Tag: Lehanga

  • ಮುಂದಿನ ವರ್ಷ ಮದ್ವೆಗೆ ಈಗ್ಲೇ ಲೆಹೆಂಗಾ ಆರ್ಡರ್ ಮಾಡಿದ ಆಲಿಯಾ

    ಮುಂದಿನ ವರ್ಷ ಮದ್ವೆಗೆ ಈಗ್ಲೇ ಲೆಹೆಂಗಾ ಆರ್ಡರ್ ಮಾಡಿದ ಆಲಿಯಾ

    ಮುಂಬೈ: ಬಾಲಿವುಡ್ ನಟಿ ಆಲಿಯಾ ಭಟ್ ಅವರು ಮುಂದಿನ ವರ್ಷದಲ್ಲಿ ಮದುವೆಯಾಗುತ್ತಿದ್ದು, ಈಗಲೇ ಅವರು ಸಬ್ಯಸಾಚಿ ವಿನ್ಯಾಸದ ಲೆಹೆಂಗಾವನ್ನು ಆರ್ಡರ್ ಮಾಡಿದ್ದಾರೆ ಎಂಬ ಸುದ್ದಿ ಬಿ-ಟೌನ್‍ನಲ್ಲಿ ಹರಿದಾಡುತ್ತಿದೆ.

    ನಟ ರಣ್‍ಬೀರ್ ಕಪೂರ್ ಹಾಗೂ ಅಲಿಯಾ ಭಟ್ 2018ರಿಂದ ಒಬ್ಬರಿಗೊಬ್ಬರು ಡೇಟಿಂಗ್ ನಡೆಸುತ್ತಿದ್ದರು. ಈಗ ಅವರು 2020ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಹಾಗಾಗಿ ಅವರು ಈಗಲೇ ಲೆಹೆಂಗಾ ಬುಕ್ ಮಾಡಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ.

    ಆಲಿಯಾ ವಸ್ತ್ರವಿನ್ಯಾಸಕ ಸಬ್ಯಸಾಚಿ ಅವರನ್ನು ಏಪ್ರಿಲ್ ತಿಂಗಳಲ್ಲಿ ಭೇಟಿ ಮಾಡಿ ಮದುವೆಯ ಲೆಹೆಂಗಾ ಬಗ್ಗೆ ಮಾತುಕತೆ ನಡೆಸಿದ್ದಾರೆ. ಈಗ ಆ ಲೆಹೆಂಗಾ ತಯಾರಿಸುವ ಕೆಲಸ ಶುರುವಾಗಿದೆ ಎಂದು ಹೇಳಲಾಗುತ್ತಿದೆ. ಈ ಮೊದಲು ಸಬ್ಯಸಾಚಿ ಅವರು ಅನುಷ್ಕಾ ಶರ್ಮಾ, ದೀಪಿಕಾ ಪಡುಕೋಣೆ ಹಾಗೂ ಪ್ರಿಯಾಂಕ ಚೋಪ್ರಾ ಮದುವೆಯ ಲೆಹೆಂಗಾವನ್ನು ವಿನ್ಯಾಸ ಮಾಡಿದ್ದಾರೆ.

    ರಣ್‍ಬೀರ್ ಹಾಗೂ ಅಲಿಯಾ ಈಗ ‘ಬ್ರಹ್ಮಾಸ್ತ್ರ’ ಚಿತ್ರದ ಶೂಟಿಂಗ್‍ನಲ್ಲಿ ಬ್ಯುಸಿಯಾಗಿದ್ದಾರೆ. ವರದಿಗಳ ಪ್ರಕಾರ ರಣ್‍ಬೀರ್ ಅವರ ತಂದೆ, ಹಿರಿಯ ನಟ ರಿಷಿ ಕಪೂರ್ ಅವರು ಭಾರತಕ್ಕೆ ಮರಳಿದ ನಂತರ ಮದುವೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. ರಿಷಿ ಕಪೂರ್ ಅವರು ಸೆಪ್ಟೆಂಬರ್ ತಿಂಗಳಿನಿಂದ ಅಮೆರಿಕದಲ್ಲಿ ಕ್ಯಾನ್ಸರ್ ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗ ಅವರು ಗುಣಮುಖರಾಗಿದ್ದು, ಮುಂಬೈಗೆ ಯಾವಾಗ ಹಿಂತಿರುಗುತ್ತಾರೆ ಎಂಬ ವಿಷಯವನ್ನು ಅಧಿಕೃತವಾಗಿ ಹಂಚಿಕೊಂಡಿಲ್ಲ.