ಭೇಟಿಗೆ ಅವಕಾಶ ನೀಡಬೇಕೆಂದು ತಮಿಳುನಾಡು ಮುಖ್ಯಮಂತ್ರಿ ಅವರಲ್ಲಿ ಮನವಿ ಮಾಡಿಕೊಂಡಿದ್ದರು. ಅಲ್ಲದೇ ಮಾತುಕತೆಯ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ಬಗ್ಗೆ ಪತ್ರದಲ್ಲಿ ಉಲ್ಲೇಖಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ರೈತ ಮಹಿಳೆ ಜಯಶ್ರೀ ಮತ್ತೆ ಕಣ್ಣೀರು

    ರೈತ ಮಹಿಳೆ ಜಯಶ್ರೀ ಮತ್ತೆ ಕಣ್ಣೀರು

    ಬೆಳಗಾವಿ: ಅನಾಮಧೇಯ ವ್ಯಕ್ತಿಯಿಂದ ಪತ್ರ ಬಂದಿದ್ದು, ಇದರಿಂದ ರೈತ ಮಹಿಳೆ ಜಯಶ್ರೀ ಮತ್ತೆ ಕಣ್ಣೀರಿಟ್ಟಿದ್ದಾರೆ.

    ಇಂದು ಮತ್ತೆ ಬೆಳಗಾವಿ ಡಿಸಿ ಕಚೇರಿ ಎದುರು ಕಬ್ಬಿನ ಬೆಲೆ ನಿಗದಿ ಹಾಗೂ ಸಕ್ಕರೆ ಕಾರ್ಖಾನೆಗಳಿಂದ ಬಾಕಿ ಬಿಲ್ ಕೊಡಿಸುವಂತೆ ಆಗ್ರಹಿಸಿ ರೈತರು ಇಂದಿನಿಂದ ಆಹೋ ರಾತ್ರಿ ಧರಣಿ ಆರಂಭಿಸಿದ್ದಾರೆ. ಈ ವೇಳೆ ಜಯಶ್ರೀ ಹೆಸರಿಗೆ ಒಂದು ಅನಾಮಧೇಯ ವ್ಯಕ್ತಿಯಿಂದ ಪತ್ರ ಬಂದಿದೆ. ಪತ್ರ ನೋಡುತ್ತಿದ್ದಂತೆ ಜಯಶ್ರೀ ಕಣ್ಣೀರಿಟ್ಟಿದ್ದಾರೆ.

    ಪತ್ರ ನಾಲ್ಕು ಪುಟಗಳಲ್ಲಿದ್ದು, ರೈತ ಮಹಿಳೆ ಜಯಶ್ರೀಗೆ ಅವ್ಯಾಚ ಶಬ್ದಗಳಿಂದ ನಿಂದನೆ ಮಾಡಲಾಗಿದೆ. ಜೆಡಿಎಸ್ ಕಾರ್ಯಕರ್ತರೇ ಇದನ್ನ ಮಾಡಿರುವದಾಗಿ ಜಯಶ್ರೀ ಆರೋಪಿಸಿದ್ದು, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಬುದ್ಧಿವಾದ ಹೇಳುವಂತೆ ಜಯಶ್ರೀ ಮನವಿ ಮಾಡಿದ್ದಾರೆ.

    ಬೆಳಗಾವಿಯಲ್ಲಿ ತಣ್ಣಗಾಗಿದ್ದ ಕಬ್ಬು ಬೆಳೆಗಾರರ ಹೋರಾಟ ಮತ್ತೆ ಆರಂಭಾವಾಗಿದೆ. ಭಜನೆ ಮಾಡುವ ಮೂಲಕ ವಿಭಿನ್ನವಾಗಿ ಪ್ರತಿಭಟನೆ ಮಾಡಿ ರೈತರು ಆಕ್ರೋಶ ವ್ಯಕ್ತಪಡಿಸಿದ್ದು ಮನೆಯಿಂದ ಊಟ ತಂದು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಗೆ ಕಳಸಾ ಬಂಡೂರಿ ಹೋರಾಟಗಾರರು ಸಾಥ್ ನೀಡಿದ್ದು, ತಕ್ಷಣವೇ ಕಳಸಾ ಬಂಡೂರಿ ನಾಲಾ ಜೋಡಣೆ ಕಾಮಗಾರಿ ಆರಂಭವಾಗಬೇಕು ಹಾಗೂ ರೈತರ ಸಮಸ್ಯೆ ಬಗೆ ಹರಿಸಬೇಕು ಇಲ್ಲವಾದಲ್ಲಿ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸುವ ಎಚ್ಚರಿಕೆಯನ್ನ ರೈತರು ನೀಡಿದ್ದಾರೆ.

    ಈ ಹಿಂದೆ ರೈತರು ಪ್ರತಿಭಟನೆ ಮಾಡುತ್ತಿದ್ದಾಗ ಕುಮಾರಸ್ವಾಮಿ ಅವರು, ಇಷ್ಟು ದಿನ ಎಲ್ಲಿ ಮಲಗಿದ್ದೆ? ಎಂದು ರೈತ ಮಹಿಳೆ ಜಯಶ್ರೀಗೆ ಪ್ರಶ್ನಿಸಿದ್ದರು. ಇದರಿಂದ ಜಯಶ್ರೀ ತನ್ನ ವ್ಯಕ್ತಿತ್ವಕ್ಕೆ ಚ್ಯುತಿ ತಂದಿದೆ ಎಂದು ಕಣ್ಣೀರಿಟ್ಟಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೇಕೆದಾಟು ವಿಚಾರ ಸಮಸ್ಯೆ ಬಗೆಹರಿಸಲು ತಮಿಳುನಾಡಿಗೆ ಪತ್ರ ಬರೆದ ಡಿಕೆಶಿ

    ಮೇಕೆದಾಟು ವಿಚಾರ ಸಮಸ್ಯೆ ಬಗೆಹರಿಸಲು ತಮಿಳುನಾಡಿಗೆ ಪತ್ರ ಬರೆದ ಡಿಕೆಶಿ

    ಬೆಂಗಳೂರು: ಮೇಕೆದಾಟು ಸಮಸ್ಯೆಯನ್ನು ಬಗೆಹರಿಸಲು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಅವರಿಗೆ  ಪತ್ರ ಬರೆದಿದ್ದಾರೆ.

    ರಾಜ್ಯದ ಮೇಕೆದಾಟು ಯೋಜನೆಗೆ ಕೇಂದ್ರ ಜಲಸಂಪನ್ಮೂಲ ಇಲಾಖೆ ಒಪ್ಪಿಗೆ ಸೂಚಿಸಿದ್ದರ ಬೆನ್ನಲ್ಲೇ, ತಮಿಳುನಾಡು ಸರ್ಕಾರ ಯೋಜನೆಗೆ ತಡೆ ಕೋರುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿತ್ತು. ಅಲ್ಲದೇ ಕಾನೂನು ಹೋರಾಟಕ್ಕೂ ಸಹ ತಜ್ಞರನ್ನು ಕಳುಹಿಸಿತ್ತು. ಈ ಹಿನ್ನೆಲೆಯಲ್ಲಿ ಮೇಕೆದಾಟು ಯೋಜನೆಯ ವಾಸ್ತವಾಂಶ ತಿಳಿಸಲು ಡಿ.ಕೆ.ಶಿವಕುಮಾರ್ ಪತ್ರ ಬರೆದು, ಭೇಟಿಗೆ ಅವಕಾಶ ಕೋರಿದ್ದಾರೆ.

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೇಕೆದಾಟು ಯೋಜನೆ ಕುರಿತು ತಮಿಳುನಾಡು ಸರ್ಕಾರ ತಪ್ಪು ಕಲ್ಪನೆಯನ್ನು ಹೊಂದಿದೆ. ಹೀಗಾಗಿ ಯೋಜನೆಯ ವಾಸ್ತವಾಂಶ ತಿಳಿಸಲು ತಮಿಳುನಾಡು ಮುಖ್ಯಮಂತ್ರಿ ಭೇಟಿಗೆ ಪತ್ರ ಬರೆದಿದ್ದೇವೆ. ಮೇಕೆದಾಟು ವಿಚಾರದಲ್ಲಿ ಉಂಟಾಗಿರುವ ಸಮಸ್ಯೆಯನ್ನು ಬಗೆಹರಿಸಲು ರಾಜ್ಯ ಬಯಸಿದೆ. ಆದರೆ ಬಿಕ್ಕಟ್ಟು ಬಗೆಹರಿಸಲು ತಮಿಳುನಾಡು ಸಹಕಾರ ಕೊಡಬೇಕು ಎಂದು ಹೇಳಿದ್ದಾರೆ.

    ತಮಿಳುನಾಡಿನ ಜಾಗದಲ್ಲಿ ನಾವು ಮೇಕೆದಾಟು ಮಾಡುತ್ತಿಲ್ಲ. ನಮ್ಮ ಜಾಗದಲ್ಲಿ ನಾವು ಅಣೆಕಟ್ಟೆ ನಿರ್ಮಿಸುತ್ತಿದ್ದೇವೆ. ಮೇಕೆದಾಟು ಅಣೆಕಟ್ಟೆ ನೀರನ್ನು ಕೃಷಿಗೆ ಉಪಯೋಗಿಸಲು ಬರುವುದಿಲ್ಲ. ಮೇಕೆದಾಟು ನೀರನ್ನು ತಗೆದುಕೊಂಡು ನೀರಾವರಿ ಮಾಡಲು ಸಾಧ್ಯವಿಲ್ಲ. ನಮ್ಮ ರಾಜ್ಯದ ಹಣ ಮತ್ತು ನಮ್ಮ ಜಾಗದಲ್ಲಿ ಯೋಜನೆ ಮಾಡುತ್ತಿದ್ದೇವೆ. ಮೇಕೆದಾಟುವಿನಿಂದ ವಿದ್ಯುತ್ ಉತ್ಪಾದನೆ ಮಾಡಿಕೊಳ್ಳಬಹುದು. ಇದನ್ನು ಬಿಟ್ಟರೆ ಯಾವುದೇ ಬಳಕೆ ಮಾಡಿಕೊಳ್ಳಲು ಆಗುವುದಿಲ್ಲವೆಂದು ತಿಳಿಸಿದರು.

    ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಹೆಚ್ಚು ಉಪಯೋಗವಾಗಲಿದೆ. ಮೇಕೆದಾಟು ಯೋಜನೆ ನಮ್ಮ ರಾಜ್ಯದ ಹಕ್ಕು. ನಮಗೆ ಬೇರೆ ರಾಜ್ಯದ ಮೇಲೆ ಯಾವುದೇ ದ್ವೇಷ ಇಲ್ಲ. ಅವರು ನಮ್ಮ ಸಹೋದರರು. ಅವರೂ ಸಹ ನಮ್ಮ ಜೊತೆ ಮಾತಾಡಬೇಕು. ನಾವು ಅವರ ಜೊತೆ ಮಾತಾಡಬೇಕು. ಅವರನ್ನು ಬಿಟ್ಟು ನಾವು ಯೋಜನೆ ಮಾಡಲು ಆಗುವುದಿಲ್ಲವೆಂದು ಹೇಳಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪೋಷಕ, ಮಾರ್ಗದರ್ಶಕ, ಹರಸಿ ಆಶೀರ್ವಾದಿಸುವ ಕೈ, ಶಕ್ತಿ, ಒಂದು ಹೆಗಲನ್ನು ಕಳೆದುಕೊಂಡಿದ್ದೇನೆ: ಕಿಚ್ಚನ ಭಾವನಾತ್ಮಕ ಪತ್ರ

    ಪೋಷಕ, ಮಾರ್ಗದರ್ಶಕ, ಹರಸಿ ಆಶೀರ್ವಾದಿಸುವ ಕೈ, ಶಕ್ತಿ, ಒಂದು ಹೆಗಲನ್ನು ಕಳೆದುಕೊಂಡಿದ್ದೇನೆ: ಕಿಚ್ಚನ ಭಾವನಾತ್ಮಕ ಪತ್ರ

    ಬೆಂಗಳೂರು: ಕಿಡ್ನಿ ಹಾಗೂ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಅಂಬರೀಶ್ ಶನಿವಾರ ರಾತ್ರಿ ಮೃತಪಟ್ಟಿದ್ದರು. ತನ್ನ ಆತ್ಮೀಯರಾಗಿದ್ದ ಅಂಬರೀಶ್ ಅವರನ್ನು ಕಳೆದುಕೊಂಡು ಕಿಚ್ಚ ಸುದೀಪ್ ಭಾವನಾತ್ಮಕ ಪತ್ರವೊಂದನ್ನು ಬರೆದಿದ್ದಾರೆ.

    ಪತ್ರದಲ್ಲಿ ಏನಿದೆ?
    ರಾತ್ರಿ ಮಲಗಿರುವ ಸಮಯದಲ್ಲಿ ನಿಮಗೆ ಕೆಟ್ಟ ಕನಸು ಬಿದ್ದಾಗ ಆ ಕನಸು ಕಾಣಲು ಇಷ್ಟವಿಲ್ಲದಿದ್ದಾಗ, ನೀವು ಕೆಟ್ಟ ಕನಸು ಬರದಿರಲಿ ಎಂದು ಎಚ್ಚರವಾಗುತ್ತಿರಾ.

    ಈಗ ಅಂಬರೀಶ್ ಅವರದ್ದು ಸಾವಿನ ಕನಸು. ಸಿನಿಮಾ ಜಗತ್ತಿಗೆ ಮತ್ತೊಂದು ದೊಡ್ಡ ಆಘಾತವಾಗಿದ್ದು, ಯಾರೂ ಬಯಸದಂತಹ ಅತ್ಯಂತ ಕೆಟ್ಟ ಘಟನೆಯೊಂದು ನಡೆದಿದೆ. ನಾವು ಮತ್ತೊಬ್ಬ ಲೆಜೆಂಡ್ ವ್ಯಕ್ತಿಯನ್ನು ಕಳೆದುಕೊಂಡಿದ್ದೇವೆ. ಅಂಬರೀಶ್ ಅವರ ಜೊತೆ ನಾವು ನಾಯಕ, ಒಬ್ಬ ಪೋಷಕ, ಒಬ್ಬ ಮಾರ್ಗದರ್ಶಕ, ಹರಸಿ ಆಶೀರ್ವಾದಿಸುವ ಕೈ, ಶಕ್ತಿ, ಒಂದು ಧ್ವನಿ, ಒಂದು ಹೆಗಲು, ಒಬ್ಬ ಸ್ನೇಹಿತನನ್ನು, ಒಂದು ಸುಂದರವಾದ ಆತ್ಮವನ್ನು ಕಳೆದುಕೊಂಡಿದ್ದೇವೆ. ಇದನ್ನೂ ಓದಿ:ಬೆಂಗ್ಳೂರಿಗರೇ ಗಮನಿಸಿ, ಅಂಬಿ ಅಂತಿಮ ಯಾನ – ಯಾವ ಸಮಯಕ್ಕೆ ಏನು ನಿಗದಿಯಾಗಿದೆ?

    ಅಂಬಿ ಸಾವಿನ ಸುದ್ದಿ ಕೇಳಿ ಹಾಗೂ ಈ ರೀತಿ ಮಲಗಿರುವುದು ನೋಡಿ ನನ್ನ ಹೃದಯ ಛಿದ್ರವಾಗಿದೆ. ಅವರು ಹೋಗಿ ಬಂದ ಕಡೆಯಲ್ಲೆಲ್ಲಾ ಜನರ ಅವರಿಗೆ ಗೌರವಿಸುತ್ತಿದ್ದ ರತ್ನ ಅವರು. ಜೀವನದಲ್ಲಿ ಯಾವುದೇ ಎಲ್ಲೆಗಳಿಲ್ಲದೇ ರಾಜನಂತೆ ಬದುಕಿದ್ದಾರೆ. ಅಂಬಿ ದೇವರ ಮಗ ಎಂದು ಅವರನ್ನು ನೋಡಿ ನನಗೆ ಯಾವಾಗಲೂ ಎನಿಸುತ್ತಿತ್ತು. ಅಂಬಿಯಂತಹ ಮತ್ತೊಬ್ಬ ವ್ಯಕ್ತಿಯನ್ನು ನಾನು ಕಂಡಿಲ್ಲ. ಅವರು ಹೋದ ಜಾಗಗಳೆಲ್ಲಾ ಸ್ನೇಹಿತರೇ. ಅವರನ್ನು ನೋಡಿ ನೋಡದಂತೆ ಹೋದ ಒಬ್ಬ ವ್ಯಕ್ತಿಯನ್ನು ನಾನು ಇದುವರೆಗೂ ಕಂಡಿಲ್ಲ. ಅವರಿಗೆ ಎಲ್ಲ ಕ್ಷೇತ್ರದಲ್ಲೂ ಸ್ನೇಹಿತರು ಮಾತ್ರ ಇದ್ದರು ಹೊರತು ಒಬ್ಬ ವೈರಿ ಕೂಡ ಇರಲಿಲ್ಲ ಎನ್ನುವುದು ತಿಳಿದು ಬಂತು. ಇದನ್ನೂ ಓದಿ: ಕರ್ಮಭೂಮಿಯಲ್ಲಿ ಕರ್ಣನಿಗೆ ನಮನ – ಅಭಿಮಾನಿಗಳನ್ನು ನಿಯಂತ್ರಿಸಲು ವೇದಿಕೆ ಏರಿದ ಯಶ್

    ಚಿಕ್ಕದಾಗಿ ಹೇಳಬೇಕೆಂದರೆ ಅಂಬಿ ಒಬ್ಬ ಸಂಪೂರ್ಣ ಸರಳ ಜೀವಿ ಹಾಗೂ ಕರುಣಾಮಯಿ. ಕೆಲವೊಂದು ಕಥೆಗಳು ಹಾಗೂ ಕೆಲ ವ್ಯಕ್ತಿಗಳ ಜೀವನ ಎಂದು ಕೊನೆಯಾಗಬಾರದು ಎಂದು ನಾವು ಇಷ್ಟಪಡುತ್ತೇವೆ. ಅಂಬಿ ಕೂಡ ಇದೇ ರೀತಿ ಬದುಕುತ್ತಿದ್ದರು. ಅವರು ನಮ್ಮಿಂದ ದೂರ ಆಗಿರುವುದು ಎಲ್ಲರಿಗೂ ಒಂದು ದುಃಸ್ವಪ್ನವಾಗಿದೆ.

    ನಾನು ಈ ಹಿಂದೆ ನಡೆದ ಕೆಲವು ಸಂದರ್ಭಗಳನ್ನು ರಿವೈಂಡ್ ಮಾಡಲು ಇಷ್ಟಪಡುತ್ತೇನೆ. ಸಮಯವನ್ನು ಹಾಗೇ ಒಮ್ಮೆ ಹಿಂದಕ್ಕೆ ತಿರುಗಿಸಬೇಕು. ನನ್ನ ಸಿನಿ ಬದುಕಿನಲ್ಲಿ ನಾನು ಮೊಟ್ಟ ಮೊದಲ ಬಾರಿ ಕ್ಯಾಮೆರಾ ಮುಂದೆ ನಿಂತಾಗ ನಾನು ಅಂಬಿ ಮಾಮನ ಕಾಲಿಗೆ ಬಿದ್ದ ಆ ಕ್ಷಣ ಮತ್ತೆ ಬರಬೇಕು. ಅಲ್ಲದೇ ಶಿವಮೊಗ್ಗದ ಮನೆಯ ಬಳಿ ಬೆಲ್ ಸದ್ದು ಕೇಳಿ ಬಾಗಿಲ ಬಳಿ ಬಂದಾಗ ಬಿಳಿ ಜುಬ್ಬಾ ಧರಿಸಿ, ಜೋಳಿಗೆ ರೀತಿಯ ಬ್ಯಾಗ್ ನೇತಾಕಿಕೊಂಡು ನನ್ನ ಎದುರಿದ್ದರು. ನಾನು ಅಂಬಿಯನ್ನು ನೋಡಿದ ಮೊದಲ ಘಳಿಗೆ ಅದು. ನನ್ನ ಹಿಂದ ಅಪ್ಪ ನಿಂತಿದ್ದರು ಒಳಗೆ ಬಾರಯ್ಯಾ ಅಂಬಿ ಎಂದು ಕರೆದ ಆ ಕ್ಷಣ ಮತ್ತೆ ಬರಬೇಕು. ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇವೆ ಮಾಮ ಎಂದು ಕಿಚ್ಚ ಸುದೀಪ್ ಪತ್ರ ಬರೆದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರೇಪ್ ಆರೋಪಿಯ ಜಾಮೀನು ರದ್ದುಗೊಳಿಸಿ- ಮೋದಿಗೆ ಅಪ್ರಾಪ್ತ ಬಾಲಕಿಯ ತಂದೆ ಪತ್ರ

    ರೇಪ್ ಆರೋಪಿಯ ಜಾಮೀನು ರದ್ದುಗೊಳಿಸಿ- ಮೋದಿಗೆ ಅಪ್ರಾಪ್ತ ಬಾಲಕಿಯ ತಂದೆ ಪತ್ರ

    ಹೈದರಾಬಾದ್: ಶಾಲೆಯಲ್ಲಿ 4 ವರ್ಷದ ಬಾಲಕಿಯನ್ನು ಅತ್ಯಾಚಾರಗೈದ ಆರೋಪಿಗೆ ಸಿಕ್ಕಿರುವ ಜಾಮೀನನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಬಾಲಕಿಯ ತಂದೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.

    ಸೆಪ್ಟೆಂಬರ್ 14 ರಂದು ಶಾಲಾ ಸಿಬ್ಬಂದಿ ಮೊಹದ್ ಜಿಲಾನಿ ಎಂಬಾತ ಶಾಲೆಯಲ್ಲಿ ಓದುತ್ತಿದ್ದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದ. ಈ ಕುರಿತು ಬಾಲಕಿಯ ತಂದೆ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ಮೊಹದ್‍ನನ್ನು ಪೊಲೀಸರು ಬಂಧಿಸಿದ್ದರು.

    ಬಳಿಕ ಆರೋಪಿಯು ಜಾಮೀನಿಗಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ. ಸೆಪ್ಟೆಂಬರ್‍ನಲ್ಲಿ ನ್ಯಾಯಾಲಯವು ಜಾಮೀನು ಮಂಜೂರು ಮಾಡಲು ನಿರಾಕರಿಸಿತ್ತು. ನವೆಂಬರ್ 12 ರಂದು ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು.

    ಇದರಿಂದ ಮನನೊಂದ ಬಾಲಕಿಯ ತಂದೆ ನ್ಯಾಯಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ. ನಮ್ಮದು ಮಧ್ಯಮವರ್ಗದ ಕುಟುಂಬ, ನನಗೆ ಕೆಲಸವು ಇಲ್ಲ, ಕುಟುಂಬಸ್ಥರೆಲ್ಲ ಮಗಳ ಭವಿಷ್ಯಕ್ಕಾಗಿ ಹೈದರಾಬಾದ್‍ನಲ್ಲಿದ್ದೇವೆ. ನನ್ನ ಮಗಳ ಮುಂದಿನ ವಿದ್ಯಾಭ್ಯಾಸಕ್ಕಾಗಿ ಸರ್ಕಾರದಿಂದ ಸಹಾಯ ಕಲ್ಪಿಸಿಕೊಡಿ ಎಂದು ಬರೆದಿದ್ದಾರೆ. ಹಾಗೆಯೇ ಆರೋಪಿ ಮೊಹದ್‍ಗೆ ಸಿಕ್ಕಿರುವ ಜಾಮೀನನ್ನು ರದ್ದು ಪಡಿಸಬೇಕು. ಆರೋಪಿಗೆ ಶಿಕ್ಷೆ ವಿಧಿಸಿ ನಮಗೆ ನ್ಯಾಯ ದೊರಕಿಸಿಕೊಡಿ ಎಂದು ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ನಮಗೆ ನಷ್ಟವಾದರೂ, ಲಾಭವಾದರೂ ತಮಿಳುನಾಡಿಗೆ ನೀರು ಬೇಕು – ಇದು ಯಾವ ನ್ಯಾಯ: ಸಿಎಂಗೆ ಭೈರಪ್ಪ ಪತ್ರ

    ನಮಗೆ ನಷ್ಟವಾದರೂ, ಲಾಭವಾದರೂ ತಮಿಳುನಾಡಿಗೆ ನೀರು ಬೇಕು – ಇದು ಯಾವ ನ್ಯಾಯ: ಸಿಎಂಗೆ ಭೈರಪ್ಪ ಪತ್ರ

    ಮೈಸೂರು: ಕೊಡಗು ಜಲಪ್ರಳಯದ ಕುರಿತು ತಮಿಳುನಾಡು ಸರ್ಕಾರ ಮೌನ ಧೋರಣೆ ತೋರಿಸಿದ್ದಕ್ಕೆ ಕಾದಂಬರಿಕಾರ ಹಾಗೂ ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಕಿಡಿಕಾರಿದ್ದಾರೆ.

    ಈ ವಿಚಾರವಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿರುವ ಅವರು ಕಾವೇರಿ ನೀರಿಗಾಗಿ ಪ್ರತಿ ವರ್ಷವೂ ಒಂದಿಲ್ಲೊಂದು ರೀತಿಯಲ್ಲಿ ತಮಿಳುನಾಡು ತಗಾದೆ ತೆಗೆಯುತ್ತಲೇ ಇರುತ್ತದೆ. ಆದರೆ ಈಗ ಕೊಡಗಿನಲ್ಲಿ ಆಗಿರುವ ನಷ್ಟಕ್ಕೆ ಮಾತ್ರ ಪ್ರತಿಕ್ರಿಯೇ ನೀಡದೇ ಮೌನವಾಗಿ ಕುಳಿತಿದೆ. ನಮಗೆ ನಷ್ಟವಾದರೂ, ಲಾಭವಾದರೂ ಅವರಿಗೆ ನೀರು ಬೇಕು. ಇದು ಎಂತಹ ನ್ಯಾಯ ಎನ್ನುವ ಎಂದು ಪ್ರಶ್ನಿಸಿ ಚಾಟಿ ಬೀಸಿದ್ದಾರೆ.

    ಮಳೆಗಾಗಿ ಕೊಡಗಿನಲ್ಲಿ ಕಾಡು ಬೆಳೆಸುವ ಕರ್ತವ್ಯ ಕರ್ನಾಟಕದ್ದು. ಅದರ ಫಲ ಉಣ್ಣುವ ಹಕ್ಕು ಮಾತ್ರ ತಮಿಳುನಾಡಿನದ್ದು. ಇದೊಂದು ವಿಷಯ ನನ್ನ ಮನಸ್ಸಿನಲ್ಲಿ ಕೊರೆಯುತ್ತಿದೆ ಎಂದು ತಮ್ಮ ಸಲಹೆ ಮತ್ತು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈ ಮೂಲಕ ಹೊಸ ತಂತ್ರ ಬಳಸಿ ಕಾವೇರಿ ನೀರಿಗಾಗಿ ತಮಿಳುನಾಡಿನ ತಗಾದೆಗೆ ಹೇಗೆ ಪ್ರತಿತಂತ್ರ ರೂಪಿಸಬಹುದು ಎಂದು ಎಸ್.ಎಲ್.ಭೈರಪ್ಪ ಅವರು, ಎಚ್.ಡಿ.ಕುಮಾರಸ್ವಾಮಿ ಅವರಿಗೆ ತಿಳಿಸಿ ಹೇಳಿದ್ದಾರೆ.

    ಪತ್ರದಲ್ಲಿ ಏನಿದೆ?:
    ಒಂದು ವಿಷಯ ನನ್ನ ಮನಸ್ಸಿನಲ್ಲಿ ಕೊರೆಯುತ್ತಿದೆ. ಹೆಚ್ಚು ಮಳೆ ಮತ್ತು ಬಿರುಗಾಳಿಯಿಂದಾಗಿ ಕೊಡಗಿನಲ್ಲಿ ಭಾರೀ ಹಾನಿಯಾಗಿದೆ. ಇದಕ್ಕೆ ಕರ್ನಾಟಕ ಸರ್ಕಾರ ಮಾಡಬೇಕಾಗಿರುವ ಸಾವಿರಾರು ಕೋಟಿ ರೂ. ಖರ್ಚು ಹಾಗೂ ಸಾರ್ವಜನಿಕರು ಕೊಡುತ್ತಿರುವ ದೇಣಿಗೆಗಳು ಸರ್ವವಿಧಿತ. ಹೆಚ್ಚು ಮಳೆಯಾಗಲಿ, ಸಾಧಾರಣ ಮಳೆಯಾದರೂ ತಮಿನಾಡು ಸರ್ಕಾರ ಕಾದು ಕುಳಿತು, ತಗಾದೆ ತೆಗೆಯುವ ಮೂಲಕ ನೀರನ್ನು ಕಬಳಿಸುತ್ತದೆ. ಆಗದೇ ಇದ್ದಾಗ ಕೇಂದ್ರ ಸರ್ಕಾರ ಮತ್ತು ನ್ಯಾಯಾಲಯವನ್ನು ಒತ್ತಾಯಿಸುತ್ತದೆ.

    ಕೊಡಗಿನ ನೀರು ಬೇಕು, ಆದರೆ ಅದರ ಹಾನಿಯನ್ನು ತುಂಬಲು ತನ್ನ ಯಾವ ಕರ್ತವ್ಯವೂ ಇಲ್ಲವೆಂಬಂತೆ ತೆಪ್ಪಗಿದೆ. ಮಳೆಗಾಗಿ ಕೊಡಗಿನಲ್ಲಿ ಕಾಡು ಬೆಳೆಸುವ ಕರ್ತವ್ಯ ಕರ್ನಾಟಕದ್ದು. ಅದರ ಫಲ ಉಣ್ಣುವ ಹಕ್ಕು ಮಾತ್ರ ತಮಿಳುನಾಡಿನದ್ದು. ಈ ಅಂಶಗಳನ್ನು ಒಳಗೊಂಡು ಕರ್ನಾಟಕ ಸರ್ಕಾರವು ಕೇಂದ್ರ ಸರ್ಕಾರಕ್ಕಾಗಲಿ, ಸಂಬಂಧಿಸಿದ ಟ್ರಿಬ್ಯೂನಲ್ ಅಥವಾ ನ್ಯಾಯಾಲಯಕ್ಕಾಗಲಿ ಹಕ್ಕೊತ್ತಾಯ ಮಾಡುವುದು ಅತ್ಯಗತ್ಯವೆಂದು ನನ್ನ ಭಾವನೆ.

    ಮೇಲಿನವರು ನಮ್ಮ ಹಕ್ಕೊತ್ತಾಯವನ್ನು ಈಗ ಮನ್ನಿಸದೇ ಇದ್ದರೂ ನಮ್ಮ ಪಾಲಿನ ನೀರಿನ ಹಕ್ಕೊತ್ತಾಯ ಮಾಡುವಾಗ ಈ ಅಂಶವನ್ನು ಸೇರಿಸಲು ಇದು ಆಧಾರವಾಗುತ್ತದೆ. ಈ ಬಗೆಗೆ ತಾವು ತಕ್ಷಣ ಕಾರ್ಯೋನ್ಮುಖರಾಗುವಿರೆಂಬ ಭರವಸೆಯಿಂದ ಈ ಪತ್ರ ಬರೆದಿದ್ದೇನೆ ಎಂದು ಎಸ್.ಎಲ್.ಭೈರಪ್ಪ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಟಿಪ್ಪು ಜಯಂತಿ: ಸಚಿವ ಹೆಗಡೆ ಪತ್ರವನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ

    ಟಿಪ್ಪು ಜಯಂತಿ: ಸಚಿವ ಹೆಗಡೆ ಪತ್ರವನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ

    ಕಾರವಾರ: ಟಿಪ್ಪು ಜಯಂತಿ ಆಹ್ವಾನ ಪತ್ರಿಕೆಯಲ್ಲಿ ಇದೇ ಮೊದಲ ಬಾರಿಗೆ ಕೇಂದ್ರ ಕೌಶಲ್ಯಾಭಿವೃದ್ಧಿ ರಾಜ್ಯ ಸಚಿವ ಅನಂತಕುಮಾರ್ ಹೆಗಡೆ ಹೆಸರನ್ನು ಕೈ ಬಿಡಲಾಗಿದೆ.

    ಶಿಷ್ಟಾಚಾರದ ಪ್ರಕಾರ ರಾಜ್ಯ ಸರ್ಕಾರದ ಕಾರ್ಯಕ್ರಮಗಳಲ್ಲಿ ಕೇಂದ್ರ ಸಚಿವರ ಹೆಸರನ್ನು ಹಾಕಬೇಕು. ಹೀಗಾಗಿ ಈ ಹಿಂದಿನ ಟಿಪ್ಪು ಜಯಂತಿ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಜಿಲ್ಲಾಡಳಿತ ಅನಂತ್ ಕುಮಾರ್ ಹೆಗಡೆ ಹೆಸರನ್ನು ಪ್ರಕಟಿಸುತಿತ್ತು. ಅನಂತಕುಮಾರ್ ಹೆಗಡೆ ರಾಜ್ಯ ಸರ್ಕಾರಕ್ಕೆ ತನ್ನ ಹೆಸರನ್ನು ಹಾಕದಂತೆ ಪತ್ರ ಬರೆದ ಹಿನ್ನೆಲೆಯಲ್ಲಿ ಸರ್ಕಾರದ ಸೂಚನೆಯಂತೆ ಉತ್ತರ ಕನ್ನಡ ಜಿಲ್ಲೆಯ ಟಿಪ್ಪು ಜಯಂತಿ ಆಹ್ವಾನ ಪತ್ರಿಕೆಯಲ್ಲಿ ಇದೇ ಮೊದಲ ಬಾರಿ ಸಚಿವರ ಹೆಸರನ್ನು ಕೈಬಿಟ್ಟಿದೆ.

    ಇದೇ ತಿಂಗಳ 2ರಂದು ಸರ್ಕಾರಕ್ಕೆ ತಮ್ಮ ವಿಶೇಷ ಕರ್ತವ್ಯ ಅಧಿಕಾರಿಯಿಂದ ಪತ್ರ ಕಳುಹಿಸಿದ್ದ ಅನಂತಕುಮಾರ್ ಹೆಗಡೆ ಶಿಷ್ಟಾಚಾರದಲ್ಲಿ ತಮ್ಮ ಹೆಸರು ಕೈಬಿಡುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಕಳುಹಿಸಿದರಲ್ಲದೇ ಇದರ ಪ್ರತಿಯನ್ನು ಬೆಳಗಾವಿ ಹಾಗೂ ಉತ್ತರ ಕನ್ನಡ ಜಿಲ್ಲಾಧಿಕಾರಿಗಳಿಗೆ ರವಾನಿಸಿದ್ದರು.

    ಪತ್ರ ಕಳುಹಿಸಿದ ಕಾರಣ ಶಿಷ್ಟಾಚಾರದಲ್ಲಿ ಹೆಸರು ಕೈ ಬಿಡುವಂತೆ ಸರ್ಕಾರದಿಂದ ಉ.ಕ ಜಿಲ್ಲಾಧಿಕಾರಿ ಎಸ್. ಎಸ್ ನಕುಲ್ ಅವರಿಗೆ ಆದೇಶ ನೀಡಲಾಗಿತ್ತು. ಆದೇಶದಂತೆ ಇದೇ ಮೊದಲ ಬಾರಿಗೆ ಆಹ್ವಾನ ಪತ್ರಿಕೆಯಲ್ಲಿ ಹೆಸರು ಕೈಬಿಡಲಾಗಿದೆ.

    ನ.10ರಂದು ಜಿಲ್ಲಾಡಳಿತದಿಂದ ಕಾರವಾರದ ಜಿಲ್ಲಾ ರಂಗಮಂದಿರದಲ್ಲಿ ಜಯಂತಿ ಆಚರಣೆಗೆ ಆಹ್ವಾನ ಪತ್ರಿಕೆ ಮುದ್ರಿಸಿದೆ. ಕಳೆದ ಬಾರಿ ಕೂಡ ಪತ್ರ ಬರೆದರೂ ಶಿಷ್ಟಾಚಾರದ ಪ್ರಕಾರ ಹೆಸರು ಹಾಕಲಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಟಿಪ್ಪು ಜಯಂತಿಯಲ್ಲಿ ಶಿಷ್ಟಾಚಾರಕ್ಕೂ ನನ್ನ ಹೆಸರು ಬಳಸಬೇಡಿ: ಅನಂತಕುಮಾರ್ ಹೆಗಡೆ

    ಟಿಪ್ಪು ಜಯಂತಿಯಲ್ಲಿ ಶಿಷ್ಟಾಚಾರಕ್ಕೂ ನನ್ನ ಹೆಸರು ಬಳಸಬೇಡಿ: ಅನಂತಕುಮಾರ್ ಹೆಗಡೆ

    ಕಾರವಾರ: ರಾಜ್ಯ ಸರ್ಕಾರದಿಂದ ನಡೆಯುವ ಟಿಪ್ಪು ಜಯಂತಿಯ ಕಾರ್ಯಕ್ರಮಗಳಲ್ಲಿ ಶಿಷ್ಟಾಚಾರಕ್ಕೂ ನನ್ನ ಹೆಸರನ್ನು ನಮೂದಿಸಬೇಡಿ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ರಾಜ್ಯ ಸಚಿವ ಅನಂತಕುಮಾರ್ ಹೆಗಡೆ ವಿರೋಧ ವ್ಯಕ್ತಪಡಿಸಿದ್ದಾರೆ.

    ಹೌದು, ಇದೇ ತಿಂಗಳ 10 ರಂದು ರಾಜ್ಯ ಸರ್ಕಾರದಿಂದ ನಡೆಯುವ ಟಿಪ್ಪು ಜಯಂತಿಗೆ ಅನಂತಕುಮಾರ್ ಹೆಗಡೆ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸರ್ಕಾರಿ ಕಚೇರಿಗಳಲ್ಲಿ ನಡೆಯುವ ಟಿಪ್ಪು ಜಯಂತಿಗೆ ಸಂಬಂಧಿಸಿದ ಯಾವುದೇ ಕಾರ್ಯಕ್ರಮಗಳ ಪಟ್ಟಿಯಲ್ಲಿ ಶಿಷ್ಟಾಚಾರಕ್ಕೂ ತಮ್ಮ ಹೆಸರನ್ನು ನಮೂದಿಸದಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಹಾಗೂ ಬೆಳಗಾವಿ ಮತ್ತು ಉತ್ತರಕನ್ನಡ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

    ಕೇಂದ್ರ ಸಚಿವರು ಪತ್ರವನ್ನು ತಮ್ಮ ವಿಶೇಷ ಕರ್ತವ್ಯಾಧಿಕಾರಿ ವಿಜಯ್‍ಕುಮಾರ್ ತೋರ್ ಗಲ್ ಮೂಲಕ ರವಾನಿಸಿದ್ದಾರೆ. ಪತ್ರದಲ್ಲಿ ಕರ್ನಾಟಕದ ಕಾಂಗ್ರೆಸ್ ಹಾಗೂ ಜೆಡಿಎಸ್ ನೇತೃತ್ವದ ಮೈತ್ರಿ ಸರ್ಕಾರ ರಾಜ್ಯ ಜನತೆಯ ತೀವ್ರ ವಿರೋಧದ ನಡುವೆಯೂ ನವೆಂಬರ್ 10ರಂದು ರಾಜ್ಯಾದ್ಯಂತ ಟಿಪ್ಪು ಜಯಂತಿ ಆಚರಣೆ ನಡೆಸಲು ನಿರ್ಧರಿಸಿದ್ದಾರೆ. ಆದರೆ ಟಿಪ್ಪು ಕನ್ನಡ ವಿರೋಧಿ ಮತ್ತು ಹಿಂದೂ ವಿರೋಧಿಯಾಗಿರುವುದು ಇತಿಹಾಸದಿಂದ ತಿಳಿಯುತ್ತದೆ. ಇದಲ್ಲದೇ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಇದರ ವಿರುದ್ಧ ಪ್ರತಿಭಟನೆಗಳು ನಡೆದು ವ್ಯಾಪಕ ಹಿಂಸಾಚಾರಕ್ಕೆ ಕಾರಣವಾಗುತ್ತಿದೆ. ಹೀಗಾಗಿ ಒಬ್ಬ ಸಮಾಜಘಾತುಕ ವ್ಯಕ್ತಿಯನ್ನು ವೈಭವೀಕರಿಸಿ ಆತನ ಜಯಂತಿ ಮಾಡ ಹೊರಟಿರುವುದು ನಿಜಕ್ಕೂ ಖಂಡನೀಯ. ಇದನ್ನು ಸಚಿವ ಅನಂತಕುಮಾರ್ ಹೆಗಡೆ ನಿಷ್ಟುರವಾಗಿ ಖಂಡಿಸಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

  • ಪ್ರಾಮಿಸ್ ಮುಂದಿನ ಸಲ ಬರೋವಾಗ ಇನ್ನು ಒಳ್ಳೆಯವನಾಗಿರ್ತೀನಿ – ದೇವರಿಗೆ ಭಕ್ತನ ಪತ್ರ

    ಪ್ರಾಮಿಸ್ ಮುಂದಿನ ಸಲ ಬರೋವಾಗ ಇನ್ನು ಒಳ್ಳೆಯವನಾಗಿರ್ತೀನಿ – ದೇವರಿಗೆ ಭಕ್ತನ ಪತ್ರ

    ಚಿಕ್ಕಮಗಳೂರು: ದೇವರಲ್ಲಿ ಕೆಲವು ಭಕ್ತರು ಹರಕೆ ಕಟ್ಟಿಕೊಳ್ಳುತ್ತಾರೆ. ಬೇಡಿಕೆಗಳ ಪತ್ರ ಬರೆದು ಹುಂಡಿಯಲ್ಲಿ ಹಾಕುತ್ತಾರೆ. ಆದರೆ ಇಲ್ಲೊಬ್ಬ ದೇವರನ್ನು ಸ್ನೇಹಿತನಂತೆ ಸಲುಗೆಯಿಂದ ಪತ್ರವೊಂದನ್ನು ಬರೆದಿದ್ದಾನೆ.

    ದಕ್ಷಿಣ ಕಾಶಿ ಎಂದೇ ಖ್ಯಾತಿಯಾಗಿರುವ ಕಾಫಿನಾಡಿನ ಕಳಸಾದ ಕಲಸೇಶ್ವರ ಸ್ವಾಮಿಗೆ ಭಕ್ತನೊಬ್ಬ ಇಂಗ್ಲೀಷ್ ಮಿಶ್ರಿತ ಪತ್ರ ಬರೆದು ನಿವೇದಿಸಿಕೊಂಡಿದ್ದಾನೆ. ಪತ್ರದಲ್ಲಿ “ನನ್ನ ದೇವರಾದ ಶ್ರೀ ಕಲಶೇಶ್ವರ ಸ್ವಾಮಿಗಳಿಗೆ ಎಂದು ಪ್ರಾರಂಭಿಸಿದ್ದು, ಪ್ರತೀ ಸಲ ಬಂದಾಗಲು ಪತ್ರ ಬರೆಯುತ್ತೇನೆ. ಆದರೆ ಆ ಪತ್ರ ಏನಾಗುತ್ತದೋ ಗೊತ್ತಿಲ್ಲ. ಈ ಸಲ ನಾನು ಆದಷ್ಟು ಕೆಲಸ ಮುಗಿಸಿದ್ದೀನಿ. ಆದರೆ ಮುಖ್ಯವಾದದ್ದನ್ನೇ ಮಾಡಿಲ್ಲ. ನನಗೆ ಖಂಡಿತ ನಂಬಿಕೆ ಇದೆ. ನಾನು ಒಂದಲ್ಲ ಒಂದು ದಿನ ನೀವು ಅಂದುಕೊಂಡ ಹಾಗೆ ಆಗುತ್ತೇನೆ ಅಂತ ಬರೆದಿದ್ದಾನೆ.

    ಅಷ್ಟೇ ಅಲ್ಲದೇ ಕಳಸಾದ ಜನ ತುಂಬಾ ಒಳ್ಳೆಯವರು. ನಾನು ಕೆಟ್ಟವನು ಅದಕ್ಕೆ ನನಗೆ ಹೀಗಾಗಿದೆ. ಪತ್ರದಲ್ಲಿ ಈ ಸಲ ಕೆಟ್ಟ ಶಬ್ದಗಳನ್ನ ಕಡಿಮೆ ಮಾಡಿದ್ದೇನೆ. ಮುಂದಿನ ಸಲ ಇನ್ನೂ ಬದಲಾವಣೆ ಜೊತೆ ಬರುತ್ತೇನೆ. ದೇವರೆ ನಾನು ಹಂತಹಂತವಾಗಿ ಒಳ್ಳೆಯವನಾಗಲು ಅವಕಾಶ ಕೊಡಿ. ನಾನು ನಿಮಗೆ ಮೋಸ ಮಾಡಿರಬಹುದು. ಆದರೆ ನಾನು ನಿಮಗೆ ಕೊಡುವ ಗೌರವವನ್ನು ಬೇರೆಯಾರಿಗೂ ಕೊಡುವುದಿಲ್ಲ ಎಂದು ಉಲ್ಲೇಖಿಸಿದ್ದಾನೆ.

    ಪ್ರಾಮಿಸ್ ದೇವರೆ ಮುಂದಿನ ಸಲ ಬರುವಾಗ ಇನ್ನು ಒಳ್ಳೆಯವನಾಗಿರುತ್ತೀನಿ. ಯಾರು ಏನೇ ಮಾಡಿದರೂ, ನೀವು ನನ್ನ ಜೊತೆ ಇರಿ. ನನ್ನ ಮನಸ್ಸೇ ನನ್ನ ದೊಡ್ಡ ವೈರಿ. ಅದನ್ನು ನಿಯಂತ್ರಿಸಲು ನನಗೆ ಸಹಾಯ ಮಾಡಿ. ನನಗೆ ನಿಮ್ಮನ್ನು ಬಿಟ್ಟು ಯಾರು ಇಲ್ಲ ಇಲ್ಲಿ ಎಂದು ಪತ್ರದ ಮೂಲಕ ಮನವಿ ಮಾಡಿದ್ದಾನೆ.

    ಪತ್ರದ ಸಾರಾಂಶ ನೋಡಿದರೆ ಆತನಿಗೆ ಮಾಡಿದ ತಪ್ಪಿನ ಅರಿವಾಗಿ ಪಾಪ ಪ್ರಜ್ಞೆ ಕಾಡುತ್ತಿರುವಂತೆ ಭಾಸವಾಗುತ್ತಿದೆ ಎಂದು ಅಲ್ಲಿನ ಜನರು ಮಾತನಾಡಿಕೊಳ್ಳುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ‘ದಿ-ವಿಲನ್’ ಚಿತ್ರ ನೋಡಿದ ಅಭಿಮಾನಿಗಳಿಗೆ ವಿಶೇಷ ಪತ್ರ ಬರೆದ ಕಿಚ್ಚ

    ‘ದಿ-ವಿಲನ್’ ಚಿತ್ರ ನೋಡಿದ ಅಭಿಮಾನಿಗಳಿಗೆ ವಿಶೇಷ ಪತ್ರ ಬರೆದ ಕಿಚ್ಚ

    ಬೆಂಗಳೂರು: ಸ್ಯಾಂಡಲ್‍ವುಡ್ ಬಹು ನಿರೀಕ್ಷಿತ ‘ದಿ-ವಿಲನ್’ ಚಿತ್ರ ವಿಶ್ವದ್ಯಾಂತ ಯಶಸ್ಸು ಕಾಣುತ್ತಿದೆ. ಸದ್ಯ ಕಿಚ್ಚ ಸುದೀಪ್ ದಿ-ವಿಲನ್ ಚಿತ್ರ ವೀಕ್ಷಿಸಿದ ಅಭಿಮಾನಿಗಳಿಗೆ ವಿಶೇಷ ಪತ್ರ ಬರೆದಿದ್ದಾರೆ.

    ಕಿಚ್ಚ ಸುದೀಪ್ ದಿ-ವಿಲನ್ ಸಿನಿಮಾ ನೋಡಿದ ಅಭಿಮಾನಿಗಳಿಗೆ ತಮ್ಮ ಗೂಗಲ್ ಪ್ಲಸ್ ಪತ್ರವನ್ನು ಬರೆದು ಟ್ವಿಟ್ಟರಿನಲ್ಲಿ ಹಾಕಿ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

    ಪತ್ರದಲ್ಲಿ ಏನಿದೆ?
    ನನ್ನ ಎಲ್ಲ ಅಭಿಮಾನಿ ಸ್ನೇಹಿತರೇ, ಅಭಿಮಾನಿ ಸಂಘಗಳ ಸದಸ್ಯರು ಹಾಗೂ ಮುಖ್ಯಸ್ಥರೇ, ನಿಮ್ಮೆಲ್ಲರಿಗೂ ನನ್ನ ಪ್ರೀತಿಯ ಅಪ್ಪುಗೆ. ಇದು ನೀವೆಲ್ಲರೂ “ದಿ ವಿಲನ್” ಚಿತ್ರವನ್ನು ಉದಾರವಾಗಿ ಬರಮಾಡಿಕೊಂಡಿದಕ್ಕೆ, ಶಿವಣ್ಣ ಹಾಗೂ ಪ್ರೇಮ್ ರವರ ಮೇಲೆ ತೋರಿಸಿದ ಪ್ರೀತಿಗಾಗಿ, ಚಿತ್ರದ ಎರಡೂ ನಾಯಕ ನಟರ ಮೇಲೆ ಸಮನಾದ ಆದರ ವ್ಯಕ್ತಪಡಿಸಿದ್ದಕ್ಕೆ ಮತ್ತು ಚಿತ್ರಮಂದಿರಗಳಲ್ಲಿ ಶಾಂತಿಯನ್ನು ಕಾಪಾಡಿಕೊಂಡಿದ್ದಕ್ಕೆ.

    ನಾನು ನಿಮ್ಮೆಲ್ಲರ ಮನಸಿನಲ್ಲಿ ನೆಲೆಸಿದ್ದೇನೆ. ಆದ್ದರಿಂದಲೇ ನೀವು ಈ ಚಿತ್ರಕ್ಕೆ ಸ್ಪಂದಿಸಿದ ರೀತಿಯಲ್ಲಿ ನನ್ನದೇ ಪ್ರತಿಬಿಂಬ ಕಾಣುತಿದ್ದೇನೆ. ನನ್ನನ್ನು ಹೆಮ್ಮೆಪಡುವಂತೆ ಮಾಡಿದ ನನ್ನ ಕುಟುಂಬದ ಸದಸ್ಯರೇ ಆದ ನಿಮ್ಮ ಪ್ರತಿಯೊಬ್ಬರಿಗೂ ನಾನು ಎಂದೆಂದಿಗೂ ಚಿರಋಣಿ. ನಿಮ್ಮ ಕಿಚ್ಚ ಎಂದು ಬರೆದಿದ್ದಾರೆ.

    ಸದ್ಯ ದಿ ವಿಲನ್ ಚಿತ್ರ ನೋಡಲು ಮಲ್ಟಿಪ್ಲೆಕ್ಸ್ ಗಳಲ್ಲಿಯೂ ಹೌಸ್‍ಫುಲ್ ಆಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಜೋಗಿ ಪ್ರೇಮ್ ನಿರ್ದೇಶನದಲ್ಲಿ ಇದೇ ಮೊದಲ ಬಾರಿಗೆ ಹಿರಿಯ ನಟ ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಒಟ್ಟಾಗಿ ನಟಿಸಿದ್ದಾರೆ. ಆಮಿ ಜಾಕ್ಸನ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ವಿಲನ್ ಹಾಡುಗಳು ಕಮಾಲ್ ಮಾಡಿದ್ದು, ಚಿತ್ರ ಯಶಸ್ವಿಯಾಗಿ ಮುಂದೆ ಸಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv