Tag: LET

  • ಕಾಶ್ಮೀರದಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಸೇನೆ – ಮತ್ತಿಬ್ಬರು ಅಡಗಿರುವ ಶಂಕೆ, ತೀವ್ರ ಶೋಧ

    ಕಾಶ್ಮೀರದಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಸೇನೆ – ಮತ್ತಿಬ್ಬರು ಅಡಗಿರುವ ಶಂಕೆ, ತೀವ್ರ ಶೋಧ

    – ಮೂವರು ಯೋಧರಿಗೆ ಗಾಯ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಕುಲ್ಗಾಮ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಹಾಗೂ ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಪಾಕಿಸ್ತಾನ (Pakistan) ಮೂಲದ ಲಷ್ಕರ್-ಎ-ತೈಬಾ (LeT) ಸಂಘಟನೆಯ ಪ್ರಮುಖ ಉಗ್ರ (Terrorists) ಸೇರಿದಂತೆ ಇಬ್ಬರು ಭಯೋತ್ಪಾದಕರು ಹತ್ಯೆಗೀಡಾಗಿದ್ದಾರೆ. ಗುಂಡಿನ ಚಕಮಕಿಯಲ್ಲಿ ಮೂವರು ಸೇನಾ ಸಿಬ್ಬಂದಿ ಗಾಯಗೊಂಡಿದ್ದಾರೆ.

    ಜಮ್ಮು ಮತ್ತು ಕಾಶ್ಮೀರ ಪೊಲೀಸರು ನಿರ್ದಿಷ್ಟ ಗುಪ್ತಚರ ಮಾಹಿತಿಯನ್ನು ಸೇನೆಗೆ ನೀಡಿದ್ದರು. ಈ ಮಾಹಿತಿ ಆಧರಿಸಿ ಭಾರತೀಯ ಸೇನೆ, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ಸಿಆರ್‌ಪಿಎಫ್ ಜಂಟಿಯಾಗಿ ಕಾರ್ಯಾಚರಣೆ ನಡೆಸಿವೆ. ಈ ವೇಳೆ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಪ್ರತಿಯಾಗಿ ಭದ್ರತಾ ಸಿಬ್ಬಂದಿ ಸಹ ಗುಂಡು ಹಾರಿಸಿದ್ದಾರೆ. ಸೇನೆ ನಡೆಸಿದ ದಾಳಿಯಿಂದ ಇಬ್ಬರು ಉಗ್ರರು ಸಾವಿಗೀಡಾಗಿದ್ದಾರೆ. ಇದನ್ನೂ ಓದಿ: ಅಮಿತ್‌ ಶಾ ಜಮ್ಮು ಕಾಶ್ಮೀರದಲ್ಲಿದ್ದಾಗಲೇ ಒಳನುಸುಳಲು ಯತ್ನ – ಶಂಕಿತ ಉಗ್ರರ ಮೇಲೆ ಗುಂಡಿನ ದಾಳಿ

    ಹತ್ಯೆಯಾದ ಎಲ್‌ಇಟಿಯ ಪ್ರಮುಖ ಉಗ್ರನನ್ನು ರೆಹಮಾನ್ ಭಾಯ್ ಎಂದು ಗುರುತಿಸಲಾಗಿದೆ. ಆತನ ಮೃತದೇಹವನ್ನು ಗುಡ್ಡಾರ್ ಅರಣ್ಯ ಪ್ರದೇಶದಲ್ಲಿ ಸೇನೆ ಪತ್ತೆ ಹಚ್ಚಿದೆ.

    ಕಾರ್ಯಾಚರಣೆಯಲ್ಲಿ ಜೂನಿಯರ್ ಕಮಿಷನ್ಡ್ ಅಧಿಕಾರಿ ಸೇರಿದಂತೆ ಮೂವರು ಸೇನಾ ಸಿಬ್ಬಂದಿ ಗಾಯಗೊಂಡಿದ್ದಾರೆ. ಈ ಪ್ರದೇಶದಲ್ಲಿ ಇನ್ನೂ ಎರಡರಿಂದ ಮೂರು ಭಯೋತ್ಪಾದಕರು ಅಡಗಿರಬಹುದು ಎಂಬ ಶಂಕೆ ಇದೆ. ಈ ಭಾಗದಲ್ಲಿ ಹೆಚ್ಚುವರಿ ಸೇನಾ ಪಡೆಗಳನ್ನು ನಿಯೋಜಿಸಲಾಗಿದೆ. ಎನ್‌ಕೌಂಟರ್ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: Jammu Kashmir | ಅಕ್ರಮವಾಗಿ ಗಡಿ ನುಸುಳಲು ಯತ್ನ – ಇಬ್ಬರು ಉಗ್ರರ ಎನ್‌ಕೌಂಟರ್

  • Operation Mahadev | ಪಹಲ್ಗಾಮ್‌ ನರಮೇಧಕ್ಕೆ ಕಾರಣವಾಗಿದ್ದ ಪ್ರಮುಖ ಉಗ್ರ ಯೋಧರ ಗುಂಡಿಗೆ ಬಲಿ

    Operation Mahadev | ಪಹಲ್ಗಾಮ್‌ ನರಮೇಧಕ್ಕೆ ಕಾರಣವಾಗಿದ್ದ ಪ್ರಮುಖ ಉಗ್ರ ಯೋಧರ ಗುಂಡಿಗೆ ಬಲಿ

    – ಪಾಕಿಸ್ತಾನದ ಪ್ಯಾರಾ ಕಮಾಂಡೊ ಆಗಿದ್ದ ಹಾಶಿಮ್‌ ಮೂಸ

    ಶ್ರೀನಗರ: ʻಆಪರೇಷನ್‌ ಮಹಾದೇವ್‌ʼ (Operation MAHADEV) ಹೆಸರಿನಲ್ಲಿ ನಡೆದ ಪ್ರಮುಖ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಶ್ರೀನಗರದ ಲಿಡ್ವಾಸ್‌ ಪ್ರದೇಶದಲ್ಲಿ ಮೂವರು ವಿದೇಶಿ ಉಗ್ರರನ್ನ ಹತ್ಯೆಗೈದಿವೆ. ಹತ್ಯೆಗೈದ ಮೂವರಲ್ಲಿ ಓರ್ವ ಉಗ್ರ ಪಹಲ್ಗಾಮ್‌ ದಾಳಿಯಲ್ಲಿ ಭಾಗಿಯಾಗಿದ್ದ ಮುಖ್ಯ ಹಂತಕ ಅನ್ನೋದು ಖಚಿತವಾಗಿದೆ.

    ಏಪ್ರಿಲ್‌ 22ರಂದು ಪಹಲ್ಗಾಮ್‌ನಲ್ಲಿ ನರಮೇಧ ನಡೆಸಿದ ಪ್ರಮುಖ ಉಗ್ರ ಹಾಶಿಮ್‌ ಮೂಸಾ ಅಲಿಯಾಸ್‌ ಸುಲೇಮಾನ್‌ ಮೂಸಾನನ್ನ ಹೊಡೆದುರುಳಿಸಿರುವುದಾಗಿ ಜಮ್ಮು ಮತ್ತು ಕಾಶ್ಮೀರ ಪೊಲೀಸ್‌ ಮೂಲಗಳು ಮಾಹಿತಿ ಹಂಚಿಕೊಂಡಿವೆ.

    ಹಾಶಿಮ್‌ ಮೂಸಾ ಯಾರು?
    ಹಾಶಿಮ್‌ ಮೂಸಾ ಪಾಕಿಸ್ತಾನ ಸೇನೆಯ ಹಿನ್ನೆಲೆ ಹೊಂದಿದ್ದಾನೆ. ಪಹಲ್ಗಾಮ್ ದಾಳಿಯಲ್ಲಿ ISI ಪಾತ್ರದ ಇರುವುದಕ್ಕೆ ಇದು ಪ್ರಬಲ ಸಾಕ್ಷಿಯಾಗಿದೆ. ಪಾಕಿಸ್ತಾನದ ಪ್ಯಾರಾ ಕಮಾಂಡೊ (Pakistani Para Commando) ಆಗಿದ್ದ ಮೂಸಾ ವಿಶೇಷ ತರಬೇತಿ ಪಡೆದಿದ್ದ. ಲಷ್ಕರ್-ಎ-ತೈಬಾದಲ್ಲೂ ಪ್ರಮುಖನಾಗಿ ಗುರುತಿಸಿಕೊಂಡಿದ್ದ, ಅದಕ್ಕಾಗಿಯೇ ಸ್ಥಳೀಯರಲ್ಲದವರನ್ನ ಕೊಲ್ಲಲು, ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಲು ಮೂಸಾನನ್ನ ಭಾರತಕ್ಕೆ ಕಳುಹಿಸಲಾಗಿತ್ತು. ಹಾಶೀಮ್ ಮೂಸಾ LeT ಸಂಘಟನೆಗೆ ಸೇರಿದವನಾಗಿದ್ದು, SSG ಕಮಾಂಡೋ ಯುದ್ಧದಲ್ಲಿ ಪರಿಣತಿ ಹೊಂದಿದ್ದ ಎಂದು ತಿಳಿದುಬಂದಿದೆ.

    Pahalgam 7

    ಮೂವರು ವಿದೇಶಿ ಉಗ್ರರ ಹತ್ಯೆ
    ಸೇನೆಯ ಹಿರಿಯ ಅಧಿಕಾರಿಗಳ ಪ್ರಕಾರ, ಆಪರೇಷನ್‌ ಮಹಾದೇವ್‌ ಕಾರ್ಯಾಚರಣೆಯಲ್ಲಿ ಹಾಶಿಮ್‌ ಮೂಸಾ ಸೇರಿ ಮೂವರು ಉಗ್ರರನ್ನ ಹತ್ಯೆಗೈಯಲಾಗಿದೆ. ಸೇನೆಯ ಚಿನಾರ್ ಕಾರ್ಪ್ಸ್ ನೇತೃತ್ವದಲ್ಲಿ ಮತ್ತು ಜಮ್ಮು ಮತ್ತು ಕಾಶ್ಮೀರ (Jammu And Kashmir) ಪೊಲೀಸರೊಂದಿಗೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಮೂವರು ಉಗ್ರರನ್ನ ಹತ್ಯೆಗೈಯಲಾಗಿದೆ. ಲಿಡ್ವಾಸ್‌ನ ದಚಿಗಮ್ ಶ್ರೀನಗರದ ಹೊರವಲಯದಲ್ಲಿರುವ ದಟ್ಟ ಅರಣ್ಯ ಪ್ರದೇಶವಾಗಿದೆ. ಇಲ್ಲಿನ ಬೆಟ್ಟದ ದುರ್ಗಮ ಹಾದಿಯು ಟ್ರಾಲ್‌ಗೆ ಸಂಪರ್ಕ ಕಲ್ಪಿಸುತ್ತದೆ. ಈ ಪ್ರದೇಶದಲ್ಲಿ‌ ಹಿಂದೆಯೂ ಟಿಆರ್‌ಎಫ್‌‌ ಉಗ್ರ ಸಂಘಟನೆಯ ಚಟುವಟಿಕೆಗಳು ನಡೆಯುತ್ತಿತ್ತು ಎಂದು ವರದಿಗಳು ತಿಳಿಸಿವೆ.

    ಮೂವರು ಉಗ್ರರನ್ನು ಹತ್ಯೆಗೈದ ಬಳಿಕ ದಚಿಗಮ್ ಅರಣ್ಯ ಪ್ರದೇಶದಲ್ಲಿ ಸಿಆರ್‌ಪಿಎಫ್, ಜಮ್ಮು ಮತ್ತು ಕಾಶ್ಮೀರ ಪೊಲೀಸರ ಜಂಟಿ ಕಾರ್ಯಾಚರಣೆ ಮುಂದುವರಿದಿದೆ. ಕಳೆದ ಜನವರಿ ತಿಂಗಳಲ್ಲಿ ಈ ಪ್ರದೇಶದಲ್ಲಿ ಟಿಆರ್‌ಎಫ್ ಉಗ್ರರ ಅಡಗು ತಾಣವನ್ನಸೇನೆ ಧ್ವಂಸಗೊಳಿಸಿತ್ತು. ಆದ್ರೆ 2 ದಿನಗಳ ಹಿಂದೆ ಅನುಮಾನಾಸ್ಪದ ಚಟುವಟಿಕೆಗಳು ನಡೆಯುತ್ತಿರುವುದು ಕಂಡುಬಂದಿದೆ. ಅಲ್ಲದೇ ಇನ್ನಷ್ಟು ಉಗ್ರರು ಈ ಪ್ರದೇಶದಲ್ಲಿರುವ ಶಂಕೆ ವ್ಯಕ್ತವಾಗಿದೆ.

    ದಚಿಗಮ್ ಅರಣ್ಯವನ್ನ ಈಗಾಗಲೇ ಟಿಆರ್‌ಎಫ್‌ನ ಮುಖ್ಯ ಅಡಗುತಾಣವೆಂದು ಪರಿಗಣಿಸಲಾಗಿದೆ. ಇದೇ ಗುಂಪು ಇತ್ತೀಚೆಗೆ ಎಲ್‌ಒಸಿ ಬಳಿ ನಡೆದಿದ್ದ ನೆಲಬಾಂಬ್ ಸ್ಫೋಟದ ಹೊಣೆ ಹೊತ್ತುಕೊಂಡಿತ್ತು, ಇದರಲ್ಲಿ ಓರ್ವ ಸೈನಿಕ ಹುತಾತ್ಮರಾಗಿ ಮೂವರು ಗಾಯಗೊಂಡಿದ್ದರು. ಇನ್ನೂ ಕಾರ್ಯಾಚರಣೆ ಹಿನ್ನೆಲೆ ಸಾರ್ವಜನಿಕರು ಮನೆಯಿಂದ ಆಚೆ ಬರದಂತೆ ಭದ್ರತಾ ಪಡೆದಗಳು ಎಚ್ಚರಿಕೆ ನೀಡಿವೆ.

  • Operation MAHADEV | ಪಹಲ್ಗಾಮ್‌ ದಾಳಿಯ ಮೂವರು ಶಂಕಿತ ಉಗ್ರರನ್ನು ಹತ್ಯೆಗೈದ ಸೇನೆ

    Operation MAHADEV | ಪಹಲ್ಗಾಮ್‌ ದಾಳಿಯ ಮೂವರು ಶಂಕಿತ ಉಗ್ರರನ್ನು ಹತ್ಯೆಗೈದ ಸೇನೆ

    – ಶ್ರೀನಗರ ಬಳಿಯ ಲಿಡ್ವಾಸ್‌ನಲ್ಲಿ ಎನ್‌ಕೌಂಟರ್

    ಶ್ರೀನಗರ: ʻಆಪರೇಷನ್‌ ಮಹಾದೇವ್‌ʼ (Operation MAHADEV) ಅಡಿಯಲ್ಲಿ ನಡೆದ ಪ್ರಮುಖ ಕಾರ್ಯಾಚರಣೆಯೊಂದರಲ್ಲಿ ಭದ್ರತಾ ಪಡೆಗಳು ಶ್ರೀನಗರದ ಲಿಡ್ವಾಸ್‌ ಪ್ರದೇಶದಲ್ಲಿ ಮೂವರು ವಿದೇಶಿ ಉಗ್ರರನ್ನ ಹತ್ಯೆಗೈದಿವೆ.

    ಸೇನೆಯ ಹಿರಿಯ ಅಧಿಕಾರಿಗಳ ಪ್ರಕಾರ, ಈ ಮೂವರು ಏಪ್ರಿಲ್‌ 22ರ ಪಹಲ್ಗಾಮ್‌ ಭಯೋತ್ಪಾದಕ ದಾಳಿಯಲ್ಲಿ (Pahalgam Terrorist Attack) ಭಾಗಿಯಾಗಿದ್ದರೆಂದು ಶಂಕಿಸಲಾಗಿದೆ. ಅಲ್ಲದೇ ಲಷ್ಕರ್‌ ಮುಖವಾಣಿ ಟಿಆರ್‌ಎಫ್‌ (The Resistance Front) ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದರು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಪಾಕಿಸ್ತಾನದಿಂದಲೇ ಬಂದರೆಂದು ಏಕೆ ಅನ್ಕೋತೀರಿ, ಉಗ್ರರು ದೇಶದೊಳಗೇ ಬೆಳೆದಿರಬಹುದು – ʻಕೈʼ ನಾಯಕ ಚಿದಂಬರಂ ಹೇಳಿಕೆ ವಿವಾದ

    ಸೇನೆಯ ಚಿನಾರ್ ಕಾರ್ಪ್ಸ್ ಕಂಪನಿ ಮತ್ತು ಜಮ್ಮು ಮತ್ತು ಕಾಶ್ಮೀರ (Jammu And Kashmir) ಪೊಲೀಸರು ನಡೆಸಿದ ಯಶಸ್ವಿ ಜಂಟಿ ಕಾರ್ಯಾಚರಣೆಯಲ್ಲಿ ಮೂವರು ಉಗ್ರರನ್ನ ಹತ್ಯೆಗೈಯಲಾಗಿದೆ. ಲಿಡ್ವಾಸ್‌ನ ದಚಿಗಮ್ ಶ್ರೀನಗರದ ಹೊರವಲಯದಲ್ಲಿರುವ ದಟ್ಟ ಅರಣ್ಯ ಪ್ರದೇಶವಾಗಿದೆ. ಇಲ್ಲಿನ ಬೆಟ್ಟದ ದುರ್ಗಮ ಹಾದಿಯು ಟ್ರಾಲ್‌ಗೆ ಸಂಪರ್ಕ ಕಲ್ಪಿಸುತ್ತದೆ. ಈ ಪ್ರದೇಶದಲ್ಲಿ‌ ಹಿಂದೆಯೂ ಟಿಆರ್‌ಎಫ್‌‌ ಉಗ್ರ ಸಂಘಟನೆಯ ಚಟುವಟಿಕೆಗಳು ನಡೆಯುತ್ತಿತ್ತು ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: UP | ಅವಸಾನೇಶ್ವರ ಮಹಾದೇವ ದೇವಾಲಯದಲ್ಲಿ ಕಾಲ್ತುಳಿತ – ಇಬ್ಬರು ಭಕ್ತರು ಸಾವು, 29 ಮಂದಿಗೆ ಗಾಯ

    ಪೊಲೀಸರ ಜಂಟಿ ಕಾರ್ಯಾಚರಣೆ ಮುಂದುವರಿದಿದೆ. ಕಳೆದ ಜನವರಿ ತಿಂಗಳಲ್ಲಿ ಈ ಪ್ರದೇಶದಲ್ಲಿ ಟಿಆರ್‌ಎಫ್ ಉಗ್ರರ ಅಡಗು ತಾಣವನ್ನಸೇನೆ ಧ್ವಂಸಗೊಳಿಸಿತ್ತು. ಆದ್ರೆ 2 ದಿನಗಳ ಹಿಂದೆ ಅನುಮಾನಾಸ್ಪದ ಚಟುವಟಿಕೆಗಳು ನಡೆಯುತ್ತಿರುವುದು ಕಂಡುಬಂದಿದೆ. ಅಲ್ಲದೇ ಇನ್ನಷ್ಟು ಉಗ್ರರು ಈ ಪ್ರದೇಶದಲ್ಲಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಪೊಲೀಸಪ್ಪನ ಪತ್ನಿಗೆ ಅತ್ತೆ, ಮಾವನಿಂದ ಕಿರುಕುಳ – ವಿಡಿಯೋ ಹರಿಬಿಟ್ಟು ಮಹಿಳೆ ಆತ್ಮಹತ್ಯೆ

    ದಚಿಗಮ್ ಅರಣ್ಯವನ್ನ ಈಗಾಗಲೇ ಟಿಆರ್‌ಎಫ್‌ನ ಮುಖ್ಯ ಅಡಗುತಾಣವೆಂದು ಪರಿಗಣಿಸಲಾಗಿದೆ. ಇದೇ ಗುಂಪು ಇತ್ತೀಚೆಗೆ ಎಲ್‌ಒಸಿ ಬಳಿ ನಡೆದಿದ್ದ ನೆಲಬಾಂಬ್ ಸ್ಫೋಟದ ಹೊಣೆ ಹೊತ್ತುಕೊಂಡಿತ್ತು, ಇದರಲ್ಲಿ ಓರ್ವ ಸೈನಿಕ ಹುತಾತ್ಮರಾಗಿ ಮೂವರು ಗಾಯಗೊಂಡಿದ್ದರು. ಇನ್ನೂ ಕಾರ್ಯಾಚರಣೆ ಹಿನ್ನೆಲೆ ಸಾರ್ವಜನಿಕರು ಮನೆಯಿಂದ ಆಚೆ ಬರದಂತೆ ಭದ್ರತಾ ಪಡೆದಗಳು ಎಚ್ಚರಿಕೆ ನೀಡಿವೆ.

  • ಉಗ್ರರಿಗೆ ನೆರವು ನೀಡಿದ್ದ ಕೇಸ್‌ – ಎಎಸ್‌ಐ ಚಾಂದ್ ಪಾಷಾ ವಿರುದ್ಧ ಇಲಾಖೆ ಹಂತದ ತನಿಖೆಗೆ ಆದೇಶ

    ಉಗ್ರರಿಗೆ ನೆರವು ನೀಡಿದ್ದ ಕೇಸ್‌ – ಎಎಸ್‌ಐ ಚಾಂದ್ ಪಾಷಾ ವಿರುದ್ಧ ಇಲಾಖೆ ಹಂತದ ತನಿಖೆಗೆ ಆದೇಶ

    – ವಿದೇಶದಿಂದಲೇ ಸ್ಕೇಚ್ ರೆಡಿ ಮಾಡಿದ್ದ ಶಂಕಿತ ಝನೈದ್
    – ಪ್ಲಾನ್-ಬಿ ಟೀಂ ಬೆನ್ನುಬಿದ್ದ ಎನ್‌ಐಎ ಅಧಿಕಾರಿಗಳು

    ಬೆಂಗಳೂರು: ರಾಷ್ಟ್ರೀಯ ತನಿಖಾ ದಳದ (NIA) ಅಧಿಕಾರಿಗಳು ಮೂವರು ಶಂಕಿತರನ್ನು ಬಂಧನ ಮಾಡಿದ ಬೆನ್ನಲ್ಲೇ ಹಲವು ವಿಚಾರಗಳು ಒಂದೊಂದೇ ಹೊರಗೆ ಬರ್ತಿವೆ.

    ಪರಪ್ಪನ ಅಗ್ರಹಾರ (Parappana Agrahara) ಜೈಲಿನಲ್ಲಿರುವ ಉಗ್ರ (Terrorist) ನಾಸೀರ್‌ನನ್ನ ಜೈಲಿನಿಂದ ಎಸ್ಕೇಪ್ ಮಾಡಿಸಲು ಪ್ಲ್ಯಾನ್‌ ಮಾಡಿದ್ದ ಟೀಂ, ಕಳೆದ ಎರಡು ವರ್ಷಗಳ ಹಿಂದೆ ಸಿಸಿಬಿ ಕೈಗೆ ಸಿಕ್ಕಿಬಿದ್ದಿದ್ರು. ಈ ವೇಳೆ ಕೃತ್ಯಕ್ಕೆ ಬಳಸಲು ರೆಡಿ ಮಾಡಿದ್ದ ಹಲವು ಸ್ಟೋಟಕಗಳನ್ನ ಬಯಲಿಗೆಳೆದಿದ್ದರು. ಇದರಿಂದ ಶಾಕ್‌ಗೆ ಒಳಗಾದ ಝನೈದ್, ನಾಸೀರ್ ನನ್ನು ಏನಾದ್ರು ಮಾಡಿ ಹೊರಗೆ ತರಲೇಬೇಕು ಅಂತ ವಿದೇಶದಿಂದಲೇ ಪ್ಲಾನ್-ಬಿ ತಯಾರು ಮಾಡಿದ್ನಂತೆ.

    ಎಎಸ್‌ಐ ಚಾಂದ್ ಪಾಷ, ಸೇರಿದಂತೆ ಹಲವರನ್ನ ಬಳಸಿಕೊಂಡು ಆಸಕ್ತ ಮುಸ್ಲಿಂ ಯುವಕರ ಟೀಂ ಕಟ್ಟುವಂತೆ ಸೂಚಿಸಿದ್ದ. ಅಷ್ಟೇ ಅಲ್ದೇ ಅದಕ್ಕೆ ಬೇಕಾದ ಹಣಕಾಸಿನ ನೆರವು ಕೂಡ ಅಲ್ಲಿಂದಲೇ ಮಾಡ್ತಿದ್ದ ಅನ್ನೋದು ಗೊತ್ತಾಗಿದೆ. ಅಷ್ಟರಲ್ಲಿ ಎನ್‌ಐಎ ಅಧಿಕಾರಿಗಳ ಕೈಗೆ ಮೂವರು ಸಿಕ್ಕಿಬಿದ್ದಿದ್ದಾರೆ, ಕೆಲವರು ಮಾತ್ರ ಎಸ್ಕೇಪ್‌ ಆಗಿದ್ದಾರೆ. ಝನೈದ್‌ನ ಹುಡುಗರೆಲ್ಲಾ ಬಹುತೇಕ ಪರಪ್ಪನ ಅಗ್ರಹಾರ ಜೈಲಿನಲ್ಲೇ ಇರೋದರಿಂದ ಹೊಸದಾಗಿ ಆಸಕ್ತ ಯುವಕರನ್ನು ಒಟ್ಟುಗೂಡಿಸಿರೋ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿದೆ. ಹಾಗಾಗಿ ಇವರ ಪ್ಲ್ಯಾನ್‌-ಬಿ ಏನಾಗಿತ್ತು? ಇದರಲ್ಲಿ ಯರ‍್ಯಾರು ಇದ್ರು, ಯಾರ ಪಾತ್ರ ಏನಾಗಿತ್ತು? ಅನ್ನೋದರ ತೀವ್ರ ತನಿಖೆಗೆ ಇಳಿದಿದ್ದಾರೆ ಎನ್‌ಐಎ ಅಧಿಕಾರಿಗಳು..

    ಎಎಸ್‌ಐ ಚಾಂದ್ ಪಾಷಾ ವಿರುದ್ಧ ತನಿಖೆಗೆ ಆದೇಶ:
    ಇನ್ನೂ ಉಗ್ರರಿಗೆ ನೆರವು ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಆರ್ ಎಎಸ್‌ಐ ಚಾಂದ್ ಪಾಷಾ (ASI Chand Pasha) ವಿರುದ್ಧ ತನಿಖೆಗೆ ಪೊಲೀಸ್‌ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಆದೇಶಿಸಿದ್ದಾರೆ. ಇಲಾಖಾ ಹಂತದಲ್ಲಿ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದಾರೆ.

    ಎನ್‌ಐಎ ಈಗಾಗಲೇ ತನಿಖೆ ನಡೆಸುತ್ತಿದೆ, ಮುಂದೆ ನಾವು ಕೂಡ ತನಿಖೆ ಮಾಡಿ ರಿಪೋರ್ಟ್‌ ಪಡೆಯುತ್ತೇವೆ. ಬಳಿಕ ಪೊಲೀಸ್ ಇಲಾಖೆಯಲ್ಲಿ ಏನ್ ಕ್ರಮ ಇದೆ ಅದನ್ನ ಕೈಗೊಳ್ತೀವಿ ಎಂದು ಪೊಲೀಸ್‌ ಆಯುಕ್ತರು ತಿಳಿಸಿದ್ದಾರೆ.

  • ʻಆಪರೇಷನ್‌ ಸಿಂಧೂರʼ ವೇಳೆ ಭಾರತ ಧ್ವಂಸಗೊಳಿಸಿದ್ದ ಮುರಿಡ್ಕೆ ಮಸೀದಿಯಲ್ಲಿ ಮತ್ತೆ ತಲೆಎತ್ತಿದ ಲಷ್ಕರ್‌ ಗುಂಪು; ವಿಡಿಯೋ ವೈರಲ್‌

    ʻಆಪರೇಷನ್‌ ಸಿಂಧೂರʼ ವೇಳೆ ಭಾರತ ಧ್ವಂಸಗೊಳಿಸಿದ್ದ ಮುರಿಡ್ಕೆ ಮಸೀದಿಯಲ್ಲಿ ಮತ್ತೆ ತಲೆಎತ್ತಿದ ಲಷ್ಕರ್‌ ಗುಂಪು; ವಿಡಿಯೋ ವೈರಲ್‌

    – ಮೋಸ್ಟ್‌ ವಾಂಟೆಡ್‌ಗಳನ್ನ ತಯಾರಿಸುತ್ತಿದ್ದ ಲಷ್ಕರ್‌ ಕೇಂದ್ರ

    ಇಸ್ಲಾಮಾಬಾದ್‌: ಆಪರೇಷನ್‌ ಸಿಂಧೂರ (Operation Sindoor) ಕಾರ್ಯಾಚರಣೆ ವೇಳೆ ಭಾರತ ಧ್ವಂಸಗೊಳಿಸಿದ್ದ ಲಷ್ಕರ್‌ ಪ್ರಧಾನ ಕಚೇರಿಯಾಗಿದ್ದ ಮುರಿಡ್ಕೆ ಮಸೀದಿಯಲ್ಲಿ (Muridke Headquarters) ಮತ್ತೆ ಉಗ್ರ ಚಟುವಟಿಕೆ ಸಕ್ರಿಯವಾಗಿದೆ ಎಂದು ತಿಳಿದುಬಂದಿದೆ. ಲಷ್ಕರ್-ಎ-ತೈಬಾ (LeT) ಗುಂಪಿನ ಕೆಲ ಉಗ್ರರು ಹಾನಿಗೊಳಗಾದ ಮಸೀದಿಯಲ್ಲೇ ನಮಾಜ್‌ ಮಾಡುತ್ತಿರುವ ವಿಡಿಯೋ ಇದಕ್ಕೆ ಸಾಕ್ಷಿಯಾಗಿದೆ.

    Operation Sindoor 1 1

    ಧಾರ್ಮಿಕ ಕಾರ್ಯಾಚರಣೆಯ ನೆಪದಲ್ಲಿ ಲಷ್ಕರ್‌ ಉಗ್ರರ ಕಾರ್ಯತಂತ್ರಗಳು ಮತ್ತೆ ಸಕ್ರಿಯಗೊಂಡಿವೆ ಎಂದು ಉನ್ನತ ಗುಪ್ತಚರ ಮೂಲಗಳು ಎಚ್ಚರಿಕೆ ನೀಡಿರುವುದಾಗಿ ವರದಿಯಾಗಿದೆ. ಎಲ್‌ಇಟಿ ಗುಂಪು ತನ್ನ ಮುರಿಡ್ಕೆ ಪ್ರಧಾನ ಕಚೇರಿಯಲ್ಲಿ ಕಳೆದ ಶುಕ್ರವಾರ ಪ್ರಾರ್ಥನೆ ಸಲ್ಲಿಸಿದೆ. ಈ ಮಂದಿರವು ಭಾರತದ ದಾಳಿಯಿಂದ ಹಾನಿಯಾಗಿರುವುದು ಕಂಡುಬಂದಿದೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲೂ ಸದ್ದು ಮಾಡುತ್ತಿದೆ. ಇದನ್ನೂ ಓದಿ: ಉತ್ತರ ಸಿಕ್ಕಿಂನಲ್ಲಿ ಭಾರೀ ಭೂಕುಸಿತ – ದುರ್ಘಟನೆಯಲ್ಲಿ ಮೂವರು ಸೈನಿಕರು ಬಲಿ, 6 ಸೈನಿಕರು ಮಿಸ್ಸಿಂಗ್

    ಎಲ್‌ಇಟಿ ಸಂಸ್ಥಾಪಕ ಹಫೀಜ್ ಸಯೀದ್ ಹಾಗೂ ಅವನ ಮಗ ತಲ್ಹಾ ಸಯೀದ್‌, ಸೋದರ ಮಾವ ಅಬ್ದುಲ್ ರೆಹಮಾನ್ ಮಕ್ಕಿ ನಿಯಮಿತವಾಗಿ ಧರ್ಮೋಪದೇಶ, ಜಿಗಾದಿ ಪ್ರವಚನಗಳನ್ನು ನೀಡುತ್ತಿದ್ದ ಅದೇ ಸಭಾಂಗಣ ಇದಾಗಿದೆ ಎಂದು ಗುಪ್ತಚರ ಮೂಲಗಳು ಹೇಳಿವೆ. ಇದನ್ನೂ ಓದಿ: ಪಂಜಾಬ್ ಪೊಲೀಸರ ಭರ್ಜರಿ ಕಾರ್ಯಾಚರಣೆ – 113 ಡ್ರಗ್ ಪೆಡ್ಲರ್‌ಗಳು ಅರೆಸ್ಟ್

    ಮುಜಫರಾಬಾದ್‌ನಲ್ಲಿ ದಾಳಿಯಲ್ಲಿ ಮೃತಪಟ್ಟ ವ್ಯಕ್ತಿಗೆ ಜನರು ಅಂತ್ಯಕ್ರಿಯೆಯ ಪ್ರಾರ್ಥನೆ ಸಲ್ಲಿಸುತ್ತಿರುವುದು

    ಏಪ್ರಿಲ್‌ 22ರ ಪಹಲ್ಗಾಮ್‌ ದಾಳಿಗೆ ಪ್ರತೀಕಾರವಾಗಿ ಮೇ 7ರ ತಡರಾತ್ರಿ ಭಾರತ ಆಪರೇಷನ್‌ ಸಿಂಧೂರ ಕಾರ್ಯಾಚರಣೆ ನಡೆಸಿತ್ತು. ರಾತ್ರೋ ರಾತ್ರಿ ನಡೆಸಿದ್ದ ದಾಳಿಯಲ್ಲಿ ನಿಷೇಧಿತ ಮೂರು ಉಗ್ರ ಸಂಘಟನೆಗಳಾದ ಜೈಶ್‌ ಎ ಮೊಹಮ್ಮದ್‌, ಲಷ್ಕರ್‌ ಎ ತೈಬಾ (LET) ಮತ್ತು ಹಿಜ್ಬುಲ್‌ ಮುಜಾಹಿದ್ದೀನ್‌ ಉಗ್ರರ ಪ್ರಧಾನ ಕಚೇರಿಗಳು ಧ್ವಂಸವಾಗಿದ್ದವು. ಪಾಕಿಸ್ತಾನ ಮತ್ತು ಪಾಕ್ ಅಕ್ರಮಿತ ಕಾಶ್ಮೀರದಲ್ಲಿರುವ 9 ಅಡಗುತಾಣಗಳ ಮೇಲೆ ಭಾರತೀಯ ವಾಯು ಸೇನೆ (IAF) ದಾಳಿ ನಡೆಸಿತ್ತು. ಭಾರತ ಧ್ವಂಸ ಮಾಡಿರುವ ಈ ಉಗ್ರರ (Terrorist) ನೆಲೆಗಳು ಮೋಸ್ಟ್‌ ಡೇಂಜರಸ್‌ ತಾಣಗಳು ಎಂದೇ ಗುರುತಿಸಿಕೊಂಡಿದ್ದು, ಇಡೀ ವಿಶ್ವಕ್ಕೆ ಕಂಟಕವಾಗಿದ್ದವು. ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಇಲ್ಲಿ ಅಡಗಿಸಿಡಲಾಗಿತ್ತು. ಜೊತೆಗೆ ವಿಶ್ವಾದ್ಯಂತ ವಿವಿಧೆಡೆಗೆ ಕಳುಹಿಸಲು ಇಲ್ಲಿ ತರಬೇತಿ ನೀಡಲಾಗುತ್ತಿತ್ತು ಅನ್ನೋ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿತ್ತು. ಅದಕ್ಕಾಗಿ ಭಾರತೀಯ ಸೇನೆಯು ನಾಗರಿಕರು ಮತ್ತು ಸೇನೆಯನ್ನ ಗುರಿಯಾಗಿಸದೇ ಕೇವಲ ಉಗ್ರರ ನೆಲೆಗಳನ್ನ ಗುರಿಯಾಗಿಸಿ ದಾಳಿ ನಡೆಸಿತ್ತು. ಇದನ್ನೂ ಓದಿ: ಟೆಸ್ಲಾಗೆ 2 ಶೋ ರೂಂ ತೆರೆಯುವ ಆಸಕ್ತಿ ಇದೆ, ಆದ್ರೆ ಭಾರತದಲ್ಲೇ ಕಾರು ಉತ್ಪಾದಿಸುವ ಆಸಕ್ತಿ ಇಲ್ಲ: ಹೆಚ್‌ಡಿಕೆ

  • ಪಾಕಿಸ್ತಾನದ ರಾಜಕಾರಣಿಗಳೊಂದಿಗೆ ವೇದಿಕೆ ಹಂಚಿಕೊಂಡ ಪಹಲ್ಗಾಮ್ ದಾಳಿಯ ಮಾಸ್ಟರ್ ಮೈಂಡ್

    ಪಾಕಿಸ್ತಾನದ ರಾಜಕಾರಣಿಗಳೊಂದಿಗೆ ವೇದಿಕೆ ಹಂಚಿಕೊಂಡ ಪಹಲ್ಗಾಮ್ ದಾಳಿಯ ಮಾಸ್ಟರ್ ಮೈಂಡ್

    – ಭಾರತದ ವಿರುದ್ಧ ಮತ್ತೆ ವಿಷಕಾರಿದ ಸೈಫುಲ್ಲಾ ಖಾಲಿದ್‌

    ಇಸ್ಲಾಮಾಬಾದ್‌: ಪಹಲ್ಗಾಮ್‌ನ (Pahalgam) ಬೈಸರನ್ ಕಣಿವೆಯಲ್ಲಿ ಹಿಂದೂಗಳ ನರಮೇಧ ಮಾಡಿದ ಕೃತ್ಯದ ಮಾಸ್ಟರ್‌ ಮೈಂಡ್‌ ಸೈಫುಲ್ಲಾ ಖಾಲಿದ್ (Saifullah Khalid) ಪಾಕಿಸ್ತಾನದ ರ‍್ಯಾಲಿಯೊಂದರಲ್ಲಿ ಹಿರಿಯ ರಾಜಕಾರಣಿಗಳೊಂದಿಗೆ ವೇದಿಕೆ ಹಂಚಿಕೊಂಡಿದ್ದಾನೆ. ಜೊತೆಗೆ ವೇದಿಕೆ ಭಾಷಣದಲ್ಲಿ ಭಾರತದ ವಿರುದ್ಧ ಮತ್ತೆ ವಿಷಕಾರಿರುವುದು ಕಂಡುಬಂದಿದೆ.

    ಲಷ್ಕರ್-ಎ-ತೈಬಾ (LeT) ಉಪ ಮುಖ್ಯಸ್ಥನಾಗಿರುವ ಸೈಫುಲ್ಲಾ ಖಾಲಿದ್ ಮುಂಬೈ ದಾಳಿ ಸೂತ್ರಧಾರ ಹಫೀಜ್ ಸಯೀದ್‌ನ (Hafiz Saeed) ಆಪ್ತನೂ ಕೂಡ ಆಗಿದ್ದಾನೆ. ಪಾಕಿಸ್ತಾನದ ಪಂಜಾಬ್‌ನಲ್ಲಿ ನಡೆದ ಸಾರ್ವಜನಿಕ ರ‍್ಯಾಲಿಯಲ್ಲಿ ರಾಜಕಾರಣಿ ಮಲಿಕ್ ಅಹ್ಮದ್ ಖಾನ್ ಜೊತೆಗೆ ವೇದಿಕೆ ಹಂಚಿಕೊಂಡಿರುವುದು ಕಂಡುಬಂದಿದೆ. ಅಲ್ಲದೇ ಪಾಕ್‌ ಸೇನೆಯಿಂದಲೇ ಅವನಿಗೆ ರಕ್ಷಣೆ ನೀಡಲಾಗಿದೆ. ಇದೇ ವೇದಿಕೆಯಲ್ಲಿ ಎಲ್‌ಇಟಿ‌ ಸ್ಥಾಪಕ ಮತ್ತು ಮುಂಬೈ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಅವರ ಪುತ್ರ ತಲ್ಹಾ ಸಯೀದ್ ಕೂಡ ಇದ್ದಾನೆ. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ.

    ಬಳಿಕ ವೇದಿಕೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿರುವ ಸೈಫುಲ್ಲಾ ಖಾಲಿದ್‌, ಭಾರತ, ಹಿಂದೂಗಳ ವಿರುದ್ಧ ವಿಷ ಕಾರಿದ್ದಾನೆ. ಜೊತೆಗೆ ಆಪರೇಷನ್‌ ಸಿಂಧೂರದಲ್ಲಿ ಹತ್ಯೆಗೀಡಾದ ಪಾಕಿಸ್ತಾನಿ ಉಗ್ರರರನ್ನ ʻಹುತಾತ್ಮರುʼ ಎಂದು ಕರೆದಿದ್ದಾನೆ. ಇದನ್ನೂ ಓದಿ: ಭಾರತ ಜಲಯುದ್ಧ; ಇತ್ತ ಅಫ್ಘಾನಿಸ್ತಾನದಿಂದಲೂ ಶಾಕ್‌ ಆತಂಕ, ಪಾಕ್‌ನಲ್ಲಿ ಚೀನಾ ಅಣೆಕಟ್ಟೆ ನಿರ್ಮಾಣ ಯಾಕೆ?

    ಏಪ್ರಿಲ್‌ 22ರಂದು ಭಯೋತ್ಪಾದಕ ದಾಳಿ ನಡೆದಿರುವ ಬಗ್ಗೆ ನಾನು ಮಾಹಿತಿ ಪಡೆದುಕೊಂಡೆ. ಅದಾದಮೇಲೆ ಭಾರತ ನನ್ನನ್ನು ಮಾಸ್ಟರ್‌ ಮೈಂಡ್‌ ಅಂತ ಘೋಷಿಸಿರುವುದು ನನಗೆ ಗೊತ್ತಾಯ್ತು. ನಾವು ಗುಂಡಿನ ದಾಳಿಗೆ ಹೆದರೋದಿಲ್ಲ. ಹುತಾತ್ಮರಾಗಿಯೇ ಸಾಯಲು ಬಯಸುತ್ತೇವೆ ಎಂದು ಖಾಲಿದ್‌ ಹೇಳಿದ್ದಾನೆ. ಇದನ್ನೂ ಓದಿ: ಗೋಲ್ಡನ್‌ ಡೋಮ್;‌ ಕ್ಷಿಪಣಿ ದಾಳಿಯಿಂದ ಅಮೆರಿಕ ರಕ್ಷಣೆಗೆ ಬಾಹ್ಯಾಕಾಶದಲ್ಲಿ ರಕ್ಷಾಕವಚ

    ಸೈಫುಲ್ಲಾ ಖಾಲಿದ್‌ ಯಾರು?
    ಲಷ್ಕರ್-ಎ-ತೈಬಾ ಉಪ ಮುಖ್ಯಸ್ಥನಾಗಿರುವ ಸೈಫುಲ್ಲಾ ಖಾಲಿದ್ ಮುಂಬೈ ದಾಳಿ (Mumbai Attack) ಸೂತ್ರಧಾರ ಹಫೀಜ್ ಸಯೀದ್‌ ಆಪ್ತ ವ್ಯಕ್ತಿಯಾಗಿದ್ದಾನೆ. ಯಾವಾಗಲೂ ಐಷಾರಾಮಿ ಕಾರುಗಳಲ್ಲಿ ಪ್ರಯಾಣಿಸುವ ಈತನಿಗೆ ಅತ್ಯಾಧುನಿಕ ಶಸ್ತ್ರಾಸ್ತ್ರ ಹಿಡಿದಿರುವ ಲಷ್ಕರ್‌ ಉಗ್ರರು ಭದ್ರತೆ ನೀಡುತ್ತಾರೆ. ಇದನ್ನೂ ಓದಿ: ಭಯೋತ್ಪಾದನೆ ವಿರುದ್ಧ ಭಾರತದ ದಿಟ್ಟ ಹೋರಾಟಕ್ಕೆ ಬೆಂಬಲ – ಸ್ಲೊವೇನಿಯಾದಲ್ಲಿ ಸಂಸದ ಕ್ಯಾ. ಚೌಟ ಒಳಗೊಂಡ ಸರ್ವಪಕ್ಷ ನಿಯೋಗ

    ಯಾವಾಗಲೂ ಭಾರತದ ವಿರುದ್ಧವೇ ಕೆಲಸ ಮಾಡವುದರಿಂದ ಸೇನಾ ಅಧಿಕಾರಿಗಳ ಜೊತೆಗೂ ಈತ ಉತ್ತಮ ಸಂಬಂಧ ಹೊಂದಿದ್ದಾನೆ. ಎರಡು ತಿಂಗಳ ಹಿಂದೆ ಸೈಫುಲ್ಲಾ ಖಾಲಿದ್ ಪಾಕಿಸ್ತಾನದ ಪಂಜಾಬ್‌ನ ಕಂಗನ್‌ಪುರಕ್ಕೆ ಭೇಟಿ ನೀಡಿದ್ದ. ಕಂಗನ್‌ಪುರದಲ್ಲಿ ಪಾಕ್‌ ಸೇನೆಯ ದೊಡ್ಡ ಬೆಟಾಲಿಯನ್‌ ನೆಲೆಗೊಂಡಿದೆ. ಪಾಕಿಸ್ತಾನ ಸೇನೆಯ ಕರ್ನಲ್ ಜಾಹಿದ್ ಜರೀನ್ ಭಾರತದ ವಿರುದ್ಧ ಜಿಹಾದಿ ಭಾಷಣ ಮಾಡಲು ಈತನನ್ನು ಕರೆಸಿದ್ದ.ಭಾಷಣದಲ್ಲಿ ಪಾಕಿಸ್ತಾನ ಸೇನೆಯನ್ನು ಭಾರತದ ವಿರುದ್ಧದ ಕೃತ್ಯಕ್ಕೆ ಪ್ರಚೋದಿಸಿದ್ದ.

    ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈತ ಭಾರತದ ವಿರುದ್ಧ ವಿಷಕಾರಿದ್ದ. ಇಂದು ಫೆಬ್ರವರಿ 2, 2025. ಕಾಶ್ಮೀರವನ್ನು ವಶಪಡಿಸಿಕೊಳ್ಳಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ. ಮುಂಬರುವ ದಿನಗಳಲ್ಲಿ ನಮ್ಮ ಮುಜಾಹಿದ್ದೀನ್ ದಾಳಿ ತೀವ್ರಗೊಳ್ಳಲಿದೆ. ಫೆಬ್ರವರಿ 2, 2026 ರೊಳಗೆ ಕಾಶ್ಮೀರ ಸ್ವತಂತ್ರವಾಗಲಿದೆ ಎಂದು ನಾವು ಭಾವಿಸುತ್ತೇವೆ ಎಂದು ಭರವಸೆ ನೀಡಿದ್ದ.

  • ಮನೆಯ ಒಳಗಡೆ ನುಗ್ಗಿ ಅಪರಿಚಿತ ವ್ಯಕ್ತಿಯಿಂದ ಲಷ್ಕರ್‌ ಉಗ್ರನಿಗೆ ಗುಂಡೇಟು!

    ಮನೆಯ ಒಳಗಡೆ ನುಗ್ಗಿ ಅಪರಿಚಿತ ವ್ಯಕ್ತಿಯಿಂದ ಲಷ್ಕರ್‌ ಉಗ್ರನಿಗೆ ಗುಂಡೇಟು!

    ಇಸ್ಲಾಮಾಬಾದ್‌: ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾ (LeT) ಸಹ-ಸಂಸ್ಥಾಪಕ, ಮುಂಬೈ ದಾಳಿಯ ಮಾಸ್ಟರ್‌ ಮೈಂಡ್‌ ಹಫೀಜ್‌ ಸಯೀದ್ ಆಪ್ತ ಅಮೀರ್ ಹಮ್ಜಾ (Amir Hamza) ಲಾಹೋರ್‌ನಲ್ಲಿರುವ ನಿವಾಸದಲ್ಲೇ ಗಂಭೀರ ಗಾಯಗೊಂಡಿದ್ದಾನೆ.

    ಎಲ್‌ಇಟಿಯ 17 ಸ್ಥಾಪಕ ಸದಸ್ಯರಲ್ಲಿ ಒಬ್ಬನಾದ 66 ವರ್ಷದ ಹಮ್ಜಾಗೆ ಮನೆಯಲ್ಲಿ ಇರುವಾಗಲೇ ಗಾಯವಾಗಿದ್ದು, ಈಗ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ (ISI) ಭದ್ರತೆಯಲ್ಲಿ  ಲಾಹೋರ್‌ನಲ್ಲಿರುವ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ವರದಿಯಾಗಿದೆ. ಇದನ್ನೂ ಓದಿ: ಪಾಕ್ ಮತ್ತೆ ಸವಾಲು ಹಾಕಿದ್ರೆ, ನಾವು ಮಾತಿನಿಂದಲ್ಲ.. ಬೆಂಕಿ, ರಾಷ್ಟ್ರದ ದೃಢ ಸಂಕಲ್ಪದೊಂದಿಗೆ ಪ್ರತಿಕ್ರಿಯಿಸ್ತೇವೆ – ಮುದಿತ್ ಮಹಾಜನ್

    ಗಂಭೀರವಾಗಿ ಗಾಯಗೊಂಡಿದ್ದು ಹೇಗೆ ಎನ್ನುವ ಪ್ರಶ್ನೆಗೆ ಸರಿಯಾದ ಕಾರಣ ತಿಳಿದು ಬಂದಿಲ್ಲ. ಮನೆ ಒಳಗಡೆ ಅಪರಿಚಿತ ವ್ಯಕ್ತಿ ಪ್ರವೇಶಿಸಿ ಗುಂಡಿನ ದಾಳಿ ನಡೆಸಿದ್ದರಿಂದ ಗಂಭೀರವಾಗಿ ಗಾಯಗೊಂಡಿರುವ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆಗುತ್ತಿದೆ.

    ಆಸ್ಪತ್ರೆಗೆ ದಾಖಲಾದ ನಂತರ ಹಮ್ಜಾಗೆ ಚಿಕಿತ್ಸೆ ನೀಡುತ್ತಿರುವ ವಿಡಿಯೋ ಹರಿದಾಡುತ್ತಿದೆ. ಈ ವಿಡಿಯೋದಲ್ಲಿ ಬಿಳಿ ಉಡುಪಿನ ಮೇಲೆ ರಕ್ತದ ಕಲೆಗಳು ಇರುವುದನ್ನು ಗಮನಿಸಬಹುದು. ಇದನ್ನೂ ಓದಿ: ಕೇಂದ್ರ ಗುಪ್ತಚರ ಇಲಾಖೆ ಮುಖ್ಯಸ್ಥರ ಅವಧಿ 1 ವರ್ಷ ವಿಸ್ತರಣೆ ಮಾಡಿದ ಕೇಂದ್ರ ಸರ್ಕಾರ

    ಪ್ರಚೋದನಕಾರಿ ಭಾಷಣಕ್ಕೆ ಹೆಸರುವಾಸಿಯಾಗಿರುವ ಅಮೀರ್ ಹಮ್ಜಾ ಎಲ್‌ಇಟಿ ಮುಖವಾಣಿಯ ಸಂಪಾದಕನಾಗಿಯೂ ಕೆಲಸ ಮಾಡಿದ್ದ. ಈತ ಎಲ್‌ಇಟಿಯ ಕೇಂದ್ರ ಸಮಿತಿಯಲ್ಲಿ ಸೇವೆ ಸಲ್ಲಿಸಿದ್ದ. ಬಂಧಿತ ಉಗ್ರರ ಬಿಡುಗಡೆಗಾಗಿ ನಿಧಿಸಂಗ್ರಹಣೆ, ನೇಮಕಾತಿ ಮತ್ತು ಮಾತುಕತೆಗಳಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದ್ದ.

    ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಗುಜ್ರಾನ್‌ವಾಲಾ ಮೂಲದ ಹಮ್ಜಾನನ್ನು ಆಗಸ್ಟ್ 2012 ರಲ್ಲಿ ಅಮೆರಿಕ ಜಾಗತಿಕ ಭಯೋತ್ಪಾದಕ ಎಂದು ಘೋಷಿಸಿದೆ.

    2005ರಲ್ಲಿ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ದಾಳಿಯ ಹಿಂದಿನ ಮಾಸ್ಟರ್ ಮೈಂಡ್ ಲಷ್ಕರ್-ಎ-ತೊಯ್ದಾ ಭಯೋತ್ಪಾದಕ ರಜವುಲ್ಲಾ ನಿಜಾಮಿ ಅಲಿಯಾಸ್ ಅಬು ಸೈಯುಲ್ಲಾನನ್ನು ಪಾಕಿಸ್ತಾನದ ಸಿಂದ್ ಪ್ರಾಂತ್ಯದಲ್ಲಿ ಅಪರಿಚಿತ ಬಂದೂಕುಧಾರಿಗಳು ಗುಂಡಿಕ್ಕಿ ಭಾನುವಾರ ಹತ್ಯೆ ಮಾಡಿದ್ದರು.

  • ‌ಬೆಂಗಳೂರಿನ IISc ದಾಳಿಯ ಪ್ರಮುಖ ಸಂಚುಕೋರ, ಲಷ್ಕರ್ ಉಗ್ರ ಪಾಕ್‌ನಲ್ಲಿ ಹತ್ಯೆ

    ‌ಬೆಂಗಳೂರಿನ IISc ದಾಳಿಯ ಪ್ರಮುಖ ಸಂಚುಕೋರ, ಲಷ್ಕರ್ ಉಗ್ರ ಪಾಕ್‌ನಲ್ಲಿ ಹತ್ಯೆ

    ಇಸ್ಲಾಮಾಬಾದ್‌: ಭಾರತದಲ್ಲಿ ನಡೆದ ಮೂರು ಪ್ರಮುಖ ಭಯೋತ್ಪಾದಕ ದಾಳಿಯ (Terrorist Attack) ಪ್ರಮುಖ ಸಂಚುಕೋರನಾಗಿದ್ದ ಲಷ್ಕರ್-ಎ-ತೈಬಾ (LET) ಸಂಘಟನೆಯ ಟಾಪ್‌ ಉಗ್ರನನ್ನು ಪಾಕಿಸ್ತಾನದ (Pakistan) ಸಿಂಧ್ ಪ್ರಾಂತ್ಯದಲ್ಲಿ ಭಾನುವಾರ ಹತ್ಯೆ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.

    ಸೈಫುಲ್ಲಾ ಅಲಿಯಾಸ್ ವಿನೋದ್ ಕುಮಾರ್ ಅಲಿಯಾಸ್ ಮೊಹಮ್ಮದ್ ಸಲೀಮ್ ಅಲಿಯಾಸ್ ಖಾಲಿದ್ ಅಲಿಯಾಸ್ ವನಿಯಾಲ್ ಅಲಿಯಾಸ್ ವಾಜಿದ್ ಅಲಿಯಾಸ್ ಸಲೀಂ ಭಾಯ್ ಹೆಸರುಗಳಿಂದ ಮೋಸ್ಟ್‌ ವಾಂಟೆಡ್‌ ಆಗಿದ್ದ ಲಷ್ಕರ್‌ ಉಗ್ರರನನ್ನು ಸಿಂಧ್ ಪ್ರಾಂತ್ಯದ ಬಾದಿನ್ ಜಿಲ್ಲೆಯ ಮಟ್ಲಿ ತಾಲೂಕಿನಲ್ಲಿ ಅಪರಿಚಿತ ಗುಂಪೊಂದು ಹತ್ಯೆ ಮಾಡಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಮುಜೀಬ್ ಬಯೋಪಿಕ್‌ನಲ್ಲಿ ಶೇಖ್ ಹಸೀನಾ ಪಾತ್ರದಲ್ಲಿ ನಟಿಸಿದ್ದ ಬಾಂಗ್ಲಾ ನಟಿ ಅರೆಸ್ಟ್

    2001 ರಲ್ಲಿ ರಾಂಪುರದಲ್ಲಿ ನಡೆದ ಸಿಆರ್‌ಪಿಎಫ್ ಶಿಬಿರದ ಮೇಲಿನ ದಾಳಿ, 2005 ರಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (IISc) ನಡೆದಿದ್ದ ಗುಂಡಿನ ದಾಳಿ ಹಾಗೂ 2006 ರಲ್ಲಿ ನಾಗ್ಪುರದ ಆರ್‌ಎಸ್‌ಎಸ್ ಪ್ರಧಾನ ಕಚೇರಿ ಮೇಲೆ ನಡೆದಿದ್ದ ದಾಳಿಗಳಿಗೆ ಖಾಲಿದ್‌ ಪ್ರಮುಖ ಸಂಚುಕೋರನಾಗಿದ್ದ. ಇದನ್ನೂ ಓದಿ: ಅಸಲಿ ಆಟ ಈಗ ಶುರು – ಸಾಲದ ಹಣ ಬಿಡುಗಡೆಗೆ ಪಾಕ್‌ಗೆ 11 ಷರತ್ತು ವಿಧಿಸಿದ IMF

    5 ವರ್ಷಗಳ ಅವಧಿಯಲ್ಲಿ ನಡೆದಿದ್ದ ಈ ಮೂರು ದಾಳಿಗಳು ಹಲವಾರು ಜೀವಗಳನ್ನು ಬಲಿ ಪಡೆದಿದ್ದವು. ಇದಾದ ಬಳಿಕ ʻವಿನೋದ್‌ ಕುಮಾರ್‌ʼ ಹೆಸರಿನಲ್ಲಿ ಖಾಲಿದ್‌ ಹಲವು ವರ್ಷಗಳ ಕಾಲ ನೇಪಾಳದಲ್ಲಿ ತಲೆ ಮರೆಸಿಕೊಂಡಿದ್ದ. ಅಲ್ಲಿಯೇ ನಗ್ಮಾ ಬಾನು ಎಂಬ ಮಹಿಳೆಯನ್ನ ವಿವಾಹವಾಗಿದ್ದ. ನಕಲಿ ಗುರುತು ಹೊಂದಿದ್ದ ಖಾಲಿದ್‌ ಆಗಾಗ್ಗೆ ಭಾರತಕ್ಕೆ ಬಂದು ಲಷ್ಕರ್‌ ಸಂಘಟನೆಯ ಉಗ್ರ ಚಟುವಟಿಕೆಗಳನ್ನು ಸಂಘಟಿಸುತ್ತಿದ್ದ ನೇಮಕಾತಿ ಮತ್ತು ಲಾಜಿಸ್ಟಿಕ್ಸ್‌ನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಎಂದು ವರದಿಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಪಾಕ್‌ ಪ್ರಧಾನಿ ನಿದ್ದೆಗೆಡಿಸಿದ ʻಆಪರೇಷನ್‌ ಸಿಂಧೂರʼ – ಶೆಹಬಾಜ್‌ಗೆ ಮಧ್ಯರಾತ್ರಿ ಕರೆ ಮಾಡಿದ್ಯಾರು?

    ಇತ್ತೀಚೆಗೆ ಖಾಲಿದ್‌ ನೇಪಾಳ ಬಿಟ್ಟು ಸಿಂಧ್‌ ಪ್ರಾಂತ್ಯದ ಬಾದಿನ್ ಜಿಲ್ಲೆಯ ಮತ್ಲಿಗೆ ಗ್ರಾಮದಲ್ಲಿ ನೆಲೆಸಿದ್ದ. ಅಲ್ಲಿ ನಿಷೇಧಿತ ಜಮಾತ್-ಉದ್-ದವಾ ಉಗ್ರ ಸಂಘಟನೆಯಲ್ಲಿ ಕೆಲಸ ಮಾಡುತ್ತಿದ್ದ. ಭಯೋತ್ಪಾದಕ ಚಟುವಟಿಕೆಗೆ ಯುವಕರನ್ನ ನೇಮಿಸಿಕೊಳ್ಳುವುದು ಮತ್ತು ನಿಧಿ ಸಂಗ್ರಹಿಸುವ ಕೆಲಸದಲ್ಲಿ ತೊಡಗಿದ್ದ ಎನ್ನಲಾಗಿದೆ. ಇದನ್ನೂ ಓದಿ: ಭಾರತ, ಚೀನಾವನ್ನು ಪಾಶ್ಚಿಮಾತ್ಯ ರಾಷ್ಟ್ರಗಳು ಎತ್ತಿಕಟ್ಟುತ್ತಿವೆ: ರಷ್ಯಾ ವಿದೇಶಾಂಗ ಸಚಿವ

  • BSF ಯೋಧರನ್ನು ಬಲಿ ಪಡೆದಿದ್ದ ಉಗ್ರ ಪಾಕ್‌ನಲ್ಲಿ ಗುಂಡಿನ ದಾಳಿಗೆ ಬಲಿ- 2015ರಲ್ಲಿ ನಡೆದಿದ್ದೇನು?

    BSF ಯೋಧರನ್ನು ಬಲಿ ಪಡೆದಿದ್ದ ಉಗ್ರ ಪಾಕ್‌ನಲ್ಲಿ ಗುಂಡಿನ ದಾಳಿಗೆ ಬಲಿ- 2015ರಲ್ಲಿ ನಡೆದಿದ್ದೇನು?

    ಇಸ್ಲಾಮಾಬಾದ್‌: ಪಾಕಿಸ್ತಾನದ ಕರಾಚಿಯಲ್ಲಿ (Pakistan Karachi) ಅಪರಿಚಿತ ಬಂದೂಕುದಾರಿಗಳಿಂದ ನಡೆದ ಗುಂಡಿನ ದಾಳಿಗೆ 2015ರ ಉಧಂಪುರ ದಾಳಿಯ ಮಾಸ್ಟರ್‌ ಮೈಂಡ್‌ ಲಷ್ಕರ್-ಎ-ತೊಯ್ಬಾ (LET) ಭಯೋತ್ಪಾದಕ ಹಂಜ್ಲಾ ಅದ್ನಾನ್ (Hanzla Adnan) ದುರ್ಮರಣಕ್ಕೀಡಾಗಿದ್ದಾನೆ.

    2015ರಲ್ಲಿ ಜಮ್ಮು ಮತ್ತು ಕಾಶ್ಮೀರದ (Jammu and Kashmir) ಉಧಂಪುರದಲ್ಲಿ BSF ಬೆಂಗಾವಲು ಪಡೆಯ ಮೇಲೆ ನಡೆದ ದಾಳಿಯ ಮಾಸ್ಟರ್‌ ಮೈಂಡ್‌ ಇತನೇ ಆಗಿದ್ದ. 2008ರ ನವೆಂಬರ್‌ 26ರಂದು ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಎಲ್ಇಟಿ ಮುಖ್ಯಸ್ಥ ಹಫೀಜ್ ಸಯೀದ್‌ನ ನಿಕಟವರ್ತಿಯೂ ಆಗಿದ್ದ ಎಂದು ಪರಿಗಣಿಸಲಾಗಿದೆ.

    ಇತ್ತೀಚೆಗೆ ಹಂಝ್ಲಾ ಅದ್ನಾನ್ ತನ್ನ ಕಾರ್ಯಾಚರಣೆಯ ನೆಲೆಯನ್ನು ರಾವಲ್ಪಿಂಡಿಯಿಂದ ಕರಾಚಿಗೆ ಬದಲಾಯಿಸಿದ್ದ. ಕಳೆದ ಎರಡು ದಿನಗಳ ಹಿಂದೆ ತಡರಾತ್ರಿಯಲ್ಲಿ ಅಪರಿಚಿತ ಬಂದೂಕುಧಾರಿಗಳಿಂದ ನಡೆದ ಗುಂಡಿನ ದಾಳಿಗೆ ಬಲಿಯಾಗಿದ್ದಾನೆ. ಇದನ್ನೂ ಓದಿ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಈಗ ವಿಶ್ವದ ಶಕ್ತಿಶಾಲಿ ಮಹಿಳೆ – ನಂ.1 ಸ್ಥಾನದಲ್ಲಿ ಯಾರಿದ್ದಾರೆ?

    ಅಪರಿಚಿತರು ಗುಂಡಿನ ದಾಳಿ ನಡೆಸಿದಾಗ ಹಂಜ್ಲಾ ಅದ್ನಾನ್‌ಗೆ ನಾಲ್ಕು ಬುಲೆಟ್‌ ತಗುಲಿತ್ತು, ಇದರಿಂದ ತೀವ್ರ ರಕ್ತಸ್ರಾವವಾಗಿತ್ತು. ಈ ಸುಳಿವನ್ನು ಬಿಟ್ಟುಕೊಡದ ಪಾಕಿಸ್ತಾನ ಸೇನೆ ರಹಸ್ಯವಾಗಿ ಕರಾಚಿಯ ಆಸ್ಪತ್ರೆಗೆ ಕರೆದೊಯ್ದಿತ್ತು. ಎರಡು ದಿನಗಳ ನಂತ್ರ ಚಿಕಿತ್ಸೆ ಫಲಕಾರಿಯಾಗದೇ ಡಿಸೆಂಬರ್‌ 5ರಂದು ಸಾವನ್ನಪ್ಪಿದ್ದಾನೆ ಎಂದು ಮೂಲಗಳು ತಿಳಿಸಿವೆ.

    2015ರಲ್ಲಿ ಏನಾಗಿತ್ತು?
    ಉಗ್ರ ಹಂಝ್ಲಾ ಅದ್ನಾನ್ 2015ರಲ್ಲಿ ಉಧಂಪುರದಲ್ಲಿ ಭಾರತೀಯ ಬಿಎಸ್‌ಎಫ್‌ ಯೋಧರ ಬೆಂಗಾವಲು ಪಡೆಯ ಮೇಲೆ ದಾಳಿ ನಡೆಸಿದ್ದ. ಈ ದಾಳಿಯಲ್ಲಿ ಇಬ್ಬರು ಯೋಧರು ಮೃತಪಟ್ಟಿದ್ದರು. 13 ಮಂದಿ ಗಾಯಗೊಂಡಿದ್ದರು. ಈ ಬಗ್ಗೆ ಎನ್‌ಐಎ, ಬಿಎಸ್‌ಎಫ್‌ ತನಿಖೆ ನಡೆಸಿ ಆರೋಪಪಟ್ಟಿಯನ್ನೂ ಸಲ್ಲಿಸಿತ್ತು. ಇದನ್ನೂ ಓದಿ: ಭಾರತದ ವಿರುದ್ಧ ಉಗ್ರ ಚಟುವಟಿಕೆಗಳಲ್ಲಿ ಭಾಗಿ – ಖಲಿಸ್ತಾನಿ ಭಯೋತ್ಪಾದಕ ಪಾಕ್‌ನಲ್ಲಿ ಸಾವು

    ಆ ನಂತರವೂ ಉಗ್ರನ ಆಕ್ರೋಶ ಮುಂದುವರಿದಿತ್ತು. 2016ರಲ್ಲಿಯೂ ಜಮ್ಮು ಮತ್ತು ಕಾಶ್ಮೀರದ ಪಾಂಪೋರ್‌ ಪ್ರದೇಶದಲ್ಲಿ ಸಿಆರ್‌ಪಿಎಫ್ (ಕೇಂದ್ರ ಮೀಸಲು ಪೊಲೀಸ್ ಪಡೆ) ಬೆಂಗಾವಲು ಪಡೆ ಮೇಲೆ ಎಲ್‌ಇಟಿ ಭಯೋತ್ಪಾದಕ ದಾಳಿ ನಡೆಸಿ, 8 ಸಿಆರ್‌ಪಿಎಫ್ ಯೋಧರನ್ನು ಹತ್ಯೆಗೈದಿದ್ದತ್ತು. 22 ಮಂದಿ ಗಾಯಗೊಂಡಿದ್ದರು. ಈ ದಾಳಿಯಲ್ಲೂ ಹಂಝ್ಲಾ ಅದ್ನಾನ್ ಪ್ರಮುಖ ಪಾತ್ರ ವಹಿಸಿದ್ದ ಎಂದು ಅಧಿಕಾರಿ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ನೈಜೀರಿಯಾದಲ್ಲಿ ಗುರಿ ತಪ್ಪಿದ ಸೇನಾ ಡ್ರೋನ್‌ ದಾಳಿ – 85 ಮಂದಿ ನಾಗರಿಕರು ಬಲಿ

  • ಸೇನೆಯಿಂದ ಇಬ್ಬರು ಉಗ್ರರ ಅರೆಸ್ಟ್ – ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಜಪ್ತಿ

    ಸೇನೆಯಿಂದ ಇಬ್ಬರು ಉಗ್ರರ ಅರೆಸ್ಟ್ – ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಜಪ್ತಿ

    ಶ್ರೀನಗರ: ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾದ (Lashkar-e-Taiba) ಇಬ್ಬರು ಸಹಚರರನ್ನು ಭದ್ರತಾ ಪಡೆಗಳು (Indian Army) ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir) ಬಂಧಿಸಿದೆ.

    ಬಂಧಿತರನ್ನು ಶಾಹಿದ್ ಅಹ್ಮದ್ ಲೋನ್ ಹಾಗೂ ವಸೀಮ್ ಅಹ್ಮದ್ ಗನಿ ಎಂದು ಗುರುತಿಸಲಾಗಿದೆ. ಬಂಧಿತರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಇಬ್ಬರೂ ಸ್ಥಳಿಯ ನಿವಾಸಿಗಳಾಗಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರದ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: Karnataka Election 2023 | ಕರ್ನಾಟಕ ವಿಧಾನಸಭಾ ಚುನಾವಣೆಗೆ ಇಂದು ಮತದಾನ | Live Updates

    ಓರ್ವ ಉಗ್ರನಿಂದ 1 ಪಿಸ್ತೂಲ್, 1 ಪಿಸ್ತೂಲ್ ಮ್ಯಾಗಜೀನ್, 4 ಪಿಸ್ತೂಲ್ ರೌಂಡ್ಸ್, 1 ರಿವಾಲ್ವಾರ್ ಸೈಲೆನ್ಸರ್, 1 ಐಇಡಿ (IED), 1 ರಿಮೋಟ್ ಕಂಟ್ರೋಲ್, 2 ಬ್ಯಾಟರಿಗಳು, ಎಕೆ 47 ರೈಫಲ್‍ನ 1 ಖಾಲಿ ಮ್ಯಾಗಜೀನ್ ಹಾಗೂ ಇನ್ನಿತರ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಮತ್ತೋರ್ವನಿಂದ 1 ಎಕೆ ಸಿರೀಸ್ ರೈಫಲ್, 1 ಮ್ಯಾಗಜೀನ್ ಮತ್ತು 10 ಸುತ್ತಿನ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಏ. 20ರಂದು ಕಾಶ್ಮೀರದ ಪೂಂಚ್ ಸೆಕ್ಟರ್‍ನಲ್ಲಿ ಸೇನಾ ವಾಹಾನದ ಮೇಲೆ ಉಗ್ರರು ದಾಳಿ ನಡೆಸಿ ಐವರು ಯೋಧರನ್ನು ಹತ್ಯೆಗೈದಿದ್ದರು. ಈ ವೇಳೆ ಭದ್ರತಾ ಪಡೆ, ಉಗ್ರರಿಗೆ ಸ್ಥಳೀಯರು ಸಹಕಾರ ನೀಡಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ಜಮ್ಮು ಕಾಶ್ಮೀರದ ವಿವಿಧ ಪ್ರದೇಶಗಳಲ್ಲಿ ಸೇನೆ ಕಾರ್ಯಚರಣೆ ಆರಂಭಿಸಿತ್ತು. ಇದನ್ನೂ ಓದಿ: ಉಗ್ರರ ಜೊತೆ ಸ್ಥಳೀಯರ ಶಾಮೀಲು – ಜಮ್ಮು ಕಾಶ್ಮೀರದಲ್ಲಿ 15 ಕಡೆ ಎನ್‍ಐಎ ಶೋಧ