Tag: lenovo

  • ಒಂದೇ ಫೋನಿನಲ್ಲಿ 10 ಲಕ್ಷ ಫೋಟೋ, 2 ಸಾವಿರ ಎಚ್‍ಡಿ ಫಿಲ್ಮ್ ಸ್ಟೋರೇಜ್!

    ಒಂದೇ ಫೋನಿನಲ್ಲಿ 10 ಲಕ್ಷ ಫೋಟೋ, 2 ಸಾವಿರ ಎಚ್‍ಡಿ ಫಿಲ್ಮ್ ಸ್ಟೋರೇಜ್!

    ಬೀಜಿಂಗ್: ಸ್ಮಾರ್ಟ್ ಫೋನ್ ಗಳಲ್ಲಿ ಆಂತರಿಕ ಮೆಮೊರಿ ಕಡಿಮೆ ಆಯ್ತು ಎಂದು ದೂರೋ ಮಂದಿಗೆ ಗುಡ್ ನ್ಯೂಸ್. ಚೀನಾದ ಲೆನೊವೊ ಕಂಪೆನಿ 4 ಟೆರಾ ಬೈಟ್ ಆಂತರಿಕ ಮೆಮೊರಿ ಹೊಂದಿರುವ ಫೋನನ್ನು ಬಿಡುಗಡೆ ಮಾಡಲು ಮುಂದಾಗಿದೆ.

    ಸಾಧಾರಣವಾಗಿ 128 ಜಿಬಿ, 256 ಜಿಬಿ, 512 ಜಿಬಿ ಫೋನ್‍ಗಳು ಮಾರುಕಟ್ಟೆಯಲ್ಲಿ ಸಿಗುತ್ತದೆ. ಆದರೆ ಲೆನೊವೊ ಈಗ ಝಡ್5 4ಟಿಬಿ ಹೆಸರಿನಲ್ಲಿ ಫೋನ್ ಬಿಡುಗಡೆ ಮಾಡಲು ಮುಂದಾಗುತ್ತಿದೆ.

    10 ಲಕ್ಷ ಫೋಟೋ ಮತ್ತು 2 ಸಾವಿರ ಎಚ್‍ಡಿ ಸಿನಿಮಾಗಳನ್ನು ಈ ಫೋನಿನಲ್ಲಿ ಸ್ಟೋರೇಜ್ ಮಾಡಬಹುದಾಗಿದೆ. ಈ ಫೋನ್ ಜೂನ್ 14 ರಂದು ಬಿಡುಗಡೆಯಾಗುವ ಸಾಧ್ಯತೆಯಿದೆ. ನಾಲ್ಕು ತಂತ್ರಜ್ಞಾನ ವಿಶೇಷತೆ, 18 ಪೇಟೆಂಟ್ ಹೊಂದಿರುವ ತಂತ್ರಜ್ಞಾನಗಳು ಈ ಫೋನಿನಲ್ಲಿ ಇರಲಿದೆ.

    ಈಗಾಗಲೇ ಲೆನೊವೊ 1 ಟಿಬಿ ಆಂತರಿಕ ಮೆಮೊರಿ ಹೊಂದಿರುವ ಫೋನ್ ಬಿಡುಗಡೆ ಮಾಡಿದ್ದು, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಫೋನ್ ಅಂದಾಜು 93 ಸಾವಿರ ರೂ. ಬೆಲೆಯಲ್ಲಿ ಲಭ್ಯವಿದೆ. ಭಾರತಕ್ಕೆ ಇನ್ನೂ ಈ ಫೋನ್ ಬಿಡುಗಡೆಯಾಗಿಲ್ಲ.

  • ಲೆನೆವೊದಿಂದ ಕಡಿಮೆ ಬೆಲೆಯ, ಕಡಿಮೆ ಗಾತ್ರದ 4ಜಿ ಡ್ಯುಯಲ್‍ಸಿಮ್ ಫೋನ್ ಬಿಡುಗಡೆ

    ಲೆನೆವೊದಿಂದ ಕಡಿಮೆ ಬೆಲೆಯ, ಕಡಿಮೆ ಗಾತ್ರದ 4ಜಿ ಡ್ಯುಯಲ್‍ಸಿಮ್ ಫೋನ್ ಬಿಡುಗಡೆ

    ನವದೆಹಲಿ: ಚೀನಾದ ಲೆನೆವೊ ಕಂಪೆನಿ ಕಡಿಮೆ ಗಾತ್ರದ ಕಡಿಮೆ ಬೆಲೆಯ ಎಲ್‍ಟಿಇ ತಂತ್ರಜ್ಞಾನಕ್ಕೆ ಸಪೋರ್ಟ್ ಮಾಡುವ 4ಜಿ ಫೋನನ್ನು ದೇಶೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

    ಲೆನೆವೊ ವೈಬ್ ಬಿ ಬಿಡುಗಡೆ ಮಾಡಿದ್ದು, ಈ ಫೋನಿಗೆ 5,799 ರೂ. ಬೆಲೆಯನ್ನು ನಿಗದಿ ಮಾಡಿದೆ.

    ಗುಣ ವೈಶಿಷ್ಟ್ಯಗಳು:
    ಗಾತ್ರ ಮತ್ತು ಡಿಸ್ಪ್ಲೇ
    132.5*66*9.9 ಮಿ.ಮೀ ಗಾತ್ರ, 144 ಗ್ರಾಂ ತೂಕ, ಡ್ಯುಯಲ್ ಸಿಮ್ ಸಪೋರ್ಟ್(ಮೈಕ್ರೋ ಸಿಮ್), 4.5 ಇಂಚಿನ ಟಿಎಫ್‍ಟಿ ಸ್ಕ್ರೀನ್(480*800 ಪಿಕ್ಸೆಲ್, 207 ಪಿಪಿಐ)

    ಪ್ಲಾಟ್‍ಫಾರಂ ಮತ್ತು ಮೆಮೊರಿ:
    ಆಂಡ್ರಾಯ್ಡ್ 6.0 ಮಾರ್ಶ್‍ಮೆಲೋ ಓಎಸ್,  ಮೀಡಿಯಾ ಟೆಕ್ ಕ್ವಾಡ್‍ಕೋರ್ 1GHz ಪ್ರೊಸೆಸರ್, ಮಲಿ ಗ್ರಾಫಿಕ್ಸ್ ಪ್ರೊಸೆಸರ್, 8ಜಿಬಿ ಆಂತರಿಕ ಮೆಮೊರಿ, 1 ಜಿಬಿ ರಾಮ್, 32 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ.

    ಇತರೇ:
    ಎಲ್‍ಇಡಿ ಫ್ಲಾಶ್ ಹೊಂದಿರುವ 5 ಎಂಪಿ ಹಿಂದುಗಡೆ ಕ್ಯಾಮೆರಾ, ಮುಂದುಗಡೆ 2 ಎಂಪಿ ಕ್ಯಾಮೆರಾ, ತೆಗೆಯಲು ಸಾಧ್ಯವಿರುವ ಲಿಯಾನ್ 2000 ಎಂಎಎಚ್ ಬ್ಯಾಟರಿ.