Tag: lemon

  • ಗಗನಕ್ಕೆ ಏರಿದ ತರಕಾರಿ ಬೆಲೆ- 1ಕೆ.ಜಿ ಟೊಮೆಟೊಗೆ 500ರೂ, ನಿಂಬೆಹಣ್ಣಿಗೆ ಕೆ.ಜಿಗೆ 400 ರೂ.

    ಗಗನಕ್ಕೆ ಏರಿದ ತರಕಾರಿ ಬೆಲೆ- 1ಕೆ.ಜಿ ಟೊಮೆಟೊಗೆ 500ರೂ, ನಿಂಬೆಹಣ್ಣಿಗೆ ಕೆ.ಜಿಗೆ 400 ರೂ.

    ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಭಾರೀ ಮಳೆಯಿಂದಾಗಿ ತರಕಾರಿ ಬೆಲೆಗಳು ಗಗನಕ್ಕೆರಿದ್ದು, ಟೊಮೆಟೊ 1 ಕೆ.ಜಿಗೆ 500ರೂ. ಆಗಿದೆ.

    ಪಾಕಿಸ್ತಾನದಲ್ಲಿ ರಾಷ್ಟ್ರವ್ಯಾಪಿ ಭಾರೀ ಮಳೆಯಿಂದಾಗಿ ಪ್ರವಾಹ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಬೆಳೆಗಳಿಗೂ ಹಾನಿಯಾಗಿ ತರಕಾರಿ ಬೆಲೆಗಳೆಲ್ಲವೂ ಗಗನಕ್ಕೆರಿವೆ. ಟೊಮೆಟೊ ಬೆಲೆ 1 ಕೆಜಿಗೆ 500 ರೂ. ಆಗಿದ್ದರೆ, ಈರುಳ್ಳಿ ಕೆಜಿಗೆ 300 ರೂ., ನಿಂಬೆಹಣ್ಣು ಕೆ.ಜಿಗೆ 400 ರೂ.ಗೆ ಮಾರಾಟವಾಗುತ್ತಿದೆ.

    ಟೊಮೆಟೊ ಬೆಲೆಯು ಪ್ರತಿ ಕೆಜಿಗೆ 80 ರೂ. ಇತ್ತು. ಇದೀಗ ಆ ಬೆಲೆಗಿಂತ ಕನಿಷ್ಠ 6 ಪಟ್ಟು ಏರಿಕೆಯಾಗಿದೆ. ಆದರೆ ಈರುಳ್ಳಿ ಕೆ.ಜಿಗೆ ಅಧಿಕೃತ ದರ 61 ರೂ. ಇತ್ತು. ಅದಕ್ಕಿಂತ 5 ಪಟ್ಟು ಅಧಿಕವಾಗಿ ಮಾರಾಟವಾಗುತ್ತಿದೆ.

    ಈ ಮೂರು ತರಕಾರಿಗಳ ಜೊತೆಗೆ ಶುಂಠಿ, ಬೆಳ್ಳುಳ್ಳಿ ಬೆಲೆಯೂ ಏರಿಕೆಯಾಗಿದೆ. ಈ ಬಗ್ಗೆ ಖರೀದಾರರೊಬ್ಬರು ಮಾತನಾಡಿದ್ದು, ಈಗ ಬಡವರು ಟೊಮೆಟೊವನ್ನು ನೋಡಬಹುದು, ಆದರೆ ಖರೀದಿಸಲು ಸಾಧ್ಯವಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮನೆಯಲ್ಲಿ ಸಾಮೂಹಿಕ ನಮಾಜ್ – 26 ಮಂದಿಯ ವಿರುದ್ಧ ಪ್ರಕರಣ ದಾಖಲು

    ಪಾಕಿಸ್ತಾನದಲ್ಲಿ ಸತತವಾಗಿ ಬರುತ್ತಿರುವ ಮಳೆಯಿಂದಾಗಿ ಎಕ್ಕಾ ನದಿಗಳು ಉಕ್ಕಿ ಹರಿಯುತ್ತಿದೆ. ಇದರಿಂದಾಗಿ ಪ್ರವಾಹದ ಪರಿಸ್ಥಿತಿ ಉಂಟಾಗಿದ್ದು, 5.5 ಶತಕೋಟಿ ಡಾಲರ್‌ಗಿಂತಲೂ ಅಧಿಕ ಮೌಲ್ಯದಲ್ಲಿ ಹಾನಿಯಾಗಿವೆ. ಇದನ್ನೂ ಓದಿ: ನಮಗೂ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಲು ಅನುಮತಿ ನೀಡಿ: ಕ್ರೈಸ್ತ ಸಮುದಾಯ

    Live Tv
    [brid partner=56869869 player=32851 video=960834 autoplay=true]

  • ಮಸಾಲಾ ನಿಂಬೂ ಸೋಡಾ ಮನೆಯಲ್ಲಿ ಟ್ರೈ ಮಾಡಿದ್ದೀರಾ?

    ಮಸಾಲಾ ನಿಂಬೂ ಸೋಡಾ ಮನೆಯಲ್ಲಿ ಟ್ರೈ ಮಾಡಿದ್ದೀರಾ?

    ಹೆಚ್ಚಾಗಿ ಬಾಯಾರಿಕೆಯಾದಾಗ ದಾಹ ತಣಿಸಲು ನಿಂಬೆ ಹಣ್ಣಿನ ಜ್ಯೂಸ್ ಅನ್ನೇ ಮಾಡಿಕೊಳ್ಳುತ್ತಾರೆ. ಆದರೆ ಪ್ರತೀ ಸಲ ಅದನ್ನೇ ಮಾಡಿ, ಕುಡಿದು ಬೋರ್ ಎನಿಸಲ್ವಾ? ಪ್ರತಿ ಸಲ ಅಡುಗೆ ಮನೆಯಲ್ಲಿ ಎಕ್ಸ್ಪರಿಮೆಂಟ್ ಮಾಡೋದು ಮುಖ್ಯ ಹಾಗೂ ಮಜಾ. ಇಂದು ಸ್ವಲ್ಪ ವಿಭವಿನ್ನವಾಗಿ ಮಸಾಲಾ ನಿಂಬೂ ಸೋಡಾ ಮಾಡೋದು ಹೇಗೆ ಎಂಬುದನ್ನು ನೋಡೋಣ. ನಿಮ್ಮ ಅಡುಗೆ ಮನೆಯಲ್ಲಿಯೇ ಹೊಸ ಪ್ರಯತ್ನದೊಂದಿಗೆ ಹೊಸ ರುಚಿಯನ್ನು ಆಸ್ವಾದಿಸಿ.

     

    ಬೇಕಾಗುವ ಪದಾರ್ಥಗಳು:
    ತಾಜಾ ನಿಂಬೆ ರಸ – ಅರ್ಧ ಕಪ್
    ಕ್ಲಬ್ ಸೋಡಾ – 4 ಕಪ್
    ಸಕ್ಕರೆ – 3 ಟೀಸ್ಪೂನ್
    ಪುದೀನಾ ಎಲೆಗಳು – ಅರ್ಧ ಕಪ್
    ಚ್ಯಾಟ್ ಮಸಾಲಾ – 2 ಟೀಸ್ಪೂನ್
    ಹುರಿದ ಜೀರಿಗೆ – 1 ಟೀಸ್ಪೂನ್

    ಮಾಡುವ ವಿಧಾನ:
    * ತಾಜಾ ಪುದೀನಾ ಎಲೆಗಳನ್ನು ತೆಗೆದುಕೊಂಡು ಅದನ್ನು ಹುರಿದ ಜೀರಿಗೆಯೊಂದಿಗೆ ಗ್ರೈಂಡ್ ಮಾಡಿ.
    * ಗ್ರೈಂಡ್ ಮಾಡಿದ ಪುದೀನಾವನ್ನು ಒಂದು ಪಾತ್ರೆಗೆ ಹಾಕಿ, ಅದಕ್ಕೆ ನಿಂಬೆ ರಸ, ಸಕ್ಕರೆ, ಚ್ಯಾಟ್ ಮಸಾಲಾ, ಸ್ವಲ್ಪ ಉಪ್ಪು ಹಾಗೂ ಕ್ಲಬ್ ಸೋಡಾವನ್ನು ಹಾಕಿ ಮಿಶ್ರಣ ಮಾಡಿ.
    * ಬೇಕೆಂದಲ್ಲಿ ಐಸ್ ಕ್ಯೂಬ್‌ಗಳನ್ನು ಬಳಸಿ, ಲೋಟಗಳಿಗೆ ಸುರಿಯಿರಿ.
    * ಅಲಂಕಾರಕ್ಕೆ ಬೆಂಕೆಂದಲ್ಲಿ ಸ್ವಲ್ಪ ಪುದೀನಾ ಎಲೆಗಳು ಹಾಗೂ ನಿಂಬೆ ಹಣ್ಣಿನ ಹೋಳುಗಳನ್ನು ಬಳಸಿ, ಚಿಲ್ ಆಗಿ ಸವಿಯಿರಿ.

    Live Tv
    [brid partner=56869869 player=32851 video=960834 autoplay=true]

  • ಚಿನ್ನ, ಬೆಳ್ಳಿಯಲ್ಲ ಈಗ ನಿಂಬೆಹಣ್ಣಿನ ಮೇಲೆ ಕಳ್ಳರ ಕಣ್ಣು- 12 ಮೂಟೆ ನಿಂಬೆಹಣ್ಣು ಕಳವಾಗಿದ್ದೇಗೆ?

    ಚಿನ್ನ, ಬೆಳ್ಳಿಯಲ್ಲ ಈಗ ನಿಂಬೆಹಣ್ಣಿನ ಮೇಲೆ ಕಳ್ಳರ ಕಣ್ಣು- 12 ಮೂಟೆ ನಿಂಬೆಹಣ್ಣು ಕಳವಾಗಿದ್ದೇಗೆ?

    ಲಕ್ನೋ: ಪೆಟ್ರೋಲ್, ಡೀಸೆಲ್‌ನಂತೆಯೇ ದಿನಬಳಕೆ ವಸ್ತುಗಳ ಬೆಲೆಯೂ ಏರಿಕೆಯಾಗುತ್ತಿದೆ. ಕೆಲದಿನಗಳ ಹಿಂದೆಯಷ್ಟೇ ಅಡುಗೆ ಎಣ್ಣೆದರ, ಅಡುಗೆ ಅನಿಲದರವೂ ಏರಿಕೆಯಾಗಿದೆ. ಆದರೀಗ ನಿಂಬೆ ಹಣ್ಣು ಜನರನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ.

    ಗಗನಕ್ಕೇರುತ್ತಿರುವ ಬೆಲೆಗಳ ನಡುವೆ, ಗಾಜಿಯಾಬಾದ್‌ನ ಮೋದಿನಗರ ಪ್ರದೇಶದ ತರಕಾರಿ ಮಾರುಕಟ್ಟೆಯಲ್ಲಿ ಕಳ್ಳರು ಅಂದಾಜು 70,000 ರೂಪಾಯಿ ಮೌಲ್ಯದ 12 ಮೂಟೆ ನಿಂಬೆಹಣ್ಣುಗಳನ್ನು ಕದ್ದಿರುವುದು ಬೆಳಕಿಗೆ ಬಂದಿದೆ. ಮಾರುಕಟ್ಟೆಲ್ಲಿದ್ದ ಯಾವುದೇ ತರಕಾರಿಗಳನ್ನು ಮುಟ್ಟದೇ ನಿಂಬೆಹಣ್ಣನ್ನು ಮಾತ್ರವೇ ಕದ್ದೊಯ್ದಿರುವುದು ಕುತೂಹಲಕ್ಕೆ ಕಾರಣವಾಗಿದೆ. ಇದನ್ನೂ ಓದಿ: ರಾಜ್ ಠಾಕ್ರೆ ಬೊಗಳುವ ನಾಯಿ – ಪರೋಕ್ಷವಾಗಿ ಅಕ್ಬರುದ್ದೀನ್ ಟಾಂಗ್

    Lemon

    ಘಾಜಿಯಾಬಾದ್‌ನ ಮೋದಿನಗರ-ಹಾಪುರ್ ರಸ್ತೆಯಲ್ಲಿರುವ ಗಡನಾ ಗ್ರಾಮದ ಮಾರುಕಟ್ಟೆಯ ವ್ಯಾಪಾರಿಯಾಗಿರುವ ಭೋಜ್‌ಪುರ ನಿವಾಸಿ ರಶೀದ್ ಮಳಿಗೆಯಲ್ಲಿ ನಿಂಬಿಹಣ್ಣು ಕಳವಾಗಿದೆ. ಇತ್ತೀಚಿಗೆ ನಿಂಬೆಹಣ್ಣು ಕದಿಯುತ್ತಿರುವ ಘಟನೆಗಳನ್ನು ಗಮನದಲ್ಲಿಟ್ಟುಕೊಂಡು ತರಕಾರಿ ಮಾರುಕಟ್ಟೆಯಲ್ಲೂ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಹಾಗಿದ್ದೂ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ವಿರುದ್ಧ ಹೋರಾಡಿ, ರಮ್ಯಾ ವಿರುದ್ಧ ಅಲ್ಲ – ಡಿಕೆಶಿ ಬೆಂಬಲಿಗರಿಗೆ ಮಹದೇವಪ್ಪ ಟಾಂಗ್

    Lemon

    ಇದೇ ರೀತಿಯ ಘಟನೆಯಲ್ಲಿ ಶಹಜಹಾನ್‌ಪುರದ ಗೋಡೌನ್‌ನಲ್ಲಿಯೂ 50 ಕೆಜಿಯಷ್ಟು ನಿಂಬೆಹಣ್ಣು ಕಳವಾಗಿತ್ತು, ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.  ಇಲ್ಲಿನ ತಿಲ್ಹಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಗೋದಾಮಿನಲ್ಲಿಯೂ 40 ಕೆಜಿ ಈರುಳ್ಳಿ ಮತ್ತು 38 ಕೆಜಿ ಬೆಳ್ಳುಳ್ಳಿಯೂ ಕಳವಾಗಿರುವುದು ಬೆಳಕಿಗೆ ಬಂದಿತ್ತು. ಇದೀಗ 3ನೇ ಬಾರಿಗೆ ನಿಂಬೆಹಣ್ಣು ಕಳವಾಗಿರುವುದು ಕಂಡುಬಂದಿದೆ.

  • ಇಲ್ಲಿ ಮೊಬೈಲ್ ಬಿಡಿ ಭಾಗಗಳನ್ನು ಖರೀದಿಸಿದ್ರೆ ಸಿಗುತ್ತೆ ಉಚಿತ ಪೆಟ್ರೋಲ್, ನಿಂಬೆಹಣ್ಣು

    ಇಲ್ಲಿ ಮೊಬೈಲ್ ಬಿಡಿ ಭಾಗಗಳನ್ನು ಖರೀದಿಸಿದ್ರೆ ಸಿಗುತ್ತೆ ಉಚಿತ ಪೆಟ್ರೋಲ್, ನಿಂಬೆಹಣ್ಣು

    ನವದೆಹಲಿ: ತನ್ನ ಮಳಿಗೆಯಲ್ಲಿ 10 ರೂ. ಮೌಲ್ಯದ ಮೊಬೈಲ್ ಬಿಡಿಭಾಗಗಳನ್ನು ಖರೀದಿಸಿದರೆ ಉಚಿತವಾಗಿ ನಿಂಬೆಹಣ್ಣು ಹಾಗೂ ಪೆಟ್ರೋಲ್ ನೀಡುವುದಾಗಿ ವಾರಣಾಸಿಯ ಮಳಿಗೆದಾರರೊಬ್ಬರು ಘೋಷಿಸಿದ್ದಾರೆ.

    ಇತ್ತೀಚೆಗೆ ಪೆಟ್ರೋಲ್ ಹಾಗೂ ನಿಂಬೆಹಣ್ಣಿನ ದರ ಏಕಾ-ಏಕಿ ಏರಿಕೆಯಾಗಿದ್ದು, ಗ್ರಾಹಕರಿಗೆ ಹೊರೆಯಾಗುತ್ತಿರುವುದರಿಂದ ಈ ಆಫರ್‌ಗಳನ್ನು ನೀಡಲಾಗುತ್ತಿದೆ. ಗ್ರಾಹಕರು ಸಾಧಾರಣಾ ಮೊತ್ತಕ್ಕೆ ಮೊಬೈಲ್ ಬಿಡಿ ಭಾಗಗಳನ್ನು ಖರೀದಿಸಿದ್ರೆ 2 ರಿಂದ 4 ನಿಂಬೆಹಣ್ಣುಗಳನ್ನು ಹಾಗೂ 10,000 ರೂ. ಮೌಲ್ಯಕ್ಕೆ ಖರೀದಿಸಿದರೆ ಉಚಿತವಾಗಿ ಪೆಟ್ರೋಲ್ ನೀಡುವುದಾಗಿಯೂ ಮೊಬೈಲ್ ಮಳಿಗೆ ಮಾಲೀಕ ಹೇಳಿಕೊಂಡಿದ್ದಾರೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. ಇದನ್ನೂ ಓದಿ: 30 ಲಕ್ಷದ ಚಿನ್ನವನ್ನು ಗುದನಾಳ, ವಿಗ್‌ನಲ್ಲಿ ಬಚ್ಚಿಟ್ಟುಕೊಂಡಿದ್ದ ಕಿಲಾಡಿ ಕಳ್ಳನ ಬಂಧನ

    Lemon

    ಕೆಲದಿನಗಳಿಂದ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗಗನಕ್ಕೇರಿದೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 105.41 ರೂ., ಮುಂಬೈನಲ್ಲಿ 120.51 ರೂ.ಗೆ ಮಾರಾಟವಾಗುತ್ತಿದೆ. ಐಒಸಿ ಮತ್ತು ಬಿಪಿಸಿಎಲ್ ನಂತಹ ರಾಜ್ಯದ ಚಿಲ್ಲರೆ ವ್ಯಾಪಾರಿಗಳು ಚುನಾವಣಾ ಅವಧಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ತಡೆಹಿಡಿಯಲು ಸುಮಾರು 25 ಶತಕೋಟಿ ಡಾಲರ್ (19,000 ಕೋಟಿ) ಆದಾಯವನ್ನು ಕಳೆದುಕೊಂಡಿದ್ದಾರೆ ಎಂದು ಮೂಡೀಸ್ ಇನ್ವೆಸ್ಟರ್ಸ್ ಸರ್ವಿಸಸ್ ಹೇಳಿದೆ. ಇದನ್ನೂ ಓದಿ: ಗಾಂಧೀಜಿ ಆಶ್ರಮದಲ್ಲಿ ಚರಕ ಹಿಡಿದು ನೂಲು ತೆಗೆದ ಬ್ರಿಟನ್ ಪ್ರಧಾನಿ

    PETROL

    ನಿಂಬೆಹಣ್ಣು ಕೂಡ ಸಾಮಾನ್ಯರ ಜೇಬಿಗೆ ಭಾರವಾಗಿದೆ. ವಿವಿಧ ನಗರಗಳಲ್ಲಿ ಪ್ರತಿ ಕೆ.ಜಿ ನಿಂಬೆಹಣ್ಣು 400 ರೂ.ಗೆ ತಲುಪಿದೆ. ದೆಹಲಿಯಲ್ಲೂ 350 ರಿಂದ 400 ರೂ.ಗೆ ಮಾರಾಟವಾಗುತ್ತಿದೆ. ಬೆಂಗಳೂರಿನ ಎಪಿಎಂಸಿನಲ್ಲೂ ಹೋಸೆಲ್ ದರ 192 ಇದ್ದು, ರಿಟೇಲ್ ದರ 300 ರಿಂದ 350 ರೂ.ಗೆ ಮಾರಾಟವಾಗುತ್ತಿದೆ ಎನ್ನಲಾಗಿದೆ.

  • ವರನಿಗೆ ನಿಂಬೆ ಹಣ್ಣು ಗಿಫ್ಟ್ ನೀಡಿದ ಸ್ನೇಹಿತರು

    ವರನಿಗೆ ನಿಂಬೆ ಹಣ್ಣು ಗಿಫ್ಟ್ ನೀಡಿದ ಸ್ನೇಹಿತರು

    ಗಾಂಧಿನಗರ: ಗುಜರಾತ್‍ನ ರಾಜ್‍ಕೋಟ್‍ನಲ್ಲಿ ಮದುವೆ ಸಮಾರಂಭದಲ್ಲಿ ಸ್ನೇಹಿತರು ಮತ್ತು ಸಂಬಂಧಿಗಳು ಸೇರಿ ವರನಿಗೆ ಉಡುಗೊರೆಯಾಗಿ ನಿಂಬೆ ಹಣ್ಣನ್ನು ನೀಡಿದ್ದಾರೆ. ಇದೀಗ ಈ ಫೋಟೋ ವೈರಲ್‌ ಆಗುತ್ತಿದೆ.

    ದಿನೇ ದಿನೇ ನಿಂಬೆ ಬೆಲೆ ಗಗನಕ್ಕೇರುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್‍ಕೋಟ್‍ನ ಧರೋಜಿ ಪಟ್ಟಣದಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ವರನಿಗೆ ಉಡುಗೋರೆ ನೀಡಲು ಆತನ ಸ್ನೇಹಿತರು ನಿಂಬೆ ಹಣ್ಣನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದೀಗ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌  ಆಗುತ್ತಿದೆ.

    ವರನ ಸಂಬಂಧಿಕರು ಈ ಬಗ್ಗೆ ಮಾತನಾಡಿ, ರಾಜ್ಯ ಮತ್ತು ದೇಶದಲ್ಲಿ ನಿಂಬೆ ಹಣ್ಣಿನ ಬೆಲೆ ಸಾಕಷ್ಟು ಹೆಚ್ಚಾಗಿದೆ. ರಾಜ್‍ಕೋಟ್‍ನಲ್ಲಿ ಕೆಜಿಗೆ 250 ರೂ.ವನ್ನು ದಾಟಿದೆ. ಆದರೆ ಬೇಸಿಗೆ ಕಾಲದಲ್ಲಿ ನಿಂಬೆ ಹಣ್ಣಿನ ಅವಶ್ಯಕತೆ ಇರುತ್ತದೆ. ಅದಕ್ಕಾಗಿಯೇ ನಿಂಬೆ ಹಣ್ಣುಗಳನ್ನು ನೀಡಿದ್ದೇವೆ ಎಂದರು. ಇದನ್ನೂ ಓದಿ: 1 ಗಂಟೆ ಪುಸ್ತಕ ಓದಿದರೆ ಒಂದು ಉಡುಗೊರೆ – ಶಿಕ್ಷಣ ಪ್ರೇಮಿಯ ವಿನೂತನ ಪ್ರಯತ್ನ

    ಪ್ರಸ್ತುತ ಬೇಸಿಗೆ ಕಾಲದಲ್ಲಿ ಪೂರೈಕೆಯಲ್ಲಿನ ಕೊರತೆ ಮತ್ತು ಹೆಚ್ಚಿನ ಬೇಡಿಕೆಯಿಂದಾಗಿ ನಿಂಬೆ ಬೆಲೆ ಏರಿಕೆಯಾಗಿದೆ. ಈ ಬಾರಿ ನಿಂಬೆ ಹಣ್ಣಿನ ಉತ್ಪಾದನೆ ಕಡಿಮೆಯಾಗಿದ್ದು, ಹೆಚ್ಚುತ್ತಿರುವ ತಾಪಮಾನ ಹಾಗೂ ಹಬ್ಬ ಹರಿದಿನಗಳಿಂದ ಬೇಡಿಕೆ ಹೆಚ್ಚಿದೆ. ಇದನ್ನೂ ಓದಿ: ನೇಣು ಬಿಗಿದ ಸ್ಥಿತಿಯಲ್ಲಿ ಶಿವಸೇನೆ ಶಾಸಕನ ಪತ್ನಿ ಶವ ಪತ್ತೆ

    ತೆಲಂಗಾಣ, ರಾಜಸ್ಥಾನ ಮತ್ತು ದೇಶದ ಹಲವಾರು ಭಾಗಗಳಲ್ಲಿ ನಿಂಬೆ ಬೆಲೆ ಗಗನಕ್ಕೇರಿದೆ. ದೆಹಲಿಯ ಅತಿದೊಡ್ಡ ಸಗಟು ಮಾರುಕಟ್ಟೆಯಾಗಿರುವ ಆಜಾದ್‍ಪುರ ಮಂಡಿಯಲ್ಲಿ ನಿಂಬೆಹಣ್ಣು ಕೆಜಿಗೆ 70 ರಿಂದ 90 ರೂ.ಗೆ ಮಾರಾಟವಾಗುತ್ತಿದೆ. ನಿಂಬೆ ಹಣ್ಣಿನ ಬೆಲೆ ಗುಜರಾತ್‍ನಲ್ಲಿ ಕೆಜಿಗೆ 240 ರೂ.ಗೆ ಏರಿಕೆಯಾಗಿದ್ದು, ಕರ್ನಾಟಕದಲ್ಲಿ ಹಾಗೂ ಜೈಪುರದಲ್ಲಿ ನಿಂಬೆಹಣ್ಣು ಕೆಜಿಗೆ 200 ರೂ.ಕ್ಕೂ ಅಧಿಕ ಬೆಲೆಗೂ ದಾಟಿದೆ

  • ಕೆಜಿಗೆ 350ರೂ. ದಾಟಿದ ನಿಂಬೆಹಣ್ಣಿನ  ಬೆಲೆ – ಜನ ಸಾಮಾನ್ಯರು ತತ್ತರ

    ಕೆಜಿಗೆ 350ರೂ. ದಾಟಿದ ನಿಂಬೆಹಣ್ಣಿನ ಬೆಲೆ – ಜನ ಸಾಮಾನ್ಯರು ತತ್ತರ

    ಲಕ್ನೋ: ದಿನೇ ದಿನೇ ನಿಂಬೆ ಹಣ್ಣಿನ ಬೆಲೆ ಗಗನಕ್ಕೇರುತ್ತಿದೆ. ಗಾಜಿಯಾಬಾದ್‍ನ ಸಗಟು ತರಕಾರಿ ಮಾರುಕಟ್ಟೆಯಲ್ಲಿ ಕಳೆದ ಒಂದು ವಾರದಲ್ಲಿ ಕೆಜಿಗೆ ನಿಂಬೆ ಹಣ್ಣಿನ ಬೆಲೆ 350ರೂ.ಗೆ ಏರಿಕೆಯಾಗಿದೆ. ಇದರಿಂದಾಗಿ ವ್ಯಾಪಾರಿಗಳು ಕೂಡ ಆಶ್ಚರ್ಯಗೊಂಡಿದ್ದಾರೆ.

    ಹೈದರಾಬಾದ್‍ನಲ್ಲಿ ಒಂದು ಕೆಜಿ ನಿಂಬೆ ಹಣ್ಣು 10 ರೂಪಾಯಿಗೆ ಮಾರಾಟವಾಗುತ್ತಿದೆ. ಆದರೆ ಗುಜರಾತ್‍ನಲ್ಲಿ ಒಂದು ಕೆಜಿ ನಿಂಬೆ ಹಣ್ಣು 200 ರೂಪಾಯಿಗೆ ಮಾರಾಟವಾಗುತ್ತಿದೆ. ಈ ವಿಚಾರವಾಗಿ ಪ್ರತಿಕ್ರಿಯಿಸಿದ ವ್ಯಾಪಾರಿಯೊಬ್ಬರು, ಬೆಲೆಗಳು ಏರಿಕೆಯಾಗುತ್ತಿದೆ. ನಾವು ಮೊದಲು 700ರೂ.ಗೆ ಒಂದು ಗೋಣಿ ಚೀಲ ತುಂಬಾ ನಿಂಬೆಹಣ್ಣನ್ನು ಖರೀಸುತ್ತಿದ್ದೇವು. ಆದರೀಗ 3,500ರೂ. ಆಗಿದೆ. ನಾವು ಒಂದು ನಿಂಬೆ ಹಣ್ಣನ್ನು 10ರೂ.ಗೆ ಮಾರಾಟ ಮಾಡುತ್ತಿದ್ದೇವೆ. ಆದರೂ ನಿಂಬೆ ಹಣ್ಣನ್ನು ಖರೀದಿಸಲು ಯಾರು ಸಿದ್ಧರಿಲ್ಲ ಮತ್ತು ಅದನ್ನು ಒಪ್ಪಿಕೊಳ್ಳಲು ಕೂಡ ಯಾರು ತಯಾರಿಲ್ಲ. ಇದರಿಂದಾಗಿ ನಿಂಬೆಹಣ್ಣು ಕೊಳೆತು ಹಾಳಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಮುಖಾಮುಖಿ ಭೇಟಿಯಾದ ನಂತರವಷ್ಟೇ ಈಶ್ವರಪ್ಪ ರಾಜೀನಾಮೆ ನಿರ್ಧಾರ: ಬೊಮ್ಮಾಯಿ

    ಮತ್ತೋರ್ವ ವ್ಯಾಪಾರಿ ನನ್ನ 30 ವರ್ಷಗಳ ವೃತ್ತಿ ಜೀವನದಲ್ಲಿ ನಿಂಬೆಹಣ್ಣಿನ ಬೆಲೆ ಗರಿಷ್ಠವೆಂದರೆ 150ರೂ.ಗೆ ಮಾರಾಟವಾಗಿದ್ದರೂ, 300ರೂ. ಅಷ್ಟು ಆಗಿರಲಿಲ್ಲ. ಆದರೆ ಡೀಸೆಲ್ ಬೆಲೆ ಏರಿಯಿಂದ ಟ್ರಕ್ ಸಾಗಾಟನೆ ವೆಚ್ಚ 24,000ರೂ. ಆಗಿದೆ. ಹದಿನೈದು ದಿನಗಳ ಹಿಂದೆಯಷ್ಟೇ ನಿಂಬೆಹಣ್ಣು ಕೆ.ಜಿ.ಗೆ 50 ರಿಂದ 100ರೂ.ಗೆ ಮಾರಾಟವಾಗುತ್ತಿತ್ತು ಎಂದು ತಿಳಿಸಿದ್ದಾರೆ. ನಿಂಬೆ ಹಣ್ಣಿನ ಜೊತೆಗೆ ಹಸಿ ಮೆಣಸಿನಕಾಯಿ, ಹಾಗಲಕಾಯಿ ಸೇರಿದಂತೆ ಇತರೆ ತರಕಾರಿಗಳ ಬೆಲೆ ಎರಡು ವಾರಗಳಲ್ಲಿ ದುಪ್ಪಟ್ಟಾಗಿದೆ. ಇದನ್ನೂ ಓದಿ:  ಜಲಿಯನ್ ವಾಲಾಬಾಗ್ ಹತ್ಯಾಕಾಂಡದಲ್ಲಿ ಹುತಾತ್ಮರಾದವರ ತ್ಯಾಗ ಮುಂದಿನ ಪೀಳಿಗೆಗೆ ಪ್ರೇರಣೆ: ಮೋದಿ

  • ಬೇಸಿಗೆಯಲ್ಲಿ ಗ್ರಾಹಕರ ಮೇಲೆ ಬರೆ- ಕೆ.ಜಿ ನಿಂಬೆಹಣ್ಣಿಗೆ 210 ರೂ..!

    ಬೇಸಿಗೆಯಲ್ಲಿ ಗ್ರಾಹಕರ ಮೇಲೆ ಬರೆ- ಕೆ.ಜಿ ನಿಂಬೆಹಣ್ಣಿಗೆ 210 ರೂ..!

    ತಿರುವನಂತಪುರಂ: ಇತ್ತೀಚೆಗೆ ದಿನ ಬಳಕೆ ವಸ್ತುಗಳ ಬೆಲೆ ಹಾಗೂ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಾಗುತ್ತಿರುವ ಬೆನ್ನಲ್ಲೇ ಇದೀಗ, ನಿಂಬೆ ಹಣ್ಣು ಬೆಲೆ ಏರಿಕೆಯಾಗಿದ್ದು, ಬೇಸಿಗೆ  ವೇಳೆ ಗ್ರಾಹಕರ ಮೇಲೆ ಬೆಲೆ ಏರಿಕೆ ಸಂಕಷ್ಟಕ್ಕೆ ಸಿಲುಕಿದೆ.

    ಬೇಸಗೆಯಲ್ಲಿ ತಂಬು ಪಾನೀಯ, ಅದರಲ್ಲೂ ನಿಂಬೆ ಹಣ್ಣಿನ ಪಾನಕ ಮಾಡಿಕೊಂಡು ಕುಡಿಯುವುದು ಹೆಚ್ಚು. ಇದೇ ಸಮಯದಲ್ಲಿ ಕೇರಳ ಜನರು ನಿಂಬೆ ಹಣ್ಣಿನ ಬೆಲೆ ಏರಿಕೆಯಿಂದಾಗಿ ತತ್ತರಿಸಿದ್ದಾರೆ. ಕಳೆದ ವಾರ ಒಂದು ಕೆ.ಜಿ ನಿಂಬೆ ಬೆಲೆ 100 ರೂ. ಇತ್ತು. ಈ ವಾರ 180 ರೂ.ಗಳಿಗೆ ಏರಿಕೆಯಾಗಿದೆ. ಕೊಟ್ಟಾಯಂ ಮತ್ತಿತರ ನಗರಗಳಲ್ಲಿ ನಿಂಬೆ ಬೆಲೆ ಕೆ.ಜಿ.ಗೆ 210 ರೂ. ತಲುಪಿದೆ. ಇದನ್ನೂ ಓದಿ: ಏಪ್ರಿಲ್ 10 ರಿಂದ 18 ವರ್ಷ ಮೇಲ್ಪಟ್ಟ ಎಲ್ಲರೂ ಖಾಸಗಿ ಆಸ್ಪತ್ರೆಗಳಲ್ಲಿ ಬೂಸ್ಟರ್ ಡೋಸ್ ಪಡೆಯಬಹುದು – ಆರೋಗ್ಯ ಇಲಾಖೆ

    ದಾಖಲೆ ಬೆಲೆಯಲ್ಲಿ ನಿಂಬೆ ಹಣ್ಣು ಮಾರಾಟವಾಗುತ್ತಿರುವುದು ಜನಸಾಮಾನ್ಯರ ಮೇಲೆ ಬರೆ ಎಳೆದಂತಾಗಿದೆ. ಈ ಬೆಲೆಯೇರಿಕೆಯಿಂದಾಗಿ ಜ್ಯೂಸ್‌ ಪಾರ್ಲರ್‌ಗಳಿಗೆ ನಷ್ಟ ಉಂಟಾಗಿದೆ. ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ನೀರಿನ ಕೊರತೆಯಿಂದಾಗಿ ನಿಂಬೆಹಣ್ಣಿನ ಕೊರತೆ ಉಂಟಾಗಿರುವುದೇ ಬೆಲೆಯೇರಿಕೆಗೆ ಕಾರಣ ಎಂದು ಸಂಘ ಅಭಿಪ್ರಾಯಪಟ್ಟಿದೆ.

  • ಗುಜರಾತ್‍ನಲ್ಲಿ ಕೆಜಿ ನಿಂಬೆಹಣ್ಣಿಗೆ 200 ರೂ. – ಗ್ರಾಹಕರು ಕಂಗಾಲು

    ಗುಜರಾತ್‍ನಲ್ಲಿ ಕೆಜಿ ನಿಂಬೆಹಣ್ಣಿಗೆ 200 ರೂ. – ಗ್ರಾಹಕರು ಕಂಗಾಲು

    ಗಾಂಧೀನಗರ: ಗುಜರಾತ್‍ನ ರಾಜ್‍ಕೋಟ್‍ನಲ್ಲಿ ನಿಂಬೆ ಹಣ್ಣಿಗೆ ಬೇಡಿಕೆ ಹೆಚ್ಚಾಗಿದ್ದು, ನಿಂಬೆಹಣ್ಣಿನ ಬೆಲೆ ಕೂಡ ಏರಿಕೆಯಾಗಿದೆ. ಪ್ರತಿ ಕೆಜಿಗೆ 50-60ರೂ. ಇದ್ದ ನಿಂಬೆಹಣ್ಣು ಇದೀಗ 200 ರೂ.ಗೆ ಮಾರಾಟವಾಗುತ್ತಿದೆ.

    ಈ ಕುರಿತಂತೆ ಪ್ರತಿಕ್ರಿಯಿಸಿದ ಗ್ರಾಹಕರೊಬ್ಬರು, ನಿಂಬೆ ಹಣ್ಣಿನ ಬೆಲೆ ಕೆಜಿಗೆ 200 ತಲುಪುತ್ತಿದೆ. ಮೊದಲು ನಿಂಬೆ ಹಣ್ಣಿನ ಬೆಲೆ ಕೆಜಿಗೆ 50-60 ರೂ. ಇತ್ತು. ನಾವು ಎಲ್ಲವನ್ನೂ ಬಜೆಟ್‍ಗೆ ಹೊಂದಿಸಬೇಕು. ಆದರೆ ಈ ಬೆಲೆ ಏರಿಕೆ ನಮ್ಮ ಮೇಲೆ ಪರಿಣಾಮ ಬೀರುತ್ತಿದೆ. ಬೆಲೆಗಳು ಯಾವಾಗ ಕಡಿಮೆಯಾಗುತ್ತವೆ ಯಾವಾಗ ಹೆಚ್ಚಗುತ್ತದೆ ಎಂಬುವುದೇ ನಮಗೆ ತಿಳಿಯುತ್ತಿಲ್ಲ ಎಂದಿದ್ದಾರೆ.

    ಬೇಸಿಗೆ ಸಂದರ್ಭದಲ್ಲಿ ಉಷ್ಣತೆ ಹೆಚ್ಚಾಗುವುದರಿಂದ ಜನರು ತಮ್ಮ ಆಹಾರದಲ್ಲಿ ನಿಂಬೆ ಹಣ್ಣನ ರಸವನ್ನು ಬಳಸಲು ಬಯಸುತ್ತಾರೆ. ಏಕೆಂದರೆ ಅವುಗಳಲ್ಲಿ ವಿಟಮಿನ್ ಸಿ ಇರುವುದರಿಂದ ಜೀರ್ಣಕ್ರಿಯೆ ಸುಲಭವಾಗಿ ಆಗುತ್ತದೆ. ಹೀಗಾಗಿ ಜನ ನಿಂಬೆಹಣ್ಣನ್ನು ಹೆಚ್ಚಾಗಿ ಬಳಸುತ್ತಿರುವುದರಿಂದ ನಿಂಬೆಹಣ್ಣಿನ ಬೆಲೆ ಗಗನಕ್ಕೇರಿದೆ.

    ಬಹುತೇಕ ತರಕಾರಿಗಳ ಬೆಲೆ ಹೆಚ್ಚಾಗಿದ್ದು, ಮಧ್ಯಮ ವರ್ಗದ ಜನರು ಬೆಲೆಬಾಳುವ ತರಕಾರಿಗಳನ್ನು ಖರೀದಿಸಲು ಕಷ್ಟ ಆಗುತ್ತಿದೆ. ಇದೀಗ ಮೊದಲು ನಾವು ಖರೀದಿಸುತ್ತಿದಷ್ಟು ನಿಂಬೆಹಣ್ಣುಗಳನ್ನು ಹೆಚ್ಚಾಗಿ ಖರೀದಿಸಲು ಸಾಧ್ಯವಾಗುತ್ತಿಲ್ಲ. ಕಳೆದ ವರ್ಷ ಮಾರ್ಚ್‍ನಲ್ಲಿ ಬೆಲೆಗಿಂತ ಈ ಬಾರಿ ನಿಂಬೆ ಹಣ್ಣಿನ ಬೆಲೆ ದ್ವಿಗುಣವಾಗಿದೆ. ಏಪ್ರಿಲ್-ಮೇನಲ್ಲಿ ಏನಾಗುತ್ತೋ ಗೊತ್ತಿಲ್ಲ ಎಂದು ಮತ್ತೊಬ್ಬ ಗ್ರಾಹಕರು ಬೇಸರ ವ್ಯಕ್ತಪಡಿಸಿದ್ದಾರೆ.

  • ವೇದಿಕೆ ಮೇಲೆ ನಿಂಬೆ ಹಣ್ಣು ಉರುಳಿಬಿಟ್ಟ ಹೆಚ್‍ಡಿ ರೇವಣ್ಣ!

    ವೇದಿಕೆ ಮೇಲೆ ನಿಂಬೆ ಹಣ್ಣು ಉರುಳಿಬಿಟ್ಟ ಹೆಚ್‍ಡಿ ರೇವಣ್ಣ!

    ಹಾಸನ: ಮಾಜಿ ಸಚಿವ ಹೆಚ್‍ಡಿ ರೇವಣ್ಣ ಅಭಿಮಾನಿಗಳತ್ತ ನಿಂಬೆ ಹಣ್ಣು ಉರುಳಿಸಿದ್ದಾರೆ.

    ಅರಸೀಕೆರೆ ತಾಲೂಕಿನ ನಾಗರಹಳ್ಳಿ ದೇವಾಲಯದ ಉದ್ಘಾಟನಾ ಕಾರ್ಯಕ್ರಮದಲ್ಲಿ ರೇವಣ್ಣ ವೇದಿಕೆ ಮೇಲಿಂದ ನಿಂಬೆ ಹಣ್ಣು ಉರುಳಿಸಿದ್ದಾರೆ.

    ಮೊದಲಿಗೆ ಅರಸೀಕೆರೆ ಶಾಸಕ ಶಿವಲಿಂಗೇಗೌಡ ರೆವಣ್ಣ ಅವರಿಗೆ ನಿಂಬೆ ಹಣ್ಣು ಕೊಟ್ಟು ತಮಾಷೆ ಮಾಡಿದರು. ಬಳಿಕ ಅಭಿಮಾನಿಗಳು ನಿಂಬೆ ಹಣ್ಣು ನೀಡುವಂತೆ ರೇವಣ್ಣ ಅವರಲ್ಲಿ ಮನವಿ ಮಾಡಿದ್ದಾರೆ. ರೇವಣ್ಣ ವೇದಿಕೆ ಮೇಲಿಂದ ಬೇಸಿನ್‍ನಲ್ಲಿದ್ದ ಎಲ್ಲಾ ನಿಂಬೆ ಹಣ್ಣುಗಳನ್ನು ಒಂದೊಂದಾಗಿ ಅಭಿಮಾನಿಗಳತ್ತ ಉರುಳಿಸಿದ್ದಾರೆ. ಇದನ್ನೂ ಓದಿ: ಮುಸ್ಲಿಮರ ಆಜಾನ್ ರೀತಿಯಲ್ಲೇ ರಾಮಜಪ ಮಾಡಿದ ಕಾಳಿಶ್ರೀ

    ರೇವಣ್ಣ ಉರುಳಿಸಿದ ನಿಂಬೆ ಹಣ್ಣುಗಳನ್ನು ಅಭಿಮಾನಿಗಳು ಒಂದೊಂದಾಗಿಯೇ ಆಯ್ದುಕೊಂಡಿದ್ದಾರೆ. ಈ ತಮಾಷೆಯ ಗಳಿಗೆಯಲ್ಲಿ ವೇದಿಕೆ ಮೇಲೆ ಮಾಜಿ ಸಿಎಂ ಹೆಚ್‍ಡಿ ಕುಮಾರಸ್ವಾಮಿಯೂ ಭಾಗಿಯಾಗಿದ್ದರು. ಇದನ್ನೂ ಓದಿ: ದೇಶದಲ್ಲಿ ಹುಲಿಗಳ ಸಾವಿನ ಸಂಖ್ಯೆ ಗಣನೀಯ ಏರಿಕೆ!

  • ನಿಂಬೆಹಣ್ಣು ಇಟ್ಕೊಳ್ಳೋ ಪ್ರಶ್ನೆಗೆ ರೇವಣ್ಣ ಖಡಕ್ ಉತ್ತರ

    ನಿಂಬೆಹಣ್ಣು ಇಟ್ಕೊಳ್ಳೋ ಪ್ರಶ್ನೆಗೆ ರೇವಣ್ಣ ಖಡಕ್ ಉತ್ತರ

    – ಬಿಜೆಪಿ ನಾಯಕರ ವಿರುದ್ಧ ಗಂಭೀರ ಆರೋಪ

    ಹಾಸನ: ನಿಂಬೆಹಣ್ಣು ಇಟ್ಟುಕೊಳ್ಳುವುದು ಯಾಕೆ ಎಂಬ ಪ್ರಶ್ನೆಗೆ ಮಾಜಿ ಸಚಿವ ಹೆಚ್.ಡಿ ರೇವಣ್ಣ ಉತ್ತರಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ರೇವಣ್ಣ ಯಾವಾಗಲೂ ಕೈಯಲ್ಲಿ ನಿಂಬೆಹಣ್ಣು ಇಟ್ಟುಕೊಳ್ತಾರೆ ಎಂಬ ಸಚಿವ ಸೋಮಶೇಖರ್ ಆರೋಪಕ್ಕೆ ಪ್ರತಿಕ್ರಿಯಿಸಿದರು. ದುಷ್ಟ ಶಕ್ತಿಗಳನ್ನ ಎದುರಿಸಲು ನಿಂಬೆಹಣ್ಣು ಇಟ್ಟುಕೊಳ್ಳಬೇಕು, ಅದಕ್ಕೆ ನಿಂಬೆಹಣ್ಣು ಇಟ್ಟುಕೊಂಡಿದ್ದೀನಿ. ಶತ್ರು ವೈರಿಗಳನ್ನು ಎದುರಿಸಲು ನಿಂಬೆಹಣ್ಣು ಇಟ್ಟುಕೊಂಡಿದ್ದೀನಿ. ಮಾಟ-ಮಂತ್ರ ಮಾಡ್ತಾರಲ್ಲಾ ಅವನ್ನ ಎದುರಿಸಲು ನಿಂಬೆಹಣ್ಣು ಇಟ್ಟುಕೊಳ್ಳಬೇಕಲ್ವಾ. ಇನ್ನು ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರೇ ನಿಂಬೆಹಣ್ಣು ಇಟ್ಟುಕೊಂಡಿದ್ದಾರೆ. ಇನ್ನು ನಾನು ನಿಂಬೆಹಣ್ಣು ಇಟ್ಟುಕೊಳ್ಳೋದ್ರಲ್ಲಾ ತಪ್ಪೇನಿದೆ ಎಂದು ರೇವಣ್ಣ ಇದೇ ವೇಳೆ ಪ್ರಶ್ನಿಸಿದರು.

    ರಾಜ್ಯದಲ್ಲಿ ಎರಡು ಹಂತದಲ್ಲಿ ಗ್ರಾ.ಪಂ ಚುನಾವಣೆ ನಡೆಯುತ್ತಿದೆ. ನ್ಯಾಯಾಲಯ ನಿರ್ದೇಶನ ನೀಡಿದ ಬಳಿಕ ಈಗ ಸರ್ಕಾರ ಗ್ರಾಪಂ ಚುನಾವಣೆ ನಡೆಸುತ್ತಿದೆ. ಚುನಾವಣೆ ನ್ಯಾಯಯುತವಾಗಿ ನಡೆಯಬೇಕು ಎಂದು ರಾಜ್ಯ ಚುನಾವಣಾ ಆಯೋಗಕ್ಕೆ ಮನವಿ ಮಾಡುತ್ತೇನೆ ಎಂದರು.

    ಗ್ರಾ.ಪಂ ಚುನಾವಣೆಗೆ ಸ್ಪರ್ಧಿಸುವ ಬಿಜೆಪಿಯ ಅಭ್ಯರ್ಥಿಗಳಿಗೆ ಪಿಡಿಓ ಹಾಗೂ ಕಾರ್ಯದರ್ಶಿಗಳು 10 ರಿಂದ 20 ಸಾವಿರ ಹಣ ನೀಡುವಂತೆ ದೊಡ್ಡಮಟ್ಟದ ಬಿಜೆಪಿ ನಾಯಕರು ಸೂಚಿಸಿದ್ದಾರೆಂಬ ಆರೋಪ ಕೇಳಿಬಂದಿದೆ. ಗ್ರಾಪಂ, ಪಿಡಿಓ ಮತ್ತು ವಂತಿಕೆ ನೀಡಬೇಕು ಎಂದು ಬಿಜೆಪಿ ನಾಯಕರು ಸೂಚಿಸಿದ್ದಾರೆ. ಹಣ ಕೊಡುವಂತೆ ಸೂಚಿಸಿದ್ದಾರೆ ಎಂದು ಅಧಿಕಾರಿಗಳೇ ಬಂದು ನಮಗೆ ಹೇಳಿದ್ದಾರೆ ಎಂದು ಸರ್ಕಾರದ ವಿರುದ್ಧ ರೇವಣ್ಣ ಹೊಸ ಬಾಂಬ್ ಸಿಡಿಸಿದರು.

    ಗ್ರಾಮ ಪಂಚಾಯ್ತಿ ಚುನಾವಣೆಗೆ ಸಿದ್ಧತೆ ಮಾಡಿಕೊಳ್ತಿದ್ದೀವಿ. ವೆಂಕಟರಮಣಸ್ವಾಮಿ ಗೋವಿಂದಾ, ಗೋವಿಂದಾ ಅಂತ ಜನಗಳ ಪಾದಕ್ಕೆ ಕೈಮುಗಿತೀವಿ ಅಂತ ರೇವಣ್ಣ ತಿಳಿಸಿದ್ದಾರೆ.

    ಹಾಸನದ ವಿಮಾನ ನಿಲ್ದಾಣವನ್ನು ಶಿವಮೊಗ್ಗಕ್ಕೆ ತೆಗೆದುಕೊಂಡು ಹೋಗಿದ್ದಾರೆ ಎಂಬ ಆರೋಪ ಮಾಡಿದ ಅವರು, ಬಿಜೆಪಿಯವರು ಯಾವ ನೈತಿಕತೆ ಇಟ್ಟುಕೊಂಡು ಮತ ಕೇಳ್ತಾರೆ ಎಂದು ಟೀಕೆ ಮಾಡಿದರು. ವ್ಯಾಪಾರ ಮಾಡುವಂತಹ ಗ್ರಾಮ ಸ್ವರಾಜ್ ಸಮಾವೇಶ ಮಾಡುತ್ತಿದ್ದಾರೆಂದು ರೇವಣ್ಣ ಆಕ್ರೋಶ ಹೊರಹಾಕಿದರು.

    ಹಾಸನ ಬೇಲೂರು ರಸ್ತೆಗೆ 800 ಕೋಟಿ ಹಣ ಬಿಡುಗಡೆ ಮಾಡಿದ್ದೇವೆ. ಹಿಂದಿನ ಸಮ್ಮಿಶ್ರ ಸರ್ಕಾರದಲ್ಲಿ ನಾವು ಅನುಮೋದನೆ ಮಾಡಿದ್ದೆವು. ಬಿಳಿಕೆರೆಯಿಂದ ಯಡೇಗೌಡನಹಳ್ಳಿ ಮತ್ತು ಹಾಸನದಿಂದ ಬೇಲೂರಿಗೆ ರಾಷ್ಟ್ರೀಯ ಹೆದ್ದಾರಿಯನ್ನ ನಾವು ಅನುಮೋದನೆ ಮಾಡಿದ್ದೆವು. ಬಿಳಿಕೆರೆಯಿಂದ ಬೇಲೂರಿಗೆ ರಾಷ್ಟ್ರೀಯ ಹೆದ್ದಾರಿಯನ್ನ ಸರ್ಕಾರದ ರದ್ದು ಮಾಡಿದೆ. ಬಿಜೆಪಿ ಸರ್ಕಾರ ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

    ಎರಡು ರಾಷ್ಟ್ರೀಯ ಪಕ್ಷಗಳು ಸೇರಿ ಮಂಡ್ಯದಲ್ಲಿ ಕುಮಾರಸ್ವಾಮಿ ಮಗನನ್ನು ಸೋಲಿಸಿದರು. ನಾವು ಯಾವಾಗಲೂ ರಾಷ್ಟ್ರೀಯ ಪಕ್ಷಗಳಿಂದ ದೂರ ಇದ್ದೇವೆ. 2023ಕ್ಕೆ ಇನ್ನೊಂದು ಟವಲ್ ಹಾಕ್ತೀವಿ, 2021 ಕ್ಕೂ ಅಥವಾ 2022ಕ್ಕೋ ನೋಡೋಣ. ಕಾಂಗ್ರೆಸ್ ಮತ್ತು ಬಿಜೆಪಿ ಬಿಡೋರೇ ಹೆಚ್ಚಾಗಿದ್ದಾರೆ. ರಾಜ್ಯ ಮತ್ತು ರಾಷ್ಟ್ರದ ಚುನಾವಣಾ ಆಯೋಗ ಏನು ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.