Tag: letter

  • ರಾಹುಲ್ ಗಾಂಧಿಗೆ ಪತ್ರ ಬರೆದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್

    ರಾಹುಲ್ ಗಾಂಧಿಗೆ ಪತ್ರ ಬರೆದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್

    ಬೆಂಗಳೂರು: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪತ್ರ ಬರೆದಿದ್ದಾರೆ.

    ಕರ್ನಾಟಕದಿಂದಲೇ ಸ್ಪರ್ಧೆ ಮಾಡುವಂತೆ ಪತ್ರ ಬರೆಯುವ ಮೂಲಕ ರಾಹುಲ್ ಗಾಂಧಿ ಅವರಿಗೆ ದಿನೇಶ್ ಗುಂಡೂರಾವ್ ಆಹ್ವಾನ ನೀಡಿದ್ದಾರೆ.

    ಪತ್ರದಲ್ಲಿ ಏನಿದೆ?
    “ನಿಮ್ಮ ಸ್ಪರ್ಧೆಯಿಂದ ಇಡೀ ಕರ್ನಾಟಕಕ್ಕಷ್ಟೇ ಅಲ್ಲ, ಇಡೀ ದಕ್ಷಿಣ ಭಾರತಕ್ಕೆ ಬಲ ಬರಲಿದೆ. ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಗೆ ಉತ್ತಮ ವಾತಾವರಣ ಇದೆ. ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಈ ಸಲ ಗೆಲ್ಲಲಿದೆ. ನಿಮ್ಮ ಸ್ಪರ್ಧೆಗೆ ಸದಾ ಸ್ವಾಗತ. ರಾಜ್ಯ ಕಾಂಗ್ರೆಸ್ ನಿಮ್ಮ ಸ್ಪರ್ಧೆಯ ನಿರೀಕ್ಷೆಯಲ್ಲಿದೆ. ಅಲ್ಲದೆ ಈ ಹಿಂದೆ ಮಾಜಿ ಪ್ರಧಾನಿ ಇಂದಿರಾಗಾಂಧಿ ಮತ್ತು ಸೋನಿಯಾ ಗಾಂಧಿಯ ಅವರನ್ನು ನಮ್ಮ ರಾಜ್ಯದಿಂದ ಲೋಕಸಭೆಗೆ ಗೆಲ್ಲಿಸಿ ಕಳುಹಿಸಿದ್ದೇವೆ” ಎಂದು ದಿನೇಶ್ ಗುಂಡೂರಾವ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

    ಕಳೆದ ವಾರ ಚಾಮರಾಜನಗರದಲ್ಲಿ ನಡೆದ ಕಾಂಗ್ರೆಸ್ ಪರಿವರ್ತನಾ ರ‍್ಯಾಲಿಯಲ್ಲಿ ಮಾತನಾಡಿದ ದಿನೇಶ್, ರಾಹುಲ್ ಗಾಂಧಿಯವರು ಕೇವಲ ಉತ್ತರ ಭಾರತದಿಂದ ಮಾತ್ರ ಸ್ಪರ್ಧೆ ಮಾಡುವುದಲ್ಲ, ದಕ್ಷಿಣ ಭಾರತದಿಂದಲೂ ಸ್ಪರ್ಧೆ ಮಾಡಲಿ. ಅದರಲ್ಲೂ ಕರ್ನಾಟಕದಿಂದಲೇ ಸ್ಪರ್ಧೆ ಮಾಡಲಿ ಎಂದು ಹೇಳಿ ಆಹ್ವಾನ ನೀಡಿದ್ದರು. ಈ ಹಿಂದೆ ಇಂದಿರಾ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರನ್ನು ನಾವು ಆಯ್ಕೆ ಮಾಡಿದ್ದೆವು. ಈಗ ರಾಹುಲ್ ಗಾಂಧಿಯನ್ನು ಆಯ್ಕೆ ಮಾಡಿ ಪ್ರಧಾನ ಮಂತ್ರಿಯನ್ನಾಗಿ ಮಾಡೋಣ ಎಂದು ಹೇಳಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಮ್ಯಾಗೆ ಟಿಕೆಟ್ ಕೊಟ್ಟ ಬೆಂಗ್ಳೂರಿನ ನಿವಾಸಿ

    ರಮ್ಯಾಗೆ ಟಿಕೆಟ್ ಕೊಟ್ಟ ಬೆಂಗ್ಳೂರಿನ ನಿವಾಸಿ

    ಬೆಂಗಳೂರು: ಮಂಡ್ಯದ ಮಾಜಿ ಸಂಸದೆ ಹಾಗೂ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ವೋಟ್ ಮಾಡಿ ಎಂದು ಹೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ರಾಘವೇಂದ್ರ ಅವರು ಮೊದಲಿಗೆ ನೀವು ವೋಟ್ ಹಾಕಿ ಎಂದು ಪತ್ರ ಬರೆದಿದ್ದಾರೆ.

    ಬೆಂಗಳೂರಿನ ನಿವಾಸಿ ರಾಘವೇಂದ್ರ ಈಸಲನಾದರೂ ವೋಟು ಮಾಡಮ್ಮ ತಾಯೇ. ಡೆಲ್ಲಿ ಟು ಮಂಡ್ಯ ನಾನೇ ನಿಮಗೆ ಫ್ಲೈಟ್ ಟಿಕೆಟ್ ಹಾಗೂ ಬಸ್ ಟಿಕೆಟ್ ಕಳುಹಿಸುತ್ತೀನಿ. ಆದರೆ ವೋಟು ಹಾಕುವುದನ್ನು ಮಿಸ್ ಮಾಡಬೇಡಿ ಎಂದು ಪತ್ರ ಬರೆದಿದ್ದಾರೆ.

    ಪತ್ರದಲ್ಲಿ ಏನಿದೆ?
    ಮಂಡ್ಯ ಕ್ಷೇತ್ರದ ಮತದಾರರಾಗಿರುವ ನೀವು ಈ ಹಿಂದೆ ವಿಧಾನಸಭಾ ಹಾಗೂ ಲೋಕಸಭಾ ಉಪಚುನಾವಣೆಗೆ ಮತದಾನ ಮಾಡಿಲ್ಲ. ತಾವು ಒಂದು ಪಕ್ಷದ ಉನ್ನತ ಹುದ್ದೆಯನ್ನು ನಿರ್ವಹಿಸುತ್ತಿದ್ದೀರಿ. ಆದರೆ ನೀವೇ ಮತದಾನವನ್ನು ಮರೆತಿರುವುದು ಶೋಚನೀಯವಾಗಿದೆ. ಆದರೂ ನೀವು ಸಾಮಾಜಿಕ ಜಾಲತಾಣಗಲ್ಲಿ ಹೊಸದಾಗಿ ಮತದಾನ ಮಾಡುವರರಿಗೆ ಬೇಗನೇ ನೊಂದಣಿ ಮಾಡಿ ಎಂದು ಸಂದೇಶವನ್ನು ಕಳುಹಿಸಿದ್ದೀರಿ. ಇದು ಹಾಸ್ಯಸ್ಪದವಾಗಿದ್ದು, ಈಗಾಗಲೇ ಜನರು ನಿಮ್ಮನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಹೀಗಾಗಿ ಈ ಬಾರಿಯಾದರೂ ನೀವು ಮತ ಚಲಾಯಿಸಿ ರಾಜಕೀಯ ನೈತಿಕತೆಯನ್ನು ಉಳಿಸಿಕೊಳ್ಳಿ. ಅದಕ್ಕಾಗಿ ನಾನು ನಿಮಗೆ ಪ್ರಯಾಣ ದರವನ್ನು ಉಚಿತವಾಗಿ ನೀಡಲು ನಾನು ಸಿದ್ಧ ಎಂದು ಬರೆದಿದ್ದಾರೆ.

    ರಮ್ಯಾ ಟ್ವಿಟ್ಟರ್ ನಲ್ಲಿ” ಹೊಸದಾಗಿ ಮೊದಲ ಬಾರಿಗೆ ಮತದಾನ ಮಾಡುವ ಅರ್ಹತೆ ಯುವ ಮತದಾರರು ಬೇಗ ವೋಟರ್ ಲಿಸ್ಟ್ ನಲ್ಲಿ ನಿಮ್ಮ ಹೆಸರನ್ನು ಸೇರಿಸಿಕೊಳ್ಳಿ. ಸಮಯ ಬೇಗ ಹೋಗುತ್ತಿದೆ. ಭವಿಷ್ಯವೂ ನಿಮ್ಮದಾಗಿದೆ” ಎಂದು ಟ್ವೀಟ್ ಮಾಡುವ ಮೂಲಕ ಹೀಗಾಗಿ ಮತದಾನದ ಬಗ್ಗೆ ಜಾಗೃತಿ ಮೂಡಿಸಿದ್ದರು. ಆದರೆ ರಮ್ಯಾ ಮಾಡಿರುವ ಟ್ವೀಟ್ ನೆಟ್ಟಿಗರು ಕೋಪಗೊಂಡು ನೆಟ್ಟಿಗರು ಕಮೆಂಟ್ ಮಾಡುವ ಮೂಲಕ ಕ್ಲಾಸ್ ತೆಗೆದುಕೊಂಡಿದ್ದರು.

    ಕರ್ನಾಟಕ ವಿಧಾನಸಭಾ ಚುನಾವಣೆಯ ಸಮಯದಲ್ಲಿ ರಮ್ಯಾ ಮಂಡ್ಯಕ್ಕೆ ಬಂದಿರಲಿಲ್ಲ. ಇದಾದ ಬಳಿಕ ಮಂಡ್ಯ ಲೋಕಸಭಾ ಉಪಚುನಾವಣೆಯ ಸಮಯದಲ್ಲೂ ರಮ್ಯಾ ಆಗಮಿಸಿರಲಿಲ್ಲ. ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆಯಾಗಿದ್ದು ಮತದಾನ ಮಾಡಲು ಆಗಮಿಸಿದ ರಮ್ಯಾ ವಿರುದ್ಧ ಮಂಡ್ಯದ ಮಂದಿ ಆಕ್ರೋಶ ಹೊರಹಾಕಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಅಭಿಮಾನಿಯಿಂದ ರಕ್ತದಲ್ಲಿ ಪತ್ರ – ಗರಂ ಆದ ಕಿಚ್ಚ

    ಅಭಿಮಾನಿಯಿಂದ ರಕ್ತದಲ್ಲಿ ಪತ್ರ – ಗರಂ ಆದ ಕಿಚ್ಚ

    ಬೆಂಗಳೂರು: ಅಭಿಮಾನಿಗಳು ತನ್ನ ನೆಚ್ಚಿನ ನಟ-ನಟಿಯರಿಗೆ ಪತ್ರ ಬರೆಯುವುದು ಸಾಮಾನ್ಯವಾಗಿದೆ. ಆದರೆ ಯುವತಿಯೊಬ್ಬಳು ನಟ ಕಿಚ್ಚ ಸುದೀಪ್ ಅವರಿಗೆ ರಕ್ತದಲ್ಲಿ ಪತ್ರ ಬರೆದಿದ್ದಾರೆ.

    ಸೌಮ್ಯಾ ಎಂಬಾಕೆ ಸುದೀಪ್‍ಗಾಗಿ ರಕ್ತದಲ್ಲಿ ಪತ್ರ ಬರೆದಿದ್ದಾರೆ. ಸುದೀಪ್ ಅವರನ್ನು ನೋಡಬೇಕು ಎಂಬ ಆಸೆಯನ್ನು ಪತ್ರದಲ್ಲಿ ವ್ಯಕ್ತಪಡಿದ್ದಾರೆ. ಆದರೆ ಸೌಮ್ಯ ಬರೆದ ಪತ್ರವನ್ನು ನೋಡಿ ಕೋಪ ಮಾಡಿಕೊಂಡು ಮತ್ತೆ ರೀತಿ ಮಾಡಬೇಡಿ ಎಂದು ಕಿಚ್ಚ ಸುದೀಪ್ ತಿಳಿ ಹೇಳಿದ್ದಾರೆ.

    ಪತ್ರದಲ್ಲಿ ಏದಿದೆ?
    ನನ್ನ ಹೆಸರು ಸೌಮ್ಯ. ನನಗೆ ತಂದೆ ತಾಯಿ ಇಲ್ಲ. ಅಂದರೆ ತೀರಿಕೊಂಡಿದ್ದಾರೆ. ನಾನು ನಿಮ್ಮ ಭೇಟಿಗಾಗಿ ತುಂಬಾ ಪ್ರಯತ್ನ ಪಟ್ಟಿದ್ದೀನಿ. ಆದರೆ ಭೇಟಿಯಾಗಲೂ ಸಾಧ್ಯವಾಗಿಲ್ಲ. ಅದಕ್ಕೆ ಈಗ ನನ್ನ ರಕ್ತದಲ್ಲಿ ಈ ಪತ್ರ ಬರೀತಿದ್ದೀನಿ. ನನಗೆ ನಿಮ್ಮ ಸಂಘ ಮತ್ತು ನಿಮ್ಮ ಜೊತೆ ಇರುವ ಒಬ್ಬ ವ್ಯಕ್ತಿಯನ್ನು ನಿಮ್ಮನ್ನು ಭೇಟಿ ಮಾಡಿಸುವಂತೆ ತುಂಬಾ ಕೇಳಿಕೊಂಡೆ. ಆದರೆ ಅವರಿಂದ ನಿರಾಸೆ-ನೋವು ಜಾಸ್ತಿಯಾಗಿದೆ. ಹೀಗಾಗಿ ಈ ನನ್ನ ಪ್ರಯತ್ನಕ್ಕೆ ದಯವಿಟ್ಟು ನೀವೇ ಒಂದು ದಿನ ನನ್ನನ್ನು ಭೇಟಿ ಮಾಡಬೇಕು. ನೀವೇ ದಿನಾಂಕವನ್ನು ಹೇಳಿ. ರಾಕೇಶ್ ಮತ್ತು ಮಂಜಣ್ಣ ದಾವಣಗೆರೆ ಇವರಿಗೆ ನಾನು ಗೊತ್ತು ಎಂದು ಬರೆದಿದ್ದಾರೆ.

    ಈ ಪತ್ರವನ್ನು ಸುದೀಪ್ ಅವರ ಅಭಿಮಾನಿ ತಮ್ಮ ಟ್ವಿಟರ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಭಿಮಾನಿ ಪತ್ರವನ್ನು ನೋಡಿ ಸುದೀಪ್ ಅವರು, “ಅವರ ಅಭಿಮಾನ ನೋಡಿ ನನಗೆ ಖುಷಿಯಾಯಿತು. ಆದರೆ ರಕ್ತದಲ್ಲಿ ಪತ್ರ ಬರೆದಿದ್ದು ನೋಡಿ ನೋವಾಯಿತು. ಸೌಮ್ಯಾ ಅವರ ನೋವನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ಖಂಡಿತ ನಾನು ಶೀಘ್ರದಲ್ಲಿಯೇ ನಿಮ್ಮನ್ನು ಭೇಟಿಯಾಗುತ್ತೇನೆ. ಆದರೆ ದಯವಿಟ್ಟು ಹೀಗೆಲ್ಲ ಯಾರೂ ಮಾಡಬೇಡಿ. ನನ್ನ ಮಾತಿನ ಮೇಲೆ ಗೌರವ ಇದ್ದರೆ ಇನ್ನೊಮ್ಮೆ ಈ ರೀತಿ ಮಾಡಬೇಡಿ” ಎಂದು ಮನವಿ ಮಾಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗೆಳತಿಗೆ ಪತ್ರ ಬರೆದಿದ್ದಕ್ಕೆ ಪ್ರೇಮಿಯಿಂದಲೇ ಸ್ನೇಹಿತನ ಕೊಲೆ!

    ಗೆಳತಿಗೆ ಪತ್ರ ಬರೆದಿದ್ದಕ್ಕೆ ಪ್ರೇಮಿಯಿಂದಲೇ ಸ್ನೇಹಿತನ ಕೊಲೆ!

    ಬೆಂಗಳೂರು: ತನ್ನ ಗೆಳತಿಗೆ ಪತ್ರ ಬರೆದಿದ್ದಕ್ಕೆ ರೊಚ್ಚಿಗೆದ್ದ ಸ್ನೇಹಿತನನ್ನೇ ಪ್ರೇಮಿಯೊಬ್ಬ ಕೊಲೆ ಮಾಡಿರುವ ಘಟನೆ ಬೆಂಗಳೂರು ಹೊರವಲಯದ ಕನ್ನಮಂಗಲದಲ್ಲಿ ನಡೆದಿದೆ.

    ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ತಿರುಮನಹಳ್ಳಿ ಗ್ರಾಮದ ನಿವಾಸಿ ರಾಮಮೂರ್ತಿ (28) ಕೊಲೆಯಾದ ದುರ್ದೈವಿ. ಆರೋಪಿಗಳಾದ ದೇವರಾಜ್ ಹಾಗೂ ಸುನೀಲ್ ನನ್ನು ಕಾಡುಗೋಡಿ ಪೊಲೀಸರು ಬಂಧಿಸಿ ವಿಚಾರಣೆ ಆರಂಭಿಸಿದ್ದಾರೆ.

    ಏನಿದು ಘಟನೆ?
    ರಾಮಮೂರ್ತಿ ಎಲೆಕ್ಟ್ರಿಕಲ್ ಕೆಲಸ ಮಾಡುತ್ತಿದ್ದು, ತಾಯಲೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಪದ್ಮಾವತಿ ಪುತ್ರ, ಆರೋಪಿ ದೇವರಾಜ್ ಕಂಟ್ರಾಕ್ಟರ್ ಆಗಿದ್ದ. ಇಬ್ಬರು ಸೇರಿ ಕಳೆದ ಎರಡು ತಿಂಗಳಿಂದ ಬೆಂಗಳೂರು ಹೊರವಲಯದ ಕನ್ನಮಂಗಲ ಗ್ರಾಮದಲ್ಲಿ ವಾಸವಾಗಿದ್ದರು.

    ದೇವರಾಜ್ ಪ್ರೀತಿಸುತ್ತಿದ್ದ ಯುವತಿಗೆ ರಾಮಮೂರ್ತಿ ಪತ್ರ ಬರೆದಿದ್ದ. ಈ ವಿಚಾರವಾಗಿ ಗುರುವಾರ ಇಬ್ಬರ ನಡುವೆ ಗಲಾಟೆ ನಡೆದಿದೆ. ಈ ವೇಳೆ ದೇವರಾಜ್ ತನ್ನ ತಮ್ಮ ಸುನೀಲ್ ಜೊತೆಗೂಡಿ ರಾಮಮೂರ್ತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ರಾಮಮೂರ್ತಿ ಅಸ್ವಸ್ಥನಾಗಿ ಬಿದ್ದಿದ್ದರಿಂದ ಗಾಬರಿಗೊಂಡ ದೇವರಾಜ್ ಮನೆಯಿಂದ ಹೊರಬಂದಿದ್ದಾನೆ. ದುಷ್ಕರ್ಮಿಗಳು ಗೆಳೆಯನ ಮೇಲೆ ಹಲ್ಲೆ ಮಾಡಿಹೋಗಿದ್ದಾರೆ ಆತನನ್ನು ಆಸ್ಪತ್ರೆಗೆ ಸೇರಿಸಬೇಕು ಎಂದು ದೇವರಾಜ್ ಸ್ಥಳೀಯರಿಗೆ ಸುಳ್ಳು ಹೇಳಿ ರಾಮಮೂರ್ತಿಯನ್ನು ಆಸ್ಪತ್ರೆಗೆ ಸಾಗಿಸಿದ್ದಾನೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ರಾಮಮೂರ್ತಿ ಮೃತಪಟ್ಟಿದ್ದಾನೆ.

    ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಕಾಡುಗೋಡಿ ಪೊಲೀಸರು, ಆರೋಪಿಗಳಾದ ದೇವರಾಜ್ ಹಾಗೂ ಸುನೀಲ್‍ನನ್ನು ಬಂಧಿಸಿದ್ದಾರೆ. ಇಬ್ಬರನ್ನು ತೀವ್ರ ವಿಚಾರಣೆ ಒಳಪಡಿಸಿದಾಗ ಸತ್ಯ ಒಪ್ಪಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರೀತಿಯ ಅಭಿಮಾನಿಗಳಿಗೆ ನಮಸ್ಕಾರ ತಿಳಿಸಿ ಪತ್ರ ಬರೆದ ದರ್ಶನ್

    ಪ್ರೀತಿಯ ಅಭಿಮಾನಿಗಳಿಗೆ ನಮಸ್ಕಾರ ತಿಳಿಸಿ ಪತ್ರ ಬರೆದ ದರ್ಶನ್

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟುಹಬ್ಬ ಇದೇ 16ರಂದು ನಡೆಯಲಿದ್ದು, ಅವರು ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಳ್ಳಲು ನಿರ್ಧರಿಸಿದ್ದಾರೆ. ಈ ನಡುವೆ ದರ್ಶನ್ ತಮ್ಮ ಅಭಿಮಾನಿಗಳಿಗೆ ಪತ್ರ ಬರೆದಿದ್ದಾರೆ.

    ದರ್ಶನ್ ತಮ್ಮ ಟ್ವಿಟ್ಟರಿನಲ್ಲಿ, “ಪ್ರೀತಿಯ ಅಭಿಮಾನಿಗಳಿಗೆ ನಮಸ್ಕಾರ. ಇತ್ತೀಚೆಗೆ ಕೆಲವು ಅಭಿಮಾನಿಗಳು ನನ್ನ ಹುಟ್ಟುಹಬ್ಬದ ಪ್ರಯುಕ್ತ ನನ್ನ ಮನೆಯ ಹತ್ತಿರ ಆಹಾರ ಪದಾರ್ಥಗಳನ್ನು ತಂದು ನೀಡುತ್ತೇವೆ. ಅದನ್ನು ಸಿದ್ದಗಂಗಾ ಮಠ ಹಾಗೂ ಕೆಲವು ಅನಾಥಾಶ್ರಮಕ್ಕೆ ತಲುಪಿಸಿ ಎಂದು ಕೇಳಿಕೊಂಡು ಫೇಸ್‍ಬುಕ್‍ನಲ್ಲಿ ವಿಡಿಯೋ ಮಾಡಿ ಬಿಟ್ಟಿರುವುದು ತುಂಬಾ ಸಂತೋಷದ ವಿಷಯ, ನನ್ನ ಹುಟ್ಟುಹ್ಬಬ್ಬಕ್ಕೆ ನೀವುಗಳು ಕೊಡುತ್ತಿರುವ ಉಡುಗೊರೆ ಎಂದು ತಿಳಿದು ಅದನ್ನು ಪ್ರತಿ ಜಿಲ್ಲೆಯ ಅನಾಥಾಶ್ರಮಕ್ಕೆ, ಒಂದು ವೃದ್ಧಾಶ್ರಮಕ್ಕೆ ಹಾಗೂ ಸಿದ್ದಗಂಗಾ ಮಠಕ್ಕೆ ತಲುಪಿಸುವ ಜವಾಬ್ದಾರಿಯನ್ನು ತುಂಬಾ ಸಂತೋಷದಿಂದ ನಾನೇ ತೆಗೆದುಕೊಳ್ಳುತ್ತೇನೆ. ಆದಷ್ಟು ಬಟ್ಟೆ ಬ್ಯಾಗ್‍ಗಳನ್ನೇ ಬಳಸಿ. ವಂದನೆಗಳೊಂದಿಗೆ ಇಂತಿ ನಿಮ್ಮ ಪ್ರೀತಿಯ ದಾಸ ದರ್ಶನ್” ಎಂದು ಪತ್ರವನ್ನು ಹಾಕಿದ್ದಾರೆ. ಇದನ್ನೂ ಓದಿ: ಹುಟ್ಟುಹಬ್ಬ ಅದ್ಧೂರಿಯಾಗಿ ಆಚರಿಸಿಕೊಳ್ಳಲ್ಲ ಡಿ ಬಾಸ್!

    ದರ್ಶನ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಂಬಿ ಅಪ್ಪಾಜಿ ತಮ್ಮಿಂದ ದೂರವಾದ ಹಿನ್ನೆಲೆಯಲ್ಲಿ ಅಭಿಮಾನಿಗಳಿಗೆ ಸರಳವಾಗಿ ಹುಟ್ಟುಹಬ್ಬ ಆಚರಿಸಿ ಎಂದು ಮನವಿ ಮಾಡಿಕೊಂಡಿದ್ದರು. ಅಲ್ಲದೇ ಈ ಸಂಭ್ರಮಾಚರಣೆಯ ಸಂದರ್ಭದಲ್ಲಿ ನಮ್ಮ ಮನೆಯ ಅಕ್ಕ-ಪಕ್ಕದ ನಿವಾಸಿಗಳಿಗೆ ತೊಂದರೆ ಕೊಡುವುದು, ಪಟಾಕಿ ಹೊಡೆಯುವುದು, ಕಾಂಪೌಂಡ್ ಹತ್ತುವುದು, ಹೂ ಕುಂಡಗಳನ್ನು ಬೀಳಿಸುವುದು, ಅವರ ಸ್ವತ್ತುಗಳಿಗೆ ಹಾನಿ ಮಾಡುವುದು ಇಂತಹ ಅನುಚಿತ ವರ್ತನೆ ತೋರಬಾರದು. ನನ್ನ ಬಗ್ಗೆ ಇಷ್ಟೆಲ್ಲ ಪ್ರೀತಿ ಅಭಿಮಾನ ಇಟ್ಟಿರುವ ನೀವು ನನ್ನ ಕೋರಿಕೆಯನ್ನು ಈಡೇರಿಸುತ್ತೀರಿ ಎನ್ನವ ನಂಬಿಕೆ ಇದೆ ಎಂದು ಪೋಸ್ಟ್ ಮಾಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಭೇಟಿ ಮಾಡಿದ್ರೆ ನಿಮ್ಮನ್ನು ಅಪ್ಪಿಕೊಳ್ಳುವ ಆಸೆ: ರಶ್ಮಿಕಾಗೆ ಪುಟ್ಟ ಅಭಿಮಾನಿಯ ಪತ್ರ

    ಭೇಟಿ ಮಾಡಿದ್ರೆ ನಿಮ್ಮನ್ನು ಅಪ್ಪಿಕೊಳ್ಳುವ ಆಸೆ: ರಶ್ಮಿಕಾಗೆ ಪುಟ್ಟ ಅಭಿಮಾನಿಯ ಪತ್ರ

    ಬೆಂಗಳೂರು: ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಅವರಿಗೆ 8 ವರ್ಷದ ಪುಟ್ಟ ಅಭಿಮಾನಿಯೊಬ್ಬ ಪತ್ರ ಬರೆದಿರುವ ಫೋಟೋ ವೈರಲ್ ಆಗುತ್ತಿದೆ.

    ರಶ್ಮಿಕಾ ಅವರ ಫ್ಯಾನ್ ಕ್ಲಬ್ ತನ್ನ ಟ್ವಿಟ್ಟರಿನಲ್ಲಿ, “ಮಹಾರಾಣಿ ರಶ್ಮಿಕಾ ಅವರಿಗೆ ನ್ಯೂ ಯಾರ್ಕ್‍ನಿಂದ ಪುಟ್ಟ ಅಭಿಮಾನಿಯೊಬ್ಬರು ನಿಮಗೆ ಸಣ್ಣ ಪತ್ರವೊಂದನ್ನು ಬರೆದಿದ್ದಾನೆ. ಈತನಿಗೆ ಕೇವಲ 8 ವರ್ಷ ಹಾಗೂ ನೀವು ಆತನ ಮೊದಲ ಕ್ರಶ್. ಅವನು ನೀವು ನಟಿಸಿದ ಗೀತಾ ಗೋವಿಂದಂ ಚಿತ್ರ ನೋಡುವುದನ್ನು ಹಾಗೂ ಹಾಡುಗಳನ್ನು ಕೇಳುವುದನ್ನು ಬಿಡಲ್ಲ. ಏಕೆಂದರೆ ಅವನು ನಿಮ್ಮನ್ನು ನೋಡಬೇಕು ಹಾಗೂ ನಿಮಗೆ ಹಾಯ್ ಹೇಳಬೇಕು ಎಂದುಕೊಂಡಿದ್ದಾನೆ” ಎಂದು ಟ್ವೀಟ್ ಮಾಡಿ ರಶ್ಮಿಕಾ ಅವರಿಗೆ ಟ್ಯಾಗ್ ಮಾಡಿದ್ದಾರೆ.

    ಪತ್ರದಲ್ಲಿ ಏನಿದೆ?
    ನೀವು ತುಂಬಾ ಅದ್ಭುತವಾದ ಮಹಿಳೆ. ನೀವು ನೀವಾಗಿ ನಟನೆ ಮಾಡುವುದು ನನಗೆ ತುಂಬಾ ಇಷ್ಟ. ನಿಮ್ಮ ಮುಖ ತುಂಬಾ ಚೆನ್ನಾಗಿ ಇದೆ. ನನಗೆ ನಿಮ್ಮ ಸಿನಿಮಾಗಳು ಹಾಗೂ ಹಾಡುಗಳು ಎಂದರೆ ಇಷ್ಟ. ನಿಮ್ಮ ‘ಗೀತಾ ಗೋವಿಂದಂ’ ಸಿನಿಮಾ ನೋಡಿ ಮಹಿಳೆಯರನ್ನು ಹೇಗೆ ಗೌರವಿಸಬೇಕು ಎಂದು ಕಲಿತುಕೊಂಡೆ. ನೀವು ಮಾತನಾಡುವ ಶೈಲಿ ಹಾಗೂ ನಿಮ್ಮ ಅಭಿನಯ ನನಗೆ ತುಂಬಾ ಇಷ್ಟ. ನಿಮ್ಮ ಚಿತ್ರದ ಹಾಡುಗಳನ್ನು ಕೇಳಲು ನನಗೆ ಖುಷಿ ಆಗುತ್ತಿದೆ. ನಿಮ್ಮ ಚಿತ್ರದ ಹಾಡುಗಳು ಹಾಸ್ಯವಾಗಿ, ಶಾಂತಿಯುತವಾಗಿ ಇರುತ್ತದೆ. ನನಗೆ ತುಂಬಾ ಇಷ್ಟವಾಗುತ್ತದೆ. ನಾನು ಗೀತಾ ಗೋವಿಂದಂ ಚಿತ್ರ ಹಾಗೂ ಆ ಚಿತ್ರದ ಹಾಡುಗಳನ್ನು ಕೇಳಿದ್ದೇನೆ. ಅದೊಂದು ಅದ್ಭುತ ಚಿತ್ರ. ನೀವು ಹೆಚ್ಚು ಸಿನಿಮಾ ಹಾಗೂ ಹಾಡಗಳನ್ನು ಮಾಡುತ್ತೀರಾ ಎಂದು ನನಗೆ ಗೊತ್ತು. ಮುಂದೆ ನಿಮ್ಮನ್ನು ಭೇಟಿ ಮಾಡಿದರೆ ನಾನು ನಿಮ್ಮನ್ನು ತಬ್ಬಿಕೊಳ್ಳಬೇಕು ಎಂದು ಬರೆದಿದ್ದಾನೆ.

    ಅಭಿಮಾನಿ ಬರೆದ ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿರೋಧಿಗಳ ನಾಶಕ್ಕೆ ಭಕ್ತರ ಬೇಡಿಕೆ – ಯಲಗೂರು ದೇಗುಲದ ಹುಂಡಿಯಲ್ಲಿತ್ತು ವಿಚಿತ್ರ ಪತ್ರ

    ವಿರೋಧಿಗಳ ನಾಶಕ್ಕೆ ಭಕ್ತರ ಬೇಡಿಕೆ – ಯಲಗೂರು ದೇಗುಲದ ಹುಂಡಿಯಲ್ಲಿತ್ತು ವಿಚಿತ್ರ ಪತ್ರ

    ವಿಜಯಪುರ: ದೇವರ ಹುಂಡಿಯಲ್ಲಿ ಹಣದ ಬದಲು ವಿರೋಧಿಗಳ ನಾಶಕ್ಕೆ ಭಕ್ತರು ಬೇಡಿಕೆ ಪತ್ರ ಹಾಕಿರುವ ವಿಚಿತ್ರ ಘಟನೆ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಯಲಗೂರಿನಲ್ಲಿ ನಡೆದಿದೆ.

    ಶ್ರೀಕ್ಷೇತ್ರ ಯಲಗೂರ ದೇವಸ್ಥಾನದ ಕಾಣಿಕೆ ಹುಂಡಿಗಳಲ್ಲಿ ಚಿತ್ರವಿಚಿತ್ರ ಬೇಡಿಕೆಗಳನ್ನು ಬರೆದು ಭಕ್ತರು ಹಾಕಿದ್ದಾರೆ. ಹುಂಡಿ ತೆಗೆದು ಎಣಿಕೆ ಮಾಡುವ ವೇಳೆ ಪತ್ರ ಕಂಡು ಕಂದಾಯ ಅಧಿಕಾರಿಗಳು ಹಾಗೂ ದೇವಸ್ಥಾನ ಕಮಿಟಿ ಬೆಚ್ಚಿಬಿದ್ದಿದೆ. ಕಂದಾಯ ಮತ್ತು ಪೊಲೀಸ್ ಇಲಾಖೆಯ ಸಿಬ್ಬಂದಿ ಸೇರಿದಂತೆ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಮತ್ತು ಸದಸ್ಯರಿಂದ ಎಣಿಕೆ ಕಾರ್ಯ ನಡೆದಿದೆ.

    ಪತ್ರದಲ್ಲೇನಿದೆ..?
    ನನಗೆ ಗಂಡು ಮಗು ಹುಟ್ಟಲಿ ತಂದೆ. ನಿನ್ನ ಸನ್ನಿಧಿಗೆ ಬಂದು ಜವಳದ ಕಾರ್ಯ ಮಾಡುವೆನು ಎಂದು ಭಕ್ತರೊಬ್ಬರು ಪತ್ರ ಬರೆದ್ರೆ, ನಮಗೆ ಕೆಲವರು ಶತ್ರುಗಳಾಗಿ ಕಾಡುತ್ತಿದ್ದಾರೆ ಅವರಿಗೆ ಕಣಿಯಾಗಿ ಕಾಡಬೇಕಿದೆ. ಅವರು ನಮ್ಮ ತಂಟೆಗೆ ಬರಬಾರದು. ನಮ್ಮ ಕಟ್ಟೆ ಮೇಲೆ ಸಾಮಾನುಗಳನ್ನು ಇಡಬಾರದು. ಹನುಮಂತೇಶ ನೀನು ಅವರಿಗೆ ಕಾಡಬೇಕು ಬೇಡಿಕೆಯಿಟ್ಟು ಪತ್ರದಲ್ಲಿ ನಾಲ್ವರ ಹೆಸರನ್ನು ಉಲ್ಲೇಖಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹೊಸದಾಗಿ ಮದ್ವೆ ಆಗಿದ್ದೀನಿ, ಹೊಸ ಹುರುಪಿನಲ್ಲಿದ್ದೀನಿ – ಬೆಂಗ್ಳೂರು ಪೇದೆಯ ರಜೆ ಪತ್ರ ವೈರಲ್

    ಹೊಸದಾಗಿ ಮದ್ವೆ ಆಗಿದ್ದೀನಿ, ಹೊಸ ಹುರುಪಿನಲ್ಲಿದ್ದೀನಿ – ಬೆಂಗ್ಳೂರು ಪೇದೆಯ ರಜೆ ಪತ್ರ ವೈರಲ್

    ಬೆಂಗಳೂರು: ನಾನು ಹೊಸದಾಗಿ ಮದುವೆ ಆಗಿದ್ದೀನಿ. ಅಲ್ಲದೇ ಹೊಸ ಹುರುಪಿನಲ್ಲಿ ಇದ್ದೀನಿ. ಹಾಗಾಗಿ ನನಗೆ 10 ದಿನ ಪರಿವರ್ತಿತ ರಜೆ ಅಥವಾ ಗಳಿಕೆ ರಜೆ ನೀಡಿ ಎಂದು ಪೇದೆಯೊಬ್ಬರು ವಿನೂತನವಾಗಿ ರಜೆ ಪತ್ರವನ್ನು ಬರೆದಿದ್ದಾರೆ.

    ಪೇದೆ ಬರೆದ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಲ್ಲದೇ ಹೊಸ ಮದುವೆ ಗಂಡಿಗೆ ರಜೆ ನೀಡಿ ಎಂದು ಹಾಸ್ಯ ಮಾಡಿ ಟ್ರೋಲ್ ಮಾಡುತ್ತಿದ್ದಾರೆ.

    ಪತ್ರದಲ್ಲಿ ಏನಿದೆ?
    ನನಗೆ ಹೊಸದಾಗಿ ಮದುವೆ ಆಗಿದ್ದು, ಹೊಸ ಹುರುಪು ಇದೆ. ನಮ್ಮ ಊರಿನಲ್ಲಿ ನಮ್ಮ ಮನೆ ದೇವರ ಪೂಜಾ ಕಾರ್ಯಕ್ರಮ ಇರುವ ಕಾರಣ ನನಗೆ ಫೆಬ್ರವರಿ 24ರಿಂದ ಮಾರ್ಚ್ 5ರವರೆಗೆ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಲು ನನಗೆ 10 ದಿನಗಳ ವರೆಗೆ ಪರಿವರ್ತಿತ ರಜೆ ಅಥವಾ ಗಳಿಕೆ ರಜೆಯನ್ನು ಮಂಜೂರು ಮಾಡಬೇಕಾಗಿ ನಿವೇದಿಸಿಕೊಳ್ಳುತ್ತೇನೆ ಎಂದು ವಿನೂತನವಾಗಿ ಬೇಗೂರು ಪೊಲೀಸ್ ಠಾಣೆಗೆ ರಜೆ ಪತ್ರ ಬರೆದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಿನ್ನ ಕೊಲೆ ತಕ್ಷಣದಲ್ಲೆ – ಮಂಡ್ಯದ ಮತ್ತೋರ್ವ ಜೆಡಿಎಸ್ ಮುಖಂಡನಿಗೆ ಕೊಲೆ ಬೆದರಿಕೆ ಪತ್ರ

    ನಿನ್ನ ಕೊಲೆ ತಕ್ಷಣದಲ್ಲೆ – ಮಂಡ್ಯದ ಮತ್ತೋರ್ವ ಜೆಡಿಎಸ್ ಮುಖಂಡನಿಗೆ ಕೊಲೆ ಬೆದರಿಕೆ ಪತ್ರ

    ಮಂಡ್ಯ: ಜಿಲ್ಲೆಯ ಮದ್ದೂರಿನಲ್ಲಿ ಇತ್ತೀಚೆಗೆ ನಡೆದ ಜೆಡಿಎಸ್ ಮುಖಂಡ ತೊಪ್ಪನಹಳ್ಳಿ ಪ್ರಕಾಶ್ ಕೊಲೆ ಪ್ರಕರಣ ಮಾಸುವ ಮುನ್ನವೇ ಮತ್ತೊಬ್ಬ ನಾಯಕನಿಗೆ ಪ್ರಾಣ ಬೆದರಿಕೆಯ ಪತ್ರ ಬಂದಿದೆ.

    ಜೆಡಿಎಸ್ ಮುಖಂಡ ವೆಂಕಟೇಶ್‍ಗೆ ಕೊಲೆ ಬೆದರಿಕೆ ಪತ್ರ ಬಂದಿದೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ, ಕೆಎಂ ದೊಡ್ಡಿ ಗ್ರಾಮದವರಾದ ವೆಂಕಟೇಶ್ ರಾಜಕೀಯದಲ್ಲಿ ಸಕ್ರಿಯರಾಗಿದ್ದು, ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರೂ ಆಗಿದ್ದಾರೆ. ಇಡೀ ಪತ್ರದಲ್ಲಿ ಒಂದೇ ಒಂದು ಸಾಲಿದ್ದು, ಮೂರು ಪದಗಳ ಈ ವಾಕ್ಯ ಜೆಡಿಎಸ್ ಮುಖಂಡ ವೆಂಕಟೇಶ್ ಮತ್ತು ಮನೆಯವರ ನಿದ್ದೆಗೆಡಿಸಿದೆ.

    ಸೋಮವಾರ ಸಂಜೆ ನಾನು ಮನೆಗೆ ಬಂದಾಗ ಪತ್ರ ಬಂದಿದೆ ಎಂದು ಮನೆಯವರು ಕೊಟ್ಟರು. ಯಾರೋ ಅನಾಮಧೇಯ ವಿಳಾಸದಿಂದ ಬಂದಿದ್ದು, ಆ ಪತ್ರದಲ್ಲಿ ‘ನಿನ್ನ ಕೊಲೆ ತಕ್ಷಣದಲ್ಲೆ’ ಎಂದು ಬೆದರಿಕೆ ಹಾಕಿದ್ದಾರೆ. ತಕ್ಷಣ ನಾನು ಪೊಲೀಸ್ ಠಾಣೆಗೆ ಹೋಗಿ ದೂರು ಕೊಟ್ಟಿದ್ದೇನೆ. ಜೊತೆಗೆ ಪೊಲೀಸರ ಬಳಿ ರಕ್ಷಣೆಗೆ ಮನವಿ ಮಾಡಿದ್ದೇನೆ ಎಂದು ವೆಂಕಟೇಶ್ ಹೇಳಿದ್ದಾರೆ.

    ಕಳೆದ ಡಿಸೆಂಬರ್ 24 ರಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರ ಬೆಂಬಲಿಗನಾದ, ಜೆಡಿಎಸ್ ಮುಖಂಡ ಪ್ರಕಾಶ್ ಅವರನ್ನು ಹಾಡಹಗಲೇ ನಡುರಸ್ತೆಯಲ್ಲಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಆ ಘಟನೆ ಮಾಸುವ ಮುನ್ನವೇ ಸಚಿವ ತಮ್ಮಣ್ಣ ಅವರ ಮತ್ತೊಬ್ಬ ಬೆಂಬಲಿಗ ವೆಂಕಟೇಶ್ ಅವರಿಗೆ ಕೊಲೆ ಬೆದರಿಕೆ ಬಂದಿದೆ.

    ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಂಡ್ಯ ಎಸ್‍ಪಿ ಶಿವಪ್ರಕಾಶ್ ದೇವರಾಜು, ಪ್ರಾಣ ಬೆದರಿಕೆ ಬಗ್ಗೆ ಈಗಷ್ಟೇ ತಿಳಿದಿದೆ. ಈ ಬಗ್ಗೆ ಮಾತನಾಡಲು ಸ್ವತಃ ವೆಂಕಟೇಶ್ ಅವರಿಗೆ ಬರಲು ಹೇಳಿದ್ದೇನೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ವೆಂಕಟೇಶ್ ಅವರಿಗೆ ಸೂಕ್ತ ರಕ್ಷಣೆ ನೀಡಲಾಗುವುದು. ಈ ಬಗ್ಗೆ ಕೆ.ಎಂ ದೊಡ್ಡಿ ಪೊಲೀಸರಿಗೆ ತಿಳಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ ಎಂದು ಹೇಳಿದ್ದಾರೆ.

    ಮಂಡ್ಯದಲ್ಲಿ ಕೆಲವು ಕಿಡಿಗೇಡಿಗಳು ರಾಜಕೀಯ ವಿಷ ಬೀಜ ಬಿತ್ತುತ್ತಿದ್ದಾರ ಎಂಬ ಅನುಮಾನ ಮೂಡುತ್ತಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಮೂಲಕ ಪತ್ರ ಬರೆದ ಕಿಡಿಗೇಡಿಯನ್ನು ಪತ್ತೆ ಹಚ್ಚಿ ಕಾನೂನು ರೀತಿ ಕ್ರಮ ಜರುಗಿಸಬೇಕಿದೆ ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಯಾವ ಪಕ್ಷದಲ್ಲಾದರೂ ಇರಿ, ನಮ್ಮ ಕಣ್ಮುಂದೆ ಇರಿ

    ಯಾವ ಪಕ್ಷದಲ್ಲಾದರೂ ಇರಿ, ನಮ್ಮ ಕಣ್ಮುಂದೆ ಇರಿ

    – ರಮೇಶ್ ಜಾರಕಿಹೊಳಿಗೆ ಸ್ನೇಹಿತ ಬರೆದ ಪತ್ರ ವೈರಲ್

    ಬೆಳಗಾವಿ: ಸಮ್ಮಿಶ್ರ ಸರ್ಕಾರ ಸಚಿವ ಸಂಪುಟ ವಿಸ್ತರಣೆ ವೇಳೆ ಸಚಿವ ಸಂಪುಟದಿಂದ ಕೈಬಿಟ್ಟ ಪರಿಣಾಮ ಪಕ್ಷದ ಮುಖಂಡರು, ಮಾಧ್ಯಮ ಹಾಗೂ ಸ್ನೇಹಿತ ಕೈಗೆ ಸಿಗದೆ ಇರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಸ್ನೇಹಿತರೊಬ್ಬರು ಬರೆದಿರುವ ಪತ್ರ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ವಾಟ್ಸಾಪ್ ಮೂಲಕ ವೈರಲ್ ಆಗಿರುವ ಪತ್ರದಲ್ಲಿ ರಮೇಶ್ ಜಾರಕಿ ಹೊಳಿ ಅವರಿಗೆ ಮನವಿ ಮಾಡಿರುವ ಸ್ನೇಹಿತ, ನಿಮ್ಮ ನೇರಮಾತು, ನಿಷ್ಕಪಟ ನಡೆಯನ್ನು ನಾವು ಮಿಸ್ ಮಾಡಿಕೊಳ್ಳುತ್ತಿದ್ದೇವೆ. ನೀವು ಎಂಟು ದಿನಗಳಿಂದ ನಮ್ಮೆಲ್ಲರಿಂದ ದೂರ ಉಳಿದಿರುವುದು ಸರಿಯಲ್ಲ. ನಿಮ್ಮನ್ನು ಹುಡುಕಿ ಸಾಕಾಗಿದೆ ಎಂದು ಅಶೋಕ್ ಚಂದರಗಿ ಎಂಬವರು ಮಾತ್ರ ಬರೆದಿದ್ದಾರೆ.

    ನೀವು ಕಾಂಗ್ರೆಸ್, ಬಿಜೆಪಿ ಯಾವುದೇ ಪಕ್ಷದಲ್ಲಾದರೂ ಇರಿ, ಆದರೆ ಸದಾ ನಮ್ಮ ಕಣ್ಣು ಮುಂದೆಯೇ ಇರಿ. ರಮೇಶ್ ಜಾರಕಿಹೊಳಿ ಎಂದು ನಿಂತ ನೀರಲ್ಲ. ನಿಮ್ಮ ದೀರ್ಘಕಾಲದ ಕಣ್ಮರೆ ನಮಗಷ್ಟೇ ಅಲ್ಲ. ನಿಮ್ಮಿಂದ ದೂರ ಸರಿದವರಿಗೆ ಎಲ್ಲರಿಗೂ ದುಃಖ ಉಂಟು ಮಾಡಿದೆ. ತಾವು ಎಲ್ಲಿದ್ದರೂ ಬೆಳಗಾವಿಗೆ ಮರಳಿ ಬನ್ನಿ ಎಂದು ಮನವಿ ಮಾಡಿಕೊಂಡಿದ್ದಾರೆ.

    ಬೆಳಗಾವಿ ಗಂಡುಮೆಟ್ಟಿನ ನಾಡು. ನಾವು ಅಡಗಿ ಕುಳಿತುಕೊಳ್ಳುವ ಬೆಕ್ಕುಗಳಲ್ಲ. ಘರ್ಜಿಸುವ ಸಿಂಹಗಳು ಇದ್ದಂಗೆ ಎಂದು ರಮೇಶ್ ಅವರ ಸ್ನೇಹಿತ ಅಶೋಕ್ ಪತ್ರ ಬರೆದು ಬೆನ್ನಿಗೆ ನಿಂತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv