Tag: leonardo dicaprio

  • ಭಾರತೀಯ ಮೂಲದ ಮಾಡೆಲ್ ಜೊತೆ ಟೈಟಾನಿಕ್ ಹೀರೋ ಡೇಟಿಂಗ್

    ಭಾರತೀಯ ಮೂಲದ ಮಾಡೆಲ್ ಜೊತೆ ಟೈಟಾನಿಕ್ ಹೀರೋ ಡೇಟಿಂಗ್

    ಹಾಲಿವುಡ್ ನ ಖ್ಯಾತ ನಟ, ಟೈಟಾನಿಕ್ ಚಿತ್ರದ ಹೀರೋ ಲಿಯೋನಾರ್ಡೊ ಡಿಕ್ಯಾಪ್ರಿಯೋ ಇದೀಗ ಭಾರತೀಯ ಮೂಲಕ ಮಾಡೆಲ್ ನೀಲಂ ಗೀಲ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಅನ್ನು ವಿಚಾರ ಹಾಲಿವುಡ್ ರಂಗದಲ್ಲಿ ಗಿರಕಿ ಹೊಡೆಯುತ್ತಿದೆ. ಪದೇ ಪದೇ ನೀಲಂ ಗೀಲ್ ಜೊತೆ ಲಿಯೋನಾರ್ಡೊ ಕಾಣಿಸಿಕೊಳ್ಳುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ.

    ಪದೇ ಪದೇ ಒಟ್ಟಿಗೆ ಹಲವಾರು ಕಡೆ ಕಾಣಿಸಿಕೊಂಡಿರುವ ಈ ಜೋಡಿ ಇತ್ತೀಚೆಗಷ್ಟೇ ನಡೆದ ಔತಣಕೂಟದಲ್ಲಿ ಒಟ್ಟಿಗೆ ಭಾಗಿಯಾಗಿದ್ದರು. ಪ್ಯಾರಿಸ್ ನಲ್ಲಿರುವ ಹೋಟೆಲ್ ನಲ್ಲಿ ಈ ಜೋಡಿ ತಡರಾತ್ರಿ ಊಟಕ್ಕಾಗಿ ಬಂದಿತ್ತು ಎಂದು ಹೇಳಲಾಗುತ್ತಿದೆ.  ಇವರ ಜೊತೆ ಡಿಕಾಪ್ರಿಯೊ ಕುಟುಂಬದ ಸದಸ್ಯರು ಕೂಡ ಇದ್ದರು ಎಂದು ವರದಿಯಾಗಿದೆ. ಇದನ್ನೂ ಓದಿ:ಕೆಂಪು ಬಣ್ಣದ ಸೀರೆಯಲ್ಲಿ ಗ್ಲ್ಯಾಮರಸ್ ಆಗಿ ಮಿಂಚಿದ ಮಾನ್ವಿತಾ

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”true” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

    ಡಿಕಾಪ್ರಿಯೋ ಮತ್ತು ನೀಲಂ ಜೊತೆಯಾಗಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲೇನೂ ಅಲ್ಲ ಎಂದು ಹಾಲಿವುಡ್ ಮಾಧ್ಯಮಗಳ ವರದಿ ಮಾಡಿವೆ. ಇತ್ತೀಚೆಗೆ ನಡೆದ ಎರಡೂ ಕಾರ್ಯಕ್ರಮದಲ್ಲೂ ನೀಲಂ ತನ್ನ ಕುಟುಂಬದ ಜೊತೆಯೇ ಕಾರ್ಯಕ್ರಮಕ್ಕೆ ಬಂದಿದ್ದರು. ಅಲ್ಲಿ ಡಿಕಾಪ್ರಿಯೊ ಕೂಡ ಇದ್ದರು. ಅಲ್ಲದೇ ಲಂಡನ್ ನ ಚಿಲ್ಟರ್ನ್ ಫೈರ್ ಹೌಸ್ ನಲ್ಲಿ ನಡೆದ ಔತಣಕೂಟದಲ್ಲಿ ಎರಡು ಕಡೆಯ ಕುಟುಂಬ ಭಾಗಿಯಾಗಿತ್ತು.

    ಎರಡೂ ಕುಟುಂಬಗಳು ಅನೇಕ ಬಾರಿ ಡಿನ್ನರ್ ಗೆ ಸೇರಿದ್ದರಂತೆ ನೀಲಂ ಮತ್ತು ಡಿಕಾಪ್ರಿಯೋ ಲವ್ ಇನ್ ಸಂಬಂಧದಲ್ಲಿ ಇದ್ದಾರೆ ಎಂದೂ ಹೇಳಲಾಗುತ್ತಿದೆ. ಆದರೆ, ನೀಲಂ ಆಗಲಿ ಡಿಕಾಪ್ರಿಯೋ ಆಗಲಿ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಒಟ್ಟೊಟ್ಟಿಗೆ ಕಾಣಿಸಿಕೊಳ್ಳುವುದು ಮಾತ್ರ ಬಿಟ್ಟಿಲ್ಲ.

  • ಅಜ್ಜಿ ತವರು ಉಕ್ರೇನ್‌ಗೆ 77.07 ಕೋಟಿ ನೆರವು ನೀಡಿದ ʼಟೈಟಾನಿಕ್‌ʼ ಹೀರೋ

    ಅಜ್ಜಿ ತವರು ಉಕ್ರೇನ್‌ಗೆ 77.07 ಕೋಟಿ ನೆರವು ನೀಡಿದ ʼಟೈಟಾನಿಕ್‌ʼ ಹೀರೋ

    ಕೀವ್: ʻಟೈಟಾನಿಕ್‌ʼ ಸಿನಿಮಾ ಖ್ಯಾತಿಯ ಹೀರೋ, ಹಾಲಿವುಡ್‌ ನಟ ಲಿಯೊನಾರ್ಡೊ ಡಿಕ್ಯಾಪ್ರಿಯೊ ತನ್ನ ಅಜ್ಜಿ ತವರು ಉಕ್ರೇನ್‌ಗೆ 77.07 ಕೋಟಿ (10 ಮಿಲಿಯನ್‌ ಡಾಲರ್‌) ನೆರವು ನೀಡಿದ್ದಾರೆ.

    ಲಿಯೊನಾರ್ಡೊ ಅಜ್ಜಿ ಹೆಲೆನ್ ಇಂಡೆನ್‌ಬಿರ್ಕೆನ್ ಅವರು ಉಕ್ರೇನ್‌ ಮೂಲದವರು. ಉಕ್ರೇನ್‌ನ ಒಡೆಸ್ಸಾದಲ್ಲಿ ಜನಿಸಿದ್ದ ಅವರು 1917ರಲ್ಲಿ ತನ್ನ ಪೋಷಕರೊಂದಿಗೆ ಜರ್ಮನಿಗೆ ವಲಸೆ ಹೋಗಿದ್ದರು.  ಇದನ್ನೂ ಓದಿ: ನಿರ್ಬಂಧಕ್ಕೆ ಒಳಪಟ್ಟ ದೇಶಗಳ್ಯಾವುವು? ಕಾರಣ ಏನು? ಪಟ್ಟಿಯಲ್ಲಿ ರಷ್ಯಾ ನಂ.1

    ಹೆಲೆನ್‌ 1943ರಲ್ಲಿ ಜರ್ಮನಿಯಲ್ಲಿ ಲಿಯೊನಾರ್ಡೊ ತಾಯಿ ಇರ್ಮೆಲಿನ್‌ಗೆ ಜನ್ಮ ನೀಡಿದರು. ಇರ್ಮೆಲಿನ್‌ ಅವರು ಲಿಯೊನಾರ್ಡೊ ತಂದೆ ಜಾರ್ಜ್‌ ಡಿಕ್ಯಾಪ್ರಿಯೊ ಅವರಿಂದ ವಿಚ್ಛೇದನ ಪಡೆದರು. ನಂತರ ಲಿಯೊನಾರ್ಡೊ ತನ್ನ ಅಜ್ಜಿ ಹೆಲೆನ್‌ ಅವರೊಟ್ಟಿಗೆ ಬೆಳೆದರು. ಲಿಯೊನಾರ್ಡೊ ಅವರ ನಟನಾ ಪ್ರತಿಭೆಯನ್ನು ಅಜ್ಜಿ ಪೋಷಿಸಿದರಲ್ಲದೇ, ಅವರ ನಟನಾ ವೃತ್ತಿಯನ್ನು ಬೆಂಬಲಿಸಿದರು. 2008ರಲ್ಲಿ ತಮ್ಮ 93ನೇ ವಯಸ್ಸಿನಲ್ಲಿ ಹೆಲೆನ್‌ ಅವರು ನಿಧನರಾದರು.

    ಲಿಯೊನಾರ್ಡೊ ಅವರ ತವರು ಉಕ್ರೇನ್‌ಗೆ ಇಂಟರ್‌ನ್ಯಾಷನಲ್‌ ವಿಸೆಗ್ರಾಡ್‌ ಫಂಡ್‌ ಮೂಲಕ ಘೋಷಿಸಲಾಗಿದೆ. ಪೂರ್ವ ಯೂರೋಪ್‌ ಅಭಿವೃದ್ಧಿಯನ್ನು ಉತ್ತೇಜಿಸುವ ಅಂತಾರಾಷ್ಟ್ರೀಯ ಉಪಕ್ರಮಗಳಿಗೆ ಹಣಕಾಸಿನ ನೆರವು ನೀಡುವ ಗುರಿಯನ್ನು ವಿಸೆಗ್ರಾಡ್‌ ಗ್ರೂಪ್‌ ಯೋಜನೆ ಹೊಂದಿದೆ. ಇದನ್ನೂ ಓದಿ: ನಾನು ಅಡಗಿಕೊಂಡಿಲ್ಲ, ಯಾರಿಗೂ ಹೆದರುವುದಿಲ್ಲ, ನಮ್ಮ ದೇಶಭಕ್ತಿ ಗೆಲ್ಲುತ್ತೆ: ಝೆಲೆನ್ಸ್ಕಿ

    ಲಿಯೊನಾರ್ಡೊ ಬೆನ್ನಲ್ಲೇ ಅನೇಕ ನಟ-ನಟಿಯರು, ನಿರ್ದೇಶಕರು ಸಹ ಉಕ್ರೇನ್‌ಗೆ ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದ್ದಾರೆ. ರಿಯಾನ್ ರೆನಾಲ್ಡ್ಸ್ ಮತ್ತು ಬ್ಲೇಕ್ ಲೈವ್ಲಿ ಅವರು ಹಣಕಾಸಿನ ನೆರವು ನೀಡುವುದಾಗಿ ತಿಳಿಸಿದ್ದಾರೆ. ಮಿಲಾ ಕುನಿಸ್‌ ಮತ್ತು ಆಷ್ಟನ್‌ ಕಚ್ಚರ್‌ ಅವರು ಉಕ್ರೇನ್‌ನಲ್ಲಿ ಮಾನವೀಯ ಚಟುವಟಿಕೆಗಳು ಹಾಗೂ ಉಕ್ರೇನಿಯನ್‌ ನಿರಾಶ್ರಿತರ ಪುನರ್ವಸತಿಗಾಗಿ 23.09 ಕೋಟಿ (3 ಮಿಲಿಯನ್‌ ಡಾಲರ್) ದೇಣಿಗೆ ನೀಡುವುದಾಗಿ ಘೋಷಿಸಿದ್ದಾರೆ.

  • ಪಾವಗಡದಲ್ಲಿರೋ ಬೃಹತ್ ಸೋಲಾರ್ ಪಾರ್ಕ್ ಗೆ ಹಾಲಿವುಡ್ ನಟ ಮೆಚ್ಚುಗೆ

    ಪಾವಗಡದಲ್ಲಿರೋ ಬೃಹತ್ ಸೋಲಾರ್ ಪಾರ್ಕ್ ಗೆ ಹಾಲಿವುಡ್ ನಟ ಮೆಚ್ಚುಗೆ

    ಬೆಂಗಳೂರು: ತುಮಕೂರು ಜಿಲ್ಲೆಯ ಪಾವಗಡದಲ್ಲಿ ನಿರ್ಮಾಣವಾಗುತ್ತಿರುವ ಬೃಹತ್ ಸೋಲಾರ್ ಪಾರ್ಕ್‍ಗೆ ವಿಶ್ವ ಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಈ ಕುರಿತು ಹಾಲಿವುಡ್‍ನ ಖ್ಯಾತ ನಟ ಲಿಯೊನಾರ್ಡೊ ಡಿ ಕಾಪ್ರಿಯೊ ಸಹ ಟ್ವಿಟ್ಟರ್‍ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

    ಸೋಲಾರ್ ಪಾರ್ಕ್ ಕುರಿತು ಅಮೆರಿಕದ ಲಾಸ್ ಏಂಜಲೀಸ್ ಟೈಮ್ಸ್ ವರದಿ ಪ್ರಕಟಿಸಿದೆ. `ವಿಶ್ವದ ಅತಿ ದೊಡ್ಡ ಸೋಲಾರ್ ಪಾರ್ಕ್ ಭಾರತದಲ್ಲಿ ನಿರ್ಮಾಣವಾಗುತ್ತಿದೆ’ ಎಂಬ ಶೀರ್ಷಿಕೆಯಡಿ ಸೋಮವಾರ ಸೋಲಾರ್ ಪಾರ್ಕ್ ಬಗ್ಗೆ ವಿಸ್ತೃತ ವರದಿ ಪ್ರಕಟಿಸಲಾಗಿದೆ. ಸೋಲಾರ್ ಪಾರ್ಕ್ ಪೂರ್ಣಗೊಂಡ ಬಳಿಕ 2,000 ಮೆಗಾವಾಟ್ ವಿದ್ಯುತ್ ಉತ್ಪಾದನೆಯಾಗಲಿದ್ದು, 7 ಲಕ್ಷ ಮನೆಗಳಿಗೆ ವಿದ್ಯುತ್ ಪೂರೈಕೆಯಾಗಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

    ಹಾಲಿವುಡ್ ನಟ ರೀಟ್ವೀಟ್: ವಿಶ್ವದ ಅತೀ ದೊಡ್ಡ ಸೋಲಾರ್ ಪಾರ್ಕ್ ಭಾರತದಲ್ಲಿ ನಿರ್ಮಾಣವಾಗುತ್ತಿರುವ ಬಗ್ಗೆ ನಟ ಲಿಯೊನಾರ್ಡೊ ಡಿ ಕಾಪ್ರಿಯೊ ಸಹ ಟ್ವಿಟರ್‍ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಲಾಸ್ ಏಂಜಲೀಸ್ ಟೈಮ್ಸ್‍ನ ವರದಿಯನ್ನು ಅವರು ರಿಟ್ವೀಟ್ ಮಾಡುವ ಮೂಲಕ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಈ ಬಗ್ಗೆ `ರಾಹುಲ್ ಗಾಂಧಿ ಫ್ಯಾನ್ಸ್ ಫ್ರಮ್ ಬೆಳಗಾವಿ’ ಫೇಸ್‍ಬುಕ್ ಪುಟದಲ್ಲಿ `ಪಾವಗಡದ ಬೃಹತ್ ಸೌರಪಾರ್ಕ್ ಗೆ ಹಾಲಿವುಡ್ ನಟ ಲಿಯೊನಾರ್ಡೊ ಡಿ ಕಾಪ್ರಿಯೊ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ’ ಎಂದು ಅಪ್ಲೋಡ್ ಮಾಡಿದ್ದಾರೆ.

    `2025ರ ವೇಳೆಗೆ ಅವಶ್ಯ ಇರುವ ಶೇ. 50ರಷ್ಟು ವಿದ್ಯುತ್ ಅನ್ನು ನವೀಕರಿಸಬಹುದಾದ ಇಂಧನಗಳ ಮೂಲಕವೇ ಉತ್ಪಾದಿಸುವುದು ನಮ್ಮ ಗುರಿ. ಈ ಕನಸಿಗೆ ನಾವು ಶಂಕುಸ್ಥಾಪನೆ ಮಾಡಿದ್ದೇವೆ. ಮುಂದಿನ 5-7 ವರ್ಷಗಳಲ್ಲಿ ಇದನ್ನು ಸಾಧಿಸುವ ಆಶಾಭಾವನೆ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. ಜತೆಗೆ, ಲಾಸ್ ಏಂಜಲೀಸ್ ಟೈಮ್ಸ್ ವರದಿಯನ್ನೂ ಉಲ್ಲೇಖಿಸಿದ್ದಾರೆ.