Tag: Leh

  • ಹಿಂಸಾಚಾರಕ್ಕೆ ತಿರುಗಿದ ಲಡಾಖ್‌ ರಾಜ್ಯ ಸ್ಥಾನಮಾನ ಪ್ರತಿಭಟನೆ – 4 ಬಲಿ, ಬಿಜೆಪಿ ಕಚೇರಿಗೆ ಬೆಂಕಿ

    ಹಿಂಸಾಚಾರಕ್ಕೆ ತಿರುಗಿದ ಲಡಾಖ್‌ ರಾಜ್ಯ ಸ್ಥಾನಮಾನ ಪ್ರತಿಭಟನೆ – 4 ಬಲಿ, ಬಿಜೆಪಿ ಕಚೇರಿಗೆ ಬೆಂಕಿ

    – ಹಿಂಸಾಚಾರಕ್ಕೆ ಕಾಂಗ್ರೆಸ್‌ ಕಾರಣ ಎಂದ ಬಿಜೆಪಿ

    ಲೆಹ್‌: ಕೇಂದ್ರಾಡಳಿತ ಪ್ರದೇಶ ಲಡಾಖ್‌ಗೆ (Ladakh’s Statehood Protests) ರಾಜ್ಯ ಸ್ಥಾನಮಾನ ನೀಡುವಂತೆ ಆಗ್ರಹಿಸಿ ನಡೆದ ಪ್ರತಿಭಟನೆ ಹಿಂಸಾರೂಪ ಪಡೆದಿದೆ. 4 ಜನ ಬಲಿಯಾಗಿದ್ದು, 50ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ.

    ಲಡಾಖ್ ಅಪೆಕ್ಸ್ ಬಾಡಿ (LAB)  ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರು ಪೊಲೀಸರೊಂದಿಗೆ ಘರ್ಷಣೆ ನಡೆಸಿ, ಬಿಜೆಪಿ ಕಚೇರಿಗೆ ಬೆಂಕಿ ಹಚ್ಚಿದ್ದಾರೆ. ಹಲವು ವಾಹನಗಳು ಸುಟ್ಟಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಪೊಲೀಸರು ಲಾಠಿ ಪ್ರಹಾರ ನಡೆಸಿ, ಅಶ್ರುವಾಯು ಶೆಲ್‌ಗಳನ್ನು ಸಿಡಿಸಿದರು. ಇದನ್ನೂ ಓದಿ: ಪಹಲ್ಗಾಮ್‌ ದಾಳಿಯಲ್ಲಿ ಉಗ್ರರಿಗೆ ಸಹಾಯ ಮಾಡಿದ್ದ ವ್ಯಕ್ತಿ ಬಂಧನ

    ಕೇಂದ್ರ ಸರ್ಕಾರ ಹಾಗೂ ಸ್ಥಳೀಯ ಆಡಳಿತವು ತಮ್ಮ ಬೇಡಿಕೆಗಳಿಗೆ ಸ್ಪಂದಿಸದಿರುವುದರಿಂದ ಪ್ರತಿಭಟನೆ ತೀವ್ರಗೊಂಡಿದೆ ಎಂದು ಎಲ್‌ಎಬಿ ಸಂಘಟಕರು ಆರೋಪಿಸಿದ್ದಾರೆ.

    ಹಿಂಸಾಚಾರ ತೀವ್ರಗೊಂಡ ಬೆನ್ನಲ್ಲೇ ಕೇಂದ್ರ ಆಡಳಿತವು ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (BNSS), 2023 ರ ಸೆಕ್ಷನ್ 163 ರ ಅಡಿಯಲ್ಲಿ ಕರ್ಫ್ಯೂ ಹೇರಿ ತಕ್ಷಣವೇ ಲೇಹ್‌ನಲ್ಲಿ ಪ್ರತಿಭಟನೆಗಳು ನಿಷೇಧಿಸಿದೆ.

    ಸೆ.10ರಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ 15 ಜನರಲ್ಲಿ ಇಬ್ಬರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ದಾದ ನಂತರ ಎಲ್‌ಎಬಿ ಯುವ ಘಟಕವು ಬಂದ್ ಮತ್ತು ಬೃಹತ್ ಪ್ರತಿಭಟನೆಗೆ ಕರೆ ನೀಡಿತು. ಹಿಂಸಾಚಾರ ಹಿನ್ನೆಲೆಯಲ್ಲಿ ಹೋರಾಟಗಾರ ಸೋನಮ್ ವಾಂಗ್ ಚುಕ್ (Sonam Wangchuk) ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ್ದಾರೆ. ಲಡಾಖ್‌ಗೆ ರಾಜ್ಯದ ಮಾನ್ಯತೆ ನೀಡುವುದು ಮತ್ತು ಆರನೇ ಪರಿಚ್ಛೇದದಡಿಯಲ್ಲಿ ಸೇರಿಸುವ ಬೇಡಿಕೆ ಈಡೇರಿದಾಗ ಮಾತ್ರ ತಮ್ಮ ಹೋರಾಟವನ್ನು ಹಿಂಪಡೆಯುವುದಾಗಿ ಘೋಷಿಸಿದ್ದಾರೆ.

    ಲಡಾಖ್‌ ಪ್ರತಿಭಟನೆಯ ಹಿಂದೆ ಕಾಂಗ್ರೆಸ್‌ ಇದೆ. ಸ್ಥಳೀಯ ಕಾಂಗ್ರೆಸ್‌ ನಾಯಕರೇ ಈ ಹಿಂಸಾಚಾರಕ್ಕೆ ಕಾರಣ ಎಂದು ಆರೋಪಿಸಿ ಬಿಜೆಪಿ ವಿಡಿಯೋ ಬಿಡುಗಡೆ ಮಾಡಿದೆ.

  • 2 ಗಂಟೆ ಹಾರಾಟದ ಬಳಿಕ ತಾಂತ್ರಿಕ ದೋಷ – ಲೇಹ್‌ಗೆ ಹೊರಟಿದ್ದ ಇಂಡಿಗೋ ವಿಮಾನ ದೆಹಲಿಗೆ ವಾಪಸ್‌

    2 ಗಂಟೆ ಹಾರಾಟದ ಬಳಿಕ ತಾಂತ್ರಿಕ ದೋಷ – ಲೇಹ್‌ಗೆ ಹೊರಟಿದ್ದ ಇಂಡಿಗೋ ವಿಮಾನ ದೆಹಲಿಗೆ ವಾಪಸ್‌

    ನವದೆಹಲಿ: ಲಡಾಕ್‌ನ ಲೇಹ್‌ಗೆ (Leh) ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ (IndiGo Flight) ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ದೆಹಲಿಗೆ (Delhi) ವಾಪಸ್‌ ಆಗಿದೆ.

    ಇಂಡಿಗೋ ವಿಮಾನ ಇಂದು (ಜೂ.19) ಬೆಳಿಗ್ಗೆ ದೆಹಲಿಯಿಂದ ಲೇಹ್‌ಗೆ ತೆರಳುತ್ತಿತ್ತು. ಸುಮಾರು 2 ಗಂಟೆಗಳಿಗೂ ಹೆಚ್ಚು ಕಾಲ ವಿಮಾನ ಹಾರಾಟ ನಡೆಸಿತ್ತು. ಇನ್ನೇನೂ ಲೇಹ್‌ ಸಮೀಪ ಇರುವಾಗ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ (Emergency Landing) ಮಾಡಲಾಗಿದೆ.  ಇದನ್ನೂ ಓದಿ: ಜ್ವಾಲಾಮುಖಿ ಸ್ಫೋಟ – ದೆಹಲಿಯಿಂದ ಬಾಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ವಾಪಸ್

    ವಿಮಾನ ಸುರಕ್ಷಿತವಾಗಿ ಲ್ಯಾಂಡ್‌ ಆಗಿದೆ. ಅದರಲ್ಲಿ 180 ಜನ ಇದ್ದರು ಎಂದು ವರದಿಯಾಗಿದೆ.

    ವಿಮಾನದ ತುರ್ತು ಲ್ಯಾಂಡಿಂಗ್‌ಗೆ ಕಾರಣವಾದ ತಾಂತ್ರಿಕ ಸಮಸ್ಯೆಯ ಬಗ್ಗೆ ವಿಮಾನಯಾನ ಸಂಸ್ಥೆ ಇನ್ನೂ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ. ಇದನ್ನೂ ಓದಿ: ‌ಇರಾನ್‌ನಿಂದ ಖಂಡಾಂತರ ಕ್ಷಿಪಣಿ ದಾಳಿ – ದಕ್ಷಿಣ ಇಸ್ರೇಲ್‌ನ ಅತಿದೊಡ್ಡ ಆಸ್ಪತ್ರೆ ಉಡೀಸ್‌

  • ಲೇಹ್‌ನಲ್ಲಿ ಸೈನಿಕರೊಂದಿಗೆ ಹೋಳಿ ಆಚರಿಸಿದ ರಾಜನಾಥ್ ಸಿಂಗ್

    ಲೇಹ್‌ನಲ್ಲಿ ಸೈನಿಕರೊಂದಿಗೆ ಹೋಳಿ ಆಚರಿಸಿದ ರಾಜನಾಥ್ ಸಿಂಗ್

    ನವದೆಹಲಿ: ಹೋಳಿ (Holi) ಹಬ್ಬದ ಪ್ರಯುಕ್ತ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಲಡಾಖ್‌ನ (Ladakh) ಲೇಹ್‌ಗೆ (Leh) ತೆರಳಿ ಭಾನುವಾರ ಸೈನಿಕರೊಂದಿಗೆ (Soldiers) ಬಣ್ಣದ ಹಬ್ಬ ಹೋಳಿಯನ್ನು ಆಚರಿಸಿದರು.

    ಹೋಳಿ ಹಬ್ಬ ಆಚರಣೆ ವೇಳೆ ರಾಜನಾಥ್ ಸಿಂಗ್ ಜೊತೆ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಮತ್ತು ಲೆಫ್ಟಿನೆಂಟ್ ಜನರಲ್ ರಶೀಮ್ ಬಾಲಿ ಉಪಸ್ಥಿತರಿದ್ದರು. ಇದಕ್ಕೂ ಮೊದಲು ರಕ್ಷಣಾ ಸಚಿವರು ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್ (Siachen) ಪ್ರದೇಶಕ್ಕೆ ಭೇಟಿ ನೀಡಲು ನಿರ್ಧರಿಸಿದ್ದರು. ಆದರೆ ಪ್ರತಿಕೂಲ ಹವಾಮಾನದಿಂದ ಅದು ಸಾಧ್ಯವಾಗಲಿಲ್ಲ. ಭೇಟಿ ಅಸಾಧ್ಯವಾದ ಹಿನ್ನೆಲೆ ಅಲ್ಲಿನ ಕಮಾಂಡಿಂಗ್ ಅಧಿಕಾರಿಯೊಂದಿಗೆ ದೂರವಾಣಿ ಮೂಲಕ ಮಾತನಾಡಿದ ರಾಜನಾಥ್ ಸಿಂಗ್, ಆದಷ್ಟು ಬೇಗ ಸಿಯಾಚಿನ್ ಪ್ರದೇಶಕ್ಕೆ ಭೇಟಿ ನೀಡಿ ಅವರನ್ನು ಭೇಟಿ ಮಾಡುವುದಾಗಿ ತಿಳಿಸಿದರು. ಇದನ್ನೂ ಓದಿ: ನಿವೃತ್ತ ವಾಯುಸೇನೆ ಮುಖ್ಯಸ್ಥ ಭದೌರಿಯಾ ಬಿಜೆಪಿ ಸೇರ್ಪಡೆ

    ಈ ಸಂದರ್ಭದಲ್ಲಿ ಯೋಧರನ್ನುದ್ದೇಶಿಸಿ ಮಾತನಾಡಿದ ಅವರು, ದೆಹಲಿ ನಮ್ಮ ರಾಜಧಾನಿಯಾದರೇ, ಲಡಾಖ್ ಶೌರ್ಯವನ್ನು ತೋರಿಸುವ ಮತ್ತೊಂದು ರಾಜಧಾನಿಯಾಗಿದೆ. ನಿಮ್ಮೆಲ್ಲರನ್ನು ಭೇಟಿ ಮಾಡಿ ಹೋಳಿ ಆಚರಿಸಿರುವುದು ನನಗೆ ಅತ್ಯಂತ ಸಂತೋಷದಾಯಕ ಕ್ಷಣ. ಸಿಯಾಚಿನ್ ಸಾಮಾನ್ಯ ಪ್ರದೇಶವಲ್ಲ. ಇದು ಭಾರತದ ಸಾರ್ವಭೌಮತ್ವ ಮತ್ತು ನಿರ್ಣಯದ ಸಂಕೇತ. ಇದು ನಮ್ಮ ರಾಷ್ಟ್ರೀಯ ನಿರ್ಣಯವನ್ನು ಪ್ರತಿನಿಧಿಸುತ್ತದೆ ಎಂದರು. ಇದನ್ನೂ ಓದಿ: ಇಡಿ ಕಸ್ಟಡಿಯಲ್ಲಿದ್ದುಕೊಂಡೇ ಮೊದಲ ಸರ್ಕಾರಿ ಆದೇಶ ಹೊರಡಿಸಿದ ಕೇಜ್ರಿವಾಲ್‌ – ಆದೇಶದಲ್ಲಿ ಏನಿದೆ?

    ನಿಮ್ಮನ್ನು, ನಿಮ್ಮ ಮಕ್ಕಳನ್ನು, ನಿಮ್ಮ ಹೆತ್ತವರನ್ನು, ಕುಟುಂಬವನ್ನು ನೋಡಿಕೊಳ್ಳುವುದು ನಮ್ಮ ಕರ್ತವ್ಯ. ಅದಕ್ಕೆ ನಾವು ಯಾವಾಗಲೂ ಸಿದ್ಧರಿದ್ದೇವೆ. ನಾನು ನಿಮಗೆ ಏನನ್ನೂ ಹೇಳಬೇಕಿಲ್ಲ. ನೀವು ನಿಮ್ಮ ದೇಹ ಮತ್ತು ಮನಸ್ಸನ್ನು ಅರ್ಪಿಸಿ ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದೀರಿ. ನಮ್ಮ ಸರ್ಕಾರವೂ ಸಶಸ್ತ್ರಪಡೆಗಳ ಸುಧಾರಣೆಗಾಗಿ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ಉಗ್ರನಾಗಲು ಐಸಿಸ್‌ ಸೇರಲು ಮುಂದಾಗಿದ್ದ ಐಐಟಿ ವಿದ್ಯಾರ್ಥಿ ವಶಕ್ಕೆ

  • ಲಡಾಖ್‌ನಲ್ಲಿ ಕಮರಿಗೆ ಉರುಳಿದ ಸೇನಾ ವಾಹನ – 9 ಮಂದಿ ಯೋಧರು ಹುತಾತ್ಮ

    ಲಡಾಖ್‌ನಲ್ಲಿ ಕಮರಿಗೆ ಉರುಳಿದ ಸೇನಾ ವಾಹನ – 9 ಮಂದಿ ಯೋಧರು ಹುತಾತ್ಮ

    ಲೇಹ್: ದಕ್ಷಿಣ ಲಡಾಖ್‌ನ (Ladakh) ನ್ಯೋಮಾದಲ್ಲಿ ಭಾರತೀಯ ಸೇನಾ ವಾಹನ ಆಳವಾದ ಕಂದಕಕ್ಕೆ ಉರುಳಿದ ಪರಿಣಾಮ 9 ಮಂದಿ ಸೈನಿಕರು (Soldiers) ಹುತಾತ್ಮರಾಗಿದ್ದು, ಮತ್ತೊಬ್ಬ ಅಧಿಕಾರಿ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.

    ಮೃತರಲ್ಲಿ 8 ಮಂದಿ ಯೋಧರು ಮತ್ತು ಒಬ್ಬರು ಕಮಿಷನ್ಡ್ ಆಫೀಸರ್ (ಜೆಸಿಒ) ಆಗಿದ್ದರು. ಸೇನಾ ಟ್ರಕ್ (Army Vehicle) ಗ್ಯಾರಿಸನ್‌ನಿಂದ ಲೇಹ್ ಬಳಿಯ ಕ್ಯಾರಿಗೆ ಚಲಿಸುತ್ತಿದ್ದ ಸಂದರ್ಭ ಕ್ಯಾರಿ ಪಟ್ಟಣದಿಂದ 7 ಕಿ.ಮೀ. ಮುಂದೆ ಕಮರಿಗೆ ಬಿದ್ದಿದೆ. ಇದನ್ನೂ ಓದಿ: ಕೆಟಿಎಮ್ 390 ಬೈಕ್‌ನಲ್ಲಿ ರಾಹುಲ್ ಗಾಂಧಿ ಲಡಾಖ್ ಪ್ರವಾಸ – ಪ್ಯಾಂಗಾಂಗ್ ಸರೋವರ ಭೇಟಿ

    ಶನಿವಾರ ಸಂಜೆ 6:30ರ ಸುಮಾರಿಗೆ ಘಟನೆ ನಡೆದಿದ್ದು, ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajanath Singh) ಸಾಮಾಜಿಕ ಜಾಲತಾಣದಲ್ಲಿ ಮೃತ ಯೋಧರಿಗೆ ಸಂತಾಪ ಸೂಚಿಸಿದ್ದಾರೆ. ಲಡಾಖ್‌ನ ಲೇಹ್ ಬಳಿ ಅಪಘಾತದಿಂದಾಗಿ ಭಾರತೀಯ ಸೇನಾ ಸಿಬ್ಬಂದಿಯನ್ನು ಕಳೆದುಕೊಂಡಿರುವುದು ಬಹಳ ದುಃಖವನ್ನುಂಟುಮಾಡಿದೆ. ನಮ್ಮ ದೇಶಕ್ಕೆ ಅವರ ಆದರ್ಶ ಸೇವೆಯನ್ನು ಎಂದಿಗೂ ಮರೆಯುವುದಿಲ್ಲ. ಗಾಯಗೊಂಡ ಸಿಬ್ಬಂದಿಯನ್ನು ಆಸ್ಪತ್ರೆಗೆ ರವಾನಿಸಲಾಗಿದೆ, ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ರಾಜನಾಥ್ ಸಿಂಗ್ ಟ್ವೀಟ್ (Tweet) ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ದ್ವಾರಕಾ ಎಕ್ಸ್‌ಪ್ರೆಸ್‌ವೇ ಯೋಜನೆಯಲ್ಲಿ ಅಕ್ರಮ ನಡೆದಿಲ್ಲ: ನಿತಿನ್ ಗಡ್ಕರಿ ಸ್ಪಷ್ಟನೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಲಡಾಖ್‌ನಲ್ಲಿ 4.8 ತೀವ್ರತೆಯ ಭೂಕಂಪ

    ಲಡಾಖ್‌ನಲ್ಲಿ 4.8 ತೀವ್ರತೆಯ ಭೂಕಂಪ

    ಲೇಹ್: ಲಡಾಖ್‍ನ (Ladakh) ಲೇಹ್‍ನಲ್ಲಿ (Leh) ಇಂದು ಬೆಳಗ್ಗೆ ಭೂಕಂಪವಾಗಿದ್ದು (Earthquake), ರಿಕ್ಟರ್ ಮಾಪಕದಲ್ಲಿ (Richter scale) 4.8 ತೀವ್ರತೆ ದಾಖಲಾಗಿದೆ.

    ರಾಷ್ಟ್ರೀಯ ಭೂಕಂಪಶಾಸ್ತ್ರ ಇಲಾಖೆ (National Center for Seismology department) ಭೂಕಂಪದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಇಂದು ಬೆಳಗಿನ ಜಾವ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 4.8 ತೀವ್ರತೆ ದಾಖಲಾಗಿದೆ. ಲೇಹ್‍ನ ಅಲ್ಚಿಯಿಂದ ಉತ್ತರಕ್ಕೆ 189 ಕಿ.ಮೀ ದೂರದಲ್ಲಿ ನೆಲದಿಂದ 10 ಕಿ.ಮೀ ಆಳದಲ್ಲಿ ಬೆಳಗಿನ ಜಾವ 4:19ರ ಸುಮಾರಿಗೆ ಭೂಕಂಪ ಸಂಭವಿಸಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಶಸ್ತ್ರಾಸ್ತ್ರಗಳನ್ನು ತ್ಯಜಿಸಿ – ಉಗ್ರರಿಗೆ ಗುಲಾಂ ನಬಿ ಆಜಾದ್‌ ಮನವಿ

    16 ಸೆಪ್ಟೆಂಬರ್ 2022 ರಂದು ಬೆಳಗ್ಗೆ 04:19:41 ಗಂಟೆಗೆ ಭೂಕಂಪ ತೀವ್ರತೆ 4.8, ಲ್ಯಾಟ್: 35.89, ಉದ್ದ: 77.57, ಆಳ: 10 ಕಿ.ಮೀ, ಸ್ಥಳ: ಅಲ್ಚಿ (ಲೇಹ್) ನ 189 ಕಿ.ಮೀ ಉತ್ತರದಲ್ಲಿ ಭೂಕಂಪವಾಗಿದೆ. ಭೂಕಂಪದಿಂದಾಗಿ ಹಾನಿ ಅಥವಾ ಸಾವು ನೋವುಗಳ ಬಗ್ಗೆ ವರದಿಯಾಗಿಲ್ಲ. ಇದನ್ನೂ ಓದಿ: 8 ವರ್ಷದ ಬಳಿಕ ಗೊತ್ತಾಯ್ತು ತನ್ನ ಪತಿ ಅವನಲ್ಲ ಅವಳು – ಗಂಡನ ಲಿಂಗ ಬದಲಾವಣೆ ತಿಳಿದು ಮಹಿಳೆ ಶಾಕ್

    ಕಳೆದ ವಾರದ ಆರಂಭದಲ್ಲಿ, ರಿಕ್ಟರ್ ಮಾಪಕದಲ್ಲಿ 3.5 ತೀವ್ರತೆಯ ಭೂಕಂಪವು ಜಮ್ಮು ಮತ್ತು ಕಾಶ್ಮೀರದ ಕತ್ರಾದಿಂದ 62 ಕಿ.ಮೀ ಪೂರ್ವ, ಈಶಾನ್ಯಕ್ಕೆ ಸಂಭವಿಸಿತ್ತು. ಆ ಬಳಿಕ ಕೆಲ ದಿನಗಳ ಹಿಂದೆ ಲೇಹ್‍ನ ಅಲ್ಚಿಯಲ್ಲಿ ಲಘು ಭೂಕಂಪನದ ಅನುಭವವಾಗಿತ್ತು. ಅಲ್ಚಿ ಪ್ರದೇಶದ ಮನೆಗಳ ಬಾಗಿಲು, ಕಿಟಕಿಗಳು ಅಲುಗಾಡಲಾರಂಭಿಸಿತ್ತು. ಜನರು ಭಯದಿಂದ ಮನೆಯಿಂದ ಹೊರಬಂದಿದ್ದರು.

    Live Tv
    [brid partner=56869869 player=32851 video=960834 autoplay=true]

  • ಬಡ ಹುಡುಗಿಯರ ಶಿಕ್ಷಣಕ್ಕೆ ಲಡಾಖ್‍ನ ವರ್ಜಿನ್ ಶಿಖರ ಏರುತ್ತಿರುವ ಗಟ್ಟಿಗಿತ್ತಿಯರು

    ಬಡ ಹುಡುಗಿಯರ ಶಿಕ್ಷಣಕ್ಕೆ ಲಡಾಖ್‍ನ ವರ್ಜಿನ್ ಶಿಖರ ಏರುತ್ತಿರುವ ಗಟ್ಟಿಗಿತ್ತಿಯರು

    ಲೇಹ್: ಇಬ್ಬರು ತೆಲಂಗಾಣ ಯುವತಿಯರು ಲಡಾಖ್‍ನ ವರ್ಜಿನ್ ಶಿಖರವನ್ನು ಏರುವ ಮೂಲಕ ಬಡ ಹುಡುಗಿಯರ ಶಿಕ್ಷಣಕ್ಕೆ ಸಹಾಯ ಮಾಡಲು ಮುಂದಾಗಿದ್ದಾರೆ.

    ತೆಲಂಗಾಣದ ಈ ಇಬ್ಬರು ಯುವತಿಯರು ಪ್ರಾಜೆಕ್ಟ್ ಶಕ್ತಿಗಾಗಿ ಲಡಾಖ್‍ನ ವರ್ಜಿನ್ ಶಿಖರವನ್ನು ಹತ್ತುತ್ತಿದ್ದಾರೆ. ಈ ಮೂಲಕ ಕಡಿಮೆ ಸವಲತ್ತು ಹೊಂದಿರುವ 100ಕ್ಕೂ ಹೆಚ್ಚು ಹುಡುಗಿಯರ ಜೀವನದಲ್ಲಿ ಬದಲಾವಣೆ ತರುವುದು ಇವರ ಮುಖ್ಯ ಉದ್ದೇಶ. ಈ ಶಿಖರವನ್ನು ಹತ್ತಿ ಗೆದ್ದ ಹಣದಲ್ಲಿ ಬಡ ಹುಡುಗಿಯರಿಗೆ ಸಹಾಯ ಮಾಡಲು ಈ ಇಬ್ಬರು ಗಟ್ಟಿಗಿತ್ತಿಯರು ಸಿದ್ಧರಾಗಿದ್ದಾರೆ. ಇದನ್ನೂ ಓದಿ: 16 ವರ್ಷದ ಮಗನ ಮುಂದೆಯೇ ತಂದೆಯನ್ನು ಹತ್ಯೆ ಮಾಡಿದ ದುಷ್ಕರ್ಮಿ 

    ಯಾರಿವರು?
    ಕಾವ್ಯ ಮಾನ್ಯಪು ಇವರು ಅಮೆರಿಕಾದಲ್ಲಿ ಅಧ್ಯಕ್ಷ ಪ್ರಶಸ್ತಿ ಪುರಸ್ಕೃತೆ ಮತ್ತು ಬಾಹ್ಯಾಕಾಶ ವಿಜ್ಞಾನಿ. ಪೂರ್ಣಾ ಮಾಲವತ್ ಅವರು ಮೌಂಟ್ ಎವರೆಸ್ಟ್ ಏರಿದ ಮತ್ತು ಏಳು ಶೃಂಗಗಳ ಸವಾಲನ್ನು ಪೂರ್ಣಗೊಳಿಸಿದ ಅತ್ಯಂತ ಕಿರಿಯ ಮಹಿಳೆ. ಈಗ ಈ ಇಬ್ಬರು ಗಟ್ಟಿಗಿತ್ತಿಯರು ಒಟ್ಟಾಗಿ, 1,00,000 ಡಾಲರ್(79,76,288 ರೂ.) ಮೊತ್ತವನ್ನು ಸಂಗ್ರಹಿಸುವ ಗುರಿಯನ್ನು ಹೊಂದಿದ್ದಾರೆ.

    ಸೋಮವಾರ ಇಬ್ಬರು ಯುವತಿಯರು ಹೈದರಾಬಾದ್‍ನಿಂದ ಲಡಾಖ್‍ನ ಲೇಹ್‍ಗೆ ಹೊರಟಿದ್ದಾರೆ. ಮುಂದಿನ 15 ದಿನಗಳಲ್ಲಿ, ಇಬ್ಬರೂ ಲಡಾಖ್‍ನಲ್ಲಿ ಇನ್ನೂ ಯಾರು ಏರದ ಮತ್ತು ಹೆಸರಿಲ್ಲದ 6,200 ಮೀಟರ್ ಎತ್ತರದ ಪರ್ವತ ಶಿಖರವನ್ನು ಏರಲಿದ್ದಾರೆ. ಅವರು ಹಲವು ಶಿಖರವನ್ನು ಮುಂದೆ ಏರಲಿದ್ದು, ಇದು ಅವರ ಪ್ರಾಜೆಕ್ಟ್ ಶಕ್ತಿಯ ಮೊದಲನೆಯ ಶಿಖರವಾಗಿದೆ ಎಂದು ತಿಳಿಸಿದ್ದಾರೆ.

    ಕಾವ್ಯ ಮತ್ತು ಪೂರ್ಣಾ ಇಬ್ಬರೂ ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯ ಮೂಲದವರು. 2019 ರಲ್ಲಿ ಪೂರ್ಣಾ ಯುಎಸ್‍ಗೆ ಕಾರ್ಯಕ್ರಮವೊಂದಕ್ಕೆ ಹೋದಾಗ ಇಬ್ಬರು ಮೊದಲು ಭೇಟಿಯಾದರು. ನಂತರ ಇವರಿಬ್ಬರ ಜರ್ನಿ ಪ್ರಾರಂಭವಾಗಿ ಇಲ್ಲಿಗೆ ಬಂದು ನಿಂತಿದೆ. ಇದನ್ನೂ ಓದಿ: ನಾನ್‍ವೆಜ್ ಪ್ರಿಯರ ಆಲ್‍ಟೈಮ್ ಫೇವರೆಟ್ ‘ಕುಷ್ಕಾ’ ಮಾಡುವ ರೆಸಿಪಿ

    ಈ ಕುರಿತು ಮಾತನಾಡಿದ ಕಾವ್ಯ ಅವರು, ಪ್ರಾಜೆಕ್ಟ್ ಶಕ್ತಿಯ ಭಾಗವಾಗಿ, ನಾವು ಪರ್ವತಾರೋಹಣವನ್ನು ವೇದಿಕೆಯಾಗಿ ಆರಿಸಿಕೊಂಡಿದ್ದೇವೆ. ಏಕೆಂದರೆ ಇದು ಮಹಿಳೆಯ ವೃತ್ತಿ ಅಥವಾ ಅನ್ವೇಷಣೆಯ ಅತ್ಯಂತ ಅಸಾಂಪ್ರದಾಯಿಕ ರೂಪವಾಗಿದೆ. ಆದರೂ ನಾವು ಇದನ್ನು ಮಾಡಲು ಇಷ್ಟಪಡುತ್ತೇವೆ. ಹುಡುಗಿಯರು ದೊಡ್ಡ ಕನಸು ಕಾಣಬೇಕು ಮತ್ತು ಅವರು ಮಾಡಲು ಬಯಸಿದ್ದನ್ನು ಮಾಡಬೇಕು. ಇದೇ ನಾನು ಎಲ್ಲರಿಗೂ ನೀಡುವ ಸಂದೇಶ ಎಂದು ತಿಳಿಸಿದರು.

    ಜೂನ್‍ನಲ್ಲಿ ಉತ್ತರ ಅಮೆರಿಕಾದಲ್ಲಿ ತನ್ನ ಕೊನೆಯ ಕ್ಲೈಂಬಿಂಗ್ ದಂಡಯಾತ್ರೆಯನ್ನು ಮುಗಿಸಿ ಹಿಂತಿರುಗಿರುವ ಪೂರ್ಣಾ, ಲಡಾಖ್‍ನಲ್ಲಿ ಮಿಷನ್‍ಗಾಗಿ ಎದುರು ನೋಡುತ್ತಿದ್ದಾರೆ. ಈ ಕುರಿತು ಮಾತನಾಡಿದ ಅವರು, ನಾನು ತುಂಬಾ ಉತ್ಸುಕಳಾಗಿದ್ದೇನೆ. ಇಲ್ಲಿಯವರೆಗೆ, ನಾನು ನನ್ನ ಉತ್ಸಾಹಕ್ಕಾಗಿ ಪರ್ವತಗಳನ್ನು ಏರಿದ್ದೇನೆ. ಈ ಬಾರಿ ನಾನು ಅದನ್ನು ಒಂದು ಒಳ್ಳೆಯ ಉದ್ದೇಶಕ್ಕೆ ಮಾಡುತ್ತಿದ್ದೇನೆ. ಅದಕ್ಕೆ ಸಂತೋಷವಾಗುತ್ತಿದೆ ಎಂದರು.

    Live Tv
    [brid partner=56869869 player=32851 video=960834 autoplay=true]

  • ತಿಂಗ್ಳ ಹಸುಗೂಸಿಗಾಗಿ ಪ್ರತಿದಿನ 1,000 ಕಿಮೀ ದೂರದಿಂದ ಬರ್ತಿದೆ ತಾಯಿ ಎದೆಹಾಲು

    ತಿಂಗ್ಳ ಹಸುಗೂಸಿಗಾಗಿ ಪ್ರತಿದಿನ 1,000 ಕಿಮೀ ದೂರದಿಂದ ಬರ್ತಿದೆ ತಾಯಿ ಎದೆಹಾಲು

    ನವದೆಹಲಿ: ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ಒಂದು ತಿಂಗಳ ಕಂದಮ್ಮನಿಗಾಗಿ ಪ್ರತಿದಿನ ಸುಮಾರು 1 ಸಾವಿರ ಕಿಮೀ ದೂರದಿಂದ ತಾಯಿ ಎದೆ ಹಾಲನ್ನು ತರಿಸಿಕೊಳ್ಳುತ್ತಿರುವ ಘಟನೆ ದೆಹಲಿಯಲ್ಲಿ ಬೆಳಕಿಗೆ ಬಂದಿದೆ.

    ಕಳೆದ ಮೂರು ವಾರಗಳಿಂದ ಲಡಾಖ್ ನ ಲೇಹ್‍ನಿಂದ ದೆಹಲಿಗೆ ವಿಮಾನ ಮೂಲಕ ತಾಯಿ ಎದೆಹಾಲು ಬರುತ್ತಿದ್ದು, ಪ್ರತಿದಿನ ಮಗುವಿನ ತಂದೆ ಜಿಕ್‍ಮೆಟ್ ವಂಗಡು ಅವರು ಇಂದಿರಾ ಗಾಂಧಿ ವಿಮಾನ ನಿಲ್ದಾಣದಲ್ಲಿ ಪಾರ್ಸೆಲ್‍ಗಾಗಿ ಕಾಯುತ್ತಿರುವುದು ಸಾಮಾನ್ಯವಾಗಿದೆ.

    ಏನಿದು ಘಟನೆ: ಜೂನ್ 16 ರಂದು ಲೇಹ್‍ನ ಆಸ್ಪತ್ರೆಯೊಂದರಲ್ಲಿ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ್ದರು. ಆದರೆ ಮಗು ತಾಯಿಯ ಎದೆಹಾಲನ್ನು ಕೂಡಿಯಲು ಸಮಸ್ಯೆ ಎದುರಿಸುತ್ತಿದ್ದದ್ದು ಕಂಡು ಬಂದಿತ್ತು. ಈ ಕುರಿತು ತಿಳಿದ ವೈದ್ಯರು ಮಗುವನ್ನು ದೆಹಲಿಯ ಮಕ್ಕಳ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸಲಹೆ ನೀಡಿದ್ದರು. ಕೂಡಲೇ ಮಗುವನ್ನು ದೆಹಲಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.

    ದೆಹಲಿ ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ನೀಡಿದ್ದ ವೈದ್ಯರು ಶಸ್ತ್ರ ಚಿಕಿತ್ಸೆಯ ಅಗತ್ಯವಿದೆ ಎಂದು ಹೇಳಿದ್ದರು. ಇದಾದ ಬಳಿಕ ಜೂನ್ 19 ರಂದು ಮಗುವಿಗೆ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರ್ಣಗೊಳಸಿಲಾಗಿತ್ತು. ಮಗು ಶೀಘ್ರ ಚೇತರಿಕೊಳ್ಳಲು ತಾಯಿಯ ಎದೆಹಾಲು ಅಗತ್ಯವಿದೆ ಎಂದು ವೈದ್ಯರು ಹೇಳಿದ್ದರು. ವೈದರ ಸಲಹೆ ಮೇರೆಗೆ ಲೇಹ್‍ನಿಂದ ಮಗುವಿನ ತಾಯಿಯ ಎದೆಹಾಲನ್ನು ವಿಮಾನ ಮೂಲಕ ದೆಹಲಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿತ್ತು.

    ಪ್ರತಿದಿನ ಮಗುವಿನ ತಂದೆ ವಿಮಾನ ನಿಲ್ದಾಣಕ್ಕೆ ತೆರಳಿ ಲೇಹ್‍ನಿಂದ ಬರುವ ಪಾರ್ಸೆಲ್‍ಗಾಗಿ ಕಾಯುತ್ತಾ ನಿಂತಿರುತ್ತಿದ್ದರು. ಈ ಮಾಹಿತಿ ತಿಳಿದ ವಿಮಾನ ಸಂಸ್ಥೆ ಇದಕ್ಕಾಗಿ ಉಚಿತ ಸೇವೆ ನೀಡಲು ಮುಂದಾಗಿತ್ತು. ಸದ್ಯ ಮಗು ಚೇತರಿಸಿಕೊಳ್ಳುತ್ತಿದ್ದು, ಶೀಘ್ರವೇ ತಂದೆಯೊಂದಿಗೆ ಲೇಹ್‍ಗೆ ಹಿಂದಿರುಗಲಿದೆ.

    ಈ ಕುರಿತು ಮಹಿತಿ ನೀಡಿರುವ ವೈದ್ಯ ಹರ್ಷವರ್ಧನ್, ತಾಯಿಯ ಎದೆ ಹಾಲನ್ನು ಥರ್ಮೋಕಾಲ್ ಮತ್ತು ರೆಕ್ಸಿನ್‍ನಿಂದ ಮಾಡಿರುವ ನಿರ್ದಿಷ್ಟ ಬಾಟಲ್‍ನಲ್ಲಿ ಬರುತ್ತದೆ. ತಾಯಿಯ ಎದೆ ಹಾಲು ಕುಡಿದ ಬಳಿಕ ಮಗು ಬಹು ಬೇಗ ಚೇತರಿಸಿಕೊಳ್ಳುತ್ತಿದೆ. ಲೇಹ್‍ನಿಂದ ಬಂದ ಬಾಟಲ್‍ಗಳನ್ನು ಮತ್ತೆ ವಾಪಸ್ ಕಳುಹಿಸಿ ಪುನಃ ತಾಯಿ ಹಾಲನ್ನು ಪಡೆಯುತ್ತೇವೆ ಎಂದು ವಿವರಿಸಿದ್ದಾರೆ.

    ಮಗುವಿನ ತಂದೆ ಜಿಕ್‍ಮೆಟ್ ವಂಗಡು ಮಾತನಾಡಿ, ಲೇಹ್‍ನಲ್ಲಿರುವ ವಿಮಾನ ನಿಲ್ದಾಣದ ಸಿಬ್ಬಂದಿಯಿಂದ ನನಗೆ ಇದು ಸಾಧ್ಯವಾಹಿತು. ಮೊದಲು ಹಾಲಿನ ಪುಡಿಯನ್ನು ಮಗುವಿಗೆ ನೀಡುತ್ತಿದ್ದೇವು. ಇದರಿಂದ ಯಾವುದೇ ಪ್ರಯೋಜನ ಆಗಲಿಲ್ಲ. ಆದ್ದರಿಂದ ವೈದ್ಯರ ಸಲಹೆ ಮೇರೆಗೆ ತಾಯಿ ಹಾಲನ್ನು ನೀಡುತ್ತಿದ್ದು, ಮಗು ಚೇತರಿಸಿಕೊಳ್ಳುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

  • ಲೇಹ್, ಲಡಾಖ್‍ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ- ಸಮರಾಭ್ಯಾಸ ವೀಕ್ಷಣೆ

    ಲೇಹ್, ಲಡಾಖ್‍ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ- ಸಮರಾಭ್ಯಾಸ ವೀಕ್ಷಣೆ

    ಲಡಾಖ್: ಕಳೆದ ಎರಡು ತಿಂಗಳಿನಿಂದ ಭಾರತ ಮತ್ತು ಚೀನಾ ಗಡಿ ಪ್ರದೇಶದಲ್ಲಿದ್ದ ಉದ್ವಿಗ್ನ ಪರಿಸ್ಥಿತಿ ತಿಳಿಯಾಗುತ್ತಿದೆ. ಪರಿಣಾಮ ಗಡಿ ಪ್ರದೇಶದ ಪರಿಸ್ಥಿತಿಗಳನ್ನು ಅರಿಯಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಲೇಹ್‍, ಲಡಾಖ್ ಮತ್ತು ಜಮ್ಮು ಕಾಶ್ಮೀರಕ್ಕೆ ಎರಡು ದಿನಗಳ ಪ್ರವಾಸವನ್ನು ಕೈಗೊಂಡಿದ್ದಾರೆ.

    ಲೇಹ್‍ನಲ್ಲಿ ಪ್ಯಾರಾ ಡ್ರಾಪಿಂಗ್ ಕೌಶಲವನ್ನು ವೀಕ್ಷಿಸಿದ ರಾಜನಾಥ್ ಸಿಂಗ್ ಬಳಿಕ ಪ್ಯಾರಾ ಡ್ರಾಪಿಂಗ್ ಮತ್ತು ಸ್ಕೋಪಿಂಗ್ ಶಸ್ತ್ರಾಸ್ತ್ರಗಳ ಪರಿಶೀಲನೆ ನಡೆಸಿದರು. ‘ಗಡಿಯಲ್ಲಿ ಪರಿಸ್ಥಿತಿ ಪರಿಶೀಲಿಸಲು ಭೇಟಿ ನೀಡಿದ್ದು, ಈ ಪ್ರದೇಶದಲ್ಲಿ ನಿಯೋಜಿಸಲಾಗಿರುವ ಭದ್ರತಾ ಪಡೆಯ ಸಿಬ್ಬಂದಿಯೊಂದಿಗೆ ಮಾತುಕತೆ ನಡೆಸುತ್ತೇನೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

    ಲೇಹ್‍ನ ಸ್ಟಕ್ನಾದಲ್ಲಿ ಭಾರತೀಯ ಸೇನೆಯ ಟಿ-90 ಟ್ಯಾಂಕ್‍ಗಳು ಮತ್ತು ಬಿಎಂಪಿ ಕಾಲಾಳು ಪಡೆಯ ಯುದ್ಧ ವಾಹನಗಳು ಈ ಸಂದರ್ಭದಲ್ಲಿ ಸಮರಾಭ್ಯಾಸ ನಡೆಸಿದ್ದು, ರಾಜ್‍ನಾಥ್ ಸಿಂಗ್, ಬಿಪಿನ್ ರಾವತ್ ಸೇನೆಯ ಸಮರಾಭ್ಯಾಸವನ್ನು ವೀಕ್ಷಿಸಿದರು. ಸಚಿವ  ರಾಜನಾಥ್ ಸಿಂಗ್ ಅವರಿಗೆ ಭೇಟಿ ಸಂದರ್ಭದಲ್ಲಿ ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್, ಸೇನಾ ಮುಖ್ಯಸ್ಥ ಮನೋಜ್ ಮುಕುಂದ್ ಅವರು ಸಾಥ್ ನೀಡಿದ್ದಾರೆ.

    ಇಂದು ಮತ್ತು ನಾಳೆ ಗಡಿ ಪ್ರದೇಶದ ಪರಿಶೀಲನೆ ಬಳಿ ಸೈನ್ಯದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಚಿವರು ಮಾಹಿತಿ ಪಡೆಯಲಿದ್ದಾರೆ. ಆ ಬಳಿಕ ಶನಿವಾರ ಮಧ್ಯಾಹ್ನ ಶ್ರೀನಗರಕ್ಕೆ ಭೇಟಿ ನೀಡಿ ಅಲ್ಲಿಂದ ಪಾಕಿಸ್ತಾನದ ಗಡಿ ಪ್ರದೇಶಕ್ಕೆ ಪರಿಸ್ಥಿತಿಯನ್ನು ವಿಕ್ಷೀಸಲಿದ್ದಾರೆ. ಬಳಿಕ ದೆಹಲಿಗೆ ವಾಪಸ್ ಆಗಲಿದ್ದಾರೆ. ಉಳಿದಂತೆ ಇದೇ ಜುಲೈ 03 ರಂದು ಪ್ರಧಾನಿ ಮೋದಿ ಲಡಾಖ್ ಭೇಟಿ ನೀಡಿ ಸೈನಿಕರಿಗೆ ಧೈರ್ಯ ತುಂಬುವ ಕಾರ್ಯ ಮಾಡಿದ್ದರು.