Tag: Leopards

  • ಸಫಾರಿಗರಿಗೆ ಒಟ್ಟಿಗೆ ದರ್ಶನ ನೀಡಿದ 3 ಚಿರತೆಗಳು: ಅಪರೂಪದ ದೃಶ್ಯ ಸೆರೆ!

    ಸಫಾರಿಗರಿಗೆ ಒಟ್ಟಿಗೆ ದರ್ಶನ ನೀಡಿದ 3 ಚಿರತೆಗಳು: ಅಪರೂಪದ ದೃಶ್ಯ ಸೆರೆ!

    ಚಾಮರಾಜನಗರ: ಚಿರತೆ ಎಂದಾಕ್ಷಣ ರಸ್ತೆ ದಾಟುವುದು, ಮರದ ಮೇಲೆ ಬೇಟೆಯಾಡಿದ ಆಹಾರವನ್ನು ತಿನ್ನುವ ದೃಶ್ಯ ಸಾಮಾನ್ಯ. ಆದರೆ ಒಟ್ಟಿಗೆ ಮೂರು ಚಿರತೆಗಳು ಕಾಣಿಸಿಕೊಂಡಿರುವ ರೋಮಾಂಚಕ ಘಟನೆಯೊಂದು ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಸಫಾರಿ ವೇಳೆ ಈ ಘಟನೆ ನಡೆದಿದೆ. ವನ್ಯಜೀವಿ ಛಾಯಾಗ್ರಾಹಕ ಅಬ್ದುಲ್ ಶೇಜ್ ಎಂಬವರ ಕ್ಯಾಮರಾ ಕಣ್ಣಿಗೆ ಅಪರೂಪದ ದೃಶ್ಯ ಸೆರೆಯಾಗಿದೆ. 14 ಸೆಕೆಂಡ್‌ಗಳ ಈ ವೀಡಿಯೋ ಇದಾಗಿದ್ದು, ಸಫಾರಿಗರನ್ನೇ ಚಿರತೆಗಳು ದಿಟ್ಟಿಸಿ ನೋಡುತ್ತಿರುವ ದೃಶ್ಯ ಸೆರೆಯಾಗಿದೆ.

    ವೀಡಿಯೋದಲ್ಲಿ ಏನಿದೆ?: ಮರವೊಂದರ ರೆಂಬೆಯ ಮೇಲೆ 3 ಚಿರತೆಗಳು ಒಟ್ಟಿಗೆ ಕುಳಿತುಕೊಂಡಿದೆ. ಸಫಾರಿಗರನ್ನೇ ಈ 3 ಚಿರತೆಗಳು ಕೆಲವು ಸೆಕೆಂಡ್‌ಗಳ ಕಾಲ ದಿಟ್ಟಿಸಿ ನೋಡುತ್ತಿದೆ. ನಂತರದಲ್ಲಿ ಒಂದು ಚಿರತೆ ರೆಂಬೆಯಿಂದ ಕೆಳಗೆ ಇಳಿಯುತ್ತದೆ. ಮತ್ತೆರಡು ಚಿರತೆಗಳು ಆ ಚಿರತೆಯನ್ನು ನೋಡುವ ದೃಶ್ಯ ಸೆರೆಯಾಗಿದೆ. ಇದನ್ನೂ ಓದಿ: ಮಾಧುಸ್ವಾಮಿ ವಿರುದ್ಧ ಮಾತಾಡಿಲ್ಲ, ಅಧಿಕಾರಿಗಳಿಗೆ ಛೀಮಾರಿ ಹಾಕಿ ಅಂದೆ ಅಷ್ಟೇ: ಬಸವರಾಜ್

    ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಸಫಾರಿಗರಿಗೆ ವನ್ಯಪ್ರಾಣಿಗಳು ಸಖತ್ ದರ್ಶನ ಕೊಡುತ್ತಿದೆ. ಹುಲಿ, ಆನೆ ಹಿಂಡುಗಳು ಕೂಡ ಪ್ರವಾಸಿಗರ ಕಣ್ಣಿಗೆ ಆಗಾಗ್ಗೆ ಕಾಣಿಸಿಕೊಳ್ಳುತ್ತಿವೆ. ಇದನ್ನೂ ಓದಿ: ಜಾರ್ಖಂಡ್‍ ಭೀಕರ ರಸ್ತೆ ಅಪಘಾತ- ಮೃತರ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಘೋಷಣೆ

  • ಮಠದ ಆವರಣದಲ್ಲಿ ರಾಜಾರೋಷವಾಗಿ ಓಡಾಡಿದ ಚಿರತೆಗಳು

    ಮಠದ ಆವರಣದಲ್ಲಿ ರಾಜಾರೋಷವಾಗಿ ಓಡಾಡಿದ ಚಿರತೆಗಳು

    ಹಾಸನ: ಜೈನ ಮಠದ ಆವರಣದಲ್ಲಿ ಎರಡು ಚಿರತೆಗಳು ರಾಜಾರೋಷವಾಗಿ ಓಡಾಡಿರುವ ವಿಡಿಯೋ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳದಲ್ಲಿ ಎರಡು ಚಿರತೆ ಪ್ರತ್ಯಕ್ಷವಾಗಿದ್ದು, ಚಿರತೆಗಳ ಸಂಚಾರ ಸಿಸಿ ಕ್ಯಾಮೆರಾದಲ್ಲಿ ಸೆರೆ ಸಿಕ್ಕಿದೆ. ಜೂನ್ 9ರಂದು ಮಧ್ಯರಾತ್ರಿ 2.40ರ ಸುಮಾರಿಗೆ ಚಿರತೆಗಳು ಮಠದ ಆವರಣದಲ್ಲಿ ಓಡಾಟ ನಡೆಸಿವೆ.

    ಒಟ್ಟೊಟ್ಟಿಗೆ ಎರಡು ಚಿರತೆಗಳ ಓಡಾಟದಿಂದ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಕೆಲ ತಿಂಗಳ ಹಿಂದೆ ಕೂಡ ಇದೇ ಏರಿಯಾದಲ್ಲಿ ಚಿರತೆ ಕಾಣಿಸಿಕೊಂಡಿದ್ದವು. ಇದೀಗ ಮತ್ತೆ ಎರಡು ಚಿರತೆಗಳು ಕಾಣಿಸಿಕೊಂಡಿರುವುದರಿಂದ ಜನರಲ್ಲಿ ಆತಂಕ ಮನೆ ಮಾಡಿದೆ. ಕೂಡಲೇ ಅರಣ್ಯ ಇಲಾಖೆಯವರು ಚಿರತೆಗಳನ್ನು ಸೆರೆ ಹಿಡಿದು ಸ್ಥಳಾಂತರ ಮಾಡಲು ಗ್ರಾಮಸ್ಥರು ಆಗ್ರಹಿಸಿದ್ದಾರೆ.

  • ಬಾಲಕನನ್ನ ಬಲಿ ಪಡೆದಿದ್ದ ನರ ಭಕ್ಷಕ ಚಿರತೆಯ ಚಲನವಲನ ಕ್ಯಾಮೆರಾದಲ್ಲಿ ಸೆರೆ

    ಬಾಲಕನನ್ನ ಬಲಿ ಪಡೆದಿದ್ದ ನರ ಭಕ್ಷಕ ಚಿರತೆಯ ಚಲನವಲನ ಕ್ಯಾಮೆರಾದಲ್ಲಿ ಸೆರೆ

    ತುಮಕೂರು: ಗುಬ್ಬಿ ತಾಲೂಕಿನ ಮಣ್ಣಿಕುಪ್ಪೆ ಗ್ರಾಮದಲ್ಲಿ ಬಾಲಕನನ್ನ ಬಲಿ ಪಡೆದಿದ್ದ ನರ ಭಕ್ಷಕ ಚಿರತೆಗಳ ಚಲನವಲನ ಅರಣ್ಯ ಇಲಾಖೆ ಇರಿಸಿದ್ದ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ತುಮಕೂರಿನ ಬನ್ನಿಕುಪ್ಪೆ-ಕುಣಿಗಲ್ ದೊಡ್ಡ ಮಳಲವಾಡಿ ಅರಣ್ಯ ಪ್ರದೇಶದಲ್ಲಿ ಇರಿಸಿದ್ದ ಕ್ಯಾಮೆರಾದಲ್ಲಿ ಚಿರತೆಗಳ ಚಲನವಲನ ಸೆರೆಯಾಗಿದೆ. ಒಟ್ಟು ಮೂರು ವಿಭಾಗದಿಂದ ನಾಲ್ಕು ಚಿರತೆಯ ಚಿತ್ರ ದೊರೆತಿದ್ದು, ಒಂದು ಹೆಣ್ಣು, ಒಂದು ಗಂಡು ಎರಡು ಮದ್ಯ ವಯಸ್ಸಿನ ಚಿರತೆ ಎಂದು ಪತ್ತೆಹಚ್ಚಲಾಗಿದೆ. ಕಳೆದ ರಾತ್ರಿಯಿಂದ ಮುಂಜಾನೆಯವರೆಗೂ ಚಿರತೆಯ ಚಲನವಲನ ಸೆರೆಯಾಗಿದೆ.

    ಈ ನಡುವೆ ಮೂರನೇ ದಿನವಾದ ಇಂದು ಅರಣ್ಯ ಇಲಾಖೆ ಕೂಂಬಿಂಗ್ ಮುಂದುವರಿಸಿದೆ. ಗುಬ್ಬಿ ತಾಲೂಕಿನ ಮಣ್ಣಿಕುಪ್ಪೆ, ಸಿಎಸ್ಪುರ, ಮಾವಿನಹಳ್ಳಿ, ಹೆಬ್ಬೂರು ಹೋಬಳಿಗಳ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದ್ದಾರೆ.

    ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶಂಕರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಗಿರೀಶ್ ನೇತೃತ್ವದಲ್ಲಿ ಸುಮಾರು 60ಕ್ಕೂ ಹೆಚ್ಚು ಸಿಬ್ಬಂದಿ ಕೂಂಬಿಂಗ್ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಈ ಪ್ರದೇಶಗಳಲ್ಲಿ 20 ಬೋನ್‍ಗಳನ್ನ ಇಟ್ಟು ನರಭಕ್ಷಕ ಚಿರತೆಗಳಿಗೆ ಖೆಡ್ಡಾ ತೋಡಿದ್ದಾರೆ.

    ನಡೆದಿದ್ದು ಏನು?

    ಗುರುವಾರ ಸಂಜೆ ನರಭಕ್ಷಕ ಚಿರತೆ 5 ವರ್ಷದ ಬಾಲಕನನ್ನು ಗುಬ್ಬಿ ತಾಲೂಕು ಮಣಿಕುಪ್ಪೆಯಲ್ಲಿ ಬಲಿ ತಗೆದುಕೊಂಡಿತ್ತು. ದನ ಮೇಯಿಸಲು ಹೊಲಕ್ಕೆ ತೆರಳಿದ್ದ ತಂದೆ ಶಿವಕುಮಾರ್, ತಾಯಿ ಪುಷ್ಪಲತಾ ಜತೆ ಹಠವಿಡಿದು ಬಾಲಕ ಸಮರ್ಥ ಗೌಡ(5) ಕೂಡ ತೆರಳಿದ್ದನು. ಅಲ್ಲೇ ಪಕ್ಕದಲ್ಲಿ ಆಟವಾಡುವಾಗ ಕಿರಾತಕ ಚಿರತೆ ಏಕಾಏಕಿ ದಾಳಿ ನಡೆಸಿ ಬಾಲಕನ ರಕ್ತಹೀರಿತ್ತು.

    ಘಟನೆಯಿಂದ ಸ್ಥಳೀಯರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಚಿರತೆ ಸಮರ್ಥ್ ಗೌಡನ ಕುತ್ತಿಗೆಗೆ ಬಾಯಿಹಾಕಿ ರಕ್ತ ಹೀರುವ ಸಂದರ್ಭದಲ್ಲಿ ಅಪ್ಪ, ಅಮ್ಮ ಎಂದು ಕಣ್ಣೀರಿಟ್ಟಿದ್ದರು. ತಮ್ಮ ಕಣ್ಣೆದುರೇ ಇದ್ದ ಒಬ್ಬನೇ ಮಗ ಚಿರತೆಗೆ ಆಹಾರವಾಗುತ್ತಿದ್ದನ್ನು ಕಂಡು ಚೀರಾಡಿ ಸಹಾಯಕ್ಕೆ ಧಾವಿಸುವಷ್ಟರಲ್ಲಿ ಚಿರತೆ ಅರಣ್ಯದ ಒಳಗಡೆ ಜಿಗಿದು ಕಣ್ಮರೆಯಾಗಿತ್ತು.

    ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದು ಪಾಲಕರ ಆಕ್ರಂದನ ಮುಗಿಲು ಮುಟ್ಟಿತ್ತು. ಪುಟಾಣಿ ಬಾಲಕನ ಶವ ಕಂಡು ಸ್ಥಳೀಯರು ಮರುಗಿದ್ದರು. ಚಿರತೆ ಹಿಡಿಯಲಾಗದ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿದ್ದರು.

    ಇದೇ ಚಿರತೆ ಹೆಬ್ಬೂರು ಹೋಬಳಿ ಬನ್ನಿಕುಪ್ಪೆ ಲಕ್ಷ್ಮಮ್ಮ, ಕುಣಿಗಲ್ ತಾಲೂಕು ದೊಡ್ಡಮರಳವಾಡಿ ಆನಂದಯ್ಯ ಎಂಬುವವರನ್ನು ತಿಂದು ಮುಗಿಸಿದ ಘಟನೆ ಹಸಿರಾಗಿರುವಾಗಲೇ ಈಗ ಮತ್ತೊಂದು ಭಯಾನಕ ಘಟನೆ ನಡೆದಿತ್ತು.

    ದನ ಕಾಯಲು ತೆರಳುವಾಗ ನಾನು ಬರುತ್ತೇನೆ ಎಂದು ಹಠವಿಡಿದು ಬಂದ ಮುದ್ದು ಕಂದ ಸಮರ್ಥ್ ಗೌಡನನ್ನು ಆತನ ತಾಯಿ ಪುಷ್ಪಲತಾ ಎಚ್ಚರಿಕೆಯಿಂದಲೇ ಎತ್ತಿಕೊಂಡು ಜೋಪಾನ ಮಾಡಿದ್ದರು. ಪೊದೆಯಲ್ಲಿ ಚಿರತೆಯಿರುವುದನ್ನು ಗ್ರಹಿಸಿ ಬೆಚ್ಚಿ ಓಡಿಹೋದ ಹಸುಗಳನ್ನು ನೋಡಲು ಮಗು ಕೆಳಗಿಳಿಸಿ ಸ್ವಲ್ಪ ದೂರ ಹೋಗಿದ್ದೇ ತಡ ನರ ಭಕ್ಷಕ ಚಿರತೆ ಪುಟಾಣಿ ಕಂದನ ರಕ್ತ ಹೀರಿತ್ತು. ಅಪಾಯ ಅರಿತು ಕೆಲವೇ ನಿಮಿಷದಲ್ಲಿ ತಾಯಿ ವಾಪಸಾದರೂ ಕಾಲ ಮಿಂಚಿ ಹೋಗಿತ್ತು.

  • ಅಮಚವಾಡಿ ಬಳಿ ಚಿರತೆಗಳು ಪ್ರತ್ಯಕ್ಷ – ಬೆಚ್ಚಿಬಿದ್ದ ಜನ

    ಅಮಚವಾಡಿ ಬಳಿ ಚಿರತೆಗಳು ಪ್ರತ್ಯಕ್ಷ – ಬೆಚ್ಚಿಬಿದ್ದ ಜನ

    ಚಾಮರಾಜನಗರ: ಎರಡು ಚಿರತೆಗಳು ಚಾಮರಾಜನಗರ ತಾಲೂಕಿನ ಅಮಚವಾಡಿ ಬಳಿ ಪ್ರತ್ಯಕ್ಷವಾಗಿದ್ದು, ಇದನ್ನು ನೋಡಿದ ಜನರು ಬೆಚ್ಚಿಬಿದ್ದಿದ್ದಾರೆ.

    ಅಮಚವಾಡಿಯಿಂದ ಎಣ್ಣೆ ಹೊಳೆ ಹೊಸಕೆರೆ ಮಾರ್ಗವಾಗಿ ಮಹದೇಶ್ವರ ಕಾಲೋನಿಗೆ ಹೋಗುವ ರಸ್ತೆ ಮಧ್ಯದಲ್ಲೇ ಎರಡು ಚಿರತೆಗಳು ಕಂಡುಬಂದಿದ್ದು, ಬುಧವಾರ ರಾತ್ರಿ 9 ಗಂಟೆಯ ವೇಳೆ ಚಿರತೆಗಳು ಕಾಣಿಸಿಕೊಂಡಿದೆ. ಎರಡು ಚಿರತೆಗಳು ಆಟವಾಡುತ್ತಿದ್ದ ದೃಶ್ಯವನ್ನು ವಾಹನ ಸವಾರರೊಬ್ಬರು ವಿಡಿಯೋ ಕೂಡ ಮಾಡಿದ್ದಾರೆ. ಬಳಿಕ ವಾಹನಗಳ ಸದ್ದಿಗೆ ಎರಡೂ ಚಿರತೆಗಳು ರಸ್ತೆಯಿಂದ ಓಡಿಹೋಯಿತು ಎಂದು ಸ್ಥಳೀಯರು ತಿಳಿಸಿದರು.

    ಹಿಂದೊಮ್ಮೆ ಇದೇ ರಸ್ತೆಯಲ್ಲಿ ಚಿರತೆಯೊಂದು ಕಾಣಿಸಿಕೊಂಡಿತ್ತು. ಆಗ ಭಯಗೊಂಡ ಸ್ಥಳಿಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆ ಅರಣು ಇಲಾಖೆ ಸಿಬ್ಬಂದಿ ಚಿರತೆ ಸೆರೆಗೆ ಬೋನು ಇಟ್ಟಿದ್ದರು. ಆದರೆ ಯಾವುದೇ ಚಿರತೆ ಸೆರೆ ಸಿಕ್ಕರಲಿಲ್ಲ.

    ಎಣ್ಣೆ ಹೊಳೆ ಕೆರೆಯಲ್ಲಿ ನೀರಿರುವುದು ಹತ್ತಿರದಲ್ಲೇ ಜಾಲಿಮುಳ್ಳಿನ ಪೊದೆ, ಗುಡ್ಡ, ಕ್ವಾರಿಗಳಿರುವುದು ಚಿರತೆಗಳ ಇರುವಿಕೆಗೆ ಹೇಳಿ ಮಾಡಿಸಿದಂತಿದೆ. ಹೀಗಾಗಿ ಈ ಭಾಗದಲ್ಲಿ ಚಿರತೆಗಳು ಆಗಾಗ ಕಾಣಿಸಿಕೊಳ್ಳುತ್ತದೆ. ಮಹದೇಶ್ವರ ಕಾಲೋನಿ ಜನ ಈ ರಸ್ತೆಯಲ್ಲಿ ಹೆಚ್ಚು ತಿರುಗಾಡುವುದರಿಂದ ಚಿರತೆ ಕಾಣಿಸಿಕೊಂಡಿರುವ ಬಗ್ಗೆ ತಿಳಿದು ಭಯಗೊಂಡಿದ್ದಾರೆ. ಹೀಗಾಗಿ ಅರಣ್ಯ ಇಲಾಖೆ ಅವರು ಈ ಬಗ್ಗೆ ಕ್ರಮ ತೆಗೆದುಕೊಂಡು ಸ್ಥಳೀಯರ ಭಯವನ್ನು ದೂರ ಮಾಡಬೇಕಿದೆ.