Tag: lesbians

  • ಲಿಂಗ ಬದಲಾವಣೆ ನೆಪದಲ್ಲಿ ತಂತ್ರಿಯಿಂದ ಸಲಿಂಗಕಾಮಿ ಮಹಿಳೆ ಹತ್ಯೆ

    ಲಿಂಗ ಬದಲಾವಣೆ ನೆಪದಲ್ಲಿ ತಂತ್ರಿಯಿಂದ ಸಲಿಂಗಕಾಮಿ ಮಹಿಳೆ ಹತ್ಯೆ

    – ಸ್ನೇಹಿತೆ ಮತ್ತು ಆಕೆಯ ತಾಯಿಯಿಂದಲೇ ಕೃತ್ಯ

    ಲಕ್ನೋ: ಲಿಂಗ ಬದಲಾವಣೆ (Gender Change) ನೆಪದಲ್ಲಿ ತಂತ್ರಿಯೋರ್ವ (Tantri) ಸಲಿಂಗಕಾಮಿಯ (Lesbian) ಹತ್ಯೆಗೈದಿರುವ ಘಟನೆ ಉತ್ತರಪ್ರದೇಶದಲ್ಲಿ (Uttara Pradesh) ನಡೆದಿದೆ.

    ಆರ್‌ಸಿ ಮಿಷನ್ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಪ್ರಿಯಾ (30) ಹತ್ಯೆಯಾದ ಮಹಿಳೆ. ಈಕೆ ಪುವಾಯನ್ ನಿವಾಸಿಯಾದ ಪ್ರೀತಿ (24) ಎಂಬವಳೊಂದಿಗೆ ಸ್ನೇಹ ಬೆಳೆಸಿದ್ದು, ಅವರಿಬ್ಬರ ಸ್ನೇಹ ಸಲಿಂಗ ಸಂಬಂಧವಾಗಿ ಪರಿವರ್ತನೆಯಾಗಿತ್ತು. ಅಲ್ಲದೇ ಪ್ರಿಯಾ ಜೊತೆಗಿನ ಸಂಬಂಧ ಬೆಳಕಿಗೆ ಬಂದ ಬಳಿಕ ಪ್ರೀತಿಗೆ ಬೇರೆಯವರನ್ನು ಮದುವೆಯಾಗಲು ಸಾಧ್ಯವಾಗುತ್ತಿರಲಿಲ್ಲ ಎಂದು ಪೊಲೀಸ್ ವರಿಷ್ಠಾಧಿಕಾರಿ ಎಸ್ ಆನಂದ್ ತಿಳಿಸಿದ್ದಾರೆ. ಇದನ್ನೂ ಓದಿ: ಅನಾಥ ಬಾಲಕಿ ಮೇಲೆ ಆಶ್ರಮದಲ್ಲೇ ತಿಂಗಳುಗಳಿಂದ ಅತ್ಯಾಚಾರ – ಆಂಧ್ರದ ಸ್ವಾಮೀಜಿ ಅರೆಸ್ಟ್

    ಈ ಹಿನ್ನೆಲೆ ಪ್ರೀತಿ ಮತ್ತು ಆಕೆಯ ತಾಯಿ ಊರ್ಮಿಳ ಮೊಹಮ್ಮದಿ ಪ್ರದೇಶದ ನಿವಾಸಿಯಾದ ರಾಮನಿವಾಸ್ ಎಂಬ ತಂತ್ರಿಯನ್ನು ಭೇಟಿ ಮಾಡಿ ಪ್ರಿಯಾಳನ್ನು ಕೊಲ್ಲಲು (Murder) ಯೋಜನೆ ರೂಪಿಸಿದ್ದರು ಎನ್ನಲಾಗಿದೆ. ಅಲ್ಲದೇ ಪ್ರಿಯಾ ತನ್ನ ಲಿಂಗವನ್ನು ಬದಲಾಯಿಸಿಕೊಂಡು ಪುರುಷನಾಗಿ ಬದಲಾಗಲು ಬಯಸಿದ್ದಳು. ಇದರ ಲಾಭ ಪಡೆದ ಪ್ರೀತಿಯ ತಾಯಿ ಪ್ರಿಯಾಳನ್ನು ಕೊಲ್ಲುವ ಸಲುವಾಗಿ ತಂತ್ರಿಗೆ 1.5 ಲಕ್ಷ ರೂ. ನೀಡುವುದಾಗಿ ಆಮಿಷವೊಡ್ಡಿದ್ದಳು. ಇದನ್ನೂ ಓದಿ: 17,500 ರೂ. ಕೊಟ್ಟು ಫೇಶಿಯಲ್ ಮಸಾಜ್ ಮಾಡಿಸಿಕೊಂಡ ಯುವತಿ- ಮುಂದೇನಾಯ್ತು..?

    ನಂತರ ಪ್ರೀತಿ ಪ್ರಿಯಾಳಿಗೆ ಕರೆ ಮಾಡಿ ತಂತ್ರಿ ಆಕೆಯ ಲಿಂಗವನ್ನು ಬದಲಾಯಿಸುವುದಾಗಿ ಹೇಳಿ ನಂಬಿಸಿದ್ದಾಳೆ. ಇದನ್ನು ನಂಬಿದ ಪ್ರಿಯಾ ತನ್ನ ಮನೆಯಿಂದ ಹೊರಟು ನಾಪತ್ತೆಯಾಗಿದ್ದಳು. ಪ್ರಿಯಾ ನಾಪತ್ತೆಯಾದ ಹಿನ್ನೆಲೆ ಆಕೆಯ ಮನೆಯವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಆರಂಭಿಸಿದ್ದರು. ಇದನ್ನೂ ಓದಿ: ನಾಯಿ ರೀತಿ ಬೊಗಳು: ಹಿಂದೂ ಯುವಕನಿಗೆ ಅವಹೇಳನ ಮಾಡಿದ ಮೂವರು ಅರೆಸ್ಟ್ – ಮನೆ ಧ್ವಂಸ

    ಮಾಹಿತಿ ಆಧಾರದ ಮೇಲೆ ತಂತ್ರಿ ರಾಮನಿವಾಸ್‌ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ನಿಜಾಂಶ ಒಪ್ಪಿಕೊಂಡಿದ್ದಾನೆ. ಪುರುಷನನ್ನಾಗಿ ಪರಿವರ್ತಿಸುವ ನೆಪದಲ್ಲಿ ಪ್ರಿಯಾಳನ್ನು ಕಾಡಿಗೆ ಕರೆದೊಯ್ದು ನದಿಯ ದಡದಲ್ಲಿ ಕಣ್ಣುಮುಚ್ಚಿ ಮಲಗುವಂತೆ ತಂತ್ರಿ ಹೇಳಿದ್ದಾನೆ. ಆಕೆ ಆತನ ಮಾತನ್ನು ಒಪ್ಪಿ ಕಣ್ಣುಮುಚ್ಚಿ ಮಲಗಿದ್ದ ವೇಳೆ ಸುತ್ತಿಗೆ (Hammer) ಸಹಾಯದಿಂದ ಆಕೆಯ ಕುತ್ತಿಗೆ ಸೀಳಿ ಹತ್ಯೆ ಮಾಡಿದ್ದಾನೆ. ಇದನ್ನೂ ಓದಿ: ಫೋನ್‍ನಲ್ಲಿ ಮಾತನಾಡುತ್ತಾ ಬಸ್ ಓಡಿಸಿದ ಚಾಲಕ- 26 ಮಂದಿಗೆ ಗಾಯ, ಇಬ್ಬರು ಗಂಭೀರ

    ಆರೋಪಿ ತಂತ್ರಿ ನೀಡಿದ ಮಾಹಿತಿಯ ಮೇರೆಗೆ ಮೃತ ಪ್ರಿಯಾಳ ಸ್ನೇಹಿತೆ ಪ್ರೀತಿಯನ್ನು ಮಂಗಳವಾರ ಬಂಧಿಸಿದ್ದು, ಇಬ್ಬರನ್ನೂ ಜೈಲಿಗೆ ಕಳುಹಿಸಲಾಗಿದೆ. ಅಲ್ಲದೇ ಹತ್ಯೆಗೆ ಬಳಸಿದ್ದ ಸುತ್ತಿಗೆಯನ್ನು ತಂತ್ರಿಯ ಮನೆಯಿಂದ ವಶಪಡಿಸಿಕೊಳ್ಳಲಾಗಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಕಿಡ್ನಾಪ್ ಕಥೆ ಕಟ್ಟಿ ಸ್ನೆಹಿತನೊಂದಿಗೆ ಅಪ್ರಾಪ್ತೆ ಪರಾರಿ

  • 6 ವರ್ಷ ಪ್ರೀತಿಸಿ ಗಂಡಂದಿರಿಗೆ ವಿಚ್ಛೇದನ ನೀಡಿ ಕೊನೆಗೂ ಒಂದಾದ ಲೆಸ್ಬಿಯನ್‍ಗಳು!

    6 ವರ್ಷ ಪ್ರೀತಿಸಿ ಗಂಡಂದಿರಿಗೆ ವಿಚ್ಛೇದನ ನೀಡಿ ಕೊನೆಗೂ ಒಂದಾದ ಲೆಸ್ಬಿಯನ್‍ಗಳು!

    ಲಕ್ನೋ: 6 ವರ್ಷಗಳಿಂದ ಪ್ರೀತಿಸುತ್ತಿದ್ದ ಇಬ್ಬರು ಲೆಸ್ಬಿಯನ್ ಮಹಿಳೆಯರು ಕೊನೆಗೂ ತಮ್ಮ ಗಂಡಂದಿರಿಗೆ ವಿಚ್ಛೇದನ ನೀಡಿ ಶನಿವಾರ ದೇವಾಲಯವೊಂದರಲ್ಲಿ ಸರಳವಾಗಿ ವಿವಾಹವಾಗಿದ್ದಾರೆ.

    ಉತ್ತರಪ್ರದೇಶದ ಹಮೀರ್‌ಪುರದ 24 ಮತ್ತು 26 ವರ್ಷದ ಮಹಿಳೆಯರು ಬುಂದೇಲ್‍ಖಂಡ್ ಪ್ರದೇಶದಲ್ಲಿರುವ ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ. ಕಳೆದ ಆರು ವರ್ಷಗಳಿಂದ ಉತ್ತರ ಪ್ರದೇಶದ ಇಬ್ಬರು ಮಹಿಳೆಯರು ಪ್ರೀತಿಸುತ್ತಿದ್ದರು. ಆದರೆ ಮನೆಯವರ ಒತ್ತಾಯಕ್ಕೆ ಇಬ್ಬರು ದೂರವಾಗಿದ್ದರು. ಪ್ರೀತಿಯಿಂದ ದೂರವಿರಲು ಆಗದೇ ಕೊನೆಗೂ ಇಬ್ಬರು ಮದುವೆಯಾಗಿದ್ದಾರೆ. ಆದ್ರೆ ಅವರ ಮದುವೆ ನೋಂದಣಿ ಮಾಡಿಕೊಳ್ಳಲು ಅಧಿಕಾರಿಗಳು ನಿರಾಕರಿಸಿದ್ದಾರೆ.

    ಆರು ವರ್ಷಗಳ ಹಿಂದೆ ಕಾಲೇಜಿನಲ್ಲಿ ಓದುತ್ತಿದ್ದ ವೇಳೆ ಇಬ್ಬರಿಗೂ ಪ್ರೇಮಾಂಕುರವಾಗಿತ್ತು. ಆಗಿನಿಂದಲೂ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಆದ್ರೆ ಪಾಲಕರಿಗೆ ಈ ವಿಷಯ ತಿಳಿದಾಗ ಇಬ್ಬರ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿ ಯುವಕರ ಜೊತೆ ಮದುವೆ ಮಾಡಿಸಿದ್ದರು.

    ಕಾಲೇಜು ಬಿಟ್ಟ ಆರು ತಿಂಗಳಿಗೆ ನಮಗೆ ಬೇರೆಯವರ ಜೊತೆ ವಿವಾಹವಾಗಿತ್ತು. ಆದರೂ ಒಬ್ಬರನ್ನೊಬ್ಬರು ಮರೆತಿರಲಿಲ್ಲ. ಹೀಗಾಗಿ ಇಬ್ಬರೂ ಕೂಡ ಪತಿಗೆ ವಿಚ್ಛೇದನ ನೀಡಿ ಒಂದಾಗಿದ್ದೇವೆ ಎಂದು ನವ ವಿವಾಹಿತ ಸಲಿಂಗಿ ಜೋಡಿ ಹೇಳಿಕೊಂಡಿದೆ. ವಿಚ್ಛೇದನ ನೀಡಿದ ದಾಖಲೆಗಳನ್ನು ಸಲ್ಲಿಸದ ಕಾರಣ ವಿವಾಹ ನೋಂದಣಿ ಆಗಿಲ್ಲ.

    ಸಲಿಂಗಿ ಜೋಡಿ ಪರ ಇರುವ ವಕೀಲ ದಯಾ ಶಂಕರ್ ತಿವಾರಿ ಮಾತನಾಡಿ, ಒಂದೇ ಲಿಂಗದವರ ವಿವಾಹ ನೋಂದಣಿಗೆ ಯಾವುದೇ ಸರ್ಕಾರಿ ಆದೇಶ ಇಲ್ಲವೆಂದು ವಿವಾಹ ನೋಂದಣಿ ಮಾಡಲು ನಿರಾಕರಿಸಿದ್ದಾರೆ. ಇದು ತಪ್ಪು ಈ ಕುರಿತು ಹೋರಾಡುತ್ತೇವೆ ಎಂದು ತಿಳಿಸಿದ್ದಾರೆ.

    ಸುಪ್ರೀಂ ಹೇಳಿದ್ದು ಏನು?
    ಐಪಿಸಿ ಸೆಕ್ಷನ್ 377ರ ಪ್ರಕಾರ ಯಾವುದೇ ವ್ಯಕ್ತಿ, ಮಹಿಳೆ ಅಥವಾ ಪ್ರಾಣಿಗಳೊಂದಿಗೆ ನಿಸರ್ಗಕ್ಕೆ ವಿರುದ್ಧವಾಗಿ ಲೈಂಗಿಕ ಕ್ರಿಯೆ ನಡೆಸಿದರೆ, ಅದು ಅಪರಾಧವಾಗಿತ್ತು. ಇಂತಹ ಅಪರಾಧಕ್ಕೆ ಜೀವಾವಧಿ ಶಿಕ್ಷೆ ಅಥವಾ 10 ವರ್ಷ ಜೈಲು ಹಾಗೂ ದಂಡ ವಿಧಿಸಬಹುದಾಗಿತ್ತು. 2018ರ ಸೆಪ್ಟೆಂಬರ್ ನಲ್ಲಿ ಸುಪ್ರೀಂ ಕೋರ್ಟ್ ಭಾರತದಲ್ಲಿ ಸಲಿಂಗಕಾಮ ಅಪರಾಧ ಎಂದು ಪರಿಗಣಿಸುವ ಐಪಿಸಿ ಸೆಕ್ಷನ್ 377 ಅನ್ನು ರದ್ದುಗೊಳಿಸಿತ್ತು.

    ಸಲಿಂಗಕಾಮ ಅಪರಾಧ ಎಂದು ಪರಿಗಣಿಸುವ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 377ರ ಸಿಂಧುತ್ವ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳಿಗೆ ಸಂಬಂಧಿಸಿದಂತೆ ಕೋರ್ಟ್ ಈ ತೀರ್ಪು ಪ್ರಕಟಿಸಿತ್ತು. ಕಾಲದ ಜೊತೆ ಕಾನೂನು ಕೂಡ ಬದಲಾಗಬೇಕು ಎಂದು ಹೇಳಿ ಐಪಿಸಿ 377 ಅನ್ನು ಅಸಿಂಧುಗೊಳಿಸಿತ್ತು. ಈ ಮೂಲಕ 156 ವರ್ಷದ ಹಿಂದಿನ ಬ್ರಿಟಿಷ್ ಕಾನೂನು ರದ್ದಾಗಿತ್ತು.

    ಕೇಂದ್ರ ಸರ್ಕಾರ ಸೆಕ್ಷನ್ 377ರ ರದ್ದತಿ ವಿಚಾರವನ್ನು ನ್ಯಾಯಾಲಯದ ವಿವೇಚನೆಗೆ ಬಿಡುವುದಾಗಿ ಹೇಳಿತ್ತು. ಆದರೆ ಸಲಿಂಗ ವಿವಾಹ ಮತ್ತು ಕೆಲವು ಹಕ್ಕುಗಳ ವಿಚಾರದಲ್ಲಿ ಗೊಂದಲ ಉಂಟಾಗಬಹುದು ಎಂಬ ಕಳವಳವನ್ನು ವ್ಯಕ್ತಪಡಿಸಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv