Tag: Letter Head

  • ನನ್ನ ಆತ್ಮಗೌರವಕ್ಕೆ ಧಕ್ಕೆಯಾದ್ರೆ ರಾಜೀನಾಮೆ ಕೊಡುತ್ತೇನೆ ಅಂತ ಹೇಳಿರೋದು ನಿಜ – ಬಿ.ಆರ್ ಪಾಟೀಲ್

    ನನ್ನ ಆತ್ಮಗೌರವಕ್ಕೆ ಧಕ್ಕೆಯಾದ್ರೆ ರಾಜೀನಾಮೆ ಕೊಡುತ್ತೇನೆ ಅಂತ ಹೇಳಿರೋದು ನಿಜ – ಬಿ.ಆರ್ ಪಾಟೀಲ್

    ಬೆಂಗಳೂರು: ನಾನು ಯಾರಿಗೂ ಕ್ಷಮೆ ಕೇಳಿಲ್ಲ, ಕ್ಷಮೆ ಕೇಳುವ ಹೇಡಿತನ ನನ್ನದಲ್ಲ. ನಾನು ಕ್ಷಮೆ ಕೇಳುವ ಯಾವ ತಪ್ಪು ಮಾಡಿಲ್ಲ. ನನ್ನ ಆತ್ಮಗೌರಕ್ಕೆ ಧಕ್ಕೆ ಆದ್ರೆ ರಾಜೀನಾಮೆ ಕೊಡುತ್ತೇನೆ ಅಂತ ಹೇಳಿರುವುದು ನಿಜ ಎಂದು ಕಾಂಗ್ರೆಸ್ ಶಾಸಕ ಬಿ.ಆರ್ ಪಾಟೀಲ್ (BR Patil) ಗುಡುಗಿದ್ದಾರೆ.

    ಬೆಂಗಳೂರಿನಲ್ಲಿಂದು (Bengaluru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಆತ್ಮಗೌರಕ್ಕೆ ಧಕ್ಕೆಯಾದರೆ ರಾಜೀನಾಮೆ ಕೊಡುತ್ತೇನೆ ಅಂತ ಹೇಳಿರೋದು ನಿಜ, ಶಾಸಕಾಂಗ ಸಭೆಯಲ್ಲಿ ನಾನು ಸಿಟ್ಟಾಗಿ ಹೊರಬಂದಿದ್ದು ನಿಜ. ನಂತರ ಸಚಿವರು ನನ್ನ ತಡೆ ಹಿಡಿದರು ಅಂತ ಹೇಳಿದ್ದಾರೆ. ಇದನ್ನೂ ಓದಿ: ನನ್ನ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ನಡುವೆ ದ್ವೇಷ ಹುಟ್ಟಿಸಲು ಪತ್ರ ರಿಲೀಸ್‌- ಬಿ.ಆರ್ ಪಾಟೀಲ್‌ರಿಂದ ದೂರು

    ಶಾಸಕ ಬಿ.ಆರ್ ಪಾಟೀಲ್ ಲೆಟರ್ ಹೆಡ್‌ನಲ್ಲಿ ಸಿಎಂಗೆ (Chief Minister) ಪತ್ರ ಬರೆದಿದ್ದು ಇತ್ತೀಚೆಗೆ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚೆಯಾಗಿತ್ತು. ಈ ವೇಳೆ ಸಿಎಂ, ಸಚಿವರು ಸೇರಿದಂತೆ ಉಳಿದ ಶಾಸಕರು ಸಹ ʻʻಸಿಎಂಗೆ ಶಾಸಕರು ಪತ್ರ ಬರೆದಿದ್ದು ತಪ್ಪುʼʼ ಎಂದು ಹೇಳಿದ್ದರು. ಇದರಿಂದ ಸಭೆಯಲ್ಲಿ ತಮ್ಮ ವಿರುದ್ಧ ಮಾತನಾಡಿದ್ದನ್ನ ಕಂಡು ಕೆಂಡಾಮಂಡಲವಾಗಿದ್ದರು. ಎಲ್ಲರು ತಮ್ಮನ್ನ ತಪ್ಪಿತಸ್ಥರಂತೆ ನೋಡಿದ್ದಾರೆಂದು ಅಸಮಾಧಾನಗೊಂಡು ಸಭೆಯಿಂದ ಹೊರಬರಲು ಮುಂದಾಗಿದ್ದರು. ಇದನ್ನೂ ಓದಿ: ಸಚಿವರ ವಿರುದ್ಧ ಬೇಸರಗೊಂಡ್ರಾ ಶಾಸಕರು? – ಕಾಂಗ್ರೆಸ್‌ ಶಾಸಕರ ಆರೋಪ ಏನು?

    ಈ ಬೆಳವಣಿಗೆಗೂ ಮುನ್ನ ತನ್ನ ಲೆಟರ್‌ಹೆಡ್ ಇರುವ ಪತ್ರ ವೈರಲ್ ಆದ ಕೂಡಲೇ ಬಿ.ಆರ್ ಪಾಟೀಲ್ ಕಲಬುರಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದರು. ನನ್ನ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ನಡುವೆ ದ್ವೇಷ ಹುಟ್ಟಿಸಿ ಅದರ ರಾಜಕೀಯ ಲಾಭ ಪಡೆಯಲು ಕೆಲವರು ನಕಲಿ ಪತ್ರ ಸೃಷ್ಟಿ ಮಾಡಿದ್ದಾರೆ. ಸುಳ್ಳು ಸುದ್ದಿ ಸೃಷ್ಟಿಸಿದವರ ವಿರುದ್ಧ ತನಿಖೆ ನಡೆಸುವಂತೆ ದೂರಿನಲ್ಲಿ ಮನವಿ ಮಾಡಿದ್ದರು.

    ದೂರಿನಲ್ಲಿ ಏನಿತ್ತು?
    ನನ್ನ ಹೆಸರಿನ ಹಳೆ ಲೆಟರ್ ಹೆಡ್ ಅನ್ನು ಉಪಯೋಗಿಸಿ ಇಲ್ಲಸಲ್ಲದ ವಿಷಯವನ್ನು ಪ್ರಸ್ತಾಪ ಮಾಡಿ ನನ್ನ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ನಡುವೆ ದ್ವೇಷ ಹುಟ್ಟಿಸಿ ಅದರ ರಾಜಕೀಯ ಲಾಭ ಪಡೆಯಲು ಕೆಲವರು ಹುನ್ನಾರ ನಡೆಸಿದ್ದಾರೆ. ಆ ಪತ್ರದಲ್ಲಿ ಸಹಿ ಮಾಡಿದ್ದು ನನ್ನ ಹಸ್ತಾಕ್ಷರದ ಪ್ರತಿಯನ್ನು ಪೇಸ್ಟ್ ಮಾಡಿದ್ದಾರೆ. ನನ್ನ ಲೆಟರ್ ಹೆಡ್ ಕಳೆದ ಬಾರಿ ಶಾಸಕನಾಗಿದ್ದಾಗ ನಾನು ಕಲಬುರಗಿ ಶಾಂತಿ ನಗರದಲ್ಲಿರುವ ಹಳೆ ವಿಳಾಸ ಕಲರ್ ಜೆರಾಕ್ಸ್ ಆ ಪತ್ರದಲ್ಲಿ ಸಹಿ ತೆಗೆದು ಮಾಧ್ಯಮದಲ್ಲಿ ಹರಿಬಿಟ್ಟಿದ್ದಾರೆ. ಈಗ ಕಳೆದ 4 ವರ್ಷಗಳಿಂದ ನಾನು ಕಲಬುರಗಿ ನಗರದ ಅಕ್ಕಮಹಾದೇವಿ ಕಾಲೋನಿಯಲ್ಲಿ ವಾಸ ಮಾಡುತ್ತಿದ್ದು, ಈಗ ಬಳಸುವ ಲೇಟರ್ ಹೆಡ್‌ನಲ್ಲಿ ಹೊಸ ವಿಳಾಸವಿದೆ.

    ಈ ಪತ್ರದಲ್ಲಿ ಅನುದಾನ ಬಿಡುಗಡೆ ಮಾಡುವುದಕ್ಕೂ ಸಚಿವರು 3ನೇ ವ್ಯಕ್ತಿ ಮೂಲಕ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ. ಸ್ಥಳೀಯ ಶಾಸಕರು ನಾವಾಗಿದ್ದರೂ ಅನುದಾನಕ್ಕಾಗಿ 3ನೇ ವ್ಯಕ್ತಿಯ ಮೊರೆ ಹೊಗಬೇಕಾಗಿದೆ ಎಂಬ ಆರೋಪ ಹೊರಿಸಿ ಈ ತರಹ ಸುಳ್ಳು ಸುದ್ದಿಯನ್ನು ಸೃಷ್ಟಿಸಿ ಮಾಧ್ಯಮಗಳಲ್ಲಿ ಹರಿಬಿಟ್ಟಿರುವುದು ತನಿಖೆಯಾಗಬೇಕು. ಇದರ ಹಿಂದೆ ಯಾರ ಕೈವಾಡವಿದೆ ಎಂಬುದು ಬಯಲಿಗೆ ತರಬೇಕು. ಅಂಥವರ ವಿರುದ್ಧ ಕಾನೂನಿನ ಪ್ರಕಾರ ಕ್ರಮ ಜರುಗಿಸಬೇಕೆಂದು ಒತ್ತಾಯಿಸುತ್ತೇನೆ ಅಂತಾ ದೂರಿನಲ್ಲಿ ಉಲ್ಲೇಖಿಸಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನನ್ನ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ನಡುವೆ ದ್ವೇಷ ಹುಟ್ಟಿಸಲು ಪತ್ರ ರಿಲೀಸ್‌- ಬಿ.ಆರ್ ಪಾಟೀಲ್‌ರಿಂದ ದೂರು

    ನನ್ನ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ನಡುವೆ ದ್ವೇಷ ಹುಟ್ಟಿಸಲು ಪತ್ರ ರಿಲೀಸ್‌- ಬಿ.ಆರ್ ಪಾಟೀಲ್‌ರಿಂದ ದೂರು

    ಕಲಬುರಗಿ: ತನ್ನ ಲೆಟರ್‌ಹೆಡ್ (Letter Head) ಇರುವ ಪತ್ರ ವೈರಲ್ ಆದ ಬೆನ್ನಲ್ಲೇ ಕಾಂಗ್ರೆಸ್ ಶಾಸಕ ಬಿ.ಆರ್ ಪಾಟೀಲ್ (B.R.Patil) ಕಲಬುರಗಿ (Kalaburagi) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು (Complaint) ನೀಡಿದ್ದಾರೆ.

    ನನ್ನ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ನಡುವೆ ದ್ವೇಷ ಹುಟ್ಟಿಸಿ ಅದರ ರಾಜಕೀಯ ಲಾಭ ಪಡೆಯಲು ಕೆಲವರು ನಕಲಿ ಪತ್ರ ಸೃಷ್ಟಿ ಮಾಡಿದ್ದಾರೆ. ಸುಳ್ಳು ಸುದ್ದಿ ಸೃಷ್ಟಿಸಿದವರ ವಿರುದ್ಧ ತನಿಖೆ ನಡೆಸುವಂತೆ  ದೂರಿನಲ್ಲಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಸಚಿವರ ವಿರುದ್ಧ ಬೇಸರಗೊಂಡ್ರಾ ಶಾಸಕರು? – ಕಾಂಗ್ರೆಸ್‌ ಶಾಸಕರ ಆರೋಪ ಏನು?

    ದೂರಿನಲ್ಲಿ ಏನಿದೆ?
    ನನ್ನ ಹೆಸರಿನ ಹಳೆ ಲೆಟರ್ ಹೆಡ್ ಅನ್ನು ಉಪಯೋಗಿಸಿ ಇಲ್ಲಸಲ್ಲದ ವಿಷಯವನ್ನು ಪ್ರಸ್ತಾಪ ಮಾಡಿ ನನ್ನ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ನಡುವೆ ದ್ವೇಷ ಹುಟ್ಟಿಸಿ  ಅದರ ರಾಜಕೀಯ ಲಾಭ ಪಡೆಯಲು ಕೆಲವರು ಹುನ್ನಾರ ನಡೆಸಿದ್ದಾರೆ. ಆ ಪತ್ರದಲ್ಲಿ ಸಹಿ ಮಾಡಿದ್ದು ನನ್ನ ಹಸ್ತಕ್ಷರದ ಪ್ರತಿಯನ್ನು ಪೇಸ್ಟ್ ಮಾಡಿದ್ದಾರೆ. ಮತ್ತು ನನ್ನ ಲೆಟರ್ ಹೆಡ್ ಕಳೆದ ಬಾರಿ ಶಾಸಕನಾಗಿದ್ದಾಗ ನಾನು ಕಲಬುರಗಿ ಶಾಂತಿ ನಗರದಲ್ಲಿರುವ ಹಳೆ ವಿಳಾಸ ಕಲರ್ ಜೆರಾಕ್ಸ್ ಆ ಪತ್ರದಲ್ಲಿ ಸಹಿ ತೆಗೆದು ಮಾಧ್ಯಮದಲ್ಲಿ ಹರಿಬಿಟ್ಟಿದ್ದಾರೆ. ಈಗ ಕಳೆದ 4 ವರ್ಷಗಳಿಂದ ನಾನು ಕಲಬುರಗಿ ನಗರದ ಅಕ್ಕಮಹಾದೇವಿ ಕಾಲೋನಿಯಲ್ಲಿ ವಾಸ ಮಾಡುತ್ತಿದ್ದು, ಈಗ ಬಳಸುವ ಲೇಟರ್ ಹೆಡ್‌ನಲ್ಲಿ ಹೊಸ ವಿಳಾಸವಿದೆ.

    ಈ ಪತ್ರದಲ್ಲಿ ಅನುದಾನ ಬಿಡುಗಡೆ ಮಾಡುವುದಕ್ಕೂ ಸಚಿವರು 3ನೇ ವ್ಯಕ್ತಿ ಮೂಲಕ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ. ಸ್ಥಳಿಯ ಶಾಸಕರು ನಾವು ಆಗಿದ್ದರೂ ಅನುದಾನಕ್ಕಾಗಿ 3ನೇ ವ್ಯಕ್ತಿಯ ಮೊರೆ ಹೊಗಬೇಕಾಗಿದೆ ಎಂಬ ಆರೋಪ ಹೊರಿಸಿ ಈ ತರಹ ಸುಳ್ಳು ಸುದ್ಧಿಯನ್ನು ಸೃಷ್ಟಿಸಿ ಮಾಧ್ಯಮಗಳಲ್ಲಿ ಹರಿಬಿಟ್ಟಿರುವದು ತನಿಖೆಯಾಗಬೇಕು. ಇದರ ಹಿಂದೆ ಯಾರ ಕೈವಾಡವಿದೆ ಎಂಬುದು ಬಯಲಿಗೆ ತರಬೇಕು. ಅಂತವರ ವಿರುದ್ಧ ಕಾನೂನಿನ ಪ್ರಕಾರ ಕ್ರಮ ಜರುಗಿಸಬೇಕೆಂದು ಒತ್ತಾಯಿಸುತ್ತೇನೆ. ಇದನ್ನೂ ಓದಿ: ರಾಜ್ಯ ಸರ್ಕಾರದ ವಿರುದ್ದ ಬಿಜೆಪಿ, ಜೆಡಿಎಸ್ ಷಡ್ಯಂತ್ರ: ದಿನೇಶ್ ಗುಂಡೂರಾವ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]