Tag: letter

  • ಹೆಲಿಕಾಪ್ಟರ್ ಲೋನ್‍ಗಾಗಿ ರಾಷ್ಟ್ರಪತಿಗೆ ಪತ್ರ ಬರೆದ ಮಹಿಳೆ

    ಹೆಲಿಕಾಪ್ಟರ್ ಲೋನ್‍ಗಾಗಿ ರಾಷ್ಟ್ರಪತಿಗೆ ಪತ್ರ ಬರೆದ ಮಹಿಳೆ

    ಭೋಪಾಲ್: ಮಹಿಳೆಯೊಬ್ಬರು ತನಗೆ ಹೆಲಿಕಾಪ್ಟರ್ ಖರೀದಿಗಾಗಿ ಲೋನ್ ಮತ್ತು ಅದರಲ್ಲಿ ಹಾರಾಟ ನಡೆಸಲು ಪರವಾನಿಗೆ ನೀಡಬೇಕೆಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪತ್ರ ಬರೆದಿದ್ದಾರೆ. ಈ ಪತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಬಸಂತಿ ಬಾಯಿ ಲೋಹರ್ ಅವರು ಮಾಂಡ್ಸೌರ್ ಜಿಲ್ಲೆ, ಅಗರ್ ಗ್ರಾಮದಲ್ಲಿ ವಾಸಿಸುತ್ತಿದ್ದು. ಕಳೆದ ಕೆಲದಿನಗಳ ಹಿಂದೆ ತಮ್ಮ ಮಕ್ಕಳು ಬಸಂತಿ ಬಾಯಿ ಲೋಹರ್ ಅವರು ಜಮೀನಿಗೆ ಹೋಗುವ ರಸ್ತೆಯನ್ನು ಬಂದ್ ಮಾಡಿದ್ದಾರೆ. ಹಾಗಾಗಿ ರಾಷ್ಟ್ರಪತಿಗೆ ಪತ್ರ ಬರೆದು ಹೆಲಿಕಾಪ್ಟರ್ ಖರೀದಿಸಿ ಜಮೀನಿಗೆ ಹೋಗುವ ಉಪಾಯ ಮಾಡಿದ್ದಾರೆ.

    ಬಸಂತಿ ಬಾಯಿ ಲೋಹರ್ ಪತ್ರವನ್ನು ಹಿಂದಿಯಲ್ಲಿ ಬರೆದಿದ್ದು, ನನ್ನ ಮಕ್ಕಳಾದ ಲವ ಮತ್ತು ಕುಶ ಹಾಗೂ ಸ್ಥಳೀಯ ನಿವಾಸಿ ಪರಮಾನಂದ್ ಪಾಟಿದಾರ್ ಸೇರಿಕೊಂಡು ದಿನನಿತ್ಯ ನಾನೂ ಸಂಚರಿಸುವ ಜಮೀನಿನ ದಾರಿಯನ್ನು ಮುಚ್ಚಿದ್ದಾರೆ. ಹಾಗಾಗಿ ಜಮೀನಿಗೆ ಯಾವುದೇ ವಸ್ತುಗಳು ಮತ್ತು ದನಕರುಗಳನ್ನು ಕರೆದೊಯ್ಯಲು ಸಾಧ್ಯವಾಗುತ್ತಿಲ್ಲ. ಇದರಿಂದ ಮುಕ್ತಿ ಹೊಂದಲು ಹೆಲಿಕಾಪ್ಟರ್ ಖರೀದಿಗೆ ಸಾಲ ಕೊಡುವಂತೆ ರಾಷ್ಟ್ರಪತಿ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.

    ಜಮೀನಿನ ದಾರಿಯ ತಕರಾರನ್ನು ಸರಿಪಡಿಸುವಂತೆ ಮತ್ತೊಂದು ಪತ್ರ ಬರೆದಿರುವ ಬಸಂತಿ. ಈ ಪತ್ರವನ್ನು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರದು ಸಮಸ್ಯೆ ಬಗೆಹರಿಸುವಂತೆ ಕೇಳಿಕೊಂಡಿದ್ದಾರೆ.

    ಮಾಂಡ್ಸೌರ್ ಜಿಲ್ಲೆಯ ಸ್ಥಳೀಯಾಡಳಿತ ಪತ್ರದ ಕುರಿತು ತನಿಖೆ ನಡೆಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದೆ. ಪತ್ರ ವೈರಲ್ ಆಗುತ್ತಿದ್ದಂತೆ ಈ ಕುರಿತು ಕಂದಾಯ ಇಲಾಖೆ ಗಮನಹರಿಸಿದ್ದು ಜಿಲ್ಲಾ ತಾಹಶೀಲ್ದಾರ್ ಬಸಂತಿ ಅವರ ಮನೆಗೆ ತೆರಳಿ ಸ್ಥಳ ಪರಿಶೀಲಿಸಿದ್ದಾರೆ. ಆದರೆ ಅಲ್ಲಿ ಯಾವುದೇ ರೀತಿಯ ಸಮಸ್ಯೆ ಇರಲಿಲ್ಲ ಎಂದು ಜಿಲ್ಲಾಧಿಕಾರಿ ಮನೋಜ್ ಪುಷ್ಪ್ ತಿಳಿಸಿದ್ದಾರೆ.

  • ಸೆಕ್ಸ್ ವೇಳೆ ಹಂದಿಯಂತೆ ಕಿರುಚಬೇಡ – ಮಹಿಳೆಗೆ ನೆರೆಮನೆಯವರಿಂದ ಪತ್ರ

    ಸೆಕ್ಸ್ ವೇಳೆ ಹಂದಿಯಂತೆ ಕಿರುಚಬೇಡ – ಮಹಿಳೆಗೆ ನೆರೆಮನೆಯವರಿಂದ ಪತ್ರ

    ಲಂಡನ್: ಸೆಕ್ಸ್ ವೇಳೆ ಹಂದಿಯಂತೆ ಕಿರುಚಬೇಡ ಎಂದು ಮಹಿಳೆಯೊಬ್ಬಳಿಗೆ ಆಕೆಯ ನೆರೆಮನೆಯವರು ಪತ್ರ ಬರೆದು ಅವಮಾನ ಮಾಡಿರುವ ವಿಚಿತ್ರ ಘಟನೆಯೊಂದು ಲಂಡನ್ ನಲ್ಲಿ ನಡೆದಿದೆ.

    ಮಹಿಳೆ ಲಂಡನ್ ಮೂಲದವಳಾಗಿದ್ದು, ಹೆಸರು ಬಹಿರಂಗಪಡಿಸಿಲ್ಲ. ಆದರೆ ಪತ್ರ ಶಾರ್ಕ್‍ಬೈನಮ್ 8 ಎಂಬ ಟ್ವಿಟ್ಟರ್ ಖಾತೆಯಿಂದ ಶೇರ್ ಆಗಿದೆ. ರಾತ್ರಿಯ ಸರಸ ಸಲ್ಲಾಪದ ನಂತರ ಬೆಳಗ್ಗೆ ಮಹಿಳೆ ತನ್ನ ನೆರೆಮನೆಯವರಿಂದ ಈ ಪತ್ರವನ್ನು ಪಡೆದುಕೊಂಡಿದ್ದಾಳೆ. ಈ ಪತ್ರವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದು, ಪತ್ರದಲ್ಲಿ ಸೆಕ್ಸ್ ಮಾಡುವಾಗ ನೀನು ಹಂದಿಯಂತೆ ಕಿರುಚುವುದನ್ನು ನಿಲ್ಲಿಸಲು ಆಗುತ್ತಾ ಎಂದು ಪ್ರಶ್ನಿಸಲಾಗಿದೆ. ಅಲ್ಲದೆ ನಿನ್ನ ಕಿರುಚುವಿಕೆಯಿಂದ ನಾವೆಲ್ಲ ಅನಾರೋಗ್ಯಕ್ಕೀಡಾಗಿದ್ದೇವೆ ಎಂದು ಬರೆಯಲಾಗಿದೆ.

    ತನಗೆ ನೆರೆಮನೆಯವರು ನೀಡಿದ ಪತ್ರವನ್ನು ಮಹಿಳೆ ಯಾವುದೇ ಅಳುಕಿಲ್ಲದೆ ಬಹಿರಂಗವಾಗಿಯೇ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾಳೆ. ಅಲ್ಲದೆ ವೈಯಕ್ತಿಕವಾಗಿ ನಾನು ಅಷ್ಟೊಂದು ಸೌಂಡ್ ಮಾಡುತ್ತಿಲ್ಲ ಎಂದು ಭಾವಿಸಿದ್ದೆ. ಆದರೆ ನಾನು ಭಾವಿಸಿದ್ದಕ್ಕಿಂತ ಭಯಂಕರವಾಗಿತ್ತು ಎಂದು ನೆರೆಮನೆಯವರು ಸಿಟ್ಟಿನಿಂದ ಬರೆದ ಪತ್ರ ನೋಡಿ ತಿಳಿಯಿತು ಎಂದು ಮಹಿಳೆ ತಿಳಿಸಿದ್ದಾಳೆ.

    ಮಹಿಳೆ ಈ ಪತ್ರವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳುತ್ತಿದ್ದಂತೆಯೇ 21 ಸಾವಿರಕ್ಕಿಂತಲೂ ಅಧಿಕ ಲೈಕ್ಸ್ ಹಾಗೂ ಒಂದೂವರೆ ಸಾವಿರಕ್ಕೂ ಅಧಿಕ ಬಾರಿ ರೀಟ್ವೀಟ್ ಆಗಿದೆ. ಅಲ್ಲದೆ ಸಾವಿರಾರು ಕಾಮೆಂಟ್ ಗಳು ಬಂದಿವೆ. ಕೆಲವೊಬ್ಬರು ತಮಾಷೆಯಾಗಿ ಬರೆದುಕೊಂಡರೆ ಇನ್ನೂ ಕೆಲವರು ಮಹಿಳೆ ನಡತೆ ವಿರುದ್ಧ ಸಿಡಿದೆದ್ದಿದ್ದಾರೆ.

    ಪತ್ರ ಬರೆದವರಿಗೆ ಕನಿಷ್ಠ ಸೌಜನ್ಯವೂ ಇಲ್ಲ ಎಂದು ಒಬ್ಬರು ಕಿಡಿಕಾರಿದರೆ, ಮತ್ತೊಬ್ಬರು ಪಕ್ಕದಮನೆಯವರು ಹೊಟ್ಟೆಕಿಚ್ಚಿನವರು ಎಂದು ಹೇಳಿದ್ದಾನೆ. ಒಟ್ಟಿನಲ್ಲಿ ಮಹಿಳೆ ಮಾತ್ರ ನೆರೆಮನೆಯವರ ಈ ಪತ್ರದಿಂದ ನನಗೆ ಮುಜುಗರ ಉಂಟಾಗಿದೆ. ಈ ವಿಚಾರದ ಬಗ್ಗೆ ನಾನೆಷ್ಟೇ ತಮಾಷೆ ಮಾಡಿದರೂ ಇದರಿಂದ ನನ್ನ ಮನಸ್ಸಿಗೆ ನೋವುಂಟಾಗಿದೆ ಎಂದು ತಿಳಿಸಿದ್ದಾಳೆ.

  • ಅವನನ್ನು ಚೆನ್ನಾಗಿ ನೋಡಿಕೊಳ್ಳಿ – ಪ್ರೀತಿಯ ಶ್ವಾನದ ಬಗ್ಗೆ ಭಾವನಾತ್ಮಕ ಸಾಲು ಬರೆದ ಮಾಲೀಕ

    ಅವನನ್ನು ಚೆನ್ನಾಗಿ ನೋಡಿಕೊಳ್ಳಿ – ಪ್ರೀತಿಯ ಶ್ವಾನದ ಬಗ್ಗೆ ಭಾವನಾತ್ಮಕ ಸಾಲು ಬರೆದ ಮಾಲೀಕ

    – ಸಂಬಂಧಿಕರಿಂದ ಅವನನ್ನು ಬಿಟ್ಟು ಹೋಗುವ ಪರಿಸ್ಥಿತಿ ಬಂದಿದೆ

    ಮೆಕ್ಸಿಕೋ: ಅವನನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಪತ್ರ ಬರೆದು ಮಾಲೀಕನೋರ್ವ ತಾನು ಪ್ರೀತಿಯಿಂದ ಸಾಕಿದ್ದ ಶ್ವಾನವನ್ನು ಪಾರ್ಕಿನ ಬೆಂಚಿಗೆ ಕಟ್ಟಿ ಹೋಗಿರುವ ಘಟನೆ ಮೆಕ್ಸಿಕೋ ನಗರದಲ್ಲಿ ನಡೆದಿದೆ.

    ತಾನು ಪ್ರೀತಿಯಿಂದ ಸಾಕಿದ್ದ ಶ್ವಾನವನ್ನು ಸಂಬಂಧಿಕರು ನಿಂದಿಸುತ್ತಾರೆ ಎಂಬ ಕಾರಣಕ್ಕೆ ಆತ ಇದನ್ನು ಬೇರೆಯವರಿಗೆ ಕೊಡುವ ತೀರ್ಮಾನ ಮಾಡಿದ್ದಾನೆ. ಅದಕ್ಕಾಗಿ ಒಂದು ಭಾವನಾತ್ಮಕ ಪತ್ರ ಬರೆದು ಶ್ವಾನವನ್ನು ಪಾರ್ಕಿನಲ್ಲಿರುವ ಬೆಂಚ್‍ಗೆ ಕಟ್ಟಿ, ಯಾರಾದರೂ ಇವನನ್ನು ದತ್ತು ತೆಗೆದುಕೊಂಡು ಚೆನ್ನಾಗಿ ನೋಡಿಕೊಳ್ಳಿ ಎಂದು ಮನವಿ ಮಾಡಿದ್ದಾನೆ.

    ಪತ್ರದಲ್ಲೇನಿದೆ?
    ನಾನು ಈ ಪತ್ರದ ಮೂಲಕ ಶ್ವಾನವನ್ನು ದತ್ತು ಪಡೆಯಲು ಮತ್ತು ಅವವನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಮನವಿ ಮಾಡುತ್ತೇನೆ. ನಾನು ಪ್ರೀತಿಯಿಂದ ಸಾಕಿದ್ದ ನಾಯಿಯನ್ನು ಈ ರೀತಿ ಬಿಟ್ಟುಹೋಗಲು ಬಹಳ ಬೇಸರವಾಗುತ್ತಿದೆ. ಆದರೆ ನನ್ನ ಸಂಬಂಧಿಕರು ಅವನನ್ನು ದಿನ ಬೈಯುತ್ತಾರೆ. ಅವರು ನಿಂದಿಸುವುದನ್ನು ನೋಡಲಾಗದೇ ಈ ತೀರ್ಮಾನ ಮಾಡಿದ್ದೇನೆ. ಈ ಪತ್ರ ಓದಿ ದತ್ತು ಪಡೆಯಬೇಕು ಎಂದರೆ ಕೆರೆದುಕೊಂಡು ಹೋಗಿ. ಇಲ್ಲ ಈ ಪತ್ರವನ್ನು ಬೇರೆಯವರಿಗಾಗಿ ಇಲ್ಲೇ ಬಿಟ್ಟು ಹೋಗಿ ಎಂದು ಬರೆದುಕೊಂಡಿದ್ದಾರೆ.

    ತನ್ನ ಮಾಲೀಕನನ್ನು ಕಳೆದುಕೊಂಡ ಶ್ವಾನ ಬೆಂಚಿನ ಮೇಲೆ ಮಲಗಿಕೊಂಡು, ಬಂದು ಪತ್ರ ಓದುವವರನ್ನು ನೋಡುತ್ತಾ ಕುಳಿತ್ತಿದೆ. ಪತ್ರ ಓದಿದ ಯಾರೂ ಶ್ವಾನವನ್ನು ದತ್ತು ಪಡೆದುಕೊಂಡಿಲ್ಲ. ಕೊನೆಗೆ ಅನಿಮಲ್ ಚಾರಿಟಿಯವರು ಬಂದು ಶ್ವಾನವನ್ನು ಕರೆದುಕೊಂಡು ಹೋಗಿದ್ದಾರೆ. ಜೊತೆಗೆ ಶ್ವಾನಕ್ಕೆ ‘ಬೋಸ್ಟನ್’ ಎಂದು ನಾಮಕರಣ ಮಾಡಿದ್ದಾರೆ.

  • ನಾನು ಕುಡಿಯೋದಿಲ್ಲ, ಸಂಜೆ ಸ್ವಲ್ಪ ಸ್ವಲ್ಪ ಅಷ್ಟೇ ತೆಗೆದುಕೊಳ್ತೇನೆ – ಹಾಸನಾಂಬೆಗೆ ಭಕ್ತನ ವಿಚಿತ್ರ ಕೋರಿಕೆ

    ನಾನು ಕುಡಿಯೋದಿಲ್ಲ, ಸಂಜೆ ಸ್ವಲ್ಪ ಸ್ವಲ್ಪ ಅಷ್ಟೇ ತೆಗೆದುಕೊಳ್ತೇನೆ – ಹಾಸನಾಂಬೆಗೆ ಭಕ್ತನ ವಿಚಿತ್ರ ಕೋರಿಕೆ

    – 22 ಲಕ್ಷದ 79 ಸಾವಿರದ 772 ರೂ. ಸಂಗ್ರಹ

    ಹಾಸನ: ಹಾಸನಾಂಬೆಯ ಹುಂಡಿಗೆ ಎಂದಿನಂತೆ ಈ ಬಾರಿಯೂ ಕಾಣಿಕೆ ಜೊತೆಗೆ ವಿವಿಧ ರೀತಿಯ ನಿವೇದನೆ ಸಲ್ಲಿಸಿ ಭಕ್ತರು ಪತ್ರ ಬರೆದು ಹಾಕಿದ್ದಾರೆ.

    ಕೌಟುಂಬಿಕ ಸಮಸ್ಯೆ, ಸಾಲ ತೀರಿಸು, ಹಣಕಾಸು ಸಮಸ್ಯೆ ಬಗೆಹರಿಸು ತಾಯಿ, ಒಳ್ಳೆಯ ಕೆಲಸ ಕೊಡಿಸು, ನನಗೆ ನನ್ನ ಹೆಂಡತಿ ಮಕ್ಕಳು ಬೇಕು, ನನಗೆ ಮದುವೆ ಆಗಬೇಕು ಅಮ್ಮ, ದೊಡ್ಡಮೊತ್ತದ ಲಾಟರಿ ಹೊಡೆಸು ತಾಯಿ, ಕುಟುಂಬದವರನ್ನು ಕಾಪಾಡು ತಾಯಿ, ಪ್ರಾಣಿ ಪಕ್ಷಿಗಳನ್ನು ಕಾಪಾಡು ತಾಯಿ ಹಾಸನಾಂಬೆ ಎಂದು ಹಲವರು ಪ್ರಾರ್ಥನೆ ಸಲ್ಲಿಸಿದ್ದರು.

    ಕೊರೊನಾ ಹೋಗಲಾಡಿಸು ಎಂದು ಕೇಳಿಕೊಂಡಿರುವ ಹಲವರು, ಪತ್ನಿ-ಮಕ್ಕಳ ಒಂದು ಮಾಡು, ನನ್ನ ಗಂಡ ಕುಡಿಯುವುದು ಬಿಡಿಸು ಎಂದು ಪತ್ರದ ಮೂಲಕ ನಿವೇದನೆ ಮಾಡಿಕೊಂಡಿದ್ದರು. ಇದೇ ರೀತಿ ಹಾಸನಾಂಬೆ ಪಾಸ್ ವಿತರಣೆ ತಾರತಮ್ಯದ ವಿರುದ್ಧ ಪತ್ರದ ಮೂಲಕ ಕೆಲವರು ಅಸಮಾಧಾನ ಹೊರಹಾಕಿದ್ದರು. ಮತ್ತೊಬ್ಬ ಭಕ್ತನಂತು ಕುಡಿಯುವುದನ್ನು ಬಿಡುತ್ತೇನೆ. ಆದರೆ ಸಂಜೆ ಸ್ವಲ್ಪ ಸ್ವಲ್ಪ ಕುಡಿಯುತ್ತೇನೆ ಎಂದು ಬರೆದು ಹಾಕಿದ್ದ.

    ಪತ್ರಿವರ್ಷ ಕಾಣಿಕೆ ರೂಪದಲ್ಲಿ ಕೋಟಿ ಕೋಟಿ ಬರುತ್ತಿದ್ದ ಆದಾಯ ಇಳಿಕೆ ಕಂಡಿದ್ದು, ಈ ಬಾರಿ ಸಾರ್ವಜನಿಕ ದರ್ಶನ ನಿಷೇಧದಿಂದ ಆದಾಯ ಕಡಿಮೆಯಾಗಿದೆ. ಹುಂಡಿಯಲ್ಲಿ ಈ ಬಾರಿ 22 ಲಕ್ಷದ 79 ಸಾವಿರದ 772 ರೂಪಾಯಿ ಸಂಗ್ರಹವಾಗಿದೆ. ಈ ಬಾರಿ ಸಾರ್ವಜನಿಕರಿಗೆ ದೇವಿ ದರ್ಶನ ನಿರ್ಬಂಧ ಹಿನ್ನೆಲೆಯಲ್ಲಿ ಹುಂಡಿ ಹಣದಲ್ಲಿ ಭಾರೀ ಇಳಿಕೆಯಾಗಿದೆ. ಕಳೆದ ವರ್ಷ 10 ದಿನಗಳಲ್ಲಿ ಮೂರೂವರೆ ಕೋಟಿ ಹಣ ಹುಂಡಿಯಲ್ಲಿ ಸಂಗ್ರಹವಾಗಿತ್ತು. ಈ ಬಾರಿ ಕೊರೊನಾ ಎಫೆಕ್ಟ್ ನಿಂದ ನವೆಂಬರ್ 5 ರಿಂದ 16 ರವೆರೆಗೆ ನಡೆದಿದ್ದ ಹಾಸನಾಂಬೆ ಉತ್ಸವ ಸರಳವಾಗಿ ನಡೆಸಲಾಗಿತ್ತು.

  • ಅಡ್ವಾಣಿಗೆ ಭಾರತ ರತ್ನ ನೀಡಿ- ಶಂಕರಮೂರ್ತಿಯಿಂದ ಪ್ರಧಾನಿಗೆ ಪತ್ರ

    ಅಡ್ವಾಣಿಗೆ ಭಾರತ ರತ್ನ ನೀಡಿ- ಶಂಕರಮೂರ್ತಿಯಿಂದ ಪ್ರಧಾನಿಗೆ ಪತ್ರ

    ಶಿವಮೊಗ್ಗ: ಮಾಜಿ ಉಪ ಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಭಾರತ ರತ್ನ ನೀಡುವಂತೆ ವಿಧಾನ ಪರಿಷತ್‍ನ ಮಾಜಿ ಸಭಾಪತಿ ಡಿ.ಎಚ್ ಶಂಕರಮೂರ್ತಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

    ಎಲ್.ಕೆ.ಅಡ್ವಾಣಿ ಅವರು 7 ದಶಕಕ್ಕೂ ಹೆಚ್ಚು ಕಾಲದಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಅಡ್ವಾಣಿ ಅವರ ಈ ಎಲ್ಲ ಜನಪರ ಸೇವೆ ಗುರುತಿಸಿ ರಾಷ್ಟ್ರದ ಅತ್ಯುನ್ನತ ಪ್ರಶಸ್ತಿಯಾದ ಭಾರತ ರತ್ನ ನೀಡಬೇಕು. ಇದು ರಾಜ್ಯದ ಸಾವಿರಾರು ಮಂದಿಯ ಅಭಿಲಾಷೆ ಸಹ ಆಗಿದೆ ಎಂದು ಡಿ.ಎಚ್ ಶಂಕರಮೂರ್ತಿ ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ.

    ಅಡ್ವಾಣಿಯವರು ಆರ್‍ಎಸ್‍ಎಸ್, ಭಾರತೀಯ ಜನಸಂಘ ಹಾಗೂ ಬಿಜೆಪಿ ಮೂಲಕ ತಾಯ್ನಾಡಿಗಾಗಿ ಸಾಕಷ್ಟು ತ್ಯಾಗ ಮಾಡಿದ್ದಾರೆ ಹಾಗೂ ಕೊಡುಗೆ ನೀಡಿದ್ದಾರೆ. ಸಾರ್ವಜನಿಕ ಹಾಗೂ ತಮ್ಮ ವೈಯಕ್ತಿಕ ಬದುಕಿನಲ್ಲಿ ಅವರು ಪ್ರಾಮಾಣಿಕತೆ ಮೆರೆದಿದ್ದಾರೆ. ತಮ್ಮ ವಿಶಿಷ್ಠ ಜ್ಞಾನ ಹಾಗೂ ಅನುಭವದ ಮೂಲಕ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಈ ಮೂಲಕ ಭಾರತೀಯರು ಹೆಮ್ಮೆ ಪಡುವಂತೆ ಮಾಡಿದ್ದಾರೆ. ಅಲ್ಲದೆ ಅಡ್ವಾಣಿಯವರದ್ದು ಅಪರೂಪದ ವ್ಯಕ್ತಿತ್ವವಾಗಿದೆ. ಹೀಗಾಗಿ ಅವರಿಗೆ ಭಾರತ ರತ್ನ ನೀಡಬೇಕು ಎಂದು ಪತ್ರದಲ್ಲಿ ಕೇಳಿಕೊಂಡಿದ್ದಾರೆ.

    ಕಳೆದ ಐದು ದಶಕಗಳಿಂದ ನಾನು ಅವರನ್ನು ಹತ್ತಿರದಿಂದ ನೋಡಿದ್ದೇನೆ, ಲಕ್ಷಾಂತರ ಜನರ ರೀತಿ ನಾನೂ ಸಹ ಅಡ್ವಾಣಿಯರಿಗೆ ಹತ್ತಿರವಾಗಿದ್ದೆ. ಹೀಗಾಗಿ ನಾನು ಅವರನ್ನು ಹತ್ತಿರದಿಂದ ಬಲ್ಲೆ. ಅವರ ಸಾರ್ವಜನಿಕ ಭಾಷಣಗಳನ್ನು ಭಾಷಾಂತರ ಮಾಡುತ್ತಿದ್ದೆ ಎಂದು ಇದೇ ವೇಳೆ ನೆನಪಿಸಿಕೊಂಡಿದ್ದಾರೆ.

    ಎಲ್.ಕೆ.ಅಡ್ವಾಣಿಯವರಿಗೆ ಭಾರತ ರತ್ನ ನೀಡಬೇಕೆಂಬುದು ಪಕ್ಷದ ಸಾವಿರಾರು ಕಾರ್ಯಕರ್ತರು ಹಾಗೂ ಸಾಮಾನ್ಯ ಜನರ ಆಶಯವಾಗಿದೆ. ಅಡ್ವಾಣಿಯವರು ಭಾರತ ರತ್ನಕ್ಕೆ ಯೋಗ್ಯರು, ಸರಿಯಾದ ವ್ಯಕ್ತಿ ಹಾಗೂ ಎಲ್ಲ ಗೌರವಗಳನ್ನು ಹೊಂದುವ ಶ್ರೇಷ್ಠ ಗುಣಗಳನ್ನು ಹೊಂದಿದ್ದಾರೆ. ಹೀಗಾಗಿ ಕರ್ನಾಟಕದಲ್ಲಿನ ಪಕ್ಷದ ಸಾವಿರಾರು ಕಾರ್ಯಕರ್ತರ ಪರವಾಗಿ ಅಡ್ವಾಣಿಯವರಿಗೆ ಭಾರತ ನೀಡಬೇಕೆಂದು ಈ ಮೂಲಕ ಕೇಳಿಕೊಳ್ಳುತ್ತಿದ್ದೇನೆ ಎಂದು ಮನವಿ ಮಾಡಿದ್ದಾರೆ.

    ನಿನ್ನೆಯಷ್ಟೇ ಎಲ್.ಕೆ.ಅಡ್ವಾಣಿಯವರು 93ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಸ್ವತಃ ಪ್ರಧಾನಿ ನರೇಂದ್ರ ಮೋದಿ ಅಡ್ವಾಣಿಯವರ ನಿವಾಸಕ್ಕೆ ತೆರಳಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಈ ವೇಳೆ ಅಡ್ವಾಣಿಯವರ ಕಾಲು ಮುಟ್ಟಿ ನಮಸ್ಕರಿಸಿ ಮೋದಿ ಶುಭ ಕೋರಿದ್ದಾರೆ. ಟ್ವೀಟ್ ಮೂಲಕ ಸಹ ಮೋದಿ ಅಡ್ವಾಣಿಯವರಿಗೆ ಶುಭಾಶಯ ತಿಳಿಸಿ ನೀವೇ ನಮಗೆ ಸ್ಫೂರ್ತಿ ಎಂದಿದ್ದಾರೆ.

  • ಪ್ಲೀಸ್ ಅಣ್ಣನನ್ನು ಶಾಶ್ವತವಾಗಿ ಜೈಲಿಗೆ ಹಾಕಿ – ತಂದೆಗೆ ಸಹೋದರಿ ಬರೆದ ಪತ್ರ ವೈರಲ್

    ಪ್ಲೀಸ್ ಅಣ್ಣನನ್ನು ಶಾಶ್ವತವಾಗಿ ಜೈಲಿಗೆ ಹಾಕಿ – ತಂದೆಗೆ ಸಹೋದರಿ ಬರೆದ ಪತ್ರ ವೈರಲ್

    ಬಾಲ್ಯದಲ್ಲಿ ಮನೆಯಲ್ಲಿ ಅಣ್ಣ-ತಂಗಿ ಜಗಳವಾಡುವುದು, ಕಾಡಿಸುವುದು ಸಾಮಾನ್ಯ. ಸಣ್ಣ-ಪುಟ್ಟ ವಿಚಾರಗಳಿಗೂ ಇಬ್ಬರು ಮಧ್ಯೆ ಜೋರಾಗಿ ಗಲಾಟೆ ಕೂಡ ಆಗುತ್ತದೆ. ಕೆಲವೊಮ್ಮ ಕಾರಣಗಳೇ ಇಲ್ಲದೇ ಜಗಳವಾಗುತ್ತದೆ. ಅದೇ ರೀತಿ ಇಲ್ಲೊಬ್ಬ ಸಹೋದರಿ ಅಣ್ಣನನ್ನು ಶಾಶ್ವತವಾಗಿ ಜೈಲಿಗೆ ಕಳುಹಿಸಿ ಎಂದು ತನ್ನ ತಂದೆಗೆ ಪತ್ರ ಬರೆದಿದ್ದಾಳೆ. ಇದೀಗ ಆ ಪತ್ರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಸ್ವತಃ ಸಹೋದರನೇ ಆ ಪತ್ರವನ್ನು ಶೇರ್ ಮಾಡಿಕೊಂಡಿದ್ದಾರೆ. ಹೀಗಾಗಿ ಟ್ವಿಟ್ಟರಿನಲ್ಲಿ ಈ ಪತ್ರ ಸಖತ್ ವೈರಲ್ ಆಗುತ್ತಿದೆ. ಕ್ರಿಶ್ ಪರ್ಮರ್ ಎಂಬಾತ ಬಾಲ್ಯದಲ್ಲಿ ತನ್ನ ಸಹೋದರಿ ತಮ್ಮ ತಂದೆಗೆ ಬರೆದ ಪತ್ರದ ಫೋಟೋವನ್ನು ಹಂಚಿಕೊಂಡಿದ್ದಾರೆ. ಜೊತೆಗೆ “ನನ್ನ ತಂಗಿ ತಂದೆಗೆ ಬರೆದದ್ದು ಇದನ್ನೇ” ಎಂದು ಕ್ರಿಶ್ ಬರೆದುಕೊಂಡಿದ್ದಾರೆ.

    ಪತ್ರದಲ್ಲಿ ಏನಿದೆ?
    ಪ್ರೀತಿಯ ತಂದೆಗೆ, ದಯವಿಟ್ಟು ಕ್ರಿಶ್ ಪರ್ಮರ್ ನನ್ನು ಶಾಶ್ವತವಾಗಿ ಜೈಲಿಗೆ ಕಳುಹಿಸಿ. ಆತ ನನಗೆ ಕಾರಣವೇ ಇಲ್ಲದೆ ಹೊಡೆಯುತ್ತಿದ್ದಾನೆ. ಅಲ್ಲದೇ ಅವನು ನನ್ನ ಮೇಲೆ ಜಂಪ್ ಮಾಡಿ, ನಾನು ನಿನ್ನನ್ನು ಕೊಲ್ಲುತ್ತೇನೆ ಎಂದು ಹೇಳುತ್ತಾನೆ. ದಯವಿಟ್ಟು ಆದಷ್ಟು ಬೇಗ ಆತನನ್ನು ಜೈಲಿಗೆ ಕಳುಹಿಸಿ” ಎಂದು ಸಹೋದರಿ ಮನವಿ ಮಾಡಿಕೊಂಡಿದ್ದಾಳೆ.

    ಅಲ್ಲದೇ ಕೊನೆಯಲ್ಲಿ ನಿಮ್ಮ ಪ್ರೀತಿಯ ಮಗಳು ಅನಯಾ ಪರ್ಮರ್, ‘Sister of Stupid krisha parmar’ ಎಂದು ಬರೆದು ಸಹಿ ಹಾಕಿದ್ದಾಳೆ. ಇದೀಗ ಈ ತಮಾಷೆಯ ಪತ್ರ ವೈರಲ್ ಆಗಿದ್ದು, ನೆಟ್ಟಿಗರು ಫನ್ನಿ ಫನ್ನಿಯಾಗಿ ಕಮೆಂಟ್ ಮಾಡುವ ಮೂಲಕ ತಮ್ಮ ತಮ್ಮ ಬಾಲ್ಯವನ್ನು ನೆನಪಿಸಿಕೊಳ್ಳುತ್ತಿದ್ದಾರೆ.

    “ನನ್ನ ಸಹೋದರಿ ಈ ಪತ್ರವನ್ನು ಬರೆದಾಗ 8 ಅಥವಾ 9 ವರ್ಷ ವಯಸ್ಸಿನವನಾಗಿದ್ದಳು. ನಾನು ಇದನ್ನು ಒಂದು ತಿಂಗಳ ಹಿಂದೆಯಷ್ಟೆ ತಿಳಿದುಕೊಂಡೆ” ಎಂದು ಕ್ರಿಶ್ ಹೇಳಿದ್ದಾಳೆ.

  • ದಿಶಾ ಸಾಲಿಯನ್ ಗೆಳೆಯನಿಗೆ ಭದ್ರತೆ ನೀಡಿ – ಅಮಿತ್ ಶಾಗೆ ನಿತೇಶ್ ರಾಣೆ ಪತ್ರ

    ದಿಶಾ ಸಾಲಿಯನ್ ಗೆಳೆಯನಿಗೆ ಭದ್ರತೆ ನೀಡಿ – ಅಮಿತ್ ಶಾಗೆ ನಿತೇಶ್ ರಾಣೆ ಪತ್ರ

    – ದಿಶಾ, ಸುಶಾಂತ್ ಸಾವಿಗೂ ಲಿಂಕ್ ಇದೆ
    – ದೊಡ್ಡ ವ್ಯಕ್ತಿಗಳಿಂದ ಆತನ ಜೀವಕ್ಕೆ ಅಪಾಯವಿದೆ

    ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯನ್ ಪ್ರಿಯಕರನಿಗೆ ಭದ್ರತೆ ನೀಡಬೇಕೆಂದು ಮುಂಬೈ ಬಿಜೆಪಿ ಶಾಸಕ ನಿತೇಶ್ ರಾಣೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ.

    ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ 28 ವರ್ಷದ ದಿಶಾ ಸಾಲಿಯನ್ ಕಳೆದ ಜೂನ್ 8 ಮಧ್ಯರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ತನ್ನ ಮುಂಬೈನ ಮಲಾಡ್ ಪ್ರದೇಶಲ್ಲಿರುವ ಮನೆಯ 14ನೇ ಮಹಡಿಯಿಂದ ಕಳೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದಾದ ಐದು ದಿನಗಳ ನಂತರ ಜೂನ್ 14ರಂದು ಸುಶಾಂತ್ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಎರಡು ಸಾವಿಗೂ ಸಂಬಂಧವಿದೆ ಎನ್ನಲಾಗಿದೆ.

    ಈಗ ಈ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಬಿಜೆಪಿ ಎಂಎಲ್‍ಎ ನಿತೇಶ್ ರಾಣೆ, ದಿಶಾ ಸಾವನ್ನಪ್ಪಿದ ದಿನ ಅವಳ ಗೆಳೆಯ ರೋಹನ್ ರೈ ಆಕೆಯ ಜೊತೆಯಲ್ಲಿ ಇದ್ದು, ಆತನಿಗೆ ಕೆಲ ಸೂಕ್ಷ್ಮ ವಿಚಾರಗಳು ಗೊತ್ತಿದೆ. ಆದರೆ ಆತ ಯಾವುದೋ ಪ್ರಭಾವಿ ವ್ಯಕ್ತಿಗಳಿಗೆ ಭಯಪಟ್ಟು ಯಾವ ವಿಚಾರವನ್ನು ಹೊರಗೆ ಹೇಳುತ್ತಿಲ್ಲ. ಆತನಿಗೆ ಭರವಸೆ ಮತ್ತು ಭದ್ರತೆ ಬೇಕಿದೆ. ಹೀಗಾಗಿ ಅವನಿಗೆ ಭದ್ರತೆ ನೀಡಿ ಎಂದು ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ.

    ದಿಶಾ ಸಾಲಿಯನ್ ಸಾವಿಗೂ ಮತ್ತು ಸುಶಾಂತ್ ಸಿಂಗ್ ಸಾವಿಗೂ ಲಿಂಕ್ ಇದೆ. ಇದರಲ್ಲಿ ದೊಡ್ಡ ದೊಡ್ಡ ವ್ಯಕ್ತಿಗಳ ಕೈವಾಡವಿದೆ. ಹೀಗಾಗಿಯೇ ರೋಹನ್ ಮುಂಬೈ ಬಿಟ್ಟು ಹೋಗಿದ್ದಾನೆ. ಆತನನ್ನು ಯಾರೋ ಬಲವಂತವಾಗಿ ಮುಂಬೈ ಬಿಟ್ಟು ಹೋಗುವಂತೆ ಮಾಡಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿರುವಾಗ ಆತ ಮುಂಬೈಗೆ ಬರಲು ಹೆದರುತ್ತಿದ್ದಾನೆ ಎಂದು ನಾನು ಭಾವಿಸುತ್ತೇನೆ. ಜೊತೆಗೆ ಇದರಲ್ಲಿ ಪ್ರಭಾವಶಾಲಿ ಜನರ ಒತ್ತಡವು ಇದೆ ಎಂದು ರಾಣೆ ಆರೋಪ ಮಾಡಿದ್ದಾರೆ.

    ದಿಶಾ ಸಾಲಿಯನ್ ಪ್ರಕರಣದಲ್ಲಿ ಮುಂಬೈ ಪೊಲೀಸರು ನಾಟಕವಾಡುತ್ತಿದ್ದಾರೆ. ಆಕೆ ಪ್ರಕರಣದಲ್ಲಿ ಅತೀ ಮುಖ್ಯ ಸಾಕ್ಷಿಯಾದ ರೋಹನ್ ಅವರನ್ನು ಪೊಲೀಸರು ತನಿಖೆ ಮಾಡಿಲ್ಲ. ಸುಪ್ರೀಂ ಕೋರ್ಟ್ ಆದೇಶದಂತೆ ಸುಶಾಂತ್ ಕೇಸ್ ತನಿಖೆ ಮಾಡುತ್ತಿರುವ ಸಿಬಿಐ ಕೂಡ ರೋಹನ್ ಹೇಳಿಕೆಯನ್ನು ಪಡೆಯಬಹುದು. ಈ ಎರಡು ಪ್ರಕರಣಗಳಿಗೆ ಲಿಂಕ್ ಇದೆ. ಹೀಗಾಗಿ ಆತನಿಗೆ ಭದ್ರತೆ ಕೊಟ್ಟು ವಿಚಾರಣೆ ಮಾಡಬೇಕು. ಈ ವಿಚಾರದಲ್ಲಿ ನಾನು ಕೂಡ ಸಿಬಿಐಗೆ ಹೇಳಿಕೆ ನೀಡಲು ಸಿದ್ಧವಿದ್ದೇನೆ ಎಂದು ರಾಣೆ ಪತ್ರ ಬರೆದಿದ್ದಾರೆ. ಇದನ್ನು ಓದಿ: ಸಾರಾ, ರಿಯಾ, ಸುಶಾಂತ್ ಸೇರಿ ತೋಟದ ಮನೆಯಲ್ಲಿ ಪಾರ್ಟಿ ಮಾಡ್ತಿದ್ರು: ಮ್ಯಾನೇಜರ್

    ಮೊದಲಿಗೆ ಸುಶಾಂತ್ ಜೊತೆ ಕೆಲಸ ಮಾಡುತ್ತಿದ್ದ ದಿಶಾ ಸಾಲಿಯನ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ನಂತರ ಸುಶಾಂತ್ ಕೂಡ ತಮ್ಮ ಮನೆಯಲ್ಲೇ ನೇಣು ಬಿಗಿದುಕೊಂಡಿದ್ದರು. ಹೀಗಾಗಿ ಈ ಪ್ರಕರಣಗಳು ಹಲವಾರು ತಿರುವುಗಳನ್ನು ಪಡೆದುಕೊಂಡಿವೆ. ಸುಶಾಂತ್ ಅನ್ನು ಕೊಲೆ ಮಾಡಲಾಗಿದೆ ಎಂದು ಕೆಲವರ ಆರೋಪಿಸಿದ್ದಾರೆ. ಇದರ ಮಧ್ಯೆ ಡ್ರಗ್ ಕೇಸ್ ಕೂಡ ಈ ಪ್ರಕರಣಕ್ಕೆ ತಳುಕು ಹಾಕಿಕೊಂಡಿದೆ. ಈ ಪ್ರಕರಣದಲ್ಲಿ ಸುಶಾಂತ್ ಪ್ರೇಯಸಿ ರಿಯಾ ಚಕ್ರವರ್ತಿ ಅರೆಸ್ಟ್ ಕೂಡ ಆಗಿದ್ದಾರೆ. ಇದನ್ನೂ ಓದಿ: ಜಾಮೀನು ಅರ್ಜಿ ವಜಾ – ರಿಯಾ ಚಕ್ರವರ್ತಿಗೆ ಜೈಲೇ ಗತಿ

    ಸುಶಾಂತ್ ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಕಂಗನಾ ರಣಾವತ್, ಬಾಲಿವುಡ್ ಮತ್ತು ಮಹಾರಾಷ್ಟ್ರ ಸರ್ಕಾರಗಳ ಮಧ್ಯೆ ಜಟಾಪಟಿ ಮುಂದುವರೆದಿದೆ. ಜೊತೆಗೆ ಈ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದ್ದು, ಬಿಹಾರದಲ್ಲಿ ಬಿಜೆಪಿ ಪಕ್ಷ ಸುಶಾಂತ್ ಅವರ ಹೆಸರನ್ನು ತೆಗೆದುಕೊಂಡು ರಾಜಕೀಯ ಮಾಡಿದರೆ, ಇತ್ತ ಪಶ್ಚಿಮ ಬಂಗಾಳದಲ್ಲಿ ರಿಯಾ ಚಕ್ರವರ್ತಿಯನ್ನು ಬೆಂಬಲಿಸಿ ಕಾಂಗ್ರೆಸ್ ಪ್ರತಿಭಟನೆ ಮಾಡಿದೆ.

  • ಸಣ್ಣ ಪಟ್ಟಣದಲ್ಲಿ ಹುಟ್ಟಿ ದೇಶವೇ ಹೆಮ್ಮೆಪಡುವಂತೆ ಮಾಡಿದ್ದೀರಿ- ಧೋನಿಯನ್ನು ಹೊಗಳಿದ ಮೋದಿ

    ಸಣ್ಣ ಪಟ್ಟಣದಲ್ಲಿ ಹುಟ್ಟಿ ದೇಶವೇ ಹೆಮ್ಮೆಪಡುವಂತೆ ಮಾಡಿದ್ದೀರಿ- ಧೋನಿಯನ್ನು ಹೊಗಳಿದ ಮೋದಿ

    ನವದೆಹಲಿ: ಭಾರತ ಮಾಜಿ ನಾಯಕ ಎಂಎಸ್ ಧೋನಿಯವರಿಗೆ ಪ್ರಧಾನಿ ನರೇಂದ್ರ ಮೋದಿಯವರು ಪತ್ರ ಬರೆದಿದ್ದು, ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅವರನ್ನು ಹಾಡಿಹೊಗಳಿದ್ದಾರೆ.

    ಭಾರತದ ಕ್ರಿಕೆಟ್ ತಂಡಕ್ಕಾಗಿ 16 ವರ್ಷಗಳ ಕಾಲ ಆಡಿ, ದೇಶಕ್ಕೆ ಮೂರು ಪ್ರಮುಖ ಐಸಿಸಿ ಟ್ರೋಫಿಗಳನ್ನು ತಂದು ಕೊಟ್ಟ ಚಾಣಾಕ್ಷ ನಾಯಕ ಎಂಎಸ್ ಧೋನಿಯವರು ಅಗಸ್ಟ್ 15ರಂದು ನಿವೃತ್ತಿ ಘೋಷಿಸಿದ್ದರು. ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕುವ ಮೂಲಕ ವಿದಾಯ ಹೇಳಿ ತಮ್ಮ ಅಭಿಮಾನಿಗಳಿಗೆ ಶಾಕ್ ನೀಡಿದ್ದರು.

    ಈಗ ಈ ವಿಚಾರವಾಗಿ ಧೋನಿಯವರಿಗೆ ಪತ್ರ ಬರೆದಿರುವ ಮೋದಿಯವರು, ಧೋನಿಯವರು ಭಾರತದ ಕ್ರಿಕೆಟ್‍ಗೆ ನೀಡಿದ ಕೊಡುಗೆ ಅದ್ಭುತವಾದದ್ದು. ಕ್ರಿಕೆಟ್‍ನಲ್ಲಿ ಧೋನಿಯವರನ್ನು ಇಷ್ಟಪಡದವರನ್ನು ಹುಡುಕುವುದು ಕಷ್ಟ ಎಂದು ಹಾಡಿಹೊಗಳಿದ್ದಾರೆ. ಜೊತೆಗೆ 39 ವರ್ಷದ ಧೋನಿ ತಮ್ಮ ಮಗಳು ಜೀವಾ ಜೊತೆ ಇಟ್ಟುಕೊಂಡಿರುವ ಪ್ರೀತಿಯ ಸಂಬಂಧದ ಬಗ್ಗೆಯು ಮೋದಿಯವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

    ಜೊತೆಗೆ ಧೋನಿ ಸೇನೆಗೆ ಸೇರಿದ ವಿಚಾರದ ಬಗ್ಗೆ ಪತ್ರದಲ್ಲಿ ಬರೆದಿರುವ ಮೋದಿಯವರು, ಧೋನಿಯವರಿಗೆ ಭಾರತೀಯ ಸೇನೆಯ ಮೇಲೆ ಇರುವ ಪ್ರೀತಿ ಅಪಾರವಾದದ್ದು ಎಂದಿದ್ದಾರೆ. ಜೊತೆಗೆ ಧೋನಿಯವರು ಸಣ್ಣ ಪಟ್ಟಣದಲ್ಲಿ ಹುಟ್ಟಿ ದೇಶವೇ ಹೆಮ್ಮೆಪಡುವಂತೆ ಮಾಡಿದ್ದಾರೆ. ರಾಷ್ಟ್ರಕ್ಕಾಗಿ ಒಳ್ಳೆಯ ಸಾಧನೆಯನ್ನು ಮಾಡಿದ್ದಾರೆ. ಈಗಿನ ಯುವಜನತೆ ಸ್ಪೂರ್ತಿಯಾಗಿದ್ದಾರೆ. ಧೋನಿಯವರ ಸಾಧನೆಯನ್ನು 130 ಕೋಟಿ ಭಾರತೀಯರು ಮೆಚ್ಚಿಕೊಳ್ಳಬೇಕು ಎಂದಿದ್ದಾರೆ.

    ಒಬ್ಬ ಆಟಗಾರನ ಹೇರ್‍ಸ್ಟೈಲ್ ಹೇಗೆ ಇದೆ ಎಂಬುದು ಮುಖ್ಯವಲ್ಲ. ಸೋಲು ಮತ್ತು ಗೆಲುವುಗಳ ಮಧ್ಯೆ ಆಟಗಾರನ ತಲೆ ಎಷ್ಟು ತಾಳ್ಮೆಯಿಂದ ಇರುತ್ತದೆ ಎಂಬುದು ಮುಖ್ಯವಾಗುತ್ತದೆ. ಈಗಿನ ಯುವ ಜನಗೆ ಒತ್ತಡ ಪರಿಸ್ಥಿತಿಯಲ್ಲೂ ಧೋನಿಯವರಂತೆ ತಾಳ್ಮೆಯಿಂದ ಇರುವುದನ್ನು ಕಲಿತುಕೊಳ್ಳಬೇಕು. ನೀವು ತಂಡವನ್ನು ಮುನ್ನಡೆಸುತ್ತಿದ್ದ ರೀತಿ ಮತ್ತು ನಿಮ್ಮ ಧೈರ್ಯವನ್ನು ಎಲ್ಲರೂ ಮೆಚ್ಚಲೇ ಬೇಕು ಎಂದು ಮೋದಿ ಧೋನಿಯವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಧೋನಿಯವರು ವೃತ್ತಿಪರ ಜೀವನ ಮತ್ತು ವೈಯಕ್ತಿಕ ಜೀವನವನ್ನು ಸರಿಯಾಗಿ ಬ್ಯಾಲೆನ್ಸ್ ಮಾಡಿದ್ದಾರೆ. ಜೊತೆಗೆ 2011ರ ವಿಶ್ವಕಪ್‍ನಲ್ಲಿ ಅವರು ಕೂಲ್ ಆಗಿ ಆಡಿ ಕಪ್ ಅನ್ನು ಗೆದ್ದುಕೊಟ್ಟಿದ್ದಾರೆ. 2007ರ ಟಿ-20 ವಿಶ್ವಕಪ್ ಅನ್ನು ಗೆದ್ದು ಅವರಲ್ಲಿರುವ ಛಲವನ್ನು ತೋರಿಸಿದ್ದಾರೆ. ಇಂಥಹ ಅದ್ಭುತ ಕ್ರೀಡಾಪಟುವಿನ ನಿವೃತ್ತಿ ನಂತರದ ಜೀವನ ಚೆನ್ನಾಗಿರಲಿ. ಮುಂದೆ ಅವರು ತಮ್ಮ ಕುಟುಂಬದ ಜೊತೆ ಉತ್ತಮವಾದ ಸಮಯವನ್ನು ಕಳೆಯಲಿ ಎಂದು ಮೋದಿಯವರು ಪತ್ರದ ಮೂಲಕ ಶುಭಕೋರಿದ್ದಾರೆ.

    https://twitter.com/msdhoni/status/1296362680580636672

    ಈ ಪತ್ರವನ್ನು ಟ್ವೀಟ್ ಮಾಡಿರುವ ಎಂಎಸ್ ಧೋನಿಯವರು, ಒಬ್ಬ ಕಲಾವಿದ, ಸೈನಿಕ ಮತ್ತು ಕ್ರೀಡಾಪಟುವನ್ನು ಹಂಬಲಿಸುತ್ತಿರುವುದು ಮೆಚ್ಚುಗೆಯಾಗಿದೆ. ಅವರ ಕಠಿಣ ಪರಿಶ್ರಮ ಮತ್ತು ತ್ಯಾಗ ಎಲ್ಲರ ಗಮನಕ್ಕೆ ಬರುತ್ತಿದೆ ಮತ್ತು ಮೆಚ್ಚುಗೆ ಪಡೆಯುತ್ತಿದೆ. ನಿಮ್ಮ ಮೆಚ್ಚುಗೆ ಮತ್ತು ಶುಭಾಶಯಗಳಿಗಾಗಿ ಧನ್ಯವಾದಗಳು ಪ್ರಧಾನಿ ಮೋದಿಯವರೇ ಎಂದು ಬರೆದುಕೊಂಡಿದ್ದಾರೆ.

  • ಅಯೋಧ್ಯೆಯಲ್ಲಿ ರಾಜ್ಯಕ್ಕೆ 2 ಎಕರೆ ಭೂಮಿ ನೀಡಿ- ಸಿಎಂ ಯೋಗಿ ಆದಿತ್ಯನಾಥ್‍ಗೆ ಬಿಎಸ್‍ವೈ ಪತ್ರ

    ಅಯೋಧ್ಯೆಯಲ್ಲಿ ರಾಜ್ಯಕ್ಕೆ 2 ಎಕರೆ ಭೂಮಿ ನೀಡಿ- ಸಿಎಂ ಯೋಗಿ ಆದಿತ್ಯನಾಥ್‍ಗೆ ಬಿಎಸ್‍ವೈ ಪತ್ರ

    ಬೆಂಗಳೂರು: ರಾಮ ಮಂದಿರ ಶಿಲಾನ್ಯಾಸ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದ್ದಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‍ಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಪತ್ರ ಬರೆದಿದ್ದು ಅಭಿನಂದಿಸಿದ್ದಾರೆ.

    ಅಭಿನಂದನೆ ಸಲ್ಲಿಸುವುದರ ಜೊತೆಗೆ ರಾಜ್ಯದ ಭಕ್ತರಿಗಾಗಿ ಬೇಡಿಕೆಯೊಂದನ್ನು ಇಟ್ಟಿದ್ದಾರೆ. ಅಯೋಧ್ಯೆಗೆ ಕರ್ನಾಟಕದಿಂದ ಸಾಕಷ್ಟು ಭಕ್ತರು ಆಗಮಿಸುತಿರುತ್ತಾರೆ. ಈ ಹಿನ್ನೆಲೆ ಅಯೋಧ್ಯೆಯಲ್ಲಿ 2 ಎಕರೆ ಭೂಮಿಯನ್ನು ನೀಡುವಂತೆ ಪತ್ರದಲ್ಲಿ ಮನವಿ ಮಾಡಿದ್ದಾರೆ.

    ಅಯೋಧ್ಯೆಯಲ್ಲಿ ಕರ್ನಾಟಕ ಸರ್ಕಾರ ಯಾತ್ರಿ ನಿವಾಸ ಕಟ್ಟಬೇಕು ಎಂಬ ಉದ್ದೇಶ ಇಟ್ಟುಕೊಂಡಿದೆ. ಹೀಗಾಗಿ ಅಯೋಧ್ಯೆಯಲ್ಲಿ 2 ಎಕರೆ ಭೂಮಿಯನ್ನು ಮಂಜೂರು ಮಾಡಬೇಕು. ಸರ್ಕಾರ ಈ ಕುರಿತು ಸಿದ್ಧತೆ ಮಾಡಿಕೊಳ್ಳಲಿದೆ ಎಂದು ತಮ್ಮ ಪತ್ರದಲ್ಲಿ ಯಡಿಯೂರಪ್ಪ ವಿವರಿಸಿದ್ದಾರೆ.

  • ಮೈತ್ರಿ ಸರ್ಕಾರದ ಬಗ್ಗೆ ಮೌನ ಮುರಿಯಲು ಕಾರಣ ಬಿಚ್ಚಿಟ್ಟ ಹೆಚ್‍ಡಿಕೆ

    ಮೈತ್ರಿ ಸರ್ಕಾರದ ಬಗ್ಗೆ ಮೌನ ಮುರಿಯಲು ಕಾರಣ ಬಿಚ್ಚಿಟ್ಟ ಹೆಚ್‍ಡಿಕೆ

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಮೈತ್ರಿ ಸರ್ಕಾರ ಪತನವಾಗಿ ಒಂದು ವರ್ಷವಾದ ಹಿನ್ನೆಲೆಯಲ್ಲಿ ಸುದೀರ್ಘವಾದ ಪತ್ರ ಬರೆದಿದ್ದು, ಈ ಪತ್ರದಲ್ಲಿದ್ದ ಕೆಲವೊಂದು ವಿಚಾರಗಳು ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

    ಈ ಹಿನ್ನೆಲೆಯಲ್ಲಿ ಸರಣಿ ಟ್ವೀಟ್ ಮಾಡಿ ಸ್ಪಷ್ಟಪಡಿಸಿದ ಮಾಜಿ ಸಿಎಂ, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸ್ವತಂತ್ರವಾಗಿ ಸ್ಪರ್ಧಿಸಿದ್ದರೆ ರಾಜ್ಯದಲ್ಲಿ 8 ಇಲ್ಲವೆ 10 ಸ್ಥಾನ ಗೆಲ್ಲಬಹುದಿತ್ತು ಎಂದು ಸಿದ್ದರಾಮಯ್ಯ ಅವರು ಇತ್ತೀಚೆಗೆ ‘ಮೆಲುಕು’ ಹಾಕಿದ್ದರಿಂದಲೇ ನಾನು ಸಿದ್ಧೌಷಧದ ಬಗ್ಗೆ ನೆನಪಿಸಿಕೊಳ್ಳಬೇಕಾಯಿತು ಎಂದು ಬರೆದುಕೊಂಡಿದ್ದಾರೆ.

    ಅವರ ಕನಸು-ಕನವರಿಕೆಗಳನ್ನು ಮೈತ್ರಿ ಸರ್ಕಾರ ಹೋದ ನಂತರವೂ ಜಪಿಸುತ್ತಿರುವುದರಿಂದಲೇ ಹಳೆಯದನ್ನು ನೆನಪಿಸಿಕೊಳ್ಳಬೇಕಾಯಿತು. ನಮ್ಮ ಅವರ ದೋಸ್ತಿ ಕಳಚಿದ ನಂತರ ಈ ಬಗ್ಗೆ ನಾನು ಮಾತನಾಡಿರಲಿಲ್ಲ. ಕಾಂಗ್ರೆಸ್ ನಾಯಕರೇ ಪದೇಪದೇ ಮೈತ್ರಿ ಮುಗಿದ ಅಧ್ಯಾಯ ಎಂದು ಈಗ ತುಟಿ ಬಿಚ್ಚುತ್ತಿರುವುದರಿಂದ ನಾನು ಮೌನ ಮುರಿಯಬೇಕಾಯಿತು ಎಂದಿದ್ದಾರೆ.

    ಕಾಂಗ್ರೆಸ್ ನಾಯಕರು ಈಗ ಮರಣೋತ್ತರ ಪರೀಕ್ಷೆ ಬಗ್ಗೆ ರಾಗ ಎಳೆಯುತ್ತಿದ್ದಾರೆ. ಆದರೆ ವರದಿಯಲ್ಲಿ ಏನಿದೆ ಎಂಬ ಸತ್ಯಾಂಶವನ್ನು ನಾನು ಹೇಳಿದರೆ ಆ ಭಾಷೆ ನನಗೆ ಅರ್ಥವಾಗಲಿಲ್ಲ ಎಂದು ಜಾರಿಕೊಳ್ಳುವುದು ತರವಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಸಮ್ಮಿಶ್ರ ಸರ್ಕಾರ ಪತನವಾಗಿ 1 ವರ್ಷ- ಕಾರ್ಯಕರ್ತರಿಗೆ ಹೆಚ್‍ಡಿಕೆ ಮನದಾಳದ ಮಾತು

    ಹೆಚ್‍ಡಿಕೆ ಪತ್ರದಲ್ಲಿ, ಸಿದ್ದರಾಮಯ್ಯ ಸರ್ಕಾರದ ಬಜೆಟ್ ನ ಲೇಖಾನುದಾನ ಪಡೆದು ಸರ್ಕಾರ ಮುಂದುವರಿಸಿದರೆ ಸಾಕು. ಹೊಸದಾಗಿ ಬಜೆಟ್ ಬೇಡ ಎಂದು ಕಾಂಗ್ರೆಸ್ಸಿನ ಕೆಲವರು ಒತ್ತಡ ತಂದರು. ಆದರೆ ರೈತರ ಸಾಲ ಮನ್ನಾ ಮಾಡುವ ಸಲುವಾಗಿ ಹೊಸದಾಗಿ ಎರಡು ಬಾರಿ ಬಜೆಟ್ ಮಂಡಿಸಿ 25 ಸಾವಿರ ಕೋಟಿ ರೂಪಾಯಿಗಳ ರೈತರ ಸಾಲ ಮನ್ನಾ ಹಣ ಹಂಚಿಕೆ ಮಾಡಿದೆ. ಹಾಗಂತ ಸಿದ್ದರಾಮಯ್ಯ ಅವರ ಸರ್ಕಾರದ ಯೋಜನೆಗಳನ್ನು ನಿಲ್ಲಿಸಿರಲಿಲ್ಲ. ಮುಂದುವರಿಸಿಕೊಂಡು ಬಂದೆ. ಆದಾಗ್ಯೂ ಅವರಿಗೆ ತೃಪ್ತಿ ಆಗಿರಲಿಲ್ಲ. 14 ತಿಂಗಳ ಅವಧಿಯಲ್ಲಿ ಯಾವುದೇ ಲೋಪವನ್ನು ಮಾಡಲಿಲ್ಲ. ತಮ್ಮನ್ನು ತಾವೇ ಸಮಾಧಾನ ಪಡಿಸಿಕೊಳ್ಳುವಂತೆ ಲೋಕಸಭಾ ಚುನಾವಣೆ ಮುಗಿಯಲಿ, ಅಲ್ಲಿಯವರಿಗೆ ತಡೆಯಿರಿ ಎಂಬ ‘ಸಿದ್ಧೌಷಧ’ ಮಂತ್ರ ಜಪಿಸುತ್ತಲೇ ಕಾಂಗ್ರೆಸ್ಸಿಗರು ಬಂದರು. ಅದು ಜಗಜ್ಜಾಹೀರಾಯಿತು ಎಂದು ಬರೆದುಕೊಂಡಿದ್ದರು.